16.07.25 Morning Kannada Murli Om Shanti
BapDada Madhuban
ಮಧುರ ಮಕ್ಕಳೇ - ಯಾರು
ಸರ್ವರ ಸದ್ಗತಿ ಮಾಡುವ ಜೀವನ್ಮುಕ್ತಿ ದಾತನಿದ್ದಾರೆಯೋ ಅವರೀಗ ತಮ್ಮ ತಂದೆಯಾಗಿದ್ದಾರೆ, ನೀವು ಅವರ
ಸಂತಾನರಾಗಿದ್ದೀರಿ ಅಂದಮೇಲೆ ಎಷ್ಟೊಂದು ನಶೆಯಿರಬೇಕು!
ಪ್ರಶ್ನೆ:
ಯಾವ ಮಕ್ಕಳ
ಬುದ್ಧಿಯಲ್ಲಿ ತಂದೆಯ ನೆನಪು ನಿರಂತರವಾಗಿ ನಿಲ್ಲಲು ಸಾಧ್ಯವಿಲ್ಲ?
ಉತ್ತರ:
ಯಾರಿಗೆ
ಸಂಪೂರ್ಣ ನಿಶ್ಚಯವಿಲ್ಲವೋ ಅವರ ಬುದ್ಧಿಯಲ್ಲಿ ನೆನಪು ಸ್ಥಿರವಾಗಿ ನಿಲ್ಲುವುದಿಲ್ಲ. ನಮಗೆ ಯಾರು
ಕಲಿಸುತ್ತಾರೆ ಎಂಬುದನ್ನೇ ತಿಳಿದುಕೊಂಡಿಲ್ಲವೆಂದರೆ ಯಾರನ್ನು ನೆನಪು ಮಾಡುತ್ತಾರೆ! ಯಾರು
ಯಥಾರ್ಥವಾಗಿ ಅರಿತುಕೊಂಡು ನೆನಪು ಮಾಡುವರೋ ಅವರ ವಿಕರ್ಮಗಳೇ ವಿನಾಶವಾಗುತ್ತವೆ. ತಂದೆಯೇ ಸ್ವಯಂ
ಬಂದು ತಮ್ಮ ಮನೆಯ ಯಥಾರ್ಥ ಪರಿಚಯವನ್ನು ತಿಳಿಸುತ್ತಾರೆ.
ಓಂ ಶಾಂತಿ.
ಓಂ ಶಾಂತಿಯ ಅರ್ಥವಂತೂ ಸದಾ ಮಕ್ಕಳಿಗೆ ನೆನಪಿರುವುದು. ನಾವು ಆತ್ಮರಾಗಿದ್ದೇವೆ, ನಮ್ಮ ಮನೆಯು
ನಿರ್ವಾಣಧಾಮ ಅಥವಾ ಮೂಲವತನವಾಗಿದೆ, ಬಾಕಿ ಭಕ್ತಿ ಮಾರ್ಗದಲ್ಲಿ ಯಾರೆಲ್ಲಾ ಮನುಷ್ಯರು ಪುರುಷಾರ್ಥ
ಮಾಡುವರೋ ಅವರಿಗೆ ಎಲ್ಲಿ ಹೋಗಬೇಕೆಂದು ತಿಳಿದಿಲ್ಲ. ಸುಖ ಯಾವುದರಲ್ಲಿದೆ, ದುಃಖವು ಯಾವುದರಲ್ಲಿದೆ
ಎಂಬುದೇನೂ ಗೊತ್ತಿಲ್ಲ. ಯಜ್ಞ, ತಪ, ದಾನ, ಪುಣ್ಯ, ತೀರ್ಥ ಯಾತ್ರೆಗಳನ್ನು ಮಾಡುತ್ತಾ ಇನ್ನೂ
ಕೆಳಗಿಳಿಯುತ್ತಲೇ ಬರುತ್ತಾರೆ. ಈಗ ಜ್ಞಾನವು ಸಿಕ್ಕಿದೆ ಆದ್ದರಿಂದ ಭಕ್ತಿಯೆಲ್ಲವೂ ನಿಂತು
ಹೋಗುತ್ತದೆ. ಇಲ್ಲಿ ಗಂಟೆ, ಜಾಗಟೆ ಹೊಡೆಯುವ ವಾತಾವರಣವೆಲ್ಲವೂ ಸಮಾಪ್ತಿ. ಹೊಸ ಪ್ರಪಂಚ ಮತ್ತು
ಹಳೆಯ ಪ್ರಪಂಚದಲ್ಲಿ ಅಂತರವಂತೂ ಇದೆಯಲ್ಲವೆ. ಹೊಸ ಪ್ರಪಂಚವು ಪಾವನ ಪ್ರಪಂಚವಾಗಿದೆ, ನೀವು ಮಕ್ಕಳ
ಬುದ್ಧಿಯಲ್ಲಿ ಸುಖಧಾಮವಿದೆ. ಸುಖಧಾಮಕ್ಕೆ ಸ್ವರ್ಗವೆಂದು, ದುಃಖಧಾಮಕ್ಕೆ ನರಕವೆಂದು ಹೇಳಲಾಗುತ್ತದೆ.
