14.12.25 Avyakt Bapdada
Kannada
Murli 18.02.2008 Om Shanti Madhuban
“ವಿಶ್ವ ಪರಿವರ್ತನೆಗಾಗಿ
ಶಾಂತಿಯ ಶಕ್ತಿಯನ್ನು ಪ್ರಯೋಗ ಮಾಡಿ”
ಇಂದು ಬಾಪ್ದಾದಾರವರು
ತಮ್ಮ ವಿಶ್ವ ಪರಿವರ್ತಕ ತಂದೆಯ ಆಶಾ ದೀಪ ಮಕ್ಕಳನ್ನು ನಾಲ್ಕಾರು ಕಡೆ ನೋಡಿ
ಹರ್ಷಿತರಾಗುತ್ತಿದ್ದೇವೆ. ಬಾಪ್ದಾದಾರವರೊಂದಿಗೆ ಮಕ್ಕಳಿಗೆ ಅತಿ ಅತಿ ಪ್ರೀತಿಯಿದೆಯೆಂದು
ಬಾಪ್ದಾದಾರವರಿಗೆ ತಿಳಿದಿದೆ ಹಾಗೂ ಬಾಪ್ದಾದಾರವರಿಗೂ ಸಹ ಪ್ರತಿಯೊಂದು ಮಗುವಿನೊಂದಿಗೆ ಪದಮ
ಗುಣಕ್ಕಿಂತಲೂ ಹೆಚ್ಚು ಪ್ರೀತಿಯಿದೆ ಹಾಗೂ ಈ ಪ್ರೀತಿ ಸದಾ ಈ ಸಂಗಮಯುಗದಲ್ಲಿ ಸಿಗಲೇಬೇಕು. ಹೇಗೆ
ಸಮಯ ಸಮೀಪ ಬರುತ್ತಿದೆಯೋ ಅದೇ ಪ್ರಮಾಣವಾಗಿ ಪ್ರತಿಯೊಂದು ಮಗುವಿನ ಹೃದಯದಲ್ಲಿ ಈಗ ಏನಾದರೂ
ಮಾಡಲೇಬೇಕು ಎಂಬ ಸಂಕಲ್ಪ, ಉಮ್ಮಂಗ-ಉತ್ಸಾಹವಿದೆಯೆಂದು ಬಾಪ್ದಾದಾರವರು ತಿಳಿದಿದ್ದಾರೆ. ಏಕೆಂದರೆ
ಇಂದಿನ ಮೂರು ಶಕ್ತಿಗಳು ಅತಿಯಾಗಿ ಏರುಪೇರಿನಲ್ಲಿ ಇರುವುದನ್ನು ನೋಡುತ್ತಿದ್ದೀರಿ. ಧರ್ಮದ
ಶಕ್ತಿಯಾಗಿರಬಹುದು, ರಾಜ್ಯ ಶಕ್ತಿಯಾಗಿರಬಹುದು, ವಿಜ್ಞಾನದ ಶಕ್ತಿಯಾಗಿರಬಹುದು. ವೈಜ್ಞಾನಿಕ
ಶಕ್ತಿಯು ಪ್ರಕೃತಿಯನ್ನು ಈಗ ಯಥಾರ್ಥ ರೂಪದಲ್ಲಿ ನಡೆಸಲು ಆಗುತ್ತಿಲ್ಲ. ಆಗಲೇಬೇಕೆಂದು ಹೇಳುತ್ತಾರೆ
ಏಕೆಂದರೆ ವೈಜ್ಞಾನಿಕ ಶಕ್ತಿಯು ಪ್ರಕೃತಿಯ ಮುಖಾಂತರ ಕಾರ್ಯ ಮಾಡಬೇಕು. ಅಂದಾಗ ಪ್ರಕೃತಿಯು
ವಿಜ್ಞಾನದ ಸಾಧನವಾಗಿದ್ದು ಪ್ರಯತ್ನಪಟ್ಟರೂ ಈಗ ಹತೋಟಿಯಲ್ಲಿ ಇಲ್ಲ. ಇನ್ನೂ ಮುಂದೆ ಹೋದಂತೆ
ಪ್ರಕೃತಿಯ ಆಟ ಇನ್ನೂ ಹೆಚ್ಚಾಗುತ್ತಾ ಹೋಗುತ್ತದೆ ಏಕೆಂದರೆ ಪ್ರಕೃತಿಯಲ್ಲಿಯೂ ಈಗ ಆದಿ ಸಮಯದ
ಶಕ್ತಿಯಿಲ್ಲ. ಇಂತಹ ಸಮಯದಲ್ಲಿ ಈಗ ಯೋಚಿಸಿ - ಈಗ ಯಾವ ಶಕ್ತಿಯು ಪರಿವರ್ತನೆ ಮಾಡಲು ಸಾಧ್ಯ! ಈ
ಶಾಂತಿಯ ಶಕ್ತಿ ವಿಶ್ವವನ್ನು ಪರಿವರ್ತನೆ ಮಾಡುತ್ತದೆ. ನಾಲ್ಕಾರು ಕಡೆಯ ಏರುಪೇರನ್ನು ಸಮಾಪ್ತಿ
ಮಾಡುವವರು ಯಾರು? ತಿಳಿದಿದೆಯಲ್ಲವೆ! ಪರಮಾತ್ಮ ಪಾಲನೆಯ ಅಧಿಕಾರಿ ಆತ್ಮರ ಹೊರತು ಬೇರೆ ಯಾರೂ ಮಾಡಲು
ಸಾಧ್ಯವಿಲ್ಲ. ಅಂದಮೇಲೆ ನಾವೇ ಬ್ರಾಹ್ಮಣ ಆತ್ಮರೇ ಬಾಪ್ದಾದಾರವರ ಜೊತೆಯಲ್ಲಿಯೂ ಇದ್ದೇವೆ ಹಾಗೂ
ಪರಿವರ್ತನೆಯ ಕಾರ್ಯದಲ್ಲಿ ಜೊತೆಗಾರರೂ ಆಗಿದ್ದೇವೆಂದು ತಮ್ಮೆಲ್ಲರಿಗೂ ಉಮ್ಮಂಗ-ಉತ್ಸಾಹವಿದೆ.
