14.12.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನಿಮ್ಮ ಬಳಿ ಮನ್ಮನಾಭವ ಮತ್ತು ಮಧ್ಯಾಜೀಭವದ ತೀಕ್ಷ್ಣ ಬಾಣಗಳಿವೆ, ಈ ಬಾಣಗಳಿಂದಲೇ ನೀವು ಮಾಯೆಯ ಮೇಲೆ ವಿಜಯ ಪ್ರಾಪ್ತಿ ಮಾಡಿಕೊಳ್ಳುವಿರಿ”

ಪ್ರಶ್ನೆ:
ಮಕ್ಕಳಿಗೆ ತಂದೆಯ ಸಹಯೋಗವು ಯಾವ ಆಧಾರದ ಮೇಲೆ ಸಿಗುತ್ತದೆ? ಮಕ್ಕಳು ತಂದೆಗೆ ಯಾವ ರೂಪದಲ್ಲಿ ಹೇಳುತ್ತಾರೆ?

ಉತ್ತರ:
ಯಾವ ಮಕ್ಕಳು ತಂದೆಯನ್ನು ಎಷ್ಟು ಪ್ರೀತಿಯಿಂದ ನೆನಪು ಮಾಡುವರೋ ಅಷ್ಟು ತಂದೆಯ ಸಹಯೋಗ ಸಿಗುತ್ತದೆ. ಪ್ರೀತಿಯಿಂದ ಮಾತನಾಡಿ. ತಮ್ಮ ಸಂಬಂಧವನ್ನು ಸರಿಯಾಗಿಟ್ಟುಕೊಳ್ಳಿ. ಶ್ರೀಮತದಂತೆ ನಡೆಯುತ್ತಾ ಇರಿ ಆಗ ತಂದೆಯು ಸಹಾಯ ಮಾಡುತ್ತಾ ಇರುವರು. ಮಕ್ಕಳು ತಂದೆಗೆ ಅಭಿನಂದನೆಗಳನ್ನು ತಿಳಿಸುತ್ತೀರಿ - ತಾವು ಪರಮಧಾಮದಿಂದ ಬಂದು ನಮ್ಮನ್ನು ಪತಿತರಿಂದ ಪಾವನ ಮಾಡುತ್ತೀರಿ. ತಮ್ಮಿಂದ ನಮಗೆ ಎಷ್ಟೊಂದು ಸುಖವು ಸಿಗುತ್ತದೆ! ಪ್ರೀತಿಯಲ್ಲಿ ಆನಂದ ಬಾಷ್ಫಗಳೂ ಬಂದುಬಿಡುತ್ತವೆ.

ಓಂ ಶಾಂತಿ.
ಮಕ್ಕಳಿಗೆ ಎಲ್ಲರಿಗಿಂತ ಪ್ರಿಯರು ತಂದೆ-ತಾಯಿಯಾಗಿದ್ದಾರೆ ಮತ್ತೆ ತಂದೆ-ತಾಯಿಗಳಿಗೆ ಮಕ್ಕಳು ಪ್ರಿಯರಾಗಿದ್ದಾರೆ. ಈಗ ಯಾವ ತಂದೆಗೆ ತ್ವಮೇವ ಮಾತಾಶ್ಚ ಪಿತಾ ಎಂದು ಹೇಳುತ್ತಾರೆ. ಲೌಕಿಕ ತಂದೆ-ತಾಯಿಗಂತೂ ಈ ರೀತಿ ಹೇಳಲು ಸಾಧ್ಯವಿಲ್ಲ. ಈ ಮಹಿಮೆಯು ಅವಶ್ಯವಾಗಿದೆ ಆದರೆ ಇದು ಯಾರ ಮಹಿಮೆಯೆಂದು ಯಾರಿಗೂ ಗೊತ್ತಿಲ್ಲ. ಒಂದುವೇಳೆ ತಿಳಿದಿದ್ದರೆ ಅಲ್ಲಿಗೆ ಹೊರಟುಹೋಗುತ್ತಿದ್ದರು ಮತ್ತು ಅನೇಕರನ್ನು ಕರೆದುಕೊಂಡು ಹೋಗುವರು ಆದರೆ ನಾಟಕದ ಪೂರ್ವನಿಶ್ಚಿತವೇ ಹೀಗಿದೆ. ಯಾವಾಗ ನಾಟಕವು ಮುಕ್ತಾಯವಾಗುವುದೋ ಆಗಲೇ ತಂದೆಯೂ ಬರುತ್ತಾರೆ. ಮೊದಲು ಶಬ್ಧದಿಂದ ಕೂಡಿದ ನಾಟಕಗಳಿತ್ತು, ನಾಟಕದಲ್ಲಿ ಈ ರೀತಿಯಿರುತ್ತಿತ್ತು - ನಾಟಕವು ಪೂರ್ಣವಾದಾಗ ಎಲ್ಲಾ ಪಾತ್ರಧಾರಿಗಳು ಸ್ಟೇಜಿನ ಮೇಲೆ ಬಂದು ನಿಲ್ಲುತ್ತಿದ್ದರು. ಹಾಗೆಯೇ ಇದೂ ಸಹ ಬೇಹದ್ದಿನ ದೊಡ್ಡ ನಾಟಕವಾಗಿದೆ. ಇದೆಲ್ಲವೂ ಮಕ್ಕಳ ಬುದ್ಧಿಯಲ್ಲಿ ಬರಬೇಕು - ಸತ್ಯಯುಗ, ತ್ರೇತಾ, ದ್ವಾಪರ, ಕಲಿಯುಗ. ಇದೆಲ್ಲವೂ ಸೃಷ್ಟಿಚಕ್ರವಾಗಿದೆ. ಮೂಲವತನ, ಸೂಕ್ಷ್ಮವತನದಲ್ಲಿ ಚಕ್ರವು ಸುತ್ತುತ್ತದೆಯೆಂದಲ್ಲ. ಸೃಷ್ಟಿಚಕ್ರವು ಇಲ್ಲಿಯೇ ಸುತ್ತುತ್ತದೆ.

