15.07.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ದೇಹಾಭಿಮಾನವು ಅಸುರೀ ನಡವಳಿಕೆಯಾಗಿದೆ, ಅದನ್ನು ಪರಿವರ್ತನೆ ಮಾಡಿಕೊಂಡು ದೈವೀ ನಡವಳಿಕೆಯನ್ನು ಧಾರಣೆ ಮಾಡಿಕೊಳ್ಳಿ, ಆಗ ರಾವಣನ ಜೈಲಿನಿಂದ ಬಿಡುಗಡೆಯಾಗುತ್ತೀರಿ”

ಪ್ರಶ್ನೆ:
ಪ್ರತಿಯೊಂದು ಆತ್ಮವೂ ತಮ್ಮ ಪಾಪ ಕರ್ಮಗಳ ಶಿಕ್ಷೆಯನ್ನು ಹೇಗೆ ಭೋಗಿಸುತ್ತದೆ, ಅದರಿಂದ ಪಾರಾಗುವ ಸಾಧನವೇನು?

ಉತ್ತರ:
ಪ್ರತಿಯೊಬ್ಬರೂ ತಮ್ಮ ಪಾಪಗಳ ಶಿಕ್ಷೆಯನ್ನು ಒಂದನೆಯದಾಗಿ – ಗರ್ಭ ಜೈಲಿನಲ್ಲಿ ಭೋಗಿಸುತ್ತಾರೆ. ಇನ್ನೊಂದು - ರಾವಣನ ಜೈಲಿನಲ್ಲಿ ಅನೇಕ ಪ್ರಕಾರದ ದುಃಖವನ್ನು ಪಡೆಯುತ್ತಾರೆ, ನೀವು ಮಕ್ಕಳನ್ನು ಈ ಬಂಧನಗಳಿಂದ ಬಿಡಿಸಲು ತಂದೆಯು ಬಂದಿದ್ದಾರೆ ಅಂದಾಗ ಇದರಿಂದ ಪಾರಾಗಲು ನಿರ್ವಿಕಾರಿಗಳಾಗಿ.

ಓಂ ಶಾಂತಿ.
ನಾಟಕದ ಯೋಜನೆಯನುಸಾರ ತಂದೆಯು ಕುಳಿತು ತಿಳಿಸುತ್ತಾರೆ - ತಂದೆಯೇ ಬಂದು ರಾವಣನ ಜೈಲಿನಿಂದ ಬಿಡಿಸುತ್ತಾರೆ ಏಕೆಂದರೆ ಎಲ್ಲರೂ ಅಪರಾಧಿ, ಪಾಪಾತ್ಮರಾಗಿದ್ದಾರೆ. ಇಡೀ ಪ್ರಪಂಚದ ಮನುಷ್ಯಾತ್ಮರೆಲ್ಲರೂ ಅಪರಾಧಿಗಳಾಗಿರುವ ಕಾರಣ ರಾವಣನ ಬಂಧನದಲ್ಲಿದ್ದಾರೆ. ನಂತರ ಯಾವಾಗ ಶರೀರವನ್ನು ಬಿಡುತ್ತಾರೆಂದರೂ ಸಹ ಗರ್ಭಜೈಲಿನಲ್ಲಿ ಹೋಗುತ್ತಾರೆ. ಈಗ ತಂದೆಯು ಬಂದು ಇವೆರಡೂ ಜೈಲುಗಳಿಂದ ಬಿಡಿಸುತ್ತಾರೆ ನಂತರ ನೀವು ಅರ್ಧಕಲ್ಪದವರೆಗೆ ರಾವಣನ ಜೈಲಿನಲ್ಲಿ ಆಗಲಿ ಮತ್ತು ಗರ್ಭ ಜೈಲಿನಲ್ಲಿ ಆಗಲಿ ಹೋಗುವುದಿಲ್ಲ. ನಿಮಗೆ ಗೊತ್ತಿದೆ, ತಂದೆಯು ನಿಧಾನ-ನಿಧಾನವಾಗಿ ಪುರುಷಾರ್ಥದನುಸಾರ ನಮ್ಮನ್ನು ರಾವಣನ ಜೈಲಿನಿಂದ ಮತ್ತು ಗರ್ಭಜೈಲಿನಿಂದ ಬಿಡಿಸುತ್ತಾರೆ. ತಂದೆಯು ತಿಳಿಸುತ್ತಾರೆ - ನೀವೆಲ್ಲರೂ ರಾವಣರಾಜ್ಯದಲ್ಲಿ ವಿಕಾರಿಗಳಾಗಿದ್ದೀರಿ. ಮತ್ತೆ ರಾಮರಾಜ್ಯದಲ್ಲಿ ಎಲ್ಲರೂ ನಿರ್ವಿಕಾರಿಗಳಿರುತ್ತಾರೆ ಯಾವುದೇ ಭೂತದ ಪ್ರವೇಶತೆಯಾಗುವುದಿಲ್ಲ. ದೇಹದ ಅಹಂಕಾರವು ಬರುವುದರಿಂದಲೇ ಮತ್ತೆಲ್ಲಾ ಭೂತಗಳ ಪ್ರವೇಶತೆಯಾಗುತ್ತದೆ. ಈಗ ನೀವು ಮಕ್ಕಳು ಪುರುಷಾರ್ಥ ಮಾಡಿ ಆತ್ಮಾಭಿಮಾನಿಗಳಾಗಬೇಕಾಗಿದೆ. ಈ ರೀತಿ (ಲಕ್ಷ್ಮಿ ನಾರಾಯಣ) ಆದಾಗ ದೇವತೆಗಳೆಂದು ಕರೆಸಿಕೊಳ್ಳುವಿರಿ.