16.04.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಮ್ಮ
ಅವಸ್ಥೆಯನ್ನು ನೋಡಿಕೊಳ್ಳಿ - ನನಗೆ ಒಬ್ಬ ತಂದೆಯೊಂದಿಗೇ ಮನಸ್ಸಿದೆಯೇ ಅಥವಾ ಯಾವುದೇ
ಕರ್ಮಸಂಬಂಧಗಳೊಂದಿಗೆ ಮನಸ್ಸಿದೆಯೇ?”
ಪ್ರಶ್ನೆ:
ತಮ್ಮ ಕಲ್ಯಾಣ
ಮಾಡಿಕೊಳ್ಳಲು ಯಾವ ಎರಡು ಮಾತುಗಳ ಚಾರ್ಟನ್ನು ನಿತ್ಯವೂ ನೋಡಿಕೊಳ್ಳಬೇಕು?
ಉತ್ತರ:
”ಯೋಗ ಮತ್ತು
ನಡವಳಿಕೆ” ಯ ಚಾರ್ಟನ್ನು ನಿತ್ಯವೂ ನೋಡಿಕೊಳ್ಳಿ, ಪರಿಶೀಲನೆ ಮಾಡಿಕೊಳ್ಳಿ - ಯಾವುದೇ ಸೇವಾಭಂಗವಂತೂ
ಮಾಡಲಿಲ್ಲವೇ? ಸದಾ ತಮ್ಮ ಹೃದಯವನ್ನು ಕೇಳಿಕೊಳ್ಳಿ - ನಾನು ತಂದೆಯನ್ನು ಎಷ್ಟು ನೆನಪು ಮಾಡುತ್ತೇನೆ?
ತನ್ನ ಸಮಯವನ್ನು ಯಾವ ಪ್ರಕಾರದಲ್ಲಿ ಸಫಲ ಮಾಡುತ್ತೇನೆ? ಅನ್ಯರನ್ನು ನೋಡುತ್ತಿಲ್ಲವೆ? ಯಾರದೇ
ನಾಮ-ರೂಪದಲ್ಲಿ ಮನಸ್ಸು ಸಿಕ್ಕಿಹಾಕಿಕೊಂಡಿಲ್ಲವೆ?
ಗೀತೆ:
ಮುಖವನ್ನು
ನೋಡಿಕೋ ಪ್ರಾಣಿ..........
ಓಂ ಶಾಂತಿ.
ಇದನ್ನು ಯಾರು ಹೇಳಿದರು? ಹೇ ಆತ್ಮಗಳೇ ಎಂದು ಬೇಹದ್ದಿನ ತಂದೆಯು ಹೇಳಿದರು. ಪ್ರಾಣಿ ಎಂದರೆ ಆತ್ಮ.
ಆತ್ಮವು ಹೊರಟುಹೋಯಿತು ಅಂದರೆ ಪ್ರಾಣವು ಹೊರಟುಹೋಯಿತೆಂದು ಹೇಳುತ್ತಾರಲ್ಲವೆ. ಈಗ ತಂದೆಯು
ಸನ್ಮುಖದಲ್ಲಿ ತಿಳಿಸುತ್ತಾರಲ್ಲವೆ - ಹೇ ಆತ್ಮಗಳೇ, ನೆನಪು ಮಾಡಿಕೊಳ್ಳಿ, ಕೇವಲ ಈ ಜನ್ಮವನ್ನೇ
ನೋಡಿಕೊಳ್ಳುವುದಲ್ಲ. ಆದರೆ ಯಾವಾಗಿನಿಂದ ನೀವು ತಮೋಪ್ರಧಾನರಾಗಿದ್ದೀರೋ ಆಗಿನಿಂದ ಏಣಿಯನ್ನು
ಕೆಳಗಿಳಿಯುತ್ತಾ ಪತಿತರಾಗಿದ್ದೀರಿ ಅಂದಮೇಲೆ ಅವಶ್ಯವಾಗಿ ಪಾಪಗಳನ್ನು ಮಾಡಿರುತ್ತೀರಿ. ಇದು
ತಿಳುವಳಿಕೆಯ ಮಾತಾಗಿದೆ. ಎಷ್ಟು ಜನ್ಮ-ಜನ್ಮಾಂತರದ ಪಾಪವು ತಲೆಯ ಮೇಲಿದೆ, ಇದು ಹೇಗೆ ತಿಳಿಯುತ್ತದೆ!
ತಮ್ಮನ್ನು ನೋಡಿಕೊಳ್ಳಬೇಕು - ನನ್ನ ಯೋಗವು ಎಷ್ಟಿದೆ! ತಂದೆಯ ಜೊತೆ ಯೋಗವು ಎಷ್ಟು
ಚೆನ್ನಾಗಿರುವುದೋ ಅಷ್ಟು ವಿಕರ್ಮಗಳು ವಿನಾಶವಾಗುತ್ತವೆ. ತಂದೆಯು ತಿಳಿಸಿದ್ದಾರೆ - ನನ್ನನ್ನು
ನೆನಪು ಮಾಡುವುದರಿಂದ ಗ್ಯಾರಂಟಿಯಾಗಿ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ತಮ್ಮ ಹೃದಯದಲ್ಲಿ
ಪ್ರತಿಯೊಬ್ಬರೂ ನೋಡಿಕೊಳ್ಳಿ - ನಮಗೆ ತಂದೆಯ ಜೊತೆ ಎಷ್ಟು ಯೋಗವಿರುತ್ತದೆ? ನಾವು ಎಷ್ಟು
ಯೋಗವನ್ನಿಡುತ್ತೇವೆಯೋ ಅಷ್ಟು ಪವಿತ್ರರಾಗುತ್ತೇವೆ, ಪಾಪಗಳು ಭಸ್ಮವಾಗುತ್ತಾ ಹೋಗುತ್ತವೆ. ಯೋಗವು
ಹೆಚ್ಚುತ್ತಾ ಹೋಗುತ್ತದೆ. ಪವಿತ್ರರಾಗಲಿಲ್ಲವೆಂದರೆ ಯೋಗವೂ ಹಿಡಿಯುವುದಿಲ್ಲ, ಇಂತಹವರೂ
ಕೆಲವರಿದ್ದಾರೆ ಇಡೀ ದಿನದಲ್ಲಿ 15 ನಿಮಿಷಗಳಾದರೂ ನೆನಪಿನಲ್ಲಿರುವುದಿಲ್ಲ. ತಮ್ಮೊಂದಿಗೆ
ಕೇಳಿಕೊಳ್ಳಿ - ನನ್ನ ಮನಸ್ಸು ಶಿವತಂದೆಯೊಂದಿಗಿದೆಯೇ ಅಥವಾ ದೇಹಧಾರಿಯೊಂದಿಗೆ ಇದೆಯೇ?
ಕರ್ಮಸಂಬಂಧಿಗಳು ಮೊದಲಾದವರೊಂದಿಗೆ ಇದೆಯೇ? ಮಾಯೆಯು ಮಕ್ಕಳನ್ನೇ ಬಿರುಗಾಳಿಯಲ್ಲಿ ತರುತ್ತದೆಯಲ್ಲವೆ?
ನನ್ನ ಸ್ಥಿತಿಯು ಹೇಗಿದೆ? ಶಿವತಂದೆಯೊಂದಿಗೆ ಮನಸ್ಸಿದೆಯೇ ಅಥವಾ ಯಾವುದೇ ದೇಹಧಾರಿಯೊಂದಿಗಿದೆಯೇ?
ಎಂದು ತಾವೂ ಸಹ ಇದನ್ನು ತಿಳಿದುಕೊಳ್ಳಬಹುದು. ಕರ್ಮಸಂಬಂಧಿಗಳೊಂದಿಗೆ ಮನಸ್ಸಿದೆಯೆಂದರೆ ನಮ್ಮ
ವಿಕರ್ಮಗಳು ಬಹಳ ಇದೆಯೆಂದು ತಿಳಿಯಬೇಕು. ಯಾವ ವಿಕರ್ಮಗಳು ಮಾಯೆಯ ಕಂದಕದಲ್ಲಿ ಹಾಕಿಬಿಡುತ್ತದೆ.
ವಿದ್ಯಾರ್ಥಿಗಳೂ ಸಹ ನಾವು ತೇರ್ಗಡೆಯಾಗುತ್ತೇವೆಯೇ ಅಥವಾ ಇಲ್ಲವೆ, ಚೆನ್ನಾಗಿ ಓದುತ್ತೇವೆಯೇ ಅಥವಾ
ಇಲ್ಲವೆ ಎಂಬುದನ್ನು ನೋಡಿಕೊಳ್ಳುತ್ತಾರೆ. ನಂಬರ್ವಾರಂತೂ ಇರುತ್ತಾರಲ್ಲವೆ. ಆತ್ಮವು ತನ್ನ ಕಲ್ಯಾಣ
ಮಾಡಿಕೊಳ್ಳಬೇಕಾಗಿದೆ. ತಂದೆಯು ಸಲಹೆ ನೀಡುತ್ತಾರೆ - ಒಂದುವೇಳೆ ನೀವು ಪುಣ್ಯಾತ್ಮರಾಗಿ ಶ್ರೇಷ್ಠ
ಪದವಿಯನ್ನು ಪಡೆಯಬೇಕೆಂದಿದ್ದರೆ ಅದರಲ್ಲಿ ಪವಿತ್ರತೆಯು ಮುಖ್ಯವಾಗಿದೆ. ಪವಿತ್ರರಾಗಿಯೇ ಬಂದಿರಿ,
ಈಗ ಪವಿತ್ರರಾಗಿಯೇ ಹೋಗಬೇಕಾಗಿದೆ. ಪತಿತರೆಂದೂ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಸದಾ
ತಮ್ಮ ಮನಸ್ಸನ್ನು ಕೇಳಿಕೊಳ್ಳಬೇಕು - ನಾನು ತಂದೆಯನ್ನು ಎಷ್ಟು ನೆನಪು ಮಾಡುತ್ತೇನೆ, ನಾನೇನು
ಮಾಡುತ್ತೇನೆ? ಇದಂತೂ ಅವಶ್ಯವಾಗಿ ಇದೆ - ಕೊನೆಯಲ್ಲಿ ವಿದ್ಯಾರ್ಥಿಗಳ ಮನಸ್ಸು ತಿನ್ನುತ್ತಿರುತ್ತದೆ.
ಶ್ರೇಷ್ಠ ಪದವಿಯನ್ನು ಪಡೆಯಲು ಪುರುಷಾರ್ಥ ಮಾಡುತ್ತೀರಿ ಆದರೆ ನಡವಳಿಕೆಯು ಬೇಕಲ್ಲವೆ. ತಂದೆಯನ್ನು
ನೆನಪು ಮಾಡಿ ತಮ್ಮ ತಲೆಯಿಂದ ಪಾಪಗಳ ಹೊರೆಯನ್ನು ಇಳಿಸಿಕೊಳ್ಳಬೇಕಾಗಿದೆ. ಪಾಪಗಳ ಹೊರೆಯು ತಂದೆಯ
ನೆನಪಿನ ಹೊರತು ನಾವು ಇಳಿಸಿಕೊಳ್ಳಲು ಸಾಧ್ಯವಿಲ್ಲ ಅಂದಮೇಲೆ ತಂದೆಯ ಜೊತೆ ಎಷ್ಟೊಂದು ಯೋಗವಿರಬೇಕು!
ಶ್ರೇಷ್ಠಾತಿಶ್ರೇಷ್ಠ ತಂದೆಯೇ ತಿಳಿಸುತ್ತಾರೆ - ತಂದೆಯಾದ ನನ್ನನ್ನು ನೆನಪು ಮಾಡಿ ಆಗ ವಿಕರ್ಮಗಳು
ವಿನಾಶವಾಗುತ್ತವೆ, ಸಮಯವು ಸಮೀಪಕ್ಕೆ ಬರುತ್ತಾ ಹೋಗುತ್ತದೆ. ಶರೀರದ ಮೇಲೆ ಯಾವುದೇ ಭರವಸೆಯಿಲ್ಲ.
ಆಕಸ್ಮಿಕವಾಗಿ ಹೇಗೇಗೆ ಅಪಘಾತಗಳಾಗಿಬಿಡುತ್ತವೆ. ಇದು ಅಕಾಲಮೃತ್ಯುವಿನ ಸೀಜನ್ ಆಗಿದೆ ಅಂದಮೇಲೆ
ಪ್ರತಿಯೊಬ್ಬರೂ ತಮ್ಮನ್ನು ಪರಿಶೀಲಿಸಿಕೊಂಡು ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ. ಇಡೀ ದಿನದ
ತಮ್ಮ ಯೋಗ ಮತ್ತು ನಡವಳಿಕೆಯ ಚಾರ್ಟನ್ನು ನೋಡಿಕೊಳ್ಳಬೇಕು. ನಾನು ಇಡೀ ದಿನದಲ್ಲಿ ಎಷ್ಟು ಪಾಪ
ಮಾಡಿದೆನು? ಮನಸಾ-ವಾಚಾದಲ್ಲಿ ಮೊದಲು ಬರುತ್ತದೆ ನಂತರ ಕರ್ಮಣದಲ್ಲಿ ಬಂದು ಬಿಡುತ್ತದೆ. ಈಗ ನಾವು
ಒಳ್ಳೆಯ ಕರ್ಮವನ್ನೇ ಮಾಡಬೇಕೆಂದು ಮಕ್ಕಳಿಗೆ ಸದ್ಭುದ್ಧಿಯು ಪ್ರಾಪ್ತವಾಗಿದೆ. ಯಾರಿಗೂ ಮೋಸ
ಮಾಡಲಿಲ್ಲ ತಾನೆ? ವ್ಯರ್ಥವಾಗಿ ಸುಳ್ಳಂತೂ ಹೇಳಲಿಲ್ಲವೆ? ಸೇವಾಭಂಗ ಮಾಡಲಿಲ್ಲವೆ? ಯಾರಾದರೂ ಯಾರದೇ
ನಾಮರೂಪದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆಂದರೆ ಅವರು ಯಜ್ಞಪಿತನ ನಿಂದನೆ ಮಾಡಿಸುತ್ತಾರೆ.
