14.06.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ನಿರಂತರ ನೆನಪಿರಲಿ- ನಮ್ಮ ತಂದೆ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ ಮತ್ತು ಸದ್ಗುರುವೂ ಆಗಿದ್ದಾರೆ, ಈ ನೆನಪೇ ಮನ್ಮನಾಭವವಾಗಿದೆ”

ಪ್ರಶ್ನೆ:
ಮಾಯೆಯ ಧೂಳು ಯಾವಾಗ ಕಣ್ಣುಗಳಲ್ಲಿ ಬೀಳುತ್ತದೆಯೋ ಆಗ ಎಲ್ಲದಕ್ಕಿಂತ ಮೊದಲು ಯಾವ ತಪ್ಪಾಗುತ್ತದೆ?

ಉತ್ತರ:
ಮಾಯೆಯು ಮೊದಲ ತಪ್ಪು ಮಾಡಿಸುತ್ತದೆ- ಅದರಿಂದ ವಿದ್ಯೆಯನ್ನೇ ಬಿಟ್ಟುಬಿಡುತ್ತಾರೆ. ಭಗವಂತನು ಓದಿಸುತ್ತಾರೆ ಎಂಬುದು ಮರೆತುಹೋಗುತ್ತದೆ. ತಂದೆಯ ಮಕ್ಕಳೇ ತಂದೆಯ ವಿದ್ಯೆಯನ್ನು ಬಿಟ್ಟುಬಿಡುತ್ತಾರೆ. ಇದೂ ಸಹ ಆಶ್ಚರ್ಯದ ಮಾತಾಗಿದೆ ಇಲ್ಲವೆಂದರೆ ಇದು ಇಂತಹ ಜ್ಞಾನವಾಗಿದೆ, ಇದರಿಂದ ಒಳಗಿಂದೊಳಗೇ ಖುಷಿಯಲ್ಲಿ ನರ್ತಿಸುತ್ತಿರಬೇಕು ಆದರೆ ಮಾಯೆಯ ಪ್ರಭಾವವೇನೂ ಕಡಿಮೆಯಿಲ್ಲ ಅದು ವಿದ್ಯೆಯನ್ನೇ ಬಿಡಿಸಿಬಿಡುತ್ತದೆ. ವಿದ್ಯೆಯನ್ನು ಬಿಟ್ಟರೆ ಗೈರು ಹಾಜರಿಯಾಯಿತು.

ಓಂ ಶಾಂತಿ.
ಆತ್ಮಿಕ ತಂದೆಯು ಕುಳಿತು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ- ಯಾರು ಸ್ವಲ್ಪ ಕಡಿಮೆ ತಿಳಿದಿರುವರೋ ಅವರಿಗೇ ತಿಳಿಸಲಾಗುತ್ತದೆ. ಕೆಲವರು ಬಹಳ ಬುದ್ಧಿವಂತರಾಗುತ್ತಾರೆ. ಮಕ್ಕಳಿಗೂ ಗೊತ್ತಿದೆ, ಈ ತಂದೆಯಂತೂ ಬಹಳ ವಿಚಿತ್ರ ತಂದೆಯಾಗಿದ್ದಾರೆ, ಭಲೇ ನೀವು ಇಲ್ಲಿ ಕುಳಿತಿದ್ದೀರಿ, ಆದರೆ ಆಂತರ್ಯದಲ್ಲಿ ತಿಳಿದು ಕೊಳ್ಳುತ್ತೀರಿ ಇವರು ನಮ್ಮ ಬೇಹದ್ದಿನ ಶಿಕ್ಷಕರೂ ಆಗಿದ್ದಾರೆ. ಬೇಹದ್ದಿನ ಶಿಕ್ಷಣವನ್ನು ಕೊಡುತ್ತಾರೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ವಿದ್ಯಾರ್ಥಿಯ ಬುದ್ಧಿಯಲ್ಲಂತೂ ಇದು ಇರಬೇಕಲ್ಲವೆ. ಇದೇ ಸಂಸ್ಕಾರವನ್ನು ಜೊತೆಯಲ್ಲಿ ಅವಶ್ಯವಾಗಿ ತೆಗೆದುಕೊಂಡು ಹೋಗುತ್ತೀರಿ. ತಂದೆಗೂ ಗೊತ್ತಿದೆ, ಇದು ಹಳೆಯ ಛೀ ಛೀ ಪ್ರಪಂಚವಾಗಿದೆ, ಇದರಿಂದ ಮಕ್ಕಳನ್ನು ಕರೆದುಕೊಂಡು ಹೋಗಬೇಕು. ಎಲ್ಲಿಗೆ? ಮನೆಗೆ. ಹೇಗೆ ಕನ್ಯೆಯ ವಿವಾಹವಾಗುತ್ತದೆಯೆಂದರೆ ಮಾವನ ಮನೆಯವರು ಬಂದು ಕನ್ಯೆಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗುತ್ತಾರೆ. ಈಗ ನೀವಿಲ್ಲಿ ಕುಳಿತಿದ್ದೀರಿ, ತಂದೆಯು ತಿಳಿಸುತ್ತಾರೆ. ಮಕ್ಕಳಿಗೆ ಇದು ಆಂತರ್ಯದಲ್ಲಿ ಬರುತ್ತಿರಬಹುದು- ಇವರು ನಮ್ಮ ತಂದೆ ಬೇಹದ್ದಿನ ತಂದೆಯೂ ಆಗಿದ್ದಾರೆ, ಬೇಹದ್ದಿನ ಶಿಕ್ಷಣವನ್ನೂ ಕೊಡುತ್ತಾರೆ, ಎಷ್ಟು ಬೇಹದ್ದಿನ ತಂದೆಯೋ ಅಷ್ಟೇ ಬೇಹದ್ದಿನ ಶಿಕ್ಷಣವನ್ನೂ ಕೊಡುತ್ತಾರೆ. ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವೂ ಮಕ್ಕಳ ಬುದ್ಧಿಯಲ್ಲಿದೆ. ತಿಳಿದಿದೆ, ತಂದೆಯು ಈ ಹಳೆಯ ಪ್ರಪಂಚದಿಂದ ನಮ್ಮನ್ನು ಹಿಂತಿರುಗಿ ಕರೆದುಕೊಂಡು ಹೋಗುತ್ತಾರೆ. ಇದನ್ನು ಆಂತರ್ಯದಲ್ಲಿ ನೆನಪು ಮಾಡುವುದೂ ಸಹ ಮನ್ಮಾನಾಭವವೇ ಆಗಿದೆ. ನಡೆಯುತ್ತಾ-ಓಡಾಡುತ್ತಾ, ಏಳುತ್ತಾ-ಕುಳಿತುಕೊಳ್ಳುತ್ತಾ ಇದೇ ನೆನಪಿರಲಿ. ಅದ್ಭುತವಾದ ವಸ್ತುವನ್ನು ನೆನಪು ಮಾಡುತ್ತಾರಲ್ಲವೆ! ಹಾಗೆಯೇ ನಿಮಗೂ ಗೊತ್ತಿದೆ, ಚೆನ್ನಾಗಿ ಓದುವುದರಿಂದ, ನೆನಪು ಮಾಡುವುದರಿಂದ ನಾವು ವಿಶ್ವದ ಮಾಲೀಕರಾಗುತ್ತೇವೆ. ಇದಂತೂ ಅವಶ್ಯವಾಗಿ ಬುದ್ಧಿಯಲ್ಲಿ ಬರಬೇಕು. ಮೊದಲು ತಂದೆಯನ್ನು ನೆನಪು ಮಾಡಬೇಕಾಗುತ್ತದೆ ನಂತರ ಶಿಕ್ಷಕರು ಸಿಗುತ್ತಾರೆ. ಮಕ್ಕಳು ತಿಳಿದುಕೊಂಡಿದ್ದೀರಿ, ನಮ್ಮ ಬೇಹದ್ದಿನ ತಂದೆಯು ಆತ್ಮಿಕ ತಂದೆಯಾಗಿದ್ದಾರೆ. ಸಹಜ ನೆನಪನ್ನು ತರಿಸಲು ತಂದೆಯು ಯುಕ್ತಿಗಳನ್ನು ತಿಳಿಸುತ್ತಾರೆ- ನನ್ನೊಬ್ಬನನ್ನೇ ನೆನಪು ಮಾಡಿ, ಈ ನೆನಪಿನಿಂದಲೇ ಅರ್ಧಕಲ್ಪದ ವಿಕರ್ಮಗಳು ವಿನಾಶವಾಗುತ್ತವೆ. ಪಾವನರಾಗುವುದಕ್ಕಾಗಿ ನೀವು ಜನ್ಮ-ಜನ್ಮಾಂತರದಿಂದ ಭಕ್ತಿ, ಜಪ, ತಪ ಇತ್ಯಾದಿಗಳನ್ನು ಮಾಡುತ್ತೀರಿ, ಮಂದಿರಗಳಲ್ಲಿ ಹೋಗುತ್ತಾರೆ ಭಕ್ತಿ ಮಾಡುತ್ತಾರೆ. ನಾವು ಪರಂಪರೆಯಿಂದ ಮಾಡುತ್ತಾ ಬಂದಿದ್ದೇವೆಂದು ತಿಳಿಯುತ್ತಾರೆ. ಶಾಸ್ತ್ರಗಳನ್ನು ಯಾವಾಗಿನಿಂದ ಓದುತ್ತಾ ಬಂದಿದ್ದೀರಿ ಎಂದು ಕೇಳಿದರೆ ಪರಂಪರೆಯಿಂದ ಎಂದು ಹೇಳುತ್ತಾರೆ. ಮನುಷ್ಯರಿಗೆ ಏನೂ ತಿಳಿದಿಲ್ಲ. ಸತ್ಯಯುಗದಲ್ಲಂತೂ ಶಾಸ್ತ್ರಗಳಿರುವುದೇ ಇಲ್ಲ. ನೀವು ಮಕ್ಕಳಿಗಂತೂ ಆಶ್ಚರ್ಯವಾಗಬೇಕು- ತಂದೆಯ ವಿನಃ ಮತ್ತ್ಯಾರೂ ಈ ಮಾತುಗಳು ತಿಳಿಸಲು ಸಾಧ್ಯವಿಲ್ಲ. ಇವರು ತಂದೆಯೂ ಆಗಿದ್ದಾರೆ, ಶಿಕ್ಷಕರೂ ಆಗಿದ್ದರೆ, ಸದ್ಗುರುವೂ ಆಗಿದ್ದಾರೆ. ಇವರಂತೂ ನಮ್ಮ ತಂದೆಯಾಗಿದ್ದಾರೆ. ಇವರಿಗೆ ಯಾರೂ ತಂದೆ-ತಾಯಿಯಿಲ್ಲ, ಶಿವತಂದೆಯು ಇಂತಹವರ ಮಗುವೆಂದು ಯಾರೂ ಹೇಳಲು ಸಾಧ್ಯವಿಲ್ಲ. ಈ ಮಾತುಗಳು ಬುದ್ಧಿಯಲ್ಲಿ ಪದೇ-ಪದೇ ನೆನಪಿರಲಿ. ಇದೇ ಮನ್ಮನಾಭವವಾಗಿದೆ. ತಂದೆಯು ಶಿಕ್ಷಕರಾಗಿ ಓದಿಸುತ್ತಾರೆ ಆದರೆ ಸ್ವತಃ ಯಾರಿಂದಲೂ ಓದಿಲ್ಲ, ಅವರಿಗೆ ಯಾರೂ ಓದಿಸಿಲ್ಲ. ಅವರು ಜ್ಞಾನ ಸಂಪೂರ್ಣ, ಮನುಷ್ಯ ಸೃಷ್ಠಿಗೆ ಬೀಜರೂಪ, ಜ್ಞಾನದ ಸಾಗರ, ಚೈತನ್ಯವಾಗಿರುವ ಕಾರಣಎಲ್ಲವನ್ನೂ ತಿಳಿಸುತ್ತಾರೆ. ಹೇಳುತ್ತಾರೆ ಮಕ್ಕಳೇ, ನಾನು