15.03.26 Avyakt Bapdada
Kannada
Murli 24.03.2009 Om Shanti Madhuban
“ಬಾಪ್ದಾದಾರವರ ಮೂಲಕ
ಸಿಕ್ಕಿರುವ ಖಜಾನೆಗಳನ್ನು ಸ್ವಯಂನಲ್ಲಿ ಸಮಾವೇಶ ಮಾಡಿಕೊಂಡು ಕಾರ್ಯದಲ್ಲಿ ತೊಡಗಿಸಿ ಅನುಭವದ
ಅಥಾರಿಟಿ ಆಗಿ”
ಈ ದಿನ ನಾಲ್ಕೂ ಕಡೆಯ
ಸರ್ವ ಖಜಾನೆ ಜಮಾ ಮಾಡಿಕೊಳ್ಳುವ ಸಂಪನ್ನ ಮಕ್ಕಳನ್ನು ನೋಡುತ್ತಿದ್ದೇವೆ. ಜೊತೆ-ಜೊತೆ ಪ್ರತಿಯೊಬ್ಬ
ಮಗು ಎಲ್ಲಿಯ ತನಕ ಸರ್ವ ಖಜಾನೆಗಳು ಜಮಾ ಮಾಡಿಕೊಂಡಿದ್ದಾರೆ ಅದರ ಫಲಿತಾಂಶವನ್ನು ನೋಡುತ್ತಿದ್ದೇವೆ.
ಖಜಾನೆಯಂತೂ ಬಾಪ್ದಾದಾರವರ ಮೂಲಕ ಬಹಳ ಅವಿನಾಶಿ ಪ್ರಾಪ್ತಿ ಆಗಿದೆ. ಎಲ್ಲದಕ್ಕಿಂತ ಮೊದಲು ಅತೀ
ದೊಡ್ಡ ಖಜಾನೆ ಜ್ಞಾನ ಧನವಾಗಿದೆ ಯಾವುದರಿಂದ ಮುಕ್ತಿ ಮತ್ತು ಜೀವನ್ಮುಕ್ತಿಯ ಪ್ರಾಪ್ತಿ ಆಗಿದೆ.
ಹಳೆಯ ದೇಹ ಹಾಗೂ ಹಳೆಯ ಪ್ರಪಂಚದಿಂದ ಮುಕ್ತ ಜೀವನ್ಮುಕ್ತಿಯ ಸ್ಥಿತಿ ಮತ್ತು ಮುಕ್ತಿಧಾಮಕ್ಕೆ
ಹೋಗುವ ಪ್ರಾಪ್ತಿ ಸರ್ವ ಮಕ್ಕಳಿಗೆ ಆಗಿದೆ. ಜೊತೆಯಲ್ಲಿ ಕೇವಲ ಜ್ಞಾನದ ಖಜಾನೆ ಅಲ್ಲ ಯೋಗದ ಖಜಾನೆಯೂ
ಇದೆ ಯಾವುದರಿಂದ ಸರ್ವಶಕ್ತಿಗಳ ಪ್ರಾಪ್ತಿ ಆಗುತ್ತದೆ. ಜೊತೆ-ಜೊತೆಯಲ್ಲಿ ಧಾರಣೆ ಮಾಡುವ ಖಜಾನೆ
ಯಾವುದರಿಂದ ಸರ್ವಗುಣಗಳ ಖಜಾನೆ ಪ್ರಾಪ್ತಿ ಆಗುತ್ತದೆ. ಜೊತೆ-ಜೊತೆಯಲ್ಲಿ ಸೇವೆಯ ಖಜಾನೆ
ಯಾವುದರಿಂದ ಆಶೀರ್ವಾದಗಳ ಖಜಾನೆ, ಖುಷಿಯ ಖಜಾನೆ ಪ್ರಾಪ್ತಿ ಆಗುತ್ತದೆ. ಜೊತೆ-ಜೊತೆಯಲ್ಲಿ
ಎಲ್ಲದಕ್ಕಿಂತ ದೊಡ್ಡ ಖಜಾನೆ ವರ್ತಮಾನ ಸಂಗಮಯುಗದ್ದಾಗಿದೆ, ಸಮಯದ್ದಾಗಿದೆ ಏಕೆಂದರೆ ಇಡೀ
ಕಲ್ಪದಲ್ಲಿ ಈ ಸಂಗಮದ ಸಮಯ ಅಮೂಲ್ಯ ಖಜಾನೆಯಾಗಿದೆ. ಈ ಸಂಗಮ ಸಮಯದ ಒಂದೊಂದು ಸಂಕಲ್ಪ ಅಥವಾ ಒಂದೊಂದು
ಗಳಿಗೆ ಬಹಳ ಅಮೂಲ್ಯವಾದದ್ದಾಗಿದೆ ಏಕೆಂದರೆ ಸಂಗಮದಲ್ಲಿಯೇ ಬಾಪ್ದಾದಾ ಮತ್ತು ಮಕ್ಕಳ ಮಧುರ
ಮಿಲನವಾಗುತ್ತದೆ ಮತ್ತ್ಯಾವುದೇ ಯುಗದಲ್ಲಿ ಪರಮಾತ್ಮ ತಂದೆ ಮತ್ತು ಪರಮಾತ್ಮನ ಮಕ್ಕಳ ಮಿಲನ
ಆಗುವುದಿಲ್ಲ, ಜೊತೆ-ಜೊತೆಯಲ್ಲಿ ಸಂಗಮದ ಸಮಯವೇ ಆಗಿದೆ ಯಾವುದರಲ್ಲಿ ಬಾಪ್ದಾದಾರವರ ಮೂಲಕ ಸರ್ವ
ಖಜಾನೆಗಳು ಪ್ರಾಪ್ತಿ ಆಗುತ್ತದೆ, ಖಜಾನೆ ಜಮಾ ಆಗುವ ಸಂಗಮಯುಗವೇ ಆಗಿದೆ ಮತ್ತ್ಯಾವುದೇ ಯುಗದಲ್ಲಿ
ಜಮಾದ ಖಾತೆ ಜಮಾ ಮಾಡಿಕೊಳ್ಳುವ ಬ್ಯಾಂಕ್ ಇಲ್ಲ. ಕೇವಲ ಒಂದು ಸಂಗಮಯುಗವಾಗಿದೆ ಯಾವುದರಲ್ಲಿ ಎಷ್ಟು
ಜಮಾ ಮಾಡಿಕೊಳ್ಳಲು ಬಯಸುತ್ತೀರೋ ಅಷ್ಟು ಜಮಾ ಮಾಡಿಕೊಳ್ಳಬಹುದು. ಮತ್ತು ಈ ಸಂಗಮ ಸಮಯದ ಯಾವ
ಮಹತ್ವಿಕೆ ಇದೆ ಅದು ಇದೇ ಆಗಿದೆ - ಒಂದು ಜನ್ಮದಲ್ಲಿ ಅನೇಕ ಜನ್ಮಗಳಿಗಾಗಿ ಖಜಾನೆಯನ್ನು ಜಮಾ
ಮಾಡಿಕೊಳ್ಳಬಹುದು. ಆದ್ದರಿಂದ ಇದು ಚಿಕ್ಕ ಯುಗದ್ದು ಬಹಳ ಮಹತ್ವಿಕೆ ಇದೆ ಮತ್ತು ಖಜಾನೆಗಳೂ ಸಹ
ಬಾಪ್ದಾದಾರವರ ಮೂಲಕ ಎಲ್ಲಾ ಮಕ್ಕಳಿಗೆ ಪ್ರಾಪ್ತಿ ಆಗುತ್ತದೆ. ತಂದೆ ಎಲ್ಲರಿಗೆ ಕೊಡುತ್ತಾರೆ ಆದರೆ