ತಂದೆಯು ತಿಳಿಸುತ್ತಾರೆ
- ಯಾರಿಗೂ ದುಃಖ ಕೊಡಬೇಡಿ. ಒಬ್ಬ ತಂದೆಯ ನೆನಪಿನಲ್ಲಿರಿ. ಇದು ಬಹಳ ಬಲಿಷ್ಠವಾದ ಲಕ್ಷ್ಯ
ಸಿಕ್ಕಿಬಿಟ್ಟಿದೆ. ಒಂದುವೇಳೆ ನಾವು ನೆನಪಿನಲ್ಲಿಲ್ಲವೆಂದರೆ ಗತಿಯೇನಾಗುವುದು! ಈ ಸಮಯದಲ್ಲಿ
ಹುಡುಗಾಟಿಕೆಯಲ್ಲಿ ಇರುತ್ತೀರೆಂದರೆ ಅಂತಿಮದಲ್ಲಿ ಪಶ್ಚಾತ್ತಾಪ ಪಡಬೇಕಾಗುವುದು. ಇದನ್ನೂ ಸಹ
ತಿಳಿದುಕೊಳ್ಳಬಹುದು - ಯಾರು ಕಡಿಮೆ ಪದವಿಯನ್ನು ಪಡೆಯುವವರಿದ್ದಾರೆಯೋ ಅವರು ಅದನ್ನೇ ಪಡೆಯುತ್ತಾರೆ.
ನಾವು ಏನು ಮಾಡಬೇಕೆಂದು ಬುದ್ಧಿಯಿಂದ ಅರಿತುಕೊಳ್ಳಬಹುದಾಗಿದೆ. ಎಲ್ಲರಿಗೆ ಇದೇ ಮಂತ್ರವನ್ನು
ತಿಳಿಸಬೇಕು - ತಂದೆಯನ್ನು ನೆನಪು ಮಾಡಿ. ಮಕ್ಕಳಿಗೆ ಲಕ್ಷ್ಯವು ಸಿಕ್ಕಿದೆ, ಈ ಮಾತುಗಳನ್ನು
ಪ್ರಪಂಚದವರು ಅರಿತುಕೊಳ್ಳುವುದಿಲ್ಲ. ಮೊಟ್ಟಮೊದಲನೆಯ ಮುಖ್ಯವಾದ ಮಾತು - ತಂದೆಯನ್ನು ನೆನಪು
ಮಾಡುವುದಾಗಿದೆ. ರಚಯಿತ ಮತ್ತು ರಚನೆಯ ಜ್ಞಾನವಂತೂ ಸಿಕ್ಕಿಬಿಟ್ಟಿತು, ದಿನ-ಪ್ರತಿದಿನ
ಯಾವುದಾದರೊಂದು ಹೊಸ-ಹೊಸ ವಿಚಾರಗಳನ್ನು ತಿಳಿಸುವುದಕ್ಕಾಗಿ ಕೊಡಲಾಗುತ್ತದೆ. ಹೇಗೆ ವಿರಾಟರೂಪದ
ಚಿತ್ರವಿದೆ, ಇದರಲ್ಲಿಯೂ ನೀವು ತಿಳಿಸಬಲ್ಲಿರಿ - ಹೇಗೆ ವರ್ಣಗಳಲ್ಲಿ ಬರುತ್ತಾರೆಂಬುದೂ ಸಹ ಏಣಿಯ
ಚಿತ್ರದ ಪಕ್ಕದಲ್ಲಿ ಇಡುವ ಚಿತ್ರವಾಗಿದೆ. ಇಡೀ ದಿನ ಬುದ್ಧಿಯಲ್ಲಿ ಯಾರಿಗೆ ಹೇಗೆ ತಿಳಿಸುವುದು
ಎಂಬ ಚಿಂತನೆಯೇ ನಡೆಯುತ್ತಿರಲಿ. ಸರ್ವೀಸ್ ಮಾಡುವುದರಿಂದಲೂ ತಂದೆಯ ನೆನಪಿರುವುದು, ತಂದೆಯ
ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತದೆ. ತಮ್ಮ ಕಲ್ಯಾಣವನ್ನು ಮಾಡಿಕೊಳ್ಳಬೇಕಾಗಿದೆ. ತಂದೆಯು
ತಿಳಿಸಿದ್ದಾರೆ - ನಿಮ್ಮ ಮೇಲೆ 63 ಜನ್ಮಗಳ ಪಾಪವಿದೆ. ಪಾಪಗಳನ್ನು ಮಾಡುತ್ತಾ-ಮಾಡುತ್ತಾ
ಸತೋಪ್ರಧಾನರಿಂದ ತಮೋಪ್ರಧಾನರಾಗಿಬಿಟ್ಟಿದ್ದೀರಿ. ಈಗ ನನ್ನವರಾಗಿ ಮತ್ತ್ಯಾವುದೇ ಪಾಪ ಕರ್ಮವನ್ನು
ಮಾಡಬೇಡಿ. ಮನೆ ಒಡೆಯುವುದು, ಸುಳ್ಳು ಹೇಳುವುದು, ಹೇಳಿಕೆ-ಕೇಳಿಕೆ ಮಾತುಗಳ ಮೇಲೆ ವಿಶ್ವಾಸವನ್ನು
ಇಡುವುದು - ಈ ಮೋಸತನವು ಬಹಳ ನಷ್ಟಕಾರಕವಾಗಿದೆ. ತಂದೆಯೊಂದಿಗಿನ ಯೋಗವನ್ನೇ ತುಂಡರಿಸುತ್ತದೆ
ಅಂದಮೇಲೆ ಎಷ್ಟೊಂದು ಪಾಪವಾಯಿತು! ಸರ್ಕಾರದ ದೂತರೂ ಇರುತ್ತಾರೆ, ಸರ್ಕಾರದ ಮಾತನ್ನು ಅನ್ಯ
ಶತ್ರುಗಳಿಗೆ ತಿಳಿಸಿ ಬಹಳ ನಷ್ಟವನ್ನಂಟುಮಾಡುತ್ತಾರೆ. ಮತ್ತೆ ಅಂತಹವರಿಗೆ ಬಹಳ ಕಠಿಣ ಶಿಕ್ಷೆ
ಸಿಗುತ್ತದೆ ಅಂದಾಗ ಮಕ್ಕಳ ಬಾಯಿಂದ ಜ್ಞಾನರತ್ನಗಳೇ ಬರಬೇಕಾಗಿದೆ. ಉಲ್ಟಾ-ಸುಲ್ಟಾ ಸಮಾಚಾರಗಳನ್ನು
ಒಬ್ಬರು ಇನ್ನೊಬ್ಬರೊಂದಿಗೆ ಮಾತನಾಡಬಾರದು, ಜ್ಞಾನದ ಮಾತುಗಳನ್ನೇ ಮಾತನಾಡಬೇಕು. ನೀವು ತಂದೆಯನ್ನು
ಹೇಗೆ ನೆನಪು ಮಾಡುತ್ತೀರಿ? ಅನ್ಯರಿಗೆ ಹೇಗೆ ತಿಳಿಸುತ್ತೀರಿ? ಇಡೀ ದಿನ ಇದೇ ವಿಚಾರಗಳಿರಲಿ.