ಈಗ ನೀವು ಬ್ರಾಹ್ಮಣರೆಂದು ಕರೆಸಿಕೊಳ್ಳುತ್ತೀರಿ. ರಾವಣನ ಜೈಲಿನಿಂದ ಬಿಡಿಸಲು ತಂದೆಯು ಬಂದು ಓದಿಸುತ್ತಾರೆ ಮತ್ತು ಎಲ್ಲರ ಕೆಟ್ಟಿರುವ ನಡವಳಿಕೆಗಳನ್ನು ಸುಧಾರಣೆಯನ್ನೂ ಮಾಡುತ್ತಾರೆ. ಅರ್ಧಕಲ್ಪದಿಂದ ನಡವಳಿಕೆಯು ಹಾಳಾಗುತ್ತಾ-ಹಾಳಾಗುತ್ತಾ ಬಹಳ ಕೆಟ್ಟುಹೋಗಿದ್ದಾರೆ. ಈ ಸಮಯದಲ್ಲಿ ತಮೋಪ್ರಧಾನ ನಡವಳಿಕೆಯಾಗಿದೆ. ದೈವೀ ಮತ್ತು ಆಸುರೀ ನಡವಳಿಕೆಯಲ್ಲಿ ರಾತ್ರಿ-ಹಗಲಿನ ಅಂತರವಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈಗ ಪುರುಷಾರ್ಥ ಮಾಡಿ, ತಮ್ಮ ನಡವಳಿಕೆಯನ್ನು ದೈವೀ ನಡವಳಿಕೆಯನ್ನಾಗಿ ಮಾಡಿಕೊಳ್ಳಬೇಕು. ಆಗಲೇ ಆಸುರೀ ಗುಣಗಳಿಂದ ಮುಕ್ತರಾಗುತ್ತೀರಿ. ಆಸುರೀ ನಡವಳಿಕೆಯಲ್ಲಿ ನಂಬರ್ವನ್ ಅಥವಾ ಮೊದಲನೆಯದು ದೇಹಾಭಿಮಾನವಾಗಿದೆ. ದೇಹೀ ಅಭೀಮಾನಿಗಳ ನಡವಳಿಕೆಗಳು ಎಂದೂ ಕೆಡುವುದಿಲ್ಲ. ಎಲ್ಲದಕ್ಕೂ ಆಧಾರ ನಡವಳಿಕೆಯ ಮೇಲಿದೆ.ದೇವತೆಗಳ ನಡವಳಿಕೆಯು ಹೇಗೆ ಕೆಡುತ್ತದೆ, ಯಾವಾಗ ಅವರು ವಾಮಮಾರ್ಗದಲ್ಲಿ ಹೋಗುತ್ತಾರೆ ಅರ್ಥಾತ್ ವಿಕಾರಿಗಳಾಗುತ್ತಾರೆಯೋ ಆಗ ನಡವಳಿಕೆಯು ಕೆಡುತ್ತದೆ. ಜಗನ್ನಾಥ ಮಂದಿರದಲ್ಲಿ ಇಂತಹ ವಾಮಮಾರ್ಗದ ಚಿತ್ರಗಳನ್ನು ತೋರಿಸಿದ್ದಾರೆ. ಇದಂತೂ ಬಹಳ ವರ್ಷಗಳ ಹಳೆಯ ಮಂದಿರವಾಗಿದೆ, ತೊಡುಗೆ ಎಲ್ಲವೂ ದೇವತೆಯದೇ ಆಗಿದೆ, ದೇವತೆಗಳು ವಾಮಮಾರ್ಗದಲ್ಲಿ ಹೇಗೆ ಹೋಗುತ್ತಾರೆಂದು ತೋರಿಸುತ್ತಾರೆ. ಮೊಟ್ಟಮೊದಲ ವಿಕಾರವೇ ಇದಾಗಿದೆ. ಕಾಮಚಿತೆಯ ಮೇಲೇರುತ್ತಾರೆ. ಇದರಿಂದ ರಂಗು ಬದಲಾಗುತ್ತಾ-ಬದಲಾಗುತ್ತಾ, ಸಂಪೂರ್ಣ ಬದಲಾಗಿಬಿಡುತ್ತಾರೆ. ಮೊಟ್ಟಮೊದಲು ಸತ್ಯಯುಗದಲ್ಲಿ ಸಂಪೂರ್ಣ ಸುಂದರರಾಗಿರುತ್ತಾರೆ ನಂತರ ಎರಡು ಕಲೆಗಳು ಕಡಿಮೆಯಾಗುತ್ತವೆ. ತ್ರೇತಾಯುಗಕ್ಕೆ ಸ್ವರ್ಗವೆಂದು ಹೇಳುವುದಿಲ್ಲ, ಅದು ಸೆಮಿ-ಸ್ವರ್ಗವಾಗಿದೆ. ತಂದೆಯು ತಿಳಿಸುತ್ತಾರೆ - ರಾವಣನ ಪ್ರವೇಶತೆಯಿಂದಲೇ ನಿಮ್ಮ ಮೇಲೆ ತುಕ್ಕೇರಲು ಪ್ರಾರಂಭವಾಗಿದೆ. ಪೂರ್ಣ ಅಪರಾಧಿಗಳು ಅಂತ್ಯದಲ್ಲಿಯೇ ಆಗುತ್ತೀರಿ. ಈಗ 100% ವಿಕಾರಿಗಳೆಂದು ಹೇಳಲಾಗುತ್ತದೆ 100% ನಿರ್ವಿಕಾರಿಗಳಾಗಿದ್ದಿರಿ, ನಂತರ 100% ವಿಕಾರಿಗಳಾದಿರಿ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಸುಧಾರಣೆಯಾಗುತ್ತಾ ಹೋಗಿ, ಈ ರಾವಣನ ಜೈಲು ಬಹಳ ದೊಡ್ಡದಾಗಿದೆ, ಎಲ್ಲರನ್ನೂ ಅಪರಾಧಿಗಳೆಂದೇ ಹೇಳಬಹುದು ಏಕೆಂದರೆ ಎಲ್ಲರೂ ರಾವಣನ ರಾಜ್ಯದಲ್ಲಿದ್ದಾರಲ್ಲವೆ. ರಾಮರಾಜ್ಯ ಮತ್ತು ರಾವಣರಾಜ್ಯದ ಬಗ್ಗೆ ಅವರಿಗೆ ಗೊತ್ತೇ ಇಲ್ಲ. ಈಗ ನೀವು ರಾಮರಾಜ್ಯದಲ್ಲಿ ಹೋಗುವ ಪುರುಷಾರ್ಥ ಮಾಡುತ್ತಿದ್ದೀರಿ, ಯಾರೂ ಸಂಪೂರ್ಣರಂತೂ ಆಗಿಲ್ಲ. ಕೆಲವರು ಪ್ರಥಮ, ಕೆಲವರು ಮಧ್ಯಮ, ಕೆಲವರು ಕನಿಷ್ಠದರ್ಜೆಯಲ್ಲಿದ್ದಾರೆ. ಈಗ ತಂದೆಯು ಓದಿಸುತ್ತಾರೆ ಮತ್ತೆ ದೈವೀಗುಣಗಳನ್ನು ಧಾರಣೆ ಮಾಡಿಸುತ್ತಾರೆ. ದೇಹಾಭಿಮಾನವಂತೂ ಎಲ್ಲರಲ್ಲಿದೆ, ಎಷ್ಟೆಷ್ಟು ನೀವು ಸರ್ವೀಸ್ನಲ್ಲಿ ತೊಡಗಿರುತ್ತೀರೋ ಅಷ್ಟು ದೇಹಾಭಿಮಾನವು ಕಡಿಮೆಯಾಗುತ್ತಾ ಹೋಗುವುದು. ಸರ್ವೀಸ್ ಮಾಡುವುದರಿಂದಲೇ ದೇಹಾಭಿಮಾನವು ಕಡಿಮೆಯಾಗುವುದು. ದೇಹೀ-ಅಭಿಮಾನಿಗಳು ದೊಡ್ಡ-ದೊಡ್ಡ ಸರ್ವೀಸ್ ಮಾಡುತ್ತಾರೆ. ಬಾಬಾರವರು ಆತ್ಮಾಭಿಮಾನಿಯಾಗಿರುವುದರಿಂದ ಎಷ್ಟು ಒಳ್ಳೆಯ ಸೇವೆ ಮಾಡುತ್ತಾರೆ. ಎಲ್ಲರನ್ನೂ ಅಪರಾಧಿ ರಾವಣನ ಬಂಧನದಿಂದ ಬಿಡಿಸಿ ಸದ್ಗತಿಯನ್ನು ಪ್ರಾಪ್ತಿ ಮಾಡಿಸುತ್ತಾರೆ. ಸತ್ಯಯುಗದಲ್ಲಿ ಮತ್ತೆ ಇವೆರಡು ಜೈಲುಗಳೂ ಇರುವುದಿಲ್ಲ, ಇಲ್ಲಿ ಡಬಲ್ ಜೈಲಿದೆ, ಸತ್ಯಯುಗದಲ್ಲಿ ನ್ಯಾಯಾಲಯವಾಗಲಿ, ಪಾಪಾತ್ಮರಾಗಲಿ, ರಾವಣನ ಜೈಲಾಗಲಿ ಇರುವುದಿಲ್ಲ. ರಾವಣನದು ಬೇಹದ್ದಿನ ಜೈಲಾಗಿದೆ, ಎಲ್ಲರೂ ಪಂಚವಿಕಾರಗಳ ಹಗ್ಗಗಳಲ್ಲಿ ಬಂಧಿತರಾಗಿದ್ದಾರೆ. ಅಪರಮಪಾರ ದುಃಖವಿದೆ, ದಿನ-ಪ್ರತಿದಿನ ದುಃಖವು ವೃದ್ಧಿಯಾಗುತ್ತಾ ಇರುತ್ತದೆ. ಸತ್ಯಯುಗಕ್ಕೆ ಸ್ವರ್ಣಿಮ ಯುಗವೆಂದು, ತ್ರೇತಾಯುಗಕ್ಕೆ ಬೆಳ್ಳಿಯ ಯುಗವೆಂದು ಹೇಳಲಾಗುತ್ತದೆ. ಸತ್ಯಯುಗದ ಸುಖವು ತ್ರೇತಾಯುಗದಲ್ಲಿರುವುದಿಲ್ಲ ಏಕೆಂದರೆ ಆತ್ಮದ ಎರಡು ಕಲೆಗಳು ಕಡಿಮೆಯಾಗಿಬಿಡುತ್ತದೆ, ಆತ್ಮದ ಕಲೆಗಳು ಕಡಿಮೆಯಾಗುವುದರಿಂದ ಶರೀರವೂ ಸಹ ಅಂತಹದ್ದೇ ಆಗಿಬಿಡುತ್ತದೆ. ಅಂದಾಗ ಇದನ್ನು ತಿಳಿದುಕೊಳ್ಳಬೇಕು - ಅವಶ್ಯವಾಗಿನಾವು ರಾವಣರಾಜ್ಯದಲ್ಲಿ ದೇಹಾಭಿಮಾನಿಗಳಾಗಿಬಿಟ್ಟಿದ್ದೇವೆ. ಈಗ ರಾವಣನ ಜೈಲಿನಿಂದ ಬಿಡಿಸಲು ತಂದೆಯು ಬಂದಿದ್ದಾರೆ. ಅರ್ಧ ಕಲ್ಪದ ದೇಹಾಭಿಮಾನವು ಬಿಟ್ಟುಹೋಗುವುದರಲ್ಲಿ ನಿಧಾನವಂತೂ ಆಗುತ್ತದೆ, ಬಹಳ ಶ್ರಮವಂತೂ ಪಡಬೇಕಾಗುತ್ತದೆ. ಯಾರು ಬೇಗನೆ ಶರೀರ ಬಿಟ್ಟು ಹೋಗುತ್ತಾರೋ ಅವರು ದೊಡ್ಡವರಾದ ಮೇಲೆ ಮತ್ತೆ ಬಂದು ಜ್ಞಾನವನ್ನು ಪಡೆಯುತ್ತಾರೆ. ಎಷ್ಟು ತಡವಾಗುತ್ತದೋ ಅಷ್ಟು ಮತ್ತೆ ಪುರುಷಾರ್ಥ ಮಾಡಲು ಸಾಧ್ಯವಿಲ್ಲ. ಯಾರಾದರೂ ಶರೀರ ಬಿಟ್ಟರೆ ಅವರು ಮತ್ತೆ ಜನ್ಮವನ್ನು ಪಡೆದು ಪುರುಷಾರ್ಥ ಮಾಡುತ್ತಾರೆ. ಅವರ ಕರ್ಮೇಂದ್ರಿಯಗಳು ಬೆಳವಣಿಗೆ ಆಗಬೇಕು, ಬುದ್ಧಿ ಬೆಳೆಯಬೇಕು ಆಗಲೇ ಬಂದು ಇದನ್ನು ಅರಿತುಕೊಳ್ಳಲು ಸಾಧ್ಯ. ತಡವಾಗಿ ಬರುವವರಂತೂ ಏನೂ ಕಲಿಯಲು ಆಗುವುದಿಲ್ಲ. ಅಷ್ಟು ಆಗುತ್ತದೋ ಅಷ್ಟೇ ಕಲಿಯುತ್ತಾರೆ, ಆದ್ದರಿಂದ ಶರೀರ ಬಿಡುವುದಕ್ಕೆ ಮುಂಚೆ ಪುರುಷಾರ್ಥ ಮಾಡಬೇಕು. ಎಷ್ಟು