15.04.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಂದೆಯು ನೀವು ಆತ್ಮಗಳೊಂದಿಗೆ ಆತ್ಮಿಕ ವಾರ್ತಾಲಾಪವನ್ನು ಮಾಡುತ್ತಾರೆ, ನೀವು ತಂದೆಯ ಬಳಿ 21 ಜನ್ಮಗಳಿಗಾಗಿ ತಮ್ಮ ಜೀವನವನ್ನು ಇನ್ಶ್ಯೂರ್ ಮಾಡಲು ಬಂದಿದ್ದೀರಿ, ನಿಮ್ಮ ಜೀವನ ಈ ರೀತಿ ಇನ್ಶ್ಯೂರ್ ಮಾಡುತ್ತೀರಿ ಅದರಿಂದ ನೀವು ಅಮರರಾಗಿಬಿಡುತ್ತೀರಿ”

ಪ್ರಶ್ನೆ:
ಮನುಷ್ಯರು ಸಹ ತಮ್ಮ ಜೀವನವನ್ನು ಇನ್ಶ್ಯೂರ್ ಮಾಡಿಸುತ್ತಾರೆ ಮತ್ತು ನೀವು ಮಕ್ಕಳೂ ಸಹ ಮಾಡಿಸುತ್ತಾರೆ - ಇವೆರಡರಲ್ಲಿ ಅಂತರವೇನಿದೆ?

ಉತ್ತರ:
ಮನುಷ್ಯರು ತಮ್ಮ ಜೀವನವನ್ನು ಇನ್ಶ್ಯೂರ್ ಮಾಡಿಸುತ್ತಾರೆ ಏಕೆಂದರೆ ಮರಣ ಹೊಂದುತ್ತಾರೆಂದರೆ ಪರಿವಾರದವರಿಗೆ ಹಣವು ಸಿಗಲಿ ಎಂದು. ನೀವು ಮಕ್ಕಳು 21 ಜನ್ಮಗಳಿಗಾಗಿ ಸಾಯಲೇಬಾರದು, ಅಮರರಾಗಿಬಿಡಬೇಕೆಂದು ಇನ್ಶ್ಯೂರ್ ಮಾಡಿಸುತ್ತೀರಿ. ಸತ್ಯಯುಗದಲ್ಲಿ ಇನ್ಶ್ಯೂರೆನ್ಸ್ ಕಂಪನಿಗಳಿರುವುದಿಲ್ಲ. ಈಗ ನೀವು ತಮ್ಮ ಜೀವನವನ್ನು ಇನ್ಶ್ಯೂರ್ ಮಾಡಿಬಿಡುತ್ತೀರಿ ನಂತರ ಎಂದಿಗೂ ಮರಣ ಹೊಂದುವುದಿಲ್ಲ ಎಂಬ ಖುಷಿಯಿರಬೇಕಾಗಿದೆ.

ಗೀತೆ:
ಇಂದು ಬೆಳಗ್ಗೆ-ಬೆಳಗ್ಗೆ ಬಂದವರು ಯಾರು........

ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳೊಂದಿಗೆ ವಾರ್ತಾಲಾಪ ಮಾಡುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ತಂದೆಯು ನಮಗೂ ಈಗ 21 ಜನ್ಮಗಳಷ್ಟೇ ಅಲ್ಲ, 40-50 ಜನ್ಮಗಳಿಗಾಗಿ ಇನ್ಶ್ಯೂರ್ ಮಾಡುತ್ತಿದ್ದಾರೆ. ನಾವು ಸತ್ತರೆ ನಮ್ಮ ಪರಿವಾರಕ್ಕೆ ಹಣ ಸಿಗಲೆಂದು ಅವರು ಇನ್ಶ್ಯೂರ್ ಮಾಡುತ್ತಾರೆ ಆದರೆ ನೀವು 21 ಜನ್ಮಗಳಿಗಾಗಿ ಸಾಯಲೇಬಾರದೆಂದು ಇನ್ಶ್ಯೂರ್ ಮಾಡುತ್ತೀರಿ. ಅಮರರನ್ನಾಗಿ ಮಾಡುತ್ತಾರಲ್ಲವೆ. ನೀವು ಅಮರರಾಗಿದ್ದಿರಿ, ಮೂಲ ಲೋಕವೂ ಸಹ ಅಮರವಾಗಿದೆ. ಅಲ್ಲಿ ಸಾಯುವ ಮತ್ತು ಬದುಕುವ ಮಾತಿರುವುದಿಲ್ಲ. ಅದು ಆತ್ಮಗಳ ನಿವಾಸಸ್ಥಾನವಾಗಿದೆ. ಈಗ ಈ ಆತ್ಮಿಕ ವಾರ್ತಾಲಾಪವನ್ನು ತಂದೆಯು ತಮ್ಮ ಮಕ್ಕಳೊಂದಿಗೇ ಮಾಡುತ್ತಾರೆ ಮತ್ತ್ಯಾರೊಂದಿಗೂ ಮಾಡುವುದಿಲ್ಲ. ಯಾವ ಆತ್ಮವು ತಂದೆಯನ್ನು ಅರಿತಿದೆ, ಅವರೊಂದಿಗೆ ಮಾತನಾಡುತ್ತಾರೆ. ಮತ್ಯ್ತಾರೂ ತಂದೆಯ ಭಾಷೆಯನ್ನು ಅರಿತುಕೊಂಡಿಲ್ಲ. ಪ್ರದರ್ಶನಿಯಲ್ಲಿ ಎಷ್ಟೊಂದು ಮಂದಿ ಬರುತ್ತಾರೆ, ನಿಮ್ಮ ಭಾಷೆಯನ್ನು ಅರಿತುಕೊಳ್ಳುತ್ತಾರೆಯೇ! ಕೆಲವರೇ ವಿರಳ ಅರಿತುಕೊಳ್ಳುತ್ತಾರೆ. ನಿಮಗೂ ಸಹ ತಿಳಿಸುತ್ತಾ-ತಿಳಿಸುತ್ತಾ ಎಷ್ಟೊಂದು ವರ್ಷಗಳಾಯಿತು ಆದರೂ ಸಹ ನಿಮ್ಮಲ್ಲಿ ಕೆಲವರೇ ತಿಳಿದುಕೊಳ್ಳುತ್ತಾರೆ. ವಾಸ್ತವದಲ್ಲಿ ಇದು ಸೆಕೆಂಡಿನಲ್ಲಿ ತಿಳಿದುಕೊಳ್ಳುವ ಮಾತುಗಳಾಗಿವೆ. ನಾವಾತ್ಮಗಳು