ಚಿತ್ರಗಳ ಮುಂದೆ ಹೋಗಿ ಕುಳಿತುಕೊಳ್ಳಬೇಕು. ನಿಮ್ಮ ಬುದ್ಧಿಯಲ್ಲಂತೂ ಜ್ಞಾನವಿದೆಯಲ್ಲವೆ. ಭಕ್ತಿ
ಮಾರ್ಗದಲ್ಲಿ ಅನೇಕ ಪ್ರಕಾರದ ಚಿತ್ರಗಳನ್ನು ಪೂಜಿಸುತ್ತಿರುತ್ತಾರೆ ಆದರೆ ಏನನ್ನೂ ಅರಿತುಕೊಂಡಿಲ್ಲ.
ಅಂಧಶ್ರದ್ಧೆ, ಮೂರ್ತಿ ಪೂಜೆ - ಈ ಮಾತುಗಳಲ್ಲಿ ಭಾರತವು ಪ್ರಸಿದ್ಧವಾಗಿದೆ. ಈಗ ನೀವು ಈ
ಮಾತುಗಳನ್ನು ತಿಳಿಸುವುದರಲ್ಲಿ ಎಷ್ಟೊಂದು ಪರಿಶ್ರಮ ಪಡುತ್ತೀರಿ. ಪ್ರದರ್ಶನಿಯಲ್ಲಿ ಅನೇಕರು
ಬರುತ್ತಾರೆ, ಭಿನ್ನ-ಭಿನ್ನ ಪ್ರಕಾರದವರಿರುತ್ತಾರೆ. ಅದರಲ್ಲಿ ಕೆಲವರು ಇವು ತಿಳಿದುಕೊಳ್ಳುವ
ಯೋಗ್ಯ ಮಾತುಗಳೆಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ. ಮುಂದೆ ತಿಳಿದುಕೊಳ್ಳೋಣ ಎಂದು ಹೇಳುತ್ತಾರೆ
ಆದರೆ ಮತ್ತೆ ಸೇವಾಕೇಂದ್ರಕ್ಕೆ ಎಂದೂ ಹೋಗುವುದೇ ಇಲ್ಲ. ದಿನ-ಪ್ರತಿದಿನ ಸ್ಥಿತಿಯು ಹದಗೆಡುತ್ತಾ
ಹೋಗುತ್ತಿದೆ. ಬಹಳಷ್ಟು ಕಲಹಗಳಿವೆ, ವಿದೇಶಗಳಲ್ಲಿ ಏನೇನಾಗುತ್ತಿದೆ, ಮಾತೇ ಕೇಳಬೇಡಿ. ಎಷ್ಟೊಂದು
ಮನುಷ್ಯರು ಸಾಯುತ್ತಾರೆ, ತಮೋಪ್ರಧಾನ ಪ್ರಪಂಚವಲ್ಲವೆ. ಬಾಂಬುಗಳನ್ನು ತಯಾರಿಸಬಾರದೆಂದು
ಹೇಳುತ್ತಾರೆ ಆದರೆ ನಿಮ್ಮ ಬಳಿ ಬಹಳಷ್ಟು ಇಟ್ಟುಕೊಂಡಿದ್ದೀರಿ ಅಂದಮೇಲೆ ನಾವೇಕೆ ತಯಾರಿಸಬಾರದು
ಎಂದು ಹೇಳುತ್ತಾರೆ. ಇಲ್ಲವಾದರೆ ನಾವು ಗುಲಾಮರಾಗಿರಬೇಕಾಗುತ್ತದೆ. ಏನೆಲ್ಲವೂ ಮತ ಸಿಗುವುದೋ
ಎಲ್ಲವೂ ವಿನಾಶಕ್ಕಾಗಿಯೇ. ವಿನಾಶವಂತೂ ಆಗಲೇಬೇಕಾಗಿದೆ, ಶಂಕರನು ಪ್ರೇರಕನಾಗಿದ್ದಾನೆಂದು
ಹೇಳುತ್ತಾರೆ ಆದರೆ ಇದರಲ್ಲಿ ಪ್ರೇರಣೆಯ ಮಾತಿಲ್ಲ. ನಾವಂತೂ ಡ್ರಾಮಾದ ಮೇಲೆ ನಿಂತಿದ್ದೇವೆ, ಮಾಯೆಯು
ಬಹಳ ತೀಕ್ಷ್ಣವಾಗಿದೆ. ನಾವು ಮಕ್ಕಳನ್ನೂ ಸಹ ವಿಕಾರದಲ್ಲಿ ಬೀಳಿಸುತ್ತದೆ. ದೇಹದ ಜೊತೆ
ಪ್ರೀತಿಯನ್ನಿಟ್ಟುಕೊಳ್ಳಬೇಡಿ, ನಾಮರೂಪದಲ್ಲಿ ಸಿಲುಕಿಹಾಕಿಕೊಳ್ಳಬೇಡಿ ಎಂದು ತಂದೆಯು ಎಷ್ಟೊಂದು
ತಿಳಿಸುತ್ತಾರೆ ಆದರೂ ಸಹ ಮಾಯೆಯು ಇಷ್ಟೊಂದು ತಮೋಪ್ರಧಾನವಾಗಿದೆ, ಅದು ದೇಹದಲ್ಲಿ ಸಿಲುಕಿಸುತ್ತದೆ,
ಒಮ್ಮೆಲೆ ಮೂಗನ್ನು ಹಿಡಿಯುತ್ತದೆ. ಅದು ತಿಳಿಯುವುದೇ ಇಲ್ಲ. ಶ್ರೀಮತದಂತೆ ನಡೆಯಿರಿ ಎಂದು ತಂದೆಯು
ಎಷ್ಟೊಂದು ತಿಳಿಸುತ್ತಾರೆ ಆದರೆ ನಡೆಯುವುದೇ ಇಲ್ಲ. ರಾವಣನ ಮತವೇ ಬಹುಬೇಗನೆ ಬುದ್ಧಿಯಲ್ಲಿ
ಬಂದುಬಿಡುತ್ತದೆ. ರಾವಣನು ಬಂಧನದಿಂದ ಬಿಡುವುದೇ ಇಲ್ಲ.
