14.09.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ- ತಂದೆಯ
ಶ್ರೀಮತದಂತೆ ನಡೆದು ತಮ್ಮ ಶೃಂಗಾರ ಮಾಡಿಕೊಳ್ಳಿ ಪರಚಿಂತೆಯಿಂದ ತಮ್ಮ ಶೃಂಗಾರವನ್ನು
ಅಳಿಸಿಕೊಳ್ಳಬೇಡಿ, ಸಮಯವನ್ನು ವ್ಯರ್ಥ ಮಾಡಬೇಡಿ”
ಪ್ರಶ್ನೆ:
ನೀವು ಮಕ್ಕಳು
ತಂದೆಗಿಂತಲೂ ಸಹ ತೀಕ್ಷ್ಣವಾದ ಜಾದೂಗಾರರಾಗಿದ್ದೀರಿ- ಹೇಗೆ?
ಉತ್ತರ:
ಇಲ್ಲಿ ಕುಳಿತು-
ಕುಳಿತಿದ್ದಂತೆಯೇ ಇಲ್ಲಿ ನೀವು ಲಕ್ಷ್ಮೀ-ನಾರಾಯಣರಂತೆ ತಮ್ಮ ಶೃಂಗಾರ ಮಾಡಿಕೊಳ್ಳುತ್ತೀರಿ. ಇಲ್ಲಿ
ಕುಳಿತಿದ್ದಂತೆ ತಮ್ಮನ್ನು ತಾವು ಪರಿವರ್ತನೆ ಮಾಡಿಕೊಳ್ಳುತ್ತಿದ್ದೀರಿ. ಇದೂ ಸಹ ಚಮತ್ಕಾರವಾಗಿದೆ.
ಕೇವಲ ತಂದೆಯನ್ನು ನೆನಪು ಮಾಡುವುದರಿಂದ ನಿಮ್ಮ ಶೃಂಗಾರವಾಗಿಬಿಡುತ್ತದೆ. ಯಾವುದೇ ಕೈಕಾಲುಗಳನ್ನು
ಉಪಯೋಗಿಸುವ ಮಾತಿಲ್ಲ. ಕೇವಲ ವಿಚಾರದ ಮಾತಾಗಿದೆ. ಯೋಗದಿಂದ ನೀವು ಸ್ವಚ್ಛ, ಶುದ್ಧ ಮತ್ತು
ಶೋಭಾಯಮಾನವಾಗಿಬಿಡುತ್ತೀರಿ. ನಿಮ್ಮ ಆತ್ಮ ಮತ್ತು ಶರೀರ ಚಿನ್ನದ ಸಮಾನವಾಗಿಬಿಡುತ್ತದೆ. ಇದೂ ಸಹ
ಅದ್ಭುತವಾಗಿದೆಯಲ್ಲವೆ.
ಓಂ ಶಾಂತಿ.
ಆತ್ಮೀಯ ಜಾದೂಗಾರ ಕುಳಿತು ಆತ್ಮೀಯ ಮಕ್ಕಳಿಗೆ ಅಂದರೆ ಯಾರು ತಂದೆಗಿಂತಲೂ ಸಹ ತೀಕ್ಷ್ಣ
ಜಾದೂಗಾರರಾಗಿದ್ದಾರೆ ಅವರಿಗೆ ತಿಳಿಸುತ್ತಾರೆ- ನೀವಿಲ್ಲಿ ಏನು ಮಾಡುತ್ತಿದ್ದೀರಿ? ಇಲ್ಲಿ
ಕುಳಿತಿದ್ದರೂ ಯಾವುದೇ ಚಲನೆ-ವಲನೆಯಿಲ್ಲ. ತಂದೆ ಅಥವಾ ಪ್ರಿಯತಮನು ಪ್ರಿಯತಮೆಯರಿಗೆ ಯುಕ್ತಿಯನ್ನು
ತಿಳಿಸುತ್ತಿದ್ದಾರೆ. ಪ್ರಿಯತಮನು ತಿಳಿಸುತ್ತಾರೆ - ನೀವಿಲ್ಲಿ ಕುಳಿತು ಏನು ಮಾಡುತ್ತಿದ್ದೀರಿ?
ತಮ್ಮನ್ನು ಇಂತಹ ಲಕ್ಷ್ಮೀ-ನಾರಾಯಣರಂತೆ ಶೃಂಗಾರ ಮಾಡಿಕೊಳ್ಳುತ್ತಿದ್ದೀರಿ. ಯಾರಿಗಾದರೂ
ತಿಳಿದಿದೆಯೇ? ನೀವೆಲ್ಲರೂ ಇಲ್ಲಿ ನಂಬರ್ವಾರ್ ಪುರುಷಾರ್ಥದನುಸಾರವಾಗಿ ಆಗುತ್ತೀರಲ್ಲವೆ. ಈ ರೀತಿ
ಶೃಂಗಾರ ಮಾಡಿಕೊಳ್ಳಬೇಕೆಂದು ತಂದೆಯು ಹೇಳುತ್ತಾರೆ. ನಿಮ್ಮ ಗುರಿ-ಧ್ಯೇಯವೂ ಸಹ ಭವಿಷ್ಯ
ಅಮರಪುರಿಗಾಗಿ ಇದೆ. ಮತ್ತೆ ನೀವಿಲ್ಲಿ ಕುಳಿತು ಏನು ಮಾಡುತ್ತಿದ್ದೀರಿ? ಸ್ವರ್ಗದ ಶೃಂಗಾರವಾಗಲು
ಪುರುಷಾರ್ಥ ಮಾಡುತ್ತಿದ್ದೇವೆ. ಇದಕ್ಕೆ ಏನು ಹೇಳುವುದು? ಇಲ್ಲಿ ಕುಳಿತಿದ್ದಂತೆ ತಮ್ಮನ್ನು ತಾವು
ಪರಿವರ್ತನೆ ಮಾಡಿಕೊಳ್ಳುತ್ತಿದ್ದೀರಿ. ಕುಳಿತುಕೊಳ್ಳುತ್ತಾ-ಏಳುತ್ತಾ, ನಡೆಯುತ್ತಾ-ತಿರುಗಾಡುತ್ತಾ
ತಂದೆಯು ಮನ್ಮನಾಭವದ ಒಂದು ಬೀಗದಕೈಯನ್ನು ಕೊಟ್ಟುಬಿಟ್ಟಿದ್ದಾರೆ. ಒಬ್ಬರ ವಿನಃ ಮತ್ತ್ಯಾರದೇ
ವ್ಯರ್ಥ ಮಾತುಗಳನ್ನು ಕೇಳಬಾರದು ಹಾಗೂ ಹೇಳಬಾರದು. ಇದರಲ್ಲಿ ಸಮಯವನ್ನು ವ್ಯರ್ಥ ಮಾಡಬೇಡಿ. ನೀವು
ನಿಮ್ಮನ್ನು ಶೃಂಗಾರ ಮಾಡಿಕೊಳ್ಳುವುದರಲ್ಲಿಯೇ ತೊಡಗಬೇಕು. ಬೇರೆಯವರು ಮಾಡಿಕೊಳ್ಳುತ್ತಿದ್ದಾರೆಯೋ
ಅಥವಾ ಇಲ್ಲವೋ, ಇದರಲ್ಲಿ ನಿಮ್ಮದೇನು ಹೋಗುತ್ತದೆ! ನೀವು ನಿಮ್ಮ ಪುರುಷಾರ್ಥದಲ್ಲಿರಬೇಕು.