ಏಕ್ ಓಂಕಾರ್ ಸತ್ನಾಮ್ ಎಂದೂ ಗಾಯನವಿದೆ. ಇದು ಯಾರ ಮಹಿಮೆ? ಭಲೆ ಗ್ರಂಥಗಳಲ್ಲಿಯೂ ಸಿಖ್ಖರು ಮಹಿಮೆ ಮಾಡುತ್ತಾರೆ. ಗುರುನಾನಕ ಉವಾಚ...... ಈಗ ಇದು ಒಬ್ಬ ನಿರಾಕಾರನದೇ ಮಹಿಮೆಯಾಗಿದೆ ಆದರೆ ಅವರು ಪರಮಾತ್ಮನ ಮಹಿಮೆಯನ್ನು ಮರೆತು ಗುರುನಾನಕರ ಮಹಿಮೆ ಮಾಡುತ್ತಾರೆ. ನಾನಕರನ್ನು ಸದ್ಗುರುವೆಂದು ತಿಳಿಯುತ್ತಾರೆ. ವಾಸ್ತವದಲ್ಲಿ ಸೃಷ್ಟಿಯಲ್ಲಿ ಏನೆಲ್ಲವೂ ಮಹಿಮೆಯಿದೆಯೋ ಅದು ಒಬ್ಬರದೇ ಆಗಿದೆ ಮತ್ತ್ಯಾರಿಗೂ ಈ ಮಹಿಮೆಯಿಲ್ಲ. ಈಗ ನೋಡಿ, ಬ್ರಹ್ಮಾರವರಲ್ಲಿ ಒಂದುವೇಳೆ ತಂದೆಯ ಪ್ರವೇಶತೆಯಾಗದೇ ಇದ್ದಿದ್ದರೆ ಇವರು ಕವಡೆಯ ಸಮಾನವಾಗಿರುತ್ತಿದ್ದರು. ಈಗ ನೀವು ಪರಮಪಿತ ಪರಮಾತ್ಮನ ಮೂಲಕ ಕವಡೆಯಿಂದ ವಜ್ರಸಮಾನರಾಗುತ್ತಿದ್ದೀರಿ. ಇದು ಪತಿತಪ್ರಪಂಚ, ಬ್ರಹ್ಮನ ರಾತ್ರಿಯಾಗಿದೆ. ಪತಿತಪ್ರಪಂಚದಲ್ಲಿ ಯಾವಾಗ ತಂದೆಯು ಬರುತ್ತಾರೆಯೋ ಆಗ ಯಾರು ಅವರನ್ನು ಅರ್ಥಮಾಡಿಕೊಳ್ಳುವರೋ ಅವರು ತಂದೆಗೆ ಬಲಿಹಾರಿಯಾಗುತ್ತಾರೆ. ಹಿಂದಿನ ಪ್ರಪಂಚದಲ್ಲಂತೂ ಮಕ್ಕಳೂ ಸಹ ಕೆಟ್ಟುಹೋಗುತ್ತಾರೆ. ದೇವತೆಗಳು ಎಷ್ಟು ಚೆನ್ನಾಗಿದ್ದರು, ಈಗ ಅವರು ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ತಮೋಪ್ರಧಾನರಾಗಿಬಿಟ್ಟಿದ್ದಾರೆ. ಸನ್ಯಾಸಿಗಳೂ ಸಹ ಮೊದಲು ಬಹಳ ಚೆನ್ನಾಗಿದ್ದರು, ಪವಿತ್ರರಾಗಿದ್ದರು. ಭಾರತಕ್ಕೆ ಸಹಯೋಗ ನೀಡುತ್ತಿದ್ದರು. ಭಾರತದಲ್ಲಿ ಒಂದುವೇಳೆ ಪವಿತ್ರತೆಯಿಲ್ಲದೇ ಇದ್ದಿದ್ದರೆ ಕಾಮಚಿತೆಯ ಮೇಲೆ ಸುಟ್ಟುಹೋಗುತ್ತಿತ್ತು. ಸತ್ಯಯುಗದಲ್ಲಿ ಕಾಮವಿಕಾರವಿರುವುದಿಲ್ಲ, ಈ ಕಲಿಯುಗದಲ್ಲಿ ಎಲ್ಲರೂ ಕಾಮಚಿತೆಯ ಮುಳ್ಳುಗಳ ಮೇಲೆ ಎಲ್ಲರೂ ಕುಳಿತಿದ್ದಾರೆ. ಸತ್ಯಯುಗದಲ್ಲಿ ಈ ರೀತಿಯಿರುವುದಿಲ್ಲ. ಅಲ್ಲಿ ಈ ವಿಷವಿರುವುದಿಲ್ಲ, ಅಮೃತವನ್ನು ಬಿಟ್ಟು ವಿಷವನ್ನು ಕುಡಿದರೆಂದು ಹೇಳುತ್ತಾರಲ್ಲವೆ! ವಿಕಾರಿಗಳಿಗೇ ಪತಿತರೆಂದು ಕರೆಯಲಾಗುತ್ತದೆ. ಈಗಿನ ಮನುಷ್ಯರಂತೂ ನೋಡಿ 10-12 ಮಕ್ಕಳಿಗೆ ಜನ್ಮ ಕೊಡುತ್ತಿರುತ್ತಾರೆ. ಯಾವುದೇ ನಿಯಮವೇ ಇಲ್ಲ, ಸತ್ಯಯುಗದಲ್ಲಿ ಮಗು ಜನಿಸುವಾಗಲೂ ಮೊದಲೇ ಸಾಕ್ಷಾತ್ಕಾರವಾಗುತ್ತದೆ. ಶರೀರ ಬಿಡುವ ಮೊದಲೂ ಸಹ ನಾನು ಈ ಶರೀರವನ್ನು ಬಿಟ್ಟುಹೋಗಿ ಚಿಕ್ಕಮಗುವಾಗುತ್ತೇನೆ ಎಂದು ಸಾಕ್ಷಾತ್ಕಾರವಾಗುತ್ತದೆ ಮತ್ತು ಅಲ್ಲಿ ಒಂದು ಗಂಡು ಮಗುವೇ ಇರುತ್ತದೆ. ಹೆಚ್ಚು ಇಲ್ಲ. ನಿಯಮಾನುಸಾರವಾಗಿ ನಡೆಯುತ್ತದೆ. ವೃದ್ಧಿಯಂತೂ ಅವಶ್ಯವಾಗಿ ಆಗಬೇಕಾಗಿದೆ ಆದರೆ ಅಲ್ಲಿ ವಿಕಾರವಿರುವುದಿಲ್ಲ ಅಂದಮೇಲೆ ಅಲ್ಲಿ ಹೇಗೆ ಜನ್ಮವಾಗುತ್ತದೆ ಎಂದು ಅನೇಕರು ಕೇಳುತ್ತಾರೆ. ಆಗ ಸತ್ಯಯುಗದಲ್ಲಿ ಯೋಗಬಲದಿಂದ ಎಲ್ಲಾ ಕೆಲಸಗಳಾಗುತ್ತವೆ. ಯೋಗಬಲದಿಂದಲೇ ನಾವು ಸೃಷ್ಟಿಯ ರಾಜ್ಯಭಾಗ್ಯವನ್ನು ಪಡೆಯುತ್ತೇವೆಂದು ಹೇಳಬೇಕು. ಬಾಹುಬಲದಿಂದ ವಿಶ್ವದ ರಾಜ್ಯಭಾಗ್ಯವು ಸಿಗಲು ಸಾಧ್ಯವಿಲ್ಲ.

ತಂದೆಯು ತಿಳಿಸುತ್ತಾರೆ - ಒಂದುವೇಳೆ ಕ್ರಿಶ್ಚಿಯನ್ನರು ಒಂದಾದರೆ ಇಡೀ ಸೃಷ್ಟಿಯ ರಾಜ್ಯವನ್ನು ಪಡೆಯಬಲ್ಲರು ಆದರೆ ಪರಸ್ಪರ ಒಂದಾಗುವುದಿಲ್ಲ, ಇದು ನಿಯಮವೇ ಇಲ್ಲ ಆದ್ದರಿಂದ ಎರಡು ಬೆಕ್ಕುಗಳು ಪರಸ್ಪರ ಕಚ್ಚಾಡುತ್ತವೆ. ನಡುವೆ ಬೆಣ್ಣೆಯು ನೀವು ಮಕ್ಕಳಿಗೆ ಸಿಕ್ಕಿಬಿಡುತ್ತದೆ. ಕೃಷ್ಣನ ಬಾಯಲ್ಲಿ ಬೆಣ್ಣೆಯನ್ನು ತೋರಿಸಿದ್ದಾರೆ. ಇದು ಸೃಷ್ಟಿರೂಪಿ ಬೆಣ್ಣೆಯಾಗಿದೆ.

ಬೇಹದ್ದಿನ ತಂದೆಯು ತಿಳಿಸುತ್ತಾರೆ - ಈ ಯೋಗಬಲದ ಯುದ್ಧವು ಶಾಸ್ತ್ರಗಳಲ್ಲಿ ಗಾಯನವಿದೆ, ಬಾಹುಬಲದ್ದಲ್ಲ. ಆದರೆ ಅವರು ಇದನ್ನು ಹಿಂಸಕ ಯುದ್ಧವಾಗಿ ಶಾಸ್ತ್ರಗಳಲ್ಲಿ ತೋರಿಸಿದ್ದಾರೆ. ಅದರೊಂದಿಗೆ ನಮ್ಮದೇನೂ ಸಂಬಂಧವಿಲ್ಲ. ಪಾಂಡವರು-ಕೌರವರ ಯುದ್ಧವೇ ಇಲ್ಲ. ಈ ಅನೇಕ ಧರ್ಮಗಳು 5000 ವರ್ಷಗಳ ಹಿಂದೆಯೂ ಇದ್ದವು, ಇವರು ಪರಸ್ಪರ ಹೊಡೆದಾಡಿ ವಿನಾಶವಾಯಿತು. ಪಾಂಡವರು ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡಿದರು. ಇದು ಯೋಗಬಲವಾಗಿದೆ. ಇದರಿಂದ ಸೃಷ್ಟಿಯ ರಾಜ್ಯಭಾಗ್ಯವು ಸಿಗುತ್ತದೆ. ಮಾಯಾಜೀತರು ಜಗಜ್ಜೀತರಾಗುತ್ತೀರಿ. ಸತ್ಯಯುಗದಲ್ಲಿ ಮಾಯಾ ರಾವಣನಿರುವುದಿಲ್ಲ. ಅಲ್ಲಿ ರಾವಣನ ಪ್ರತಿಮೆಯನ್ನು ಮಾಡಿ ಸುಡುವುದಿಲ್ಲ. ಇಲ್ಲಂತೂ ಹೇಗೆ-ಹೇಗೆ ಪ್ರತಿಮೆಗಳನ್ನು ಮಾಡುತ್ತಾರೆ! ಸತ್ಯಯುಗದಲ್ಲಿ ಹೀಗೆ ಯಾವುದೇ ದೈತ್ಯರು ಅಥವಾ ಅಸುರರಿರುವುದಿಲ್ಲ. ಇದೂ ಸಹ ಮನುಷ್ಯರಿಗೆ ಗೊತ್ತಿಲ್ಲ - 5 ವಿಕಾರಗಳು ಸ್ತ್ರೀಯಲ್ಲಿ, ಇನ್ನು 5 ವಿಕಾರಗಳು ಪುರುಷನದಾಗಿದೆ, ಅದನ್ನು ಸೇರಿಸಿ 10 ತಲೆಯ ರಾವಣನನ್ನು ಮಾಡಿಬಿಡುತ್ತಾರೆ. ಹೇಗೆ ವಿಷ್ಣುವಿಗೂ ಸಹ ನಾಲ್ಕು ಭುಜಗಳನ್ನು ತೋರಿಸುತ್ತಾರೆ. ಮನುಷ್ಯರು ಈ ಸಾಮಾನ್ಯ ಮಾತುಗಳನ್ನೂ ತಿಳಿದುಕೊಂಡಿಲ್ಲ. ರಾವಣನನ್ನು ದೊಡ್ಡದಾಗಿ ಮಾಡಿಸಿರುತ್ತಾರೆ. ಪ್ರಿಯಾತಿಪ್ರಿಯ ಮಕ್ಕಳಿಗೆ ಈಗ ಬೇಹದ್ದಿನ ತಂದೆಯು ತಿಳಿಸುತ್ತಾರೆ - ತಂದೆಗೆ ಮಕ್ಕಳು ಯಾವಾಗಲೂ ನಂಬರ್ವಾರ್ ಪ್ರಿಯರಿರುತ್ತಾರೆ. ಕೆಲವರಂತೂ ಬಹಳ ಪ್ರಿಯರೂ ಇದ್ದಾರೆ, ಇನ್ನೂ ಕೆಲವರು ಕಡಿಮೆ ಪ್ರಿಯರೂ ಇದ್ದಾರೆ. ಯಾರೆಷ್ಟು ಅನನ್ಯ ಮಗುವಾಗಿರುವರೋ ಅಷ್ಟೇ ಪ್ರೀತಿಯಿರುವುದು. ಇಲ್ಲಿಯೂ ಸಹ ಯಾರು