ತಂದೆಯು ತಿಳಿಸುತ್ತಾರೆ
- ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಈಗ ನಾವು ಹೋದೆವೆಂದರೆ ಹೋದೆವು,
ಅರ್ಧಕಲ್ಪದ ರೋಗದಿಂದ ನಾವು ಮುಕ್ತರಾಗುತ್ತೇವೆ. ಅಲ್ಲಂತೂ ನಿರೋಗಿ ಕಾಯವಿರುತ್ತದೆ. ಇಲ್ಲಿ
ಎಷ್ಟೊಂದು ರೋಗಿಗಳಿದ್ದಾರೆ. ಇದು ರೌರವ ನರಕವಾಗಿದೆಯಲ್ಲವೆ. ಭಲೆ ಅವರು ಗರುಡ ಪುರಾಣವನ್ನು
ಓದುತ್ತಾರೆ ಆದರೆ ಓದುವವರು ಮತ್ತು ಕೇಳುವವರಿಗೆ ತಿಳುವಳಿಕೆಯೇ ಇಲ್ಲ. ತಂದೆಯು ಸ್ವಯಂ ಹೇಳುತ್ತಾರೆ
- ಮೊದಲು ಭಕ್ತಿಯ ಎಷ್ಟೊಂದು ನಶೆಯಿತ್ತು. ಭಕ್ತಿಯಿಂದ ಭಗವಂತನು ಸಿಗುತ್ತಾರೆಂಬ ಮಾತನ್ನು ಕೇಳಿ
ಎಷ್ಟೊಂದು ಖುಷಿಯಾಗುತ್ತಿದ್ದರು. ಪತಿತರಾಗುವುದರಿಂದಲೇ ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ.
ಭಕ್ತಿಮಾಡುತ್ತಾರೆ, ಇದು ಒಳ್ಳೆಯದೇ ಆದರೆ ಮತ್ತೆ ಭಗವಂತನನ್ನು ಏಕೆ ನೆನಪು ಮಾಡುತ್ತಾರೆ? ಭಗವಂತನು
ಬಂದು ಭಕ್ತಿಯ ಫಲವನ್ನು ಕೊಡುತ್ತಾರೆ ಆದರೆ ಅದು ಯಾರಿಗೆ ಕೊಡುತ್ತಾರೆಂಬುದು ತಿಳಿದಿಲ್ಲ. ತಂದೆಯು
ತಿಳಿಸುತ್ತಾರೆ - ಗೀತೆಯನ್ನು ಓದುವವರಿಗೇ ತಿಳಿಸಿಕೊಡಬೇಕು, ಅವರೇ ನಮ್ಮ ಕುಲದವರಾಗಿದ್ದಾರೆ.
ಮೊದಲ ಮುಖ್ಯಮಾತೇ ಗೀತೆಯಲ್ಲಿ ಭಗವಾನುವಾಚವಿದೆ. ಅಂದಮೇಲೆ ಗೀತೆಯ ಭಗವಂತ ಯಾರು? ಭಗವಂತನ ಪರಿಚಯವು
ಬೇಕಲ್ಲವೆ. ಆತ್ಮವೆಂದರೇನು? ಪರಮಾತ್ಮ ಯಾರು? ಇದೆಲ್ಲವೂ ನಿಮಗೆ ಅರ್ಥವಾಗಿದೆ. ಮನುಷ್ಯರು ಜ್ಞಾನದ
ಮಾತುಗಳಿಂದ ಎಷ್ಟೊಂದು ಹೆದರುತ್ತಾರೆ! ಭಕ್ತಿಯು ಬಹಳ ಇಷ್ಟವಾಗುತ್ತದೆ, ಜ್ಞಾನದಿಂದ ಮೂರುಮೈಲಿ
ದೂರ ಓಡುತ್ತಾರೆ ಅರೆ! ಪಾವನರಾಗುವುದು ಒಳ್ಳೆಯದಲ್ಲವೆ. ಈಗ ಪಾವನ ಪ್ರಪಂಚದ ಸ್ಥಾಪನೆ, ಪತಿತ
ಪ್ರಪಂಚದ ವಿನಾಶವಾಗಬೇಕಾಗಿದೆ. ಆದರೆ ಇದನ್ನು ಕೇಳುವುದೇ ಇಲ್ಲ. ಕೆಟ್ಟದ್ದನ್ನು ಕೇಳಬೇಡಿ ಎಂಬುದು
ತಂದೆಯ ಆದೇಶವಾಗಿದೆ ಮತ್ತು ಮಾಯೆಯೂ ಸಹ ತಂದೆಯ ಮಾತುಗಳನ್ನು ಕೇಳಬೇಡಿ ಎಂದು ಹೇಳುತ್ತದೆ.
ಶಿವತಂದೆಯ ಜ್ಞಾನವನ್ನು ಕೇಳಬೇಡಿ ಎಂಬುದು ಮಾಯೆಯ ಆದೇಶವಾಗಿದೆ. ಮಾಯೆಯು ಇಂತಹ ಪೆಟ್ಟನ್ನು
ಕೊಡುತ್ತದೆ, ಅದರಿಂದ ಜ್ಞಾನವು ಬುದ್ಧಿಯಲ್ಲಿ ನಿಲ್ಲುವುದೇ ಇಲ್ಲ, ತಂದೆಯನ್ನು ನೆನಪೂ
ಮಾಡುವುದಿಲ್ಲ. ಮಿತ್ರ ಸಂಬಂಧಿ, ದೇಹಧಾರಿಗಳು ನೆನಪಿಗೆ ಬಂದುಬಿಡುತ್ತಾರೆ, ತಂದೆಯ ಆಜ್ಞೆಯನ್ನು
ಪಾಲಿಸುವುದಿಲ್ಲ. ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ ಎಂದು. ಆದರೆ ಮತ್ತೆ
ಅಪ್ರಮಾಣಿಕರಾಗಿ ಬಾಬಾ, ನಮಗೆ ಇಂತಹವರ ನೆನಪು ಬರುತ್ತದೆ ಎಂದು ಹೇಳುತ್ತಾರೆ. ನೆನಪು ಬಂದಿದ್ದೇ
ಆದರೆ ಕೆಳಗೆ ಬೀಳುತ್ತಾರೆ. ವಾಸ್ತವದಲ್ಲಿ ಇಂತಹ ಮಾತುಗಳಿಂದ ತಿರಸ್ಕಾರ ಬರಬೇಕು.ಇದು ಸಂಪೂರ್ಣ ಛೀ
ಛೀ ಪ್ರಪಂಚವಾಗಿದೆ. ನಮಗಾಗಿ ಹೊಸ ಸ್ವರ್ಗವು ಸ್ಥಾಪನೆಯಾಗುತ್ತಿದೆ. ನೀವು ಮಕ್ಕಳಿಗೆ ತಂದೆ ಮತ್ತು
ಸೃಷ್ಟಿಚಕ್ರದ ಪರಿಚಯವೂ ಸಿಕ್ಕಿದೆ ಅಂದಮೇಲೆ ಆ ವಿದ್ಯೆಯಲ್ಲಿಯೇ ತೊಡಗಬೇಕಲ್ಲವೇ. ತಮ್ಮನ್ನು
ನೋಡಿಕೊಳ್ಳಿ - ನಾರದನ ಉದಾಹರಣೆಯೂ ಇದೆ. ಅಂದಾಗ ತಂದೆಯೂ ತಿಳಿಸುತ್ತಾರೆ - ಮಕ್ಕಳೇ, ತಮ್ಮನ್ನು
ನೋಡಿಕೊಳ್ಳಿ, ನಾನು ತಂದೆಯನ್ನು ನೆನಪು ಮಾಡುತ್ತೇನೆಯೇ? ನೆನಪಿನಿಂದಲೇ ಪಾಪಗಳು ಭಸ್ಮವಾಗುತ್ತವೆ.