ಯಾರು ಪಾವನರಾಗಿದ್ದೆವೋ ಅವರೇ ಪತಿತರಾಗಿದ್ದೇವೆ ಮತ್ತೆ ಈಗ ಪಾವನರಾಗಬೇಕಾಗಿದೆ. ಅದಕ್ಕಾಗಿ ಮಧುರ ತಂದೆಯನ್ನು ನೆನಪು ಮಾಡಬೇಕಾಗಿದೆ. ಅವರಿಗಿಂತ ಮಧುರ ವಸ್ತು ಮತ್ತ್ಯಾವುದೂ ಇಲ್ಲ. ಈ ನೆನಪು ಮಾಡುವುದರಲ್ಲಿಯೇ ಬಹಳ ಮಾಯೆಯ ವಿಘ್ನಗಳು ಬರುತ್ತವೆ. ಇದನ್ನೂ ಸಹ ತಿಳಿದುಕೊಂಡಿದ್ದೀರಿ - ತಂದೆಯು ನಮ್ಮನ್ನು ಅಮರರನ್ನಾಗಿ ಮಾಡಲು ಬಂದಿದ್ದಾರೆ, ಪುರುಷಾರ್ಥ ಮಾಡಿ ಅಮರರಾಗಿ ಅಮರಪುರಿಯ ಮಾಲೀಕರಾಗಬೇಕಾಗಿದೆ. ಎಲ್ಲರೂ ಅಮರರಾಗುತ್ತಾರೆ, ಸತ್ಯಯುಗಕ್ಕೆ ಅಮರಲೋಕವೆಂದು ಕರೆಯಲಾಗುತ್ತದೆ. ಇದು ಮೃತ್ಯುಲೋಕವಾಗಿದೆ. ಇದು ಅಮರಕಥೆಯಾಗಿದೆ, ಕೇವಲ ಶಂಕರನು ಪಾರ್ವತಿಗೆ ಅಮರಕಥೆಯನ್ನು ತಿಳಿಸಿದನೆಂದಲ್ಲ. ಅವೆಲ್ಲವೂ ಭಕ್ತಿಮಾರ್ಗದ ಮಾತುಗಳಾಗಿವೆ. ನೀವು ಮಕ್ಕಳು ಕೇವಲ ನನ್ನೊಬ್ಬನಿಂದಲೇ ಕೇಳಿ, ನನ್ನೊಬ್ಬನನ್ನೇ ನೆನಪು ಮಾಡಿ. ಜ್ಞಾನವನ್ನು ನಾನೇ ಕೊಡಲು ಸಾಧ್ಯ. ಡ್ರಾಮಾದ ಪ್ಲಾನ್ ಅನುಸಾರ ಇಡೀ ಪ್ರಪಂಚವು ತಮೋಪ್ರಧನವಾಗಿದೆ. ಅಮರಪುರಿಯಲ್ಲಿ ರಾಜ್ಯ ಮಾಡುವುದಕ್ಕೆ ಅಮರಪದವಿಯೆಂದು ಹೇಳಲಾಗುತ್ತದೆ. ಅಲ್ಲಿ ಇನ್ಶ್ಯೂರೆನ್ಸ್ ಕಂಪನಿಗಳಿರುವುದಿಲ್ಲ. ಈಗ ನಿಮ್ಮ ಜೀವನವನ್ನು ಇನ್ಶ್ಯೂರ್ ಮಾಡುತ್ತಿದ್ದೀರಿ. ನೀವು ಎಂದೂ ಮರಣಹೊಂದುವುದಿಲ್ಲ. ಬುದ್ಧಿಯಲ್ಲಿ ಈ ಖುಷಿಯಿರಬೇಕು - ನಾವು ಅಮರಪುರಿಯ ಮಾಲೀಕರಾಗುತ್ತೇವೆ. ಅಂದಮೇಲೆ ಅಮರಪುರಿಯನ್ನು ನೆನಪು ಮಾಡಬೇಕಾಗಿದೆ. ಮೂಲವತನದ ಮೂಲಕವೇ ಹೋಗಬೇಕಾಗಿದೆ. ಇದು ಸಹ ಮನ್ಮನಾಭವವಾಗಿದೆ. ಮೂಲವತನವು ಮನ್ಮನಾಭವವಾಗಿದೆ. ಅಮರಪುರಿಯು ಮಧ್ಯಾಜೀಭವವಾಗಿದೆ. ಪ್ರತಿಯೊಂದು ಮಾತಿನಲ್ಲಿ ಎರಡು ಶಬ್ಧಗಳು ಬರುತ್ತವೆ. ನಿಮಗೆ ಎಷ್ಟು ಪ್ರಕಾರವಾಗಿ ಅರ್ಥವನ್ನು ತಿಳಿಸುತ್ತಾರೆ ಅಂದಮೇಲೆ ಇದು ಬುದ್ಧಿಯಲ್ಲಿ ಕುಳಿತುಕೊಳ್ಳಬೇಕಾಗಿದೆ. ಎಲ್ಲದಕ್ಕಿಂತ ಹೆಚ್ಚಿನ ಪರಿಶ್ರಮವೇ ಇದರಲ್ಲಿದೆ. ತಮ್ಮನ್ನು ಆತ್ಮನಿಶ್ಚಯ ಮಾಡಿಕೊಳ್ಳಬೇಕಾಗಿದೆ. ನಾನಾತ್ಮನು ಈ ಜನ್ಮವನ್ನು ತೆಗೆದುಕೊಂಡಿದ್ದೇನೆ. 84 ಜನ್ಮಗಳಲ್ಲಿ ಭಿನ್ನ-ಭಿನ್ನ ನಾಮರೂಪ, ದೇಶ, ಕಾಲಗಳನ್ನು ಸುತ್ತುತ್ತಾ ಬಂದಿದ್ದೇನೆ. ಸತ್ಯಯುಗದಲ್ಲಿ ಇಷ್ಟು ಜನ್ಮಗಳು, ತ್ರೇತಾಯುಗದಲ್ಲಿ ಇಷ್ಟು ಜನ್ಮಗಳು...... ಇದನ್ನೂ ಸಹ ಅನೇಕ ಮಕ್ಕಳು ಮರೆತುಹೋಗಿದ್ದಾರೆ. ಮುಖ್ಯವಾದ ಮಾತು ತಮ್ಮನ್ನು ಆತ್ಮವೆಂದು ತಿಳಿದು ಮಧುರ ತಂದೆಯನ್ನು ನೆನಪು ಮಾಡಬೇಕಾಗಿದೆ. ಏಳುತ್ತಾ-ಕುಳಿತುಕೊಳ್ಳುತ್ತಾ ಇದು ಬುದ್ಧಿಯಲ್ಲಿರುವುದರಿಂದ ಖುಷಿಯಿರುತ್ತದೆ. ತಂದೆಯು ಪುನಃ ಬಂದಿದ್ದಾರೆ. ಯಾರನ್ನು ನಾವು ಬಂದು ನಮ್ಮನ್ನು ಪಾವನ ಮಾಡಿ ಎಂದು ನೆನಪು ಮಾಡುತ್ತಿದ್ದೆವು. ಮೂಲವತನದಲ್ಲಿ ಮತ್ತು ಸತ್ಯಯುಗದಲ್ಲಿ ಪಾವನರಾಗಿರುತ್ತೇವೆ. ಭಕ್ತಿಯಲ್ಲಿ ಮನುಷ್ಯರು ಮುಕ್ತಿ ಹಾಗೂ ಜೀವನ್ಮುಕ್ತಿಯಲ್ಲಿ ಹೋಗುವುದಕ್ಕಾಗಿ ಪುರುಷಾರ್ಥ ಮಾಡುತ್ತಾರೆ. ಮುಕ್ತಿಯೆಂದಾದರೂ ಹೇಳಿ ಅಥವಾ ನಿರ್ವಾಣಧಾಮವೆಂದಾದರೂ ಹೇಳಿ. ವಾನಪ್ರಸ್ಥ ಶಬ್ಧವು ಸರಿಯಾಗಿದೆ. ವಾನಪ್ರಸ್ಥಿಗಳು ನಗರದಲ್ಲಿಯೇ ಇರುತ್ತಾರೆ, ಸನ್ಯಾಸಿಗಳು ಗೃಹಸ್ಥವನ್ನು ಬಿಟ್ಟು ಕಾಡಿಗೆ ಹೋಗುತ್ತಾರೆ. ಇತ್ತೀಚೆಗೆ ವಾನಪ್ರಸ್ಥಿಗಳಲ್ಲಿ ಯಾವುದೇ ಶಕ್ತಿಯಿಲ್ಲ. ಸನ್ಯಾಸಿಗಳಂತೂ ಬ್ರಹ್ಮ್ ತತ್ವವನ್ನೇ ಭಗವಂತನೆಂದು ಹೇಳಿಬಿಡುತ್ತಾರೆ, ಬ್ರಹ್ಮ್ ಲೋಕವೆಂದು ಹೇಳುವುದಿಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಪುನರ್ಜನ್ಮ ಯಾರಿಗೂ ನಿಂತುಹೋಗುವುದಿಲ್ಲ, ಎಲ್ಲರೂ ತಮ್ಮ-ತಮ್ಮ ಪಾತ್ರವನ್ನಭಿನಯಿಸುತ್ತಾರೆ. ಆವಾಗಮನದಿಂದ ಎಂದೂ ಬಿಡುಗಡೆಯಾಗುವುದಿಲ್ಲ. ಈ ಸಮಯದಲ್ಲಿ ಕೋಟ್ಯಾಂತರ ಮನುಷ್ಯರಿದ್ದಾರೆ, ಇನ್ನೂ ಬರುತ್ತಲೇ ಇರುತ್ತಾರೆ, ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಿರುತ್ತಾರೆ ಮತ್ತು ಫಸ್ಟ್ ಫ್ಲೋರ್ ಖಾಲಿಯಾಗುವುದು. ಮೂಲವತನವು ಫಸ್ಟ್ ಫ್ಲೋರ್ ಆಗಿದೆ, ಸೂಕ್ಷ್ಮವತನವು ಸೆಕೆಂಡ್ ಫ್ಲೋರ್ ಆಗಿದೆ. ಇದು ಥರ್ಡ್ ಫ್ಲೋರ್ ಅಥವಾ ಗ್ರೌಂಡ್ ಫ್ಲೋರ್ ಎಂದು ಕರೆಯಲಾಗುವುದು. ಇದರ ಹೊರತು ಮತ್ತ್ಯಾವುದೂ ಇಲ್ಲ. ನಕ್ಷತ್ರಗಳಲ್ಲಿಯೂ ಪ್ರಪಂಚವಿದೆ ಎಂದು ಅವರು ತಿಳಿಯುತ್ತಾರೆ ಆದರೆ ಆ ರೀತಿಯಿಲ್ಲ. ಫಸ್ಟ್ ಫ್ಲೋರ್ ನಲ್ಲಿ ಆತ್ಮಗಳಿರುತ್ತಾರೆ ಉಳಿದಂತೆ ಮನುಷ್ಯರಿಗಾಗಿ ಈ ಪ್ರಪಂಚವಿರುತ್ತದೆ.

ನೀವು ಬೇಹದ್ದಿನ ವೈರಾಗಿ ಮಕ್ಕಳಾಗಿದ್ದೀರಿ. ನೀವು ಹಳೆಯ ಪ್ರಪಂಚದಲ್ಲಿದ್ದರೂ ಸಹ ಈ ಕಣ್ಣುಗಳಿಂದ ಎಲ್ಲವನ್ನೂ ನೋಡುತ್ತಿದ್ದರೂ ನೋಡದಂತಿರಬೇಕು. ಇದು ಮುಖ್ಯ ಪುರುಷಾರ್ಥವಾಗಿದೆ ಏಕೆಂದರೆ ಇದೆಲ್ಲವೂ ಸಮಾಪ್ತಿಯಾಗಿಬಿಡುವುದು. ಈ ಸಂಸಾರವು ರಚಿಸಿಯೇ ಇಲ್ಲ ವೆಂದಲ್ಲ, ರಚಿಸಲ್ಪಟ್ಟಿದೆ ಆದರೆ ಅದರಿಂದ ವೈರಾಗ್ಯವುಂಟಾಗಿಬಿಡುತ್ತದೆ ಅರ್ಥಾತ್ ಇಡೀ ಹಳೆಯಪ್ರಪಂಚದಿಂದ ವೈರಾಗ್ಯವು ಬರುತ್ತದೆ. ಭಕ್ತಿ, ಜ್ಞಾನ ಮತ್ತು ವೈರಾಗ್ಯ. ಭಕ್ತಿಯ ನಂತರ ಜ್ಞಾನವಾಗಿದೆ. ನಂತರ ಭಕ್ತಿಯಿಂದ ವೈರಾಗ್ಯವುಂಟಾಗಿಬಿಡುತ್ತದೆ. ಬುದ್ಧಿಯಿಂದ ತಿಳಿದುಕೊಳ್ಳಿ - ಇದು ಹಳೆಯ ಪ್ರಪಂಚವಾಗಿದೆ. ಇದು ನಮ್ಮ ಅಂತಿಮ ಜನ್ಮವಾಗಿದೆ, ಈಗಲೇ ಎಲ್ಲರೂ ಹಿಂತಿರುಗಿ ಹೋಗಬೇಕಾಗಿದೆ. ಚಿಕ್ಕಮಕ್ಕಳಿಗೂ ಸಹ ಶಿವತಂದೆಯ ನೆನಪನ್ನು ತರಿಸಬೇಕಾಗಿದೆ. ಅಶುದ್ಧ ಆಹಾರ ಪದಾರ್ಥಗಳನ್ನು ಸೇವಿಸುವ ಹವ್ಯಾಸವಿರಬಾರದು. ಬಾಲ್ಯದಿಂದಲೇ ಯಾವ ಹವ್ಯಾಸ ಮಾಡಿಕೊಳ್ಳುವಿರೋ ಅದೇ ಉಳಿದುಬಿಡುತ್ತದೆ. ಇತ್ತೀಚೆಗೆ ಸಂಗದೋಷವು ಬಹಳ ಕೆಟ್ಟದಾಗಿದೆ. ಸತ್ಸಂಗವು ಮೇಲೆತ್ತುವುದು, ಕೆಟ್ಟಸಂಗವು ಕೆಳಗೆ ಬೀಳಿಸುವುದು....... ಇದು ವಿಷಯಸಾಗರ, ವೇಶ್ಯಾಲಯವಾಗಿದೆ. ಸತ್ಯವು ಒಬ್ಬರೇ ಪರಮಪಿತ ಪರಮಾತ್ಮನಾಗಿದ್ದಾರೆ. ದೇವರೊಬ್ಬನೇ ಎಂದು ಹೇಳಲಾಗುತ್ತದೆ. ಅವರು ಬಂದು ಸತ್ಯವಾದ ಮಾತುಗಳನ್ನು ತಿಳಿಸುತ್ತಾರೆ. ತಂದೆಯು ತಿಳಿಸುತ್ತಾರೆ - ಹೇ ಆತ್ಮಿಕ ಮಕ್ಕಳೇ, ನಿಮ್ಮ ತಂದೆಯಾದ ನಾನು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ, ನೀವು ನನ್ನನ್ನು ಕರೆಯುತ್ತೀರಲ್ಲವೆ. ನಾನೇ ಜ್ಞಾನಸಾಗರ, ಪತಿತ-ಪಾವನನಾಗಿದ್ದೇನೆ. ತಂದೆಯು ಹೊಸ ಸೃಷ್ಟಿಯ ರಚಯಿತನಾಗಿದ್ದಾರೆ, ಹಳೆಯ ಸೃಷ್ಟಿಯ ವಿನಾಶವನ್ನು ಮಾಡಿಸುತ್ತಾರೆ. ಈ ತ್ರಿಮೂರ್ತಿಗಳು ಪ್ರಸಿದ್ಧರಾಗಿದ್ದಾರೆ. ಶ್ರೇಷ್ಠಾತಿಶ್ರೇಷ್ಠ ಶಿವನಾಗಿದ್ದಾರೆ. ಮತ್ತೆ ಸೂಕ್ಷ್ಮವತನದಲ್ಲಿ ಬ್ರಹ್ಮಾ, ವಿಷ್ಣು, ಶಂಕರರಿದ್ದಾರೆ. ಅವರ ಸಾಕ್ಷಾತ್ಕಾರವೂ ಆಗುತ್ತದೆ ಏಕೆಂದರೆ ಪವಿತ್ರರಲ್ಲವೆ. ಅವರನ್ನು ಚೈತನ್ಯದಲ್ಲಿ ಈ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ. ಅವರನ್ನು ಬಹಳ ನೌಧಾಭಕ್ತಿಯಿಂದಲೇ ನೋಡಬಹುದಾಗಿದೆ. ತಿಳಿದುಕೊಳ್ಳಿ, ಯಾರಾದರೂ ಹನುಮಂತನ ಭಕ್ತರಾಗಿದ್ದರೆ ಅವರಿಗೆ ಹನುಮಂತನ ಸಾಕ್ಷಾತ್ಕಾರವಾಗುತ್ತದೆ. ಶಿವನ ಭಕ್ತರಿಗಂತೂ ಪರಮಾತ್ಮನು ಅಖಂಡ ಜ್ಯೋತಿಸ್ವರೂಪವೆಂದು ಅಸತ್ಯವನ್ನು ತಿಳಿಸಿಬಿಟ್ಟಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನಂತೂ ಇಷ್ಟು ಚಿಕ್ಕ ಬಿಂದುವಾಗಿದ್ದೇನೆ. ಅಖಂಡ ಜ್ಯೋತಿ ಸ್ವರೂಪವೆಂದು ಅರ್ಜುನನಿಗೆ ತೋರಿಸಿದರೆಂದು ಅವರು ಹೇಳುತ್ತಾರೆ ಮತ್ತು ನನ್ನಿಂದ ನೋಡಲು ಸಹನೆಯಾಗುವುದಿಲ್ಲ ಎಂದು ಅರ್ಜುನನು ಹೇಳಿದನೆಂದು ತಿಳಿಸಿದ್ದಾರೆ. ಅರ್ಜುನನಿಗೆ ಸಾಕ್ಷಾತ್ಕಾರವಾಯಿತೆಂದು ಸಹ ಗೀತೆಯಲ್ಲಿ ಬರೆಯಲ್ಪಟ್ಟಿದೆ ಆದ್ದರಿಂದ ಅಖಂಡ ಜ್ಯೋತಿಯ ಸಾಕ್ಷಾತ್ಕಾರವಾಯಿತೆಂದು ತಿಳಿಸುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ಇವೆಲ್ಲಾ ಭಕ್ತಿಮಾರ್ಗದ ಮಾತುಗಳು ಮನಸ್ಸನ್ನು ಖುಷಿಪಡಿಸುವಂತಹದಾಗಿದೆ. ನಾನು ಅಖಂಡ ಜ್ಯೋತಿಸ್ವರೂಪನೆಂದು ನಾನು ಹೇಳುವುದೇ ಇಲ್ಲ. ನೀವಾತ್ಮಗಳು ಹೇಗೆ ಸೂಕ್ಮಬಿಂದುಗಳಾಗಿದ್ದೀರಿ ಹಾಗೆಯೇ ನಾನೂ ಬಿಂದುವಾಗಿದ್ದೇನೆ. ಹೇಗೆ ನೀವು ನಾಟಕದಲ್ಲಿ ಬಂಧಿತರಾಗಿದ್ದೀರೋ ಹಾಗೆಯೇ ನಾನೂ ಬಂಧಿತನಾಗಿದ್ದೇನೆ. ಎಲ್ಲಾ ಆತ್ಮಗಳಿಗೆ ತಮ್ಮ-ತಮ್ಮ ಪಾತ್ರವು ಸಿಕ್ಕಿದೆ, ಎಲ್ಲರೂ ಪುನರ್ಜನ್ಮವನ್ನು ತೆಗೆದುಕೊಳ್ಳಲೇಬೇಕಾಗಿದೆ. ಎಲ್ಲರೂ ನಂಬರ್ವಾರ್ ಬರಲೇಬೇಕಾಗಿದೆ. ಮೊದಲ ನಂಬರಿನಲ್ಲಿದ್ದವರೆ ಮತ್ತೆ ಕೆಳಗಿಳಿಯುತ್ತಾರೆ. ತಂದೆಯು ಎಷ್ಟೊಂದು ಮಾತುಗಳನ್ನು ತಿಳಿಸುತ್ತಾರೆ. ಸೃಷ್ಟಿರೂಪಿ ಚಕ್ರವು ಸುತ್ತುತ್ತಿರುತ್ತದೆ ಎಂಬುದನ್ನೂ ಸಹ ತಿಳಿಸಲಾಗಿದೆ. ಹೇಗೆ ಹಗಲಿನ ನಂತರ ರಾತ್ರಿಯು ಬರುವುದು ಹಾಗೆಯೇ ಕಲಿಯುಗದ ನಂತರ ಸತ್ಯಯುಗ ನಂತರ ತ್ರೇತಾ..... ಕೊನೆಯಲ್ಲಿ ಸಂಗಮಯುಗವು ಬರುತ್ತದೆ. ಸಂಗಮಯುಗದಲ್ಲಿಯೇ ತಂದೆಯು ಪರಿವರ್ತನೆ ಮಾಡುತ್ತಾರೆ. ಯಾರು ಸತೋಪ್ರಧಾನರಾಗಿದ್ದರೋ ಅವರೇ ಈಗ ತಮೋಪ್ರಧಾನರಾಗಿದ್ದಾರೆ, ಅವರೇ ಈಗ ಸತೋಪ್ರಧಾನರಾಗುತ್ತಾರೆ. ಹೇ ಪತಿತ-ಪಾವನ ಬನ್ನಿ ಎಂದು ಕರೆದಿರಿ ಆದ್ದರಿಂದ ಈಗ ತಂದೆಯು ಬಂದು ತಿಳಿಸುತ್ತಾರೆ - ಮಕ್ಕಳೇ, ಮನ್ಮನಾಭವ. ನಾನು ಆತ್ಮನಾಗಿದ್ದೇನೆ. ನಾನು ತಂದೆಯನ್ನು ನೆನಪು ಮಾಡಬೇಕಾಗಿದೆ ಇದನ್ನು ಯಥಾರ್ಥ ರೀತಿಯಿಂದ ಕೆಲವರೇ ಅರಿತುಕೊಳ್ಳುತ್ತಾರೆ. ನಾವಾತ್ಮಗಳ ತಂದೆಯು ಎಷ್ಟು ಮಧುರನಾಗಿದ್ದಾರೆ. ಆತ್ಮವೇ ಮಧುರವಲ್ಲವೆ. ಶರೀರವು ಸಮಾಪ್ತಿಯಾದರೆ ಮತ್ತೆ ಅವರ ಆತ್ಮವನ್ನು ಕರೆಸುತ್ತಾರೆ. ಆತ್ಮದೊಂದಿಗೇ ಪ್ರೀತಿಯಿರುತ್ತದೆಯಲ್ಲವೆ. ಸಂಸ್ಕಾರವು ಆತ್ಮದಲ್ಲಿರುತ್ತದೆ. ಆತ್ಮವೇ ಓದುತ್ತದೆ, ಕೇಳುತ್ತದೆ, ದೇಹವಂತೂ ಸಮಾಪ್ತಿಯಾಗಿಬಿಡುತ್ತದೆ. ನಾನಾತ್ಮ ಅಮರನಾಗಿದ್ದೇನೆ ಅಂದಮೇಲೆ ನೀವು ನನಗಾಗಿ ಏಕೆ ಅಳುತ್ತೀರಿ? ಇದು ದೇಹಾಭಿಮಾನವಲ್ಲವೆ ನಿಮಗೆ ದೇಹದೊಂದಿಗೆ ಪ್ರೀತಿಯಿದೆ, ವಾಸ್ತವದಲ್ಲಿ ಆ ಪ್ರೀತಿಯು ಆತ್ಮದೊಂದಿಗಿರಬೇಕು, ಅವಿನಾಶಿ ವಸ್ತುವಿನೊಂದಿಗೆ ಪ್ರೀತಿಯಿರಬೇಕು. ವಿನಾಶಿ ವಸ್ತುವಿನಲ್ಲಿ ಪ್ರೀತಿಯಿರುವುದರಿಂದಲೇ ಹೊಡೆದಾಡುತ್ತಾರೆ, ಜಗಳವಾಡುತ್ತಾರೆ. ಸತ್ಯಯುಗದಲ್ಲಿ ದೇಹೀ-ಅಭಿಮಾನಿಗಳಾಗಿರುತ್ತಾರೆ ಆದ್ದರಿಂದ ಖುಷಿ-ಖುಷಿಯಿಂದ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ. ಅಳುವುದು, ದುಃಖಿಸುವುದು ಏನೂ ಇರುವುದಿಲ್ಲ.

ನೀವು ಮಕ್ಕಳು ತಮ್ಮ ಆತ್ಮಾಭಿಮಾನಿ ಸ್ಥಿತಿಯನ್ನು ಮಾಡಿಕೊಳ್ಳಲು ಬಹಳ ಅಭ್ಯಾಸ ಮಾಡಬೇಕಾಗಿದೆ - ನಾನು ಆತ್ಮನಾಗಿದ್ದೇನೆ, ನನ್ನ ಸಹೋದರ ಆತ್ಮನಿಗೆ ತಂದೆಯ ಸಂದೇಶವನ್ನು ತಿಳಿಸುತ್ತೇನೆ. ನನ್ನ ಸಹೋದರನು ಈ ಕರ್ಮೇಂದ್ರಿಯಗಳ ಮೂಲಕ ಕೇಳುತ್ತಾನೆ, ಈ ರೀತಿಯ ಸ್ಥಿತಿಯನ್ನು ಮಾಡಿಕೊಳ್ಳಿ - ತಂದೆಯನ್ನು ನೆನಪು ಮಾಡುತ್ತಾ ಇರಿ ಆಗ ವಿಕರ್ಮಗಳು ವಿನಾಶವಾಗುತ್ತಾ ಇರುತ್ತವೆ. ಸ್ವಯಂನ್ನು ಆತ್ಮನೆಂದು ತಿಳಿಯಿರಿ ಮತ್ತು ಅವರನ್ನು ಆತ್ಮವೆಂದು ತಿಳಿಯಿರಿ, ಆಗ ಇದು ಪಕ್ಕಾ ಹವ್ಯಾಸವಾಗಿಬಿಡುವುದು, ಇದು ಗುಪ್ತ ಪರಿಶ್ರಮವಾಗಿದೆ. ಅಂತರ್ಮುಖಿಯಾಗಿ ಈ ಸ್ಥಿತಿಯನ್ನು ಪಕ್ಕಾ ಮಾಡಿಕೊಳ್ಳಬೇಕಾಗಿದೆ. ಎಷ್ಟು ಸಮಯವನ್ನು ತೆಗೆಯಲು ಸಾಧ್ಯವಿದೆಯೋ ಅಷ್ಟು ಈ ಸೇವೆಯಲ್ಲಿ ತೊಡಗಿಸಿ. 