15.01.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಾವು ಮಕ್ಕಳನ್ನು ಸ್ವಚ್ಛ ಬುದ್ಧಿಯವರನ್ನಾಗಿ ಮಾಡಲು ತಂದೆ ಬಂದಿದ್ದಾರೆ, ಸ್ವಚ್ಛರಾದಾಗ ದೇವತೆಗಳಾಗಲು ಸಾಧ್ಯವಾಗುತ್ತದೆ”

ಪ್ರಶ್ನೆ:
ಈ ಡ್ರಾಮದ ಮಾಡಿಮಾಡಲ್ಪಟ್ಟಂತ ಪ್ಲಾನ್ ಯಾವುದಾಗಿದೆ, ಯಾವುದರಿಂದ ತಂದೆಯೂ ಸಹ ಬಿಡುಗಡೆ ಆಗಲು ಸಾಧ್ಯವಿಲ್ಲ?

ಉತ್ತರ:
ಪ್ರತಿಯೊಂದು ಕಲ್ಪದಲ್ಲಿ ತಂದೆ ತನ್ನ ಮಕ್ಕಳ ಬಳಿ ಬರಲೇಬೇಕು, ಪತಿತ ದುಃಖಿ ಮಕ್ಕಳನ್ನು ಸುಖಿಯನ್ನಾಗಿ ಮಾಡಲೇಬೇಕು - ಈ ಡ್ರಾಮಾದ ಪ್ಲಾನ್ ಮಾಡಲ್ಪಟ್ಟಿದೆ, ಈ ಬಂಧನದಿಂದ ತಂದೆಯೂ ಸಹ ಬಿಡುಗಡೆ ಆಗಲು ಸಾಧ್ಯವಿಲ್ಲ.

ಪ್ರಶ್ನೆ:
ಓದಿಸುವ ತಂದೆಯ ಮುಖ್ಯ ವಿಶೇಷತೆ ಯಾವುದಾಗಿದೆ?

ಉತ್ತರ:
ಅವರು ಬಹಳ ನಿರಹಂಕಾರಿ ಆಗಿ ಪತಿತ ಪ್ರಪಂಚ, ಪತಿತ ತನುವಿನಲ್ಲಿ ಬರುತ್ತಾರೆ, ತಂದೆ ಈ ಸಮಯದಲ್ಲಿ ತಮ್ಮನ್ನು ಸ್ವರ್ಗಕ್ಕೆ ಮಾಲೀಕರನ್ನಾಗಿ ಮಾಡುತ್ತಾರೆ, ತಾವು ನಂತರ ಅವರಿಗೆ ದ್ವಾಪರದಲ್ಲಿ ಚಿನ್ನದ ಮಂದಿರವನ್ನು ಮಾಡುತ್ತೀರಿ.

ಗೀತೆ:
ಈ ಪಾಪದ ಪ್ರಪಂಚದಿಂದ...............

ಓಂ ಶಾಂತಿ.
ಎರಡು ಪ್ರಪಂಚಗಳಿವೆ - ಒಂದು ಪಾಪದ ಪ್ರಪಂಚ, ಇನ್ನೊಂದು ಪುಣ್ಯದ ಪ್ರಪಂಚವಾಗಿದೆ ಎಂಬ ಗೀತೆಯನ್ನು ಮಧುರಾತಿಮಧುರ ಆತ್ಮಿಕ ಮಕ್ಕಳು ಕೇಳಿದ್ದೀರಿ. ದುಃಖದ ಪ್ರಪಂಚ ಮತ್ತು ಸುಖದ ಪ್ರಪಂಚ. ಸುಖ ಖಂಡಿತ ಹೊಸ ಪ್ರಪಂಚದಲ್ಲಿ, ಹೊಸ ಮನೆಯಲ್ಲಿ ಇರಲು ಸಾಧ್ಯವಿದೆ. ಹಳೆಯ ಮನೆಯಲ್ಲಿ ದುಃಖವೇ ಇರುತ್ತದೆ ಆದ್ದರಿಂದ ಅದನ್ನು ಸಮಾಪ್ತಿ ಮಾಡಲಾಗುತ್ತದೆ ಮತ್ತೆ ಹೊಸ ಮನೆಯಲ್ಲಿ ಸುಖದಲ್ಲಿ ಹೋಗಬೇಕಾಗುತ್ತದೆ. ಈಗ ಮಕ್ಕಳಿಗೆ ಗೊತ್ತಿದೆ - ಭಗವಂತನನ್ನು ಯಾವುದೇ ಮನುಷ್ಯ ಮಾತ್ರರು ತಿಳಿದಿಲ್ಲ. ರಾವಣರಾಜ್ಯ ಆಗಿರುವ ಕಾರಣ ಪೂರ್ತಿ ಕಲ್ಲುಬುದ್ಧಿ-ತಮೋಪ್ರಧಾನಬುದ್ಧಿವುಳ್ಳವರಾಗಿಬಿಟ್ಟಿದ್ದಾರೆ. ತಂದೆ ಬಂದು ತಿಳಿಸುತ್ತಾರೆ - ನನಗೆ ಭಗವಂತ ಎಂದು ಹೇಳುತ್ತಾರೆ ಆದರೆ ಯಾರೂ ತಿಳಿದುಕೊಳ್ಳುವುದಿಲ್ಲ. ಭಗವಂತನನ್ನು ತಿಳಿದುಕೊಂಡಿಲ್ಲವೆಂದರೆ ಯಾವುದೇ ಕೆಲಸಕ್ಕೆ ಬರುವುದಿಲ್ಲ. ದುಃಖದಲ್ಲಿಯೇ ಹೇ! ಪ್ರಭು ಹೇ ಈಶ್ವರ ಎಂದು ಹೇಳಿ ಕರೆಯುತ್ತಾರೆ. ಆದರೆ ಒಬ್ಬ ಮನುಷ್ಯ ಮಾತ್ರರೂ ಸಹ ಬೇಹದ್ದಿನ ತಂದೆ ರಚಯಿತನನ್ನು ತಿಳಿದಿಲ್ಲ, ಇದು ಅದ್ಭುತವಾಗಿದೆ. ಸರ್ವವ್ಯಾಪಿ ಎಂದು ಹೇಳಿಬಿಡುತ್ತಾರೆ, ಮೀನು-ಮೊಸಳೆಯಲ್ಲಿ ಪರಮಾತ್ಮ ಇದ್ದಾರೆ ಎಂದು ಹೇಳಿಬಿಡುತ್ತಾರೆ. ಈ ರೀತಿ ಪರಮಾತ್ಮನನಿಗೆ ನಿಂದನೆ ಮಾಡುತ್ತಾರೆ. ತಂದೆಗೆ ಎಷ್ಟು ನಿಂದನೆ ಮಾಡುತ್ತಾರೆ, ಆದ್ದರಿಂದ ಭಾರತದಲ್ಲಿ ನನ್ನ ಮತ್ತು ದೇವತೆಗಳ ನಿಂದನೆ ಮಾಡುತ್ತಾ ಏಣಿ ಇಳಿಯುತ್ತಾ ತಮೋಪ್ರಧಾನ ಆಗಿಬಿಡುತ್ತಾರೆ ಆಗ ನಾನು ಬರುತ್ತೇನೆ ಎಂಬ ಭಗವಾನುವಾಚ ಇದೆ. ಡ್ರಾಮಾನುಸಾರ ಈ ಪಾರ್ಟಿನಲ್ಲಿ ಪುನಃ ಬರಬೇಕು ಎಂದು ಮಕ್ಕಳು ಹೇಳುತ್ತಾರೆ. ತಂದೆ ಹೇಳುತ್ತಾರೆ - ಈ ಡ್ರಾಮಾ ಮಾಡಿ-ಮಾಡಲ್ಪಟ್ಟಿದೆ. ನಾನೂ ಸಹ ಡ್ರಾಮಾದ ಬಂಧನದಲ್ಲಿ ಬಂಧಿತನಾಗಿದ್ದೇನೆ. ಈ ಡ್ರಾಮದಿಂದ ನಾನೂ ಸಹ ಬಿಡುಗಡೆ ಆಗಲು ಸಾಧ್ಯವಿಲ್ಲ. ನಾನೂ ಸಹ ಪತಿತರನ್ನು ಪಾವನರನ್ನಾಗಿ ಮಾಡಲು ಬರಬೇಕಾಗುತ್ತದೆ. ಇಲ್ಲವೆಂದರೆ ಹೊಸ ಪ್ರಪಂಚವನ್ನು ಯಾರು ಸ್ಥಾಪನೆ ಮಾಡುತ್ತಾರೆ? ಮಕ್ಕಳನ್ನು ರಾವಣರಾಜ್ಯ ದುಃಖದಿಂದ ಬಿಡುಗಡೆ ಮಾಡಿ ಹೊಸ ಪ್ರಪಂಚಕ್ಕೆ ಯಾರು ಕರೆದುಕೊಂಡು ಹೋಗುತ್ತಾರೆ? ಭಲೆ ಈ ಪ್ರಪಂಚದಲ್ಲಿ ಬಹಳ ಧನವಂತ ಮನುಷ್ಯರಿದ್ದಾರೆ. ನಾವು ಸ್ವರ್ಗದಲ್ಲಿ ಇದ್ದೇವೆ ಎಂದು ತಿಳಿಯುತ್ತಾರೆ, ಧನ ಇದೆ, ಮಹಲ್ ಇದೆ, ವಿಮಾನವಿದೆ, ಆದರೆ ಅಚಾನಕ್ ಯಾರಾದರೂ ರೋಗಿ ಆಗಿಬಿಟ್ಟರೆ ಕುಳಿತಿದ್ದ ಹಾಗೆ ಸತ್ತರೆ ಎಷ್ಟು ದುಃಖಿ ಆಗಿಬಿಡುತ್ತಾರೆ, ಅವರಿಗೆ ಸತ್ಯಯುಗದಲ್ಲಿ ಎಂದೂ ಅಕಾಲ ಮೃತ್ಯು ಇರುವುದಿಲ್ಲ, ದುಃಖದ ಮಾತು ಇರುವುದಿಲ್ಲ ಎಂದು ಗೊತ್ತಿಲ್ಲ. ಅಲ್ಲಿ ಆಯಸ್ಸೂ ಸಹ ದೊಡ್ಡದಾಗಿರುತ್ತದೆ. ಇಲ್ಲಂತೂ ಅಚಾನಕ್ ಸಾಯುತ್ತಾರೆ. ಸತ್ಯಯುಗದಲ್ಲಿ ಅಂತಹ ಮಾತುಗಳು ಇರುವುದಿಲ್ಲ. ಇದೂ ಸಹ ಯಾರಿಗೂ ಗೊತ್ತಿಲ್ಲ, ಆದ್ದರಿಂದ ತಂದೆ ಎಷ್ಟು ತುಚ್ಚಬುದ್ಧಿಯವರು ಎಂದು ಹೇಳುತ್ತಾರೆ. ನಾನು ಬಂದು ಇವರನ್ನು ಸ್ವಚ್ಛಬುದ್ಧಿಯವರನ್ನಾಗಿ ಮಾಡುತ್ತೇನೆ, ರಾವಣ ಕಲ್ಲುಬುದ್ಧಿಯವರನ್ನಾಗಿ ತುಚ್ಛಬುದ್ಧಿಯವರನ್ನಾಗಿ ಮಾಡುತ್ತಾನೆ. ಭಗವಂತ ಸ್ವಚ್ಛಬುದ್ಧಿ ಮಾಡುತ್ತಿದ್ದಾರೆ. ತಂದೆ ತಮ್ಮನ್ನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಿದ್ದಾರೆ. ಎಲ್ಲಾ ಮಕ್ಕಳು ಸೂರ್ಯವಂಶಿ ಮಹಾರಾಜ-ಮಹಾರಾಣಿ ಆಗಲು ಬಂದಿದ್ದೇವೆ ಎಂದು ಹೇಳುತ್ತಾರೆ. ಗುರಿ-ಉದ್ದೇಶ ತಮ್ಮ ಎದುರಿಗೆ ಇದೆ. ನರನಿಂದ ನಾರಾಯಣರಾಗಬೇಕು. ಇದು ಸತ್ಯನಾರಾಯಣನ ಕಥೆಯಾಗಿದೆ. ನಂತರ ಭಕ್ತಿಯಲ್ಲಿ ಬ್ರಾಹ್ಮಣರು ಕಥೆಯನ್ನು ತಿಳಿಸುತ್ತಿರುತ್ತಾರೆ. ವಾಸ್ತವಿಕವಾಗಿ ಯಾರಾದರೂ ನರನಿಂದ ನಾರಾಯಣ ಆಗುತ್ತಾರೇನು. ತಾವು ವಾಸ್ತವಿಕವಾಗಿ ನರನಿಂದ ನಾರಾಯಣ ಆಗಲು ಬಂದಿದ್ದೀರಿ. ಕೆಲವರು ತಮ್ಮ ಸಂಸ್ಥೆಯ ಉದ್ದೇಶ ಏನಾಗಿದೆ ಎಂದು ಕೇಳಿದಾಗ ನರನಿಂದ ನಾರಾಯಣ ಆಗಬೇಕು ಎಂದು ಹೇಳಿ. ಇದು ನಮ್ಮ ಉದ್ದೇಶವಾಗಿದೆ. ಆದರೆ ಇದು ಯಾವುದೇ ಸಂಸ್ಥೆ ಅಲ್ಲ, ಇದು ಪರಿವಾರವಾಗಿದೆ. ತಂದೆ, ತಾಯಿ ಮತ್ತು ಮಕ್ಕಳು ಕುಳಿತಿದ್ದಾರೆ. ಭಕ್ತಿಮಾರ್ಗದಲ್ಲಿ ನೀವೇ ತಂದೆ-ತಾಯಿ ಎಂದು ಗಾಯನ ಮಾಡುತ್ತಿದ್ದಿರಿ, ಮಾತಾ-ಪಿತ ಬಂದಾಗ ಅಪಾರಸುಖ ಪಡೆದುಕೊಳ್ಳುತ್ತೇವೆ, ನಾವು ವಿಶ್ವಕ್ಕೆ ಮಾಲೀಕರಾಗುತ್ತೇವೆ ಎಂದು ಹೇಳುತ್ತಿದ್ದರು. ಈಗ ತಾವು ವಿಶ್ವಕ್ಕೆ ಮಾಲೀಕರಾಗುತ್ತಿದ್ದೀರಲ್ಲವೇ ಅರ್ಥಾತ್ ಸ್ವರ್ಗಕ್ಕೆ ಮಾಲೀಕರಾಗುತ್ತಿದ್ದೀರಲ್ಲವೇ. ಈಗ ಅಂತಹ ತಂದೆಯನ್ನು ನೋಡಿ ಎಷ್ಟು ಖುಷಿಯ ನಶೆ ಏರಬೇಕು. ಯಾರನ್ನು ಅರ್ಧಕಲ್ಪ ಹೇ! ಭಗವಂತ ಬನ್ನಿ, ತಾವು ಬಂದರೆ ತಮ್ಮಿಂದ ನಾವು ಬಹಳ ಸುಖವನ್ನು ಪಡೆಯುತ್ತೇವೆ ಎಂದು ನೆನಪು ಮಾಡಿದ್ದೀರಿ. ಬೇಹದ್ದಿನ ತಂದೆಯಂತೂ ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ, ಅದೂ ಸಹ 21 ಜನ್ಮಗಳಿಗಾಗಿ ಕೊಡುತ್ತಾರೆ. ನಾನು ನಿಮ್ಮನ್ನು ದೈವೀ ಸಂಪ್ರದಾಯವುಳ್ಳವರನ್ನಾಗಿ ಮಾಡುತ್ತೇನೆ ಎಂದು ಬಾಬಾ ಹೇಳುತ್ತಾರೆ. ರಾವಣ ಆಸುರೀ ಸಂಪ್ರದಾಯದವರನ್ನಾಗಿ ಮಾಡುತ್ತಾನೆ. ನಾನು ಆದಿ-ಸನಾತನ ದೇವೀ-ದೇವತಾ ಧರ್ಮವನ್ನು ಸ್ಥಾಪನೆ ಮಾಡುತ್ತೇನೆ. ಅಲ್ಲಿ ಪವಿತ್ರತೆ ಕಾರಣ ಆಯಸ್ಸೂ ಸಹ ಹೆಚ್ಚು ಇರುತ್ತದೆ. ಇಲ್ಲಿ ಭೋಗಿ ಅಚಾನಕ್ ಸಾಯುತ್ತಿರುತ್ತಾರೆ. ಅಲ್ಲಿ ಯೋಗದಿಂದ ಆಸ್ತಿ ಸಿಕ್ಕಿರುತ್ತದೆ. ಆಯಸ್ಸೂ ಸಹ 150 ವರ್ಷ ಇರುತ್ತದೆ. ತಮ್ಮ ಸಮಯದಲ್ಲಿ ಒಂದು ಶರೀರವನ್ನು ಬಿಟ್ಟು ಬೇರೆ ಶರೀರವನ್ನು ಪಡೆಯುತ್ತಾರೆ. ತಂದೆಯೇ ಈ ಜ್ಞಾನವನ್ನು ತಿಳಿಸುತ್ತಾರೆ. ಭಕ್ತರು ಭಗವಂತನನ್ನು ಹುಡುಕುತ್ತಾರೆ, ಶಾಸ್ತ್ರವನ್ನು ಓದಬೇಕು ಎಂದು ತಿಳಿಯುತ್ತಾರೆ, ತೀರ್ಥ ಯಾತ್ರೆಗಳು ಮಾಡುವುದು ಮುಂತಾದವೆಲ್ಲಾ ಭಗವಂತನನ್ನು ಮಿಲನ ಮಾಡುವ ಮಾರ್ಗಗಳು ಎಂದು ತಿಳಿಯುತ್ತಾರೆ. ಇದು ಮಾರ್ಗವಲ್ಲ ಎಂದು ಬಾಬಾ ತಿಳಿಸುತ್ತಾರೆ. ಮಾರ್ಗವಂತೂ ನಾನೇ ತಿಳಿಸುತ್ತೇನೆ, ಹೇ ಕುರಡರಿಗೆ ಊರುಗೋಲು, ಪ್ರಭು! ಬನ್ನಿ ನಮ್ಮನ್ನು ಶಾಂತಿಧಾಮ, ಸುಖಧಾಮಕ್ಕೆ ಕರೆದುಕೊಂಡು ಹೋಗಿ ಎಂದು ತಾವು ಹೇಳುತ್ತಿದ್ದಿರಿ. ತಂದೆಯೇ ಸುಖಧಾಮದ ಮಾರ್ಗವನ್ನು ತಿಳಿಸುತ್ತಾರೆ. ತಂದೆ ಎಂದೂ ದುಃಖವನ್ನು ಕೊಡುವುದಿಲ್ಲ. ಇದಂತೂ ತಂದೆಯ ಮೇಲೆ ಅಸತ್ಯ ನಿಂದನೆ ಹಾಕುತ್ತಾರೆ. ಯಾರಾದರೂ ಸತ್ತರೆ ಭಗವಂತನನ್ನು ನಿಂದನೆ ಮಾಡುತ್ತಾರೆ. ನಾನು ಯಾರನ್ನಾದರೂ ಸಾಯಿಸುತ್ತೇನೆಯೇ ಅಥವಾ ದುಃಖವನ್ನು ಕೊಡುತ್ತೇನೆಯೇ ಎಂದು ತಂದೆ ಹೇಳುತ್ತಾರೆ. ಇದಂತೂ ಪ್ರತಿಯೊಬ್ಬರದು ತಮ್ಮ-ತಮ್ಮ ಪಾರ್ಟ್ ಇದೆ. ನಾನು ಯಾವ ರಾಜ್ಯವನ್ನು ಸ್ಥಾಪನೆ ಮಾಡುತ್ತೇನೆ ಅಲ್ಲಿ ಅಕಾಲ ಮೃತ್ಯು, ದುಃಖ ಮುಂತಾದವು ಎಂದೂ ಆಗುವುದೇ ಇಲ್ಲ. ನಾನು