14.11.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಶ್ರೇಷ್ಠ ಪದವಿಯನ್ನು ಪಡೆಯಬೇಕೆಂದರೆ ನೆನಪಿನ ಯಾತ್ರೆಯಲ್ಲಿ ಮಸ್ತರಾಗಿರಿ, ಇದೇ ಆತ್ಮಿಕ ನೇಣು
ಆಗಿದೆ, ಬುದ್ಧಿಯು ತನ್ನ ಮನೆಯಲ್ಲಿ ತಗುಲಿ ಹಾಕಿಕೊಂಡಿರಲಿ”
ಪ್ರಶ್ನೆ:
ಯಾರ
ಬುದ್ಧಿಯಲ್ಲಿ ಜ್ಞಾನದ ಧಾರಣೆಯಾಗುವುದಿಲ್ಲವೋ ಅವರ ಚಿಹ್ನೆಗಳೇನು?
ಉತ್ತರ:
ಅವರು
ಚಿಕ್ಕ-ಚಿಕ್ಕ ಮಾತುಗಳಲ್ಲಿ ಬೇಸರವಾಗುತ್ತಿರುತ್ತಾರೆ. ಯಾರ ಬುದ್ಧಿಯಲ್ಲಿ ಎಷ್ಟು ಜ್ಞಾನದ
ಧಾರಣೆಯಾಗುವುದೋ ಅಷ್ಟೇ ಅವರಿಗೆ ಖುಷಿಯಿರುವುದು. ಈಗ ಪ್ರಪಂಚವು ಕೆಳಗಿಳಿಯಲೇಬೇಕಾಗಿದೆ, ಇದರಲ್ಲಿ
ನಷ್ಟವಾಗಲಿದೆ ಎಂಬುದು ಒಂದುವೇಳೆ ಬುದ್ಧಿಯಲ್ಲಿ ಜ್ಞಾನವಿದ್ದಿದ್ದೇ ಆದರೆ ಎಂದಿಗೂ
ಬೇಸರವಾಗುವುದಿಲ್ಲ, ಸದಾ ಖುಷಿಯಿರುವುದು.
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ತಿಳಿಸುತ್ತಾರೆ. ಮಕ್ಕಳಿಗೆ ತಿಳಿದಿದೆ –
ಶ್ರೇಷ್ಠಾತಿ ಶ್ರೇಷ್ಠನು ಭಗವಂತನೆಂದು ಹೇಳಲಾಗುತ್ತದೆ. ಆತ್ಮದ ಬುದ್ಧಿಯೋಗವು ತನ್ನ ಮನೆಯ ಕಡೆ
ಹೋಗಬೇಕು ಆದರೆ ಈ ಜ್ಞಾನವು ಬುದ್ಧಿಯಲ್ಲಿರುವ ಮನುಷ್ಯರು ಯಾರೊಬ್ಬರೂ ಇಲ್ಲ. ಸನ್ಯಾಸಿಗಳು
ಬ್ರಹ್ಮಾತತ್ವವು ಮನೆಯಾಗಿದೆ ಎಂಬುದನ್ನು ತಿಳಿದುಕೊಳ್ಳುವುದಿಲ್ಲ, ನಾವು ಬ್ರಹ್ಮಾತತ್ವದಲ್ಲಿ
ಲೀನವಾಗುತ್ತೇವೆಂದು ಹೇಳುತ್ತಾರೆ ಅಂದಮೇಲೆ ಅದು ಮನೆಯಾಯಿತೇ? ಏಕೆಂದರೆ ಮನೆಯಲ್ಲಿ ವಾಸ
ಮಾಡಲಾಗುತ್ತದೆ. ನೀವು ಮಕ್ಕಳ ಬುದ್ಧಿಯು ಅಲ್ಲಿರಬೇಕು. ಹೇಗೆ ಯಾರನ್ನಾದರೂ ಗಲ್ಲಿಗೇರಿಸಲಾಗುತ್ತದೆ,
ಹಾಗೆಯೇ ನೀವೀಗ ಆತ್ಮಿಕ ಗಲ್ಲಿಗೇರಿಸಲ್ಪಟ್ಟಿದ್ದೀರಿ ಅರ್ಥಾತ್ ನಿಮ್ಮ ಬುದ್ಧಿಯು ಅಲ್ಲಿ ಸಿಕ್ಕಿ
ಹಾಕಿಕೊಂಡಿರಲಿ. ಆಂತರ್ಯದಲ್ಲಿದೆ - ನಮ್ಮನ್ನು ಸರ್ವ ಶ್ರೇಷ್ಠ ತಂದೆಯು ಬಂದು ಸರ್ವ ಶ್ರೇಷ್ಠ
ಮನೆಗೆ ಕರೆದುಕೊಂಡು ಹೋಗುತ್ತಾರೆ. ನಾವೀಗ ಮನೆಗೆ ಹೋಗಬೇಕಾಗಿದೆ. ಶ್ರೇಷ್ಠಾತಿ ಶ್ರೇಷ್ಠ ತಂದೆಯು
ನಮಗೆ ಶ್ರೇಷ್ಠಾತಿ ಶ್ರೇಷ್ಠ ಪದವಿಯನ್ನು ಪ್ರಾಪ್ತಿ ಮಾಡಿಸುತ್ತಾರೆ. ರಾವಣ ರಾಜ್ಯದಲ್ಲಿ ಎಲ್ಲರೂ
ನೀಚರಾಗಿದ್ದಾರೆ. ಇಲ್ಲಿ ಕನಿಷ್ಟರು ಅಲ್ಲಿ ಶ್ರೇಷ್ಠರು. ಇವರಿಗೆ ಶ್ರೇಷ್ಠತೆಯ ಬಗ್ಗೆ ತಿಳಿದೇ
ಇಲ್ಲ. ಹಾಗೆಯೇ ಶ್ರೇಷ್ಠ ಕುಲದವರಿಗೂ ಸಹ ಕನಿಷ್ಟರ ಬಗ್ಗೆ ತಿಳಿಯುವುದಿಲ್ಲ. ನೀವೀಗ
ತಿಳಿದುಕೊಂಡಿದ್ದೀರಿ, ಶ್ರೇಷ್ಠಾತಿ ಶ್ರೇಷ್ಠನಂತೂ ಭಗವಂತನೊಬ್ಬನಿಗೇ ಹೇಳಲಾಗುತ್ತದೆ. ಬುದ್ಧಿಯು
ಮೇಲೆ ಹೋಗುತ್ತದೆ. ತಂದೆಯು ಪರಮಧಾಮದ ನಿವಾಸಿಯಾಗಿದ್ದಾರೆ, ನಾವಾತ್ಮಗಳೂ ಸಹ ಅಲ್ಲಿನ
ನಿವಾಸಿಗಳಾಗಿದ್ದೇವೆ. ಇಲ್ಲಿಗೆ ಕೇವಲ ಪಾತ್ರವನ್ನಭಿನಯಿಸಲು ಬರುತ್ತೇವೆ ಎಂಬುದು ಯಾರಿಗೂ
ತಿಳಿದಿಲ್ಲ. ಇದು ಯಾರ ಸಂಕಲ್ಪದಲ್ಲಿಯೂ ಬರುವುದಿಲ್ಲ. ತಮ್ಮದೇ ಉದ್ಯೋಗ-ವ್ಯವಹಾರಗಳಲ್ಲಿ
ತೊಡಗಿರುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ಯಾವಾಗ ನೆನಪಿನ ಯಾತ್ರೆಯಲ್ಲಿ ಮಸ್ತರಾಗಿರುತ್ತೀರೋ
ಆಗಲೇ ಶ್ರೇಷ್ಠಾತಿ ಶ್ರೇಷ್ಠರಾಗುತ್ತೀರಿ. ನೆನಪಿನಿಂದಲೇ ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ.
