16.02.25 Avyakt Bapdada
Kannada
Murli 02.02.2004 Om Shanti Madhuban
ಪೂರ್ವಜ ಮತ್ತು ಪೂಜ್ಯರ
ಸ್ವಮಾನದಲ್ಲಿದ್ದು ವಿಶ್ವದ ಪ್ರತಿಯೊಂದು ಆತ್ಮನ ಪಾಲನೆ ಮಾಡಿ, ಆಶೀರ್ವಾದವನ್ನು ಕೊಡಿ,
ಆಶೀರ್ವಾದವನ್ನು ಪಡೆಯಿರಿ
ಇಂದು ಎಲ್ಲಾ ಕಡೆಯ
ಸರ್ವಶ್ರೇಷ್ಠ ಮಕ್ಕಳನ್ನು ನೋಡುತ್ತಿದ್ದರು. ಪ್ರತಿಯೊಬ್ಬ ಮಗುವೂ ಪೂರ್ವಜರೂ ಆಗಿದ್ದಾರೆ ಮತ್ತು
ಪೂಜ್ಯರೂ ಆಗಿದ್ದಾರೆ ಆದ್ದರಿಂದ ಈ ಕಲ್ಪವೃಕ್ಷಕ್ಕೆ ತಾವೆಲ್ಲರೂ ಬೇರುಗಳಾಗಿದ್ದೀರಿ, ಬುಡವೂ
ಆಗಿದ್ದೀರಿ. ಬುಡದ ಸಂಬಂಧ ಸ್ವತಃವಾಗಿಯೇ ಇಡೀ ವೃಕ್ಷದ ರೆಂಬೆ-ಕೊಂಬೆಗಳೊಂದಿಗೆ, ಎಲೆಗಳೊಂದಿಗೆ
ಇರುತ್ತದೆ ಅಂದಾಗ ಎಲ್ಲರೂ ತಮ್ಮನ್ನು ಇಂತಹ ಶ್ರೇಷ್ಠ ಆತ್ಮ ಇಡೀ ವೃಕ್ಷದ ಪೂರ್ವಜ ಆತ್ಮನೆಂದು
ತಿಳಿಯುತ್ತೀರಾ? ಹೇಗೆ ಬ್ರಹ್ಮಾ ತಂದೆಗೆ ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ (ಪಿತಾಮಹ) ಎಂದು
ಹೇಳಲಾಗುತ್ತದೆ, ಅವರ ಜೊತೆಗಾರರಾದ ತಾವೂ ಸಹ ಮಾಸ್ಟರ್ ಗ್ರಾಂಡ್ಫಾದರ್ ಆಗಿದ್ದೀರಿ (ಮಾಸ್ಟರ್
ಪಿತಾಮಹ), ಪೂರ್ವಜ ಆತ್ಮಗಳಿಗೆ ಎಷ್ಟೊಂದು ಸ್ವಮಾನಗಳಿವೆ! ಅದರ ನಶೆಯಲ್ಲಿರುತ್ತೀರಾ? ಇಡೀ ವಿಶ್ವದ
ಆತ್ಮಗಳೊಂದಿಗೆ ಯಾವುದೇ ಧರ್ಮಾತ್ಮರಿರಬಹುದು ಆದರೆ ಸರ್ವಆತ್ಮಗಳಿಗೆ ತಾವು ವೃಕ್ಷದ ಬುಡದರೂಪದಲ್ಲಿ
ಆಧಾರಮೂರ್ತಿಗಳು ಪೂರ್ವಜರಾಗಿದ್ದೀರಿ ಆದ್ದರಿಂದಲೇ ಪೂರ್ವಜರಾಗಿರುವ ಕಾರಣ ಪೂಜ್ಯರೂ ಆಗಿದ್ದೀರಿ.
ಪೂರ್ವಜರ ಮುಖಾಂತರ ಪ್ರತೀ ಆತ್ಮಗಳಿಗೆ ಸಕಾಶವು (ಶಕ್ತಿ) ಸಹಜವಾಗಿ ಸಿಗುತ್ತಿರುತ್ತದೆ.
ವೃಕ್ಷವನ್ನು ನೋಡಿ, ಬುಡದ ಮೂಲಕ, ಬೇರುಗಳ ಮೂಲಕ ಕೊನೆಯ ಎಲೆಗಳವರೆಗೂ ಸಕಾಶವು ಸಿಗುತ್ತಿರುತ್ತದೆ
ಅಂದಮೇಲೆ ಪೂರ್ವಜರ ಕಾರ್ಯವು ಏನಾಗಿರುತ್ತದೆ? ಸರ್ವರ ಪಾಲನೆ ಮಾಡುವುದೇ ಪೂರ್ವಜರ ಕಾರ್ಯವಾಗಿದೆ
ಅರ್ಥಾತ್ ಕರ್ತವ್ಯವಾಗಿದೆ. ಲೌಕಿಕದಲ್ಲಿಯೂ ಸಹ ನೋಡಿ ಪೂರ್ವಜರ ಮುಖಾಂತರವೇ ಶಾರೀರಿಕ ಶಕ್ತಿಯ
ಪಾಲನೆಯೇ ಆಗಿರಬಹುದು, ಸ್ಥೂಲ ಭೋಜನದ ಮೂಲಕ ಹಾಗೂ ವಿದ್ಯೆಯ ಮೂಲಕ ಶಕ್ತಿಯನ್ನು ತುಂಬುವ
ಪಾಲನೆಯಾಗುತ್ತದೆ ಅಂದಾಗ ತಾವು ಪೂರ್ವಜ ಆತ್ಮಗಳ ಪಾಲನೆ, ಸರ್ವ ಆತ್ಮಗಳಿಗೆ ತಂದೆಯ ಮೂಲಕ
ಸಿಕ್ಕಿರುವಂತಹ ಶಕ್ತಿಗಳಿಂದ ಪಾಲನೆ ಮಾಡಬೇಕು.
ಈಗಿನ ಸಮಯದನುಸಾರ
ಸರ್ವಆತ್ಮಗಳಿಗೆ ಶಕ್ತಿಗಳ ಮೂಲಕ ಪಾಲನೆಯ ಅವಶ್ಯಕತೆಯಿದೆ. ತಮಗೂ ಗೊತ್ತಿದೆ - ಇತ್ತೀಚಿನ
ಆತ್ಮಗಳಲ್ಲಿ ಅಶಾಂತಿ ಮತ್ತು ದುಃಖದ ಅಲೆಯು ಆವರಿಸಿದೆ. ಅಂದಮೇಲೆ ತಾವು ಪೂರ್ವಜ ಮತ್ತು ಪೂಜ್ಯ
ಆತ್ಮಗಳಿಗೆ ತಮ್ಮ ವಂಶಾವಳಿಯ ಬಗ್ಗೆ ದಯೆಬರುತ್ತದೆಯೇ? ಹೇಗೆ ಯಾವಾಗಲಾದರೂ ಯಾವುದೇ ವಿಶೇಷ ಅಶಾಂತಿ
ವಾಯುಮಂಡಲವಿದ್ದಾಗ ವಿಶೇಷ ರೂಪದಿಂದ ಮಿಲಿಟರಿ ಅಥವಾ ಪೋಲಿಸರು ಜಾಗೃತರಾಗಿಬಿಡುತ್ತಾರೆ ಹಾಗೆಯೇ
ಈಗಿನ ವಾತಾವರಣದಲ್ಲಿ ತಾವು ಪೂರ್ವಜರೂ ಸಹ ವಿಶೇಷ ಸೇವಾರ್ಥವಾಗಿ ಸ್ವಯಂನ್ನು ನಿಮಿತ್ತರೆಂದು
ತಿಳಿಯುತ್ತೀರಿ! ನಾವು ಇಡೀ ವಿಶ್ವದ ಆತ್ಮಗಳಿಗೆ ನಿಮಿತ್ತರಾಗಿದ್ದೇವೆ, ಈ ಸ್ಮೃತಿಯಿರುತ್ತದೆಯೇ?
