16.07.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನಾಟಕದ ಯಥಾರ್ಥ ಜ್ಞಾನದಿಂದಲೇ ನೀವು ಅಚಲ, ಅಡೋಲ, ಏಕರಸವಾಗಿರುತ್ತೀರಿ, ಮಾಯೆಯ ಬಿರುಗಾಳಿಗಳು ನಿಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ”

ಪ್ರಶ್ನೆ:
ದೇವತೆಗಳ ಮುಖ್ಯವಾದ ಯಾವ ಒಂದು ಗುಣವು ನೀವು ಮಕ್ಕಳಲ್ಲಿ ಸದಾ ಕಾಣಿಸಬೇಕು?

ಉತ್ತರ:
ಹರ್ಷಿತರಾಗಿರುವುದು. ದೇವತೆಗಳನ್ನು ಸದಾ ಮುಗುಳ್ನಗುತ್ತಾ ಹರ್ಷಿತರಾಗಿರುವುದನ್ನು ತೋರಿಸುತ್ತಾರೆ. ಹಾಗೆಯೇ ನೀವು ಮಕ್ಕಳೂ ಸಹ ಸದಾ ಹರ್ಷಿತರಾಗಿರಬೇಕಾಗಿದೆ. ಯಾವುದೇ ಮಾತಿರಲಿ, ಮುಗುಳ್ನಗುತ್ತಾ ಇರಿ ಎಂದೂ ಸಹ ಬೇಸರ ಅಥವಾ ಕೋಪವು ಬರಬಾರದು. ಹೇಗೆ ತಂದೆಯು ನಿಮಗೆ ಸರಿ ಮತ್ತು ತಪ್ಪಿನ ತಿಳುವಳಿಕೆಯನ್ನು ಕೊಡುತ್ತಾರೆ, ಎಂದೂ ಕೋಪಿಸಿಕೊಳ್ಳುವುದಿಲ್ಲ, ಬೇಸರವಾಗುವುದಿಲ್ಲ ಹಾಗೆಯೇ ನೀವು ಮಕ್ಕಳೂ ಸಹ ಬೇಸರವಾಗಬಾರದು.

ಓಂ ಶಾಂತಿ.
ಬೇಹದ್ದಿನ ಮಕ್ಕಳಿಗೆ ಬೇಹದ್ದಿನ ತಂದೆಯು ತಿಳಿಸುತ್ತಾರೆ. ಲೌಕಿಕ ತಂದೆಯಂತೂ ಈ ರೀತಿ ಹೇಳುವುದಿಲ್ಲ. ಅವರಿಗೆ ಹೆಚ್ಚು ಎಂದರೆ 5-7 ಮಕ್ಕಳು ಇರಬಹುದು, ಇಲ್ಲಂತೂ ಎಲ್ಲಾ ಆತ್ಮಗಳು ಪರಸ್ಪರ ಸಹೋದರರಾಗಿದ್ದೀರಿ, ಅವಶ್ಯವಾಗಿ ಅವರೆಲ್ಲರ ತಂದೆ ಇರುವರು, ನಾವೆಲ್ಲರೂ ಸಹೋದರ-ಸಹೋದರರೆಂದು ಹೇಳುತ್ತೀರಿ, ಎಲ್ಲರಿಗಾಗಿ ಹೇಳುತ್ತೀರಿ. ಯಾರೆಲ್ಲರೂ ಬರುತ್ತಾರೋ ಅವರೆಲ್ಲರಿಗಾಗಿ ನಾವು ಸಹೋದರ-ಸಹೋದರರೆಂದು ಹೇಳುತ್ತೇವೆ, ನಾಟಕದಲ್ಲಂತೂ ಎಲ್ಲರೂ ಬಂಧಿತರಾಗಿದ್ದಾರೆ, ಇದನ್ನು ಯಾರೂ ತಿಳಿದುಕೊಂಡಿಲ್ಲ. ಇದನ್ನು ತಿಳಿದುಕೊಳ್ಳದಿರುವುದೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಇದನ್ನು ತಂದೆಯೇ ಬಂದು ತಿಳಿಸುತ್ತಾರೆ. ಯಾವಾಗ ಅವರು ಕಥೆಗಳನ್ನು ತಿಳಿಸುತ್ತಾರೋ ಆಗ ಪರಮಪಿತ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆ ಈಗ ಅವರು ಯಾರು ಎನ್ನುವುದನ್ನು ತಿಳಿದುಕೊಂಡಿಲ್ಲ. ಬ್ರಹ್ಮಾ ದೇವತೆ, ವಿಷ್ಣು ದೇವತೆ, ಶಂಕರ ದೇವತೆ ಎಂದು ಹೇಳುತ್ತಾರೆ ಆದರೆ ತಿಳಿದುಕೊಂಡು ಹೇಳುವುದಿಲ್ಲ. ಬ್ರಹ್ಮಾರವರಿಗೆ ವಾಸ್ತವಿಕವಾಗಿ ದೇವತೆ ಎಂದು ಹೇಳುವುದಿಲ್ಲ, ವಿಷ್ಣುವಿಗೆ ದೇವತೆ ಎಂದು ಹೇಳಲಾಗುತ್ತದೆ. ಬ್ರಹ್ಮಾನನ್ನು ಕುರಿತು ಯಾರಿಗೂ ಗೊತ್ತಿಲ್ಲ, ವಿಷ್ಣು ದೇವತೆ ಎನ್ನುವುದು ಸರಿಯಾಗಿದೆ, ಶಂಕರನದಂತೂ ಯಾವುದೇ ಪಾತ್ರವಿಲ್ಲ. ಅವರ ಚರಿತ್ರೆಯೇ ಇಲ್ಲ. ಶಿವತಂದೆಯ ಚರಿತ್ರೆ ಇದೆ, ಅವರು ಬರುವುದೇ ಪತಿತರನ್ನು ಪಾವನ ಮಾಡಲು, ಹೊಸಪ್ರಪಂಚ ಸ್ಥಾಪನೆ ಮಾಡಲು. ಈಗ ಒಂದು ಆದಿಸನಾತನ ದೇವೀ-ದೇವತಾ ಧರ್ಮದ ಸ್ಥಾಪನೆ ಮತ್ತೆಲ್ಲಾ ಧರ್ಮಗಳ ವಿನಾಶವಾಗುತ್ತದೆ. ಎಲ್ಲರೂ ಎಲ್ಲಿಗೆ ಹೋಗುತ್ತಾರೆ? ಶಾಂತಿಧಾಮ. ಎಲ್ಲರ ಶರೀರಗಳು ವಿನಾಶವಾಗಲಿದೆ. ಹೊಸಪ್ರಪಂಚದಲ್ಲಿ ಕೇವಲ ನೀವೇ ಇರುತ್ತೀರಿ. ಯಾವುದೆಲ್ಲಾ ಮುಖ್ಯವಾದ ಧರ್ಮಗಳಿವೆಯೋ ಅವನ್ನು ನೀವು ತಿಳಿದುಕೊಂಡಿದ್ದೀರಿ. ಎಲ್ಲಾ ಧರ್ಮಗಳ ಹೆಸರನ್ನು ತೆಗೆದುಕೊಳ್ಳುವುದಿಲ್ಲ. ಚಿಕ್ಕ-ಚಿಕ್ಕ ಶಾಖೆಗಳಂತೂ ಬಹಳ ಇದೆ. ಮೊಟ್ಟಮೊದಲು ದೇವತಾಧರ್ಮ ನಂತರ ಇಸ್ಲಾಂ ಧರ್ಮ, ಈ ಮಾತುಗಳು ನೀವು ಮಕ್ಕಳ ವಿನಃ ಮತ್ತ್ಯಾರ ಬುದ್ಧಿಯಲ್ಲಿಲ್ಲ. ಈಗ ಆ ಆದಿಸನಾತನ ದೇವಿ-ದೇವತಾಧರ್ಮವು ಪ್ರಾಯಃಲೋಪವಾಗಿದೆ ಆದ್ದರಿಂದ ಆಲದಮರ ಉದಾಹರಣೆಯನ್ನು ಕೊಡುತ್ತಾರೆ. ಇಡೀ ವೃಕ್ಷವು ಹೆಮ್ಮರವಾಗಿ ನಿಂತಿದೆ ಆದರೆ ಅದರ ಬುಡವೇ ಇಲ್ಲ. ಎಲ್ಲದಕ್ಕಿಂತ ದೀರ್ಘಾಯಸ್ಸು ಈ ಆಲದಮರಕ್ಕೆ ಇರುತ್ತದೆ. ಇದರಲ್ಲಿಯೂ ಎಲ್ಲದಕ್ಕಿಂತ ಧೀರ್ಘಾಯಸ್ಸು ಆದಿಸನಾತನ ದೇವೀ-ದೇವತಾಧರ್ಮದ್ದಾಗಿದೆ. ಅದು ಯಾವಾಗ ಪ್ರಾಯಃ ಲೋಪವಾಗುತ್ತದೋ ಆಗ ತಂದೆಯು ಬಂದು ಈಗ ಒಂದು ಧರ್ಮದ ಸ್ಥಾಪನೆ ಮತ್ತು ಅನೇಕ ಧರ್ಮಗಳ ವಿನಾಶವಾಗಲಿದೆ ಎಂದು ಹೇಳುತ್ತಾರೆ. ಆದ್ದರಿಂದಲೇ ತ್ರಿಮೂರ್ತಿ ಚಿತ್ರವನ್ನು ಮಾಡಲಾಗಿದೆ ಆದರೆ ಇದರ ಅರ್ಥವನ್ನು ತಿಳಿದಿಲ್ಲ, ನೀವು ಮಕ್ಕಳಿಗೆ ಗೊತ್ತಿದೆ. ಶ್ರೇಷ್ಠಾತಿ ಶ್ರೇಷ್ಠ ಭಗವಂತನಾಗಿದ್ದಾರೆ ನಂತರ ಬ್ರಹ್ಮಾ-ವಿಷ್ಣು-ಶಂಕರ ಮತ್ತೆ ಸೃಷ್ಟಿಯಲ್ಲಿ ಬಂದಾಗ ದೇವಿ-ದೇವತೆಗಳ ವಿನಃ ಮತ್ತ್ಯಾವುದೇ ಧರ್ಮವಿಲ್ಲ. ಭಕ್ತಿಮಾರ್ಗವೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಮೊದಲು ಶಿವನ ಭಕ್ತಿ ಮಾಡುತ್ತಾರೆ ನಂತರ ದೇವತೆಗಳಿಗೆ. ಇದು ಭಾರತದ ಮಾತಾಗಿದೆ. ಉಳಿದವರೆಲ್ಲರೂ ನಮ್ಮ ಧರ್ಮ, ಮತ-ಪಂಥ ಯಾವಾಗ ಸ್ಥಾಪನೆಯಾಗುತ್ತದೆ ಎಂಬುದನ್ನು