ನಿಮಗೆ ಕಲಿಸುತ್ತಿರುವ ಜ್ಞಾನವು ಮರೆಯುವಂತಿಲ್ಲ. ಚಿಕ್ಕ ಮಕ್ಕಳೂ ಸಹ ವರ್ಣನೆ ಮಾಡುತ್ತಾರೆ ಬಾಕಿ
ಯೋಗದ ಮಾತು ಮಕ್ಕಳಿಗೆ ಅರ್ಥವಾಗುವುದಿಲ್ಲ. ಅನೇಕ ಮಕ್ಕಳು ಯಥಾರ್ಥವಾಗಿ ನೆನಪಿನ ಯಾತ್ರೆಯನ್ನು
ತಿಳಿದುಕೊಂಡಿಲ್ಲ. ನಾವು ಎಷ್ಟು ಶ್ರೇಷ್ಠ ಮಟ್ಟಕ್ಕೇರುತ್ತೇವೆ, ಮೂಲವತನ, ಸೂಕ್ಷ್ಮವತನ,
ಸ್ಥೂಲವತನ..... ಪಂಚ ತತ್ವಗಳೂ ಇಲ್ಲಿವೆ. ಸೂಕ್ಷ್ಮವತನ, ಮೂಲವತನದಲ್ಲಿ ಇವು ಇರುವುದಿಲ್ಲ. ಈ
ಜ್ಞಾನವನ್ನು ತಂದೆಯೇ ಕೊಡುತ್ತಾರೆ ಆದ್ದರಿಂದ ಅವರಿಗೆ ಜ್ಞಾನ ಸಾಗರನೆಂದು ಹೇಳಲಾಗುತ್ತದೆ. ಬಹಳ
ಶಾಸ್ತ್ರಗಳನ್ನು ಓದುವುದೇ ಜ್ಞಾನವೆಂದು ಮನುಷ್ಯರು ತಿಳಿಯುತ್ತಾರೆ, ಎಷ್ಟೊಂದು ಹಣ
ಸಂಪಾದಿಸುತ್ತಾರೆ. ಶಾಸ್ತ್ರಗಳನ್ನು ಓದುವವರಿಗೆ ಬಹಳ ಮಾನ್ಯತೆ ಸಿಗುತ್ತದೆ ಆದರೆ ನಿಮಗೆ ತಿಳಿದಿದೆ
- ಇದರಲ್ಲಿ ಯಾವುದೇ ಹೆಗ್ಗಳಿಕೆಯಿಲ್ಲ. ಶ್ರೇಷ್ಠಾತಿ ಶ್ರೇಷ್ಠನೆಂದು ಒಬ್ಬರೇ ಭಗವಂತನಾಗಿದ್ದಾರೆ,
ಅವರ ಮೂಲಕ ನಾವು ಶ್ರೇಷ್ಠಾತಿ ಶ್ರೇಷ್ಠ ಸ್ವರ್ಗದಲ್ಲಿ ರಾಜ್ಯ ಮಾಡುವವರಾಗುತ್ತೇವೆ.
ಸ್ವರ್ಗವೆಂದರೇನು, ನರಕವೆಂದರೇನು, 84 ಜನ್ಮಗಳ ಚಕ್ರವು ಹೇಗೆ ಸುತ್ತುತ್ತದೆ? ಇದನ್ನು ನಿಮ್ಮ ವಿನಃ
ಸೃಷ್ಟಿಯಲ್ಲಿ ಯಾರೂ ತಿಳಿದುಕೊಂಡಿಲ್ಲ. ಇದೆಲ್ಲವೂ ಕಲ್ಪನೆಯೆಂದು ಹೇಳಿ ಬಿಡುತ್ತಾರೆ. ಅಂತಹವರು
ನಮ್ಮ ಕುಲದವರಲ್ಲವೆಂದು ತಿಳಿಯಿರಿ, ಇದರಲ್ಲಿ ಬೇಸರವಾಗಬಾರದು ಏಕೆಂದರೆ ಅವರ ಪಾತ್ರವಿಲ್ಲವೆಂದರೆ
ಏನನ್ನೂ ಅರ್ಥ ಮಾಡಿಕೊಳ್ಳುವುದಿಲ್ಲ. ಈಗ ನೀವು ಮಕ್ಕಳ ಬುದ್ಧಿಯು ಬಹಳ ಶ್ರೇಷ್ಠವಾಗಿದೆ. ಯಾವಾಗ
ನೀವು ಶ್ರೇಷ್ಠ ಪ್ರಪಂಚದಲ್ಲಿರುತ್ತೀರೋ ಆಗ ನೀಚ ಪ್ರಪಂಚವನ್ನು ತಿಳಿದುಕೊಳ್ಳುವುದಿಲ್ಲ. ನೀಚ
ಪ್ರಪಂಚದವರು ಶ್ರೇಷ್ಠ ಪ್ರಪಂಚದ ಬಗ್ಗೆ ತಿಳಿದುಕೊಂಡಿಲ್ಲ. ಆ ಶ್ರೇಷ್ಠ ಪ್ರಪಂಚಕ್ಕೆ ಸ್ವರ್ಗವೆಂದು
ಕರೆಯಲಾಗುತ್ತದೆ. ಭಲೆ ವಿದೇಶಿಯರು ಸ್ವರ್ಗದಲ್ಲಂತೂ ಹೋಗುವುದಿಲ್ಲ ಆದರೂ ಹೆವೆನ್, ಪ್ಯಾರಡೈಸ್
ಇತ್ತೆಂದು ಹೆಸರನ್ನು ಉಪಯೋಗಿಸುತ್ತಾರೆ. ಮುಸಲ್ಮಾನರೂ ಸಹ ಬಹಿಶ್ತ್ ಎಂದು ಹೇಳುತ್ತಾರೆ ಆದರೆ
ಅಲ್ಲಿಗೆ ಹೇಗೆ ಹೋಗಬೇಕೆಂಬುದು ಅವರಿಗೆ ತಿಳಿದಿಲ್ಲ. ಈಗ ನಿಮಗೆ ಎಷ್ಟೊಂದು ತಿಳುವಳಿಕೆ
ಸಿಗುತ್ತಿದೆ! ಶ್ರೇಷ್ಠಾತಿ ಶ್ರೇಷ್ಠ ತಂದೆಯು ಎಷ್ಟೊಂದು ಜ್ಞಾನವನ್ನು ಕೊಡುತ್ತಾರೆ. ಈ ನಾಟಕವು
ಹೇಗೆ ಬಹಳ ಅದ್ಭುತವಾಗಿ ಮಾಡಲ್ಪಟ್ಟಿದೆ. ಯಾರು ಡ್ರಾಮಾದ ರಹಸ್ಯವನ್ನು ತಿಳಿದುಕೊಂಡಿಲ್ಲವೋ ಅವರು
ಇದನ್ನು ಕಲ್ಪನೆಯೆಂದು ಹೇಳಿ ಬಿಡುತ್ತಾರೆ.
