14.10.25         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ಈ ಪುರುಷೋತ್ತಮ ಸಂಗಮಯುಗವು ಕಲ್ಯಾಣಕಾರಿಯಾಗಿದೆ, ಇದರಲ್ಲಿಯೇ ಪರಿವರ್ತನೆಯಾಗುತ್ತದೆ, ನೀವು ಕನಿಷ್ಟರಿಂದ ಉತ್ತಮ ಪುರುಷರಾಗುತ್ತೀರಿ"

ಪ್ರಶ್ನೆ:
ಈ ಜ್ಞಾನ ಮಾರ್ಗದಲ್ಲಿ ಯಾವ ಮಾತನ್ನು ಆಲೋಚಿಸುವ ಹಾಗೂ ಹೇಳುವುದರಿಂದ ಎಂದೂ ಉನ್ನತಿಯಾಗಲು ಸಾಧ್ಯವಿಲ್ಲ?

ಉತ್ತರ:
ಡ್ರಾಮಾದಲ್ಲಿದ್ದರೆ ಪುರುಷಾರ್ಥ ಮಾಡುತ್ತೇನೆ, ಡ್ರಾಮಾ ಮಾಡಿಸಿದರೆ ಮಾಡುತ್ತೇನೆ. ಇದನ್ನು ಆಲೋಚಿಸುವ ಹಾಗೂ ಹೇಳುವವರ ಉನ್ನತಿಯು ಎಂದೂ ಆಗಲು ಸಾಧ್ಯವಿಲ್ಲ. ಇದನ್ನು ಹೇಳುವುದೇ ತಪ್ಪಾಗಿದೆ. ನೀವು ತಿಳಿದುಕೊಂಡಿದ್ದೀರಿ - ನಾವೀಗ ಯಾವ ಪುರುಷಾರ್ಥವನ್ನು ಮಾಡುತ್ತಿದ್ದೇವೆ, ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ, ಪುರುಷಾರ್ಥ ಮಾಡಬೇಕಾಗಿದೆ.

ಗೀತೆ:
ಇದು ದೀಪ ಮತ್ತು ಬಿರುಗಾಳಿಯ ಕಥೆಯಾಗಿದೆ.........

ಓಂ ಶಾಂತಿ.
ಇದು ಕಲಿಯುಗೀ ಮನುಷ್ಯರ ಗೀತೆಯಾಗಿದೆ, ಆದರೆ ಇದರ ಅರ್ಥವನ್ನು ಅವರು ತಿಳಿದುಕೊಂಡಿಲ್ಲ, ಇದನ್ನು ನೀವೇ ತಿಳಿದುಕೊಂಡಿದ್ದೀರಿ. ನೀವೀಗ ಪುರುಷೋತ್ತಮ ಸಂಗಮಯುಗಿಗಳು ಆಗಿದ್ದೀರಿ. ಸಂಗಮಯುಗದ ಜೊತೆಗೆ ಪುರುಷೋತ್ತಮ ಎಂಬುದನ್ನೂ ಬರೆಯಬೇಕು. ಮಕ್ಕಳಿಗೆ ಜ್ಞಾನ ಬಿಂದುಗಳು, ನೆನಪಿಲ್ಲದೇ ಇರುವ ಕಾರಣ ಇಂತಿಂತಹ ಶಬ್ಧಗಳು ಬರೆಯುವುದನ್ನು ಮರೆತು ಹೋಗುತ್ತಾರೆ. ಇದು ಮುಖ್ಯವಾಗಿದೆ - ಇದರ ಅರ್ಥವನ್ನು ನೀವೇ ತಿಳಿದುಕೊಳ್ಳುತ್ತೀರಿ. ಪುರುಷೋತ್ತಮ ತಿಂಗಳೂ ಇದೆ, ಅದೇರೀತಿ ಇದು ಪುರುಷೋತ್ತಮ ಸಂಗಮಯುಗವಾಗಿದೆ. ಈ ಸಂಗಮವೂ ಸಹ ಒಂದು ಹಬ್ಬವಾಗಿದೆ, ಈ ಹಬ್ಬವು ಎಲ್ಲದಕ್ಕಿಂತ ಶ್ರೇಷ್ಠವಾಗಿದೆ. ನಾವೀಗ ಪುರುಷೋತ್ತಮರಾಗುತ್ತಿದ್ದೇವೆ ಎಂದು ನಿಮಗೆ ತಿಳಿದಿದೆ. ಉತ್ತಮರಿಗಿಂತ ಉತ್ತಮ ಪುರುಷ, ಸಾಹುಕಾರರಿಗಿಂತಲೂ ನಂಬರ್ವನ್ ಸಾಹುಕಾರರೆಂದು ಲಕ್ಷ್ಮೀ-ನಾರಾಯಣರಿಗೆ ಹೇಳುತ್ತಾರೆ ಮತ್ತೆ ಶಾಸ್ತ್ರಗಳಲ್ಲಿ ಮಹಾಪ್ರಳಯವಾಯಿತು, ನಂಬರ್ವನ್ ಶ್ರೀಕೃಷ್ಣನು ಆಲದ ಎಲೆಯ ಮೇಲೆ ತೇಲಿ ಬಂದನೆಂದು ತೋರಿಸುತ್ತಾರೆ. ಈಗ ನೀವೇನು ಹೇಳುವಿರಿ? ನಂಬರ್ವನ್ ಈ ಶ್ರೀಕೃಷ್ಣನಾಗಿದ್ದಾನೆ, ಇವನಿಗೇ ಶ್ಯಾಮ ಸುಂದರನೆಂದು ಹೇಳುತ್ತಾರೆ. ಬೆರಳನ್ನು ಚೀಪುತ್ತಾ ಬಂದನೆಂದು ತೋರಿಸುತ್ತಾರೆ. ವಾಸ್ತವದಲ್ಲಿ ಮಗುವು ಗರ್ಭದಲ್ಲಿಯೇ ಇರುತ್ತದೆ ಅಂದಾಗ ಮೊಟ್ಟ ಮೊದಲು ಜ್ಞಾನ ಸಾಗರನಿಂದ ಹೊರಬಂದ ಉತ್ತಮ ಪುರುಷನು