15.03.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ ಆದ್ದರಿಂದ ದೇಹ ಸಹಿತವಾಗಿ ದೇಹದ ಎಲ್ಲಾ ಸಂಬಂಧಗಳನ್ನು ಮರೆತು ಒಬ್ಬ ತಂದೆಯನ್ನು ನೆನಪು ಮಾಡಿ, ಇದೇ ಸತ್ಯವಾದ ಗೀತಾಸಾರವಾಗಿದೆ”

ಪ್ರಶ್ನೆ:
ನೀವು ಮಕ್ಕಳ ಸಹಜ ಪುರುಷಾರ್ಥವೇನಾಗಿದೆ?

ಉತ್ತರ:
ತಂದೆಯು ತಿಳಿಸುತ್ತಾರೆ - ನೀವು ಸಂಪೂರ್ಣ ಶಾಂತವಾಗಿರಿ, ಶಾಂತವಾಗಿರುವುದರಿಂದಲೇ ತಂದೆಯ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ತಂದೆಯನ್ನು ನೆನಪು ಮಾಡಬೇಕು, ಸೃಷ್ಟಿಚಕ್ರವನ್ನು ತಿರುಗಿಸಬೇಕಾಗಿದೆ, ತಂದೆಯ ನೆನಪಿನಿಂದಲೇ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ, ಆಯಸ್ಸು ವೃದ್ಧಿಯಾಗುತ್ತದೆ ಮತ್ತು ಚಕ್ರವನ್ನು ಅರಿತುಕೊಳ್ಳುವುದರಿಂದ ಚಕ್ರವರ್ತಿ ರಾಜರಾಗುತ್ತೀರಿ - ಇದೇ ಸಹಜ ಪುರುಷಾರ್ಥವಾಗಿದೆ.

ಓಂ ಶಾಂತಿ.
ಮಧುರಾತಿ ಮಧುರ ಆತ್ಮೀಯ ಮಕ್ಕಳ ಪ್ರತಿ ಆತ್ಮೀಯ ತಂದೆಯು ಪುನಃ ತಿಳಿಸುತಿದ್ದಾರೆ - ಪ್ರತಿನಿತ್ಯವೂ ತಿಳುವಳಿಕೆಯನ್ನು ಕೊಡುತ್ತಾರೆ. ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ - ಅವಶ್ಯವಾಗಿ ನಾವು ಕಲ್ಪದ ಹಿಂದಿನ ತರಹ ಗೀತಾಜ್ಞಾನವನ್ನು ಓದುತ್ತಿದ್ದೇವೆ ಆದರೆ ಕೃಷ್ಣನು ಓದಿಸುವುದಿಲ್ಲ, ಪರಮಪಿತ ಪರಮಾತ್ಮನೇ ನಮಗೆ ಓದಿಸುತ್ತಾರೆ, ಅವರೇ ನಮಗೆ ಪುನಃ ರಾಜಯೋಗವನ್ನು ಕಲಿಸುತ್ತಿದ್ದಾರೆ. ನೀವೀಗ ಭಗವಂತನಿಂದ ನೇರವಾಗಿ ಕೇಳುತ್ತಿದ್ದೀರಿ, ಭಾರತವಾಸಿಗಳ ಇಡೀ ಆಧಾರವು ಗೀತೆಯ ಮೇಲಿದೆ. ಆ ಗೀತೆಯಲ್ಲಿಯೂ ರುದ್ರಜ್ಞಾನಯಜ್ಞವನ್ನು ರಚಿಸಿದರೆಂದು ಬರೆಯಲಾಗಿದೆ ಅಂದಾಗ ಇದು ಯಜ್ಞವೂ ಆಗಿದೆ, ಪಾಠಶಾಲೆಯೂ ಆಗಿದೆ. ತಂದೆಯು ಬಂದು ಸತ್ಯಗೀತೆಯನ್ನು ತಿಳಿಸಿದಾಗ ನಾವು ಸದ್ಗತಿಯನ್ನು ಹೊಂದುತ್ತೇವೆ. ಮನುಷ್ಯರು ಇದನ್ನು ತಿಳಿದುಕೊಳ್ಳುವುದೇ ಇಲ್ಲ. ಯಾವ ತಂದೆಯು ಸರ್ವರ ಸದ್ಗತಿದಾತನಾಗಿದ್ದಾರೆ, ಅವರನ್ನೇ ನೆನಪು ಮಾಡಬೇಕು. ಗೀತೆಯನ್ನು ಭಲೆ ಓದುತ್ತಾ ಬಂದಿದ್ದಾರೆ ಆದರೆ ರಚಯಿತ ಮತ್ತು ರಚನೆಯನ್ನು ಅರಿತುಕೊಳ್ಳದ ಕಾರಣ ನಮಗೆ ಗೊತ್ತಿಲ್ಲ, ಗೊತ್ತಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ.ಸತ್ಯ ಗೀತೆಯನ್ನು ಸತ್ಯತಂದೆಯೇ ಬಂದು ತಿಳಿಸುತ್ತಾರೆ. ಇವು ವಿಚಾರಸಾಗರ ಮಂಥನ ಮಾಡುವ ಮಾತುಗಳಾಗಿವೆ. ಯಾರು ಸೇವೆಯಲ್ಲಿರುವರೋ ಅವರಿಗೆ ಬಹಳ ಚೆನ್ನಾಗಿ ಗಮನವಿರುವುದು. ತಂದೆಯು ತಿಳಿಸಿದ್ದಾರೆ - ಪ್ರತಿಯೊಂದು ಚಿತ್ರದಲ್ಲಿ ಜ್ಞಾನಸಾಗರ, ಪತಿತ-ಪಾವನ, ಗೀತಾಜ್ಞಾನದಾತ, ಪರಮಪ್ರಿಯ ಪರಮಪಿತ, ಪರಮಶಿಕ್ಷಕ, ಪರಮ ಸದ್ಗುರು ಶಿವಭಗವಾನುವಾಚ ಎಂದು ಅವಶ್ಯವಾಗಿ ಬರೆದಿರಬೇಕು. ಈ ಶಬ್ಧವನ್ನು ಅವಶ್ಯವಾಗಿ ಬರೆಯಿರಿ, ಅದರಿಂದ ತ್ರಿಮೂರ್ತಿ ಶಿವಪರಮಾತ್ಮನೇ ಗೀತೆಯ ಭಗವಂತನಾಗಿದ್ದಾರೆ, ಶ್ರೀಕೃಷ್ಣನಲ್ಲ ಎಂಬುದು ಮನುಷ್ಯರಿಗೆ ಅರ್ಥವಾಗಲಿ. ಅಭಿಪ್ರಾಯವನ್ನೂ ಸಹ ಈ ವಿಷಯದ ಮೇಲೆ ಬರೆಸುತ್ತಾರೆ. ನಮ್ಮದು ಮುಖ್ಯವಾದ್ದದು ಗೀತೆಯಾಗಿದೆ. ತಂದೆಯು ದಿನ-ಪ್ರತಿದಿನ ಹೊಸ-ಹೊಸ ವಿಚಾರಗಳನ್ನು ತಿಳಿಸುತ್ತಿರುತ್ತಾರೆ. ಮೊದಲೇಕೆ ಇದನ್ನು ತಂದೆಯು ತಿಳಿಸಲಿಲ್ಲ ಎಂಬ ವಿಚಾರವು ಬರಬಾರದು, ಅದು ಡ್ರಾಮದಲ್ಲಿರಲಿಲ್ಲ. ತಂದೆಯ ಮುರುಳಿಯಿಂದ ಹೊಸ-ಹೊಸ ವಿಚಾರಗಳನ್ನು ತೆಗೆಯಬೇಕು. ರೈಜ್ ಮತ್ತು ಫಾಲ್ ಎಂದು ಬರೆಯುತ್ತಾರೆ, ಅದನ್ನು ಹಿಂದಿಭಾಷೆಯಲ್ಲಿ ಭಾರತದ ಉತ್ಥಾನ ಮತ್ತು ಪಥನ ಎಂದು ಹೇಳುತ್ತಾರೆ. ರೈಜ್ ಎಂದರೆ ದೈವೀಪ್ರಪಂಚದ ಸ್ಥಾಪನೆ, 100% ಸುಖ, ಶಾಂತಿ, ಪವಿತ್ರತೆಯು ಸ್ಥಾಪನೆಯಾಗುತ್ತದೆ ಮತ್ತೆ ಅರ್ಧಕಲ್ಪದ ನಂತರ ಫಾಲ್ (ಅವನತಿ) ಆಗುತ್ತದೆ ಅಂದರೆ ಆಸುರೀ ಪ್ರಪಂಚದ ಅವನತಿಯಾಗುತ್ತದೆ. ದೈವೀ ಪ್ರಪಂಚದ ರೈಜ್ ಮತ್ತು ಕನ್ಸ್ಟ್ರಕ್ಷನ್ (ಉನ್ನತಿ ಮತ್ತು ಸ್ಥಾಪನೆ) ಆಗುತ್ತದೆ. ಅವನತಿಯ ಜೊತೆಗೆ ವಿನಾಶವೆಂಬುದನ್ನೂ ಬರೆಯಬೇಕಾಗಿದೆ.

ನಿಮ್ಮದೆಲ್ಲವೂ ಗೀತೆಯ ಮೇಲೆ ಆಧಾರಿತವಾಗಿದೆ, ತಂದೆಯು ಬಂದು ಸತ್ಯಗೀತೆಯನ್ನು ತಿಳಿಸುತ್ತಾರೆ. ತಂದೆಯು ಪ್ರತಿನಿತ್ಯವೂ ಇದರ ಬಗ್ಗೆಯೇ ತಿಳಿಸಿಕೊಡುತ್ತಾರೆ. ಮಕ್ಕಳಂತೂ ಆತ್ಮಗಳೇ ಆಗಿದ್ದೀರಿ, ಈ ದೇಹದ ಎಲ್ಲಾ ವಿಸ್ತಾರವನ್ನು ಮರೆತು ತಮ್ಮನ್ನು ಆತ್ಮವೆಂದು ತಿಳಿಯಿರಿ, ಆತ್ಮವು ಶರೀರದಿಂದ ಬೇರೆಯಾದಾಗ ಎಲ್ಲಾ ಸಂಬಂಧಗಳು ಮರೆತುಹೋಗುತ್ತದೆ ಆದ್ದರಿಂದ ತಂದೆಯೂ ಸಹ ತಿಳಿಸುತ್ತಾರೆ, ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು ತಮ್ಮನ್ನು ಆತ್ಮವೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿ. ಈಗ ಮನೆಗೆ ಹೋಗಬೇಕಲ್ಲವೆ! ಹಿಂತಿರುಗಿ ಹೋಗುವುದಕ್ಕಾಗಿಯೇ ಅರ್ಧಕಲ್ಪ ಇಷ್ಟೊಂದು ಭಕ್ತಿ ಮೊದಲಾದುವನ್ನು ಮಾಡಿದ್ದೀರಿ, ಸತ್ಯಯುಗದಲ್ಲಂತೂ ಯಾರೂ ಹಿಂತಿರುಗಿ ಹೋಗುವ ಪುರುಷಾರ್ಥ ಮಾಡುವುದಿಲ್ಲ. ಅಲ್ಲಿ ಸುಖವೇ ಸುಖವಿರುತ್ತದೆ. ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುವರು, ಸುಖದಲ್ಲಿ ಯಾರೂ ಮಾಡುವುದಿಲ್ಲ ಎಂಬ ಗಾಯನವಿದೆ ಆದರೆ ಯಾವಾಗ ಸುಖ ಮತ್ತು ದುಃಖವು ಯಾವಾಗ ಇರುವುದೆಂದು ಯಾರೂ ತಿಳಿದುಕೊಂಡಿಲ್ಲ. ನಮ್ಮ ಮಾತುಗಳೆಲ್ಲವೂ ಗುಪ್ತವಾಗಿವೆ. ನಾವೂ ಸಹ ಆತ್ಮೀಯ ಸೈನಿಕರಾಗಿದ್ದೇವಲ್ಲವೆ. ಶಿವತಂದೆಯ ಶಕ್ತಿಸೇನೆಯಾಗಿದೆ, ಇದರ ಅರ್ಥವನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ದೇವಿಯರು ಮೊದಲಾದವರ ಎಷ್ಟೊಂದು ಪೂಜೆಯಾಗುತ್ತದೆ ಆದರೆ ಯಾರೂ ಸಹ ಅವರು ಚರಿತ್ರೆಯನ್ನು ಅರಿತುಕೊಂಡಿಲ್ಲ. ಯಾರ ಪೂಜೆ ಮಾಡುವರೋ ಅವರ ಚರಿತ್ರೆಯನ್ನು ಅರಿತುಕೊಳ್ಳಬೇಕಲ್ಲವೆ. ಸರ್ವಶ್ರೇಷ್ಠವಾದ್ದದು ಶಿವನ ಪೂಜೆಯಾಗಿದೆ ಮತ್ತೆ ಬ್ರಹ್ಮಾ, ವಿಷ್ಣು, ಶಂಕರನ ಪೂಜೆ ನಂತರ ಲಕ್ಷ್ಮೀ-ನಾರಾಯಣ, ರಾಧೆ-ಕೃಷ್ಣರ ಮಂದಿರಗಳಿವೆ ಮತ್ತ್ಯಾರೂ ಇಲ್ಲ. ಒಬ್ಬ ಶಿವತಂದೆಗೆ ಎಷ್ಟೊಂದು ಭಿನ್ನ-ಭಿನ್ನ ಹೆಸರುಗಳನ್ನಿಟ್ಟು ಮಂದಿರಗಳನ್ನು ನಿರ್ಮಿಸಿದ್ದಾರೆ, ಈಗ ನಿಮ್ಮ ಬುದ್ಧಿಯಲ್ಲಿ ಇಡೀ ಚಕ್ರವಿದೆ. ನಾಟಕದಲ್ಲಿ ಮುಖ್ಯ ಪಾತ್ರಧಾರಿಗಳು ಇರುತ್ತಾರಲ್ಲವೆ. ಅದು ಅತಿಚಿಕ್ಕದಾದ ನಾಟಕವಾಗಿದೆ, ಇದು ಬೇಹದ್ದಿನ ನಾಟಕವಾಗಿದೆ. ಇದರಲ್ಲಿ ಮುಖ್ಯವಾದವರು ಯಾರ್ಯಾರು ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಮನುಷ್ಯರಂತೂ ಹೇ ರಾಮನೇ, ಈ ಸಂಸಾರವನ್ನು ರಚಿಸಿಯೇ ಇಲ್ಲ, ಇದು ಕಲ್ಪನೆಯ ಸಂಸಾರವೆಂದು ಹೇಳುತ್ತಾರೆ, ಇದರ ಬಗ್ಗೆ ಒಂದು ಶಾಸ್ತ್ರವನ್ನು ಬರೆದಿದ್ದಾರೆ ಆದರೆ ಅರ್ಥವನ್ನೇನೂ ತಿಳಿದುಕೊಂಡಿಲ್ಲ.

ತಂದೆಯು ನೀವು ಮಕ್ಕಳಿಗೆ ಬಹಳ ಸಹಜವಾದ ಪುರುಷಾರ್ಥವನ್ನು ಕಲಿಸಿದ್ದಾರೆ, ಎಲ್ಲದಕ್ಕಿಂತ ಸಹಜ ಪುರುಷಾರ್ಥವೇನೆಂದರೆ ನೀವು ಸಂಪೂರ್ಣ ಶಾಂತವಾಗಿರಿ, ಶಾಂತವಾಗಿರುವುದರಿಂದಲೇ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುವಿರಿ. ತಂದೆಯನ್ನು ನೆನಪು ಮಾಡಬೇಕು ಜೊತೆಗೆ ಸೃಷ್ಟಿಚಕ್ರವನ್ನೂ ನೆನಪು ಮಾಡಬೇಕಾಗಿದೆ. ತಂದೆಯ ನೆನಪಿನಿಂದಲೇ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ, ನೀವು ನಿರೋಗಿಯಾಗುತ್ತೀರಿ, ಆಯಸ್ಸೂ ಸಹ ಹೆಚ್ಚಾಗುವುದು. ಚಕ್ರವನ್ನು ಅರಿತುಕೊಳ್ಳುವುದರಿಂದ ಚಕ್ರವರ್ತಿ ರಾಜರಾಗುತ್ತೀರಿ. ಈಗಂತೂ ನರಕದ ಮಾಲೀಕರಾಗಿದ್ದೀರಿ ಮತ್ತೆ ನೀವೇ ಸ್ವರ್ಗದ ಮಾಲೀಕರಾಗುವಿರಿ. ಸ್ವರ್ಗದ ಮಾಲೀಕರಂತೂ ಎಲ್ಲರೂ ಆಗುತ್ತಾರೆ ಆದರೆ ಅದರಲ್ಲಿ ಪದವಿಗಳಿವೆ. ಯಾರೆಷ್ಟು ಅನ್ಯರನ್ನು ತಮ್ಮ ಸಮಾನ ಮಾಡಿಕೊಳ್ಳುವರೋ ಅಷ್ಟು ಶ್ರೇಷ್ಠಪದವಿಯು ಸಿಗುವುದು. ಅವಿನಾಶಿ ಜ್ಞಾನರತ್ನಗಳ ದಾನವೇ ಮಾಡದಿದ್ದರೆ ಪ್ರತಿಫಲವೇನು ಸಿಗುವುದು! ಯಾರಾದರೂ ಸಾಹುಕಾರರಾಗಿದ್ದರೆ ಇವರು ಕಳೆದಜನ್ಮದಲ್ಲಿ ಬಹಳ ದಾನ-ಪುಣ್ಯವನ್ನು ಮಾಡಿದ್ದಾರೆಂದು ಹೇಳಲಾಗುತ್ತದೆ. ಈಗ ಮಕ್ಕಳು ತಿಳಿದುಕೊಂಡಿದ್ದೀರಿ - ರಾವಣರಾಜ್ಯದಲ್ಲಿ ಎಲ್ಲರೂ ಪಾಪವನ್ನೇ ಮಾಡುತ್ತಿರುತ್ತಾರೆ, ಎಲ್ಲರಿಗಿಂತ ಪುಣ್ಯಾತ್ಮರು ಶ್ರೀಲಕ್ಷ್ಮೀ-ನಾರಾಯಣರಾಗಿದ್ದಾರೆ. ಹಾ! ಯಾರು ಎಲ್ಲರನ್ನೂ ಶ್ರೇಷ್ಠರನ್ನಾಗಿ ಮಾಡುತ್ತಾರೆಯೋ ಆ ಬ್ರಾಹ್ಮಣರನ್ನು ಶ್ರೇಷ್ಠಸ್ಥಾನದಲ್ಲಿ ಇಡಲಾಗುತ್ತದೆ. ಭವಿಷ್ಯವಂತೂ ಪ್ರಾಲಬ್ಧವಾಗಿದೆ, ಈ ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣ ಕುಲಭೂಷಣರು ಶ್ರೀಮತದನುಸಾರ ಶ್ರೇಷ್ಠಕರ್ತವ್ಯವನ್ನು ಮಾಡುತ್ತಾರೆ, ಬ್ರಹ್ಮನ ಹೆಸರು ಮುಖ್ಯವಾಗಿದೆ. ತ್ರಿಮೂರ್ತಿ ಬ್ರಹ್ಮನೆಂದು ಹೇಳುತ್ತಾರಲ್ಲವೆ. ಈಗಂತೂ ನೀವು ಪ್ರತಿಯೊಂದು ಮಾತಿನಲ್ಲಿ ತ್ರಿಮೂರ್ತಿ ಶಿವನೆಂದು ಹೇಳಬೇಕಾಗಿದೆ. ಬ್ರಹ್ಮನ ಮೂಲಕ ಸ್ಥಾಪನೆ, ಶಂಕರನ ಮೂಲಕ ವಿನಾಶವೆಂದು ಗಾಯನವಿದೆಯಲ್ಲವೆ. ವಿರಾಟರೂಪವನ್ನೂ ತೋರಿಸುತ್ತಾರೆ ಆದರೆ ಅದರಲ್ಲಿ ಶಿವನನ್ನಾಗಲಿ, ಬ್ರಾಹ್ಮಣರನ್ನಾಗಲಿ ತೋರಿಸಿಲ್ಲ. ಇದನ್ನೂ ಸಹ ನೀವು ಮಕ್ಕಳು ತಿಳಿಸಬೇಕಾಗಿದೆ. ನಿಮ್ಮಲ್ಲಿಯೂ ಸಹ ವಿರಳ ಕೆಲವರ ಬುದ್ಧಿಯಲ್ಲಿಯೇ ಯಥಾರ್ಥರೀತಿಯಿಂದ ಕುಳಿತುಕೊಳ್ಳುತ್ತದೆ. ಬಹಳಷ್ಟು ಅಂಶಗಳಿವೆ, ಇವುಗಳನ್ನು ವಿಷಯಗಳೆಂದೂ ಹೇಳುತ್ತಾರೆ. ಎಷ್ಟೊಂದು ವಿಷಯಗಳು ಸಿಗುತ್ತವೆ. ಸತ್ಯಗೀತೆಯನ್ನು ಭಗವಂತನ ಮೂಲಕ ಕೇಳುವುದರಿಂದ ಮನುಷ್ಯರಿಂದ ದೇವತೆ, ವಿಶ್ವದ ಮಾಲೀಕರಾಗಿಬಿಡುತ್ತೀರಿ. ಈ ವಿಷಯವು ಎಷ್ಟು ಚೆನ್ನಾಗಿದೆ ಆದರೆ ತಿಳಿಸಿಕೊಡುವಂತಹ ಬುದ್ಧಿವಂತಿಕೆಯೂ ಬೇಕಲ್ಲವೆ. ಈ ಮಾತನ್ನು ಸ್ಪಷ್ಟವಾಗಿ ಬರೆಯಬೇಕು ಅದರಿಂದ ಮನುಷ್ಯರು ಅರಿತುಕೊಳ್ಳಲಿ ಮತ್ತು ಕೇಳಲಿ, ಎಷ್ಟು ಸಹಜವಾಗಿದೆ! ಒಂದೊಂದು ಜ್ಞಾನಬಿಂದು ಕೋಟ್ಯಾಂತರ ರೂಪಾಯಿಗಳ ಮೌಲ್ಯವುಳ್ಳದ್ದಾಗಿದೆ, ಇದರಿಂದ ನೀವು ಹೇಗಿದ್ದವರು ಏನಾಗುವಿರಿ! ನಿಮ್ಮ ಹೆಜ್ಜೆ-ಹೆಜ್ಜೆಯಲ್ಲಿಯೂ ಪದುಮಗಳಿವೆ ಆದ್ದರಿಂದ ದೇವತೆಗಳಿಗೂ ಸಹ ಪದುಮದ ಹೂವನ್ನು ತೋರಿಸುತ್ತಾರೆ. ನೀವು ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣರ ಹೆಸರನ್ನೇ ಮರೆಮಾಡಿಬಿಟ್ಟಿದ್ದಾರೆ. ಆ ಬ್ರಾಹ್ಮಣರು ಬಗಲಿನಲ್ಲಿ ಗೀತೆಯನ್ನಿಟ್ಟುಕೊಳ್ಳುತ್ತಾರೆ, ನೀವು ಸತ್ಯಬ್ರಾಹ್ಮಣರಾಗಿದ್ದೀರಿ, ನಿಮ್ಮ ಬುದ್ಧಿಯಲ್ಲಿ ಸತ್ಯವಾದ ಗೀತೆಯಿದೆ. ಅವರ ಬಗಲಿನಲ್ಲಿ ಕುರಂ ಅಂದರೆ ಗ್ರಂಥವಿದೆ, ನಿಮ್ಮ ಬಗಲಿನಲ್ಲಿ ಸತ್ಯಂ ಇದೆ. ನಾವು ಶ್ರೀಮತದನುಸಾರ ಸ್ವರ್ಗಸ್ಥಾಪನೆ ಮಾಡುತ್ತಿದ್ದೇವೆ. ತಂದೆಯು ರಾಜಯೋಗವನ್ನು ಕಲಿಸುತ್ತಿದ್ದಾರೆಂದು ನಿಮಗೆ ನಶೆಯೇರಬೇಕು. ನಿಮ್ಮ ಬಳಿ ಯಾವುದೇ ಪುಸ್ತಕವಿಲ್ಲ, ಈ ಸರಳವಾದ ಬ್ಯಾಡ್ಜ್ ನಿಮ್ಮ ಸತ್ಯವಾದ ಗೀತೆಯಾಗಿದೆ, ಇದರಲ್ಲಿ ತ್ರಿಮೂರ್ತಿಯ ಚಿತ್ರವೂ ಇದೆ ಅಂದಾಗ ಪೂರ್ಣ ಗೀತೆಯೇ ಇದರಲ್ಲಿ ಬಂದುಬಿಡುತ್ತದೆ. ಸೆಕೆಂಡಿನಲ್ಲಿ ಇಡೀ ಗೀತೆಯನ್ನು ತಿಳಿಸಿಕೊಡಲಾಗುತ್ತದೆ. ಈ ಬ್ಯಾಡ್ಜ್ನ ಮೂಲಕ ಸೆಕೆಂಡಿನಲ್ಲಿ ಯಾರಿಗೆ ಬೇಕಾದರೂ ತಿಳಿಸಬಲ್ಲಿರಿ - ಇವರು ನಿಮ್ಮ ತಂದೆಯಾಗಿದ್ದಾರೆ, ಇವರನ್ನು ನೆನಪು ಮಾಡುವುದರಿಂದ ನಿಮ್ಮ ವಿಕರ್ಮಗಳು ವಿನಾಶವಾಗುತ್ತದೆ. ರೈಲಿನಲ್ಲಿ ಪ್ರಯಾಣ ಮಾಡುವಾಗ, ನಡೆಯುತ್ತಾ-ತಿರುಗಾಡುತ್ತಾ ಯಾರೇ ಸಿಕ್ಕಿದರೂ ಅವರಿಗೆ ಒಳ್ಳೆಯ ರೀತಿಯಲ್ಲಿ ತಿಳಿಸಿಕೊಡಿ. ಕೃಷ್ಣಪುರಿಯಲ್ಲಿ ಹೋಗಲು ಎಲ್ಲರೂ ಬಯಸುತ್ತಾರಲ್ಲವೆ, ಅದು ಈ ವಿದ್ಯೆಯಿಂದಲೇ ಆಗಲು ಸಾಧ್ಯ. ವಿದ್ಯೆಯಿಂದ ರಾಜಧಾನಿಯು ಸ್ಥಾಪನೆಯಾಗುತ್ತದೆ. ಅನ್ಯ ಧರ್ಮ ಸ್ಥಾಪಕರ್ಯಾರೂ ರಾಜ್ಯಸ್ಥಾಪನೆ ಮಾಡುವುದಿಲ್ಲ. ನಾವು ಭವಿಷ್ಯದ 21 ಜನ್ಮಗಳಿಗಾಗಿ ರಾಜಯೋಗವನ್ನು ಕಲಿಯುತ್ತಿದ್ದೇವೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ, ಇದು ಎಷ್ಟು ಒಳ್ಳೆಯ ವಿದ್ಯೆಯಾಗಿದೆ ಕೇವಲ ನಿತ್ಯವೂ ಒಂದುಗಂಟೆಯ ಸಮಯ ವಿದ್ಯೆಯನ್ನು ಓದಿದರೆ ಸಾಕು. ಆ ವಿದ್ಯೆಯನ್ನು ನಾಲ್ಕೈದು ಗಂಟೆಗಳ ಕಾಲ ಅಭ್ಯಾಸ ಮಾಡಲಾಗುತ್ತದೆ, ಇಲ್ಲಿ ಒಂದುಗಂಟೆ ಸಮಯವೇ ಸಾಕು. ಅದರಲ್ಲಿಯೂ ಮುಂಜಾನೆಯ ಸಮಯದಲ್ಲಿ ಎಲ್ಲರಿಗೂ ಬಿಡುವಿರುತ್ತದೆ, ಉಳಿದಂತೆ ಯಾರೂ ಬಂಧನದಲ್ಲಿರುವವರಿದ್ದಾರೆಯೋ ಅವರಿಗೆ ಮುಂಜಾನೆಯಲ್ಲಿ ಬರಲು ಆಗುವುದಿಲ್ಲ ಆದ್ದರಿಂದ ಬೇರೆ ಸಮಯವನ್ನಿಡಲಾಗಿದೆ. ನೀವು ಎಲ್ಲಿಯೇ ಹೋದರೂ ಬ್ಯಾಡ್ಜ್ ನಿಮ್ಮ ಬಳಿಯಿರಲಿ ಅದರಿಂದ ಸಂದೇಶವನ್ನು ಕೊಡುತ್ತಾ ಹೋಗಿ. ಪತ್ರಿಕೆಗಳಲ್ಲಂತೂ ಬ್ಯಾಡ್ಜ್ ನ್ನು ಹಾಕಲು ಸಾಧ್ಯವಿಲ್ಲ, ಒಂದುಕಡೆಯಿರುವುದನ್ನು ಹಾಕಬಹುದು ಆದರೆ ಇದರಿಂದಲೂ ಸಹ ನೀವು ತಿಳಿಸದ ಹೊರತು ಯಾರಿಗೂ ಅರ್ಥವಾಗುವುದಿಲ್ಲ. ಇದು ಬಹಳ ಸಹಜವಾಗಿದೆ. ಈ ಕಾರ್ಯವನ್ನು ಯಾರು ಬೇಕಾದರೂ ಮಾಡಬಹುದು. ಭಲೆ ನೆನಪು ಮಾಡದಿದ್ದರೂ ಸಹ ಅನ್ಯರಿಗೆ ನೆನಪು ತರಿಸಲಿ, ಅದೂ ಒಳ್ಳೆಯದೇ ಆಗಿದೆ. ದೇಹೀ-ಅಭಿಮಾನಿಯಾಗಿ ಎಂದು ಅನ್ಯರಿಗೆ ಹೇಳಿ, ತಾನು ದೇಹಾಭಿಮಾನಿಯಾಗಿದ್ದರೆ ಯಾವುದಾದರೊಂದು ವಿಕರ್ಮಗಳಾಗುತ್ತಿರುತ್ತವೆ. ಮೊಟ್ಟಮೊದಲಿಗೆ ಮನಸ್ಸಿನಲ್ಲಿ ಬಿರುಗಾಳಿಗಳು ಬರುತ್ತಿರುತ್ತವೆ ನಂತರ ಕರ್ಮದಲ್ಲಿ ಬರುತ್ತವೆ, ಮನಸ್ಸಿನಲ್ಲಿ ಬಹಳ ಬರುತ್ತವೆ ಆಗ ಬುದ್ಧಿಯಿಂದ ಕೆಲಸ ತೆಗೆದುಕೊಳ್ಳಬೇಕಾಗಿದೆ ಅಂದರೆ ಕೆಟ್ಟಕೆಲಸವನ್ನೆಂದೂ ಮಾಡಬಾರದು. ಒಳ್ಳೆಯ ಕರ್ಮವನ್ನು ಮಾಡಬೇಕು. ಸಂಕಲ್ಪಗಳು ಒಳ್ಳೆಯದೂ ಇರುತ್ತದೆ, ಕೆಟ್ಟದ್ದೂ ಬರುತ್ತವೆ, ಕೆಟ್ಟವಿಚಾರಗಳನ್ನು ತಡೆಯಬೇಕು - ಈ ಬುದ್ಧಿಯನ್ನು ತಂದೆಯು ಕೊಟ್ಟಿದ್ದಾರೆ. ಅನ್ಯರ್ಯಾರೂ ಇದನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ, ಅವರಂತೂ ತಪ್ಪು ಕೆಲಸಗಳನ್ನೇ ಮಾಡುತ್ತಿರುತ್ತಾರೆ. ನೀವೀಗ ಸರಿಯಾದ ಕರ್ಮವನ್ನು ಮಾಡಬೇಕಾಗಿದೆ. ಒಳ್ಳೆಯ ಪುರುಷಾರ್ಥದಿಂದ ಸರಿಯಾದ ಕರ್ಮವಾಗುತ್ತದೆ. ತಂದೆಯಂತೂ ಪ್ರತಿಯೊಂದು ಮಾತನ್ನು ಬಹಳ ಚೆನ್ನಾಗಿ ತಿಳಿಸುತ್ತಿರುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈ ಒಂದೊಂದು ಅವಿನಾಶಿ ಜ್ಞಾನರತ್ನವು ಲಕ್ಷಾಂತರ-ಕೋಟ್ಯಾಂತರ ರೂಪಾಯಿ ಬೆಲೆಬಾಳುವಂತದ್ದಾಗಿದೆ, ಇದನ್ನು ದಾನ ಮಾಡಿ ಹೆಜ್ಜೆ-ಹೆಜ್ಜೆಯಲ್ಲಿ ಪದುಮದಷ್ಟು ಜಮಾ ಮಾಡಿಕೊಳ್ಳಬೇಕಾಗಿದೆ. ತನ್ನ ಸಮಾನ ಮಾಡಿಕೊಂಡು ಶ್ರೇಷ್ಠಪದವಿಯನ್ನು ಪಡೆಯಬೇಕಾಗಿದೆ.

2. ವಿಕಾರದಿಂದ ಪಾರಾಗಲು ದೇಹೀ-ಅಭಿಮಾನಿಗಳಾಗುವ ಪುರುಷಾರ್ಥ ಮಾಡಬೇಕು. ಮನಸ್ಸಿನಲ್ಲಿ ಎಂದೂ ಸಹ ಕೆಟ್ಟಸಂಕಲ್ಪಗಳು ಬರುವುದನ್ನು ತಡೆಗಟ್ಟಬೇಕು, ಶ್ರೇಷ್ಠಸಂಕಲ್ಪವನ್ನು ನಡೆಸಬೇಕು. ಕರ್ಮೇಂದ್ರಿಯಗಳಿಂದ ಎಂದೂ ಉಲ್ಟಾಕರ್ಮವನ್ನು ಮಾಡಬಾರದು.