ಯಾವುದೇ ಸನ್ನಿವೇಶದಲ್ಲಿ ಶಿವತಂದೆಯನ್ನೇ ನೆನಪು ಮಾಡಬೇಕಾಗಿದೆ, ಮತ್ತ್ಯಾರೊಂದಿಗೂ
ಪ್ರೀತಿಯನ್ನಿಡಬಾರದು. ಅಂತಿಮದಲ್ಲಿ ಒಬ್ಬ ಶಿವತಂದೆಯ ನೆನಪಿರಲಿ. ನೆನಪಿನಲ್ಲಿಯೇ ಪ್ರಾಣವು ಹೋಗಲಿ.
ಶಿವತಂದೆಯ ನೆನಪು ಮತ್ತು ಸ್ವದರ್ಶನಚಕ್ರದ ಜ್ಞಾನವಿರಲಿ. ಸ್ವದರ್ಶನಚಕ್ರಧಾರಿಗಳು ಯಾರೆಂಬುದೂ ಸಹ
ಯಾರಿಗೂ ತಿಳಿದಿಲ್ಲ. ಬ್ರಾಹ್ಮಣರಿಗೂ ಸಹ ಈ ಜ್ಞಾನವನ್ನು ಯಾರು ಕೊಟ್ಟರು? ಬ್ರಾಹ್ಮಣರನ್ನು
ಸ್ವದರ್ಶನಚಕ್ರಧಾರಿಗಳನ್ನಾಗಿ ಯಾರು ಮಾಡುತ್ತಾರೆ? ಪರಮಪಿತ ಪರಮಾತ್ಮ ಜ್ಯೋತಿರ್ಬಿಂದು. ಅಂದಾಗ
ಅವರೂ ಸಹ ಸ್ವದರ್ಶನಚಕ್ರಧಾರಿಯೇ? ಮೊಟ್ಟಮೊದಲಿಗೆ ಅವರೂ ಆಗಿದ್ದಾರೆ ಇಲ್ಲದಿದ್ದರೆ ನಮ್ಮನ್ನು
ಬ್ರಾಹ್ಮಣರನ್ನಾಗಿ ಯಾರು ಮಾಡುತ್ತಾರೆ? ಇಡೀ ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವು ಅವರಲ್ಲಿದೆ.
ನೀವಾತ್ಮಗಳು ಸ್ವದರ್ಶನಚಕ್ರಧಾರಿಗಳಾಗುತ್ತೀರಿ. ಅವರು ಆತ್ಮನಾಗಿದ್ದಾರೆ, ಭಕ್ತಿಮಾರ್ಗದಲ್ಲಿ
ವಿಷ್ಣುವನ್ನು ಚಕ್ರಧಾರಿಯನ್ನಾಗಿ ಮಾಡಿಬಿಟ್ಟಿದ್ದಾರೆ. ಪರಮಾತ್ಮ ತ್ರಿಕಾಲದರ್ಶಿ, ತ್ರಿಮೂರ್ತಿ,
ತ್ರಿನೇತ್ರಿ ಎಂದು ನಾವು ಹೇಳುತ್ತೇವೆ. ಅವರು ನಮ್ಮನ್ನು ಸ್ವದರ್ಶನ ಚಕ್ರಧಾರಿಯನ್ನಾಗಿ
ಮಾಡುತ್ತಾರೆ. ಅವರು ಸಹ ಮನುಷ್ಯನ ತನುವಿನಲ್ಲಿ ಬಂದು ತಿಳಿಸಿಕೊಡುತ್ತಾರೆ. ರಚನೆಯ
ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ರಚಯಿತನೇ ತಿಳಿಸುವರಲ್ಲವೆ. ರಚಯಿತನ ಬಗ್ಗೆ ಯಾರಿಗೂ
ತಿಳಿದಿಲ್ಲವೆಂದರೆ ರಚನೆಯ ಜ್ಞಾನವೆಲ್ಲಿಂದ ಸಿಗುವುದು! ಈಗ ನೀವು ತಿಳಿದುಕೊಂಡಿದ್ದೀರಿ -
ಶಿವತಂದೆಯೇ ಸ್ವದರ್ಶನಚಕ್ರಧಾರಿಯಾಗಿದ್ದಾರೆ, ಜ್ಞಾನದ ಸಾಗರನಾಗಿದ್ದಾರೆ. ನಾವು ಹೇಗೆ ಈ 84
ಜನ್ಮಗಳ ಚಕ್ರದಲ್ಲಿ ಬರುತ್ತೇವೆಂದು ತಂದೆಗೆ ತಿಳಿದಿದೆ. ಅವರಂತೂ ಪುನರ್ಜನ್ಮವನ್ನು
ತೆಗೆದುಕೊಳ್ಳುವುದಿಲ್ಲ, ಅವರಲ್ಲಿ ಜ್ಞಾನವಿದೆ ಅದನ್ನು ನಮಗೆ ತಿಳಿಸುತ್ತಾರೆ. ಅಂದಮೇಲೆ
ಮೊಟ್ಟಮೊದಲಿಗೆ ಶಿವತಂದೆಯೇ ಸ್ವದರ್ಶನಚಕ್ರಧಾರಿಗಳಾದರು. ಅವರೇ ನಮ್ಮನ್ನು
ಸ್ವದರ್ಶನಚಕ್ರಧಾರಿಯನ್ನಾಗಿ ಮಾಡುತ್ತಾರೆ, ಪಾವನರನ್ನಾಗಿ ಮಾಡುತ್ತಾರೆ ಏಕೆಂದರೆ ಅವರೇ
ಪತಿತ-ಪಾವನನಾಗಿದ್ದಾರೆ. ರಚಯಿತನೂ ಅವರೇ ಆಗಿದ್ದಾರೆ. ತಂದೆಗೆ ಮಕ್ಕಳ ಜೀವನದ ಕಥೆಯು
ತಿಳಿದಿರುತ್ತದೆಯಲ್ಲವೆ. ಶಿವತಂದೆಯು ಬ್ರಹ್ಮಾರವರ ಮೂಲಕ ಸ್ಥಾಪನೆ ಮಾಡಿಸುತ್ತಾರೆ.
ಮಾಡಿ-ಮಾಡಿಸುವವರಾಗಿದ್ದಾರಲ್ಲವೆ. ಇದನ್ನು ನೀವೂ ಕಲಿಯಿರಿ, ಕಲಿಸಿರಿ. ತಂದೆಯು ಓದಿಸುತ್ತಾರೆ
ಮತ್ತು ಅನ್ಯರಿಗೂ ಓದಿಸಿ ಎಂದು ಹೇಳುತ್ತಾರೆ. ಅಂದಾಗ ಶಿವತಂದೆಯೇ ನಿಮ್ಮನ್ನು
ಸ್ವದರ್ಶನಚಕ್ರಧಾರಿಗಳನ್ನಾಗಿ ಮಾಡುತ್ತಾರೆ. ತಿಳಿಸುತ್ತಾರೆ - ನನಗೆ ಸೃಷ್ಟಿಚಕ್ರದ ಜ್ಞಾನವಿದೆ
ಆದ್ದರಿಂದಲೇ ತಿಳಿಸುತ್ತೇನೆ ಅಂದಾಗ ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ ಎಂದು ಈ 84
ಜನ್ಮಗಳ ಕಥೆಯು ಬುದ್ಧಿಯಲ್ಲಿರಬೇಕು. ಇದು ಬುದ್ಧಿಯಲ್ಲಿದ್ದರೂ ಸಹ ಚಕ್ರವರ್ತಿ ರಾಜರಾಗುತ್ತೀರಿ.