ಸರ್ವೀಸಿನಲ್ಲಿ ತತ್ಪರರಾಗಿರುತ್ತಾರೆ, ದಯಾಹೃದಯಿಯಾಗಿರುತ್ತಾರೆ ಅವರು ಪ್ರಿಯರಾಗುತ್ತಾರೆ. ಭಕ್ತಿಮಾರ್ಗದಲ್ಲಿ ನನ್ನ ಮೇಲೆ ದಯೆತೋರಿಸು (ಮರ್ಸಿ ಆನ್ ಮಿ) ಎಂದು ಹೇಳುತ್ತಾರೆ ಆದರೆ ಈ ನಾಟಕವನ್ನು ಯಾರೂ ತಿಳಿದುಕೊಂಡಿಲ್ಲ. ಯಾವಾಗ ಬಹಳ ತಮೋಪ್ರಧಾನರಾಗಿಬಿಡುವರೋ ಆಗಲೇ ತಂದೆಯು ಬರುತ್ತಾರೆ. ಈಶ್ವರನು ಏನು ಬೇಕಾದರೂ ಮಾಡಬಲ್ಲರು ಅಥವಾ ಎಲ್ಲಿ ಬೇಕೋ ಅಲ್ಲಿ ಬರಬಹುದೆಂದಲ್ಲ. ಒಂದುವೇಳೆ ಇಷ್ಟು ಶಕ್ತಿಯಿದ್ದರೆ ಮತ್ತೆ ಇಷ್ಟೊಂದು ನಿಂದನೆ ಏಕೆ ಸಿಗುತ್ತಿತ್ತು? ವನವಾಸವೇಕೆ ಇರುತ್ತಿತ್ತು? ಈ ಮಾತುಗಳು ಬಹಳ ಗುಪ್ತವಾಗಿವೆ. ಕೃಷ್ಣನಿಗಂತೂ ನಿಂದನೆಯಾಗಲು ಸಾಧ್ಯವಿಲ್ಲ. ಭಗವಂತನು ಇದನ್ನು ಮಾಡಲು ಸಾಧ್ಯವಿಲ್ಲವೆ ಎಂದು ಹೇಳುತ್ತಾರೆ ಆದರೆ ವಿನಾಶವು ಅವಶ್ಯವಾಗಿ ಆಗಲೇಬೇಕು ಅಂದಮೇಲೆ ಇದನ್ನು ತಡೆಯುವ ಮಾತೇ ಇಲ್ಲ. ಎಲ್ಲರನ್ನೂ ಹಿಂತಿರುಗಿ ಕರೆದುಕೊಂಡು ಹೋಗಬೇಕಾಗಿದೆ. ಸ್ಥಾಪನೆ, ವಿನಾಶ ಮಾಡಿಸುತ್ತಾರೆಂದರೆ ಅವಶ್ಯವಾಗಿ ಭಗವಂತನೇ ಇರುವರಲ್ಲವೆ! ಪರಮಪಿತ ಪರಮಾತ್ಮನು ಸ್ಥಾಪನೆ ಮಾಡುತ್ತಾರೆ. ಯಾವುದರ ಸ್ಥಾಪನೆ? ಮುಖ್ಯವಾಗಿ ನೀವು ಈ ಮಾತನ್ನೇ ಕೇಳಿ - ಗೀತೆಯ ಭಗವಂತ ಯಾರು? ಇಡೀ ಪ್ರಪಂಚವು ಇದರಲ್ಲಿ ತಬ್ಬಿಬ್ಬಾಗಿದೆ. ಅವರಂತೂ ಮನುಷ್ಯನ ಹೆಸರನ್ನು ಹಾಕಿದ್ದಾರೆ. ಆದಿಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯನ್ನು ಭಗವಂತನ ವಿನಃ ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ಅಂದಮೇಲೆ ಕೃಷ್ಣನು ಗೀತೆಯ ಭಗವಂತನೆಂದು ಹೇಗೆ ಹೇಳುತ್ತೀರಿ! ವಿನಾಶ ಮತ್ತು ಸ್ಥಾಪನಾ ಕಾರ್ಯವನ್ನು ಮಾಡಿಸುವುದು ಯಾರ ಕೆಲಸ? ಗೀತೆಯ ಭಗವಂತನನ್ನೇ ಮರೆತು ಗೀತೆಯನ್ನೇ ಖಂಡನೆ ಮಾಡಿಬಿಟ್ಟಿದ್ದಾರೆ. ಇದು ಅತಿದೊಡ್ಡ ತಪ್ಪು ಮಾಡಿಬಿಟ್ಟಿದ್ದಾರೆ. ಎರಡನೆಯದಾಗಿ ಜಗನ್ನಾಥಪುರಿಯಲ್ಲಿ ದೇವತೆಗಳ ಚಿತ್ರಗಳನ್ನು ಬಹಳ ಕೆಟ್ಟದಾಗಿ ತೋರಿಸಿದ್ದಾರೆ. ಕೊಳಕು ಚಿತ್ರಗಳನ್ನು ಇಡುವುದು ಸರ್ಕಾರದ ನಿಷೇಧವಾಗಿದೆ. ಅಂದಮೇಲೆ ಇದರ ಬಗ್ಗೆಯೂ ತಿಳಿಸಬೇಕು. ಈ ಮಂದಿರಗಳಲ್ಲಿ ಯಾರ ಬುದ್ಧಿಯಲ್ಲಿಯೂ ಈ ಮಾತುಗಳು ಬರುವುದಿಲ್ಲ, ಇದನ್ನು ತಂದೆಯೇ ತಿಳಿಸುತ್ತಾರೆ.