ಯಾರಲ್ಲಿ ಪ್ರವೇಶವಾಗಿದ್ದೇನೆಯೋ ಅವರ ಮೂಲಕ ನಾನು ನಿಮಗೆ ಆದಿಯಿಂದ ಹಿಡಿದು ಈಗಿನವರೆಗೆ ಎಲ್ಲಾ ರಹಸ್ಯವನ್ನು ತಿಳಿಸುತ್ತೇನೆ. ಅಂತಿಮದ ರಹಸ್ಯವನ್ನು ಕೊನೆಯಲ್ಲಿ ತಿಳಿಸುತ್ತೇನೆ. ಆ ಸಮಯದಲ್ಲಿ ಈ ಅಂತ್ಯವೂ ಬರುತ್ತಿದೆ ಎಂದು ನೀವು ತಿಳಿಯುತ್ತೀರಿ. ಕರ್ಮಾತೀತ ಸ್ಥಿತಿಯನ್ನೂ ಸಹ ನಂಬರ್ವಾರ್ ಆಗಿ ತಲುಪುತ್ತಾರೆ. ಅದರ ಚಿಹ್ನೆಗಳನ್ನು ನೋಡುತ್ತೀರಿ. ಹಳೆಯ ಸೃಷ್ಟಿಯ ವಿನಾಶವಂತೂ ಆಗಲೇಬೇಕು. ಇದನ್ನು ಅನೇಕಬಾರಿ ನೋಡಿದ್ದೀರಿ ಮತ್ತು ನೋಡುತ್ತಲೇ ಇರುತ್ತೀರಿ. ಹೇಗೆ ಕಲ್ಪದ ಹಿಂದೆ ಓದಿದ್ದಿರೋ ಹಾಗೆಯೇ ಓದುತ್ತೀರಿ. ರಾಜ್ಯವನ್ನು ಪಡೆದಿರಿ ಮತ್ತೆ ಕಳೆದುಕೊಂಡಿರಿ. ಈಗ ಪುನಃ ಪಡೆಯುತ್ತಿದ್ದೀರಿ. ತಂದೆಯೂ ಸಹ ಪುನಃ ಓದಿಸುತ್ತಿದ್ದಾರೆ, ಇದು ಎಷ್ಟು ಸಹಜವಾಗಿದೆ. ಮಕ್ಕಳೂ ಸಹ ತಿಳಿಯುತ್ತೀರಿ- ನಾವು ಸತ್ಯ-ಸತ್ಯ ವಿಶ್ವದ ಮಾಲೀಕರಾಗಿದ್ದೆವು, ಈಗ ಮತ್ತೆ ತಂದೆಯು ಬಂದು ನಮಗೆ ಅಂತಹ ಜ್ಞಾನವನ್ನು ಕೊಡುತ್ತಿದ್ದಾರೆ. ಮನಸ್ಸಿನಲ್ಲಿ ಇಂತಿಂತಹ ವಿಚಾರಗಳು ನಡೆಯಬೇಕೆಂದು ತಂದೆಯು ಸಲಹೆ ನೀಡುತ್ತಾರೆ.

ಶಿವತಂದೆಯು ನಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕರೂ ಆಗಿದ್ದಾರೆ, ಶಿಕ್ಷಕರನ್ನು ಎಂದಾದರೂ ಮರೆಯುತ್ತಾರೆಯೇ! ಶಿಕ್ಷಕರ ಮೂಲಕ ವಿದ್ಯೆಯನ್ನು ಓದುತ್ತಿರುತ್ತಾರೆ. ಕೆಲಕೆಲವು ಮಕ್ಕಳಿಂದ ಮಾಯೆಯು ಬಹಳ ತಪ್ಪುಗಳನ್ನು ಮಾಡಿಸುತ್ತದೆ. ಒಮ್ಮೆಲೆ ಕಣ್ಣುಗಳಿಂದ ಧೂಳನ್ನು ಎರಚಿಬಿಡುತ್ತದೆ. ತದನಂತರ ಅವರ ವಿದ್ಯೆಯನ್ನೇ ಬಿಟ್ಟುಬಿಡುತ್ತಾರೆ. ಸ್ವಯಂ ಭಗವಂತ ಓದಿಸುತ್ತಾರೆ, ಇಂತಹ ವಿದ್ಯೆಯನ್ನೇ ಬಿಟ್ಟುಬಿಡುತ್ತಾರೆ! ವಿದ್ಯೆಯೇ ಮುಖ್ಯವಾಗಿದೆ, ಅದನ್ನು ಯಾರು ಬಿಡುತ್ತಾರೆ? ತಂದೆಯ ಮಕ್ಕಳೇ ಬಿಡುತ್ತಾರೆ. ಅಂದಾಗ ಮಕ್ಕಳಿಗೆ ತಂದೆಯು ಪ್ರತಿಯೊಂದು ಮಾತಿನ ಜ್ಞಾನವನ್ನು ಕೊಡುತ್ತಾರೆ ಅಂದಮೇಲೆ ಎಷ್ಟೊಂದು ಖುಷಿಯಿರಬೇಕು. ಕಲ್ಪ-ಕಲ್ಪವೂ ತಿಳಿಸುತ್ತಾರೆ- ಮಕ್ಕಳೇ, ಕೊನೆ ಪಕ್ಷ ಈ ರೀತಿ ನನ್ನನ್ನು ನೆನಪು ಮಾಡಿ. ಕಲ್ಪ-ಕಲ್ಪ ನೀವೇ ತಿಳಿದುಕೊಳ್ಳುತ್ತೀರಿ, ಧಾರಣೆ ಮಾಡುತ್ತೀರಿ. ಇವರಿಗೆ ಯಾರೂ ತಂದೆಯಿಲ್ಲ. ಅವರೇ ಬೇಹದ್ದಿನ ತಂದೆಯಾಗಿದ್ದಾರೆ ಅಂದಮೇಲೆ ವಿಚಿತ್ರ ತಂದೆಯಾದರಲ್ಲವೆ! ನನಗೆ ಯಾರಾದರೂ ತಂದೆಯಿದ್ದಾರೆಯೇ ತಿಳಿಸಿ? ಶಿವತಂದೆಯು ಯಾರ ಮಗು? ಈ ವಿದ್ಯೆಯೂ ಸಹ ವಿಚಿತ್ರವಾಗಿದೆ, ಇದನ್ನು ಈ ಸಮಯದ ಹೊರತು ಮತ್ತೆಂದೂ ಓದಲು ಸಾಧ್ಯವಿಲ್ಲ ಮತ್ತು ಕೇವಲ ನೀವು