ನೀವು ಮಕ್ಕಳಿಗೆ
ತಿಳಿದಿದೆ - ಇದು ಪತಿತ ಪ್ರಪಂಚವಾಗಿದೆ ಆದ್ದರಿಂದ ಹೇ ಪತಿತ-ಪಾವನ ಬಂದು ನಮ್ಮನ್ನು ಪಾವನರನ್ನಾಗಿ
ಮಾಡಿ ಎಂದು ಕರೆಯುತ್ತಾರೆ. ತಂದೆಯು ತಿಳಿಸುತ್ತಾರೆ - ಪ್ರತೀ 5000 ವರ್ಷಗಳ ನಂತರ ಇತಿಹಾಸವು
ಪುನರಾವರ್ತನೆಯಾಗುತ್ತದೆ. ಹಳೆಯ ಪ್ರಪಂಚವು ಹೊಸದಾಗುತ್ತದೆ ಆದ್ದರಿಂದ ನಾನೇ ಬರಬೇಕಾಗುವುದು.
ಕಲ್ಪ-ಕಲ್ಪವೂ ಬಂದು ನೀವು ಮಕ್ಕಳನ್ನು ಶ್ರೇಷ್ಠರನ್ನಾಗಿ ಮಾಡುತ್ತೇನೆ. ಪಾವನರಿಗೆ ಶ್ರೇಷ್ಠರು
ಮತ್ತು ಪತಿತರಿಗೆ ಕನಿಷ್ಟರೆಂದು ಹೇಳಲಾಗುತ್ತದೆ. ಇದೇ ಪ್ರಪಂಚವು ಹೊಸದು, ಪಾವನವಾಗಿತ್ತು, ಈಗ
ಪತಿತವಾಗಿದೆ. ಈ ಮಾತುಗಳನ್ನು ನಿಮ್ಮಲ್ಲಿಯೂ ನಂಬರ್ವಾರ್ ತಿಳಿದುಕೊಳ್ಳುತ್ತಾರೆ. ಯಾರ
ಬುದ್ಧಿಯಲ್ಲಿ ಈ ಮಾತುಗಳಿರುತ್ತದೆಯೋ ಅವರು ಸದಾ ಖುಷಿಯಾಗಿರುತ್ತಾರೆ. ಈ ಮಾತುಗಳು
ಬುದ್ಧಿಯಲ್ಲಿಲ್ಲವೆಂದರೆ ಯಾರಾದರೂ ಏನಾದರೂ ಹೇಳಿದರು, ನಷ್ಟವಾಯಿತೆಂದರೆ ಬೇಸರವಾಗಿ ಬಿಡುತ್ತಾರೆ.
ತಂದೆಯು ತಿಳಿಸುತ್ತಾರೆ - ಈಗ ಈ ಕನಿಷ್ಟ ಪ್ರಪಂಚದ ಅಂತ್ಯವಾಗಲಿದೆ. ಇದು ಹಳೆಯ ಪ್ರಪಂಚವಾಗಿದೆ.
ಮನುಷ್ಯರು ಎಷ್ಟೊಂದು ಕನಿಷ್ಟರಾಗಿ ಬಿಡುತ್ತಾರೆ ಆದರೆ ನಾವು ಕನಿಷ್ಟರೆಂಬುದನ್ನು ಯಾರೂ
ತಿಳಿದುಕೊಳ್ಳುವುದಿಲ್ಲ. ಭಕ್ತರು ಯಾವಾಗಲೂ ತಲೆ ಬಾಗುತ್ತಾರೆ. ಕನಿಷ್ಟರ ಮುಂದೆ ಎಂದೂ ತಲೆ ಬಾಗುವ
ಪದ್ಧತಿಯಿಲ್ಲ. ಪವಿತ್ರರ ಮುಂದೆ ತಲೆ ಬಾಗುವ ಪದ್ದತಿಯಿದೆ. ಸತ್ಯಯುಗದಲ್ಲಿ ಎಂದೂ ಈ
ರೀತಿಯಾಗುವುದಿಲ್ಲ, ಭಕ್ತರೇ ಈ ರೀತಿ ಮಾಡುತ್ತಾರೆ. ತಲೆ ಬಾಗಿ ನಡೆಯಿರಿ ಎಂದು ತಂದೆಯು
ಹೇಳುವುದಿಲ್ಲ. ಇದು ವಿದ್ಯೆಯಾಗಿದೆ. ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ನೀವು ಓದುತ್ತಿದ್ದೀರಿ
ಅಂದಾಗ ಎಷ್ಟೊಂದು ನಶೆಯಿರಬೇಕು! ಕೇವಲ ವಿಶ್ವ ವಿದ್ಯಾಲಯದಲ್ಲಿ ನಶೆಯಿದ್ದು ಮನೆಗೆ ಹೋದ ತಕ್ಷಣ
ಇಳಿಯುವಂತಾಗಬಾರದು. ಮನೆಯಲ್ಲಿಯೂ ಈ ನಶೆಯಿರಬೇಕು, ಇಲ್ಲಂತೂ ನಿಮಗೆ ತಿಳಿದಿದೆ – ಶಿವ ತಂದೆಯೇ
ನಮಗೆ ಓದಿಸುತ್ತಾರೆ. ಈ ಬ್ರಹ್ಮಾರವರೂ ಸಹ ಹೇಳುತ್ತಾರೆ - ನಾನೇನು ಜ್ಞಾನ ಸಾಗರನಲ್ಲ. ಮತ್ತೆ
ತಂದೆಯೂ ಸಹ ಹೇಳುತ್ತಾರೆ – ಜ್ಞಾನ ಸಾಗರ ನಾನಾಗಿದ್ದೇನೆ, ಇವರಲ್ಲ. ಸಾಗರದಿಂದ ನದಿಗಳು
ಹುಟ್ಟುತ್ತವೆಯಲ್ಲವೆ. ಸಾಗರವು ಒಂದೇ ಆಗಿದೆ. ಬ್ರಹ್ಮ ಪುತ್ರ ಎಲ್ಲದಕ್ಕಿಂತ ದೊಡ್ಡ ನದಿಯಾಗಿದೆ.