8 ಗಂಟೆಗಳ ಸಮಯ ಭಲೆ ನಿಮ್ಮ ಉದ್ಯೋಗ ವ್ಯವಹಾರಗಳನ್ನು ಮಾಡಿ, ನಿದ್ರೆಯನ್ನೂ ಮಾಡಿ ಉಳಿದ ಸಮಯವನ್ನು ಇದರಲ್ಲಿ ತೊಡಗಿಸಿ. ನಿಮ್ಮ ನೆನಪು 8 ಗಂಟೆಗಳವರೆಗೆ ತಲುಪಬೇಕು ಆಗಲೇ ನಿಮಗೆ ಬಹಳ ಖುಷಿಯಿರುವುದು. ಪತಿತ-ಪಾವನ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುವವು. ಜ್ಞಾನವು ನಿಮಗೆ ಈ ಸಂಗಮಯುಗದಲ್ಲಿಯೇ ಸಿಗುವುದು. ಮಹಿಮೆಯೆಲ್ಲವೂ ಈ ಸಂಗಮಯುಗದ್ದಾಗಿದೆ. ಈಗಲೇ ತಂದೆಯು ಕುಳಿತು ನಿಮಗೆ ಜ್ಞಾನವನ್ನು ತಿಳಿಸುತ್ತಾರೆ. ಇದರಲ್ಲಿ ಯಾವುದೇ ಸ್ಥೂಲ ಮಾತಿಲ್ಲ. ನೀವು ಈಗ ಏನನ್ನು ಬರೆಯುತ್ತೀರೋ ಅದೆಲ್ಲವೂ ಸಮಾಪ್ತಿಯಾಗಿಬಿಡುವುದು. ಜ್ಞಾನಬಿಂದುಗಳ ನೆನಪಿರಲೆಂದು ಬರೆದುಕೊಳ್ಳುತ್ತೀರಿ, ಕೆಲವರ ಬುದ್ಧಿಯು ತೀಕ್ಷ್ಣವಾಗಿರುತ್ತದೆ ಆದ್ದರಿಂದ ಬುದ್ಧಿಯಲ್ಲಿ ನೆನಪಿರುತ್ತದೆ - ನಂಬರ್ವಾರ್ ಇದ್ದಾರಲ್ಲವೆ. ಮುಖ್ಯಮಾತು ತಂದೆಯನ್ನು ನೆನಪು ಮಾಡಬೇಕು ಮತ್ತು ಸೃಷ್ಟಿಚಕ್ರವನ್ನು ನೆನಪು ಮಾಡಬೇಕಾಗಿದೆ, ಯಾವುದೇ ವಿಕರ್ಮಗಳನ್ನು ಮಾಡಬಾರದು, ಗೃಹಸ್ಥ ವ್ಯವಹಾರದಲ್ಲಿಯೂ ಇರಬೇಕಾಗಿದೆ ಆದರೆ ಅವಶ್ಯವಾಗಿ ಪವಿತ್ರರಾಗಿರಬೇಕಾಗಿದೆ. ಕೆಲವರು ಅಶುದ್ಧ ವಿಚಾರಗಳುಳ್ಳ ಮಕ್ಕಳು ತಿಳಿಯುತ್ತಾರೆ - ನಮಗೆ ಇವರು ಬಹಳ ಇಷ್ಟವಾಗುತ್ತಾರೆ, ಇವರೊಂದಿಗೆ ನಾವು ಗಾಂಧರ್ವ ವಿವಾಹ ಮಾಡಿಕೊಳ್ಳುತ್ತೇವೆ ಆದರೆ ಈ ಗಾಂಧರ್ವ ವಿವಾಹವನ್ನು ಯಾವಾಗ ಮಾಡಿಸುತ್ತಾರೆಂದರೆ ಮಿತ್ರಸಂಬಂಧಿ ಮೊದಲಾದವರು ಬಹಳ ತೊಂದರೆಕೊಡುತ್ತಾರೆಂದರೆ ಅವರನ್ನು ಪಾರು ಮಾಡಲು ಹೀಗೆ ಮಾಡಬೇಕಾಗುತ್ತದೆ. ನಾವು ಗಾಂಧರ್ವ ವಿವಾಹ ಮಾಡಿಕೊಳ್ಳುತ್ತೇವೆಂದು ಎಲ್ಲರೂ ಹೇಳುವಂತಿಲ್ಲ. ಅಂತಹವರು ಇಲ್ಲಿರಲು ಸಾಧ್ಯವಿಲ್ಲ. ಮೊದಲಿನ ದಿನವೇ ಹೋಗಿ ಕೆಸರಿನಲ್ಲಿ ಬೀಳುತ್ತಾರೆ, ನಾಮ-ರೂಪದಲ್ಲಿ ಮನಸ್ಸು ಸಿಲುಕುತ್ತದೆ. ಇದು ಬಹಳ ಕೆಟ್ಟಮಾತಾಗಿದೆ. ಗಾಂಧರ್ವ ವಿವಾಹ ಮಾಡಿಕೊಳ್ಳುವುದು ಯಾವುದೇ ಚಿಕ್ಕಮ್ಮನ ಮನೆಯಂತಲ್ಲ. ಪರಸ್ಪರ ಮನಸ್ಸಾಯಿತೆಂದರೆ ನಾವು ಗಾಂಧರ್ವ ವಿವಾಹ ಮಾಡಿಕೊಳ್ಳುತ್ತೇವೆಂದು ಹೇಳುತ್ತಾರೆ. ಆದರೆ ಇದರಲ್ಲಿ ಸಂಬಂಧಿಗಳು ಬಹಳ ಎಚ್ಚರದಿಂದಿರಬೇಕು. ಈ ಮಕ್ಕಳು ಯಾವುದೇ ಪ್ರಯೋಜನವಿಲ್ಲವೆಂದು ತಿಳಿಯಬೇಕು. ಯಾರೊಂದಿಗೆ ಮನಸ್ಸಾಗಿದೆಯೋ ಅವರಿಂದ ಬೇರ್ಪಡಿಸಬೇಕು. ಇಲ್ಲದಿದ್ದರೆ ಪರಸ್ಪರ ಮಾತನಾಡುತ್ತಿರುತ್ತಾರೆ. ಈ ಸಭೆಯಲ್ಲಿ ಬಹಳ ಎಚ್ಚರಿಕೆಯನ್ನಿಡಬೇಕಾಗುತ್ತದೆ. ಮುಂದೆ ಹೋದಂತೆ ಸಭೆಯು ಬಹಳ ನಿಯಮಾನುಸಾರ ಇರುವುದು. ಇಂತಹ ಕೆಟ್ಟವಿಚಾರ ಮಾಡುವವರನ್ನು ಬರಲು ಅನುಮತಿ ನೀಡುವುದಿಲ್ಲ.

