16.03.25 Avyakt Bapdada
Kannada
Murli 05.03.2004 Om Shanti Madhuban
ಬಲಹೀನ ಸಂಸ್ಕಾರಗಳನ್ನು
ಸಂಸ್ಕಾರ ಮಾಡಿ ಸತ್ಯ ಹೋಲಿಯನ್ನು ಆಚರಿಸಿ ಆಗ ಸಂಸಾರ (ಪ್ರಪಂಚ) ಪರಿವರ್ತನೆಯಾಗುತ್ತದೆ
ಇಂದು ಬಾಪ್ದಾದಾರವರು
ತಮ್ಮ ನಾಲ್ಕೂ ಕಡೆಯ ರಾಜಾ ಮಕ್ಕಳನ್ನು ನೋಡುತ್ತಿದ್ದಾರೆ. ಈ ಪರಮಾತ್ಮನ ಪ್ರೀತಿ ತಾವು ಕೋಟಿಯಲ್ಲಿ
ಕೆಲವರಾದ ಶ್ರೇಷ್ಠ ಆತ್ಮಗಳಿಗೆ ಮಾತ್ರ ಪ್ರಾಪ್ತಿ ಆಗುತ್ತಿದೆ. ಪ್ರತಿಯೊಂದು ಮಗುವಿನ 3 ರಾಜ್ಯ
ಸಿಂಹಾಸನಗಳನ್ನು ನೋಡುತಿದ್ದಾರೆ. ಈ ಮೂರು ಸಿಂಹಾಸನಗಳು ಇಡೀ ಕಲ್ಪದಲ್ಲಿ ಈ ಸಂಗಮದಲ್ಲಿಯೇ ತಾವು
ಮಕ್ಕಳಿಗೆ ಪ್ರಾಪ್ತಿಯಾಗುತ್ತದೆ. ಮೂರು ಸಿಂಹಾಸನಗಳು ಕಾಣಿಸುತ್ತಿದೆಯೇ? ಒಂದು ಈ ಭೈಕುಟಿ ಎಂಬ
ಸಿಂಹಾಸನ, ಇದರಮೇಲೆ ಆತ್ಮ ಹೊಳೆಯುತ್ತಿದೆ. ಎರಡನೇ ಸಿಂಹಾಸನ ಪರಮಾತ್ಮನ ಹೃದಯಸಿಂಹಾಸನ.
ಹೃದಯಸಿಂಹಾಸನಾಧಿಕಾರಿಗಳು ಆಗಿದ್ದೀರಲ್ಲವೇ! ಹಾಗೂ ಮೂರನೆಯದು ಭವಿಷ್ಯದ ವಿಶ್ವ ಸಿಂಹಾಸನ.
ಹೃದಯಸಿಂಹಾಸನಾಧಿಕಾರಿಗಳು ಆಗಿರುವ ಕಾರಣ ಎಲ್ಲರಿಗಿಂತ ಭಾಗ್ಯವಂತರಾಗಿದ್ದೀರಿ. ಈ ಪರಮಾತ್ಮನ
ಹೃದಯಸಿಂಹಾಸನವು ತಾವು ಅದೃಷ್ಟಶಾಲಿ ಮಕ್ಕಳಿಗೆ ಮಾತ್ರ ಪ್ರಾಪ್ತಿಯಾಗುತ್ತದೆ. ಭವಿಷ್ಯ ವಿಶ್ವದ
ರಾಜ್ಯಸಿಂಹಾಸನವಂತೂ ಪ್ರಾಪ್ತಿ ಆಗಲೇಬೇಕು. ಆದರೆ. ಅಧಿಕಾರಿಗಳು ಯಾರು ಆಗುತ್ತಾರೆ? ಯಾರು ಈ
ಸಮಯದಲ್ಲಿ ಸ್ವರಾಜ್ಯಾಧಿಕಾರಿಗಳು ಆಗುತ್ತಾರೋ ಅವರು ಅಧಿಕಾರಿಗಳಾಗುತ್ತಾರೆ.
ಸ್ವರಾಜ್ಯವಿಲ್ಲವೆಂದರೆ ವಿಶ್ವದ ರಾಜ್ಯವೂ ಸಹ ಇಲ್ಲ ಏಕೆಂದರೆ ಈ ಸಮಯದ ಸ್ವರಾಜ್ಯದ ಅಧಿಕಾರದ
ಮೂಲಕವೇ ವಿಶ್ವರಾಜ್ಯವು ಪ್ರಾಪ್ತಿಯಾಗುತ್ತದೆ. ವಿಶ್ವದ ರಾಜ್ಯದ ಸರ್ವ ಸಂಸ್ಕಾರವು ಈ ಸಮಯದಲ್ಲಿಯೇ
ಆಗುತ್ತದೆ ಅಂದಮೇಲೆ ಪ್ರತಿಯೊಬ್ಬರೂ ತಮ್ಮನ್ನು ಸದಾ ಸ್ವರಾಜ್ಯಾಧಿಕಾರಿ ಎಂಬ ಅನುಭವ ಮಾಡುತ್ತೀರಾ?
ಭವಿಷ್ಯದ ರಾಜ್ಯದ ಗಾಯನವು ಏನಿದೆ ಎಂಬುದನ್ನು ತಿಳಿದುಕೊಂಡಿದ್ದೀರಲ್ಲವೇ! ಒಂದೇ ಧರ್ಮ, ಒಂದೇ
ರಾಜ್ಯ, ಕಾನೂನು (ಲಾ .ಅಂಡ್ ಆರ್ಡರ್), ಸುಖ-ಶಾಂತಿ, ಸಂಪತ್ತಿನಿಂದ ತುಂಬಿದ ರಾಜ್ಯ, ನೆನಪು
ಬರುತ್ತದೆಯೇ-ಎಷ್ಟು ಬಾರಿ ಈ ಸ್ವರಾಜ್ಯ ಹಾಗೂ ವಿಶ್ವರಾಜ್ಯವನ್ನು ಮಾಡಿದ್ದೀರಿ? ನೆನಪಿದೆಯೇ ಎಷ್ಟು
ಬಾರಿ ಮಾಡಿದ್ದೀರಿ? ಸ್ಪಷ್ಟವಾಗಿ ನೆನಪು ಬರುತ್ತದೆಯೇ? ಅಥವಾ ನೆನಪು ಮಾಡಿಕೊಳ್ಳುವುದರಿಂದ ನೆನಪು
ಬರುತ್ತಿದೆಯೆ? ನೆನ್ನೆ ರಾಜ್ಯ ಮಾಡಿದ್ದೀರಿ ಹಾಗೂ ನಾಳೆ ರಾಜ್ಯ ಮಾಡಬೇಕು. ಆ ರೀತಿ ಸ್ಪಷ್ಟ
ಸ್ಮೃತಿ ಇದೆಯೇ? ಈ ಸ್ಪಷ್ಟ ಸ್ಮೃತಿಯು ಯಾರು ಈಗ ಸದಾ ಸ್ವರಾಜ್ಯಾಧಿಕಾರಿಗಳು ಆಗಿರುತ್ತಾರೆಯೋ ಆ
ಆತ್ಮಗಳಿಗೆ ಮಾತ್ರ ಇರುತ್ತದೆ. ಅಂದಮೇಲೆ ಸ್ವರಾಜ್ಯಾಧಿಕಾರಿಗಳು ಆಗಿದ್ದೀರಾ? ಸದಾ ಆಗಿದ್ದೀರಾ
ಅಥವಾ ಕೆಲವೊಮ್ಮೆಯೋ? ಏನು ಹೇಳುತ್ತೀರಿ? ಸದಾ ಸ್ವರಾಜ್ಯಾಧಿಕಾರಿಗಳಾಗಿದ್ದೀರಾ? ಡಬಲ್ ವಿದೇಶಿಗಳ
ಸರದಿ ಅಲ್ಲವೇ. ಅಂದ ಮೇಲೆ ಸ್ವರಾಜ್ಯಾಧಿಕಾರಿಗಳು ಸದಾ ಆಗಿದ್ದೀರಾ? ಪಾಂಡವರು ಸದಾ ಆಗಿದ್ದೀರಾ?
