16.06.24    Avyakt Bapdada     Kannada Murli    03.03.20     Om Shanti     Madhuban


"ಶುಭ ಭವ ಹಾಗೂ ಪ್ರೇಮ ಭವವನ್ನು ಇಮರ್ಜ್ ಮಾಡಿ ಕ್ರೋಧ ಮಹಾ ಶತ್ರುವಿನ ಮೇಲೆ ವಿಜಯಿ ಆಗಿರಿ"


ಇಂದು ಬಾಪ್ದಾದಾರವರು ತಮ್ಮ ಜನ್ಮದ ಜೊತೆಗಾರರನ್ನು, ಜೊತೆ-ಜೊತೆಯಲ್ಲಿ ಸೇವೆಯ ಜೊತೆಗಾರರನ್ನು ನೋಡಿ ಹರ್ಷಿತರಾಗುತ್ತಿದ್ದಾರೆ. ಇಂದು ತಮ್ಮೆಲ್ಲರಿಗೂ ಬಾಪ್ದಾದಾರವರು ಅಲೌಕಿಕ ಜನ್ಮ, ಜೊತೆಯಲ್ಲಿ ಜನ್ಮ ಜೊತೆಗಾರರ ಜನ್ಮದಿನದ ಖುಷಿ ಇದೆ, ಏಕೆ? ಇಂತಹ ಭಿನ್ನ ಹಾಗೂ ಅತೀಪ್ರಿಯ ಅಲೌಕಿಕ ಜನ್ಮ ಮತ್ತು ಯಾರದ್ದು ಇರಲು ಸಾಧ್ಯವಿಲ್ಲ. ಎಂದು ಸಹ ಈ ರೀತಿ ಕೇಳಲು ಸಾಧ್ಯವಿಲ್ಲ- ತಂದೆಯ ಜನ್ಮದಿನವೂ ಅದೇ ದಿನ ಹಾಗೂ ಮಕ್ಕಳ ಜನ್ಮದಿನವೂ ಅದೇ ದಿನ. ಇದು ಭಿನ್ನ ಹಾಗೂ ಪ್ರಿಯ ಅಲೌಕಿಕ ವಜ್ರ ಸಮಾನ ಜನ್ಮ ಇಂದು ತಾವು ಆಚರಿಸುತ್ತಿದ್ದೀರಿ. ಜೊತೆಯಲ್ಲಿ ಎಲ್ಲರಿಗೂ ಈ ಭಿನ್ನ ಹಾಗೂ ಪ್ರೀತಿಯ ಸ್ಮೃತಿ ಇದೆ- ಈ ಅಲೌಕಿಕ ಜನ್ಮ ಇಷ್ಟು ವಿಚಿತ್ರವಾಗಿದೆ ಯಾವುದು ಸ್ವಯಂ ಭಗವಂತ ತಂದೆ ಮಕ್ಕಳ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಪರಮ ಆತ್ಮ ಮಕ್ಕಳ, ಶ್ರೇಷ್ಠ ಆತ್ಮರ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಪ್ರಪಂಚದಲ್ಲಿ ಹೆಸರಿಗಷ್ಟ್ಟೆ ಹೇಳುತ್ತಾರೆ ನಮಗೆ ಜನ್ಮ ನೀಡಿದವರು ಭಗವಂತ, ಪರಮಾತ್ಮ ಆಗಿದ್ದಾರೆ. ಆದರೆ ತಿಳಿದುಕೊಂಡಿಲ್ಲ, ಆ ಸ್ಮೃತಿಯಲ್ಲೂ ಕೂಡ ನಡೆಯುವುದಿಲ್ಲ. ನೀವೆಲ್ಲರೂ ಅನುಭವದಿಂದ ಹೇಳುತ್ತೀರಿ- ನಾವು ಪರಮಾತ್ಮ ವಂಶಿಯಾಗಿದ್ದೇವೆ, ಬ್ರಹ್ಮಾವಂಶಿಯಾಗಿದ್ದೇವೆ. ಪರಮಾತ್ಮ ನಮ್ಮ ಜನ್ಮ ದಿವಸವನ್ನು ಆಚರಿಸುತ್ತಾರೆ. ನಾವು ಪರಮಾತ್ಮನ ಜನ್ಮ ದಿವಸವನ್ನು ಆಚರಿಸುತ್ತೇವೆ.

ಇಂದು ಎಲ್ಲಾ ಕಡೆಯಿಂದ ಇಲ್ಲಿಗೆ ತಲುಪಿದ್ದೀರಿ, ಯಾವುದಕ್ಕಾಗಿ? ಶುಭಾಷಯಗಳು ಕೊಡಲು ಬಂದಿದ್ದೀರಿ ಹಾಗೂ ಶುಭಾಷಯಗಳನ್ನು ಪಡೆಯಲು ಬಂದಿದ್ದೀರಿ. ಬಾಪ್ದಾದಾರವರು ವಿಶೇಷವಾಗಿ ತನ್ನ ಜನ್ಮ ಜೊತೆಗಾರರಿಗೆ ಶುಭಾಷಯಗಳನ್ನು ಕೊಡುತ್ತಿದ್ದಾರೆ. ಸೇವೆಯ ಜೊತೆಗಾರರಿಗೂ ಸಹ ಶುಭಾಷಯ ಕೊಡುತ್ತಿದ್ದಾರೆ. ಶುಭಾಷಯದ ಜೊತೆ ಜೊತೆಗೆ ಪರಮ ಪ್ರೀತಿಯ ಮುತ್ತು, ವಜ್ರ ವೈಡೂರ್ಯಗಳ ಮೂಲಕ ಮಳೆಯನ್ನು ಹರಿಸುತ್ತಿದ್ದಾರೆ. ಪ್ರೀತಿಯ ಮುತ್ತುಗಳನ್ನು ನೋಡಿದ್ದೀರಲ್ಲವೇ. ಪ್ರೀತಿಯ ಮುತ್ತುಗಳನ್ನು ತಿಳಿದಿದ್ದೀರಲ್ಲವೇ? ಹೂವಿನ ಮಳೆ, ಚಿನ್ನದ ಮಳೆಯಂತು ಎಲ್ಲರೂ ಮಾಡುತ್ತಾರೆ, ಆದರೆ ಬಾಪ್ದಾದಾರವರು ನಿಮ್ಮೆಲ್ಲರ ಮೇಲೆ ಪರಮ ಪ್ರೀತಿಯ, ಅಲೌಕಿಕ ಸ್ನೇಹದ ಮುತ್ತುಗಳ ಮಳೆಯನ್ನು ಹರಿಸುತ್ತಿದ್ದಾರೆ. ಒಂದರಷ್ಟಲ್ಲ, ಪದಮ- ಪದಮ- ಪದಮದಷ್ಟು ಹೃದಯದ ಶುಭಾಷಯಗಳು. ನೀವೆಲ್ಲರೂ ಸಹ ಹೃದಯದ ಶುಭಾಷಯಗಳು ಕೊಡುತ್ತಿದ್ದೀರಿ, ಅದು ಕೂಡ ಬಾಪ್ದಾದಾರವರ ಬಳಿ ತಲುಪುತ್ತಿದೆ. ಹಾಗಾದರೆ ಇಂದು ಆಚರಿಸುವ ಹಾಗೂ ಶುಭಾಷಯಗಳು ಕೊಡುವ ದಿನವಾಗಿದೆ. ಆಚರಿಸುವ ಸಮಯ ಏನು ಮಾಡುತ್ತೀರಿ? ವಾದ್ಯವನ್ನು ಬಾರಿಸುತ್ತೀರಿ. ಹಾಗಾದರೆ ಬಾಪ್ದಾದಾರವರು ಎಲ್ಲಾ ಮಕ್ಕಳ ಮನಸ್ಸಿನ ಖುಷಿಯ ವಾದ್ಯವೆಂದಾದರೂ ಹೇಳಿ, ಹಾಡನ್ನು ಕೇಳುತ್ತಿದ್ದಾರೆ. ಭಕ್ತ ಜನರು ಕರೆಯುತ್ತಾ ಇರುತ್ತಾರೆ ಹಾಗೂ ನೀವು ಮಕ್ಕಳು ತಂದೆಯ ಪ್ರೀತಿಯಲ್ಲಿ ಸಮಾವೇಶ ಆಗಿಬಿಡುತ್ತೀರಿ. ಸಮಾವೇಶ ಆಗುವುದು ಬರುತ್ತದೆ ಅಲ್ಲವೇ? ಈ ಸಮಾವೇಶ ಆಗುವುದೇ ಸಮಾನರನ್ನಾಗಿ ಮಾಡುತ್ತದೆ.

ಬಾಪ್ದಾದಾರವರು ಮಕ್ಕಳನ್ನು ತನ್ನಿಂದ ದೂರ ಮಾಡಲು ಸಾಧ್ಯವಿಲ್ಲ. ಮಕ್ಕಳು ಸಹ ದೂರವಾಗಲು ಬಯಸುವುದಿಲ್ಲ ಆದರೆ ಕೆಲವು ಬಾರಿ ಮಾಯೆ ಆಟ-ಆಟದಲ್ಲಿ ಸ್ವಲ್ಪ ಬದಿಗೆ ಸರಿಸಿ ಬಿಡುತ್ತೀರಿ. ಬಾಪ್ದಾದಾರವರು ಹೇಳುತ್ತಾರೆ ನಾನು ನೀವು ಮಕ್ಕಳ ಆಶ್ರಯವಾಗಿದ್ದೇನೆ. ಆದರೆ ಮಕ್ಕಳು ತುಂಟತನ ಮಾಡುವವರಾಗಿರುತ್ತಾರೆ ಅಲ್ಲವೇ. ಮಾಯೆ ತುಂಟರನ್ನಾಗಿ ಮಾಡಿಬಿಡುತ್ತದೆ, ಮಕ್ಕಳು ಆ ರೀತಿ ಇಲ್ಲ ಆದರೆ, ಮಾಯೆ ಮಾಡಿಬಿಡುತ್ತದೆ. ಆಶ್ರಯದಿಂದ ದೂರ ಮಾಡಿಬಿಡುತ್ತದೆ. ಆದರೂ ಸಹ ಬಾಪ್ದಾದಾರವರು ಆಶ್ರಯವಾಗಿ ಸಮೀಪ ಕರೆತರುತ್ತಾರೆ. ಬಾಪ್ದಾದಾರವರು ಎಲ್ಲಾ ಮಕ್ಕಳೊಂದಿಗೆ ಕೇಳುತ್ತಾರೆ- ಪ್ರತಿಯೊಬ್ಬರಿಗೂ ಜೀವನದಲ್ಲಿ ಏನು ಬೇಕು? ವಿದೇಶಿಯರು ಎರಡು ಮಾತುಗಳನ್ನು ಬಹಳ ಇಷ್ಟ ಪಡುತ್ತಾರೆ. ಡಬಲ್ ಫಾರಿನರ್ಸ್ಗೆ ಇಷ್ಟವಾದ ಎರಡು ಶಬ್ಧಗಳು ಯಾವುದು? (ಕಂಪಾನಿಯನ್ ಹಾಗೂ ಕಂಪನಿ) (ಜೊತೆಗಾರ ಹಾಗೂ ಜೊತೆ) ಇವೆರಡೂ ಇಷ್ಟವಿದೆ. ಒಂದುವೇಳೆ ಇಷ್ಟವಿದ್ದರೆ ಒಂದು ಕೈಯನ್ನು ಎತ್ತಿ. ಭಾರತದವರಿಗೆ ಇಷ್ಟವಿದೆಯೇ? ಜೊತೆಗಾರಂತು ಅವಶ್ಯಕವಾಗಿದೆ ಹಾಗೂ ಜೊತೆಯೂ ಅವಶ್ಯಕವಾಗಿದೆ. ಜೊತೆ ಇಲ್ಲದೆ ಇರಲು ಸಾಧ್ಯವಿಲ್ಲ ಹಾಗೂ ಜೊತೆಗಾರ ಇರದೇ ಇರಲು ಸಾಧ್ಯವಿಲ್ಲ. ಹಾಗಾದರೆ ನಿಮ್ಮೆಲ್ಲರಿಗೂ ಏನು ಸಿಕ್ಕಿದೆ? ಜೊತೆಗಾರ ಸಿಕ್ಕಿದ್ದಾರೆಯೇ? ಹೇಳಿ ಹೌದು ಇಲ್ಲ? (ಹೌದು) ಜೊತೆ ಸಿಕ್ಕಿದೆಯೇ? (ಹೌದು) ಇಂತಹ ಕಂಪನಿ ಹಾಗೂ ಇಂತಹ ಕಂಪೆನಿಯನ್ ಇಡೀ ಕಲ್ಪದಲ್ಲಿ ಸಿಗುತ್ತಾರೆಯೇ? ಕಲ್ಪದ ಹಿಂದೆ ಸಿಕ್ಕಿದ್ದರೇ? ಇಂತಹ ಕಂಪೆನಿಯನ್ ಯಾರು ಎಂದೂ ಸಹ ನಿಮ್ಮನ್ನು ದೂರ ಮಾಡುವುದಿಲ್ಲ, ನೀವು ಎಷ್ಟೇ ತುಂಟತನ ಮಾಡಿದರು ಸಹ ಮತ್ತೆ ನಿಮ್ಮ ಆಶ್ರಯ ಆಗುತ್ತಾರೆ. ಹಾಗೂ ಏನೆಲ್ಲಾ ನಿಮ್ಮ ಹೃದಯದ ಪ್ರಾಪ್ತಿಗಳಿವೆ, ಆ ಸರ್ವ ಪ್ರಾಪ್ತಿಗಳನ್ನು ಪೂರ್ತಿ ಮಾಡುತ್ತಾರೆ. ಯಾವುದಾದರೂ ಅಪ್ರಾಪ್ತಿ ಇದೆಯೇ? ಎಲ್ಲರೂ ಹೃದಯದಿಂದ ಹೇಳುತ್ತಿದ್ದೀರಾ ಅಥವಾ ಮರ್ಯಾದಾ ಪೂರ್ವಕ ಹೌದು ಎಂದು ಹೇಳುತ್ತಿದ್ದೀರಾ? ಹಾಡಂತೂ ಹಾಡುತ್ತೀರಿ ಪಡೆಯಬೇಕಾದದ್ದನ್ನು ಪಡೆದುಬಿಟ್ಟೆ, ಅಥವಾ ಇನ್ನು ಪಡೆಯುವುದಿದೆಯೇ? ಪಡೆದುಕೊಂಡಿದ್ದೀರಾ? ಈಗ ಪಡೆದುಕೊಳ್ಳುವುದು ಇನ್ನೇನು ಇಲ್ಲವೇ? ಅಥವಾ ಸ್ವಲ್ಪ ಸ್ವಲ್ಪ ಆಸೆಗಳು ಉಳಿದುಕೊಂಡು ಬಿಟ್ಟಿದೆಯೇ? ಎಲ್ಲಾ ಆಸೆಗಳು ಪೂರ್ಣವಾಗಿದೆಯೇ ಅಥವಾ ಉಳಿದುಕೊಂಡಿದೆಯೇ? ಬಾಪ್ದಾದಾರವರು ಹೇಳುತ್ತಾರೆ ಉಳಿದುಕೊಂಡಿದೆ. (ತಂದೆಯನ್ನು ಪ್ರತ್ಯಕ್ಷ ಮಾಡುವ ಆಸೆ ಉಳಿದುಕೊಂಡಿದೆ) ಇದಂತೂ ತಂದೆಯ ಆಸೆಯಾಗಿದೆ- ಎಲ್ಲಾ ಮಕ್ಕಳಿಗೂ ಪರಿಚಯ ಸಿಗಬೇಕು. ತಂದೆ ಬಂದರು ಹಾಗೂ ಯಾರಾದರೂ ಉಳಿದುಕೊಂಡು ಬಿಟ್ಟರೆ!... ಇದು ವಿಶೇಷ ಆಸೆಯಾಗಿದೆ- ಎಲ್ಲರಿಗೂ ಸ್ವಲ್ಪ ತಂದೆಯ ಬಗ್ಗೆ ಅರಿವಂತೂ ಸಿಗಲಿ- ನಮ್ಮ ಸದಾ ಕಾಲದ ತಂದೆ ಬಂದಿದ್ದಾರೆ. ಆದರೆ ಮಕ್ಕಳ ಹದ್ದಿನ ಬೇರೆ ಆಸೆಗಳು ಪೂರ್ಣವಾಗಿ ಬಿಟ್ಟಿದೆ, ಪ್ರೀತಿಯ ಆಸೆಗಳು. ಪ್ರತಿಯೊಬ್ಬರು ಬಯಸುತ್ತಾರೆ ಸ್ಟೇಜ್ ನ ಮೇಲೆ ಬರಬೇಕು, ಈ ಆಸೆ ಇದೆಯೇ? (ಈಗಂತೂ ಸ್ವಯಂ ತಂದೆ ಎಲ್ಲರ ಬಳಿ ಬರುತ್ತಾರೆ) ಈ ಆಸೆಯೂ ಪೂರ್ತಿ ಆಯಿತೇ? ಸಂತುಷ್ಟ ಆತ್ಮವಾಗಿದ್ದೀರಿ, ಶುಭಾಷಯಗಳು ಏಕೆಂದರೆ ಎಲ್ಲಾ ಮಕ್ಕಳು ಬುದ್ಧಿವಂತರಾಗಿದ್ದಾರೆ. ತಿಳಿಯುತ್ತಾರೆ- ಎಂತಹ ಸಮಯ ಅಂತ ಸ್ವರೂಪ ಆಗಲೇಬೇಕು ಆದ್ದರಿಂದ ಬಾಪ್ದಾದಾರವರು ಸಹ ಡ್ರಾಮಾದ ಬಂಧನದಲ್ಲಂತೂ ಇದ್ದಾರೆ ಅಲ್ಲವೇ! ಎಲ್ಲಾ ಮಕ್ಕಳು ಪ್ರತಿ ಸಮಯ ಅನುಸಾರ ಸಂತುಷ್ಟರಾಗಿದ್ದಾರೆ ಹಾಗೂ ಸದಾ ಸಂತುಷ್ಟ ಮಣಿಯಾಗಿ ಹೊಳೆಯುತ್ತಾ ಇರುತ್ತಾರೆ. ಅಲ್ಲವೇ? ನೀವು ಸ್ವಯಂ ಹೇಳುತ್ತೀರಿ- ಪಡೆಯಬೇಕಾದದ್ದು ಪಡೆದಿದ್ದೇವೆ. ಇದು ಬ್ರಹ್ಮಾ ತಂದೆಯ ಆದಿ ಅನುಭವದ ಮಾತುಗಳಾಗಿದೆ, ಎಂದ ಮೇಲೆ ಬ್ರಹ್ಮಾ ತಂದೆಯ ಯಾವ ಮಾತುಗಳಿವೆಯೋ ಅದೇ ಸರ್ವ ಬ್ರಾಹ್ಮಣರ ಮಾತು. ಬಾಪ್ದಾದಾರವರು ಎಲ್ಲಾ ಮಕ್ಕಳಿಗೆ ಇದನ್ನೇ ರಿವೈಸ್ (ಪುನರಾವರ್ತನೆ) ಮಾಡಿಸುತ್ತಿದ್ದಾರೆ- ಸದಾ ತಂದೆಯ ಕಂಪನಿಯಲ್ಲಿ ಇರಿ. ತಂದೆ ಸರ್ವ ಸಂಬಂಧಗಳ ಅನುಭವವನ್ನು ಮಾಡಿಸಿದ್ದಾರೆ. ತಂದೆಯೇ ಸರ್ವ ಸಂಬಂಧಿ ಎಂದು ಸಹ ಹೇಳುತ್ತೀರಿ. ಸರ್ವ ಸಂಬಂಧಿಯಾಗಿದ್ದಾರೆ ಎಂದ ಮೇಲೆ ಎಂತ ಸಮಯ ಅಂತ ಸಂಬಂಧದಲ್ಲಿ ಕಾರ್ಯದಲ್ಲಿ ಏಕೆ ತರುವುದಿಲ್ಲ! ಹಾಗೂ ಇದೇ ಸರ್ವ ಸಂಬಂಧದ ಸಮಯ ಪ್ರತಿ ಸಮಯ ಅನುಭವ ಮಾಡುತ್ತಾ ಇರುತ್ತೀರಿ ಎಂದರೆ ಕಂಪೆನಿಯನ್ ಸಹ ಆಗುತ್ತಾರೆ ಹಾಗೂ ಕಂಪನಿ ಸಹ ಸಿಗುತ್ತದೆ. ಬೇರೆ ಯಾವುದೇ ಜೊತೆಗಾರರ ಕಡೆಗೆ ಮನಸ್ಸು ಹಾಗೂ ಬುದ್ಧಿ ಹೋಗಲು ಸಾಧ್ಯವಿಲ್ಲ. ಬಾಪ್ದಾದಾರವರು ಆಫರ್ (ಅವಕಾಶ) ಕೊಡುತ್ತಿದ್ದಾರೆ- ಯಾವಾಗ ಸರ್ವ ಸಂಬಂಧ ಆಫರ್ ಮಾಡುತ್ತಿದ್ದಾರೆ ಎಂದರೆ ಸರ್ವ ಸಂಬಂಧಗಳ ಸುಖವನ್ನು ಪಡೆದುಕೊಳ್ಳಿ. ಸಂಬಂಧವನ್ನು ಕಾರ್ಯದಲ್ಲಿ ತೊಡಗಿಸಿ.

ಬಾಪ್ದಾದಾರವರು ಯಾವಾಗ ನೋಡುತ್ತಾರೆ, ಕೆಲವು ಮಕ್ಕಳು ಕೆಲವು ಸಮಯ ತಮ್ಮನ್ನು ತಾವು ಒಬ್ಬಂಟಿ ಅಥವಾ ಸ್ವಲ್ಪ ನೀರಸ ಅನುಭವ ಮಾಡುತ್ತಾರೆ ಆಗ ಬಾಪ್ದಾದಾರವರಿಗೆ ಅನುಕಂಪ ಬರುತ್ತದೆ- ಇಂತಹ ಶ್ರೇಷ್ಠ ಕಂಪನಿ ಇದ್ದರೂ, ಕಂಪೆನಿಯನ್ ಕೆಲಸದಲ್ಲಿ ಏಕೆ ತರುತ್ತಿಲ್ಲ? ನಂತರ ಏನು ಹೇಳುತ್ತಾರೆ? ವೈ-ವೈ (ಏಕೆ, ಏಕೆ) ಬಾಪ್ದಾದಾರವರು ಹೇಳಿದ್ದಾರೆ ಏಕೆ ಎಂದು ಹೇಳಬೇಡಿ, ಯಾವಾಗ ಈ ಶಬ್ದ ಬರುತ್ತದೆ, ವೈ ಎನ್ನುವುದು ನಕಾರಾತ್ಮಕವಾಗಿದೆ ಹಾಗೂ ಸಕಾರಾತ್ಮಕವಾಗಿದೆ ಫ್ಲೈ (ಹಾರುವುದು) ಏಕೆ ಏಕೆ ಎಂದು ಹೇಳಬೇಡಿ, ಹಾರುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ತಂದೆಯನ್ನು ಜೊತೆಗಾರರನ್ನಾಗಿ ಮಾಡಿಕೊಂಡು ಹಾರಿ ಆಗ ಬಹಳ ಆನಂದವಾಗುವುದು. ತಂದೆಯ ಕಂಪನಿ ಹಾಗೂ ಕಂಪೆನಿಯನ್ ಎರಡು ರೂಪದಲ್ಲಿ ಇಡೀ ದಿನ ಕಾರ್ಯದಲ್ಲಿ ತೊಡಗಿಸಿ. ಇಂತಹ ಕಂಪಾನಿಯನ್ ಮತ್ತೆ ಸಿಗುವರೇ? ಬಾಪ್ದಾದಾರವರು ಇಷ್ಟರವರೆಗೆ ಹೇಳುತ್ತಾರೆ- ಒಂದು ವೇಳೆ ನೀವು ಬುದ್ಧಿಯಿಂದ ಹಾಗೂ ಶರೀರದಿಂದ ಎರಡು ಪ್ರಕಾರದಿಂದ ದಣಿದು ಹೋಗುತ್ತೀರಿ ಎಂದರು ಸಹ ನಿಮ್ಮ ಕಂಪೆನಿಯನ್ ನಿಮಗೆ ಎರಡು ಪ್ರಕಾರದ ಮಾಲೀಶ್ ಮಾಡಲು ತಯಾರಾಗಿದ್ದಾರೆ. ಮನೋರಂಜನೆ ಮಾಡಲು ಸಹ ಎವರ್ ರೆಡಿಯಾಗಿದ್ದಾರೆ (ಸದಾ ಸಿದ್ದರಾಗಿದ್ದಾರೆ). ನಂತರ ಹದ್ದಿನ ಮನೋರಂಜನೆಯ ಅವಶ್ಯಕತೆಯೇ ಬರುವುದಿಲ್ಲ. ಈ ರೀತಿ ಉಪಯೋಗಿಸಲು ಬರುತ್ತದೆಯೇ ಅಥವಾ ದೊಡ್ಡಕ್ಕಿಂತ ದೊಡ್ಡ ಬಾಬಾ ಆಗಿದ್ದಾರೆ, ಶಿಕ್ಷಕ ಆಗಿದ್ದಾರೆ, ಸದ್ಗುರು ಆಗಿದ್ದಾರೆ... ಎಂದು ತಿಳಿಯುತ್ತೀರಾ? ಆದರೆ ಸರ್ವ ಸಂಬಂಧಗಳಿವೆ. ತಿಳಿಯಿತೆ! ಡಬಲ್ ವಿದೇಶಿಯರು?