ಬಾಪ್ದಾದಾರವರು
ವಿಶೇಷವಾಗಿ ಅಮೃತವೇಳೆ ಜೊತೆ ಜೊತೆಯಲ್ಲಿ ನಡೆಯುತ್ತಲೂ ನೋಡಿದೆವು- ಪ್ರಪಂಚದಲ್ಲಿ ಮೂರು ಶಕ್ತಿಗಳ
ಏರುಪೇರು ಎಷ್ಟಿದೆಯೋ ಅಷ್ಟು ತಮ್ಮ ಶಾಂತಿ ದೇವಿಯ, ಶಾಂತಿ ದೇವನ ಶಕ್ತಿಶಾಲಿ ಶಾಂತಿಯ ಶಕ್ತಿಯ
ಪ್ರಯೋಗ ಎಷ್ಟಿರಬೇಕೋ ಅದಕ್ಕಿಂತಲೂ ಕಡಿಮೆಯಿದೆ. ಆದ್ದರಿಂದ ಬಾಪ್ದಾದಾರವರು ಈಗ ಎಲ್ಲಾ ಮಕ್ಕಳಿಗೂ
ಇದೇ ಉಮ್ಮಂಗ ತರಿಸುತ್ತಿದ್ದಾರೆ - ಸೇವೆಯ ಕ್ಷೇತ್ರದಲ್ಲಿ ಒಳ್ಳೆಯ ಧ್ವನಿಯನ್ನು ಹರಡುತ್ತಿದ್ದೀರಿ,
ಅದರಲ್ಲಿ ಏರುಪೇರಿದೆ ಆದರೆ ಶಾಂತಿಯ ಶಕ್ತಿಯ ವೈಬ್ರೇಷನ್ ಈಗ ಹರಡಬೇಕು. (ಮತ್ತೆ ಮತ್ತೆ ಕೆಮ್ಮು
ಬರುತ್ತಿದೆ- ಮೈಕ್ ಸರಿಯಿಲ್ಲ ಆದರೂ ಸಹ ಬಾಪ್ದಾದಾರವರು ಮಕ್ಕಳನ್ನು ಮಿಲನ ಮಾಡದೇ ಇರಲು
ಸಾಧ್ಯವಿಲ್ಲ) ಆದ್ದರಿಂದ ಬಾಪ್ದಾದಾರವರು ಇದೇ ವಿಶೇಷ ಸೂಚನೆ ನೀಡುತ್ತಿದ್ದಾರೆ - ಈಗ ನಾಲ್ಕಾರು
ಕಡೆ ಶಾಂತಿಯ ಶಕ್ತಿಯ ವೈಬ್ರೇಷನ್ ಹರಡಿ.
ಈಗ ವಿಶೇಷ ಬ್ರಹ್ಮಾ ಬಾಬಾ
ಹಾಗೂ ಜಗದಂಬಾರವರನ್ನು ನೋಡಿದಿರಿ - ಸ್ವಯಂ ಆದಿ ದೇವ ಆಗಿದ್ದರೂ ಸಹ ಶಾಂತಿಯ ಶಕ್ತಿಯ ಗುಪ್ತ
ಪುರುಷಾರ್ಥವನ್ನು ಮಾಡಿದರು, ತಮ್ಮ ದಾದಿ ಕರ್ಮಾತೀತರಾಗಲು ಇದೇ ಮಾತನ್ನು ಎಷ್ಟು ಪಕ್ಕಾ
ಮಾಡಿಕೊಂಡರು. ಜವಾಬ್ದಾರಿಯಿದ್ದರೂ, ಸೇವೆಯ ಯೋಜನೆಗಳನ್ನು ಮಾಡುತ್ತಲೂ, (ಕೆಮ್ಮು ಬರುತ್ತಿದೆ)
ಮೈಕ್ ಎಷ್ಟೇ ಸರಿಯಿಲ್ಲದಿದ್ದರೂ ಬಾಪ್ದಾದಾರವರಿಗೆ ಪ್ರೀತಿಯಿದೆ. ಸೇವೆಯ ಜವಾಬ್ದಾರಿ ಎಷ್ಟೇ
ದೊಡ್ಡದಾಗಿದ್ದರೂ ಶಾಂತಿಯ ಶಕ್ತಿಯಿಲ್ಲದೆ ಸೇವೆಯ ಸಫಲತೆಯ ಪ್ರತ್ಯಕ್ಷ ಫಲವು ಎಷ್ಟು ಬಯಸುತ್ತೀರೋ
ಅಷ್ಟು ಸಿಗಲು ಸಾಧ್ಯವಿಲ್ಲ ಏಕೆಂದರೆ ಇದರಿಂದಲೇ ತಮಗೋಸ್ಕರ ಇಡೀ ಕಲ್ಪದ ಪ್ರಾಲಬ್ಧವನ್ನು
ರೂಪಿಸಿಕೊಳ್ಳಲು ಸಾಧ್ಯ. ಇದಕ್ಕಾಗಿ ಈಗ ಪ್ರತಿಯೊಬ್ಬರೂ ಸ್ವಯಂನಪ್ರತಿ, ಇಡೀ ಕಲ್ಪದ ರಾಜ್ಯದ
ಪ್ರಾಲಬ್ಧ ಹಾಗೂ ಪೂಜ್ಯದ ಪ್ರಾಲಬ್ಧವನ್ನು ಜೊತೆಯಲ್ಲಿ ರೂಪಿಸಿಕೊಳ್ಳಲು ಈಗ ಸಮಯವಿದೆ ಏಕೆಂದರೆ
ಸಮಯವು ಇನ್ನೂ ನಾಜೂಕು ಆಗಿಯೇ ಆಗುತ್ತದೆ. ಇಂತಹ ಸಮಯದಲ್ಲಿ ಶಾಂತಿಯ ಶಕ್ತಿಯ ಮೂಲಕ ಟಚಿಂಗ್ ಪವರ್
ಮತ್ತು ಕ್ಯಾಚಿಂಗ್ ಪವರ್ನ ಅವಶ್ಯಕತೆ ಬಹಳ ಇದೆ. ಈ ಸಾಧನಗಳು ಏನೂ ಮಾಡಲು ಆಗದೇ ಇರುವ ಸಮಯ
ಬರುತ್ತದೆ, ಕೇವಲ ಆಧ್ಯಾತ್ಮಿಕ ಶಕ್ತಿ, ಬಾಪ್ದಾದಾರವರ ಸೂಚನೆಗಳ ಟಚಿಂಗ್ ಕಾರ್ಯವನ್ನು ಮಾಡಿಸಲು
ಸಾಧ್ಯವಾಗುತ್ತದೆ. ಅಂದಾಗ ತಮ್ಮಲ್ಲಿ ಪರಿಶೀಲನೆ ಮಾಡಿಕೊಳ್ಳಿ - ಇಂತಹ ಸಮಯದಲ್ಲಿ ಮನಸ್ಸು ಮತ್ತು
ಬುದ್ಧಿಯಲ್ಲಿ ಬಾಪ್ದಾದಾರವರ ಟಚಿಂಗ್ ಬರುತ್ತದೆಯೇ? ಇದರಲ್ಲಿ ಬಹಳ ಕಾಲದ ಅಭ್ಯಾಸವಿರಬೇಕು. ಇದರ
ಸಾಧನವಾಗಿದೆ - ಸದಾ ಮನಸ್ಸು ಹಾಗೂ ಬುದ್ಧಿ ಕೆಲವೊಮ್ಮೆ ಅಲ್ಲ, ಸದಾಕಾಲ ಸ್ಪಚ್ಛ ಮತ್ತು