ಸದಾ ಎಂಬ ಶಬ್ಧವನ್ನು ಕೇಳುತ್ತಿದ್ದೇವೆ ಏಕೆ? ಯಾವಾಗ ಈ ಒಂದು ಜನ್ಮದಲ್ಲಿ, ಚಿಕ್ಕದಾದ ಜನ್ಮವಾಗಿದೆ,
ಈ ಚಿಕ್ಕ ಜನ್ಮದಲ್ಲಿ ಒಂದುವೇಳೆ ಸದಾ ಸ್ವರಾಜ್ಯಾಧಿಕಾರಿಗಳು ಆಗಲಿಲ್ಲವೆಂದರೆ 21 ಜನ್ಮದ
ಸ್ವರಾಜ್ಯವು ಹೇಗೆ ಪ್ರಾಪ್ತಿಯಾಗುತ್ತದೆ? 21 ಜನ್ಮಗಳ ರಾಜ್ಯಾಧಿಕಾರಿಗಳು ಆಗಬೇಕೋ ಅಥವಾ ಸ್ವಲ್ಪ
ಸಮಯಕ್ಕೆ ಆಗಬೇಕೇ? ಒಪ್ಪಿಗೆ ಯಾವುದು? ಸದಾ ಆಗಬೇಕೇ? ಸದಾ? ತಲೆಯಾದರೂ ಅಲ್ಲಾಡಿಸಿ. ಒಳ್ಳೆಯದು.
21 ಜನ್ಮಗಳೇ ರಾಜ್ಯಾಧಿಕಾರಿಗಳಾಗಬೇಕು. ರಾಜ್ಯಾಧಿಕಾರಿ ಅರ್ಥಾತ್ ರಾಯಲ್ ಪರಿವಾರದಲ್ಲಿಯೂ ಸಹ
ರಾಜ್ಯಾಧಿಕಾರಿಗಳು. ಸಿಂಹಾಸನದ ಮೇಲೆ ಕೆಲವರು ಕುಳಿತುಕೊಳ್ಳುತ್ತಾರೆ ಆದರೆ ಅಲ್ಲಿ
ಸಿಂಹಾಸನಾಧಿಕಾರಿಗಳಿಗೆ ಎಷ್ಟು ಸ್ವಮಾನವಿದೆಯೋ ಅಷ್ಟೇ ರಾಯಲ್ ಪರಿವಾರದವರಿಗೂ ಇರುತ್ತದೆ. ಅವರಿಗೂ
ಸಹ ರಾಜ್ಯಾಧಿಕಾರಿ ಎಂದೇ ಹೇಳಲಾಗುತ್ತದೆ. ಆದರೆ ಲೆಕ್ಕವೂ ಈ ಸಮಯಕ್ಕೆ ಸಂಬಂಧಪಟ್ಟಿದೆ. ಈಗ
ಕೆಲವೊಮ್ಮೆ ಆದರೆ ಅಲ್ಲಿಯೂ ಸಹ ಕೆಲವೊಮ್ಮೆ ಆಗಿಬಿಡುತ್ತದೆ. ಈಗ ಸದಾ ಅಂದರೆ ಅಲ್ಲಿಯೂ ಸಹ ಸದಾ
ಅಂದಮೇಲೆ ಬಾಪ್ ದಾದಾರವರಿಂದ ಸಂಪೂರ್ಣ ಅಧಿಕಾರವನ್ನು ಪಡೆಯಬೇಕು ಅರ್ಥಾತ್ ವರ್ತಮಾನ ಹಾಗೂ
ಭವಿಷ್ಯದ ಸಂಪೂರ್ಣ 21 ಜನ್ಮಗಳ ರಾಜ್ಯಾಧಿಕಾರಿ ಆಗಬೇಕು. ಡಬಲ್ ವಿದೇಶಿಗಳು ಪೂರ್ಣ ಅಧಿಕಾರವನ್ನು
ಪಡೆಯುವಂತಹವರೋ ಅಥವಾ ಅರ್ಧ ಅಥವಾ ಸ್ವಲ್ಪವೋ? ಏನು? ಪೂರ್ಣ ಅಧಿಕಾರವನ್ನು ಪಡೆಯಬೇಕೇನು? ಸಂಪೂರ್ಣ.
ಒಂದು ಜನ್ಮವೂ ಸಹ ಕಡಿಮೆ ಅಲ್ಲ ಅಂದಮೇಲೆ ಏನು ಮಾಡಬೇಕಾಗುತ್ತದೆ? ಏನು ಮಾಡಬೇಕಾಗುತ್ತದೆ?
ಬಾಪ್ದಾದಾರವರು
ಪ್ರತಿಯೊಂದು ಮಗುವನ್ನು ಸಂಪೂರ್ಣ ಅಧಿಕಾರಿಯನ್ನಾಗಿ ಮಾಡುತ್ತಾರೆ. ಆಗಿದ್ದೀರಲ್ಲವೇ? ಪಕ್ಕಾ?
ಆಗುತ್ತೇವೆಯೋ ಅಥವಾ ಇಲ್ಲವೋ ಎಂಬ ಪ್ರಶ್ನೆ ಇದೆಯೇ? ಇದೆಯೇ? ಆಗುತ್ತೇನೆಯೋ ಇಲ್ಲವೋ ಎಂಬ
ಪ್ರಶ್ನೆಯೂ ಕೆಲವೊಮ್ಮೆ ಬರುತ್ತದೆಯೇ? ಆಗಲೇಬೇಕು. ಪಕ್ಕಾ? ಆಗಲೇಬೇಕು ಎನ್ನುವವರು ಕೈ ಎತ್ತಿ.
ಆಗಲೇಬೇಕೇನು? ಒಳ್ಳೆಯದು, ಇವರೆಲ್ಲರೂ ಯಾವ ಮಾಲೆಯ ಮಣಿಗಳು ಆಗುತ್ತಾರೆ? 108ರ ಮಾಲೆಯಾ? ಇಲ್ಲಿ
ಎಷ್ಟು ಆತ್ಮಗಳು ಬಂದಿದ್ದಾರೆ? ಎಲ್ಲರೂ 108ರಲ್ಲಿ ಬರಬೇಕೇ? ಅಂದಮೇಲೆ ಇಲ್ಲಿ 1800 ಇದ್ದಾರೆ
ಅಂದಮೇಲೆ 108ರ ಮಾಲೆಯನ್ನು ಹೆಚ್ಚಿಸೋಣವೇ? ಒಳ್ಳೆಯದು. 16000ದ ಮಾಲೆಯಂತೂ ಇಷ್ಟವಾಗುವುದಿಲ್ಲ.
16000ದ ಮಾಲೆಯಲ್ಲಿ ಹೋಗುತ್ತೀರೇನು? ಹೋಗುವುದಿಲ್ಲ ತಾನೇ? ಇದು ನಿಶ್ಚಯ ಹಾಗೂ ನಿಶ್ಚಿತವಾಗಿದೆ,
ಆ ರೀತಿ ಅನುಭವ ಇರಬೇಕು. ನಾವು ಆಗದಿದ್ದರೆ ಇನ್ನಾರು ಆಗುತ್ತಾರೆ! ನಶೆಯಿದೆಯೇ? ತಾವಾಗದಿದ್ದರೆ
ಬೇರೆ ಯಾರೂ ಆಗುವುದಿಲ್ಲ ತಾನೇ? ತಾವೇ ಆಗುವಂತಹವರಲ್ಲವೇನು! ಹೇಳಿ, ತಾವೇ ಅಲ್ಲವೇ! ಪಾಂಡವರು ತಾವೇ
ಆಗುವಂತಹವರಲ್ಲವೇ? ಒಳ್ಳೆಯದು. ಹಿಂದೆ ಕುಳಿತಿರುವವರು, ತಾವು ಆಗುವಂತಹವರು. ತಮ್ಮ ದರ್ಪಣದಲ್ಲಿ
ಸಾಕ್ಷಾತ್ಕಾರ ಮಾಡಿಕೊಂಡಿದ್ದೀರಾ? ಬಾಪ್ದಾದಾರವರು ಪ್ರತಿಯೊಂದು ಮಗುವಿನ ನಿಶ್ಚಯವನ್ನು ನೋಡಿ
ಬಲಿಹಾರಿಯಾಗುತ್ತಾರೆ. ವಾಹ್! ವಾಹ್! ಪ್ರತಿಯೊಂದು ಮಗು ವಾಹ್! ವಾಹ್! ವಾಹ್! ಎನ್ನುವವರು ತಾನೇ.
