15.12.24 Avyakt Bapdada
Kannada
Murli 28.02.2003 Om Shanti Madhuban
"ಸೇವೆಯ ಜೊತೆ-ಜೊತೆಗೆ
ಈಗ ಸಂಪನ್ನರಾಗುವ ಪ್ಲಾನ್ ಮಾಡಿ, ಕರ್ಮಾತೀತರಾಗುವಂತಹ ಗುಂಗಿನಲ್ಲಿ ತೊಡಗಿರಿ”
ಇಂದು ಶಿವತಂದೆ ತಮ್ಮ
ಸಾಲಿಗ್ರಾಮ ಮಕ್ಕಳ ಜೊತೆ ತಮ್ಮ ಹಾಗೂ ಮಕ್ಕಳ ಆವತರಣೆಯ ಜಯಂತಿಯನ್ನು ಆಚರಿಸಲು ಬಂದಿದ್ದೇವೆ. ಈ
ಅವತರಣೆಯ ಜಯಂತಿಯು ಎಷ್ಟೊಂದು ಅದ್ಭುತವಾಗಿದೆ. ನಾಲ್ಕೂ ಕಡೆಯ ಎಲ್ಲಾ ಮಕ್ಕಳು ತಂದೆಯ ಹಾಗೂ ತಮ್ಮ
ಜಯಂತಿಯನ್ನು ಆಚರಿಸುವುದಕ್ಕೋಸ್ಕರ ಓಡೋಡಿ, ಬಂದಿದ್ದೀರಿ. ತಂದೆ ಮತ್ತು ಮಕ್ಕಳ ಜಯಂತಿ ಅರ್ಥಾತ್
ಅವತರಣೆಯ ದಿವಸವು ಒಂದೇ ಆಗಿದೆ. ಒಂದೇ ದಿವಸ ತಂದೆ ಮತ್ತು ಮಕ್ಕಳ ಜನ್ಮದಿನವಾಗುವಂತಹದ್ದು ಇದು
ಅದ್ಭುತವಾಗಿದೆ. ಅಂದಾಗ ಇಂದು ತಾವೆಲ್ಲ ಸಾಲಿಗ್ರಾಮ ಮಕ್ಕಳು ತಂದೆಗೆ ಶುಭಾಷಯಗಳನ್ನು ಕೊಡಲು
ಬಂದಿದ್ದೀರಾ ಅಥವಾ ತಂದೆಯಿಂದ ಶುಭಾಷಯಗಳನ್ನು ತೆಗೆದುಕೊಳ್ಳಲು ಬಂದಿದ್ದೀರಾ? ಕೊಡಲೂ ಬಂದಿದ್ದೀರಿ
ಹಾಗೂ ತೆಗೆದುಕೊಳ್ಳಲೂ ಬಂದಿದ್ದೀರಿ. ಜೊತೆ- ಜೊತೆಯ ಚಿಹ್ನೆ ಏನೆಂದರೆ-ತಾವು ಮಕ್ಕಳ ಹಾಗೂ ತಂದೆಯ
ನಡುವೆ ಪರಸ್ಪರ ತುಂಬಾ ತುಂಬಾ ತುಂಬಾ ಸ್ನೇಹವಿದೆ. ಆದ ಕಾರಣ ಜನ್ಮವೂ ಸಹ ಜೊತೆ- ಜೊತೆಯಿದೆ ಮತ್ತು
ಇಡೀ ಜನ್ಮ ಕಂಬೈಂಡ್ ಅರ್ಥಾತ್ ಜೊತೆಯಲ್ಲಿಯೇ ಇರುತ್ತೀರಿ. ಇಷ್ಟೊಂದು ಪ್ರೀತಿಯನ್ನು ನೋಡಿದ್ದೀರಾ!
ಒಂದುವೇಳೆ ಕರ್ತವ್ಯವೂ ಸಹ ತಂದೆ ಮತ್ತು ಮಕ್ಕಳದು ಒಂದೇ ವಿಶ್ವ ಪರಿವರ್ತನೆ ಮಾಡುವ ಕರ್ತವ್ಯವಾಗಿದೆ
ಮತ್ತು ಪ್ರತಿಜ್ಞೆಯೂ ಏನಾಗಿದೆ? ಅದೇನೆಂದರೆ ಪರಮಧಾಮ, ಮಧುರ ಮನೆಗೂ ಸಹ ಜೊತೆ-ಜೊತೆಯಲ್ಲಿಯೇ
ಹೋಗುತ್ತೇವೆ ಎಂತಲೋ ಅಥವಾ ಹಿಂದೆ ಹೋಗುತ್ತೇವೆ ಎಂತಲೋ? ಜೊತೆ-ಜೊತೆಗೆ ಹೋಗಬೇಕಾಗಿದೆ ಅಲ್ಲವೇ!
ಅಂದಾಗ ಇಂತಹ ಸ್ನೇಹ ನಿಮ್ಮ ಮತ್ತು ತಂದೆಯದಾಗಿದೆ. ತಂದೆಯೊಬ್ಬರೇ ಏನೂ ಮಾಡಲು ಆಗುವುದಿಲ್ಲ ಮಕ್ಕಳು
ಸಹ ಒಬ್ಬರೇ ಏನೂ ಮಾಡಲು ಆಗುವುದಿಲ್ಲ. ಮಾಡಲಾಗುತ್ತದೆಯೇ? ಕೇವಲ ತಂದೆಯ ವಿನಹ ಏನು ಮಾಡುವುದಕ್ಕೆ
ಆಗುತ್ತದೆ! ಹಾಗೂ ತಂದೆಯೂ ಸಹ ಏನೂ ಮಾಡುವುದಕ್ಕೆ ಆಗುವುದಿಲ್ಲ. ಅದಕ್ಕೆ ತಾವು ಬ್ರಾಹ್ಮಣರನ್ನು
ರಚಿಸಲು ಬ್ರಹ್ಮಾ ತಂದೆಯ ಆಧಾರ ತೆಗೆದುಕೊಂಡರು. ಬ್ರಾಹ್ಮಣರ ಹೊರತು ತಂದೆಯು ಏನು ಮಾಡಲು
ಆಗುವುದಿಲ್ಲ. ಇದಕ್ಕಾಗಿ ಈ ಅಲೌಕಿಕ ಅವತರಣೆಯ ಜನ್ಮದಿನದಲ್ಲಿ ತಂದೆ ಮಕ್ಕಳಿಗೆ ಹಾಗೂ ಮಕ್ಕಳು
ತಂದೆಗೆ ಪದಮ ಪದಮದಷ್ಟು ಶುಭಾಷಯಗಳನ್ನು ಕೊಡುತ್ತಿದ್ದಾರೆ. ತಾವು ತಂದೆಗೆ ಕೊಡುತ್ತಿದ್ದೀರಿ,
ತಂದೆಯೂ ತಮಗೆ ಕೊಡುತ್ತಿದ್ದಾರೆ. ಅಮೃತವೇಳೆಯಿಂದ ಹಿಡಿದು ಮಕ್ಕಳ ಶುಭಾಷಯ ಪತ್ರ, ಕಾರ್ಡ್, ಹೃದಯದ
ಮಧುರ-ಮಧುರ ಗೀತೆಗಳು ಬಾಬಾರವರಿಗೆ ಸಿಕ್ಕಿದೆ, ಈಗಲೂ ಸಹ ಬಾಪ್ದಾದಾ ನೋಡುತ್ತಿದ್ದಾರೆ ನಾಲ್ಕೂ
ಕಡೆಯ ದೇಶವಿದೇಶದ ಮಕ್ಕಳು ಸೂಕ್ಷ್ಮದಲ್ಲಿ ಬಾಪ್ದಾದಾರವರಿಗೆ ಶುಭಾಷಯಗಳನ್ನು ಕೊಡುತ್ತಿದ್ದಾರೆ,
ಅದೆಲ್ಲವೂ ತಲುಪುತ್ತಿದೆ. ಮಕ್ಕಳ ಬಳಿ ಕೂಗು ತಲುಪುತ್ತಿದೆ ಹಾಗೂ ಮಕ್ಕಳ ಹೃದಯದ ಕೂಗು ತಂದೆಗೆ
ತಲುಪುತ್ತಿದೆ. ನಾಲ್ಕೂ ಕಡೆ ಮಕ್ಕಳು ಖುಷಿಯಲ್ಲಿ ಉಯ್ಯಾಲೆ ಆಡುತ್ತಿದ್ದಾರೆ. ವಾಹ್! ಬಾಬಾ ವಾಹ್!