ನೋಡಿ, ಮಕ್ಕಳು ಎಷ್ಟೊಂದು ಪ್ರತಿಜ್ಞಾಪತ್ರಗಳನ್ನು ಬರೆಯುತ್ತಾರೆ. ರಕ್ತದಿಂದಲೂ ಬರೆಯುತ್ತಾರೆ, ಇದರ ಮೇಲೆ ಒಂದುಕಥೆಯೂ ಇದೆಯಲ್ಲವೇ - ಕೃಷ್ಣನಿಗೆ ರಕ್ತವು ಬಂದಾಗ ದ್ರೌಪದಿಯು ತನ್ನ ಸೀರೆಯನ್ನು ಹರಿದು ಕಟ್ಟಿದಳು. ಇದು ಪ್ರೀತಿಯಲ್ಲವೆ! ನಿಮ್ಮ ಪ್ರೀತಿಯು ಶಿವತಂದೆಯ ಜೊತೆಯಿದೆ. ಇವರ (ಬ್ರಹ್ಮಾ) ರಕ್ತವು ಹೊರಬರಬಹುದು, ಇವರಿಗೆ ದುಃಖವಾಗಬಹುದು ಆದರೆ ಶಿವತಂದೆಗೆಂದೂ ದುಃಖವಾಗಲು ಸಾಧ್ಯವಿಲ್ಲ ಏಕೆಂದರೆ ಅವರಿಗೆ ತಮ್ಮ ಶರೀರವಂತೂ ಇಲ್ಲ. ಕೃಷ್ಣನಿಗೆ ಒಂದುವೇಳೆ ಏನಾದರೂ ಆದರೆ ದುಃಖವಾಗುತ್ತದೆಯಲ್ಲವೆ. ಅಂದಮೇಲೆ ಕೃಷ್ಣನನ್ನು ಪರಮಾತ್ಮನೆಂದು ಹೇಳಲು ಹೇಗೆ ಸಾಧ್ಯ! ತಂದೆಯು ತಿಳಿಸುತ್ತಾರೆ - ನಾನಂತೂ ಸುಖ-ದುಃಖದಿಂದ ಭಿನ್ನನಾಗಿದ್ದೇನೆ. ಹಾ! ನಾನು ಬಂದು ಮಕ್ಕಳನ್ನು ಸುಖಿಯನ್ನಾಗಿ ಮಾಡುತ್ತೇನೆ. ಆದ್ದರಿಂದಲೇ ಸದಾಶಿವನೆಂದು ಗಾಯನ ಮಾಡಲಾಗುತ್ತದೆ. ಸದಾಶಿವ, ಸುಖ ಕೊಡುವವರೆಂದು ಹೇಳುತ್ತಾರೆ. ನನ್ನ ಮಧುರಾತಿ ಮಧುರ ಅನನ್ಯ ಮಕ್ಕಳು ಯಾರು ಸುಪುತ್ರರಿದ್ದಾರೆಯೋ, ಜ್ಞಾನದ ಧಾರಣೆ ಮಾಡಿ ಪವಿತ್ರರಾಗಿದ್ದಾರೆಯೋ ಸತ್ಯಯೋಗಿ ಮತ್ತು ಜ್ಞಾನಿಗಳಾಗಿರುತ್ತಾರೆಯೋ ಅವರು ನನಗೆ ಪ್ರಿಯರಾಗುತ್ತಾರೆ. ಲೌಕಿಕ ತಂದೆಯ ಬಳಿಯೂ ಕೆಲವರು ಒಳ್ಳೆಯವರು, ಕೆಲವರು ಕೆಟ್ಟಮಕ್ಕಳಿರುತ್ತಾರೆ. ಕೆಲವರಂತೂ ಕುಲಕ್ಕೆ ಕಳಂಕ ತರುವವರಾಗಿಬಿಡುತ್ತಾರೆ, ಬಹಳ ಕೊಳಕರಾಗಿಬಿಡುತ್ತಾರೆ. ಇಲ್ಲಿಯೂ ಹಾಗೆಯೇ. ಆಶ್ಚರ್ಯವಾಗಿ ಜ್ಞಾನವನ್ನು ಕೇಳಿ ತಂದೆಯ ಮಕ್ಕಳಾಗಿ, ಸ್ವಲ್ಪ ದಿನಗಳವರೆಗೆ ನಡೆದು ಮತ್ತೆ ವಿಚ್ಛೇದನವನ್ನು ಕೊಟ್ಟುಬಿಡುತ್ತಾರೆ ಆದ್ದರಿಂದಲೇ ನಿಶ್ಚಯಪತ್ರವನ್ನು ಬರೆಸಿಕೊಳ್ಳಲಾಗುತ್ತದೆ. ಇದರಿಂದ ಅವರ ಬರವಣಿಗೆಯನ್ನು ಮತ್ತೆ ಅವರ ಮುಂದಿಡಬಹುದು. ಕೆಲವರು ರಕ್ತದಿಂದಲೂ ಬರೆದುಕೊಡುತ್ತಾರೆ. ರಕ್ತದಿಂದ ಬರೆದು ಪ್ರತಿಜ್ಞೆ ಮಾಡುತ್ತಾರೆ. ಈಗಿನ ದಿನಗಳಲ್ಲಂತೂ ಪ್ರತಿಜ್ಞೆಯನ್ನು ಮಾಡಿಸುತ್ತಾರೆ ಆದರೆ ಅದು ಸುಳ್ಳು ಪ್ರತಿಜ್ಞೆಯಾಗಿದೆ. ಈಶ್ವರನನ್ನು ಎಲ್ಲಿ ನೋಡಿದರಲ್ಲಿ ಇದ್ದಾರೆಂದು ತಿಳಿಯುವುದು ಅರ್ಥಾತ್ ಇವರೂ ಈಶ್ವರನಾಗಿದ್ದಾರೆ, ನಾನೂ ಈಶ್ವರನಾಗಿ ಪ್ರತಿಜ್ಞೆ ಮಾಡುತ್ತೇನೆಂದರ್ಥ. ಈಗ ನೀವು ತಂದೆಯನ್ನು ಪ್ರತ್ಯಕ್ಷದಲ್ಲಿ ನೋಡುತ್ತೀರಿ, ತಂದೆಯು ಈ ಕಣ್ಣುಗಳೆಂಬ ಕಿಟಕಿಗಳಿಂದ ನೋಡುತ್ತಾರೆ, ಪರಶರೀರವಾಗಿದೆ, ಲೋನ್ ಆಗಿ ತೆಗೆದುಕೊಂಡಿದ್ದಾರೆ. ಬ್ರಹ್ಮಸಹಾ ಬಾಡಿಗೆದಾರರಾಗಿದ್ದಾರೆ, ಮನೆಯನ್ನು ಬಾಡಿಗೆಗೆ ತೆಗೆದುಕೊಳ್ಳಲಾಗುತ್ತದೆಯಲ್ಲವೆ. ಅಂದಾಗ ತಂದೆಯೂ ಸಹ ಹೇಳುತ್ತಾರೆ - ನಾನು ಈ ಶರೀರದಿಂದ ಕೆಲಸ ತೆಗೆದುಕೊಳ್ಳುತ್ತೇನೆ. ತಂದೆಯು ಈ ಕಿಟಕಿಗಳಿಂದ ನೋಡುತ್ತಾರೆ, ಪ್ರತ್ಯಕ್ಷದಲ್ಲಿದ್ದಾರೆ. ಆತ್ಮವು ಅವಶ್ಯವಾಗಿ ಕರ್ಮೇಂದ್ರಿಯಗಳಿಂದಲೇ ಕೆಲಸ ಮಾಡುತ್ತದೆಯಲ್ಲವೆ. ನಾನೂ ಸಹ ಬರುತ್ತೇನೆ ಆದ್ದರಿಂದಲೇ ತಿಳಿಸುತ್ತೇನಲ್ಲವೆ. ಕರ್ಮೇಂದ್ರಿಯಗಳನ್ನು ಉಪಯೋಗಿಸುವುದರಿಂದ ಅವಶ್ಯವಾಗಿ ಬಾಡಿಗೆಯನ್ನೂ ಕೊಡಬೇಕಾಗುತ್ತದೆ.