ಎಷ್ಟೊಂದು ತಿಳಿದುಕೊಳ್ಳುವ ಮಾತುಗಳಿವೆ. ಯಾರಾದರೂ ಹೊಸಬರು ಕೇಳುತ್ತಾರೆಂದರೆ ಅವಶ್ಯವಾಗಿ
ಆಶ್ಚರ್ಯಪಡುತ್ತಾರೆ. ನಿಮ್ಮಲ್ಲಿ ಕೆಲವರು ತಮ್ಮ ಶೃಂಗಾರ ಮಾಡಿಕೊಳ್ಳುತ್ತಿದ್ದೀರಿ. ಕೆಲವರಂತೂ
ಇನ್ನೂ ಹಾಳುಮಾಡಿಕೊಳ್ಳುತ್ತಾರೆ. ಪರಚಿಂತನೆ ಮುಂತಾದವುದರಲ್ಲಿ ಸಮಯವನ್ನು ವ್ಯರ್ಥ
ಮಾಡುತ್ತಿರುತ್ತಾರೆ. ನೀವು ಕೇವಲ ನಿಮ್ಮನ್ನು ಏನು ಮಾಡುತ್ತಿದ್ದೇನೆಂದು ನೋಡಿಕೊಳ್ಳಿ ಎಂದು
ತಂದೆಯು ತಿಳಿಸುತ್ತಾರೆ. ಬಹಳ ಚಿಕ್ಕದಾದಂತಹ ಯುಕ್ತಿಯನ್ನು ತಿಳಿಸುತ್ತಾರೆ- ಕೇವಲ ಒಂದೇ
ಅಕ್ಷರವಾಗಿದೆ- ಮನ್ಮನಾಭವ. ನೀವಿಲ್ಲಿ ಕುಳಿತಿದ್ದೀರಿ. ಇಡೀ ಸೃಷ್ಟಿಚಕ್ರವು ಹೇಗೆ ಸುತ್ತುತ್ತಾ
ಇದೆ ಎಂಬುದು ಬುದ್ಧಿಯಲ್ಲಿದೆ. ಇಲ್ಲಿ ಕುಳಿತು-ಕುಳಿತಿದ್ದಂತೆ ಎಷ್ಟೊಂದು ಕಾರ್ಯವನ್ನು
ಮಾಡುತ್ತೀರಿ. ಯಾವುದೇ ಕೈಕಾಲುಗಳನ್ನು ಅಲುಗಾಡಿಸುವುದರ ಮಾತೇ ಇಲ್ಲ. ಕೇವಲ ವಿಚಾರ ಮಾಡುವ
ಮಾತಾಗಿದೆ. ನಾವು ಕುಳಿತು ಶ್ರೇಷ್ಠಾತಿಶ್ರೇಷ್ಠ ವಿಶ್ವದ ಶೃಂಗಾರವನ್ನು ಮಾಡುತ್ತಿದ್ದೇವೆ.
ಮನ್ಮನಾಭವದ ಮಂತ್ರವು ಎಷ್ಟೊಂದು ಶ್ರೇಷ್ಠವಾಗಿದೆ! ಈ ಯೋಗಬಲದಿಂದಲೇ ನಿಮ್ಮ ಪಾಪವೆಲ್ಲವೂ
ಭಸ್ಮವಾಗಿಬಿಡುತ್ತದೆ ಮತ್ತು ನೀವು ಸ್ವಚ್ಛವಾಗುತ್ತಾ-ಆಗುತ್ತಾ ಮತ್ತೆ ಎಷ್ಟೊಂದು
ಶೋಭಾಯಮಾನವಾಗಿಬಿಡುತ್ತೀರಿ. ಆತ್ಮವು ಈಗ ಪತಿತವಾಗಿದೆ, ಶರೀರದ ಸ್ಥಿತಿಯೂ ಸಹ ನೋಡಿ
ಏನಾಗಿಬಿಟ್ಟಿದೆ! ಈಗ ನಿಮ್ಮ ಆತ್ಮ ಮತ್ತು ಶರೀರವೆರಡೂ ಚಿನ್ನದ ಸಮಾನವಾಗಿಬಿಡುತ್ತದೆ. ಇದು
ಅದ್ಭುತವಲ್ಲವೆ. ಈ ರೀತಿ ತಮ್ಮನ್ನು ಶೃಂಗಾರ ಮಾಡಿಕೊಳ್ಳಿ, ದೈವೀಗುಣಗಳನ್ನೂ ಧಾರಣೆ ಮಾಡಿ. ತಂದೆಯು
ಎಲ್ಲರಿಗೂ ಒಂದೇದಾರಿಯನ್ನು ತಿಳಿಸುತ್ತಾರೆ. ತಂದೆ ಮತ್ತು ಆಸ್ತಿ. ಕೇವಲ ತಂದೆಯ ಮಾತಾಗಿದೆ,
ತಂದೆಯನ್ನು ನೆನಪು ಮಾಡುವುದರಿಂದ ನಿಮ್ಮ ಶೃಂಗಾರವೆಲ್ಲವೂ ಬದಲಾಗುತ್ತದೆ.
