15.02.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಂದೆಯು ನಿಮಗೆ ದೈವೀಧರ್ಮ ಮತ್ತು ಶ್ರೇಷ್ಠಕರ್ಮವನ್ನು ಕಲಿಸುತ್ತಾರೆ ಆದ್ದರಿಂದ ನಿಮ್ಮಿಂದ ಯಾವುದೇ ಆಸುರೀ ಕರ್ಮ ಆಗಬಾರದು, ಬುದ್ಧಿಯು ಬಹಳ ಶುದ್ಧವಾಗಿರಬೇಕು”

ಪ್ರಶ್ನೆ:
ದೇಹಾಭಿಮಾನದಲ್ಲಿ ಬರುವುದರಿಂದ ಮೊದಲನೆಯ ಪಾಪ ಯಾವುದಾಗುತ್ತದೆ?

ಉತ್ತರ:
ಒಂದುವೇಳೆ ದೇಹಾಭಿಮಾನ ಇದ್ದರೆ ದೇಹಧಾರಿಗಳ ನೆನಪು ಬರುತ್ತದೆ, ಕುದೃಷ್ಟಿ ಬರುತ್ತದೆ, ಇದು ದೊಡ್ಡ ಪಾಪವಾಗಿದೆ ಆಗ ಮಾಯೆಯು ನನ್ನ ಮೇಲೆ ಯುದ್ಧ ಮಾಡಲು ಬರುತ್ತಿದೆ ಎಂದು ತಿಳಿಯಬೇಕು. ತಕ್ಷಣವೇ ಎಚ್ಚರಿಕೆಯಿಂದಿರಬೇಕು.

ಓಂ ಶಾಂತಿ.
ಆತ್ಮೀಯ ತಂದೆಯು ಆತ್ಮೀಯ ಮಕ್ಕಳಿಗೆ ತಿಳಿಸುತ್ತಿದ್ದಾರೆ - ಆತ್ಮೀಯ ತಂದೆ ಎಲ್ಲಿಂದ ಬಂದಿದ್ದಾರೆ? ಆತ್ಮಗಳ ಜಗತ್ತಿನಿಂದ. ಅದನ್ನೇ ನಿರ್ವಾಣಧಾಮ ಅಥವಾ ಶಾಂತಿಧಾಮವೆಂದು ಕರೆಯಲಾಗುತ್ತದೆ. ಇದು ಗೀತೆಯ ಮಾತಾಗಿದೆ. ಈ ಜ್ಞಾನವು ಎಲ್ಲಿಂದ ಬಂದಿತು ಎಂದು ನಿಮ್ಮನ್ನು ಕೇಳುತ್ತಾರೆ. ಹೇಳಿ ಇದು ಅದೇ ಗೀತೆಯ ಜ್ಞಾನವಾಗಿದೆ, ಗೀತೆಯ ಪಾತ್ರವು ನಡೆಯುತ್ತಾ ಇದೆ ಮತ್ತು ತಂದೆಯು ಓದಿಸುತ್ತಾ ಇದ್ದಾರೆ. ಭಗವಾನುವಾಚ - ಭಗವಂತ ಒಬ್ಬರೇ ಆಗಿದ್ದಾರೆ, ಅವರು ಶಾಂತಿಯ ಸಾಗರ, ಶಾಂತಿಯಧಾಮದಲ್ಲಿ ಇರುತ್ತಾರೆ. ನಾವೂ ಸಹ ಅಲ್ಲಿಯೇ ಇರುತ್ತೇವೆ. ಇದು ಪತಿತ ಪ್ರಪಂಚ, ಪಾಪಾತ್ಮರ ತಮೋಪ್ರಧಾನ ಜಗತ್ತೆಂದು ತಂದೆಯು ತಿಳಿಸುತ್ತಾರೆ. ಈ ಸಮಯದಲ್ಲಿ ತಮೋಪ್ರಧಾನ ಆತ್ಮರಾಗಿದ್ದೇವೆ ಎಂಬುದು ನೀವೂ ಸಹ ತಿಳಿದುಕೊಂಡಿದ್ದೀರಿ. 84 ಜನ್ಮಗಳ ಚಕ್ರವನ್ನು ಸುತ್ತಿಕೊಂಡು ಸತೋಪ್ರಧಾನರಿಂದ ಈಗ ತಮೋಪ್ರಧಾನದಲ್ಲಿ ಬಂದಿದ್ದೇವೆ. ಇದು ಹಳೆಯ ಅಥವಾ ಕಲಿಯುಗೀ ಪ್ರಪಂಚವಾಗಿದೆ. ಈ ಹೆಸರೆಲ್ಲವೂ ಈ ಸಮಯದ್ದಾಗಿದೆ. ಹಳೆಯ ಪ್ರಪಂಚದ ನಂತರ ಹೊಸಪ್ರಪಂಚವಿರುತ್ತದೆ. ಭಾರತವಾಸಿಗಳು ಮಹಾಭಾರತ ಯುದ್ಧ ನಡೆದಾಗ ಪ್ರಪಂಚವು ಬದಲಾವಣೆಯಾಗಿತ್ತು ಎಂಬುದನ್ನು ತಿಳಿದುಕೊಂಡಿದ್ದಾರೆ. ಆಗಲೇ ತಂದೆಯು ರಾಜಯೋಗವನ್ನು