ಇದು ಜ್ಞಾನವಾಗಿದೆ ಆದರೆ ಯೋಗದಿಂದಲೇ ಪಾಪಗಳು ಭಸ್ಮವಾಗುತ್ತವೆ. ಇಡೀ ದಿನದ ಲೆಕ್ಕವನ್ನು ತೆಗೆಯಿರಿ.
ನೆನಪೇ ಮಾಡಲಿಲ್ಲವೆಂದರೆ ಲೆಕ್ಕವನ್ನೇನು ತೆಗೆಯುತ್ತಾರೆ! ಇಡೀ ದಿನದಲ್ಲಿ ಏನೇನು ಮಾಡಿದ್ದೆವೆಂದು
ನೆನಪಿರುತ್ತದೆಯಲ್ಲವೆ! ಇಂತಹ ಮನುಷ್ಯರೂ ಇದ್ದಾರೆ ಯಾರು ತಮ್ಮ ಲೆಕ್ಕವನ್ನು ತೆಗೆಯುತ್ತಾರೆ-ಎಷ್ಟು
ಶಾಸ್ತ್ರಗಳನ್ನು ಓದಿದೆವು, ಎಷ್ಟು ಪುಣ್ಯವನ್ನು ಮಾಡಿದೆವು? ನೀವು ಹೇಳುತ್ತೀರಿ - ಎಷ್ಟು ಸಮಯ
ನೆನಪು ಮಾಡಿದೆವು, ಎಷ್ಟು ಖುಷಿಯಲ್ಲಿದ್ದು ತಂದೆಯ ಪರಿಚಯ ಕೊಟ್ಟೆವು?
ತಂದೆಯ ಮೂಲಕ ಯಾವ
ಜ್ಞಾನಬಿಂದುಗಳು ಸಿಕ್ಕಿವೆಯೋ ಅವನ್ನು ಮತ್ತೆ-ಮತ್ತೆ ಮಂಥನ ಮಾಡಿ ಯಾವ ಜ್ಞಾನವು ಸಿಕ್ಕಿದೆಯೋ
ಅದನ್ನು ಬುದ್ಧಿಯಲ್ಲಿ ನೆನಪಿಟ್ಟುಕೊಳ್ಳಿ, ನಿತ್ಯವೂ ಮುರುಳಿಯನ್ನು ಓದಿರಿ, ಅದೂ ಸಹ ಬಹಳ
ಒಳ್ಳೆಯದು. ಮುರುಳಿಯಲ್ಲಿ ಯಾವ ಮುಖ್ಯ ಅಂಶಗಳಿವೆಯೋ ಅವನ್ನು ಮತ್ತೆ-ಮತ್ತೆ ಮಂಥನ ಮಾಡಬೇಕು.
ಇಲ್ಲಿರುವವರಿಗಿಂತಲೂ ವಿದೇಶದಲ್ಲಿರುವವರು ಹೆಚ್ಚು ನೆನಪಿನಲ್ಲಿರುತ್ತಾರೆ. ಎಷ್ಟೊಂದು ಮಂದಿ
ಬಂಧನದಲ್ಲಿರುವವರಿದ್ದಾರೆ, ತಂದೆಯನ್ನು ಎಂದೂ ನೋಡಿಯೂ ಇಲ್ಲ ಆದರೆ ಎಷ್ಟೊಂದು ನೆನಪು ಮಾಡುತ್ತಾರೆ!
ನಶೆಯೇರಿರುತ್ತದೆ. ಮನೆಯಲ್ಲಿ ಕುಳಿತಿದ್ದಂತೆಯೇ ಸಾಕ್ಷಾತ್ಕಾರವಾಗುತ್ತದೆ ಇಲ್ಲವೆ ಅನಾಯಾಸವಾಗಿ
ಕೇಳುತ್ತಾ-ಕೇಳುತ್ತಾ ನಿಶ್ಚಯವಾಗಿಬಿಡುತ್ತದೆ.
ಅಂದಾಗ ತಂದೆಯು
ತಿಳಿಸುತ್ತಾರೆ - ತಮ್ಮಲ್ಲಿ ಪರಿಶೀಲನೆ ಮಾಡಿಕೊಳ್ಳುತ್ತಾ ಇರಿ - ನಾನು ಎಷ್ಟು ಶ್ರೇಷ್ಠ
ಪದವಿಯನ್ನು ಪಡೆಯುತ್ತೇನೆ? ನನ್ನ ಚಲನೆ ಹೇಗಿದೆ? ಯಾವುದೇ ಆಹಾರ ಪದಾರ್ಥಗಳ ಲೋಭವಿಲ್ಲವೆ? ಅಂತಹ
ಯಾವುದೇ ಹವ್ಯಾಸವಿರಬಾರದು. ಮೂಲಮಾತು ಅವ್ಯಭಿಚಾರಿ ನೆನಪಿನಲ್ಲಿರಬೇಕಾಗಿದೆ. ಹೃದಯಪೂರ್ವಕವಾಗಿ
ಕೇಳಿಕೊಳ್ಳಿ - ನಾನು ಯಾರನ್ನು ನೆನಪು ಮಾಡುತ್ತೇನೆ? ಎಷ್ಟು ಸಮಯ ಅನ್ಯರನ್ನು ನೆನಪು ಮಾಡುತ್ತೇನೆ?
ಜ್ಞಾನವನ್ನೂ ಧಾರಣೆ ಮಾಡಬೇಕು, ಪಾಪಗಳನ್ನೂ ಭಸ್ಮ ಮಾಡಿಕೊಳ್ಳಬೇಕಾಗಿದೆ. ಕೆಲವರು ಇಂತಿಂತಹ
ಪಾಪಕರ್ಮಗಳನ್ನು ಮಾಡಿದ್ದಾರೆ ಅದರ ಮಾತೇ ಕೇಳಬೇಡಿ! ಇದನ್ನು ಮಾಡಿ ಎಂದು ಭಗವಂತನು ಹೇಳುತ್ತಾರೆ
ಆದರೆ ಪರವಶರಾಗಿದ್ದೇವೆ ಅರ್ಥಾತ್ ಮಾಯೆಗೆ ವಶವಾಗಿದ್ದೇವೆಂದು ಹೇಳಿಬಿಡುತ್ತಾರೆ. ಒಳ್ಳೆಯದು-
ಮಾಯೆಗೆ ವಶರಾಗಿಯೇ ಇರಿ. ನೀವು ಶ್ರೀಮತದಂತೆ ನಡೆಯಬೇಕು ಇಲ್ಲವೆ ತಮ್ಮ ಮತದಂತೆ ನಡೆಯಬೇಕು.