ನಿಮ್ಮನ್ನು ಸುಖಧಾಮಕ್ಕೆ ಕರೆದುಕೊಂಡು ಹೋಗುತ್ತೇನೆ. ಮಕ್ಕಳಿಗೆ ರೋಮಾಂಚನ ಆಗಬೇಕು. ಓ! ಬಾಬಾ ನಮ್ಮನ್ನು ಪುರುಷೋತ್ತಮರನ್ನಾಗಿ ಮಾಡುತ್ತಿದ್ದಾರೆ. ಸಂಗಮಯುಗಕ್ಕೆ ಪುರುಶೋತ್ತಮ ಎಂದು ಹೇಳಲಾಗುತ್ತದೆ ಎಂಬುದು ಮನುಷ್ಯರಿಗೆ ಗೊತ್ತಿಲ್ಲ. ಭಕ್ತಿಮಾರ್ಗದಲ್ಲಿ ಭಕ್ತರು ಪುರುಷೋತ್ತಮ ಮಾಸ ಮುಂತಾದವೆಲ್ಲಾ ಮಾಡಿದ್ದಾರೆ. ವಾಸ್ತವಿಕವಾಗಿ ಇದು ಪುರುಷೋತ್ತಮಯುಗವಾಗಿದೆ ಯಾವಾಗ ತಂದೆ ಬಂದು ಶ್ರೇಷ್ಠಾತಿಶ್ರೇಷ್ಠರನ್ನಾಗಿ ಮಾಡುತ್ತಾರೆ. ಈಗ ನೀವು ಪುರುಷೊತ್ತಮರಾಗುತ್ತಿದ್ದೀರಿ. ಎಲ್ಲದಕ್ಕಿಂದ ಹೆಚ್ಚು ಪುರುಷೊತ್ತಮರು ಲಕ್ಷ್ಮೀ-ನಾರಾಯಣರೇ ಆಗಿದ್ದಾರೆ. ಮನುಷ್ಯರು ಸ್ವಲ್ಪವೂ ತಿಳಿದುಕೊಂಡಿಲ್ಲ. ಏರುವ ಕಲೆಯಲ್ಲಿ ಕರೆದುಕೊಂಡು ಹೋಗುವವರು ಒಬ್ಬರೇ ತಂದೆಯಾಗಿದ್ದಾರೆ. ಏನಿಯ ಮೇಲೆ ತಿಳಿಸುವುದು ಬಹಳ ಸಹಜವಾಗಿದೆ. ಈಗ ಆಟ ಪೂರ್ಣ ಆಗಿದೆ ಮನೆಗೆ ಹಿಂತಿರುಗಿ ಎಂದು ತಂದೆ ಹೇಳುತ್ತಾರೆ. ಈಗ ಈ ಛೀ-ಛೀ ಶರೀರವನ್ನು ಬಿಡಬೇಕು. ತಾವು ಮೊದಲು ಹೊಸ ಪ್ರಪಂಚದಲ್ಲಿ ಸತೋಪ್ರಧಾನವಾಗಿದ್ದೀರಿ, ನಂತರ 84 ಜನ್ಮಗಳನ್ನು ಧಾರಣೆ ಮಾಡಿ ಶೂದ್ರರಾಗಿದ್ದೀರಿ, ಈಗ ಪುನಃ ಶೂದ್ರರಿಂದ ಬ್ರಾಹ್ಮಣರಾಗಿದ್ದೀರಿ, ಈಗ ತಂದೆ ಭಕ್ತಿಯ ಫಲವನ್ನು ಕೊಡಲು ಬಂದಿದ್ದಾರೆ. ತಂದೆ ಸತ್ಯಯುಗದಲ್ಲಿ ಫಲವನು ಕೊಟ್ಟಿದರು. ತಂದೆ ಸುಖದಾತ ಆಗಿದ್ದಾರೆ. ತಂದೆ ಪತಿತಪಾವನ ಬರುತ್ತಾರೆಂದರೆ ಇಡೀ ಪ್ರಪಂಚದ ಮನುಷ್ಯಮಾತ್ರರೇನು ಪ್ರಕೃತಿಯನ್ನೂ ಸಹ ಸತೋಪ್ರಧಾನವನ್ನಾಗಿ ಮಾಡುತ್ತಾರೆ. ಈಗಂತೂ ಪ್ರಕೃತಿಯೂ ಸಹ ತಮೋಪ್ರಧಾನವಾಗಿದೆ. ದವಸಧಾನ್ಯಗಳು ಸಿಗುವುದೇ ಇಲ್ಲ. ನಾವು ಇದು-ಅದು ಮಾಡುತ್ತೇವೆ, ಮುಂದಿನ ವರ್ಷ ದವಸಧಾನ್ಯಗಳು ಇರುತ್ತವೆ ಎಂದು ಅವರು ತಿಳಿಯುತ್ತಾರೆ, ಆದರೆ ಏನೂ ಇರುವುದಿಲ್ಲ. ಪ್ರಕೃತಿವಿಕೋಪಗಳನ್ನು ಯಾರಾದರೂ ಏನು ಮಾಡಲು ಸಾಧ್ಯ? ........... ಇರುತ್ತದೆ, ಭೂಕಂಪ ಆಗುತ್ತದೆ, ರೋಗಿಗಳು ಆಗುತ್ತಾರೆ, ರಕ್ತದ ನದಿಗಳು ಅರಿಯುತ್ತವೆ, ಇದು ಅದೇ ಮಹಾಭಾರತದ ಯುದ್ಧ ಆಗಿದೆ. ಈಗ ತಂದೆ ಹೇಳುತ್ತಾರೆ ತಾವು ತಮ್ಮ ಆಸ್ತಿಯನ್ನು ಪಡೆದುಕೊಳ್ಳಿ. ನಾನು ತಾವು ಮಕ್ಕಳಿಗೆ ಸ್ವರ್ಗದ ಆಸ್ತಿಯನ್ನು ಕೊಡಲು ಬಂದಿದ್ದೇನೆ. ಮಾಯಾ ರಾವಣ ಶಾಪ ಕೊಡುತ್ತಾನೆ, ನರಕ ಆಸ್ತಿಯನ್ನು ಕೊಡುತ್ತಾನೆ. ಇದೂ ಸಹ ಆಟ ಮಾಡಲ್ಪಟ್ಟಿದೆ. ಡ್ರಾಮಾನುಸಾರ ನಾನೂ ಸಹ ಶಿವಾಲಯವನ್ನು ಸ್ಥಾಪನೆ ಮಾಡುತ್ತೇನೆ ಎಂದು ಬಾಬಾ ಹೇಳುತ್ತಾರೆ. ಈ ಭಾರತ ಶಿವಾಲಯ ಆಗಿತ್ತು, ಈಗ ವೇಶ್ಯಾಲಯ ಆಗಿಬಿಟ್ಟಿದೆ. ವಿಷಯಸಾಗರದಲ್ಲಿ ಮುಳುಗಿಹೋಗಿಬಿಟ್ಟಿದೆ.