ಯಾವ ಮಕ್ಕಳು ಆತ್ಮಿಕ ಸೇವೆಯಲ್ಲಿ ತತ್ಪರರಾಗಿರುವರೋ ಯಾರು ಯೋಗದಲ್ಲಿದ್ದು ಸೇವೆ ಮಾಡುವರೋ ಅವರೇ ಸತ್ಯಯುಗೀ ರಾಜಧಾನಿಯನ್ನು ಸ್ಥಾಪನೆ ಮಾಡುವುದರಲ್ಲಿ ಸಹಯೋಗಿಗಳಾಗುತ್ತಾರೆ. ಸೇವಾಧಾರಿ ಮಕ್ಕಳಿಗೆ ತಂದೆಯ ಆದೇಶವಾಗಿದೆ - ಆರಾಮವು ಹರಾಮವಾಗಿದೆ ಅರ್ಥಾತ್ ವಿಶ್ರಾಂತಿಯು ಕೆಟ್ಟದ್ದಾಗಿದೆ. ಯಾರು ಬಹಳ ಸೇವೆ ಮಾಡುವರೋ ಅವರು ಅವಶ್ಯವಾಗಿ ರಾಜ-ರಾಣಿಯಾಗುತ್ತಾರೆ. ಯಾರ್ಯಾರು ಪರಿಶ್ರಮ ಪಡುವರೋ ತಮ್ಮ ಸಮಾನ ಮಾಡಿಕೊಳ್ಳುವರು. ಅವರಲ್ಲಿ ಶಕ್ತಿಯೂ ಇರುತ್ತದೆ, ಸ್ಥಾಪನಾಕಾರ್ಯವು ನಾಟಕದನುಸಾರವೇ ಆಗಬೇಕಾಗಿದೆ. ಇವೆಲ್ಲಾ ಅಂಶಗಳನ್ನು ಬಹಳ ಚೆನ್ನಾಗಿ ಧಾರಣೆ ಮಾಡಿಕೊಂಡು ಸೇವೆಯಲ್ಲಿ ತೊಡಗಬೇಕು. ಇಲ್ಲಿ ವಿಶ್ರಾಂತಿಯೂ ಕೆಟ್ಟದ್ದಾಗಿದೆ, ಸೇವೆಯೇ ಸೇವೆ ನಡೆಯುತ್ತಿರಲಿ ಆಗಲೇ ಶ್ರೇಷ್ಠಪದವಿಯನ್ನು ಪಡೆಯುತ್ತೀರಿ. ಮೋಡಗಳು ಬಂದು ರಿಫ್ರೆಷ್ ಆಗಿ ಸೇವೆಗೆ ಹೋಗಬೇಕು. ನಿಮ್ಮದು ಬಹಳಷ್ಟು ಸೇವೆಯು ವೃದ್ಧಿಯಾಗುವುದು. ಭಿನ್ನ-ಭಿನ್ನ ಪ್ರಕಾರದ ಚಿತ್ರಗಳೂ ರಚಿಸಲ್ಪಡುವವು. ಅದರಿಂದ ಮನುಷ್ಯರು ಬಹಳ ಬೇಗನೆ ಅರ್ಥಮಾಡಿಕೊಳ್ಳುವರು. ಈ ಚಿತ್ರಗಳು ಮೊದಲಾದವೂ ಸಹ ಅಭಿವೃದ್ಧಿ ಹೊಂದುತ್ತಾ ಹೋಗುತ್ತವೆ. ಇದರಲ್ಲಿಯೂ ಯಾರು ನಮ್ಮ ಬ್ರಾಹ್ಮಣ ಕುಲದವರಿರುವರೋ ಅವರು ಬಹಳ ಚೆನ್ನಾಗಿ ಅರಿತುಕೊಳ್ಳುತ್ತಾರೆ. ತಿಳಿಸುವವರೂ ಸಹ ಒಳ್ಳೆಯವರಾಗಿದ್ದಾಗ ತಿಳಿದುಕೊಳ್ಳುವವರೂ ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ಯಾರು ಬಹಳ ಚೆನ್ನಾಗಿ ಧಾರಣೆ ಮಾಡುವರೋ, ತಂದೆಯನ್ನು ನೆನಪು ಮಾಡುವರೋ ಅವರ ಚಹರೆಯಿಂದಲೇ ಅರ್ಥವಾಗುತ್ತದೆ - ಬಾಬಾ, ನಾವಂತೂ ತಮ್ಮಿಂದ ಪೂರ್ಣ ಆಸ್ತಿಯನ್ನು ಪಡೆಯುತ್ತೇವೆ. ಅಂದಮೇಲೆ ಅಂತಹವರಲ್ಲಿ ಖುಷಿಯ ವಾದ್ಯಗಳು ಮೊಳಗುತ್ತಿರುತ್ತವೆ. ಸೇವೆಯಪ್ರತಿ ಬಹಳ ಉತ್ಸಾಹವಿರುವುದು. ಇಲ್ಲಿ ಬಂದು ರಿಫ್ರೆಷ್ ಆಗಿ ಸೇವೆಗಾಗಿ ಓಡುವರು. ಸರ್ವೀಸಿಗಾಗಿ ಪ್ರತಿಯೊಂದು ಸೇವಾಕೇಂದ್ರದಿಂದ ಅನೇಕರು ತಯಾರಾಗಬೇಕು. ನಿಮ್ಮ ಸೇವೆಯು ಬಹಳ ಹರಡುತ್ತಾ ಹೋಗುವುದು. ನಿಮ್ಮೊಂದಿಗೆ ಮಿಲನ ಮಾಡುತ್ತಾ ಹೋಗುತ್ತಾರೆ, ಕೊನೆಗೊಂದು ದಿನ ಸನ್ಯಾಸಿಗಳೂ ಬರುತ್ತಾರೆ. ಈಗಂತು ಅವರ ರಾಜ್ಯವಿದೆ. ಎಲ್ಲರೂ ಅವರ ಚರಣಗಳಿಗೆ ಬೀಳುತ್ತಾರೆ, ಪೂಜಿಸುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ - ಇದೆಲ್ಲವೂ ಭೂತಪೂಜೆಯಾಗಿದೆ, ನನಗಂತೂ ಚರಣಗಳಿಲ್ಲ ಆದ್ದರಿಂದ ನಾನು ಪೂಜೆ ಮಾಡಿಸಿಕೊಳ್ಳುವುದಿಲ್ಲ. ನಾನಂತೂ ಈ ತನುವಿನ ಆಧಾರವನ್ನು ಪಡೆದಿದ್ದೇನೆ ಆದ್ದರಿಂದ ಇವರಿಗೆ ಭಾಗ್ಯಶಾಲಿ ರಥವೆಂದು ಹೇಳಲಾಗುತ್ತದೆ. ಈ ಸಮಯದಲ್ಲಿ ನೀವು ಮಕ್ಕಳು ಬಹಳ ಸೌಭಾಗ್ಯಶಾಲಿಗಳಾಗಿದ್ದೀರಿ ಏಕೆಂದರೆ ನೀವಿಲ್ಲಿ ಈಶ್ವರೀಯ ಸಂತಾನರಾಗಿದ್ದೀರಿ. ಆತ್ಮಗಳು ಪರಮಾತ್ಮನಿಂದ ಬಹಳ ಕಾಲ ಅಗಲಿದ್ದರೆಂದು ಗಾಯನವಿದೆ. ಯಾರು ಬಹಳ ಕಾಲದಿಂದ ಅಗಲಿದ್ದಾರೆಯೋ ಅವರೇ ಬರುತ್ತಾರೆ. ಅವರಿಗೇ ನಾನು ಬಂದು ಓದಿಸುತ್ತೇನೆ, ಈ ಮಾತು ಕೃಷ್ಣನಿಗೆ ಹೇಳಲು ಸಾಧ್ಯವಿಲ್ಲ. ಕೃಷ್ಣನು ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾನೆ. ಇದು ಅವರ ಅಂತಿಮ ಜನ್ಮವಾಗಿದೆ ಆದ್ದರಿಂದ ಹೆಸರೂ ಸಹ ಇವರಿಗೆ ಶ್ಯಾಮಸುಂದರನೆಂದು ಇಡಲಾಗಿದೆ. ಶಿವನು ಯಾರೆಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಈ ಮಾತನ್ನು ತಂದೆಯೇ ಬಂದು ತಿಳಿಸುತ್ತಾರೆ. ನಾನು ಪರಮ ಆತ್ಮ, ಪರಮಧಾಮದ ನಿವಾಸಿಯಾಗಿದ್ದೇನೆ. ನೀವೂ ಸಹ ಅಲ್ಲಿನ ನಿವಾಸಿಗಳಾಗಿದ್ದೀರಿ. ನಾನು ಸರ್ವಶ್ರೇಷ್ಠ ಪತಿತ-ಪಾವನನಾಗಿದ್ದೇನೆ. ನೀವೀಗ ಈಶ್ವರೀಯ ಬುದ್ಧಿಯವರಾಗಿದ್ದೀರಿ. ಈಶ್ವರನ ಬುದ್ಧಿಯಲ್ಲಿ ಯಾವ ಜ್ಞಾನವಿದೆಯೋ ಅದನ್ನು ನಿಮಗೆ ತಿಳಿಸುತ್ತಿದ್ದಾರೆ. ಸತ್ಯಯುಗದಲ್ಲಿ ಭಕ್ತಿಯ ಮಾತೇ ಇರುವುದಿಲ್ಲ. ಈ ಜ್ಞಾನವು ನಿಮಗೆ ಈಗಲೇ ಸಿಗುತ್ತಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಅಂತರ್ಮುಖಿಯಾಗಿ ತಮ್ಮ ಸ್ಥಿತಿಯನ್ನು ಜಮಾ ಮಾಡಿಕೊಳ್ಳಬೇಕಾಗಿದೆ, ಇದೇ ಅಭ್ಯಾಸ ಮಾಡಬೇಕಾಗಿದೆ - ನಾನು ಆತ್ಮನಾಗಿದ್ದೇನೆ, ನನ್ನ ಸಹೋದರ ಆತ್ಮನಿಗೆ ತಂದೆಯ ಸಂದೇಶವನ್ನು ಕೊಡುತ್ತೇನೆ....... ಹೀಗೆ ಆತ್ಮಾಭಿಮಾನಿಯಾಗುವ ಗುಪ್ತ ಪರಿಶ್ರಮ ಪಡಬೇಕಾಗಿದೆ.