ಶ್ರೀಕೃಷ್ಣನಾಗಿದ್ದಾನೆ. ಜ್ಞಾನ ಸಾಗರನಿಂದ ಸ್ವರ್ಗದ ಸ್ಥಾಪನೆಯಾಗುತ್ತದೆ. ಅದರಲ್ಲಿ ನಂಬರ್ವನ್ ಪುರುಷೋತ್ತಮನು ಈ ಶ್ರೀಕೃಷ್ಣನಾಗಿದ್ದಾನೆ ಮತ್ತು ತಂದೆಯು ಜ್ಞಾನ ಸಾಗರನಾಗಿದ್ದಾರೆ, ನೀರಿನ ಸಾಗರವಲ್ಲ. ಪ್ರಳಯವೂ ಆಗುವುದಿಲ್ಲ, ಕೆಲವು ಮಕ್ಕಳು ಹೊಸಬರು ಬರುತ್ತಾರೆಂದರೆ ಮತ್ತೆ ಹಳೆಯ ಮಾತುಗಳನ್ನೇ ತಂದೆಯು ಪುನರಾವರ್ತಿಸಬೇಕಾಗುತ್ತದೆ. ಸತ್ಯ, ತ್ರೇತಾ, ದ್ವಾಪರ, ಕಲಿಯುಗ... ಈ ನಾಲ್ಕು ಯುಗಗಳಿವೆ, ಐದನೇ ಯುಗವು ಈ ಪುರುಷೋತ್ತಮ ಸಂಗಮ ಯುಗವಾಗಿದೆ. ಈ ಯುಗದಲ್ಲಿ ಮನುಷ್ಯರು ಪರಿವರ್ತನೆಯಾಗುತ್ತಾರೆ, ಕನಿಷ್ಠರಿಂದ ಸರ್ವೋತ್ತಮರಾಗುತ್ತಾರೆ. ಹೇಗೆ ಶಿವ ತಂದೆಗೂ ಸಹ ಪುರುಷೋತ್ತಮ ಅಥವಾ ಸರ್ವೋತ್ತಮನೆಂದು ಹೇಳುತ್ತಾರಲ್ಲವೆ. ಅವರು ಪರಮ ಆತ್ಮ ಅಂದರೆ ಪರಮಾತ್ಮನಾಗಿದ್ದಾರೆ, ಮತ್ತೆ ಪುರುಷರಲ್ಲಿ ಉತ್ತಮರು ಈ ಲಕ್ಷ್ಮೀ-ನಾರಾಯಣರಾಗಿದ್ದಾರೆ, ಅವರನ್ನು ಆ ರೀತಿ ಮಾಡಿದವರು ಯಾರು? ಇದನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಮಕ್ಕಳಿಗೂ ಸಹ ಅರ್ಥವಾಗಿದೆ - ಈ ಸಮಯದಲ್ಲಿ ನಾವು ಇವರಂತೆ ಆಗಲು ಪುರುಷಾರ್ಥ ಮಾಡುತ್ತಿದ್ದೇವೆ. ಪುರುಷಾರ್ಥವೇನೂ ದೊಡ್ಡದಿಲ್ಲ, ಬಹಳ ಸಹಜವಾಗಿದೆ. ಕಲಿಯುಗದವರೂ ಸಹ ಅಬಲೆಯರು, ಕುಬ್ಜೆಯರಿದ್ದಾರೆ. ಯಾರು ಸ್ವಲ್ಪವೂ ವಿದ್ಯಾವಂತರಲ್ಲ, ಅವರಿಗಾಗಿ ತಂದೆಯು ಎಷ್ಟು ಸಹಜವಾಗಿ ತಿಳಿಸಿಕೊಡುತ್ತಾರೆ. ಅಹಮದಾಬಾದಿನಲ್ಲಿ ಒಬ್ಬ ಸಾಧು ಹೇಳುತ್ತಿದ್ದರು - ನಾನು ಏನನ್ನೂ ತಿನ್ನುವುದಿಲ್ಲ, ಕುಡಿಯುವುದಿಲ್ಲವೆಂದು. ಒಳ್ಳೆಯದು, ಪೂರ್ಣಾಯಸ್ಸು ತಿನ್ನುವುದಿಲ್ಲ, ಕುಡಿಯುವುದಿಲ್ಲ ಎಂದರೆ ಮತ್ತೇನು? ಪ್ರಾಪ್ತಿಯಂತೂ ಇಲ್ಲವಲ್ಲವೆ. ವೃಕ್ಷಕ್ಕೂ ಸಹ ಆಹಾರವು ಸಿಗುತ್ತದೆಯಲ್ಲವೆ. ನೀರು, ಗೊಬ್ಬರ ಇತ್ಯಾದಿ ಸ್ವಾಭಾವಿಕವಾಗಿ ಅದಕ್ಕೆ ಸಿಗುತ್ತದೆ ಅದರಿಂದ ವೃಕ್ಷವು ವೃದ್ಧಿ ಹೊಂದುತ್ತದೆ. ಹಾಗೆಯೇ ಅವರೂ ಸಹ ಯಾವುದೋ ರಿದ್ಧಿ ಸಿದ್ಧಿಯನ್ನು ಪಡೆದಿರಬೇಕು. ಹೀಗೆ ಅನೇಕರಿರುತ್ತಾರೆ, ಬೆಂಕಿಯಲ್ಲಿ-ನೀರಿನಲ್ಲಿ ಹೊರಟು ಹೋಗುತ್ತಾರೆ. ಇದರಿಂದ ಭಲೆ ಲಾಭವಾದರೂ ಏನು! ನಿಮ್ಮ ಈ ಸಹಜ ರಾಜಯೋಗದಿಂದ ಜನ್ಮ-ಜನ್ಮಾಂತರದ ಲಾಭವಿದೆ, ನಿಮ್ಮನ್ನು ಜನ್ಮ-ಜನ್ಮಾಂತರಕ್ಕಾಗಿ ತಂದೆಯು ದುಃಖಿಯಿಂದ ಸುಖಿಯನ್ನಾಗಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಡ್ರಾಮಾನುಸಾರ ನಾನು ನಿಮಗೆ ಗುಹ್ಯ ಮಾತುಗಳನ್ನು ತಿಳಿಸುತ್ತೇನೆ.