ಮನುಷ್ಯರು ಶಾಂತಿಯನ್ನು ಬಯಸುತ್ತಾರೆ ಆದರೆ ಶಾಂತಿಧಾಮಕ್ಕೆ ಯಾರೂ ಹೋಗಲು ಸಾಧ್ಯವಿಲ್ಲ.
ಅದಕ್ಕಾಗಿಯೇ ತಂದೆಯು ತಿಳಿಸುತ್ತಾರೆ - ನಾನು ಭಾರತದಲ್ಲಿ ಬರುವವರೆಗೆ ನನ್ನ ವಿನಃ ನೀವು ಮಕ್ಕಳು
ಹೋಗಲು ಸಾಧ್ಯವಿಲ್ಲ. ಭಾರತದಲ್ಲಿಯೇ ಶಿವ ಜಯಂತಿಯ ಗಾಯನವಿದೆ ಅಂದಮೇಲೆ ನಿರಾಕಾರ ತಂದೆಯು
ಅವಶ್ಯವಾಗಿ ಸಾಕಾರದಲ್ಲಿ ಬಂದಿರಬೇಕಲ್ಲವೆ. ಶರೀರವಿಲ್ಲದೆ ಆತ್ಮವು ಏನಾದರೂ ಮಾಡಲು ಸಾಧ್ಯವೆ?
ಶರೀರವಿಲ್ಲದಿದ್ದರೆ ಆತ್ಮವು ಅಲೆದಾಡುತ್ತಿರುತ್ತದೆ. ಇನ್ನೊಂದು ಶರೀರದಲ್ಲಿಯೂ ಪ್ರವೇಶ ಮಾಡಿ
ಬಿಡುತ್ತದೆ. ಕೆಲವು ಆತ್ಮರು ಒಳ್ಳೆಯವರಿರುತ್ತಾರೆ, ಕೆಲವರು ಚಂಚಲರಿರುತ್ತಾರೆ. ಅಂತಹ ಆತ್ಮರು
ಒಮ್ಮೆಲೆ ತವೆಯಂತೆ ಮಾಡಿ ಬಿಡುತ್ತಾರೆ. ಆತ್ಮಕ್ಕೆ ಶರೀರವಂತೂ ಅವಶ್ಯವಾಗಿ ಬೇಕು ಹಾಗೆಯೇ ಪರಮಪಿತ
ಪರಮಾತ್ಮನಿಗೂ ಶರೀರವಿಲ್ಲದಿದ್ದರೆ ಭಾರತದಲ್ಲಿ ಬಂದು ಏನು ಮಾಡುವರು? ಭಾರತವೇ ಅವಿನಾಶಿ ಖಂಡವಾಗಿದೆ,
ಸತ್ಯಯುಗದಲ್ಲಿ ಒಂದೇ ಭಾರತ ಖಂಡವಿತ್ತು, ಮತ್ತೆಲ್ಲಾ ಖಂಡಗಳು ವಿನಾಶವಾಗಿ ಬಿಡುತ್ತವೆ. ಆದಿ
ಸನಾತನ ದೇವಿ-ದೇವತಾ ಧರ್ಮವಿತ್ತೆಂದು ಹೇಳುತ್ತಾರೆ. ಆದರೆ ಇಂದು ಮನುಷ್ಯರು ಆದಿ ಸನಾತನ ಹಿಂದೂ
ಧರ್ಮವೆಂದು ಹೇಳುತ್ತಾರೆ. ವಾಸ್ತವದಲ್ಲಿ ಆರಂಭದಲ್ಲಿ ಯಾರೂ ಹಿಂದುಗಳಿರಲಿಲ್ಲ,
ದೇವಿ-ದೇವತೆಗಳಾಗಿದ್ದಿರಿ, ಯುರೋಪಿನಲ್ಲಿರುವವರು ತಮ್ಮನ್ನು ಕ್ರಿಶ್ಚಿಯನ್ನರೆಂದು
