15.06.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ಮಾಯಾಜೀತರಾಗಲು ತಪ್ಪು ಮಾಡುವುದನ್ನು ಬಿಡಿ, ದುಃಖವನ್ನು ಕೊಡುವುದು ಮತ್ತು ದುಃಖವನ್ನು ತೆಗೆದುಕೊಳ್ಳುವುದು ಇದು ಬಹಳ ದೊಡ್ಡ ತಪ್ಪಾಗಿದೆ, ಇದನ್ನು ನೀವು ಮಕ್ಕಳು ಮಾಡಬಾರದು”

ಪ್ರಶ್ನೆ:
ತಂದೆಗೆ ನಾವೆಲ್ಲಾ ಮಕ್ಕಳ ಪ್ರತಿ ಯಾವ ಒಂದು ಆಸೆಯಿದೆ?

ಉತ್ತರ:
ತಂದೆಯ ಆಸೆಯೇನೆಂದರೆ ನನ್ನ ಎಲ್ಲಾ ಮಕ್ಕಳು ನನ್ನ ಸಮಾನ ಸದಾ ಪಾವನರಾಗಲಿ, ತಂದೆಯು ಸದಾ ಸುಂದರನಾಗಿದ್ದಾರೆ, ಅವರು ಮಕ್ಕಳನ್ನು ಕಪ್ಪಾಗಿದ್ದವರನ್ನು ಸುಂದರರನ್ನಾಗಿ ಮಾಡಲು ಬಂದಿದ್ದಾರೆ, ಮಾಯೆಯು ಕಪ್ಪಾಗಿ (ಪತಿತ) ಮಾಡಿಬಿಡುತ್ತದೆ. ತಂದೆಯು ಸುಂದರರನ್ನಾಗಿ ಮಾಡುತ್ತಾರೆ. ಲಕ್ಷ್ಮೀ-ನಾರಾಯಣರು ಸುಂದರ-ಪಾವನರಾಗಿದ್ದಾರೆ ಆದ್ದರಿಂದಲೇ ಕಪ್ಪು, ಪತಿತ ಮನುಷ್ಯರೇ ಹೋಗಿ ಅವರ ಮಹಿಮೆ ಮಾಡುತ್ತಾರೆ, ತಮ್ಮನ್ನು ನೀಚರೆಂದು ತಿಳಿಯುತ್ತಾರೆ. ತಂದೆಯ ಶ್ರೀಮತವು ಈಗ ಸಿಗುತ್ತದೆ. ಮಧುರ ಮಕ್ಕಳೇ, ಸುಂದರ ಸತೋಪ್ರಧಾನರಾಗುವ ಪುರುಷಾರ್ಥ ಮಾಡಿ.

ಓಂ ಶಾಂತಿ.
ತಂದೆಯು ಏನು ಮಾಡುತ್ತಿದ್ದಾರೆ ಮತ್ತು ಮಕ್ಕಳು ಏನು ಮಾಡುತ್ತಿದ್ದಾರೆ? ಮಕ್ಕಳು ತಿಳಿದುಕೊಂಡಿದ್ದೀರಿ ಮತ್ತು ತಂದೆಗೂ ತಿಳಿದಿದೆ - ಆತ್ಮವು ಯಾವುದು ತಮೋಪ್ರಧಾನವಾಗಿಬಿಟ್ಟಿದೆಯೋ ಅದನ್ನು ಸತೋಪ್ರಧಾನ ಮಾಡಿಕೊಳ್ಳಬೇಕು. ಯಾವುದನ್ನು ಚಿನ್ನದ ಸಮಾನ ಎಂದು ಹೇಳಲಾಗುತ್ತದೆ. ತಂದೆಯು ಆತ್ಮರನ್ನು ನೋಡುತ್ತಾರೆ. ನಮ್ಮ ಆತ್ಮವು ಕಪ್ಪಾಗಿಬಿಟ್ಟಿದೆ ಎಂದೂ ಆತ್ಮಕ್ಕೆ ವಿಚಾರ ಬರುತ್ತದೆ. ಆತ್ಮದ ಕಾರಣ ಮತ್ತೆ ಶರೀರವು ಕಪ್ಪಾಗಿಬಿಟ್ಟಿದೆ. ಲಕ್ಷ್ಮೀ-ನಾರಾಯಣನ ಮಂದಿರದಲ್ಲಿ ಹೋದಾಗ ಮೊದಲಂತೂ ಏನೂ ಜ್ಞಾನವಿರುವುದಿಲ್ಲ. ಇವರಂತೂ ಸರ್ವಗುಣ ಸಂಪನ್ನರಾಗಿದ್ದಾರೆ, ಸುಂದರರಾಗಿದ್ದಾರೆ, ನಾವು ಕಪ್ಪು ಭೂತಗಳಾಗಿದ್ದೇವೆ ಎಂದು ಕೇವಲ ನೋಡುತ್ತಿದ್ದೆವು ಆದರೆ ಜ್ಞಾನವಿರಲಿಲ್ಲ. ಈಗಂತೂ ಲಕ್ಷ್ಮೀ-ನಾರಾಯಣನ ಮಂದಿರದಲ್ಲಿ ಹೋಗುತ್ತೇವೆಂದರೆ ಮೊದಲು ನಾವು ಇಂತಹ ಸರ್ವಗುಣ ಸಂಪನ್ನರಾಗಿದ್ದೆವು, ಈಗ ಪತಿತ ಕಪ್ಪಾಗಿಬಿಟ್ಟಿದ್ದೇವೆಂದು ತಿಳಿಯುತ್ತೇವೆ. ನಾವು