ಸ್ಪಷ್ಟವಿರಬೇಕು. ಈಗ ರಿಹರ್ಸಲ್ ಹೆಚ್ಚುತ್ತಾ ಹೋಗುತ್ತದೆ ಹಾಗೂ ಸೆಕೆಂಡಿನಲ್ಲಿ ರಿಯಲ್ ಆಗಿ
ಬಿಡುತ್ತದೆ. ಸ್ವಲ್ಪವಾದರೂ ಮನಸ್ಸಿನಲ್ಲಿ ಅಥವಾ ಬುದ್ಧಿಯಲ್ಲಿ ಯಾವುದೇ ಆತ್ಮನ ಪ್ರತಿ ಅಥವಾ
ಯಾವುದೇ ಕಾರ್ಯದ ಪ್ರತಿ, ಯಾವುದೇ ಸಹಯೋಗಿ, ಜೊತೆಗಾರರ ಪ್ರತಿ ಸ್ವಲ್ಪ ನಕಾರಾತ್ಮಕವಿದ್ದರೂ ಅದನ್ನು
ಸ್ವಚ್ಛ ಮತ್ತು ಸ್ಪಷ್ಟ ಎಂದು ಹೇಳಲಾಗುವುದಿಲ್ಲ. ಆದ್ದರಿಂದ ಬಾಪ್ದಾದಾರವರು ಇದರ ಕಡೆ ಗಮನ
ಸೆಳೆಯುತ್ತಿದ್ದಾರೆ. ಇಡೀ ದಿನದಲ್ಲಿ ಪರಿಶೀಲನೆ ಮಾಡಿಕೊಳ್ಳಿ - ಶಾಂತಿಯ ಶಕ್ತಿಯನ್ನು ಎಷ್ಟು ಜಮಾ
ಮಾಡಿಕೊಂಡೆನು? ಸೇವೆ ಮಾಡುತ್ತಲೂ ಶಾಂತಿಯ ಶಕ್ತಿಯು ಒಂದುವೇಳೆ ವಾಣಿಯಲ್ಲಿ ಇಲ್ಲದಿದ್ದರೆ
ಪ್ರತ್ಯಕ್ಷಫಲವಾದ ಸಫಲತೆ ಎಷ್ಟು ಸಿಗಬೇಕೋ ಅಷ್ಟು ಸಿಗಲು ಸಾಧ್ಯವಿಲ್ಲ. ಪರಿಶ್ರಮ ಹೆಚ್ಚು ಫಲ
ಕಡಿಮೆಯಾಗುತ್ತದೆ. ಭಲೆ ಸೇವೆ ಮಾಡಿ ಆದರೂ ಶಾಂತಿಯ ಶಕ್ತಿಯಿಂದ ಸಂಪನ್ನ ಸೇವೆ ಮಾಡಿ. ಇದರಲ್ಲಿ
ಎಷ್ಟು ಫಲಿತಾಂಶವನ್ನು ಬಯಸುತ್ತೀರೋ ಅದಕ್ಕಿಂತಲೂ ಹೆಚ್ಚಾಗಿಯೇ ಸಿಗುತ್ತದೆ. ಮತ್ತೆ-ಮತ್ತೆ
ಪರಿಶೀಲಿಸಿಕೊಳ್ಳಿ. ಉಳಿದಂತೆ ಬಾಪ್ದಾದಾರವರಿಗೆ ದಿನ-ಪ್ರತಿದಿನ ಏನೆಲ್ಲಾ ಎಲ್ಲೆಲ್ಲಿ ಸೇವೆ
ಮಾಡುತ್ತಿದ್ದೀರೋ ಅದನ್ನು ಚೆನ್ನಾಗಿ ಮಾಡುತ್ತಿರುವುದರ ಪ್ರತಿ ಖುಷಿಯಿದೆ ಆದರೆ ಸ್ವಯಂನ ಪ್ರತಿ
ಶಾಂತಿಯ ಶಕ್ತಿಯನ್ನು ಜಮಾ ಮಾಡಿಕೊಳ್ಳುವುದರ ಬಗ್ಗೆ ಪರಿವರ್ತನೆ ಮಾಡಿಕೊಳ್ಳುವುದರ ಬಗ್ಗೆ ಇನ್ನೂ
ಗಮನವನ್ನಿಡಿ.
ಈಗ ಕೊನೆಗೂ ವಿಶ್ವ
ಪರಿವರ್ತನೆಗೆ ನಿಮಿತ್ತರು ಯಾರಾಗುತ್ತಾರೆಂದು ಇಡೀ ಪ್ರಪಂಚವು ಹುಡುಕಾಡುತ್ತಿದೆ! ಏಕೆಂದರೆ
ದಿನ-ಪ್ರತಿದಿನ ದುಃಖ ಹಾಗೂ ಅಶಾಂತಿ ಹೆಚ್ಚಾಗುತ್ತಿದೆ, ಇನ್ನೂ ಹೆಚ್ಚಾಗಲೇಬೇಕು. ಅಂದಾಗ ಭಕ್ತರು
ತಮ್ಮ ಇಷ್ಟ ದೇವನನ್ನು ನೆನಪು ಮಾಡುತ್ತಿದ್ದಾರೆ, ಕೆಲವರು ಅತಿಯಲ್ಲಿ ಹೋಗಿ ಬೇಸರದ ಜೀವನವನ್ನು
ನಡೆಸುತ್ತಿದ್ದಾರೆ. ಧರ್ಮ ಗುರುಗಳ ಕಡೆ ಕಣ್ಣನ್ನು ಹಾಯಿಸುತ್ತಿದ್ದಾರೆ. ಹಾಗೂ ವಿಜ್ಞಾನಿಗಳೂ ಸಹ
ಈಗ ಹೇಗೆ ಮಾಡುವುದು, ಎಲ್ಲಿಯವರೆಗೆ ಆಗುತ್ತದೆ ಎಂದು ಯೋಚನೆ ಮಾಡುತ್ತಿದ್ದಾರೆ. ಇವರೆಲ್ಲರಿಗೂ
ಉತ್ತರ ನೀಡುವವರು ಯಾರು? ಪ್ರತಿಯೊಬ್ಬರ ಹೃದಯದಲ್ಲಿ ಕೊನೆಗೂ ಸ್ವರ್ಣೀಮ ಪ್ರಭಾತ ಯಾವಾಗ
ಬರುತ್ತದೆಯೆಂಬ ಕೂಗು ಇದೆ. ಅಂದಾಗ ತಾವೆಲ್ಲರೂ ಅದನ್ನು ತರುವವರಲ್ಲವೆ! ಆಗಿದ್ದೀರಾ? ಯಾರು
ನಿಮಿತ್ತರಾಗಿದ್ದೀರೆಂದು ತಿಳಿದಿದ್ದೀರೋ ಅವರು ಕೈಯೆತ್ತಿ. ನಿಮಿತ್ತರಾಗಿದ್ದೀರಾ. ಒಳ್ಳೆಯದು -
ಇಷ್ಟೆಲ್ಲಾ ಮಂದಿ ನಿಮಿತ್ತರಾದಾಗ ಎಷ್ಟು ಸಮಯ ಬೇಕಾಗುತ್ತದೆ. ತಾವೆಲ್ಲರೂ ಸಹ ಖುಷಿ ಪಡುತ್ತೀರಿ
ಹಾಗೂ ಬಾಪ್ದಾದಾರವರೂ ಖುಷಿ ಪಡುತ್ತಾರೆ. ಈ ಗೋಲ್ಡನ್ ಛಾನ್ಸ್ ಪ್ರತಿಯೊಬ್ಬರಿಗೂ ಗೋಲ್ಡನ್ ಪ್ರಮಾಣ
ಪ್ರಾಪ್ತವಾಗುತ್ತದೆ.
