14.07.24    Avyakt Bapdada     Kannada Murli    25.11.20     Om Shanti     Madhuban


“ತಂದೆಯ ಸಮಾನರಾಗಲು ಎರಡು ಮಾತಿನ ದೃಢತೆಯನ್ನು ಇಟ್ಟುಕೊಳ್ಳಿ- ಸ್ವಮಾನದಲ್ಲಿ ಇರಬೇಕು ಹಾಗೂ ಎಲ್ಲರಿಗೂ ಸನ್ಮಾನ ಕೊಡಬೇಕು”


ಇಂದು ಬಾಪ್ದಾದಾರವರು ತಮ್ಮ ಅತೀ ಪ್ರಿಯ, ಮಧುರಾತಿ ಮಧುರ ಚಿಕ್ಕ ಬ್ರಾಹ್ಮಣ ಪರಿವಾರ ಎಂದಾದರೂ ಹೇಳಿ, ಬ್ರಾಹ್ಮಣ ಸಂಸಾರ ಎಂದಾದರೂ ಹೇಳಿ, ಅವರನ್ನೇ ನೋಡುತ್ತಿದ್ದರು. ಈ ಚಿಕ್ಕ ಸಂಸಾರ ಎಷ್ಟು ಭಿನ್ನವಾಗಿದೆ ಹಾಗೂ ಪ್ರಿಯವಾಗಿದೆ. ಏಕೆ ಪ್ರಿಯವಾಗಿದೆ? ಏಕೆಂದರೆ ಈ ಬ್ರಾಹ್ಮಣ ಸಂಸಾರದ ಪ್ರತಿಯೊಂದು ಆತ್ಮ ವಿಶೇಷ ಆತ್ಮವಾಗಿದೆ. ನೋಡುವುದರಲ್ಲಿ ಸಾಧಾರಣ ಆತ್ಮ ಆಗಿದ್ದಾರೆ ಆದರೆ ಎಲ್ಲಕ್ಕಿಂತ ದೊಡ್ಡ ವಿಶೇಷತೆ ಪ್ರತಿಯೊಬ್ಬ ಬ್ರಾಹ್ಮಣ ಆತ್ಮರಲ್ಲಿದೆ- ಪರಮಾತ್ಮನನ್ನು ನಮ್ಮ ದಿವ್ಯ ಬುದ್ಧಿಯಿಂದ ಗುರುತಿಸಿದರು, 90 ವರ್ಷದ ಮುದುಕರಾಗಿರಲಿ, ಅನಾರೋಗ್ಯದಲ್ಲಿದ್ದಾರೆ ಆದರೆ ಪರಮಾತ್ಮನನ್ನು ಗುರುತಿಸುವ ದಿವ್ಯ ಬುದ್ಧಿ, ದಿವ್ಯ ನೇತ್ರ ಬ್ರಾಹ್ಮಣ ಆತ್ಮನ ಹೊರತು ಹೆಸರುವಾಸಿ ವಿ. ವಿ. ಐ. ಪಿ ಯಲ್ಲಿಯೂ ಸಹ ಇಲ್ಲ. ನೀವೆಲ್ಲ ಮಾತೆಯರು ಇಲ್ಲಿ ಏಕೆ ಬಂದಿರುವಿರಿ? ಕಾಲುಗಳಿಂದ ನಡೆಯಲು ಸಾಧ್ಯವಾಯಿತೆ, ಸಾಧ್ಯವಾಗಿಲ್ಲ ಎಂದರು ಸಹ ತಲುಪಿಬಿಟ್ಟಿದ್ದೀರಿ. ಗುರುತಿಸಿದ್ದೀರಿ ಆದ್ದರಿಂದಲೇ ತಲುಪಿದ್ದೀರಿ ಅಲ್ಲವೇ! ಈ ಗುರುತಿಸುವ ನೇತ್ರ, ಗುರುತಿಸುವ ಬುದ್ಧಿ ಇದು ನಿಮ್ಮ ಹೊರೆತು ಬೇರೆ ಯಾರಿಗೂ ಪ್ರಾಪ್ತಿಯಾಗಲು ಸಾಧ್ಯವಿಲ್ಲ. ಎಲ್ಲಾ ಮಾತೆಯರು ಈ ಗೀತೆಯನ್ನು ಹಾಡುತ್ತೀರಲ್ಲವೇ- ನಾವು ನೋಡಿದೆವು, ನಾವು ತಿಳಿದುಕೊಂಡೆವು... ಮಾತೆಯರಿಗೆ ಈ ನಶೆ ಇದೆಯೇ? ಕೈ ಅಲುಗಾಡಿಸುತ್ತಿದ್ದಾರೆ, ಬಹಳ ಒಳ್ಳೆಯದು. ಪಾಂಡವರಿಗೆ ನಶೆ ಇದೆಯೇ? ಒಬ್ಬರು ಇನ್ನೊಬ್ಬರಿಗಿಂತ ಮುಂದಿದ್ದಾರೆ ಶಕ್ತಿಯರಲ್ಲಿಯೂ ಕೊರತೆ ಇಲ್ಲ ಪಾಂಡವರಲ್ಲಿಯೂ ಕೊರತೆ ಇಲ್ಲ. ಬಾಪ್ದಾದಾರವರಿಗೆ ಖುಷಿ ಇದೆ- ಈ ಚಿಕ್ಕ ಸಂಸಾರ ಎಷ್ಟು ಪ್ರಿಯವಾಗಿದೆ. ಪರಸ್ಪರ ಯಾವಾಗ ಭೇಟಿಯಾಗುತ್ತೀರಿ ಎಂದರೆ ಎಷ್ಟು ಪ್ರಿಯ ಆತ್ಮರು ಎನಿಸುತ್ತೀರಿ!

