15.09.24 Avyakt Bapdada
Kannada
Murli 31.12.2001 Om Shanti Madhuban
"ಈ ಹೊಸ ವರ್ಷದಲ್ಲಿ
ಸಫಲತಾಭವದ ವರದಾನದ ಮುಖಾಂತರ ತಂದೆ ಮತ್ತು ಸ್ವಯಂನ ಪ್ರತ್ಯಕ್ಷತೆಯನ್ನು ಪ್ರತ್ಯಕ್ಷದಲ್ಲಿ
ತೆಗೆದುಕೊಂಡು ಬನ್ನಿರಿ'
ಈ ದಿನ ಹೊಸ ಯುಗದ ರಚಯಿತ
ತಮ್ಮ ಮಾಸ್ಟರ್ ನವಯುಗದ ರಚನೆಕಾರ ಮಕ್ಕಳೊಂದಿಗೆ ಹೊಸ ವರ್ಷವನ್ನು ಆಚರಣೆ ಮಾಡುವ ಸಲುವಾಗಿ
ಬಂದಿದ್ದಾರೆ. ಹೊಸ ವರ್ಷವನ್ನು ಆಚರಣೆ ಮಾಡುವುದಂತೂ ವಿಶ್ವದಲ್ಲಿ ಎಲ್ಲರೂ ಆಚರಿಸುತ್ತಾರೆ. ಆದರೆ
ನೀವೆಲ್ಲರೂ ನವ ಯುಗವನ್ನು ರಚನೆ ಮಾಡುತ್ತಾ ಇದ್ದೀರಿ. ನವಯುಗದ ಖುಷಿಯು ಪ್ರತಿಯೊಬ್ಬ ಮಕ್ಕಳ
ಆಂತರ್ಯದಲ್ಲಿಯೂ ಇದೆ. ನವಯುಗವು ಇನ್ನೇನು ಬಂದುಬಿಡುತ್ತದೆ ಎನ್ನುವುದನ್ನು ನೀವು ಮಕ್ಕಳು
ತಿಳಿದುಕೊಂಡಿದ್ದೀರಿ. ಪ್ರಪಂಚದ ಮನುಷ್ಯರು ಹೊಸ ವರ್ಷವನ್ನು ಒಂದು ದಿನ ಮಾತ್ರ ಆಚರಣೆ ಮಾಡುತ್ತಾರೆ.
ಆದರೆ ನೀವೆಲ್ಲರೂ ನವಯುಗವನ್ನು ಪೂರ್ತಿ ಸಂಗಮಯುಗದಲ್ಲಿ ಮಾಡಬೇಕಾಗಿದೆ. ಜನರು ಹೊಸ ವರ್ಷದಲ್ಲಿ
ಕೇವಲ ಒಂದು ದಿನ ಆನಂದೋತ್ಸವನ್ನು ಆಚರಣೆ ಮಾಡುತ್ತಾ ಒಬ್ಬರಿಗೊಬ್ಬರು ಉಡುಗೊರೆಯನ್ನು (ಗಿಫ್ಟ್)
ಕೊಡುತ್ತಾರೆ. ಮತ್ತೆ ಉಡುಗೊರೆಯೂ ಸಹ ಏನಾಗಿದೆ? ಅದು ಅಲ್ಪಕಾಲದ ಉಡುಗೊರೆಯಾಗಿದೆ. ನವಯುಗದ ರಚಯಿತ
ತಂದೆಯು ನಿಮ್ಮೆಲ್ಲಾ ಮಕ್ಕಳಿಗೋಸ್ಕರ ಯಾವ ಉಡುಗೊರೆಯನ್ನು ತರುತ್ತಾರೆ? ಚಿನ್ನದ ಉಡುಗೊರೆಯನ್ನು
ತರುತ್ತಾರೆ. ಆ ಚಿನ್ನದ ಉಡುಗೊರೆ ಅರ್ಥಾತ್ ಸ್ವರ್ಣಯುಗದಲ್ಲಿ ಎಲ್ಲರೂ ಸ್ವತಃವಾಗಿ ಬಂಗಾರವಾಗಿ
ಬಿಡುತ್ತಾರೆ. ನವ ಮಾನವರಾಗಿ ಬಿಡುತ್ತಾರೆ. ಇನ್ನು ಸ್ವಲ್ಪ ಸಮಯದ ನಂತರ ಹೊಸ ವರ್ಷವು
ಆರಂಭವಾಗುತ್ತದೆ. ಆದರೆ ಎಲ್ಲವೂ ಹೊಸದಾಗುವುದಿಲ್ಲ. ನಿಮ್ಮ ನವಯುಗದಲ್ಲಿ ಪ್ರಕೃತಿಯೂ ಸಹ
ಹೊಸದಾಗಿಬಿಡುತ್ತದೆ. ಆತ್ಮವೂ ಸಹ ಹೊಸ ವಸ್ತ್ರ (ಶರೀರ) ವನ್ನು ಧಾರಣೆ ಮಾಡುವುದು. ಪ್ರತಿಯೊಂದು
ವಸ್ತುವು ಹೊಸದು ಅರ್ಥಾತ್ ಸ್ವರ್ಣಯುಗದ ಸತೋಪ್ರಧಾನ ಆಗುತ್ತದೆ. ಆದ್ದರಿಂದ ಹೊಸ ವರ್ಷವನ್ನು ಆಚರಣೆ
ಮಾಡುತ್ತಾ ನಿಮ್ಮೆಲ್ಲರ ಮನಸ್ಸಿನಲ್ಲಿ ಬುದ್ಧಿಯಲ್ಲಿ ನವ ಯುಗವೇ ನೆನಪಿಗೆ ಬರುತ್ತಾ ಇದೆ. ನವಯುಗವು
ನೆನಪಿದೆಯಲ್ಲವೇ, ಅಥವಾ ಈ ದಿನ ಹೊಸ ವರ್ಷವು ನೆನಪಿದೆಯೋ?
ಬಾಪ್ದಾದಾರವರು ಮೊದಲು
ನವಯುಗದ ಶುಭಾಷಯಗಳನ್ನು ಕೊಡುತ್ತಾರೆ, ನಂತರ ಜೊತೆಯಲ್ಲಿ ಹೊಸ ವರ್ಷದ ಶುಭಾಶಯಗಳನ್ನು ಕೊಡುತ್ತಾರೆ.
ಏಕೆಂದರೆ ನೀವೆಲ್ಲರೂ ಹೊಸ ವರ್ಷವನ್ನು ಆಚರಣೆ ಮಾಡಲು ಬಂದಿದ್ದೀರಲ್ಲವೇ! ಆಚರಣೆ ಮಾಡಿರಿ,
ಚೆನ್ನಾಗಿ ಆಚರಣೆ ಮಾಡಿರಿ. ಬಾಪ್ದಾದಾರವರ ಮುಖಾಂತರ ಏನು ಅವಿನಾಶಿ ಉಡುಗೊರೆಯು ಸಿಕ್ಕಿದೆಯೋ ಅದರ
ಅವಿನಾಶಿ ಶುಭಾಶಯಗಳನ್ನು ಕೊಡಿ. ಇದೇ ಸತ್ಯವಾದ ಶುಭಾಶಯವಾಗಿದೆ. ಶುಭಾಶಯಗಳನ್ನು ಯಾವಾಗ
ಕೊಡುತ್ತೀರೋ ಆಗ ಸ್ವಯಂ ನೀವೂ ಸಹ ಖುಷಿಯಾಗುತ್ತೀರಿ ಹಾಗೂ ಅನ್ಯರೂ - ಖುಷಿಯಾಗುತ್ತಾರಲ್ಲವೇ!