ವಾಹ್! ವಾಹ್! ಅಥವಾ ವೈ (ಏಕೆ). ವೈ ಎನ್ನುವುದಿಲ್ಲ ತಾನೇ? ಕೆಲವೊಮ್ಮೆ ವೈ ಆಗಿಬಿಡುತ್ತದೆಯೇ?
ಇಲ್ಲವೇ? ಅಥವಾ ವೈ ಹಾಗೂ ಹಾಯ್ (ಅಯ್ಯೋ) ಮತ್ತೆ ಮೂರನೆಯದು ಕ್ರೈ (ಅಳುವುದು), ತಾವಂತೂ ವಾಹ್!
ವಾಹ್! ಎನ್ನುವವರಲ್ಲವೇ!
ಬಾಪ್ದಾದಾರವರಿಗೆ ಡಬಲ್
ವಿದೇಶಿಗಳ ಮೇಲೆ ವಿಶೇಷ ನಶೆಯಿದೆ. ಏಕೆ? ಭಾರತವಾಸಿಗಳು ತಂದೆಯನ್ನು ಭಾರತದಲ್ಲಿ ಕರೆದರು. ಆದರೆ
ಡಬಲ್ ವಿದೇಶಿಗಳ ಮೇಲೆ ನಶೆಯು ಆ ಕಾರಣದಿಂದ ಇದೆ ಡಬಲ್ ವಿದೇಶಿಗಳು ಬಾಪ್ ದಾದಾರವರನ್ನು ತಮ್ಮ
ಸತ್ಯತೆಯ ಪ್ರೀತಿಯ ಬಂಧನದಲ್ಲಿ ಬಂಧಿಸಿದ್ದಾರೆ. ಮೆಜಾರಿಟಿ ಸತ್ಯತೆಯುಳ್ಳವರು ಆಗಿದ್ದಾರೆ. ಕೆಲವರು
ಮುಚ್ಚಿಡುತ್ತಾರೆ ಆದರೆ ಮೆಜಾರಿಟಿ ತಮ್ಮ ಬಲಹೀನತೆಯನ್ನು ಸತ್ಯತೆಯಿಂದ ತಂದೆಯ ಮುಂದಿಡುತ್ತಾರೆ
ಅಂದಮೇಲೆ ತಂದೆಗೆ ಎಲ್ಲದಕ್ಕಿಂತ ಸತ್ಯತೆಯೇ ಇಷ್ಟವಾಗುತ್ತದೆ. ಆದ್ದರಿಂದ ಭಕ್ತಿಯಲ್ಲಿಯೂ ಸಹ
ಪರಮಾತ್ಮ ಸತ್ಯ ಎಂದು ಹೇಳುತ್ತಾರೆ. ಎಲ್ಲದಕ್ಕಿಂತ ಪ್ರಿಯವಾದ ವಸ್ತು ಸತ್ಯತೆಯಾಗಿದೆ ಏಕೆಂದರೆ
ಯಾರಲ್ಲಿ ಸತ್ಯತೆ ಇರುತ್ತದೋ ಅವರಲ್ಲಿ ಸ್ವಚ್ಛತೆಯಿರುತ್ತದೆ. ಸ್ವಚ್ಛ ಹಾಗೂ ಸ್ಪಷ್ಟವಾಗಿರುತ್ತಾರೆ
ಆದ್ದರಿಂದ ಬಾಪ್ದಾದಾರವರನ್ನು ಡಬಲ್ ವಿದೇಶಿಗಳ ಸತ್ಯತೆಯ ಪ್ರೀತಿಯ ಹಗ್ಗವೂ ಸೆಳೆಯುತ್ತದೆ.
ಸ್ವಲ್ಪ ಮಿಶ್ರಣವಾಗುತ್ತದೆ, ಕೆಲವು. ಆದರೆ ಡಬಲ್ ವಿದೇಶಿಗಳು ಈ ಸತ್ಯತೆಯ ವಿಶೇಷತೆಯನ್ನು ಎಂದೂ
ಸಹ ಬಿಡುವುದಿಲ್ಲ. ಸತ್ಯತೆಯ ಶಕ್ತಿ ಒಂದು ಲಿಫ್ಟ್ ನ ಕೆಲಸವನ್ನು ಮಾಡುತ್ತದೆ. ಎಲ್ಲರಿಗೂ
ಸತ್ಯತೆಯು ಇಷ್ಟವಾಗುತ್ತದೆಯಲ್ಲವೇ! ಪಾಂಡವರು ಇಷ್ಟವಾಗುತ್ತದೆಯೇ? ಆ ರೀತಿ ನೋಡಿದರೆ ಮಧುಬನದವರಿಗೂ
ಸಹ ಇಷ್ಟವಾಗುತ್ತದೆ. ಮಧುಬನದ ಎಲ್ಲಾ ಕಡೆಯವರೂ ಸಹ ಕೈ ಎತ್ತಿ. ದಾದಿಯವರು ಭುಜಗಳು ಇದ್ದಾರೆ ಎಂದು
ಹೇಳುತ್ತಾರಲ್ಲವೇ, ಅಂದಮೇಲೆ ಮಧುಬನ, ಶಾಂತಿವನದವರೆಲ್ಲರೂ ಕೈ ಎತ್ತಿ. ದೊಡ್ಡದಾಗಿ ಎತ್ತಿ.
ಮಧುಬನದವರಿಗೆ ಸತ್ಯತೆ ಇಷ್ಟವಾಗುತ್ತದೆಯಲ್ಲವೇ? ಯಾರಲ್ಲಿ ಸತ್ಯತೆ ಇರುತ್ತದೆಯೋ ಅವರಿಗೆ
ತಂದೆಯನ್ನು ನೆನಪು ಮಾಡುವುದು ಬಹಳ ಸಹಜವಾಗುತ್ತದೆ. ಏಕೆ? ತಂದೆಯೂ ಸಹ ಸತ್ಯವಲ್ಲವೇ! ಅಂದಮೇಲೆ
ಸತ್ಯತಂದೆಯ ನೆನಪು ಯಾರು ಸತ್ಯವಾಗಿರುತ್ತಾರೆಯೋ ಅವರಿಗೆ ಬೇಗ ಬರುತ್ತದೆ. ಶ್ರಮ ಪಡಬೇಕಾಗಿಲ್ಲ.
ಒಂದುವೇಳೆ ಈಗಲೂ ಸಹ ನೆನಪಿನಲ್ಲಿ ಶ್ರಮವಾಗುತ್ತದೆ ಎಂದರೆ ಯಾವುದಾದರೂ ಒಂದು ಸೂಕ್ಷ್ಮ
ಸಂಕಲ್ಪದಲ್ಲಿ ಸ್ವಪ್ನದಲ್ಲಿ ಯಾವುದೋ ಸತ್ಯದ ಕೊರತೆ ಇದೆ ಎಂದು ತಿಳಿಯಿರಿ. ಎಲ್ಲಿ ಸತ್ಯತೆ ಇದೆಯೋ
ಅಲ್ಲಿ ಬಾಬಾ ಎಂದು ಸಂಕಲ್ಪ ಮಾಡಿದಿರಿ, ಪ್ರಭು ಹಾಜರ್ ಆಗುತ್ತಾರೆ. ಆದ್ದರಿಂದ ಬಾಪ್ದಾದಾರವರಿಗೆ
ಸತ್ಯತೆ ಬಹಳ ಪ್ರಿಯವಾಗಿದೆ.