ಖಜಾನೆಯನ್ನು ಜಮಾ ಮಾಡಿಕೊಳ್ಳುವುದರಲ್ಲಿ ಪ್ರತಿಯೊಬ್ಬ ಮಗು ತನ್ನ ಪುರುಷಾರ್ಥದನುಸಾರವಾಗಿ
ಮಾಡುತ್ತದೆ. ತಂದೆ ಕೊಡುವವರೂ ಒಬ್ಬರೇ ಆಗಿದ್ದಾರೆ ಮತ್ತು ಒಂದೇ ಪ್ರಕಾರವಾಗಿ ಎಲ್ಲರಿಗೆ
ಕೊಡುತ್ತಾರೆ, ಒಂದೇ ಸಮಯದಲ್ಲಿ ಕೊಡುತ್ತಾರೆ ತಂದೆ ಒಂದೇ ಸಮಾನ ಕೊಟ್ಟಿದ್ದಾರೆ, ಆದರೆ ಧಾರಣೆ
ಮಾಡುವುದರಲ್ಲಿ ಪ್ರತಿಯೊಬ್ಬರದು ತಮ್ಮ-ತಮ್ಮ ಪುರುಷಾರ್ಥದನುಸಾರ ಆಗಿರುವುದನ್ನು ನೋಡಿದ್ದಾರೆ
ಏಕೆಂದರೆ ಖಜಾನೆಯನ್ನು ಧಾರಣೆ ಮಾಡಲು ಒಂದು ತಮ್ಮ ಪುರುಷಾರ್ಥದನುಸಾರ ಪ್ರಾಲಬ್ಧವನ್ನು
ಮಾಡಿಕೊಳ್ಳಬಹುದು, ಇನ್ನೊಂದು ಸದಾ ಸ್ವಯಂ ಸಂತುಷ್ಟರಾಗುವುದು ಮತ್ತು ಎಲ್ಲರನ್ನು ಸಂತುಷ್ಟರನ್ನಾಗಿ
ಮಾಡುವುದು, ಸಂತುಷ್ಟತೆಯ ವಿಶೇಷತೆ ಮೂಲಕ ಖಜಾನೆಯನ್ನು ಜಮಾ ಮಾಡಿಕೊಳ್ಳಬಹುದು ಮತ್ತು ಮೂರನೆಯದು
ಸೇವೆ ಏಕೆಂದರೆ ಸೇವೆಯ ಮೂಲಕ ಸರ್ವ ಆತ್ಮಗಳಿಗೆ ಖುಷಿಯ ಪ್ರಾಪ್ತಿ ಆಗುತ್ತದೆ ಅಂದಾಗ ಖುಷಿಯ
ಖಜಾನೆಯನ್ನು ಪ್ರಾಪ್ತಿ ಮಾಡಿಕೊಳ್ಳಬಹುದು, ತನ್ನ ಪುರುಷಾರ್ಥ ಮತ್ತು ಸರ್ವರನ್ನು ಸಂತುಷ್ಟರನ್ನಾಗಿ
ಮಾಡುವ ಪುರುಷಾರ್ಥ ಮತ್ತೆ ಮೂರನೆಯದು ಸೇವೆ ಮಾಡುವ ಪುರುಷಾರ್ಥ, ಈ ಮೂರು ಪ್ರಕಾರದ ಖಜಾನೆಗಳನ್ನು
ಜಮಾ ಮಾಡಿಕೊಳ್ಳಬಹುದು. ಖಜಾನೆ ಜಮಾ ಮಾಡಿಕೊಳ್ಳುವುದರಲ್ಲಿ, ವಿಶೇಷ ಸಂಬಂಧ-ಸಂಪರ್ಕದಲ್ಲಿ
ಬರುವುದರಲ್ಲಿ ಒಂದು ನಿಮಿತ್ತಭಾವ, ನಿರ್ಮಾನ ಭಾವ, ನಿಸ್ವಾರ್ಥ ಭಾವ, ಪ್ರತಿಯೊಂದು ಆತ್ಮನ ಪ್ರತಿ
ಶುಭ ಭಾವನೆ ಹಾಗೂ ಶುಭ ಕಾಮನೆ ಇಟ್ಟುಕೊಳ್ಳುವ ಅವಶ್ಯಕತೆ ಇದೆ. ಒಂದುವೇಳೆ ಸೇವೆಯಲ್ಲಿ ಅಥವಾ
ಸಂಬಂಧ ಸಂಪರ್ಕದಲ್ಲಿ ಇವೆಲ್ಲಾ ಇದ್ದರೆ ಪುಣ್ಯದ ಖಾತೆ ಮತ್ತು ಆಶಿರ್ವಾದಗಳ ಖಾತೆ ಬಹಳ ಸಹಜವಾಗಿ
ಜಮಾ ಮಾಡಿಕೊಳ್ಳಬಹುದು.
ಬಾಪ್ದಾದಾ ಎಲ್ಲರ
ಲೆಕ್ಕವನ್ನು ನೋಡುತ್ತಿದ್ದಾರೆ ಅಂದಾಗ ಏನು ನೋಡಿದ್ದಾರೆ? ನಾಲ್ಕೂ ಕಡೆಯ ಮಕ್ಕಳು ನಂಬರ್ವಾರಾಗಿ
ಇರುವುದನ್ನು ನೋಡಿದ್ದಾರೆ. ತಂದೆ ಒಬ್ಬರೇ ಆಗಿದ್ದಾರೆ, ಒಂದೇ ಸಮಯದಲ್ಲಿ ಕೊಡುತ್ತಾರೆ ಆದರೆ ಜಮಾ
ಮಾಡಿಕೊಳ್ಳುವುದರಲ್ಲಿ ಮೂರು ಪ್ರಕಾರದ ಮಕ್ಕಳನ್ನು ನೋಡಿದ್ದಾರೆ, ಒಂದು ಪ್ರಕಾರದ ಮಕ್ಕಳು ಜಮಾ
ಆಗಿರುವ ಖಜಾನೆಯನ್ನು ತಿನ್ನುತ್ತಾರೆ, ಜಮಾನೂ ಸಹ ಮಾಡಿಕೊಳ್ಳುತ್ತಾರೆ ಮತ್ತು ತಿಂದು ಮುಗಿಸಿ
ಬಿಡುತ್ತಾರೆ. ಇನ್ನೊಂದು ಪ್ರಕಾರದವರು ತಿಂದು, ಜಮಾ ಮಾಡಿಕೊಳ್ಳುತ್ತಾರೆ ಮತ್ತು ಜಮಾ
ಮಾಡಿಕೊಳ್ಳುವದರಲ್ಲಿ ಗಮನ ಕೊಟ್ಟು ಹೆಚ್ಚಿಸಿಕೊಳ್ಳುತ್ತಾರೆ. ಖಜಾನೆ ಹೆಚ್ಚಿಸಿಕೊಳ್ಳುವ ಸಾಧನೆ
ಏನಾಗಿದೆ? ಏನು ಖಜಾನೆ ಸಿಕ್ಕಿದೆ ಅದನ್ನು ಸಮಯದಲ್ಲಿ ಏನು ಪರಿಸ್ಥಿತಿ ಬರುತ್ತದೋ ಆ ಪರಿಸ್ಥಿತಿ
ಅನುಸಾರವಾಗಿ ಕಾರ್ಯದಲ್ಲಿ ತೊಡಗಿಸುವುದು ಹೆಚ್ಚಿಸಿಕೊಳ್ಳುವ ಸಾಧನೆ ಆಗಿದೆ. ಯಾರು ಕಾರ್ಯದಲ್ಲಿ
ತೊಡಗಿಸುತ್ತಾರೋ ಸ್ಥಿತಿಯ ಮೂಲಕ ಪರಿಸ್ಥಿತಿಯನ್ನು ಬದಲಾವಣೆ ಮಾಡಿಕೊಳ್ಳಬಹುದು ಅದರ ಜಮಾ ಆಗುತ್ತದೆ.