ದೇಶ ವಿದೇಶದ ಸರ್ವ ಆತ್ಮರಿಂದ ಇಂದು ಇದೆ ಹೃದಯದ ಗೀತೆಯನ್ನು ಕೇಳುತ್ತಿದ್ದಾರೆ- ಬಾಬಾ, ಮಧುರ ಬಾಬಾ ನಾವು ತಿಳಿದುಕೊಂಡೆವು, ನಾವು ನೋಡಿದೆವು. ಈ ಹಾಡನ್ನು ಹಾಡುತ್ತಾ ಹಾಡುತ್ತಾ ನಾಲ್ಕಾರು ಕಡೆಯ ಮಕ್ಕಳು, ಒಂದು ಕಡೆ ಖುಷಿಯಲ್ಲಿ ಇನ್ನೊಂದು ಕಡೆ ಸ್ನೇಹದ ಸಾಗರದಲ್ಲಿ ಸಮಾವೇಶವಾಗಿದ್ದರು. ಯಾರೆಲ್ಲ ನಾಲ್ಕಾರು ಕಡೆ ಇಲ್ಲಿ ಸಾಕಾರದಲ್ಲಿ ಇಲ್ಲ ಆದರೆ ಹೃದಯದಿಂದ, ದೃಷ್ಟಿಯಿಂದ ಬಾಪ್ದಾದಾರವರ ಸಮ್ಮುಖದಲ್ಲಿದ್ದಾರೆ ಹಾಗೂ ಬಾಪ್ದಾದಾರವರು ಸಹ ಸಾಕರದಲ್ಲಿ ಮಕ್ಕಳನ್ನು ಸಮ್ಮುಖದಲ್ಲಿ ನೋಡುತ್ತಿದ್ದಾರೆ. ದೇಶದವರಾಗಿರಲಿ ಅಥವಾ ವಿದೇಶದವರಾಗಿರಲಿ, ಬಾಪ್ದಾದಾರವರು ಎಷ್ಟು ಸಮಯದಲ್ಲಿ ತಲುಪಬಹುದು? ಎಷ್ಟು ಸಮಯದಲ್ಲಿ ಚಕ್ರ ಹಾಕಬಹುದು? ನಾಲ್ಕಾರು ಕಡೆಯ ಮಕ್ಕಳಿಗೆ ರಿಟರ್ನ್ ನಲ್ಲಿ ಅರಭ ಕರಬ್ (ನೂರಾರು ಕೋಟಿ) ಗಿಂತ ಇನ್ನು ಹೆಚ್ಚು ನೆನಪು ಪ್ರೀತಿಯನ್ನು ಕೊಡುತ್ತಿದ್ದಾರೆ. ನಾಲ್ಕಾರು ಕಡೆಯ ಮಕ್ಕಳನ್ನು ನೋಡಿ ನೋಡಿ ಎಲ್ಲರ ಹೃದಯದಲ್ಲಿ ಒಂದೇ ಸಂಕಲ್ಪ ನೋಡುತ್ತಿದ್ದಾರೆ, ಎಲ್ಲರ ನಯನಗಳಲ್ಲಿ ಇದನ್ನೇ ಹೇಳುತ್ತಿದ್ದಾರೆ- ನಮಗೆ ಪರಮಾತ್ಮನ ಆರು ತಿಂಗಳಿನ ಹೋಂವರ್ಕ್ (ಮನೆ ಕೆಲಸ) ನೆನಪಿದೆ. ನಿಮ್ಮೆಲ್ಲರಿಗೂ ನೆನಪಿದೆ ಅಲ್ಲವೇ. ಮರೆತು ಹೋಗಿಲ್ಲ ಅಲ್ಲವೇ? ಪಾಂಡವರಿಗೆ ನೆನಪಿದೆಯೇ? ಚೆನ್ನಾಗಿ ನೆನಪಿದೆಯೇ? ಬಾಪ್ದಾದಾರವರು ಮತ್ತೆ ಮತ್ತೆ ಏಕೆ ನೆನಪು ತರಿಸುತ್ತಾರೆ? ಕಾರಣ? ಸಮಯವನ್ನು ನೋಡುತ್ತಿರುವಿರಿ, ಬ್ರಾಹ್ಮಣ ಆತ್ಮರು ಸ್ವಯಂ ಅನ್ನು ಸಹ ನೋಡುತ್ತಿರುವಿರಿ, ಮನಸ್ಸು ಯುವ ಅವಸ್ಥೆ ಯಲ್ಲಿ ಬರುತ್ತಾ ಹೋಗುತ್ತದೆ, ತನ್ನ(ಶರೀರ) ವೃದ್ಧ ಅವಸ್ಥೆಗೆ ಹೋಗುತ್ತದೆ. ಸಮಯ ಹಾಗೂ ಆತ್ಮಗಳ ಕೂಗು ಚೆನ್ನಾಗಿ ಕೇಳಿಸುತ್ತಿದೆ! ಬಾಪ್ದಾದಾರವರು ನೋಡುತ್ತಿದ್ದರು- ಆತ್ಮಗಳ ಕೂಗು ಹೃದಯದಲ್ಲಿ ವೃದ್ಧಿಯಾಗುತ್ತಾ ಹೋಗುತ್ತಿದೆ, ಹೇ ಸುಖದೇವ, ಹೇ ಶಾಂತಿದೇವ, ಹೇ ಸತ್ಯ ಸುಖದೇವ ಸ್ವಲ್ಪ ಅಂಜಲಿ ನಮಗೂ ಕೊಡಿ, ಯೋಚಿಸಿ ಕರೆಯುತ್ತಿರುವವರ ಲೈನ್ ಎಷ್ಟು ದೊಡ್ಡದಾಗಿದೆ! ನೀವೆಲ್ಲರೂ ಯೋಚಿಸುತ್ತೀರಿ ತಂದೆಯ ಪ್ರತ್ಯಕ್ಷತೆ ಆದಷ್ಟು ಬೇಗ ಆಗಲಿ ಆದರೆ ಪ್ರತ್ಯಕ್ಷತೆ ಯಾವ ಕಾರಣದಿಂದ ನಿಂತಿದೆ? ಯಾವಾಗ ನೀವೆಲ್ಲರೂ ಈ ಸಂಕಲ್ಪವನ್ನು ಮಾಡುತ್ತೀರಿ ಹಾಗೂ ಹೃದಯದ ಆಸೆಯನ್ನು ಸಹ ಇಡುತ್ತೀರಿ, ಮುಖದಿಂದ ಹೇಳುತ್ತೀರಿ- ನಾವು ತಂದೆಯ ಸಮಾನ ಆಗಬೇಕು. ಆಗಬೇಕಲ್ಲವೇ? ಆಗಬೇಕೆ? ಒಳ್ಳೆಯದು, ಹಾಗಾದರೆ ಏಕೆ ಆಗುತ್ತಿಲ್ಲ? ಬಾಪ್ದಾದಾರವರು ತಂದೆಯ ಸಮಾನ ಆಗುವುದಕ್ಕಾಗಿ, ಹೇಳಿದರು - ಏನಾಗಬೇಕು, ಹೇಗಾಗಬೇಕು ಸಮಾನ ಶಬ್ಧದಲ್ಲಿ ಈ ಎರಡು ಪ್ರಶ್ನೆಗಳು ಬರಲು ಸಾಧ್ಯವಿಲ್ಲ. ಏನು ಆಗಬೇಕು? ಉತ್ತರ ಇದೆ ಅಲ್ಲವೇ- ತಂದೆಯ ಸಮಾನ ಆಗಬೇಕು. ಹೇಗೆ ಆಗಬೇಕು?