ಹೇಳಿಕೊಳ್ಳುತ್ತಾರೆಯೇ ಹೊರತು ಯುರೋಪಿಯನ್ ಧರ್ಮದವರೆಂದು ಹೇಳಿಕೊಳ್ಳುವುದಿಲ್ಲ. ಆದರೆ ಈ ಹಿಂದೂ
ಸ್ಥಾನದಲ್ಲಿರುವವರನ್ನು ಮಾತ್ರ ಹಿಂದೂಗಳೆಂದು ಹೇಳಿ ಬಿಡುತ್ತಾರೆ. ಯಾವ ದೈವೀ ಧರ್ಮವು
ಶ್ರೇಷ್ಠವಾಗಿತ್ತು ಅವರೇ 84 ಜನ್ಮಗಳಲ್ಲಿ ಬರುತ್ತಾ ಧರ್ಮ ಭ್ರಷ್ಟರಾಗಿ ಬಿಟ್ಟಿದ್ದಾರೆ. ದೇವತಾ
ಧರ್ಮದವರೇ ಇಲ್ಲಿಗೆ ಬರುತ್ತಾರೆ. ಒಂದುವೇಳೆ ನಿಶ್ಚಯವಿಲ್ಲವೆಂದರೆ ಅವರು ಈ ಧರ್ಮದವರಲ್ಲವೆಂದು
ತಿಳಿಯಿರಿ. ಭಲೆ ಇಲ್ಲಿ ಕುಳಿತಿದ್ದರೂ ಸಹ ಅವರಿಗೆ ಅರ್ಥವಾಗುವುದಿಲ್ಲ. ಅಂತಹವರು ಸತ್ಯಯುಗದಲ್ಲಿ
ಪ್ರಜೆಗಳಲ್ಲಿಯೂ ಕಡಿಮೆ ಪದವಿಯನ್ನು ಪಡೆಯುವರು. ಎಲ್ಲರೂ ಸುಖ-ಶಾಂತಿಯನ್ನೇ ಬಯಸುತ್ತಾರೆ. ಆದರೆ
ಅದು ಸತ್ಯಯುಗದಲ್ಲಿರುತ್ತದೆ, ಎಲ್ಲರೂ ಆ ಸುಖಧಾಮದಲ್ಲಿ ಹೋಗಲು ಸಾಧ್ಯವಿಲ್ಲ. ಎಲ್ಲಾ ಧರ್ಮದವರು
ತಮ್ಮ-ತಮ್ಮ ಸಮಯದಲ್ಲಿ ಬರುತ್ತಾರೆ. ಅನೇಕ ಧರ್ಮಗಳಿವೆ, ವೃಕ್ಷವು ವೃದ್ಧಿಯಾಗುತ್ತಾ ಇರುತ್ತದೆ.
ವೃಕ್ಷದ ಮೂಲ ಬುಡವು ದೇವಿ-ದೇವತಾ ಧರ್ಮವಾಗಿದೆ ನಂತರ ಮೂರು ಕವಲುಗಳು ಹೊಡೆಯುತ್ತವೆ. ಇವು
ಸ್ವರ್ಗದಲ್ಲಂತೂ ಇರುವುದಿಲ್ಲ, ದ್ವಾಪರದಿಂದ ಹಿಡಿದು ಈ ಮೂರು ಹೊಸ ಧರ್ಮಗಳು ಸ್ಥಾಪನೆಯಾಗುತ್ತವೆ,
ಇದಕ್ಕೆ ವಿಭಿನ್ನ ಮಾನವ ವಂಶವೃಕ್ಷವೆಂದು ಕರೆಯಲಾಗುತ್ತದೆ. ವಿರಾಟ ರೂಪವೇ ಬೇರೆ, ವಿಭಿನ್ನ
ಧರ್ಮಗಳ ವೃಕ್ಷವೇ ಬೇರೆಯಾಗಿದೆ. ಭಿನ್ನ-ಭಿನ್ನ ಪ್ರಕಾರದ ಮನುಷ್ಯರಿದ್ದಾರೆ, ನಿಮಗೆ ತಿಳಿದಿದೆ -
ಎಷ್ಟೊಂದು ಧರ್ಮಗಳಿವೆ, ಸತ್ಯಯುಗದ ಆದಿಯಲ್ಲಿ ಒಂದೇ ಧರ್ಮವಿತ್ತು, ಹೊಸ ಪ್ರಪಂಚವಾಗಿತ್ತು. ಭಾರತವೇ
ಪ್ರಾಚೀನ ಸ್ವರ್ಗವಾಗಿತ್ತು, ಬಹಳ ಸಾಹುಕಾರನಾಗಿತ್ತೆಂದು ವಿದೇಶಿಯರಿಗೂ ಗೊತ್ತಿದೆ. ಆದ್ದರಿಂದ
ಭಾರತಕ್ಕೆ ಬಹಳ ಗೌರವ ಸಿಗುತ್ತದೆ. ಯಾರಾದರೂ ಸಾಹುಕಾರರಿದ್ದವರು ಬಡವರಾಗಿ ಬಿಟ್ಟರೆ ಅವರಮೇಲೆ
ಎಲ್ಲರಿಗೆ ದಯೆ ಬರುತ್ತದೆ ಹಾಗೆಯೇ ಭಾರತವು ಪಾಪ! ಏನಾಗಿ ಬಿಟ್ಟಿದೆ! ಇದೂ ಸಹ ನಾಟಕದಲ್ಲಿ
ಪಾತ್ರವಿದೆ. ಎಲ್ಲರಿಗಿಂತ ಹೆಚ್ಚಿನ ದಯಾಹೃದಯಿ ಈಶ್ವರನಾಗಿದ್ದಾರೆಂದು ಹೇಳುತ್ತಾರೆ ಮತ್ತು ಅವರು
ಭಾರತದಲ್ಲಿಯೇ ಬರುತ್ತಾರೆ. ಅಂದಮೇಲೆ ಬಡವರ ಮೇಲೆ ಸಾಹುಕಾರರೇ ದಯೆ ತೋರುವರಲ್ಲವೆ. ತಂದೆಯು
ಬೇಹದ್ದಿನ ಸಾಹುಕಾರ ಸರ್ವ ಶ್ರೇಷ್ಠರನ್ನಾಗಿ ಮಾಡುವವರಾಗಿದ್ದಾರೆ. ನೀವು ಯಾರ ಮಕ್ಕಳರಾಗಿರುವಿರೋ
ಆ ನಶೆಯಿರಬೇಕು. ಪರಮಪಿತ ಪರಮಾತ್ಮ ಶಿವನಿಗೆ ನಾವು ಸಂತಾನರಾಗಿದ್ದೇವೆ, ಅವರನ್ನೇ
ಜೀವನ್ಮುಕ್ತಿದಾತ, ಸದ್ಗತಿದಾತನೆಂದು ಹೇಳುತ್ತಾರೆ. ಮೊಟ್ಟ ಮೊದಲು ಸತ್ಯಯುಗದಲ್ಲಿ
ಜೀವನ್ಮುಕ್ತಿಯಿರುತ್ತದೆ. ಇಲ್ಲಂತೂ ಜೀವನ ಬಂಧನವಾಗಿದೆ. ಭಕ್ತಿ ಮಾರ್ಗದಲ್ಲಿ ಬಾಬಾ, ನಮ್ಮನ್ನು
ಬಂಧನದಿಂದ ಬಿಡಿಸಿ ಎಂದು ಕೂಗುತ್ತಾರೆ. ನೀವೀಗ ಆ ರೀತಿ ಕೂಗಲು ಸಾಧ್ಯವಿಲ್ಲ.