ಇಡೀ ವಿಶ್ವದ ಆತ್ಮಗಳಿಗೆ ಈಗ ತಮ್ಮ ಸಕಾಶದ ಅವಶ್ಯಕತೆಯಿದೆ. ಇಂತಹ ಬೇಹದ್ದಿನ ವಿಶ್ವದ ಪೂರ್ವಜ
ಆತ್ಮರೆಂದು ತಮ್ಮನ್ನು ಅನುಭವ ಮಾಡುತ್ತೀರಾ? ವಿಶ್ವಸೇವೆಯು ನೆನಪಿಗೆ ಬರುತ್ತದೆಯೋ ಅಥವಾ ತಮ್ಮ
ಸೇವಾಕೇಂದ್ರದ ಸೇವೆಯು ನೆನಪಿಗೆ ಬರುತ್ತದೆಯೋ? ಇಂದು ಆತ್ಮಗಳು ತಾವು ಪೂಜ್ಯಾತ್ಮರನ್ನು
ಕರೆಯುತ್ತಿದ್ದಾರೆ. ಪ್ರತಿಯೊಬ್ಬರೂ ತಮ್ಮ-ತಮ್ಮ ಭಿನ್ನ-ಭಿನ್ನ ದೇವಿಯರನ್ನು ಬನ್ನಿ, ಕ್ಷಮೆ ಮಾಡಿ,
ಕೃಪೆ ಮಾಡಿ ಎಂದು ಕರೆಯುತ್ತಿದ್ದಾರೆ ಅಂದಾಗ ಭಕ್ತರ ಈ ಶಬ್ಧವು ಕೇಳಿಸುತ್ತಿದೆಯೋ ಅಥವಾ ಇಲ್ಲವೇ?
ಯಾವುದೇ ಧರ್ಮಾತ್ಮರಿರಬಹುದು ಯಾವಾಗ ಅವರೊಂದಿಗೆ ಮಿಲನ ಮಾಡುತ್ತೀರಿ ಆಗ ತಮ್ಮನ್ನು ಸರ್ವಆತ್ಮಗಳಿಗೆ
ಪೂರ್ವಜರೆಂದು ತಿಳಿದು ಮಿಲನ ಮಾಡುತ್ತೀರಾ? ಇಂತಹ ಅನುಭವ ವಾಗುತ್ತದೆಯೇ ಇವರೂ ಸಹ ನಾವು ಪೂರ್ವಜರ
ರೆಂಬೆ-ಕೊಂಬೆಗಳಿದ್ದಾರೆ! ತಾವು ಇವರಿಗೂ ಸಹ ಸಕಾಶ (ಶಕ್ತಿ) ಕೊಡುವವರಾಗಿದ್ದೀರಿ. ತಮ್ಮ
ಕಲ್ಪವೃಕ್ಷದ ಚಿತ್ರವನ್ನು ಸನ್ಮುಖದಲ್ಲಿ ತನ್ನಿ, ತಮ್ಮನ್ನು ನೋಡಿಕೊಳ್ಳಿ - ತಮ್ಮ ಸ್ಥಾನವೆಲ್ಲಿದೆ!
ಬುಡದಲ್ಲಿಯೂ ತಾವಿದ್ದೀರಿ, ಕಾಂಡವೂ ತಾವೇ ಆಗಿದ್ದೀರಿ ಜೊತೆಗೆ ಪರಮಧಾಮದಲ್ಲಿಯೂ ನೋಡಿ, ತಾವು
ಪೂರ್ವಜ ಆತ್ಮನ ಸ್ಥಾನವು ತಂದೆಯ ಜೊತೆ ಸಮೀಪದ್ದಾಗಿದೆ. ಇದು ಗೊತ್ತಿದೆಯಲ್ಲವೆ! ಇದೇ ನಶೆಯಿಂದ
ಯಾವುದೇ ಆತ್ಮನೊಂದಿಗೆ ಮಿಲನ ಮಾಡುತ್ತೀರೆಂದರೆ ಪ್ರತಿಯೊಂದು ಧರ್ಮದ ಆತ್ಮಗಳು ತಮ್ಮನ್ನು ಇವರು
ನಮ್ಮವರು, ನನ್ನವರು ಎಂಬ ದೃಷ್ಟಿಯಿಂದ ನೋಡುತ್ತಾರೆ. ಒಂದುವೇಳೆ ಆ ಪೂರ್ವಜರ ನಶೆಯಿಂದ,
ಸ್ಮೃತಿಯಿಂದ, ವೃತ್ತಿಯಿಂದ, ದೃಷ್ಟಿಯಿಂದ ಮಿಲನ ಮಾಡುತ್ತೀರೆಂದರೆ ಅವರಿಗೂ ಸಹ ನನ್ನವರೆಂಬ
ಅನುಭವವಾಗುತ್ತದೆ ಏಕೆಂದರೆ ತಾವು ಸರ್ವರಿಗೆ ಪೂಜ್ಯರಾಗಿದ್ದೀರಿ, ಎಲ್ಲರವರಾಗಿದ್ದೀರಿ - ಇಂತಹ
ಸ್ಮೃತಿಯಿಂದ ಸೇವೆ ಮಾಡಿದಾಗ ಪ್ರತಿಯೊಂದು ಆತ್ಮವು ಇವರು ನಮ್ಮದೇ ಪೂರ್ವಜರು ಅಥವಾ ಇಷ್ಟದೇವತೆಗಳು
ಪುನಃ ನಮಗೆ ಸಿಕ್ಕಿಬಿಟ್ಟರೆಂದು ಅನುಭವ ಮಾಡುತ್ತಾರೆ. ಮತ್ತೆ ತಮ್ಮ ಪೂಜ್ಯಸ್ಥಿತಿಯನ್ನು ನೋಡಿ
ಎಷ್ಟು ದೊಡ್ಡ ಪೂಜೆಯಾಗುತ್ತದೆ. ಯಾವುದೇ ಧರ್ಮಾತ್ಮ, ಮಹಾತ್ಮರಿಗೆ ತಾವು ದೇವಿ-ದೇವತೆಗಳ ಸಮಾನ
ವಿಧಿಪೂರ್ವಕ ಪೂಜೆಯಾಗುವುದಿಲ್ಲ. ಪೂಜ್ಯರಾಗುತ್ತಾರೆ ಆದರೆ ನಿಮ್ಮ ಹಾಗೆ ವಿಧಿಪೂರ್ವಕ ಪೂಜೆಯು
ನಡೆಯುವುದಿಲ್ಲ. ಗಾಯನವನ್ನು ನೋಡಿ, ಎಷ್ಟೊಂದು ವಿಧಿಪೂರ್ವಕವಾಗಿ ಕೀರ್ತನೆ ಮಾಡುತ್ತಾರೆ, ಆರತಿ
ಮಾಡುತ್ತಾರೆ. ಇಂತಹ ಪೂಜ್ಯರು ತಾವು ಪೂರ್ವಜರೇ ಆಗುತ್ತೀರಿ ಅಂದಾಗ ತಮ್ಮನ್ನು ಈ ರೀತಿ
ತಿಳಿಯುತ್ತೀರಾ? ಇಂತಹ ನಶೆಯಿದೆಯೇ? ನಶೆಯಿದೆಯೇ? ನಾವು ಪೂರ್ವಜ ಆತ್ಮರೆಂದು ಯಾರು ತಿಳಿಯುತ್ತೀರೋ,
ಈ ನಶೆಯಿರುತ್ತದೆಯೇ, ಯಾರಿಗೆ ಈ ಸ್ಮೃತಿಯಿರುತ್ತದೆಯೋ ಅವರು ಕೈಯನ್ನೆತ್ತಿ. ಇರುತ್ತದೆಯೇ?
ಒಳ್ಳೆಯದು. ಯಾರಿಗಿರುತ್ತದೆಯೋ ಅವರು ಕೈಯೆತ್ತಿದಿರಾ? ಬಹಳ ಒಳ್ಳೆಯದು. ಈಗ ಇನ್ನೊಂದು ಪ್ರಶ್ನೆಯು
ಯಾವುದಾಗಿರುತ್ತದೆ? ಸದಾ ಇರುತ್ತದೆಯೇ? ಸದಾ ಇರುತ್ತದೆಯೇ?