ತಂದೆಗಿಂತಲೂ ಸಹ ನೀವು
ದೊಡ್ಡ ಜಾದೂಗಾರರಾಗಿದ್ದೀರಿ. ನೀವು ಈ ರೀತಿ ಮಾಡುವುದರಿಂದ ನಿಮ್ಮ ಶೃಂಗಾರವಾಗುತ್ತದೆಯೆಂದು
ಯುಕ್ತಿಯನ್ನು ತಿಳಿಸುತ್ತಾರೆ. ನಿಮ್ಮ ಶೃಂಗಾರವನ್ನು ಮಾಡಿಕೊಳ್ಳದಿರುವುದರಿಂದ ಸುಮ್ಮನೆ
ನಷ್ಟಮಾಡಿಕೊಳ್ಳುತ್ತೀರಿ. ನಾವು ಭಕ್ತಿಮಾರ್ಗದಲ್ಲಿ ಏನೇನು ಮಾಡುತ್ತಿದ್ದೆವು. ಇದು
ನೆನಪಿದೆಯಲ್ಲವೇಎಲ್ಲಾ ಶೃಂಗಾರವನ್ನು ಅಳಿಸಿಕೊಂಡು ಏನಾಗಿಬಿಟ್ಟಿದ್ದೀರಿ! ಈಗ ಒಂದೇ ಅಕ್ಷರದಿಂದ
ತಂದೆಯ ನೆನಪಿನಿಂದ ಶೃಂಗಾರವಾಗಿಬಿಡುತ್ತದೆ. ತಂದೆಯು ಮಕ್ಕಳಿಗೆ ಎಷ್ಟೊಂದು ಚೆನ್ನಾಗಿ
ತಿಳಿಸಿಕೊಟ್ಟು ಉತ್ಸಾಹವನ್ನು ತುಂಬುತ್ತಾರೆ. ಇಲ್ಲಿ ಕುಳಿತು ಏನು ಮಾಡುತ್ತಿದ್ದೀರಿ? ನೆನಪಿನ
ಯಾತ್ರೆಯಲ್ಲಿ ಕುಳಿತಿದ್ದೀರಿ. ಒಂದುವೇಳೆ ಯಾರಾದಾದರೂ ವಿಚಾರ ಬೇರೆಕಡೆ ಹೋದರೆ ಶೃಂಗರಿಸಿಕೊಳ್ಳಲು
ಸಾಧ್ಯವೇನು! ನೀವು ಶೃಂಗರಿಸಿಕೊಂಡಿದ್ದೀರೆಂದರೆ ಅನ್ಯರಿಗೂ ಸಹ ದಾರಿಯನ್ನು ತೋರಿಸಬೇಕು. ತಂದೆಯು
ಇಂತಹ ಶೃಂಗಾರವನ್ನು ಮಾಡಲು ಬರುತ್ತಾರೆ. ಅದ್ಭುತ ತಂದೆಯೇ ನಮಗೆ ಎಂತಹ ಶೃಂಗಾರ ಮಾಡುತ್ತೀರಿ!
ಎನ್ನುತ್ತಾ.. ಏಳುತ್ತಾ-ಕುಳಿತುಕೊಳ್ಳುತ್ತಾ ಓಡಾಡುತ್ತಾ ತಮ್ನನ್ನು ಶೃಂಗಾರ ಮಾಡಿಕೊಳ್ಳಬೇಕು.
ಕೆಲವರಾದರೂ ತಮ್ಮ ಶೃಂಗಾರವನ್ನು ಮಾಡಿಕೊಂಡು ನಂತರ ಅನ್ಯರಿಗೂ ಸಹ ಮಾಡುತ್ತಾರೆ. ಇನ್ನೂ ಕೆಲವರು
ತಮ್ಮ ಶೃಂಗಾರವನ್ನು ಮಾಡಿಕೊಳ್ಳುವುದಿಲ್ಲವೆಂದರೆ ಅನ್ಯರ ಶೃಂಗಾರವನ್ನೂ ಸಹ ಹಾಳುಮಾಡಿಬಿಡುತ್ತಾರೆ.
ವ್ಯರ್ಥಮಾತುಗಳನ್ನು ಹೇಳುತ್ತಾ ಅವರ ಸ್ಥಿತಿಯನ್ನೂ ಸಹ ಕೆಳಗೆ ಬೀಳಿಸಿಬಿಡುತ್ತಾರೆ. ತಾವೂ ಸಹ
ಶೃಂಗಾರ ಮಾಡಿಕೊಳ್ಳದೆ, ಅನ್ಯರಿಗೂ ಮಾಡುವುದಿಲ್ಲ. ಅಂದಮೇಲೆ ಚೆನ್ನಾಗಿ ಯೋಚಿಸಿ ಮಾಡಿ. ತಂದೆಯು
ಯುಕ್ತಿಯನ್ನು ಹೇಗೆ ತಿಳಿಸುತ್ತಾರೆ! ಭಕ್ತಿಮಾರ್ಗದ ಶಾಸ್ತ್ರಗಳನ್ನು ಓದುವುದರಿಂದ ಈ ಯುಕ್ತಿಗಳು
ಬರುವುದಿಲ್ಲ. ಶಾಸ್ತ್ರವೆಲ್ಲವೂ ಭಕ್ತಿಮಾರ್ಗದ್ದಾಗಿದೆ. ನೀವು ಶಾಸ್ತ್ರಗಳನ್ನು ಒಪ್ಪುವುದಿಲ್ಲವೆ?
ಎಂದು ಕೇಳುತ್ತಾರೆ, ಹೇಳಿ-ನಾವು ಎಲ್ಲವನ್ನೂ ಒಪ್ಪುತ್ತೇವೆ. ಅರ್ಧಕಲ್ಪ ಭಕ್ತಿಯನ್ನು ಮಾಡಿದ್ದೇವೆ.
ಶಾಸ್ತ್ರವನ್ನು ಓದಿದ್ದೇವೆ ಅಂದಾಗ ಏಕೆ ಒಪ್ಪುವುದಿಲ್ಲ! ರಾತ್ರಿ ಮತ್ತು ಹಗಲು ಇರುತ್ತದೆಯೆಂದರೆ
ಎರಡನ್ನೂ ಒಪ್ಪಬೇಕಲ್ಲವೆ. ಇದು ಬೇಹದ್ದಿನ ಹಗಲು ಮತ್ತು ರಾತ್ರಿಯಾಗಿದೆ.
ತಂದೆಯು ತಿಳಿಸುತ್ತಾರೆ-
ಮಧುರ ಮಕ್ಕಳೇ, ನೀವು ತಮ್ಮ ಶೃಂಗಾರವನ್ನು ಮಾಡಿಕೊಳ್ಳಿ. ಸಮಯವನ್ನು ವ್ಯರ್ಥ ಮಾಡಬೇಡಿ. ಸಮಯವು
ಬಹಳ ಕಡಿಮೆಯಿದೆ. ಅಂದಾಗ ನಿಮ್ಮ ಬುದ್ಧಿಯು ಬಹಳ ವಿಶಾಲವಾಗಬೇಕು. ಪರಸ್ಪರ ಬಹಳ ಪ್ರೀತಿಯಿರಬೇಕು.
ಸಮಯವನ್ನು ವ್ಯರ್ಥ ಮಾಡಬಾರದು. ಏಕೆಂದರೆ ನಿಮ್ಮ ಸಮಯವು ಬಹಳ ಅಮೂಲ್ಯವಾಗಿದೆ. ನೀವು ಕವಡೆಯಿಂದ
ವಜ್ರಸಮಾನರಾಗುತ್ತಿದ್ದೀರಿ. ನೀವು ಇದನ್ನು ಉಚಿತವಾಗಿ ಕೇಳುತ್ತಿದ್ದೀರೇನು! ಇದು ಕಥೆಯೇನು?
ತಂದೆಯು ಒಂದೇ ಅಕ್ಷರವನ್ನು ತಿಳಿಸುತ್ತಾರೆ. ದೊಡ್ಡ-ದೊಡ್ಡ ವ್ಯಕ್ತಿಗಳು ಹೆಚ್ಚು ಮಾತನಾಡಬೇಕೆ!