ಹೇಗೆ ತಂದೆಯು ತಿಳಿಸುತ್ತಾರೆ - ಶಿವ ಮತ್ತು ಶಂಕರನನ್ನು ಏಕೆ ಸೇರಿಸಿದ್ದೀರಿ? ಈ ಸೃಷ್ಟಿಯಲ್ಲಿ ಶಂಕರನ ಪಾತ್ರವೇ ಇಲ್ಲ. ಶಿವ-ಬ್ರಹ್ಮಾ ಮತ್ತು ವಿಷ್ಣುವಿನ ಪಾತ್ರವಿದೆ. ಬ್ರಹ್ಮಾ ಮತ್ತು ವಿಷ್ಣುವಿನ ಆಲ್ರೌಂಡ್ ಪಾತ್ರವಿದೆ. ಶಿವ ತಂದೆಯದೂ ಸಹ ಈ ಸಮಯದಲ್ಲಿ ಪಾತ್ರವಿದೆ, ಅವರು ಬಂದು ಜ್ಞಾನವನ್ನು ಕೊಡುತ್ತಾರೆ ನಂತರ ನಿರ್ವಾಣಧಾಮಕ್ಕೆ ಹೊರಟು ಹೋಗುತ್ತಾರೆ. ಮಕ್ಕಳಿಗೆ ಆಸ್ತಿಯನ್ನು ಕೊಟ್ಟು ತಾನು ವಾನಪ್ರಸ್ಥದಲ್ಲಿ ಹೊರಟು ಹೋಗುತ್ತಾರೆ. ವಾನಪ್ರಸ್ಥಿಗಳಾಗುವುದು ಎಂದರೆ ಗುರುವಿನ ಮೂಲಕ ವಾಣಿಯಿಂದ ದೂರ ಹೋಗುವ ಪುರುಷಾರ್ಥ ಮಾಡುವುದಾಗಿದೆ. ಆದರೆ ಹಿಂತಿರುಗಿ ಯಾರೂ ಹೋಗಲು ಸಾಧ್ಯವಿಲ್ಲ ಏಕೆಂದರೆ ವಿಕಾರೀ, ಭ್ರಷ್ಟಾಚಾರಿಗಳಾಗಿದ್ದಾರೆ. ಎಲ್ಲರದೂ ವಿಕಾರದಿಂದ ಜನ್ಮವಾಗುತ್ತದೆ, ಈ ಲಕ್ಷ್ಮೀ-ನಾರಾಯಣರು ನಿರ್ವಿಕಾರಿಯಾಗಿದ್ದಾರೆ. ಅವರಿಗೆ ವಿಕಾರದಿಂದ ಜನ್ಮವಾಗುವುದಿಲ್ಲ ಆದ್ದರಿಂದ ಶ್ರೇಷ್ಠಾಚಾರಿಗಳೆಂದು ಕರೆಸಿಕೊಳ್ಳುತ್ತಾರೆ. ಕುಮಾರಿಯರೂ ಸಹ ನಿರ್ವಿಕಾರಿಯಾಗಿರುತ್ತಾರೆ ಆದ್ದರಿಂದ ಅವರ ಮುಂದೆ ಎಲ್ಲರೂ ತಲೆ ಬಾಗುತ್ತಾರೆ. ತಂದೆಯು ತಿಳಿಸಿದರು - ಇಲ್ಲಿ ಶಂಕರನ ಪಾತ್ರವೇ ಇಲ್ಲ ಬಾಕಿ ಪ್ರಜಾಪಿತ ಬ್ರಹ್ಮಾನಂತೂ ಅವಶ್ಯವಾಗಿ ಪ್ರಜೆಗಳ ಪಿತನಾದರಲ್ಲವೆ. ಶಿವ ತಂದೆಗೆ ಆತ್ಮಗಳ ಪಿತನೆಂದು ಹೇಳುತ್ತಾರೆ ಅವರು ಅವಿನಾಶಿ ಪಿತನಾಗಿದ್ದಾರೆ. ಈ ಗುಹ್ಯ ಮಾತುಗಳನ್ನು ಚೆನ್ನಾಗಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ಯಾರು ದೊಡ್ಡ-ದೊಡ್ಡ ತತ್ವ ಜ್ಞಾನಿಗಳಿರುತ್ತಾರೆಯೋ ಅವರಿಗೆ ಬಹಳ ಬಿರುದುಗಳು ಸಿಗುತ್ತವೆ. ಶ್ರೀ ಶ್ರೀ 108 ಜಗದ್ಗುರು ಎಂಬ ಬಿರುದುಗಳೂ ಸಹ ವಿದ್ವಾಂಸರಿಗೆ ಸಿಗುತ್ತದೆ. ಬನಾರಸ್ನ ಕಾಲೇಜಿನಿಂದ ತೇರ್ಗಡೆ ಮಾಡಿ ಬಿರುದುಗಳನ್ನು ತೆಗೆದುಕೊಂಡು ಬರುತ್ತಾರೆ. ತಂದೆಯು ಗುಪ್ತಾಜಿಯವರನ್ನು ಏತಕ್ಕಾಗಿ ಬನಾರಸ್ಗೆ ಕಳುಹಿಸಿದರೆಂದರೆ ಅವರಿಗೆ ಹೋಗಿ ತಿಳಿಸಿ - ತಂದೆಯ ಬಿರುದುಗಳನ್ನು ತಮಗೇಕೆ ಇಟ್ಟುಕೊಂಡು ಕುಳಿತಿದ್ದೀರಿ? ತಂದೆಗೆ ಶ್ರೀ ಶ್ರೀ 108 ಜಗದ್ಗುರು ಎಂದು ಹೇಳಲಾಗುತ್ತದೆ. ಮಾಲೆಯೇ 108ರದಾಗುತ್ತದೆ. ಅಷ್ಟ ರತ್ನಗಳೆಂದು ಗಾಯನವಾಗುತ್ತದೆ. ಅಷ್ಟರತ್ನಗಳು ಗೌರವಾನ್ವಿತವಾಗಿ ತೇರ್ಗಡೆಯಾಗುತ್ತಾರೆ ಆದ್ದರಿಂದ ಮಾಲೆಯ ರೂಪದಲ್ಲಿ ಅವರನ್ನು ಜಪಿಸುತ್ತಾರೆ. ಮತ್ತೆ ಅವರಿಗಿಂತ ಕಡಿಮೆ 108 ಮಣಿಗಳ ಪೂಜೆ ಮಾಡುತ್ತಾರೆ. ಯಜ್ಞವನ್ನು ರಚಿಸಿದಾಗ ಕೆಲವರು ಸಾವಿರ ಸಾಲಿಗ್ರಾಮಗಳನ್ನು ಮಾಡಿಸುತ್ತಾರೆ. ಕೆಲವರು 10,000, ಕೆಲವರು 50,000, ಕೆಲವರು ಲಕ್ಷ ಸಾಲಿಗ್ರಾಮಗಳನ್ನೂ ಮಾಡಿಸುತ್ತಾರೆ ಮತ್ತು ಯಜ್ಞವನ್ನು ರಚಿಸುತ್ತಾರೆ. ಎಷ್ಟೆಷ್ಟು ಸಾಹುಕಾರರೋ ಅಷ್ಟು ಲಕ್ಷಗಳ ಸಂಖ್ಯೆಯಲ್ಲಿ ಮಾಡಿಸುತ್ತಾರೆ. ತಂದೆಯು ತಿಳಿಸಿದ್ದಾರೆ - ಮಾಲೆಯು ದೊಡ್ಡದಾಗಿದೆಯಲ್ಲವೆ. 16,108ರ ಮಾಲೆಯನ್ನು ಮಾಡುತ್ತಾರೆ. ಇದನ್ನು ನೀವು ಮಕ್ಕಳಿಗೆ ತಂದೆಯು ತಿಳಿಸುತ್ತಾರೆ - ನೀವೆಲ್ಲರೂ ತಂದೆಯ ಜೊತೆ ಈಗ ಭಾರತದ ಸೇವೆ ಮಾಡುತ್ತಿದ್ದೀರಿ, ತಂದೆಯ ಪೂಜೆಯು ನಡೆಯುತ್ತದೆಯೆಂದ ಮೇಲೆ ಮಕ್ಕಳಿಗೂ ಪೂಜೆ ನಡೆಯಬೇಕು ಆದರೆ ರುದ್ರ ಪೂಜೆಯು ಏಕೆ ನಡೆಯುತ್ತದೆಯೆಂಬುದನ್ನು ಯಾರೂ ತಿಳಿದುಕೊಂಡಿಲ್ಲ. ವಾಸ್ತವದಲ್ಲಿ ಎಲ್ಲರೂ ಶಿವ ತಂದೆಯ ಮಕ್ಕಳಾಗಿದ್ದಾರೆ, ಈ ಸಮಯದಲ್ಲಿ ಇಡೀ ಸೃಷ್ಟಿಯ ಜನಸಂಖ್ಯೆಯೆಷ್ಟಿದೆಯೋ ಇವರೆಲ್ಲಾ ಆತ್ಮಗಳು ಶಿವ ತಂದೆಯ ಮಕ್ಕಳಾದರಲ್ಲವೆ ಆದರೆ ಎಲ್ಲರೂ ತಂದೆಗೆ ಸಹಯೋಗಿಗಳಾಗುವುದಿಲ್ಲ. ಈ ಸಮಯದಲ್ಲಿ ನೀವು ಎಷ್ಟು ನೆನಪು ಮಾಡುತ್ತೀರೋ ಅಷ್ಟು ಶ್ರೇಷ್ಠರಾಗುತ್ತೀರಿ, ಪೂಜೆಗೆ ಯೋಗ್ಯರಾಗುತ್ತೀರಿ. ಈ ಮಾತನ್ನು ತಿಳಿಸಲು ಮತ್ತ್ಯಾರಿಗೂ ಈ ಶಕ್ತಿಯಿಲ್ಲ ಆದ್ದರಿಂದ ಈಶ್ವರನ ಅಂತ್ಯವನ್ನು ಯಾರೂ ತಿಳಿದುಕೊಂಡಿಲ್ಲವೆಂದು ಹೇಳಿ ಬಿಡುತ್ತಾರೆ. ತಂದೆಯೇ ಬಂದು ತಿಳಿಸುತ್ತಾರೆ, ತಂದೆಗೆ ಜ್ಞಾನ ಸಾಗರನೆಂದು ಹೇಳಲಾಗುವುದು ಅಂದಮೇಲೆ ಅವಶ್ಯವಾಗಿ ಜ್ಞಾನವನ್ನು ಕೊಡುತ್ತಾರಲ್ಲವೆ, ಪ್ರೇರಣೆಯ ಮಾತೇ ಇಲ್ಲ. ಭಗವಂತನು ಪ್ರೇರಣೆಯಿಂದ ತಿಳಿಸಿಕೊಡುವರೇ! ಅವರ ಬಳಿ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ, ಅದನ್ನು ನೀವು ಮಕ್ಕಳಿಗೆ ತಿಳಿಸುತ್ತಾರೆ. ಇದಂತೂ ನೀವು ಮಕ್ಕಳಿಗೆ ನಿಶ್ಚಯವಿದೆ. ನಿಶ್ಚಯವಿದ್ದರೂ ಸಹ ಮತ್ತೆ ತಂದೆಯನ್ನು ಮರೆತು ಹೋಗುತ್ತಾರೆ. ತಂದೆಯ ನೆನಪೇ ವಿದ್ಯೆಯ ಸಾರವಾಗಿದೆ. ನೆನಪಿನ ಯಾತ್ರೆಯಿಂದ ಕರ್ಮಾತೀತ ಸ್ಥಿತಿಯನ್ನು ಪಡೆಯುವುದರಲ್ಲಿ ಪರಿಶ್ರಮವಾಗುತ್ತದೆ. ಇದರಲ್ಲಿಯೇ ಮಾಯೆಯ ವಿಘ್ನಗಳು ಬರುತ್ತವೆ. ವಿದ್ಯೆಯಲ್ಲಿ ಇಷ್ಟೊಂದು ವಿಘ್ನಗಳು ಬರುವುದಿಲ್ಲ. ಶಂಕರನು ಕಣ್ಣು ತೆರೆದಾಗ ವಿನಾಶವಾಗುತ್ತದೆಯೆಂದು ಹೇಳುತ್ತಾರೆ. ಹೀಗೆ ಹೇಳುವುದೂ ಸಹ ಸರಿಯಲ್ಲ. ತಂದೆಯು