ವಿಕಾರಿಗಳು, ಪಾಪಿಗಳಾಗಿದ್ದೇವೆಂದು ಅವರ ಮುಂದೆ ಹೇಳುತ್ತಾರೆ. ವಿವಾಹವಾದಾಗ ಮೊದಲು ಲಕ್ಷ್ಮೀ-ನಾರಾಯಣನ ಮಂದಿರಕ್ಕೆ ಕರೆದುಕೊಂಡು ಹೋಗುತ್ತಾರೆ. ಇಬ್ಬರೂ ಮೊದಲು ನಿರ್ವಿಕಾರಿಗಳಾಗಿರುತ್ತಾರೆ ನಂತರ ವಿಕಾರಿಗಳಾಗುತ್ತಾರೆ ಆದ್ದರಿಂದ ನಿರ್ವಿಕಾರಿ ದೇವತೆಗಳ ಮುಂದೆಹೋಗಿ ತಮ್ಮನ್ನು ವಿಕಾರಿ ಪತಿತರೆಂದುಹೇಳಿಕೊಳ್ಳುತ್ತಾರೆ. ವಿವಾಹಕ್ಕೆ ಮುಂಚೆ ಈ ರೀತಿ ಹೇಳಿಕೊಳ್ಳುವುದಿಲ್ಲ. ವಿಕಾರದಲ್ಲಿ ಹೋಗುವುದರಿಂದಲೇ ಮಂದಿರದಲ್ಲಿ ಹೋಗಿ ಅವರ ಮಹಿಮೆ ಮಾಡುತ್ತಾರೆ. ಇತ್ತೀಚೆಗಂತೂ ಲಕ್ಷ್ಮೀ-ನಾರಾಯಣನ ಮಂದಿರದಲ್ಲಿ, ಶಿವನ ಮಂದಿರದಲ್ಲಿಯೂ ವಿವಾಹಗಳು ನಡೆಯುತ್ತವೆ. ಪತಿತರಾಗಲು ಕಂಕಣ ಕಟ್ಟಿಕೊಳ್ಳುತ್ತಾರೆ, ಈಗ ನೀವು ಸುಂದರರಾಗಲು ಕಂಕಣ ಕಟ್ಟಿಕೊಳ್ಳುತ್ತೀರಿ ಆದ್ದರಿಂದ ಸುಂದರ ರನ್ನಾಗಿ ಮಾಡುವ ಶಿವತಂದೆಯನ್ನು ನೆನಪು ಮಾಡುತ್ತೀರಿ. ಈ ರಥದ ಭೃಕುಟಿಯ ಮಧ್ಯದಲ್ಲಿ ಶಿವತಂದೆಯಿದ್ದಾರೆ. ಅವರು ಸದಾ ಸುಂದರರಾಗಿದ್ದಾರೆಂದು ನಿಮಗೆ ತಿಳಿದಿದೆ. ಆ ತಂದೆಗೆ ಇದೇ ಆಸೆಯಿರುತ್ತದೆ- ಮಕ್ಕಳು ನನ್ನಂತೆ ಪಾವನ ಸುಂದರರಾಗಲಿ, ನನ್ನೊಬ್ಬನನ್ನು ನೆನಪು ಮಾಡಿ ಪವಿತ್ರರಾಗಿಬಿಡಲಿ. ತಂದೆಯನ್ನು ಆತ್ಮವೇ ನೆನಪು ಮಾಡಬೇಕಾಗಿದೆ. ಮಕ್ಕಳು ನೋಡಿ-ನೋಡಿ ತಿಳಿಯುತ್ತೀರಿ - ನಾವೂ ಪವಿತ್ರರಾಗಬೇಕು. ನಂತರ ನಾವು ಈ ರೀತಿ ಲಕ್ಷ್ಮೀ-ನಾರಾಯಣರಾಗುತ್ತೇವೆ. ಈ ಗುರಿ-ಉದ್ದೇಶವನ್ನು ಮಕ್ಕಳು ಬಹಳ ಎಚ್ಚರಿಕೆಯಿಂದ ನೆನಪಿಡಬೇಕು. ತಂದೆಯ ಬಳಿ ಬಂದಿದ್ದೇವೆ, ಇಷ್ಟೆ ಸಾಕು ಮತ್ತೆ ಅಲ್ಲಿ ಹೋದಮೇಲೆ ತಮ್ಮದೇ ಉದ್ಯೋಗ - ವ್ಯವಹಾರಗಳಲ್ಲಿ ಪೂರ್ಣ ತತ್ಪರರಾಗಿಬಿಡುವುದಲ್ಲ ಆದ್ದರಿಂದ ಇಲ್ಲಿ ಸನ್ಮುಖದಲ್ಲಿ ಕುಳಿತು ತಂದೆಯು ಮಕ್ಕಳಿಗೆ ತಿಳಿಸಿಕೊಡುತ್ತಾರೆ - ಭೃಕುಟಿಯ ಮಧ್ಯೆ ಆತ್ಮವಿರುತ್ತದೆ. ಇದು ಅಕಾಲ ಆತ್ಮನ ಸಿಂಹಾಸನವಾಗಿದೆ. ಈ ಆತ್ಮ ನನ್ನ ಮಗುವಾಗಿದೆ. ಅದು ಈ ಸಿಂಹಾಸನದ ಮೇಲೆ ಕುಳಿತಿದೆ. ಸ್ವತಃ ಆತ್ಮವೂ ತಮೋಪ್ರಧಾನವಾಗಿರುವುದರಿಂದ ಸಿಂಹಾಸನವೂ ತಮೋಪ್ರಧಾನವಾಗಿದೆ. ಇವು ಬಹಳ ಚೆನ್ನಾಗಿ ತಿಳಿದುಕೊಳ್ಳುವ ಮಾತಾಗಿದೆ. ಈ ರೀತಿ ಲಕ್ಷ್ಮೀ-ನಾರಾಯಣರಾಗುವುದು ಯಾವುದೇ ಚಿಕ್ಕಮ್ಮನ ಮನೆಯಂತಲ್ಲ. ಈಗ ನೀವು ತಿಳಿಯುತ್ತೀರಿ- ನಾವು ಇವರ ತರಹ ಆಗುತ್ತಿದ್ದೇವೆಂದು ಆತ್ಮವು ಪವಿತ್ರವಾಗಿಯೇ ಹೋಗುವುದು, ಅದರ ನಂತರ ದೇವಿ-ದೇವತೆಗಳೆಂದು ಕರೆಸಿಕೊಳ್ಳುತ್ತೀರಿ. ನಾವು ಇಂತಹ ಸ್ವರ್ಗದ ಮಾಲೀಕರಾಗುತ್ತೇವೆ, ಆದರೆ ಮಾಯೆಯು ಎಲ್ಲವನ್ನೂ ಮರೆಸಿಬಿಡುತ್ತದೆ. ಇಲ್ಲಿ ಕೇಳಿ ಮತ್ತೆ ಹೊರಗೆ ಹೋಗುತ್ತಾರೆಂದರೆ ನಂತರ ಮರೆತುಹೋಗುತ್ತಾರೆ. ತಂದೆಯೂ ಬಹಳ ಚೆನ್ನಾಗಿ ಪಕ್ಕಾ ಮಾಡಿಸುತ್ತಾರೆ- ತಮ್ಮನ್ನು ನೋಡಿಕೊಳ್ಳಬೇಕು, ಈ ದೇವತೆಗಳಲ್ಲಿ ಎಷ್ಟು ಗುಣಗಳಿವೆಯೋ ಅವನ್ನು ಶ್ರೀಮತದಂತೆ ನಡೆದು ನಾವು ಧಾರಣೆ ಮಾಡಿಕೊಂಡಿದ್ದೇವೆಯೇ? ಚಿತ್ರಗಳೂ ಸನ್ಮುಖದಲ್ಲಿದೆ. ನಿಮಗೆ ಗೊತ್ತಿದೆ, ನಾವು ಈ ರೀತಿಯಾಗಬೇಕು, ತಂದೆಯೇ ಮಾಡುತ್ತಾರೆ. ಅನ್ಯ ಯಾರೂ ಮನುಷ್ಯರಿಂದ ದೇವತೆಗಳನ್ನಾಗಿ ಮಾಡುವುದಿಲ್ಲ, ಒಬ್ಬ ತಂದೆಯು ಮಾಡುತ್ತಾರೆ. ಅನ್ಯ ಯಾರೂ ಮನುಷ್ಯರಿಂದ ದೇವತೆಗಳನ್ನಾಗಿ ಮಾಡುವುದಿಲ್ಲ, ಒಬ್ಬ ತಂದೆಯು ಮಾಡುವವರಾಗಿದ್ದಾರೆ. ಮನುಷ್ಯರಿಂದ ದೇವತೆಗಳನ್ನಾಗಿಮಾಡಿದರೆಂದು ಗಾಯನವೂ ಇದೆ. ನಿಮ್ಮಲ್ಲಿಯೂ ನಂಬರ್ವಾರ್ ತಿಳಿದುಕೊಂಡಿದ್ದೀರಿ. ಈ ಮಾತುಗಳು ಭಕ್ತರಿಗೆ ಗೊತ್ತಿಲ್ಲ, ಎಲ್ಲಿಯವರೆಗೆ ಭಗವಂತನ ಶ್ರೀಮತವನ್ನು ತೆಗೆದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಏನೂ ಅರ್ಥವಾಗುವುದಿಲ್ಲ. ನೀವು ಮಕ್ಕಳು ಈಗ ಶ್ರೀಮತವನ್ನೇ ತೆಗೆದುಕೊಳ್ಳುತ್ತಿದ್ದೀರಿ. ಇದನ್ನು ಬಹಳ ಚೆನ್ನಾಗಿ ಬುದ್ಧಿಯಲ್ಲಿಡಿ - ನಾವು ಶಿವತಂದೆಯ ಮತದಂತೆ ಅವರನ್ನು ನೆನಪು ಮಾಡುತ್ತಾ-ಮಾಡುತ್ತಾ ಈ ರೀತಿಯಾಗುತ್ತಿದ್ದೇವೆ. ನೆನಪಿನಿಂದಲೇ ಪಾಪಗಳು ಭಸ್ಮವಾಗುತ್ತವೆ, ಮತ್ತ್ಯಾವುದೇ ಉಪಾಯವಿಲ್ಲ.

ಲಕ್ಷ್ಮೀ-ನಾರಾಯಣರಂತೂ ಸುಂದರರಾಗಿದ್ದಾರಲ್ಲವೆ. ಮಂದಿರಗಳಲ್ಲಿ ಅವರನ್ನು ಕಪ್ಪಾಗಿ ತೋರಿಸಿದ್ದಾರೆ. ರಘುನಾಥ ಮಂದಿರದಲ್ಲಿ ರಾಮನನ್ನು ಕಪ್ಪಾಗಿ ಮಾಡಿದ್ದಾರೆ, ಏಕೆ? ಯಾರಿಗೂ ಗೊತ್ತಿಲ್ಲ. ಎಷ್ಟು ಚಿಕ್ಕ ಮಾತಾಗಿದೆ. ರಾಮನಂತೂ ತ್ರೇತಾಯುಗದವರಾಗಿದ್ದಾರೆ, ಸತ್ಯಯುಗದಿಂದ ತ್ರೇತಾಯುಗಕ್ಕೆ ಸ್ವಲ್ಪ ಅಂತರವಾಗಿಬಿಡುತ್ತದೆ. 