ಅಂದಾಗ ತಂದೆಯು ಸೆಕೆಂಡಿನಲ್ಲಿ ಜೀವನ್ಮುಕ್ತಿಯ ದಾರಿಯನ್ನು ತೋರಿಸುತ್ತಾರೆ. ಇವರು ಹೆಚ್ಚು
ಶೃಂಗಾರಿತರಾಗಿದ್ದಾರೆ. ಆದ್ದರಿಂದ ಹೆಚ್ಚು ಶೃಂಗಾರವಿದೆ, ಇವರದು ಬಹಳಷ್ಟು ಪೂಜೆಯನ್ನು
ಮಾಡುತ್ತಿರುತ್ತಾರೆ. ಎಷ್ಟು ದೊಡ್ಡ ವ್ಯಕ್ತಿಯಿರುತ್ತಾರೆಯೋ ಅಷ್ಟು ದೊಡ್ಡ ಮಂದಿರವನ್ನು
ಕಟ್ಟಿಸುತ್ತಾರೆ. ಬಹಳ ಶೃಂಗಾರವನ್ನು ಮಾಡುತ್ತಾರೆ. ಮೊದಲು ದೇವತೆಗಳ ಚಿತ್ರಗಳ ಮೇಲೆ ವಜ್ರದ
ಹಾರಗಳನ್ನು ಹಾಕುತ್ತಿದ್ದರು. ತಂದೆಗೆ (ಬ್ರಹ್ಮಾ) ಅನುಭವವಿದೆಯಲ್ಲವೆ. ಇವರು
ಲಕ್ಷ್ಮೀ-ನಾರಾಯಣರಿಗಾಗಿ ವಜ್ರದ ಹಾರವನ್ನು ಮಾಡಿಸಿದ್ದರು. ವಾಸ್ತವದಲ್ಲಿ ಅವರಹಾಗೆ ಅಲಂಕಾರವನ್ನು
ಯಾರೂ ಮಾಡಲು ಸಾಧ್ಯವಿಲ್ಲ. ಈಗ ನೀವು ನಂಬರ್ವಾರ್ ಪುರುಷಾರ್ಥದನುಸಾರ ಆಗುತ್ತಿದ್ದೀರಿ. ಅಂದಾಗ
ಮಕ್ಕಳೇ, ತಮ್ಮ ಸಮಯವನ್ನೂ ವ್ಯರ್ಥ ಮಾಡಿಕೊಳ್ಳಬೇಡಿ, ಅನ್ಯರದನ್ನೂ ಮಾಡಬೇಡಿ ಎಂದು ತಂದೆಯು
ತಿಳಿಸುತ್ತಾರೆ. ತಂದೆಯು ಬಹಳ ಸಹಜವಾದ ಯುಕ್ತಿಗಳನ್ನು ತಿಳಿಸುತ್ತಾರೆ - ನನ್ನನ್ನು ನೆನಪು
ಮಾಡಿದರೆ ಪಾಪವೆಲ್ಲವೂ ಕಳೆದುಹೋಗುತ್ತದೆ. ನೆನಪಿನ ವಿನಃ ಶೃಂಗಾರವಾಗಲು ಸಾಧ್ಯವಿಲ್ಲ. ನೀವು
ಇವರಂತೆ ಆಗುವವರಿದ್ದೀರಲ್ಲವೆ. ಅಂದಾಗ ದೈವೀಸ್ವಭಾವವನ್ನು ಧಾರಣೆ ಮಾಡಬೇಕು, ಇದರಲ್ಲಿ ಹೇಳುವ
ಅವಶ್ಯಕತೆಯೂ ಇಲ್ಲ ಆದರೆ ಕಲ್ಲುಬುದ್ಧಿಯವರಾಗಿರುವ ಕಾರಣ ಹೇಳಬೇಕಾಗುತ್ತದೆ. ಒಂದು ಸೆಕೆಂಡಿನ
ಮಾತಾಗಿದೆ. ತಂದೆಯು ತಿಳಿಸುತ್ತಾರೆ- ಮಧುರಾತಿ ಮಧುರ ಮಕ್ಕಳೇ, ನೀವು ನಿಮ್ಮ ತಂದೆಯನ್ನು
ಮರೆಯುವುದರಿಂದ ಎಷ್ಟೊಂದು ಶೃಂಗಾರವನ್ನು ಹಾಳು ಮಾಡಿಕೊಂಡಿದ್ದೀರಿ! ತಂದೆಯಂತೂ
ತಿಳಿಸುತ್ತಾರೆ-ನಡೆಯುತ್ತಾ-ತಿರುಗಾಡುತ್ತಾ ಶೃಂಗರಿಸಿಕೊಳ್ಳಿ ಆದರೆ ಮಾಯೆಯೂ ಕಡಿಮೆಯೇನಿಲ್ಲ.
ಕೆಲವರಂತೂ ಕರೆಯುತ್ತಾರೆ- ಬಾಬಾ, ನಿಮ್ಮ ಮಾಯೆ ಬಹಳ ಸತಾಯಿಸುತ್ತದೆ. ಅರೆ! ನನ್ನ ಮಾಯೆ ಎಲ್ಲಿದೆ.
ಇದಂತೂ ಆಟವಲ್ಲವೆ! ನಾನು ನಿಮ್ಮನ್ನು ಮಾಯೆಯಿಂದ ಬಿಡಿಸಲು ಬಂದಿದ್ದೇನೆ. ನನ್ನ ಮಾಯೆ
ಮತ್ತ್ಯಾವುದಿದೆ? ಈ ಸಮಯದಲ್ಲಿ ಪೂರ್ಣರಾಜ್ಯ ಮಾಯೆಯದೇ ಇದೆ. ಹೇಗೆ ರಾತ್ರಿ-ಹಗಲಿನ ವ್ಯತ್ಯಾಸವಾಗಲು
ಸಾಧ್ಯವಿಲ್ಲ. ಇದು ಬೇಹದ್ದಿನ ರಾತ್ರಿ-ಹಗಲು ಆಗಿದೆ. ಇದರಲ್ಲಿ ಒಂದು ಸೆಕೆಂಡ್ ಸಹ ವ್ಯತ್ಯಾಸವಾಗಲು
ಸಾಧ್ಯವಿಲ್ಲ. ನೀವು ಮಕ್ಕಳು ನಂಬರ್ವಾರ್ ಪುರುಷಾರ್ಥದನುಸಾರ ಈ ರೀತಿ ಶೃಂಗಾರ
ಮಾಡಿಕೊಳ್ಳುತ್ತಿದ್ದೀರಿ. ತಂದೆಯು ತಿಳಿಸುತ್ತಾರೆ- ಚಕ್ರವರ್ತಿ ರಾಜರಾಗಬೇಕೆಂದರೆ ಚಕ್ರವನ್ನು
ತಿರುಗಿಸಬೇಕು. ಭಲೇ ಗೃಹಸ್ಥದಲ್ಲಿರಿ, ಇಲ್ಲಿ ಬುದ್ಧಿಯಿಂದ ಕೆಲಸವನ್ನು ತೆಗೆದುಕೊಳ್ಳಬೇಕು.