ಬ್ರಾಹ್ಮಣರೇ ಓದುತ್ತೀರಿ. ನೀವು ಇದನ್ನೂ ತಿಳಿದುಕೊಂಡಿದ್ದೀರಿ- ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ನಾವು ಪಾವನರಾಗಿಬಿಡುತ್ತೇವೆ. ಇಲ್ಲವಾದರೆ ಮತ್ತೆ ಶಿಕ್ಷೆಗಳನ್ನೂ ಅನುಭವಿಸಬೇಕಾಗುತ್ತದೆ. ಗರ್ಭಜೈಲಿನಲ್ಲಿಯೇ ಬಹಳ ಶಿಕ್ಷೆಗಳನ್ನು ಅನುಭವಿಸಬೇಕಾಗುತ್ತದೆ ಮತ್ತು ಅಲ್ಲಿ ನ್ಯಾಯಾಲಯವು ಸೇರುತ್ತದೆ. ಎಲ್ಲವೂ ಸಾಕ್ಷಾತ್ಕಾರವಾಗುತ್ತದೆ. ಸಾಕ್ಷಾತ್ಕಾರವಿಲ್ಲದೆ ಯಾರಿಗೂ ಶಿಕ್ಷೆ ಕೊಡುವುದಿಲ್ಲ ಏಕೆಂದರೆ ಈ ಶಿಕ್ಷೆಯು ನಮಗೆ ಏಕೆ ಸಿಕ್ಕಿದೆಯೆಂದು ತಬ್ಬಿಬ್ಬಾಗುತ್ತಾರೆ ಆದ್ದರಿಂದ ತಂದೆಗೆ ಗೊತ್ತಿರುತ್ತದೆ, ಇವರು ಇಂತಹ ಪಾಪ ಮಾಡಿದ್ದಾರೆ, ಇಂತಹ ತಪ್ಪು ಮಾಡಿದ್ದಾರೆ. ಹೀಗೆ ಎಲ್ಲವನ್ನೂ ಸಾಕ್ಷಾತ್ಕಾರ ಮಾಡಿಸುತ್ತಾರೆ, ಆ ಸಮಯದಲ್ಲಿ ಇಷ್ಟು ನೋವಾಗುತ್ತದೆ. ಅನೇಕ ಜನ್ಮಗಳ ಶಿಕ್ಷೆಯು ಸಿಗುತ್ತಿದೆ ಎಂಬ ಅನುಭವವಾಗುತ್ತದೆ. ಇದು ಎಲ್ಲಾ ಜನ್ಮಗಳ ಗೌರವವೂ ಹೋದಂತೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ಮಧುರಾತಿ ಮಧುರ ಮಕ್ಕಳೇ, ಬಹಳ ಒಳ್ಳೆಯ ಪುರುಷಾರ್ಥ ಮಾಡಿ, 16 ಕಲಾಸಂಪೂರ್ಣರಾಗಲು ನೆನಪಿನ ಪರಿಶ್ರಮಪಡಬೇಕು. ನೋಡಿಕೊಳ್ಳಬೇಕು- ನಾವು ಯಾರಿಗೂ ದುಃಖ ಕೊಡುವುದಿಲ್ಲ ತಾನೆ? ನಾವು ಸುಖದಾತ ತಂದೆಗೆ ಮಕ್ಕಳಾಗಿದ್ದೇವಲ್ಲವೆ? ಬಹಳ ಸುಂದರ ಹೂಗಳಾಗಬೇಕಾಗಿದೆ ಏಕೆಂದರೆ ಈ ವಿದ್ಯೆಯೇ ನಿಮ್ಮ ಜೊತೆ ನಡೆಯುತ್ತದೆ ಅಂದರೆ ಇದರ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತೀರಿ. ವಿದ್ಯೆಯಿಂದಲೇ ಮನುಷ್ಯರು ಬ್ಯಾರಿಸ್ಟರ್ ಮುಂತಾದ ಪದವಿಯನ್ನು ಪಡೆಯುತ್ತಾರೆ. ತಂದೆಯ ಈ ಜ್ಞಾನವು ಭಿನ್ನ ಮತ್ತು ಸತ್ಯವಾಗಿದೆ ಮತ್ತು ಇದು ಪಾಂಡವ ಸರ್ಕಾರ ಗುಪ್ತವಾಗಿದೆ. ನಿಮ್ಮ ವಿನಃ ಬೇರೆ ಯಾರೂ ಇದನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಈ ವಿದ್ಯೆಯೂ ವಿಚಿತ್ರವಾಗಿದೆ, ಆತ್ಮವೇ ಕೇಳುತ್ತದೆ. ತಂದೆಯು ಪದೇ-ಪದೇ ತಿಳಿಸುತ್ತಾರೆ - ವಿದ್ಯೆಯನ್ನೆಂದೂ ಬಿಡಬಾರದು. ಮಾಯೆಯು ಬಿಡಿಸುತ್ತದೆ. ಮಕ್ಕಳೇ, ವಿದ್ಯೆಯನ್ನು ಬಿಡಬೇಡಿ. ತಂದೆಯ ಬಳಿ ರಿಪೆÇೀರ್ಟ್ಂತೂ ಬರುತ್ತದೆಯಲ್ಲವೆ! ರಿಜಿಸ್ಟರ್ನಿಂದ ಎಲ್ಲವೂ ಗೊತ್ತಾಗಿಬಿಡುತ್ತದೆ- ಇವರು ಎಷ್ಟು ದಿನ ಗೈರುಹಾಜರಿಯಾದರು ಎಂದು ತಿಳಿಯುತ್ತದೆ. ವಿದ್ಯೆಯನ್ನು ಬಿಟ್ಟರೆ ತಂದೆಯನ್ನೂ ಮರೆತುಹೋಗುತ್ತಾರೆ. ವಾಸ್ತವದಲ್ಲಿ ಇವರು ಮರೆಯುವಂತಹ ವಸ್ತುವಲ್ಲ ಏಕೆಂದರೆ ಇವರು ಅದ್ಭುತ ತಂದೆಯಾಗಿದ್ದಾರೆ. ತಿಳುವಳಿಕೆಯನ್ನು ಕೊಡುತ್ತಾರೆ. ಹೇಗೆ ಇದು ಒಂದು ಆಟವಾಗಿದೆ, ಆಟದ ಮಾತನ್ನು ಯಾರಿಗಾದರೂ ತಿಳಿಸಲಿ ತಕ್ಷಣ ಅದು ನೆನಪಿರುತ್ತದೆಯಲ್ಲವೆ. ಅದನ್ನೆಂದೂ ಮರೆಯುವುದಿಲ್ಲ. ಇವರು (ಬ್ರಹ್ಮಾ) ತಮ್ಮ ಅನುಭವವನ್ನೂ ತಿಳಿಸುತ್ತಾರೆ- ಬಾಲ್ಯತನದಲ್ಲಿಯೇ ವೈರಾಗಿ ವಿಚಾರಗಳಿರುತ್ತಿದ್ದವು, ಹೇಳುತ್ತಿದ್ದರು- ಪ್ರಪಂಚದಲ್ಲಂತೂ ಬಹಳ ದುಃಖವಿದೆ, ಈಗ ನನ್ನಬಳಿ ಕೇವಲ 10 ಸಾವಿರ ರೂಗಳಾಗಿಬಿಟ್ಟರೆ ಅದಕ್ಕೆ 5ಂ ರೂಪಾಯಿ ಬಡ್ಡಿ ಸಿಗುತ್ತದೆ. ಇಷ್ಟೇ ಸಾಕು ಸ್ವತಂತ್ರವಾಗಿರುತ್ತೇನೆ. ಮನೆಯನ್ನು ಸಂಭಾಲನೆ ಮಾಡುವುದು ಕಷ್ಟವಿದೆ, ಆದ್ದರಿಂದ ಇದೇನೂ ಬೇಡ ಎಂದುಕೊಂಡೆನು ಆದರೆ ಸೌಭಾಗ್ಯ ಸುಂದರಿ....... ಎಂಬ ಚಲನಚಿತ್ರವನ್ನು ನೋಡಿದೆನಷ್ಟೇ. ವೈರಾಗ್ಯದ ಮಾತುಗಳೆಲ್ಲವೂ ಹೊರಟುಹೋಯಿತು, ವಿವಾಹ ಮಾಡಿಕೊಳ್ಳೋಣವೆಂದು ಸಂಕಲ್ಪ ಬಂದಿತು. ಮಾಯೆಯು ಒಂದೇ ಏಟನ್ನು ಕೊಟ್ಟುಬಿಟ್ಟಿತು. ಎಲ್ಲವನ್ನೂ ಸಮಾಪ್ತಿ ಮಾಡಿಬಿಟ್ಟೆನು. ಆದ್ದರಿಂದ ಈಗ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಇದಂತೂ ಪ್ರಪಂಚವೇ ನರಕವಾಗಿದೆ ಮತ್ತು ಇದರಲ್ಲಿಯೂ ಈ ಸಿನಿಮಾಗಳೆಲ್ಲವೂ ಇದೆ, ನರಕವಾಗಿದೆ ಇದನ್ನು ನೋಡುವುದರಿಂದಲೇ ಎಲ್ಲರ ವೃತ್ತಿ ಕೆಟ್ಟು ಹೋಗುತ್ತದೆ, ಪತ್ರಿಕೆಗಳಲ್ಲಿ ಓದುತ್ತಾರೆ ಅದರಲ್ಲಿ ಒಳ್ಳೊಳ್ಳೆ ಸ್ತ್ರೀಯರ ಚಿತ್ರಗಳನ್ನು ನೋಡಿದಾಗ, ಈ ಸಿನೆಮಾಗಳನ್ನು ಭಾವಚಿತ್ರಗಳನ್ನು ನೋಡುತ್ತಾರೆಂದರೆ ವೃತ್ತಿಯು ಅದರಕಡೆ ಹೊರಟುಹೋಗುತ್ತದೆ. ಇವರು ಬಹಳ ಸುಂದರವಾಗಿದ್ದಾರೆ, ಬುದ್ಧಿಯಲ್ಲಿ ಬಂದಿತಲ್ಲವೆ! ವಾಸ್ತವದಲ್ಲಿ ಈ ಸಂಕಲ್ಪವೂ ನಡೆಯಬಾರದು. ತಂದೆಯು ತಿಳಿಸುತ್ತಾರೆ- ಈ ಪ್ರಪಂಚವೇ ಸಮಾಪ್ತಿಯಾಗುವುದಿದೆ ಆದ್ದರಿಂದ ನೀವು ಮತ್ತೆಲ್ಲವನ್ನೂ ಮರೆತು ನನ್ನೊಬ್ಬನನ್ನೇ ನೆನಪು ಮಾಡಿ. ಇಂತಹ ಚಿತ್ರಗಳು ಮೊದಲಾದವುಗಳನ್ನು ಏಕೆ ನೋಡುತ್ತೀರಿ? ಇವೆಲ್ಲಾ ಮಾತುಗಳು ಸ್ಥಿತಿಯನ್ನು ಕೆಳಗೆ ತರುತ್ತವೆ. ಈಗ ಏನೆಲ್ಲವನ್ನೂ ನೋಡುತ್ತೀರೋ, ಇದೆಲ್ಲವೂ ಸ್ಮಶಾನವಾಗುವುದಿದೆ. ಯಾರೆಲ್ಲರನ್ನೂ ಈ ಕಣ್ಣುಗಳಿಂದ ನೋಡುತ್ತೀರೋ ಅವರನ್ನು ನೆನಪು ಮಾಡಬೇಡಿ, ಎಲ್ಲದರಿಂದ ಮಮತ್ವವನ್ನು ತೆಗೆದುಹಾಕಿ. ಇವೆಲ್ಲಾ ಶರೀರಗಳು ಹಳೆಯದು, ಪತಿತವಾಗಿದೆ. ಭಲೆ ಆತ್ಮವು ಶುದ್ಧವಾಗುತ್ತದೆ ಆದರೆ ಶರೀರವಂತೂ ಪತಿತವಾಗಿದೆಯಲ್ಲವೆ. ಇದರಕಡೆ ಗಮನ ಕೊಡುವುದೇನಿದೆ, ಒಬ್ಬ ತಂದೆಯನ್ನೇ ನೋಡಬೇಕಾಗಿದೆ.