ನಿಮಗೆ ತಿಳಿದಿದೆ - ಯಾವ
ತಂದೆಯು ಜ್ಞಾನ ಸಾಗರನಾಗಿದ್ದಾರೆಯೋ ಅವರೇ ಇಡೀ ವಿಶ್ವದ ಇತಿಹಾಸ-ಭೂಗೋಳದ ಸಾರವನ್ನು
ತಿಳಿಸುತ್ತಿದ್ದಾರೆ, ಜ್ಞಾನ ಪೂರ್ಣನಾಗಿದ್ದಾರೆ. ಇವರೂ ಹೇಳುತ್ತಾರೆ - ನಾನೇನು ಭಗವಂತನಲ್ಲ. ನೀವು
ದೇಹದಿಂದ ಭಿನ್ನ, ದೇಹೀ-ಅಭಿಮಾನಿಗಳಾಗಬೇಕಾಗಿದೆ. ಇಡೀ ಪ್ರಪಂಚವನ್ನು, ತನ್ನ ಶರೀರವನ್ನೂ
ಮರೆಯಬೇಕಾಗಿದೆ. ಈ ಬ್ರಹ್ಮಾನೂ ಭಗವಂತನಲ್ಲ. ಇವರಿಗೆ ಬಾಪ್ದಾದಾ ಎಂದು ಹೇಳುತ್ತೀರಿ. ತಂದೆಯು
ಸರ್ವಶ್ರೇಷ್ಠನಾಗಿದ್ದಾರೆ. ಈ ಬ್ರಹ್ಮಾರವರದು ಹಳೆಯ ಪತಿತ ಶರೀರವಾಗಿದೆ. ಮಹಿಮೆಯೆಲ್ಲವೂ ಒಬ್ಬ
ಶಿವತಂದೆಯದೇ ಆಗಿದೆ, ಅವರೊಂದಿಗೆ ಬುದ್ಧಿಯೋಗವನ್ನಿಡಬೇಕಾಗಿದೆ, ಆಗಲೇ ಪಾವನರಾಗುವಿರಿ.
ಇಲ್ಲದಿದ್ದರೆ ಎಂದಿಗೂ ಪಾವನರಾಗಲು ಸಾಧ್ಯವಿಲ್ಲ ಮತ್ತು ಅಂತಿಮದಲ್ಲಿ ಲೆಕ್ಕಾಚಾರಗಳನ್ನು ಮುಗಿಸಿ,
ಶಿಕ್ಶೆಯನ್ನನುಭವಿಸಿ ಹೋಗುವಿರಿ. ಭಕ್ತಿಮಾರ್ಗದಲ್ಲಿ ಹಮ್ ಸೋ, ಸೋ ಹಮ್ನ ಮಂತ್ರವನ್ನು ಕೇಳುತ್ತಾ
ಬಂದಿದ್ದೀರಿ, ನಾನಾತ್ಮನೇ ಪರಮಾತ್ಮ, ಪರಮಾತ್ಮನೇ ಆತ್ಮ ಎಂಬ ತಪ್ಪು ಮಂತ್ರವೇ ಪರಮಾತ್ಮನಿಂದ
ವಿಮುಖರನ್ನಾಗಿ ಮಾಡುವಂತದ್ದಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಪರಮಾತ್ಮನೇ ಆತ್ಮನೆಂದು
ಹೇಳುವುದು ತಪ್ಪಾಗಿದೆ. ಈಗ ನೀವು ಮಕ್ಕಳಿಗೆ ವರ್ಣಗಳ ರಹಸ್ಯವನ್ನು ತಿಳಿಸಲಾಗಿದೆ. ನಾವು
ಬ್ರಾಹ್ಮಣರಾಗಿದ್ದೇವೆ ನಂತರ ನಾವೇ ದೇವತೆಗಳಾಗಲು ಪುರುಷಾರ್ಥ ಮಾಡುತ್ತೇವೆ ನಂತರ ನಾವೇ
ದೇವತೆಗಳಾಗಿ ಕ್ಷತ್ರಿಯ ವರ್ಣದಲ್ಲಿ ಬರುತ್ತೇವೆ. ನಾವು ಹೇಗೆ 84 ಜನ್ಮಗಳನ್ನು ಪಡೆಯುತ್ತೇವೆ?