ಕಲಿಸಿದ್ದರು, ಕೇವಲ ಏನು ತಪ್ಪಾಯಿತು? ಮೊದಲನೆಯದಾಗಿ ಕಲ್ಪದ ಆಯಸ್ಸನ್ನು ಮರೆತುಬಿಟ್ಟಿದ್ದಾರೆ ಮತ್ತು ಗೀತೆಯ ಭಗವಂತನನ್ನೂ ಸಹ ಮರೆತಿದ್ದಾರೆ. ಕೃಷ್ಣನನ್ನು ಪರಮಪಿತನೆಂದು ಹೇಳಲು ಸಾಧ್ಯವಿಲ್ಲ. ಆತ್ಮನೇ ಪರಮಪಿತ ಎಂದು ಹೇಳುತ್ತದೆ ಅಂದಾಗ ಅವರು ನಿರಾಕಾರನಾದರು. ನಿರಾಕಾರ ತಂದೆಯು ಆತ್ಮನಿಗೆ ನನ್ನನ್ನು ನೆನಪು ಮಾಡು ಎಂದು ಹೇಳುತ್ತಾರೆ. ನಾನೇ ಪತಿತ-ಪಾವನನಾಗಿದ್ದೇನೆ, ಹೇ ಪತಿತ-ಪಾವನ ಎಂದು ನನ್ನನ್ನೇ ಕರೆಯುತ್ತಾರೆ. ಕೃಷ್ಣನಾದರೂ ದೇಹಧಾರಿಯಾಗಿದ್ದಾನಲ್ಲವೆ. ನನಗೆ ಯಾವುದೇ ಶರೀರವಿಲ್ಲ, ನಾನು ನಿರಾಕಾರನಾಗಿದ್ದೇನೆ, ಮನುಷ್ಯರ ತಂದೆಯಲ್ಲ ಆತ್ಮಗಳ ತಂದೆಯಾಗಿದ್ದೇನೆ - ಇದನ್ನು ನಿಶ್ಚಯ ಮಾಡಿಕೊಳ್ಳಬೇಕು. ಘಳಿಗೆ-ಘಳಿಗೆ ನಾವಾತ್ಮರು ಈ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ, ಈಗ 84 ಜನ್ಮಗಳು ಪೂರ್ಣವಾಗಿದೆ, ತಂದೆಯು ಬಂದಿದ್ದಾರೆ. ಬಾಬಾ, ಬಾಬಾ ಎಂದು ಹೇಳುತ್ತಿರಬೇಕು. ತಂದೆಯನ್ನು ಬಹಳ ನೆನಪು ಮಾಡಬೇಕು. ಇಡೀ ಕಲ್ಪ ಶಾರೀರಿಕ ತಂದೆಯನ್ನು ನೆನಪು ಮಾಡಿದ್ದೀರಿ, ಈಗ ತಂದೆಯು ಬಂದಿದ್ದಾರೆ. ಮನುಷ್ಯ ಸೃಷ್ಟಿಯಿಂದ ಎಲ್ಲಾ ಆತ್ಮರನ್ನು ಹಿಂತಿರುಗಿ ಕರೆದುಕೊಂಡು ಹೋಗುತ್ತಾರೆ ಏಕೆಂದರೆ ರಾವಣರಾಜ್ಯದಲ್ಲಿ ಮನುಷ್ಯರೆಲ್ಲರದು ದುರ್ಗತಿಯಾಗಿದೆ ಆದ್ದರಿಂದ ಈಗ ತಂದೆಯನ್ನು ನೆನಪು ಮಾಡಿ. ಇದು ರಾವಣರಾಜ್ಯವಾಗಿದೆ ಎಂಬುದನ್ನು ಮನುಷ್ಯರು ಯಾರೂ ತಿಳಿದುಕೊಂಡಿಲ್ಲ. ರಾವಣನ ಅರ್ಥವನ್ನೇ ತಿಳಿದುಕೊಂಡಿಲ್ಲ. ಕೇವಲ ದಶಹರ ಹಬ್ಬವನ್ನು ಆಚರಿಸುವುದು ಒಂದು ಪದ್ಧತಿಯಾಗಿಬಿಟ್ಟಿದೆ. ನೀವೂ ಸಹ ಇದರ ಅರ್ಥವನ್ನೇನೂ ತಿಳಿದುಕೊಂಡಿರಲಿಲ್ಲ. ಅನ್ಯರಿಗೆ ತಿಳಿಸಿಕೊಡಲು ಈಗ ತಿಳುವಳಿಕೆ ಸಿಕ್ಕಿದೆ. ಒಂದುವೇಳೆ ಅನ್ಯರಿಗೆ ತಿಳಿಸಿಕೊಡಲಿಲ್ಲವೆಂದರೆ ಸ್ವಯಂ ಏನನ್ನೂ ತಿಳಿದುಕೊಂಡಿಲ್ಲವೆಂದು ಅರ್ಥವಾಗುತ್ತದೆ. ತಂದೆಯಲ್ಲಿ ಸೃಷ್ಟಿಚಕ್ರದ ಜ್ಞಾನವಿದೆ, ನಾವು ಅವರ ಮಕ್ಕಳಾಗಿದ್ದೇವೆ ಅಂದಾಗ ಮಕ್ಕಳಲ್ಲಿಯೂ ಸಹ ಈ ಜ್ಞಾನವಿರಬೇಕು.

ನಿಮ್ಮದು ಗೀತಾಪಾಠಶಾಲೆಯಾಗಿದೆ, ಇದರ ಉದ್ದೇಶವೇನು? ಲಕ್ಷ್ಮಿ-ನಾರಾಯಣರಾಗುವುದು. ಇದು ರಾಜಯೋಗವಲ್ಲವೆ. ನರನಿಂದ ನಾರಾಯಣ, ನಾರಿಯಿಂದ ಲಕ್ಷ್ಮಿಯಾಗುವ ಜ್ಞಾನವಾಗಿದೆ. ಅವರು ಕುಳಿತು ಕಥೆಗಳನ್ನು ತಿಳಿಸುತ್ತಿರುತ್ತಾರೆ. ಇಲ್ಲಿ ನಮಗೆ ತಂದೆಯು ರಾಜಯೋಗವನ್ನು ಕಲಿಸುತ್ತಿದ್ದಾರೆ, ಇದನ್ನು ಕಲ್ಪದ ಸಂಗಮಯುಗದಲ್ಲಿಯೇ ಕಲಿಸುತ್ತಾರೆ. ನಾನು ಹಳೆಯ ಜಗತ್ತನ್ನು ಬದಲಾವಣೆ ಮಾಡಿ ಹೊಸಜಗತ್ತನ್ನಾಗಿ ಮಾಡಲು ಬಂದಿದ್ದೇನೆ ಎಂದು ತಂದೆಯು ಹೇಳುತ್ತಾರೆ. ಹೊಸಜಗತ್ತಿನಲ್ಲಿ ಇವರ (ಲಕ್ಷ್ಮಿ-ನಾರಾಯಣ) ರಾಜ್ಯವಿತ್ತು, ಹಳೆಯದರಲ್ಲಿ ಇಲ್ಲ ನಂತರ ಅವಶ್ಯವಾಗಿ ಆಗಬೇಕು. ಚಕ್ರವನ್ನು ತಿಳಿದುಕೊಂಡಿದ್ದೀರಿ, ಮುಖ್ಯಧರ್ಮಗಳು ನಾಲ್ಕು ಇವೆ, ಆದರೆ ಈಗ ದೇವತಾಧರ್ಮವಿಲ್ಲ. ದೈವೀಧರ್ಮಭ್ರಷ್ಟ ಮತ್ತು ದೈವೀಕರ್ಮಭ್ರಷ್ಟರಾಗಿಬಿಟ್ಟಿದ್ದಾರೆ. ಈಗ ಮತ್ತೆ ತಮಗೆ ದೈವೀಧರ್ಮಶ್ರೇಷ್ಠ ಮತ್ತು ಕರ್ಮಶ್ರೇಷ್ಠರಾಗುವುದನ್ನು ಕಲಿಸಲಾಗುತ್ತಿದೆ. ನನ್ನಿಂದ ಯಾವುದೇ ಆಸುರಿಯ ಕರ್ಮವು ಆಗುತ್ತಿಲ್ಲವೆ? ಎಂದು ತನ್ನ ಬಗ್ಗೆ ಗಮನವನ್ನಿಡಬೇಕು. ಮಾಯೆಯ ಕಾರಣ ಯಾವುದೇ ಕೆಟ್ಟವಿಚಾರಗಳು ಬುದ್ಧಿಯಲ್ಲಿ ಬರುತ್ತಿಲ್ಲವೆ? ಕುದೃಷ್ಟಿ ಇರುವುದಿಲ್ಲವೆ? ಕುದೃಷ್ಟಿ ಇದ್ದರೆ ಅಥವಾ ಕೆಟ್ಟವಿಚಾರಗಳು ಬರುತ್ತದೆಯೆಂದರೆ ನೋಡಿ ಅದಕ್ಕೆ ತಕ್ಷಣ ಎಚ್ಚರಿಕೆ ವಹಿಸಬೇಕು, ಅವರ ಜೊತೆ ಸೇರಬಾರದು. ನಿಮ್ಮಲ್ಲಿ ಮಾಯೆಯ ಪ್ರವೇಶತೆಯ ಕಾರಣ ಈ ಕೆಟ್ಟವಿಚಾರಗಳು ಬರುತ್ತವೆಯೆಂದು ಅವರನ್ನು ಎಚ್ಚರಿಸಬೇಕು. ಯೋಗದಲ್ಲಿ ಕುಳಿತು ತಂದೆಯ ನೆನಪಿಗೆ ಬದಲಾಗಿ ಯಾವುದೇ ದೇಹದಕಡೆ ವಿಚಾರಗಳು ಹೋಯಿತೆಂದರೆ ಇದು ಮಾಯೆಯ ಯುದ್ಧವಾಗಿದೆ, ನಾನು ಪಾಪ ಮಾಡುತ್ತಿದ್ದೇನೆಂದು ತಿಳಿಯಬೇಕು. ಇದರಲ್ಲಿ ಬುದ್ಧಿಯು ಬಹಳ ಶುದ್ಧವಾಗಿರಬೇಕು. ತಮಾಷೆ ಮಾಡುವುದರಿಂದಲೂ ಸಹ ಬಹಳ ನಷ್ಟವಾಗುತ್ತದೆ ಆದ್ದರಿಂದ ತಮ್ಮ ಮುಖದಿಂದ ಸದಾಕಾಲ ಶುದ್ಧವಚನಗಳೇ ಬರಬೇಕು, ಕೆಟ್ಟವಚನ ಬರಬಾರದು. ತಮಾಷೆಯಿಂದಲೂ ಮಾತನಾಡಬಾರದು. ನಾವಂತೂ ಕೇವಲ ತಮಾಷೆ ಮಾಡಿದೆವಷ್ಟೆ ಎನ್ನುವುದಲ್ಲ, ಅದೂ ಸಹ ನಷ್ಟದಾಯಕವಾಗಿಬಿಡುತ್ತದೆ. ನಗುವಿನಲ್ಲಿಯೂ ಸಹ ವಿಕಾರಗಳ ವಾಸನೆಯಿರಬಾರದು, ಬಹಳ ಎಚ್ಚರಿಕೆಯಿಂದಿರಬೇಕು. ನಿಮಗೆ ತಿಳಿದಿದೆ - ದಿಗಂಬರರ ವಿಚಾರಗಳೂ ಸಹ ವಿಕಾರಗಳ ಕಡೆ ಹೋಗುವುದಿಲ್ಲ, ಅವರು ಬೇರೆ ಕಡೆ ನಿವಾಸಿಸುತ್ತಾರೆ ಆದರೆ ಯೋಗವಿಲ್ಲದೆ ಕರ್ಮೇಂದ್ರಿಯಗಳ ಚಂಚಲತೆಯು ಸಮಾಪ್ತಿಯಾಗಲು ಸಾಧ್ಯವಿಲ್ಲ. ಕಾಮ ಮಹಾಶತ್ರುವು ಯಾರನ್ನೂ ಸಹ ಬಿಡುವುದಿಲ್ಲ, ಯೋಗದಲ್ಲಿಲ್ಲವೆಂದರೆ ಅವಶ್ಯವಾಗಿ ಚಂಚಲತೆಯಾಗುವುದು. ತಮ್ಮ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ತಂದೆಯ ನೆನಪಿನಲ್ಲಿಯೇ ಇರಿ, ಆಗ ಈ ಯಾವುದೇ ಪ್ರಕಾರದ ರೋಗವು ಇರುವುದಿಲ್ಲ. ಯೋಗದಲ್ಲಿದ್ದಾಗ ಇವು ಆಗುವುದಿಲ್ಲ. ಸತ್ಯಯುಗದಲ್ಲಿ ಯಾವುದೇ ಪ್ರಕಾರದ ಕೊಳಕಿರುವುದಿಲ್ಲ. ಚಲಾಯಮಾನವಾಗಲು ಅಲ್ಲಿ ಯಾವುದೇ ಪ್ರಕಾರದ ರಾವಣನ ಚಂಚಲತೆಯೇ ಇರುವುದಿಲ್ಲ, ಅಲ್ಲಿ ಯೋಗೀ ಜೀವನವಾಗಿರುತ್ತದೆ. ಅದೇ ರೀತಿ ಇಲ್ಲಿಯೂ ಸಹ ಸ್ಥಿತಿಯು ಬಹಳ ಪರಿಪಕ್ವವಿರಬೇಕು. ಯೋಗಬಲದಿಂದ ಇವೆಲ್ಲಾ ಖಾಯಿಲೆಗಳು ನಿಂತುಹೋಗುತ್ತದೆ. ಇದರಲ್ಲಿ ಪರಿಶ್ರಮವಿದೆ. ರಾಜ್ಯವನ್ನು ತೆಗೆದುಕೊಳ್ಳುವುದೇನೂ ಚಿಕ್ಕಮ್ಮನ ಮನೆಯಂತಲ್ಲ. ಪುರುಷಾರ್ಥವನ್ನಂತೂ ಮಾಡಬೇಕಲ್ಲವೆ. ಭಾಗ್ಯದಲ್ಲಿ ಏನಿದ್ದರೆ ಅದು ಸಿಗುತ್ತದೆಯೆಂದಲ್ಲ. ಧಾರಣೆ ಮಾಡುವುದಿಲ್ಲವೆಂದರೆ ಬಿಡಿಗಾಸಿನ ಪದವಿಗೆ ಯೋಗ್ಯರಾಗಿದ್ದೇವೆ ಎಂದರ್ಥ. ಬಹಳ ವಿಷಯಗಳಿರುತ್ತವೆಯಲ್ಲವೆ. ಕೆಲವರು ಚಿತ್ರಕಲೆಯಲ್ಲಿ, ಕೆಲವರು ಆಟದಲ್ಲಿ ಅಂಕಗಳನ್ನು ತೆಗೆದುಕೊಳ್ಳುತ್ತಾರೆ, ಅದು ಸಾಮಾನ್ಯ ವಿಷಯವಾಗಿದೆ ಹಾಗೆಯೇ ಇಲ್ಲಿಯೂ ವಿಷಯಗಳಿವೆ. ಏನಾದರೊಂದು ಪದವಿ ಸಿಗುತ್ತದೆ ಆದರೆ ರಾಜ್ಯಭಾಗ್ಯವು ಸಿಗುವುದಿಲ್ಲ. ಅವರಂತೂ ಸೇವೆ ಮಾಡುತ್ತಾರೆ ಆದ್ದರಿಂದ ರಾಜ್ಯಭಾಗ್ಯವು ಸಿಗುತ್ತದೆ ಅದಕ್ಕಾಗಿ ಬಹಳ ಪರಿಶ್ರಮಬೇಕು. ಅನೇಕರ ಬುದ್ಧಿಯಲ್ಲಿ ಕುಳಿತುಕೊಳ್ಳುವುದೇ ಇಲ್ಲ. ಹೇಗೆ ಭೋಜನವು ಜೀರ್ಣವಾಗುವುದೇ ಇಲ್ಲ. ಶ್ರೇಷ್ಟಪದವಿಯನ್ನು ಪಡೆಯುವ ಧೈರ್ಯವಿಲ್ಲ, ಇದಕ್ಕೂ ಖಾಯಿಲೆಯೆಂದು ಹೇಳುತ್ತಾರಲ್ಲವೆ. ನೀವು ಯಾವುದೇ ಮಾತನ್ನು ನೋಡಿಯೂ ನೋಡದಂತಿರಿ, ಆತ್ಮಿಕ ತಂದೆಯ ನೆನಪಿನಲ್ಲಿದ್ದು ಅನ್ಯರಿಗೆ ಮಾರ್ಗವನ್ನು ತಿಳಿಸಬೇಕು, ಅಂಧರಿಗೆ ಊರುಗೋಲಾಗಬೇಕಾಗಿದೆ. ನೀವಂತೂ ಮಾರ್ಗವನ್ನು ತಿಳಿದುಕೊಂಡಿದ್ದೀರಿ, ರಚಯಿತ ಮತ್ತು ರಚನೆಯ ಮುಕ್ತಿ-ಜೀವನ್ಮುಕ್ತಿಯ ಜ್ಞಾನವು ನಿಮ್ಮ ಬುದ್ಧಿಯಲ್ಲಿ ಸುತ್ತುತ್ತಿರುತ್ತದೆ, ಮಹಾರಥಿಗಳಲ್ಲಿ ಮಾತ್ರ. ಮಕ್ಕಳ ಸ್ಥಿತಿಯಲ್ಲಿಯೂ ರಾತ್ರಿ-ಹಗಲಿನ ಅಂತರವಿರುತ್ತದೆ. ಕೆಲವರು ಬಹಳ ಧನವಂತರಾಗಿಬಿಡುತ್ತಾರೆ, ಕೆಲವರು ಸಂಪೂರ್ಣ ಬಡವರಾಗುತ್ತಾರೆ, ರಾಜ್ಯಪದವಿಯಲ್ಲಂತೂ ಅಂತರವಿದೆಯಲ್ಲವೆ ಬಾಕಿ ಅಲ್ಲಿ ರಾವಣನಿಲ್ಲದೇ ಇರುವ ಕಾರಣ ದುಃಖವಿರುವುದಿಲ್ಲ ಕೇವಲ ಸಂಪತ್ತಿನಲ್ಲಿ ಅಂತರವಿರುತ್ತದೆ. ಸಂಪತ್ತಿನಿಂದ ಸುಖವಿರುತ್ತದೆ.

