14.09.25 Avyakt Bapdada
Kannada
Murli 18.01.2007 Om Shanti Madhuban
“ಈಗ ಸ್ವಯಂನ್ನು ಮುಕ್ತ
ಮಾಡಿಕೊಂಡು ಮಾ|| ಮುಕ್ತಿದಾತರಾಗಿ ಎಲ್ಲರಿಗೂ ಮುಕ್ತಿ ಕೊಡಿಸಲು ನಿಮಿತ್ತರಾಗಿರಿ”
ಇಂದು ಸ್ನೇಹ ಸಾಗರ
ಬಾಪ್ದಾದಾ ನಾಲ್ಕಾರು ಕಡೆಯ ಸ್ನೇಹೀ ಮಕ್ಕಳನ್ನು ನೋಡುತ್ತಿದ್ದಾರೆ. ಎರಡು ಪ್ರಕಾರದ ಮಕ್ಕಳನ್ನು
ನೋಡಿ-ನೋಡಿ ಹರ್ಷಿತರಾಗುತ್ತಿದ್ದೇವೆ. ಒಂದು ಪ್ರಕಾರದವರು ಲವಲೀನ ಮಕ್ಕಳಾಗಿದ್ದಾರೆ ಮತ್ತು
ಇನ್ನೊಂದು ಪ್ರಕಾರದವರು ಲವಲೀ ಮಕ್ಕಳಾಗಿದ್ದಾರೆ. ಇಬ್ಬರ ಸ್ನೇಹದ ಅಲೆಗಳು ಅಮೃತವೇಳೆಗೆ
ಮೊದಲಿನಿಂದಲೂ ತಂದೆಯ ಬಳಿ ತಲುಪುತ್ತಿವೆ. ಪ್ರತಿಯೋಬ್ಬ ಮಗುವಿನ ಹೃದಯದಿಂದ ತಾನಾಗಿಯೇ “ನನ್ನ ಬಾಬಾ”
ಎಂಬ ಗೀತೆಯು ಮೊಳಗುತ್ತಿದೆ. ಬಾಪ್ದಾದಾರವರ ಹೃದಯದಿಂದಲೂ ಇದೇ ಗೀತೆ ಮೊಳಗುತ್ತದೆ- “ನನ್ನ ಮಕ್ಕಳೇ,
ಮುದ್ದಾದ ಮಕ್ಕಳೇ, ಬಾಪ್ದಾದಾರವರಿಗೂ ಕಿರೀಟಧಾರಿ ಮಕ್ಕಳೇ” ಎಂದು.
ಇಂದು ಸ್ಮೃತಿ ದಿವಸದ
ಕಾರಣ ಎಲ್ಲರ ಮನಸ್ಸಿನಲ್ಲಿ ಹೆಚ್ಚಿನದಾಗಿ ಸ್ನೇಹದ ಅಲೆಯಿದೆ, ಅನೇಕ ಮಕ್ಕಳ ಸ್ನೇಹದ ಮುತ್ತುಗಳ
ಮಾಲೆಗಳು ಬಾಪ್ದಾದಾರವರ ಕೊರಳಿನಲ್ಲಿ ಪೋಣಿಸಲ್ಪಡುತ್ತಿದೆ, ತಂದೆಯೂ ಸಹ ತನ್ನ ಸ್ನೇಹೀ ಬಾಹುಗಳ
ಮಾಲೆಯನ್ನು ಮಕ್ಕಳಿಗೆ ತೊಡಿಸುತ್ತಿದ್ದೇವೆ. ಬೇಹದ್ದಿನ ಬಾಪ್ದಾದಾರವರ ಬೇಹದ್ದಿನ ಬಾಹುಗಳಲ್ಲಿ
ಸಮಾವೇಶವಾಗಿ ಬಿಟ್ಟಿದ್ದೀರಿ. ಇಂದು ಎಲ್ಲರೂ ವಿಶೇಷವಾಗಿ ಸ್ನೇಹದ ವಿಮಾನದಲ್ಲಿ ತಲುಪಿ
ಬಿಟ್ಟಿದ್ದೀರಿ ಮತ್ತು ದೂರ ದೂರದಿಂದಲೂ ಮಕ್ಕಳು ಮನಸ್ಸಿನ ವಿಮಾನದಲ್ಲಿ ಅವ್ಯಕ್ತರೂಪದಿಂದ,
ಫರಿಶ್ತೆಗಳ ರೂಪದಿಂದ ತಲುಪಿದ್ದಾರೆ ಆದ್ದರಿಂದ ಬಾಪ್ದಾದಾ ಎಲ್ಲಾ ಮಕ್ಕಳಿಗೆ ಇಂದು ಸ್ಮೃತಿದಿವಸ
ಸೋ ಸಮರ್ಥ ದಿವಸದ ಪದಮಾಪದಮ ನೆನಪುಗಳನ್ನು ಕೊಡುತ್ತಿದ್ದೇವೆ. ಈ ದಿವಸವು ಎಷ್ಟೊಂದು ಸ್ಮೃತಿಗಳನ್ನು
ತರಿಸುತ್ತದೆ ಮತ್ತು ಪ್ರತಿಯೊಂದು ಸ್ಮೃತಿಯು ಸೆಕೆಂಡಿನಲ್ಲಿ ಸಮರ್ಥರನ್ನಾಗಿ ಮಾಡಿ ಬಿಡುತ್ತದೆ.
ಸ್ಮೃತಿಗಳ ಪಟ್ಟಿಯು ಸೆಕೆಂಡಿನಲ್ಲಿ ನೆನಪಿಗೆ ಬಂದು ಬಿಡುತ್ತದೆಯಲ್ಲವೆ. ಸ್ಮೃತಿಯು ಸನ್ಮುಖ
ಬರುತ್ತಿದ್ದಂತೆ ಸಾಮರ್ಥ್ಯದ ನಶೆಯೇರಿ ಬಿಡುತ್ತದೆ. ಇದರಲ್ಲಿಯೂ ಮೊಟ್ಟ ಮೊದಲ ಸ್ಮೃತಿಯು
ನೆನಪಿದೆಯಲ್ಲವೆ. ಯಾವಾಗ ತಂದೆಯ ಮಕ್ಕಳಾದಿರಿ ಆಗ ತಂದೆಯು ಯಾವ ಸ್ಮೃತಿ ತರಿಸಿದರು? ತಾವು ಕಲ್ಪದ
ಹಿಂದಿನ ಭಾಗ್ಯವಂತ ಆತ್ಮರಾಗಿದ್ದೀರಿ. ನೆನಪಿಸಿಕೊಳ್ಳಿ, ಈ ಮೊದಲ ಸ್ಮೃತಿಯಿಂದ ಯಾವ ಪರಿವರ್ತನೆ
ಬಂದು ಬಿಟ್ಟಿತು? ಆತ್ಮಾಭಿಮಾನಿಯಾದ ಕಾರಣ ಪರಮಾತ್ಮ ತಂದೆಯ ಸ್ನೇಹದ ನಶೆಯೇರಿ ಬಿಟ್ಟಿತು. ಏಕೆ
ನಶೆಯೇರಿತು? ಹೃದಯದಿಂದ ಮೊದಲು ಸ್ನೇಹದ ಯಾವ ಶಬ್ಧವು ಹೊರಬಂದಿತು? “ನನ್ನ ಮಧುರ ಬಾಬಾ” ಮತ್ತು
ಇದೊಂದು ಗೋಲ್ಡನ್ ಶಬ್ಧವು ಹೊರಟಿದ್ದರಿಂದ ಯಾವ ನಶೆಯೇರಿತು? ನನ್ನ ಬಾಬಾ ಎಂದು ಹೇಳಿದ ಕಾರಣ,
ಅರಿತುಕೊಂಡ ಕಾರಣ ಮತ್ತು ಅದನ್ನು ಒಪ್ಪಿಕೊಂಡ ಕಾರಣ ಇಡೀ ಪರಮಾತ್ಮ ಪ್ರಾಪ್ತಿಗಳೇ ತಮಗೆ ತಮ್ಮ
ಪ್ರಾಪ್ತಿಗಳಾಗಿ ಬಿಟ್ಟಿತು. ಅನುಭವವಿದೆಯಲ್ಲವೆ. ನನ್ನ ಬಾಬಾ ಎಂದು ಹೇಳಿದ್ದರಿಂದ ಎಷ್ಟೊಂದು
ಪ್ರಾಪ್ತಿಗಳು ತಮ್ಮದಾಗಿ ಹೋಯಿತು! ಎಲ್ಲಿ ಪ್ರಾಪ್ತಿಗಳಿರುತ್ತದೆಯೋ ಅಲ್ಲಿ ನೆನಪು
ಮಾಡಬೇಕಾಗುವುದಿಲ್ಲ. ನೆನಪು ಸ್ವತಹವಾಗಿಯೇ ಬರುತ್ತದೆ, ಸಹಜವಾಗಿ ಬರುತ್ತದೆ ಏಕೆಂದರೆ ಅದು
ನನ್ನದಾಯಿತಲ್ಲವೆ! ತಂದೆಯ ಖಜಾನೆಯೇ ನನ್ನ ಖಜಾನೆಯಾಯಿತು. ಅಂದಾಗ ನನ್ನದನ್ನು ನೆನಪು ಮಾಡುವ
ಅವಶ್ಯಕತೆಯಿಲ್ಲ, ಅದು ತಾನಾಗಿಯೇ ನೆನಪಿರುತ್ತದೆ. ನನ್ನದನ್ನು ಮರೆಯುವುದು ಕಷ್ಟವಾಗುತ್ತದೆ,
ನೆನಪು ಮಾಡಿಕೊಳ್ಳುವುದು ಕಷ್ಟವಾಗುವುದಿಲ್ಲ. ಹೇಗೆ ಅನುಭವವಿದೆ- ನನ್ನ ಶರೀರವಾಗಿದೆ ಅಂದಮೇಲೆ ಅದು
ಮರೆಯುತ್ತದೆಯೇ? ಅದನ್ನು ಮರೆಸಬೇಕಾಗುತ್ತದೆ, ಏಕೆ? ಏಕೆಂದರೆ ನನ್ನದಾಗಿದೆಯಲ್ಲವೆ ಅಂದಮೇಲೆ ಎಲ್ಲಿ
ನನ್ನತನವು ಬರುತ್ತದೆಯೋ ಅಲ್ಲಿ ನೆನಪು ಸಹಜವಾಗಿ ಬಿಡುತ್ತದೆ. ಆದ್ದರಿಂದ ಸ್ಮೃತಿಯು ಸಮರ್ಥ
ಆತ್ಮನನ್ನಾಗಿ ಮಾಡಿ ಬಿಟ್ಟಿತು. ನನ್ನ ಬಾಬಾ ಎಂಬ ಈ ಒಂದು ಶಬ್ಧವು ಭಾಗ್ಯವಿದಾತ, ಅಕೂಟ ಖಜಾನೆಗಳ
ದಾತನನ್ನೇ ನನ್ನವರನ್ನಾಗಿ ಮಾಡಿ ಬಿಟ್ಟಿತು. ಇಷ್ಟು ಕಮಾಲ್ ಮಾಡುವಂತಹ ಮಕ್ಕಳಾಗಿದ್ದೀರಲ್ಲವೆ.