ಈಗ ಪರಸ್ಪರದಲ್ಲಿ ಹೇಗೆ
ಸೇವೆಯ ಬಗ್ಗೆ ಮೀಟಿಂಗ್ ಮಾಡುತ್ತೀರಿ, ಸಮಸ್ಯೆಗಳನ್ನು ಪರಿಹರಿಸಲು ಮಾಡುತ್ತೀರಿ. ಅದೇರೀತಿ ಈ
ಮೀಟಿಂಗ್ ಮಾಡಿ, ಈ ಯೋಜನೆ ಮಾಡಿ. ನೆನಪು ಮತ್ತು ಸೇವೆ. ನೆನಪಿನ ಅರ್ಥವಾಗಿದೆ - ಶಾಂತಿಯ ಶಕ್ತಿ
ಹಾಗೂ ಅದು ಬಹಳ ಶ್ರೇಷ್ಠ ಸ್ಥಿತಿ (ಟಾಪ್ಸ್ಟೇಜ್) ಯಲ್ಲಿದ್ದಾಗ ಪ್ರಾಪ್ತವಾಗುತ್ತದೆ. ಹೇಗೆ ಯಾವುದೇ
ಬಹಳ ಎತ್ತರದ ಸ್ಥಾನದಿಂದ ನೋಡಿದಾಗ ಎಲ್ಲವೂ ಸ್ಪಷ್ಟವಾಗಿಯೇ ಕಾಣುತ್ತದೆ. ಹಾಗೆಯೇ ತಮ್ಮ ಶ್ರೇಷ್ಠ
ಸ್ಥಿತಿ, ಎಲ್ಲದಕ್ಕಿಂತಲೂ ಮೇಲೆ ಏನಿದೆ? ಪರಮಧಾಮ. ಬಾಪ್ದಾದಾರವರು ತಿಳಿಸುತ್ತೇವೆ - ಸೇವೆ ಮಾಡಿ,
ನಂತರ ಬಂದು ಶ್ರೇಷ್ಠ ಸ್ಥಾನದಲ್ಲಿ ತಂದೆಯ ಜೊತೆಯಲ್ಲಿ ಕುಳಿತು ಬಿಡಿ. ಹೇಗೆ ಸುಸ್ತಾದಾಗ 5
ನಿಮಿಷಗಳಾದರೂ ಶಾಂತಿಯಿಂದ ಕುಳಿತುಕೊಳ್ಳುತ್ತೀರಲ್ಲವೆ, ಆಗ ಎಷ್ಟು ಅಂತರವಾಗುತ್ತದೆ! ಅದೇರೀತಿ
ಮಧ್ಯ-ಮಧ್ಯದಲ್ಲಿ ಬಂದು ತಂದೆಯ ಜೊತೆ ಕುಳಿತು ಬಿಡಿ. ಇನ್ನೊಂದು ಎತ್ತರದ ಸ್ಥಾನವಾಗಿದೆ -
ಸೃಷ್ಟಿಚಕ್ರವನ್ನೂ ನೋಡಿರಿ, ಸೃಷ್ಟಿಚಕ್ರದಲ್ಲಿ ಶ್ರೇಷ್ಠ ಸ್ಥಾನ ಯಾವುದು? ಸಂಗಮ ಯುಗದಲ್ಲಿ ಸಮಯದ
ಮುಳ್ಳನ್ನು ಮೇಲೆ ತೋರಿಸುತ್ತೀರಿ. ಕೆಳಗೆ ಬಂದು ಸೇವೆ ಮಾಡಿ, ನಂತರ ಶ್ರೇಷ್ಠ ಸ್ಥಾನದಲ್ಲಿ ಹೋಗಿ
ತಲುಪಿ. ಅಂದಾಗ ಏನು ಮಾಡಬೇಕೆಂದು ತಿಳಿಯಿತೆ? ಸಮಯವು ತಮ್ಮನ್ನು ಕರೆಯುತ್ತಿದೆಯೇ ಅಥವಾ ತಾವು
ಸಮಯವನ್ನು ಸಮೀಪ ತರುತ್ತಿದ್ದೀರಾ? ರಚಯಿತ ಯಾರು? ಪರಸ್ಪರದಲ್ಲಿ ಇಂತಹ ಯೋಜನೆ ಮಾಡಿ.
ಮಕ್ಕಳು ಬರಲೇಬೇಕೆಂದು
ಹೇಳಿದರೆ ಬಾಪ್ದಾದಾರವರು ಹಾಜಿ ಎಂದು ಹೇಳಿದರು. ಹಾಗೆಯೇ ಒಬ್ಬರಿಗೊಬ್ಬರ ಮಾತುಗಳನ್ನು,
ಸ್ವಭಾವವನ್ನು, ವೃತ್ತಿಯನ್ನು ತಿಳಿದು ಹಾಜಿ, ಹಾಜಿ ಎಂದು ಹೇಳುವುದರಿಂದ ಸಂಘಟನೆಯ ಶಕ್ತಿಯು
ಶಾಂತಿಯ ಜ್ವಾಲೆಯನ್ನು ಪ್ರಕಟಿಸುತ್ತದೆ. ಜ್ವಾಲಾಮುಖಿಯನ್ನು ನೋಡಿದ್ದೀರಲ್ಲವೆ ಅಂದಾಗ ಈ ಸಂಘಟನೆಯ
ಶಕ್ತಿಯು ಶಾಂತಿಯ ಜ್ವಾಲೆಯನ್ನು ಪ್ರಕಟಿಸುತ್ತದೆ. ಒಳ್ಳೆಯದು.