ಎಷ್ಟು ನೀವು ಯೋಗದಲ್ಲಿರುತ್ತೀರೋ ಅಷ್ಟು ಆರೋಗ್ಯವು ಬಹಳ ಚೆನ್ನಾಗಿರುವುದು ಆದರೆ ಪರಿಶ್ರಮಪಡಬೇಕಾಗಿದೆ. ಅನೇಕರ ಚಲನೆಯು ಅಜ್ಞಾನಿ ಮನುಷ್ಯರಂತಿರುತ್ತದೆ, ಅವರು ಯಾರದೇ ಕಲ್ಯಾಣ ಮಾಡಲು ಸಾಧ್ಯವಿಲ್ಲ, ಯಾವಾಗ ಪರೀಕ್ಷೆಯು ನಡೆಯುವುದೋ ಆಗ ಯಾರ್ಯಾರು ಎಷ್ಟು ಅಂಕಗಳಿಂದ ತೇರ್ಗಡೆಯಾಗುತ್ತಾರೆಂಬುದು ಕಂಡುಬರುತ್ತದೆ. ಆ ಸಮಯದಲ್ಲಿ ಅಯ್ಯಯ್ಯೊ ಎನ್ನಬೇಕಾಗುತ್ತದೆ. ಬಾಪ್ದಾದಾ ಇಬ್ಬರೂ ಎಷ್ಟೊಂದು ತಿಳಿಸುತ್ತಿರುತ್ತಾರೆ, ತಂದೆಯು ಕಲ್ಯಾಣ ಮಾಡುವುದಕ್ಕಾಗಿಯೇ ಬಂದಿದ್ದಾರೆ. ತಮ್ಮ ಕಲ್ಯಾಣವನ್ನೂ ಮಾಡಿಕೊಳ್ಳಬೇಕು, ಅನ್ಯರದನ್ನೂ ಮಾಡಬೇಕಾಗಿದೆ. ಬಂದು ನಾವು ಪತಿತರಿಗೆ ಪಾವನರಾಗುವ ಮಾರ್ಗವನ್ನು ತಿಳಿಸಿ ಎಂದು ತಂದೆಯನ್ನು ಕರೆದಿರಿ ಆದ್ದರಿಂದ ತಂದೆಯು ಶ್ರೀಮತ ಕೊಡುತ್ತಾರೆ - ನೀವು ತಮ್ಮನ್ನು ಆತ್ಮನೆಂದು ತಿಳಿದು ದೇಹದ ಅಭಿಮಾನವನ್ನು ಬಿಟ್ಟು ತಂದೆಯನ್ನು ನೆನಪು ಮಾಡಿ, ಇದು ಎಷ್ಟು ಸಹಜವಾದ ಔಷಧಿಯಾಗಿದೆ. ತಿಳಿಸಿ, ನಾವು ಕೇವಲ ಒಬ್ಬ ಭಗವಂತ ತಂದೆಯನ್ನು ಒಪ್ಪುತ್ತೇವೆ. ಬಂದು ಪತಿತರನ್ನು ಪಾವನ ಮಾಡಿ ಎಂದೇ ನನ್ನನ್ನು ಕರೆಯುತ್ತೀರಿ ಆದ್ದರಿಂದ ನಾನು ಬರಬೇಕಾಗುತ್ತದೆ ಎಂದು ತಂದೆಯು ತಿಳಿಸುತ್ತಿದ್ದಾರೆ. ಬ್ರಹ್ಮಾರವರಿಂದ ನಿಮಗೇನೂ ಸಿಗುವುದಿಲ್ಲ, ಅವರಂತೂ ಕೇವಲ ಸಹೋದರನಾಗಿದ್ದಾರೆ, ತಂದೆಯೂ ಅಲ್ಲ. ತಂದೆಯಿಂದಂತೂ ಆಸ್ತಿಯು ಸಿಗುತ್ತದೆ, ಬ್ರಹ್ಮನಿಂದ ಆಸ್ತಿಯು ಸಿಗುತ್ತದೆಯೇ! ನಿರಾಕಾರ ತಂದೆಯು ಇವರ ಮೂಲಕ ದತ್ತು ಮಾಡಿಕೊಂಡು ನಾವಾತ್ಮಗಳಿಗೆ ಓದಿಸುತ್ತಾರೆ ಜೊತೆಯಲ್ಲಿ ಇವರಿಗೂ ಓದಿಸುತ್ತಾರೆ. ಬ್ರಹ್ಮಾರವರಿಂದ ಏನೂ ಸಿಗುವುದಿಲ್ಲ, ಆಸ್ತಿಯು ಇವರ (ಬ್ರಹ್ಮಾ) ಮೂಲಕ ತಂದೆಯಿಂದಲೇ ಸಿಗುತ್ತದೆ. ಕೊಡುವವರು ಒಬ್ಬರೇ ಆಗಿದ್ದಾರೆ, ಅವರದೇ ಮಹಿಮೆಯಿದೆ, ಅವರೇ ಸದ್ಗತಿದಾತನಾಗಿದ್ದಾರೆ. ಈ ಬ್ರಹ್ಮನಂತೂ ಪೂಜ್ಯರಿಂದ ಪೂಜಾರಿಯಾಗುತ್ತಾರೆ. ಸತ್ಯಯುಗದಲ್ಲಿ ಪೂಜ್ಯನಾಗಿದ್ದರು, ನಂತರ 84 ಜನ್ಮಗಳನ್ನು ತೆಗೆದುಕೊಂಡು ಈಗ ಪತಿತರಾಗಿದ್ದಾರೆ. ಈಗ ಪುನಃ ಪಾವನ, ಪೂಜ್ಯರಾಗುತ್ತಿದ್ದಾರೆ. ನಾವು ಸ್ವಯಂ ತಂದೆಯಿಂದ ಕೇಳುತ್ತೇವೆ, ಯಾವುದೇ ಮನುಷ್ಯರಿಂದ ಕೇಳುವುದಿಲ್ಲ. ಮನುಷ್ಯರದು ಭಕ್ತಿಮಾರ್ಗವಾಗಿದೆ, ಇದು ಆತ್ಮೀಯ ಜ್ಞಾನಮಾರ್ಗವಾಗಿದೆ, ಜ್ಞಾನವು ಕೇವಲ ಒಬ್ಬ ಜ್ಞಾನಸಾಗರನ ಬಳಿಯಿದೆ. ಉಳಿದಂತೆ ಶಾಸ್ತ್ರ ಮೊದಲಾದುವುಗಳೆಲ್ಲವೂ ಭಕ್ತಿಯದ್ದಾಗಿದೆ, ಶಾಸ್ತ್ರ ಮೊದಲಾದುವುಗಳನ್ನು ಓದುವುದು