ಪರಮಾತ್ಮ ಪಾಲನೆಗೆ ಅಧಿಕಾರಿಗಳಾಗಿ ಬಿಟ್ಟಿರಿ, ಯಾವ ಪರಮಾತ್ಮ ಪಾಲನೆಯು ಇಡೀ ಕಲ್ಪದಲ್ಲಿ ಒಂದೇ
ಬಾರಿ ಸಿಗುತ್ತದೆ, ಉಳಿದ ಸಮಯದಲ್ಲಿ ಆತ್ಮರು ಹಾಗೂ ದೇವಾತ್ಮರ ಪಾಲನೆಯಂತೂ ಸಿಗುತ್ತದೆ ಆದರೆ
ಪರಮಾತ್ಮ ಪಾಲನೆಯು ಕೇವಲ ಇದೊಂದು ಜನ್ಮದಲ್ಲಿ ಸಿಗುತ್ತದೆ.
ಅಂದಾಗ ಇಂದಿನ ಸ್ಮೃತಿ
ಸೋ ಸಮರ್ಥ ದಿವಸದಂದು ಪರಮಾತ್ಮ ಪಾಲನೆಯ ನಶೆ ಹಾಗೂ ಖುಷಿಯು ಸಹಜವಾಗಿ ನೆನಪು ಇತ್ತಲ್ಲವೆ ಏಕೆಂದರೆ
ಇಂದಿನ ವಾಯುಮಂಡಲವು ಸಹಜ ನೆನಪಿನದಾಗಿತ್ತು ಆದ್ದರಿಂದ ಇಂದಿನ ದಿನ ಸಹಜಯೋಗಿಗಳಾಗಿದ್ದಿರಿ ಅಥವಾ
ಇಂದಿನ ದಿನವೂ ನೆನಪಿಗಾಗಿ ಯುದ್ಧ ಮಾಡಬೇಕಾಯಿತೇ? ಏಕೆಂದರೆ ಇಂದಿನ ದಿನವನ್ನು ಸ್ನೇಹದ ದಿನವೆಂದು
ಹೇಳುತ್ತೀರಲ್ಲವೆ ಅಂದಮೇಲೆ ಸ್ನೇಹವು ಪರಿಶ್ರಮವನ್ನು ಕಳೆಯುತ್ತದೆ. ಸ್ನೇಹವು ಎಲ್ಲಾ ಮಾತುಗಳನ್ನು
ಸಹಜ ಮಾಡಿ ಬಿಡುತ್ತದೆ ಆದ್ದರಿಂದ ಈ ದಿನ ಎಲ್ಲರೂ ವಿಶೇಷವಾಗಿ ಸಹಜಯೋಗಿಗಳಾಗಿದ್ದಿರಿ ಅಥವಾ
ಕಷ್ಟವಾಯಿತೇ? ಯಾರಿಗೆ ಈ ದಿನವೂ ಕಷ್ಟವಾಯಿತು-ಅವರು ಕೈಯೆತ್ತಿರಿ. ಯಾರಿಗೂ ಕಷ್ಟವಾಗಲಿಲ್ಲವೆ?
ಎಲ್ಲರೂ ಸಹಜಯೋಗಿಗಳಾಗಿದ್ದಿರಿ. ಒಳ್ಳೆಯದು - ಯಾರು ಸಹಜಯೋಗಿಗಳಾಗಿದ್ದಿರಿ ಅವರು ಕೈಯೆತ್ತಿರಿ.
ಸಹಜಯೋಗಿಗಳಾಗಿದ್ದಿರಾ? ಇಂದು ಮಾಯೆಗೆ ರಜೆ ಕೊಟ್ಟು ಬಿಟ್ಟಿದ್ದಿರಿ. ಇಂದು ಮಾಯೆ ಬರಲಿಲ್ಲವೆ?
ಮಾಯೆಗೆ ಬೀಳ್ಕೊಡುಗೆ ಕೊಟ್ಟು ಬಿಟ್ಟಿರಾ? ಒಳ್ಳೆಯದು - ಈ ದಿನವಂತೂ ಬೀಳ್ಕೊಡುಗೆ ಕೊಟ್ಟಿರಿ,
ಅದಕ್ಕಾಗಿ ಶುಭಾಷಯಗಳು. ಒಂದುವೇಳೆ ಇದೇ ರೀತಿ ಸ್ನೇಹದಲ್ಲಿ ಸಮಾವೇಶವಾಗಿದ್ದರೆ ಮಾಯೆಗೆ
ಸದಾಕಾಲಕ್ಕಾಗಿ ಬೀಳ್ಕೊಡುಗೆ ಸಿಗುವುದು ಏಕೆಂದರೆ ಈಗ 70 ವರ್ಷಗಳು ಮುಗಿಯುತ್ತಿದೆ ಆದ್ದರಿಂದ
ಬಾಪ್ದಾದಾ ಈ ವರ್ಷವನ್ನು ಭಿನ್ನ ವರ್ಷ, ಸರ್ವರಿಗೆ ಪ್ರಿಯ ವರ್ಷ, ಪರಿಶ್ರಮದಿಂದ ಮುಕ್ತ ವರ್ಷ,
ಸಮಸ್ಯೆಯಿಂದ ಮುಕ್ತ ವರ್ಷವನ್ನಾಗಿ ಆಚರಿಸಲು ಬಯಸುತ್ತೇವೆ, ತಮ್ಮೆಲ್ಲರಿಗೆ ಇಷ್ಟವಿದೆಯೇ? ಸಮ್ಮತವೇ?