ತಿಳಿದುಕೊಂಡಿರುತ್ತಾರೆ. ಹೇಗೆ ಆರ್ಯರು ನಾವು ಬಹಳ ಹಳಬರು ಎಂದು ಹೇಳುತ್ತಾರೆ, ವಾಸ್ತವದಲ್ಲಿ ಎಲ್ಲದಕ್ಕಿಂತ ಹಳೆಯದು ಆದಿಸನಾತನ ದೇವೀ-ದೇವತಾಧರ್ಮವಾಗಿದೆ. ನೀವು ಯಾವಾಗ ವೃಕ್ಷದ ಬಗ್ಗೆ ತಿಳಿಸುತ್ತೀರೋ ಆಗ ನಮ್ಮ ಧರ್ಮವು ಇಂತಹ ಸಮಯದಲ್ಲಿ ಬರುತ್ತದೆ ಎಂದು ತಾವೇ ಅರ್ಥಮಾಡಿಕೊಳ್ಳುತ್ತಾರೆ. ಎಲ್ಲರಿಗೆ ಯಾವ ಅನಾದಿ-ಅವಿನಾಶಿ ಪಾತ್ರವು ಸಿಕ್ಕಿದೆಯೋ ಅದನ್ನು ಅಭಿನಯಿಸಬೇಕಾಗಿದೆ. ಇದರಲ್ಲಿ ಯಾರದೇ ದೋಷವಾಗಲಿ ಅಥವಾ ತಪ್ಪಿದೆ ಎಂದಾಗಲಿ ಎಂದು ಹೇಳಲು ಸಾಧ್ಯವಿಲ್ಲ. ಇದನ್ನು ಕೇವಲ ಪಾಪಾತ್ಮರು ಏಕೆ ಆದರು ಎಂಬುದಕ್ಕೆ ತಿಳಿಸಲಾಗುತ್ತದೆ ಅಷ್ಟೇ. ನಾವೆಲ್ಲಾ ಮನುಷ್ಯರು ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆ ಎಂದು ಹೇಳುತ್ತಾರೆ. ಅಂದಮೇಲೆ ಎಲ್ಲಾ ಸಹೋದರರು ಸತ್ಯಯುಗದಲ್ಲಿ ಏಕಿಲ್ಲ? ಆದರೆ ನಾಟಕದಲ್ಲಿ ಪಾತ್ರವೇ ಇಲ್ಲ. ಈ ಅನಾದಿ ನಾಟಕವು ಮಾಡಲ್ಪಟ್ಟಿದೆ, ಇದರಲ್ಲಿ ನಿಶ್ಚಯವಿಡಿ. ಮತ್ತ್ಯಾವುದೇ ಮಾತನ್ನು ಹೇಳಬೇಡಿ. ಇದು ಹೇಗೆ ತಿರುಗುತ್ತದೆ ಎಂದು ಚಕ್ರವನ್ನು ತೋರಿಸಿದ್ದಾರೆ. ಕಲ್ಪವೃಕ್ಷದ ಚಿತ್ರವೂ ಇದೆ ಆದರೆ ಇದರ ಆಯಸ್ಸು ಎಷ್ಟು ಎಂದು ಯಾರಿಗೂ ಗೊತ್ತಿಲ್ಲ. ತಂದೆಯು ಯಾರದೇ ನಿಂದನೆ ಮಾಡುತ್ತಿಲ್ಲ. ಇದಂತೂ ಕೇವಲ ತಿಳಿಸಲಾಗುತ್ತದೆ, ನಿಮಗೂ ತಿಳಿಸುತ್ತಾರೆ - ನೀವು ಎಷ್ಟು ಪಾವನರಾಗಿದ್ದಿರಿ ಈಗ ಪತಿತರಾಗಿದ್ದೀರಿ ಆದ್ದರಿಂದ ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತೀರಿ. ಮೊದಲು ನೀವು ಎಲ್ಲರೂ ಪಾವನರಾಗಬೇಕಾಗಿದೆ ನಂತರ ನಂಬರ್ವಾರ್ ಪಾತ್ರವನ್ನು ಅಭಿನಯಿಸಲು ಬರಬೇಕಾಗಿದೆ. ಆತ್ಮಗಳು ಎಲ್ಲರೂ ಮೇಲೆ ಇರುತ್ತಾರೆ. ತಂದೆಯು ಅಲ್ಲಿಯೇ ಇರುತ್ತಾರೆ ನಂತರ ಬನ್ನಿ ಎಂದು ಅವರನ್ನು ಕರೆಯುತ್ತೀರಿ. ಹೀಗೆ ಕರೆಯುವುದರಿಂದ ಅವರು ಬರುವುದಿಲ್ಲ. ತಂದೆಯು ಹೇಳುತ್ತಾರೆ - ನಾಟಕದಲ್ಲಿ ನನ್ನ ಪಾತ್ರ ನೊಂದಾವಣೆಯಾಗಿದೆ. ಹೇಗೆ ಹದ್ದಿನ ನಾಟಕದಲ್ಲಿ ದೊಡ್ಡ-ದೊಡ್ಡ ಮುಖ್ಯ ಪಾತ್ರಧಾರಿಗಳ ಪಾತ್ರವಿರುತ್ತದೆ. ಇದು ಬೇಹದ್ದಿನ ನಾಟಕವಾಗಿದೆ. ಎಲ್ಲರೂ ನಾಟಕದ ಬಂಧನದಲ್ಲಿ ಬಂಧಿತರಾಗಿದ್ದಾರೆ, ಅಂದರೆ ಇದರ ಅರ್ಥ ಹಗ್ಗಗಳಲ್ಲಿ ಬಂಧಿತರಾಗಿದ್ದಾರೆಂದಲ್ಲ. ಇದನ್ನು ತಂದೆಯು ಹೋಲಿಕೆ ಮಾಡಿ ತಿಳಿಸುತ್ತಾರೆ. ಅದು ಜಡ ವೃಕ್ಷವಾಗಿರುತ್ತದೆ. ಒಂದುವೇಳೆ ಬೀಜವು ಚೈತನ್ಯವಾಗಿದ್ದರೆ ಈ ವೃಕ್ಷವು ಹೇಗೆ ದೊಡ್ದದಾಗಿ ಫಲ ಕೊಡುತ್ತದೆ ಎಂದು ಅದಕ್ಕೆ ತಿಳಿಯುತ್ತದೆಯಲ್ಲವೇ. ಇವರಂತೂ (ತಂದೆ) ಚೈತನ್ಯ ಬೀಜ, ಈ ಮನುಷ್ಯ ಸೃಷ್ಟಿ ರೂಪಿ ವೃಕ್ಷದ ಚೈತನ್ಯ ಬೀಜವಾಗಿದ್ದಾರೆ, ಇದಕ್ಕೆ ಉಲ್ಟಾ ವೃಕ್ಷವೆಂದು (ತಲೆ ಕೆಳಗಾಗಿ) ಹೇಳುತ್ತಾರೆ. ತಂದೆಯು ಜ್ಞಾನಸಾಗರನಾಗಿದ್ದಾರೆ, ಅವರಿಗೆ ಇಡೀ ವೃಕ್ಷದ ಜ್ಞಾನವಿದೆ, ಇದು ಅದೇ ಗೀತಾಜ್ಞಾನವಾಗಿದೆ. ಯಾವುದೇ ಹೊಸ ಮಾತಲ್ಲ. ಇಲ್ಲಿ ತಂದೆ ಯಾವುದೇ ಶ್ಲೋಕಗಳನ್ನು ಪಟಿಸುವುದಿಲ್ಲ. ಅವರಂತೂ ಗ್ರಂಥಗಳನ್ನು ಓದಿ ಅರ್ಥವನ್ನು ತಿಳಿಸುತ್ತಾರೆ. ತಂದೆಯು ತಿಳಿಸುತ್ತಾರೆ - ಇದು ವಿದ್ಯೆಯಾಗಿದೆ, ಇದರಲ್ಲಿ ಶ್ಲೋಕ ಮೊದಲಾದವುಗಳ ಅವಶ್ಯಕತೆ ಇಲ್ಲ. ಆ ಶಾಸ್ತ್ರಗಳ ವಿದ್ಯೆಯಲ್ಲಿ ಯಾವುದೇ ಗುರಿ-ಉದ್ದೇಶವಿಲ್ಲ. ಜ್ಞಾನ, ಭಕ್ತಿ, ವೈರಾಗ್ಯವೆಂದು ಹೇಳುತ್ತಾರೆ. ಈ ಹಳೆಯ ಪ್ರಪಂಚದ ವಿನಾಶವಾಗುತ್ತದೆ. ಸನ್ಯಾಸಿಗಳದ್ದು ಹದ್ದಿನ ವೈರಾಗ್ಯವಾಗಿದೆ, ನಿಮ್ಮದು ಬೇಹದ್ದಿನ ವೈರಾಗ್ಯವಾಗಿದೆ. ಶಂಕರಾಚಾರ್ಯರು ಬಂದಾಗ ಅವರು ಗೃಹಸ್ಥವನ್ನು ತ್ಯಜಿಸುವ ವೈರಾಗ್ಯವನ್ನು ಕಲಿಸುತ್ತಾರೆ. ಅವರೂ ಸಹ ಪ್ರಾರಂಭದಲ್ಲಿ ಶಾಸ್ತ್ರ ಮೊದಲಾದವುಗಳನ್ನು ಕಲಿಸುವುದಿಲ್ಲ. ಯಾವಾಗ ಬಹಳ ವೃದ್ಧಿ ಆಗುತ್ತದೆಯೋ ಆಗ ಶಾಸ್ತ್ರಗಳನ್ನು ರಚಿಸಲು ಪ್ರಾರಂಭಿಸುತ್ತಾರೆ. ಮೊಟ್ಟಮೊದಲಂತೂ ಧರ್ಮ ಸ್ಥಾಪನೆ ಮಾಡುವವರು ಒಬ್ಬರೇ ಇರುತ್ತಾರೆ. ನಂತರ ನಿಧಾನ-ನಿಧಾನವಾಗಿ ವೃದ್ಧಿ ಹೊಂದುತ್ತದೆ. ಇದನ್ನೂ ಸಹ ತಿಳಿಯಬೇಕಾಗಿದೆ. ಸೃಷ್ಟಿಯಲ್ಲಿ ಮೊಟ್ಟಮೊದಲು ಯಾವ ಧರ್ಮವಿತ್ತು, ಈಗಂತೂ ಅನೇಕ ಧರ್ಮಗಳಿವೆ. ಆದಿ ಸನಾತನ ದೇವೀ-ದೇವತಾ ಧರ್ಮವಿತ್ತು, ಅದಕ್ಕೆ ಸ್ವರ್ಗ, ಹೆವನ್ ಎಂದು ಹೇಳುತ್ತಾರೆ. ನೀವು ಮಕ್ಕಳು ರಚಯಿತ ಮತ್ತು ರಚನೆಯನ್ನು ತಿಳಿದುಕೊಳ್ಳುವುದರಿಂದ ಆಸ್ತಿಕರಾಗಿಬಿಡುತ್ತೀರಿ. ನಾಸ್ತಿಕತನದಲ್ಲಿ ಎಷ್ಟು ದುಃಖವಾಗುತ್ತದೆ, ನಿರ್ಧನಿಕರಾಗಿಬಿಡುತ್ತಾರೆ. ಪರಸ್ಪರ ಹೊಡೆದಾಡುತ್ತಾ-ಜಗಳವಾಡುತ್ತಿರುತ್ತಾರೆ. ನೀವು ಪರಸ್ಪರ ಹೊಡೆದಾಡುತ್ತಿರುತ್ತೀರಿ, ನಿಮಗೆ ಧಣಿ-ದೋಣಿ ಯಾರೂ ಇಲ್ಲವೇ ಎಂದು ಹೇಳುತ್ತಾರಲ್ಲವೇ. ಈ ಸಮಯದಲ್ಲಿ ಎಲ್ಲರೂ ನಿರ್ಧನಿಕರಾಗಿಬಿಡುತ್ತಾರೆ. ಹೊಸ ಪ್ರಪಂಚದಲ್ಲಿ ಸುಖ, ಶಾಂತಿ, ಪವಿತ್ರತೆ ಎಲ್ಲವೂ ಇತ್ತು, ಅಪಾರ ಸುಖವಿತ್ತು, ಇಲ್ಲಿ ಅಪರಮಪಾರ ದುಃಖವಿದೆ. ಅದು ಸತ್ಯಯುಗ, ಇದು ಕಲಿಯುಗದ್ದಾಗಿದೆ. ಈಗ ನಿಮ್ಮದು ಪುರುಷೋತ್ತಮ ಸಂಗಮಯುಗವಾಗಿದೆ. ಈ ಪುರುಷೋತ್ತಮ ಸಂಗಮಯುಗವು ಒಂದೇ ಇರುತ್ತದೆ. ಸತ್ಯಯುಗ-ತ್ರೇತಾದ ಸಂಗಮಕ್ಕೆ ಪುರುಷೋತ್ತಮ ಎಂದು ಹೇಳುವುದಿಲ್ಲ. ಇಲ್ಲಿ ಆಸುರರಿದ್ದಾರೆ. ಅಲ್ಲಿ ದೇವತೆಗಳಿರುತ್ತಾರೆ. ನಿಮಗೆ ಗೊತ್ತಿದೆ - ಇದು ರಾವಣನ ರಾಜ್ಯವಾಗಿದೆ. ರಾವಣನ ಮೇಲೆ ಕತ್ತೆಯ ತಲೆಯನ್ನು ತೋರಿಸುತ್ತಾರೆ. ಕತ್ತೆಯನ್ನು ಎಷ್ಟೇ ಸ್ವಚ್ಛ ಮಾಡಿ ಅದರ ಮೇಲೆ ಹೊದಿಕೆ ಹಾಕಿದರೂ ಅದು ಮತ್ತೆ ಹೋಗಿ ಮಣ್ಣಿನಲ್ಲಿ ಹೊರಳಾಡಿ ಶೃಂಗಾರವನ್ನು ಹಾಳುಮಾಡಿಕೊಳ್ಳುತ್ತದೆ. ನಿಮ್ಮ ಬಟ್ಟೆ (ಆತ್ಮ) ಯನ್ನು ತಂದೆಯು ಎಷ್ಟು ಸ್ವಚ್ಛ ಮಾಡುತ್ತಾರೆ ಮತ್ತೆ ರಾವಣರಾಜ್ಯದಲ್ಲಿ ಹೊರಳಾಡಿಬಿಟ್ಟು ಅಪವಿತ್ರರಾಗಿಬಿಡುತ್ತೀರಿ. ಆತ್ಮ ಮತ್ತು ಶರೀರ ಎರಡೂ ಅಪವಿತ್ರವಾಗಿಬಿಡುತ್ತದೆ. ತಂದೆಯು ತಿಳಿಸುತ್ತಾರೆ - ನೀವು ಎಲ್ಲಾ ಶೃಂಗಾರವನ್ನು ಹಾಳು ಮಾಡಿಕೊಂಡಿದ್ದೀರಿ. ತಂದೆಯನ್ನು ಪತಿತಪಾವನ ಎಂದು ಕರೆಯಲಾಗುತ್ತದೆ. ನಾವು ಸ್ವರ್ಣಿಮಯುಗದಲ್ಲಿ ಎಷ್ಟೊಂದು ಶೃಂಗಾರವುಳ್ಳವರಾಗಿದ್ದೆವು, ಎಷ್ಟು ರಾಜ್ಯಭಾಗ್ಯವಿತ್ತು ಎಂಬುದನ್ನು ನೀವು ದೊಡ್ಡ ಸಭೆಯಲ್ಲಿ ಹೇಳಬಹುದು ನಂತರ ಮಾಯಾ ರೂಪಿ ಧೂಳಿನಲ್ಲಿ ಹೊರಳಾಡಿ ಮೈಲಿಗೆ ಆದೆವು.

ತಂದೆಯು ಇದನ್ನು ಕುರುಡರ ನಗರವೆಂದು ಹೇಳುತ್ತಾರೆ. ಭಗವಂತನನ್ನು ಸರ್ವವ್ಯಾಪಿ ಎಂದು ಹೇಳಿದ್ದಾರೆ, ಏನೆಲ್ಲವೂ ನಡೆಯುತ್ತಾ ಹೋಗುತ್ತದೆ ಅದು ಮತ್ತೆ ಪುನರಾವರ್ತನೆ ಆಗುತ್ತದೆ. ಇದರಲ್ಲಿ ತಬ್ಬಿಬ್ಬಾಗುವ ಅವಶ್ಯಕತೆ ಇಲ್ಲ. 5000 ವರ್ಷದಲ್ಲಿ ಎಷ್ಟು ನಿಮಿಷಗಳು, ಗಂಟೆ, ಸೆಕೆಂಡುಗಳು ಎಂದು ಒಂದು ಮಗು ಎಲ್ಲಾ ಧರ್ಮಗಳ ಲೆಕ್ಕಗಳನ್ನು ಮಾಡಿ ಕಳುಹಿಸಿಕೊಟ್ಟರು. ಇದರಲ್ಲಿಯೂ ಸಹ ಬುದ್ಧಿಯೂ ವ್ಯರ್ಥವಾಗುತ್ತದೆ. ತಂದೆಯಾದರೂ ಹಾಗೆಯೇ ತಿಳಿಸಿಕೊಡುತ್ತಾರೆ, ಪ್ರಪಂಚ ಹೇಗೆ ನಡೆಯುತ್ತದೆ! ಎಂದು.