ಆತ್ಮನಲ್ಲಿಯೂ ಸಹ ಮನಸ್ಸು-ಬುದ್ಧಿಯಿದೆ. ಇಲ್ಲಿ ನಿಮಗೆ ಹೊರಗಿನ ವ್ಯವಹಾರದ ಜಂಜಾಟ ವೇನೂ ಇಲ್ಲ.
ನೀವಿಲ್ಲಿ ಬರುವುದೇ ತಮ್ಮ ಶೃಂಗಾರ ಮಾಡಿಕೊಂಡು ರಿಫ್ರೆಷ್ ಆಗಲು, ತಂದೆಯು ಓದಿಸುತ್ತಾರೆಂದರೆ
ಎಲ್ಲರಿಗೂ ಒಂದೇ ರೀತಿಯಾಗಿ ಓದಿಸುತ್ತಾರೆ. ಇಲ್ಲಿ ತಂದೆಯ ಬಳಿ ಬರುತ್ತೀರೆಂದರೆ ಹೊಸ-ಹೊಸ
ವಿಚಾರಗಳನ್ನು ಸಮ್ಮುಖದಲ್ಲಿ ಕೇಳುತ್ತೀರಿ. ಮತ್ತೆ ಮನೆಗೆ ಹೋಗುತ್ತೀರೆಂದರೆ ಏನೆಲ್ಲವನ್ನೂ
ಕೇಳಿರುತ್ತೀರೋ ಅದೆಲ್ಲವೂ ಹೊರಟು ಹೋಗಿಬಿಡುತ್ತದೆ. ಇಲ್ಲಿಂದ ಹೊರಗೆ ಹೋಗುತ್ತೀರೆಂದರೆ ಜೋಳಿಗೆ
ಸೋರಿಬಿಡುತ್ತದೆ. ಏನನ್ನು ಕೇಳುತ್ತೀರೋ ಅದರ ಬಗ್ಗೆ ಮನನಚಿಂತನೆಯನ್ನು ಮಾಡುವುದಿಲ್ಲ. ನಿಮಗಾದರೂ
ಇಲ್ಲಿ ಏಕಾಂತಕ್ಕೆ ಬಹಳ ಸ್ಥಳವಿದೆ. ಹೊರಗಡೆಯಂತೂ ಒಬ್ಬರಿಗೊಬ್ಬರು ಸಾಯಿಸುತ್ತಾರೆ.
ತಂದೆಯು ಮಕ್ಕಳಿಗೆ
ತಿಳಿಸುತ್ತಾರೆ- ಇದು ನಿಮ್ಮ ಬಹಳ ಅಮೂಲ್ಯವಾದ ಸಮಯವಾಗಿದೆ. ನೀವು ಸಮಯವನ್ನು ವ್ಯರ್ಥ ಮಾಡಬೇಡಿ.
ತನ್ನನ್ನು ಶೃಂಗರಿಸಿಕೊಳ್ಳಲು ಬಹಳ ಯುಕ್ತಿಗಳು ಸಿಗುತ್ತವೆ. ನಾನು ಎಲ್ಲರನ್ನೂ ಉದ್ಧಾರ ಮಾಡಲು
ಬರುತ್ತೇನೆ. ನಾನು ನಿಮಗೆ ವಿಶ್ವದ ರಾಜ್ಯಭಾಗ್ಯವನ್ನು ಕೊಡಲು ಬಂದಿದ್ದೇನೆ. ನೀವು ನೆನಪು ಮಾಡಿ,
ಸಮಯವನ್ನು ವ್ಯರ್ಥಮಾಡಬೇಡಿ. ಕೆಲಸಕಾರ್ಯಗಳನ್ನು ಮಾಡುತ್ತಿದ್ದರೂ ಸಹ ತಂದೆಯನ್ನು ನೆನಪು ಮಾಡುತ್ತಾ
ಇರಿ. ಇಷ್ಟೆಲ್ಲಾ ಆತ್ಮರು ಒಬ್ಬ ಪರಮಾತ್ಮನಿಗೆಪ್ರಿಯತಮೆಯರಾಗಿದ್ದೀರಿ. ಅಲ್ಲಿ ಅನೇಕ ಕಥೆಗಳನ್ನು
ಬಹಳಷ್ಟು ಹೇಳುತ್ತೀರಿ. ತಂದೆಯು ಅದೆಲ್ಲವನ್ನೂ ಮರೆತುಬಿಡಿ ಎಂದು ಹೇಳುತ್ತಾರೆ. ಭಕ್ತಿಮಾರ್ಗದಲ್ಲಿ
ನೀವು ನನ್ನನ್ನು ನೆನಪು ಮಾಡಿದಿರಿ ಮತ್ತು ನಾನು ನಿಮ್ಮವನಾಗುತ್ತೇನೆಂದು ವಾಗ್ದಾನವನ್ನೂ
ಮಾಡಿದ್ದೀರಿ. ಅನೇಕ ಪ್ರಿಯತಮೆಯರ ಒಬ್ಬ ಪ್ರಿಯತಮನಾಗಿದ್ದೇನೆ. ಬ್ರಹ್ಮತತ್ವದಲ್ಲಿ ಲೀನವಾಗುತ್ತೇವೆ
ಎಂದು ಭಕ್ತಿಮಾರ್ಗದಲ್ಲಿ ಹೇಳುತ್ತಾರೆ. ಇದೆಲ್ಲವೂ ಸಹ ವ್ಯರ್ಥಮಾತುಗಳಾಗಿವೆ. ಯಾವುದೇ ಮನುಷ್ಯರೂ
ಸಹ ಮೋಕ್ಷವನ್ನು ಪಡೆಯಲು ಸಾಧ್ಯವಿಲ್ಲ. ಇದು ಅನಾದಿ ನಾಟಕವಾಗಿದೆ. ಇಷ್ಟೆಲ್ಲಾ
ಪಾತ್ರಧಾರಿಗಳಿದ್ದಾರೆ. ಇದರಲ್ಲಿ ಸ್ವಲ್ಪವೂ ವ್ಯತ್ಯಾಸವಾಗಲು ಸಾಧ್ಯವಿಲ್ಲ. ಕೇವಲ ಒಬ್ಬ
ತಂದೆಯನ್ನು ನೆನಪು ಮಾಡಿದರೆ ನಿಮ್ಮ ಶೃಂಗಾರವಾಗುತ್ತದೆ ಎಂದು ತಂದೆಯು ತಿಳಿಸುತ್ತಾರೆ. ನೀವೀಗ
ಇಂತಹವರಾಗುತ್ತೀರಿ. ನೆನಪಿಗೆ ಬರುತ್ತದೆಯಲ್ಲವೆ. ಅನೇಕಬಾರಿ ನಾವು ಈ ಶೃಂಗಾರವನ್ನು
ಮಾಡಿಕೊಂಡಿದ್ದೇವೆ. ಕಲ್ಪ-ಕಲ್ಪವೂ ತಂದೆಯೇ ನೀವು ಬರುತ್ತೀರಿ, ನಾವು ನಿಮ್ಮಿಂದಲೇ ಕೇಳುತ್ತೇವೆ.
ಎಷ್ಟೊಂದು ಗುಹ್ಯವಾದ ವಿಚಾರಗಳಾಗಿವೆ. ತಂದೆಯು ಯುಕ್ತಿಯನ್ನು ಬಹಳ ಚೆನ್ನಾಗಿ ತಿಳಿಸಿದ್ದಾರೆ.
ಇಂತಹ ತಂದೆಯ ಮೇಲೆ ಬಲಿಹಾರಿಯಾಗಿರಿ. ಲೌಕಿಕದಲ್ಲಿ ಪ್ರಿಯತಮ, ಪ್ರಿಯತಮೆಯರೆಲ್ಲರೂ ಒಬ್ಬರ ಹಾಗೆ
ಇರುವುದಿಲ್ಲ. ಇವರಾದರೂ ಎಲ್ಲಾ ಆತ್ಮಗಳ ಒಬ್ಬರೇ ಪ್ರಿಯತಮನಾಗಿದ್ದಾರೆ. ಯಾವುದೇ ಶರೀರದ ಮಾತಿಲ್ಲ.
ಆದರೆ ಸಂಗಮಯುಗದಲ್ಲಿಯೇ ತಂದೆಯಿಂದ ತಮಗೆ ಯುಕ್ತಿ ಸಿಗುತ್ತದೆ. ನೀವು ಎಲ್ಲಿಗೇ ಹೋಗಿ, ಕುಡಿಯಿರಿ,
ತಿನ್ನಿರಿ, ಸುತ್ತಾಡಿ, ನೌಕರಿ ಮಾಡಿ, ತಮ್ಮ ಶೃಂಗಾರವನ್ನು ಮಾಡಿಕೊಳ್ಳುತ್ತಾ ಇರಿ. ಆತ್ಮರೆಲ್ಲರೂ
ಸಹ ಒಬ್ಬ ಪ್ರಿಯತಮನ ಪ್ರಿಯತಮೆಯರಾಗಿದ್ದೀರಿ. ಅವರನ್ನೇ ನೆನಪು ಮಾಡಿ. ಕೆಲವು ಮಕ್ಕಳು
ತಿಳಿಸುತ್ತಾರೆ- ನಾವಂತೂ 24 ಗಂಟೆ ನೆನಪಿನಲ್ಲಿರುತ್ತೇವೆ. ಆದರೆ ಸದಾ ಕಾಲ ಯಾರೂ ಮಾಡಲು
ಸಾಧ್ಯವಿಲ್ಲ. ಹೆಚ್ಚೆಂದರೆ ಎರಡು ಗಂಟೆ, ಎರಡುವರೆ ಗಂಟೆಯವರೆಗೆ. ಒಂದುವೇಳೆ ಹೆಚ್ಚಾಗಿ ಬರೆದರೆ
ತಂದೆಯು ಒಪ್ಪುವುದಿಲ್ಲ. ಅನ್ಯರಿಗೆ ಸ್ಮøತಿ ತರಿಸುವುದಿಲ್ಲವೆಂದರೆ ಇವರು ತಂದೆಯನ್ನು ನೆನಪು
ಮಾಡುತ್ತಾರೆಂದು ಹೇಗೆ ತಿಳಿಯುವುದು! ಏನಾದರೂ ಕಷ್ಟದ ಮಾತಾಗಿದೆಯೇನು! ನಿಮ್ಮ ಪಾಪಗಳು
ಸಮಾಪ್ತಿಯಾಗುತ್ತವೆ. ದೈವೀಗುಣವೂ ಸಹ ಧಾರಣೆ ಮಾಡಬೇಕು. ಪತಿತರು ಯಾವುದೇ ಶಾಂತಿಧಾಮ ಅಥವಾ
ಸುಖಧಾಮದಲ್ಲಿ ಹೋಗಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ- ತಮ್ಮನ್ನು ಆತ್ಮ
ಸಹೋದರ-ಸಹೋದರರಾಗಿದ್ದೇವೆಂದು ತಿಳಿಯಿರಿ. 84 ಜನ್ಮಗಳ ಪಾತ್ರವು ಈಗ ಪೂರ್ಣವಾಗುತ್ತದೆ. ಈ ಹಳೆಯ
ಶರೀರವನ್ನು ಬಿಡಬೇಕಾಗಿದೆ. ಡ್ರಾಮಾ ಹೇಗೆ ಮಾಡಲ್ಪಟ್ಟಿದೆ ನೋಡಿ! ಎಲ್ಲರೂ ನಂಬರ್ವಾರ್
ಪುರುಷಾರ್ಥದನುಸಾರವಾಗಿ ತಿಳಿದುಕೊಂಡಿದ್ದೀರಿ. ಪ್ರಪಂಚದಲ್ಲಂತೂ ಯಾರೂ ಏನನ್ನೂ ಸಹ
ತಿಳಿದುಕೊಂಡಿಲ್ಲ. ಪ್ರತಿಯೊಬ್ಬರೂ ತಮ್ಮನ್ನು ನಾನು ತಂದೆಯ ಮತದಂತೆಯೇ ನಡೆಯುತ್ತಿದ್ದೇನೆಯೇ ಎಂದು
ಕೇಳಿಕೊಳ್ಳಿ. ನಡೆಯುತ್ತೀರೆಂದರೆ ಶೃಂಗಾರವೂ ಸಹ ಚೆನ್ನಾಗಿಯೇ ಇರುತ್ತದೆ. ಒಬ್ಬರಿಗೊಬ್ಬರು
ಉಲ್ಟಾಮಾತುಗಳನ್ನು ಹೇಳುತ್ತಾ ಅಥವಾ ಕೇಳಿ ತಮ್ಮ ಶೃಂಗಾರವನ್ನು ಸಹ ಅಳಿಸಿಕೊಳ್ಳುತ್ತಾರೆ ಮತ್ತು
ಅನ್ಯರ ಶೃಂಗಾರವನ್ನೂ ಸಹ ಅಳಿಸುತ್ತಾರೆ. ಮಕ್ಕಳು ಇದೇ ಆಲೋಚನೆಯಲ್ಲಿ ತೊಡಗಬೇಕು- ನಾವು ಇಂತಹ
ಶೃಂಗಾರದಿಂದ ಹೀಗಾಗುತ್ತೇವೆ. ಉಳಿದೆಲ್ಲವೂ ಸರಿಯಾಗಿದೆ. ಹೊಟ್ಟೆಗಾಗಿ ರೊಟ್ಟಿ ಸಹಜವಾಗಿ
ಸಿಗುತ್ತದೆ. ವಾಸ್ತವದಲ್ಲಿ ಹೊಟ್ಟೆ ಹೆಚ್ಚಾಗಿ ಕೇಳುವುದಿಲ್ಲ. ಭಲೇ ನೀವು ಸನ್ಯಾಸಿಯಾಗಿದ್ದೀರಿ.