ನಾವು ಸಾಲಿಗ್ರಾಮ ಆತ್ಮಗಳೇ! ವಾಹ್! ವಾಹ್! ಗೀತೆ ಹಾಡುತ್ತಿದ್ದಾರೆ. ತಮ್ಮ ಈ ಜನ್ಮದಿನದ
ನೆನಪಿನಾರ್ಥ ದ್ವಾಪರದಿಂದ ಇಲ್ಲಿಯವರೆಗೂ ಭಕ್ತರೂ ಸಹ ಆಚರಿಸುತ್ತಿದ್ದಾರೆ. ಭಕ್ತರೂ ಸಹ
ಭಾವನೆಯಲ್ಲಿ ಕಡಿಮೆ ಇಲ್ಲ. ಆದರೆ ಭಕ್ತರು ಮಕ್ಕಳಲ್ಲ. ಅವರು ಪ್ರತಿ ವರ್ಷ ಆಚರಿಸುತ್ತಾರೆ ಹಾಗೂ
ತಾವು ಇಡೀ ಕಲ್ಪದಲ್ಲಿ ಒಮ್ಮೆ ಅವತರಣೆಯ ಮಹತ್ವ ಆಚರಿಸುತ್ತೀರಿ. ಅವರು ಪ್ರತಿ ವರ್ಷ ವ್ರತ
ಇಡುತ್ತಾರೆ. ವ್ರತವೂ ಇಡುತ್ತಾರೆ ಹಾಗೂ ವ್ರತ ತೆಗೆದುಕೊಳ್ಳುತ್ತಾರೆ. ತಾವು ಒಂದು ಸಾರಿ ವ್ರತ
ತೆಗೆದುಕೊಂಡು ಬಿಡುತ್ತೀರಿ, ಕಾಪಿ ತಮ್ಮದೇ ಆಗಿದೆ. ತಮ್ಮ ಮಹತ್ವ ಹಾಗೂ ಅವರ ನೆನಪಿನಾರ್ಥದ
ಮಹತ್ವದಲ್ಲಿ ಅಂತರವಿದೆ. ಅವರು ಸಹ ಪವಿತ್ರತೆಯ ವ್ರತ ತೆಗೆದುಕೊಳ್ಳುತ್ತಾರೆ ಆದರೆ ಪ್ರತಿವರ್ಷ
ಒಂದು ದಿನಕ್ಕೋಸ್ಕರ ವ್ರತ ತೆಗೆದುಕೊಳ್ಳುತ್ತಾರೆ. ತಾವೆಲ್ಲರೂ ಸಹ ಜನ್ಮ ತೆಗೆದುಕೊಂಡ ತಕ್ಷಣ ಒಂದು
ಸಾರಿ ಪವಿತ್ರತೆಯ ವ್ರತ ತೆಗೆದುಕೊಂಡಿದ್ದೀರಿ ಅಲ್ಲವೇ! ತೆಗೆದುಕೊಂಡಿದ್ದೀರಾ ಅಥವಾ
ತೆಗೆದುಕೊಳ್ಳಬೇಕಾ? ತೆಗೆದುಕೊಂಡು ಬಿಟ್ಟಿದ್ದಿರಲ್ಲವೇ. ಒಂದು ಸಾರಿ ತೆಗೆದುಕೊಳ್ಳುತ್ತೀರಿ ಅವರು
ವರ್ಷ ವರ್ಷ ತೆಗೆದುಕೊಳ್ಳುತ್ತಾರೆ. ಎಲ್ಲರೂ ತೆಗೆದುಕೊಂಡಿದ್ದೀರಲ್ಲವೇ? ಕೇವಲ ಬ್ರಹ್ಮಚರ್ಯವಲ್ಲ,
ಸಂಪೂರ್ಣ ಪವಿತ್ರತೆಯ ವ್ರತ ತೆಗೆದುಕೊಂಡಿದ್ದೀರಲ್ಲವೇ. ಕೇವಲ ಬ್ರಹ್ಮಚರ್ಯವಲ್ಲ ಜೊತೆಯಲ್ಲಿ ಇನ್ನು
ನಾಲ್ಕೂ ಇದೆ. ಈ ನಾಲ್ಕರ ವ್ರತ ತೆಗೆದುಕೊಂಡಿದ್ದೀರೋ ಕೇವಲ ಒಂದರದಷ್ಟೆ ತೆಗೆದುಕೊಂಡಿದ್ದೀರಾ?
ಚೆಕ್ ಮಾಡಿಕೊಳ್ಳಿ. ಕ್ರೋದ ಮಾಡಿಕೊಳ್ಳಲು ಅವಕಾಶವಿದೆ ಅಲ್ಲವೇ? ಅಥವಾ ಇಲ್ಲವೋ? ಸ್ವಲ್ಪ ಸ್ವಲ್ಪ
ಕ್ರೋದ ಮಾಡಿಕೊಳ್ಳಬೇಕಲ್ಲಾ! ಎನ್ನುತ್ತೀರಾ? ಹೇಳಿ ಪಾಂಡವರೇ ಕ್ರೋದ ಮಾಡಿಕೊಳ್ಳುವ ಹಾಗಿಲ್ಲ
ಅಲ್ಲವೇ? ಮಾಡಿಕೊಳ್ಳಬೇಕಾಗುತ್ತಾ! ಬಾಪ್ದಾದಾ ನೋಡಿದರು ಕ್ರೋದ ಹಾಗೂ ಎಲ್ಲ ಜೊತೆಗಾರರೂ
ಯಾರಿದ್ದಾರೆ, ಆ ಮಹಾ ಭೂತದ ತ್ಯಾಗ ಮಾಡಿದ್ದೀರಿ ಆದರೆ ಹೇಗೆ ಮಾತೆಯರಿಗೆ ಪ್ರವೃತಿಯವರಿಗೆ ದೊಡ್ಡ
ಮಕ್ಕಳ ಜೊತೆ ಇಷ್ಟು ಪ್ರೀತಿ ಇರುವುದಿಲ್ಲ ಮೋಹವೂ ಇರುವುದಿಲ್ಲ ಆದರೆ ಮೊಮ್ಮಕ್ಕಳು ಮರಿಮಕ್ಕಳ ಜೊತೆ
ತುಂಬಾ ಮೋಹ ಇರುತ್ತದೆ. ಚಿಕ್ಕ-ಚಿಕ್ಕ ಮಕ್ಕಳೊಂದಿಗೆ ಬಹಳ ಪ್ರೀತಿ ಇರುತ್ತದೆ. ಹಾಗೆಯೇ ಬಾಪ್ದಾದಾ
ನೋಡಿದರು ಮಕ್ಕಳಿಗೂ ಸಹ ಈ ಐದು ವಿಕಾರಗಳ ಮಹಾಭೂತವೇನಿದೆ, ಅವುಗಳೊಂದಿಗೆ ಪ್ರೀತಿ
ಕಡಿಮೆಯಾಗಿಬಿಟ್ಟಿದೆ ಆದರೆ ಈ ಐದು ವಿಕಾರಗಳ ಮರಿಮಕ್ಕಳೂ ಇದ್ದಾರಲ್ಲವೇ? ಚಿಕ್ಕ-ಚಿಕ್ಕ ಅಂಶ
ಮಾತ್ರ, ವಂಶ ಮಾತ್ರ ಅವುಗಳ ಜೊತೆ ಈಗಲೂ ಸಹ ಸ್ವಲ್ಪ ಸ್ವಲ್ಪ ಪ್ರೀತಿ ಇದೆ. ಪ್ರೀತಿ ಇದೆ ಅಲ್ಲವೇ!
ಕೆಲವೊಮ್ಮೆ ಪ್ರೀತಿ ಬಂದು ಬಿಡುತ್ತದೆಯೇ? ಮಾತೆಯರೇ? ಡಬ್ಬಲ್ ವಿದೇಶಿಯರೇ ಕ್ರೋದ ಬರುವುದಿಲ್ಲವೇ?
ಕೆಲವರು ತುಂಬಾ ತುಂಬಾ ಚತುರತೆಯ ಮಾತುಗಳನ್ನು ಹಾಡುತ್ತಾರೆ. ಹೇಳುವುದೇ ಏನು ಹೇಳುತ್ತಾರೆಂದು?