ಪ್ರಜಾಪಿತ ಬ್ರಹ್ಮಾರವರು ಗ್ರೇಟ್-ಗ್ರೇಟ್ ಗ್ರಾಂಡ್ ಫಾದರ್ ಆಗಿದ್ದಾರೆ. ಅವರ ಕರ್ತವ್ಯವನ್ನು ಯಾರೂ ತಿಳಿದುಕೊಂಡಿಲ್ಲ. ವಿರಾಟ ರೂಪದಲ್ಲಿ ಪ್ರಜಾಪಿತ ಬ್ರಹ್ಮಾರವರನ್ನು ತೋರಿಸಿಲ್ಲ. ತಂದೆ ಮತ್ತು ಬ್ರಾಹ್ಮಣರನ್ನು ಯಥಾರ್ಥ ರೀತಿಯಲ್ಲಿ ತಿಳಿದುಕೊಂಡಿಲ್ಲ. ಅವರನ್ನು ಆದಿದೇವನೆಂದು ಕರೆಯಲಾಗುತ್ತದೆ. ನಾನು ಈ ವೃಕ್ಷದ ಚೈತನ್ಯ ಬೀಜ ಸ್ವರೂಪನಾಗಿದ್ದೇನೆ ಎಂದು ತಂದೆಯು ತಿಳಿಸುತ್ತಾರೆ. ಇದು ಉಲ್ಟಾ ವೃಕ್ಷವಾಗಿದೆ. ತಂದೆಯು ಸತ್ಯವಾಗಿದ್ದಾರೆ, ಚೈತನ್ಯವಾಗಿದ್ದಾರೆ, ಜ್ಞಾನ ಸಾಗರರಾಗಿದ್ದಾರೆ. ಅವರ ಮಹಿಮೆಯನ್ನು ಮಾಡಲಾಗುತ್ತದೆ. ಆತ್ಮ ಇಲ್ಲವೆಂದರೆ ಓಡಾಡಲು ಆಗುವುದಿಲ್ಲ. ಗರ್ಭದಲ್ಲಿ 5-6 ತಿಂಗಳ ನಂತರ ಆತ್ಮವು ಪ್ರವೇಶ ಆಗುತ್ತದೆ. ಇದೂ ಸಹ ನಾಟಕದಲ್ಲಿ ಮಾಡಲ್ಪಟ್ಟಿದೆ. ಆತ್ಮ ಹೊರಟು ಹೋದರೆ ಶರೀರವು ವಿನಾಶವಾಗಿಬಿಡುತ್ತದೆ. ಆತ್ಮ ಅವಿನಾಶಿ ಆಗಿದೆ. ಅದು ಪಾತ್ರವನ್ನು ಅಭಿನಯಿಸುತ್ತದೆ ಎಂಬುದನ್ನು ತಂದೆಯು ಬಂದು ಅನುಭೂತಿಯನ್ನು ಮಾಡಿಸುತ್ತಾರೆ. ಆತ್ಮ ಎಷ್ಟು ಚಿಕ್ಕ ಬಿಂದು ಆಗಿದೆ, ಅದರಲ್ಲಿ ಅವಿನಾಶಿ ಪಾತ್ರವು ತುಂಬಲ್ಪಟ್ಟಿದೆ. ಪರಮಪಿತನು ಆತ್ಮನಾಗಿದ್ದಾರೆ. ಅವರಿಗೆ ಜ್ಞಾನ ಸಾಗರನೆಂದು ಹೇಳಲಾಗುತ್ತದೆ, ಅವರೇ ಆತ್ಮಾನುಭೂತಿಯನ್ನು ಮಾಡಿಸುತ್ತಾರೆ. ಪರಮಾತ್ಮನು ಸರ್ವಶಕ್ತಿವಂತ, ಕೋಟಿ ಸೂರ್ಯ ತೇಜೋಮಯವಾಗಿದ್ದಾರೆ ಎಂದು ಮನುಷ್ಯರು ಕೇವಲ ಹೇಳಿಬಿಡುತ್ತಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಇದೆಲ್ಲವೂ ಭಕ್ತಿ ಮಾರ್ಗದಲ್ಲಿ ವರ್ಣನೆ ಮಾಡಲಾಗಿದೆ ಮತ್ತು ಶಾಸ್ತ್ರದಲ್ಲಿ ಬರೆಯಲ್ಪಟ್ಟಿದೆ. ಅರ್ಜುನನಿಗೆ ಸಾಕ್ಷಾತ್ಕಾರವಾದಾಗ ನಾನು ಇಷ್ಟು ತೇಜಸ್ಸನ್ನು ಸಹನೆ ಮಾಡಲು ಆಗುವುದಿಲ್ಲ, ನಿಲ್ಲಿಸಿ ಎಂದು ಹೇಳಿದನು. ಈ ಮಾತು ಮನುಷ್ಯರ ಬುದ್ಧಿಯಲ್ಲಿ ಕುಳಿತುಬಿಟ್ಟಿದೆ. ಇಷ್ಟು ತೇಜೋಮಯವನ್ನು ಯಾರಲ್ಲಾದರೂ ಪ್ರವೇಶ ಮಾಡಿದರೆ ಅವರು ಸಿಡಿದುಹೋಗುವರಷ್ಟೆ. ಮನುಷ್ಯರಲ್ಲಿ ಜ್ಞಾನವಿಲ್ಲವಲ್ಲವೇ. ಆದ್ದರಿಂದ ಪರಮಾತ್ಮನು ಕೋಟಿ ಸೂರ್ಯ ತೇಜೋಮಯನಾಗಿದ್ದಾರೆ, ನಮಗೂ ಅವರ ಸಾಕ್ಷಾತ್ಕಾರ ಬೇಕು ಎಂದು ತಿಳಿಸುತ್ತಾರೆ. ಭಕ್ತಿಯ ಭಾವನೆಯು