ಮಹಾರಾಷ್ಟ್ರ, ಆಂಧ್ರ,
ಬಾಂಬೆಯ ಸೇವಾಸರದಿಯಾಗಿದೆ:-
ಹೆಸರೇ ಮಹಾರಾಷ್ಟ್ರವಾಗಿದೆ. ಮಹಾರಾಷ್ಟ್ರಕ್ಕೆ ವಿಶೇಷವಾಗಿ ಡ್ರಾಮಾನುಸಾರ ಗೋಲ್ಡನ್ ಗಿಫ್ಟ್
ಪ್ರಾಪ್ತವಾಗಿದೆ. ಯಾವುದು? ಬ್ರಹ್ಮಾಬಾಬಾ ಮತ್ತು ಮಮ್ಮಾರವರ ಪಾಲನೆಯು ಮಹಾರಾಷ್ಟ್ರಕ್ಕೆ ಡೈರೆಕ್ಟ್
ಆಗಿ ಸಿಕ್ಕಿದೆ. ದೆಹಲಿ ಹಾಗೂ ಯು.ಪಿ.ಯವರಿಗೂ ಸಿಕ್ಕಿದೆ ಆದರೆ ಮಹಾರಾಷ್ಟ್ರಕ್ಕೆ ಹೆಚ್ಚು
ಸಿಕ್ಕಿದೆ. ಮಹಾರಾಷ್ಟ್ರದವರು ಮಹಾನ್ ಆಗಿಯೇ ಇದ್ದೀರಿ, ಈಗ ಏನು ಮಾಡಬೇಕು! ಮಹಾರಾಷ್ಟ್ರದವರೆಲ್ಲರೂ
ಸೇರಿ ಇಂತಹ ಯೋಜನೆ, ಇಂತಹ ಮೀಟಿಂಗ್ ಮಾಡಿ ಯಾವುದರಿಂದ ಎಲ್ಲರ ಒಂದೇ ಸ್ವಭಾವ, ಒಂದೇ ಸಂಸ್ಕಾರ,
ಒಂದೇ ಸೇವೆಯ ಲಕ್ಷ್ಯ ಶಾಂತಿಯ ಶಕ್ತಿಯನ್ನು ಹರಡುವುದು ಹೇಗೆ ಎಂಬುದರ ಯೋಜನೆ ಮಾಡಿ.
ಮಾಡುತ್ತೀರಲ್ಲವೆ! ಮಾಡುತ್ತೀರಾ? ಒಳ್ಳೆಯದು - ಬಾಪ್ದಾದಾರವರಿಗೆ ಒಂದು ತಿಂಗಳ ನಂತರ ಏನು
ಮಾಡುತ್ತೀರೆಂದು ರಿಪೋರ್ಟ್ ಕೊಡಿ. ತಮ್ಮೆಲ್ಲರ ಆತ್ಮಿಕ ವಾರ್ತಾಲಾಪದಿಂದ ಇನ್ನೂ
ಸೇರ್ಪಡೆಯಾಗುತ್ತದೆ. ಬೇರೆ-ಬೇರೆ ಜೋನ್ ಇದೆಯಲ್ಲವೆ ಅಂದಾಗ ಅವರೂ ಸಹ ಅಡಿಷನ್ ಮಾಡಿಕೊಳ್ಳುತ್ತಾರೆ.
ಇದರಲ್ಲಿ ನೀವು ಪ್ಲಾನ್ ಮಾಡಿ, ರತ್ನಗಳನ್ನು ಅವರು ಜೋಡಿಸುತ್ತಾರೆ. ಸಾಹಸವಿದೆಯೇ? ಟೀಚರ್ಸ್
ಸಾಹಸವಿದೆಯೇ? ಮೊದಲ ಸಾಲಿನವರಿಗೆ ಸಾಹಸವಿದೆಯೇ? ಸಂಸ್ಕಾರಮಿಲನದ ರಾಸ್ ಯಾವ ಜೋನ್ ಮಾಡುತ್ತದೆ?
ಶುಭ ವೃತ್ತಿ, ಶುಭ ದೃಷ್ಟಿ ಹಾಗೂ ಶುಭ ಕೃತಿ ಇದು ಹೇಗೆ ಆಗುತ್ತದೆ ಎನ್ನುವುದರ ಬಗ್ಗೆ ಒಂದು
ಜೋನ್ನ್ನವರು ಪ್ಲಾನ್ ಮಾಡಿ. ಇನ್ನೊಂದು ಜೋನ್ - ಯಾವುದೇ ಆತ್ಮ ಸ್ವಯಂ ಸಂಸ್ಕಾರ ಪರಿವರ್ತನೆ
ಮಾಡಿಕೊಳ್ಳಲು ಆಗದಿದ್ದರೆ, ಬಯಸುತ್ತಾರೆ ಆದರೆ ಮಾಡಿಕೊಳ್ಳಲು ಆಗುವುದಿಲ್ಲ ಅಂದಾಗ ಅವರ ಪ್ರತಿ
ಯಾವ ದಯಾ ಹೃದಯ, ಕ್ಷಮೆ, ಸಹಯೋಗ, ಸ್ನೇಹವನ್ನು ನೀಡಿ. ಹೇಗೆ ತಮ್ಮ ಬ್ರಾಹ್ಮಣ ಪರಿವಾರವನ್ನು
ಶಕ್ತಿಶಾಲಿಯನ್ನಾಗಿ ಮಾಡುವುದು ಎಂಬುದರ ಬಗ್ಗೆ ಪ್ಲಾನ್ ಮಾಡಿ. ಇದು ಆಗುತ್ತದೆಯಲ್ಲವೆ?
ಆಗುತ್ತದೆಯೇ? ಮೊದಲ ಸಾಲಿನವರು ತಿಳಿಸಿ, ಆಗುತ್ತದೆಯೇ? ಆಗುತ್ತದೆಯೆಂದು ಹೇಳುವವರು ಕೈಯೆತ್ತಿ.
ಏಕೆಂದರೆ ಮೊದಲ ಸಾಲಿನಲ್ಲಿ ಎಲ್ಲರೂ ಮಹಾರಥಿಗಳೇ ಕುಳಿತಿದ್ದಾರೆ. ಈಗ ಬಾಪ್ದಾದಾರವರು ಹೆಸರು
ಹೇಳುವುದಿಲ್ಲ, ಪ್ರತಿಯೊಂದು ಜೋನ್ ತಮಗೆ ಇಷ್ಟವಾದ ವಿಷಯದ ಬಗ್ಗೆ ವಾರ್ತಾಲಾಪ ಮಾಡಿ. ಶಿವರಾತ್ರಿಯ
ನಂತರ ಒಂದು ತಿಂಗಳಿನಲ್ಲಿ ಫಲಿತಾಂಶ ತಿಳಿಸಿ. ಮಹಾರಾಷ್ಟ್ರ ಇದೆಯಲ್ಲವೆ, ಹಾಗಾದರೆ ಇನ್ನೂ
ಒಳ್ಳೆಯದು. ಎಲ್ಲಾ ಕಡೆ ವೃದ್ದಿಯಂತೂ ಆಗುತ್ತಿದೆ ಆದ್ದರಿಂದ ಬಾಪ್ದಾದಾರವರು ಶುಭಾಷಯಗಳನ್ನು
ನೀಡುತ್ತಿದ್ದಾರೆ. ಈಗ ಏನು ಮಾಡಿದ್ದೀರೋ ಅದಕ್ಕಾಗಿ ಶುಭಾಷಯಗಳು ಆದರೆ ಈಗ ಕ್ವಾಲಿಟಿಯನ್ನು
ಹೆಚ್ಚಿಸಿ. ಕ್ವಾಲಿಟಿಯ ಅರ್ಥ ಸಾಹುಕಾರರಲ್ಲ, ನೆನಪನ್ನು ನಿಯಮ ಪ್ರಮಾಣವಾಗಿ ಜೀವನದಲ್ಲಿ
ಪ್ರತ್ಯಕ್ಷ ಪ್ರಮಾಣವಾಗಿ ತೋರಿಸುವುದೇ ಕ್ವಾಲಿಟಿಯ ಅರ್ಥವಾಗಿದೆ. ಬಾಕಿ ಮೈಕ್ ಹಾಗೂ ವಾರಸುಧಾರರ
ನಿಮಗೆ ತಿಳಿದೇ ಇದೆ. ನಿಶ್ಚಯಬುದ್ಧಿ ಹಾಗೂ ನಿಶ್ಚಿಂತರಾಗಿದ್ದೀರಿ. ಒಳ್ಳೆಯದು.