ಹೇಳಿಬಿಡಲೇ? ಒಂದುವೇಳೆ ಹೇಳಿದರೆ ಇಂದು ಬಿಡಬೇಕಾಗುತ್ತದೆ. ಅದಕ್ಕೆ ತಯಾರಿದ್ದೀರಾ? ಬಿಡುವುದಕ್ಕೆ
ತಯಾರಿದ್ದೀರಾ? ಅಥವಾ ಕೇವಲ ಫೈಲ್ನಲ್ಲಿ ಪೇಪರ್ ಜಮಾಮಾಡುತ್ತೀರಾ? ಹೇಗೆ ಪ್ರತಿ ವರ್ಷ
ಮಾಡುತ್ತೀರಲ್ಲ ಪ್ರತಿಜ್ಞೆಯ ಫೈಲ್ ತಂದೆಯ ಬಳಿ ಬಹಳ ಬಹಳ ದೊಡ್ಡದು ಆಗಿಬಿಟ್ಟಿದೆ ಈಗಲೂ ಸಹ ಈ
ರೀತಿಯಂತೂ ಮಾಡುವುದಿಲ್ಲ ತಾನೇ! ಒಂದು ಪ್ರತಿಜ್ಞೆಯ ಪೇಪರ್ ಫೈಲ್ನಲ್ಲಿ ಜಮಾ ಮಾಡಿಬಿಡೋಣ ಈ ರೀತಿ
ಇಲ್ಲ ತಾನೇ? ಫೈನಲ್ ಮಾಡುತ್ತೀರ ಅಥವಾ ಫೈಲ್ಲ್ಲಿ ಹಾಕುತ್ತೀರ? ಏನು ಮಾಡುತ್ತೀರಿ? ಹೇಳಿ
ಶಿಕ್ಷಕಿಯರೇ ಏನು ಮಾಡುತ್ತೀರಿ? ಫೈನಲ್? ಫೈನಲ್? ಕೈಯತ್ತಿ. ಹಾಗೆಯೇ ಪ್ರತಿಜ್ಞೆ ಮಾಡಬೇಡಿ.
ಬಾಪ್ದಾದಾ ನಂತರ ಸ್ವಲ್ಪ ರೂಪ ಧಾರಣೆ ಮಾಡುತ್ತಾರೆ. ಸರಿ ತಾನೇ, ಡಬ್ಬಲ್ ವಿದೇಶಿಯರೇ ಫೈನಲ್
ಮಾಡುತ್ತೀರಾ? ಫೈನಲ್? ಕೈಯತ್ತಿ ಯಾರು ಫೈನಲ್ ಮಾಡುತ್ತೀರಿ. ಟೀವಿಯಲ್ಲಿ ತೋರಿಸಿ, ಕೈ ದೊಡ್ಡದಾಗಿ
ಎತ್ತಿ ಚಿಕ್ಕದಾಗಿ ಅಲ್ಲ, ತ್ರೇತಾಯುಗಿಗಳು ಅಲ್ಲ. ಒಳ್ಳೆಯದು. ಸರಿಯಲ್ಲವೇ.
ಕೇಳಿ, ತಂದೆ ಹಾಗೂ
ಮಕ್ಕಳ ಮಾತುಗಳೂ ಏನಾಗಿರುತ್ತದೆ? ಬಾಪ್ದಾದಾ ಮುಗುಳ್ಳಗೆ ನಗುತ್ತಿರುತ್ತಾರೆ. ಬಾಬಾ ಕೇಳುತ್ತಾರೆ
ಕ್ರೋದ ಏಕೆ ಮಾಡಿಕೊಂಡಿರಿ? ಹೇಳುತ್ತೀರಿ ನಾನು ಮಾಡಿಕೊಂಡಿಲ್ಲ ಆದರೆ ಮಾಡಿಸಿ ಬಿಟ್ಟಿತು.
ಮಾಡಿಕೊಂಡಿಲ್ಲ ನನಗೆ ಮಾಡಿಸಿಬಿಟ್ಟಿತು. ಈಗ ಬಾಬಾ ಏನು ಹೇಳಬೇಕು? ನಂತರ ಹೇಳುತ್ತಾರೆ. ಒಂದುವೇಳೆ
ತಾವು ಸಹ ಇದ್ದಿದ್ದರೆ ತಮಗೂ ಬಂದುಬಿಡುತ್ತಿತ್ತು. ಹೀಗೆ ಮಧುರ ಮಧುರ ಮಾತುಗಳನ್ನು
ಹಾಡುತ್ತೀರಲ್ಲವೇ! ನಂತರ ಹೇಳುತ್ತೀರಿ ನಿರಾಕಾರದಿಂದ ಸಾಕಾರ ತನುವನ್ನು ತೆಗೆದುಕೊಂಡು ನೋಡಿ ಎಂದು
ಹೇಳಿ! ಈ ರೀತಿಯ ಮಧುರ ಮಕ್ಕಳಿಗೆ ಬಾಬಾ ಏನು ಹೇಳುವುದು! ಆದರೂ ಸಹ ಬಾಬಾರವರಿಗೆ ಕರುಣಾಹೃದಯಿ
ಆಗಬೇಕಾಗುತ್ತದೆ. ಹೇಳುತ್ತಾರೆ ಒಳ್ಳೆಯದು. ಈಗ ಕ್ಷಮಿಸುತ್ತಿದ್ದೇನೆ ಆದರೆ ಮುಂದೆ ಮಾಡಬೇಡಿ. ಆದರೆ
ಪ್ರತ್ಯುತ್ತರ ಚೆನ್ನಾಗಿ ಕೊಡುತ್ತೀರಿ.
ಪವಿತ್ರತೆ ತಾವು
ಬ್ರಾಹ್ಮಣರ ಎಲ್ಲದಕ್ಕಿಂತ ದೊಡ್ಡ ಶೃಂಗಾರವಾಗಿದೆ ಆದ್ದರಿಂದ ತಮ್ಮೆಲ್ಲರ ಚಿತ್ರಗಳನ್ನು ಎಷ್ಟೊಂದು
ಶೃಂಗಾರ ಮಾಡುತ್ತಾರೆ ಈ ಪವಿತ್ರತೆಯ ಸ್ಮಾರಕ ಶೃಂಗಾರವಾಗಿದೆ. ಪವಿತ್ರತೆ, ಸಂಪೂರ್ಣ ಪವಿತ್ರತೆ.
ನಡೆಸುವಂತಹ ಪವಿತ್ರತೆ ಅಲ್ಲ. ಸಂಪೂರ್ಣ ಪವಿತ್ರತೆ ತಾವು ಬ್ರಾಹ್ಮಣ ಜೀವನದ ಎಲ್ಲದಕ್ಕಿಂತ ದೊಡ್ಡ
ಆಸ್ತಿಯಾಗಿದೆ. ಇದೇ ರಾಯಲ್ಟಿ, ವ್ಯಕ್ತಿತ್ವವಾಗಿದೆ. ಆದ್ದರಿಂದ ಭಕ್ತ ಜನರು ಸಹ ಒಂದು ದಿನ
ಪವಿತ್ರ ವ್ರತವನ್ನು ಇಟ್ಟುಕೊಳ್ಳುತ್ತಾರೆ. ಇದನ್ನು ಅವರು ಆನುಸರಣೆ ಮಾಡುತ್ತಾರೆ. ಎರಡನೆಯದಾಗಿ
ಆಹಾರ-ಪಾನಿಯದ ವ್ರತ ತೆಗೆದುಕೊಳ್ಳುತ್ತಾರೆ. ಆಹಾರ-ಪಾನಿಯ ವ್ರತವೂ ಸಹ ಅವಶ್ಯಕತೆ ಇದೆ. ಏಕೆ? ತಾವು
ಬ್ರಾಹ್ಮಣರೂ ಸಹ ಆಹಾರ -ಪಾನಿಯ ವ್ರತವನ್ನು ಪಕ್ಕಾ ಮಾಡಿಕೊಂಡಿದ್ದೀರಿ ತಾನೇ! ಯಾವಾಗ ಎಲ್ಲರಿಂದ
ಫಾರ್ಮ್ ತುಂಬಿಸಿಕೊಳ್ಳುತ್ತೀರ, ಮಧುಬನದಲ್ಲಿ ಬರುವ ಫಾರ್ಮ್ನ್ನು ತುಂಬಿಸುತ್ತೀರಲ್ಲವೇ,
ಆಹಾರ-ಪಾನಿಯ ಶುದ್ದವಿದೆಯಾ ಎಂದು ತುಂಬಿಸುತ್ತೀರಲ್ಲವೇ! ಅಂದರೆ ಆಹಾರ-ಪಾನಿಯ ವ್ರತ ಪಕ್ಕಾಯಿದೆಯಾ?
ಪಕ್ಕಾಯಿದೆಯೋ ಕೆಲವು ಬಾರಿ ಕಚ್ಚಾ ಆಗುತ್ತದೆಯೋ? ಡಬ್ಬಲ್ ವಿದೇಶಿಗಳಿಗೆ ಡಬ್ಬಲ್ ಪಕ್ಕಾ ತಾನೇ!
ಡಬ್ಬಲ್ ಪಕ್ಕಾ ತಾನೇ? ಅಥವಾ ಕೆಲವು ಬಾರಿ ಸುಸ್ತು ಆದಾಗ ಹೇಳುತ್ತೀರ ಪರವಾಗಿಲ್ಲ ಇಂದು ಸ್ವಲ್ಪ
ತಿಂದರಾಯಿತು ಎಂದು. ಸ್ವಲ್ಪ ಸಡಿಲ ಮಾಡಿಕೊಳ್ಳುತ್ತೀರಾ, ಇಲ್ಲ ತಾನೇ, ಆಹಾರ ಪಾನಿಯ ಪಕ್ಕಾ ತಾನೇ?