ಆದ್ದರಿಂದ ಸತ್ಯವಾದ ಹೃದಯದ ಶುಭಾಶಯವು ಒಬ್ಬರಿಗೊಬ್ಬರು ಮನಃಪೂರ್ವಕವಾಗಿ ಶುಭಭಾವನೆ ಶುಭಕಾಮನೆಯ
ಶುಭಾಶಯವಾಗಿದೆ. ಶುಭಭಾವನೆಯು ಎಂತಹ ಶ್ರೇಷ್ಠ ಶುಭಾಶಯವಾಗಿದೆ ಎಂದರೆ ಯಾವುದೇ ಆತ್ಮದ ಎಂತಹದೇ
ಭಾವನೆಯು ಇದ್ದರೂ ಒಳ್ಳೆಯ ಭಾವನೆಯು ಮತ್ತು ಒಳ್ಳೆಯ ಭಾವ ಇಲ್ಲದಿದ್ದರೂ, ನಿಮ್ಮ ಶುಭಭಾವನೆಯು ಅವರ
ಭಾವವನ್ನೂ ಸಹ ಪರಿವರ್ತನೆ ಮಾಡಬಲ್ಲದು. ಸ್ವಭಾವವನ್ನೂ ಸಹ ಪರಿವರ್ತನೆ ಮಾಡಲು ಸಾಧ್ಯವಿದೆ.
ವಾಸ್ತವವಾಗಿ ಸ್ವಭಾವ ಶಬ್ದದ ಅರ್ಥವೇ ಸ್ವ (ಸು) ಅರ್ಥಾತ್ ಶುಭಭಾವ, ಪ್ರತಿಯೊಂದು ಸಮಯದಲ್ಲಿಯೂ
ಪ್ರತಿಯೊಂದು ಆತ್ಮಕ್ಕೂ ಇದೇ ಅವಿನಾಶೀ ಶುಭಾಶಯವನ್ನು ಕೊಡುತ್ತಾಹೋಗಿ. ಯಾರಾದರೂ ನಿಮಗೆ ಏನೇ
ಕೊಟ್ಟರೂ ನೀವು ಎಲ್ಲರಿಗೂ ಶುಭಭಾವನೆಯನ್ನೇ ಕೊಡಿ. ಅವಿನಾಶಿ ಆತ್ಮದ ಅವಿನಾಶೀ ಆತ್ಮಿಕ
ಸ್ಥಿತಿಯಲ್ಲಿ ಸ್ಥಿತವಾಗುವುದರಿಂದ ಆತ್ಮದ ಪರಿವರ್ತನೆಯು ಆಗಿಯೇ ಆಗುತ್ತದೆ. ಆದ್ದರಿಂದ ಈ ಹೊಸ
ವರ್ಷದಲ್ಲಿ ಏನು ಹೊಸ ವಿಶೇಷತೆಯನ್ನು ಮಾಡುವಿರಿ? ಸ್ವಯಂಲ್ಲಿಯೂ ಸರ್ವರಲ್ಲಿಯ ಹಾಗೂ ಸೇವೆಯಲ್ಲಿಯೂ
ಏನು ವಿಶೇಷತೆಯನ್ನು ಮಾಡುವಿರಿ? ಹೊಸ ವರ್ಷ ಎನ್ನುವ ಹೆಸರು ಇರುವುದರಿಂದ ಏನಾದರೂ ನವೀನತೆಯನ್ನು
ಮಾಡುತ್ತೀರಲ್ಲವೇ! ಅದರ ಏನು ನವೀನತೆಯನ್ನು ಮಾಡುತ್ತೀರಿ? ಪ್ರತಿಯೊಬ್ಬರೂ ನಿಮ್ಮ ನವೀನತೆಯ ಪ್ಲಾನ್
ತಯಾರು ಮಾಡಿದ್ದೀರಾ? ಅಥವಾ ಈಗ ಕೇವಲ ಹೊಸ ವರ್ಷವನ್ನು ಆಚರಣೆ ಮಾಡುತ್ತೀರಾ? ಮಿಲನ ಮಾಡಿದಿರಿ,
ಹೊಸ ವರ್ಷವನ್ನು ಆಚರಣೆ ಮಾಡಿದಿರಿ, ಅದರ ನವೀನತೆಯ ಪ್ಲಾನ್ ಏನು ತಯಾರು ಮಾಡಿದ್ದೀರಿ?
ಬಾಪ್ದಾದಾರವರು ಮಕ್ಕಳು
ಪ್ರತಿಯೊಬ್ಬರಿಗೂ ಈ ವರ್ಷದ ಸಲುವಾಗಿ ಏನು ವಿಶೇಷ ಅದೇಶವನ್ನು ಕೊಡುತ್ತಾರೆಂದರೆ ಸಮಯದ ಅನುಸಾರವಾಗಿ
ಎಲ್ಲಾ ಮಕ್ಕಳೂ ಇಲ್ಲಿ ಸಾಕಾರದಲ್ಲಿ ಸಮ್ಮುಖದಲ್ಲಿಯಾದರೂ ಕುಳಿತಿರಲಿ ಅಥವಾ
ದೇಶ-ವಿದೇಶಗಳಲ್ಲಿಯಾದರೂ ಇರಲಿ ವಿಜ್ಞಾನದ ಸಾಧನದ ಮುಖಾಂತರ ಮಹಾವಾಕ್ಯಗಳನ್ನು ಕೇಳುತ್ತಾ ಇದ್ದಾರೆ,
ನೋಡುತ್ತಾ ಇದ್ದಾರೆ. ಬಾಪ್ದಾದಾರವರೂ ಸಹ ಎಲ್ಲರನ್ನೂ ನೋಡುತ್ತಾ ಇದ್ದಾರೆ. ತುಂಬಾ ಆರಾಮವಾಗಿ
ಆನಂದದಿಂದ ನೋಡುತ್ತಾ ಇದ್ದಾರೆ. ಆದ್ದರಿಂದ ವಿಶ್ವದ ಸರ್ವ ಬಾಪ್ದಾದಾರವರ ಅತಿ ಪ್ರೀತಿಯ, ಅತಿ
ಮಧುರ ಮಕ್ಕಳಿಗೆ ಬಾಪ್ದಾದಾರವರು ಏನು ಆದೇಶ ನೀಡುತ್ತಾರೆಂದರೆ ಈಗ ನಿಮ್ಮ ಈ ಬ್ರಾಹ್ಮಣ ಜೀವನದಲ್ಲಿ
ಅಮೃತವೇಳೆಯಿಂದ ಪ್ರಾರಂಭವಾಗಿ ರಾತ್ರಿಯವರೆಗೆ ಉಳಿತಾಯದ ಖಾತೆಯನ್ನು ಹೆಚ್ಚಿಸಿಕೊಳ್ಳಿ, ಜಮಾದ
ಖಾತೆಯನ್ನು ವೃದ್ಧಿ ಮಾಡಿಕೊಳ್ಳಿ. ಪ್ರತಿಯೊಬ್ಬರೂ ನಿಮ್ಮ ಕಾರ್ಯದ ಅನುಸಾರವಾಗಿ ನಿಮ್ಮ ಪ್ಲಾನನ್ನು
(ಯೋಜನೆಯನ್ನು) ತಯಾರು ಮಾಡಿಕೊಳ್ಳಿ. ಬ್ರಾಹ್ಮಣ ಜೀವನದಲ್ಲಿ ಏನೇನು ಖಜಾನೆಗಳು ಸಿಕ್ಕಿದೆಯೋ ಆ
ಪ್ರತಿಯೊಂದು ಖಜಾನೆಯ ಉಳಿತಾಯ ಅಥವಾ ಜಮಾದ ಖಾತೆಯನ್ನು ಹೆಚ್ಚಿಸಿಕೊಳ್ಳಿ. ಏಕೆಂದರೆ ಬಾಪ್ದಾದಾರವರು
ಈ ದಿನ ಅಂತ್ಯದವರೆಗು ನಾಲ್ಕೂ ಕಡೆಯ ಮಕ್ಕಳ ಫಲಿತಾಂಶವನ್ನು ನೋಡಿದ್ದಾರೆ. ಏನು ನೋಡಿದ್ದೇವು?