ಬಾಪ್ದಾದಾ ಎಲ್ಲಾ
ಮಕ್ಕಳನ್ನು ಪ್ರತಿಯೊಂದು ಪ್ರಾಪ್ತಿಯಲ್ಲಿ ಅವಿನಾಶಿಯನ್ನಾಗಿ ನೋಡಲು ಬಯಸುತ್ತಾರೆ ಒಮ್ಮೊಮ್ಮೆ
ಅಲ್ಲ. ಏಕೆ? ಉತ್ತರವನ್ನಂತೂ ಬಹಳ ಚತುರತೆಯಿಂದ ಕೊಡುತ್ತಾರೆ. ಏನು ಹೇಳುತ್ತಾರೆ? ಇರುವುದಂತೂ
ಇರುತ್ತೇವೆ, ಒಳ್ಳೆಯದು, ಇರುತ್ತಾರೆ ಸ್ವಲ್ಪ ಸಮಯದ ನಂತರ ಅದು ಕೆಲಕೆಲವೊಮ್ಮೆ ಇರುತ್ತದೆ ಎಂದು
ಹೇಳುತ್ತಾರೆ. ನೋಡಿ ತಂದೆಯೂ 'ಅವಿನಾಶಿ, ತಾವು ಆತ್ಮಗಳೂ ಅವಿನಾಶಿಯಾಗಿದ್ದೀರಲ್ಲವೆ! ಪ್ರಾಪ್ತಿಗಳೂ
ಅವಿನಾಶಿ. ಜ್ಞಾನವು ಅವಿನಾಶಿ ತಂದೆಯ ಮೂಲಕ ಅವಿನಾಶಿ ಜ್ಞಾನವಾಗಿದೆ. ಅಂದಾಗ ಧಾರಣೆಯೂ ಏನಿರಬೇಕು?
ಅವಿನಾಶಿಯಾಗಿರಬೇಕಾ ಅಥವಾ ಕೆಲವೊಮ್ಮೆ ಮಾತ್ರವೋ? ಬಾಪ್ದಾದಾ ಈಗ ಎಲ್ಲಾ ಮಕ್ಕಳನ್ನು ಸಮಯದ
ಪರಿಸ್ಥಿತಿಗಳನುಸಾರ ಬೇಹದ್ದಿನ ಸೇವೆಯಲ್ಲಿ ಸದಾ ತತ್ಫರರಾಗಿರುವುದನ್ನು ನೋಡಲು ಬಯಸುತ್ತಾರೆ
ಏಕೆಂದರೆ ಸೇವೆಯಲ್ಲಿ ತತ್ಫರರಾಗಿರುವ ಕಾರಣ ಅನೇಕ ಪ್ರಕಾರದ ಏರುಪೇರುಗಳಿಂದ ಪಾರಾಗಿಬಿಡುತ್ತೀರಿ
ಆದರೆ ಯಾವಾಗ ಸೇವೆ ಮಾಡುತ್ತೀರಿ, ಯೋಜನೆ ರೂಪಿಸುತ್ತೀರಿ ಮತ್ತು ಯೋಜನೆಯನುಸಾರ ಅದರ ಪ್ರಯೋಗದಲ್ಲಿ
ಬರುತ್ತೀರಿ ಸಫಲತೆಯನ್ನೂ ಪ್ರಾಪ್ತಿ ಮಾಡಿಕೊಳ್ಳುತ್ತೀರಿ ಆದರೆ ಬಾಪ್ದಾದಾ ಏನು ಬಯಸುತ್ತಾರೆಂದರೆ
ಒಂದು ಸಮಯದಲ್ಲಿ ಮೂರು ಸೇವೆಗಳು ಒಟ್ಟಿಗೆ ಇರಲಿ, ವಾಚಾ ಅಷ್ಟೇ ಅಲ್ಲ, ಮನಸಾಸೇವೆ, ವಾಚಾ ಮತ್ತು
ಕರ್ಮಣಾ ಅರ್ಥಾತ್ ಸಂಬಂಧ-ಸಂಪರ್ಕದಲ್ಲಿ ಬಂದರೂ ಸೇವೆಯಾಗಲಿ. ಸೇವಾಭಾವ, ಸೇವೆಯ ಭಾವನೆಯಿರಲಿ. ಈ
ಸಮಯದಲ್ಲಿ ವಾಚಾ ಸೇವೆಯ ಪರ್ಸೆಂಟೇಜ್ ಹೆಚ್ಚಿಗೆ ಇದೆ, ಮನಸಾ ಸೇವೆಯಿದೆ ಆದರೆ ವಾಚಾದ ಪರ್ಸೆಂಟೇಜ್
ಹೆಚ್ಚಿನದಾಗಿದೆ. ಒಂದೇ ಸಮಯದಲ್ಲಿ ಮೂರೂ ಸೇವೆಗಳು ಜೊತೆ-ಜೊತೆಯಲ್ಲಿ ಆಗುವುದರಿಂದ ಸೇವೆಯಲ್ಲಿ
ಸಫಲತೆಯು ಇನ್ನೂ ಹೆಚ್ಚಿನದಾಗುವುದು. ಬಾಪ್ದಾದಾ ಸಮಾಚಾರವನ್ನು ಕೇಳಿದರು - ಈ ಗ್ರೂಪ್ನಲ್ಲಿಯೂ
ಭಿನ್ನ-ಭಿನ್ನ ವರ್ಗದವರು ಬಂದಿದ್ದಾರೆ ಮತ್ತು ಸೇವೆಯ ಒಳ್ಳೆಯ ಯೋಜನೆಗಳನ್ನು ರೂಪಿಸುತ್ತಿದ್ದಾರೆ.
ಬಹಳ ಚೆನ್ನಾಗಿ ಮಾಡುತ್ತಿದ್ದೀರಿ ಆದರೆ ಮೂರೂ ಸೇವೆಗಳು ಒಟ್ಟಿಗೆ ನಡೆಯುವುದರಿಂದ ಸೇವೆಯ ವೇಗವು
ಇನ್ನಷ್ಟು ವೃದ್ಧಿಯನ್ನು ಹೊಂದುವುದು. ಎಲ್ಲಾ ಕಡೆಯಿಂದ ಮಕ್ಕಳು ಬಂದು ತಲುಪಿದ್ದೀರಿ, ಇದನ್ನು
ನೋಡಿ ಬಾಪ್ದಾದಾರವರಿಗೂ ಖುಷಿಯಾಗುತ್ತದೆ. ಹೊಸ-ಹೊಸ ಮಕ್ಕಳು ಉಮ್ಮಂಗ-ಉತ್ಸಾಹದಿಂದ ಬಂದು
ತಲುಪುತ್ತೀರಿ.
ಈಗ ಬಾಪ್ದಾದಾ ಎಲ್ಲಾ
ಮಕ್ಕಳನ್ನು ಸದಾ ನಿರ್ವಿಘ್ನ ಸ್ಥಿತಿಯಲ್ಲಿ ನೋಡಲು ಬಯಸುತ್ತಾರೆ, ಏಕೆ? ಯಾವಾಗ ತಾವು
ನಿಮಿತ್ತರಾಗಿರುವವರು ನಿರ್ವಿಘ್ನ ಸ್ಥಿತಿಯಲ್ಲಿ ಸ್ಥಿತರಾಗುತ್ತೀರೋ ಆಗ ವಿಶ್ವದ ಆತ್ಮಗಳನ್ನು
ಸರ್ವಸಮಸ್ಯೆಗಳಿಂದ ನಿರ್ವಿಘ್ನರನ್ನಾಗಿ ಮಾಡಲು ಸಾಧ್ಯ. ಇದಕ್ಕಾಗಿ ವಿಶೇಷವಾಗಿ ಎರಡು ಮಾತುಗಳನ್ನು
ಅಂಡರ್ಲೈನ್ ಮಾಡಿಕೊಳ್ಳಿ. ಮಾಡಿಯೂ ಮಾಡುತ್ತೀರಿ ಆದರೆ ಮತ್ತಷ್ಟು ಅಂಡರ್ಲೈನ್ ಮಾಡಿಕೊಳ್ಳಿ.