ನೋಡಿಕೊಳ್ಳಬೇಕು - ಈ ಸ್ಥಿತಿಯಲ್ಲಿ ನಾನು ಎಲ್ಲಿಯವರೆಗೆ ತೇರ್ಗಡೆಯಾಗುತ್ತೇನೆ? ಏನು ಪದವಿಯನ್ನು
ಪಡೆಯುತ್ತೇನೆ? 21 ಜನ್ಮಗಳಿಗಾಗಿ ನಷ್ಟವಾಗಿಬಿಡುತ್ತದೆ. ಯಾವಾಗ ಕರ್ಮಾತೀತ ಸ್ಥಿತಿಯಾಗುವುದೋ ಆಗ
ದೇಹಾಭಿಮಾನದ ಹೆಸರಿರುವುದಿಲ್ಲ. ಆದ್ದರಿಂದಲೇ ದೇಹೀ-ಅಭಿಮಾನಿಗಳಾಗಿ ಎಂದು ಹೇಳಲಾಗುತ್ತದೆ.
ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಯಜ್ಞಪಿತನ
ನಿಂದನೆಯಾಗುವಂತಹ ಯಾವುದೇ ಕರ್ಮವನ್ನು ಮಾಡಬಾರದು. ತಂದೆಯ ಮೂಲಕ ಯಾವ ಸದ್ಭುದ್ಧಿಯು
ಪ್ರಾಪ್ತವಾಗಿದೆಯೋ ಆ ಬುದ್ಧಿಯಿಂದ ಒಳ್ಳೆಯ ಕರ್ಮಗಳನ್ನು ಮಾಡಬೇಕಾಗಿದೆ. ಯಾರಿಗೂ ದುಃಖವನ್ನು
ಕೊಡಬಾರದು.
2. ಪರಸ್ಪರ ಉಲ್ಟಾ
ಸಮಾಚಾರಗಳನ್ನು ಕೇಳಬಾರದು, ಜ್ಞಾನದ ಮಾತುಗಳನ್ನೇ ಮಾತನಾಡಬೇಕಾಗಿದೆ. ಸುಳ್ಳುಹೇಳುವುದು, ಮನೆ
ಹೊಡೆಯುವಂತಹ ಮಾತುಗಳೆಲ್ಲವನ್ನೂ ಬಿಟ್ಟು ಮುಖದಿಂದ ಸದಾ ರತ್ನಗಳೇ ಹೊರಬರಬೇಕಾಗಿದೆ. ಕೆಟ್ಟ
ಮಾತುಗಳನ್ನು ಕೇಳಲೂಬಾರದು, ಹೇಳಲೂಬಾರದು.
ವರದಾನ:
ಐದು ವಿಕಾರ ರೂಪಿ
ಶತ್ರುವನ್ನು ಸಹಯೋಗಿಯಾಗಿ ಪರಿವರ್ತನೆ ಮಾಡಿಕೊಳ್ಳುವಂತಹ ಮಾಯಾಜೀತ್ ಜಗತ್ ಜೀತ್ ಭವ
ವಿಜಯಿಗಳು, ಖಂಡಿತವಾಗಿ
ಶತ್ರುವಿನ ರೂಪ ಪರಿವರ್ತನೆ ಮಾಡುತ್ತಾರೆ. ಅಂದಾಗ ನೀವು ವಿಕಾರ ರೂಪಿ ಶತ್ರುವನ್ನು ಪರಿವರ್ತನೆ
ಮಾಡಿ ಸಹಯೋಗಿ ಸ್ವರೂಪರನ್ನಾಗಿ ಮಾಡಿಬಿಡಿ ಯಾವುದರಿಂದ ಅದು ಸದಾ ನಿಮಗೆ ನಮಸ್ಕಾರ
ಮಾಡುತ್ತಿರುತ್ತದೆ. ಕಾಮವಿಕಾರವನ್ನು ಶುಭಕಾಮನೆಯ ರೂಪದಲ್ಲಿ, ಕ್ರೋಧವನ್ನು ಆತ್ಮೀಯ ನಶೆಯ
ರೂಪದಲ್ಲಿ, ಲೋಭವನ್ನು ಅನಾಸಕ್ತ ವೃತ್ತಿಯ ರೂಪದಲ್ಲಿ, ಮೋಹವನ್ನು ಸ್ನೇಹದ ರೂಪದಲ್ಲಿ ಮತ್ತು
ದೇಹಾಭಿಮಾನವನ್ನು ಸ್ವಾಭಿಮಾನದ ರೂಪದಲ್ಲಿ ಪರಿವರ್ತನೆ ಮಾಡಿದಾಗ ಮಾಯಾಜೀತ್ ಜಗತ್ ಜೀತ್
ಆಗಿಬಿಡುವಿರಿ.
ಸ್ಲೋಗನ್:
ಸತ್ಯ
ಚಿನ್ನದಲ್ಲಿ ನನ್ನತನವೇ ಮಿಶ್ರಣವಾಗಿದೆ, ಯಾವುದು ಬೆಲೆಯನ್ನು ಕಡಿಮೆ ಮಾಡಿಬಿಡುತ್ತದೆ ಅದಕ್ಕೆ
ನನ್ನತನವನ್ನು ಸಮಾಪ್ತಿ ಮಾಡಿ.
ಅವ್ಯಕ್ತ ಸೂಚನೆ:
ಕಂಬೈಂಡ್ ರೂಪದ ಸ್ಮೃತಿಯಿಂದ ಸದಾ ವಿಜಯಿಯಾಗಿರಿ
ಎಂದೂ ಯಾವುದೇ
ಕಾರ್ಯದಲ್ಲಿ ಸೇವೆಯಲ್ಲಿ ಯಾವಾಗ ಒಂಟಿ ಅನುಭವ ಮಾಡುತ್ತೀರೆಂದಾಗ ಸುಸ್ತಾಗಿ ಬಿಡುತ್ತೀರಿ. ನಂತರ
ಎರಡು ಭುಜದವರನ್ನು ಜೊತೆ ಮಾಡಿಕೊಂಡು ಬಿಡುತ್ತೀರಿ, ಸಾವಿರಾರು ಭುಜದವರನ್ನು ಮರೆತು ಬಿಡುತ್ತೀರಿ.
ಯಾವಾಗ ಸಾವಿರಾರು ಭುಜದವರು ತಮ್ಮ ಪರಮಧಾಮವನ್ನು ಬಿಟ್ಟು ನಿಮಗೆ ಜೊತೆ ಕೊಡಲು ಬಂದಿದ್ದಾರೆ
ಅವರನ್ನು ತಮ್ಮ ಜೊತೆ ಕಂಬೈಂಡ್ ಏಕೆ ಇಟ್ಟುಕೊಳುವುದಿಲ್ಲ. ಸದಾ ಬುದ್ಧಿಯಿಂದ ಕಂಬೈಂಡ್ ಆಗಿದ್ದರೆ
ಸಹಯೋಗ ಸಿಗುತ್ತಿರುತ್ತದೆ.