ತಿಳಿದುಕೊಂಡು ಬಿಟ್ಟಿದ್ದೀರಿ, ಶಿಕ್ಷೆಕಿಯರೂ ಸಹ ತಿಳಿದುಕೊಂಡುಬಿಟ್ಟಿದ್ದಾರೆ. ಡಬ್ಬಲ್
ವಿದೇಶಿಯರೂ ಸಹ ತಿಳಿದುಕೊಂಡು ಬಿಟ್ಟಿದ್ದಾರೆ, ಭಾರತೀಯರೂ ಸಹ ತಿಳಿದುಕೊಂಡು ಬಿಟ್ಟಿದ್ದಾರೆ.
ಜಮಾದ ಖಾತೆಯು ಎಷ್ಟು ಇರಬೇಕೋ ಅಷ್ಟು......ಏನು ಹೇಳಲಿ? ನೀವೇ ಸ್ವಯಂ ಹೇಳಿ, ಏಕೆಂದರೆ ಸರ್ವ
ಖಜಾನೆಗಳನ್ನು ಜಮಾ ಮಾಡಿಕೊಳ್ಳುವ ಸಮಯವು ಕೇವಲ ಈಗಿನ ಸಂಗಮಯುಗವಾಗಿದೆ ಎನ್ನುವುದನ್ನು
ಬಾಪ್ದಾದಾರವರು ತಿಳಿದುಕೊಂಡಿದ್ದಾರೆ. ಈ ಅತಿ ಚಿಕ್ಕ ಯುಗದಲ್ಲಿ ಎಷ್ಟು ಜಮಾ ಮಾಡಿಕೊಳ್ಳುತ್ತೀರೋ
ಅದರ ಅನುಸಾರವಾಗಿಯೇ ಇಡೀ ಕಲ್ಪದ ಪ್ರಾಲಬ್ದವನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರೋ ಅದರ
ಅನುಸಾರವಾಗಿಯೇ ಇಡೀ ಕಲ್ಪದ ಪ್ರಾಲಬ್ದವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಿರುತ್ತೀರಿ.
ನಿಮ್ಮಲ್ಲೆರದ್ದೂ ಒಂದು ಸ್ಲೋಗನ್ ಇದೆಯಲ್ಲವೇ. ಅದು ಯಾವ ಸ್ಲೋಗನ್ ಆಗಿದೆ? ಈಗಲ್ಲದಿದ್ದರೆ ಪುನಃ
ಎಂದಿಗೂ ಇಲ್ಲ ಈ ಸ್ಲೋಗನ್ ಬುದ್ಧಿಯಲ್ಲಂತೂ ತುಂಬಾ ಇದೆ, ಆದರೆ ಮನಸ್ಸಿನಲ್ಲಿ ಈ ನೆನಪನ್ನು
ಮರೆತುಹೋಗುತ್ತೀರಿ, ನೆನಪು ಇರುತ್ತದೆ. ಎಲ್ಲದಕ್ಕಿಂತಲೂ ಅತಿ ದೊಡ್ಡ ಖಜಾನೆಯು ಈ ಬ್ರಾಹ್ಮಣ
ಜೀವನದ ಶ್ರೇಷ್ಠತೆಯ ಆಧಾರವೂ ಸಹ ಸಂಕಲ್ಪ ಖಜಾನೆ, ಸಮಯದ ಖಜಾನೆ, ಶಕ್ತಿಯ ಖಜಾನೆ, ಜ್ಞಾನದ ಖಜಾನೆ
ಆಗಿದೆ. ಆದರೆ ಸ್ಥೂಲ ಧನದ ಖಜಾನೆಯಂತೂ ಇದ್ದೇ ಇದೆ. ಆದ್ದರಿಂದ ಬಾಪ್ದಾದಾರವರು ಏನು
ನೋಡಿದ್ದಾರೆಂದರೆ ನೀವು ಬ್ರಾಹ್ಮಣರು ಪ್ರತಿಯೊಬ್ಬರು ಎಷ್ಟು ಶ್ರೇಷ್ಠ ಸಂಕಲ್ಪದ ಖಜಾನೆಯ ಮುಖಾಂತರ
ಸ್ವಯಂನ್ನು ಅಥವಾ ಸೇವೆಯನ್ನು ಶ್ರೇಷ್ಠರನ್ನಾಗಿ ಮಾಡಲು ಸಾಧ್ಯವಿದೆಯೋ ಅದರಲ್ಲಿ ಈಗ ಇನ್ನೂ ಬಹಳ
ಗಮನ (ಅಂಡರ್ಲೈನ್ ಮಾಡಬೇಕಾಗಿದೆ) ಕೊಡಬೇಕಾಗಿದೆ.
ಬ್ರಾಹ್ಮಣರಾದ ನಿಮ್ಮ
ಶ್ರೇಷ್ಠ ಸಂಕಲ್ಪದಲ್ಲಿ, ಶುಭ ಸಂಕಲ್ಪದಲ್ಲಿ ಎಷ್ಟು ಶಕ್ತಿ ಇದೆ ಎಂದರೆ ಆತ್ಮರಿಗೆ ಬಹಳ
ಸಹಯೋಗವನ್ನು ಕೊಡಬಹುದು. ಸಂಕಲ್ಪ ಶಕ್ತಿಯ ಮಹತ್ವವನ್ನು ಈಗ ಇನ್ನೂ ಎಷ್ಟು ಹೆಚ್ಚಿಸಿಕೊಳ್ಳಲು
ಬಯಸಿದರೆ ಅಷ್ಟೂ ಹೆಚ್ಚಿಸಿಕೊಳ್ಳಬಹುದು. ಹೇಗೆ ವಿಜ್ಞಾನದ ಸಾಧನವಾದ ರಾಕೆಟನ್ನು ದೂರದಲ್ಲಿ
ಕುಳಿತುಕೊಂಡು ಎಲ್ಲಿ ಬೇಕಾದರೆ ಅಲ್ಲಿ, ಯಾವಾಗ ಬೇಕಾದರೆ ಆಗ, ಯಾವ ಸ್ಥಳಕ್ಕೆ ತಲುಪಲು ಬಯಸುತ್ತೀರೋ
ಅಲ್ಲಿಗೆ ಒಂದು ಸೆಕೆಂಡಿನಲ್ಲಿ ತಲುಪಲು ಸಾಧ್ಯವಿದೆ. ನಿಮ್ಮ ಶುಭ ಶ್ರೇಷ್ಠ ಸಂಕಲ್ಪದ ಮುಂದೆ ಈ
ರಾಕೆಟ್ ಏನಾಗಿದೆ? ಪರಿಷ್ಕೃತ ವಿಧಿಯಿಂದ ಕಾರ್ಯದಲ್ಲಿ ಪ್ರಯೋಗ ಮಾಡಿ ನೋಡಿರಿ. ನಿಮ್ಮ ವಿಧಿಯ
ಸಿದ್ಧಿಯು ತುಂಬಾ ಶ್ರೇಷ್ಠವಾಗಿದೆ. ಆದರೆ ಈಗ ಅಂತರ್ಮುಖತೆಯ ಭಟ್ಟಿಯಲ್ಲಿ ಕುಳಿತುಕೊಳ್ಳಿರಿ.