ಕುಳಿತುಬಿಟ್ಟಿರುವುದರಿಂದ ಅವರಿಗೆ ಆ ಸಾಕ್ಷಾತ್ಕಾರವು ಆಗುತ್ತದೆ, ಪ್ರಾರಂಭದಲ್ಲಿ ನಿಮ್ಮಲ್ಲಿಯೂ ಬಹಳ ಸಾಕ್ಷಾತ್ಕಾರ ಮಾಡುತ್ತಿದ್ದರು, ಕಣ್ಣುಗಳು ಕೆಂಪಾಗಿಬಿಡುತ್ತಿದ್ದವು ಆದರೆ ಸಾಕ್ಷಾತ್ಕಾರ ಮಾಡಿದವರು ಇಂದು ಇಲ್ಲವೇ ಇಲ್ಲ. ಅವೆಲ್ಲವೂ ಭಕ್ತಿಮಾರ್ಗದ ಮಾತುಗಳಾಗಿವೆ. ಆದ್ದರಿಂದ ಎಲ್ಲವನ್ನು ತಂದೆಯೇ ತಿಳಿಸುತ್ತಾರೆ. ಇದರಲ್ಲಿ ಯಾರದೇ ನಿಂದನೆಯ ಮಾತಿಲ್ಲ. ಮಕ್ಕಳು ಸದಾ ಹರ್ಷಿತರಾಗಿರಬೇಕಾಗಿದೆ. ಈ ನಾಟಕವು ಮಾಡಲ್ಪಟ್ಟಿದೆ. ನನಗೆ ಎಷ್ಟೊಂದು ನಿಂದನೆ ಮಾಡುತ್ತಾರೆ ಮತ್ತೆ ನಾನೇನು ಮಾಡುತ್ತೇನೆ. ನನಗೆ ಕೋಪ ಬರುತ್ತದೆಯೇ! ನಾಟಕದನುಸಾರ ಇವರೆಲ್ಲರೂ ಭಕ್ತಿಮಾರ್ಗದಲ್ಲಿ ಸಿಕ್ಕಿಕೊಂಡಿದ್ದಾರೆ ಎಂದು ತಿಳಿಯುತ್ತೇನೆ. ಬೇಸರ ಆಗುವ ಮಾತೇ ಇಲ್ಲ. ನಾಟಕವು ಹೀಗೇ ಮಾಡಲ್ಪಟ್ಟಿದೆ ಅಂದಾಗ ಪ್ರೀತಿಯಿಂದ ತಿಳುವಳಿಕೆ ನೀಡಲಾಗುತ್ತದೆ. ಪಾಪ! ಅಜ್ಞಾನಿಗಳು, ಅಂಧಕಾರದಲ್ಲಿ ಇದ್ದಾರೆ. ಅವರು ತಿಳಿದುಕೊಳ್ಳದಿದ್ದರೆ ತಂದೆಗೆ ದಯೆಯು ಬರುತ್ತದೆ. ಮಕ್ಕಳು ಸದಾ ಮುಗುಳ್ನಗುತ್ತಿರಬೇಕು. ಪಾಪ! ಆ ಮನುಷ್ಯರು ಸ್ವರ್ಗದ ದ್ವಾರದಲ್ಲಿ ಬರಲು ಸಾಧ್ಯವಿಲ್ಲ. ಎಲ್ಲರೂ ಶಾಂತಿಧಾಮಕ್ಕೆ ಹೋಗುವವರಾಗಿದ್ದಾರೆ, ಎಲ್ಲರೂ ಬಯಸುವುದು ಶಾಂತಿಯನ್ನೇ ಅಂದಾಗ ತಂದೆಯೇ ಸತ್ಯವನ್ನು ತಿಳಿಸುತ್ತಾರೆ. ಈಗ ನೀವು ಮಕ್ಕಳು ತಿಳಿದಿದ್ದೀರಿ - ಈ ನಾಟಕವು ಮಾಡಲ್ಪಟ್ಟಿದೆ. ನಾಟಕದಲ್ಲಿ ಪ್ರತಿಯೊಬ್ಬರಿಗೆ ಪಾತ್ರವು ಸಿಕ್ಕಿದೆ, ಇದರಲ್ಲಿ ಬಹಳ ಅಚಲ, ಸ್ಥಿರವಾದ ಬುದ್ಧಿಯು ಬೇಕು. ಎಲ್ಲಿಯವರೆಗೆ ಅಚಲ, ಅಡೋಲ, ಏಕರಸ ಸ್ಥಿತಿ ಇಲ್ಲವೋ ಅಲ್ಲಿಯವರೆಗೆ ಪುರುಷಾರ್ಥವನ್ನು ಹೇಗೆ ಮಾಡುತ್ತೀರಿ! ಏನೇ ಆಗಲಿ ಭಲೆ ಬಿರುಗಾಳಿಯೇ ಬರಲಿ ಆದರೆ ಸ್ಥಿರವಾಗಿರಬೇಕು. ಮಾಯೆಯ ಬಿರುಗಾಳಿಗಳಂತೂ ಬಹಳಷ್ಟು ಬರುತ್ತವೆ. ಕೊನೆಯವರೆಗೂ ಬರುತ್ತವೆ. ಆದ್ದರಿಂದ ಸ್ಥಿತಿಯು ಶಕ್ತಿಶಾಲಿ ಆಗಿರಬೇಕು. ಇದು ಗುಪ್ತ ಪುರುಷಾರ್ಥವಾಗಿದೆ. ಕೆಲವು ಮಕ್ಕಳು ಪುರುಷಾರ್ಥ ಮಾಡಿ ಬಿರುಗಾಳಿಯನ್ನು ದೂರ ಮಾಡಿಬಿಡುತ್ತಾರೆ. ಯಾರೆಷ್ಟು ಉತ್ತೀರ್ಣರಾಗುತ್ತಾರೋ ಅಷ್ಟು ಉತ್ತಮ ಪದವಿಯನ್ನು ಪಡೆಯುತ್ತಾರೆ. ರಾಜಧಾನಿಯಲ್ಲಿ ಅನೇಕ ಪದವಿಗಳು ಇರುತ್ತವೆ.