ತಂದೆಯು ತಿಳಿಸುತ್ತಾರೆ- ಮಧುರಾತಿ ಮಧುರ ಮಕ್ಕಳೇ, ಗುರಿಯು ಬಹಳ ಉನ್ನತವಾಗಿದೆ. ವಿಶ್ವದ ಮಾಲೀಕರಾಗಲು ಅನ್ಯರ್ಯಾರೂ ಪ್ರಯತ್ನಪಡಲು ಸಾಧ್ಯವಿಲ್ಲ. ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಮಾಯೆ ಪ್ರಭಾವವೇನು ಕಮ್ಮಿಇಲ್ಲ. ವಿಜ್ಞಾನಿಗಳಿಗೆ ಎಷ್ಟೊಂದು ಬುದ್ಧಿಯು ನಡೆಯುತ್ತದೆ- ನಿಮ್ಮದು ಶಾಂತಿಯಾಗಿದೆ. ನಾವು ಮುಕ್ತಿಯನ್ನು ಪಡೆಯಬೇಕೆಂದು ಎಲ್ಲರೂ ಬಯಸುತ್ತಾರೆ. ನಿಮ್ಮ ಗುರಿಯು ಜೀವನ್ಮುಕ್ತಿಯದಾಗಿದೆ. ಇದನ್ನೂ ಸಹ ತಂದೆಯು ತಿಳಿಸಿದ್ದಾರೆ. ಗುರುಗಳು ಮೊದಲಾದವರಾರೂ ಇಂತಹ ಜ್ಞಾನವನ್ನು ತಿಳಿಸಲು ಸಾಧ್ಯವಿಲ್ಲ. ನೀವು ಗೃಹಸ್ಥದಲ್ಲಿದ್ದು ಪವಿತ್ರರಾಗಬೇಕು, ರಾಜ್ಯಭಾಗ್ಯವನ್ನು ಪಡೆಯಬೇಕಾಗಿದೆ. ಭಕ್ತಿಯಲ್ಲಿ ಸಮಯವನ್ನು ಬಹಳ ವ್ಯರ್ಥವಾಗಿ ಕಳೆದಿರಿ, ನಾವು ಎಷ್ಟೊಂದು ತಪ್ಪುಗಳನ್ನು ಮಾಡಿದ್ದೇವೆಂದು ಈಗ ತಿಳಿಯುತ್ತೀರಿ. ತಪ್ಪುಗಳನ್ನು ಮಾಡುತ್ತಾ-ಮಾಡುತ್ತಾ ಬುದ್ಧಿಹೀನರು, ಸಂಪೂರ್ಣ ಕಲ್ಲುಬುದ್ಧಿಯವರಾಗಿಬಿಟ್ಟಿದ್ದೀರಿ. ನಿಮ್ಮಲ್ಲಿ ವಿಚಾರ ಬರುತ್ತದೆ - ಇದಂತೂ ಬಹಳ ಅದ್ಭುತವಾದ ಜ್ಞಾನವಾಗಿದೆ, ಇದರಿಂದ ನಾವು ಹೇಗಿದ್ದವರು ಏನಾಗಿಬಿಡುತ್ತೇವೆ! ಕಲ್ಲುಬುದ್ಧಿಯವರಿಂದ ಪಾರಸಬುದ್ಧಿಯವರಾಗುತ್ತೇವೆ. ನಮ್ಮ ತಂದೆಯು ಬೇಹದ್ದಿನ ತಂದೆಯಾಗಿದ್ದಾರೆ, ಅವರಿಗೆ ಯಾರೂ ತಂದೆಯಿಲ್ಲ. ಅವರು ಶಿಕ್ಷಕರಾಗಿದ್ದಾರೆ, ಅವರಿಗೆ ಯಾರೂ ಶಿಕ್ಷಕರಿಲ್ಲ ಎಂದು ನಿಮಗೆ ಖುಷಿಯ ನಶೆಯು ಏರುತ್ತದೆ. ಇದಕ್ಕೆ ಮನುಷ್ಯರು ಅವರು ಎಲ್ಲಿಂದ ಕಲಿತರು ಎಂದು ಹೇಳಿ ಆಶ್ಚರ್ಯಚಕಿತರಾಗುತ್ತಾರಲ್ಲವೆ! ಅನೇಕರು ಇವರಂತೂ ಯಾರೋ ಗುರುಗಳಿಂದ ಕಲಿತಿದ್ದಾರೆಂದು ತಿಳಿಯುತ್ತಾರೆ ಅಂದಾಗ ಗುರುಗಳಿಗೆ ಅನ್ಯಶಿಷ್ಯರೂ ಇರುತ್ತಾರಲ್ಲವೆ! ಕೇವಲ ಒಬ್ಬ ಶಿಷ್ಯನಿರುತ್ತಾನೆಯೇ. ಗುರುಗಳಿಗೆ ಅನೇಕ ಶಿಷ್ಯರಿರುತ್ತಾರೆ. ಆಗಾಖಾನ್ ಗುರುಗಳನ್ನು ನೋಡಿ, ಎಷ್ಟೊಂದು ಜನ ಶಿಷ್ಯರಿದ್ದಾರೆ. ಆ ಗುರುಗಳಿಗಾಗಿ ಶಿಷ್ಯರಿಗೆ ಮನಸ್ಸಿನಲ್ಲಿ ಎಷ್ಟೊಂದು ಭಾವನೆಯಿರುತ್ತದೆ, ಅವರನ್ನು ವಜ್ರಗಳಲ್ಲಿ ತುಲಾಭಾರ ಮಾಡುತ್ತಾರೆ. ಹಾಗಾದರೆ ನೀವು ಇಂತಹ ಸದ್ಗುರುವನ್ನು ಯಾವುದರಲ್ಲಿ ತುಲಾಭಾರ ಮಾಡುತ್ತೀರಿ! ಇವರಂತೂ ಬೇಹದ್ದಿನ ಸದ್ಗುರುವಾಗಿದ್ದಾರೆ, ಇವರ ಭಾರವು ಎಷ್ಟಿದೆ! ಒಂದು ವಜ್ರದ ಭಾರವೂ ಹಾಕುವಂತಿಲ್ಲ.