ಯಾವ-ಯಾವ ಕುಲದಲ್ಲಿ ಪಡೆಯುತ್ತೇವೆಂದು ಯಾರಿಗೂ ತಿಳಿದಿಲ್ಲ. ಈಗ ನಿಮಗೆ ಅರ್ಥವಾಗಿದೆ, ನಾವು
ಬ್ರಾಹ್ಮಣರಾಗಿದ್ದೇವೆ ಶಿವ ತಂದೆಯು ಬ್ರಾಹ್ಮಣನಲ್ಲ. ನೀವೇ ಈ ವರ್ಣಗಳಲ್ಲಿ ಬರುತ್ತೀರಿ. ಈಗ
ಬ್ರಾಹ್ಮಣ ಧರ್ಮದಲ್ಲಿ ನಿಮ್ಮನ್ನು ದತ್ತು ಮಾಡಿಕೊಳ್ಳಲಾಗಿದೆ. ಶಿವ ತಂದೆಯ ಮೂಲಕ ಪ್ರಜಾಪಿತ
ಬ್ರಹ್ಮಾನ ಸಂತಾನರಾಗಿದ್ದೀರಿ. ಇದೂ ಸಹ ನಿಮಗೆ ತಿಳಿದಿದೆ - ನಿರಾಕಾರಿ ಆತ್ಮಗಳು ಮೂಲತಃ ಈಶ್ವರೀಯ
ಕುಲದವರಾಗಿದ್ದೀರಿ, ನಿರಾಕಾರಿ ಪ್ರಪಂಚದ ನಿವಾಸಿಗಳಾಗಿದ್ದೀರಿ ನಂತರ ಸಾಕಾರ ಪ್ರಪಂಚದಲ್ಲಿ
ಬರುತ್ತೀರಿ, ಪಾತ್ರವನ್ನಭಿನಯಿಸಲು ಬರಬೇಕಾಗುತ್ತದೆ. ಅಲ್ಲಿಂದ ನಾವು ದೇವತಾ ಕುಲದಲ್ಲಿ 8
ಜನ್ಮಗಳನ್ನು ತೆಗೆದುಕೊಂಡೆವು ನಂತರ ಕ್ಷತ್ರಿಯ ವೈಶ್ಯ ಕುಲದಲ್ಲಿ ಬಂದೆವು. ಈಗ ತಂದೆಯು
ತಿಳಿಸುತ್ತಾರೆ - ನೀವು ದೈವೀ ಕುಲದಲ್ಲಿ ನಂತರ ಕ್ಷತ್ರಿಯ ಕುಲದಲ್ಲಿ ಎಷ್ಟೆಷ್ಟು ಜನ್ಮಗಳನ್ನು
ತೆಗೆದುಕೊಂಡೆವು ಎಂಬುದನ್ನು ತಿಳಿಸುತ್ತಾರೆ. 84 ಜನ್ಮಗಳ ಚಕ್ರವಾಗಿದೆ, ಈ ಜ್ಞಾನವು ನಿಮ್ಮ ವಿನಃ
ಮತ್ತ್ಯಾರಿಗೂ ಸಿಗಲು ಸಾಧ್ಯವಿಲ್ಲ. ಯಾರು ಈ ಧರ್ಮದವರಾಗಿದ್ದಾರೆಯೋ ಅವರು ಇಲ್ಲಿಗೆ ಬರುತ್ತಾರೆ,
ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಕೆಲವರು ರಾಜ-ರಾಣಿ, ಕೆಲವರು ಪ್ರಜೆಗಳಾಗುತ್ತಾರೆ. ಸೂರ್ಯವಂಶಿ,
ಲಕ್ಷ್ಮೀ-ನಾರಾಯಣ ದಿ ಫಸ್ಟ್, ಸೆಕೆಂಡ್ ಹೀಗೆ 8 ಪೀಳಿಗೆಗಳು ನಡೆಯುತ್ತವೆ ನಂತರ ಕ್ಷತ್ರಿಯ
ಧರ್ಮದಲ್ಲಿಯೂ ಇದೇ ರೀತಿ ನಡೆಯುತ್ತದೆ. ಇವೆಲ್ಲಾ ಮಾತುಗಳನ್ನು ತಂದೆಯು ತಿಳಿಸಿಕೊಡುತ್ತಾರೆ.
ಜ್ಞಾನ ಸಾಗರನು ಬಂದಾಗ ಭಕ್ತಿಯು ಮುಕ್ತಾಯವಾಗುತ್ತದೆ. ರಾತ್ರಿಯು ಸಮಾಪ್ತಿಯಾದಾಗ ದಿನವಾಗುತ್ತದೆ,
ಅಲ್ಲಿ ಯಾವುದೇ ಪ್ರಕಾರದ ಅಲೆದಾಟವಿರುವುದಿಲ್ಲ. ವಿಶ್ರಾಂತಿಯೇ ವಿಶ್ರಾಂತಿ, ಯಾವುದೇ
ಗಲಾಟೆಯಿರುವುದಿಲ್ಲ. ಇದೂ ಸಹ ನಾಟಕದಲ್ಲಿ ಮಾಡಲ್ಪಟ್ಟಿದೆ. ಭಕ್ತಿಯು ಮುಗಿಯುವ ಸಮಯದಲ್ಲಿಯೇ
ತಂದೆಯು ಬರುತ್ತಾರೆ. ಎಲ್ಲರೂ ಹಿಂತಿರುಗಿ ಅವಶ್ಯವಾಗಿ ಹೋಗಲೇಬೇಕಾಗಿದೆ ನಂತರ ನಂಬರ್ವನ್
ಕೆಳಗಿಳಿಯುತ್ತಾರೆ. ಕ್ರೈಸ್ಟ್ ಬಂದಾಗ ಅವರ ಧರ್ಮದವರು ಅವರ ಹಿಂದೆ ಬರುತ್ತಾರೆ. ಈಗ ನೋಡಿ,
ಎಷ್ಟೊಂದು ಮಂದಿ ಕ್ರಿಶ್ಚಿಯನ್ನರಿದ್ದಾರೆ!