ತಿಳಿಸುತ್ತಾರೆ - ನಾನು ವಿನಾಶ ಮಾಡಿಸುವುದಿಲ್ಲ, ಶಂಕರನೂ ಮಾಡುವುದಿಲ್ಲ. ಇದು ತಪ್ಪಾಗಿದೆ. ದೇವತೆಗಳು ಪಾಪ ಮಾಡುವರೇ! ಈಗ ಶಿವ ತಂದೆಯು ಈ ಮಾತುಗಳನ್ನು ತಿಳಿಸುತ್ತಾರೆ. ಆತ್ಮಕ್ಕೆ ಈ ಶರೀರವು ರಥವಾಗಿದೆ. ಪ್ರತಿಯೊಂದು ಆತ್ಮವು ತನ್ನ ರಥದಲ್ಲಿ ಸವಾರಿಯಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಇವರ ಶರೀರವನ್ನು ಲೋನ್ ಆಗಿ ಪಡೆಯುತ್ತೇನೆ ಆದ್ದರಿಂದ ನನ್ನದು ದಿವ್ಯ, ಅಲೌಕಿಕ ಜನ್ಮವೆಂದು ಹೇಳಲಾಗುತ್ತದೆ. ಈಗ ನಿಮ್ಮ ಬುದ್ಧಿಯಲ್ಲಿ 84 ಜನ್ಮಗಳ ಚಕ್ರವಿದೆ. ನಾವೀಗ ಮನೆಗೆ ಹೋಗುತ್ತೇವೆ ನಂತರ ಸ್ವರ್ಗದಲ್ಲಿ ಬರುತ್ತೇವೆಂದು ನಿಮಗೆ ತಿಳಿದಿದೆ. ತಂದೆಯು ಬಹಳ ಸಹಜ ಮಾಡಿ ತಿಳಿಸಿ ಕೊಡುತ್ತಾರೆ. ಇದರಲ್ಲಿ ಹೃದಯಾಘಾತವಾಗಬಾರದು. ಬಾಬಾ, ನಾವು ವಿದ್ಯಾವಂತರಲ್ಲ. ನಮಗೆ ಬಾಯಿ ತಿರುಗುವುದಿಲ್ಲವೆಂದು ಹೇಳುತ್ತಾರೆ ಆದರೆ ಈ ರೀತಿಯಂತೂ ಆಗುವುದಿಲ್ಲ. ಬಾಯಿಯು ಅವಶ್ಯವಾಗಿ ತಿರುಗುತ್ತದೆ, ಊಟ ಮಾಡುತ್ತೀರೆಂದರೆ ಬಾಯಿ ಅಲುಗಾಡುತ್ತದೆಯಲ್ಲವೆ. ನಮಗೆ ಮಾತನಾಡುವುದೇ ಬರುವುದಿಲ್ಲವೆಂದು ಹೇಳಲು ಸಾಧ್ಯವಿಲ್ಲ. ತಂದೆಯು ಬಹಳ ಸಹಜವಾಗಿ ತಿಳಿಸಿ ಕೊಟ್ಟಿದ್ದಾರೆ. ಯಾರಾದರೂ ಮೌನದಲ್ಲಿದ್ದಾಗಲೂ ಸಹ ಮೇಲೆ ಸನ್ನೆ ಮಾಡಿ ತೋರಿಸುತ್ತಾರೆ - ತಂದೆಯನ್ನು ನೆನಪು ಮಾಡಿ ಎಂದು. ದುಃಖಹರ್ತ-ಸುಖಕರ್ತ, ಅವರೊಬ್ಬರೇ ದಾತನಾಗಿದ್ದಾರೆ. ಭಕ್ತಿಮಾರ್ಗದಲ್ಲಿಯೂ ದಾತನಾಗಿದ್ದರು, ಈ ಸಮಯದಲ್ಲಿಯೂ ದಾತನಾಗಿದ್ದಾರೆ ಮತ್ತೆ ವಾನಪ್ರಸ್ಥದಲ್ಲಂತೂ ಶಾಂತಿಯೇ ಶಾಂತಿಯಿರುತ್ತದೆ, ಮಕ್ಕಳು ಶಾಂತಿಧಾಮದಲ್ಲಿರುತ್ತೀರಿ. ಪಾತ್ರದಲ್ಲಿ ನಿಗಧಿಯಾಗಿರುವುದು ಕಾರ್ಯದಲ್ಲಿ ಬರುತ್ತದೆ. ಈಗ ವಿಶ್ವವನ್ನು ಹೊಸದನ್ನಾಗಿ ಮಾಡುವುದು ನಮ್ಮ ಪಾತ್ರವಾಗಿದೆ. ಸ್ವರ್ಗದ ರಚಯಿತ ಎಂಬ ಹೆಸರು ಎಷ್ಟೊಂದು ಚೆನ್ನಾಗಿದೆ. ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ, ತಂದೆಯು ನರಕವನ್ನು ರಚಿಸುವರೇ? ಹಳೆಯ ಪ್ರಪಂಚವನ್ನು ಯಾರಾದರೂ ರಚಿಸುತ್ತಾರೆಯೇ? ಯಾವಾಗಲೂ ಹೊಸ ಮನೆಯನ್ನೇ ಕಟ್ಟಲಾಗುತ್ತದೆ, ಶಿವ ತಂದೆಯು ಬ್ರಹ್ಮಾರವರ ಮೂಲಕ ಹೊಸ ಪ್ರಪಂಚವನ್ನು ರಚಿಸುತ್ತಾರೆ. ಇವರಿಗೆ ಪಾತ್ರವು ಸಿಕ್ಕಿದೆ. ಇಲ್ಲಿ ಹಳೆಯ ಪ್ರಪಂಚದಲ್ಲಿ ಯಾರೆಲ್ಲಾ ಮನುಷ್ಯರಿದ್ದಾರೆಯೋ ಎಲ್ಲರೂ ಒಬ್ಬರು ಇನ್ನೊಬ್ಬರಿಗೆ ದುಃಖ ಕೊಡುತ್ತಿರುತ್ತಾರೆ.