ಭಕ್ತಿಮಾರ್ಗವಾಗಿದೆ. ಜ್ಞಾನಸಾಗರ ಒಬ್ಬರೇ ತಂದೆಯಾಗಿದ್ದಾರೆ, ನಾವು ಜ್ಞಾನನದಿಗಳು ಜ್ಞಾನಸಾಗರನಿಂದ ಹೊರಟಿದ್ದೇವೆ, ಉಳಿದಂತೆ ಅವು ನೀರಿನ ಸಾಗರ ಮತ್ತು ನದಿಗಳಾಗಿವೆ. ಮಕ್ಕಳಿಗೆ ಇವೆಲ್ಲಾ ಮಾತುಗಳು ಗಮನದಲ್ಲಿರಬೇಕು. ಅಂತರ್ಮುಖಿಯಾಗಿ ಬುದ್ಧಿಯನ್ನು ನಡೆಸಬೇಕಾಗಿದೆ. ತಮ್ಮನ್ನು ತಾವು ಸುಧಾರಣೆ ಮಾಡಿಕೊಳ್ಳಲು ಅಂತರ್ಮುಖಿಯಾಗಿ ಪರಿಶೀಲನೆ ಮಾಡಿಕೊಳ್ಳಿ. ಒಂದುವೇಳೆ ಮುಖದಿಂದ ಯಾವುದೇ ಕೆಟ್ಟವಚನಗಳು ಬಂದರೆ ಇಲ್ಲವೆ ಕುದೃಷ್ಟಿಯಾದರೆ ನಮ್ಮ ಮುಖದಿಂದ ಕೆಟ್ಟವಚನಗಳು ಏಕೆ ಬಂದಿತು? ನಮ್ಮ ದೃಷ್ಟಿಯು ಕುದೃಷ್ಟಿ ಏಕಾಯಿತು ಎಂದು ತಮಗೆ ತಾವು ಪೆಟ್ಟುಕೊಟ್ಟುಕೊಳ್ಳಬೇಕು. ಪದೇ-ಪದೇ ಎಚ್ಚರವಹಿಸಬೇಕು ಆಗಲೇ ಶ್ರೇಷ್ಠಪದವಿಯನ್ನು ಪಡೆಯುತ್ತೀರಿ, ಮುಖದಿಂದ ಕಟುವಚನಗಳು ಬಾರದಿರಲಿ. ತಂದೆಯು ಎಲ್ಲಾ ಪ್ರಕಾರದ ಶಿಕ್ಷಣಗಳನ್ನು ಕೊಡಬೇಕಾಗುತ್ತದೆ. ಯಾರನ್ನಾದರೂ ಹುಚ್ಚ ಎಂಬ ಶಬ್ಧವನ್ನು ಹೇಳುವುದೂ ಸಹ ಕೆಟ್ಟವಚನವಾಗಿದೆ.

ಮನುಷ್ಯರಂತೂ ಯಾರ ಪ್ರತಿಯೇ ಆಗಲಿ, ಏನು ಬಂದರೆ ಅದನ್ನು ಹೇಳುತ್ತಿರುತ್ತಾರೆ. ನಾವು ಯಾರ ಮಹಿಮೆ ಮಾಡುತ್ತೇವೆ ಎಂಬುದನ್ನೂ ಸಹ ತಿಳಿದುಕೊಂಡಿಲ್ಲ. ವಾಸ್ತವಿಕವಾಗಿ ಒಬ್ಬ ಪತಿತ-ಪಾವನ ತಂದೆಗೆ ಮಹಿಮೆ ಮಾಡಬೇಕಾಗಿದೆ, ಅನ್ಯರ್ಯಾರಿಗೂ ಅಲ್ಲ. ಬ್ರಹ್ಮಾ-ವಿಷ್ಣು-ಶಂಕರನಿಗೂ ಪತಿತ-ಪಾವನರೆಂದು ಹೇಳಲಾಗುವುದಿಲ್ಲ. ಇವರು ಯಾರನ್ನೂ ಪಾವನ ಮಾಡುವುದಿಲ್ಲ, ಪತಿತರಿಂದ ಪಾವನರನ್ನಾಗಿ ಮಾಡುವವರು ತಂದೆಯೊಬ್ಬರೇ ಆಗಿದ್ದಾರೆ. ಪಾವನ ಸೃಷ್ಟಿಯು ಹೊಸಪ್ರಪಂಚವೇ ಆಗಿದೆ, ಅದು ಈಗಿಲ್ಲ. ಸ್ವರ್ಗದಲ್ಲಿಯೇ ಪವಿತ್ರತೆಯಿರುತ್ತದೆ, ಪವಿತ್ರತೆಯ ಸಾಗರನೂ ಇದ್ದಾರೆ, ಇದೀಗ ರಾವಣರಾಜ್ಯವಿದೆ ಅಂದಾಗ ಮಕ್ಕಳು ಆತ್ಮಾಭಿಮಾನಿಗಳಾಗುವ ಬಹಳ ಪರಿಶ್ರಮಪಡಬೇಕು. ಮುಖದಿಂದ ಯಾವುದೇ ಕಲ್ಲುಗಳು ಅಥವಾ ಕೆಟ್ಟವಚನಗಳು ಬರಬಾರದು, ಬಹಳ ಪ್ರೀತಿಯಿಂದ ನಡೆದುಕೊಳ್ಳಬೇಕಾಗಿದೆ. ಕೆಟ್ಟದೃಷ್ಟಿಯೂ ಸಹ ಬಹಳ ನಷ್ಟವುಂಟುಮಾಡುತ್ತದೆ ಆದ್ದರಿಂದ ಬಹಳ ಪರಿಶ್ರಮಪಡಬೇಕು. ಆತ್ಮಾಭಿಮಾನವು ಅವಿನಾಶಿ ಅಭಿಮಾನವಾಗಿದೆ, ದೇಹವು ವಿನಾಶಿಯಾಗಿದೆ, ಆತ್ಮವನ್ನು ಯಾರೂ ತಿಳಿದುಕೊಂಡಿಲ್ಲ. ಆತ್ಮಕ್ಕೆ ತಂದೆಯೂ ಸಹ ಅವಶ್ಯವಾಗಿ ಯಾರಾದರೂ ಇರಬೇಕಲ್ಲವೆ! ಎಲ್ಲರೂ ಸಹೋದರ-ಸಹೋದರರೆಂದು ಹೇಳುತ್ತಾರೆ, ಅಂದಮೇಲೆ ಎಲ್ಲರಲ್ಲಿಯೂ ಪರಮಾತ್ಮನು ವಿರಾಜಮಾನವಾಗಿರಲು ಸಾಧ್ಯವೇ? ಎಲ್ಲರೂ ತಂದೆಯರಾಗಲು ಸಾಧ್ಯವೇ? ಇಷ್ಟಾದರೂ ಬುದ್ಧಿಯಿಲ್ಲ! ಎಲ್ಲರ ತಂದೆಯೂ ಒಬ್ಬರೇ ಆಗಿದ್ದಾರೆ, ಇವರಿಂದಲೇ ಆಸ್ತಿಯು ಸಿಗುತ್ತದೆ. ಅವರ ಹೆಸರು ಶಿವನೆಂದಾಗಿದೆ. ಶಿವರಾತ್ರಿಯನ್ನೂ ಆಚರಿಸುತ್ತಾರೆ. ರುದ್ರರಾತ್ರಿ ಅಥವಾ ಕೃಷ್ಣರಾತ್ರಿ ಎಂದು ಹೇಳುವುದಿಲ್ಲ. ಮನುಷ್ಯರಂತೂ ಏನನ್ನೂ ತಿಳಿದುಕೊಂಡಿಲ್ಲ. ಇವೆಲ್ಲವೂ ಅವರದೇ ರೂಪವಾಗಿದೆ, ಅವರದೇ ಲೀಲೆಯಾಗಿದೆ ಎಂದು ತಿಳಿಯುತ್ತಾರೆ.

ಈಗ ನೀವು ತಿಳಿದುಕೊಂಡಿದ್ದೀರಿ - ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆಯೆಂದಮೇಲೆ ಆ ತಂದೆಯ ಶ್ರೀಮತದಂತೆ ನಡೆಯಬೇಕಾಗಿದೆ. ನನ್ನನ್ನು ನೆನಪು ಮಾಡಿ ಎಂದು ತಂದೆಯು ತಿಳಿಸುತ್ತಾರೆ. ಕೂಲಿಗಾರರಿಗೂ ಸಹ ಶಿಕ್ಷಣ ಕೊಡಬೇಕಾಗಿದೆ, ಅದರಿಂದ ಅವರ ಕಲ್ಯಾಣವೂ ಆಗಲಿ ಆದರೆ ತಾವೇ ನೆನಪು ಮಾಡಲಿಲ್ಲವೆಂದರೆ ಅನ್ಯರಿಗೆ ಹೇಗೆ ನೆನಪು ತರಿಸುತ್ತೀರಿ! ರಾವಣನು ಒಮ್ಮೆಲೆ ಪತಿತರನ್ನಾಗಿ ಮಾಡಿಬಿಡುತ್ತಾನೆ ಮತ್ತೆ ತಂದೆಯು ಬಂದು ಪಾವನರನ್ನಾಗಿ ಮಾಡುತ್ತಾರೆ. ಆಶ್ಚರ್ಯವಾಗಿದೆಯಲ್ಲವೆ. ಈ ಮಾತುಗಳನ್ನು ಯಾರ ಬುದ್ಧಿಯಲ್ಲಿಯೂ ತಿಳಿದುಕೊಳ್ಳುವುದಿಲ್ಲ. ಈ ಲಕ್ಷ್ಮಿ-ನಾರಾಯಣರು ಎಷ್ಟು ಶ್ರೇಷ್ಠ ಪಾವನರಿಂದ ಎಷ್ಟೊಂದು ಪತಿತರಾಗಿಬಿಡುತ್ತಾರೆ! ಆದ್ದರಿಂದ ಬ್ರಹ್ಮನ ರಾತ್ರಿ, ಬ್ರಹ್ಮನ ದಿನವೆಂದು ಗಾಯನವಿದೆ. ಶಿವನ ಮಂದಿರದಲ್ಲಿ ನೀವು ಬಹಳಷ್ಟು ಸೇವೆ ಮಾಡಬಹುದು. ತಂದೆಯು ತಿಳಿಸುತ್ತಾರೆ, ನೀವು ನನ್ನನ್ನು ನೆನಪು ಮಾಡಿ, ಅಲ್ಲಿ-ಇಲ್ಲಿ ಅಲೆದಾಡುವುದನ್ನು ಬಿಟ್ಟುಬಿಡಿ. ಈ ಜ್ಞಾನವೇ ಶಾಂತಿಯದ್ದಾಗಿದೆ, ತಂದೆಯನ್ನು ನೆನಪು ಮಾಡುವುದರಿಂದ ನೀವು ಸತೋಪ್ರಧಾನರಾಗಿಬಿಡುತ್ತೀರಿ. ಕೇವಲ ಇದೇ ಮಂತ್ರವನ್ನು ತಿಳಿಸುತ್ತಾ ಇರಿ. ಎಲ್ಲಿಯವರೆಗೆ ನಿಶ್ಚಯಬುದ್ಧಿಯವರಾಗುವುದಿಲ್ಲವೋ ಅಲ್ಲಿಯವರೆಗೆ ಯಾರಿಂದಲೂ ಹಣ ತೆಗೆದುಕೊಳ್ಳಬಾರದು. ತಿಳಿಸಿ ನಾವು ಪವಿತ್ರರಾಗಿರುತ್ತೇವೆಂದು ನೀವು ಪ್ರತಿಜ್ಞೆ ಮಾಡಿ ಆಗ ನಾವು ನಿಮ್ಮ ಕೈಯಿಂದ ಮಾಡಿದ ಊಟ ತಿನ್ನುತ್ತೇವೆ, ಏನನ್ನಾದರೂ ತೆಗೆದುಕೊಳ್ಳುತ್ತೇವೆ. ಭಾರತದಲ್ಲಿ ಬಹಳಷ್ಟು ಮಂದಿರಗಳಿವೆ. ತಂದೆಯನ್ನು ನೆನಪು ಮಾಡಿ ಎಂದು ವಿದೇಶಿಗಳು ಮೊದಲಾದವರು ಯಾರೇ ಬರಲಿ ಅವರಿಗೆ ಈ ಸಂದೇಶವನ್ನು ನೀವು ಕೊಡಬಹುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ವಿಕಾರಗಳ ವಾಸನೆಯಿರುವಂತಹ ತಮಾಷೆಯನ್ನೆಂದೂ ಮಾಡಬಾರದು. ತಮ್ಮನ್ನು ಬಹಳ ಎಚ್ಚರಿಕೆಯಿಂದ ಇಟ್ಟುಕೊಳ್ಳಬೇಕಾಗಿದೆ, ಮುಖದಿಂದ ಎಂದೂ ಕಟುವಚನಗಳು ಬರಬಾರದು.