ಆದ್ದರಿಂದ ಭಕ್ತ ಜನರೂ ಸಹ ಆಹಾರ-ಪಾನಿಯ ವ್ರತ ಮಾಡುತ್ತಾರೆ. ಮೂರನೆ ವ್ರತವಾಗಿದೆ ಜಾಗರಣೆ-ರಾತ್ರಿ
ಎಚ್ಚರವಾಗಿ ಇರುತ್ತಾರಲ್ಲವೇ! ತಾವು ಬ್ರಾಹ್ಮಣರೂ ಸಹ ಅಜ್ಞಾನದ ನಿದ್ರೆಯಿಂದ ಜಾಗೃತರಾಗುವ
ವ್ರತವನ್ನು ಮಾಡುತ್ತೀರಿ ಮಧ್ಯ-ಮಧ್ಯದಲ್ಲಿ ಆಜ್ಞಾನದ ನಿದ್ರೆ ಬರುವುದಿಲ್ಲ ತಾನೆ! ಭಕ್ತ ಜನರು
ತಮ್ಮನ್ನು ಅನುಸರಣೆ ಮಾಡುತ್ತಾರೆ, ತಾವು ಅಷ್ಟು ಪಕ್ಕಾ ಇದ್ದೀರಾ ಆದ್ದರಿಂದ ನಿಮ್ಮನ್ನು ಅನುಸರಣೆ
ಮಾಡುತ್ತಾರೆ. ಎಂದೂ ಕೂಡ ಆಜ್ಞಾನ ಅಂದರೆ ನಿಶಕ್ತತೆಯ, ಹುಡುಗಾಟಿಕೆ ತನದ, ಅಲಸ್ಯದ ನಿದ್ರೆ
ಬರಬಾರದು. ಅಥವಾ ಸ್ವಲ್ಪ ಸ್ವಲ್ಪ ತೂಕಡಿಕೆ ಬಂದರೆ ಪರವಾಗಿಲ್ಲವೇ? ತೂಕಡಿಕೆ ಬರುತ್ತದೆಯೇ? ಹಾಗೆ
ಆಮೃತವೇಳೆ ಸಹ ಕೆಲವರು ತೂಕಡಿಸುತ್ತಾರೆ. ಆದರೆ ಇದನ್ನು ಯೋಚನೆ ಮಾಡಿ ನಮ್ಮ ಸ್ಮಾರಕದಲ್ಲಿ ಭಕ್ತ
ಜನರು ಏನೇನು ಅನುಸರಣೆ ಮಾಡುತ್ತಿದ್ದಾರೆ! ಅವರು ಅಷ್ಟೊಂದು ಪಕ್ಕಾ ಇರುತ್ತಾರೆ. ಏನೇ ಆದರೂ
ವ್ರತವನ್ನು ಬಿಡುವುದಿಲ್ಲ. ಇಂದಿನ ದಿನ ಭಕ್ತರು ಅಹಾರ-ಪಾನಿಯ ವ್ರತವನ್ನು ಇಟ್ಟುಕೊಳ್ಳುತ್ತಾರೆ
ಮತ್ತು ನೀವು ಇಂದು ಏನು ಮಾಡುತ್ತೀರಿ? ಪಿಕ್ನಿಕ್ ಮಾಡುತ್ತೀರಿ? ಅವರು ವ್ರತವನ್ನು
ಇಟ್ಟುಕೊಳ್ಳುತ್ತಾರೆ ನೀವು ಪಿಕ್ನಿಕ್ ಮಾಡುತ್ತೀರಿ, ಕೇಕ್ ಕಟ್ ಮಾಡುತ್ತೀರಿ ತಾನೆ! ಪಿಕ್ನಿಕ್
ಮಾಡುತ್ತೀರಿ ಏಕೆಂದರೆ ನೀವೂ ಜನ್ಮದಿನದಿಂದಲೇ ವ್ರತವನ್ನು ತೆಗೆದುಕೊಂಡಿದ್ದೀರಿ ಆದ್ದರಿಂದ
ಪಿಕ್ನಿಕ್ ಮಾಡುತ್ತೀರಿ.
ಬಾಪ್ದಾದಾರವರು ಈಗ
ಮಕ್ಕಳಿಂದ ಏನು ಬಯಸುತ್ತಾರೆ? ಗೊತ್ತಿದೆಯೇ, ಸಂಕಲ್ಪಗಳನ್ನು ತುಂಬಾ ಚೆನ್ನಾಗಿ ಮಾಡುತ್ತೀರಿ,
ಇಷ್ಟೊಂದು ಒಳ್ಳೆಯ ಸಂಕಲ್ಪಗಳನ್ನು ಮಾಡುತ್ತೀರಿ ಅದನ್ನು ಕೇಳಿ ಖುಷಿ ಪಡುತ್ತಾರೆ. ಸಂಕಲ್ಪ
ಮಾಡುತ್ತೀರಿ ಆದರೆ ನಂತರ ಏನು ಆಗುತ್ತದೆ. ಸಂಕಲ್ಪ ನಿಶಕ್ತ ಏಕೆ ಆಗುತ್ತದೆ? ಇಷ್ಟಪಡುತ್ತೀರ
ಏಕೆಂದರೆ ತಂದೆಯ ಮೇಲೆ ಬಹಳ ಪ್ರೀತಿ ಇದೆ. ತಂದೆಗೂ ಗೊತ್ತಿದೆ- ಬಾಪ್ದಾದಾರವರ ಮೇಲೆ ಎಲ್ಲ ಮಕ್ಕಳದೂ
ಮನಸ್ಸಿನ ಪ್ರೀತಿ ಇದೆ ಮತ್ತು ಪ್ರೀತಿಯಲ್ಲಿ 100%ಗಿಂತಲೂ ಜಾಸ್ತಿ ಎಂದು ಕೈಯನ್ನು ಮೇಲೆ
ಎತ್ತುತ್ತಾರೆ, ತಂದೆಯೂ ಒಪ್ಪಿಕೊಳ್ಳುತ್ತಾರೆ ಪ್ರೀತಿಯಲ್ಲಿ ಎಲ್ಲರೂ ಪಾಸಾಗಿದ್ದಾರೆ. ಆದರೆ ಏನು?
ಆದರೆ, ಇದೆಯಾ ಅಥವಾ ಇಲ್ಲವಾ? ಆದರೆ, ಬರುತ್ತಿದೆಯಾ ಅಥವಾ ಇಲ್ಲವಾ? ಪಾಂಡವರೇ ಮಧ್ಯ-ಮಧ್ಯದಲ್ಲಿ
ಆದರೆ ಬರುತ್ತದೆಯಾ? ಇಲ್ಲ ಎಂದು ಹೇಳುತ್ತಿಲ್ಲ ಅಂದರೆ ಹೌದು ಎಂದು. ಬಾಪ್ದಾದಾರವರು ಒಂದು
ವಿಚಾರವನ್ನು ಮೆಜಾರಿಟಿಯಲ್ಲಿ ಮಕ್ಕಳಲ್ಲಿ ನೋಟ್ ಮಾಡಿದ್ದಾರೆ. ಪ್ರತಿಜ್ಞೆಯ ನಿಶಕ್ತತೆಗೆ ಒಂದೇ
ಕಾರಣವಿದೆ, ಒಂದೇ ಶಬ್ದವಿದೆ. ಯೋಚನೆ ಮಾಡಿ, ಆ ಒಂದು ಶಬ್ದ ಯಾವುದಾಗಿದೆ? ಶಿಕ್ಷಕಿಯರು ಹೇಳಿ ಆ
ಒಂದು ಶಬ್ದ ಯಾವುದು? ಪಾಂಡವರು ಹೇಳಿ ಆ ಒಂದು ಶಬ್ದ ಯಾವುದು? ನೆನಪಿಗೆ ಬಂದಿದೆ ಅಲ್ಲವೆ! ಒಂದು
ಶಬ್ದ ಆಗಿದೆ ನಾನು. ಅಭಿಮಾನದ ರೂಪದಲ್ಲೂ ಸಹ ನಾನು ಬರುತ್ತದೆ ಮತ್ತು ನಿಶಕ್ತತೆ ಮಾಡುವುದರಲ್ಲೂ
ನಾನು ಬರುತ್ತದೆ. ನಾನು ಏನು ಹೇಳಿದೆ, ನಾನು ಏನು ತಿಳಿಸಿದೆ. ಆದೇ ಸತ್ಯ, ಅದೇ ಆಗಬೇಕು. ಈ ನಾನು
ಎನ್ನುವುದು ಅಭಿಮಾನ ಆಗಿದೆ. ನಾನು ಅನ್ನುವುದು ಪೂರ್ಣ ಆಗಿಲ್ಲ ಅಂದರೆ ಬೇಜಾರಾಗುತ್ತದೆ, ನಾನು
ಮಾಡಲಿಕ್ಕೆ ಸಾದ್ಯವಿಲ್ಲ, ನಡೆಯಲಿಕ್ಕೆ ಸಾದ್ಯವಿಲ್ಲ ಅದು ಕಷ್ಟವಾಗುತ್ತದೆ. ಒಂದು ದೇಹಾಭಿಮಾನದ
ನಾನು- ಬದಲಾವಣೆಯಾದರೆ ನಾನು ಎಂಬುವುದು ಸ್ವಮಾನವನ್ನು ನೆನಪು ತರಿಸುತ್ತದೆ ಹಾಗೂ ನಾನು ಎಂಬುವುದು
ದೇಹಾಭಿಮಾನದಲ್ಲೂ ತೆಗೆದುಕೊಂಡು ಬರುತ್ತದೆ ಮತ್ತು ಬೇಜಾರು ಮಾಡಿಸುತ್ತದೆ. ನಾನು ಎಂಬುವುದು
ಮನಸ್ಸನ್ನು ಖುಷಿಯೂ ಪಡಿಸುತ್ತದೆ ಹಾಗೂ ಅಭಿವಕಾನದ ಚಿನ್ಹೆಯನ್ನೂ ತಿಳಿದುಕೊಂಡಿದ್ದೀರಿ
ಏನಾಗಿರುತ್ತದೆ? ಎಂದಾದರೂ ಯಾವುದರಲ್ಲಾದರೂ ಒಂದುವೇಳೆ ದೇಹಾಭಿಮಾನದ ಅಂಶ ಮಾತ್ರವೂ ಸಹ ಇದ್ದರೆ
ಆದರೆ ಚಿನ್ಹೆ ಏನಾಗುತ್ತದೆ? ಆ ಅಪಮಾನವನ್ನು ತಾವು ಸಹನೆ ಮಾಡಲು ಆಗುವುದಿಲ್ಲ. ಅಭಿಮಾನ
ಅಪಮಾನವನ್ನು ಸಹನೆ ಮಾಡಿಸುವುದಿಲ್ಲ. ಸ್ವಲ್ಪ ಯಾರಾದರೂ ಏನಾದರು ಅನ್ನುತ್ತಾರೆ, ಅಲ್ಲವೇ ಇದು
ಸರಿಯಿಲ್ಲ ಸ್ವಲ್ಪ ನಿರ್ಮಾಣರಾಗಿಬಿಡಿ ಎಂದರೆ ಆಗ ಅಪಮಾನವೆನಿಸುತ್ತದೆಯೇ, ಇದು ಅಭಿಮಾನದ ಚಿನ್ಹೆ
ಆಗಿದೆ.