ನಾವು ಶಿವ ತಂದೆಯ ಸಂತಾನರಾಗಿದ್ದೇವೆಂದು ಮಕ್ಕಳು ತಿಳಿದುಕೊಂಡಿದ್ದೀರಿ ಮತ್ತೆ ಶರೀರಧಾರಿ ಪ್ರಜಾಪಿತ ಬಹ್ಮಾನ ಮಕ್ಕಳು ದತ್ತು ಮಕ್ಕಳಾದಿರಿ. ನಮಗೆ ಜ್ಞಾನವನ್ನು ತಿಳಿಸುವವರು ರಚಯಿತ ಶಿವ ತಂದೆಯಾಗಿದ್ದಾರೆ. ಅವರು ತಮ್ಮ ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ. ದೇವಿ-ದೇವತೆಗಳಾಗುವುದೇ ನಿಮ್ಮ ಗುರಿ-ಧ್ಯೇಯವಾಗಿದೆ. ಮನುಷ್ಯರು ನೋಡಿ ಎಷ್ಟೊಂದು ಖರ್ಚು ಮಾಡಿ ಮಾರ್ಬಲ್ ಇತ್ಯಾದಿಗಳಿಂದ ಮೂರ್ತಿಗಳನ್ನು ಮಾಡಿಸುತ್ತಾರೆ. ಇದು ಈಶ್ವರೀಯ ವಿಶ್ವ ವಿದ್ಯಾಲಯ, ವರ್ಲ್ಡ್ ಯುನಿವರ್ಸಿಟಿ ಆಗಿದೆ. ಇಡೀ ವಿಶ್ವವನ್ನೇ ಪರಿವರ್ತನೆ ಮಾಡಲಾಗುತ್ತದೆ. ಮನುಷ್ಯರ ನಡುವಳಿಕೆಯೆಲ್ಲವೂ ಆಸುರಿಯಾಗಿದೆ, ಆದಿ-ಮಧ್ಯ-ಅಂತ್ಯ ದುಃಖ ಕೊಡುವಂತಹದ್ದಾಗಿದೆ. ಇದು ಈಶ್ವರೀಯ ವಿಶ್ವ ವಿದ್ಯಾಲಯವಾಗಿದೆ. ಇದೊಂದೇ ವಿಶ್ವ ವಿದ್ಯಾಲಯವನ್ನು ಈಶ್ವರನೇ ಬಂದು ತೆರೆಯುತ್ತಾರೆ. ಇದರಿಂದ ಇಡೀ ವಿಶ್ವದ ಕಲ್ಯಾಣವಾಗುತ್ತದೆ. ನೀವು ಮಕ್ಕಳಿಗೆ ಈಗ ಸರಿ-ತಪ್ಪಿನ ತಿಳುವಳಿಕೆ ಸಿಕ್ಕಿದೆ. ಮತ್ತ್ಯಾವ ಮನುಷ್ಯರೂ ಇದನ್ನು ತಿಳಿದುಕೊಂಡಿಲ್ಲ. ಸರಿ-ತಪ್ಪನ್ನು ತಿಳಿಸಿಕೊಡುವವರು ಒಬ್ಬರೇ ಇದ್ದಾರೆ, ಅವರಿಗೆ ಸತ್ಯವೆಂದು ಹೇಳುತ್ತಾರೆ. ತಂದೆಯೇ ಬಂದು ಪ್ರತಿಯೊಬ್ಬರನ್ನೂ ಸತ್ಯವಂತರನ್ನಾಗಿ ಮಾಡುತ್ತಾರೆ. ಸತ್ಯವಂತರಾಗಿದ್ದೇ ಆದರೆ ನೀವು ಮುಕ್ತಿಯಲ್ಲಿ ಹೋಗಿ ಜೀವನ್ಮುಕ್ತಿಯಲ್ಲಿ ಬರುತ್ತೀರಿ. ನಾಟಕವನ್ನೂ ಸಹ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಆದಿಯಿಂದ ಹಿಡಿದು ಅಂತ್ಯದವರೆಗೆ ಪಾತ್ರವನ್ನಭಿನಯಿಸಲು ಬರುತ್ತೀರಿ. ಈ ನಾಟಕವು ನಿಗಧಿಯಾಗುತ್ತಾ ಹೋಗುತ್ತದೆ. ಇದು ಯಾವಾಗಲೂ ಹೊಸದಾಗಿರುತ್ತದೆ. ಈ ನಾಟಕವೆಂದೂ ಹಳೆಯದಾಗುವುದಿಲ್ಲ, ಮತ್ತೆಲ್ಲಾ ನಾಟಕಗಳು ವಿನಾಶವಾಗುತ್ತವೆ. ಇದು ಬೇಹದ್ದಿನ ಅವಿನಾಶಿ ನಾಟಕವಾಗಿದೆ. ಇದರಲ್ಲಿ ಎಲ್ಲರೂ ಅವಿನಾಶಿ ಪಾತ್ರಧಾರಿಗಳಾಗಿದ್ದಾರೆ. ಅವಿನಾಶಿ ಆಟ ಹಾಗೂ ರಂಗ ಮಂಟಪವು ನೋಡಿ, ಎಷ್ಟು ದೊಡ್ಡದಾಗಿದೆ! ತಂದೆಯು ಬಂದು ಹಳೆಯ ಸೃಷ್ಟಿಯನ್ನು ಮತ್ತೆ ಹೊಸದನ್ನಾಗಿ ಮಾಡುತ್ತಾರೆ, ಅದೆಲ್ಲವೂ ನಿಮಗೆ ಸಾಕ್ಷಾತ್ಕಾರವಾಗುವುದು. ಎಷ್ಟು ಸಮೀಪ ಬರುತ್ತೀರೋ ಅಷ್ಟು ನಿಮಗೆ ಖುಷಿಯಾಗುವುದು. ಸಾಕ್ಷಾತ್ಕಾರವನ್ನು ನೋಡುತ್ತೀರಿ, ಈಗ ಪಾತ್ರವು ಪೂರ್ಣವಾಯಿತೆಂದು ಹೇಳುತ್ತೀರಿ, ನಾಟಕವು ಪುನಃ ಪುನರಾವರ್ತನೆ ಮಾಡಬೇಕಾಗಿದೆ. ನಂತರ ಹೊಸದಾಗಿ ಕಲ್ಪದ ಹಿಂದಿನಂತೆ ಪಾತ್ರವನ್ನಭಿನಯಿಸುತ್ತೀರಿ. ಇದರಲ್ಲಿ ಸ್ವಲ್ಪವೂ ಅಂತರವಾಗಲು ಸಾಧ್ಯವಿಲ್ಲ ಆದ್ದರಿಂದ ಎಷ್ಟು ಸಾಧ್ಯವೋ ನೀವು ಮಕ್ಕಳು ಶ್ರೇಷ್ಠ ಪದವಿಯನ್ನು ಪಡೆಯಬೇಕು, ಪುರುಷಾರ್ಥ ಮಾಡಬೇಕು, ತಬ್ಬಿಬ್ಬಾಗಬಾರದು. ನಾಟಕವು ಯಾವ ಪುರುಷಾರ್ಥ ಮಾಡಿಸಬೇಕೋ ಅದು ಮಾಡಿಸುವುದು ಎಂದು ಹೇಳುವುದೂ ಸಹ ತಪ್ಪಾಗಿದೆ. ನಾವಂತೂ ಪುರುಷಾರ್ಥ ಮಾಡಲೇಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ವಿದ್ಯೆಯ ಸಾರವನ್ನು ಬುದ್ಧಿಯಲ್ಲಿಟ್ಟುಕೊಂಡು ನೆನಪಿನ ಯಾತ್ರೆಯಿಂದ ಕರ್ಮಾತೀತ ಸ್ಥಿತಿಯನ್ನು ಪಡೆಯಬೇಕಾಗಿದೆ. ಶ್ರೇಷ್ಠ, ಪೂಜ್ಯನೀಯರಾಗಲು ತಂದೆಗೆ ಸಂಪೂರ್ಣ ಸಹಯೋಗಿಗಳಾಗಬೇಕು.