2 ಕಲೆಗಳು ಕಡಿಮೆಯಾಯಿತಲ್ಲವೆ. ತಂದೆಯು ತಿಳಿಸುತ್ತಾರೆ ಪ್ರಾರಂಭದಲ್ಲಿ ಇವರೇ ಇಷ್ಟು ಸತೋಪ್ರಧಾನ, ಸುಂದರರಾಗಿದ್ದರು. ಪ್ರಜೆಗಳೂ ಸತೋಪ್ರಧಾನರಾಗಿಬಿಡುತ್ತಾರೆ ಆದರೆ ಶಿಕ್ಷೆಗಳನ್ನು ಅನುಭವಿಸಿ ಆಗುತ್ತಾರೆ. ಎಷ್ಟು ಹೆಚ್ಚಿನ ಶಿಕ್ಷೆಯೋ ಅಷ್ಟು ಕಡಿಮೆ ಪದವಿಯಾಗಿಬಿಡುತ್ತದೆ. ಪರಿಶ್ರಮ ಪಡದಿದ್ದರೆ ಪಾಪಗಳು ಪರಿಹಾರವಾಗುವುದಿಲ್ಲ. ಪದವಿಯು ಕಡಿಮೆಯಾಗಿಬಿಡುತ್ತದೆ. ತಂದೆಯು ಸ್ಪಷ್ಟಮಾಡಿ ತಿಳಿಸುತ್ತಾರೆ- ನೀವಿಲ್ಲಿ ಸುಂದರರಾಗಲು ಕುಳಿತಿದ್ದೀರಿ ಆದರೆ ಮಾಯೆಯು ಬಹಳ ದೊಡ್ಡ ಶತ್ರುವಾಗಿದೆ, ಇದು ಕಪ್ಪಾಗಿ ಮಾಡಿದೆ. ಈಗ ಸುಂದರರನ್ನಾಗಿ ಮಾಡಲು ಬಂದಿದ್ದಾರೆಂದರೆ ಮಾಯೆಯೂ ನೋಡುತ್ತದೆ, ಎದುರಿಸುತ್ತದೆ. ತಂದೆಯು ತಿಳಿಸುತ್ತಾರೆ- ಇದಂತೂ ನಾಟಕದನುಸಾರ ಅರ್ಧಕಲ್ಪದ ಪಾತ್ರವನ್ನು ಮಾಯೆಯು ಅಭಿನಯಿಸಬೇಕಾಗಿದೆ. ಮಾಯೆಯು ಪದೇ-ಪದೇ ಮುಖವನ್ನು ತಿರುಗಿಸಿ ಮತ್ತೊಂದುಕಡೆ ತೆಗೆದುಕೊಂಡು ಹೋಗುತ್ತದೆ. ಬಾಬಾ, ನಮಗೆ ಮಾಯೆಯು ಬಹಳ ತೊಂದರೆ ಕೊಡುತ್ತದೆ ಎಂದು ಬರೆಯುತ್ತಾರೆ. ಅದಕ್ಕೆ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಇದೇ ಯುದ್ಧವಾಗಿದೆ. ನೀವು ಸುಂದರರಿಂದ ಕಪ್ಪು ಮತ್ತು ಕಪ್ಪಾಗಿದ್ದವರು ಸುಂದರರಾಗುತ್ತೀರಿ. ಇದೊಂದು ಆಟವಾಗಿದೆ. ಯಾರು ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡಿರುವರೋ ಅವರಿಗೇ ತಿಳಿಸುತ್ತೇನೆ. ಅವರ ಜನ್ಮವು ಭಾರತದಲ್ಲಿಯೇ ಆಗುತ್ತದೆ ಅಂದರೆ ಭಾರತದಲ್ಲಿ ಎಲ್ಲರೂ 84 ಜನ್ಮಗಳನ್ನೇ ತೆಗೆದುಕೊಳ್ಳುವವರಿದ್ದಾರೆಂದಲ್ಲ.

ಈಗ ನೀವು ಮಕ್ಕಳ ಈ ಸಮಯವು ಬಹಳ ಅಮೂಲ್ಯವಾದದ್ದಾಗಿದೆ. ನಾವು ಈ ರೀತಿಯಾಗಬೇಕೆಂದು ಪೂರ್ಣ ಪುರುಷಾರ್ಥ ಮಾಡಬೇಕು. ತಂದೆಯೂ ಸಹ ಇದನ್ನು ತಿಳಿಸಿದ್ದಾರೆ- ಮಕ್ಕಳೇ, ಕೇವಲ ನನ್ನನ್ನು ನೆನಪು ಮಾಡಿ ಮತ್ತು ದೈವೀಗುಣಗಳನ್ನು ಧಾರಣೆ ಮಾಡಿ, ಯಾರಿಗೂ ದುಃಖವನ್ನು ಕೊಡಬಾರದು. ತಂದೆ ಹೇಳುತ್ತಾರೆ ಮಕ್ಕಳೇ ಈಗ ಇಂತಹ ತಪ್ಪನ್ನು ಮಾಡಬೇಡಿ, ಬುದ್ಧಿಯೋಗವನ್ನು ಒಬ್ಬ ತಂದೆಯಲ್ಲಿಡಿ. ಜನ್ಮ-ಜನ್ಮಾಂತರದಿಂದ ನೀವು ಪ್ರತಿಜ್ಞೆಯನ್ನು ಮಾಡುತ್ತಾ ಬಂದಿದ್ದೀರಿ. ಬಾಬಾ, ತಾವು ಬಂದರೆ ನಾವು ತಮಗೆ ಪೂರ್ಣ ಬಲಿಹಾರಿಯಾಗಿಬಿಡುತ್ತೇವೆ. ತಮ್ಮ ಮತದಂತೆಯೇ ನಡೆಯುತ್ತೇವೆಂದು ಹೇಳುತ್ತಲೇ ಬಂದಿದ್ದೀರಿ. ಒಂದುವೇಳೆ ನಿಮ್ಮ ಸಂಗಾತಿಯು ನಿಮಗೆ ಸಹಯೋಗ ಕೊಡುವುದಿಲ್ಲವೆಂದರೆ ನೀವು ನಿಮ್ಮ ಪುರುಷಾರ್ಥ ಮಾಡಿ. ಇಲ್ಲಿ ನಿಮ್ಮ ಸಂಗಾತಿಯು ಸಹಯೋಗ ಕೊಡದಿದ್ದರೆ ಜೋಡಿಯಾಗುವುದಿಲ್ಲ. ಯಾರೆಷ್ಟು ನೆನಪು ಮಾಡಿರುವಿರೋ, ದೈವೀಗುಣಗಳನ್ನು ಧಾರಣೆ ಮಾಡಿರುವರೋ ಅವರದೇಜೋಡಿಯಾಗುತ್ತದೆ ಅಂದರೆ ಸಮಾನ ಪುರುಷಾರ್ಥ ಮಾಡಿದಾಗ ಮಾತ್ರ ಜೋಡಿಯಾಗಲು ಸಾಧ್ಯ. ಹೇಗೆ ನೋಡಿ, ಬ್ರಹ್ಮಾ-ಸರಸ್ವತಿಯೂ ಸಹ ಒಳ್ಳೆಯ ಪುರುಷಾರ್ಥ ಮಾಡಿದ್ದರಿಂದ ಅವರು ಜೋಡಿಯಾಗುತ್ತಾರೆ. ಇವರು ಬಹಳ ಒಳ್ಳೆಯ ಸೇವೆ ಮಾಡುತ್ತಾರೆ, ನೆನಪಿನಲ್ಲಿರುತ್ತಾರೆ. ಇವೂ ಗುಣಗಳಲ್ಲವೆ! ಪಾಂಡವರಲ್ಲಿಯೂ ಒಳ್ಳೊಳ್ಳೆಯ ಮಕ್ಕಳಿದ್ದಾರೆ. ಬಾಬಾ, ನಮಗೆ ಮಾಯೆಯ ಆಕರ್ಷಣೆಯಾಗುತ್ತದೆ. ಈ ಬಂಧನವು ತುಂಡಾಗುವುದೇ ಇಲ್ಲ. ಪದೇ-ಪದೇ ನಾಮ-ರೂಪದಲ್ಲಿ ಸಿಕ್ಕಿಹಾಕಿಸುತ್ತದೆಯೆಂದು ತಾವು ತಿಳಿಯುತ್ತಾರೆ. ಅದಕ್ಕೆ ತಂದೆಯು ತಿಳಿಸುತ್ತಾರೆ- ಮಕ್ಕಳೇ, ನಾಮ-ರೂಪದಲ್ಲಿ ಸಿಕ್ಕಿಕೊಳ್ಳಬೇಡಿ ಅರ್ಥಾತ್ ಮೋಹಿತರಾಗಬೇಡಿ. ನನ್ನಲ್ಲಿ ಮೋಹಿತರಾಗಿ. ಹೇಗೆ ನೀವು ನಿರಾಕಾರಿಯಾಗಿದ್ದೀರಿ, ನಾನೂ ನಿರಾಕಾರನಾಗಿದ್ದೇನೆ. ನಿಮ್ಮನ್ನು ನನ್ನ ಸಮಾನರನ್ನಾಗಿ ಮಾಡಿಕೊಳ್ಳುತ್ತೇನೆ. ಶಿಕ್ಷಕರು ತಮ್ಮ ಸಮಾನ ಮಾಡುತ್ತಾರಲ್ಲವೆ, ವೈದ್ಯರು ವೈದ್ಯರನ್ನಾಗಿ ಮಾಡುತ್ತಾರೆ ಹಾಗೆಯೇ ಇವರಂತೂ ಬೇಹದ್ದಿನ ತಂದೆಯಾಗಿದ್ದಾರಲ್ಲವೆ. ಅವರ ಹೆಸರು ಪ್ರಸಿದ್ಧವಾಗಿದೆ. ಹೇಗೆ ಪತಿತ-ಪಾವನ ಬನ್ನಿ ಎಂದು ಕರೆಯುತ್ತದೆ. ಆತ್ಮ ಕರೆಯುತ್ತಿದೆ ಶರೀರದಮೂಲಕ ಬಾಬಾ ಬಂದು ನಮ್ಮನ್ನು ಪಾವನಮಾಡಿ ನಾವು ಹೇಗೆ ಪಾವನರಾಗುತ್ತಿದ್ದೇವೆಂದು ನಿಮಗೂ ಗೊತ್ತಿದೆ. ಹೇಗೆ ವಜ್ರದಲ್ಲಿ ಕೆಲವು ಕಪ್ಪುಕಲೆಗಳಿರುತ್ತವೆ ಹಾಗೆಯೇ ಆತ್ಮದಲ್ಲಿಯೂ ಲೋಹವು ಬೆರಕೆಯಾಗಿದೆ ಅದನ್ನು ತೆಗೆದು ಮತ್ತೆ ಸತ್ಯಚಿನ್ನವಾಗುತ್ತಾರೆ. ಆತ್ಮವು ಬಹಳ ಪವಿತ್ರವಾಗಬೇಕಾಗಿದೆ. ನಿಮ್ಮ ಗುರಿ-ಉದ್ದೇಶವು ಬಹಳ ಸ್ಪಷ್ಟವಾಗಿದೆ. ಅನ್ಯಸತ್ಸಂಗಗಲ್ಲಿ ಈ ರೀತಿ ಹೇಳಲು ಸಾಧ್ಯವಿಲ್ಲ.