ಯಾರು ಕಾರ್ಯದಲ್ಲಿ ತೊಡಗಿಸುವುದಿಲ್ಲ ಅವರಿಗೆ ಜಮಾ ಆಗುವುದಿಲ್ಲ. ಪ್ರತಿಯೊಬ್ಬರು ತಮ್ಮೊಂದಿಗೆ
ತಾವೇ ಕೇಳಿಕೊಳ್ಳಿ ಸಮಯದಲ್ಲಿ ತನ್ನ ಪ್ರತಿ ಅಥವಾ ಅನ್ಯರ ಪ್ರತಿ ಕಾರ್ಯದಲ್ಲಿ ತೊಡಗಿಸುತ್ತೇನೆಯೇ?
ಎಷ್ಟು ಕಾರ್ಯದಲ್ಲಿ ತೊಡಗಿಸುತ್ತೀರಿ ಅಷ್ಟು ವೃದ್ಧಿ ಆಗುತ್ತಾ ಹೋಗುತ್ತದೆ ಏಕೆಂದರೆ ಕಾರ್ಯದಲ್ಲಿ
ಉಪಯೋಗಿಸುವುದರಿಂದ ಅನುಭವ ಆಗುತ್ತಾ ಹೋಗುತ್ತದೆ. ಅನುಭವದ ಅಥಾರಿಟಿ ಸೇರುತ್ತಾ ಹೋಗುತ್ತದೆ.
ಅಂದಾಗ ಚೆಕ್ ಮಾಡಿಕೊಳ್ಳಿ, ಈ ಎಲ್ಲಾ ಖಜಾನೆಗಳು ಜಮಾ ಆಗಿದೆಯೇ? ಎಂದು ತಮ್ಮೊಂದಿಗೆ ತಾವೇ
ಕೇಳಿಕೊಳ್ಳಿ ಮತ್ತು ಹೆಚ್ಚಿಸಿಕೊಳ್ಳುವ ಸಾಧಾನೆಯನ್ನು ಸಮಯದಲ್ಲಿ ಕಾರ್ಯದಲ್ಲಿ ಉಪಯೋಗಿಸುತ್ತೇನೆಯೇ?
ಅನುಭವದ ಅಥಾರಿಟಿ ಹೆಚ್ಚಾಗುತ್ತದೆಯೇ? ಏಕೆಂದರೆ ಅಧಿಕಾರಗಳಲ್ಲಿ ಎಲ್ಲದಕ್ಕಿಂತ ದೊಡ್ಡ ಅನುಭವದ
ಅಧಿಕಾರ ಎಲ್ಲದಕ್ಕಿಂತ ದೊಡ್ಡದು ಎಂದು ಗಾಯನ ಮಾಡಲಾಗುತ್ತದೆ ಅಂದಾಗ ಪ್ರತಿಯೊಬ್ಬರೂ ತಮ್ಮ
ಖಜಾನೆಯನ್ನು ಹೆಚ್ಚಿಸಿಕೊಳ್ಳಿ. ಚೆಕ್ ಮಾಡಿಕೊಳ್ಳಬೇಕು ಏಕೆಂದರೆ ಈಗ ಚೆಕ್ ಮಾಡಿಕೊಂಡು ಈಗಲೂ
ಖಜಾನೆಯನ್ನು ಹೆಚ್ಚಿಸಿಕೊಳ್ಳುವ ಸಮಯವಾಗಿದೆ. ಈಗ ಅವಕಾಶವಿದೆ ಮತ್ತೆ ಅವಕಾಶವೂ ಸಮಾಪ್ತಿ ಆಗಿ
ಬಿಡುತ್ತದೆ. ಖಜಾನೆಯನ್ನು ಹೆಚ್ಚಿಸಿಕೊಳ್ಳಲು ಬಯಸುತ್ತೀರಿ ಆದರೆ ಹೆಚ್ಚಿಸಿಕೊಳ್ಳಲು ಸಾಧ್ಯ
ಆಗುವುದಿಲ್ಲ.
ಖಜಾನೆ ಸಿಗುತ್ತದೆ,
ಖುಷಿ-ಖುಷಿಯಿಂದ ತನ್ನಲ್ಲಿ ಸಮಾವೇಶ ಮಾಡಿಕೊಳ್ಳುವ ಪ್ರಯತ್ನವೂ ಸಹ ಮಾಡುತ್ತಾರೆ ಆದರೆ ಯಾವಾಗ
ಖಜಾನೆ ಸಿಗುತ್ತದೆ, ಮುರಳಿಯ ಮೂಲಕವೇ ಖಜಾನೆ ಸಿಗುತ್ತದೆ ಅಂದಾಗ ಎರಡು ಪ್ರಕಾರದ ಮಕ್ಕಳನ್ನು
ಬಾಪ್ದಾದರವರು ನೋಡಿದ್ದಾರೆ. ಒಬ್ಬರು ಕೇಳುವಂತಹವರು ಮತ್ತೊಬ್ಬರು ಸಮಾವೇಶ ಮಾಡಿಕೊಳ್ಳುವವರು.
ಕೆಲವು ಮಕ್ಕಳು ಕೇಳಿ ಬಹಳ ಖುಷಿ ಆಗುತ್ತಾರೆ ಆದರೆ ಕೇಳುವುದು ಹಾಗೂ ಸಮಾವೇಶ ಮಾಡಿಕೊಳ್ಳುವುದರಲ್ಲಿ
ಬಹಳ ಅಂತರವಿದೆ. ಸಮಾವೇಶ ಮಾಡಿಕೊಳ್ಳುವವರು ಅನುಭವಿ ಆಗುತ್ತಾ ಹೋಗುತ್ತಾರೆ ಏಕೆಂದರೆ ಸಮಾವೇಶ
ಆಗಿರುವುದು ಸಮಯದಲ್ಲಿ ಕಾರ್ಯದಲ್ಲಿ ತೊಡಗಿಸುತ್ತಾರೆ. ಖಜಾನೆಯನ್ನು ಹೆಚ್ಚಿಸುಕೊಳ್ಳುತ್ತಾ
ಇರುತ್ತಾರೆ. ಕೇಳುವವರು ವರ್ಣನೆ ಮಾಡುತ್ತಾರೆ, ಬಹಳ ಚೆನ್ನಾಗಿ ತಿಳಿಸಿದ್ದಾರೆ, ಬಾಬಾ ಬಹಳ
ಒಳ್ಳೆಯ ಮಾತನ್ನು ತಿಳಿಸಿದ್ದಾರೆ ಎಂದು ಹೇಳುತ್ತಾರೆ ಆದರೆ ಸಮಾವೇಶ ಮಾಡಿಕೊಳ್ಳದೆ ಸಮಯದಲ್ಲಿ
ಕಾರ್ಯದಲ್ಲಿ ತೊಡಗಿಸಲು ಸಾಧ್ಯವಿಲ್ಲ ಅಂದಾಗ ಪ್ರತಿಯೊಬ್ಬರು ಸಮಾವೇಶ ಮಾಡಿಕೊಳ್ಳುವವರಲ್ಲವೇ ಎಂದು
ಚೆಕ್ ಮಾಡಿಕೊಳ್ಳಿ. ಸ್ವಲ್ಪನಾದರೂ ಒಂದುವೇಳೆ ಕಡಿಮೆ ಇದ್ದರೆ ಭರ್ಪೂರ್ ಇಲ್ಲವೆಂದರೆ
ಏರುಪೇರಾಗುತ್ತದೆ. ಆದರೆ ಸಮಾವೇಶ ಮಾಡಿಕೊಂಡಿರುವುದು ಫುಲ್ ಆಗಿದ್ದರೆ ಏರುಪೇರು ಇರುವುದಿಲ್ಲ.