ಬಾಪ್ದಾದಾರವರು ಎಲ್ಲಾ
ಮಕ್ಕಳಿಗೂ ಇದೇ ಎಚ್ಚರಿಕೆಯನ್ನು ಕೊಡುತ್ತಾರೆ - 21 ಜನ್ಮಗಳ ಪೂರ್ಣ ಆಸ್ತಿಯನ್ನು ಪಡೆಯಬೇಕೆಂದರೆ
ಈಗ ಸ್ವರಾಜ್ಯವನ್ನು ಪರಿಶೀಲನೆ ಮಾಡಿಕೊಳ್ಳಿ. ಈಗಿನ ಸ್ವರಾಜ್ಯಾಧಿಕಾರಿಗಳಾಗಬೇಕು, ಎಷ್ಟು ಹೇಗೆ
ಆಗುತ್ತಾರೆಯೋ ಅಷ್ಟೇ ಅಧಿಕಾರವು ಪ್ರಾಪ್ತಿಯಾಗುತ್ತದೆ ಅಂದಮೇಲೆ ಪರಿಶೀಲನೆ ಮಾಡಿಕೊಳ್ಳಿ - ಹೇಗೆ
ಗಾಯನವಿದೆ ಒಂದೇ ರಾಜ್ಯ, ಒಂದೇ ರಾಜ್ಯವಿರುತ್ತದೆ, ಎರಡಲ್ಲ. ಅಂದಮೇಲೆ ವರ್ತಮಾನದ ಸ್ವರಾಜ್ಯದ
ಸ್ಥಿತಿಯಲ್ಲಿ ಸದಾ ಒಂದೇ ರಾಜ್ಯವಿದೆಯೇ? ಸ್ವರಾಜ್ಯವಿದೆಯೇ ಅಥವಾ ಕೆಲವೊಮ್ಮೆ ಪರರಾಜ್ಯವೂ ಸಹ
ಆಗಿಬಿಡುತ್ತದೆ? ಒಂದುವೇಳೆ ಮಾಯಾರಾಜ್ಯ ಇದ್ದರೆ ಪರರಾಜ್ಯ ಎನ್ನಬಹುದೇ ಅಥವಾ ಸ್ವರಾಜ್ಯವೇ? ಸದಾ
ಒಂದು ರಾಜ್ಯವಿರುತ್ತದೆಯೋ, ಪರಾಧೀನರು ಆಗುವುದಿಲ್ಲವೇ? ಕೆಲವೊಮ್ಮೆ ಮಾಯೆಯ, ಕೆಲವೊಮ್ಮೆ ಸ್ವಯಂನ.
ಇದರಿಂದ ತಿಳಿದುಕೊಳ್ಳಿ - ಸಂಪೂರ್ಣ ಆಸ್ತಿ ಈಗ ಪ್ರಾಪ್ತಿಯಾಗುತ್ತಿದೆ, ಆಗಿಲ್ಲ, ಆಗುತ್ತಿದೆ.
ಪರಿಶೀಲನೆ ಮಾಡಿಕೊಳ್ಳಿ ಸದಾ ಒಂದುರಾಜ್ಯವಿದೆಯೇ? ಒಂದು ಧರ್ಮ - ಧರ್ಮ ಅಂದರೆ ಅರ್ಥ ಧಾರಣೆ.
ವಿಶೇಷ ಧಾರಣೆ ಯಾವುದು? ಪವಿತ್ರತೆಯದ್ದು. ಅಂದಮೇಲೆ ಒಂದು ಧರ್ಮ ಅರ್ಥಾತ್ ಸಂಕಲ್ಪ,
ಸ್ವಪ್ನದಲ್ಲಿಯೂ ಸಹ ಪವಿತ್ರತೆಯಿದೆಯೇ? ಸಂಕಲ್ಪದಲ್ಲಿಯೂ, ಸ್ವಪ್ನದಲ್ಲಿಯೂ ಒಂದುವೇಳೆ
ಅಪವಿತ್ರತೆಯ ನೆರಳು ಇದ್ದರೆ ಏನು ಹೇಳಬಹುದು? ಒಂದು ಧರ್ಮವೇ? ಪವಿತ್ರತೆ ಸಂಪೂರ್ಣವಾಗಿದೆಯೇ?
ಪರಿಶೀಲನೆ ಮಾಡಿಕೊಳ್ಳಿ, ಏಕೆ? ಸಮಯವು ತೀವ್ರವಾಗಿ ಹೋಗುತ್ತಿದೆ. ಸಮಯ ತೀವ್ರವಾಗಿ ಹೋಗುತ್ತಿದೆ
ಮತ್ತು ಸ್ವಯಂ ಒಂದುವೇಳೆ ನಿಧಾನವಾಗಿದ್ದರೆ ಆಗ ಸಮಯದಲ್ಲಿ ಗುರಿ ತಲುಪಲು ಸಾಧ್ಯವಾಗುವುದಿಲ್ಲ ತಾನೇ!
ಆದ್ದರಿಂದ ಪದೇ- ಪದೇ ಪರಿಶೀಲನೆ ಮಾಡಿಕೊಳ್ಳಿ. ಒಂದುರಾಜ್ಯವಿದೆಯೇ? ಒಂದುಧರ್ಮವಿದೆಯೇ? ಲಾ ಅಂಡ್
ಆರ್ಡರ್(ಕಾನೂನು) ಇದೆಯೇ? ಮಾಯೆ ತನ್ನ ಆದೇಶವನ್ನು ನಡೆಸುತ್ತದೆಯೇ? ಪರಮಾತ್ಮನ ಮಕ್ಕಳು ಶ್ರೀಮತದ
ಲಾ ಅಂಡ್ ಆರ್ಡರ್ನಂತೆ ನಡೆಯುವವರು ಮಾಯೆ ಹೇಳಿದಂತೆ ಅಲ್ಲ. ಭವಿಷ್ಯದ ಎಲ್ಲಾ ಸಂಸ್ಕಾರವು ಈಗಲೇ
ಕಾಣಿಸಲಿ ಏಕೆಂದರೆ ಸಂಸ್ಕಾರವನ್ನು ಈಗಲೇ ತುಂಬಿಕೊಳ್ಳಬೇಕು. ಅಲ್ಲಿ ತುಂಬಿಕೊಳ್ಳುವುದಲ್ಲ,
ಇಲ್ಲಿಯೇ ತುಂಬಿಕೊಳ್ಳಬೇಕು. ಸುಖವಿದೆಯೇ? ಶಾಂತಿ ಇದೆಯೇ? ಸಂಪತ್ತಿವಂತರಾಗಿದ್ದೀರಾ? ಸುಖವು ಈಗ
ಸಾಧನಗಳ ಆಧಾರದ ಮೇಲೆ ಇಲ್ಲವೇನು? ಅತೀಂದ್ರಿಯ ಸುಖವಿದೆಯೇ? ಸಾಧನಗಳು ಇಂದ್ರಿಯಗಳ ಆಧಾರವಾಗಿದೆ.
ಅತೀಂದ್ರಿಯ ಸುಖವು ಸಾಧನಗಳ ಆಧಾರದ ಮೇಲೆ ಇಲ್ಲ. ಅಖಂಡ ಶಾಂತಿ ಇದೆಯೇ? ಖಂಡನೆ ಆಗುವುದಿಲ್ಲ ತಾನೇ?
ಏಕೆಂದರೆ ಸತ್ಯಯುಗದ ರಾಜ್ಯದ ಮಹಿಮೆ ಏನು? ಅಖಂಡ ಶಾಂತಿ, ಅಟಲ ಶಾಂತಿ. ಸಂಪನ್ನತೆ ಇದೆಯೇ?