2. ಸತ್ಯ ತಂದೆಯ ಮೂಲಕ ಸತ್ಯ-ಅಸತ್ಯದ ಯಾವ ತಿಳುವಳಿಕೆಯು ಸಿಕ್ಕಿದೆಯೋ ಅದರಿಂದ ಸತ್ಯವಂತರಾಗಿ ಜೀವನ ಬಂಧನದಿಂದ ಮುಕ್ತರಾಗಬೇಕಾಗಿದೆ. ಮುಕ್ತಿ-ಜೀವನ್ಮುಕ್ತಿಯ ಆಸ್ತಿಯನ್ನು ಪಡೆಯಬೇಕಾಗಿದೆ.

ವರದಾನ:
ಒಬ್ಬರಿಗೊಬ್ಬರಲ್ಲಿ ಸ್ನೇಹವನ್ನು ಕೊಟ್ಟು-ತೆಗೆದುಕೊಳ್ಳುವುದರ ಮೂಲಕ ಸರ್ವರನ್ನೂ ಸಹಯೋಗಿಗಳನ್ನಾಗಿ ಮಾಡುವಂತಹ ಸಫಲತಾ ಮೂರ್ತಿ ಭವ.

ಈಗ ಜ್ಞಾನ ಕೊಡುವಂತಹ ಮತ್ತು ತೆಗೆದುಕೊಳ್ಳುವಂತಹ ಸ್ಟೇಜ್ ಪಾಸ್ ಮಾಡಿದಿರಿ, ಈಗ ಸ್ನೇಹ ಕೊಟ್ಟು-ತೆಗೆದುಕೊಳ್ಳುವುದನ್ನು ಮಾಡಿ. ಯಾರೇ ಎದುರಿಗೆ ಬಂದರೂ, ಸಂಬಂಧದಲ್ಲಿ ಬಂದರೂ ಆಗ ಅವರಿಗೆ ಸ್ನೇಹ ಕೊಡಿ ಮತ್ತು ತೆಗೆದುಕೊಳ್ಳಿರಿ-ಇದಕ್ಕೆ ಹೇಳಲಾಗುವುದು ಸರ್ವರ ಸ್ನೇಹಿ ಅಥವಾ ಲವ್ಲೀ. ಜ್ಞಾನ ದಾನ ಅಜ್ಞಾನಿಗಳಿಗೆ ಮಾಡಬೇಕು ಆದರೆ ಬ್ರಾಹ್ಮಣ ಪರಿವಾರದಲ್ಲಿ ಈ ದಾನದ ಮಹಾದಾನಿಯಾಗಿ. ಸಂಕಲ್ಪದಲ್ಲಿಯೂ ಸಹಾ ಯಾರ ಪ್ರತಿಯಾದರೂ ಸ್ನೇಹದ ಬದಲು ಬೇರೆ ಯಾವುದೂ ಉತ್ಪತ್ತಿ ಯಾಗಬಾರದು. ಯಾವಾಗ ಎಲ್ಲರ ಪ್ರತಿ ಸ್ನೇಹವಾಗಿ ಬಿಡುವುದು ಆಗ ಸ್ನೇಹದ ಪ್ರತಿಕ್ರಿಯೆ ಸಹಯೋಗವಾಗುವುದು ಮತ್ತು ಸಹಯೋಗದ ಪಲಿತಾಂಶ ಸಫಲತೆ ಪ್ರಾಪ್ತಿಯಾಗುವುದು.

ಸ್ಲೋಗನ್:
ಒಂದು ಸೆಕೆಂಡ್ನಲ್ಲಿ ವ್ಯರ್ಥ ಸಂಕಲ್ಪಗಳ ಮೇಲೆ ಫುಲ್ಸ್ಟಾಪ್ ಹಾಕಿ ಬಿಡಿ - ಇದೇ ತೀವ್ರ ಪುರುಷಾರ್ಥವಾಗಿದೆ.