ಆದ್ದರಿಂದ ಈ ದಿನ ಬಾಪ್ದಾದಾರವರು ಎಲ್ಲರ ಖಜಾನೆಗಳನ್ನು ಚೆಕ್ ಮಾಡಿದ್ದಾರೆ. ತಿಳಿಸಿದ್ದೇವೆಯಲ್ಲವೇ
- ಮೂರು ಪ್ರಕಾರದ ಮಕ್ಕಳು ಇದ್ದಾರೆ, ಈಗ ತಮ್ಮೊಂದಿಗೆ ತಾವೇ ನಾನು ಯಾರು? ಎಂದು ಚೆಕ್ ಮಾಡಿಕೊಳ್ಳಿ.
ಖಜಾನೆಯನ್ನು ಹೆಚ್ಚಿಸಿಕೊಳ್ಳುವುದು ಅರ್ಥಾತ್ ಸಮಯದಲ್ಲಿ ಕಾರ್ಯದಲ್ಲಿ ತೊಡಗಿಸುವುದು. ಎಷ್ಟು
ಕಾರ್ಯದಲ್ಲಿ ತೊಡಗಿಸುತ್ತೀರಿ ಅಷ್ಟು ಖಜಾನೆ ಹೆಚ್ಚುತ್ತಾ ಹೋಗುತ್ತದೆ ಏಕೆಂದರೆ ಏನೆಲ್ಲಾ
ಖಜಾನೆಗಳು ಇದೆ ಖಜಾನೆಯ ಮಾಲೀಕ ಖಜಾನೆಯನ್ನು ಕಾರ್ಯದಲ್ಲಿ ತೆಗೆದುಕೊಂಡುಬರುತ್ತಾರೆ, ಖಜಾನೆ
ತನ್ನನ್ನು ಕಾರ್ಯದಲ್ಲಿ ತೊಡಗಿಸುವುದಿಲ್ಲ, ಹಾಗಾದರೆ ತಮ್ಮೆಲ್ಲರಿಗೆ ಸರ್ವ ಖಜಾನೆಯನ್ನು ತಂದೆಯು
ಆಸ್ತಿಯ ರೂಪದಲ್ಲಿ ಕೊಟ್ಟಿದ್ದಾರೆ. ಅಂದಾಗ ತಂದೆಯ ಖಜಾನೆಯನ್ನು ತನ್ನ ಖಜಾನೆಯನ್ನಾಗಿ
ಮಾಡಿಕೊಳ್ಳುವುದರಲ್ಲಿ ಪ್ರತಿಯೊಬ್ಬರು ತಮ್ಮ ಗಮನ ಕೊಡಬೇಕು ಏಕೆಂದರೆ ಎಷ್ಟು ಖಜಾನೆ ಭರ್ಪೂರ್
ಆಗುತ್ತದೆ ಅಷ್ಟೇ ಭರ್ಪೂರ್ ಅವಸ್ಥೆಯಲ್ಲಿ ಅಚಲ, ಅಡೋಲರಾಗುತ್ತಾರೆ.
ಬಾಪ್ದಾದಾರವರು ಇದನ್ನೇ
ತಿಳಿದುಕೊಳ್ಳುತ್ತಾರೆ - ಒಂದೊಂದು ಮಗು ಸಂಪನ್ನರಾಗಿದ್ದಾರೆ ಕಡಿಮೆ ಅಲ್ಲ ಏಕೆಂದರೆ ಈ ಅವಕಾಶ
ತಂದೆಯ ಮೂಲಕ ಅವಿನಾಶಿ ಖಾತೆ ಜಮಾ ಆಗಬೇಕು, ಇದು ಕೇವಲ ಈಗ ಆಗಲು ಸಾಧ್ಯ. ಆದ್ದರಿಂದ ಈಗ
ಇಲ್ಲವೆಂದರೆ ಇನ್ನೆಂದಿಗೂ ಇಲ್ಲ ಎಂದು ಸಹ ತಿಳಿಸಲಾಗಿದೆ. ಇದು ಸಂಗಮ ಸಮಯಕ್ಕಾಗಿ ಗಾಯನವಿದೆ.
ಭವಿಷ್ಯದಲ್ಲಿ ಏನು ಜಮಾ ಆಗಿದೆಯೋ ಅದರ ಫಲ ಪ್ರಾಪ್ತಿ ಮಾಡಿಕೊಳ್ಳುತ್ತೀರಿ ಆದರೆ ಪ್ರಾಪ್ತಿಯ ಸಮಯ
ಕೇವಲ ಇದಾಗಿದೆ. ಅಂದಾಗ ಪ್ರತಿಯೊಬ್ಬರು ತಮ್ಮ ಖಾತೆಯನ್ನು ನೋಡಿಕೊಳ್ಳಬೇಕು, ಯಾರದು ಎಷ್ಟು ಭಂಡಾರ
ಭರ್ಪೂರ್ ಆಗಿರುತ್ತದೆ ಅವರ ನಯನಗಳಿಂದ, ಚಲನೆಯಿಂದ, ಚೆಹರೆಯಿಂದ ಗೊತ್ತಾಗುತ್ತದೆ. ಅವರ ಚಲನೆ ಹಾಗೂ
ಚೆಹರೆ ಅರಳಿರುವ ಗುಲಾಬಿ ಹೂವಿನ ಸಮಾನ ಅನಿಸುತ್ತದೆ. ಬಾಪ್ದಾದಾರವರು ಪ್ರತಿಯೊಬ್ಬರ ಚಲನೆ ಹಾಗೂ
ಚೆಹರೆಯಿಂದ ಎಷ್ಟು ಹರ್ಷಿತ, ಎಷ್ಟು ಖುಷಿಯಿಂದ ಇರುತ್ತಾರೆ ಎಂದು ನೋಡುತ್ತಿರುತ್ತಾರೆ. ನಯನಗಳಿಂದ
ಆತ್ಮಿಕತೆ, ಚೆಹರೆಯಿಂದ ಮುಗುಳ್ನಗು ಮತ್ತು ಕರ್ಮದಿಂದ ಪ್ರತಿಯೊಂದು ಗುಣ ಎಲ್ಲರಿಗೆ ಅನುಭವ
ಆಗುತ್ತದೆ. ಅಂದಾಗ ಪ್ರತಿಯೊಬ್ಬರು ತಮ್ಮನ್ನು ತಾವೇ ಚೆಕ್ ಮಾಡಿಕೊಳ್ಳಿ.