ಮುಕ್ತ ವರ್ಷವನ್ನಾಗಿ ಆಚರಿಸುತ್ತೀರಾ? ಏಕೆಂದರೆ ಮುಕ್ತಿಧಾಮಕ್ಕೆ ಹೋಗಬೇಕಾಗಿದೆ, ಅನೇಕ ದುಃಖಿ
ಅಶಾಂತ ಆತ್ಮರಿಗೆ ಮುಕ್ತಿದಾತ ತಂದೆಯ ಜೊತೆಗಾರರಾಗಿ ಮುಕ್ತಿ ಕೊಡಿಸಬೇಕಾಗಿದೆ ಆದ್ದರಿಂದ ಮಾ||
ಮುಕ್ತಿದಾತರಾಗಿ. ಯಾವಾಗ ಸ್ವಯಂ ಮುಕ್ತರಾಗುತ್ತೀರೋ ಆಗಲೇ ಮುಕ್ತಿ ವರ್ಷವನ್ನು ಆಚರಿಸುತ್ತೀರಲ್ಲವೆ
ಏಕೆಂದರೆ ತಾವು ಬ್ರಾಹ್ಮಣ ಆತ್ಮರು ಸ್ವಯಂ ಮುಕ್ತರಾಗಿ ಅನೇಕರಿಗೆ ಮುಕ್ತಿ ಕೊಡಿಸಲು
ನಿಮಿತ್ತರಾಗಿದ್ದೀರಿ. ಒಂದು ಭಾಷೆ, ಯಾವುದು ಮುಕ್ತಿ ಕೊಡಿಸುವ ಬದಲು ಬಂಧನದಲ್ಲಿ ಬಂಧಿಸಿ
ಬಿಡುತ್ತದೆ, ಸಮಸ್ಯೆಗೆ ಅಧೀನರನ್ನಾಗಿ ಮಾಡುತ್ತದೆ ಅದು ಯಾವುದೆಂದರೆ - ಅದು ಹೀಗಲ್ಲ ಹಾಗೆ, ಇದು
ಹಾಗಲ್ಲ ಹೀಗೆ... ಎಂಬುದಾಗಿದೆ. ಯಾವಾಗ ಸಮಸ್ಯೆ ಬರುತ್ತದೆಯೋ ಆಗ ಇದನ್ನೇ ಹೇಳುತ್ತಾರೆ - ಬಾಬಾ,
ಅದು ಹೀಗಿರಲಿಲ್ಲ ಆ ರೀತಿ ಇತ್ತು ಆದ್ದರಿಂದ ಹೀಗಾಯಿತು, ಇದು ಈ ರೀತಿಯಿರದಿದ್ದರೆ ಅದು
ಹಾಗಾಗುತ್ತಿತ್ತಲ್ಲವೆ. ಇದು ನೆಪ ಹೇಳುವ ಆಟವಾಗಿದೆ.
ಬಾಪ್ದಾದಾರವರು ಎಲ್ಲರ
ಫೈಲ್ಗಳನ್ನು ನೋಡಿದೆವು, ಅಂದಾಗ ಫೈಲ್ನಲ್ಲಿ ಏನನ್ನು ನೋಡಿದೆವು? ಮೆಜಾರಿಟಿ ಮಕ್ಕಳ ಫೈಲ್
ಪ್ರತಿಜ್ಞೆ ಮಾಡುವ ಪೇಪರ್ನಿಂದ ತುಂಬಿ ಹೋಗಿದೆ. ಪ್ರತಿಜ್ಞೆ ಮಾಡುವ ಸಮಯದಲ್ಲಿ ಬಹಳ ಹೃದಯದಿಂದ
ಮಾಡುತ್ತಾರೆ, ಬಹಳ ಚೆನ್ನಾಗಿ ಆಲೋಚಿಸುತ್ತಾರೆ ಆದರೆ ಇಲ್ಲಿಯವರೆಗೆ ನೋಡಿದುದು ಏನೆಂದರೆ ಫೈಲ್
ದೊಡ್ಡದಾಗುತ್ತಾ ಹೋಗುತ್ತಿದೆ ಆದರೆ ಫೈನಲ್ ಆಗಿಲ್ಲ. ಧೃಡ ಪ್ರತಿಜ್ಞೆಗಾಗಿ ಒಂದು ಹೇಳಿಕೆಯಿದೆ -
ಪ್ರಾಣ ಹೋದರೂ ಪ್ರತಿಜ್ಞೆ ಬಿಡಬಾರದು ಅಂದಮೇಲೆ ಬಾಪ್ದಾದಾ ಇಂದು ಎಲ್ಲರ ಫೈಲ್ಗಳನ್ನು ನೋಡಿದೆವು,
ಪ್ರತಿಜ್ಞೆಗಳನ್ನು ಬಹಳ ಚೆನ್ನಾಗಿ ಮಾಡಿದ್ದಾರೆ. ಮನಸ್ಸಿನಿಂದಲೂ ಮಾಡಿದ್ದೀರಿ ಮತ್ತು ಬರೆದೂ ಸಹ
ಮಾಡಿದ್ದೀರಿ ಅಂದಮೇಲೆ ಈ ವರ್ಷದಲ್ಲಿ ಏನು ಮಾಡುವಿರಿ? ಫೈಲ್ಗಳನ್ನು ಹೆಚ್ಚಿಸುತ್ತೀರೋ ಅಥವಾ
ಪ್ರತಿಜ್ಞೆಗಳನ್ನು ಫೈನಲ್ ಮಾಡುತ್ತೀರೋ? ಏನು ಮಾಡುವಿರಿ? ಮೊದಲ ಸಾಲಿನವರು ತಿಳಿಸಿ, ಪಾಂಡವರೇ
ಹೇಳಿರಿ? ಟೀಚರ್ಸ್ ಹೇಳಿರಿ, ಬಾಪ್ದಾದಾರವರ ಬಳಿ ಯಾವ ಫೈಲ್ ದೊಡ್ಡದಾಗುತ್ತಾ ಹೋಗುತ್ತಿದೆಯೋ ಈ
ವರ್ಷ ಅದನ್ನು ಫೈನಲ್ ಮಾಡುತ್ತೀರಾ ಅಥವಾ ಈ ವರ್ಷವೂ ಫೈಲ್ನಲ್ಲಿ ಕಾಗದಗಳನ್ನು ಸೇರಿಸುತ್ತೀರಾ? ಏನು
ಮಾಡುತ್ತೀರಿ? ಹೇಳಿ ಪಾಂಡವರೇ? ಫೈನಲ್ ಮಾಡುವಿರಾ? ಬಾಗಬೇಕಾಗುವುದು, ಬದಲಾಗಬೇಕಾಗುವುದು, ಸಹನೆ
ಮಾಡಬೇಕಾಗುವುದು. ಮಾತುಗಳನ್ನು ಕೇಳಬೇಕಾಗುವುದು ಆದರೆ ನಾವು ಬದಲಾಗಲೇಬೇಕಾಗಿದೆ ಎಂದು ಯಾರು
ತಿಳಿದುಕೊಳ್ಳುತ್ತೀರೋ ಅವರು ಕೈಯೆತ್ತಿರಿ. ನೋಡಿ, ಟಿ.ವಿ.ಯಲ್ಲಿ ಎಲ್ಲರ ಪೋಟೋ ತೆಗೆಯಿರಿ. 4
ಟಿ.ವಿ. ಗಳಿವೆ, ಎಲ್ಲಾ ಕಡೆಯ ಎಲ್ಲರ ಪೋಟೊ ತೆಗೆಯಿರಿ, ಈ ರೆಕಾರ್ಡ್ ಇಟ್ಟುಕೊಂಡು ಈ ಪೋಟೊ ತೆಗೆದು
ಬಾಪ್ದಾದಾರವರಿಗೆ ಕೊಡಬೇಕಾಗಿದೆ. ಟಿ.ವಿ.,ಯವರು ಎಲ್ಲಿದ್ದಾರೆ? ಬಾಪ್ದಾದಾರವರೂ ಸಹ ಫೈಲ್ನ ಫಾಯಿದೆ
(ಲಾಭ) ಯನ್ನು ತೆಗೆದುಕೊಳ್ಳುವೆವು. ಶುಭಾಷಯಗಳು, ಶುಭಾಷಯಗಳು. ತಮಗಾಗಿ ತಾವೇ ಚಪ್ಪಾಳೆ ತಟ್ಟಿರಿ.