ನೀವು ಮಕ್ಕಳು ಈ ಸಮಯದಲ್ಲಿ ನರಕವನ್ನು ಸ್ವರ್ಗವನ್ನಾಗಿ ಮಾಡುವವರಾಗಿದ್ದೀರಿ. ನೀವು ಬೆಳಕನ್ನು ನೀಡುವವರು, ಜಾಗೃತಗೊಳಿಸುವವರಾಗಿದ್ದೀರಿ. ಅನ್ಯರೆಲ್ಲರೂ ಕುಂಭಕರ್ಣನ ನಿದ್ರೆಯಲ್ಲಿ ಮಲಗಿಬಿಟ್ಟಿದ್ದಾರೆ. ನೀವು ಮಾತೆಯರೇ ಜಾಗೃತಗೊಳಿಸುತ್ತೀರಿ, ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೀರಿ. ಇಲ್ಲಿ ಬಹುಮತವು ಮಾತೆಯರದಾಗಿದೆ ಆದ್ದರಿಂದ ವಂದೇ ಮಾತರಂ ಎಂದು ಹೇಳಲಾಗುತ್ತದೆ. ಭೀಷ್ಮ ಪಿತಾಮಹರಿಗೆ ನೀವೇ ಜ್ಞಾನದ ಬಾಣವನ್ನು ಹೊಡೆದಿದ್ದೀರಿ. ಮನ್ಮನಾಭವ, ಮಧ್ಯಾಜೀಭವ ಎಷ್ಟೊಂದು ಸಹಜವಾಗಿದೆ. ಈ ಬಾಣಗಳಿಂದಲೇ ನೀವು ಮಾಯೆಯ ಮೇಲೆ ಜಯಗಳಿಸುತ್ತೀರಿ. ನೀವು ಒಬ್ಬ ತಂದೆಯ ನೆನಪು, ಒಬ್ಬರ ಶ್ರೀಮತದನುಸಾರವೇ ನಡೆಯಬೇಕಾಗಿದೆ. ತಂದೆಯು ನಿಮಗೆ ಈಗ ಇಂತಹ ಶ್ರೇಷ್ಠಕರ್ಮವನ್ನು ಕಲಿಸುತ್ತಾರೆ. ಇದರಿಂದ 21 ಜನ್ಮಗಳವರೆಗೆ ಎಂದೂ ನಿಮ್ಮ ಕರ್ಮವು ಕುಟುಕುವುದಿಲ್ಲ ಅರ್ಥಾತ್ ದುಃಖ ಕೊಡುವುದಿಲ್ಲ. ನೀವು ಆರೋಗ್ಯವಂತರು, ಐಶ್ವರ್ಯವಂತರಾಗುತ್ತೀರಿ. ಅನೇಕಬಾರಿ ನೀವು ಸ್ವರ್ಗದ ಮಾಲೀಕರಾಗಿದ್ದಿರಿ, ರಾಜ್ಯವನ್ನು ಪಡೆದಿದ್ದೀರಿ ಮತ್ತು ಕಳೆದುಕೊಂಡಿದ್ದೀರಿ. ನೀವು ಬ್ರಾಹ್ಮಣ ಕುಲಭೂಷಣರೇ ನಾಯಕ-ನಾಯಕಿಯ ಪಾತ್ರವನ್ನಭಿನಯಿಸುತ್ತೀರಿ. ನಾಟಕದಲ್ಲಿ ಎಲ್ಲರಿಗಿಂತ ಶ್ರೇಷ್ಠಪಾತ್ರವು ನೀವು ಮಕ್ಕಳದಾಗಿದೆ ಅಂದಮೇಲೆ ಹೀಗೆ ಶ್ರೇಷ್ಠರನ್ನಾಗಿ ಮಾಡುವ ತಂದೆಯ ಜೊತೆ ಬಹಳ ಪ್ರೀತಿಯಿರಬೇಕು - ಬಾಬಾ, ತಾವು ಚಮತ್ಕಾರ ಮಾಡುತ್ತೀರಿ, ನಾವೇ ನಾರಾಯಣರಾಗಿದ್ದೆವೆಂದು ನಮಗೆ ಕನಸು-ಮನಸ್ಸಿನಲ್ಲಿಯೂ ತಿಳಿದಿರಲಿಲ್ಲ. ತಂದೆಯು ತಿಳಿಸುತ್ತಾರೆ - ನೀವೇ ನಾರಾಯಣ ಅಥವಾ ಲಕ್ಷ್ಮಿ ದೇವಿ-ದೇವತೆಗಳಾಗಿದ್ದಿರಿ ನಂತರ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಅಸುರರಾಗಿಬಿಟ್ಟಿದ್ದೀರಿ. ಈಗ ಮತ್ತೆ ಪುರುಷಾರ್ಥ ಮಾಡಿ ಆಸ್ತಿಯನ್ನು ಪಡೆಯಿರಿ. ಯಾರೆಷ್ಟು ಪುರುಷಾರ್ಥ ಮಾಡುವರೋ ಅವರಿಗೆ ಸಾಕ್ಷಾತ್ಕಾರವಾಗುತ್ತಾ ಇರುತ್ತದೆ.