ಡಬಲ್ ವಿದೇಶಿಯರಲ್ಲಿ,
ಯುಗಲ್ ಹಾಗೂ ಕುಮಾರಿಯರ ವಿಶೇಷ ರಿಟ್ರೀಟ್ ನಡೆಯಿತು:
ಇವರು ಸಂಕೇತ (ಬ್ಯಾಡ್ಜ್)ವನ್ನು ಹಾಕಿಕೊಂಡು ಬಂದಿದ್ದಾರೆ. ಚೆನ್ನಾಗಿದೆ. ಕುಮಾರಿಯರು ಎಲ್ಲರೂ
ನೋಡುವಂತೆ ಹಿಂದೆ ತಿರುಗಿ. ಒಳ್ಳೆಯದು - ಎಲ್ಲರೂ ಅದೃಷ್ಟವಂತರೇ ಆಗಿದ್ದೀರಿ ಆದರೆ ಕುಮಾರಿಯರು
ಡಬಲ್ ಅದೃಷ್ಟವಂತರು, ಏಕೆ? ಹಾಗೆ ನೋಡಿದರೆ ಕುಮಾರರೂ ಅದೃಷ್ಟವಂತರೇ ಆಗಿದ್ದಾರೆ ಆದರೆ ಒಂದುವೇಳೆ
ಕುಮಾರಿ ಜೀವನದಲ್ಲಿ ಕುಮಾರಿಯರು ಅಮರರಾಗಿದ್ದರೆ ಬಾಪ್ದಾದಾರವರ ಗುರುಭಾಯಿಯ ಸಿಂಹಾಸನವು
ಲಭಿಸುತ್ತದೆ. ಹೃದಯ ಸಿಂಹಾಸನವಂತು ಇದ್ದೇ ಇದೆ, ಅದು ಎಲ್ಲರಿಗೂ ಇದೆ ಆದರೆ ಗುರುವಿನ ಸಿಂಹಾಸನವು
ಎಲ್ಲಿ ಕುಳಿತು ಮುರುಳಿಯನ್ನು ನುಡಿಸುತ್ತಾರೆ, ಟೀಚರ್ ಆಗಿ ಟೀಚ್ ಮಾಡಿದರೆ ಅದು ಸಿಗುತ್ತದೆ.
ಆದ್ದರಿಂದ ಬಾಪ್ದಾದಾರವರು ಕುಮಾರಿಯರಿಗಾಗಿ ತಿಳಿಸುತ್ತಾರೆ - ಕುಮಾರಿಯರೇ, ಕುಮಾರಿಯರು 21
ಪರಿವಾರವನ್ನು ಉದ್ಧಾರ ಮಾಡುವವರೆಂಬ ಗಾಯನವಿದೆ ಅಂದಾಗ ತಾವು ತಮ್ಮ 21 ಜನ್ಮವನ್ನಂತೂ ಉದ್ಧಾರ
ಮಾಡಿಕೊಂಡಿರಿ ಆದರೆ ಯಾರಿಗಾಗಿ ನಿಮಿತ್ತರಾಗುತ್ತೀರೋ ಅವರದೂ 21 ಜನ್ಮಗಳ ಉದ್ಧಾರ ಮಾಡಿದಿರಿ.
ಇಂತಹ ಕುಮಾರಿಯರಾಗಿದ್ದೀರಲ್ಲವೆ? ಪಕ್ಕಾ? ಯಾರು ಸ್ವಲ್ಪ-ಸ್ವಲ್ಪ ಕಚ್ಚಾ ಆಗಿದ್ದೀರೋ ಅವರು
ಕೈಯೆತ್ತಿ. ಪಕ್ಕಾ ಆಗಿದ್ದೀರಲ್ಲವೆ? ತಮ್ಮನ್ನು ತಾವು ನೋಡಿಕೊಳ್ಳಿ - ಪಕ್ಕಾ ಆಗಿದ್ದೀರಲ್ಲವೆ?
ಪಕ್ಕಾ ಆಗಿದ್ದೀರಲ್ಲವೆ? ಮೋಹಿನಿ ಬೆಹೆನ್ ತಿಳಿಸಿ, ಪಕ್ಕಾ ಆಗಿದ್ದಾರೆಯೇ? ಕುಮಾರಿಯರ ಗ್ರೂಪ್
ಪಕ್ಕಾ ಆಗಿದೆಯೇ? ಇವರ ಟೀಚರ್ ಯಾರು? (ಮೀರಾ ಬೆಹೆನ್) ಪಕ್ಕಾ ಆಗಿದ್ದರೆ ಚಪ್ಪಾಳೆ ತಟ್ಟಿ.