ಈಗ ತಾವು ಮಕ್ಕಳು ಬಾಬಾ ನಮ್ಮನ್ನು ಶಿವಾಲಯಕ್ಕೆ ಕರೆದುಕೊಂಡು ಹೋತ್ತಾರೆ ಎಂದು ತಿಳಿದಿದ್ದೀರಿ. ಈಗ ಈ ಖುಷಿ ಇರಬೇಕಲ್ಲವೇ. ನಮಗೆ ಬೇಹದ್ದಿನ ಭಗವಂತ ಓದಿಸುತ್ತಿದ್ದಾರೆ. ನಾನು ನಿಮ್ಮನ್ನು ವಿಶ್ವಕ್ಕೆ ಮಾಲೀಕರನ್ನಾಗಿ ಮಾಡುತ್ತೇನೆ ಎಂದು ಬಾಬಾ ಹೇಳುತ್ತಾರೆ. ಭಾರತವಾಸಿಗಳು ತಮ್ಮ ಧರ್ಮವನ್ನೇ ತಿಳಿದುಕೊಂಡಿಲ್ಲ. ನಮ್ಮ ವಂಶ ಅತೀ ದೊಡ್ಡದಾಗಿದೆ ಇದರಿಂದ ಅನ್ಯ ವಂಶಗಳು ಬರುತ್ತವೆ. ಆದಿ-ಸನಾತನ ಯಾವ ಧರ್ಮ, ಯಾವ ವಂಶ ಇತ್ತು - ಇದನ್ನು ತಿಳಿಯುವುದಿಲ್ಲ. ಆದಿ-ಸನಾತನ ದೇವೀ-ದೇವತಾ ಧರ್ಮದ ವಂಶ ನಂತರ ಸೆಕೆಂಡ್ ನಂಬರಿನಲ್ಲಿ ಚಂದ್ರವಂಶದ ಧರ್ಮ, ನಂತರ ಇಸ್ಲಾಮಿವಂಶದ ಧರ್ಮ, ಇಡೀ ವೃಕ್ಷದ ರಹಸ್ಯ ಬೇರೆಯಾರೂ ತಿಳಿಸಲು ಸಾಧ್ಯವಿಲ್ಲ. ಈಗಂತೂ ನೋಡಿ ಎಷ್ಟು ಮಠಗಳು ಇವೆ, ಕೊಂಬೆ-ರೆಂಬೆಗಳು ಎಷ್ಟು ಇದೆ, ಇದು ವೆರೈಟಿ ಧರ್ಮದ ವೃಕ್ಷ ಆಗಿದೆ. ಈ ಮಾತುಗಳನ್ನು ತಂದೆಯೇ ಬಂದು ಬುದ್ಧಿಯಲ್ಲಿ ಕೂರಿಸುತ್ತಾರೆ. ಇದು ವಿದ್ಯೆಯಾಗಿದೆ, ಇದನ್ನು ಪ್ರತಿದಿನ ಓದಬೇಕು. ಭಗವಾನುವಾಚ : ನಾನು ನಿಮ್ಮನ್ನು ರಾಜರ ಮೇಲೆ ರಾಜರನ್ನಾಗಿ ಮಾಡುತ್ತೇನೆ. ಪತಿತರಾಜರಂತೂ ವಿನಾಶಿ ಧನವನ್ನು ದಾನ ಮಾಡುವುದರಿಂದ ಆಗುತ್ತಾರೆ, ನಾನು ನಿಮ್ಮನ್ನು ಈ ರೀತಿ ಪಾವನರನ್ನಾಗಿ ಮಾಡುತ್ತೇನೆ ಯಾವುದರಿಂದ ತಾವು 21 ಜನ್ಮಗಳಿಗಾಗಿ ವಿಶ್ವಕ್ಕೇಮಾಲೀಕರಾಗಿಬಿಡುತ್ತೀರಿ. ಅಲ್ಲಿ ಅಕಾಲಮೃತ್ಯು ಆಗುವುದಿಲ್ಲ. ತಮ್ಮ ಸಮಯದಲ್ಲಿ ಶರೀರ ಬಿಡುತ್ತಾರೆ, ತಾವು ಮಕ್ಕಳಿಗೆ ಡ್ರಾಮಾದ ರಹಸ್ಯವೂ ಬಾಬಾ ತಿಳಿಸಿದ್ದಾರೆ. ಸಿನೆಮಾ, ಡ್ರಾಮಾ ಮುಂತಾದವುಗಳು ಮಾಡುತ್ತಾರೆ, ಇದರಿಂದ ತಿಳಿಸುವುದು ಸಹಜವಾಗುತ್ತದೆ. ಈಗಿನಕಾಲದಲ್ಲಿ ಬಹಳ ಡ್ರಾಮಾ ಮುಂತಾದವುಗಳನ್ನು ಬಹಳ ಮಾಡುತ್ತಾರೆ. ಮನುಷ್ಯರಿಗೆ ಬಹಳ ರುಚಿ ಇದೆ. ಅದೆಲ್ಲಾ ಹದ್ದಿನದ್ದಾಗಿದೆ, ಇದು ಬೇಹದ್ದಿನ ಡ್ರಾಮಾ ಆಗಿದೆ. ಈ ಸಮಯದಲ್ಲಿ ಮಾಯೆಯ ಆಡಂಬರ ಬಹಳ ಇದೆ, ಮನುಷ್ಯರು ಈಗ ಸ್ವರ್ಗ ಆಗಿಬಿಟ್ಟಿದೆ ಎಂದು ತಿಳಿದಿದ್ದಾರೆ. ಮುಂಚೆ ಇಷ್ಟು ದೊಡ್ಡ ಮಹಡಿಗಳು ಇತ್ತೇನು? ಎಷ್ಟು ಅಪೋಸಿಷನ್ ಆಗಿದೆ. ಭಗವಂತ ಸ್ವರ್ಗ ರಚನೆ ಮಾಡುತ್ತಾರೆ ಅಂದಾಗ ಮಾಯೆಯೂ ಸಹ ತನ್ನ ಸ್ವರ್ಗವನ್ನು ತೋರಿಸುತ್ತದೆ. ಇದೆಲ್ಲಾ ಮಾಯೆಯ ಶೋ ಆಗಿದೆ. ಇದು ಸಮಾಪ್ತಿ ಆಗುವುದಿದೆ, ಮಾಯೆ ಎಷ್ಟು ಶಕ್ತಿಶಾಲಿ ಆಗಿದೆ, ತಾವು ಅದರಿಂದ ಮುಖವನ್ನು