ಸಂಪತ್ತಿನಿಂದ ಏನಾಗುತ್ತದೆ? ಸಂಪನ್ನತೆ ಆಗುತ್ತದೆ. ಸರ್ವ ಸಂಪತ್ತು ಇದೆಯೇ? ಗುಣ, ಶಕ್ತಿಗಳು,
ಜ್ಞಾನ ಈ ಸಂಪತ್ತು ಇದೆಯೇ? ಅದರ ಲಕ್ಷಣವು ಏನಾಗಿರುತ್ತದೆ? ಒಂದುವೇಳೆ ನಾನು ಸಂಪತ್ತಿನಲ್ಲಿ
ಸಂಪನ್ನನಾಗಿದ್ದೇನೆ ಎಂಬುದರ ಲಕ್ಷಣವೇನು? ಸಂತುಷ್ಟತೆ. ಸರ್ವಪ್ರಾಪ್ತಿಗಳ ಆಧಾರ ಸಂತುಷ್ಟತೆ,
ಅಸಂತುಷ್ಟತೆಯು ಅಪ್ರಾಪ್ತಿಯ ಸಾಧನವಾಗಿದೆ ಅಂದಮೇಲೆ ಪರಿಶೀಲನೆ ಮಾಡಿಕೊಳ್ಳಿ - ಒಂದು ವಿಶೇಷತೆಯೂ
ಸಹ ಕಡಿಮೆ ಆಗಬಾರದು. ಇಷ್ಟು ಪರಿಶೀಲನೆ ಮಾಡಿಕೊಳ್ಳುತ್ತೀರಾ? ಮಾಡಿಕೊಳ್ಳುತ್ತೀರಾ? ಪೂರ್ಣ
ಜಗತ್ತನ್ನು ಈಗಿನ ತಮ್ಮ ಸಂಸ್ಕಾರದ ಮೂಲಕವೇ ಮಾಡುತ್ತೀರಿ. ಈಗಿನ ಸಂಸ್ಕಾರ ಭವಿಷ್ಯದ ಸಂಸಾರ (ಜಗತ್ತು)
ವಾಗುತ್ತದೆ. ಅಂದಮೇಲೆ ತಾವೆಲ್ಲರೂ ಏನು ಹೇಳುತ್ತೀರಿ? ತಾವು ಯಾರಾಗಿದ್ದೀರಿ?
ವಿಶ್ವಪರಿವರ್ತಕರಲ್ಲವೇ! ಹೌದಾ? ವಿಶ್ವಪರಿವರ್ತಕರೇ? ಅಂದಾಗ ವಿಶ್ವಪರಿವರ್ತಕರು ಮೊದಲು ಸ್ವ-
ಪರಿವರ್ತಕರಾಗಿದ್ದೀರಾ? ಈ ಎಲ್ಲಾ ಸಂಸ್ಕಾರಗಳನ್ನು ತಮ್ಮಲ್ಲಿ ಚೆಕ್ ಮಾಡಿಕೊಳ್ಳಿ. ಇದರಿಂದ
ಅರ್ಥವಾಗುತ್ತದೆ - ನಾನು 108ರ ಮಾಲೆಯಲ್ಲಿ ಇದ್ದೇನೆಯೇ ಅಥವಾ ಹಿಂದೆ-ಮುಂದೆ ಇದ್ದೇನೆಯೇ? ಈ
ಪರಿಶೀಲನೆ ಒಂದು ದರ್ಪಣವಾಗಿದೆ, ಈ ದರ್ಪಣದಲ್ಲಿ ತಮ್ಮ ವರ್ತಮಾನ ಹಾಗೂ ಭವಿಷ್ಯವನ್ನು ನೋಡಿ.
ನೋಡಿಕೊಳ್ಳಬಲ್ಲಿರಾ?
ಈಗ ಹೋಲಿ ಆಚರಿಸಲು
ಬಂದಿದ್ದೀರಲ್ಲವೇ! ಹೋಲಿ ಆಚರಿಸಲು ಬಂದಿದ್ದೀರಾ ಒಳ್ಳೆಯದು. ಹೋಲಿಯ ಅರ್ಥವನ್ನು ವರ್ಣನೆ
ಮಾಡಲಾಗಿದೆ ಯಲ್ಲವೇ! ಮಾಡಿದೆ ತಾನೇ? ಬಾಪ್ ದಾದಾರವರು ಇಂದು ವಿಶೇಷವಾಗಿ ಡಬಲ್ ವಿದೇಶದವರಿಗೆ
ಹೇಳುತ್ತಾರೆ, ಮಧುಬನದವರು ಜೊತೆಯಲ್ಲಿ ಇದ್ದಾರೆ. ಮಧುಬನದವರಿಗೂ ಸಹ ಜೊತೆಯಲ್ಲಿ ಹೇಳುತ್ತಿದ್ದಾರೆ.
ಯಾರೆಲ್ಲಾ ಬಂದಿದ್ದೀರಿ, ಬಾಂಬೆಯಿಂದ ಬಂದಿರಬಹುದು, ದೆಹಲಿಯಿಂದ ಬಂದಿರಬಹುದು ಆದರೆ ಈ ಸಮಯದಲ್ಲಿ
ಮಧುಬನ ನಿವಾಸಿಗಳು. ಡಬಲ್ ವಿದೇಶಿಗಳೂ ಸಹ ಈ ಸಮಯದಲ್ಲಿ ಎಲ್ಲಿಯವರಾಗಿದ್ದೀರಿ? ಮಧುಬನ
ನಿವಾಸಿಗಳಲ್ಲವೇ! ಮಧುಬನ ನಿವಾಸಿಗಳಾಗುವುದು ಒಳ್ಳೆಯದಲ್ಲವೇ! ಎಲ್ಲಾ ಮಕ್ಕಳಿಗೂ ಇಲ್ಲಿ
ಸಮ್ಮುಖದಲ್ಲಿ ಕುಳಿತಿರಲಿ, ತಮ್ಮ-ತಮ್ಮ ಸ್ಥಾನದಲ್ಲಿ ಕುಳಿತಿರಲಿ, ಬಾಪ್ದಾದಾ ಒಂದು
ಪರಿವರ್ತನೆಯನ್ನು ಇಷ್ಟಪಡುತ್ತಾರೆ - ಒಂದುವೇಳೆ ಧೈರ್ಯವಿದ್ದರೆ, ಬಾಪ್ದಾದಾ ಹೇಳುತ್ತಾರೆ
ಧೈರ್ಯವಿದೆಯೇ? ಧೈರ್ಯವಿದೆಯೇ? ಧೈರ್ಯವಿದೆಯೇ? ಮಾಡಬೇಕಾಗುತ್ತದೆ. ಮಾಡಬೇಕಾಗುತ್ತದೆ, ಕೈ
ಎತ್ತಿದಿರಿ ಆಗಿ ಹೋಯಿತು ಈ ರೀತಿ ಅಲ್ಲ. ಕೈ ಎತ್ತುವುದು ಬಹಳ ಒಳ್ಳೆಯದು ಆದರೆ ಮನಸ್ಸಿನ ಕೈ
ಎತ್ತಬೇಕು. ಇಂದು ಕೇವಲ ಈ ಕೈ ಎತ್ತಬೇಡಿ ಮನಸ್ಸಿನ ಕೈ ಎತ್ತಬೇಕು.
ಡಬಲ್ ವಿದೇಶಿಗಳು
ಸಮೀಪದಲ್ಲಿ ಕುಳಿತಿದ್ದೀರಲ್ಲವೇ, ಹತ್ತಿರದವರಿಗೆ ಮನಸ್ಸಿನ ಮಾತುಗಳನ್ನು ಹೇಳಲಾಗುತ್ತದೆ.
ಮೆಜಾರಿಟಿ ನೋಡಲಾಗುತ್ತದೆ, ಎಲ್ಲರಿಗೂ ಬಾಪ್ ದಾದಾರವರ ಜೊತೆ, ಸೇವೆಯ ಜೊತೆ ಬಹಳ ಪ್ರೀತಿಯಿದೆ.
ತಂದೆಯ ಪ್ರೀತಿ ಇಲ್ಲದೆ ಇರುವುದಿಲ್ಲ, ಸೇವೆ ಇಲ್ಲದೆಯೂ ಇರಲು ಸಾಧ್ಯವಿಲ್ಲ. ಎಲ್ಲರ ಈ
ಸರ್ಟಿಫಿಕೇಟ್ ಚೆನ್ನಾಗಿದೆ. ಬಾಪ್ ದಾದಾ- ಎಲ್ಲಾ ಕಡೆ ನೋಡುತ್ತೇವೆ ಆದರೆ….. ಆದರೆ ಬಂದುಬಿಟ್ಟಿತು.
ಸಾಮಾನ್ಯವಾಗಿ ಹೆಚ್ಚಾಗಿ ಈ ಶಬ್ಧ ಬರುತ್ತದೆ. ಯಾವುದಾದರೂ ಒಂದು ಅಂತಹ ಸಂಸ್ಕಾರ ಹಳೆಯದು ಇಷ್ಟ
ಇರುವುದಿಲ್ಲ ಆದರೆ ಆ ಹಳೆಯ ಸಂಸ್ಕಾರ ಇಲ್ಲಿಯತನಕವೂ ಆಕರ್ಷಣೆ ಮಾಡಿಬಿಡುತ್ತದೆ ಅಂದಮೇಲೆ
ಹೋಲಿಯನ್ನು ಆಚರಿಸಲು ಬಂದಿದ್ದೀರಿ ಅಂದಾಗ ಹೋಲಿಯ ಅರ್ಥವಾಗಿದೆ - ಕಳೆದದ್ದು ಕಳೆದುಹೋಯಿತು.