ವರದಾನ:
ಆತ್ಮೀಯತೆಯ ಪ್ರಭಾವದ ಮೂಲಕ ಫರಿಸ್ಥಾತನದ ಮೇಕಪ್ ಮಾಡುವಂತಹ ಸರ್ವರ ಸ್ನೇಹಿ ಭವ

ಯಾವ ಮಕ್ಕಳು ಸದಾ ಬಾಪ್ದಾದಾರವರ ಸಂಗದಲ್ಲಿರುತ್ತಾರೆ - ಅವರಿಗೆ ಸಂಗದ ರಂಗು ಈ ರೀತಿ ಅನ್ನಿಸುತ್ತದೆ ಯಾವುದರಿಂದ ಪ್ರತಿಯೊಬ್ಬರ ಚೆಹರೆಯಲ್ಲಿ ಆತ್ಮೀಯತೆಯ ಪ್ರಭಾವ ಕಂಡುಬರುತ್ತದೆ. ಯಾರು ಆತ್ಮೀಯತೆಯಲ್ಲಿರುವುದರಿಂದ ಫರಿಸ್ಥಾತನದ ಮೇಕಪ್ ಸ್ವತಃವಾಗಿ ಆಗಿಬಿಡುತ್ತದೆ. ಹೇಗೆ ಮೇಕಪ್ ಮಾಡಿದ ಮೇಲೆ ಯಾರು ಹೇಗೇ ಇರಲಿ ಆದರೆ ಬದಲಾಗಿಬಿಡುತ್ತಾರೆ, ಮೇಕಪ್ ಮಾಡುವುದರಿಂದ ಸುಂದರವಾಗಿ ಕಾಣುತ್ತಾರೆ. ಇವರೂ ಸಹಾ ಫರಿಸ್ಥಾತನದ ಮೇಕಪ್ನಿಂದ ಹೊಳೆಯುತ್ತಾರೆ ಮತ್ತು ಈ ಆತ್ಮೀಯ ಮೇಕಪ್ ಸರ್ವರನ್ನು ಸ್ನೇಹಿಗಳನ್ನಾಗಿ ಮಾಡಿಬಿಡುತ್ತದೆ.

ಸ್ಲೋಗನ್:
ಬ್ರಹ್ಮಚರ್ಯ, ಯೋಗ ಮತ್ತು ದಿವ್ಯಗುಣಗಳ ಧಾರಣೆಯೇ ವಾಸ್ತವಿಕ ಪುರುಷಾರ್ಥವಾಗಿದೆ.

ಮಾತೇಷ್ವರೀಜಿಯವರ ಅಮೂಲ್ಯ ಮಹಾವಾಕ್ಯ

“ಕರ್ಮ-ಬಂಧನವನ್ನು ಮುರಿಯುವಂತಹ ಪುರುಷಾರ್ಥ”

ಬಹಳ ಮನುಷ್ಯರು ಪ್ರಶ್ನೆ ಕೇಳುತ್ತಾರೆ, ಹೇಗೆ ತಮ್ಮ ಕರ್ಮ ಬಂಧನವನ್ನು ಮುರಿದುಕೊಳ್ಳುವುದು ? ಅದಕ್ಕೆ ನಾವು ಏನು ಮಾಡಬೇಕು ? ಎಂದು. ಈಗ ಪ್ರತಿಯೊಬ್ಬರ ಜನ್ಮ ಪತ್ರಿಯನ್ನಂತೂ ತಂದೆ ತಿಳಿದುಕೊಂಡಿದ್ದಾರೆ. ಮಕ್ಕಳ ಕೆಲಸವಾಗಿದೆ ಹೃದಯ ಪೂರ್ವಕವಾಗಿ ಒಮ್ಮೆ ತಂದೆಗೆ ಸಮರ್ಪಿತವಾಗಿಬಿಡುವುದು, ತಮ್ಮ ಜವಾಬ್ದಾರಿಯನ್ನು ಅವರ ಕೈಗೆ ಕೊಟ್ಟುಬಿಡೋಣ. ನಂತರ ಅವರು ಪ್ರತಿಯೊಬ್ಬರನ್ನೂ ನೋಡಿ ಸಲಹೆ ಕೊಡುತ್ತಾರೆ ನೀವು ಏನು ಮಾಡಬೇಕು, ಆಶ್ರಯವನ್ನೂ ಸಹ ಕಾರ್ಯರೂಪದಲ್ಲಿ ಪಡೆಯಬೇಕು, ಉಳಿದಂತೆ ಹೀಗಲ್ಲ ಕೇವಲ ಕೇಳುತ್ತಾ ಹೋಗಿ ಮತ್ತು ತಮ್ಮ ಮತದಂತೆ ನಡೆಯುತ್ತಾ ಹೋಗಿ. ತಂದೆ ಸಾಕಾರದಲ್ಲಿದ್ದಾರೆ ಆದ್ದರಿಂದ ಮಕ್ಕಳು ಸ್ಥೂಲದಲ್ಲಿ ತಂದೆ,ಗುರು, ಟೀಚರ್ನ ಆಶ್ರಯ ತೆಗೆದುಕೊಳ್ಳಬೇಕು, ಹೀಗೂ ಸಹ ಅಲ್ಲ ಆಜ್ಞೆ ಸಿಕ್ಕಿತು ಮತ್ತು ಪಾಲನೆ ಮಾಡಲು ಸಾಧ್ಯವಾಗದೆ ಹೋದರೆ ಇನ್ನೂ ಅಕಲ್ಯಾಣವಾಗಿಬಿಡುವುದು. ಆದ್ದರಿಂದ ಆಜ್ಞೆಯನ್ನು ಪಾಲನೆ ಮಾಡುವುದಕ್ಕೂ ಸಹ ಸಾಹಸವಿರಬೇಕು, ನಡೆಸುವಂತಹವರು ಪ್ರಿಯತಮನಾಗಿದ್ದಾರೆ, ಅವರಿಗೆ ಗೊತ್ತು ಇವರ ಕಲ್ಯಾಣ ಯಾವುದರಲ್ಲಿದೆ, ಆಗ ಅವರು ಇಂತಹ ಸೂಚನೆ ಕೊಡುತ್ತಾರೆ ಯಾವರೀತಿ ತಮ್ಮ ಕರ್ಮ ಬಂಧನವನ್ನು ಮುರಿದುಕೊಳ್ಳುವುದು ಎಂದು. ಬೇರೆ ಯಾರಿಗೂ ನಂತರ ಈ ಚಿಂತನೆ ಬರಬಾರದು ಮುಂದೆ ಮಕ್ಕಳು-ಮರಿಗಳ ಸ್ಥಿತಿ ಏನಾಗುವುದು? ಇದರಲ್ಲಿ ಮನೆ-ಮಠ ಬಿಡಬೇಕಾದಂತಹ ಮಾತಂತೂ ಇಲ್ಲ, ಇದಂತೂ ಸ್ವಲ್ಪ ಮಕ್ಕಳದು ಈ ಡ್ರಾಮದಲ್ಲಿ ಮುರಿಯುವಂತಹ ಪಾತ್ರವಿತ್ತು, ಒಂದುವೇಳೆ ಈ ಪಾತ್ರ ಇಲ್ಲದೇ ಹೋಗಿದ್ದರೆ ನಿಮ್ಮ ಈ ಸೇವೆ ಏನು ಆಗುತ್ತಿದೆ ಅದನ್ನು ಮತ್ತೆ ಯಾರು ಮಾಡಬೇಕು? ಈಗಂತೂ ಬಿಡುವ ಮಾತೇ ಇಲ್ಲ, ಆದರೆ ಪರಮಾತ್ಮನವರಾಗಿಬಿಡಬೇಕು, ಭಯ ಬೀಳಬೇಡಿ, ಧೈರ್ಯವಿಡಿ. ಉಳಿದಂತೆ ಯಾರು ಭಯ ಬೀಳುತ್ತಾರೆ ಅವರು ಖುದ್ಧು ಖುಶಿಯಲ್ಲಿರುವುದಿಲ್ಲ, ನಂತರ ತಂದೆಗೆ ಸಹಾಯಕರೂ ಆಗುವುದಿಲ್ಲ. ಅವರ ಜೊತೆ ಪೂರ್ತಿ ಸಹಾಯಕರಾಗಿರಬೇಕು, ಯಾವಾಗ ಬದುಕಿದ್ದಂತೆ ಸಾಯುವಿರಿ ಆಗಲೇ ಸಹಾಯಕರಾಗಲು ಸಾಧ್ಯ. ಎಲ್ಲಾದರೂ ಸಿಕ್ಕಿಹಾಕಿಕೊಳ್ಳುವಿರೆಂದರೆ ಅವರು ಸಹಾಯಮಾಡಿ ಪಾರುಮಾಡುತ್ತಾರೆ. ಆದ್ದರಿಂದ ಬಾಬಾನ ಜೊತೆ ಮನಸಾ-ವಾಚಾ-ಕರ್ಮಣ ಸಹಾಯಕರಾಗಬೇಕು, ಇದರಲ್ಲಿ ಸ್ವಲ್ಪವೂ ಮೋಹದ ಎಳೆ ಇದ್ದಿದ್ದೇ ಆದರೆ ಅದು ಬೀಳಿಸಿ ಬಿಡುತ್ತೆ. ಆದ್ದರಿಂದ ಸಹಾಸ ವಿಟ್ಟು ಮುಂದುವರೆಯಿರಿ. ಯಾವಾಗ ಸಾಹಸದಲ್ಲಿ ಬಲಹೀನತೆ ಆಗುತ್ತೆ ಆಗ ತಬ್ಬಿಬ್ಬಾಗುವಿರಿ ಆದ್ದರಿಂದ ತಮ್ಮ ಬುದ್ಧಿಯನ್ನು ಪೂರ್ತಿ ಪವಿತ್ರ ಮಾಡಿಕೊಳ್ಳಬೇಕು, ವಿಕಾರದ ಅಂಶ ಸ್ವಲಮಾತ್ರವೂ ಸಹ ಇರಬಾರದು, ಗುರಿ ಏನಾದರೂ ದೂರ ಇದೆಯೇ! ಆದರೆ ಏರುವುದರಲ್ಲಿ ಸ್ವಲ್ಪ ಅಂಕು-ಡೊಂಕಿದೆ, ಆದರೆ ಸಮರ್ಥರ ಆಶ್ರಯ ಪಡೆದಲ್ಲಿ ಭಯವೂ ಇರುವುದಿಲ್ಲ, ಆಯಾಸವೂ ಇರುವುದಿಲ್ಲ ಒಳ್ಳೆಯದು. ಓಂ ಶಾಂತಿ.

ಅವ್ಯಕ್ತ ಸೂಚನೆ - ಸತ್ಯ ಮತ್ತು ಸಭ್ಯತೆ ರೊಪಿ ಕಲ್ಚರ್(ಸಂಸ್ಕೃತಿಯನ್ನು) ತಮ್ಮದಾಗಿಸಿಕೊಳ್ಳಿರಿ

ತಮ್ಮ ಮಾತು ಹಾಗೂ ಸ್ವರೂಪ ಎರಡು ಜೊತೆ ಜೊತೆಯಲಿ- ಮಾತು ಸಷ್ಟವಾಗಿರಲಿ ಹಾಗೂ ಅದರಲ್ಲಿ ಸ್ನೇಹ, ನಮ್ರತೆ ಮಧುರತೆ ಹಾಗೂ ಸತ್ಯತೆಯು ಸಹ ಇರಲಿ, ಆದರೆ ಸ್ವರೂಪದ ನಮ್ರತೆಯು ಇರಲಿ,. ಇದೇ ರೂಪದಲ್ಲಿ ತಂದೆಯನ್ನು ಪ್ರತ್ಯಕ್ಷ ಮಾಡಲು ಸಾಧ್ಯ. ನಿರ್ಭಯರಾಗಿರಿ ಆದರೆ ಮಾತುಗಳು ಮರ್ಯಾದೆಯ ಒಳಗೆ ಇರಲಿ, ಆಗ ತಮ್ಮ ಶಬ್ದಗಳು ಕಟು ಅಲ್ಲ, ಮಧುರ ಎನಿಸುವುದು.