ನೋಡಿ, ಹೇಗೆ ಒಂದು ಕಡೆ
ವಿಜ್ಞಾನ ಹಾಗೂ ಇನ್ನೊಂದುಕಡೆ ಭ್ರಷ್ಟಾಚಾರಿಗಳು, ಇನ್ನೊಂದು ಕಡೆ ಪಾಪಾಚಾರಿಗಳು ಎಲ್ಲರೂ
ತಮ್ಮ-ತಮ್ಮ ಕಾರ್ಯದಲ್ಲಿ ಇನ್ನೂ ವೃದ್ಧಿಯನ್ನು ಸಾಧಿಸುತ್ತಾ ಹೋಗುತ್ತಿದ್ದಾರೆ. ಬಹಳ ಹೊಸ-ಹೊಸ
ಯೋಜನೆಗಳನ್ನು ಮಾಡುತ್ತಿದ್ದಾರೆ ಅಂದಾಗ ತಾವಂತೂ ರಚಯಿತನ ಮಕ್ಕಳಾಗಿದ್ದೀರಿ. ವಿಶ್ವ ರಚಯಿತನ
ಮಕ್ಕಳಾಗಿದ್ದೀರಿ ಅಂದಮೇಲೆ ತಾವು ಈ ವರ್ಷ ಇಂತಹ ನವೀನತೆಯ ಸಾಧನಗಳನ್ನು ಅಳವಡಿಸಿಕೊಳ್ಳಿ,
ಯಾವುದರಿಂದ ಪ್ರತಿಜ್ಞೆಯು ಧೃಡವಾಗಿ ಬಿಡಲಿ ಏಕೆಂದರೆ ಎಲ್ಲರೂ ಈಗ ಪ್ರತ್ಯಕ್ಷತೆಯನ್ನು ಬಯಸುತ್ತಾರೆ,
ಎಷ್ಟೊಂದು ಖರ್ಚು ಮಾಡುತ್ತಿದ್ದೀರಿ. ಪ್ರತೀ ಸ್ಥಾನದಲ್ಲಿ ದೊಡ್ಡ-ದೊಡ್ಡ ಕಾರ್ಯಕ್ರಮಗಳನ್ನು
ಮಾಡುತ್ತಿದ್ದೀರಿ. ಪ್ರತಿಯೊಂದು ವರ್ಗವು ಚೆನ್ನಾಗಿ ಪರಿಶ್ರಮ ಪಡುತ್ತಿದ್ದಾರೆ ಆದರೆ ಈಗ ಈ ವರ್ಷ
ಈ ಅಡಿಷನ್ ಮಾಡಿಕೊಳ್ಳಿರಿ - ಯಾವುದೇ ಸೇವೆ ಮಾಡಿರಿ. ಉದಾ: ವಾಚಾ ಸೇವೆಯನ್ನೇ ಮಾಡುತ್ತೀರಿ ಆದರೆ
ಈಗ ಕೇವಲ ವಾಚಾ ಸೇವೆಯಲ್ಲ, ಜೊತೆಗೆ ಮನಸ್ಸಾ, ವಾಚಾ ಹಾಗೂ ಸ್ನೇಹ-ಸಹಯೋಗರೂಪಿ ಕರ್ಮ. ಒಂದೇ
ಸಮಯದಲ್ಲಿ ಮೂರು ಸೇವೆಗಳು ಒಟ್ಟಿಗೆ ನಡೆಯಲಿ, ಬೇರೆ-ಬೇರೆ ಅಲ್ಲ. ಒಂದು ಸೇವೆಯಲ್ಲಿ ನೋಡಿದಾಗ
ಬಾಪ್ದಾದಾ ಯಾವ ಫಲಿತಾಂಶವನ್ನು ನೋಡಲು ಬಯಸುತ್ತೇವೆಯೋ ಅದು ಆಗುವುದಿಲ್ಲ, ಪ್ರತ್ಯಕ್ಷತೆಯಾಗಲಿ
ಎಂದು ತಾವೂ ಸಹ ಬಯಸುತ್ತೀರಿ. ಇಲ್ಲಿಯವರೆಗೆ ಈ ಫಲಿತಾಂಶವು ಚೆನ್ನಾಗಿದೆ. ಮೊದಲಿಗಿಂತಲೂ ಬಹಳ
ಒಳ್ಳೆಯ ಫಲಿತಾಂಶವಿದೆ, ಎಲ್ಲರೂ ಇದು ಬಹಳ ಚೆನ್ನಾಗಿದೆ, ಬಹಳ ಚೆನ್ನಾಗಿದೆ ಎಂದು ಹೇಳಿ
ಹೋಗುತ್ತಾರೆ ಆದರೆ ಚೆನ್ನಾಗಿ ಆಗುವುದು ಅರ್ಥಾತ್ ಪ್ರತ್ಯಕ್ಷತೆಯಾಗುವುದು ಆದ್ದರಿಂದ ಈಗ ಅಡಿಷನ್
ಮಾಡಿಕೊಳ್ಳಿರಿ- ಒಂದೇ ಸಮಯದಲ್ಲಿ ಮನಸ್ಸಾ, ವಾಚಾ, ಕರ್ಮಣಾದಲ್ಲಿ ಸ್ನೇಹಿ-ಸಹಯೋಗಿಗಳಾಗಿರಿ.
ಪ್ರತಿಯೋಬ್ಬ ಜೊತೆಗಾರರು ಬ್ರಾಹ್ಮಣ ಜೊತೆಗಾರರಿರಲಿ, ಹೊರಗಿನ ಯಾರು ಸೇವೆಗೆ
ನಿಮಿತ್ತರಾಗುತ್ತಾರೆಯೋ ಆ ಜೊತೆಗಾರರೇ ಇರಲಿ ಆದರೆ ಸಹಯೋಗ ಮತ್ತು ಸ್ನೇಹವನ್ನು ಕೊಡುವುದೇ ಕರ್ಮಣಾ
ಸೇವೆಯಲ್ಲಿ ನಂಬರ್ ತೆಗೆದುಕೊಳ್ಳುವುದಾಗಿದೆ. ಇವರು ಹೀಗೆ ಮಾಡಿದರಲ್ಲವೆ ಆದ್ದರಿಂದ ಹೀಗೆ
ಮಾಡಬೇಕಾಯಿತು, ಸ್ನೇಹದ ಬದಲು ಸ್ವಲ್ಪ ಮಾತನಾಡಬೇಕಾಯಿತು ಎಂಬ ಭಾಷೆಯನ್ನು ಹೇಳಬೇಡಿ. ಇದನ್ನು
ಮಾಡಲೇಬೇಕಾಗುತ್ತದೆ, ಹೇಳಲೇಬೇಕಾಗುತ್ತದೆ, ನೋಡಲೇಬೇಕಾಗುತ್ತದೆ, ಇದಲ್ಲ. ಇಷ್ಟು ವರ್ಷಗಳಲ್ಲಿ
ನೋಡಿ ಬಿಟ್ಟಿರಿ, ಬಾಪ್ದಾದಾರವರು ಇದುವರೆಗೂ ಸಮಯ ಕೊಟ್ಟಿದ್ದೆವು. ಹೀಗಲ್ಲ ಹಾಗೆ ಎಂದು ಇನ್ನೂ
ಎಲ್ಲಿಯವರೆಗೆ ಹೇಳುತ್ತೀರಿ? ಬಾಪ್ದಾದಾರವರೊಂದಿಗೆ ಎಲ್ಲರೂ ವಾರ್ತಾಲಾಪದಲ್ಲಿ ಕೇಳುತ್ತಾರೆ- ಬಾಬಾ,
ಕೊನೆಗೂ ಪರದೆಯನ್ನು ಯಾವಾಗ ತೆರೆಯುತ್ತೀರಿ? ಇನ್ನೂ ಎಲ್ಲಿಯವರೆಗೆ ನಡೆಯುತ್ತದೆ ಎಂದು ಕೇಳುತ್ತಾರೆ.
ಇದಕ್ಕೆ ಬಾಪ್ದಾದಾ ತಮಗೆ ಹೇಳುತ್ತೇವೆ- ಈ ಹಳೆಯ ಭಾಷೆ, ಹುಡುಗಾಟಿಕೆ, ಆಸುರಿತನದ ಚಲನೆ ಇನ್ನೂ
ಎಲ್ಲಿಯವರೆಗೆ ನಡೆಯುತ್ತದೆ? ಬಾಪ್ದಾದಾರವರದೂ ಸಹ ಪ್ರಶ್ನೆಯಿದೆ- ಮಕ್ಕಳು ಇದೆಲ್ಲವನ್ನು ಇನ್ನೂ
ಎಲ್ಲಿಯರೆಗೆ ಮಾಡುತ್ತೀರಿ? ಇದಕ್ಕೆ ತಾವು ಉತ್ತರ ಕೊಡಿ ಆಗ ಬಾಪ್ದಾದಾರವರೂ ಸಹ ಯಾವಾಗ
ವಿನಾಶವಾಗುವುದು ಎಂದು ಉತ್ತರ ನೀಡುವೆವು ಏಕೆಂದರೆ ಬಾಪ್ದಾದಾ ವಿನಾಶದ ಪರದೆಯನ್ನು ಈಗಲೂ
ತೆರೆಯಬಲ್ಲೆವು. ಈ ಸೆಕೆಂಡಿನಲ್ಲಿ ಮಾಡಬಲ್ಲೆವು ಆದರೆ ಮೊದಲು ರಾಜ್ಯ ಮಾಡುವವರು ತಯಾರಿರಬೇಕು
ಆದ್ದರಿಂದ ಈಗಲೇ ತಯಾರು ಮಾಡುತ್ತೀರೆಂದರೆ ಸಮಾಪ್ತಿಯನ್ನು ಸಮೀಪ ತರುತ್ತೀರಿ. ಯಾವುದೇ ನಿರ್ಬಲತೆಯ
ಮಾತಿನಲ್ಲಿ ಕಾರಣವನ್ನು ಹೇಳಬೇಡಿ, ನಿವಾರಣೆ ಮಾಡಿರಿ. ಈ ಕಾರಣವಿತ್ತಲ್ಲವೆ ಎಂದು ಹೇಳುವಂತಿಲ್ಲ.