ರಾಜಯೋಗವನ್ನು ಒಬ್ಬ ತಂದೆಯೇ ಕಲಿಸಿದ್ದರು. ಸತ್ಯ-ಸತ್ಯವಾದ ಸಹಜರಾಜಯೋಗವನ್ನು ನೀವೀಗ ಕಲಿಸುತ್ತೀರಿ. ತಂದೆಯ ಪರಿಚಯವನ್ನು ಎಲ್ಲರಿಗೆ ಕೊಡುವುದು ನಿಮ್ಮ ಕರ್ತವ್ಯವಾಗಿದೆ, ಎಲ್ಲರೂ ನಿರ್ಧನಿಕರಾಗಿಬಿಟ್ಟಿದ್ದಾರೆ. ಈ ಮಾತುಗಳನ್ನು ಕಲ್ಪದ ಹಿಂದಿನವರು ಕೋಟಿಯಲ್ಲಿ ಕೆಲವರೇ ಅರಿತುಕೊಳ್ಳುತ್ತಾರೆ. ತಂದೆಯು ತಿಳಿಸಿದ್ದಾರೆ - ಇಡೀ ಪ್ರಪಂಚದಲ್ಲಿ ಮಹಾನ್ ಮೂರ್ಖರನ್ನು ನೋಡಬೇಕೆಂದರೆ ಇಲ್ಲಿಯೇ ನೋಡಿ, ಯಾವ ತಂದೆಯಿಂದ 21 ಜನ್ಮಗಳ ಆಸ್ತಿಯು ಸಿಗುತ್ತದೆಯೋ ಅವರಿಗೂ ಸಹ ವಿಚ್ಛೇದನವನ್ನು ಕೊಡುತ್ತಾರೆ. ಇದು ನಾಟಕದಲ್ಲಿ ನಿಗಧಿಯಾಗಿದೆ, ಈಗ ನೀವು ಸ್ವಯಂ ಈಶ್ವರನ ಸಂತಾನರಾಗಿದ್ದೀರಿ ಮತ್ತೆ ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರರಾಗುತ್ತೀರಿ. ಈಗ ಆಸುರೀ ಸಂತಾನರಿಂದ ಈಶ್ವರೀಯ ಸಂತಾನರಾಗುತ್ತೀರಿ. ತಂದೆಯು ಪರಮಧಾಮದಿಂದ ಬಂದು ಪತಿತರಿಂದ ಪಾವನರನ್ನಾಗಿ ಮಾಡುತ್ತಾರೆಂದರೆ ಎಷ್ಟೊಂದು ಧನ್ಯವಾದಗಳನ್ನು ಹೇಳಬೇಕು. ಭಕ್ತಿ ಮಾರ್ಗದಲ್ಲಿಯೂ ಸಹ ಧನ್ಯವಾದಗಳನ್ನು ಹೇಳುತ್ತಿರುತ್ತಾರೆ. ದುಃಖದಲ್ಲಿ ಧನ್ಯವಾದಗಳನ್ನು ಹೇಳುವುದಿಲ್ಲ, ಈಗ ನಿಮಗೆ ಎಷ್ಟೊಂದು ಸುಖವು ಸಿಗುತ್ತದೆ ಎಂದಮೇಲೆ ಬಹಳ ಪ್ರೀತಿಯಿರಬೇಕು. ನಾವು ತಂದೆಯೊಂದಿಗೆ ಪ್ರೀತಿಯಿಂದ ಮಾತನಾಡುತ್ತೇವೆಂದರೆ ಅವರೇಕೆ ಕೇಳುವುದಿಲ್ಲ! ಸಂಬಂಧವಿದೆಯಲ್ಲವೆ. ಮುಂಜಾನೆಯೆದ್ದು ತಂದೆಯೊಂದಿಗೆ ಮಾತನಾಡಬೇಕು, ಬ್ರಹ್ಮಾತಂದೆಯು ತಮ್ಮ ಅನುಭವವನ್ನು ತಿಳಿಸುತ್ತಾರೆ - ನಾನು ಬಹಳ ನೆನಪು ಮಾಡುತ್ತೇನೆ. ತಂದೆಯ ನೆನಪಿನಲ್ಲಿ ಆನಂದಭಾಷ್ಫಗಳೂ ಬಂದುಬಿಡುತ್ತವೆ. ನಾವು ಹೇಗಿದ್ದೆವು, ತಂದೆಯು ನಮ್ಮನ್ನು ಹೇಗೆ ಮಾಡಿಬಿಟ್ಟಿದ್ದಾರೆ - ತತ್ತ್ವಂ. ನೀವೂ ಸಹ ಆ ರೀತಿಯಾಗುತ್ತೀರಿ, ಯೋಗದಲ್ಲಿರುವವರಿಗೆ ತಂದೆಯು ಸಹಯೋಗವನ್ನು ಕೊಡುತ್ತಾರೆ. ತಾನಾಗಿಯೇ ಕಣ್ಣು ತೆರೆಯುವುದು. ಮಂಚವು ಅಲುಗಾಡುವುದು, ತಂದೆಯು ಅನೇಕರನ್ನು ಅಮೃತವೇಳೆಯಲ್ಲಿ ಏಳಿಸುತ್ತಾರೆ. ಬೇಹದ್ದಿನ ತಂದೆಯು ಎಷ್ಟೊಂದು ದಯೆ ತೋರುತ್ತಾರೆ. ತಾವಿಲ್ಲಿ ಏತಕ್ಕಾಗಿ ಬಂದಿದ್ದೀರಿ? ಬಾಬಾ, ಭವಿಷ್ಯದಲ್ಲಿ ಶ್ರೀನಾರಾಯಣನನ್ನು ವರಿಸುವ ಶಿಕ್ಷಣವನ್ನು ಪಡೆಯಲು ಬಂದಿದ್ದೇವೆಂದು ಹೇಳುತ್ತೀರಿ ಅಥವಾ ಲಕ್ಷ್ಮಿಯನ್ನು ವರಿಸುವ ಪರೀಕ್ಷೆಯನ್ನು ತೇರ್ಗಡೆ ಮಾಡುತ್ತಿದ್ದೀರಿ. ಇದು ಎಷ್ಟು ಅದ್ಭುತವಾದ ಶಾಲೆಯಾಗಿದೆ. ಎಷ್ಟು ಅದ್ಭುತವಾದ ಶಾಲೆಗಳಾಗಿವೆ, ಇದು ಅತಿದೊಡ್ಡ ವಿಶ್ವವಿದ್ಯಾಲಯವಾಗಿದೆ ಆದರೆ ಈಶ್ವರೀಯ ವಿಶ್ವವಿದ್ಯಾಲಯವೆಂದು ಹೆಸರನ್ನಿಡಲು ಬಿಡುವುದಿಲ್ಲ. ಕೊನೆಗೊಂದು ದಿನ ಅವಶ್ಯವಾಗಿ ಒಪ್ಪುತ್ತಾರೆ, ಬರುತ್ತಾರೆ. ಇದು ಅತಿದೊಡ್ಡ ವಿಶ್ವವಿದ್ಯಾಲಯವಾಗಿದೆ ಎಂದು ಹೇಳುತ್ತಾರೆ. ತಂದೆಯಂತೂ ತಮ್ಮ ನಯನಗಳ ಮೇಲೆ ಕುಳ್ಳರಿಸಿಕೊಂಡು ನಿಮಗೆ ಓದಿಸುತ್ತಾರೆ. ನಿಮ್ಮನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳುತ್ತಾರೆ. ಇಂತಹ ತಂದೆಯೊಂದಿಗೆ ಇಷ್ಟೊಂದು ಮಾತನಾಡಬೇಕು ಮತ್ತೆ ತಂದೆಯೂ ಸಹ ಬಹಳ ಸಹಯೋಗ ನೀಡುತ್ತಾರೆ. ಯಾರ ಗಂಟಲು ಕಟ್ಟಿದೆಯೋ ಅವರ ಬೀಗವನ್ನು ತೆರೆಯುತ್ತಾರೆ. ರಾತ್ರಿಯಲ್ಲಿ ನೆನಪು ಮಾಡುವುದರಿಂದ ಬಹಳ ಆನಂದವಾಗುವುದು. ಅಮೃತವೇಳೆಯಲ್ಲಿ ನಾನು ಹೇಗೆ ಮಾತನಾಡುತ್ತೇನೆಂದು ಬ್ರಹ್ಮಾತಂದೆಯು ತಮ್ಮ ಅನುಭವವನ್ನು ತಿಳಿಸುತ್ತಾರೆ.

ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ಎಚ್ಚರವಾಗಿರಿ. ಕುಲಕ್ಕೆ ಕಳಂಕ ತರಬಾರದು. ಪಂಚವಿಕಾರಗಳನ್ನು ದಾನವಾಗಿ ಕೊಟ್ಟು ಮತ್ತೆ ಹಿಂತಿರುಗಿ ಪಡೆಯಬಾರದು (ಹರಿಶ್ಚಂದ್ರನ ತರಹ) ಎಲ್ಲಾ ಮಾತುಗಳು ಈ ಸಮಯದ್ದಾಗಿದೆ. ಇದನ್ನು ಅವರು ಉದಾಹರಣೆಯಾಗಿ ತೆಗೆದುಕೊಂಡಿದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಗೆ ಪ್ರಿಯರಾಗಲು ದಯಾಹೃದಯಿಗಳಾಗಿ ಸೇವೆಯಲ್ಲಿ ತತ್ಫರರಾಗಿರಬೇಕಾಗಿದೆ. ಸುಪುತ್ರರು, ಆಜ್ಞಾಕಾರಿಗಳಾಗಿ ಸತ್ಯಯೋಗಿ ಹಾಗೂ ಜ್ಞಾನಿಗಳಾಗಬೇಕಾಗಿದೆ.

2. ಅಮೃತವೇಳೆ ಎದ್ದು ತಂದೆಯೊಂದಿಗೆ ಬಹಳ ಮಧುರಾತಿ ಮಧುರವಾಗಿ ಮಾತನಾಡಬೇಕಾಗಿದೆ. ತಂದೆಗೆ ಧನ್ಯವಾದಗಳನ್ನು ತಿಳಿಸಬೇಕಾಗಿದೆ. ತಂದೆಯ ಸಹಯೋಗದ ಅನುಭವ ಮಾಡಲು ಅತಿಪ್ರಿಯ ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ.

ವರದಾನ:
ಸದಾ ಉಮಂಗ-ಉತ್ಸಾಹದಲ್ಲಿರುತ್ತಾ ಖುಷಿಯ ಗೀತೆ ಹಾಡುತ್ತಿರುವಂತಹ ಅವಿನಾಶಿ ಅಧೃಷ್ಟಶಾಲಿ ಭವ.

ತಾವು ಅಧೃಷ್ಟಶಾಲಿ ಮಕ್ಕಳು ಅವಿನಾಶಿ ವಿಧಿಯಿಂದ ಅವಿನಾಶಿ ಸಿದ್ಧಿಗಳನ್ನು ಪ್ರಾಪ್ತಿ ಮಾಡಿಕೊಳ್ಳುವಿರಿ. ನಿಮ್ಮ ಮನಸ್ಸಿನಿಂದ ಸದಾ ವ್ಹಾ! ವ್ಹಾ! ನ ಖುಷಿಯ ಗೀತೆ ನುಡಿಯುತ್ತಿರುವುದು. ವ್ಹಾ ಬಾಬಾ! ವ್ಹಾ ನನ್ನ ಅಧೃಷ್ಠ! ವ್ಹಾ ಮಧುರ ಪರಿವಾರ! ವ್ಹಾ ಶ್ರೇಷ್ಠ ಸಂಗಮದ ಸುಂದರ ಸಮಯ! ಪ್ರತಿ ಕರ್ಮ ವ್ಹಾ!-ವ್ಹಾ! ಆಗಿದೆ. ಆದ್ದರಿಂದ ನೀವು ಅವಿನಾಶಿ ಅಧೃಷ್ಟಶಾಲಿಗಳಾಗಿರುವಿರಿ. ನಿಮ್ಮ ಮನಸ್ಸಿನಲ್ಲಿ ಎಂದೂ ಸಹ ವೈ, ಐ (ಏಕೆ?, ನಾನು) ಬರಲು ಸಾಧ್ಯವಿಲ್ಲ. ವೈ ನ ಬದಲಿಗೆ ವ್ಹಾ!-ವ್ಹಾ! ಮತ್ತು ಐ (ನಾನು) ಬದಲಿಗೆ ಬಾಬಾ-ಬಾಬಾ ಶಬ್ಧವೇ ಬರುವುದು.

ಸ್ಲೋಗನ್:
ಏನು ಸಂಕಲ್ಪ ಮಾಡುವಿರಿ ಅದಕ್ಕೆ ಅವಿನಾಶಿ ಗೌಮೆರ್ಂಟ್ನ ಸ್ಟಾಂಪ್ ಹಾಕಿದಾಗ ಅಟಲವಾಗಿರುವಿರಿ.