2. ಆತ್ಮಾಭಿಮಾನಿಗಳಾಗುವ ಬಹಳ-ಬಹಳ ಅಭ್ಯಾಸ ಮಾಡಬೇಕಾಗಿದೆ. ಎಲ್ಲರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಬೇಕಾಗಿದೆ. ಕೆಟ್ಟದೃಷ್ಟಿಯನ್ನೆಂದೂ ಇಟ್ಟುಕೊಳ್ಳಬಾರದು, ಕುದೃಷ್ಟಿಯಾದರೆ ತಮಗೆ ತಾವೇ ಪೆಟ್ಟನ್ನು ಕೊಟ್ಟುಕೊಳ್ಳಬೇಕಾಗಿದೆ.

ವರದಾನ:
ನಿರಂತರ ನೆನಪು ಮತ್ತು ಸೇವೆಯ ಬ್ಯಾಲೆನ್ಸ್ ನಿಂದ ಬಾಲ್ಯತನದ ತುಂಟಾಟವನ್ನು ಸಮಾಪ್ತಿ ಮಾಡುವಂತಹ ವಾನಪ್ರಸ್ಥಿ ಭವ

ಸಣ್ಣ-ಪುಟ್ಟ ಮಾತುಗಳಲ್ಲಿ ಸಂಗಮಯುಗದ ಅಮೂಲ್ಯ ಸಮಯ ಕಳೆದುಕೊಳ್ಳುವುದು ಬಾಲ್ಯತನದ ತುಂಟಾಟವಾಗಿದೆ. ಈಗ ಈ ತುಂಟಾಟ ಶೋಭಿಸುವುದಿಲ್ಲ, ವಾನಪ್ರಸ್ಥದಲ್ಲಿ ಕೇವಲ ಒಂದೇಕಾರ್ಯ ಉಳಿಯುತ್ತದೆ- ತಂದೆಯ ನೆನಪು ಮತ್ತು ಸೇವೆ. ಇದರ ವಿನಃ ಬೇರೆಯಾವುದೂ ನೆನಪಿಗೆ ಬರಬಾರದು, ಎದ್ದೀದ್ದರೂ ನೆನಪು ಮತ್ತು ಸೇವೆ, ಮಲಗಿದ್ದರೂ ನೆನಪು ಮತ್ತು ಸೇವೆ- ನಿರಂತರ ಈ ಬ್ಯಾಲೆನ್ಸ್ ಕಾಯ್ದುಕೊಳ್ಳಿ. ತ್ರಿಕಾಲದರ್ಶಿಯಾಗಿರುತ್ತಾ ಬಾಲ್ಯತನದ ಮಾತು ಅಥವಾ ಬಾಲ್ಯತನದ ಸಂಸ್ಕಾರಗಳ ಸಮಾಪ್ತಿ ಸಮಾರೋಹ ಆಚರಿಸಿ, ಆಗ ಹೇಳಲಾಗುತ್ತದೆ ವಾನಪ್ರಸ್ಥಿ.

ಸ್ಲೋಗನ್:
ಸರ್ವ ಪ್ರಾಪ್ತಿಗಳಿಂದ ಸಂಪನ್ನ ಆತ್ಮದ ನಿಶಾನಿಯಾಗಿದೆ ಸಂತುಷ್ಟತೆ, ಸಂತುಷ್ಟರಾಗಿರಿ ಮತ್ತು ಸಂತುಷ್ಟರನ್ನಾಗಿ ಮಾಡಿ.

ಅವ್ಯಕ್ತ ಸೂಚನೆ: ಏಕಾಂತಪ್ರಿಯರಾಗಿ ಏಕತೆ ಮತ್ತು ಏಕಾಗ್ರತೆಯನ್ನು ತಮ್ಮದಾಗಿಸಿಕೊಳ್ಳಿ

ಏಕಾಂತ ಒಂದು ಸ್ಥೂಲವಾಗಿರುತ್ತದೆ, ಇನ್ನೊಂದು ಸೂಕ್ಷ್ಮ ವೂ ಆಗಿರುತ್ತದೆ. ಏಕಾಂತದ ಆನಂದದ ಅನುಭವಿಯಾಗಿಬಿಡಿ ಆಗ ಬಾಹ್ಯಮುಖತೆ ಇಷ್ಟವಾಗುವುದಿಲ್ಲ. ಅವ್ಯಕ್ತ ಸ್ಥಿತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಏಕಾಂತದಲ್ಲಿ ರುಚಿ ಇಟ್ಟುಕೊಳ್ಳಬೇಕು. ಏಕತೆಯ ಜೊತೆ ಏಕಾಂತಪ್ರಿಯರಾಗಬೇಕಾಗಿದೆ.