ಬಾಪ್ದಾದಾ ಇಡೀ ದಿನದಲ್ಲಿ ಮಕ್ಕಳ ಆಟವನ್ನು ನೋಡುತ್ತೇವೆ. ಮಕ್ಕಳೊಂದಿಗೆ ಪ್ರೀತಿಯಿದೆಯಲ್ಲವೆ
ಆದ್ದರಿಂದ ಮತ್ತೆ, ಮತ್ತೆ ಆಟವನ್ನು ನೋಡುತ್ತಿರುತ್ತೇವೆ. ನಮ್ಮ ಬಳಿಯಿರುವ ಟಿ.ವಿ.,ಯು ಬಹಳ
ದೊಡ್ಡದಾಗಿದೆ. ಒಂದೇ ಸಮಯದಲ್ಲಿ ಇಡೀ ವಿಶ್ವವೇ ಕಾಣಿಸುತ್ತದೆ, ನಾಲ್ಕಾರು ಕಡೆಯ ಮಕ್ಕಳು
ಕಾಣಿಸುತ್ತೀರಿ. ಹೇಗೆ ಅಮೇರಿಕಾ ಇರಲಿ, ಗುಡ್ಗಾವ್ ಇರಲಿ, ಎಲ್ಲವೂ ಕಾಣಿಸಿ ಬಿಡುತ್ತದೆ.
ಆದ್ದರಿಂದ ಬಾಪ್ದಾದಾ ಆಟವನ್ನು ನೋಡುತ್ತೇವೆ, ತಪ್ಪಿಸಿಕೊಳ್ಳುವ ಭಾಷೆಯು ಬಹಳ ಚೆನ್ನಾಗಿದೆ. ಬಾಬಾ,
ನನ್ನದು ತಪ್ಪಿಲ್ಲ, ಇವರು ಈ ರೀತಿ ಮಾಡಿದರಲ್ಲವೆ. ಈ ಕಾರಣವಿತ್ತಲ್ಲವೆ ಆದ್ದರಿಂದ ಹೀಗಾಯಿತು ಎಂದು
ಹೇಳುತ್ತಾರೆ. ಅವರಂತೂ ಮಾಡಿದರು ಆದರೆ ನೀವು ಸಮಾಧಾನ ಮಾಡಿದಿರಾ? ಕಾರಣವನ್ನು ಕಾರಣವಾಗಿಯೇ ಇರಲು
ಬಿಟ್ಟಿರಾ? ಅಥವಾ ಕಾರಣವನ್ನು ನಿವಾರಣೆಯಲ್ಲಿ ಬದಲಾಯಿಸಿದಿರಾ? ಎಲ್ಲರೂ ಕೇಳುತ್ತಾರೆ- ಬಾಬಾ,
ತಮ್ಮದು ಯಾವ ಆಸೆಯಿದೆ ಎಂದು. ಆದ್ದರಿಂದ ಬಾಪ್ದಾದಾ ಶುಭ ಆಸೆಯನ್ನು ತಿಳಿಸುತ್ತಿದ್ದೇವೆ-
ಬಾಪ್ದಾದಾರವರಿಗೆ ಒಂದೇ ಆಸೆಯಿದೆ- ಕಾರಣವು ಸಮಾಪ್ತಿಯಾಗಲಿ, ನಿವಾರಣೆ ಕಂಡು ಬರಲಿ. ಸಮಸ್ಯೆಯು
ಸಮಾಪ್ತಿಯಾಗಲಿ, ಸಮಾಧಾನವಾಗುತ್ತಾ ಇರಲಿ. ಇದು ಸಾಧ್ಯವೇ? ಮೊದಲ ಸಾಲಿನವರೇ ಇದು ಸಾಧ್ಯವೇ?
ತಲೆಯನ್ನಾದರೂ ಅಲುಗಾಡಿಸಿರಿ. ಹಿಂದೆ ಇರುವವರು ಇದು ಸಾಧ್ಯವೇ? ಅಂದಮೇಲೆ ಒಂದುವೇಳೆ ನಾಳೆ
ಟಿ.ವಿ.,ಯನ್ನು ತೆರೆಯುತ್ತೇವೆ, ಟಿ.ವಿ.,ಯಲ್ಲಿ ಅವಶ್ಯವಾಗಿ ನೋಡಲಾಗುತ್ತದೆಯಲ್ಲವೆ. ಅಂದಮೇಲೆ
ನಾಳೆ ಟಿ.ವಿ.,ಯಲ್ಲಿ ನೋಡಿದಾಗ ಭಲೆ ವಿದೇಶವಿರಲಿ, ಭಾರತವಿರಲಿ, ಭಲೆ ಚಿಕ್ಕ ಹಳ್ಳಿಯಿರಲಿ, ಬಹಳ
ದೊಡ್ಡ ರಾಜ್ಯವೇ ಇರಲಿ, ಎಲ್ಲಿಯೂ ಸಹ ಕಾರಣವು ಕಾಣಿಸುವುದಿಲ್ಲವೇ? ಪಕ್ಕಾ? ಇದರಲ್ಲಿ ಹೌದು
ಎನ್ನುತ್ತಿಲ್ಲ? ಇದು ಸಾಧ್ಯವಿದೆಯೇ? ಕೈಯನ್ನು ಬಹಳ ಚೆನ್ನಾಗಿ ಎತ್ತುತ್ತೀರಿ, ಬಾಪ್ದಾದಾ ಬಹಳ
ಖುಷಿಯಾಗಿ ಬಿಡುತ್ತೇವೆ. ಕೈಯನ್ನು ಎತ್ತುವುದೂ ಸಹ ಕಮಾಲ್ ಆಗಿದೆ. ಮಕ್ಕಳಿಗೆ ಖುಷಿ ಪಡಿಸುವುದೂ
ಬರುತ್ತದೆ ಏಕೆಂದರೆ ಬಾಪ್ದಾದಾ ನೋಡುತ್ತೇವೆ, ಆಲೋಚಿಸಿ - ತಾವು ಕೋಟಿಯಲ್ಲಿ ಕೆಲವರು,
ಕೆಲವರಲ್ಲಿಯೂ ಕೆಲವರೇ ನಿಮಿತ್ತರಾಗಿದ್ದೀರಿ ಅಂದಮೇಲೆ ಈಗ ನೀವು ಮಕ್ಕಳ ವಿನಃ ಮತ್ತ್ಯಾರು ಮಾಡುವರು?
ತಾವೇ ಮಾಡಬೇಕಲ್ಲವೆ ಆದ್ದರಿಂದ ಬಾಪ್ದಾದಾರವರಿಗೆ ತಾವು ಮಕ್ಕಳಲ್ಲಿ ಭರವಸೆಯಿದೆ. ಇನ್ನೂ
ಬರುತ್ತಾರಲ್ಲವೆ, ಅವರು ತಮ್ಮ ಸ್ಥಿತಿಯನ್ನು ನೋಡಿಯೇ ಸರಿ ಹೋಗುತ್ತಾರೆ. ಅವರು ಪರಿಶ್ರಮ
ಪಡಬೇಕಾಗುವುದಿಲ್ಲ. ಮೊದಲು ತಾವು ಆಗಿ ಬಿಡಿ ಸಾಕು, ಏಕೆಂದರೆ ತಾವೆಲ್ಲರೂ ಜನ್ಮ
ಪಡೆಯುತ್ತಿದ್ದಂತೆಯೇ ತಂದೆಯೊಂದಿಗೆ ಪ್ರತಿಜ್ಞೆ ಮಾಡಿದ್ದೀರಿ - ಜೊತೆಯಿರುತ್ತೇವೆ,
ಜೊತೆಗಾರರಾಗುತ್ತೇವೆ ಮತ್ತು ಜೊತೆ ನಡೆಯುತ್ತೇವೆ ಹಾಗೂ ಬ್ರಹ್ಮಾ ತಂದೆಯ ಜೊತೆ ರಾಜ್ಯದಲ್ಲಿ
ಬರುತ್ತೇವೆ. ಈ ಪ್ರತಿಜ್ಞೆ ಮಾಡಿದ್ದೀರಲ್ಲವೆ? ಜೊತೆಯಿರುತ್ತೀರಿ, ಜೊತೆ ನಡೆಯುತ್ತೀರಿ ಅಂದಮೇಲೆ
ಜೊತೆಯಲ್ಲಿ ಸೇವೆಯ ಜೊತೆಗಾರರೂ ಆಗಿದ್ದೀರಲ್ಲವೆ.
ಅಂದಮೇಲೆ ಈಗ ಏನು
ಮಾಡುತ್ತೀರಿ? ಕೈಗಳನ್ನು ಬಹಳ ಚೆನ್ನಾಗಿ ಎತ್ತಿದಿರಿ. ಬಾಪ್ದಾದಾ ಖುಷಿಯಾಗಿ ಬಿಟ್ಟೆವು ಆದರೆ
ಯಾವುದೇ ಮಾತು ಬಂದಾಗ ಈ ದಿನ, ಈ ತಾರೀಖು, ಈ ಸಮಯವನ್ನು ನೆನಪು ಮಾಡಿಕೊಳ್ಳಿ - ನಾವು ಏತಕ್ಕಾಗಿ
ಕೈ ಎತ್ತಿದ್ದೆವು ಎಂದು. ಆಗ ಸಹಯೋಗವೂ ಸಿಗುವುದು ಮತ್ತು ತಾವೇ ಆಗಬೇಕಲ್ಲವೆ. ಈಗ ಕೇವಲ ಬೇಗನೆ ಆಗಿ
ಬಿಡಿ. ತಾವು ಯೋಚಿಸುತ್ತೀರಲ್ಲವೆ, ಕಲ್ಪದ ಮೊದಲೂ ನಾವೇ ಆಗಿದ್ದೆವು ಈಗಲೂ ಆಗಿದ್ದೇವೆ ಮತ್ತು
ಪ್ರತೀ ಕಲ್ಪದಲ್ಲಿ ನಾವೇ ಆಗಬೇಕಾಗಿದೆ. ಇದಂತೂ ಪಕ್ಕಾ ಇದೆಯಲ್ಲವೆ? 2 ವರ್ಷಗಳಲ್ಲಿ ಆಗುತ್ತೇವೆ,
3ನೇ ವರ್ಷದಲ್ಲಿ ಆಗುತ್ತೇವೆ, ಇದು ಸಾಧ್ಯವಿಲ್ಲ. ಸದಾ ನೆನಪಿಟ್ಟುಕೊಳ್ಳಿ, ನಾವೇ
ನಿಮಿತ್ತರಾಗಿದ್ದೇವೆ, ನಾವೇ ಕೋಟಿಯಲ್ಲಿ ಕೆಲವರು ಕೆಲವರಲ್ಲಿಯೂ ಕೆಲವರಾಗಿದ್ದೇವೆ. ಕೋಟಿಯಲ್ಲಿ
ಕೆಲವರಂತೂ ಬರುತ್ತಾರೆ ಆದರೆ ತಾವು ಆ ಕೆಲವರಲ್ಲಿಯೂ ಕೆಲವರಾಗಿದ್ದೀರಿ.
ಇಂದು ಸ್ನೇಹದ ದಿನವಾಗಿದೆ,
ಅಂದಾಗ ಸ್ನೇಹದಲ್ಲಿ ಏನು ಬೇಕಾದರೂ ಮಾಡುವುದು ಕಷ್ಟವೆನಿಸುವುದಿಲ್ಲ ಆದ್ದರಿಂದ ಬಾಪ್ದಾದಾ ಈ ದಿನವೇ
ಎಲ್ಲರಿಗೆ ನೆನಪು ತರಿಸುತ್ತಿದ್ದೇವೆ. ಬ್ರಹ್ಮಾ ತಂದೆಯ ಜೊತೆ ಮಕ್ಕಳಿಗೆ ಎಷ್ಟೊಂದು ಪ್ರೀತಿಯಿದೆ
ಎಂಬುದನ್ನು ನೋಡಿ ಶಿವ ತಂದೆಗೆ ಬಹಳ ಖುಷಿಯಾಗುತ್ತದೆ, ನಾಲ್ಕಾರು ಕಡೆ ನೋಡಿದೆವು. ಭಲೆ ಒಂದು
ವಾರದ ವಿದ್ಯಾರ್ಥಿಯಿರಬಹುದು, ಭಲೆ 70 ವರ್ಷದವರು ಮತ್ತು 7 ದಿನದವರೂ ಸಹ ಇಂದಿನ ದಿನ ಪ್ರೀತಿಯಲ್ಲಿ
ಸಮಾವೇಶವಾಗಿದ್ದಾರೆ ಮತ್ತು ಶಿವ ತಂದೆಯೂ ಸಹ ಬ್ರಹ್ಮಾ ತಂದೆಯೊಂದಿಗಿನ ಮಕ್ಕಳ ಪ್ರೀತಿಯನ್ನು ನೋಡಿ
ಹರ್ಷಿತರಾಗುತ್ತೇವೆ.
ಇಂದಿನ ದಿನದ ಇನ್ನೂ
ಸಮಾಚಾರವನ್ನು ತಿಳಿಸುವುದೇ? ಈ ದಿನ ಅಡ್ವಾನ್ಸ್ ಪಾರ್ಟಿಯೂ ಸಹ ಬಾಪ್ದಾದಾರವರ ಮುಂದೆ ಇಮರ್ಜ್
ಆಗುತ್ತಿದೆ. ಅಡ್ವಾನ್ಸ್ ಪಾರ್ಟಿಯೂ ಸಹ ತಮ್ಮನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ, ಇವರು ಯಾವಾಗ
ತಂದೆಯ ಜೊತೆ ಮುಕ್ತಿಧಾಮದ ಬಾಗಿಲನ್ನು ತೆರೆಯುವರು ಎಂದು. ಇಂದು ಇಡೀ ಅಡ್ವಾನ್ಸ್ ಪಾರ್ಟಿಯು
ಬಾಪ್ದಾದಾರವರಿಗೆ ಇದನ್ನೇ ಹೇಳುತ್ತಿದ್ದರು- ನಮಗೆ ತಾರೀಖು ತಿಳಿಸಿ ಎಂದು, ಇದಕ್ಕೆ ಏನು ಉತ್ತರ
ಕೊಡುವುದು? ಹೇಳಿ. ಏನು ಹೇಳುವುದು? ಉತ್ತರ ಕೊಡುವುದರಲ್ಲಿ ಯಾರು ಬುದ್ಧಿವಂತರಾಗಿದ್ದಾರೆ?
ಬಾಪ್ದಾದಾರವರಂತೂ ಇದೇ ಉತ್ತರ ನೀಡುತ್ತೇವೆ- ಶೀಘ್ರಕ್ಕಿಂತ ಶೀಘ್ರವಾಗಿ ಆಗಿಯೇ ಬಿಡುವರು ಎಂದು.
ಆದರೆ ಇದರಲ್ಲಿ ನಮಗೆ ತಾವು ಮಕ್ಕಳ ಸಹಯೋಗ ಬೇಕಾಗಿದೆ. ಎಲ್ಲರೂ ಜೊತೆ ನಡೆಯುತ್ತೀರಲ್ಲವೆ! ಜೊತೆ
ನಡೆಯುವವರಾಗಿದ್ದೀರಾ ಅಥವಾ ನಿಂತು-ನಿಂತು ನಡೆಯುವವರಾಗಿದ್ದೀರಾ? ಜೊತೆ ನಡೆಯುವವರಾಗಿದ್ದೀರಲ್ಲವೆ.