ಒಳ್ಳೆಯದು. ಎಲ್ಲರೂ ಜನ್ಮದಿನವನ್ನು ಆಚರಿಸಲು ಬಂದಿದ್ದೀರಿ! ಆಚರಿಸಬೇಕಲ್ಲವೇ! ಒಳ್ಳೆಯದು ಯಾವಾಗ ಜನ್ಮದಿನವನ್ನು ಆಚರಿಸುತ್ತೀರಿ, ಯಾರ ಜನ್ಮದಿನವಾಗಿರುತ್ತದೆ ಅವರಿಗೆ ಉಡುಗೊರೆಯನ್ನು ಕೊಡುತ್ತೀರಲ್ಲವೇ ಅಥವಾ ಕೊಡುವುದಿಲ್ಲವೇ? (ಕೊಡುತ್ತೇವೆ) ಹಾಗಾದರೆ ಇಂದು ನೀವೆಲ್ಲರೂ ತಂದೆಯ ಜನ್ಮ ದಿನವನ್ನು ಆಚರಿಸಲು ಬಂದಿದ್ದೀರಿ. ಹೆಸರಂತೂ ಶಿವರಾತ್ರಿ ಆಗಿದೆ, ಆದರೆ ತಂದೆಯ ಜನ್ಮದಿನವನ್ನು ವಿಶೇಷವಾಗಿ ಆಚರಿಸಲು ಬಂದಿದ್ದೀರಿ. ಆಚರಿಸಲು ಬಂದಿದ್ದೀರಲ್ಲವೇ? ಹಾಗಾದರೆ ಜನ್ಮದಿನದ ಇಂದಿನ ಉಡುಗೊರೆ ಏನು ಕೊಡುತ್ತಿದ್ದೀರಿ? ಅಥವಾ ಕೇವಲ ಮೇಣದ ಬತ್ತಿಯನ್ನು ಉಳಿಸಿ, ಕೇಕ್ ಕಟ್ ಮಾಡುತ್ತೀರಾ... ಹೀಗೆ ಆಚರಿಸುತ್ತೀರಾ? ಇಂದು ಯಾವ ಉಡುಗೊರೆಯನ್ನು ಕೊಟ್ಟಿದ್ದೀರಿ? ಅಥವಾ ನಾಳೆ ಕೊಡುತ್ತೀರಾ? ಬಲೆ ಚಿಕ್ಕದನ್ನೇ ಕೊಡಿ, ಅಥವಾ ದೊಡ್ಡದನ್ನೇ ಕೊಡಿ, ಆದರೆ ಗಿಫ್ಟ್ ಅಂತೂ ಕೊಡಬೇಕಲ್ಲವೇ! ಹಾಗಾದರೆ ಏನು ಕೊಟ್ಟಿದ್ದೀರಿ? ಯೋಚಿಸುತ್ತಿದ್ದಾರೆ. ಒಳ್ಳೆಯದು ಕೊಡಬೇಕೆ? ಕೊಡಲು ತಯಾರಾಗಿದ್ದೀರಾ? ಬಾಪ್ದಾದಾರವರು ಏನನ್ನು ಹೇಳುತ್ತಾರೆ ಅದನ್ನು ಕೊಡುತ್ತೀರಾ ಅಥವಾ ತಾವು ತಮ್ಮ ಇಚ್ಛೆಯಿಂದ ಕೊಡುತ್ತೀರಾ? ಏನು ಮಾಡುವಿರಿ? ಬಾಪ್ದಾದಾರವರು ಏನನ್ನು ಹೇಳುತ್ತಾರೆ ಅದನ್ನು ಕೊಡುತ್ತೀರಾ ಅಥವಾ ತಮ್ಮ ಇಚ್ಛೆಯಿಂದ ಕೊಡುತ್ತೀರಾ? (ಬಾಪ್ದಾದಾರವರು ಏನನ್ನು ಹೇಳುತ್ತಾರೆ ಅದನ್ನು ಕೊಡುತ್ತೇವೆ) ಯೋಚಿಸಿ, ಸ್ವಲ್ಪ ಸಾಹಸ ಇಡಬೇಕಾಗುತ್ತದೆ. ಸಾಹಸ ಇದೆಯೇ? ಮಧುಬನದವರಿಗೆ ಸಾಹಸ ಇದೆಯೇ? ಡಬಲ್ ವಿದೇಶಿಯರಿಗೆ ಸಾಹಸ ಇದೆಯೇ? ಕೈಯಂತು ಬಹಳ ಚೆನ್ನಾಗಿ ಎತ್ತುತ್ತಿದ್ದಾರೆ. ಒಳ್ಳೆಯದು. ಶಕ್ತಿಯರಲ್ಲಿ, ಪಾಂಡವರಲ್ಲಿ ಸಾಹಸ ಇದೆಯೇ? ಭಾರತದವರಲ್ಲಿ ಸಾಹಸ ಇದೆಯೇ? ಬಹಳ ಒಳ್ಳೆಯದು. ಇದೇ ತಂದೆಗೆ ಶುಭಾಷಯ ಸಿಕ್ಕಿಬಿಟ್ಟಿತ್ತು. ಚೆನ್ನಾಗಿ, ಹೇಳುತ್ತೀರಿ. ಇದಂತೂ ಯೋಚಿಸಬೇಕಾಗುತ್ತದೆ ಎಂದು ಹೇಳುವುದಿಲ್ಲ ತಾನೇ? ಮಾಡುತ್ತೇನೆ,ನೋಡುತ್ತೇನೆ ಎಂದು ಭವಿಷ್ಯದ ಮೇಲೆ ಹಾಕಬಾರದು. ಒಂದು ಮಾತನ್ನು ಬಾಪ್ದಾದಾರವರು ಬಹಳಷ್ಟು ನೋಡಿದರು. ಕಡಿಮೆ ಜನರಲ್ಲಿ ಅಲ್ಲ. ಬಹಳಷ್ಟು ಏನನ್ನು ನೋಡಿದರು? ಯಾವಾಗ ಯಾವುದೇ ಪರಿಸ್ಥಿತಿ ಸಮ್ಮುಖದಲ್ಲಿ ಬರುತ್ತದೆ ಆಗ ಬಹಳಷ್ಟುರಲ್ಲಿ ಒಂದು, ಎರಡು, ಮೂರು ನಂಬರಿನಲ್ಲಿ ಕ್ರೋಧದ ಅಂಶ ಬಯಸದೇ ಇದ್ದರೂ ಸಹ ಬಂದುಬಿಡುತ್ತದೆ. ಕೆಲವರಲ್ಲಿ ಮಹಾನ್ ಕ್ರೋಧ ರೂಪದಲ್ಲಿ ಇರುತ್ತದೆ, ಕೆಲವರಲ್ಲಿ ಆವೇಶದ ರೂಪದಲ್ಲಿ ಇರುತ್ತದೆ, ಕೆಲವರಲ್ಲಿ ಮೂರನೆಯ ನಂಬರ್ ಸಿಟ್ಟಾಗುವದ ರೂಪದಲ್ಲಿ ಇರುತ್ತದೆ. ಸಿಟ್ಟಾಗುವುದನ್ನು ತಿಳಿದಿದ್ದೀರಾ? ಅದು ಸಹ ಕ್ರೋಧದ ಅಂಶವೇ ಆಗಿದೆ, ಹಗುರವಾಗಿದೆ. ಮೂರನೇ ನಂಬರ್ ಆಗಿರುವ ಕಾರಣ. ಮೊದಲನೆಯದು ಜೋರಾಗಿದೆ, ಎರಡನೆಯದು ಅದಕ್ಕಿಂತ ಸ್ವಲ್ಪ ಕಡಿಮೆ. ಭಾಷೆಯಂತೂ ಇತ್ತೀಚೆಗೆ ಎಲ್ಲರದ್ದು ರಾಯಲ್ ಆಗಿಬಿಟ್ಟಿದೆ. ಹಾಗಾದರೆ ರಾಯಲ್ ರೂಪದಲ್ಲಿ ಏನು ಹೇಳುತ್ತಾರೆ? ಮಾತೇ ಈ ರೀತಿ ಇತ್ತು, ಆವೇಶವಂತೂ ಬಂದೇ ಬರುತ್ತದೆ. ಹಾಗಾದರೆ ಬಾಪ್ದಾದಾರವರು ಇಂದು ಎಲ್ಲರಿಂದ ಈ ಉಡುಗೊರೆಯನ್ನು ಪಡೆಯಲು ಬಯಸುತ್ತಾರೆ- ಕ್ರೋಧವನ್ನಂತು ಬಿಡಿ ಆದರೆ ಕ್ರೋಧದ ಅಂಶ ಮಾತ್ರವೂ ಸಹ ಇರಬಾರದು. ಏಕೆ? ಕ್ರೋಧದಲ್ಲಿ ಬಂದು ಡಿಸ್ಸರ್ವಿಸ್ ಮಾಡಿಬಿಡುತ್ತಾರೆ. ಏಕೆಂದರೆ ಕ್ರೋಧ ನಡೆಯುವುದು ಇಬ್ಬರ ಮಧ್ಯದಲ್ಲಿ. ಒಬ್ಬರೇ ಇರುವಾಗ ಬರುವುದಿಲ್ಲ, ಇಬ್ಬರ ಮಧ್ಯದಲ್ಲಿ ಬರುತ್ತದೆ ಎಂದರೆ ಕಾಣಿಸುತ್ತದೆ. ಭಲೆ ಮನಸ್ಸಿನಲ್ಲಿ ಯಾರ ಪ್ರತಿಯಾದರೂ ತಿರಸ್ಕಾರದ ಭಾವದ ಅಂಶವೂ ಸಹ ಇರುತ್ತದೆ ಎಂದರೆ ಮನಸ್ಸಿನಲ್ಲಿಯೂ ಆ ಆತ್ಮದ ಪ್ರತಿ ಆವೇಶ ಅವಶ್ಯವಾಗಿ ಬರುತ್ತದೆ. ಬಾಪ್ದಾದಾರವರು ಈ ಡಿಸ್ಸರ್ವಿಸ್ ನ ಕಾರಣ ಇಷ್ಟವಾಗುವುದಿಲ್ಲ. ಕ್ರೋಧದ ಭಾವ ಅಂಶ ಮಾತ್ರವೂ ಉತ್ಪನ್ನವಾಗದಿರಲಿ. ಯಾವ ರೀತಿ ಬ್ರಹ್ಮಚರ್ಯದ ಮೇಲೆ ಗಮನ ಕೊಡುತ್ತೀರಿ, ಇದೇ ರೀತಿ ಕಾಮ ಮಹಾ ಶತ್ರು, ಕ್ರೋಧ ಮಹಾ ಶತ್ರು ಎಂದು ಗಾಯನವಿದೆ. ಶುಭ ಭಾವ, ಪ್ರೇಮ ಭಾವ ಅದು ಇಮರ್ಜ್ ಆಗುವುದಿಲ್ಲ. ನಂತರ ಮೂಡ್ ಆಫ್(ಬೇಜಾರು) ಮಾಡಿಬಿಡುತ್ತಾರೆ. ಆ ಆತ್ಮನಿಂದ ಬದಿಗೆ ಸರಿದು ಬಿಡುತ್ತಾರೆ. ಎದುರಿಗೆ ಬರುವುದಿಲ್ಲ, ಮಾತನಾಡುವುದಿಲ್ಲ. ಅವರ ಮಾತನ್ನು ಒಪ್ಪಿಕೊಳ್ಳುವುದಿಲ್ಲ. ಮುಂದುವರೆಯಲು ಬಿಡುವುದಿಲ್ಲ. ಇದೆಲ್ಲವೂ ಹೊರಗಿನವರಿಗೂ ತಿಳಿಯುತ್ತದೆ ನಂತರ ಹೇಳಿಬಿಡುತ್ತಾರೆ, ಇಂದು ಇವರ ಆರೋಗ್ಯ ಸರಿ ಇಲ್ಲ, ಬೇರೆ ಏನೂ ಇಲ್ಲ. ಹಾಗಾದರೆ ಜನ್ಮದಿನದಂದು ಈ ಉಡುಗೊರೆಯನ್ನು ಕೊಡಲು ಸಾಧ್ಯವೇ? ಯಾರು ಪ್ರಯತ್ನ ಪಡುತ್ತೇವೆ ಎಂದು ತಿಳಿಯುತ್ತಾರೆ, ಅವರು ಕೈ ಎತ್ತಿ. ಉಡುಗೊರೆ ಕೊಡುವುದಕ್ಕಾಗಿ ಯೋಚಿಸುವಿರಿ, ಪ್ರಯತ್ನ ಪಡುವಿರಿ ಅವರು ಕೈ ಎತ್ತಿ. ಸತ್ಯ ಹೃದಯದ ಮೇಲೆ ಸಾಹೇಬರು ಒಪ್ಪಿಕೊಳ್ಳುತ್ತಾರೆ. (ಕೆಲವು ಸಹೋದರ ಸಹೋದರಿಯರು ನಿಂತುಕೊಂಡರು) ನಿಧಾನವಾಗಿ ನಿಂತುಕೊಳ್ಳುತ್ತಿದ್ದಾರೆ. ಸತ್ಯ ಹೇಳಿದ್ದಕ್ಕಾಗಿ ಶುಭಾಷಯಗಳು. ಒಳ್ಳೆಯದು ಯಾರು ಪ್ರಯತ್ನ ಮಾಡುತ್ತೇವೆ ಎಂದು ಹೇಳಿರುವಿರಿ ಸರಿ ಭಲೇ ಪ್ರಯತ್ನ ಪಡಿ ಆದರೆ ಪ್ರಯತ್ನಕ್ಕಾಗಿ ಎಷ್ಟು ಸಮಯ ಬೇಕು? ಒಂದು ತಿಂಗಳು ಬೇಕೆ, ಆರು ತಿಂಗಳು ಬೇಕೆ, ಎಷ್ಟು ಬೇಕು? ಬಿಡುತ್ತೀರಾ ಅಥವಾ ಬಿಡುವ ಲಕ್ಷವೇ ಇಲ್ಲವೇ? ಯಾರು ಪ್ರಯತ್ನ ಪಡುತ್ತೇವೆ ಎಂದು ಹೇಳಿರುವಿರಿ ಅವರು ಮತ್ತೆ ಎದ್ದೇಳಿ. ಯಾರು ತಿಳಿಯುತ್ತೀರಿ- ನಾವು ಎರಡು ಮೂರು ತಿಂಗಳಿನಲ್ಲಿ ಪ್ರಯತ್ನಪಟ್ಟು ಬಿಡುತ್ತೇವೆ ಅವರು ಕುಳಿತುಕೊಳ್ಳಿ. ಹಾಗೂ ಯಾರು ತಿಳಿಯುತ್ತೀರಿ ಆರು ತಿಂಗಳು ಬೇಕು, ಒಂದು ವೇಳೆ ಆರು ತಿಂಗಳು ಪೂರ್ತಿಯಾಗಿ ಬೇಕಾದರೂ ಸಹ ಕಡಿಮೆ ಮಾಡಿ, ಈ ಮಾತನ್ನು ಬಿಡಬೇಡಿ ಏಕೆಂದರೆ ಇದು ಬಹಳ ಅವಶ್ಯಕವಾಗಿದೆ. ಈ ಡಿಸ್ಸರ್ವಿಸ್ ಕಾಣಿಸುತ್ತದೆ. ಮುಖದಿಂದ ಹೇಳಬೇಡಿ, ಚಹರೆ ಹೇಳುತ್ತದೆ ಆದ್ದರಿಂದ ಯಾರೆಲ್ಲಾ ಸಾಹಸವನ್ನು ಇಟ್ಟುಕೊಂಡಿದ್ದೀರಿ ಅವರೆಲ್ಲರ ಮೇಲೆ ಬಾಪ್ದಾದಾರವರು ಜ್ಞಾನ, ಪ್ರೇಮ, ಸುಖ ಶಾಂತಿಯ ಮುತ್ತುಗಳ ಮಳೆಯನ್ನು ಸುರಿಸುತ್ತಿದ್ದಾರೆ. ಒಳ್ಳೆಯದು.