ಆದುದರಿಂದ ಈ ಹೊಸ ವರ್ಷದಲ್ಲಿ ನಿಮ್ಮ ಸರ್ವ ಖಜಾನೆಗಳ ಉಳಿತಾಯದ ಯೋಜನೆಯನ್ನು ನೀವೇ ತಯಾರು
ಮಾಡಿಕೊಳ್ಳಿ. ಜಮಾದ ಖಾತೆಯನ್ನು ಹೆಚ್ಚಿಸಿಕೊಳ್ಳಿ. ಅಂತರ್ಮುಖತೆಯ ಭಟ್ಟಿಯನ್ನು ಇಡೀ ದಿನದಲ್ಲಿ
ಸ್ವಯಂ ನೀವೇ ನಿಮ್ಮ ಸಲುವಾಗಿ ಸಮಯೋಚಿತವಾಗಿ ನಿಗದಿ ಮಾಡಿಕೊಳ್ಳಿ. ಸ್ವಯಂ ನೀವೇ ಮಾಡಿಕೊಳ್ಳಬಹುದು,
ಬೇರೆಯವರು ನಿಗದಿ ಮಾಡಲು ಸಾಧ್ಯವಿಲ್ಲ.
ಬಾಪ್ದಾದಾರವರು
ಪ್ರತ್ಯಕ್ಷತೆಯ ವರ್ಷಕ್ಕೆ ಮುಂಚೆ ಈ ವರ್ಷವನ್ನು ಸಫಲತಾ ಭವದ ವರ್ಷ ಎಂದು ಕರೆಯುತ್ತಾರೆ. ಸಫಲತೆಯ
ಆಧಾರವು ಪ್ರತಿಯೊಂದು ಖಜಾನೆಯನ್ನು ಸಫಲ ಮಾಡಿಕೊಳ್ಳಬೇಕು. ಸಫಲ ಮಾಡಿಕೊಳ್ಳಿ, ಸಫಲತೆಯನ್ನು
ಪ್ರಾಪ್ತಿ ಮಾಡಿಕೊಳ್ಳಿ. ಸಫಲತೆಯು ಪ್ರತ್ಯಕ್ಷತೆಯನ್ನು ಸ್ವತಹವಾಗಿಯೇ ಪ್ರತ್ಯಕ್ಷ ಮಾಡುವುದು.
ವಚನದ ಮುಖಾಂತರ ಬಹಳ ಉತ್ತಮವಾಗಿ ಮಾಡಿದಿರಿ. ಆದರೆ ಈಗ ಸಫಲತೆಯ ವರದಾನದ ಮೂಲಕ ಬಾಬಾರವರ ಸ್ವಯಂನ
ಪ್ರತ್ಯಕ್ಷತೆಯನ್ನು ಸಮೀಪದಲ್ಲಿ ತೆಗೆದುಕೊಂಡು ಬನ್ನಿರಿ. ಬ್ರಾಹ್ಮಣರ ಪ್ರತಿಯೊಬ್ಬರ ಜೀವನದಿಂದ
ಸರ್ವ ಖಜಾನೆಗಳ ಸಂಪನ್ನತೆಯ ಅನ್ಯ ಆತ್ಮರಿಗೆ ಅನುಭವವಾಗಬೇಕು. ಈಗಿನ ಕಾಲದ ಆತ್ಮರು ನಿಮ್ಮ ಅನುಭವೀ
ಮೂರ್ತಿಯ ಮೂಲಕ ಅನುಭೂತಿಯನ್ನು ಮಾಡಲು ಬಯಸುತ್ತಾರೆ. ಕೇಳಲು ಕಡಿಮೆ ಬಯಸುತ್ತಾರೆ. ಅನುಭೂತಿಯನ್ನು
ಜಾಸ್ತಿ ಬಯಸುತ್ತಾರೆ. ಅನುಭೂತಿಯ ಆಧಾರವು ಖಜಾನೆಗಳ ಜಮಾದ ಖಾತೆಯಾಗಿದೆ. ಈಗ ಇಡೀ ದಿನದಲ್ಲಿ ಮಧ್ಯ
ಮಧ್ಯದಲ್ಲಿ ನಿಮ್ಮ ಈ ಚಾರ್ಟನ್ನು ಪರಿಶೀಲನೆ ಮಾಡಿಕೊಳ್ಳಿ. ಸರ್ವ ಖಜಾನೆಗಳನ್ನು ಎಷ್ಟು ಜಮಾ
ಮಾಡಿಕೊಂಡಿದ್ದೀರಿ ಎನ್ನುವ ಜಮಾದ ಖಾತೆಯನ್ನು ಪರಿಶೀಲನೆ ಮಾಡಿಕೊಳ್ಳಿ. ಜಮಾದ ಖಾತೆಯನ್ನು ತಯಾರ
ಮಾಡಿ. ಲೆಕ್ಕವನ್ನು ತಯಾರು ಮಾಡಿ. ಒಂದು ನಿಮಿಷದಲ್ಲಿ ಎಷ್ಟು ಸಂಕಲ್ಪಗಳು ನಡೆಯುತ್ತವೆ? ಸಂಕಲ್ಪದ
ಗತಿಯು ತೀವ್ರವಾಗಿದೆಯಲ್ಲವೇ, ಎಷ್ಟು ಸಫಲ ಆಗಿದೆ. ಎಷ್ಟು ವ್ಯರ್ಥ ಮಾಡಿದೆವು? ಎಷ್ಟು
ಸಮರ್ಥವಾಗಿದ್ದವು. ಎಷ್ಟು ಸಾಧಾರಣವಾಗಿದ್ದವು? ಇದನ್ನು ಪರಿಶೀಲನೆ ಮಾಡಿಕೊಳ್ಳುವ ಮಷೀನ್ (ಯಂತ್ರ)
ನಿಮ್ಮ ಬಳಿ ಇದೆಯಲ್ಲವೇ? ಶಿಕ್ಷಕಿಯರ ಬಳಿ ಇದೆಯೇ? ಡಬ್ಬಲ್ ವಿದೇಶಿಯರ ಬಳಿ ಇದೆಯೇ? ಕೆಲಸ
ಮಾಡುತ್ತದೆಯೋ ಅಥವಾ ನಿಂತುಹೋಗಿದೆಯೋ? ಪಾಂಡವರ ಬಳಿ ಚೆಕಿಂಗ್ ಮಷೀನ್ ಇದೆಯೇ? ಎಲ್ಲರ ಬಳಿಯೂ ಮಷೀನ್
ಇದೆಯಲ್ಲವೇ? ಎಲ್ಲರ ಬಳಿಯೂ ಇದೆಯೇ? ಯಾರ ಬಳಿಯಾದರೂ ಇಲ್ಲದಿದ್ದರೆ ಅರ್ಜಿ ಹಾಕಿಕೊಳ್ಳಿರಿ. ಹೇಗೆ
ಎಲ್ಲಿಯಾದರೂ ಆಫೀಸ್ ತೆರೆಯಬೇಕಾದರೆ, ಆಫೀಸನ್ನು ವ್ಯವಸ್ಥೆ ಮಾಡುವುದಕ್ಕಿಂತ ಮುಂಚಿ ವಿಚಾರ
ಮಾಡುತ್ತೀರಿ, ಈಗಿನ ಕಾಲದಲ್ಲಿ ಕಂಪ್ಯೂಟರ್ ಬೇಕಾಗುತ್ತದೆ, ಈ ಮೇಲ್, ಟೈಪ್ ರೈಟರ್, ಜಿರಾಕ್ಸ್
ಮಷಿನ್ ಬೇಕಾಗುತ್ತದೆ. ಬೇಕಾಗುತ್ತದೆಯಲ್ಲವೇ? ಹಾಗೆಯೇ ಬ್ರಾಹ್ಮಣ ಜೀವನದಲ್ಲಿ ನಿಮ್ಮ ಮನಸ್ಸಿನ
ಆಫೀಸ್ನಲ್ಲಿ ಈ ಎಲ್ಲಾ ಯಂತ್ರಗಳು ಇವೆಯೇ? ಅಥವಾ ಇಲ್ಲವೋ?