ಬಾಪ್ದಾದಾರವರಿಗೂ ಖುಷಿಯಿದೆ. ಒಳ್ಳೆಯದು - (ಇದು ಕುಮಾರಿಯರ 8ನೇ ರಿಟ್ರೀಟ್ ಆಗಿದೆ, ಇದರ ವಿಶೇಷತೆ
ತನ್ನತನದ ಅನುಭವ ಮಾಡಿದರು. 30 ದೇಶಗಳಿಂದ 80 ಕುಮಾರಿಯರು ಬಂದಿದ್ದರು. ಎಲ್ಲರೂ ಬಹಳ ಚೆನ್ನಾಗಿ
ಅನುಭವ ಮಾಡಿದರು) ಶುಭಾಷಯಗಳು. ಇವರಂತೂ ಕುಮಾರಿಯರಾಗಿದ್ದಾರೆ, ತಾವೆಲ್ಲರೂ ಏನಾಗಿದ್ದೀರಿ? ಇವರಂತೂ
ಕುಮಾರಿಯರು, ನಾವು ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿಯರು ಎಂದು ಹೇಳಿಕೊಳ್ಳುತ್ತೀರಿ. ತಾವೇನು
ಕಡಿಮೆಯಿಲ್ಲ. ಈ ಕುಮಾರಿಯರ ಗ್ರೂಪ್ ಎಲ್ಲಾ ಕಡೆಯಿಂದ ಬಂದು ಸೇರಿರುವ ಗ್ರೂಪ್ ಆಗಿದೆ. ಅಂದಾಗ
ಬಂದಿರುವ ಯುಗಲ್ ಗ್ರೂಪ್ನವರಿಗೆ ಯಾವ ನಶೆಯಿದೆ? ಹೆಚ್ಚಿನ ನಶೆ. ತಿಳಿದಿದೆಯೇ? ಪ್ರವೃತ್ತಿಯವರು ಈ
ಜ್ಞಾನವನ್ನು ಧಾರಣೆ ಮಾಡಿದ ದಿನದಿಂದ ಮೆಜಾರಿಟಿ ಜನರಲ್ಲಿ ನಾವೂ ಮಾಡಬಹುದೆಂಬ ಧೈರ್ಯ ಬಂದಿದೆ.
ಬ್ರಹ್ಮಾಕುಮಾರಿಯರಾಗುವುದು ಎಂದರೆ ಎಲ್ಲವನ್ನೂ ಬಿಟ್ಟು ಬಿಡುವುದು ಎಂದು ತಿಳಿದಿದ್ದರು, ಈಗ
ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿಯರಾಗಿ ಪರಿವಾರ-ವ್ಯವಹಾರ ಎಲ್ಲವನ್ನೂ ನಡೆಸಬಹುದೆಂದು
ತಿಳಿಯುತ್ತಾರೆ. ಯುಗಲ್ ಗ್ರೂಪ್ನ ವಿಶೇಷತೆಯು ಇನ್ನೂ ಒಂದಿದೆ- ನಾವು ಜೊತೆಯಲ್ಲಿಯೇ ಇರುತ್ತಾ,
ವ್ಯವಹಾರ ಮಾಡುತ್ತಲೂ ನಮ್ಮ ಪುರುಷಾರ್ಥವು ಶ್ರೇಷ್ಠವಾಗಿದೆ, ವಿಜಯಿಯಾಗಿದ್ದೇವೆ ಎಂದು ಮಹಾತ್ಮರಿಗೂ
ಛಾಲೆಂಜ್ ಮಾಡುತ್ತಾರೆ. ಅಂದಾಗ ವಿಜಯದ ಧೈರ್ಯವನ್ನು ಕೊಡುವುದು ಯುಗಲ್ಗಳ ಕಾರ್ಯವಾಗಿದೆ.
ಆದ್ದರಿಂದ ಬಾಪ್ದಾದಾರವರು ಯುಗಲ್ ಗ್ರೂಪ್ನವರಿಗೂ ಶುಭಾಷಯಗಳನ್ನು ನೀಡುತ್ತಿದ್ದಾರೆ. ಸರಿಯಲ್ಲವೆ.
ಪಕ್ಕಾ ಛಾಲೆಂಜ್ ಮಾಡುವವರಲ್ಲವೆ. ಪಕ್ಕಾ. ಯಾರಾದರೂ ಬಂದು ಸಿ.ಐ.ಡಿ. ಕೆಲಸ ಮಾಡಿದರೆ ಮಾಡಲಿ. ಮಾಡಿ
ಎಂದು ಹೇಳುವುದಕ್ಕೆ ಧೈರ್ಯವಿದೆಯೇ? ಕೈಯೆತ್ತಿ. ಒಳ್ಳೆಯದು.
ಬಾಪ್ದಾದಾರವರು ಸದಾ ಡಬಲ್
ವಿದೇಶಿಯರನ್ನು ಸಾಹಸವಂತರೆಂದು ತಿಳಿಯುತ್ತಾರೆ. ಏಕೆ? ಬಾಪ್ದಾದಾರವರು ನೋಡಿದ್ದೇವೆ- ಕೆಲಸಕ್ಕೂ
ಹೋಗುತ್ತಾರೆ, ಕ್ಲಾಸ್ ಮಾಡುತ್ತಾರೆ ಆದರೆ ಆಲ್ರೌಂಡ್ ಸೇವಾಕೇಂದ್ರದ ಸೇವೆಯಲ್ಲಿ
ಸಹಯೋಗಿಯಾಗುತ್ತಾರೆ. ಆದ್ದರಿಂದ ಬಾಪ್ದಾದಾರವರು ಆಲ್ರೌಂಡ್ ಗ್ರೂಪ್ ಎಂದು ಟೈಟಲ್ ಕೊಟ್ಟಿದ್ದಾರೆ.
ಒಳ್ಳೆಯದು – ಹೀಗೆಯೇ ಮುಂದುವರೆಯುತ್ತಾ ಇರಿ ಹಾಗೂ ಮುಂದುವರೆಸುತ್ತಾ ಇರಿ. ಒಳ್ಳೆಯದು.
ಟೀಚರ್ಸ್ಗಳೊಂದಿಗೆ:-
ಟೀಚರ್ಸ್
ಚೆನ್ನಾಗಿದ್ದೀರಾ? ಟೀಚರ್ಸ್ ಬಹಳಷ್ಟಿದ್ದೀರಿ. ಒಳ್ಳೆಯದು ನೋಡಿ, ತಂದೆಯ ಸಮಾನ ಟೈಟಲ್ ನಿಮಗೂ ಇದೆ.
ತಂದೆಯು ಟೀಚರಾಗಿ ಬರುತ್ತಾರೆ ಅಂದಾಗ ಟೀಚರ್ ಎಂದರೆ ಸ್ವ ಅನುಭವದ ಆಧಾರದಿಂದ ಅನ್ಯರನ್ನು
ಅನುಭವಿಗಳನ್ನಾಗಿ ಮಾಡಿ. ಅನುಭವದ ಅಧಿಕಾರ ಎಲ್ಲಗಿಂತ ಹೆಚ್ಚಾಗಿದೆ. ಒಂದುವೇಳೆ ಒಂದೇ ಬಾರಿಯು
ಯಾವುದೇ ಮಾತಿನ ಅನುಭವ ಮಾಡಿ ಬಿಟ್ಟರೆ, ಜೀವನ ಪರಿಯಂತ ಮರೆಯುವುದಿಲ್ಲ. ಕೇಳಿರುವ ಮಾತುಗಳು,
ನೋಡಿರುವ ಮಾತುಗಳು ಮರೆತು ಹೋಗುತ್ತದೆ ಆದರೆ ಅನುಭವ ಮಾಡಿರುವ ಮಾತುಗಳು ಎಂದೂ ಮರೆಯುವುದಿಲ್ಲ.