ಜೊತೆ ಹೋಗುವುದು ಇಷ್ಟವಿದೆಯಲ್ಲವೆ ಅಂದಮೇಲೆ ಸಮಾನರಾಗಬೇಕಾಗುವುದು. ಒಂದುವೇಳೆ ಜೊತೆಯಲ್ಲಿ
ಹೋಗಬೇಕೆಂದರೆ ಸಮಾನರಾಗಲೇಬೇಕಾಗುತ್ತದೆಯಲ್ಲವೆ. ಯಾವ ಗಾದೆ ಮಾತಿದೆ? ಕೈಯಲ್ಲಿ ಕೈಯಿರಲಿ,
ಜೊತೆಯಲ್ಲಿ ಜೊತೆಯಿರಲಿ. ಅಂದಾಗ ಕೈಯಲ್ಲಿ ಕೈ ಅರ್ಥಾತ್ ಸಮಾನ. ಹೇಳಿ, ದಾದಿಯರೇ ತಯಾರಾಗಿ
ಬಿಡುವಿರಾ? ದಾದಿಯರೇ ಹೇಳಿರಿ, ಕೈಯೆತ್ತಿರಿ. ದಾದಾರವರೇ ಕೈಯೆತ್ತಿರಿ. ತಮಗೆ ಹಿರಿಯ ದಾದಾ ಎಂದು
ಹೇಳಲಾಗುತ್ತದೆಯಲ್ಲವೆ ಅಂದಮೇಲೆ ದಾದಿಯರು ದಾದಾರವರು ಹೇಳಿರಿ, ಇದಕ್ಕೆ ದಿನಾಂಕವೇನು? (ಈಗಿಲ್ಲದಿದ್ದರೆ
ಇನ್ನೆಂದಿಗೂ ಇಲ್ಲ) ಈಗಿಲ್ಲದಿದ್ದರೆ ಎಂದಿಗೂ ಇಲ್ಲ ಎಂಬುದರ ಅರ್ಥವೇನಾಯಿತು? ಈಗ
ತಯಾರಿದ್ದೀರಲ್ಲವೆ? ಉತ್ತರವನ್ನಂತೂ ಚೆನ್ನಾಗಿ ಕೊಟ್ಟಿರಿ. ದಾದಿಯರೇ? ಮುಕ್ತಾಯವಾಗಲೇಬೇಕಾಗಿದೆ,
ಪ್ರತಿಯೋಬ್ಬರೂ ತಮ್ಮನ್ನು ಜವಾಬ್ದಾರನೆಂದು ತಿಳಿಯಿರಿ. ಹಿರಿಯರು, ಕಿರಿಯರು, ಇದರಲ್ಲಿ ತಮ್ಮನ್ನು
ಕಿರಿಯರೆಂದು ತಿಳಿಯಬೇಡಿ. 7 ದಿನದ ಮಗುವೂ ಸಹ ಇದರಲ್ಲಿ ಜವಾಬ್ದಾರನಾಗಿದ್ದಾರೆ. ಏಕೆ? ಜೊತೆ
ಹೋಗಬೇಕಲ್ಲವೆ. ತಂದೆಯು ಬೇಕೆಂದರೆ ಒಬ್ಬರೇ ಹೋಗಿ ಬಿಡಬಹುದು ಆದರೆ ತಂದೆಯು ಹೋಗುವುದಿಲ್ಲ. ಜೊತೆ
ಹೋಗಬೇಕಾಗಿದೆ. ತಂದೆಯದೂ ಪ್ರತಿಜ್ಞೆಯಿದೆ, ತಾವು ಮಕ್ಕಳದೂ ಪ್ರತಿಜ್ಞೆಯಿದೆ, ಪ್ರತಿಜ್ಞೆಯನ್ನಂತೂ
ನಿಭಾಯಿಸಬೇಕಲ್ಲವೆ.
ನಾಲ್ಕಾರು ಕಡೆಯ ಪತ್ರ,
ನೆನಪಿನ ಪತ್ರ, ಈ-ಮೇಲ್, ಪೋನ್, ನಾಲ್ಕಾರು ಕಡೆಯಿಂದ ಬಹಳ-ಬಹಳ ಬಂದಿವೆ. ಇಲ್ಲಿ ಮಧುಬನಕ್ಕೂ
ತಲುಪಿದೆ ಮತ್ತು ವತನದಲ್ಲಿಯೂ ತಲುಪಿದೆ. ಇಂದಿನ ದಿನ ಯಾರು ಬಂಧನದ ಮಾತೆಯರಿದ್ದಾರೆಯೋ ಅವರ ಬಹಳ
ಸ್ನೇಹ ತುಂಬಿದ ಮನಸ್ಸಿನ ನೆನಪುಗಳು ಬಾಪ್ದಾದಾರವರ ಬಳಿ ತಲುಪಿ ಬಿಟ್ಟಿತು. ಬಾಪ್ದಾದಾ ಇಂತಹ
ಸ್ನೇಹಿ ಮಕ್ಕಳನ್ನು ಬಹಳ ನೆನಪು ಮಾಡುತ್ತೇವೆ ಮತ್ತು ಆಶೀರ್ವಾದಗಳನ್ನೂ ಕೊಡುತ್ತೇವೆ. ಇತ್ತೀಚೆಗೆ
ಬಾಪ್ದಾದಾ ನೋಡುತ್ತಿದ್ದೇವೆ, ಎಲ್ಲರೂ ಬಹಳ ಖುಷಿ-ಖುಷಿಯಿಂದ ದೂರ ಕುಳಿತಿದ್ದರೂ ಸಮೀಪದಲ್ಲಿ
ಅನುಭವ ಮಾಡುತ್ತಿದ್ದಾರೆ ಆದರೆ ಮಧುಬನದಲ್ಲಿ ಸನ್ಮುಖದಲ್ಲಿ ಬರುವುದು, ತಮ್ಮ ಜೋಳಿಗೆಯನ್ನು
ತುಂಬಿಸಿಕೊಳ್ಳುವುದು, ಎಷ್ಟು ದೊಡ್ಡ ಪರಿವಾರದೊಂದಿಗೆ ಮಿಲನ ಮಾಡುವುದು, ಈ ಪರಿವಾರವು
ಕಡಿಮೆಯಿಲ್ಲ. ಯಾವುದೆಲ್ಲಾ ರೀತಿಯಿಂದ ನೋಡಿ ಬಿಟ್ಟಿರಿ, ಆದರೆ ಸನ್ಮುಖ ಪರಿವಾರವನ್ನು ನೋಡಿ ಎಷ್ಟು
ಖುಷಿಯಾಗುತ್ತದೆ ಏಕೆಂದರೆ 5000 ವರ್ಷಗಳ ನಂತರ ಮಿಲನ ಮಾಡಿದ್ದೀರಿ. ಅಂದಮೇಲೆ ಆ ಅನುಭವವೇ
ಬೇರೆಯಾಗಿದೆ ಆದರೆ ಮಧುಬನ ನಿವಾಸಿಗಳಾಗುವುದು ಈ ಸುವರ್ಣಾವಕಾಶವು ಬಹಳ ಸಹಯೋಗ ಕೊಡುತ್ತದೆ. ಎಲ್ಲರೂ
ಅನುಭವ ಮಾಡುತ್ತೀರಿ, ಆದರೆ ಬಾಪ್ದಾದಾರವರಿಗೆ ಖುಷಿಯೇನೆಂದರೆ ಎಲ್ಲರಿಗೆ ಮುರುಳಿಯೊಂದಿಗೆ
ಪ್ರೀತಿಯಿದೆ ಮತ್ತು ಮುರುಳಿಯೊಂದಿಗೆ ಪ್ರೀತಿಯೆಂದರೆ ಮುರುಳೀಧರನೊಂದಿಗೆ ಪ್ರೀತಿ.
ಮುರುಳೀಧರನೊಂದಿಗೆ ಪ್ರೀತಿಯಿದೆ ಆದರೆ ಮುರುಳಿಯನ್ನು ಕೆಲಕೆಲವೊಮ್ಮೆ ಕೇಳುತ್ತೇವೆ ಎಂದು ಯಾರಾದರೂ
ಹೇಳುವುದಾದರೆ ಬಾಪ್ದಾದಾ ಅವರ ಪ್ರೀತಿಯನ್ನು ಪ್ರೀತಿಯೆಂದು ತಿಳಿದುಕೊಳ್ಳುವುದಿಲ್ಲ. ಪ್ರೀತಿಯನ್ನು
ನಿಭಾಯಿಸುವುದೇ ಬೇರೆಯಾಗಿದೆ, ಪ್ರೀತಿ ಮಾಡುವುದೇ ಬೇರೆಯಾಗಿದೆ. ಯಾರಿಗೆ ಮುರುಳಿಯೊಂದಿಗೆ
ಪ್ರೀತಿಯಿದೆಯೋ ಅವರು ಪ್ರೀತಿಯನ್ನು ನಿಭಾಯಿಸುವವರಾಗಿದ್ದಾರೆ. ಯಾರಿಗೆ ಮುರುಳಿಯೊಂದಿಗೆ
ಪ್ರೀತಿಯಿಲ್ಲವೋ ಅವರು ಕೇವಲ ಪ್ರೀತಿ ಮಾಡುವವರ ಪಟ್ಟಿಯಲ್ಲಿದ್ದಾರೆ ಆದರೆ ನಿಭಾಯಿಸುವವರಲ್ಲ.
ಮಧುಬನದಲ್ಲಿ ಮುರುಳಿ ನುಡಿಯಿತು ಎಂದು ಮಧುಬನದ ಗಾಯನವಿದೆ. ಮಧುಬನದ ಧರಣಿಗೇ ಮಹತ್ವಿಕೆಯಿದೆ.
ಒಳ್ಳೆಯದು.