ಬಾಪ್ದಾದಾರವರಿಗೆ
ಪ್ರತಿಯೊಂದು ಮಗುವಿನ ಮೇಲೆ ಪ್ರತಿಯೊಂದು ಮಗು ಅನೇಕ ಆತ್ಮಗಳಿಗೆ ಈ ರೀತಿ ಖಜಾನೆಗಳಿಂದ
ಸಂಪನ್ನರನ್ನಾಗಿ ಮಾಡಲಿ ಎನ್ನುವ ಇದೇ ಶುಭಭಾವನೆ ಇದೆ. ಈ ದಿನ ವಿಶ್ವದ ಆತ್ಮಗಳು ಎಲ್ಲರೂ
ಯಾವುದಾದರೂ ಆಧ್ಯಾತ್ಮಿಕ ಶಕ್ತಿ ಸಿಗಲಿ ಎಂದು ಇದನ್ನೇ ಬಯಸುತ್ತಾರೆ ಮತ್ತು ಆಧ್ಯಾತ್ಮಿಕ ಶಕ್ತಿಯ
ದಾತ ತಾವು ಬ್ರಾಹ್ಮಣರೇ ಆಗಿದ್ದೀರಿ ಏಕೆಂದರೆ ಪವಿತ್ರ, ಶ್ರೇಷ್ಠ ಮತ್ತು ಸಂಪನ್ನ (ಹೋಲಿಯಸ್ಟ್,
ಹೈಯಸ್ಟ್ ಮತ್ತು ರಿಚೆಸ್ಟ್) ತಾವು ಆತ್ಮಗಳೇ ಆಗಿದ್ದೀರಿ. ಪವಿತ್ರತೆಯೂ ಸಹ ಎಲ್ಲಾ ಆತ್ಮಗಳಿಗಿಂತ
ಹೆಚ್ಚು ತಾವು ಪವಿತ್ರವಾಗಿದ್ದೀರಿ. ತಾವು ಆತ್ಮಗಳ ಪೂಜೆ ಹೇಗೆ ವಿಧಿಪೂರ್ವಕವಾಗಿ ಆಗುತ್ತದೆ ಆ
ರೀತಿ ಮತ್ತ್ಯಾರದೂ ಆಗುವುದಿಲ್ಲ. ಈಗ ಕೊನೆಯ ಜನ್ಮದಲ್ಲೂ ತಾವು ಆತ್ಮಗಳ ಪೂಜೆ ಮತ್ತ್ಯಾವುದೇ
ಧರ್ಮಪಿತ ಅಥವಾ ಮಹಾನ್ ಆತ್ಮಗಳು ಯಾರು ನಿಮಿತ್ತರಾಗಿದ್ದಾರೆ ಅವರದ್ದಲ್ಲ. ವಿಧಿಪೂರ್ವಕ ಪೂಜೆ ಭಲೆ
ನೆನಪಾರ್ಥವನ್ನಾಗಿ ಮಾಡುತ್ತಾರೆ ಆದರೆ ವಿಧಿಪೂರ್ವಕವಾಗಿ ಪೂಜೆ ಆಗುವುದಿಲ್ಲ. ಮತ್ತು ತಮ್ಮ ಹಾಗೆ
ಖಜಾನೆ ರಿಚೆಸ್ಟ್ ಇನ್ ದಿ ವರ್ಲ್ಡ್ (ವಿಶ್ವದಲ್ಲಿ ಎಲ್ಲರಿಗಿಂತ ಶ್ರೀಮಂತರು) ತಾವು ಬ್ರಾಹ್ಮಣ
ಆತ್ಮಗಳ ಒಂದು ಜನ್ಮದ ಖಜಾನೆ ಗ್ಯಾರೆಂಟಿ 21 ಜನ್ಮಗಳು ನಡೆಯಲೇಬೇಕು ಏಕೆಂದರೆ ತಂದೆಯ ಮೂಲಕ ತಂದೆಯ
ಆಸ್ತಿ ಸಿಕ್ಕಿದೆ. ಅಂದಾಗ ತಂದೆ ಹೇಗೆ ಅವಿನಾಶಿ ಆಗಿದ್ದಾರೆಯೋ ಹಾಗೆಯೇ ತಂದೆಯ ಮೂಲಕ ಸಿಕ್ಕಿರುವ
ಖಜಾನೆಗಳೂ ಸಹ ಅವಿನಾಶಿ ಆಗಿ ಬಿಡುತ್ತದೆ. ಆದ್ದರಿಂದ ರಿಚೆಸ್ಟ್ ಇನ್ ದಿ ವರ್ಲ್ಡ್ (ವಿಶ್ವದಲ್ಲಿ
ಎಲ್ಲರಿಗಿಂತ ಶ್ರೀಮಂತರು), ಹೋಲಿಯಸ್ಟ್ ಇನ್ ದಿ ವರ್ಲ್ಡ್ (ವಿಶ್ವದಲ್ಲಿ ಎಲ್ಲರಿಗಿಂತ ಪವಿತ್ರರು).
ತಮ್ಮನ್ನು ಅಂತಹ ವಿಶೇಷ
ಸೇವಾಧಾರಿ ಎಂದು ತಿಳಿದುಕೊಳ್ಳುತ್ತೀರಲ್ಲವೇ. ಈಗಿನ ಸಮಯದನುಸಾರ ವಿಶ್ವದ ಆತ್ಮಗಳಿಗೆ ಯಾವ
ವಸ್ತುವಿನ ಅವಶ್ಯಕತೆ ಇದೆ ಎಂದು ತಿಳಿದಿದೆಯಲ್ಲವೇ. ಇಂದು ವಿಶ್ವಕ್ಕೆ ಖುಷಿ, ಶಕ್ತಿ ಹಾಗೂ
ಸ್ನೇಹದ ಅವಶ್ಯಕತೆ ಇದೆ. ಆತ್ಮಿಕ ಸ್ನೇಹವನ್ನು ಬಯಸುತ್ತಾರೆ ಆದರೆ ತಾವು ಬ್ರಾಹ್ಮಣ ಆತ್ಮರು ಈಗ
ಸಮಯದನುಸಾರ ದಾತರಾಗಿ ಮನಸ್ಸಿನಿಂದ ಶಕ್ತಿಗಳನ್ನು ಕೊಡಿ, ವಾಚಾದಿಂದ ಜ್ಞಾನವನ್ನು ಕೊಡಿ ಮತ್ತು
ಕರ್ಮದ ಮೂಲಕ ಗುಣ ದಾನ ಮಾಡಿ. ಬ್ರಹ್ಮಾತಂದೆ ಅಂತಿಮದಲ್ಲಿ ಮೂರು ಶಬ್ದಗಳನ್ನು ಎಲ್ಲಾ ಮಕ್ಕಳಿಗೆ
ಉಡುಗೊರೆ ರೂಪದಲ್ಲಿ ಕೊಟ್ಟಿದ್ದಾರೆ, ನೆನಪಿದೆಯಲ್ಲವೇ. ಈ ಮೂರು ಶಬ್ದಗಳನ್ನು ಒಂದುವೇಳೆ
ಸೇವೆಯಲ್ಲಿ ತೊಡಗಿಸಿದರೆ ಅನೇಕ ಆತ್ಮರನ್ನು ಸಂತುಷ್ಟರನ್ನಾಗಿ ಮಾಡಬಹುದು. ಆ ಮೂರು ಶಬ್ದಗಳು
ನಿರಾಕಾರಿ, ನಿರಹಂಕಾರಿ ಮತ್ತು ನಿರ್ವಿಕಾರಿ ಆಗಿದೆ. ಅಂದಾಗ ಮನಸಾ ಮೂಲಕ ನಿರಾಕಾರಿ, ವಾಚಾ ಮೂಲಕ
ನಿರಹಂಕಾರಿ ಮತ್ತು ಕರ್ಮದ ಮೂಲಕ ನಿರ್ವಿಕಾರಿ ಈ ಮೂರು ಶಬ್ದಗಳನ್ನು ಸೇವೆಯಲ್ಲಿ ತೊಡಗಿಸಿ, ಈಗ
ವಿಶ್ವಕ್ಕೆ ತಮ್ಮ ಶಕ್ತಿಗಳ ಮೂಲಕ ಸ್ವಲ್ಪ ಹೃದಯದ ಆನಂದ, ಸುಖದ ಪ್ರಾಪ್ತಿ ಆಗಲಿ, ಎಲ್ಲರೂ
ನಿರಾಶ್ರಿತರಾಗಿದ್ದಾರೆ ಮತ್ತು ತಾವು ವಿಶ್ವಕ್ಕಾಗಿ ಆಶಾ ನಕ್ಷತ್ರಗಳಾಗಿದ್ದೀರಿ ಮತ್ತು
ಬಾಪ್ದಾದಾರವರು ಎಲ್ಲಾ ಮಕ್ಕಳನ್ನು ತಂದೆಯ ಆಶಾ ನಕ್ಷತ್ರಗಳನ್ನಾಗಿ ನೋಡುತ್ತಿದ್ದಾರೆ, ಕೇವಲ ಆಶಾ
ನಕ್ಷತ್ರಗಳು ಅಲ್ಲ ಆಸೆಗಳನ್ನು ಪೂರ್ಣ ಮಾಡುವ ಆಶಾ ನಕ್ಷತ್ರಗಳನ್ನು ನೋಡುತ್ತಿದ್ದಾರೆ.