ಎಲ್ಲದಕ್ಕಿಂತ ಒಳ್ಳೆಯ ಚಿತ್ರವಾಗಿದೆ - ತ್ರಿಮೂರ್ತಿ, ಗೋಲ ಮತ್ತು ಕಲ್ಪವೃಕ್ಷ. ಇದು ಪ್ರಾರಂಭದಿಂದಲೇ ಮಾಡಲ್ಪಟ್ಟಿದೆ. ವಿದೇಶದಲ್ಲಿ ಸರ್ವೀಸ್ಗಾಗಿ ಇವೆರಡು ಚಿತ್ರಗಳನ್ನು ತೆಗೆದುಕೊಂಡು ಹೋಗಬೇಕಾಗಿದೆ. ಇವುಗಳ ಬಗ್ಗೆ ಬಹಳ ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ನಿಧಾನ-ನಿಧಾನವಾಗಿ ಈ ಚಿತ್ರಗಳು ಬಟ್ಟೆಯ ಮೇಲೆ ಮುದ್ರಿಸಬೇಕೆಂದು ಬಾಬಾ ಯಾವುದನ್ನು ಬಯಸುತ್ತಾರೆಯೋ ಅದೂ ಸಹ ಆಗಿಬಿಡುತ್ತದೆ. ಇದು ಹೇಗೆ ಸ್ಥಾಪನೆ ಆಗುತ್ತದೆ ಎಂಬುದನ್ನು ನೀವು ತಿಳಿಸಿಕೊಡಿ - ಇದು ಹೇಗೆ ಸ್ಥಾಪನೆಯಾಗುತ್ತಿದೆ, ನೀವೂ ಸಹ ಇದನ್ನು ತಿಳಿದುಕೊಂಡರೆ ತಮ್ಮ ಧರ್ಮದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಕ್ರಿಶ್ಚಯನ್ ಧರ್ಮದಲ್ಲಿ ನೀವು ಶ್ರೇಷ್ಠ ಪದವಿಯನ್ನು ಪಡೆಯಲು ಇಚ್ಛಿಸುತ್ತೀರೆಂದರೆ ಇದನ್ನು ಚೆನ್ನಾಗಿ ತಿಳಿದುಕೊಳ್ಳಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ನೀವು ಪುರುಷೊತ್ತಮ ಸಂಗಮಯುಗದಲ್ಲಿ ಪವಿತ್ರರಾಗಿ ಸ್ವಯಂನ ಶೃಂಗಾರ ಮಾಡಿಕೊಳ್ಳಬೇಕಾಗಿದೆ. ಎಂದೂ ಸಹ ಮಾಯೆಯ ಧೂಳಿನಲ್ಲಿ ಹೊರಳಾಡಿ ಶೃಂಗಾರವನ್ನು ಕೆಡಿಸಿಕೊಳ್ಳಬಾರದು.

2. ಈ ನಾಟಕವನ್ನು ಯಥಾರ್ಥ ರೀತಿಯಿಂದ ಅರಿತುಕೊಂಡು ತಮ್ಮ ಸ್ಥಿತಿಯನ್ನು ಅಚಲ, ಅಡೋಲ, ಸ್ಥಿರ ಮಾಡಿಕೊಳ್ಳಬೇಕಾಗಿದೆ. ಎಂದೂ ಸಹ ತಬ್ಬಿಬ್ಬಾಗಬಾರದು, ಸದಾ ಹರ್ಷಿತರಾಗಿರಬೇಕಾಗಿದೆ.

ವರದಾನ:
ಯೋಚಿಸಿ-ತಿಳುವಳಿಕೆಯಿಂದ ಪ್ರತಿ ಕರ್ಮ ಮಾಡುವಂತಹ ಪಶ್ಚಾತ್ತಾಪದಿಂದ ಮುಕ್ತ ಜ್ಞಾನಿತ್ವ ಆತ್ಮಭವ.

ಪ್ರಪಂಚದವರೂ ಹೇಳುತ್ತಾರೆ ಮೊದಲು ಯೋಚಿಸಿ ನಂತರ ಮಾಡಿ. ಯಾರು ಯೋಚಿಸಿ ಮಾಡುವುದಿಲ್ಲ, ಮಾಡಿದ ನಂತರ ಯೋಚಿಸುತ್ತಾರೆ ಅವರು ಪಶ್ಚಾತ್ತಾಪದ ರೂಪ ಆಗಿಬಿಡುತ್ತಾರೆ. ಮಾಡಿದ ನಂತರ ಯೋಚಿಸುವುದು, ಇದು ಪಶ್ಚಾತ್ತಾಪದ ರೂಪವಾಗಿದೆ ಮತ್ತು ಮೊದಲು ಯೋಚಿಸುವುದು-ಇದು ಜ್ಞಾನಿತ್ವ ಆತ್ಮಗಳ ಗುಣವಾಗಿದೆ. ದ್ವಾಪರ-ಕಲಿಯುಗದಲ್ಲಂತೂ ಅನೇಕ ಪ್ರಕಾರದ ಪಶ್ಚಾತ್ತಾಪವನ್ನು ಮಾಡುತ್ತಲೇ ಬಂದಿರಿ ಆದರೆ ಈಗ ಸಂಗಮದಲ್ಲಿ ಇಂತಹ ಯೋಚಿಸಿ ತಿಳಿದು ಸಂಕಲ್ಪ ಹಾಗೂ ಕರ್ಮ ಮಾಡಿ ಅದು ಎಂದೂ ಮನಸ್ಸಿನಲ್ಲೂ ಒಂದು ಸೆಕೆಂಡ್ ಕೂಡ ಪಶ್ಚಾತ್ತಾಪ ಆಗಬಾರದು ಆಗ ಹೇಳಲಾಗುತ್ತದೆ ಜ್ಞಾನಿತ್ವ ಆತ್ಮ.

ಸ್ಲೋಗನ್:
ದಯಾ ಹೃದಯಿಯಾಗಿ ಸರ್ವಗುಣ ಮತ್ತು ಶಕ್ತಿಗಳ ದಾನ ಕೊಡುವಂತಹ ಮಾಸ್ಟರ್ ದಾತಾ ಆಗಿ.