ನಾಲ್ಕಾರು ಕಡೆಯ ಸ್ನೇಹಿ
ಮಕ್ಕಳಿಗೆ ಲವಲೀ ಮತ್ತು ಲವಲೀನ ಎರಡೂ ಪ್ರಕಾರದ ಮಕ್ಕಳಿಗೆ ಸದಾ ತಂದೆಯ ಶ್ರೀಮತದಂತೆ ಪ್ರತೀ
ಹೆಜ್ಜೆಯಲ್ಲಿ ಪದಮದಷ್ಟು ಜಮಾ ಮಾಡಿಕೊಳ್ಳುವಂತಹ ಜ್ಞಾನಪೂರ್ಣ, ಶಕ್ತಿಪೂರ್ಣ ಮಕ್ಕಳಿಗೆ, ಸದಾ
ಸ್ನೇಹಿಗಳು ಮತ್ತು ಸ್ವಮಾನಧಾರಿಗಳು, ಸನ್ಮಾನಧಾರಿಗಳಾದ ಸದಾ ತಂದೆಯ ಶ್ರೀಮತವನ್ನು ಪಾಲನೆ
ಮಾಡುವಂತಹ ವಿಜಯೀ ಮಕ್ಕಳಿಗೆ, ಸದಾ ತಂದೆಯ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುವಂತಹ ಸಹಜಯೋಗಿ
ಮಕ್ಕಳಿಗೆ ಬಾಪ್ದಾದಾರವರ ಜೊತೆಗೆ ಇಂದು ವತನದಲ್ಲಿ ಅಡ್ವಾನ್ಸ್ ಪಾರ್ಟಿಯ ಮಕ್ಕಳೂ ಸಹ ಒಬ್ಬೊಬ್ಬರೂ
ಇದನ್ನೇ ಹೇಳಿದ್ದಾರೆ, ನಮ್ಮ ಕಡೆಯಿಂದಲೂ ಎಲ್ಲರಿಗೆ ನಾಲ್ಕಾರು ಕಡೆಯ ಮಕ್ಕಳಿಗೆ ನಮ್ಮ
ನೆನಪು-ಪ್ರೀತಿಯನ್ನು ತಿಳಿಸಿರಿ ಮತ್ತು ನಾವು ತಮ್ಮನ್ನು ಕಾಯುತ್ತಿದ್ದೇವೆ, ತಾವು ಬೇಗ-ಬೇಗ
ತಯಾರಾಗಿರಿ ಎಂಬ ಸಂದೇಶವನ್ನೂ ತಿಳಿಸಿರಿ. ವಿಶೇಷವಾಗಿ ತಮ್ಮೆಲ್ಲರ ಪ್ರಿಯಮಾತೇಶ್ವರಿ, ದೀದಿ,
ವಿಶ್ವ ಕಿಶೋರ್ ದಾದಾ ಮತ್ತು ಯಾರೆಲ್ಲಾ ಜೊತೆಗಾರರು ಹೋಗಿದ್ದಾರೆಯೋ ಅವರೆಲ್ಲರೂ ತಮ್ಮೆಲ್ಲರಿಗೆ
ನೆನಪು-ಪ್ರೀತಿಯನ್ನು ತಿಳಿಸಿದ್ದಾರೆ ಮತ್ತು ಜೊತೆ ಜೊತೆಗೆ ತಮ್ಮೆಲ್ಲರ ಮಧುರ ತಾಯಿಯವರೂ ಇದನ್ನೇ
ಹೇಳಿದ್ದಾರೆ- ಈಗ ವಿಜಯಿಗಳಾಗಿ ದುಃಖ, ನೋವುಗಳನ್ನು ದೂರ ಮಾಡಿ ಬೇಗ-ಬೇಗನೆ ಮುಕ್ತಿಧಾಮದ
ಬಾಗಿಲನ್ನು ತೆರೆಯುವುದಕ್ಕಾಗಿ ತಂದೆಯ ಜೊತೆಗಾರರಾಗಿ ಬಿಡಿ. ಬ್ರಹ್ಮಾ ತಂದೆಯು, ಯಾರು ಸಾಕಾರದಲ್ಲಿ
ತಂದೆಯನ್ನು ನೋಡಿಲ್ಲವೋ ಅವರೆಲ್ಲರಿಗೆ ವಿಶೇಷವಾಗಿ ಬ್ರಹ್ಮಾ ತಂದೆಯೂ ಸಹ ಬಹಳ ಹೃದಯದಿಂದ
ನೆನಪು-ಪ್ರೀತಿಯನ್ನು ಕೊಡುತ್ತಿದ್ದಾರೆ. ನೆನಪು-ಪ್ರೀತಿ ಹಾಗೂ ನಮಸ್ತೆ.
ವರದಾನ:
ಲೈನ್ ಕ್ಲಿಯರ್ನ
ಆಧಾರದ ಮೇಲೆ ನಂಬರ್ ಒನ್ನಲ್ಲಿ ಪಾಸ್ ಆಗುವಂತಹ ಎವರೆಡಿ ಭವ.
ಸದಾ ಎವರೆಡಿಯಾಗಿರುವುದು
- ಇದು ಬ್ರಾಹ್ಮಣ ಜೀವನದ ವಿಶೇಷತೆಯಾಗಿದೆ. ತಮ್ಮ ಬುದ್ಧಿಯ ಲೈನ್ ಈ ರೀತಿ ಕ್ಲಿಯರ್ ಆಗಿರಲಿ
ಯಾವಾಗ ತಂದೆಯಿಂದ ಸೂಚನೆ ಸಿಕ್ಕಿದೊಡನೆ - ಎವರೆಡಿ. ಆ ಸಮಯದಲ್ಲಿ ಏನೂ ಯೋಚನೆ ಮಾಡುವ ಅವಶ್ಯಕತೆ
ಇರಬಾರದು. ಇದ್ದಕ್ಕಿದ್ದಂತೆ ಒಂದೇ ಪ್ರಶ್ನೆ ಉದ್ಭವವಾಗುತ್ತೆ-ಆರ್ಡರ್ ಆಗುತ್ತೆ-ಇಲ್ಲೇ ಕುಳಿತಿರು,
ಇಲ್ಲಿ ತಲುಪಿ ಬಿಡು ಆ ಸಮಯದಲ್ಲಿ ಯಾವುದೇ ಮಾತು ಅಥವಾ ಸಂಬಂಧವೂ ನೆನಪಿಗೆ ಬರಬಾರದು ಆಗ ನಂಬರ್ ಒನ್
ನಲ್ಲಿ ಪಾಸ್ ಆಗಲು ಸಾಧ್ಯ. ಆದರೆ ಇದೆಲ್ಲವೂ ಇದ್ದಕ್ಕಿದ್ದಂತೆಯ ಪೇಪರ್ ಆಗುವುದು-ಆದ್ದರಿಂದ
ಎವರೆಡಿಯಾಗಿರಿ.
ಸ್ಲೋಗನ್:
ಮನಸ್ಸನ್ನು
ಶಕ್ತಿಶಾಲಿ ಮಾಡಿಕೊಳ್ಳಲು ಆತ್ಮಕ್ಕೆ ಈಶ್ವರೀಯ ಸ್ಮತಿ ಮತ್ತು ಶಕ್ತಿಯ ಭೋಜನವನ್ನು ಕೊಡಿ.
ಅವ್ಯಕ್ತ ಸೂಚನೆ:- ಈಗ
ಲಗನ್ನಿನ (ಪ್ರೀತಿಯ) ಅಗ್ನಿಯನ್ನು ಪ್ರಜ್ವಲಿತಗೋಳಿಸಿ ಯೋಗವನ್ನು ಜ್ವಾಲಾರೂಪವನ್ನಾಗಿ ಮಾಡಿ.
ಕೆಲವು ಮಕ್ಕಳು
ಹೇಳುತ್ತಾರೆ ಯಾವಾಗ ಯೋಗದಲ್ಲಿ ಕುಳಿತುಕೊಂಡಾಗ ಆತ್ಮ ಅಭಿಮಾನಿಯಾಗುವ ಬದಲು ಸೇವೆ ನೆನಪಿಗೆ
ಬರುತ್ತದೆ. ಆದರೆ ಈ ರೀತಿಯಾಗಬಾರದು ಏಕೆಂದರೆ ಅಂತಿಮ ಸಮಯದಲ್ಲಿ ಒಂದುವೇಳೆ ಅಶರೀರಿಯಾಗುವ ಬದಲು
ಸೇವೆಯ ಸಂಕಲ್ಪ ನಡೆದರೆ ಸೆಕೆಂಡಿನ ಪರೀಕ್ಷೆಯಲ್ಲಿ ಫೇಲ್ ಆಗಿ ಬಿಡುತ್ತಾರೆ. ಆ ಸಮಯ ತಂದೆಯ ವಿನಃ,
ನಿರಾಕಾರಿ, ನಿರ್ವಿಕಾರಿ, ನಿರಹಂಕಾರಿ – ಮತ್ತ್ಯಾವುದೇ ನೆನಪಿರಬಾರದು. ಆದರೂ ಸಹ ಸೇವೆಯಲ್ಲಿ
ಸಾಕಾರದಲ್ಲಿ ಬಂದು ಬಿಡುತ್ತೇವೆ ಅದಕ್ಕಾಗಿ ಯಾವ ಸಮಯದಲ್ಲಿ ಯಾವ ಸ್ಥಿತಿ ಬೇಕೋ ಆ
ಸ್ಥಿತಿಯಲ್ಲಿಲ್ಲವೆಂದರೆ ಮೋಸವಾಗುತ್ತದೆ.