ಬಾಪ್ದಾದಾರವರ ಹತ್ತಿರ
ಮಕ್ಕಳ ಸ್ನೇಹ ಸದಾ ತಲುಪುತ್ತಿರುತ್ತದೆ ಮತ್ತು ಎಲ್ಲದಕ್ಕಿಂತ ಸಹಜ ಪುರುಷಾರ್ಥ ಯಾವುದಾಗಿದೆ?
ಭಿನ್ನ-ಭಿನ್ನ ಪುರುಷಾರ್ಥ ಇದೆ ಆದರೆ ಎಲ್ಲದಕ್ಕಿಂತ ಸಹಜ ಪುರುಷಾರ್ಥ ಸ್ನೇಹವಾಗಿದೆ. ಸ್ನೇಹದಲ್ಲಿ
ಪರಿಶ್ರಮವೂ ಸಹ ಪ್ರೀತಿಯ ರೂಪದಲ್ಲಿ ಬದಲಾವಣೆ ಆಗುತ್ತದೆ. ಅಂದಾಗ ತಂದೆಗೆ ಸ್ನೇಹಿ ಆಗುವುದು
ಅರ್ಥಾತ್ ಸಹಜ ಪುರುಷಾರ್ಥ ಮಾಡುವುದು. ಸ್ನೇಹದಲ್ಲಿ ತಾವೆಲ್ಲರೂ ತಮ್ಮನ್ನು ಸ್ನೇಹಿ ಎಂದು
ತಿಳಿಯುತ್ತೀರಾ, ಕೆಲವೊಮ್ಮೆ ಅಲ್ಲ ಸದಾ ಸ್ನೇಹಿ, ಯಾರು ತಮ್ಮನ್ನು ಸದಾ ಸ್ನೇಹದ ಸಾಗರದಲ್ಲಿ
ಸಮಾವೇಶ ಆಗಿದ್ದೇನೆ ಎಂದು ತಿಳಿಯುತ್ತೀರಿ, ಸದಾ ಸ್ನೇಹದ ಸಾಗರದಲ್ಲಿ ಸಮಾವೇಶವಾಗುವುದು, ಮುಳುಗಿ
ಹೋಗುವವರಲ್ಲ, ಸಮಾವೇಶವಾಗಿರುವವರು ಎಂದು ತಿಳಿಯುತ್ತೀರಿ, ಸ್ನೇಹದ ಸಾಗರದಲ್ಲಿ ಸಮಾವೇಶವಾಗಿರುವವರು,
ಯಾರು ತಮ್ಮನ್ನು ಈ ರೀತಿ ತಿಳಿಯುತ್ತೀರಿ ಅವರು ಕೈ ಎತ್ತಿ, ಸದಾ? ಸದಾ ಶಬ್ದವನ್ನು ಅಂಡರ್ಲೈನ್
ಮಾಡಿ. ಕೈ ಎತ್ತಿ. ಕೈ ಎತ್ತಿ, ಸದಾ, ಸದಾ? ಕೈಯಂತೂ ಚೆನ್ನಾಗಿ ಎತ್ತಿದ್ದೀರಿ, ಬಾಪ್ದಾದಾರವರು
ಕೈಯನ್ನು ನೋಡಿ ಖುಷಿ ಆಗುತ್ತಾರೆ ಏಕೆಂದರೆ ಸಾಹಸ ಇಟ್ಟಿದ್ದಾರೆ. ಒಂದುವೇಳೆ ಸ್ವಲ್ಪ ಕಡಿಮೆ ಆದರೂ
ಸಹ ಕೈ ಎತ್ತಿದ್ದೇನೆ ಎಂದು ನೆನಪಂತೂ ಬರುತ್ತದೆ ಏಕೆಂದರೆ ಪ್ರತಿಯೊಬ್ಬ ಮಗುವಿನ ಮೇಲೆ
ಬಾಪ್ದಾದಾರವರಿಗೆ ಅತೀ ಸ್ನೇಹ ಇದೆ. ಏಕೆ? ಏಕೆಂದರೆ ಬಾಪ್ದಾದಾರವರಿಗೆ ಈ ಒಂದೊಂದು ಆತ್ಮ ಅನೇಕ
ಬಾರಿ ಸ್ನೇಹಿ ಆಗಿದೆ, ಈಗಲೂ ಸಹ ಆಗಿದೆ ಮತ್ತೆ ಪ್ರತಿಯೊಂದು ಕಲ್ಪ ಇದೇ ಆತ್ಮ ಸ್ನೇಹಿ ಆಗುತ್ತದೆ
ಎಂದು ತಿಳಿದಿದೆ. ನಶೆ ಇದೆಯೇ, ನಾವೇ ಪ್ರತಿಯೊಂದು ಕಲ್ಪಕ್ಕೆ ಅಧಿಕಾರಿ ಆತ್ಮರಾಗಿದ್ದೇವೆ ಎಂದು
ಖುಷಿ ಇದೆಯೇ? ಖುಷಿ ಇದೆಯೇ?
ಬಾಪ್ದಾದಾರವರು ಅಂತಹ
ಅಧಿಕಾರಿ ಆತ್ಮಗಳನ್ನು ನೋಡಿ ಹೃದಯದ ಆಶೀರ್ವಾದಗಳನ್ನು ಕೊಡುತ್ತಿದ್ದಾರೆ, ಸದಾ ಅವಿಶ್ರಾಂತರಾಗಿ
ಹಾರುತ್ತಿರಿ, ಒಂದುವೇಳೆ ಎಂದಾದದರೂ ಏನಾದರೂ ಪರಿಸ್ಥಿತಿ ಬಂದರೆ ಸ್ವಸ್ಥಿತಿಯನ್ನು ಕೆಳಗೆ-ಮೇಲೆ
ಮಾಡಬೇಡಿ. ಸ್ವಸ್ಥಿತಿಯ ಮುಂದೆ ಪರಿಸ್ಥಿತಿ ಏನೂ ಮಾಡಲು ಸಾಧ್ಯವಿಲ್ಲ. ಒಳ್ಳೆಯದು. ಮೊದಲನೇ ಬಾರಿ
ಯಾರು ಬಂದಿದ್ದೀರಿ ಅವರು ಕೈ ಎತ್ತಿ. ಬಹಳ ಬರುತ್ತಾರೆ ಬಾಪ್ದಾದಾರವರಿಗೆ ಒಬ್ಬೊಬ್ಬ ಮಗುವನ್ನು
ನೋಡಿ ವಾಹ್! ನನ್ನ ಮಗುವೇ ವಾಹ್! ಎಂದು ಹೆಮ್ಮೆ ಇರುತ್ತದೆ, ಹೇಗೆ ತಾವು ಮಕ್ಕಳು ಹೃದಯದಲ್ಲಿ ಹಾಡು
ಹಾಡುತ್ತೀರಲ್ಲವೇ, ಸ್ವಾಭಾವಿಕವಾಗಿ ವಾಹ್! ಬಾಬಾ ವಾಹ್! ನನ್ನ ಬಾಬಾ ವಾಹ್! ಎಂದು
ಹಾಡುತ್ತೀರಲ್ಲವೇ, ಅದೇ ರೀತಿ ತಂದೆಯೂ ಸಹ ಮಕ್ಕಳ ಪ್ರತಿ ಇದೇ ಹಾಡನ್ನು ಹಾಡುತ್ತಾರೆ - ವಾಹ್!