ಬಾಪ್ದಾದಾರವರು ರಿಟರ್ನ್ ಉಡುಗೊರೆಯಲ್ಲಿ ಎಲ್ಲರಿಗೂ ಈ ವಿಶೇಷ ವರದಾನವನ್ನು ಕೊಡುತ್ತಿದ್ದಾರೆ- ಯಾವಾಗಲೂ ತಪ್ಪಾಗಿಯೂ, ಬಯಸದೆ ಇದ್ದರೂ ಎಂದಾದರೂ ಕ್ರೋಧ ಬಂದುಬಿಡುತ್ತದೆ ಎಂದರೆ ಕೇವಲ ಹೃದಯದಿಂದ "ಮಧುರ ಬಾಬಾ" ಶಬ್ದವನ್ನು ಹೇಳಿರಿ, ಆಗ ಬಾಬಾರವರ ಎಕ್ಸ್ ಟ್ರಾ (ಹೆಚ್ಚು) ಸಹಯೋಗ ಸಾಹಸದವರಿಗೆ ಅವಶ್ಯವಾಗಿ ಸಿಗುತ್ತಾ ಇರುತ್ತದೆ. ಮಧುರ ಬಾಬಾ ಎಂದು ಹೇಳಿ, ಕೇವಲ ಬಾಬಾ ಎಂದು ಹೇಳಬೇಡಿ, "ಮಧುರ ಬಾಬಾ" ಆಗ ಸಹಯೋಗ ಸಿಗುವುದು, ಅವಶ್ಯವಾಗಿ ಸಿಗುವುದು ಏಕೆಂದರೆ ಲಕ್ಷ್ಯವನ್ನು ಇಟ್ಟುಕೊಂಡಿದ್ದೀರಿ ಅಲ್ಲವೇ. ಎಂದ ಮೇಲೆ ಲಕ್ಷ್ಯದಿಂದ ಲಕ್ಷಣ ಬರಲೇಬೇಕು. ಮಧುಬನದವರು ಕೈಯತ್ತಿ. ಒಳ್ಳೆಯದು. ಮಾಡಲೇಬೇಕು(ಹೌದು) ಶುಭಾಷಯಗಳು. ಬಹಳ ಒಳ್ಳೆಯದು. ಇಂದು ವಿಶೇಷವಾಗಿ ಮಧುಬನದವರಿಗೆ ಟೋಲಿ ಕೊಡುತ್ತೇವೆ. ಬಹಳ ಪರಿಶ್ರಮ ಪಡುತ್ತಾರೆ. ಕ್ರೋಧಕ್ಕಾಗಿ ಕೊಡುವುದಿಲ್ಲ, ಪರಿಶ್ರಮಕ್ಕಾಗಿ ಕೊಡುತ್ತೇವೆ. ಎಲ್ಲರೂ ತಿಳಿಯುತ್ತಾರೆ ಕೈ ಎತ್ತಿದ್ದೇವೆ, ಆದ್ದರಿಂದ ಟೋಲಿ ಕೊಡುತ್ತಾರೆ. ಬಹಳ ಚೆನ್ನಾಗಿ ಪರಿಶ್ರಮ ಪಡುತ್ತಿರಿ. ಎಲ್ಲರನ್ನೂ ಸೇವೆಯಿಂದ ಸಂತುಷ್ಟರನ್ನಾಗಿ ಮಾಡುವುದು, ಇದಂತೂ ಮಧುಬನದ ಉದಾಹರಣೆಯಾಗಿದೆ ಆದ್ದರಿಂದ ಇಂದು, ಬಾಯಿ ಸಿಹಿ ಮಾಡಿಸುತ್ತೇವೆ. ನೀವೆಲ್ಲರೂ ಇವರ ಮಧುರ ಮುಖವನ್ನು ನೋಡಿ, ಮಧುರ ಮುಖವನ್ನಾಗಿ ಮಾಡಿಕೊಳ್ಳಿ, ಖುಷಿಯಾಗುತ್ತದೆ ಅಲ್ಲವೇ. ಇದು ಸಹ ಬ್ರಾಹ್ಮಣ ಪರಿವಾರದ ಒಂದು ಕಲ್ಚರ್ ಆಗಿದೆ (ರೀತಿ). ಇತ್ತೀಚೆಗೆ ನೀವೆಲ್ಲರೂ ಕಲ್ಚರ್ ಆಫ್ ಪೀಸ್ ನ ಕಾರ್ಯಕ್ರಮ ಮಾಡುತ್ತಿದ್ದೀರಲ್ಲವೇ. ಎಂದ ಮೇಲೆ ಇದು ಸಹ ಫಸ್ಟ್ ನಂಬರ್ ನ ಕಲ್ಚರ್ ಆಗಿದೆ- "ಬ್ರಾಹ್ಮಣ ಕುಲದ ಸಭ್ಯತೆ". ಬಾಪ್ದಾದಾರವರು ನೋಡಿದ್ದಾರೆ ಯಾವಾಗ ದಾದಿ ಉಡುಗೊರೆಯನ್ನು ಕೊಡುತ್ತಾರೆ, ಅದರಲ್ಲಿ ಒಂದು ಬೋರಿಯ [ಅದೃಷ್ಟ] ತಟ್ಟೆ ಇರುತ್ತದೆ ಅದರಲ್ಲಿ ಬರೆದಿರುತ್ತದೆ- "ಕಡಿಮೆ ಮಾತನಾಡಿ, ನಿಧಾನವಾಗಿ ಮಾತನಾಡಿ, ಮಧುರವಾಗಿ ಮಾತನಾಡಿ". ಹಾಗಾದರೆ ಇಂದು ಬಾಪ್ದಾದಾರವರು ಈ ಉಡುಗೊರೆಯನ್ನು ಕೊಡುತ್ತಿದ್ದಾರೆ, ಬೋರಿಯ ತಟ್ಟೆಯನ್ನು ಕೊಡುವುದಿಲ್ಲ, ವರದಾನದಲ್ಲಿ ಈ ಶಬ್ದವನ್ನು ಕೊಡುತ್ತಿದ್ದಾರೆ. ಪ್ರತಿಯೊಂದು ಬ್ರಾಹ್ಮಣರ ಚಹರೆ ಹಾಗೂ ಚಲನೆಯಲ್ಲಿ ಬ್ರಾಹ್ಮಣ ಕಲ್ಚರ್ ಪ್ರತ್ಯಕ್ಷವಾಗಲಿ. ಕಾರ್ಯಕ್ರಮದಲ್ಲಂತೂ ಮಾಡುತ್ತೀರಿ, ಭಾಷಣವನ್ನು ಮಾಡುತ್ತೀರಿ ಆದರೆ ಮೊದಲು ಸ್ವಯಂನಲ್ಲಿ ಈ ಸಭ್ಯತೆಯ ಅವಶ್ಯಕತೆ ಇದೆ. ಪ್ರತಿಯೊಬ್ಬ ಬ್ರಾಹ್ಮಣ ಮುಗುಳ್ನಗುತ್ತಾ ಪ್ರತಿಯೊಬ್ಬರ ಜೊತೆಯು ಸಂಪರ್ಕದಲ್ಲಿ ಬರಲಿ. ಕೆಲವರ ಜೊತೆ ಒಂದು ರೀತಿ, ಇನ್ನೊಬ್ಬರೊಂದಿಗೆ ಇನ್ನೊಂದು ರೀತಿ, ಅಲ್ಲ. ಅನ್ಯರನ್ನು ನೋಡಿ ತಮ್ಮ ಕಲ್ಚರ್ ಬಿಡಬೇಡಿ. ಕಳೆದು ಹೋದ ಮಾತನ್ನು ಮರೆತು ಹೋಗಿ. ಹೊಸ ಸಂಸ್ಕಾರ ಸಭ್ಯತೆಯನ್ನು ಜೀವನದಲ್ಲಿ ತೋರಿಸಿ. ಈಗ ತೋರಿಸಬೇಕು, ಸರಿಯೇ! (ಎಲ್ಲರೂ ಸರಿ ಎಂದು ಹೇಳಿದರು).