ಬಾಪ್ದಾದಾರವರು ಮುಂಚೆಯೂ
ಸಹ ಏನು ತಿಳಿಸಿದ್ದಾರೆಂದರೆ ತಾನು ಎವರ್ರೆಡಿ ಸದಾ ಸಿದ್ಧ ಆಗಿದ್ದೇನೆಂದು ತಿಳಿಸುವ ಸಲುವಾಗಿ
ಬಾಪ್ದಾದಾರವರ ಬಳಿ ಪ್ರಕೃತಿಯೂ ಸಹ ಬರುತ್ತದೆ. ಸಮಯವು ಬ್ರಾಹ್ಮಣರು ತಯಾರಾಗಿದ್ದಾರೆಯೇ ಎಂದು
ಬ್ರಾಹಣರನ್ನು ಮತ್ತೆ ಮತ್ತೆ ನೋಡುತ್ತಾ ಇರುತ್ತದೆ. ಬ್ರಾಹ್ಮಣರ ಬಳಿ ಮತ್ತೆ ಮತ್ತೆ
ಸುತ್ತುಹಾಕುತ್ತದೆ. ಆದ್ದರಿಂದ ಬಾಪ್ದಾದಾರವರು ಮಕ್ಕಳನ್ನು ಕೇಳುತ್ತಾರೆ. ಕೈಯಂತು ಬಹಳ ಚೆನ್ನಾಗಿ
ಎತ್ತುತ್ತೀರಿ. ಬಾಪ್ದಾದಾರವರೂ ಸಹ ಖುಷಿಯಾಗಿ ಬಿಡುತ್ತಾರೆ. ಈಗ ಹೇಗೆ ಎವರೆಡಿ ಆಗಬೇಕೆಂದರೆ
ಪ್ರತಿಯೊಂದು ಸಂಕಲ್ಪ, ಪ್ರತಿಯೊಂದು ಸೆಕೆಂಡ್, ಪ್ರತಿಯೊಂದು ಶ್ವಾಸ ಏನು ವ್ಯತೀತವಾಗುತ್ತದೆಯೋ ಅದು
ವಾಹ್! ವಾಹ್! ಎಂದು ಪ್ರಶಂಸಾರ್ಹವಾಗಿರಬೇಕು. ಅಯ್ಯೋ ಅಲ್ಲ ವಾಹ್! ವಾಹ್! ಎನ್ನುವಂತಹರಾಗಬೇಕು.
ಈಗ ಒಮ್ಮೊಮ್ಮೆ ವಾಹ್ ವಾಹ್! ಎನ್ನುವಂತ ಸಮಯವಿರುತ್ತದೆ, ಒಮ್ಮೊಮ್ಮೆ ವಾಹ್ ಎನ್ನುವುದಕ್ಕೆ ಬದಲಾಗಿ
ಅಯ್ಯೋ ಎನ್ನುವಂತಹದಾಗಿ ಬಿಡುತ್ತದೆ. ಒಂದೊಂದು ಸಮಯದಲ್ಲಿ ಬಿಂದು ಹಾಕುತ್ತಾರೆ, ಒಂದೊಂದು
ಸಮಯದಲ್ಲಿ ಪ್ರಶ್ನಾರ್ಥಕ ಚಿಹ್ನೆ ಹಾಗೂ ಆಶ್ಚರ್ಯದ ಚಿಹ್ನೆಯು ಬಂದುಬಿಡುತ್ತದೆ. ನಿಮ್ಮೆಲ್ಲರ
ಮನಸ್ಸೂ ಸಹ ಭೇಷ್ ಎಂದು ಹೇಳ ಬೇಕು. ಹಾಗೂ ಯಾರ ಸಂಬಂಧ -ಸಂಪರ್ಕದಲ್ಲಿ ಬರುತ್ತೀರೋ, ಅದು
ಬ್ರಾಹ್ಮಣರ ಸಂಬಂಧ ಸಂಪರ್ಕವಾಗಿರಬಹುದು ಅಥವಾ ಸೇವೆಯನ್ನು ಮಾಡುವವರ ಸಂಬಂಧ ಸಂಪರ್ಕವಾಗಿರಬಹುದು.
ಅವರ ಮೂಲಕ ಭೇಷ್-ಭೇಷ್ ಎನ್ನುವ ಶಬ್ದವು ಬರಬೇಕು. ಒಳ್ಳೆಯದು.
ಬಾಪ್ದಾದಾ ಗ್ರೇಟ್
ಗ್ರೇಟ್ ಗ್ರಾಂಡ್ ಫಾದರ್ ಬ್ರಹ್ಮಾಬಾಬಾರವರ ಒಂದು ಶುಭ ಆಸೆಯು ಈ ದಿನ ಏನು ಇದೆ? ನನ್ನ ಗ್ರೇಟ್
ಗ್ರೇಟ್ ಗ್ರಾಂಡ್ ಸನ್ಸ್ಗೆ ವಿಶೇಷವಾಗಿ ಒಂದು ಮಾತನ್ನು ಹೇಳಬೇಕಾಗಿದೆ. ಅದು ಏನಾಗಿದೆ ಎಂದರೆ ಸದಾ
ಮಕ್ಕಳು ಪ್ರತಿಯೊಬ್ಬರ ಮುಖದಲ್ಲಿ ಒಂದನೆಯದಾಗಿ ಸದಾ ಆತ್ಮೀಯತೆಯ ಮಗುಳ್ಳಗೆ ಇರಬೇಕು.
ಕೇಳಿಸಿಕೊಂಡಿರಾ? ಚೆನ್ನಾಗಿ ಕಿವಿ, ತೆಗೆದು ಕೇಳಿರಿ. ಹಾಗೂ ಎರಡನೆಯದಾಗಿ ಬಾಯಿಯಿಂದ ಬರುವ
ವಚನದಲ್ಲಿ ಮಧುರತೆಯು ಸದಾ ಇರಲಿ. ಒಂದು ಶಬ್ದವೂ ಸಹ ಮಧುರತೆ ಇಲ್ಲದುದು ಬರಬಾರದು. ಮುಖದಲ್ಲಿ
ಆತ್ಮೀಯತೆಯು ಇರಲಿ. ಬಾಯಿಯ ನುಡಿತಯಲ್ಲಿ ಮಧುರತೆ ಇರಲಿ. ಹಾಗೂ ಮನಸ್ಸು ಬುದ್ಧಿಯಲ್ಲಿ ಸದಾ
ಶುಭಭಾವನೆ ದಯಾಹೃದಯದ ಭಾವನೆ, ದಾತಾತನದ ಭಾವನೆ ಇರಲಿ. ಪ್ರತಿಯೊಂದು ಹೆಜ್ಜೆಯಲ್ಲಿ ಸದಾ ಶುಭಭಾವನೆ,
ದಯಾಹೃದಯದ ಭಾವನೆ, ದಾತಾತನದಭಾವನೆ ಇರಲಿ. ಪ್ರತಿಯೊಂದು ಹೆಜ್ಜೆಯಲ್ಲಿಯೂ ಸಹ ತಂದೆಯನ್ನು
ಅನುಸರಿಸಬೇಕು, ಅನುಸರಿಸಲು ಆಗುತ್ತದೆಯೇ? ನಿಮಿತ್ತ ಸಹೋದರಿಯರು ಇದನ್ನು ಮಾಡಬಲ್ಲಿರಾ? ಯುವ