ಟೀಚರ್ ಎಂದರೆ ಅನುಭವಿಯಾಗಿ ಅನುಭವಿಗಳನ್ನಾಗಿ ಮಾಡಿರಿ. ಇದೇ ಕರ್ತವ್ಯವನ್ನು ಮಾಡಿರಿ. ಒಳ್ಳೆಯದು.
ಅನುಭವದಲ್ಲಿ ಏನೇ ಕಡಿಮೆಯಿದ್ದರೆ ಅದನ್ನು ಒಂದು ತಿಂಗಳಿನಲ್ಲಿ ತುಂಬಿಸಿಕೊಳ್ಳಿರಿ. ನಂತರ
ಬಾಪ್ದಾದಾರವರು ರಿಜಲ್ಟ್ ತರಿಸುವರು. ಒಳ್ಳೆಯದು.
ಈಗ ನಾಲ್ಕಾರು ಕಡೆಯ
ಬಾಪ್ದಾದಾರವರ ಹೃದಯ ಸಿಂಹಾಸನಾಧಿಕಾರಿ ಮತ್ತು ವಿಶ್ವ ರಾಜ್ಯದ ಸಿಂಹಾಸನಾಧಿಕಾರಿ, ಸದಾ ತಮ್ಮ
ಶಾಂತಿಯ ಶಕ್ತಿಯನ್ನು ವೃದ್ಧಿ ಮಾಡಿಕೊಳ್ಳುತ್ತಾ ಅನ್ಯರಿಗೂ ಮುಂದುವರೆಸುವ ಉಮ್ಮಂಗ-ಉತ್ಸಾಹ
ನೀಡುವಂತಹ, ಸದಾ ಖುಷಿಯಾಗಿರುವ ಹಾಗೂ ಎಲ್ಲರಿಗೂ ಖುಷಿಯ ಉಡುಗೊರೆಯನ್ನು ನೀಡುವಂತಹ ನಾಲ್ಕಾರು
ಕಡೆಯ ಬಾಪ್ದಾದಾರವರ ಲಕ್ಕಿ ಹಾಗೂ ಲವಲೀ ಮಕ್ಕಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ
ಆಶೀರ್ವಾದಗಳು, ನಮಸ್ತೆ.
ವರದಾನ:
ಎಲ್ಲಾ ಕಂಡೀಷನ್
(ಪರಿಸ್ಥಿತಿಯಲ್ಲಿ) ನಲ್ಲಿಯೂ ಸುರಕ್ಷಿತರಾಗಿರುವಂತಹ ಏರ್ಕಂಡೀಷನ್ ಟಿಕೆಟ್ನ ಅಧಿಕಾರಿ ಭವ.
ಯಾರು ಇಲ್ಲಿ ಎಲ್ಲಾ
ಪರಿಸ್ಥಿತಿಗಳಲ್ಲಿಯೂ ಸುರಕ್ಷಿತರಾಗಿರುತ್ತಾರೆ ಏರ್ಕಂಡೀಷನ್ನ ಟಿಕೆಟ್ ಅಂತಹ ಮಕ್ಕಳಿಗೇ ಸಿಗುತ್ತದೆ.
ಎಂತಹದೇ ಪರಿಸ್ಥಿತಿ ಬರಲಿ, ಯಾವುದೆ ಸಮಸ್ಯೆಗಳು ಬರಲಿ ಆದರೆ ಎಲ್ಲಾ ಸಮಸ್ಯೆಗಳನ್ನು ಸೆಕೆಂಡ್ನಲ್ಲಿ
ಪಾರಾಗುವಂತಹ ಸರ್ಟಿಫಿಕೆಟ್ ಅವಶ್ಯಕವಿದೆ. ಹೇಗೆ ಆ ಟಿಕೆಟ್ಗಾಗಿ ಹಣವನ್ನು ಕೊಡುವಿರಿ ಇಲ್ಲಿಯೂ
ಹಾಗೆಯೆ “ಸದಾ ವಿಜಯಿ” ಆಗಲು ಹಣದ ಅವಶ್ಯಕತೆಯಿದೆ-ಯಾವುದರಿಂದ ಟಿಕೆಟ್ ಸಿಗುವುದು. ಈ ಹಣವನ್ನು
ಪ್ರಾಪ್ತಿ ಮಾಡಿಕೊಳ್ಳುವುದಕ್ಕಾಗಿ ಪರಿಶ್ರಮ ಪಡುವ ಅವಶ್ಯಕತೆ ಇಲ್ಲ, ಕೇವಲ ಸದಾ ತಂದೆಯ
ಜೊತೆಯಲ್ಲಿರಿ ಆಗ ಅಗಣಿತವಾದ ಸಂಪಾದನೆ ಜಮಾ ಆಗುತ್ತಿರುತ್ತದೆ.
ಸ್ಲೋಗನ್:
ಎಂತಹದೇ
ಪರಿಸ್ಥಿತಿ ಇರಲಿ, ಪರಿಸ್ಥಿತಿ ಹೊರಟು ಹೋಗಲಿ ಆದರೆ ಖುಷಿ ಹೋಗದಿರಲಿ.
ಅವ್ಯಕ್ತ ಸೂಚನೆ:- ಈಗ
ಸಂಪನ್ನ ಅಥವಾ ಕರ್ಮತೀತರಾಗುವುದರಲ್ಲಿ ತತ್ಫರರಾಗಿರಿ.
ಹೇಗೆ ತಮ್ಮ ರಚನೆ ಆಮೆ
ಸೆಕೆಂಡಿನಲ್ಲಿ ಎಲ್ಲಾ ಅಂಗಗಳನ್ನು ಒಳಗಡೆ ಎಳೆದುಕೊಳ್ಳುತ್ತದೆ. ಸಂಕುಚಿತಗೊಳಿಸುವ ಶಕ್ತಿ
ರಚನೆಯಲ್ಲಿಯೂ ಇದೆ. ನೀವು ಮಾಸ್ಟರ್ ರಚಯಿತ ಸಂಕುಚಿತಗೊಳಿಸುವ ಶಕ್ತಿಯ ಆಧಾರದಿಂದ ಸೆಕೆಂಡಿನಲ್ಲಿ
ಸರ್ವ ಸಂಕಲ್ಪಗಳನ್ನು ಸಮಾವೇಶಿಸಿಕೊಂಡು ಒಂದು ಸಂಕಲ್ಪದಲ್ಲಿ ಸ್ಥಿತಿರಾಗಿ ಬಿಡಿ. ಯಾವಾಗ ಸರ್ವ
ಕರ್ಮೇಂದ್ರಿಯಗಳ ಕರ್ಮಗಳ ಸ್ಮೃತಿಯಿಂದ ಭಿನ್ನ ಒಂದೇ ಆತ್ಮಿಕ ಸ್ವರೂಪದಲ್ಲಿ ಸ್ಥಿತಿರಾಗುತ್ತಿರಿ
ಆಗ ಕರ್ಮಾತೀತ ಅವಸ್ಥೆಯ ಅನುಭವವಾಗುವುದು.