ಇಂತಹ ಮಾತುಗಳನ್ನು ನೀವು ಮಕ್ಕಳು ವಿಚಾರ ಮಾಡಬೇಕು- ಇದಂತೂ ಆಳವಾದ ಮಾತಾಯಿತು. ಭಲೆ ಈಶ್ವರ ಎಂದು ಎಲ್ಲರೂ ಹೇಳುತ್ತಿರುತ್ತಾರೆ ಆದರೆ ಅವರು ತಂದೆ, ಶಿಕ್ಷಕ, ಗುರುವೂ ಆಗಿದ್ದಾರೆಂದು ತಿಳಿದುಕೊಳ್ಳುವುದಿಲ್ಲ. ಇವರಂತೂ ಸಾಧಾರಣ ರೀತಿಯಲ್ಲಿ ಕುಳಿತಿರುತ್ತಾರೆ. ಗದ್ದುಗೆಯ ಮೇಲೂ ಸಹ ಏಕೆ ಕುಳಿತುಕೊಳ್ಳುತ್ತಾರೆಂದರೆ ಎಲ್ಲರಿಗೆ ಮುಖ ಕಾಣುವಂತಿರಲಿ ಎಂದು. ಮಕ್ಕಳ ಮೇಲೆ ಪ್ರೀತಿಯಿರುತ್ತದೆಯಲ್ಲವೆ. ಈ ಸಹಯೋಗ ಮಕ್ಕಳ ವಿನಃ ಸ್ಥಾಪನೆ ಮಾಡಲು ಸಾಧ್ಯವೇ ಹೆಚ್ಚಿನ ಸಹಯೋಗ ಕೊಡುವ ಮಕ್ಕಳನ್ನು ಹೆಚ್ಚಿನದಾಗಿ ಪ್ರೀತಿ ಮಾಡುತ್ತಾರೆ. ಹೇಗೆ ಹೆಚ್ಚು ಸಂಪಾದಿಸುವ ಒಳ್ಳೆಯ ಮಕ್ಕಳು ಅವಶ್ಯವಾಗಿ ಒಳ್ಳೆಯ ಪದವಿಯನ್ನೇ ಪಡೆಯುತ್ತಾರೆ. ಅವರ ಪ್ರತಿ ಪ್ರೀತಿಯಿರುತ್ತದೆ. ಮಕ್ಕಳನ್ನು ನೋಡಿ, ನೋಡಿ ಹರ್ಷಿತರಾಗುತ್ತೇವೆ. ಆತ್ಮವು ಬಹಳ ಖುಷಿಯಾಗುತ್ತದೆ. ಕಲ್ಪ-ಕಲ್ಪವೂ ಮಕ್ಕಳನ್ನು ನೋಡಿ ಖುಷಿಪಡುತ್ತೇನೆ. ಕಲ್ಪ-ಕಲ್ಪವೂ ಮಕ್ಕಳ ಸಹಯೋಗಿಗಳಾಗುತ್ತಾರೆ, ಬಹಳ ಪ್ರಿಯರಾಗುತ್ತಾರೆ. ಕಲ್ಪ-ಕಲ್ಪಾಂತರ ಪ್ರೀತಿಯು ಜೋಡಣೆಯಾಗುತ್ತದೆ. ಭಲೆ ಎಲ್ಲಿಯಾದರೂ ಕುಳಿತಿರಿ ಬುದ್ಧಿಯಲ್ಲಿ ಕೇವಲತಂದೆಯ ನೆನಪಿರಲಿ- ಇವರು ಬೇಹದ್ದಿನ ತಂದೆಯಾಗಿದ್ದಾರೆ. ಇವರಿಗೆ ಯಾರೂ ತಂದೆಯಿಲ್ಲ. ಇವರ ಶಿಕ್ಷಕರೂ ಇಲ್ಲ. ತಾವೇ ಎಲ್ಲವೂ ಆಗಿದ್ದಾರೆ. ಅವರನ್ನೇ ಎಲ್ಲರೂ ನೆನಪು ಮಾಡುತ್ತಾರೆ. ಸತ್ಯಯುಗದಲ್ಲಂತೂ ಯಾರೂ ನೆನಪು ಮಾಡುವುದಿಲ್ಲ. 21 ಜನ್ಮಗಳಿಗಾಗಿ ದೋಣಿಯು ಪಾರಾಗಿಬಿಡುತ್ತದೆಯೆಂದರೆ ನಿಮಗೆ ಎಷ್ಟೊಂದು ಖುಷಿಯಿರಬೇಕು. ಇಡೀ ದಿನ ತಂದೆಯ ಸೇವೆಯನ್ನೇ ಮಾಡೋಣ ಸಾಕು. ಇಂತಹ ತಂದೆಯ ಪರಿಚಯವನ್ನೇ ಕೊಡೋಣ ಎನಿಸಬೇಕು. ತಂದೆಯಿಂದ ಈ ಆಸ್ತಿಯು ಸಿಗುತ್ತದೆ- ತಂದೆಯು ನಮಗೆ ರಾಜಯೋಗವನ್ನು ಕಲಿಸುತ್ತಾರೆ ಮತ್ತು ಎಲ್ಲರನ್ನೂ ಜೊತೆಯೂ ಕರೆದುಕೊಂಡು ಹೋಗುತ್ತಾರೆ. ಇಡೀ ಚಕ್ರವು ಬುದ್ಧಿಯಲ್ಲಿದೆ. ಇಂತಹ ಚಕ್ರವನ್ನು ಯಾರೂ ಮಾಡಲು ಸಾಧ್ಯವಿಲ್ಲ. ಇದರ ಅರ್ಥವೂ ಯಾರಿಗೂ ಗೊತ್ತಿಲ್ಲ. ನೀವೀಗ ತಿಳಿಯುತ್ತೀರಿ- ತಂದೆಯು ನಮ್ಮ ಬೇಹದ್ದಿನ ತಂದೆಯೂ ಆಗಿದ್ದಾರೆ, ಬೇಹದ್ದಿನ ರಾಜ್ಯವನ್ನೂ ಕೊಡುತ್ತಾರೆ, ಜೊತೆಯಲ್ಲಿಯೂ ಕರೆದುಕೊಂಡು ಹೋಗುತ್ತಾರೆ. ನೀವು ಹೀಗೆ ತಿಳಿಸುತ್ತೀರೆಂದರೆ ಆಗ ಯಾರೂ ಸರ್ವವ್ಯಾಪಿ ಎಂದು ಹೇಳಲು ಸಾಧ್ಯವಿಲ್ಲ. ಅವರು ತಂದೆಯಾಗಿದ್ದಾರೆ, ಶಿಕ್ಷಕರಾಗಿದ್ದಾರೆ ಅಂದಮೇಲೆ ಸರ್ವವ್ಯಾಪಿ ಆಗಲು ಹೇಗೆ ಸಾಧ್ಯ!