ಸಾಧ್ಯವೋ ಅಷ್ಟು ಇತ್ತಕಡೆ ಬರುವ ಪ್ರಯತ್ನಪಡುತ್ತಾರೆ. ಇಂತಹ ಸ್ಥಿತಿಯಲ್ಲಿ ಅನೇಕರಿರುತ್ತಾರೆ. ವೃಕ್ಷವು ವೃದ್ಧಿ ಹೊಂದುತ್ತದೆ, ತಿಳುವಳಿಕೆಯು ಬಹಳ ಸಹಜವಾಗಿದೆ, ಮುಂಬೈನಲ್ಲಿ ತಂದೆಯ ಪರಿಚಯ ಕೊಡಲು ಅವಕಾಶವು ಬಹಳ ಚೆನ್ನಾಗಿದೆ - ಇವರು ನಮ್ಮೆಲ್ಲರ ತಂದೆಯಾಗಿದ್ದಾರೆ, ತಂದೆಯಿಂದ ಅವಶ್ಯವಾಗಿ ಸ್ವರ್ಗದ ಆಸ್ತಿಯೇ ಸಿಗಬೇಕು. ಎಷ್ಟೊಂದು ಸಹಜವಾಗಿದೆ. ನಮಗೆ ತಂದೆಯು ಓದಿಸುತ್ತಿದ್ದಾರೆ, ನಮ್ಮ ಗುರಿ-ಉದ್ದೇಶವು ಇದಾಗಿದೆ ಎಂದು ಹೃದಯದಲ್ಲಿ ಗದ್ಗದಿತರಾಗಬೇಕು. ನಾವು ಮೊದಲು ಸದ್ಗತಿಯಲ್ಲಿದ್ದೆವು ನಂತರ ದುರ್ಗತಿಯಲ್ಲಿ ಬಂದೆವು, ಈಗ ಮತ್ತೆ ದುರ್ಗತಿಯಿಂದ ಸದ್ಗತಿಯಲ್ಲಿ ಹೋಗಬೇಕಾಗಿದೆ. ಶಿವತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ ಅದರಿಂದ ಜನ್ಮ-ಜನ್ಮಾಂತರದ ಪಾಪಗಳು ನಾಶವಾಗುತ್ತಾ ಹೋಗುತ್ತವೆ.

ನಿಮಗೆ ಗೊತ್ತಿದೆ - ದ್ವಾಪರಯುಗದಿಂದ ರಾವಣರಾಜ್ಯವಾಗುವುದರಿಂದ ಪಂಚವಿಕಾರರೂಪಿ ರಾವಣನು ಸರ್ವವ್ಯಾಪಿಯಾಗಿಬಿಡುತ್ತಾನೆ. ಎಲ್ಲಿ ವಿಕಾರವು ಸರ್ವವ್ಯಾಪಿಯಾಗಿದೆಯೋ ಅಲ್ಲಿ ತಂದೆಯು ಸರ್ವವ್ಯಾಪಿ ಆಗಿರಲು ಹೇಗೆ ಸಾಧ್ಯ! ಮನುಷ್ಯರೆಲ್ಲರೂ ಪಾಪಾತ್ಮರು ಆಗಿದ್ದಾರಲ್ಲವೇ. ತಂದೆಯು ಸನ್ಮುಖದಲ್ಲಿ ಇದ್ದಾರೆ, ಆದ್ದರಿಂದಲೇ ಈ ರೀತಿ ಹೇಳುತ್ತಾರೆ - ನಾನು ಹೇಳಲೇ ಇಲ್ಲ, ಆದರೆ ಉಲ್ಟಾ ತಿಳಿದುಕೊಂಡಿದ್ದಾರೆ. ಎಲ್ಲವನ್ನೂ ಉಲ್ಟಾ ತಿಳಿದುಕೊಳ್ಳುತ್ತಾ ಕಾಮವಿಕಾರಗಳಲ್ಲಿ ಬೀಳುತ್ತಾ-ಬೀಳುತ್ತಾ, ನಿಂದನೆ ಮಾಡುತ್ತಾ-ಮಾಡುತ್ತಾ ಭಾರತದ ಸ್ಥಿತಿ ಈ ರೀತಿ ಆಗಿಬಿಟ್ಟಿದೆ. ಕ್ರಿಶ್ಚಿಯನ್ನರಿಗೂ ಸಹ ಗೊತ್ತಿದೆ, 5000 ವರ್ಷಗಳ ಹಿಂದೆ ಭಾರತವು ಸ್ವರ್ಗವಾಗಿತ್ತು, ಎಲ್ಲರೂ ಸತೋಪ್ರಧಾನರಾಗಿದ್ದರು. ಭಾರತವಾಸಿಗಳಂತೂ ಲಕ್ಷಾಂತರ ವರ್ಷಗಳೆಂದು ಹೇಳಿಬಿಡುತ್ತಾರೆ ಏಕೆಂದರೆ ತಮೋಪ್ರಧಾನ ಬುದ್ಧಿಯವರಾಗಿದ್ದಾರೆ. ಕ್ರಿಶ್ಚಯನ್ನರು ಅಷ್ಟು ಶ್ರೇಷ್ಠರಾಗಲಿ, ಕನಿಷ್ಟರಾಗಲಿ ಆಗಿಲ್ಲ. ನಿಜವಾಗಿ ಸ್ವರ್ಗವಿತ್ತು ಎಂದು ಅವರು ತಿಳಿಯುತ್ತಾರೆ. ಇವರು ಸರಿಯಾದ ಮಾತನ್ನು ಹೇಳುತ್ತಾರೆ ಎಂದು ತಂದೆಯು ತಿಳಿಸುತ್ತಾರೆ. 5000 ವರ್ಷಗಳ ಹಿಂದೆಯೂ ಸಹ ನಾನು ರಾವಣನ ಜೈಲಿನಿಂದ ನಿಮ್ಮನ್ನು ಬಿಡಿಸಲು ಬಂದಿದ್ದೆನು, ಪುನಃ ಈಗ ಬಿಡಿಸಲು ಬಂದಿದ್ದೇನೆ. ಅರ್ಧಕಲ್ಪ ರಾವಣರಾಜ್ಯ, ಅರ್ಧಕಲ್ಪ ರಾಮರಾಜ್ಯವಿರುತ್ತದೆ. ಮಕ್ಕಳಿಗೆ ಅವಕಾಶ ಸಿಕ್ಕಿದಾಗ ತಿಳಿಸಬೇಕು.