ಮೊದಲನೆಯದಾಗಿ ಪ್ರತಿಯೊಂದು ಆತ್ಮವನ್ನು ತಮ್ಮ ಆತ್ಮಿಕ ದೃಷ್ಟಿಯಿಂದ ನೋಡಿ. ಆತ್ಮನ
ನಿಜಸಂಸ್ಕಾರದಲ್ಲಿ ನೋಡಿ. ಭಲೆ ಎಂತಹ ಸಂಸ್ಕಾರದ ಆತ್ಮವೇ ಆಗಿರಬಹುದು ಆದರೆ ಪ್ರತಿಯೊಂದು ಆತ್ಮಗಳ
ಪ್ರತಿ ತಮ್ಮ ಶುಭಭಾವನೆ, ಶುಭಕಾಮನೆ, ಪರಿವರ್ತನೆಯ ಶ್ರೇಷ್ಠಭಾವನೆಯು ಅವರ ಸಂಸ್ಕಾರವನ್ನು ಸ್ವಲ್ಪ
ಸಮಯಕ್ಕಾಗಿ ಪರಿವರ್ತನೆ ಮಾಡುತ್ತದೆ. ಆತ್ಮಿಕ ಭಾವವನ್ನು ಇಮರ್ಜ್ ಮಾಡಿಕೊಳ್ಳಿ, ಹೇಗೆ ಆದಿಯಲ್ಲಿ
ನೋಡಿದಿರಿ. ಸಂಘಟನೆಯಲ್ಲಿರುತ್ತಾ ಆತ್ಮಿಕ ದೃಷ್ಟಿ, ಆತ್ಮಿಕ ವೃತ್ತಿ, ಆತ್ಮ-ಆತ್ಮನೊಂದಿಗೆ ಮಿಲನ
ಮಾಡುತ್ತಿದ್ದೇವೆ, ಮಾತನಾಡುತ್ತಿದ್ದೇವೆ ಎಂಬ ದೃಷ್ಟಿಯಿಂದ ತಳಪಾಯವು ಎಷ್ಟೊಂದು
ಶಕ್ತಿಶಾಲಿಯಾಗಿಬಿಟ್ಟಿತು. ಈಗ ಸೇವೆಯ ವಿಸ್ತಾರದಲ್ಲಿ, ಸೇವೆಯ ವಿಸ್ತಾರದ ಸಂಬಂಧದಲ್ಲಿ ಆತ್ಮಿಕ
ಭಾವದಿಂದ ನಡೆಯುವುದು, ಮಾತನಾಡುವುದು, ಸಂಪರ್ಕದಲ್ಲಿ ಬರುವುದು ವಿಸ್ಮೃತಿಯಾಗಿಬಿಟ್ಟಿದೆ.
ಸಮಾಪ್ತಿಯಾಗಿಲ್ಲ ಆದರೆ ಕೇವಲ ವಿಸ್ಮೃತಿಯಾಗಿದೆ. ಆತ್ಮಿಕ ಸ್ವಮಾನ ಆತ್ಮಕ್ಕೆ ಸಹಜವಾಗಿ
ಸಫಲತೆಯನ್ನು ಪ್ರಾಪ್ತಿ ಮಾಡಿಸುತ್ತದೆ ಏಕೆಂದರೆ ತಾವೆಲ್ಲರೂ ಯಾರು ಬಂದು ಒಟ್ಟಿಗೆ ಸೇರಿದ್ದೀರಿ?
ಅದೇ ಕಲ್ಪದ ಹಿಂದಿನ ದೇವಾತ್ಮರು, ಬ್ರಾಹ್ಮಣ ಆತ್ಮರು ಬಂದು ಸೇರಿದ್ದೀರಿ. ಬ್ರಾಹ್ಮಣ ಆತ್ಮನ
ರೂಪದಲ್ಲಿ ಎಲ್ಲರೂ ಶ್ರೇಷ್ಠ ಆತ್ಮಗಳಾಗಿದ್ದೀರಿ, ದೇವಾತ್ಮಗಳ ಲೆಕ್ಕದಲ್ಲಿಯೂ ಶ್ರೇಷ್ಠ
ಆತ್ಮಗಳಾಗಿದ್ದೀರಿ. ಅದೇ ಸ್ವರೂಪದಿಂದ ಸಂಬಂಧ- ಸಂಪರ್ಕದಲ್ಲಿ ಬನ್ನಿ. ಪ್ರತೀ ಸಮಯ ಪರಿಶೀಲನೆ
ಮಾಡಿಕೊಳ್ಳಿ ನಾನು ದೇವಾತ್ಮ, ಬ್ರಾಹ್ಮಣ ಆತ್ಮನ ಶ್ರೇಷ್ಠ ಕರ್ತವ್ಯ, ಶ್ರೇಷ್ಠ ಸೇವೆ ಏನಾಗಿದೆ?
‘ಆಶೀರ್ವಾದಗಳನ್ನು ಕೊಡುವುದು ಮತ್ತು ಆಶೀರ್ವಾದಗಳನ್ನು ಪಡೆಯುವುದು’ ತಮ್ಮ ಜಡಚಿತ್ರಗಳು ಯಾವ ಸೇವೆ
ಮಾಡುತ್ತದೆ? ಎಂತಹ ಆತ್ಮನೇ ಇರಲಿ ಆದರೆ ಆಶೀರ್ವಾದಗಳನ್ನು ಪಡೆಯಲು ಹೋಗುತ್ತಾರೆ ಆಶೀರ್ವಾದಗಳನ್ನು
ಪಡೆದುಕೊಂಡೇ ಬರುತ್ತಾರೆ. ಯಾರೇ ಆಗಿರಲಿ ಒಂದುವೇಳೆ ಪುರುಷಾರ್ಥದಲ್ಲಿ ಪರಿಶ್ರಮವೆಂದು
ತಿಳಿಯುತ್ತಾರೆಂದರೆ ಅದಕ್ಕಾಗಿ ಎಲ್ಲದಕ್ಕಿಂದ ಸಹಜ ಪುರುಷಾರ್ಥವೇನೆಂದರೆ - ಇಡೀದಿನದಲ್ಲಿ ದೃಷ್ಟಿ,
ವೃತ್ತಿ, ಮಾತು, ಭಾವನೆ ಎಲ್ಲದರಿಂದ ಆಶೀರ್ವಾದಗಳನ್ನು ಕೊಡಿ, ಆಶೀರ್ವಾದಗಳನ್ನು ಪಡೆದುಕೊಳ್ಳಿ.