ಬಾಪ್ದಾದಾ ವತನದಲ್ಲಿ
ಮುಗುಳ್ನಗುತ್ತಿದ್ದರು- ಈ ಮಕ್ಕಳು ಅಲ್ಲಿ ಇಲ್ಲಿ ಭಾಷಣ ಮಾಡುತ್ತೀರಿ ಅಲ್ಲವೆ ಶಿವರಾತ್ರಿಯಲ್ಲಿ
ಈಗ ಬಹಳ ಭಾಷಣ ಮಾಡುತ್ತೀದ್ದೀರಿ. ಇದರಲ್ಲಿ ಹೇಳುತ್ತೀರಿ ಬಾಪ್ದಾದಾರವರಿಗೆ ಮಕ್ಕಳ ಪಾಯಿಂಟ್
ನೆನಪಿಗೆ ಬಂದಿತು. ಅದರಲ್ಲಿ ಹೇಳಲಾಗುತ್ತದೆ, ಶಿವರಾತ್ರಿಯಲ್ಲಿ ಕುರಿಯನ್ನು ಬಲಿಕೊಡಲಾಗುತ್ತದೆ.
ಅದು ಮೇ... ಮೇ... (ನಾನು ನಾನು) ಎಂದು ತುಂಬಾ ಅನ್ನುತ್ತದೆ. ಕುರಿ ನಾನು ನಾನು ಅನ್ನುತ್ತದೆ
ಅಲ್ಲವೆ, ಅಂದಾಗ ಈ ರೀತಿ ಶಿವರಾತ್ರಿಯಲ್ಲಿ ಈ ಬಲಿ ಕೊಡಬೇಕಾಗಿದೆ. ಬಾಬಾ ಕೇಳಿ ಕೇಳಿ
ಮುಗುಳ್ನಗುತ್ತಿದ್ದರು. ಈ ನಾನು ಎಂಬುವುದನ್ನು ತಾವು ಬಲಿಕೊಟ್ಟುಬಿಡಿ. ಸಮರ್ಪಣೆ ಮಾಡುತ್ತೀರಾ?
ಮಾಡುತ್ತೀರಾ ಪಾಂಡವರು ಮಾಡುತ್ತೀರಾ? ಡಬಲ್ ಫಾರಿನರ್ಸ್ ಮಾಡಲು ಸಾಧ್ಯವೇ? ಪೂರ್ಣ ಸಮರ್ಪಣೆಯಾ ಅಥವಾ
ಸಮರ್ಪಣೆಯಾ? ಪೂರ್ಣ ಸಮರ್ಪಣೆ. ಇಂದು ಬಾಪ್ದಾದಾರವರು ಧ್ವಜದ ಬಳಿ ಹಾಗೇ ಪ್ರತಿಜ್ಞೆ
ಮಾಡಿಸುವುದಿಲ್ಲ. ಇಂದು ಪ್ರತಿಜ್ಞೆ ಮಾಡಿ ಫೈಲ್ ಜಮಾ ಮಾಡಿ ಈ ರೀತಿ ಪ್ರತಿಜ್ಞೆ ಮಾಡಿಸುವುದಿಲ್ಲ
ದಾದಿಯರು ಏನು ಯೋಚನೆ ಮಾಡುತ್ತಿದ್ದೀರಿ, ಇಂದೂ ಸಹ ಇದೇ ರೀತಿ ಪ್ರತಿಜ್ಞೆ ಮಾಡಿಸುತ್ತೀರಾ? ಫೈನಲ್
ಮಾಡುತ್ತೀರಾ ಅಥವಾ ಫೈಲ್ನಲ್ಲಿ ಜಮಾ ಮಾಡುತ್ತೀರಾ? ಹೇಳಿ ಧೈರ್ಯ ಇದೆಯಾ? (ಫೈನಲ್ ಮಾಡಿಸುತ್ತೇವೆ)
ಧೈರ್ಯ ಇದೆಯಾ? ಕೈಯನ್ನು ಯಾರೂ ಅಲುಗಾಡಿಸುತ್ತಿಲ್ಲ, ಕೇಳುವುದರಲ್ಲಿ ಮಗ್ನರಾಗಿದ್ದೀರಾ. ನಾಳೆಯಂತೂ
ಏನೂ ಆಗುವುದಿಲ್ಲಾ ತಾನೆ! ನಾಳೆ ಮಾಯೆ ಬರುತ್ತದೆ, ಸುತ್ತು ಹಾಕುವುದಕ್ಕೆ ಬರುತ್ತದೆ. ಮಾಯೆಗೂ ಸಹ
ನಿಮ್ಮ ಮೇಲೆ ಪ್ರೀತಿ ಇದೆಯಲ್ಲವೆ ಏಕೆಂದರೆ ವರ್ತಮಾನದಲ್ಲಿ ಎಲ್ಲರೂ ವಿಜೃಂಭಣೆಯಿಂದ ಸೇವೆಯ
ಪ್ಲಾನನ್ನು ಮಾಡುತ್ತಿದ್ದೀರಲ್ಲವೆ ಸೇವೆಯನ್ನು ವಿಜೃಂಭಣೆಯಿಂದ ಮಾಡುವುದು ಎಂದರೆ ಸಂಪೂರ್ಣ
ಸಮಾಪ್ತಿಯ ಸಮಯವನ್ನು ಸಮೀಪ ತರುವುದು ಈ ರೀತಿ ತಿಳಿದುಕೊಳ್ಳಬೇಡಿ ಭಾಷಣ ಮಾಡಿ ಬರುವುದೆಂದು. ಆದರೆ
ಸಮಯವನ್ನು ಸಮೀಪ ತರುವುದು. ಸೇವೆಯನ್ನು ಚೆನ್ನಾಗಿ ಮಾಡುತ್ತಿದ್ದೀರಿ. ಬಾಪ್ದಾದಾರವರು
ಖುಷಿಯಾಗಿದ್ದಾರೆ. ಆದರೆ ಬಾಪ್ದಾದಾರವರು ನೋಡುತ್ತಿದ್ದಾರೆ ಸಮಯ ಸಮೀಪ ಬರುತ್ತಿದೆ, ತಾವುಗಳೇ
ಸಮಯವನ್ನು ಸಮೀಪ ತರುವಂತವರು. ಹಾಗೆಯೇ ಒಂದು ಲಕ್ಷ ಒಂದುವರೆ ಲಕ್ಷ ಒಟ್ಟಿಗೆ ಸೇರಿಸಿಲ್ಲ, ಇದು
ಸಮಯದ ಸಮೀಪತೆಯಾಗಿದೆ. ಇಂದು ಗುಜರಾತಿನವರು ಮಾಡಿದ್ದೀರಿ, ಬಾಂಬೆಯವರು ಮಾಡಲಿದ್ದೀರಿ ಮತ್ತು ಇನ್ನೂ
ಕೆಲವರು ಮಾಡಲಿದ್ದೀರಿ. ಭಲೆ ಒಂದು ಲಕ್ಷ ಇಲ್ಲದಿದ್ದರೂ ಐವತ್ತು ಸಾವಿರ ಆದರೂ ಸರಿ ಸಂದೇಶವನ್ನು
ಕೊಡುತ್ತಿದ್ದೀರಿ ಅಂದರೆ ಸಂದೇಶದ ಜೊತೆ ಜೊತೆಗೆ ಸಂಪನ್ನತೆಗೆ ತಯಾರಿ ಆಗಿದೆಯೇ? ವಿನಾಶವನ್ನು