ಮಕ್ಕಳೇ, ಹೀಗೀಗೆ ತಿಳಿಸಿಕೊಡಿ ಎಂದು ತಂದೆಯೂ ಸಹ ನೀವು ಮಕ್ಕಳಿಗೆ ತಿಳಿಸುತ್ತಾರೆ. ಇಷ್ಟು ಅಪರಮಪಾರ ದುಃಖವು ಏಕೆ ಇದೆ? ಮೊದಲು ಅಪರಮಪಾರ ಸುಖವಿತ್ತು, ಲಕ್ಷ್ಮೀ-ನಾರಾಯಣರ ರಾಜ್ಯ ಇದ್ದಾಗ, ಇವರು ಸರ್ವಗುಣ ಸಂಪನ್ನರಾಗಿದ್ದರು. ಈ ವಿದ್ಯೆಯಂತೂ ನರನಿಂದ ನಾರಾಯಣನಾಗುವ ಜ್ಞಾನವಾಗಿದೆ. ಇದು ವಿದ್ಯೆಯೂ ಆಗಿದೆ, ಇದರಿಂದ ದೈವೀಗುಣಗಳು ಬರುತ್ತವೆ. ಈ ಸಮಯದಲ್ಲಿ ರಾವಣರಾಜ್ಯದಲ್ಲಿ ಎಲ್ಲರ ನಡವಳಿಕೆಯು ಕೆಟ್ಟುಹೋಗಿದೆ. ಎಲ್ಲರನ್ನು ಚಾರಿತ್ರ್ಯವಂತರನ್ನಾಗಿ ಮಾಡುವವರು ಒಬ್ಬರೇ ರಾಮನಾಗಿದ್ದಾರೆ. ಈ ಸಮಯದಲ್ಲಿ ಎಷ್ಟೊಂದು ಧರ್ಮಗಳಿವೆ, ಮನುಷ್ಯರ ವೃದ್ಧಿಯಾಗುತ್ತಲೇ ಇರುತ್ತದೆ. ಹೀಗೆಯೇ ವೃದ್ಧಿ ಆಗುತ್ತಾ ಹೋದರೆ ಮತ್ತೆ ಆಹಾರವು ಎಲ್ಲಿಂದ ಸಿಗಬೇಕು! ಸತ್ಯಯುಗದಲ್ಲಂತೂ ಈ ರೀತಿಯ ಮಾತುಗಳು ಇರುವುದಿಲ್ಲ, ಅಲ್ಲಿ ದುಃಖದ ಯಾವುದೇ ಮಾತಿಲ್ಲ. ಈ ಕಲಿಯುಗವು ದುಃಖಧಾಮವಾಗಿದೆ, ಎಲ್ಲರೂ ವಿಕಾರಿಗಳಾಗಿದ್ದಾರೆ, ಅದು ಸುಖಧಾಮವಾಗಿರುವ ಕಾರಣ ಎಲ್ಲರೂ ಸಂಪೂರ್ಣ ನಿರ್ವಿಕಾರಿಗಳಾಗಿ ಇರುತ್ತಾರೆ. ಪದೇ-ಪದೇ ಇದನ್ನು ಅವರಿಗೆ ತಿಳಿಸಬೇಕು ಆಗ ಸ್ವಲ್ಪವಾದರೂ ತಿಳಿದುಕೊಳ್ಳುವರು. ತಂದೆಯು ತಿಳಿಸುತ್ತಾರೆ - ನಾನು ಪತಿತ-ಪಾವನನಾಗಿದ್ದೇನೆ, ನನ್ನನು ನೆನಪು ಮಾಡುವುದರಿಂದ ನಿಮ್ಮ ಜನ್ಮ-ಜನ್ಮಾಂತರದ ಪಾಪಗಳು ನಾಶವಾಗುತ್ತವೆ, ಈಗ ತಂದೆಯು ಹೇಗೆ ತಿಳಿಸುವುದು! ಅವಶ್ಯವಾಗಿ ಶರೀರ ಧಾರಣೆ ಮಾಡಿಹೇಳುತ್ತಾರಲ್ಲವೆ. ಪತಿತ-ಪಾವನ, ಸರ್ವರ ಸದ್ಗತಿದಾತ ಒಬ್ಬ ತಂದೆಯಾಗಿದ್ದಾರೆ, ಅವಶ್ಯವಾಗಿ ಅವರು ಯಾರ ರಥದಲಾದರೂ ಬಂದಿರಬೇಕಲ್ಲವೆ, ಯಾರು ತಮ್ಮ ಜನ್ಮಗಳನ್ನು ಅರಿತುಕೊಂಡಿಲ್ಲವೋ ಅವರ ರಥದಲ್ಲಿ ನಾನು ಬರುತ್ತೇನೆ, ಇದು 84 ಜನ್ಮಗಳ ಆಟವಾಗಿದೆ. ಯಾರು ಮೊಟ್ಟಮೊದಲು ಬಂದಿರುವರೋ ಅವರೇ ಬರುತ್ತಾರೆ, ಅವರದೇ ಬಹಳ ಜನ್ಮಗಳಾಗುತ್ತವೆ, ಮತ್ತೆ ಕಡಿಮೆಯಾಗುತ್ತಾ ಹೊಗುತ್ತವೆ. ಎಲ್ಲರಿಗಿಂತ ಮೊದಲು ದೇವತೆಗಳೇ ಬಂದರು. ತಂದೆಯು ಮಕ್ಕಳಿಗೆ ಹೀಗೀಗೆ ತಿಳಿಸಬೇಕೆಂದು