ತಂದೆಯನ್ನು ಅನುಕರಿಸಬೇಕು- ಫುಟ್ ಸ್ಟೆಪ್ ಫಾದರ್ ಮದರ್( ತಂದೆ ತಾಯಿಯ ಹೆಜ್ಜೆಯಲ್ಲಿ ಹೆಜ್ಜೆ) ನಿರಾಕಾರ ತಂದೆ, ಸಾಕಾರ ತಾಯಿ. ಫಾಲೋ ಮಾಡಲು ಸಹ ಬರುವುದಿಲ್ಲವೇ? ಇತ್ತೀಚಿನ ಅಂಧರು (ಕಣ್ಣು ಕಾಣಿಸದೆ ಇರುವವರು) ಸಹ ಅನುಕರಣೆ ಮಾಡುತ್ತಾರೆ. ನೋಡಲಾಗಿದೆ, ಇತ್ತೀಚೆಗೆ ಅವರು ಕೋಲಿನ ಶಬ್ದದ ಅನುಸಾರ, ಕೋಲನ್ನು ಫಾಲೋ ಮಾಡುತ್ತಾ ಮಾಡುತ್ತಾ ಎಲ್ಲಿಂದ ಎಲ್ಲಿ ತಲುಪಿ ಬಿಡುತ್ತಾರೆ. ನೀವಂತೂ ಮಾಸ್ಟರ್ ಸರ್ವಶಕ್ತಿವಂತರಾಗಿದ್ದೀರಿ, ತ್ರಿನೇತ್ರಿ ಆಗಿದ್ದೀರಿ, ತ್ರಿಕಾಲ ದರ್ಶಿ ಯಾಗಿದ್ದೀರಿ. ಫಾಲೋ ಮಾಡುವುದು ನಿಮಗಾಗಿ ಯಾವ ದೊಡ್ಡ ಮಾತಾಗಿದೆ! ದೊಡ್ಡ ಮಾತಾಗಿದೆಯೇ? ಹೇಳಿ ದೊಡ್ಡ ಮಾತಾಗಿದೆಯೇ? ದೊಡ್ಡ ಮಾತಲ್ಲ ಆದರೆ ಆಗಿ ಹೋಗುತ್ತದೆ. ಬಾಪ್ದಾದಾರವರು ಎಲ್ಲಾ ಜಾಗದಲ್ಲಿ ಸುತ್ತಾಡುತ್ತಾರೆ (ಚಕ್ಕರ್) ಹಾಕುತ್ತಾರೆ, ಸೇವಕೇಂದ್ರದಲ್ಲಿಯೂ, ಪ್ರವೃತ್ತಿಯಲ್ಲಿಯು. ಬಾಪ್ದಾದಾರವರು ನೋಡಿದರೂ- ಪ್ರತಿಯೊಬ್ಬರು ಬ್ರಾಹ್ಮಣ ಆತ್ಮರ ಬಳಿ, ಪ್ರತಿಯೊಂದು ಸೇವಾಕೇಂದ್ರದಲ್ಲಿ, ಪ್ರತಿಯೊಂದು ಪ್ರವೃತ್ತಿಯ ಸ್ಥಾನದಲ್ಲಿ ಅಲ್ಲಲ್ಲಿ ಬ್ರಹ್ಮಾ ಬಾಬಾರವರ ಚಿತ್ರಗಳನ್ನು ಬಹಳಷ್ಟು ಇಡಲಾಗಿದೆ. ಅವ್ಯಕ್ತ ಬಾಪ್ದಾದಾರವರದ್ದಾಗಿರಲಿ, ಬ್ರಹ್ಮಾ ಬಾಬಾರವರದಾಗಿರಲಿ ಹಲವಾರು ಕಡೆ ಚಿತ್ರಗಳೇ ಚಿತ್ರಗಳು ಕಾಣಿಸುತ್ತಿದ್ದವು. ಒಳ್ಳೆಯ ಮಾತಾಗಿದೆ. ಆದರೆ ಬಾಪ್ದಾದಾರವರು ಇದನ್ನು ಯೋಚಿಸುತ್ತಾರೆ- ಚಿತ್ರವನ್ನು ನೋಡಿ ಚರಿತ್ರೆಯಂತೂ ನೆನಪು ಬರುತ್ತದೆ ಅಲ್ಲವೇ! ಅಥವಾ ಕೇವಲ ಚಿತ್ರವನ್ನೇ ನೋಡುತ್ತೀರಾ? ಚಿತ್ರವನ್ನು ನೋಡಿ ಪ್ರೇರಣೆಯಂತೂ ಸಿಗುತ್ತದೆ ಅಲ್ಲವೇ? ಹಾಗಾದರೆ ಬಾಪ್ದಾದಾರವರು ಮತ್ತಿನ್ನೇನನ್ನು ಹೇಳುವುದಿಲ್ಲ ಕೇವಲ ಒಂದು ಶಬ್ದವನ್ನು ಹೇಳುತ್ತಾರೆ- ಅನುಕರಣೆ ಮಾಡಿ, ಅಷ್ಟೇ. ಯೋಚಿಸ ಬೇಡಿ. ಜಾಸ್ತಿ ಯೋಜನೆಗಳನ್ನು ತಯಾರು ಮಾಡಬೇಡಿ, ಇದನ್ನು ಮಾಡುವುದಿಲ್ಲ ಅದನ್ನು ಮಾಡುತ್ತೇವೆ, ಹೀಗಲ್ಲ ಹಾಗೆ, ಹಾಗಲ್ಲ ಹೀಗೆ. ಇಲ್ಲ, ಬಾಬಾರವರು ಏನನ್ನು ಮಾಡಿದ್ದಾರೆ, ಅದನ್ನು ಕಾಪಿ (ನಕಲು) ಮಾಡಬೇಕು, ಅಷ್ಟೇ. ಕಾಪಿ ಮಾಡಲು ಬರುವುದಿಲ್ಲವೇ? ಇತ್ತೀಚಿನ ಮನುಷ್ಯರು ಫೋಟೋ ಕಾಪಿ ಮಾಡುವುದಕ್ಕೂ ಸಹ ಮೆಷಿನ್ ತಯಾರು ಮಾಡಿಬಿಟ್ಟಿದ್ದಾರೆ. ತಯಾರು ಮಾಡಿದ್ದಾರಲ್ಲವೇ! ಇಲ್ಲಿ ಫೋಟೋ ಕಾಪಿ ಇದೆ ಅಲ್ಲವೇ ಅವರು ಬ್ರಹ್ಮಾ ಬಾಬಾರವರ ಚಿತ್ರವನ್ನು ಇಟ್ಟಿದ್ದಾರೆ. ಭಲೆ ಇಡಿ, ಚೆನ್ನಾಗಿ ಇಡಿ, ದೊಡ್ಡ ದೊಡ್ಡದು ಇಡಿ. ಆದರೆ. ಫೋಟೋ ಕಾಪಿ ಅಂತೂ ಮಾಡಿ!

ಬಾಪ್ದಾದಾರವರು ಇಂದು ನಾಲ್ಕಾರು ಕಡೆಯ ಚಕ್ಕರ್ ಹಾಕುತ್ತಾ ಇದನ್ನೇ ನೋಡುತ್ತಿದ್ದರು, ಚಿತ್ರದೊಂದಿಗೆ ಪ್ರೀತಿ ಇದೆಯೇ ಅಥವಾ ಚರಿತ್ರೆಯೊಂದಿಗೆ ಪ್ರೀತಿ ಇದೆಯೇ? ಸಂಕಲ್ಪವೂ ಇದೆ, ಉಮಂಗವು ಇದೆ, ಲಕ್ಷ್ಯವೂ ಇದೆ, ಇನ್ನೇನು ಬೇಕು? ಆಧಾರಗಳು ನೋಡಿದರು, ಯಾವುದೇ ವಸ್ತುವನ್ನು ಚೆನ್ನಾಗಿ ಶಕ್ತಿಶಾಲಿಯನ್ನಾಗಿ ಮಾಡುವುದಕ್ಕಾಗಿ ನಾಲ್ಕು ಮೂಲೆಯಿಂದ ಅದನ್ನು ಪಕ್ಕಾ ಮಾಡಲಾಗುತ್ತದೆ. 3 ಮೂಲೆಗಳಂತೂ ಪಕ್ಕಾ ಇದೆ, ಒಂದು ಮೂಲೆ ಇನ್ನು ಪಕ್ಕಾ ಆಗಬೇಕಾಗಿದೆ. ಸಂಕಲ್ಪವೂ ಇದೆ , ಉಮಂಗವು ಇದೆ, ಲಕ್ಷವೂ ಇದೆ, ಯಾರಿಗೆ ಕೇಳಿ ನೀವು ಏನು ಆಗಬೇಕು? ಪ್ರತಿಯೊಬ್ಬರೂ ಹೇಳುತ್ತಾರೆ, ತಂದೆಯ ಸಮಾನ ಆಗಬೇಕು, ಯಾರು ಸಹ ತಂದೆಗಿಂತ ಕಡಿಮೆ ಆಗಬೇಕು ಎಂದು ಹೇಳುವುದಿಲ್ಲ. ಸಮಾನರಾಗಬೇಕು ಎಂದು ಹೇಳುತ್ತಾರೆ. ಒಳ್ಳೆಯ ಮಾತಾಗಿದೆ. ಒಂದು ಮೂಲೆಯನ್ನು ಬಲಶಾಲಿಯನ್ನಾಗಿ ಮಾಡುತ್ತೀರಿ ಆದರೆ ನಡೆಯುತ್ತಾ ನಡೆಯುತ್ತಾ, ಸಡಿಲವಾಗಿ ಬಿಡುತ್ತದೆ. ಅದಾಗಿದೆ ದೃಢತೆ. ಸಂಕಲ್ಪವಿದೆ, ಲಕ್ಷ್ಯವಿದೆ ಆದರೆ ಯಾವುದೇ ಪರ-ಸ್ಥಿತಿ ಬಂದುಬಿಡುತ್ತದೆ, ಸಾಧಾರಣ ಶಬ್ದದಲ್ಲಿ ಅದನ್ನು ನೀವು ಹೇಳುತ್ತೀರಿ, ಮಾತುಗಳು ಬಂದುಬಿಡುತ್ತದೆ, ಅದು ದೃಢತೆಯನ್ನು ಸಡಿಲ ಮಾಡಿಬಿಡುತ್ತದೆ. ಧೃಡತೆ ಎಂದರೆ- ಪ್ರಾಣ ಹೋಗಲಿ, ಸಮಾಪ್ತಿಯಾಗಿ ಬಿಡಲಿ ಆದರೆ ಸಂಕಲ್ಪ ಹೋಗದಿರಲಿ. ಬಾಗುವ ಪರಿಸ್ಥಿತಿ ಬರಲಿ, ಬದುಕಿದ್ದಂತೆಯೇ ಸಾಯಬೇಕಾಗಿ ಬರಲಿ, ತಮ್ಮನ್ನು ತಾವು ಪರಿವರ್ತನೆ ಮಾಡಿಕೊಳ್ಳ ಬೇಕಾಗಲಿ, ಸಹನೆ ಮಾಡಬೇಕಾಗಲಿ, ಅನ್ಯರಿಂದ ಮಾತುಗಳನ್ನು ಕೇಳಬೇಕಾಗಿ ಬರಲಿ ಆದರೆ ಸಂಕಲ್ಪ ಹೋಗದಿರಲಿ. ಇದಕ್ಕೆ ಹೇಳಲಾಗುತ್ತದೆ ದೃಢತೆ. ಯಾವಾಗ ಚಿಕ್ಕ ಚಿಕ್ಕ ಮಕ್ಕಳು ಓಂ ನಿವಾಸದಲ್ಲಿ ಬರುತ್ತಿದ್ದರು- ಆಗ ಬ್ರಹ್ಮಾ ಬಾಬಾರವರು ಅವರಿಗೆ ರಮಣಿಕತೆಯಲ್ಲಿ ನೆನಪು ತರಿಸುತ್ತಿದ್ದರು, ಪಕ್ಕಾ ಮಾಡಿಸುತ್ತಿದ್ದರು- ಇಷ್ಟು ಇಷ್ಟು ನೀರು ಕುಡಿದರೆ, ಇಷ್ಟು ಮೆಣಸನ್ನು ತಿನ್ನುವರು, ಭಯ ಪಡುವುದಿಲ್ಲ ಅಲ್ಲವೇ? ನಂತರ ಕೈಗಳನ್ನು ಕಣ್ಣುಗಳ ಮುಂದೆ ಇಡುತ್ತಿದ್ದರು... ಎಂದ ಮೇಲೆ ಬ್ರಹ್ಮಾ ಬಾಬಾ ಚಿಕ್ಕ ಚಿಕ್ಕ ಮಕ್ಕಳಿಗೆ ಪಕ್ಕಾ ಮಾಡಿಸುತ್ತಿದ್ದರು, ಎಷ್ಟೇ ಸಮಸ್ಯೆಗಳು ಬರಲಿ, ಸಂಕಲ್ಪದ ಕಣ್ಣು ಅಲುಗಾಡದಿರಲಿ. ಅದಂತು ಕೆಂಪು ಮೆಣಸಿನಕಾಯಿ ನೀರಿನ ಮಡಿಕೆಯಾಗಿತ್ತು. ಚಿಕ್ಕ ಮಕ್ಕಳಾಗಿದ್ದರಲ್ಲವೇ. ನೀವಂತೂ ಈಗ ಎಲ್ಲರೂ ದೊಡ್ಡವರಾಗಿದ್ದೀರಿ, ಬಾಪ್ದಾದಾರವರು ಇಂದು ಸಹ ಮಕ್ಕಳೊಂದಿಗೆ ಕೇಳುತ್ತಾರೆ- ನಿಮಗೆ ದೃಢ ಸಂಕಲ್ಪ ಇದೆಯೇ? ಸಂಕಲ್ಪದಲ್ಲಿ ದೃಢತೆ ಇದೆಯೇ- ತಂದೆಯ ಸಮಾನ ಆಗಲೇಬೇಕು? ಆಗಬೇಕು ಅಲ್ಲ, ಆಗಲೇಬೇಕು. ಒಳ್ಳೆಯದು, ಇದರಲ್ಲಿ ಕೈ ಅಲುಗಾಡಿಸಿ. ಟಿವಿಯವರು ನೋಡಿಕೊಳ್ಳಿ. ಟಿವಿ ಕೆಲಸದಲ್ಲಿ ಬರಬೇಕು ಅಲ್ಲವೇ! ದೊಡ್ಡ ದೊಡ್ಡ ಕೈಯೆತ್ತಿ. ಒಳ್ಳೆಯದು ಮಾತೇಯರು ಸಹ ಎತ್ತುತ್ತಿದ್ದಾರೆ. ಹಿಂದೆ ಕುಳಿತವರು ಇನ್ನು ಉದ್ದ ಕೈ ಎತ್ತಿ. ಬಹಳ ಒಳ್ಳೆಯದು. ಕ್ಯಾಬಿನ್ನವರು ಎತ್ತುತ್ತಿಲ್ಲ. ಕ್ಯಾಬಿನ್ ಅವರಂತೂ ನಿಮಿತರಾಗಿದ್ದೀರಿ, ಒಳ್ಳೆಯದು ಸ್ವಲ್ಪ ಸಮಯಕ್ಕಾಗಿ ಕೈಯೆತ್ತಿ ಬಾಪ್ದಾದಾರವರನ್ನು ಖುಷಿಪಡಿಸುತ್ತಿದ್ದೀರಿ.