2. ಆತ್ಮಿಕ ಸೇವೆಯ ಉಮ್ಮಂಗವನ್ನಿಟ್ಟುಕೊಳ್ಳಬೇಕಾಗಿದೆ. ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುವ ಪರಿಶ್ರಮ ಪಡಬೇಕಾಗಿದೆ. ಸಂಗದೋಷವು ಕೆಟ್ಟದ್ದಾಗಿದೆ ಅದರಿಂದ ತಮ್ಮನ್ನು ಸಂಭಾಲನೆ ಮಾಡಿಕೊಳ್ಳಬೇಕಾಗಿದೆ. ಅಶುದ್ಧ ಆಹಾರ-ಪಾನೀಯ ಹವ್ಯಾಸವನ್ನು ಮಾಡಿಕೊಳ್ಳಬಾರದು.

ವರದಾನ:
ವಿಶ್ವ ಕಲ್ಯಾಣದ ಕಾರ್ಯದಲ್ಲಿ ಸದಾ ವ್ಯಸ್ತವಾಗಿರುವಂತಹ ವಿಶ್ವದ ಆಧಾರಮೂರ್ತಿ ಭವ

ವಿಶ್ವ ಕಲ್ಯಾಣಕಾರಿ ಮಕ್ಕಳು ಸ್ವಪ್ನದಲ್ಲಿಯೂ ಸಹ ಫ್ರೀ ಯಾಗಿರುವುದಿಲ್ಲ. ಅವರು ದಿನ-ರಾತ್ರಿ ಸೇವೆಯಲ್ಲಿ ವ್ಯಸ್ತವಾಗಿರುತ್ತಾರೆ. ಅವರು ಸ್ವಪ್ನದಲ್ಲಿಯೂ ಸಹ ಯಾವುದಾದರೂ ಹೊಸ-ಹೊಸ ಮಾತು, ಸೇವಯ ಪ್ಲಾನ್ ಹಾಗೂ ರೀತಿಗಳು ಕಾಣುತ್ತಿರುತ್ತವೆ. ಅವರು ಸೇವೆಯಲ್ಲಿ ವ್ಯಸ್ತವಾಗಿರುವ ಕಾರಣ ಅವರ ಪುರುಷಾರ್ಥದಲ್ಲಿ ವ್ಯರ್ಥದಿಂದ ಹಾಗೂ ಅನ್ಯರ ವ್ಯರ್ಥದಿಂದ ಸದಾ ಸುರಕ್ಷಿತರಾಗಿರುತ್ತಾರೆ. ಅವರ ಎದುರು ಸದಾ ಬೇಹದ್ದಿನ ವಿಶ್ವದ ಆತ್ಮಗಳು ಸದಾ ಕಂಡುಬರುತ್ತಿರುತ್ತಾರೆ. ಅವರಲ್ಲಿ ಸ್ವಲ್ಪವಾದರೂ ಸಹ ಬೇಜವಾಬ್ದಾರಿತನ ಕಂಡುಬರುವುದಿಲ್ಲ. ಇಂತಹ ಸೇವಾಧಾರಿ ಮಕ್ಕಳಿಗೆ ಆಧಾರಮೂರ್ತಿಗಳಾಗುವ ವರದಾನ ಪ್ರಾಪ್ತಿಯಾಗಿಬಿಡುತ್ತದೆ.

ಸ್ಲೋಗನ್:
ಸಂಗಮಯುಗದ ಒಂದೊಂದು ಸೆಕಂಡ್ ಕೂಡಾ ವರ್ಷದ ಸಮಾನವಾಗಿದೆ. ಆದ್ದರಿಂದ ಹುಡುಗಾಟಿಕಯಲ್ಲಿ ಸಮಯವನ್ನು ಕಳೆಯಬೇಡಿ.

ಅವ್ಯಕ್ತ ಸೂಚನೆ: ಕಂಬೈಂಡ್ ರೂಪದ ಸ್ಮೃತಿಯಿಂದ ಸದಾ ವಿಜಯಿಯಾಗಿರಿ

ಯಾರ ಜೊತೆ ಸ್ವಯಂ ಸರ್ವ ಶಕ್ತಿವಂತ ತಂದೆ ಕಂಬೈಂಡ್ ಆಗಿದ್ದಾರೆ, ಸರ್ವ ಶಕ್ತಿಗಳು ಸ್ವತಃ ಅವರ ಜೊತೆಯಿರುತ್ತವೆ. ಎಲ್ಲಿ ಸರ್ವ ಶಕ್ತಿಗಳಿವೆ, ಅಲ್ಲಿ ಸಫಲತೆಯಿರುತ್ತದೆ, ಇದು ಅಸಂಭವವಿದೆ. ಯಾರೇ ಒಳ್ಳೆಯ ಜೊತೆಗಾರರು ಲೌಕಿಕದಲ್ಲಿಯೂ ಸಿಕ್ಕಿದರೆ ಅವರನ್ನು ಬಿಡುವುದಕ್ಕೆ ಸಾಧ್ಯವಿಲ್ಲ. ಇವರಂತು ಅವಿನಾಶಿ ಜೊತೆಗಾರರಾಗಿದ್ದಾರೆ. ಎಂದೂ ಮೋಸ ಮಾಡುವಂತಹ ಜೊತೆಗಾರರಲ್ಲ. ಸದಾ ಜೊತೆ ನಿಭಾಯಿಸುವಂತಹ ಜೊತೆಗಾರರಾಗಿದ್ದಾರೆ, ಸದಾ ಜೊತೆ-ಜೊತೆಯಿರಿ.