ಭಾಷಣ ಮಡುವುದನ್ನು ಕಲಿಸುತ್ತಾರೆ. ಬಹಳ ಚೆನ್ನಾಗಿ ನೆನಪಿನಲ್ಲಿದ್ದು, ದೇಹಾಭಿಮಾನವಿಲ್ಲದಿದ್ದರೆ ಭಾಷಣವನ್ನು ಚೆನ್ನಾಗಿ ಮಾಡುತ್ತೀರಿ. ಶಿವತಂದೆಯು ದೇಹೀ ಅಭಿಮಾನಿಯಾಗಿದ್ದಾರಲ್ಲವೆ. ತಿಳಿಸುತ್ತಿರುತ್ತಾರೆ - ಮಕ್ಕಳೇ, ಆತ್ಮಾಭಿಮಾನಿಭವ. ಯಾವುದೇ ವಿಕಾರವಿರಬಾರದು, ಒಳಗೆ ಯಾವುದೇ ಶತ್ರುವಿರಬಾರದು. ನೀವು ಯಾರಿಗೂ ದುಃಖವನ್ನು ಕೊಡಲೂಬಾರದು, ಯಾರ ನಿಂದನೆ ಮಾಡಲೂ ಬಾರದು ಮತ್ತು ನೀವು ಮಕ್ಕಳು ಎಂದಿಗೂ ಹೇಳಿಕೆ-ಕೇಳಿಕೆ ಮಾತುಗಳಿಗೆ ವಿಶ್ವಾಸವನ್ನಿಡಬೇಡಿ. ಇವರು ಈ ರೀತಿ ಹೇಳುತ್ತಾರೆ, ಇದು ಸತ್ಯವೇ ಎಂದು ತಂದೆಯನ್ನು ಕೇಳಿ ಆಗ ತಂದೆಯು ತಿಳಿಸುತ್ತಾರೆ, ಇಲ್ಲವೆಂದರೆ ಅನೇಕರು ಈ ರೀತಿಯಿದ್ದಾರೆ ಇಂತಹವರು ನಿಮ್ಮ ಬಗ್ಗೆ ಹೀಗೀಗೆ ಹೇಳಿದರೆಂದು ಸುಳ್ಳುಮಾತುಗಳನ್ನು ಕಟ್ಟುವುದರಲ್ಲಿ ನಿಧಾನಿಸುವುದಿಲ್ಲ. ಅಂತಹ ಮಾತುಗಳನ್ನು ತಿಳಿಸಿ ಅವರನ್ನೇ ಕಪ್ಪು ಮಾಡಿಬಿಡುತ್ತಾರೆ. ತಂದೆಗೂ ಗೊತ್ತಿದೆ - ಈ ರೀತಿ ಬಹಳ ಅಗುತ್ತದೆ, ಉಲ್ಟಾಸುಲ್ಟಾ ಮಾತುಗಳನ್ನು ತಿಳಿಸಿ ಮನಸ್ಸನ್ನು ಕೆಡೆಸಿಬಿಡುತ್ತಾರೆ ಆದ್ದರಿಂದ ಎಂದೂ ಸುಳ್ಳುಮಾತುಗಳನ್ನು ಹೇಳಿ ಒಳಗೆ ಬೇಯಬಾರದು. ಇಂತಹವರು ನನ್ನ ಬಗ್ಗೆ ಈ ರೀತಿ ಹೇಳಿದರೆ ಎಂದು ಕೇಳಿ, ಒಳಗೂ ಸ್ವಚ್ಛತೆಯಿರಬೇಕು. ಕೆಲವು ಮಕ್ಕಳು ಹೇಳಿಕೆ-ಕೇಳಿಕೆ ಮಾತುಗಳಿಂದಲೂ ಸಹ ಪರಸ್ಪರ ಶತ್ರುತ್ವವನ್ನಿಟ್ಟುಕೊಳ್ಳುತ್ತಾರೆ. ತಂದೆಯು ಸಿಕ್ಕಿದ್ದಾರೆಂದಮೇಲೆ ತಂದೆಯನ್ನು ಕೇಳಬೇಕಲ್ಲವೆ. ಬ್ರಹ್ಮಾತಂದೆಯ ಮೇಲೂ ಸಹ ಅನೇಕರಿಗೆ ವಿಶ್ವಾಸವಿರುವುದಿಲ್ಲ, ಶಿವತಂದೆಯನ್ನೂ ಸಹ ಮರೆತುಬಿಡುತ್ತಾರೆ. ಶಿವತಂದೆಯಂತೂ ಎಲ್ಲರನ್ನೂ ಶ್ರೇಷ್ಠರನ್ನಾಗಿ ಮಾಡಲು ಬಂದಿದ್ದಾರೆ, ಪ್ರೀತಿಯಿಂದ ಮೇಲೆತ್ತುತ್ತಿರುತ್ತಾರೆ ಅಂದಮೇಲೆ ಈಶ್ವರೀಯ ಮತವನ್ನು ತೆಗೆದುಕೊಳ್ಳಬೇಕು. ನಿಶ್ವಯವೇ ಇಲ್ಲವೆಂದರೆ ಕೇಳುವುದೂ ಇಲ್ಲ ಅಂದಮೇಲೆ ಪ್ರತ್ಯುತ್ತರವೂ ಸಿಗುವುದಿಲ್ಲ? ತಂದೆಯು ಏನನ್ನು ತಿಳಿಸುತ್ತಾರೆಯೋ ಅದನ್ನು ಧಾರಣೆ ಮಾಡಬೇಕು.