ತಮ್ಮ ಬಿರುದಾಗಿದೆ, ವರದಾನವಾಗಿದೆ -ಮಹಾದಾನಿಗಳು. ಸೇವೆ ಮಾಡುತ್ತಾ ಕಾರ್ಯದಲ್ಲಿ,
ಸಂಬಂಧ-ಸಂಪರ್ಕದಲ್ಲಿ ಬರುತ್ತಾ ಕೇವಲ ಇದೇ ಕಾರ್ಯವನ್ನು ಮಾಡಿ - ಆಶೀರ್ವಾದಗಳನ್ನು ಕೊಡಿ ಮತ್ತು
ಆಶೀರ್ವಾದಗಳನ್ನು ತೆಗೆದುಕೊಳ್ಳಿ. ಇದು ಕಷ್ಟವಾಗುತ್ತದೆಯೇ? ಅಥವಾ ಸಹಜವೇ? ಯಾರು ಸಹಜವೆಂದು
ತಿಳಿಯುತ್ತೀರಿ ಅವರು ಕೈಯೆತ್ತಿ. ಯಾರಾದರೂ ತಮ್ಮನ್ನು ವಿರೋಧಿಸಿದರೇ? ಆಗಲೂ ಆಶೀರ್ವಾದ
ಕೊಡುತ್ತೀರಾ? ಕೊಡುತ್ತೀರಾ? ಇಷ್ಟೊಂದು ಆಶೀರ್ವಾದಗಳ ಸ್ಟಾಕ್ ತಮ್ಮ ಬಳಿಯಿದೆಯೇ? ಆಪೋಸಿಷನ್ (ವಿರೋಧ)
ಅಂತೂ ಇರುತ್ತದೆ ಏಕೆಂದರೆ ಈ ಆಪೋಸಿಷನ್ ಪೋಸಿಷನ್ (ಸ್ಥಾನ) ನವರೆಗೆ ತಲುಪಿಸುತ್ತದೆ. ನೋಡಿ,
ಎಲ್ಲರಿಗಿಂತ ಹೆಚ್ಚಿನ ಆಪೆÇೀಸಿಷನ್ ಬ್ರಹ್ಮಾತಂದೆಗೆ ಆಯಿತು. ಆಯಿತಲ್ಲವೆ? ಮತ್ತು ನಂಬರ್ವನ್
ಪದವಿಯನ್ನೂ ಸಹ ಯಾರು ಪಡೆದರು? ಬ್ರಹ್ಮಾತಂದೆಯೇ ಪಡೆದರಲ್ಲವೆ! ಏನೇ ಆಗಲಿ ನಾನು ಬ್ರಹ್ಮಾ ತಂದೆಯ
ಸಮಾನ ಆಶೀರ್ವಾದಗಳನ್ನು ಕೊಡಬೇಕಾಗಿದೆ. ಬ್ರಹ್ಮಾತಂದೆಯ ಮುಂದೆ ವ್ಯರ್ಥ ಮಾಡುವ, ವ್ಯರ್ಥವಾಗಿ
ಮಾತನಾಡುವವರಿಲ್ಲವೆ? ಆದರೂ ಸಹ ಬ್ರಹ್ಮಾತಂದೆಯು ಆಶೀರ್ವಾದಗಳನ್ನೇ ಕೊಟ್ಟರು, ಆಶೀರ್ವಾದಗಳನ್ನೇ
ಪಡೆದುಕೊಂಡರು, ಅಳವಡಿಸಿಕೊಳ್ಳುವ ಶಕ್ತಿಯನ್ನಿಟ್ಟುಕೊಂಡರು. ಮಗುವಾಗಿದ್ದಾರೆ, ಪರಿವರ್ತನೆಯಾಗಿಯೇ
ಆಗುವರು ಎನ್ನುತ್ತಿದ್ದರು ಹಾಗೆಯೇ ತಾವೂ ಸಹ ಇದೇ ವೃತ್ತಿ-ದೃಷ್ಟಿಯನ್ನಿಡಿ - ಇವರು ಕಲ್ಪದ
ಹಿಂದಿನ ಪರಿವಾರದವರೇ ಬ್ರಾಹ್ಮಣ ಪರಿವಾರದವರಾಗಿದ್ದಾರೆ. ನಾನೂ ಪರಿವರ್ತನೆಯಾಗಿ ಇವರನ್ನೂ
ಪರಿವರ್ತನೆ ಮಾಡಬೇಕಾಗಿದೆ. ಇವರು ಬದಲಾದರೆ ನಾನೂ ಬದಲಾಗುವೆನು ಎಂದಲ್ಲ. ಮೊದಲು ನಾನು ಬದಲಾಗಿ
ಅವರನ್ನು ಬದಲಾಯಿಸಬೇಕು ಅರ್ಥಾತ್ ಪರಿವರ್ತನೆ ಮಾಡಬೇಕು. ಇದು ನಮ್ಮ ಜವಾಬ್ದಾರಿಯಾಗಿದೆ ಎಂದು
ತಿಳಿದಾಗ ಆಶೀರ್ವಾದವೇ ಹೊರಡುತ್ತವೆ ಮತ್ತು ಆಶೀರ್ವಾದವೇ ಸಿಗುತ್ತದೆ. ಈಗ ಸಮಯವು ಶೀಘ್ರವಾಗಿ
ಪರಿವರ್ತನೆಯ ಕಡೆಗೆ ಹೋಗುತ್ತಿದೆ, ಎಲ್ಲವೂ ಅತೀಯಲ್ಲಿ ಹೋಗುತ್ತಿದೆ ಆದರೆ ಸಮಯದ ಪರಿವರ್ತನೆಗೆ
ಮುಂಚೆ ತಾವು ವಿಶ್ವಪರಿವರ್ತಕ ಆತ್ಮಗಳು ಸ್ವಪರಿವರ್ತನೆಯ ಮೂಲಕ ಸರ್ವರ ಪರಿವರ್ತನೆಗೆ
ಆಧಾರಮೂರ್ತಿಗಳಾಗಿ, ತಾವೂ ಸಹ ವಿಶ್ವದ ಆಧಾರ ಮೂರ್ತಿಗಳು, ಉದ್ಧಾರ ಮೂರ್ತಿಗಳಾಗಿದ್ದೀರಿ.
ಪ್ರತಿಯೊಂದು ಆತ್ಮವು ಈ ಲಕ್ಷ್ಯವನ್ನಿಟ್ಟುಕೊಳ್ಳಿ - ನಾನು ನಿಮಿತ್ತನಾಗಬೇಕು. ಕೇವಲ ಮೂರು
ಮಾತುಗಳು ಸ್ವಯಂನಲ್ಲಿ ಸಂಕಲ್ಪ ಮಾತ್ರವೂ ಇರಬಾರದು, ಈ ಪರಿವರ್ತನೆ ಮಾಡಿಕೊಳ್ಳಿ. ಒಂದನೆಯದು
ಪರಚಿಂತನೆ. ಎರಡನೆಯದು ಪರದರ್ಶನ, ಸ್ವದರ್ಶನಕ್ಕೆ ಬದಲಾಗಿ ಪರದರ್ಶನವಲ್ಲ. ಮೂರನೆಯದು - ಪರಮತ ಅಥವಾ
ಪರಸಂಗ, ಕೆಟ್ಟಸಂಗ. ಶ್ರೇಷ್ಠಸಂಗ ಮಾಡಿ ಏಕೆಂದರೆ ಸಂಗದೋಷವು ಬಹಳ ನಷ್ಟಗೊಳಿಸುತ್ತದೆ. ಮೊದಲೂ ಸಹ
ಬಾಪ್ ದಾದಾ ತಿಳಿಸಿದ್ದರು-ಮೊದಲನೆಯದಾಗಿ ಪರ-ಉಪಕಾರಿಗಳಾಗಿ ಮತ್ತು ಈ ಮೊದಲಿನ ಪರ ಎಂಬ ಮಾತುಗಳನ್ನು
ಕತ್ತರಿಸಿಹಾಕಿ. ಪರದರ್ಶನ, ಪರಚಿಂತನೆ, ಪರಮತ ಅರ್ಥಾತ್ ಕೆಟ್ಟಸಂಗ, ಪರರ ವ್ಯರ್ಥಸಂಗ.
ಪರ-ಉಪಕಾರಿಗಳಾಗಿ ಆಗಲೇ ಆಶೀರ್ವಾದಗಳು ಸಿಗುತ್ತದೆ ಮತ್ತು ಆಶೀರ್ವಾದಗಳನ್ನು ಕೊಡುತ್ತೀರಿ. ಯಾರೇ
ಏನೇ ಕೊಡಲಿ ಆದರೆ ತಾವು ಆಶೀರ್ವಾದಗಳನ್ನು ಕೊಡಿ. ಇಷ್ಟು ಸಾಹಸವಿದೆಯೇ? ಅಂದಾಗ ಬಾಪ್ದಾದಾ ಎಲ್ಲಾ
ಕಡೆಯ ಸೇವಾಕೇಂದ್ರದವರಿಗೆ ತಿಳಿಸುತ್ತಾರೆ - ಒಂದುವೇಳೆ ತಾವೆಲ್ಲಾ ಮಕ್ಕಳು ಯಾರು ಏನೇ ಕೊಡಲಿ ಆದರೆ
ನಾವು ಆಶೀರ್ವಾದಗಳನ್ನು ಕೊಡಬೇಕೆಂದು ಸಾಹಸವನ್ನಿಟ್ಟಿದ್ದೇ ಆದರೆ ಬಾಪ್ದಾದಾ ಈ ವರ್ಷದಲ್ಲಿ ತಮ್ಮ
ಅಧಿಕವಾದ ಸಾಹಸ, ಉಮ್ಮಂಗದ ಕಾರಣ ತಮಗೆ ಸಹಯೋಗ ಕೊಡುತ್ತಾರೆ ಆದರೆ ತಾವು ಆಶೀರ್ವಾದಗಳನ್ನೇ
ಕೊಟ್ಟಾಗ ಮಾತ್ರ. ಇದರಲ್ಲಿ ಬೆರಕೆ ಮಾಡಬಾರದು. ಬಾಪ್ದಾದಾರವರ ಬಳಿಯಂತೂ ಎಲ್ಲಾ ರೆಕಾರ್ಡ್ಗಳು
ಬರುತ್ತವೆಯಲ್ಲವೆ. ಸಂಕಲ್ಪದಲ್ಲಿಯೂ ಸಹ ಆಶೀರ್ವಾದಗಳ ಬದಲಾಗಿ ಮತ್ತೇನೂ ಬರಬಾರದು. ಇಂತಹ
ಸಾಹಸವಿದೆಯೇ? ಇದ್ದರೆ ಕೈಯೆತ್ತಿ. ಮಾಡಲೇಬೇಕಾಗುತ್ತದೆ. ಕೇವಲ ಕೈಯೆತ್ತುವುದಲ್ಲ.
ಮಾಡಬೇಕಾಗುತ್ತದೆ. ಮಾಡುವಿರಾ? ಮಧುಬನದವರು, ಟೀಚರ್ಸ್ ಮಾಡುತ್ತೀರಾ? ಒಳ್ಳೆಯದು, ಅಧಿಕವಾದ
ಅಂಕಗಳನ್ನು ಜಮಾ ಮಾಡಿಕೊಳ್ಳುತ್ತೀರಾ? ಶುಭಾಶಯಗಳು. ಏಕೆ? ಬಾಪ್ದಾದಾರವರ ಬಳಿ ಅಡ್ವಾನ್ಸ್
ಪಾರ್ಟಿಯವರು ಪದೇ-ಪದೇ ಬರುತ್ತಾರೆ. ಅವರು ಹೇಳುತ್ತಾರೆ ನಮಗಂತೂ ಅಡ್ವಾನ್ಸ್ ಪಾರ್ಟಿಯ ಪಾತ್ರವನ್ನು
ಕೊಟ್ಟಿದ್ದೀರಿ, ಅದನ್ನು ಅಭಿನಯಿಸುತ್ತಿದ್ದೇವೆ ಆದರೆ ನಮ್ಮ ಜೊತೆಗಾರರು ಅಡ್ವಾನ್ಸ್ ಸ್ಟೇಜನ್ನು
ಏಕೆ ತಯಾರು ಮಾಡುತ್ತಿಲ್ಲ? ಈಗ ಯಾವ ಉತ್ತರವನ್ನು ಕೊಡಲಿ? ಏನು ಉತ್ತರವನ್ನು ಕೊಡಲಿ? ಅಡ್ವಾನ್ಸ್
ಸ್ಟೇಜ್ ಮತ್ತು ಅಡ್ವಾನ್ಸ್ ಪಾರ್ಟಿಯ ಪಾತ್ರ ಯಾವಾಗ ಎರಡು ಸೇರುತ್ತದೆಯೋ ಆಗ ಸಮಾಪ್ತಿ ಆಗುತ್ತದೆ.
ಅವರು ನನ್ನನ್ನು ಕೇಳುತ್ತಿದ್ದಾರೆ, ಯಾವ ಉತ್ತರವನ್ನು ಕೊಡಲಿ? ಎಷ್ಟು ವರ್ಷಗಳು ಆಗುತ್ತದೆ?
ಎಲ್ಲವನ್ನೂ ಆಚರಿಸಿದಿರಿ, ಸಿಲ್ವರ್ ಜುಬಿಲಿ (ಬೆಳ್ಳಿ ಮಹೋತ್ಸವ), ಗೋಲ್ಡನ್ ಜುಬಿಲಿ (ಸುವರ್ಣಮಹೋತ್ಸವ),
ವಜ್ರಮಹೋತ್ಸವ ಎಲ್ಲವನ್ನೂ ಆಚರಿಸಿದಿರಿ. ಈಗ ಅಡ್ವಾನ್ಸ್ ಸ್ಟೇಜ್ (ಸ್ಥಿತಿ) ಮಹೋತ್ಸವವನ್ನು
ಆಚರಿಸಿರಿ. ಆ ದಿನಾಂಕವನ್ನು ನಿಗಧಿ ಮಾಡಿ. ಪಾಂಡವರು ಹೇಳಿ, ಅದರ ದಿನಾಂಕ ನಿಗಧಿಯಾಗಿದೆಯೇ?
ಮೊದಲನೇ ಸಾಲಿನವರು ಹೇಳಿ ದಿನಾಂಕ ನಿಗಧಿಯಾಗಿದೆಯೆ? ಇಲ್ಲವೆಂದರೆ ಇದ್ದಕ್ಕಿದ್ದ ಹಾಗೆ
ನಿಗಧಿಯಾಗುತ್ತದೆಯೇ? ಏನು ಆಗುತ್ತದೆ? ಇದ್ದಕ್ಕಿದ್ದ ಹಾಗೆ ಆಗುತ್ತದೆಯೋ ಅಥವಾ ಆಗಿಬಿಡುತ್ತದೆಯೋ?
ಹೇಳಿ. ಏನಾದರೂ ಹೇಳಿ, ಯೋಚಿಸುತ್ತಿದ್ದೀರೇನು? ನಿರ್ವೈರ್ ಅಣ್ಣನವರೊಂದಿಗೆ ಕೇಳುತ್ತಿದ್ದೇವೆ.
ಉತ್ಸವ ಆಗುತ್ತದೆಯೋ ಅಥವಾ ಇದ್ದಕ್ಕಿದ್ದ ಹಾಗೆ ಆಗುತ್ತದೆಯೋ? ನೀವು ದಾದಿಯವರನ್ನು
ಕೇಳುತ್ತಿದ್ದೀರಾ? ಇವರು ದಾದಿ ಏನಾದರೂ ಹೇಳಲಿ ಎಂದು ದಾದಿಯವರನ್ನು ನೋಡುತ್ತಿದ್ದಾರೆ. ರಮೇಶ್
ರವರನ್ನು ಕೇಳುತ್ತಿದ್ದೇವೆ ನೀವು ಹೇಳಿ (ಕೊನೆಗಂತೂ ಇದು ಆಗಲೇಬೇಕಾಗಿದೆ) ಕೊನೆಗಾದರೂ ಸಹ ಯಾವಾಗ?
(ನೀವು ದಿನಾಂಕವನ್ನು ತಿಳಿಸಿ, ಆ ದಿನಾಂಕದೊಳಗೆ ತಯಾರಾಗುತ್ತೇವೆ) ಒಳ್ಳೆಯದು, ಬಾಪ್ದಾದಾರವರು
ಒಂದುವರ್ಷಕ್ಕೆ ಮೊದಲೇ ದಿನಾಂಕವನ್ನು ಕೊಟ್ಟಿದ್ದರು. ಸಾಹಸದಿಂದ ಹೆಚ್ಚಿನ ಸಹಯೋಗ ಸಿಗುತ್ತದೆ.
ಇದಂತೂ ಮಾಡಲು ಸಾಧ್ಯವಿದೆಯಲ್ಲವೇ. ಇದನ್ನು ಮಾಡಿ ತೋರಿಸಿ. ನಂತರ ತಂದೆ ದಿನಾಂಕವನ್ನು ನಿಗಧಿ
ಮಾಡುತ್ತಾರೆ. (ನಿಮ್ಮ ಸಲಹೆಯ ಮೇರೆಗೆ ಈ 2004ನ್ನು ಆಚರಿಸುತ್ತೇವೆ) ಇದುವರೆಗೂ ಇಷ್ಟೆಲ್ಲಾ
ಸಿದ್ಧತೆ ಇಲ್ಲ ಅಂದಾಗ ಅಡ್ವಾನ್ಸ್ ಪಾರ್ಟಿಯವರು ಈಗಲೂ ಸಹ ಮತ್ತೊಂದು 'ವರ್ಷ
ಇರಬೇಕಾಗುತ್ತದೆಯಲ್ಲವೇ. ಒಳ್ಳೆಯದು. ಏಕೆಂದರೆ ಈಗಿನಿಂದ ಲಕ್ಷ್ಯವನ್ನು ಇಟ್ಟುಕೊಳ್ಳಿ. ಮಾಡಲೇಬೇಕು.
ಆದರೆ ಬಹಳ ಕಾಲದ ಅವಕಾಶ ಸಿಗುತ್ತದೆ ಏಕೆಂದರೆ ಬಹಳ ಕಾಲದ ಲೆಕ್ಕವೂ ಇದೆಯಲ್ಲವೇ! ಒಂದುವೇಳೆ
ಕೊನೆಯಲ್ಲಿ ಮಾಡುತ್ತೀರೆಂದರೆ ಬಹಳಕಾಲದ ಲೆಕ್ಕ ಸರಿಯಾಗಿ ಇರುವುದಿಲ್ಲ ಆದ್ದರಿಂದ ಈಗಿನಿಂದಲೇ
ಎಚ್ಚರವಹಿಸಿ (ಅಟೆನ್ನನ್ ಫೀಸ್). ಒಳ್ಳೆಯದು.
ಈಗ ಆತ್ಮೀಯ ವ್ಯಾಯಾಮ
ನೆನಪಿದೆಯಾ? ಒಂದು ಸೆಕೆಂಡಿನಲ್ಲಿ ತನ್ನ ಪೂರ್ವಜ ಸ್ಥಿತಿಯಲ್ಲಿ ಬನ್ನಿ. ಪರಮಧಾಮ ನಿವಾಸಿ ತಂದೆಯ
ಜೊತೆ-ಜೊತೆ ಲೈಟ್ಹೌಸ್ ಆಗಿ ವಿಶ್ವಕ್ಕೆ ಲೈಟ್ನ್ನು ನೀಡಲು ಸಾಧ್ಯವಿದೆಯೇ? ಒಂದು ಸೆಕೆಂಡಿನಲ್ಲಿ
ನಾಲ್ಕೂ ಕಡೆಯ ದೇಶ-ವಿದೇಶದಲ್ಲಿ ಕೇಳುವಂತಹವರು, ನೋಡುವಂತಹವರು ಲೈಟ್ ಹೌಸ್ ಆಗಿ ವಿಶ್ವದ ನಾಲ್ಕೂ
ಕಡೆಯ ಆತ್ಮರಿಗೆ ಬೆಳಕನ್ನು ನೀಡಿ, ಶಕ್ತಿಯನ್ನೂ ನೀಡಿ. ಒಳ್ಳೆಯದು.
ನಾಲ್ಕಾರೂ ಕಡೆಯ ವಿಶ್ವದ
ಪೂರ್ವಜ ಮತ್ತು ಪೂಜ್ಯ ಆತ್ಮಗಳಿಗೆ, ಸದಾ ದಾತರಾಗಿ ಸರ್ವರಿಗೆ ಆಶೀರ್ವಾದಗಳನ್ನು ಕೊಡುವಂತಹ
ಮಹಾದಾನಿ ಆತ್ಮಗಳಿಗೆ, ಸದಾ ಧೃಡತೆಯ ಮೂಲಕ ಸ್ವಪರಿವರ್ತನೆಯಿಂದ ಸರ್ವರ ಪರಿವರ್ತನೆ ಮಾಡುವಂತಹ
ವಿಶ್ವಪರಿವರ್ತಕ ಆತ್ಮಗಳಿಗೆ, ಸದಾ ಲೈಟ್ ಹೌಸ್ (ಪ್ರಕಾಶಗೃಹ) ಆಗಿ ಸರ್ವಆತ್ಮಗಳಿಗೆ ಪ್ರಕಾಶವನ್ನು
ಕೊಡುವಂತಹ ಸಮೀಪ ಆತ್ಮಗಳಿಗೆ ನೆನಪು, ಪ್ರೀತಿ ಮತ್ತು ಹೃದಯದ ಆಶೀರ್ವಾದಗಳ ಸಹಿತ ನಮಸ್ತೆ.
ಜಾನಕಿ ದಾದೀಜಿಯವರೊಂದಿಗೆ:
ಒಳ್ಳೆಯದು. ಇಬ್ಬರೂ
ದಾದಿಯರು ಬಹಳ ಒಳ್ಳೆಯ ಪಾಲನೆ ಕೊಡುತ್ತಿದ್ದೀರಿ. ಒಳ್ಳೆಯ ಪಾಲನೆಯಾಗುತ್ತಿದೆಯಲ್ಲವೆ! ಬಹಳ
ಒಳ್ಳೆಯದು. ಸೇವೆಗೆ ನಿಮಿತ್ತರಾಗಿದ್ದೀರಲ್ಲವೆ! ಅಂದಾಗ ತಮ್ಮೆಲ್ಲರಿಗೂ ಸಹ ದಾದಿಯರನ್ನು ನೋಡಿ
ಖುಷಿಯಾಗುತ್ತದೆ, ಖುಷಿಯಾಗುತ್ತದೆಯಲ್ಲವೆ! ಜವಾಬ್ದಾರಿಯ ಸುಖವಂತೂ ಅವಶ್ಯವಾಗಿ ಸಿಗುತ್ತದೆಯಲ್ಲವೆ!
ಎಲ್ಲರಿಂದ ಎಷ್ಟೊಂದು ಆಶೀರ್ವಾದಗಳು ಸಿಗುತ್ತವೆ. ಎಲ್ಲರಿಗೆ ಖುಷಿಯಾಗುತ್ತದೆ, (ಇಬ್ಬರೂ ದಾದಿಯರೂ
ಬಾಪ್ದಾದಾರವರನ್ನು ಆಲಿಂಗನ ಮಾಡಿಕೊಂಡರು) ಹೇಗೆ ಇವರನ್ನು ನೋಡಿಯೇ ಖುಷಿಯಾಗುತ್ತದೆ ಹಾಗೆಯೇ
ಇವರಂತೆ ಆದಾಗ ಎಷ್ಟೊಂದು ಖುಷಿಯಾಗಬೇಕು ಏಕೆಂದರೆ ಬಾಪ್ದಾದಾ ಇವರನ್ನು ನಿಮಿತ್ತರನ್ನಾಗಿ
ಮಾಡಿದ್ದಾರೆ ಅಂದರೆ ಅವಶ್ಯವಾಗಿ ವಿಶೇಷತೆಯಿದೆ ಆದ್ದರಿಂದ ಮಾಡಿದ್ದೇವೆ ಮತ್ತು ಅದೇ ವಿಶೇಷತೆಗಳು
ತಾವು ಪ್ರತಿಯೊಬ್ಬರಲ್ಲಿಯೂ ಬಂದುಬಿಟ್ಟರೆ ಏನಾಗಿಬಿಡುವುದು? ತಮ್ಮ ರಾಜ್ಯವು ಬಂದುಬಿಡುತ್ತದೆ.