ತಿರುಗಿಸಿಕೊಳ್ಳಬೇಕು. ತಂದೆ ಬಡವರ ಬಂಧು ಆಗಿದ್ದಾರೆ, ಸಾಹುಕರರಿಗಾಗಿ ಸ್ವರ್ಗವಾಗಿದೆ, ಬಡವರು ನರಕದಲ್ಲಿ ಇದ್ದಾರೆ, ಈಗ ನರಕವಾಸಿಗಳನ್ನು ಸ್ವರ್ಗವಾಸಿಗಳನ್ನಾಗಿ ಮಾಡಬೇಕಾಗಿದೆ. ಬಡವರೇ ಆಸ್ತಿಯನ್ನು ಪಡೆದುಕೊಳ್ಳುತ್ತಾರೆ. ಸಾಹುಕಾರರು ನಾವು ಸ್ವರ್ಗದಲ್ಲಿ ಇದ್ದೇವೆ ಎಂದು ತಿಳಿಯುತ್ತಾರೆ. ಸ್ವರ್ಗ-ನರಕ ಇಲ್ಲಿಯೇ ಇದೆ. ಈ ಎಲ್ಲಾ ಮಾತುಗಳನ್ನು ನೀವು ತಿಳಿದುಕೊಂಡಿದ್ದೀರಿ. ಭಾರತ ಎಷ್ಟು ಭಿಕಾರಿ ಆಗಿಬಿಟ್ಟಿದೆ. ಭಾರತವೇ ಎಷ್ಟು ಸಾಹುಕಾರ ಆಗಿತ್ತು, ಒಂದೇ ಆದಿ-ಸನಾತನ ಧರ್ಮ ಇತ್ತು, ಈಗಲೂ ಸಹ ಎಷ್ಟು ಹಳೆಯ ವಸ್ತುಗಳನ್ನು ಕಂಡುಹಿಡಿಯುತ್ತಾರೆ. ಇಂತಹ ವಸ್ತು ಇಷ್ಟು ವರ್ಷಗಳ ಹಳೆಯದು ಎಂದು ಹೇಳುತ್ತಾರೆ. ಮೂಳೆಗಳನ್ನು ಕಂಡುಹಿಡಿಯುತ್ತಾರೆ, ಇಷ್ಟು ಲಕ್ಷಾಂತರ ವರ್ಷಗಳ ಹಿಂದಿನದು ಎಂದು ಹೇಳುತ್ತಾರೆ. ಲಕ್ಷಾಂತರ ವರ್ಷಗಳ ಮೂಳೆಯನ್ನು ಹೇಗೆ ತೆಗೆಯಲು ಸಾಧ್ಯ! ಅದರ ಬೆಲೆಯನ್ನೂ ಎಷ್ಟೊಂದು ಹೇಳುತ್ತಾರೆ.

ನಾನು ಇವರಲ್ಲಿ (ಬ್ರಹ್ಮಾರವರಲ್ಲಿ) ಪ್ರವೇಶ ಮಾಡಿ ಬರುತ್ತೇನೆ, ಬಂದು ಎಲ್ಲರ ಸದ್ಗತಿಯನ್ನು ಮಾಡುತ್ತೇನೆ ಎಂದು ತಂದೆಯು ತಿಳಿಸುತ್ತಾರೆ. ಈ ಬ್ರಹ್ಮಾ ಸಾಕಾರಿ ಆಗಿದ್ದಾರೆ, ಇವರೇ ಮತ್ತೆ ಸೂಕ್ಷ್ಮವತನವಾಸಿ ಫರಿಸ್ಥಾ ಆಗುತ್ತಾರೆ, ಅವರು ಅವ್ಯಕ್ತ, ಇವರು ವ್ಯಕ್ತ ಬ್ರಹ್ಮಾ. ನಾನು ಅನೇಕ ಜನ್ಮಗಳ ನಂತರ ಅಂತಿಮ ಜನ್ಮದಲ್ಲೂ ಅಂತ್ಯದಲ್ಲಿ ಬರುತ್ತೇನೆ ಎಂದು ತಂದೆಯು ಹೇಳುತ್ತಾರೆ. ಯಾರು ನಂಬರ್ವನ್ ಪಾವನರಾಗಿರುತ್ತಾರೆ ಅವರು ನಂಬರ್ವನ್ ಪತಿತರಾಗುತ್ತಾರೆ. ನಾನು ಇವರಲ್ಲೇ ಬರುತ್ತೇನೆ ಏಕೆಂದರೆ ಇವರೇ ಪುನಃ ನಂಬರ್ವನ್ ಪಾವನರಾಗಬೇಕು. ಇವರು ತಮ್ಮನ್ನು ತಾವು ನಾನು ಭಗವಂತ ಆಗಿದ್ದೇನೆ, ಇಂತಹವರು ಆಗಿದ್ದೇನೆ ಎಂದು ಹೇಳುತ್ತಾರೇನು. ನಾನು ಇವರಲ್ಲಿ ಪ್ರವೇಶ ಮಾಡಿ ಇವರ ಮೂಲಕ ಎಲ್ಲವನ್ನು ಸತೋಪ್ರಧಾನ ಮಾಡುತ್ತೇನೆ ಎಂದು ತಂದೆಯೂ ಸಹ ತಿಳಿಯುತ್ತಾರೆ. ಈಗ ತಂದೆ ಮಕ್ಕಳಿಗೆ ತಿಳಿಸುತ್ತಾರೆ - ತಾವು ಅಶರೀರಿ ಆಗಿ ಬಂದಿದ್ದೀರಿ ನಂತರ 84 ಜನ್ಮಗಳನ್ನು ತೆಗೆದುಕೊಂಡು ಪಾರ್ಟ್ ಮಾಡಿದ್ದೀರಿ, ಈಗ ವಾಪಸ್ ಹೋಗಬೇಕು, ತಮ್ಮನ್ನು ಆತ್ಮ ಎಂದು ತಿಳಿದು ದೇಹಾಭಿಮಾನವನ್ನು ಬಿಡಿ. ಕೇವಲ ನೆನಪಿನ ಯಾತ್ರೆಯಲ್ಲಿ ಇರಬೇಕು ಮತ್ತೆ ಯಾವುದೇ ಕಷ್ಟವಿಲ್ಲ. ಯಾರು ಪವಿತ್ರರಾಗುತ್ತಾರೆ, ಜ್ಞಾನ ಕೇಳುತ್ತಾರೆ ಅವರೇ ವಿಶ್ವಕ್ಕೆ ಮಾಲೀಕರಾಗುತ್ತಾರೆ. ಎಷ್ಟು ದೊಡ್ಡ ಶಾಲೆಯಾಗಿದೆ. ಓದಿಸುವ ತಂದೆ ಎಷ್ಟು ನಿರಹಂಕಾರಿ ಆಗಿ ಪತಿತ ಪ್ರಪಂಚದಲ್ಲಿ ಪತಿತ ಶರೀರದಲ್ಲಿ ಬರುತ್ತಾರೆ. ಭಕ್ತಿಮಾರ್ಗದಲ್ಲಿ ತಾವು ಅವರಿಗಾಗಿ ಎಷ್ಟು ದೊಡ್ಡ ಚಿನ್ನದ ಮಂದಿರಗಳನ್ನು ಮಾಡುತ್ತೀರಿ. ಈ ಸಮಯದಲ್ಲಿ ನಾನು ತಮ್ಮನ್ನು ಸ್ವರ್ಗಕ್ಕೆ ಮಾಲೀಕರನ್ನಾಗಿ ಮಾಡುತ್ತೇನೆ. ಅಂದಾಗ ಪತಿತ ಶರೀರದಲ್ಲಿ ಬಂದು ಕುಳಿತುಕೊಳ್ಳುತ್ತೇನೆ. ನಂತರ ಭಕ್ತಿಮಾರ್ಗದಲ್ಲಿ ತಾವು ನನ್ನನ್ನು ಸೋಮನಾಥ ಮಂದಿರದಲ್ಲಿ ಕೂರಿಸುತ್ತೀರಿ. ಚಿನ್ನ-ವಜ್ರದ ಮಂದಿರವನ್ನು ಮಾಡುತ್ತೀರಿ ಏಕೆಂದರೆ ನಿಮಗೆ ಗೊತ್ತಿದೆ ನಮ್ಮನ್ನು ಸ್ವರ್ಗಕ್ಕೆ ಮಾಲೀಕರನ್ನಾಗಿ ಮಾಡುತ್ತೀರಿ, ಅದರಿಂದ ಸೇವೆ ಮಾಡುತ್ತೀರಿ ಈ ಎಲ್ಲಾ ರಹಸ್ಯಗಳನ್ನು ತಿಳಿಸಲಾಗಿದೆ. ಭಕ್ತಿ ಮೊದಲು ಅವ್ಯಭಿಚಾರಿ ನಂತರ ವ್ಯಭಿಚಾರಿ ಆಗಿಬಿಡುತ್ತದೆ. ಈಗಿನಕಾಲದಲ್ಲಿ ಮನುಷ್ಯರಿಗೂ ಪೂಜೆ ಮಾಡುತ್ತಾರೆ. ಗಂಗಾನದಿಯ ತೀರದಲ್ಲಿ ನೋಡಿ ಶಿವೋಹಂ ಎಂದು ಹೇಳಿ ಕುಳಿತುಕೊಂಡುಬಿಡುತ್ತಾರೆ. ಮಾತೆಯರು ಹೋಗಿ ಹಾಲನ್ನು ಅಭಿಶೇಕ ಮಾಡುತ್ತಾರೆ, ಪೂಜೆ ಮಾಡುತ್ತಾರೆ. ಈ ದಾದಾರವರು ಸ್ವಯಂ ಸಹ ಮಾಡಿದ್ದಾರೆ, ನಂಬರ್ವನ್ ಪೂಜಾರಿ ಆಗಿದ್ದರಲ್ಲವೇ. ಅದ್ಭುತವಾಗಿಯಲ್ಲವೇ. ಇದು ಅದ್ಭುತ ಪ್ರಪಂಚವಾಗಿದೆ ಎಂದು ಬಾಬಾ ಹೇಳುತ್ತಾರೆ. ಹೇಗೆ ಸ್ವರ್ಗ ಆಗುತ್ತದೆ, ಹೇಗೆ ನರಕ ಆಗುತ್ತದೆ ಎಲ್ಲಾ ರಹಸ್ಯಗಳನ್ನು ಮಕ್ಕಳಿಗೆ ತಿಳಿಸಲಾಗುತ್ತದೆ. ಈ ಜ್ಞಾನವಂತೂ ಶಾಸ್ತ್ರದಲ್ಲಿ ಇರುವುದಿಲ್ಲ. ಅದು ತರ್ಕ (ಫಿಲಾಸಫಿ) ಶಾಸ್ತ್ರ, ಇದು ಆಧ್ಯಾತ್ಮಿಕ ಜ್ಞಾನವಾಗಿದೆ ಯಾವುದು ಆತ್ಮಿಕ ತಂದೆ ಅಥವಾ ತಾವು ಬ್ರಾಹ್ಮಣ ಮಕ್ಕಳ ವಿನಃ ಬೇರೆ ಯಾರೂ ಕೊಡಲು ಸಾಧ್ಯವಿಲ್ಲ. ತಾವು ಬ್ರಾಹ್ಮಣರಿಗೆ ವಿನಃ ಆತ್ಮಿಕ ಜ್ಞಾನ ಬೇರೆ ಯಾರಿಗೂ ಸಿಗಲು ಸಾಧ್ಯವಿಲ್ಲ. ಎಲ್ಲಿಯತನಕಬ್ರಾಹ್ಮಣರಾಗುವುದಿಲ್ಲ ಅಲ್ಲಿಯತನಕ ದೇವತೆಗಳಾಗಲು ಸಾಧ್ಯವಿಲ್ಲ. ಭಗವಂತ ನಮಗೆ ಓದಿಸುತ್ತಾರೆ, ಶ್ರೀಕೃಷ್ಣ ಅಲ್ಲ ಎಂದು ತಾವು ಮಕ್ಕಳಿಗೆ ಬಹಳ ಖುಷಿ ಇರಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಮಾಯೆಯ ಬಹಳ ದೊಡ್ಡ ಶೋ ಆಗಿದೆ, ಇದರಿಂದ ತಮ್ಮ ಮುಖವನ್ನು ತಿರುಗಿಸಿಕೊಳ್ಳಬೇಕು. ನಾವು ಪುರುಷೋತ್ತಮರಾಗುತ್ತಿದ್ದೇವೆ, ಭಗವಂತ ನಮ್ಮನ್ನು ಓದಿಸುತ್ತಿದ್ದಾರೆ ಎಂಬ ಇದೇ ಖುಷಿಯಲ್ಲಿ ರೋಮಾಂಚನವಾಗಬೇಕು.