ತಂದೆಯು ತಿಳಿಸುತ್ತಾರೆ- ಈ ರೀತಿ ಶ್ರೇಷ್ಠರಾಗುವುದೇ ನಿಮ್ಮ ಉದ್ದೇಶವಾಗಿದೆ. ಇದು ನಿಮಗೂ ಗೊತ್ತಿದೆ, ನಾಟಕದನುಸಾರ ನಾವು ಅರ್ಧಕಲ್ಪ ರಾವಣನ ಸಂಗದಲ್ಲಿ ವಿಕಾರಿಗಳಾಗಿದ್ದೇವೆ, ಈಗ ದೇವಿ-ದೇವತೆಗಳಾಗಬೇಕಾಗಿದೆ, ನಿಮ್ಮ ಬಳಿ ಬ್ಯಾಡ್ಜ್ ಇದೆ. ಇದರ ಬಗ್ಗೆ ತಿಳಿಸುವುದು ಬಹಳ ಸಹಜ. ಇವರು ತ್ರಿಮೂರ್ತಿಗಳಾಗಿದ್ದಾರೆ. ಬ್ರಹ್ಮಾರವರ ಮೂಲಕ ಸ್ಥಾಪನೆ ಆದರೆ ಬ್ರಹ್ಮನಂತೂ ಮಾಡುವುದಿಲ್ಲ. ಅವರು ಪತಿತರಿಂದ ಪಾವನರಾಗುತ್ತಾರೆ. ಈ ಪತಿತರೇ ಮತ್ತೆ ಪಾವನರಾಗುತ್ತಾರೆಂದು ಮನುಷ್ಯರಿಗೆ ಗೊತ್ತಿಲ್ಲ. ಈಗ ನೀವು ಮಕ್ಕಳು ತಿಳಿಯುತ್ತೀರಿ- ವಿದ್ಯಾಭ್ಯಾಸದ ಗುರಿಯು ಬಹಳ ಉನ್ನತವಾಗಿದೆ. ತಂದೆಯು ಓದಿಸುವುದಕ್ಕೆ ಬರುತ್ತಾರೆ. ಜ್ಞಾನವಂತೂ ತಂದೆಯಲ್ಲಿಯೇ ಇದೆ ಆದರೆ ಅವರು ಯಾರಿಂದಲೂ ಓದಿಲ್ಲ. ನಾಟಕದ ಯೋಜನೆಯನುಸಾರ ಅವರಲ್ಲಿ ಜ್ಞಾನವಿದೆ. ಇವರಲ್ಲಿ ಜ್ಞಾನವೆಲ್ಲಿಂದ ಬಂದಿತು ಎಂದು ಹೇಳುವಂತಿಲ್ಲ ಅವರೇ ಜ್ಞಾನಪೂರ್ಣನಾಗಿದ್ದಾರೆ. ಅವರೇ ನಿಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡುತ್ತಾರೆ ಮನುಷ್ಯರು ಪಾವನರಾಗುವುದಕ್ಕಾಗಿ ಗಂಗೆಯಲ್ಲಿ ಸ್ನಾನ ಮಾಡುತ್ತಲೇ ಇರುತ್ತಾರೆ. ಸಮುದ್ರದಲ್ಲಿಯೂ ಸ್ನಾನ ಮಾಡುತ್ತಾರೆ ಮತ್ತೆ ಪೂಜೆಯನ್ನೂ ಮಾಡುತ್ತಾರೆ ಸಾಗರ ದೇವತೆಯೆಂದು ತಿಳಿಯುತ್ತಾರೆ. ವಾಸ್ತವದಲ್ಲಿ ಈ ಹರಿಯುವ ನದಿಗಳು ಇದ್ದೇ ಇರುತ್ತವೆ, ಎಂದೂ ವಿನಾಶ ಹೊಂದುವುದಿಲ್ಲ. ಬಾಕಿ ಮೊದಲು ಇವು ಆಜ್ಞೆಯಂತೆಯೇ ನಡೆಯುತ್ತಿದ್ದವು. ಪ್ರವಾಹಗಳ ಮಾತಿರಲಿಲ್ಲ. ಮನುಷ್ಯರೆಂದೂ ನೀರಿನಲ್ಲಿ ಮುಳುಗಿಹೋಗುತ್ತಿರಲಿಲ್ಲ. ಸತ್ಯಯುಗದಲ್ಲಂತೂ ಕೆಲವರೇ ಮನುಷ್ಯರಿದ್ದರು ನಂತರ ವೃದ್ಧಿಯನ್ನು ಹೊಂದುತ್ತಾ ಇರುತ್ತಾರೆ. ಕಲಿಯುಗದ ಅಂತ್ಯದವರೆಗೆ ಎಷ್ಟೊಂದು ಜನಸಂಖ್ಯೆಯಾಗಿಬಿಡುತ್ತದೆ. ಅಲ್ಲಂತೂ ಬಹಳ ಧೀರ್ಘಾಯಸ್ಸಿರುತ್ತದೆ. ಕಡಿಮೆ ಮನುಷ್ಯರಿರುತ್ತಾರೆ ನಂತರ 2500 ವರ್ಷಗಳಲ್ಲಿ ಎಷ್ಟೊಂದು ವೃದ್ಧಿಯಾಗಿಬಿಡುತ್ತದೆ. ವೃಕ್ಷದ ಎಷ್ಟೊಂದು ವಿಸ್ತಾರವಾಗುತ್ತದೆ. ಮೊಟ್ಟಮೊದಲು ಭಾರತದಲ್ಲಿ ಕೇವಲ ನಮ್ಮದೇ ರಾಜ್ಯವಿತ್ತು. ನೀವು ಈ ರೀತಿ ಹೇಳುತ್ತೀರಿ. ನಿಮ್ಮಲ್ಲಿಯೂ ಕೆಲವರಿಗೆ ನಾವು ನಮ್ಮ ರಾಜ್ಯಸ್ಥಾಪನೆ ಮಾಡುತ್ತಿದ್ದೇವೆ ಎಂದು ನೆನಪಿರುತ್ತದೆ. ನಾವು ಆತ್ಮಿಕ ಯೋಧರು ಯೋಗಬಲದವರು ಎಂದು ಕೆಲವರು ಮರೆತುಹೋಗುತ್ತಾರೆ. ನಾವು ಮಾಯೆಯೊಂದಿಗೆ ಯುದ್ಧ ಮಾಡುವವರಾಗಿದ್ದೇವೆ. ಈಗ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಎಷ್ಟು