ಬಹಳ ದೊಡ್ಡ ಹಡಗುಗಳು ಬರುತ್ತವೆ. ನದಿಗಳಂತೂ ಬಹಳಷ್ಟಿವೆ. ಪತಿತ-ಪಾವನಿ ಗಂಗೆಯೆಂದು ಕೇವಲ ಇಲ್ಲಿಯೇ
ಹೇಳುತ್ತಾರೆ. ಹೊರಗಡೆ ಮತ್ತ್ಯಾವುದೇ ನದಿಗೆ ಈ ರೀತಿ ಹೇಳುವುದಿಲ್ಲ. ನದಿಯು
ಪತಿತ-ಪಾವನಿಯಾಗಿದ್ದರೆ ಮತ್ತೆ ಗುರುಗಳ ಅವಶ್ಯಕತೆಯೇ ಇರುವುದಿಲ್ಲ. ನದಿಗಳಲ್ಲಿ, ಕೊಳಗಳಲ್ಲಿ
ಎಷ್ಟೊಂದು ಅಲೆದಾಡುತ್ತಾರೆ. ಕೆಲವೊಂದು ಕಡೆ ಸರೋವರಗಳು ಇಷ್ಟು ಕೊಳಕಾಗಿರುತ್ತವೆ ಅದರ ಮಾತೇ
ಕೇಳಬೇಡಿ. ಅದರ ಮಣ್ಣನ್ನು ತೆಗೆದು ಹಚ್ಚಿಕೊಳ್ಳುತ್ತಿರುತ್ತಾರೆ ಆದರೆ ಇವೆಲ್ಲವೂ ಕೆಳಗಿಳಿಯುವ
ಮಾರ್ಗಗಳೆಂದು ಈಗ ನಿಮಗೆ ಅರ್ಥವಾಗಿದೆ. ಮನುಷ್ಯರು ಎಷ್ಟು ಪ್ರೀತಿಯಿಂದ ಹೋಗುತ್ತಾರೆ, ಈಗ ನೀವು
ತಿಳಿದುಕೊಳ್ಳುತ್ತೀರಿ - ಈ ಜ್ಞಾನದಿಂದ ನಮ್ಮ ಕಣ್ಣುಗಳೇ ತೆರೆಯಿತು, ನಿಮಗೆ ಜ್ಞಾನದ ಮೂರನೇ
ನೇತ್ರವು ತೆರೆದಿದೆ. ಆತ್ಮಕ್ಕೆ ಮೂರನೆಯ ನೇತ್ರವು ಸಿಗುತ್ತದೆ, ಆದ್ದರಿಂದ ತ್ರಿಕಾಲದರ್ಶಿಯೆಂದು
ಹೇಳುತ್ತಾರೆ. ಆತ್ಮದಲ್ಲಿ ಮೂರೂ ಕಾಲಗಳ ಜ್ಞಾನವು ಬರುತ್ತದೆ. ಆತ್ಮವು ಬಿಂದುವಾಗಿದೆ, ಅದರಲ್ಲಿ
ನೇತ್ರವಿರಲು ಹೇಗೆ ಸಾಧ್ಯ! ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಜ್ಞಾನದ ಮೂರನೆಯ
ನೇತ್ರದಿಂದ ನೀವು ತ್ರಿಕಾಲದರ್ಶಿ, ತ್ರಿಲೋಕಿನಾಥರಾಗುತ್ತೀರಿ. ನಾಸ್ತಿಕರಿಂದ ಆಸ್ತಿಕರಾಗುತ್ತೀರಿ.