ಬಹಳ ಒಳ್ಳೆಯದು, ಡಬಲ್ ವಿದೇಶಿಯರು ಬಹಳಷ್ಟು ಮಕ್ಕಳು ಸರಿ ಎಂದು ಹೇಳುವುದರಲ್ಲಿ ಬಹಳ ಚೆನ್ನಾಗಿದ್ದಾರೆ. ಒಳ್ಳೆಯದು. ಭಾರತ ವಾಸಿಯರದಂತು ಒಂದು ಸೌಜನ್ಯವಾಗಿದೆ- "ಸರಿ ಎಂದು ಹೇಳುವುದು". ಕೇವಲ ಮಾಯೆಗೆ ಇಲ್ಲ ಎಂದು ಹೇಳಿ, ಬಾಕಿ ಎಲ್ಲಾ ಆತ್ಮರಿಗೂ ಸರಿ ಎಂದು ಹೇಳಿ. ಮಾಯೆಗೆ- ಇಲ್ಲ ಇಲ್ಲ ಎಂದು ಹೇಳಿ. ಒಳ್ಳೆಯದು. ಎಲ್ಲರೂ ಜನ್ಮ ದಿವಸವನ್ನು ಆಚರಿಸಿದಿರಾ? ಆಚರಿಸಿದರು, ಉಡುಗೊರೆಯನ್ನು ಕೊಟ್ಟಿದ್ದೀರಿ, ಉಡುಗೊರೆಯನ್ನು ಪಡೆದಿದ್ದೀರಿ.