ಆಗಿಹೋಯಿತು. ಯಾವುದಾದರೂ, ಸ್ವಲ್ಪವಾದರೂ ಯಾವುದೇ ಸಂಸ್ಕಾರ 5% ಇದ್ದರೂ, 10% ಇದ್ದರೂ, 50%
ಇದ್ದರೂ, ಎÉ್ಟೀ ಇರಲಿ, ಕಡಿಮೆ ಪಕ್ಷ 5% ಇದ್ದರೂ ಸಹ ಅದನ್ನು ಇಂದು ಸಂಸ್ಕಾರದ ಹೋಲಿಯಲ್ಲಿ ಸುಟ್ಟು
ಹಾಕಿ. ಈ ಸಂಸ್ಕಾರ ನನಗೆ ಮಧ್ಯೆ-ಮಧ್ಯೆ ತೊಂದರೆ ಕೊಡುತ್ತದೆ ಎಂದು ಯಾವ ಸಂಸ್ಕಾರವನ್ನು
ತಿಳಿದುಕೊಂಡಿದ್ದೀರೋ, ಪ್ರತಿಯೊಬ್ಬರಿಗೂ ಅರ್ಥವಾಗುತ್ತದೆಯಲ್ಲವೇ? ಹೋಲಿ ಅಂದರೆ ಒಂದು ಸುಡುವುದು
ಇನ್ನೊಂದು ಬಣ್ಣ ಹಾಕುವುದು. ಎರಡು ಪ್ರಕಾರದ ಹೋಲಿ ಇರುತ್ತದೆ ಮತ್ತು ಹೋಲಿಯ ಅರ್ಥವೇ ಆಗಿದೆ
ಕಳೆದದ್ದು ಕಳೆದು ಹೋಯಿತು ಅಂದಮೇಲೆ ಬಾಪ್ದಾದಾ ಬಯಸುತ್ತಾರೆ - ಇಂದು ಯಾವುದೆಲ್ಲಾ ಅಂತಹ ಯಾವ
ಸಂಸ್ಕಾರ ಉಳಿದುಕೊಂಡಿದೆ, ಯಾವ ಕಾರಣದಿಂದ ಜಗತ್ತು ಪರಿವರ್ತನೆ ಆಗುತ್ತಿಲ್ಲ, ಇಂದು ಆ ಬಲಹೀನ
ಸಂಸ್ಕಾರವನ್ನು ಸುಡುವುದೆಂದರೆ ಅರ್ಥ ಸಂಸ್ಕಾರ ಮಾಡುವುದು. ಸುಡುವುದಕ್ಕೂ ಸಹ ಸಂಸ್ಕಾರ ಎಂದು
ಹೇಳುತ್ತಾರಲ್ಲವೇ. ಯಾವಾಗ ಮನುಷ್ಯರು ಸಾಯುತ್ತಾರೆ ಆಗ ಸಂಸ್ಕಾರ ಎಂದು ಹೇಳುತ್ತಾರೆ ಅರ್ಥಾತ್
ಸಮಾಪ್ತಿ ಮಾಡುವುದು – ಸದಾ ಕಾಲಕ್ಕಾಗಿ. ಅಂದಮೇಲೆ ಇಂದು ಸಂಸ್ಕಾರದ ಸಂಸ್ಕಾರ
ಮಾಡಿಕೊಳ್ಳಲಾಗುತ್ತದೆಯೇ? ಮಾಡಿಕೊಳ್ಳಬಲ್ಲಿರಾ? ತಾವು ಹೇಳುವಿರಿ- ನಾವಂತೂ ಈ ಸಂಸ್ಕಾರ ಬರಲಿ ಎಂದು
ಇಚ್ಛಿಸುವುದಿಲ್ಲ ಆದರೆ ಬಂದುಬಿಡುತ್ತದೆ ಏನು ಮಾಡುವುದು? ಆ ರೀತಿ ಯೋಚಿಸುತ್ತೀರಾ? ಒಳ್ಳೆಯದು.
ತಪ್ಪಾಗಿ ಬಂದುಬಿಡುತ್ತದೆ. ಒಂದುವೇಳೆ ಯಾರಿಗಾದರೂ ಕೊಟ್ಟ ವಸ್ತುವನ್ನು, ಅಪ್ಪಿ-ತಪ್ಪಿ ತಮ್ಮ ಬಳಿ
ಬಂದರೆ ಏನು ಮಾಡುತ್ತೀರಿ? ಜೋಪಾನವಾಗಿ ಬೀರುವಿನಲ್ಲಿ ಇಡುತ್ತೀರಾ, ಇಡುತ್ತೀರಾ? ಒಂದುವೇಳೆ ಬಂದರೂ
ಸಹ ಹೃದಯದಲ್ಲಿ ಇಟ್ಟುಕೊಳ್ಳಬೇಡಿ ಏಕೆಂದರೆ ಹೃದಯದಲ್ಲಿ ತಂದೆ ಕುಳಿತಿದ್ದಾರಲ್ಲವೇ! ಅಂದಮೇಲೆ
ತಂದೆಯ ಜೊತೆ ಆ ಸಂಸ್ಕಾರವನ್ನೂ ಸಹ ಇಟ್ಟರೆ ಚೆನ್ನಾಗಿರುತ್ತದೆಯೇ, ಇಲ್ಲ ತಾನೇ. ಆದ್ದರಿಂದ
ಒಂದುವೇಳೆ ಅಪ್ಪಿ- ತಪ್ಪಿ ಬಂದುಬಿಟ್ಟರೆ ಅಂತರಾಳದಿಂದ ಹೇಳಬೇಕು ಬಾಬಾ-ಬಾಬಾ-ಬಾಬಾ ಸಾಕು. ಸಮಾಪ್ತಿ.
ಬಿಂದು ಆಗಿಬಿಡುತ್ತದೆ. ಬಾಬಾ ಏನಾಗಿದ್ದಾರೆ? ಬಿಂದು ಅಂದಮೇಲೆ ಬಿಂದು ಆಗಿಬಿಡುತ್ತದೆ. ಹೃದಯದಿಂದ
ಹೇಳಿದರೆ ಮಾತ್ರ. ಬಾಕಿ ಹಾಗೆಯೇ ಸುಮ್ಮನೆ ನೆನಪು ಮಾಡಿದರೆ, ಬಾಬಾ ತೆಗೆದುಕೊಳ್ಳಿ-ತೆಗೆದುಕೊಳ್ಳಿ
ಎಂದು ಹೇಳುತ್ತಾರೆ, ತಮ್ಮ ಬಳಿಯೇ ಇಟ್ಟುಕೊಂಡು ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ಹೇಗೆ
ತೆಗೆದುಕೊಳ್ಳುತ್ತಾರೆ? ತಮ್ಮ ವಸ್ತುವನ್ನು ಹೇಗೆ ತೆಗೆದುಕೊಳ್ಳುತ್ತಾರೆ? ಮೊದಲು ತಾವು ನನ್ನ
ವಸ್ತುವಲ್ಲ ಎಂದು ತಿಳಿದುಕೊಳ್ಳಿ ಆಗ ತೆಗೆದುಕೊಳ್ಳುತ್ತಾರೆ. ಬೇರೆಯವರ ವಸ್ತುವನ್ನು
ತೆಗೆದುಕೊಳ್ಳುತ್ತಾರೇನು? ಅಂದಮೇಲೆ ಏನು ಮಾಡುತ್ತೀರಿ? ಹೋಲಿ ಆಚರಿಸುತ್ತೀರಾ? ಆಚರಿಸುತ್ತೀರಾ?