ವರ್ಗದವರು ತಂದೆಯನ್ನು ಅನುಸರಿಸಲು ಆಗುತ್ತದೆಯೇ? ಬಾಪ್ದಾದಾರವರ ಬಳಿ ಯುವಕರಿಂದ ಉತ್ತಮವಾದ
ಫಲಿತಾಂಶ ಬಂದಿದೆ. ತಮ್ಮ ಉತ್ತಮವಾದ ಫಲಿತಾಂಶಕ್ಕೆ ಪದಮಗಳಷ್ಟು ಅಭಿನಂದನೆಗಳು. ಯುವಕರು ಬಹಳ
ಉತ್ತಮವಾದ ಅನುಭವವನ್ನು ಮಾಡಿರುವುದನ್ನು ನೋಡಿ ಬಾಪ್ದಾದಾ ಖುಷಿಯಾದರು. ಹಾಗೂ ತಮ್ಮ ಅನುಭವವನ್ನು
ಸಮ್ಮುಖದಲ್ಲಿ ಕೇಳಿದರು. ಆದರೆ ಈಗ ಈ ಅನುಭವವನ್ನು ಅಮರ ಭವದ ವರದಾನದಿಂದ
ಅವಿನಾಶಿಯಾಗಿಟ್ಟುಕೊಳ್ಳಬೇಕು. ಏನೇ ಆದರೂ ಸಹ ನಿಮ್ಮ ಆತ್ಮಿಕ ಅನುಭವವನ್ನು ಸದಾ ವೃದ್ಧಿ
ಮಾಡಿಕೊಳ್ಳುತ್ತಾ ಇರಿ. ಆದರೆ ನಿಮ್ಮ ಅನುಭವ ಕಡಿಮೆ ಆಗಬಾರದು. ಮೂರು ತಿಂಗಳಿನ ನಂತರ ನೀವು
ಮಧುಬನದಲ್ಲಿ ಬರಬಹುದು ಅಥವಾ ಬಾರದಿರಬಹುದು. ಏಕೆಂದರೆ ಮೂರು ತಿಂಗಳಿನ ನಂತರ ವಿದೇಶಗಳಿಂದಂತೂ ಬರಲು
ಸಾಧ್ಯವಿಲ್ಲ ಆದರೆ ನಿಮ್ಮ ಖಾತೆಯನ್ನು ಇಟ್ಟುಕೊಂಡು ಬಾಪ್ದಾದಾರವರ ಬಳಿ ಕಳುಹಿಸಿಕೊಡಬೇಕು. ತಮ್ಮ
ಲೆಕ್ಕ ಖಾತೆಯನ್ನು ಬಾಪ್ದಾದಾರವರು ಸರಿಯಾಗಿದೆಯೇ ಎಂದು ಹೇಳುತ್ತಾ ಅದು ಎಷ್ಟು ಪಸರ್ಂಟೇಜನ್ನು (ಶೇಕಡ)
ತಿಳಿಸುವರು. ಈ ರೀತಿ ಮಾಡುವುದು ಸರಿಯಾಗಿದೆಯಲ್ಲವೇ? ಸರಿಯಾಗಿದೆ ಎನ್ನುವುದಾದರೆ ಒಂದು ಕೈನ
ಚಪ್ಪಾಳೆ ತಟ್ಟಿರಿ. ಒಳ್ಳೆಯದು.
ಇಂದು ಶುಭಾಶಯಗಳ
ದಿನವಾಗಿರುವುದರಿಂದ ಇನ್ನೂ ಒಂದು ಶುಭ ಸಮಾಚಾರವನ್ನು ಕೇಳಿದೆವು ಹಾಗೂ ನೋಡಿಯೂ ಸಹ ನೋಡಿದರು.
ಸಣ್ಣ ಸಣ್ಣ ಮಕ್ಕಳು ಕಿರೀಟಧಾರಿಗಳಾಗಿ ಕುಳಿತುಕೊಂಡಿದ್ದಾರೆ. ನಿಮಗಂತೂ ಕಿರೀಟವು ಸತ್ಯಯುಗದಲ್ಲಿ
ಸಿಗುತ್ತದೆ, ಆದರೆ ಇವರಿಗೆ ಈಗಲೇ ಸಿಕ್ಕಿಬಿಟ್ಟಿದೆ. ನಿಂತುಕೊಳ್ಳಿರಿ. ಎಲ್ಲರೂ ಕಿರೀಟಧಾರಿ
ತಂಡವನ್ನು ನೋಡಿರಿ. ಮಕ್ಕಳು ಸದಾ ಸತ್ಯ ಹೃದಯದವರಾಗಿರುತ್ತಾರೆ. ಇವರು ಭಾಷೆಯನ್ನು ಅರ್ಥ
ಮಾಡಿಕೊಳ್ಳದಿರಬಹುದು, ಆದರೆ ಸತ್ಯ ಹೃದಯವುಳ್ಳವರಾಗಿದ್ದೀರಲ್ಲವೇ! ಒಳ್ಳೆಯದಾಯಿತು. ಮಕ್ಕಳ ಉತ್ತಮ
ಫಲಿತಾಂಶವನ್ನೂ ಸಹ ಬಾಪ್ದಾದಾ ನೋಡಿದರು, ಅಭಿನಂದನೆಗಳು. ಒಳ್ಳೆಯದು.
ಡಬ್ಬಲ್ ವಿದೇಶಿಯರು:-
ಇವರ ಪತ್ರ ಹಾಗೂ ಚೀಟಿಗಳನ್ನೂ ಸಹ ನೋಡಿದರು. ಆದರೆ ಕೆಲವು ಚೀಟಿಗಳಲ್ಲಿ ಬಾಪ್ದಾದಾ ಒಂದು ಮಾತನ್ನು
ನೋಡಿದರು. ಕೆಲವರು ಬಹಳ ಉಮ್ಮಂಗ ಉತ್ಸಾಹದಿಂದ ತಮ್ಮ ಪರಿವರ್ತನೆಯನ್ನೂ ಸಹ ಬರೆದಿದ್ದಾರೆ. ಕೆಲವರು
ತಮ್ಮ ಉತ್ಸಾಹವನ್ನು ಬರೆದಿದ್ದಾರೆ. ಆದರೆ ಕೆಲವರು ತಮ್ಮ ಸ್ವಲ್ಪ ಹುಡುಗಾಟಿಕೆಯನ್ನು
ವ್ಯಕ್ತಪಡಿಸಿದ್ದಾರೆ. ಆದರೆ ಎಂದಿಗೂ ಹುಡುಗಾಟಿಕೆ ಬಾರದಂತೆ ಎಚ್ಚರಿಕೆಯಿಂದ ಇರಬೇಕು.
ಬಾಪ್ದಾದಾರವರಿಗೆ ಮೊದಲನೆಯದಾಗಿ ಹುಡುಗಾಟಿಕೆ ಇಷ್ಟವಾಗುವುದಿಲ್ಲ ಹಾಗೂ ಎರಡನೆಯದಾಗಿ ಮನಸ್ಸನ್ನು
ಕಿನ್ನ ಮಾಡಿಕೊಳ್ಳುವುದೂ ಸಹ ಇಷ್ಟವಾಗುವುದಿಲ್ಲ. ಏನೇ ಆದರೂ ವಿಶಾಲ ಮನಸ್ಸನ್ನು ಇಟ್ಟುಕೊಳ್ಳಿ.