ಒಳ್ಳೆಯದು. ನಿಮ್ಮ ಜೊತೆಜೊತೆಗೆ ಅನ್ಯ ಬೇರೆ ಬೇರೆ ಸ್ಥಾನಗಳಲ್ಲಿ ಸಭೆಗಳು ಸೇರಿವೆ. ಕೆಲವು ಚಿಕ್ಕ ಸಭೆಗಳು, ಕೆಲವು ದೊಡ್ಡ ಸಭೆಗಳು, ಎಲ್ಲರೂ ಕೇಳಿಸಿಕೊಳ್ಳುತ್ತಿದ್ದಾರೆ, ನೋಡುತ್ತಿದ್ದಾರೆ. ಅವರಿಗೂ ಸಹ ಬಾಪ್ದಾದಾರವರು ಇದನ್ನೇ ಹೇಳುತ್ತಾರೆ- ಇಂದಿನ ದಿನದ ನೀವೆಲ್ಲರೂ ಸಹ ಉಡುಗೊರೆಯನ್ನು ಕೊಟ್ಟಿದ್ದೀರೇ ಅಥವಾ ಇಲ್ಲವೇ? ಎಲ್ಲರೂ ಹೇಳುತ್ತಿದ್ದಾರೆ, ಹೌದು ಬಾಬಾ. ಒಳ್ಳೆಯದು. ದೂರ ಕುಳಿತಿದ್ದರೂ ಸಹ ಸಮ್ಮುಖದಲ್ಲಿಯೇ ಕೇಳಿಸಿಕೊಳ್ಳುತ್ತಿದ್ದಾರೆ ಏಕೆಂದರೆ ವಿಜ್ಞಾನ ದವರು ಇಷ್ಟು ಪರಿಶ್ರಮ ಪಡುತ್ತಾರೆ, ಪರಿಶ್ರಮವಂತು ಬಹಳ ಪಡುತ್ತಾರೆ ಅಲ್ಲವೇ ? ಎಲ್ಲರಿಗಿಂತ ಹೆಚ್ಚು ಲಾಭ ಬ್ರಾಹ್ಮಣರಿಗೆ ಆಗಬೇಕಾಗಿದೆ ಅಲ್ಲವೇ! ಆದ್ದರಿಂದ ಯಾವಾಗ ಸಂಗಮ ಯುಗ ಆರಂಭವಾಗಿದೆ ಆಗಿನಿಂದ ಈ ವಿಜ್ಞಾನದ ಸಾಧನೆಗಳು ಸಹ ವೃದ್ಧಿಯಾಗುತ್ತಾ ಇದೆ. ಸತ್ಯಯುಗದಲ್ಲಂತೂ ನಿಮ್ಮ ದೇವತೆಯ ರೂಪದಲ್ಲಿ ಈ ವಿಜ್ಞಾನ ಸೇವೆ ಮಾಡುವುದು ಆದರೆ ಸಂಗಮ ಯುಗದಲ್ಲಿಯೂ ಸಹ ವಿಜ್ಞಾನದ ಸಾಧನ ನೀವು ಬ್ರಾಹ್ಮಣರಿಗೆ ಸಿಗುತ್ತಿದೆ ಹಾಗೂ ಸೇವೆಯಲ್ಲಿಯೂ, ಪ್ರತ್ಯಕ್ಷತೆ ಮಾಡುವುದರಲ್ಲಿಯೂ ಸಹ ಈ ವಿಜ್ಞಾನದ ಸಾಧನ ಬಹಳ ವಿಶಾಲ ರೂಪದಲ್ಲಿ ಸಹಯೋಗಿ ಆಗುವುದು ಆದ್ದರಿಂದ ವಿಜ್ಞಾನದ ನಿಮಿತ್ತ ಆಗುವಂತಹ ಮಕ್ಕಳಿಗೂ ಸಹ ಬಾಪ್ದಾದಾರವರು ಪರಿಶ್ರಮದ ಶುಭಾಷಯಗಳು ಕೊಡುತ್ತಾರೆ.

ಬಾಕಿ ಬಾಪ್ದಾದಾರವರು ನೋಡಿದರು ಮದುಬನದಲ್ಲೂ ಸಹ ದೇಶ ವಿದೇಶದಿಂದ ಬಹಳ ಶೋಬನಿಕ- ಶೋಬನಿಕ ಕಾರ್ಡ್, ಪತ್ರ ಹಾಗೂ ಕೆಲವರ ಮುಖಾಂತರ ನೆನಪು ಪ್ರೀತಿಯ ಮೆಸೇಜ್(ಸಂದೇಶ) ಕಳುಹಿಸಿದ್ದಾರೆ. ಬಾಪ್ದಾದಾರವರೂ ಸಹ ವಿಶೇಷ ನೆನಪು ಪ್ರೀತಿ ಹಾಗೂ ಜನ್ಮ ದಿವಸದ ಪದಮ- ಪದಮ-ಪದಮ-ಪದಮ-ಪದಮ-ಪದಮದಷ್ಟು ಶುಭಾಶಯ ಕೊಡುತ್ತಿದ್ದಾರೆ. ಎಲ್ಲಾ ಮಕ್ಕಳು ಬಾಪ್ದಾದಾರವರ ನಯನಗಳ ಸಮ್ಮುಖದಲ್ಲಿ ಬರುತ್ತಿದ್ದಾರೆ. ನೀವಂತೂ ಕೇವಲ ಕಾರ್ಡ್ ನೋಡಿದ್ದೀರಿ ಆದರೆ, ಬಾಪ್ದಾದಾರವರು ಮಕ್ಕಳನ್ನು ಸಹ ನಯನಗಳಿಂದ ನೋಡುತ್ತಿದ್ದಾರೆ. ಬಹಳ ಸ್ನೇಹದಿಂದ ಕಳುಹಿಸುತ್ತಾರೆ ಹಾಗೂ ಅದೇ ಸ್ನೇಹದಿಂದ ಬಾಪ್ದಾದಾರವರು ಸ್ವೀಕಾರ ಮಾಡಿದ್ದಾರೆ. ಕೆಲವರು ತಮ್ಮ ಸ್ಥಿತಿಯನ್ನು ಸಹ ಬರೆದಿದ್ದಾರೆ ಎಂದ ಮೇಲೆ ಬಾಪ್ದಾದಾರವರು ಹೇಳುತ್ತಾರೆ ಹಾರಿ ಹಾಗೂ ಹಾರಿಸಿ. ಹಾರುವುದರಿಂದ ಎಲ್ಲಾ ಮಾತುಗಳು ಕೆಳಗೆ ಉಳಿದುಕೊಂಡು ಬಿಡುತ್ತದೆ ಹಾಗೂ ತಾವು ಸದಾ ಶ್ರೇಷ್ಠಾತಿ ಶ್ರೇಷ್ಠ ತಂದೆಯ ಜೊತೆ ಮೇಲೆ ಇರುವಿರಿ. ಸೆಕೆಂಡಿನಲ್ಲಿ ಸ್ಟಾಪ್ (ನಿಲ್ಲಿಸಿ) ಹಾಗೂ ಶಕ್ತಿಗಳ, ಗುಣಗಳ ಸ್ಟಾಕ್ ( ಜಮಾ) ಇಮರ್ಜ್ ಮಾಡಿ. ಒಳ್ಳೆಯದು.

ನಾಲ್ಕಾರು ಕಡೆಯ ಸರ್ವ ಶ್ರೇಷ್ಠ ಬ್ರಾಹ್ಮಣ ಆತ್ಮರಿಗೆ, ಸದಾ ತಂದೆಯ ಕಂಪನಿಯಲ್ಲಿ ಇರುವಂತಹ, ತಂದೆಯನ್ನು ಕಂಪೆನಿಯನ್ ಮಾಡಿಕೊಳ್ಳುವಂತಹ ಸ್ನೇಹಿ ಆತ್ಮರಿಗೆ, ಸದಾ ತಂದೆಯ ಗುಣಗಳ ಸಾಗರದಲ್ಲಿ ಸಮಾವೇಶ ಆಗುವಂತಹ ಸಮಾನ ಬಾಪ್ದಾದಾರವರ ಶ್ರೇಷ್ಠ ಆತ್ಮರಿಗೆ, ಸದಾ ಸೆಕೆಂಡ್ ನಲ್ಲಿ ಬಿಂದಿ ಇಡುವಂತಹ ಮಾಸ್ಟರ್ ಸಿಂಧು ಸ್ವರೂಪ ಆತ್ಮರಿಗೆ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಬಹಳ ಬಹಳ ಶುಭಾಷಯಗಳು, ಶುಭಾಷಯಗಳು,ಶುಭಾಷಯಗಳು. ಬಾಪ್ದಾದಾರವರು ಪ್ರತೀ ಸಮಯ, ಪ್ರತೀ ಮಗುವಿಗೆ ನಮಸ್ತೆ ಮಾಡುತ್ತಾರೆ, ಇಂದೂ ಸಹ ನಮಸ್ತೆ.

ವರದಾನ:
ಪವಿತ್ರತೆಯ ಶಕ್ತಿಶಾಲಿ ದೃಷ್ಟಿ-ವೃತ್ತಿಯ ಮೂಲಕ ಸರ್ವ ಪ್ರಾಪ್ತಿಗಳನ್ನು ಮಾಡಿಸುವ ದುಃಖಹರ್ತ ಸುಖಕರ್ತ ಭವ

ವಿಜ್ಞಾನದ ಔಷಧಿಯಲ್ಲಿ ಅಲ್ಪಕಾಲದ ಶಕ್ತಿಯಿದೆ, ಅದು ದುಃಖ-ನೋವನ್ನು ಸಮಾಪ್ತಿ ಮಾಡಿಬಿಡುತ್ತದೆ ಆದರೆ ಪವಿತ್ರತೆಯ ಶಕ್ತಿ ಅರ್ಥಾತ್ ಶಾಂತಿಯ ಶಕ್ತಿಯಲ್ಲಂತು ಆಶೀರ್ವಾದ ಶಕ್ತಿಯಾಗಿದೆ. ಈ ಪವಿತ್ರತೆಯ ಶಕ್ತಿಶಾಲಿ ದೃಷ್ಟಿ ಹಾಗೂ ವೃತ್ತಿಯು ಸದಾಕಾಲದ ಪ್ರಾಪ್ತಿ ಮಾಡಿಸುವಂತದ್ದಾಗಿದೆ ಆದ್ದರಿಂದ ತಮ್ಮ ಜಡಚಿತ್ರಗಳ ಮುಂದೆ ಓ ದಯಾಳು, ದಯೆತೋರಿಸು ಎಂದು ಹೇಳುತ್ತಾ ದಯೆ ಅಥವಾ ಆಶೀರ್ವಾದವನ್ನು ಬೇಡುತ್ತಾರೆ. ಹಾಗಾದರೆ ಯಾವಾಗ ಚೈತನ್ಯದಲ್ಲಿ ಹೀಗೆ ಮಾಸ್ಟರ್ ದುಃಖಹರ್ತ ಸುಖಕರ್ತನಾಗಿದ್ದು ದಯೆತೋರಿಸಿದ್ದಿರಿ, ಆದ್ದರಿಂದಲೆ ಭಕ್ತಿಯಲ್ಲಿ ಪೂಜೆಯಾಗುತ್ತದೆ.

ಸ್ಲೋಗನ್:
ಸಮಯದ ಸಮೀಪತೆಯನುಸಾರ ಸತ್ಯ ತಪಸ್ಸು ಅಥವಾ ಸಾಧನೆಯಿರುವುದೇ ಬೇಹದ್ದಿನ ವೈರಾಗ್ಯ.

ಸೂಚನೆ: ಇಂದು ತಿಂಗಳಿನ ಮೂರನೇ ರವಿವಾರ ಅಂತರಾಷ್ಟ್ರೀಯ ಯೋಗ ದಿನವಾಗಿದೆ, ಎಲ್ಲರೂ ಸಂಘಟನೆಯಲ್ಲಿ ಸಂಜೆ 6.30ರಿಂದ 7.30 ಗಂಟೆಯವರೆಗೆ ವಿಶೇಷ ತಮ್ಮ ಮಾಸ್ಟರ್ ದಾತಾ ಸ್ವರೂಪದಲ್ಲಿ ಸ್ಥಿತರಾಗಿ, ಸರ್ವ ಆತ್ಮರಿಗೆ ಮನಸ್ಸಾ ಮೂಲಕ ಸರ್ವ ಶಕ್ತಿಗಳ ದಾನ ಕೊಡಿ, ವರದಾನ ಕೊಡಿ, ಸಂಪನ್ನತೆಯ ಅನುಭವ ಮಾಡಿಸಿರಿ.