ತಂದೆಯನ್ನು ನೆನಪು ಮಾಡುತ್ತೇವೋ ಅಷ್ಟು ವಿಜಯಿಗಳಾಗುತ್ತೇವೆ, ಈ ರೀತಿಯಾಗುವುದೇ ನಮ್ಮ ಗುರಿ-ಉದ್ದೇಶವಾಗಿದೆ. ಇವರ ಮೂಲಕ ತಂದೆಯು ನಮ್ಮನ್ನು ಇಂತಹ ದೇವತೆಗಳನ್ನಾಗಿ ಮಾಡುತ್ತಾರೆ ಅಂದಮೇಲೆ ಮತ್ತೆ ಇನ್ನೇನು ಮಾಡಬೇಕು? ತಂದೆಯನ್ನು ನೆನಪು ಮಾಡಬೇಕು. ಇವರು (ಬ್ರಹ್ಮಾ) ದಲ್ಲಾಳಿಯಾದರು. ಯಾವಾಗ ಸದ್ಗುರು ಸಿಕ್ಕಿದರೋ ದಲ್ಲಾಳಿ ರೂಪದಲ್ಲಿ..... ಎಂಬ ಗಾಯನವೂ ಇದೆ. ತಂದೆಯೂ ಇವರ ಶರೀರವನ್ನು ತೆಗೆದುಕೊಳ್ಳುತ್ತಾರೆಂದರೆ ಇವರು ಮಧ್ಯದಲ್ಲಿ ದಲ್ಲಾಳಿಯಾದರಲ್ಲವೆ. ಇವರು ಮತ್ತೆ ನಿಮ್ಮ ಯೋಗವನ್ನು ಶಿವತಂದೆಯೊಂದಿಗೆ ಜೋಡಣೆ ಮಾಡಿಸುತ್ತಾರೆ ಬಾಕಿ ಇಲ್ಲಿ ವಿವಾಹದ ಹೆಸರನ್ನು ತೆಗೆದುಕೊಳ್ಳಬೇಡಿ. ಶಿವತಂದೆಯೇ ಇವರ ಮೂಲಕ ನಮ್ಮ ಆತ್ಮವನ್ನು ಪವಿತ್ರರನ್ನಾಗಿ ಮಾಡುತ್ತಾರೆ. ತಿಳಿಸುತ್ತಾರೆ- ಹೇ ಮಕ್ಕಳೇ, ತಂದೆಯಾದ ನನ್ನನ್ನು ನೆನಪು ಮಾಡಿ, ತಂದೆಯಾದ ನನ್ನನ್ನು ನೆನಪುಮಾಡಿ ಎಂದು ನೀವು ಹೇಳುವುದಿಲ್ಲ. ತಂದೆಯು ಈ ರೀತಿ ಹೇಳುತ್ತಾರೆಂದು ನೀವು ತಂದೆಯ ಜ್ಞಾನವನ್ನು ತಿಳಿಸುತ್ತೀರಿ. ಇದನ್ನೂ ಸಹ ತಂದೆಯು ಬಹಳ ಚೆನ್ನಾಗಿ ತಿಳಿಸುತ್ತಾರೆ. ಮುಂದೆ ಹೋದಂತೆ ಅನೇಕರಿಗೆ ಸಾಕ್ಷಾತ್ಕಾರವಾಗುತ್ತದೆ. ಆಗ ಒಳಗೆ ಮನಸ್ಸು ತಿನ್ನುತ್ತಿರುತ್ತದೆ ಆದ್ದರಿಂದ ತಂದೆಯು ಹೇಳುತ್ತಾರೆ- ಇನ್ನು ಸ್ವಲ್ಪಸಮಯ ಮಾತ್ರ ಉಳಿದಿದೆ. ಈ ಕಣ್ಣುಗಳಿಂದ ನೀವು ವಿನಾಶವನ್ನು ನೋಡುತ್ತೀರಿ. ಯಾವಾಗ ರಿಹರ್ಸಲ್ (ವಿನಾಶದ ಸೂಚನೆಗಳು) ಆಗುವುದೋ ಆಗ ಈ ರೀತಿ ವಿನಾಶವಾಗುವುದೆಂದು ನೀವು ನೋಡುತ್ತೀರಿ. ಈ ಕಣ್ಣುಗಳಿಂದಲೂ ನೀವು ಬಹಳ ನೋಡುತ್ತೀರಿ. ಅನೇಕರಿಗೆ ವೈಕುಂಠದ ಸಾಕ್ಷಾತ್ಕಾರವಾಗುತ್ತದೆ. ಇದೆಲ್ಲವೂ ಬೇಗ-ಬೇಗ ನಡೆಯುತ್ತದೆ. ಜ್ಞಾನಮಾರ್ಗದಲ್ಲಿ ಎಲ್ಲವೂ ಸತ್ಯವಾಗಿದೆ, ಭಕ್ತಿಯಲ್ಲಿ ಅನುಕರಣೆ ಮಾಡಿದ್ದಾರೆ ಕೇವಲ ಸಾಕ್ಷಾತ್ಕಾರ ಮಾಡುತ್ತಾರೆ ಆದರೆ ಆ ರೀತಿಯೇನೂ ಆಗುವುದಿಲ್ಲ. ತಾವಂತೂ ಆಗುತ್ತೀರಿ, ಸಾಕ್ಷಾತ್ಕಾರದಲ್ಲಿ ನೋಡಿದ್ದೀರೋ ಅದನ್ನು ಈ ಕಣ್ಣುಗಳಿಂದ ನೋಡುತ್ತೀರಿ. ವಿನಾಶವನ್ನು ನೋಡುವುದು ಚಿಕ್ಕಮ್ಮನ ಮನೆಯಂತಲ್ಲ, ಅದರ ಮಾತೇ ಕೇಳಬೇಡಿ! ನಮ್ಮ ಮುಂದೆಯೇ ಕೊಲೆ ಮಾಡುತ್ತಾರೆ, ಎರಡೂ ಕೈಗಳು ಸೇರಿದಾಗಲೇ ಚಪ್ಪಾಳೆಯಾಗುತ್ತದೆಯಲ್ಲವೆ. ಇಬ್ಬರು ಸಹೋದರರನ್ನು ಪರಸ್ಪರ ಹೊಡೆದಾಡಿ ಎಂದು ಬೇರೆ ಮಾಡಿಬಿಡುತ್ತಾರೆ. ಇದೂ ಸಹ ನಾಟಕವು ಮಾಡಲ್ಪಟ್ಟಿದೆ. ಈ ರಹಸ್ಯವನ್ನು ಅವರು