ಮನಸ್ಸು ಕಿನ್ನವಾದಾಗ ಮನಸ್ಸು ಸಂಕುಚಿತವಾಗುತ್ತದೆ. ಮನಸ್ಸಿನ ಖುಷಿ ವಿಶಾಲ
ಮನಸ್ಸುವುಳ್ಳದ್ದಾಗಿರುತ್ತದೆ. ಆದುದರಿಂದ ಮನಸ್ಸನ್ನು ಕಿನ್ನ ಮಾಡಿಕೊಳ್ಳಬಾರದು ಹಾಗೂ
ಹುಡುಗಾಟಿಕೆಯಲ್ಲಿ ಬರಬಾರದು. ಸದಾ ಉಮ್ಮಂಗ ಉತ್ಸಾಹದಲ್ಲಿ ಹಾರುತ್ತಿರಬೇಕು. ಬಾಪ್ದಾದಾ ಡಬ್ಬಲ್
ವಿದೇಶದವರಲ್ಲಿ ಎಣಿಸಲಾರದಷ್ಟು ಆಸೆಗಳಿವೆ. ಭಾರತೀಯ ಆತ್ಮರು ಆಶ್ಚರ್ಯಚಕಿತರಾಗುವಂತೆ ಡಬ್ಬಲ್
ವಿದೇಶದವರು ತಮ್ಮ ಪ್ರತಿಭೆಯನ್ನು ತೋರಿಸಬೇಕು. ಆ ದಿನವೂ ಸಹ ಅತಿ ಶೀಘ್ರದಲ್ಲಿಯೇ ಬರಲಿದೆ. ಆ ದಿನ
ಬರುತ್ತದೆಯಲ್ಲವೇ! (ಅತಿ ಬೇಗ ಬೇಗ ಬರಲಿದೆ) ಹೌದು ಎಂದಾದರೂ ಹೇಳಿರಿ. ಆ ದಿನದ ಸಲುವಾಗಿ ಬಾಪ್ದಾದಾ
ಮುಂಗಡವಾಗಿಯೇ ಅಭಿನಂದನೆಗಳ ತಟ್ಟೆಗಳನ್ನು ತುಂಬಿಕೊಡುತ್ತಿದ್ದಾರೆ. ಡಬ್ಬಲ್ ವಿದೇಶದವರಲ್ಲಿ ಇಂತಹ
ಧೈರ್ಯವನ್ನು ನೋಡುತ್ತಿದ್ದೀರಲ್ಲವೇ. ಧೈರ್ಯವುಳ್ಳವರಲ್ಲವೇ? ವಿದೇಶಗಳಲ್ಲಿಯೂ ಸಹ ಬಹಳಷ್ಟು
ಭರವಸೆಗಳಿವೆ. ಬಹಳ ಚೆನ್ನಾಗಿದೆ. ಉತ್ತಮ ಯುವಕರೂ ಸಹ ಇದ್ದಾರೆ. ಪ್ರವೃತ್ತಿಯಲ್ಲಿರುವವರು,
ಕುಮಾರಿಯರೂ ಸಹ ಬಹಳಷ್ಟು ಇದ್ದಾರೆ. ವಿದೇಶದ ಮಕ್ಕಳು ಕಮಾಲ್ ಮಾಡಿದ್ದಾರೆ. ಸರಿಯಲ್ಲವೇ. ಸಿಂಧಿ
ಪರಿವಾರದವರು ಹೇಳಿ ಏನು ಕಮಾಲ್ ಮಾಡುತ್ತೀರಿ? ಆದರೆ ನೀವು ಬ್ರಾಹ್ಮಣರಾಗಿದ್ದು ನಿಮಿತ್ತ
ಮಾತ್ರವಾಗಿ ಸಿಂಧಿಗಳಾಗಿದ್ದೀರಿ. ಏನು ಮಾಡುತ್ತೀರಿ ಹೇಳಿ? (ತಂದೆಯ ಹೆಸರನ್ನು ಪ್ರಖ್ಯಾತ
ಮಾಡುವೆವು) ಯಾವಾಗ ಮಾಡುವಿರಿ? (ಈ ವರ್ಷದಲ್ಲಿ) ನಿಮ್ಮ ಬಾಯಿಯಲ್ಲಿ ಗುಲಾಬ್ ಜಾಮೂನ್ ಬೀಳಲಿ.
ಧೈರ್ಯಶಾಲಿಗಳಾಗಿದ್ದಾರೆ. (ನಿಮ್ಮ ವರದಾನ ಜೊತೆಯಲ್ಲಿದೆ) ವರದಾತ ತಂದೆಯೇ ಜೊತೆ ಇರುವಾಗ ವರದಾನ
ದೊಡ್ಡ ಮಾತೇನಿಲ್ಲ. ಒಳ್ಳೆಯದು.
ಯಾರು ಈ ಕಲ್ಪದಲ್ಲಿ
ಮೊದಲನೆಯ ಬಾರಿ ಬಂದಿದ್ದೀರೋ ಅವರು ನಿಂತುಕೊಳ್ಳಿ. ಯಾರು ಮೊದಲನೆಯ ಸಲ ಬಂದಿರುವಂತಹ ಮಕ್ಕಳಿಗೆ
ಬಾಪ್ದಾದಾ ಈ ರೀತಿ ಹೇಳುತ್ತಿದ್ದಾರೆ - ನೀವು ಅಂತ್ಯದಲ್ಲಿ ಬಂದಿದ್ದರೂ ಸಹ ಮುಂದೆ ಹೋಗಬೇಕು. ಹೇಗೆ
ಮುಂದುವರೆಯಬೇಕೆಂದರೆ ನಿಮ್ಮನ್ನು ಎಲ್ಲರೂ ನೋಡಿ ಖುಷಿಯಾಗಬೇಕು. ಹಾಗೂ ಎಲ್ಲರ ಮುಖದಿಂದ ಇದು ಕಮಾಲ್
ಆಗಿದೆ..... ಕಮಾಲ್ ಆಗಿದೆ.... ಕಮಾಲ್ ಆಗಿದೆ.. ಶಬ್ದವು ಬರಬೇಕು. ಇಷ್ಟೊಂದು ಧೈರ್ಯವೂ ಇದೆಯೇ?
ಮೊದಲನೆಯ ಸಲ ಬಂದಿರುವವರಿಗೆ ಧೈರ್ಯ ಇದೆಯಲ್ಲವೇ! ಹೊಸ ವರ್ಷವನ್ನು ಆಚರಣೆ ಮಾಡಲು ಬಂದಿರುವುದರಿಂದ
ಈ ವರ್ಷದಲ್ಲಿ ಏನಾದರು ಕಮಾಲ್ ಮಾಡುತ್ತೀರಲ್ಲವೇ! ಆದರೂ ಸಹ ಬಾಪ್ದಾದಾರವರಿಗೆ ಎಲ್ಲಾ ಮಕ್ಕಳು ಅತಿ
ಪ್ರಿಯವಾಗಿದ್ದಾರೆ ಏಕೆಂದರೆ ಕೊನೆಗು ಮಕ್ಕಳು ಬಹಳ ಬುದ್ದಿವಂತಿಕೆಯ ಕಾರ್ಯವನ್ನು ಮಾಡುತ್ತಾರೆ,
ಏನೆಂದರೆ ಟೂ ಲೇಟ್ ಆಗುವ ಮೊದಲೇ ತಂದೆಯ ಮಕ್ಕಳಾಗಿದ್ದೀರಿ. ಇಷ್ಟೊಂದು ಅಂತ್ಯದಲ್ಲಿ ಬಂದಿದ್ದರೂ
ಸಹ ಈ ವಿಶಾಲ ಪ್ರಾಂಗಣದಲ್ಲಿ ಕುಳಿತುಕೊಳ್ಳಲು ಸ್ಥಳಾವಕಾಶ ಸಿಕ್ಕಿದೆಯಲ್ಲವೆ? ವಿಶ್ರಾಂತಿಗಾಗಿ
ಮಂಚ ಅಥವಾ ಹಾಸಿಗೆಯಂತು ದೊರೆತಿದೆಯಲ್ಲವೇ! ಆದರೆ ಯಾವಾಗ ಟೂ ಲೇಟ್ ಬೋರ್ಡ್ ಹಾಕಲ್ಪಡುತ್ತದೆ, ಆಗ
ಕ್ಯೂನಲ್ಲಿ ನಿಲ್ಲಬೇಕಾಗುತ್ತದೆ, ಆದುದರಿಂದ ಉತ್ತಮ ಸಮಯದಲ್ಲಿ ಬಾಪ್ದಾದಾರವರನ್ನು ಗುರುತಿಸಿ
ಅರಿತುಕೊಂಡಿದ್ದೀರಿ. ಈ ರೀತಿ ನೀವು ಬಹಳ ಬುದ್ದಿವಂತಿಕೆ ಕಾರ್ಯವನ್ನು ಮಾಡಿದ್ದೀರಿ.
ವಿಶ್ವದ ನಾಲ್ಕೂ ಕಡೆಯ
ಸರ್ವ ಸಫಲತಾಮೂರ್ತಿ ಮಕ್ಕಳಿಗೆ, ಸರ್ವವನ್ನು ಸಫಲ ಮಾಡಿಕೊಳ್ಳುವ ತೀವ್ರ ಪುರುಷಾರ್ಥಿ ಮಕ್ಕಳಿಗೆ,
ಸದಾ ತಮ್ಮ ಖಾತೆಯನ್ನು ಪರಿಶೀಲನೆ ಮಾಡಿಕೊಳ್ಳುವ ಲೆಕ್ಕ ಪರಿಶೋಧಕರು ಹಾಗೂ ಭವಿಷ್ಯದ ರಚನೆಕಾರರು,
ಇಂತಹ ಶ್ರೇಷ್ಠ ಆತ್ಮಗಳೀಗೆ ಸದಾ ತಮ್ಮ ಪ್ರತಿಯೊಂದು ಹೆಜ್ಜೆಯಲ್ಲಿ ತಂದೆಯನ್ನು ಪ್ರತ್ಯಕ್ಷ
ಮಾಡುವವರು, ಗ್ರೇಟ್, ಗ್ರೇಟ್ ಗ್ರಾಂಡ್ಫಾದರಿನ ಸರ್ವ ಗ್ರಾಂಡ್ ಸನ್ಸ್ರಿಗೆ ಬಾಪ್ದಾದಾರವರ ಬಹಳ...ಬಹಳ...ಬಹಳ...ಬಹಳ...
ನೆನಪು, ಪ್ರೀತಿ, ಶುಭಾಷಯಗಳು ಹಾಗೂ ನಮಸ್ತೆ.
ಬಾಪ್ದಾದಾ ದೇಶ ವಿದೇಶದ
ಎಲ್ಲಾ ಮಕ್ಕಳಿಗೆ ಹೊಸ ವರ್ಷದ ಶುಭಾಶಯಗಳನ್ನು ಕೊಟ್ಟರು:
ನಾಲ್ಕೂ ಕಡೆಯ ಸಫಲತೆಯ
ನಕ್ಷತ್ರಗಳಿಗೆ ಹಳೆಯ ವರ್ಷದ ಬೀಳ್ಕೊಡುಗೆ ಹಾಗೂ ಹೊಸ ವರ್ಷದ ಶುಭಾಶಯಗಳೊಂದಿಗೆ ಸಂಗಮಯುಗದ ಸಂಗಮ
ಸಮಯಕ್ಕೂ ಸಹ ಬೀಳ್ಕೊಡಿಗೆಯಿದೆ. ಸದಾ ಸಫಲ ಆಗಿದ್ದೀರಿ ಹಾಗೂ ಸಫಲ ಆಗಿರುತ್ತೀರಿ, ಎಂದಿಗೂ
ಅಸಫಲತೆಯ ಹೆಸರು ಚಿಹ್ನೆಯೂ ಸಹ ಇರುವುದಿಲ್ಲ. ಬಾಪ್ದಾದಾರವರ ಬಹಳ ಅಗಲಿ ಹೋಗಿ ಸಿಕ್ಕಿರುವಂತಹ ಅತಿ
ಪ್ರಿಯ, ಅತಿ ಮಧುರ, ಕಣ್ಣಿನ ಕಣ್ಮಣಿಗಳಾಗಿದ್ದೀರಿ. ಎಲ್ಲರೂ ನಂಬರ್ವನ್ ಆಗಲೇಬೇಕು ಎನ್ನುವ ದೃಢ
ಸಂಕಲ್ಪದಿಂದ ಪ್ರತಿಯೊಂದು ಹೆಜ್ಜೆಯನ್ನು ತಂದೆ ಸಮಾನ ಇಡುತ್ತಿರಿ. ಆಗ ಪದಮಾಗುಣಗಳಷ್ಟು,
ಎಣಿಸಲಾರದ, ಶುಭಾಶಯಗಳು...ಶುಭಾಶಯಗಳು...ಶುಭಾಶಯಗಳು.
ಬಾಪ್ದಾದಾರವರ ಅಮೂಲ್ಯ
ವಜ್ರಗಳಿಗೆ ಡೈಮಂಡ್ ಮಾರ್ನಿಂಗ್..... ಡೈಮಂಡ್ ಮಾರ್ನಿಂಗ್..... ಡೈಮಂಡ್ ಮಾರ್ನಿಂಗ್
ವರದಾನ:
ಸೇವೆಯ
ಉಮಂಗ-ಉತ್ಸಾಹದ ಮೂಲಕ ಸುರಕ್ಷತೆಯ ಅನುಭವ ಮಾಡುವಂತಹ ಮಾಯಾಜೀತ್ ಭವ.
ಯಾವ ಮಕ್ಕಳು ಸ್ಥೂಲ
ಕಾರ್ಯದ ಜೊತೆ-ಜೊತೆಗೆ ಆತ್ಮೀಯ ಸೇವೆಗಾಗಿ ಓಡುತ್ತಾರೆ, ಎವರೆಡಿಯಾಗಿರುತ್ತಾರೆ ಅಂತಹವರಿಗೆ ಈ
ಸೇವೆಯ ಉಮಂಗ-ಉತ್ಸಾಹ ಸಹಾ ಸುರಕ್ಷತೆಯ ಸಾಧನವಾಗಿ ಬಿಡುವುದು. ಯಾರು ಸೇವೆಯಲ್ಲಿಯೇ ತೊಡಗಿರುತ್ತಾರೆ
ಅವರು ಮಾಯೆಯಿಂದ ಸುರಕ್ಷಿತರಾಗಿರುತ್ತಾರೆ. ಮಾಯೆ ಸಹ ನೋಡುತ್ತೆ ಇವರಿಗೆ ಬಿಡುವಿಲ್ಲದಿದ್ದರೆ ಅದು
ಸಹ ವಾಪಸ್ಸು ಹೋಗಿ ಬಿಡುವುದು. ಯಾವ ಮಕ್ಕಳಿಗೆ ತಂದೆ ಮತ್ತು ಸೇವೆಯೊಂದಿಗೆ ಪ್ರೀತಿಯಿದೆ ಅವರಿಗೆ
ಅಧಿಕ ಸಾಹಸದ ಸಹಯೋಗ ಸಿಗುವುದು, ಯಾವುದರಿಂದ ಸಹಜವಾಗಿ ಮಾಯಾಜೀತ್ ಆಗಿ ಬಿಡುವರು.
ಸ್ಲೋಗನ್:
ಜ್ಞಾನ ಮತ್ತು
ಯೋಗವನ್ನು ನಿಮ್ಮ ಜೀವನದ ಸ್ವಭಾವವನ್ನಾಗಿ ಮಾಡಿಕೊಳ್ಳಿ, ಆಗ ಹಳೆಯ ಸ್ವಭಾವ ಬದಲಾಗಿ ಬಿಡುವುದು.
ಸೂಚನೆ: ಇಂದು ತಿಂಗಳಿನ
ಮೂರನೇ ರವಿವಾರ ಅಂತರರಾಷ್ಟ್ರೀಯ ಯೋಗ ದಿವಸವಾಗಿದೆ, ಎಲ್ಲಾ ಬ್ರಹ್ಮಾ ವತ್ಸರು ಸಂಘಟಿತ ರೂಪದಲ್ಲಿ
ಸಂಜೆ 6.30ಯಿಂದ 7.30ರವರೆಗೆ ವಿಶೇಷ ಸಂತುಷ್ಟಮಣಿಯಾಗಿ ವಾಯುಮಂಡಲದಲ್ಲಿ ಸಂತುಷ್ಟತೆಯ ಕಿರಣಗಳನ್ನು
ಹರಡಿಸಿರಿ. ಅಸಂತುಷ್ಟ ಆತ್ಮರಿಗೆ ಸಂತುಷ್ಟರಾಗಿರುವಂತಹ ಶಕ್ತಿ ಕೊಡಿ, ಮನಸ್ಸಾ ಸೇವೆಯನ್ನು ಮಾಡಿ.