ಬಾಪ್ದಾದಾರವರು ಯಾವ ದಿನಾಂಕವನ್ನು ಹೇಳುತ್ತಾರೆಯೋ ಅದು ಬಂದುಬಿಡುವುದು. ಈಗ ನೆನಪಿದೆಯಲ್ಲವೆ,
ದಿನಾಂಕವನ್ನು ನಿಗಧಿಪಡಿಸಬೇಕು. ಪ್ರತಿಯೊಬ್ಬರೂ ತಿಳಿಯಬೇಕು ನಾನು ಮಾಡಬೇಕೆಂದು. ಆಗ ಎಲ್ಲರೂ
ನಿಮಿತ್ತರಾಗಿಬಿಡುತ್ತೀರಿ ಎಂದರೆ ವಿಶ್ವದ ನವನಿರ್ಮಾಣವು ಆಗಿಯೇ ಬಿಡುತ್ತದೆ. ನಿಮಿತ್ತಭಾವವು ಈ
ಗುಣಗಳ ಗಣಿಯಾಗಿದೆ. ಕೇವಲ ಪ್ರತೀ ಸಮಯದಲ್ಲಿ ನಿಮಿತ್ತಭಾವವು ಬಂದುಬಿಟ್ಟರೆ ಮತ್ತೆಲ್ಲಾ ಗುಣಗಳು
ಸಹಜವಾಗಿ ಬಂದುಬಿಡುತ್ತದೆ ಏಕೆಂದರೆ ನಿಮಿತ್ತ ಭಾವದಲ್ಲಿ ನಾನು ಎನ್ನುವುದಿಲ್ಲ. ಈ ನಾನು
ಎನ್ನುವುದು ಏರುಪೇರಿನಲ್ಲಿ ತರುತ್ತದೆ. ನಿಮಿತ್ತರಾಗುವುದರಿಂದ ನನ್ನತನವು ಸಮಾಪ್ತಿ, ಎಲ್ಲವೂ
ನಿನ್ನದು-ನಿನ್ನದು ಎಂದಾಗಿಬಿಡುತ್ತದೆ. ಸಹಜ ಯೋಗಿಗಳಾಗಿಬಿಡುತ್ತೀರಿ. ಅಂದಾಗ ಎಲ್ಲರಿಗೂ
ದಾದಿಯವರೊಂದಿಗೆ ಪ್ರೀತಿಯಿದೆ, ಬಾಪ್ದಾದಾರವರೊಂದಿಗೆ ಪ್ರೀತಿಯಿದೆಯೆಂದರೆ ಆ ಪ್ರೀತಿಗೆ ರಿಟರ್ನ್
ಆಗಿದೆ - ವಿಶೇಷತೆಗಳನ್ನು ಸಮಾನ ಮಾಡಿಕೊಳ್ಳುವುದು. ಇಂತಹ ಲಕ್ಷ್ಯವನ್ನಿಡಿ - ವಿಶೇಷತೆಗಳನ್ನು
ಸಮಾನ ಮಾಡಿಕೊಳ್ಳಬೇಕಾಗಿದೆ. ಯಾರಲ್ಲಿಯೇ ಯಾವುದೇ ವಿಶೇಷತೆಯನ್ನು ನೋಡಿದರೆ ಆ ವಿಶೇಷತೆಯನ್ನು ಭಲೆ
ಅನುಸರಿಸಿ. ಆತ್ಮವನ್ನು ಅನುಸರಿಸುವುದರಲ್ಲಿ ಎರಡೂ ಕಾಣಿಸುತ್ತದೆ ಆದ್ದರಿಂದ ವಿಶೇಷತೆಯನ್ನು ನೋಡಿ
ಮತ್ತು ಅದರಲ್ಲಿ ಸಮಾನರಾಗಿ. ಒಳ್ಳೆಯದು.
ವರದಾನ:
ನಿಶ್ಚಯದ ಅಖಂಡ
ರೇಖೆಯ ಮೂಲಕ ನಂಬರ್ ಒನ್ ಭಾಗ್ಯ ಮಾಡುವಂತಹ ವಿಜಯದ ತಿಲಕಧಾರಿ ಭವ
ಯಾರು ನಿಶ್ಚಯಬುದ್ಧಿ
ಮಕ್ಕಳಿದ್ದಾರೆ ಅವರು ಎಂದೂ ಹೇಗೆ ಅಥವಾ ಹೀಗೆ ಎನ್ನುವ ವಿಸ್ತಾರದಲ್ಲಿ ಹೋಗುವುದಿಲ್ಲ. ಅವರ
ನಿಶ್ಚಯದ ಅಟೂಟ್ ರೇಖೆ ಅನ್ಯ ಆತ್ಮರಿಗೂ ಸಹ ಸ್ಪಷ್ಠವಾಗಿ ಕಂಡುಬರುತ್ತದೆ. ಅವರ ನಿಶ್ಚಯದ ರೇಖೆಯ
ಲೈನ್ ಮಧ್ಯ-ಮಧ್ಯದಲ್ಲಿ ಕಟ್ ಆಗಿರುವುದಿಲ್ಲ. ಇಂತಹ ರೇಖೆ ಉಳ್ಳವರ ಮಸ್ತಕದಲ್ಲಿ ಅರ್ಥಾತ್ ಯಲ್ಲಿ
ಸ್ಮೃತಿ ಸದಾ ವಿಜಯದ ತಿಲಕ ಕಂಡುಬರುತ್ತದೆ. ಅವರು ಜನ್ಮ ಪಡೆದೊಡನೆ ಸೇವೆಯ ಜವಾಬ್ದಾರಿಯ
ಕಿರೀಟಧಾರಿಯಾಗಿರುತ್ತಾರೆ. ಸದಾ ಜ್ಞಾನರತ್ನಗಳಿಂದ ಆಟವಾಡುವಂತಹವರಾಗಿರುತ್ತಾರೆ. ಸದಾ ನೆನಪು
ಮತ್ತು ಖುಷಿಯ ಉಯ್ಯಾಲೆಯಲ್ಲಿ ತೂಗಾಡುತ್ತಾ ಜೀವನ ನಡೆಸುವವರಾಗಿರುತ್ತಾರೆ. ಇದೇ ಆಗಿದೆ ನಂಬರ್ಒನ್
ಭಾಗ್ಯದ ರೇಖೆ.
ಸ್ಲೋಗನ್:
ಬುದ್ಧಿರೂಪಿ
ಕಂಪ್ಯೂಟರ್ನಲ್ಲಿ ಫುಲ್ಸ್ಟಾಪ್ನ ಚಿನ್ಹೆ ಬರುವುದು ಎಂದರೆ ಪ್ರಸನ್ನಚಿತ್ತರಾಗಿರುವುದು.
ಅವ್ಯಕ್ತ ಸೂಚನೆ: ಏಕಾಂತ
ಪ್ರಿಯರಾಗಿ ಏಕತೆ ಮತ್ತು ಏಕಾಗ್ರತೆಯನ್ನು ತಮ್ಮದಾಗಿಸಿಕೊಳ್ಳಿ
ಏಕಾಂತಪ್ರಿಯರು ಯಾರಾಗಲು
ಸಾಧ್ಯವೆಂದರೆ ಯಾರದ್ದು ಅನೇಕ ಕಡೆಯಿಂದ ಬುದ್ಧಿಯೋಗವು ತುಂಡಾಗಿರುತ್ತದೆ ಮತ್ತು ಒಬ್ಬರದೇ
ಪ್ರೀತಿಯಿರುತ್ತದೆ, ಒಬ್ಬರ ಪ್ರೀತಿಯಿರುವ ಕಾರಣ ಒಬ್ಬರ ನೆನಪಿನಲ್ಲಿರಲು ಸಾಧ್ಯವಾಗುತ್ತದೆ.
ಅನೇಕರ ಪ್ರೀತಿಯಿರುವ ಕಾರಣ ಒಬ್ಬರ ನೆನಪಿನಲ್ಲಿರಲು ಸಾಧ್ಯವಿಲ್ಲ, ಅನೇಕ ಕಡೆಯಿಂದ ಬುದ್ಧಿಯೋಗವು
ತುಂಡಾಗಿರಲಿ, ಒಂದು ಕಡೆ ಜೋಡಿಸಿದಾಗ ಅರ್ಥಾತ್ ಒಬ್ಬರನ್ನು ಬಿಟ್ಟರೆ ಬೇರೆಯಿಲ್ಲ- ಇದೇ
ಸ್ಥಿತಿಯುಳ್ಳವರು ಯಾರಿರುತ್ತಾರೆ ಅವರು ಏಕಾಂತ ಪ್ರಿಯರಾಗಿರಲು ಸಾಧ್ಯ.
ಸೂಚನೆ: ಇಂದು
ಅಂತರಾಷ್ಟ್ರೀಯ ಯೋಗದಿನ, ಮೂರನೇ ಭಾನುವಾರವಾಗಿದೆ. ಸಂಜೆ 6.30ರಿಂದ 7.30ರವರೆಗೆ ಎಲ್ಲಾ
ಸಹೋದರ-ಸಹೋದರಿಯರು ಸಂಘಟಿತ ರೂಪದಲ್ಲಿ ಒಂದು ಸ್ಥಾನದಲ್ಲಿ ಸೇರಿ ಯೋಗಾಭ್ಯಾಸದಲ್ಲಿ ಇದೇ
ಶುಭಸಂಕಲ್ಪ ಮಾಡಿರಿ- ನಾನಾತ್ಮನ ಮೂಲಕ ಪವಿತ್ರತೆಯ ಕಿರಣಗಳು ಹೊರಬಂದು ಇಡೀ ವಿಶ್ವವನ್ನು
ಪಾವನಗೊಳಿಸುತ್ತಿದೆ. ನಾನು ಮಾಸ್ಟರ್ ಪತಿತ-ಪಾವನಿ ಆತ್ಮನಾಗಿದ್ದೇನೆ.