ಆಗಿ ಹೋಯಿತು, ಕಳೆದುಹೋಯಿತು. ಒಳ್ಳೆಯದು, ಧೃಢ ಸಂಕಲ್ಪ ಮಾಡುತ್ತಿದ್ದೇವೆ ಎಂದು ಯಾರು
ತಿಳಿದುಕೊಂಡಿದ್ದೀರಿ, ತಾವು ಪದೇ-ಪದೇ ತೆಗೆದು ಹಾಕಿದರೆ ಹೊರಟು ಹೋಗುತ್ತದೆ. ಒಳಗಡೆ
ಇಟ್ಟುಕೊಳ್ಳಬೇಡಿ, ಏನು ಮಾಡಲಿ, ಹೇಗೆ ಮಾಡಲಿ, ಹೋಗುವುದೇ ಇಲ್ಲ, ಈ ರೀತಿ ಅಲ್ಲ. ತೆಗೆಯಲೇಬೇಕು.
ಧೃಡಸಂಕಲ್ಪ ಮಾಡುತ್ತೀರಾ? ಯಾರು ಮಾಡುತ್ತೀರಿ ಅವರು ಈಗ ಕೈ ಎತ್ತಿ. ಮನಸ್ಸಿನಿಂದ ಎತ್ತಬೇಕು.
ಹೊರಗಿನಿಂದ ಎತ್ತಬಾರದು. ಮನಸ್ಸಿನಿಂದ. (ಕೆಲವರು ಎತ್ತುತ್ತಿಲ್ಲ) ಇವರು ಕೈ ಎತ್ತುತ್ತಿಲ್ಲ. (ಎಲ್ಲರೂ
ಎತ್ತಿದರು) ಬಹಳ ಒಳ್ಳೆಯದು. ಶುಭಾಶಯಗಳು. ಏನೆಂದರೆ ಒಂದುಕಡೆ ಅಡ್ವಾನ್ಸ್ ಪಾರ್ಟಿಯು ಬಾಪ್
ದಾದಾರವರಿಗೆ ಪದೇ-ಪದೇ ಹೇಳುತಿದ್ದಾರೆ - ಇನ್ನೂ ಎಲ್ಲಿಯವರೆಗೆ, ಎಲ್ಲಿಯವರೆಗೆ, ಎಲ್ಲಿಯವರೆಗೆ?
ಎರಡನೆಯದಾಗಿ ಪ್ರಕೃತಿಯೂ ಸಹ ತಂದೆಗೆ ಈಗ ಪರಿವರ್ತನೆ ಮಾಡಿ ಎಂದು ಅರ್ಜಿ ಹಾಕುತ್ತಿದೆ.
ಬ್ರಹ್ಮಾತಂದೆಯೂ ಸಹ ಯಾವಾಗ ಪರಮಧಾಮದ ದ್ವಾರವನ್ನು ತೆರೆಯುತ್ತೀರಿ? ಎಂದು ಕೇಳುತ್ತಾರೆ ಏಕೆಂದರೆ
ಜೊತೆಯಲ್ಲಿಯೇ ಹೋಗಬೇಕಲ್ಲವೆ. ಇಲ್ಲಿಯೇ ಉಳಿದುಕೊಳ್ಳಬಾರದು ಜೊತೆಯಲ್ಲಿಯೇ ಹೋಗಬೇಕಲ್ಲವೆ!
ಜೊತೆಯಲ್ಲಿ ಬಾಗಿಲನ್ನು ತೆರೆಯುತ್ತೀರಾ! ಭಲೆ ಬೀಗವನ್ನು ಬ್ರಹ್ಮಾತಂದೆಯೇ ತೆರೆಯುವರು ಆದರೆ
ಜೊತೆಯಲ್ಲಂತೂ ಇರುವಿರಲ್ಲವೆ! ಅಂದಮೇಲೆ ಈಗ ಈ ಪರಿವರ್ತನೆ ಮಾಡಿಕೊಳ್ಳಿ -ಸಾಕು ಎಂಬುದನ್ನು
ತರಲೇಬಾರದು. ಅದು ನನ್ನ ವಸ್ತುವೇ ಅಲ್ಲ. ಬೇರೆಯವನಾದ ರಾವಣನ ವಸ್ತುವನ್ನೇಕೆ ಇಟ್ಟುಕೊಂಡಿದ್ದೀರಿ!
ಇನ್ನೊಬ್ಬರ ವಸ್ತುವನ್ನು ಇಟ್ಟುಕೊಳ್ಳುತ್ತಾರೆಯೇ? ಅಂದಮೇಲೆ ಇದು ಯಾರದು? ರಾವಣನದಾಗಿದೆಯಲ್ಲವೆ!
ರಾವಣನ ವಸ್ತುವನ್ನು ತಾವೇಕೆ ಇಟ್ಟುಕೊಂಡಿದ್ದೀರಿ? ಇಟ್ಟುಕೊಳ್ಳಬಹುದೆ? ಇಟ್ಟುಕೊಳ್ಳಬಾರದಲ್ಲವೆ,
ಪಕ್ಕಾ ಇದೆಯೆ? ಪಕ್ಕಾ? ಒಳ್ಳೆಯದು. ಅಂದಾಗ ಬಣ್ಣದ ಹೋಲಿಯನ್ನು ಭಲೆ ಆಚರಿಸಿ ಆದರೆ ಮೊದಲು ಈ
ಹೋಲಿಯನ್ನು ಆಚರಿಸಿ. ತಾವು ನೋಡುತ್ತೀರಿ, ತಮ್ಮ ಗಾಯನವಾಗಿದೆ ದಯಾಹೃದಯಿ. ಆಗಿದ್ದೀರಾ? ತಾವು
ದಯಾಹೃದಯಿ ದೇವಿಯರು ಮತ್ತು ದೇವತೆಗಳಲ್ಲವೆ! ಆಗಿದ್ದೀರಾ? ಅಂದಮೇಲೆ ದಯೆಬರುತ್ತಿಲ್ಲವೆ? ತಮ್ಮ
ಸಹೋದರ-ಸಹೋದರಿಯರು ಇಷ್ಟು ದುಃಖಿಯಾಗಿದ್ದಾರೆ, ಅವರ ದುಃಖವನ್ನು ನೋಡಿ ದಯೆಬರುವುದಿಲ್ಲವೆ?
ಬರುತ್ತದಯೆ ದಯೆ? ಅಂದಾಗ ಸಂಸ್ಕಾರವನ್ನು ಪರಿವರ್ತಿಸಿಕೊಳ್ಳಿ ಆಗ ಸಂಸಾರವೂ ಪರಿವರ್ತನೆಯಾಗುವುದು.
ಎಲ್ಲಿಯವರೆಗೆ ಸಂಸ್ಕಾರವು ಬದಲಾಗುವುದಿಲ್ಲವೋ ಅಲ್ಲಿಯವರೆಗೆ ಸಂಸಾರವು ಬದಲಾಗುವುದಿಲ್ಲ ಅಂದಮೇಲೆ
ಏನು ಮಾಡುತ್ತೀರಿ?
ಇಂದು ಖುಷಿಯ
ಸಮಾಚಾರವನ್ನು ಕೇಳಿದೆವು - ಎಲ್ಲರೂ ದೃಷ್ಟಿಯನ್ನು ತೆಗೆದುಕೊಳ್ಳಬೇಕು. ಬಹಳ ಒಳ್ಳೆಯ ಮಾತು. ಬಾಪ್
ದಾದಾರವರಂತೂ ಮಕ್ಕಳ ಆಜ್ಞಾಕಾರಿಯಾಗಿದ್ದಾರೆ ಆದರೆ..... ಆದರೆ ಶಬ್ಧವನ್ನು ಕೇಳಿ ನಗುತ್ತಿದ್ದಾರೆ.