ಮೊದಲು ನೀವು ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿರಲಿಲ್ಲ. ತಂದೆಯ ಮೂಲಕ
ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಳ್ಳುವುದರಿಂದ ನಿಮಗೆ ಆಸ್ತಿ ಸಿಗುತ್ತಿದೆ. ಇದು
ಜ್ಞಾನವಲ್ಲವೆ. ಇತಿಹಾಸ-ಭೂಗೋಳವೂ ಇದೆ. ಲೆಕ್ಕಾಚಾರವಿದೆಯಲ್ಲವೆ. ಯಾರಾದರೂ ತೀಕ್ಷ್ಣವಾದ
ಮಕ್ಕಳಿದ್ದರೆ ನಾವು ಎಷ್ಟು ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ, ಈ ಲೆಕ್ಕದಿಂದ ಅನ್ಯ ಧರ್ಮದವರದು
ಎಷ್ಟು ಜನ್ಮಗಳಿರುತ್ತವೆ ಎಂಬುದನ್ನು ಲೆಕ್ಕ ಮಾಡಿರಿ ಆದರೆ ತಂದೆಯು ತಿಳಿಸುತ್ತಾರೆ - ಇವೆಲ್ಲಾ
ಮಾತುಗಳಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳುವ ಮಾತಿಲ್ಲ. ಇದರಿಂದ ಸಮಯ ವ್ಯರ್ಥವಾಗುವುದು. ಇಲ್ಲಂತೂ
ಎಲ್ಲವನ್ನೂ ಮರೆಯಬೇಕಾಗಿದೆ. ಇಲ್ಲಿ ತಿಳಿಸುವ ಅವಶ್ಯಕತೆಯೂ ಇಲ್ಲ. ನೀವಂತೂ ತಂದೆಯ ಪರಿಚಯ
ಕೊಡುತ್ತೀರಿ, ಅವರನ್ನು ಯಾರೂ ತಿಳಿದುಕೊಂಡಿಲ್ಲ. ಶಿವ ತಂದೆಯು ಭಾರತದಲ್ಲಿಯೇ ಬರುತ್ತಾರೆ. ತಂದೆಯು
ಅವಶ್ಯವಾಗಿ ಯಾವುದೋ ಕರ್ತವ್ಯ ಮಾಡಿ ಹೋದ ಕಾರಣವಾಗಿ ಜಯಂತಿಯನ್ನಾಚರಿಸುತ್ತಾರಲ್ಲವೆ. ಹೇಗೆ ಗಾಂಧಿ
ಅಥವಾ ಯಾವುದೇ ಸಾಧುಗಳು ಇದ್ದು ಹೋಗಿರುವ ಕಾರಣ ಅವರ ಸ್ಟಾಂಪ್ ಮಾಡಿಸುತ್ತಿರುತ್ತಾರೆ. ಕೌಟುಂಬಿಕ
ಯೋಜನೆಯ ಸ್ಟಾಂಪ್ ಮಾಡಿಸುತ್ತಾರೆ. ಈಗ ನಿಮಗೆ ನಶೆಯಿದೆ, ನಾವು ಪಾಂಡವ ಸರ್ಕಾರದವರಾಗಿದ್ದೇವೆ. ಇದು
ಸರ್ವಶಕ್ತಿವಂತ ತಂದೆಯ ಸರ್ಕಾರವಾಗಿದೆ. ನಿಮ್ಮದು ಇದು ರಾಷ್ಟ್ರ ಲಾಂಛನವಾಗಿದೆ, ಮತ್ತ್ಯಾರೂ ಈ
ಲಾಂಛನವನ್ನು ಅರಿತುಕೊಂಡಿಲ್ಲ. ನಿಮಗೆ ತಿಳಿದಿದೆ – ವಿನಾಶ ಕಾಲದಲ್ಲಿ ಪ್ರೀತಿ ಬುದ್ಧಿಯು ನಮ್ಮದೇ
ಆಗಿದೆ. ತಂದೆಯನ್ನು ನಾವು ಬಹಳ ನೆನಪು ಮಾಡುತ್ತೇವೆ. ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ
ಪ್ರೇಮದ ಕಣ್ಣೀರು ಬಂದು ಬಿಡುತ್ತದೆ - ಬಾಬಾ, ತಾವು ನಮ್ಮನ್ನು ಅರ್ಧಕಲ್ಪಕ್ಕಾಗಿ ಎಲ್ಲಾ
ದುಃಖಗಳಿಂದ ದೂರ ಮಾಡಿ ಬಿಡುತ್ತೀರಿ. ಇಲ್ಲಿ ಯಾವುದೇ ಗುರು, ಮಿತ್ರ ಸಂಬಂಧಿ ಮೊದಲಾದ ಯಾರನ್ನೂ
ನೆನಪು ಮಾಡುವ ಅವಶ್ಯಕತೆಯಿಲ್ಲ. ಒಬ್ಬ ತಂದೆಯನ್ನೇ ನೆನಪು ಮಾಡಿ, ಇದಕ್ಕಾಗಿ ಮುಂಜಾನೆಯ ಸಮಯವು
ಬಹಳ ಚೆನ್ನಾಗಿರುತ್ತದೆ. ಬಾಬಾ, ತಮ್ಮದು ಬಹಳ ಚಮತ್ಕಾರವಾಗಿದೆ. ಪ್ರತೀ 5000 ವರ್ಷಗಳ ನಂತರ ತಾವು
ನಮ್ಮನ್ನು ಜಾಗೃತಗೊಳಿಸುತ್ತೀರಿ. ಎಲ್ಲಾ ಮನುಷ್ಯ ಮಾತ್ರರು ಕುಂಭಕರ್ಣ ಆಸುರೀ ನಿದ್ರೆಯಲ್ಲಿ
ಮಲಗಿದ್ದಾರೆ ಅರ್ಥಾತ್ ಅಜ್ಞಾನ ನಿದ್ರೆಯಲ್ಲಿದ್ದಾರೆ. ನೀವೀಗ ತಿಳಿದುಕೊಳ್ಳುತ್ತೀರಿ - ಭಾರತದ
ಪ್ರಾಚೀನ ಯೋಗವು ಇದಾಗಿದೆ ಉಳಿದಂತೆ ಏನೆಲ್ಲಾ ಇಷ್ಟೊಂದು ಹಠಯೋಗಗಳನ್ನು ಕಲಿಸುತ್ತಾರೆಯೋ ಅವೆಲ್ಲವೂ
ಶರೀರದ ಆರೋಗ್ಯಕ್ಕಾಗಿ ವ್ಯಾಯಾಮವಾಗಿದೆ. ಈಗ ನಿಮ್ಮ ಬುದ್ಧಿಯಲ್ಲಿ ಇಡೀ ಜ್ಞಾನವಿದೆ ಆದ್ದರಿಂದ
ಖುಷಿಯಿರುತ್ತದೆ. ಇಲ್ಲಿಗೆ ಬಂದಾಗ ತಂದೆಯು ರಿಫ್ರೆಷ್ ಮಾಡುತ್ತಾರೆ. ಕೆಲವರಂತೂ ಇಲ್ಲಿ ರಿಫ್ರೆಷ್
ಆಗಿ ಹೊರಗಡೆ ಹೋಗುತ್ತಿದ್ದಂತೆಯೇ ನಶೆಯೆಲ್ಲವೂ ಸಮಾಪ್ತಿಯಾಗುತ್ತದೆ. ನಂಬರ್ವಾರಂತೂ