ಪ್ರತಿಯೊಂದು ಮಗುವೇ ವಾಹ್! ಏಕೆಂದರೆ ತಂದೆಗೂ ಸಹ ಕಲ್ಪದ ನಂತರ ತಾವು ಮಕ್ಕಳು ಸಿಗುತ್ತೀರಿ ಮತ್ತು
ಒಂದೊಂದು ಮಗು ವಿಶ್ವದ ಮುಂದೆ ಮಹಾನ್ ಆಗಿದ್ದೀರಿ ಅಂದಾಗ ತಂದೆಯೂ ಸಹ ವಾಹ್! ಮಕ್ಕಳೇ ವಾಹ್! ಎಂದು
ಹಾಡುತ್ತಾರೆ, ವಾಹ್! ವಾಹ್! ಅಲ್ಲವೇ, ವಾಹ್! ವಾಹ್! ಮಕ್ಕಳಲ್ಲವೇ ವಾಹ್! ವಾಹ್! ಮಕ್ಕಳು ಕೈ
ಎತ್ತಿ.
ಸದಾ ನಾವು ವಾಹ್! ವಾಹ್!
ಮಕ್ಕಳಾಗಿದ್ದೇವೆ ಎಂದು ಇದನ್ನೇ ನೆನಪು ಇಟ್ಟುಕೊಳ್ಳಿ. ಪುರುಷಾರ್ಥಿ ಆಗಿರಬಹುದು ಆದರೆ ವಾಹ್!
ವಾಹ್! ಮಕ್ಕಳು, ತಂದೆಯ ವಾಹ್! ಅಥವಾ ವಾಹ್!ಮಕ್ಕಳು ತಂದೆಯ ಜೊತೆಯೇ ನಡೆಯುತ್ತಾರೆ.
ಉಳಿದುಕೊಳ್ಳುವುದಿಲ್ಲ ತಾನೇ. ಪ್ರತಿಯೊಂದು ಮಗುವಿಗೆ ಸ್ನೇಹದ ಮಡಿಲನ್ನು ಜೊತೆ ತೆಗೆದುಕೊಂಡು
ಹೋಗಲಿ ಎಂದು ತಂದೆಯು ಹೇಳುತ್ತಾರೆ. ತಯಾರಾಗಿದ್ದೀರಾ! ತಯಾರಾಗಿದ್ದೀರಾ? ಮಾರ್ಗದಲ್ಲಿ
ನಿಲ್ಲುವುದಿಲ್ಲತಾನೇ? ಜೊತೆಯಲ್ಲಿ ಹೋಗುತ್ತೀರಿ ಏಕೆಂದರೆ ಪ್ರತಿಜ್ಞೆ ಇದೆ, ಪ್ರತಿಜ್ಞೆಯಂತೂ
ನಿಭಾಯಿಸುವವರಲ್ಲವೇ.
ಈಗ ಬಾಪ್ದಾದಾರವರು
ಇದನ್ನೇ ಬಯಸುತ್ತಾರೆ ತಮ್ಮ ಫರಿಸ್ಥಾ ರೂಪವನ್ನು ಇಮರ್ಜ್ ಮಾಡಿಕೊಳ್ಳಿ. ನಡೆಯುತ್ತಾ ಓಡಾಡುತ್ತಾ
ಫರಿಸ್ಥಾ ಡ್ರೆಸ್ನವರು ಎಂದು ಅನುಭವ ಮಾಡಿಸಿ. ಬಾಪ್ದಾದಾರವರು ಡ್ರಿಲ್ ತಿಳಿಸಿದ್ದಾರಲ್ಲವೇ.
ವಸ್ತ್ರ ಬದಲಾವಣೆ ಮಾಡಿಕೊಳ್ಳುವ ಅಭ್ಯಾಸವಂತೂ ಇದೆಯಲ್ಲವೇ. ಅಂದಾಗ ಹೇಗೆ ಶರೀರದ ಡ್ರೆಸ್ ಬದಲಾವಣೆ
ಮಾಡುತ್ತೀರಿ, ಅದೇ ರೀತಿ ಆತ್ಮದ ಸ್ವರೂಪ ಫರಿಸ್ಥಾ, ಪದೇ-ಪದೇ ಅನುಭವ ಮಾಡಿ. ಫರಿಸ್ಥಾ ಡ್ರೆಸ್
ಇಷ್ಟ ಆಗುತ್ತದೆಯಲ್ಲವೇ! ಹೇಗೆ ಬ್ರಹ್ಮಾ ತಂದೆ ಅವ್ಯಕ್ತ ಫರಿಸ್ಥಾ ರೂಪದಲ್ಲಿ ವತನದಲ್ಲಿ
ಕುಳಿತಿದ್ದಾರೆ, ಅದೇ ರೀತಿ ತಂದೆಯ ಸಮಾನ ತಾವೆಲ್ಲರೂ ಸಹ ನಡೆಯುತ್ತಾ-ಓಡಾಡುತ್ತಾ ಫರಿಸ್ಥಾ
ರೂಪದಲ್ಲಿ ಅನುಭವ ಮಾಡಿ ಏಕೆಂದರೆ ಫರಿಸ್ಥಾ ರೂಪ ಇದ್ದಾಗ ದೇವತಾ ಆಗುತ್ತೀರಿ. ಹೇಗೆ ತಂದೆಯದು ಮೂರು
ರೂಪಗಳು ನೆನಪಿರುತ್ತದೆಯಲ್ಲವೇ. ತಂದೆ, ಶಿಕ್ಷಕ ಹಾಗೂ ಸದ್ಗುರು, ಅದೇ ರೀತಿ ತಮ್ಮದೂ ಸಹ ಮೂರು
ರೂಪಗಳನ್ನು ನೆನಪು ಮಾಡಿಕೊಳ್ಳಿ – ಬ್ರಾಹ್ಮಣ ರೂಪದಿಂದ ಫರಿಸ್ಥಾ ಮತ್ತು ಫರಿಸ್ಥಾ ರೂಪದಿಂದ ದೇವತಾ
ರೂಪ. ಇದು ಮೂರು ರೂಪ ಪಕ್ಕಾ ಆಗಿದೆಯಲ್ಲವೇ! ಕೆಲವೊಮ್ಮೆ ಬ್ರಾಹ್ಮಣ ವಸ್ತ್ರವನ್ನು ಧರಿಸಿ,
ಕೆಲವೊಮ್ಮೆ ಫರಿಸ್ಥಾ ವಸ್ತ್ರವನ್ನು ಧರಿಸಿ, ಕೆಲವೊಮ್ಮೆ ದೇವತಾ ವಸ್ತ್ರವನ್ನು ಧರಿಸಿ. ಈ ಮೂರೂ
ರೂಪದಲ್ಲಿ ಸ್ವತಃವಾಗಿಯೇ ತ್ರಿಕಾಲದರ್ಶಿಯ ಸೀಟಿನಲ್ಲಿ ಕುಳಿತು ಸಾಕ್ಷಿಯಾಗಿ ಪ್ರತಿಯೊಂದು
ಕಾರ್ಯವನ್ನು ಮಾಡುತ್ತಿರುತ್ತಾರೆ. ಅಂದಾಗ ಸದಾ ತಂದೆಯ ಜೊತೆ ಇರಲಿ, ಎಂದು ಎಲ್ಲರ ಪ್ರತಿ
ಬಾಪ್ದಾದಾರವರು ಬಯಸುತ್ತಾರೆ, ಒಂಟಿ ಆಗಬೇಡಿ. ಜೊತೆಯಲ್ಲಿ ಇದ್ದಾಗ ಜೊತೆಯಲ್ಲಿ ಹೋಗಬಹುದು.