ಜ್ಞಾನದಿಂದ
ಸದ್ಗತಿಯಾಗುತ್ತದೆ, ರಾಜಯೋಗವನ್ನು ತಂದೆಯು ಕಲಿಸುತ್ತಾರೆ. ಭಕ್ತಿಯಲ್ಲಿ ಏನೂ ಇಲ್ಲ. ಹಾ!
ದಾನ-ಪುಣ್ಯಗಳನ್ನು ಮಾಡುತ್ತಾರೆಂದರೆ ಅಲ್ಪಕಾಲಕ್ಕಾಗಿ ಸುಖವು ಸಿಗುತ್ತದೆ. ರಾಜರಿಗೂ ಸಹ ಇದು
ಕಾಗವಿಷ್ಟ ಸಮಾನ ಸುಖವೆಂದು ಸನ್ಯಾಸಿಗಳು ವೈರಾಗ್ಯ ತರಿಸುತ್ತಾರೆ. ಈಗ ನೀವು ಮಕ್ಕಳಿಗೆ ಬೇಹದ್ದಿನ
ವೈರಾಗ್ಯವನ್ನು ಕಲಿಸಲಾಗುತ್ತದೆ. ಇದು ಹಳೆಯ ಪ್ರಪಂಚವಾಗಿದೆ, ಈಗ ಸುಖಧಾಮವನ್ನು ನೆನಪು ಮಾಡಿ
ನಂತರ ಶಾಂತಿಧಾಮದ ಮೂಲಕ ಇಲ್ಲಿ ಬರಬೇಕಾಗಿದೆ. ದಿಲ್ವಾಡಾ ಮಂದಿರದಲ್ಲಿ ಚಾಚೂ ತಪ್ಪದೆ ನಿಮ್ಮ ಈ
ಸಮಯದ ನೆನಪಾರ್ಥವಿದೆ. ಕೆಳಗೆ ತಪಸ್ಸಿನಲ್ಲಿ ಕುಳಿತಿದ್ದಾರೆ, ಮೇಲೆ ಸ್ವರ್ಗವಿದೆ. ಇಲ್ಲದಿದ್ದರೆ
ಸ್ವರ್ಗವಿನ್ನೆಲ್ಲಿ ತೋರಿಸುವುದು! ಮನುಷ್ಯರು ಶರೀರ ಬಿಟ್ಟಾಗ ಸ್ವರ್ಗಸ್ಥರಾದರೆಂದು ಹೇಳುತ್ತಾರೆ.