ತಿಳಿದುಕೊಂಡಿಲ್ಲ. ಇಬ್ಬರನ್ನು ಬೇರ್ಪಡಿಸುವುದರಿಂದ ಹೊಡೆದಾಡುತ್ತಿರುತ್ತಾರೆ ಅಂದಾಗ ಅವರು ತಯಾರಿಸಿರುವ ಸಿಡಿಮದ್ದುಗಳು ಖರ್ಚಾಗುತ್ತವೆ ಅವರಿಂದಲೂ ಸಂಪಾದನೆಯಾಯಿತಲ್ಲವೆ ಆದರೆ ಅಂತ್ಯದಲ್ಲಿ ಇವುಗಳಿಂದಲೂ ಕೆಲಸವಾಗುವುದಿಲ್ಲ. ಮನೆಯಲ್ಲಿ ಕುಳಿತಿದ್ದಂತೆಯೇ ಬಾಂಬುಗಳನ್ನು ಎಸೆಯುತ್ತಾರೆ ಮತ್ತು ಸಮಾಪ್ತಿಯಾಗುತ್ತದೆ. ಅದರಲ್ಲಿ ಮನುಷ್ಯರ ಅವಶ್ಯಕತೆಯಾಗಲಿ, ಆಯುಧಗಳ ಅವಶ್ಯಕತೆಯಾಗಲಿ ಇರುವುದಿಲ್ಲ ಆದ್ದರಿಂದ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಸ್ಥಾಪನೆಯಂತೂ ಅವಶ್ಯವಾಗಿ ಆಗಬೇಕು. ಯಾರೆಷ್ಟು ಪುರುಷಾರ್ಥ ಮಾಡುವರೋ ಅಷ್ಟು ಶ್ರೇಷ್ಠಪದವಿಯನ್ನು ಪಡೆಯುತ್ತಾರೆ. ನೀವಂತೂ ಬಹಳ ತಿಳಿಸುತ್ತೀರಿ- ಭಗವಂತನು ಹೇಳುತ್ತಾರೆ- ಈ ಕಾಮದ ಕತ್ತಿಯನ್ನು ನಡೆಸಬೇಡಿ, ಕಾಮವನ್ನು ಜಯಿಸುವುದರಿಂದಲೇ ಜಗತ್ಜೀತರಾಗಬೇಕೆಂದು ಹೇಳುತ್ತೀರಿ. ಕೊನೆಯಲ್ಲಿ ಅವಶ್ಯವಾಗಿ ನಿಮ್ಮ ಬಾಣವು ನಾಟುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈ ಸಮಯವು ಬಹಳ ಅಮೂಲ್ಯವಾಗಿದೆ. ಈಗಲೇ ಪುರುಷಾರ್ಥ ಮಾಡಿ ತಂದೆಗೆ ಪೂರ್ಣ ಬಲಿಹಾರಿಯಾಗಬೇಕು. ದೈವೀಗುಣಗಳನ್ನು ಧಾರಣೆ ಮಾಡಬೇಕು. ಯಾವುದೇ ಪ್ರಕಾರದ ತಪ್ಪು ಮಾಡಬಾರದು. ಒಬ್ಬ ತಂದೆಯ ಮತದಂತೆ ನಡೆಯಬೇಕಾಗಿದೆ.

2. ಗುರಿ-ಉದ್ದೇಶವನ್ನು ಮುಂದಿಟ್ಟುಕೊಂಡು ಬಹಳ ಎಚ್ಚರಿಕೆಯಿಂದ ನಡೆಯಬೇಕು. ಆತ್ಮವನ್ನು ಪವಿತ್ರ, ಸತೋಪ್ರಧಾನವನ್ನಾಗಿ ಮಾಡಿಕೊಳ್ಳಲು ಪರಿಶ್ರಮಪಡಬೇಕು. ಒಳಗೆ ಯಾವುದೇ ಕಲೆಗಳಿದ್ದರೆ ಪರಿಶೀಲಿಸಿ ತೆಗೆಯಬೇಕು.

ವರದಾನ:
ಬ್ರಾಹ್ಮಣ ಜೀವನದಲ್ಲಿ ಪ್ರತೀ ಸೆಕೆಂಡ್ ಸುಖಮಯ ಸ್ಥಿತಿಯ ಅನುಭವ ಮಾಡುವಂತಹ ಸಂಪೂರ್ಣ ಪವಿತ್ರ ಆತ್ಮಾ ಭವ

ಪವಿತ್ರತೆಯನ್ನೇ ಸುಖ-ಶಾಂತಿಯ ಜನನಿ ಎಂದು ಹೇಳಲಾಗುತ್ತದೆ. ಯಾವುದೇ ಪ್ರಕಾರದ ಅಪವಿತ್ರತೆಯು ದುಃಖ-ಅಶಾಂತಿಯ ಅನುಭವವನ್ನು ಮಾಡಿಸುತ್ತದೆ. ಬ್ರಾಹ್ಮಣ ಜೀವನವೆಂದರೆ ಪ್ರತೀ ಸೆಕೆಂಡಿನಲ್ಲಿ ಸುಖಮಯ ಸ್ಥಿತಿಯಲ್ಲಿರುವವರು. ಭಲೆ ದುಃಖದ ದೃಶ್ಯವೇ ಇರಬಹುದು ಆದರೆ ಎಲ್ಲಿ ಪವಿತ್ರತೆಯ ಶಕ್ತಿಯಿರುತ್ತದೆಯೋ ಅಲ್ಲಿ ದುಃಖದ ಅನುಭವವಾಗಲು ಸಾಧ್ಯವಿಲ್ಲ. ಪವಿತ್ರ ಆತ್ಮರು ಮಾಸ್ಟರ್ ಸುಖಕರ್ತರಾಗಿ ದುಃಖವನ್ನೂ ಆತ್ಮಿಕ ಸುಖದ ವಾಯುಮಂಡಲದಲ್ಲಿ ಪರಿವರ್ತನೆ ಮಾಡಿಬಿಡುತ್ತಾರೆ.

ಸ್ಲೋಗನ್:
ಸಾಧನಗಳ ಪ್ರಯೋಗವನ್ನು ಮಾಡುತ್ತಾ ಸಾಧನೆಯನ್ನು ವೃದ್ಧಿ ಮಾಡಿಕೊಳ್ಳುವುದೇ ಬೇಹದ್ದಿನ ವೈರಾಗ್ಯ ವೃತ್ತಿಯಾಗಿದೆ.