2. ವಿಶ್ವದ ರಾಜ್ಯಭಾಗ್ಯವನ್ನು ಪಡೆಯಲು ಕೇವಲ ಪವಿತ್ರರಾಗಬೇಕು, ಹೇಗೆ ತಂದೆ ನಿರಹಂಕಾರಿ ಆಗಿ ಪತಿತ ಪ್ರಪಂಚ, ಪತಿತ ಶರೀರದಲ್ಲಿ ಬರುತ್ತಾರೆ, ಅದೇ ರೀತಿ ತಂದೆಯ ಸಮಾನ ನಿರಹಂಕಾರಿ ಆಗಿ ಸೇವೆ ಮಾಡಬೇಕು.

ವರದಾನ:
ಒಬ್ಬರ ಜೊತೆ ಸರ್ವ ಸಂಬಂಧ ನಿಭಾಯಿಸುವಂತಹ ಸರ್ವರ ದೂರ ಮುಕ್ತ ಸಂಪೂರ್ಣ ಫರಿಸ್ತಾ ಭವ

ಹೇಗೆ ಯಾವುದೇ ವಸ್ತು ಮಾಡಲಾಗುತ್ತದೆ, ಯಾವಾಗ ಅದು ತಯಾರಾಗುತ್ತದೆ ಅದು ಎಲ್ಲರದಿಂದ ದೂರವಾಗಿಬಿಡುತ್ತದೆ, ಹೀಗೆ ಎಷ್ಟು ಸಂಪನ್ನ ಸ್ಟೇಜ್ನ ಸಮೀಪ ಬರುತ್ತಾ ಹೋಗುತ್ತದೆ ಅಷ್ಟು ಸರ್ವರಿಂದ ದೂರವಾಗುತ್ತಾ ಹೋಗುತ್ತದೆ. ಯಾವಾಗ ಎಲ್ಲಾ ಬಂಧನಗಳಿಂದ ವೃತ್ತಿ ಮೂಲಕ ದೂರವಾಗುವ ಅರ್ಥಾತ್ ಯಾರಲ್ಲಿಯೂ ಆಕರ್ಷಣೆಯಾಗುವುದಿಲ್ಲ ಆಗ ಸಂಪೂರ್ಣ ಫರಿಶ್ತೆಗಳಾಗುವಿರಿ. ಒಬ್ಬರ ಜೊತೆ ಸರ್ವ ಸಂಬಂಧ ನಿಭಾಯಿಸುತ್ತೀರಿ- ಇದೇ ಸ್ಥಿತಿಯಾಗಿದೆ. ಇದರಿಂದಲೇ ಅಂತಿಮ ಫರಿಶ್ತೆ ಜೀವನದ ಗುರಿ ಸಮೀಪ ಅನುಭವವಾಗುವುದು. ಬುದ್ಧಿಯನ್ನು ಅಲೆದಾಡುವುದು ನಿಂತು ಬಿಡುವುದು.

ಸ್ಲೋಗನ್:
ಸ್ನೇಹ ಇಂತಹ ಒಂದು ಆಯಸ್ಕಾಂತವಾಗಿದೆ ಯಾವುದು ನಿಂದನೆ ಮಾಡುವವರನ್ನೂ ಸಹ ಸಮೀಪ ತೆಗೆದುಕೊಂಡು ಬರುವುದು.

ತಮ್ಮ ಶಕ್ತಿಶಾಲಿ ಮನಸ್ಸಾ ಮೂಲಕ ಸಕಾಶ ಕೊಡುವ ಸೇವೆಯನ್ನು ಮಾಡಿರಿ

ಮನಸ್ಸಾ ಸೇವೆಗಾಗಿ ಮನಸ್ಸು, ಬುದ್ಧಿ ವ್ಯರ್ಥ ಯೋಚಿಸುವುದರಿಂದ ಮುಕ್ತರಾಗಬೇಕು. ‘ಮನಮನಾಭವ’ದ ಮಂತ್ರದ ಸಹಜ ಸ್ವರೂಪರಾಗಬೇಕು. ಯಾವ ಶ್ರೇಷ್ಠ ಆತ್ಮರ ಶ್ರೇಷ್ಠ ಮನಸ್ಸು ಅರ್ಥಾತ್ ಸಂಕಲ್ಪ ಶಕ್ತಿಶಾಲಿಯಾಗಿದೆ, ಶುಭ-ಭಾವನೆ, ಶುಭ-ಕಾಮನೆವುಳ್ಳವರಿದ್ದಾರೆ ಅವರು ಮನಸ್ಸಾ ಮೂಲಕ ಶಕ್ತಿಗಳ ದಾನ ಕೊಡಲು ಸಾಧ್ಯ.