ಭಲೆ ನಕ್ಕುಬಿಡಿ. ಹೇಳುತ್ತಾರೆ - ದೃಷ್ಟಿಯಿಂದ ಸೃಷ್ಟಿಯು ಬದಲಾಗುತ್ತದೆ. ಅಂದಾಗ ಇಂದಿನ
ದೃಷ್ಟಿಯಿಂದ ಸೃಷ್ಟಿಯನ್ನು ಪರಿವರ್ತನೆ ಮಾಡಲೇಬೇಕಾಗಿದೆ. ಬಾಪ್ದಾದಾ ನೋಡುತ್ತಿದ್ದಾರೆ -
ಸಂಪನ್ನತೆ ಮತ್ತು ಯಾವುದೆಲ್ಲಾ ಪ್ರಾಪ್ತಿಯಾಗಿದೆಯೋ ಅದರ ಬಹಳ ಸಮಯದ ಅಭ್ಯಾಸವು ಬೇಕು. ಸಮಯದಲ್ಲಿ
ಆಗಿಬಿಡುತ್ತದೆಯೆಂದಲ್ಲ, ಬಹಳ ಸಮಯದ ರಾಜ್ಯಭಾಗ್ಯವನ್ನು ಪಡೆಯಬೇಕೆಂದರೆ ಸಂಪನ್ನತೆಯೂ ಸಹ ಬಹಳ
ಸಮಯದಿಂದ ಬೇಕು ಅಂದಾಗ ಸರಿಯೆ? ಡಬಲ್ ವಿದೇಶಿಯರು ಖುಷಿಯಲ್ಲಿದ್ದೀರಾ? ಒಳ್ಳೆಯದು.
ನಾಲ್ಕಾರೂ ಕಡೆಯ ಸರ್ವ
ಮೂರು ಸಿಂಹಾಸನಾಧಿಕಾರಿ ವಿಶೇಷ ಆತ್ಮಗಳಿಗೆ, ಸದಾ ಸ್ವರಾಜ್ಯ ಅಧಿಕಾರಿ ವಿಶೇಷ ಆತ್ಮಗಳಿಗೆ, ಸದಾ
ದಯಾಹೃದಯಿಯಾಗಿ ಆತ್ಮಗಳಿಗೆ ಸುಖ-ಶಾಂತಿಯ ಅಂಚಲಿ(ಹನಿ)ಯನ್ನು ನೀಡುವಂತಹ ಮಹಾನ್ ಆತ್ಮಗಳಿಗೆ, ಸದಾ
ಧೃಡತೆ ಮತ್ತು ಸಫಲತೆಯ ಅನುಭವ ಮಾಡುವಂತಹ ತಂದೆಯ ಸಮಾನ ಆತ್ಮಗಳಿಗೆ ಬಾಪ್ದಾದಾರವರ ನೆನಪು, ಪ್ರೀತಿ
ಹಾಗೂ ನಮಸ್ತೆ.
ವರದಾನ:
ಸಂಕಲ್ಪ ಮತ್ತು
ಮಾತಿನ ವಿಸ್ತಾರವನ್ನು ಸಾರದಲ್ಲಿ ತರುವಂತಹ ಅಂತರ್ಮುಖಿ ಭವ
ವ್ಯರ್ಥ ಸಂಕಲ್ಪಗಳ
ವಿಸ್ತಾರವನ್ನು ಮುದುರಿಟ್ಟು ಸಾರರೂಪದಲ್ಲಿ ಸ್ಥಿತರಾಗುವುದು ಹಾಗೂ ಬಾಯಿಂದ ವ್ಯರ್ಥಮಾತನ್ನು
ಮುದುರಿಟ್ಟು ಸಮರ್ಥ ಅರ್ಥಾತ್ ಸಾರ ರೂಪದಲ್ಲಿ ತರುವುದು - ಇದೇ ಅಂತರ್ಮುಖತೆ ಆಗಿದೆ. ಈ ರೀತಿ
ಅಂತರ್ಮುಖಿ ಮಕ್ಕಳೇ ಸೈಲೆನ್ಸ್ ನ ಶಕ್ತಿಯ ಮುಖಾಂತರ ಅಲೆದಾಡುತ್ತಿರುವ ಆತ್ಮಗಳಿಗೆ ಸರಿಯಾದ ಗುರಿ
ತೋರಿಸಲು ಸಾಧ್ಯ. ಈ ಸೈಲೆನ್ಸ್ ನ ಶಕ್ತಿ ಅನೇಕ ಆತ್ಮೀಯ ಬಣ್ಣಗಳನ್ನು ತೋರಿಸುತ್ತದೆ. ಸೈಲೆನ್ಸ್ ನ
ಶಕ್ತಿಯಿಂದ ಪ್ರತಿ ಆತ್ಮಗಳ ಮನಸ್ಸಿನ ಮಾತು ಇಷ್ಟು ಸಮೀಪದಿಂದ ಕೇಳಿಬರುತ್ತದೆ ಹೇಗೆ ಯಾರಾದರೂ
ಸಮ್ಮುಖದಿಂದಲೇ ಮಾತನಾಡುತ್ತಿದ್ದಾರೆ ಎಂದು.
ಸ್ಲೋಗನ್:
ಸ್ವಭಾವ,
ಸಂಸ್ಕಾರ, ಸಂಬಂಧ, ಸಂಪರ್ಕದಲ್ಲಿ ಹಗುರವಾಗಿರುವುದು ಅರ್ಥಾತ್ ಫರಿಶ್ತಾ ಆಗುವುದು.
ಅವ್ಯಕ್ತ ಸೂಚನೆ - ಸತ್ಯ
ಮತ್ತು ಸಭ್ಯತೆ ರೊಪಿ ಕಲ್ಚರ್(ಸಂಸ್ಕೃತಿಯನ್ನು) ತಮ್ಮದಾಗಿಸಿಕೊಳ್ಳಿರಿ
ಸತ್ಯ ಹೃದಯದವರು
ಸತ್ಯವಾದಿ ಮಕ್ಕಳು ಸತ್ಯತೆಯ ಮಹಾನತೆಯ ಕಾರಣ, ಸೆಕೆಂಡಿನಲ್ಲಿ ಬಿಂದು ಆಗಿ ಬಿಂದು ಸ್ವರೂಪ
ತಂದೆಯನ್ನು ನೆನಪು ಮಾಡಬಹುದು. ಸತ್ಯ ಹೃದಯದವರು ಸತ್ಯ ಸಾಹೇಬನನ್ನು ಒಪ್ಪಿಸಿರುವ ಕಾರಣ, ತಂದೆಯ
ವಿಶೇಷ ಆಶೀರ್ವಾದದ ಪ್ರಾಪ್ತಿಯ ಕಾರಣ, ಸಮಯ ಪ್ರಮಾಣ ಬುದ್ಧಿ ಯುಕ್ತಿಯುಕ್ತ ಯಧಾರ್ಥ ಕಾರ್ಯ
ಸ್ವತಹವಾಗಿ ಮಾಡುವುದು ಏಕೆಂದರೆ ಬುದ್ಧಿವಂತರ ಬುದ್ಧಿ ತಂದೆಯನ್ನು ಒಪ್ಪಿಸಿದ್ದಾರೆ.
ಸೂಚನೆ: ಇಂದು
ಅಂತರಾಷ್ಟ್ರೀಯ ಯೋಗದಿನ ಮೂರನೇ ರವಿವಾರವಾಗಿದೆ, ಸಂಜೆ 6.30 ರಿಂದ 7.30ಯವರೆಗೆ, ಎಲ್ಲಾ
ಸಹೋದರ-ಸಹೋದರಿಯರು ಸಂಘಟಿತರೂಪದಲ್ಲಿ ಒಟ್ಟಾಗಿಸೇರಿ ಯೋಗಾಭ್ಯಾಸದಲ್ಲಿ ಸರ್ವಆತ್ಮರಬಗ್ಗೆ ಇದೇ
ಶುಭಭಾವನೆಯನ್ನಿಡಿ- ಸರ್ವಆತ್ಮರ ಕಲ್ಯಾಣವಾಗಲಿ, ಸರ್ವಆತ್ಮರು ಸತ್ಯಮಾರ್ಗದಲ್ಲಿ ನಡೆಯುತ್ತಾ
ಪರಮಾತ್ಮನ ಆಸ್ತಿಯ ಅಧಿಕಾರವನ್ನು ಪ್ರಾಪ್ತಿ ಮಾಡಿಕೊಂಡುಬಿಡಲಿ. ನಾನು ತಂದೆಯ ಸಮಾನ ಸರ್ವಾತ್ಮರಿಗೆ
ಮುಕ್ತಿ-ಜೀವನ್ಮುಕ್ತಿಯ ವರದಾನವನ್ನು ತೆಗೆದುಕೊಳ್ಳುವಂತಹ ಆತ್ಮನಾಗಿದ್ದೇನೆ.