ನೀವು ಮಕ್ಕಳು ಶ್ರೀಮತದನುಸಾರ ವಿಶ್ವದಲ್ಲಿ ಶಾಂತಿಸ್ಥಾಪನೆ ಮಾಡಲು ನಿಮಿತ್ತರಾಗಿದ್ದೀರಿ. ಒಬ್ಬ ತಂದೆಯ ವಿನಃ ಮತ್ತ್ಯಾರ ಮತವೂ ಶ್ರೇಷ್ಠ ಮತವಾಗಿರಲು ಸಾಧ್ಯವಿಲ್ಲ. ಭಗವಂತನದೇ ಶ್ರೇಷ್ಠಾತಿಶ್ರೇಷ್ಠ ಮತವಾಗಿದೆ. ಎಷ್ಟು ಶ್ರೇಷ್ಠಪದವಿಯು ಸಿಗುತ್ತದೆ! ತಂದೆಯು ತಿಳಿಸುತ್ತಾರೆ - ತಮ್ಮ ಕಲ್ಯಾಣ ಮಾಡಿಕೊಂಡು ಉತ್ತಮ ಪದವಿಯನ್ನು ಪಡೆಯಿರಿ, ಮಹಾರಥಿಗಳಾಗಿ. ಓದುವುದೇ ಇಲ್ಲವೆಂದರೆ ಏನು ಪದವಿಯನ್ನು ಪಡೆಯುತ್ತೀರಿ! ಮಕ್ಕಳೇ, ಇದು ಕಲ್ಪ-ಕಲ್ಪಾಂತರದ ಮಾತಾಗಿದೆ, ಸತ್ಯಯುಗದಲ್ಲಿ ದಾಸ-ದಾಸಿಯರೂ ಸಹ ನಂಬರ್ವಾರ್ ಇರುತ್ತಾರೆ. ತಂದೆಯಂತೂ ಶ್ರೇಷ್ಠರನ್ನಾಗಿ ಮಾಡಲು ಬಂದಿದ್ದಾರೆ. ಓದುವುದೇ ಇಲ್ಲವೆಂದರೆ ಏನು ಪದವಿಯನ್ನು ಪಡೆಯುತ್ತೀರಿ? ಪ್ರಜೆಗಳಲ್ಲಿಯೂ ಸಹ ಉತ್ತಮ, ಕನಿಷ್ಠ ಪದವಿಗಳಿರುತ್ತವೆಯಲ್ಲವೆ. ಇದನ್ನುಬುದ್ಧಿಯಿಂದ ತಿಳಿಯಬೇಕಾಗಿದೆ. ನಾವು ಎಲ್ಲಿಗೆ ಹೋಗುತ್ತೇವೆ, ಮೇಲೆ ಹೋಗುತ್ತೇವೆಯೇ ಅಥವಾ ಕೆಳಗಿಳಿಯುತ್ತಾ ಹೋಗುತ್ತೇವೆಯೇ ಎಂದು ಮನುಷ್ಯರಿಗೆ ತಿಳಿಯುವುದೇ ಇಲ್ಲ. ತಂದೆಯು ಬಂದು ನೀವು ಮಕ್ಕಳಿಗೆ ತಿಳಿಸಿಕೊಡುತ್ತಾರೆ - ಎಲ್ಲಿ ನೀವು ಚಿನ್ನ, ಬೆಳ್ಳಿಯ ಯುಗದಲ್ಲಿದ್ದೀರಿ, ಈಗ ಎಲ್ಲಿ ಕಬ್ಬಿಣದ ಯುಗದಲ್ಲಿ ಬಂದುಬಿಟ್ಟಿದ್ದೀರಿ, ಈ ಸಮಯದಲ್ಲಂತೂ ಮನುಷ್ಯರು ಮನುಷ್ಯರನ್ನು ತಿಂದುಬಿಡುತ್ತಾರೆ. ಈಗ ಇವೆಲ್ಲಾ ಮಾತುಗಳನ್ನು ಯಾವಾಗ ತಿಳಿದುಕೊಳ್ಳುವರೋ ಆಗಲೇ ಜ್ಞಾನವೆಂದು ಯಾವುದಕ್ಕೆ ಹೇಳಲಾಗುತ್ತದೆ ಎಂಬುದು ತಿಳಿಯುತ್ತದೆ. ಕೆಲವು ಮಕ್ಕಳು ಒಂದುಕಿವಿಯಿಂದ ಕೇಳಿ ಇನ್ನೊಂದರಿಂದ ಬಿಟ್ಟುಬಿಡುತ್ತಾರೆ. ಒಳ್ಳೊಳ್ಳೆಯ ಸೇವಾಕೇಂದ್ರಗಳ ಮಕ್ಕಳಿಗೂ ಸಹ ಕೆಟ್ಟ ದೃಷ್ಠಿಯಿರುತ್ತದೆ. ಲಾಭ-ನಷ್ಟ, ಮಾರ್ಯದೆಗಳ ಬಗ್ಗೆ ಚಿಂತೆ ಮಾಡುವುದಿಲ್ಲ.ಮೂಲಮಾತೇ ಆಗಿದೆ ಕೆಟ್ಟ ದೃಷ್ಠಿಯದು. ತಂದೆ ತಿಳಿಸುತ್ತಾರೆ ಕಾಮ ಮಹಾ ಶತ್ರುವಾಗಿದೆ.