ಕೂಗುತ್ತಿದ್ದೀರಿ ಅಂದರೆ ತಯಾರಿ ಆಗಿದ್ದೀರಾ? ದಾದಿಯವರು ಪ್ರಶ್ನೆ ಕೇಳಿದ್ದರು ಬೇಗ ಬೇಗ
ಪ್ರತ್ಯಕ್ಷತೆ ಆಗಲು ಈಗ ಅಂತಹ ಯಾವ ಪ್ಲಾನನ್ನು ಮಾಡಿದ್ದೀರಾ? ಬಾಪ್ದಾದಾರವರು ಹೇಳುತ್ತಿದ್ದಾರೆ
ಪ್ರತ್ಯಕ್ಷತೆ ಸೆಕೆಂಡಿನ ಮಾತಾಗಿದೆ ಆದರೆ ಪ್ರತ್ಯಕ್ಷತೆಗಿಂತ ಮೊದಲು ಬಾಪ್ದಾದಾರವರು
ಕೇಳುತ್ತಿದ್ದಾರೆ ಸ್ಥಾಪನೆ ಮಾಡುವಂತಹವರು ಎವರೆಡಿ ಆಗಿದ್ದೀರಾ? ಪರದೆಯನ್ನು ತೆರೆಯಬಹುದಾ? ಕೆಲವರು
ಕಿವಿಯನ್ನು ಶೃಂಗಾರ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ತಲೆಯನ್ನು...? ತಯಾರಾಗಿದ್ದೀರಾ? ಯಾವಾಗ
ತಯಾರಿಯಾಗುತ್ತೀರಿ? ದಿನಾಂಕವನ್ನು ಹೇಳಿ ಹೇಗೆ ಈಗ ದಿನಾಂಕವನ್ನು ನಿಗದಿ ಮಾಡುತ್ತೀರಲ್ಲವೇ! ಈ
ತಿಂಗಳಿನ ಒಳಗೆ ಸಂದೇಶ ಕೊಡುವುದಕ್ಕೆ ಎಲ್ಲರೂ ಎವರೆಡಿ ಆಗಿದ್ದೀರಾ, ಕಡಿಮೆ ಎಂದರೆ ಹದಿನಾರು
ಸಾವಿರ ಎವರೆಡಿ ಆಗಬೇಕು, 9ಲಕ್ಷ ಬಿಟ್ಟು ಬಿಡಿ 16 ಸಾವಿರ ತಯಾರಿ ಆಗಿದೆಯೆ? ತಯಾರಿ ಆಗಿದೆಯೇ?
ಚಪ್ಪಾಳೆಯನ್ನು ತಟ್ಟಿ. ಸುಮ್ಮನೆ ಹೌದು ಎಂದು ಹೇಳಬಾರದು. ಎವರೆಡಿ ಆಗಿ ಆಗ ಬಾಪ್ ದಾದಾರವರು
ಪ್ರೇರಣೆ ಕೊಡುತ್ತಾರೆ. ಚಪ್ಪಾಳೆ ತಟ್ಟುತ್ತಾರೆ. ಪ್ರಕೃತಿಯು ತನ್ನ ಕಾರ್ಯವನ್ನು ಶುರುಮಾಡುತ್ತದೆ.
ವಿಜ್ಞಾನದವರು ತಮ್ಮ ಕಾರ್ಯವನ್ನು ಪ್ರಾರಂಭಮಾಡುತ್ತಾರೆ. ಏನು ನಿಧಾನ, ಎಲ್ಲರೂ ರೆಡಿಯಾಗಿದ್ದೀರಾ.
16 ಸಾವಿರ ತಯಾರಾಗಿದ್ದಾರಾ? ಆಗುತ್ತಾರೆ. (ತಮಗೆ ಎಲ್ಲವೂ ಗೊತ್ತಿದೆ) ಈ ಉತ್ತರ
ಮುಕ್ತಗೊಳಿಸುವಂತಹದು. 16 ಸಾವಿರ ಎವರೆಡಿ ಎಂದು ರಿಪೊರ್ಟು ಬರಬೇಕು ಸಂಪೂರ್ಣ ಪವಿತ್ರತೆಯಿಂದ
ಸಂಪನ್ನರಾಗಿರಬೇಕು. ಬಾಪ್ ದಾದಾರವರಿಗೆ ಚಪ್ಪಾಳೆ ತಟ್ಟುವುದರಲ್ಲಿ ಯಾವ ನಿಧಾನವಿಲ್ಲ.
ದಿನಾಂಕವನ್ನು ಹೇಳಿ (ತಾವೇ ದಿನಾಂಕವನ್ನು ಕೊಡಿ) ಎಲ್ಲರನ್ನೂ ಕೇಳಿ. ಆಗಲೇಬೇಕು ಆದರೆ ಯಾವುದನ್ನು
ತಿಳಿಸಲಾಗಿದೆ ನಾನು ಎನ್ನುವ ಒಂದು ಶಬ್ಬದ ಸಂಪೂರ್ಣ ಪರಿವರ್ತನೆ ಆಗಬೇಕು ಆಗ ತಂದೆಯ ಜೊತೆ ಹೋಗಬೇಕು.
ಇಲ್ಲವೆಂದರೆ ಹಿಂದೆ ಹಿಂದೆ ಹೋಗಬೇಕಾಗುತ್ತದೆ. ಆದ್ದರಿಂದ ಬಾಪ್ದಾದಾರವರದರೆ ಈಗ ಬಾಗಿಲು
ತೆರೆಯುವುದಿಲ್ಲ ಏಕೆಂದರೆ ಜೊತೆಗೆ ಹೋಗಬೇಕು.
ಬ್ರಹ್ಮಾ ತಂದೆ ಎಲ್ಲಾ
ಮಕ್ಕಳನ್ನು ಕೇಳುತ್ತಿದ್ದಾರೆ ಮನೆಯ ಬಾಗಿಲು ತೆರೆಯುವ ದಿನಾಂಕ ಹೇಳಿ. ಬಾಗಿಲು ತೆರೆಯಬೇಕಲ್ಲವೆ!
ಮನೆಗೆ ಹೊಗಬೇಕಲ್ಲವೆ ! ಇಂದು ಆಚರಣೆ ಮಾಡುವುದು ಎಂದರೆ ಆಗುವುದು. ಕೇವಲ ಕೇಕ್ ಕಟ್ ಮಾಡುವುದಲ್ಲ
ಆದರೆ ನಾನು ಅನ್ನುವುದನ್ನು ಸಮಾಪ್ತಿ ಮಾಡಬೇಕು. ಯೋಚನೆ ಮಾಡಿದ್ದೀರಾ ಅಥವಾ ಮಾಡುತ್ತಿದ್ದೀರಾ?
ಏಕೆಂದರೆ ಬಾಪ್ದಾದಾರವರ ಬಳಿ ಅಮೃತವೇಳೆಯಲ್ಲಿ ಎಲ್ಲರ ತುಂಬಾ ವಿಭಿನ್ನ ಸಂಕಲ್ಪಗಳು ತಲುಪುತ್ತವೆ.