ಆದರೆ ರಾಜಯೋಗಿಗಳಾಗಿದ್ದೀರಿ. ಬಹಳ ಶ್ರೇಷ್ಠರೂ ಅಲ್ಲ, ಕನಿಷ್ಟರೂ ಅಲ್ಲ. ತಿನ್ನಿರಿ ಆದರೆ ಹೆಚ್ಚು
ಆಸಕ್ತಿ ಬೇಡ. ಶಿವತಂದೆಯ ನೆನಪಿದೆಯೇ? ವಿಚಾರ ಮಾಡಿ- ಇಲ್ಲಿ ಕುಳಿತಿದ್ದಂತೆಯೇ ನಿಮ್ಮದು ಎಷ್ಟೊಂದು
ಸಂಪಾದನೆಯಿದೆ. ಈ ಸಂಪಾದನೆಯಿಂದ ಅಪಾರ ಸುಖ ಸಿಗುತ್ತದೆ. ಕೇವಲ ನೆನಪಿನ ಯಾತ್ರೆಯಿಂದ ಮತ್ತ್ಯಾವುದೇ
ಪ್ರಕಾರದ ಕಷ್ಟವಿಲ್ಲ. ಭಕ್ತಿಮಾರ್ಗದಲ್ಲಿ ಮನುಷ್ಯರು ಎಷ್ಟೊಂದು ಪೆಟ್ಟನ್ನು ತಿನ್ನುತ್ತಾರೆ.
ನೀವೀಗ ಶೃಂಗರಿಸಿಕೊಳ್ಳಲು ಬಂದಿದ್ದೀರಿ ಅಂದಮೇಲೆ ತಮ್ಮ ಕಡೆ ಚೆನ್ನಾಗಿ ಗಮನವನ್ನು ಕೊಡಿ,
ಮರೆಯಬೇಡಿ, ಮಾಯೆಯು ಮರೆಸಿಬಿಡುತ್ತದೆ. ಮತ್ತೆ ಸಮಯವು ಬಹಳ ವ್ಯರ್ಥ ಮಾಡಿಬಿಡುತ್ತದೆ. ನಿಮ್ಮದು
ಬಹಳ ಅಮೂಲ್ಯವಾದ ಸಮಯವಾಗಿದೆ. ಓದಿನ ಪರಿಶ್ರಮದಿಂದ ಮನುಷ್ಯರು ಹೇಗಿದ್ದವರು ಹೇಗಾಗುತ್ತಾರೆ!
ಅಂದಮೇಲೆ ತಂದೆಯು ನಿಮಗೆ ಯಾವುದೇ ಕಷ್ಟ ಕೊಡುವುದಿಲ್ಲ. ಕೇವಲ ನನ್ನನ್ನು ನೆನಪು ಮಾಡಿ ಎಂದು
ಹೇಳುತ್ತಾರೆ. ಯಾವುದೇ ಪುಸ್ತಕದ ಬಗ್ಗೆತಿಳಿಸುವುದಿಲ್ಲ, ನಾನು ಬಂದು ಈ ಪ್ರಜಾಪಿತ ಬ್ರಹ್ಮಾರವರ
ಮೂಲಕ ದತ್ತು ಮಾಡಿಕೊಳ್ಳುತ್ತೇನೆ. ಪ್ರಜಾಪಿತನಾಗಿದ್ದಾರಲ್ಲವೆ! ಇಷ್ಟೆಲ್ಲಾ ಕುಖವಂಶಾವಳಿ
ಪ್ರಜೆಗಳು ಹೇಗೆ ಸಾಧ್ಯ? ಮಕ್ಕಳನ್ನು ದತ್ತು ಮಾಡಿಕೊಳ್ಳಲಾಗುತ್ತದೆ. ತಂದೆಯಿಂದ ಆಸ್ತಿಯು ಸಿಗಲಿದೆ.
ತಂದೆಯು ಬ್ರಹ್ಮಾರವರ ಮೂಲಕ ದತ್ತು ಮಾಡಿಕೊಳ್ಳುತ್ತಾರೆ. ಆದ್ದರಿಂದ ಅವರಿಗೆ ಮಾತಾಪಿತನೆಂದು
ಹೇಳಲಾಗುತ್ತದೆ. ಇದೂ ಸಹ ತಮಗೆ ತಿಳಿದಿದೆ. ತಂದೆಯು ನಿಗಧಿತ ಸಮಯದಲ್ಲಿಯೇ ಬರುತ್ತಾರೆ. ಸರಿಯಾದ
ಸಮಯಕ್ಕೆ ಹೋಗುತ್ತಾರೆ. ಪ್ರಪಂಚದ ಬದಲಾವಣೆಯಂತೂ ಆಗಲೇಬೇಕಾಗಿದೆ. ಈಗ ತಂದೆಯು ತಾವು ಮಕ್ಕಳಿಗೆ
ಎಷ್ಟೊಂದು ಬುದ್ಧಿಯನ್ನು ಕೊಡುತ್ತಾರೆ. ತಂದೆಯ ಮತದಂತೆ ನಡೆಯಬೇಕಾಗಿದೆ. ವಿದ್ಯಾರ್ಥಿಗಳು ಏನನ್ನು
ಓದುತ್ತಾರೆಯೋ ಅದೇ ವಿಚಾರವು ಬುದ್ಧಿಯಲ್ಲಿ ನಡೆಯಬೇಕಾಗಿದೆ. ನೀವೂ ಸಹ ಈ ಸಂಸ್ಕಾರವನ್ನು
ತೆಗೆದುಕೊಂಡು ಹೋಗುತ್ತೀರಿ. ಹೇಗೆ ತಂದೆಯಲ್ಲಿ ಸಂಸ್ಕಾರವಿದೆಯೋ ಹಾಗೆ ನಿಮ್ಮಲ್ಲಿಯೂ ಸಹ
ಸಂಸ್ಕಾರವು ತುಂಬುತ್ತದೆ. ನಂತರ ಇಲ್ಲಿ ಬರುತ್ತೀರೆಂದರೆ ಪಾತ್ರವು ಪುನರಾರ್ವತನೆಯಾಗುತ್ತದೆ.