ಬೇಹದ್ದಿನ ತಂದೆಯೇ ಜ್ಞಾನಪೂರ್ಣನಾಗಿದ್ದಾರೆ. ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದಾರೆ. ತಂದೆ ಮಕ್ಕಳಿಗೂ ತಿಳಿಸುತ್ತಾರೆ. ಮಕ್ಕಳೇ, ವಿದ್ಯೆಯನ್ನು ಮರೆಯಬೇಡಿ. ಇದು ಬಹಳ ದೊಡ್ಡ ವಿದ್ಯೆಯಾಗಿದೆ. ತಂದೆಯು ಪರಮಪಿತನಾಗಿದ್ದಾರೆ, ಪರಮಶಿಕ್ಷಕ, ಪರಮ ಸದ್ಗುರು ಆಗಿದ್ದಾರೆ. ಇವರೆಲ್ಲಾ ಗುರುಗಳನ್ನು ಕರೆದುಕೊಂಡು ಹೋಗುತ್ತಾರೆ, ಇಂತಹ ಅದ್ಭುತವಾದ ಮಾತುಗಳನ್ನು ತಿಳಿಸಬೇಕು. ಹೇಳಿ, ಇದು ಬೇಹದ್ದಿನ ಆಟವಾಗಿದೆ, ಪ್ರತಿಯೊಬ್ಬ ಪಾತ್ರಧಾರಿಗೆ ತಮ್ಮ ಪಾತ್ರವು ಸಿಕ್ಕಿತು. ಬೇಹದ್ದಿನ ತಂದೆಯಿಂದ ನಾವೇ ಬೇಹದ್ದಿನ ರಾಜ್ಯಭಾಗ್ಯವನ್ನು ಪಡೆಯುತ್ತೇವೆ. ನಾವೇ ಮಾಲೀಕರಾಗಿದ್ದೆವು. ಸತ್ಯಯುಗವಿತ್ತು, ಈಗ ಪುನಃ ಸ್ಥಾಪನೆಯಾಗುವುದು. ಕೃಷ್ಣನು ಹೊಸಪ್ರಪಂಚದ ಮಾಲೀಕನಾಗಿದ್ದನು, ಈಗ ಹಳೆಯ ಪ್ರಪಂಚವಾಗಿದೆ. ಇದರ ನಂತರ ಅವಶ್ಯವಾಗಿ ಹೊಸಪ್ರಪಂಚದ ಮಾಲೀಕರಾಗುವರು. ಚಿತ್ರದಲ್ಲಿಯೂ ಸ್ಪಷ್ಟವಾಗಿದೆ. ನಿಮಗೂ ಗೊತ್ತಿದೆ, ಈಗ ನಮ್ಮ ಕಾಲುಗಳು ನರಕದಕಡೆ ಮುಖವು ಸ್ವರ್ಗದ ಕಡೆಯಿರುತ್ತದೆ ಅದೇ ನೆನಪಿರುತ್ತದೆ. ಹೀಗೆ ನೆನಪು ಮಾಡುತ್ತಾ-ಮಾಡುತ್ತಾ ಅಂತ್ಯಮತಿ ಸೋ ಗತಿಯಾಗುವುದು. ಎಷ್ಟು ಒಳ್ಳೊಳ್ಳೆಯ ಮಾತುಗಳಿವೆ, ಇದರ ಸ್ಮರಣೆ ಮಾಡಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈ ಕಣ್ಣುಗಳಿಂದ ಏನೆಲ್ಲವೂ ಕಾಣಿಸುತ್ತಿದೆಯೋ ಅದೆಲ್ಲದರಿಂದ ಮಮತ್ವವನ್ನು ಕಳೆಯಬೇಕು. ಒಬ್ಬ ತಂದೆಯನ್ನೇ ನೋಡಬೇಕು. ವೃತ್ತಿಯನ್ನು ಶುದ್ಧ ಮಾಡಿಕೊಳ್ಳಲು ಈ ಛೀ ಛೀ ಶರೀರದಕಡೆ ಸ್ವಲ್ಪವೂ ಗಮನ ಹೋಗಬಾರದು.

2. ತಂದೆಯು ಯಾವ ಭಿನ್ನ ಮತ್ತು ಸತ್ಯಜ್ಞಾನವನ್ನು ತಿಳಿಸುತ್ತಾರೆಯೋ ಅದನ್ನು ಬಹಳ ಚೆನ್ನಾಗಿ ಓದಬೇಕು ಮತ್ತು ಓದಿಸಬೇಕು, ವಿದ್ಯಾಭ್ಯಾಸವನ್ನೆಂದೂ ತಪ್ಪಿಸಬಾರದು.

ವರದಾನ:
ಶಾಂತಿಯ ಶಕ್ತಿಯ ಪ್ರಯೋಗದ ಮೂಲಕ ಕಾರ್ಯದಲ್ಲಿ ಸಹಜ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಪ್ರಯೋಗಿ ಆತ್ಮಾಭವ

ಈಗ ಸಮಯದ ಪರಿವರ್ತನೆಯನುಸಾರವಾಗಿ ಶಾಂತಿಯ ಶಕ್ತಿಯ ಸಾಧನವನ್ನು ಪ್ರಯೋಗದಲ್ಲಿ ತರುವಂತಹ ಪ್ರಯೋಗಿ ಆತ್ಮನಾಗಿರಿ. ಹೇಗೆ ವಾಣಿಯ ಮೂಲಕ ಆತ್ಮರಲ್ಲಿ ಸ್ನೇಹದ ಸಹಯೋಗದ ಭಾವನೆಯನ್ನು ಉತ್ಪನ್ನ ಮಾಡುತ್ತೀರಿ, ಇಂತಹ ಶುಭಭಾವನೆ, ಸ್ನೇಹದ ಭಾವನೆಯ ಸ್ಥಿತಿಯಲ್ಲಿ ಸ್ಥಿತರಾಗಿದ್ದು ಅವರಲ್ಲಿ ಶ್ರೇಷ್ಠ ಭಾವನೆಯನ್ನು ಉತ್ಪನ್ನ ಮಾಡಿರಿ. ಹೇಗೆ ದೀಪವು ದೀಪವನ್ನು ಬೆಳಗಿಸುತ್ತದೆ ಹಾಗೆಯೇ ತಮ್ಮ ಶಕ್ತಿಶಾಲಿ ಶುಭಭಾವನೆಯು ಅನ್ಯರಲ್ಲಿ ಸರ್ವಶ್ರೇಷ್ಠ ಭಾವನೆಯನ್ನು ಉತ್ಪನ್ನ ಮಾಡಿಸುತ್ತದೆ. ಈ ಶಕ್ತಿಯಿಂದ ಸ್ಥೂಲಕಾರ್ಯದಲ್ಲಿಯೂ ಬಹಳ ಸಹಜವಾಗಿ ಸಫಲತೆಯನ್ನು ಪ್ರಾಪ್ತಿ ಮಾಡಿಸುತ್ತದೆ, ಕೇವಲ ಇದನ್ನು ಪ್ರಯೋಗ ಮಾಡಿನೋಡಿರಿ.

ಸ್ಲೋಗನ್:
ಸರ್ವರ ಪ್ರಿಯರಾಗಬೇಕೆಂದರೆ ಅರಳಿರುವ ಆತ್ಮಿಕ ಗುಲಾಬಿಯಾಗಿರಿ, ಮುದುಡಿರುವ ಗುಲಾಬಿಯಲ್ಲ.