ಒಂದುವೇಳೆ ಈಗ ಕೆಲವೊಮ್ಮೆ ಮಾತ್ರ ಜೊತೆಯಲ್ಲಿ ಇದ್ದರೆ ಜೊತೆ ಹೇಗೆ ಹೋಗುತ್ತೀರಿ! ಸ್ನೇಹಿ,
ಸ್ನೇಹಿಯನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಪೂರ್ತಿ ದಿನದಲ್ಲಿ ಈ ಅಭ್ಯಾಸ ಮಾಡುತ್ತಿರಿ. ಈಗೀಗ
ಬ್ರಾಹ್ಮಣ, ಈಗೀಗ ಫರಿಸ್ಥಾ, ಈಗೀಗ ದೇವತಾ ರೂಪ. ಒಳ್ಳೆಯದು.
ಎಲ್ಲಾ ಕಡೆಯ ಸರ್ವ
ಮಕ್ಕಳಿಗೆ ಯಾರು ಸದಾ ಖಜಾನೆಗಳಿಂದ ಸಂಪನ್ನರಾಗಿದ್ದಾರೆ, ಸದಾ ತಮ್ಮ ಚಲನೆ ಮತ್ತು ಚೆಹರೆಯ ಮೂಲಕ
ಸೇವಾಧಾರಿ ಆಗಿದ್ದಾರೆ, ಏಕೆಂದರೆ ನಾವು ವಿಶ್ವ ಪರಿವರ್ತಕರಾಗಿ ವಿಶ್ವದ ಪರಿವರ್ತನೆ ಮಾಡುತ್ತೇವೆ
ಎಂದು ತಮ್ಮೆಲ್ಲರ ಪ್ರತಿಜ್ಞೆ ಆಗಿದೆ, ಅಂದಾಗ ನಡೆಯುತ್ತಾ, ಓಡಾಡುತ್ತಲೂ ಸಹ ಸೇವಾಧಾರಿ ಸೇವೆಯಲ್ಲಿ
ತತ್ಪರರಾಗಿರುತ್ತಾರೆ. ಈ ರೀತಿ ವಿಶ್ವ ಸೇವಾಧಾರಿ ವಿಶ್ವ ಪರಿವರ್ತಕ ಪ್ರತಿಯೊಬ್ಬರಿಗೆ ತಂದೆಯ
ಖಜಾನೆಯಿಂದ ಭರ್ಪೂರ್ ಮಾಡುವವರು, ಬಾಪ್ದಾದಾರವರ ಎಲ್ಲಾ ಕಡೆಯ ಮಕ್ಕಳಿಗೆ ಬಾಪ್ದಾದಾರವರ ನೆನಪು
ಪ್ರೀತಿ ಹಾಗೂ ಹೃದಯದ ಆಶೀರ್ವಾದಗಳು ಮತ್ತು ನಮಸ್ತೆ. ಒಳ್ಳೆಯದು.
ವರದಾನ:
ಮಾಸ್ಟರ್
ತ್ರಿಕಾಲದರ್ಶಿ ಆಗಿದ್ದು ಪ್ರತಿಯೊಂದು ಕರ್ಮವನ್ನು ಯುಕ್ತಿ ಯುಕ್ತವಾಗಿ ಮಾಡುವಂತಹ ಕರ್ಮಬಂಧನ
ಮುಕ್ತ ಭವ.
ಯಾವುದೇ ಸಂಕಲ್ಪ, ಮಾತು
ಅಥವಾ ಕರ್ಮವನ್ನು ಮಾಡುತ್ತೀರಿ - ಅದನ್ನು ಮಾಸ್ಟರ್ ತ್ರಿಕಾಲದರ್ಶಿ ಆಗಿದ್ದು ಮಾಡುತ್ತೀರೆಂದರೆ,
ಯಾವುದೇ ಕರ್ಮವು ವ್ಯರ್ಥ ಅಥವಾ ಅನರ್ಥವಾಗಲು ಸಾಧ್ಯವಿಲ್ಲ. ತ್ರಿಕಾಲದರ್ಶಿ ಅರ್ಥಾತ್ ಸಾಕ್ಷಿ
ಸ್ಥಿತಿಯಲ್ಲಿ ಸ್ಥಿತರಾಗಿದ್ದು, ಕರ್ಮಗಳ ಗುಹ್ಯಗತಿಯನ್ನು ತಿಳಿದುಕೊಂಡು, ಈ ಕರ್ಮೇಂದ್ರಿಯಗಳ
ಮೂಲಕ ಕರ್ಮವನ್ನು ಮಾಡಿಸುತ್ತೀರೆಂದರೆ ಕರ್ಮವು ಬಂಧನದಲ್ಲೆಂದಿಗೂ ಬಂಧಿಸುವುದಿಲ್ಲ. ಪ್ರತಿಯೊಂದು
ಕರ್ಮವನ್ನು ಮಾಡುತ್ತಾ ಕರ್ಮ ಬಂಧನ ಮುಕ್ತ, ಕರ್ಮಾತೀತ ಸ್ಥಿತಿಯ ಅನುಭವ ಮಾಡುತ್ತಾ ಇರುತ್ತೀರಿ.
ಸ್ಲೋಗನ್:
ಯಾರ ಬಳಿ
ಅಲ್ಪಕಾಲದ ಇಚ್ಛೆಗಳ ಅವಿದ್ಯಾ ಆಗಿರುತ್ತದೆಯೋ ಅವರೇ ಮಹಾನ್ ಸಂಪದ್ಬರಿತರು ಆಗಿದ್ದಾರೆ.
ಅವ್ಯಕ್ತ ಸೂಚನೆ:-
“ನಿಶ್ಚಯದ ಫೌಂಡೇಷನ್ (ತಳಪಾಯವನ್ನು) ಬಲಗೊಳಿಸಿ ಸದಾ ನಿರ್ಭಯ ಮತ್ತು ನಿಶ್ಚಿಂತರಾಗಿರಿ”.
ಹೇಗೆ ಕಾವಲುಗಾರ
ಒಂದುವೇಳೆ ಶಸ್ತ್ರಧಾರಿಯಾಗಿದ್ದರೆ ಮತ್ತು ಅವರಿಗೆ ನಿಶ್ಚಯವಿದೆ ನನ್ನ ಶಸ್ತ್ರ ಶತೃವನ್ನು
ಓಡಿಸುವಂತಹದ್ದಾಗಿದೆ, ಸೋಲಿಸುವಂತಹದ್ದಾಗಿದೆ ಅಂದಾಗ ಅವರು ಎಷ್ಟು ನಿರ್ಭಯರಾಗಿ
ನಡೆಯುತ್ತಿರುತ್ತಾರೆ. ನಿಮ್ಮ ಹತ್ತಿರ ಸಹ ಸರ್ವ ಶಕ್ತಿಗಳ ರೂಪಿ ಶಸ್ತ್ರ ಸದಾ ಜೊತೆಯಿದೆ, ಕೇವಲ
ಆಹ್ವಾನ ಮಾಡಿ ಅರ್ಥಾತ್ ಮಾಲೀಕರಾಗಿ ಆದೇಶ ಮಾಡಿ ಆಗ ಸಫಲತೆಯು ಸದಾ ಆಗಿಯೇ ಬಿಟ್ಟಿದೆ.