ಈಗ ಬಾಪ್ದಾದಾರವರು ಕೇವಲ ಒಂದು ಮಾತನ್ನು ಮಕ್ಕಳೊಂದಿಗೆ ಕೇಳಲು ಬಯಸುತ್ತಾರೆ, ಹೇಳಲು ಬಯಸುವುದಿಲ್ಲ ಆದರೆ, ಆಡಲು ಬಯಸುತ್ತಾರೆ. ಕೇವಲ ತಮ್ಮ ಮನಸ್ಸಿನಲ್ಲಿ ದೃಢತೆಯನ್ನು ತೆಗೆದುಕೊಂಡು ಬನ್ನಿ, ಚಿಕ್ಕ ಮಾತಿನಲ್ಲಿ ನಮ್ಮ ಮನಸ್ಸನ್ನು ಸಡಿಲಗೊಳಿಸಬೇಡಿ. ಯಾರಾದರೂ ಇನ್ಸಲ್ಟ್ ಮಾಡಲಿ, ಯಾರೇ ತಿರಸ್ಕಾರ ಮಾಡಲಿ, ಯಾರೇ ಅಪಮಾನ ಮಾಡಲಿ, ನಿಂದನೆ ಮಾಡಲಿ, ಯಾರೇ ದುಃಖ ಕೊಡಲಿ ಆದರೆ ನಿಮ್ಮ ಶುಭ ಭಾವನೆ ಎಂದೂ ಸಹ ಅಳಿಸಿ ಹೋಗದಿರಲಿ. ನೀವು ಮಾಯೆಗೆ ಚಾಲೆಂಜ್ ಮಾಡುತ್ತೀರಿ, ಪ್ರಕೃತಿಯನ್ನು ಪರಿವರ್ತನೆ ಮಾಡುವವರು ವಿಶ್ವ ಪರಿವರ್ತಕರಾಗಿದ್ದೀರಿ, ನಿಮ್ಮ ಕರ್ತವ್ಯವಂತು ನೆನಪಿದೆ ಅಲ್ಲವೇ! ಒಂದು ವೇಳೆ ಯಾರಾದರೂ ತಮ್ಮ ಸಂಸ್ಕಾರ ವಶ ನಿಮಗೆ ದುಃಖ ಕೊಟ್ಟರೆ, ಪೆಟ್ಟು ಮಾಡಿದರೆ, ಏರುಪೇರು ಮಾಡಿದರೆ, ನೀವು ದುಃಖದ ಮಾತನ್ನು ಸುಖದಲ್ಲಿ ಪರಿವರ್ತನೆ ಮಾಡಲು ಸಾಧ್ಯವೇ? ಇನ್ಸಲ್ಟ್ ನ್ನು (ಅಪಮಾನವನ್ನು) ಸಹನೆ ಮಾಡಲು ಸಾಧ್ಯವೇ? ಬೈಗುಳವನ್ನು ಗುಲಾಬಿಯನ್ನಾಗಿ ಮಾಡಲು ಸಾಧ್ಯವೇ? ಸಮಸ್ಯೆಯನ್ನು ತಂದೆಯ ಸಮಾನರಾಗುವ ಸಂಕಲ್ಪದಲ್ಲಿ ಪರಿವರ್ತನೆ ಮಾಡಲು ಸಾಧ್ಯವಿಲ್ಲವೇ? ನಿಮ್ಮೆಲ್ಲರಿಗೂ ನೆನಪಿದೆ- ಎಂದು ತಾವು ಬ್ರಾಹ್ಮಣ ಜನ್ಮದಲ್ಲಿ ಬಂದಿರಿ ಹಾಗೂ ನಿಶ್ಚಯ ಮಾಡಿದಿರಿ, ನಿಮಗೆ ಒಂದು ಸೆಕೆಂಡ್ ಬೇಕಾಗಿರಬಹುದು ಅಥವಾ ಒಂದು ತಿಂಗಳು ಆದರೆ ಎಂದಿನಿಂದ ನೀವು ನಿಶ್ಚಯ ಮಾಡಿದಿರಿ, ಹೃದಯ ಹೇಳಿತು "ನಾನು ಬಾಬಾರವರ ಮಗು, ಬಾಬಾ ನನ್ನವರು". ಸಂಕಲ್ಪ ಮಾಡಿದಿರಿ ಅಲ್ಲವೇ, ಅಲ್ಲವೇ! ಅಂದಿನಿಂದ ನೀವು ಮಾಯೆಗೆ ಚಾಲೆಂಜ್ ಮಾಡಿದ್ದೀರಿ- ನಾನು ಮಾಯಾಜಿತ್ ಆಗುತ್ತೇನೆ. ಈ ಚಾಲೆಂಜ್ ಅನ್ನು ಮಾಯೆಯೊಂದಿಗೆ ಮಾಡಿದ್ದೀರಲ್ಲವೇ? ಮಾಯಾಜಿತ್ ಆಗಬೇಕೆ ಇಲ್ಲವೇ? ಮಾಯಾಜಿತ್ ನೀವೇ ಆಗಿದ್ದೀರಲ್ಲವೇ ಅಥವಾ ಬೇರೆಯವರು ಆಗಬೇಕಾಗಿದೆಯೇ? ಯಾವಾಗ ಮಾಯೆಗೆ ಚಾಲೆಂಜ್ ಮಾಡಿದ್ದೀರಿ ಎಂದರೆ ಈ ಸಮಸ್ಯೆಗಳು, ಈ ಮಾತುಗಳು, ಈ ಏರುಪೇರುಗಳು, ಮಾಯೆಯ ರಾಯಲ್ ರೂಪಗಳಾಗಿವೆ. ಮಾಯೆ ಬೇರೆ ಯಾವುದೊ ರೂಪದಲ್ಲಿ ಬರುವುದಿಲ್ಲ. ಈ ರೂಪಗಳಲ್ಲಿಯೇ ಮಾಯಾಜಿತ್ ಆಗಬೇಕು. ಮಾತು ಬದಲಾಗುವುದಿಲ್ಲ, ಸೇವಾಕೇಂದ್ರ ಬದಲಾಗುವುದಿಲ್ಲ, ಸ್ಥಾನ ಬದಲಾಗುವುದಿಲ್ಲ, ಆತ್ಮಗಳು ಬದಲಾಗುವುದಿಲ್ಲ, ನಾವೇ ಬದಲಾಗಬೇಕು. ನಿಮ್ಮ ಸ್ಲೋಗನ್ ಎಲ್ಲರಿಗೂ ಬಹಳ ಪ್ರಿಯವೆನಿಸುತ್ತದೆ- ಬದಲಾಗಿ ತೋರಿಸಬೇಕು, ಸೇಡು ಇಟ್ಟುಕೊಳ್ಳಬಾರದು, ಬದಲಾವಣೆಯಾಗಬೇಕು. ಇದಂತೂ ಹಳೆಯ ಸ್ಲೋಗನ್ ಆಗಿದೆ. ಹೊಸ ಹೊಸ ರೂಪ, ರಾಯಲ್ ರೂಪದಲ್ಲಿ ಮಾಯೆ ಇನ್ನಷ್ಟು ಬರುವುದು, ಗಾಬರಿಯಾಗಬೇಡಿ. ಬಾಪ್ದಾದಾರವರು ಅಂಡರ್ ಲೈನ್ ಮಾಡುತ್ತಿದ್ದಾರೆ- ಮಾಯೆ ಇಂತಹ- ಇಂತಹ ರೂಪದಲ್ಲಿ ಬರಲಿದೆ, ಬರುತ್ತಿದೆ. ಯಾವುದನ್ನು ಮಕ್ಕಳು ಅನುಭವವೇ ಮಾಡುವುದಿಲ್ಲ- ಇದು ಸಹ ಮಾಯೆಯಾಗಿದೆ ಎಂದು, ಹೇಳುತ್ತಾರೆ ಇಲ್ಲ ದಾದಿ ನೀವು ತಿಳಿದುಕೊಂಡಿಲ್ಲ. ಇದು ಮಾಯೆಯಲ್ಲ. ಇದಂತೂ ಸತ್ಯ ಮಾತಾಗಿದೆ. ಇನ್ನಷ್ಟು ರಾಯಲ್ ರೂಪದಲ್ಲಿ ಬರಲಿದೆ, ಹೆದರಬೇಡಿ. ಏಕೆ? ನೋಡಿ, ಯಾವುದೇ ಶತ್ರು ಸೋಲಲಿ ಅಥವಾ ವಿಜಯಿಯಾಗಲಿ, ಅವರ ಬಳಿ ಏನೆಲ್ಲಾ ಅಸ್ತ್ರಶಸ್ತ್ರಗಳಿರುತ್ತವೆ , ಅದನ್ನು ಬಳಸುತ್ತಾರೆ ಅಥವಾ ಇಲ್ಲವೇ? ಬಳಸುತ್ತಾರೆ ಅಲ್ಲವೇ? ಅಂತ್ಯವಂತು ಆಗಲೇಬೇಕು ಆದರೆ ಎಷ್ಟು ಅಂತ್ಯ ಸಮೀಪ ಬರುತ್ತಿದೆ. ಷ್ಟು ಅದು ಹೊಸ ಹೊಸ ರೂಪದಿಂದ ತನ್ನ ಅಸ್ತ್ರಶಸ್ತ್ರಗ ಳನ್ನು ಉಪಯೋಗಿಸುತ್ತಿದೆ, ಉಪಯೋಗಿಸುತ್ತದೆ. ನಂತರ ನಿಮ್ಮ ಕಾಲಿಗೆ ಬಾಗುವುದು. ಮೊದಲು ನಿಮ್ಮನ್ನು ಬಾಗಿಸುವ ಪ್ರಯತ್ನ ಪಡುವುದು, ನಂತರ ಸ್ವಯಂ ಬಾಗುವುದು. ಕೇವಲ ಇದರಲ್ಲಿ ಬಾಪ್ದಾದಾರವರು ಒಂದೇ ಶಬ್ದವನ್ನು ಮತ್ತೆ ಮತ್ತೆ ಅಂಡರ್ ಲೈನ್ ಮಾಡಿಸುತ್ತಿದ್ದಾರೆ."ತಂದೆಯ ಸಮಾನ ಆಗಬೇಕು"- ನಮ್ಮ ಈ ಲಕ್ಷ್ಯದ ಸ್ವಮಾನದಲ್ಲಿ ಇರಿ ಹಾಗೂ ಸನ್ಮಾನ ಕೊಡುವುದು ಅರ್ಥಾತ್ ಸನ್ಮಾನ ತೆಗೆದುಕೊಳ್ಳುವುದು, ತೆಗೆದುಕೊಳ್ಳುವುದರಿಂದ ಸಿಗುವುದಿಲ್ಲ, ಕೊಡುವುದು ಅರ್ಥಾತ್ ತೆಗೆದುಕೊಳ್ಳುವುದು. ಸನ್ಮಾನ ಕೊಡಲಿ- ಇದು ಯಥಾರ್ಥವಲ್ಲ, ಸನ್ಮಾನ ಕೊಡುವುದೇ ಪಡೆಯುವುದಾಗಿದೆ. ಸನ್ಮಾನ ದೇಹ-ಅಭಿಮಾನದಲ್ಲ, ಬ್ರಾಹ್ಮಣ ಜೀವನದ ಸ್ವಮಾನ, ಶ್ರೇಷ್ಠ ಆತ್ಮದ ಸ್ವಮಾನ, ಸಂಪನ್ನತೆಯ ಸ್ವಮಾನ. ಎಂದರೆ ಸ್ವಮಾನ ಹಾಗೂ ಸನ್ಮಾನ ತೆಗೆದುಕೊಳ್ಳುವುದಲ್ಲ ಕೊಡುವುದು, ಕೊಡುವುದೇ ತೆಗೆದುಕೊಳ್ಳುವುದಾಗಿದೆ- ಈ ಎರಡು ಮಾತುಗಳಲ್ಲಿ ದೃಢತೆಯನ್ನು ಇಟ್ಟುಕೊಳ್ಳಿ. ನಿಮ್ಮ ದೃಢತೆಯನ್ನು ಯಾರೇ ಎಷ್ಟೇ ಅಲುಗಾಡಿಸಲಿ, ದೃಢತೆಯನ್ನು ಸಡಿಲಗೊಳಿಸಬೇಡಿ, ಬಲಶಾಲಿಯನ್ನಾಗಿ ಮಾಡಿ. ಅಚಲರಾಗಿ. ಆಗ ಬಾಪ್ದಾದಾರವರೊಂದಿಗೆ ಯಾವ ಪ್ರಾಮಿಸ್ ಮಾಡಿದ್ದೀರಿ, ಆರು ತಿಂಗಳಿನ. ಪ್ರತಿಜ್ಞೆಯಂತು ನೆನಪಿದೆ ಅಲ್ಲವೇ. ಇನ್ನೂ ಕೇವಲ 15 ದಿನಗಳಾಗಿವೆ. ಇನ್ನು ಐದೂವರೆ ತಿಂಗಳು ಬಾಕಿ ಇದೆ ಎಂದು ಯೋಚಿಸಬೇಡಿ. ಯಾವಾಗ ಅಮೃತವೇಳೆ ಆತ್ಮಿಕ ವಾತಾಲಾಪವನ್ನು ಮಾಡುತ್ತೀರಿ- ಅಮೃತ ವೇಳೆ ಆತ್ಮಿಕ ವರ್ತಲಾಪವನ್ನಂತೂ ಮಾಡುತ್ತಿರಲ್ಲವೇ, ಆಗ ಬಾಪ್ದಾದಾರವರಿಗೆ ಬಹಳ ಒಳ್ಳೆಯ ಮಾತುಗಳನ್ನು ಹೇಳುತ್ತಾರೆ. ತಮ್ಮ ಮಾತುಗಳನ್ನು ತಿಳಿದಿದ್ದೀರಲ್ಲವೇ? ಎಂದ ಮೇಲೆ ಈಗ ದೃಢತೆಯನ್ನು ತಮ್ಮದಾಗಿಸಿಕೊಳ್ಳಿ. ಉಲ್ಟಾ ಮಾತುಗಳಲ್ಲಿ ದೃಢತೆ ಇಡುವುದಲ್ಲ. ಕ್ರೋಧ ಮಾಡಲೇಬೇಕು, ನನ್ನಲ್ಲಿ ದೃಢತೆ ಇದೆ, ಈ ರೀತಿ ಅಲ್ಲ. ತಿಳಿಯಿತೇ? ಇತ್ತೀಚಿಗೆ ಬಾಪ್ದಾದಾರವರ ಬಳಿ ರೆಕಾರ್ಡಿನಲ್ಲಿ ಬಹುತೇಕ ಕ್ರೋಧದ ಭಿನ್ನ-ಭಿನ್ನ ಪ್ರಕಾರದ ರಿಪೆÇೀರ್ಟ್ ತಲುಪುತ್ತದೆ. ಮಹಾ ರೂಪದಲ್ಲಿ ಕಡಿಮೆ ಆದರೆ ಅಂಶ ರೂಪದಲ್ಲಿ ಭಿನ್ನ ಭಿನ್ನ ಪ್ರಕಾರದ ಕ್ರೋಧದ ರೂಪ ಜಾಸ್ತಿ ಇದೆ. ಇದರ ಮೇಲೆ ಕ್ಲಾಸ್ ಮಾಡಿಸಬೇಕಾಗಿದೆ- ಕ್ರೋದದ ಎಷ್ಟು ರೂಪಗಳಿವೆ? ನಂತರ ಏನು ಹೇಳುತ್ತಾರೆ ನಮ್ಮ ಭಾವ ಈ ರೀತಿ ಇರಲಿಲ್ಲ, ನಮ್ಮ ಭಾವನೆಯು ಈ ರೀತಿ ಇರಲಿಲ್ಲ, ಹಾಗೆ ಹೇಳಿಬಿಟ್ಟೆ. ಇದರ ಮೇಲೆ ಕ್ಲಾಸ್ ಮಾಡಿಸಬೇಕು.