ಇರುತ್ತಾರಲ್ಲವೆ. ಇದು ಪತಿತ ಪ್ರಪಂಚವಾಗಿದೆ, ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ ಆದರೆ
ತನ್ನನ್ನು ಪತಿತನೆಂದು ತಿಳಿದುಕ್ಕೊಳ್ಳುವುದಿಲ್ಲ ಆದ್ದರಿಂದ ಪಾಪವನ್ನು ತೊಳೆಯಲು ನದಿಗೆ
ಹೋಗುತ್ತಾರೆ ಆದರೆ ಪಾಪವು ಶರೀರಕ್ಕೆ ಅಂಟುತ್ತದೆಯೇ! ತಂದೆಯು ಬಂದು ನಿಮ್ಮನ್ನು ಪಾವನರನ್ನಾಗಿ
ಮಾಡುತ್ತಾರೆ ಮತ್ತು ತಿಳಿಸುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ ಆಗ ನಿಮ್ಮ
ವಿಕರ್ಮಗಳು ವಿನಾಶವಾಗುತ್ತವೆ. ಈ ಜ್ಞಾನವು ನಿಮಗೆ ಈಗ ಸಿಕ್ಕಿದೆ, ಭಾರತವು ಸ್ವರ್ಗವಾಗಿತ್ತು ಈಗ
ನರಕವಾಗಿದೆ. ನೀವು ಮಕ್ಕಳಂತೂ ಈಗ ಸಂಗಮದಲ್ಲಿದ್ದೀರಿ. ಯಾರಾದರೂ ವಿಕಾರದಲ್ಲಿ ಬೀಳುತ್ತಾರೆಂದರೆ
ಅನುತ್ತೀರ್ಣರಾಗುತ್ತಾರೆ ಅಂದರೆ ಅವರು ಹೇಗೆ ನರಕದಲ್ಲಿ ಬೀಳುತ್ತಾರೆ, 5 ಅಂತಸ್ತಿನ ಮಹಡಿಯಿಂದ
ಕೆಳಗೆ ಬೀಳುತ್ತಾರೆ ಮತ್ತು ನೂರು ಪಟ್ಟು ಶಿಕ್ಷೆಯನ್ನನುಭವಿಸಬೇಕಾಗುತ್ತದೆ ಆದ್ದರಿಂದ ತಂದೆಯು
ತಿಳಿಸುತ್ತಾರೆ - ಭಾರತವು ಎಷ್ಟು ಶ್ರೇಷ್ಠವಾಗಿತ್ತು, ಈಗ ಎಷ್ಟೊಂದು ಕನಿಷ್ಟವಾಗಿದೆ. ನೀವೀಗ
ಎಷ್ಟೊಂದು ಬುದ್ಧಿವಂತರಾಗುತ್ತೀರಿ. ಮನುಷ್ಯರು ಎಷ್ಟೊಂದು ಬುದ್ಧಿ ಹೀನರಾಗಿದ್ದಾರೆ. ತಂದೆಯು
ನಿಮಗೆ ಇಲ್ಲಿ ಬಹಳ ನಶೆ ತರಿಸುತ್ತಾರೆ ಆದರೆ ಹೊರಗಡೆ ಹೋದ ಕೂಡಲೇ ನಶೆಯು ಕಡಿಮೆಯಾಗಿ ಬಿಡುತ್ತದೆ.
ಖುಷಿಯು ಹಾರಿ ಹೋಗುತ್ತದೆ. ವಿದ್ಯಾರ್ಥಿಗಳು ಯಾರಾದರೂ ದೊಡ್ಡ ಪರೀಕ್ಷೆಯನ್ನು ತೇರ್ಗಡೆ
ಮಾಡುತ್ತಾರೆಂದರೆ ಅವರಿಗೆ ನಶೆ ಕಡಿಮೆಯಾಗುತ್ತದೆಯೇ! ಓದಿ ತೇರ್ಗಡೆಯಾಗಿ ಒಳ್ಳೊಳ್ಳೆಯ ಪದವಿಯನ್ನು
ಪಡೆಯುತ್ತಾರೆ. ಈಗ ನೋಡಿ, ಭಾರತದ ಸ್ಥಿತಿಯೇನಾಗಿದೆ! ನಿಮಗೆ ಶ್ರೇಷ್ಠಾತಿ ಶ್ರೇಷ್ಠ ತಂದೆಯು
ಓದಿಸುತ್ತಾರೆ, ಅವರು ನಿರಾಕಾರನಾಗಿದ್ದಾರೆ. ನೀವಾತ್ಮಗಳೂ ನಿರಾಕಾರಿಯಾಗಿದ್ದೀರಿ, ಇಲ್ಲಿ
ಪಾತ್ರವನ್ನಭಿನಯಿಸಲು ಬಂದಿದ್ದೀರಿ. ಈ ಡ್ರಾಮಾದ ರಹಸ್ಯವನ್ನು ತಂದೆಯೇ ಬಂದು ತಿಳಿಸುತ್ತಾರೆ. ಈ
ಸೃಷ್ಟಿಚಕ್ರಕ್ಕೆ ನಾಟಕವೆಂದೂ ಹೇಳಲಾಗುತ್ತದೆ. ಆ ನಾಟಕದಲ್ಲಾದರೆ ಯಾರಾದರೂ ಕಾಯಿಲೆಗೊಳಗಾದರೆ ಅವರು
ನಾಟಕವನ್ನು ಬಿಟ್ಟು ಹೋಗುತ್ತಾರೆ ಆದರೆ ಇದು ಬೇಹದ್ದಿನ ನಾಟಕವಾಗಿದೆ, ಇದು ಯಥಾರ್ಥ ರೀತಿಯಲ್ಲಿ
ನೀವು ಮಕ್ಕಳ ಬುದ್ಧಿಯಲ್ಲಿದೆ. ನಿಮಗೆ ತಿಳಿದಿದೆ, ನಾವಿಲ್ಲಿ ಪಾತ್ರವನ್ನಭಿನಯಿಸಲು ಬರುತ್ತೇವೆ.
ನಾವು ಬೇಹದ್ದಿನ ಪಾತ್ರಧಾರಿಗಳಾಗಿದ್ದೇವೆ. ಇಲ್ಲಿ ನಾವು ಶರೀರವನ್ನು ತೆಗೆದುಕೊಂಡು
ಪಾತ್ರವನ್ನಭಿನಯಿಸುತ್ತೇವೆ, ತಂದೆಯು ಬಂದಿದ್ದಾರೆ. ಇದೆಲ್ಲವೂ ಬುದ್ಧಿಯಲ್ಲಿರಬೇಕು. ಬೇಹದ್ದಿನ
ನಾಟಕವೆಲ್ಲವೂ ಬುದ್ಧಿಯಲ್ಲಿರಬೇಕು. ಬೇಹದ್ದಿನ ವಿಶ್ವದ ರಾಜ್ಯಭಾಗ್ಯವು ಸಿಗುತ್ತದೆ ಅಂದಮೇಲೆ
ಅದಕ್ಕಾಗಿ ಅಷ್ಟು ಒಳ್ಳೆಯ ಪುರುಷಾರ್ಥವನ್ನೂ ಮಾಡಬೇಕಲ್ಲವೆ. ಗೃಹಸ್ಥ ವ್ಯವಹಾರದಲ್ಲಿಯೂ ಭಲೆ ಇರಿ
ಆದರೆ ಪವಿತ್ರರಾಗಿರಿ. ವಿದೇಶದಲ್ಲಿ ಇಂತಹವರು ಅನೇಕರಿದ್ದಾರೆ, ಅವರು ವೃದ್ಧರಾದಾಗ ಬಾಳ
ಸಂಗಾತಿಗಾಗಿ ವಿವಾಹ ಮಾಡಿಕೊಳ್ಳುತ್ತಾರೆ. ಸಂಭಾಲನೆಗಾಗಿ ಎಲ್ಲವನ್ನೂ ವಿಲ್ ಮಾಡುತ್ತಾರೆ. ಸ್ವಲ್ಪ
ಅವರಿಗೆ, ಇನ್ನು ಸ್ವಲ್ಪ ಟ್ರಸ್ಟ್ಗಾಗಿ ಕೊಡುತ್ತಾರೆ, ಅವರಲ್ಲಿ ವಿಕಾರದ ಮಾತಿರುವುದಿಲ್ಲ.