ಇದನ್ನು ಗೆಲ್ಲುವುದಕ್ಕಾಗಿ ಎಷ್ಟೋಂದು ತಲೆ ಕೆಡಿಸಿಕೊಳ್ಳುತ್ತಾರೆ. ಮೂಲಮಾತೇ ಪವಿತ್ರತೆಯದಾಗಿದೆ. ಇದರ ಮೇಲೆಯೇ ಬಹಳ ಜಗಳಗಳಾಗುತ್ತವೆ. ತಂದೆಯು ತಿಳಿಸುತ್ತಾರೆ ಈ ಕಾಮವು ಮಹಾಶತ್ರುವಾಗಿದೆ. ಇದನ್ನು ಜಯಿಸಿದಾಗಲೇ ಜಗತ್ಜೀತರಾಗುತ್ತೀರಿ. ದೇವತೆಗಳು ಸಂಪೂರ್ಣ ನಿರ್ವಿಕಾರಿಗಳಾಗಿದ್ದಾರಲ್ಲವೇ. ಮುಂದೆ ಹೋದಂತೆ ಅವಶ್ಯವಾಗಿ ಅರ್ಥ ಮಾಡಿಕೊಳ್ಳುತ್ತಾರೆ, ಸ್ಥಾಪನೆಯೂ ಆಗಿಬಿಡುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಎಂದಿಗೂ ಸಹ ಹೇಳಿಕೆ-ಕೇಳಿಕೆ ಮಾತುಗಳನ್ನು ಕೇಳಿ ತಮ್ಮ ಸ್ಥಿತಿಯನ್ನು ಕೆಡಿಸಿಕೊಳ್ಳಬಾರದು. ಒಳಗೆ ಸ್ವಚ್ಛತೆ ಇಟ್ಟುಕೊಳ್ಳಿ. ಸುಳ್ಳುಮಾತುಗಳನ್ನು ಕೇಳಿ ಒಳಗೆ ಬೇಯಬಾರದು. ಈಶ್ವರೀಯ ಮತವನ್ನು ತೆಗೆದುಕೊಳ್ಳಬೇಕು.

2. ಆತ್ಮಾಭಿಮಾನಿಗಳಾಗುವ ಪೂರ್ಣ ಪುರುಷಾರ್ಥ ಮಾಡಬೇಕು, ಯಾರ ನಿಂದನೆಯನ್ನೂ ಮಾಡಬಾರದು. ಲಾಭ-ನಷ್ಟ ಮತ್ತು ಮರ್ಯಾದೆಗಳನ್ನು ಗಮನದಲ್ಲಿ ಇಟ್ಟುಕೊಳ್ಳುತ್ತಾ ಕುದೃಷ್ಟಿಯನ್ನು ಸಮಾಪ್ತಿ ಮಾಡಿಕೊಳ್ಳಬೇಕಾಗಿದೆ. ತಂದೆಯು ಏನನ್ನು ತಿಳಿಸುತ್ತಾರೆಯೋ ಅದನ್ನು ಒಂದು ಕಿವಿಯಿಂದ ಕೇಳಿ ಇನ್ನೊಂದರಿಂದ ಬಿಟ್ಟುಬಿಡಬಾರದು.

ವರದಾನ:
ತ್ರಿಕಾಲದರ್ಶಿಯ ಸೀಟ್ ಮೇಲೆ ಸೆಟ್ ಆಗಿ ಪ್ರತಿ ಕರ್ಮ ಮಾಡುವಂತಹ ಶಕ್ತಿಶಾಲಿ ಆತ್ಮ ಭವ.

ಯಾವ ಮಕ್ಕಳು ತ್ರಿಕಾಲದರ್ಶಿ ಸೀಟ್ ಮೇಲೆ ಸೆಟ್ ಆಗಿ ಪ್ರತಿ ಸಮಯ, ಪ್ರತಿ ಕರ್ಮ ಮಾಡುತ್ತಾರೆ ಅವರು ತಿಳಿದಿರುತ್ತಾರೆ ಅನೇಕ ಮಾತುಗಳಂತೂ ಬರುತ್ತವೆ, ಹೋಗುತ್ತವೆ ಸ್ವಯಂ ಮೂಲಕ ಇರಬಹುದು. ಇಲ್ಲವೆಂದರೆ ಬೇರೆಯವರ ಮೂಲಕ ಇರಬಹುದು, ಮಾಯೆ ಹಾಗೂ ಪ್ರಕೃತಿ ಮೂಲಕ ಇರಬಹುದು, ಎಲ್ಲಾ ಪ್ರಕಾರದಿಂದ ಪರಿಸ್ಥಿತಿಗಳಂತೂ ಬರುತ್ತವೆ, ಬರಲೇಬೇಕು ಆದರೆ ಸ್ವ-ಸ್ಥಿತಿ ಶಕ್ತಿಶಾಲಿಯಾಗಿದ್ದರೆ ಪರ-ಸ್ಥಿತಿ ಅದರ ಮುಂದೆ ಏನೂ ಇಲ್ಲ. ಕೇವಲ ಪ್ರತಿ ಕರ್ಮ ಮಾಡುವ ಮೊದಲು ಅದರ ಆದಿ-ಮಧ್ಯೆ-ಅಂತ್ಯ ಮೂರೂ ಕಾಲವನ್ನು ಚೆಕ್ ಮಾಡಿ. ತಿಳಿದು ನಂತರ ಏನಾದರೂ ಮಾಡಿ ಆಗ ಶಕ್ತಿಶಾಲಿಯಾಗಿ ಪರಿಸ್ಥಿತಿಗಳನ್ನು ಪಾರು ಮಾಡಿಬಿಡುವಿರಿ.

ಸ್ಲೋಗನ್:
ಸರ್ವಶಕ್ತಿ ಹಾಗೂ ಜ್ಞಾನ ಸಂಪನ್ನರಾಗುವುದೇ ಸಂಗಮಯುಗದ ಪ್ರಾಲಬ್ಧವಾಗಿದೆ.