ನಂಬರ್ವಾರ್ ಪುರುಷಾರ್ಥದನುಸಾರ ಬರುತ್ತೀರಿ. ನಿಮ್ಮ ಹೃದಯವನ್ನು ನೀವೇ ಕೇಳಿಕೊಳ್ಳಿ- ತನ್ನನ್ನು
ಶೃಂಗರಿಸಿಕೊಳ್ಳಲು ಎಷ್ಟು ಪುರುಷಾರ್ಥವನ್ನು ಮಾಡಿದ್ದೇನೆ? ಎಲ್ಲಿಯೂ ಸಮಯವನ್ನು ವ್ಯರ್ಥಮಾಡಬೇಡಿ.
ತಂದೆಯ ಶ್ರೀಮತವನ್ನು ನೆನಪಿಟ್ಟುಕೊಳ್ಳಬೇಕು. ಮನುಷ್ಯರ ಮತದಂತೆ ನಡೆಯಬಾರದು. ನಾವಂತೂ ಹಳೆಯ
ಪ್ರಪಂಚದಲ್ಲಿದ್ದೇವೆಂದು ನಿಮಗೆ ತಿಳಿದಿತ್ತೇನು? ನೀವು ಯಾರಾಗಿದ್ದೀರೆಂದು ತಂದೆಯು ತಿಳಿಸುತ್ತಾರೆ.
ಈ ಹಳೆಯ ಪ್ರಪಂಚದಲ್ಲಿ ಎಷ್ಟೊಂದು ದುಃಖವಿದೆ. ಇದೂ ಸಹ ಡ್ರಾಮಾನುಸಾರ ಪಾತ್ರವು ಸಿಕ್ಕಿದೆ.
ಡ್ರಾಮಾನುಸಾರ ಅನೇಕಾನೇಕ ವಿಘ್ನಗಳೂ ಬರುತ್ತವೆ. ತಂದೆಯು ತಿಳಿಸುತ್ತಾರೆ- ಜ್ಞಾನ ಮತ್ತು ಭಕ್ತಿಯ
ಆಟವಾಗಿದೆ. ವಿಚಿತ್ರವಾದ ನಾಟಕವಲ್ಲವೆ. ಇಷ್ಟು ಚಿಕ್ಕದಾದ ಆತ್ಮದಲ್ಲಿ ಅವಿನಾಶಿ ಪಾತ್ರವು
ತುಂಬಲ್ಪಟ್ಟಿದೆ. ಅಭಿನಯಿಸುತ್ತಲೇ ಇರುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ
ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಎಲ್ಲಾ
ಮಾತುಗಳನ್ನು ಬಿಟ್ಟು ನಾವು ಲಕ್ಷ್ಮೀ-ನಾರಾಯಣರ ಹಾಗೆ ಎಷ್ಟು ಶೃಂಗಾರ ಮಾಡಿಕೊಂಡಿದ್ದೇವೆ? ಎಂಬ
ಗುಂಗಿನಲ್ಲಿರಬೇಕಾಗಿದೆ.
2. ತಮ್ಮೊಂದಿಗೆ ತಾವು
ಕೇಳಿಕೊಳ್ಳಿ.
1.ನಾನು ಶ್ರೀಮತದಂತೆ
ನಡೆದು ಮನ್ಮನಾಭವದ ಬೀಗದ ಕೈಯಿಂದ ಶೃಂಗಾರವನ್ನು ಚೆನ್ನಾಗಿ ಮಾಡಿಕೊಂಡಿದ್ದೇನೆಯೇ?
2.ಅಲ್ಲಸಲ್ಲದ
ಮಾತುಗಳನ್ನು ಕೇಳಿ ಅಥವಾ ಯಾವುದೇ ರೀತಿಯಲ್ಲಿ ಶೃಂಗಾರವನ್ನು ಹಾಳು ಮಾಡುತ್ತಿಲ್ಲವೆ?
3.ಪರಸ್ಪರ ಪ್ರೀತಿಯಿಂದ
ಇರುತ್ತೇವೆಯೇ? ತಮ್ಮ ಅಮೂಲ್ಯವಾದ ಸಮಯವನ್ನು ಎಲ್ಲಿಯೂ ವ್ಯರ್ಥ ಮಾಡುತ್ತಿಲ್ಲವೇ?
4. ದೈವೀಸ್ವಭಾವವನ್ನು
ಧಾರಣೆ ಮಾಡಿದ್ದೇವೆಯೇ?
ವರದಾನ:
ವ್ಯರ್ಥ
ಸಂಕಲ್ಪಗಳ ಕಾರಣವನ್ನು ತಿಳಿದುಕೊಂಡು ಅದನ್ನು ಸಮಾಪ್ತಿಗೊಳಿಸುವಂತಹ ಸಮಾಧಾನ ಸ್ವರೂಪ ಭವ.
ವ್ಯರ್ಥ ಸಂಕಲ್ಪವು
ಉತ್ಪನ್ನವಾಗಲು ಮುಖ್ಯವಾಗಿ ಎರಡು ಕಾರಣಗಳಿವೆ - 1. ಅಭಿಮಾನ ಮತ್ತು 2. ಅಪಮಾನ. ನನಗೆ ಕಡಿಮೆಯೇಕೆ,
ನನಗೂ ಸಹ ಈ ಪದವಿಯಿರಬೇಕು, ನನ್ನನ್ನೂ ಮುಂದಿಡಬೇಕು..... ಅಂದಮೇಲೆ ಇದರಲ್ಲಿ ತನ್ನನ್ನು
ಅಪಮಾನವೆಂದು ತಿಳಿಯುತ್ತೀರಿ, ಇಲ್ಲವೆಂದರೆ ಅಭಿಮಾನದಲ್ಲಿ ಬರುತ್ತೀರಿ. ಹೆಸರಿನಲ್ಲಿ,
ಮಾನ್ಯತೆಯಲ್ಲಿ, ಗೌರವದಲ್ಲಿ, ಮುಂದೆ ಬರುವುದರಲ್ಲಿ, ಸೇವೆಯಲ್ಲಿ.... ಅಭಿಮಾನ ಅಥವಾ ಅಪಮಾನದ
ಅನುಭವ ಮಾಡುವುದೇ ವ್ಯರ್ಥ ಸಂಕಲ್ಪಗಳ ಕಾರಣವಾಗಿದೆ, ಈ ಕಾರಣವನ್ನು ತಿಳಿದುಕೊಂಡು ನಿವಾರಣೆ
ಮಾಡುವುದೇ ಸಮಾಧಾನ ಸ್ವರೂಪರಾಗುವುದಾಗಿದೆ.
ಸ್ಲೋಗನ್:
ಸೈಲೆನ್ಸ್ ನ
ಶಕ್ತಿಯ ಮೂಲಕ ಮಧುರ ಮನೆಯ ಯಾತ್ರೆಯ ಮಾಡುವುದು ಬಹಳ ಸಹಜವಿದೆ.