ಪರಸ್ಪರದಲ್ಲಿ ಸಲಹೆಗಳನ್ನು ತೆಗೆದುಕೊಂಡು ತಂದೆಗೆ ದಿನಾಂಕವನ್ನು ತಿಳಿಸಿ. ಎಲ್ಲಿಯವರೆಗೆ
ದಿನಾಂಕವನ್ನು ನಿಗದಿ ಪಡಿಸುವುದಿಲ್ಲ ಅಲ್ಲಿಯವರೆಗೆ ಯಾವ ಕಾರ್ಯವೂ ಆಗುವುದಿಲ್ಲ. ಮೊದಲು
ಮಹಾರಥಿಗಳು ದಿನಾಂಕವನ್ನು ನಿಗಧಿ ಪಡಿಸಿ ನಂತರ ಎಲ್ಲರು ಅನುಸರಣೆ ಮಾಡುತ್ತಾರೆ. ಅನುಸರಣೆ
ಮಾಡುವಂತವರು ತಯಾರಿದ್ದಾರೆ ಮತ್ತು ತಮ್ಮೆಲ್ಲರ ಧೈರ್ಯದಿಂದ ಇನ್ನೂ ಸಹ ಬಲ ಸಿಗುತ್ತದೆ. ಹೇಗೆ ನೋಡಿ
ಈಗ ಉಮ್ಮಂಗ ಉಲ್ಲಾಸವನ್ನು ಕೊಟ್ಟಿದ್ದೀರಿ ಅಂದರೆ ತಯಾರಿ ಆಗಿದ್ದಾರೆ ಅಲ್ಲವೆ! ಹಾಗೇ ಸಂಪನ್ನ
ಆಗುವುದಕ್ಕೆ ಯೋಜನೆ ಮಾಡಿ. ಕರ್ಮಾತೀತ ಆಗಲೇಬೇಕು ಎಂದು ಅದೇ ಗುಂಗಿನಲ್ಲಿರಿ. ಏನೇ ಆಗಲಿ ಆಗಲೇಬೇಕು,
ಮಾಡಲೇಬೇಕು, ಆಗೇ ಆಗುತ್ತದೆ. ವಿಜ್ಞಾನಿಗಳ ಕೂಗು, ವಿನಾಶ ಮಾಡುವಂತಹವರ ಕೂಗು ತಂದೆಯ ಕಿವಿಗಳ ಬಳಿ
ಬರುತ್ತದೆ, ಅವರು ಸಹ ಹೇಳುತ್ತಾರೆ ಏಕೆ ತಡೆಯುತ್ತಿದೆ. ಅಡ್ವಾನ್ಸ್ ಪಾರ್ಟಿಯವರು ಹೇಳುತ್ತಾರೆ,
ದಿನಾಂಕ ನಿಗದಿ ಮಾಡಿ ಎಂದು. ಬ್ರಹ್ಮಾಬಾಬಾರವರು ಹೇಳುತ್ತಾರೆ ದಿನಾಂಕ ನಿಗಧಿ ಮಾಡಿ ಎಂದು. ಅಂದಾಗ
ಈ ಮೀಟಿಂಗ್ ಮಾಡಿ. ಬಾಕಿ ಸೇವೆ ಏನು ಮಾಡುತ್ತಿದ್ದೀರೊ ಅದರಲ್ಲಿ ಬಾಪ್ದಾದಾ ಸಂತುಷ್ಟವಾಗಿದ್ದಾರೆ.
ಪ್ರತೀ ವಿದೇಶದವರು ಮಾಡುತ್ತಿದ್ದಾರೆ. ಭಾರತದಲ್ಲೂ ಎಲ್ಲಾ ವಲಯದವರೂ ಮಾಡುತ್ತಿದ್ದೀರಿ,
ಪ್ರವೃತ್ತಿಯವರೂ ಮಾಡುತ್ತಿದ್ದೀರಿ ಎಲ್ಲರೂ ಮಾಡುತ್ತಿದ್ದೀರಿ ಇದಕ್ಕೆ ಶುಭಾಷಯಗಳು ಸೇವೆಗೂ
ಶುಭಾಷಯಗಳು. ಈಗ ಈ ಚಮತ್ಕಾರ ಮಾಡಿ ತೋರಿಸಿ, ದಾದಿಯರಿಗೆ ವಿಶೇಷವಾಗಿ ಹೇಳುತ್ತಿದ್ದೇನೆ ಹಿರಿಯ
ಸಹೋದರರಿಗೂ ಹೇಳುತ್ತಿದ್ದೇನೆ. ಈಗ ಮುಂದಿನ ಶಿವರಾತ್ರಿಯಲ್ಲಿ ಕಮಾಲ್ ಹಾಗೂ ಧಮಾಲ್ ಎರಡೂ ಜೊತೆ
ಜೊತೆಯಲ್ಲಿ ಇರಲಿ. ಸರಿ ತಾನೇ. ಮುಂದಿನ ಸಾಲಿನ ಟೀಚರ್ಸ್ ಸರಿ ತಾನೇ? ಮೀಟಿಂಗ್ ಮಾಡುತ್ತಿರಲ್ಲವೇ!
ಬಾಪ್ದಾದಾರವರಿಗೆ ಈಗ ದಿನಾಂಕ ಬೇಕು ಹಾಗೆಯೇ ಆಗಿ ಬಿಡುವುದಿಲ್ಲ, ಮಾಡುತ್ತಿದ್ದೇವೆ ಈ ರೀತಿ
ಆಗುವುದಿಲ್ಲ. ಇದು ಬಹಳ ಆಗಿ ಬಿಟ್ಟಿತು. ಮೊದಲು ಮಕ್ಕಳು ದಿನಾಂಕ ಕೊಡಲಿ ನಂತರ ಬಾಬಾ ಫೈನಲ್
ಮಾಡುತ್ತಾರೆ. ಬಾಪ್ ದಾದಾ ಹೇಳುತ್ತಾರೆ ಮುಂದಿನ ಶಿವರಾತ್ರಿಯಲ್ಲಿ ಕಮಲ್ ಹಾಗೂ ಧಮಾಲ್ ಎರಡೂ ಜೊತೆ
ಇರಲಿ. ಈಗ ತಯಾರಿ ಮಾಡಿ. ಟೀಚರ್ಸ್ ಒಪ್ಪುತ್ತೀರಾ? ಡಬ್ಬಲ್ ವಿದೇಶಿಯರೇ ಒಪ್ಪುತ್ತೀರಾ? ಮೊದಲನೇಯ
ಸಾಲಿನವರು ಒಪ್ಪುತ್ತೀರಾ? ಪಾಂಡವರು ಒಪ್ಪುತ್ತೀರಾ? (ಆಯಿತು) ಶುಭಾಷಯಗಳು, ಬಹಳ ದುಃಖಿತರು
ಇದ್ದಾರೆ. ಬಾಪ್ದಾದಾರವರಿಗೆ ಈಗ ಇಷ್ಟು ದುಃಖ ನೋಡಲು ಆಗುತ್ತಿಲ್ಲ. ಮೊದಲು ತಾವು ಶಕ್ತಿಯರಿಗೆ,
ದೇವತಾರೂಪ, ಪಾಂಡವರಿಗೆ ದಯೆ ಬರಬೇಕು. ಎಷ್ಟು ಕೂಗುತ್ತಿದ್ದಾರೆ. ಈಗ ಅವರ ಕೂಗಿನ ಶಬ್ದ ತಮ್ಮ
ಕಿವಿಗಳಲ್ಲಿ ಮೊಳಗಬೇಕು. ಸಮಯದ ಕೂಗು (ಕಾಲ್ ಆಫ್ ಟೈಂ) ಕಾರ್ಯಕ್ರಮ ಮಾಡುತ್ತೀರಲ್ಲವೇ! ಈಗ ಭಕ್ತರ
ಕೂಗನ್ನು ಕೇಳಿ ದುಃಬಿಗಳ ಕೂಗನ್ನು ಕೇಳಿ. ಸೇವೆಯಲ್ಲಿ ನಂಬರ್ ಚೆನ್ನಾಗಿದೆ ಇದಕ್ಕಂತೂ
ಬಾಪ್ದಾದಾರವರು ಸರ್ಟಿಫಿಕೇಟ್ ಕೊಡುತ್ತಾರೆ, ಉಮ್ಮಂಗ ಉತ್ಸಾಹ ಚೆನ್ನಾಗಿದೆ ಗುಜರಾತಿನವರು
ನಂಬರ್ವನ್ ತೆಗೆದುಕೊಂಡಿದ್ದೀರಿ, ನಂಬರ್ವನ್ ಗೆ ಶುಭಾಷಯಗಳು. ಈಗ ಸ್ವಲ್ಪ ಸ್ವಲ್ಪ ಕೂಗು ಕೇಳಿದರೂ
ಸರಿ ದುಃಖಿತ ಆತ್ಮಗಳು ತುಂಬಾ ಕೂಗುತ್ತಿದ್ದಾರೆ, ಮನಸ್ಸಿನಿಂದ ಕೂಗುತ್ತಿದ್ದಾರೆ
ಅಲೆದಾಡುತ್ತಿದ್ದಾರೆ. ವಿಜ್ಞಾನದವರು ಬಹಳ ಒದ್ದಾಡುತ್ತಿದ್ದಾರೆ ಯಾವಾಗ ಮಾಡುವುದು 3
ಕೂಗುತ್ತಿದ್ದಾರೆ. ಇಂದು ಭಲೆ ಕೇಕ್ ಕಟ್ ಮಾಡಿ ನಾಳೆಯಿಂದ ಕೂಗು ಕೇಳಬೇಕಾಗುತ್ತದೆ. ಸಂಗಮಯುಗದ
ನಿಯಮವೇ ಆಗಿದೆ ಆಚರಿಸುವುದು ಒಂದುಕಡೆ ಆಚರಿಸುವುದು ಇನ್ನೊಂದು ಕಡೆ ಆತ್ಮಗಳನ್ನು ರೆಡಿ ಮಾಡುವುದು.