ಟೀಚರ್ಸ್ ಬಹಳ ಬಂದಿದ್ದೀರಿ ಅಲ್ಲವೇ? (1200 ಶಿಕ್ಷಕಿಯರು ಬಂದಿದ್ದಾರೆ) 1200 ಎಲ್ಲರೂ ದೃಢ ಸಂಕಲ್ಪ ಮಾಡಿಕೊಳ್ಳಿ ಆಗ ನಾಳೆಯೇ ಪರಿವರ್ತನೆ ಆಗಿ ಬಿಡಬಹುದು. ನಂತರ ಇಷ್ಟೊಂದು ಆಕ್ಸಿಡೆಂಟ್ ಆಗುವುದಿಲ್ಲ, ಎಲ್ಲರೂ ಬಚಾವಾಗಿ ಬಿಡುವಿರಿ. ಟೀಚರ್ಸ್ ಕೈ ಎತ್ತಿ. ಬಹಳ ಇದ್ದಾರೆ. ಶಿಕ್ಷಕಿಯರು ಎಂದರೆ ನಿಮಿತ್ತ ತಳಪಾಯ. ಒಂದು ವೇಳೆ ಫೌಂಡೇಶನ್ (ತಳಪಾಯ) ಪಕ್ಕಾ ಅರ್ಥತ್ ದೃಢವಾಗಿದ್ದರೆ ವೃಕ್ಷವು ಸ್ವತಹವಾಗಿಯೇ. ಸರಿಯಾಗಿರುವುದು ಇತ್ತೀಚೆಗೆ ಸಂಸಾರದಲ್ಲಾಗಿರಲಿ ಬ್ರಾಹ್ಮಣ ಸಂಸಾರದಲ್ಲಾಗಿರಲಿ ಸಾಹಸ ಹಾಗೂ ಸತ್ಯ ಪ್ರೀತಿ ಬೇಕಾಗಿದೆ. ಸ್ವಾರ್ಥದ ಪ್ರೀತಿ ಅಲ್ಲ. ಸಮಯ ಪ್ರಮಾಣದ ಪ್ರೀತಿ ಅಲ್ಲ. ಒಂದು ಸತ್ಯ ಪ್ರೀತಿ ಹಾಗೂ ಎರಡನೆಯದು ಸಾಹಸ, ತಿಳಿಯಿರಿ 95% ಒಂದು ವೇಳೆ ಯಾರಾದರೂ ಸಂಸ್ಕಾರದ ವಶ ಪರವಶರಾಗಿ ಏರುಪೇರು ಮಾಡಿದರು ಸಹ 5% ಒಳ್ಳೆಯದು ಮಾಡುತ್ತಾರೆ, ನೀವು ಆಗ ಅವರ 5% ಒಳ್ಳೆಯತನವನ್ನು ತೆಗೆದುಕೊಂಡು ಅವರಲ್ಲಿ ಸಾಹಸ ತುಂಬಿ, ಅವರಿಗೆ ಹೇಳಿ ಇದೆಲ್ಲವನ್ನು ತುಂಬಾ ಚೆನ್ನಾಗಿ ಮಾಡಿದ್ದೀರಿ ಬಾಕಿ ಇದನ್ನು ಸರಿ ಮಾಡಿಕೊಳ್ಳಿ, ಆಗ ಅವರಿಗೆ ಫೀಲ್ ಆಗುವುದಿಲ್ಲ. ಒಂದು ವೇಳೆ ಹೀಗೇಕೆ ಮಾಡಿದೆ, ಹೀಗೆ ಮಾಡಲಾಗುವುದಿಲ್ಲ, ಈ ರೀತಿ ಮಾಡಲು ಸಾಧ್ಯವಿಲ್ಲ ಈ ರೀತಿ ಹೇಳಿದರೆ ಅವರು ಮೊದಲೇ ಸಂಸ್ಕಾರದ ವಶ ಆಗಿದ್ದಾರೆ, ಬಲಹೀನರಾಗಿದ್ದಾರೆ ಮತ್ತೆ ಇನ್ನಷ್ಟು ನರ್ವಸ್ (ನಡುಗುತ್ತಾರೆ) ಮುಂದುವರೆಯಲು ಸಾಧ್ಯವಾಗುವುದಿಲ್ಲ. ಐದು ಪಸೆರ್ಂಟ್ ಮೊದಲು ಸಾಹಸವನ್ನ ತರಿಸಿ, ನಿಮ್ಮಲ್ಲಿ ಈ ಮಾತು ಬಹಳ ಒಳ್ಳೆಯದಿದೆ. ಇದನ್ನು ನೀವು ತುಂಬಾ ಚೆನ್ನಾಗಿ ಮಾಡಬಹುದು, ನಂತರ ಅವರಿಗೆ ಒಂದು ವೇಳೆ ಸಮಯ ಹಾಗೂ ಅವರ ಸ್ವರೂಪವನ್ನು ತಿಳಿದುಕೊಂಡು ಅವರಿಗೆ ಮಾತನ್ನು ಹೇಳಿದರೆ ಅವರು ಪರಿವರ್ತನೆ ಆಗಿಬಿಡುವರು. ಸಾಹಸವನ್ನು ಕೊಡಿ, ಪರವಶ ಆತ್ಮರಲ್ಲಿ ಸಾಹಸ ಇರುವುದಿಲ್ಲ. ತಂದೆ ನಿಮ್ಮನ್ನು ಹೇಗೆ ಪರಿವರ್ತನೆ ಮಾಡಿದರು? ನಿಮ್ಮ ಕೊರತೆಗಳನ್ನು ಹೇಳಿದರೆ? ನೀವು ವಿಕಾರಿಯಾಗಿದ್ದೀರಿ, ನೀವು ಕೊಳಕಾಗಿದ್ದೀರಿ, ಹೇಳಿದರೆ? ನಿಮಗೆ ಸ್ಮೃತಿ ತರಿಸಿದರು ನೀವು ಆತ್ಮ ರಾಗಿದ್ದೀರಿ ಹಾಗೂ ಈ ಶ್ರೇಷ್ಠ ಸ್ಮೃತಿಯಿಂದ ನಿಮ್ಮಲ್ಲಿ ಸಮರ್ಥತೆ ಬಂತು, ಪರಿವರ್ತನೆ ಮಾಡಿದರು. ಸಾಹಸದಿಂದ ಸ್ಮೃತಿ ತರಿಸಿ. ಸ್ಮೃತಿ ಸಮರ್ಥಿಯನ್ನು ಸ್ವತಹವಾಗಿ ತರಿಸುತ್ತದೆ. ತಿಳಿಯಿತೆ. ಎಂದ ಮೇಲೆ ಈಗಂತೂ ಸಮಾನರಾಗುವಿರಿ ಅಲ್ಲವೇ? ಕೇವಲ ಒಂದು ಅಕ್ಷರವನ್ನು ನೆನಪಿಟ್ಟುಕೊಳ್ಳಿ - ಫಾಲೋ ಫಾದರ್ ಮದರ್ (ತಂದೆಯನ್ನು ಹಾಗೂ ತಾಯಿಯನ್ನು ಅನುಕರಿಸಿ) ತಂದೆ ಏನು ಮಾಡಿದರೂ, ಅದನ್ನು ಮಾಡಬೇಕು. ಅಷ್ಟೇ ಹೆಜ್ಜೆಯ ಮೇಲೆ ಹೆಜ್ಜೆ ಇಡಬೇಕು. ಆಗ ಸಮಾನರಾಗುವುದು ಸಹಜ ಅನುಭವ ಆಗುವುದು.