ಪ್ರಿಯತಮ-ಪ್ರಿಯತಮೆಯರೂ ಸಹ ವಿಕಾರಕ್ಕಾಗಿ ಬಲಿಹಾರಿಯಾಗುವುದಿಲ್ಲ. ಕೇವಲ ಶಾರೀರಿಕ
ಪ್ರೀತಿಯಿರುತ್ತದೆ. ನೀವು ಆತ್ಮಿಕ ಪ್ರಿಯತಮೆಯರಾಗಿದ್ದೀರಿ, ಒಬ್ಬ ಪ್ರಿಯತಮನನ್ನು ನೆನಪು
ಮಾಡುತ್ತೀರಿ. ಎಲ್ಲಾ ಪ್ರಿಯತಮೆಯರಿಗೆ ಒಬ್ಬರೇ ಪ್ರಿಯತಮನಾಗಿದ್ದಾರೆ, ಎಲ್ಲರೂ ಅವರೊಬ್ಬರನ್ನೇ
ನೆನಪು ಮಾಡುತ್ತಾರೆ. ಅವರು ಇಷ್ಟು ಶೋಭಾಯಮಾನವಾಗಿದ್ದಾರೆ. ಆತ್ಮವು ಸುಂದರವಾಗಿದೆಯಲ್ಲವೆ ಅಂದರೆ
ತಂದೆಯು ಸದಾ ಪಾವನವಾಗಿದ್ದಾರೆ. ನೀವಂತೂ ಪತಿತರಾಗಿದ್ದೀರಿ ಆದ್ದರಿಂದ ನಿಮ್ಮನ್ನು ಪುನಃ
ಸುಂದರರನ್ನಾಗಿ ಮಾಡುತ್ತಾರೆ. ನಿಮಗೆ ತಿಳಿದಿದೆ - ತಂದೆಯು ನಮ್ಮನ್ನು ಸುಂದರರನ್ನಾಗಿ ಮಾಡುತ್ತಾರೆ.
ಇಲ್ಲಿ ಅನೇಕರಿದ್ದಾರೆ, ಯಾವ-ಯಾವ ವಿಚಾರಗಳಲ್ಲಿ ಕುಳಿತಿರುತ್ತಾರೆಯೋ ಗೊತ್ತಿಲ್ಲ. ಶಾಲೆಯಲ್ಲಿಯೂ
ಸಹ ಇದೇ ರೀತಿಯಿರುತ್ತದೆ, ಕುಳಿತು-ಕುಳಿತಿದ್ದಂತೆಯೇ ಬುದ್ಧಿಯು ಸಿನಿಮಾದ ಕಡೆ, ಜೊತೆಗಾರರ ಕಡೆ
ಹೊರಟು ಹೋಗುತ್ತದೆ. ಸತ್ಸಂಗಗಳಲ್ಲಿಯೂ ಇದೇ ರೀತಿಯಾಗುತ್ತದೆ. ಇಲ್ಲಿಯೂ ಸಹ ಹಾಗೆಯೇ ಬುದ್ಧಿಯಲ್ಲಿ
ಕುಳಿತುಕೊಳ್ಳಲಿಲ್ಲವೆಂದರೆ ನಶೆಯೇ ಇರುವುದಿಲ್ಲ. ಅನ್ಯರಿಗೆ ಧಾರಣೆ ಮಾಡಿಸಲು ಸ್ವಯಂನಲ್ಲಿಯೇ
ಧಾರಣೆಯಾಗುವುದಿಲ್ಲ. ಅನೇಕ ಮಂದಿ ಕುಮಾರಿಯರು ಬರುತ್ತಾರೆ, ಸರ್ವೀಸಿನಲ್ಲಿ ತೊಡಗಬೇಕೆಂದು ಅವರಿಗೆ
ಮನಸ್ಸಾಗುತ್ತದೆ ಆದರೆ ಚಿಕ್ಕ-ಚಿಕ್ಕ ಮಕ್ಕಳಿದ್ದಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳ
ಸಂಭಾಲನೆಗಾಗಿ ಯಾರಾದರೂ ಸೇವಕರನ್ನು ನೇಮಕ ಮಾಡಿ. ಇಂತಹವರು ಅನೇಕರ ಕಲ್ಯಾಣ ಮಾಡುವರು.
ಬುದ್ಧಿವಂತರಾಗಿದ್ದರೆ ಈ ಆತ್ಮಿಕ ಸೇವೆಯಲ್ಲಿ ಏಕೆ ತೊಡಗಬಾರದು ಆದ್ದರಿಂದ 5-6 ಮಂದಿ ಮಕ್ಕಳನ್ನು
ಸಂಭಾಲನೆ ಮಾಡಲು ಒಬ್ಬ ಸೇವಕರನ್ನು ನೇಮಕ ಮಾಡಿ. ಬಹಳ ನಶೆಯಿರಬೇಕು, ಮುಂದೆ ಈ ರೀತಿ ಆಗುವುದು.