ಮಾತೇಶ್ವರೀಜೀಯವರ ಅಮೂಲ್ಯ ಮಹಾವಾಕ್ಯ: “ಮುಕ್ತಿ ಮತ್ತು ಮೋಕ್ಷ”

ಇತ್ತೀಚಿಗೆ ಮನುಷ್ಯ ಮುಕ್ತಿಯನ್ನೇ ಮೋಕ್ಷವೆಂದು ಹೇಳುತ್ತಾರೆ, ಅವರು ಈ ರೀತಿ ತಿಳಿಯುತ್ತಾರೆ ಯಾರು ಮುಕ್ತಿ ಪಡೆಯುತ್ತಾರೆ ಅವರು ಜನನ ಮರಣದಿಂದ ಬಿಡಿಸಿಕೊಳ್ಳುತ್ತಾರೆ ಎಂದು. ಆ ಜನರು ಜನನ ಮರಣದಲ್ಲಿ ಬರದೆ ಇರುವುದು ಅದನ್ನೇ ಶ್ರೇಷ್ಠ ಪದವಿ ಎಂದು ತಿಳಿಯುತ್ತಾರೆ, ಅದೇ ಪ್ರಾಲಭ್ಧ ಎಂದು ತಿಳಿಯುತ್ತಾರೆ. ಜೀವನ್ಮುಕ್ತಿ ಎಂದು ಅದಕ್ಕೆ ತಿಳಿಯುತ್ತಾರೆ ಜೀವನದಲ್ಲಿರುತ್ತಾ ಒಳ್ಳೆಯ ಕರ್ಮ ಮಾಡುತ್ತಾರೆ, ಹೇಗೆ ಧರ್ಮಾತ್ಮರಿರುತ್ತಾರೆ ಅವರನ್ನು ಜೀವನ್ಮುಕ್ತರು ಎಂದು ತಿಳಿಯುತ್ತಾರೆ. ಬಾಕಿ ಕರ್ಮ ಬಂಧನದಿಂದ ಮುಕ್ತವಾಗುವುದು ಕೋಟಿಯಲ್ಲಿ ಕೆಲವರಿಗೆ ಮಾತ್ರ ಸಿಗುತ್ತೆ ಎಂದು ತಿಳಿದಿದ್ದಾರೆ, ಈಗ ಇದಾಗಿದೆ ಅವರದೇ ಆದ ಮತ. ಆದರೆ ನಾವಂತೂ ಪರಮಾತ್ಮನ ಮೂಲಕ ತಿಳಿದುಕೊಂಡಿದ್ದೇವೆ ಎಲ್ಲಿಯವರೆಗೆ ಮನುಷ್ಯ ಮೊದಲು ವಿಕಾರಿ ಕರ್ಮ ಬಂಧನದಿಂದ ಮುಕ್ತರಾಗುವುದಿಲ್ಲ ಅಲ್ಲಿಯವರೆಗೆ ಆದಿ-ಮಧ್ಯ-ಅಂತ್ಯ ದುಃಖದಿಂದ ಬಿಡಿಸಿಕೊಳ್ಳಲು ಸಾಧ್ಯವಿಲ್ಲ, ಆದ್ದರಿಂದ ಇದರಿಂದ ಬಿಡಿಸಿಕೊಳ್ಳುವುದೂ ಸಹ ಒಂದು ಸ್ಟೇಜ್ ಆಗಿದೆ. ಆದರೂ ಮೊದಲು ಈಶ್ವರೀಯ ಜ್ಞಾನವನ್ನು ಧಾರಣೆ ಮಾಡಬೇಕು ಆ ನಂತರವೇ ಆ ಸ್ಟೇಜ್ನ್ನು ಮುಟ್ಟಲು ಸಾಧ್ಯ ಮತ್ತು ಆ ಸ್ಟೇಜ್ನ್ನು ತಲುಪಿಸುವವರು ಸ್ವಯಂ ಪರಮಾತ್ಮನೇ ಆಗಿರಬೇಕು ಏಕೆಂದರೆ ಮುಕ್ತಿ-ಜೀವನ್ಮುಕ್ತಿ ಅವರೇ ಕೊಡುತ್ತಾರೆ, ಅದೂ ಸಹ ಒಂದೇ ಸಮಯದಲ್ಲಿ ಬಂದು ಎಲ್ಲರಿಗೂ ಮುಕ್ತಿ-ಜೀವನ್ಮುಕ್ತಿ ಕೊಟ್ಟು ಬಿಡುತ್ತಾರೆ. ಉಳಿದಂತೆ ಪರಮಾತ್ಮ ಅನೇಕ ಬಾರಿಯಂತೂ ಬರುವುದಿಲ್ಲ ಮತ್ತು ಪರಮಾತ್ಮನೇ ಎಲ್ಲಾ ಅವತಾರವನ್ನು ಧಾರಣೆ ಮಾಡುತ್ತಾನೆ ಎಂದು ತಿಳಿಯುವಂತಿಲ್ಲ. ಓಂ ಶಾಂತಿ.

ಅವ್ಯಕ್ತ ಸೂಚನೆ:- ಸ್ವಯಂನ ಮತ್ತು ಸರ್ವರ ಪ್ರತಿ ಮನಸ್ಸಾ ಮೂಲಕ ಯೋಗದ ಶಕ್ತಿಗಳ ಪ್ರಯೋಗ ಮಾಡಿ.

ಮನಸ್ಸಾ ಸೇವೆ ಬೇಹದ್ದಿನ ಸೇವೆಯಾಗಿದೆ. ಎಷ್ಟು ನೀವು ಮನಸ್ಸಿನಿಂದ, ವಾಣಿಯಿಂದ ಸ್ವಯಂ ಉದಾಹರಣೆಯಾಗುತ್ತೀರೆಂದಾಗ ಉದಾಹರಣೆಯನ್ನು ನೋಡಿ ಸ್ವತಃವಾಗಿ ಅನ್ಯರು ಆಕರ್ಷಿತರಾಗುತ್ತಾರೆ. ಕೇವಲ ದೃಢ ಸಂಕಲ್ಪವಿಟ್ಟರೆ ಸಹಜವಾಗಿ ಸೇವೆಯಾಗುತ್ತಿರುತ್ತದೆ. ಒಂದುವೇಳೆ ವಾಣಿಗಾಗಿ ಸಮಯವಿಲ್ಲವೆಂದರೆ ವೃತ್ತಿಯಿಂದ, ಮನಸ್ಸಾ ಸೇವೆಯಿಂದ ಪರಿವರ್ತನೆ ಮಾಡುವ ಸಮಯವಿದೆಯಲ್ಲವೇ. ಈಗ ಸೇವೆಯಿಲ್ಲದೇ ಸಮಯವನ್ನು ಕಳೆಯಬೇಡಿ. ನಿರಂತರ ಯೋಗಿ, ನಿರಂತರ ಸೇವಾಧಾರಿಯಾಗಿರಿ. ಒಂದುವೇಳೆ ಮನಸಾ ಸೇವೆ ಮಾಡಲು ಬರುವುದಿಲ್ಲವೆಂದರೆ ತಮ್ಮ ಸಂಪರ್ಕದಿಂದ, ತಮ್ಮ ಚಲನೆಯಿಂದಲೂ ಸೇವೆಯನ್ನು ಮಾಡಬಹುದು.