ಡ್ರಾಮಾ ಚಿಕ್ಕ ಚಿಕ್ಕ ಆಟವನ್ನು ತೋರಿಸುತ್ತಾ ಇರುವುದು. ಆಶ್ಚರ್ಯದ ಚಿಹ್ನೆಯಂತು ಬರುವುದಿಲ್ಲ ಅಲ್ಲವೇ? ಒಳ್ಳೆಯದು.

ಅನೇಕ ಮಕ್ಕಳ ಕಾರ್ಡ್, ಪತ್ರ, ಹೃದಯದ ಗೀತೆ ಬಾಪ್ದಾದಾರವರ ಬಳಿ ತಲುಪಿದೆ. ಎಲ್ಲರೂ ಹೇಳುತ್ತಾರೆ ನಮ್ಮ ನೆನಪು ಪ್ರೀತಿಯನ್ನು ಸಹ ಕೊಡಿ, ನಮ್ಮ ನೆನಪನ್ನು ಸಹ ಕೊಡಿ. ಅಂದಮೇಲೆ ಬಾಬಾರವರು ಹೇಳುತ್ತಾರೆ ನಮ್ಮ ನೆನಪು ಪ್ರೀತಿಯನ್ನು ಸಹ ಕೊಟ್ಟುಬಿಡಿ. ನೆನಪಂತೂ ತಂದೆಯು ಸಹ ಮಾಡುತ್ತಾರೆ, ಮಕ್ಕಳು ಮಾಡುತ್ತಾರೆ, ಏಕೆಂದರೆ ಈ ಚಿಕ್ಕ ಸಂಗಮ ಯುಗದಲ್ಲಿಯೇ ಬಾಪ್ದಾದಾರವರು ಹಾಗೂ ಮಕ್ಕಳು, ಇನ್ನು ಯಾವುದೇ ವಿಸ್ತಾರವಂತು ಇಲ್ಲವೇ ಇಲ್ಲ. ಎಂದ ಮೇಲೆ ಯಾರು ನೆನಪು ಬರುತ್ತಾರೆ? ಮಕ್ಕಳಿಗೆ ತಂದೆ, ತಂದೆಗೆ ಮಕ್ಕಳು. ಎಂದ ಮೇಲೆ ದೇಶ ವಿದೇಶದ ಮಕ್ಕಳಿಗೆ ಬಹಳ ಬಹಳ ಬಹಳ ಬಹಳ ಪ್ರೀತಿಯನ್ನು ಕೊಡುತ್ತಾರೆ. ಒಳ್ಳೆಯದು.

ನಾಲ್ಕಾರು ಕಡೆಯ ಬ್ರಾಹ್ಮಣ ಸಂಸಾರದ ವಿಶೇಷ ಆತ್ಮರಿಗೆ, ಸದಾ ದೃಢತೆಯ ಮೂಲಕ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಸಫಲತೆಯ ನಕ್ಷತ್ರಗಳಿಗೆ, ಸದಾ ಸ್ವಯಂ ಸಂಪನ್ನ ಮಾಡಿಕೊಂಡು ಆತ್ಮಗಳ ಕರೆಯನ್ನು ಪೂರ್ಣಗೊಳಿಸುವಂತಹ ಸಂಪನ್ನ ಆತ್ಮಗಳಿಗೆ, ಸದಾ ನಿರ್ಬಲರಿಗೆ, ಪರವಶ ಆತ್ಮರಿಗೆ ತಮ್ಮ ಸಾಹಸದ ವರದಾನದ ಮೂಲಕ ಸಾಹಸ ಕೊಡುವಂತಹ, ತಂದೆಯ ಸಹಯೋಗದ ಪಾತ್ರ ಆತ್ಮಗಳಿಗೆ, ಸದಾ ವಿಶ್ವ ಪರಿವರ್ತಕರಾಗಿ ಸ್ವಪರಿವರ್ತನೆಯಿಂದ ಮಾಯೆ, ಪ್ರಕೃತಿ ಹಾಗೂ ಬಲಹೀನ ಆತ್ಮರನ್ನು ಪರಿವರ್ತನೆ ಮಾಡುವಂತಹ ಪರಿವರ್ತಕ ಆತ್ಮಗಳಿಗೆ, ಬಾಪ್ದಾದಾರವರ ನಾಲ್ಕಾರು ಕಡೆಯ ಚಿಕ್ಕ ಸಂಸಾರದ ಸರ್ವ ಆತ್ಮಗಳಿಗೆ ಸಮ್ಮುಖ ಬಂದಿರುವಂತಹ ಶ್ರೇಷ್ಠ ಆತ್ಮರಿಗೆ ಲಕ್ಷ-ಕೋಟಿಯಷ್ಟು ನೆನಪು ಪ್ರೀತಿ ಹಾಗೂ ನಮಸ್ತೆ.

ವರದಾನ:
ಸೈಲೆನ್ಸ್ ನ ಶಕ್ತಿಯ ಮುಖಾಂತರ ಮಾಯೆಯನ್ನು ದೂರದಿಂದಲೇ ಗುರುತಿಸಿ ಓಡಿಸುವಂತಹ ಮಾಯಾಜೀತ್ ಭವ.

ಮಾಯೆ ಅಂತ್ಯದ ಗಳಿಗೆಯ ವರೆಗೆ ಬರುತ್ತಿರುತ್ತದೆ ಆದರೆ ಮಾಯೆಯ ಕೆಲಸ ಆಗಿದೆ ಬರುವುದು ಮತ್ತು ನಿಮ್ಮ ಕೆಲಸ ಆಗಿದೆ ದೂರದಿಂದಲೇ ಓಡಿಸುವುದು. ಮಾಯೆ ಬರುವುದು ನಿಮ್ಮನ್ನು ಅಲುಗಾಡಿಸುವುದು ನಂತರ ನೀವು ಅದನ್ನು ಓಡಿಸುವುದು. ಇದೂ ಕೂಡ ಸಮಯ ವ್ಯರ್ಥವಾಯಿತು. ಆದ್ದರಿಂದ ಸೈಲೆನ್ಸ್ ನ ಸಾಧನಗಳಿಂದ ನೀವು ದೂರದಿಂದಲೇ ಗುರುತಿಸಿ ಇದು ಮಾಯೆಯಾಗಿದೆ ಎಂದು. ಅದನ್ನು ಸಮೀಪಕ್ಕೆ ಬರಲು ಬಿಡಬೇಡಿ, ಒಂದುವೇಳೆ ಏನು ಮಾಡುವುದು? ಹೇಗೆ ಮಾಡುವುದು?. ಇನ್ನೂ ಪುರುಷಾರ್ಥಿಯಾಗಿದ್ದೇನೆ.... ಎಂದೆಲ್ಲಾ ಯೋಚಿಸುತ್ತಿದ್ದರೆ ಇದೂ ಸಹ ಮಾಯೆಯಬಗ್ಗೆ ಕಾಳಜಿ ವಹಿಸಿದಂತೆ, ನಂತರ ಬೇಸರಗೊಳ್ಳುವಿರಿ ಅದಕ್ಕಾಗಿ ದೂರದಿಂದಲೇ ಗುರುತಿಸಿ ಓಡಿಸಿಬಿಡಿ ಆಗ ಮಾಯಾಜೀತ್ ಆಗಿಬಿಡುವಿರಿ.

ಸ್ಲೋಗನ್:
ಶ್ರೇಷ್ಠ ಭಾಗ್ಯದ ರೇಖೆಯನ್ನು ಹೊರತಂದಾಗ ಹಳೆಯ ಸಂಸ್ಕಾರಗಳ ರೇಖೆಗಳು ಮುಚ್ಚಿಹೋಗುತ್ತವೆ.