ಪುರುಷರು ನೋಡುತ್ತಾರೆ - ನಮ್ಮ ಸ್ತ್ರೀ ಸನ್ಯಾಸಿಗಳನ್ನೂ ಸಹ ಗೆದ್ದಿದ್ದಾರೆ. ಈ ಮಾತೆಯರು ಲೌಕಿಕ,
ಪಾರಲೌಕಿಕ ತಂದೆಯ ಹೆಸರನ್ನು ಪ್ರಸಿದ್ಧ ಮಾಡಿ ತೋರಿಸುವರು. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ನೀವು
ಬುದ್ಧಿಯಿಂದ ಎಲ್ಲವನ್ನೂ ಮರೆಯಬೇಕಾಗಿದೆ. ಯಾವ ಮಾತುಗಳಲ್ಲಿ ಸಮಯವು ವ್ಯರ್ಥವಾಗುತ್ತದೆಯೋ ಅವನ್ನು
ಕೇಳುವ ಹಾಗೂ ಹೇಳುವ ಅವಶ್ಯಕತೆಯಿಲ್ಲ.
2. ವಿದ್ಯಾಭ್ಯಾಸದ
ಸಮಯದಲ್ಲಿ ಬುದ್ಧಿಯೋಗವು ಒಬ್ಬ ತಂದೆಯೊಂದಿಗೇ ತೊಡಗಿರಲಿ. ಬುದ್ಧಿಯು ಎಲ್ಲಿಯೂ ಅಲೆದಾಡಬಾರದು.
ನಿರಾಕಾರ ತಂದೆಯು ನಮಗೆ ಓದಿಸುತ್ತಿದ್ದಾರೆ ಎಂಬ ನಶೆಯಲ್ಲಿರಬೇಕಾಗಿದೆ.
ವರದಾನ:
ತಮ್ಮ ಮಹಾನತೆ
ಮತ್ತು ಮಹಿಮೆಯನ್ನು ತಿಳಿದುಕೊಂಡಿರುವ ಸರ್ವ ಆತ್ಮರಲ್ಲಿ ಶ್ರೇಷ್ಠ ವಿಧಿಯ ಮೂಲಕ ಪೂಜ್ಯನೀಯ ಭವ.
ಪ್ರತಿಯೊಬ್ಬ ಬ್ರಾಹ್ಮಣ
ಮಕ್ಕಳು ವರ್ತಮಾನ ಸಮಯ ವಿಶ್ವದ ಸರ್ವ ಆತ್ಮರಲ್ಲಿ ಶ್ರೇಷ್ಠರಾಗಿದ್ದಾರೆ ಮತ್ತು ಭವಿಷ್ಯದಲ್ಲಿ
ವಿಶ್ವದ ಮೂಲಕ ಪೂಜ್ಯನೀಯರಾಗಿದ್ದಾರೆ. ನಂಬರ್ವಾರ್ ಇದ್ದರೂ ಸಹಾ ಕೊನೆಯ ನಂಬರಿನ ಮಣಿಯೂ ಸಹಾ
ವಿಶ್ವದ ಮುಂದೆ ಮಹಾನ್ ಆಗಿದ್ದಾರೆ. ಇಲ್ಲಿಯವರೆಗೆ ಭಕ್ತ ಆತ್ಮಗಳು ಕೊನೆಯ ನಂಬರಿನ ಮಣಿಯನ್ನೂ ಸಹಾ
ಕಣ್ಣಿಗೆ ಒತ್ತಿಕೊಳ್ಳುತ್ತಾರೆ ಏಕೆಂದರೆ ಎಲ್ಲಾ ಮಕ್ಕಳೂ ಬಾಪ್ದಾದಾರವರ ಕಣ್ಣಿನ
ನಕ್ಷತ್ರಗಳಾಗಿರುವಿರಿ, ಕಣ್ಮಣಿಗಳಾಗಿರುವಿರಿ. ಯಾರು ಒಮ್ಮೆಯಾದರೂ ಮನಸ್ಸಿನಿಂದ, ಸತ್ಯ ಹೃದಯದಿಂದ
ತಮ್ಮನ್ನು ತಂದೆಯ ಮಗು ಎಂದು ನಿಶ್ಚಯ ಮಾಡಿಕೊಂಡಿರುವರು, ನೇರವಾಗಿ ತಂದೆಯ ಮಗುವಾದರೂ ಎಂದರೆ
ಅವರಿಗೆ ಪೂಜ್ಯನೀಯರಾಗುವ ಲಾಟರಿ ಅಥವಾ ವರದಾನ ದೊರಕಿ ಬಿಡುತ್ತದೆ.
ಸ್ಲೋಗನ್:
ಸ್ಥಿತಿ ಸದಾ
ಖಜಾನೆಗಳಿಂದ ಸಂಪನ್ನ ಮತ್ತು ಸಂತುಷ್ಠವಾಗಿದ್ದಾಗ ಪರಿಸ್ಥಿತಿಗಳು ಬದಲಾಗಿ ಬಿಡುತ್ತವೆ.
ಅವ್ಯಕ್ತ ಸೂಚನೆ:-
ಅಶರೀರಿ ಅಥವಾ ವಿದೇಹಿ ಸ್ಥಿತಿಯ ಅಭ್ಯಾಸ ಹೆಚ್ಚಿಸಿ.
ಬಾಪ್ದಾದಾರವರು
ಇದ್ದಕ್ಕಿದ್ದಂತೆ ಈ ಶರೀರರೂಪಿ ಮನೆಯನ್ನು ಬಿಟ್ಟು ಬಿಡಿ ಎಂದು ಡೈರೆಕ್ಷನ್ ಕೊಟ್ಟರೆ, ದೇಹ
ಅಭಿಮಾನದ ಸ್ಥಿತಿಯನ್ನು ಬಿಟ್ಟು ದೇಹಿ ಅಭಿಮಾನಿ ಆಗಿ ಬಿಡಿ, ಈ ಪ್ರಪಂಚದಿಂದ ದೂರ ತಮ್ಮ ಮಧುರ
ಮನೆಗೆ ಹೊರಟು ಹೋಗಿ ಎಂದರೆ ಹೋಗಲು ಸಾಧ್ಯವೇ? ಯುದ್ಧ ಸ್ಥಾನದಲ್ಲಿ ಯುದ್ಧ ಮಾಡುತ್ತಾ ಮಾಡುತ್ತಾ
ಸಮಯವನ್ನು ಕಳೆಯುವುದಿಲ್ಲ ಅಲ್ಲವೇ! ಅಶರೀರಿ ಆಗುವುದರಲ್ಲಿ ಒಂದುವೇಳೆ ಯುದ್ಧ ಮಾಡುವುದರಲ್ಲಿ ಸಮಯ
ಕಳೆಯುತ್ತದೆ ಎಂದರೆ ಅಂತಿಮ ಪೇಪರ್ನಲ್ಲಿ ಮಾಕ್ರ್ಸ್ ಅಥವಾ ಡಿವಿಷನ್ ಯಾವುದು ಬರುವುದು!