ಒಳ್ಳೆಯದು. ಏನು ಕೇಳಿದಿರಿ?
ತಮ್ಮ ಗೀತೆ ಆಗಿದೆ
ದುಃಖಿಗಳ ಮೇಲೆ ಸ್ವಲ್ಪ ದಯೆ ತೋರಿಸಿ. ಕೇವಲ ತಮಗೆ ಯಾರೂ ದಯೆ ಮಾಡುವುದಿಲ್ಲ. ಅದಕ್ಕೆ ಈಗ ಸಮಯ
ಪ್ರಮಾಣ ಮಾಸ್ಟರ್ ಕರುಣಾ ಸಾಗರರಾಗಿ. ಸ್ವಯಂನ ಮೇಲೆ ಹಾಗು ಅನ್ಯ ಆತ್ಮಗಳ ಪ್ರತಿ ಕರುಣೆ ಇರಲಿ ಈಗ
ಇದೇ ತಮ್ಮ ಸ್ವರೂಪ ಲೈಟ್ ಮೈಟ್ ಆಗಿ ಭಿನ್ನ- ಭಿನ್ನ ಲೈಟಿನ ಕಿರಣಗಳನ್ನು ಕೊಡಿ ಅಪ್ರಾಪ್ತಿ
ಆತ್ಮಗಳಿಗೆ ಪ್ರಾಪ್ತಿಯ ಅಂಚಲಿಯ ಕಿರಣಗಳನ್ನು ಕೊಡಿ. ಒಳ್ಳೆಯದು.
ಸರ್ವ ಸಾಕ್ಷಾತ್ ತಂದೆ
ಮೂರ್ತಿಯ ಶ್ರೇಷ್ಠ ಆತ್ಮಗಳಿಗೆ, ಸದಾ ಉಮ್ಮಂಗ ಉತ್ಸಾಹದಲ್ಲಿ ಇರುವಂತಹ ತಂದೆಯ ಸಮೀಪ ಆತ್ಮಗಳಿಗೆ
ಸದಾ, ಸರ್ವ ಹೆಜ್ಜೆಯಲ್ಲಿ ತಂದೆಯ ಸಮಾನ ಇಡುವಂತಹ ಮಕ್ಕಳಿಗೆ, ನಾಲ್ಕು ಕಡೆಯ ಬ್ರಾಹ್ಮಣ ಜನ್ಮದ
ಶುಭಾಷಯಕ್ಕೆ ಪಾತ್ರರಾಗಿರುವಂತಹ ಮಕ್ಕಳಿಗೆ. ಸದಾ ಏಕಾಗ್ರತೆಯ ಶಕ್ತಿ ಸಂಪನ್ನ ಆತ್ಮಗಳಿಗೆ
ಬಾಪ್ದಾದಾರವರ ನೆನಪು ಪ್ರೀತಿ ಹಾಗು ಪದಮಾ ಪದಮ ಗುಣ ಜನ್ಮ ದಿನದ ಶುಭಾಷಯಗಳು ಹಾಗೂ ನಮಸ್ತೆ.
ಪ್ರಿಯ ಅವ್ಯಕ್ತ
ಬಾಪ್ದಾದಾ ತಮ್ಮ ಹಸ್ತದಿಂದ ಶಿವಧ್ವಜ ಹಾರಿಸಿದರು ಹಾಗೂ ಎಲ್ಲರಿಗೂ ಅಭಿನಂದನೆಗಳನ್ನು ಹೇಳಿದರು.
ಇಂದಿನ ದಿನ ಎಲ್ಲರೂ
ತಮ್ಮ ಜನ್ಮ ದಿನದ ಶಭಾಶಯಗಳನ್ನು ಕೊಟ್ಟು ಹಾಗೂ ತೆಗೆದುಕೊಂಡು ಧ್ವಜವನ್ನು ಹಾರಿಸಿದಿರಿ. ಆದರೆ ಆ
ದಿನ ಬೇಗನೆ ತರಬೇಕು ಯಾವುದು ವಿಶ್ವದ ಗ್ಲೋಬ್ ಮೇಲೆ ಸರ್ವ ಆತ್ಮಗಳು ನಿಂತುಕೊಂಡು ತಮ್ಮೆಲ್ಲರ
ಮುಖದಲ್ಲಿ ಬಾಬಾರವರನ್ನು ನೋಡುವಂತಹದ್ದು. ಸ್ಥೂಲ ಭಾವುಟವಂತೂ ನಿಮಿತ್ತ ಮಾತ್ರ ಆದರೆ ಒಂದೊಂದು
ಮಗುವಿನ ಮುಖ ಬಾಬಾರವರ ಚಿತ್ರ ತೋರಿಸಲಿ. ಇಂತಹ ಬಾವುಟ ಹಾರಿಸಬೇಕು. ಆ ದಿನವು ಬಹಳ ಬಹಳ ಬೇಗ
ತರಬೇಕು.
ವರದಾನ:
ಹದ್ದಿನ ರಾಯಲ್
ಇಚ್ಛೆಗಳಿಂದ ಮುಕ್ತರಾಗಿರುತ್ತಾ ಸೇವೆ ಮಾಡುವಂತಹ ನಿಸ್ವಾರ್ಥ ಸೇವಾಧಾರಿ ಭವ.
ಹೇಗೆ ಬ್ರಹ್ಮಾ ತಂದೆ
ಕರ್ಮದ ಬಂಧನದಿಂದ ಮುಕ್ತ, ನ್ಯಾರಾ ಆಗುವುದರಲ್ಲಿ ಪ್ರತ್ಯಕ್ಷ ಪ್ರಮಾಣ ಕೊಟ್ಟರು. ಸೇವೆಯ ಸ್ನೇಹದ
ವಿನಃ ಬೇರೆ ಯಾವುದೇ ಬಂಧನವಿಲ್ಲ. ಸೇವೆಯಲ್ಲಿ ಏನು ಹದ್ಧಿನ ರಾಯಲ್ ಇಚ್ಛೆಗಳಿರುತ್ತವೆ ಅವೂ ಸಹಾ
ಲೆಕ್ಕಾಚಾರದ ಬಂಧನದಲ್ಲಿ ಬಂಧಿಸುತ್ತವೆ, ಸತ್ಯ ಸೇವಾಧಾರಿ ಈ ಲೆಕ್ಕಾಚಾರಗಳಿಂದಲೂ ಸಹ
ಮುಕ್ತರಾಗಿರುತ್ತಾರೆ. ಹೇಗೆ ದೇಹದ ಬಂಧನ, ದೇಹದ ಸಂಬಂಧದ ಬಂಧನವಾಗಿದೆ, ಅದೇ ರೀತಿ ಸೇವೆಯಲ್ಲಿ
ಸ್ವಾರ್ಥ-ಇದೂ ಸಹಾ ಬಂಧನವಾಗಿದೆ. ಈ ಬಂಧನದಿಂದ ಹಾಗೂ ರಾಯಲ್ ಲೆಕ್ಕಾಚಾರದಿಂದಲೂ ಸಹ ಮುಕ್ತ
ನಿಸ್ವಾರ್ಥ ಸೇವಾಧಾರಿಗಳಾಗಿ.
ಸ್ಲೋಗನ್:
ವಾಯಿದೆಗಳನ್ನು
ಫೈಲ್ನಲ್ಲಿಡಬೇಡಿ, ಫೈನಲ್ ಮಾಡಿ ತೋರಿಸಿ.
ಸೂಚನೆ: ಇಂದು ತಿಂಗಳಿನ
ಮೂರನೇ ರವಿವಾರವಾಗಿದೆ, ಎಲ್ಲರೂ ಸಂಘಟನೆಯಲ್ಲಿ ಸಂಜೆ 6.30ಯಿಂದ 7.30 ಗಂಟೆಯವರೆಗೆ
ಅಂತರಾಷ್ಟ್ರೀಯ ಯೋಗದಲ್ಲಿ ಒಟ್ಟಿಗೆಸೇರಿ, ವಿಶೇಷ ಮೂಲವತನದ ಆಳವಾದ ಶಾಂತಿಯ ಅನುಭವ ಮಾಡಿ. ಮನಸ್ಸು
- ಬುದ್ಧಿಯನ್ನು ಏಕಾಗ್ರ ಮಾಡಿ ಜ್ವಾಲಾ ಸ್ವರೂಪದಲ್ಲಿ ಸ್ಥಿತರಾಗಿ, ಸಂಪನ್ನತೆ ಹಾಗೂ ಸಂಪೂರ್ಣತೆಯ
ಅನುಅಭವ ಮಾಡಿ.