ಮೇಲೆ ಸ್ವರ್ಗವಿದೆಯೆಂದು ತಿಳಿಯುತ್ತಾರೆ ಆದರೆ ಮೇಲೇನೂ ಇಲ್ಲ. ಭಾರತವೇ ಸ್ವರ್ಗ, ಭಾರತವೇ
ನರಕವಾಗುತ್ತದೆ. ಈ ಮಂದಿರವು ಪೂರ್ಣ ನೆನಪಾರ್ಥವಾಗಿದೆ. ಈ ಮಂದಿರ ಇತ್ಯಾದಿಗಳೆಲ್ಲವೂ ನಂತರದಲ್ಲಿ
ಆಗುತ್ತವೆ. ಸ್ವರ್ಗದಲ್ಲಿ ಭಕ್ತಿಯಿರುವುದಿಲ್ಲ. ಅಲ್ಲಿ ಸುಖವೇ ಸುಖವಿರುತ್ತದೆ, ತಂದೆಯು ಬಂದು ಈ
ರಹಸ್ಯವೆಲ್ಲವನ್ನೂ ತಿಳಿಸುತ್ತಾರೆ, ಮತ್ತೆಲ್ಲಾ ಆತ್ಮರ ಹೆಸರುಗಳು ಬದಲಾಗುತ್ತವೆ ಆದರೆ ಶಿವನ
ಹೆಸರು ಬದಲಾಗುವುದಿಲ್ಲ. ಅವರಿಗೆ ತಮ್ಮದೇ ಆದ ಶರೀರವಿಲ್ಲ ಅಂದಮೇಲೆ ಶರೀರವಿಲ್ಲದೆ ಹೇಗೆ
ಓದಿಸುವುದು! ಪ್ರೇರಣೆಯ ಮಾತಂತೂ ಅಲ್ಲ, ಪ್ರೇರಣೆಯ ಅರ್ಥವಾಗಿದೆ ವಿಚಾರ. ಮೇಲಿನಿಂದ ಪ್ರೇರಣೆ
ಕೊಟ್ಟರೆ ಬಂದು ತಲುಪಿ ಬಿಡುತ್ತದೆ ಎಂದಲ್ಲ. ಇದರಲ್ಲಿ ಯಾವುದೇ ಪ್ರೇರಣೆಯ ಮಾತಿಲ್ಲ. ಯಾವ
ಮಕ್ಕಳಿಗೆ ತಂದೆಯ ಪೂರ್ಣ ಪರಿಚಯವಿಲ್ಲ, ಪೂರ್ಣ ನಿಶ್ಚಯವಿಲ್ಲವೆಂದರೆ ಅವರ ಬುದ್ಧಿಯಲ್ಲಿ ನೆನಪೂ
ಸಹ ನಿಲ್ಲುವುದಿಲ್ಲ. ನಮಗೆ ಯಾರು ಕಲಿಸುತ್ತಿದ್ದಾರೆ ಎಂಬುದನ್ನೇ ಅವರು ಅರಿತುಕೊಂಡಿಲ್ಲವೆಂದರೆ
ಯಾರನ್ನು ನೆನಪು ಮಾಡುವರು? ತಂದೆಯ ನೆನಪಿನಿಂದಲೇ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ಯಾರು
ಜನ್ಮ-ಜನ್ಮಾಂತರ ಲಿಂಗವನ್ನೇ ನೆನಪು ಮಾಡುತ್ತಾರೆಯೋ ಅವರೇ ತಿಳಿಯುತ್ತಾರೆ- ಇವರು
ಪರಮಾತ್ಮನಾಗಿದ್ದಾರೆ. ಈ ಲಿಂಗವು ಅವರ ಚಿಹ್ನೆಯಾಗಿದೆ. ಅವರು ನಿರಾಕಾರನಾಗಿದ್ದಾರೆ, ಸಾಕಾರಿಯಲ್ಲ.
ತಂದೆಯು ತಿಳಿಸುತ್ತಾರೆ- ನಾನೂ ಸಹ ಪ್ರಕೃತಿಯ ಆಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ,
ಇಲ್ಲದಿದ್ದರೆ ನಿಮಗೆ ಸೃಷ್ಟಿಚಕ್ರದ ರಹಸ್ಯವನ್ನು ಹೇಗೆ ತಿಳಿಸಲಿ! ಇದು ಆತ್ಮಿಕಜ್ಞಾನವಾಗಿದೆ. ಈ
ಜ್ಞಾನವು ಆತ್ಮಗಳಿಗೆ ಸಿಗುತ್ತದೆ, ಇದನ್ನು ಒಬ್ಬ ತಂದೆಯೇ ಕೊಡಬಲ್ಲರು. ಪುನರ್ಜನ್ಮವನ್ನಂತೂ
ಎಲ್ಲರೂ ತೆಗೆದುಕೊಳ್ಳಲೇಬೇಕಾಗಿದೆ. ಎಲ್ಲಾ ಪಾತ್ರಧಾರಿಗಳಿಗೆ ಪಾತ್ರವು ಸಿಕ್ಕಿದೆ. ಯಾರೂ
ನಿರ್ವಾಣದಲ್ಲಿ ಹೋಗಲು ಸಾಧ್ಯವಿಲ್ಲ. ಮೋಕ್ಷವನ್ನು ಹೊಂದಲು ಸಾಧ್ಯವಿಲ್ಲ. ಯಾರು ನಂಬರ್ವನ್
ವಿಶ್ವದ ಮಾಲೀಕರಾಗುವರೋ ಅವರೇ 84 ಜನ್ಮಗಳಲ್ಲಿ ಬರುತ್ತಾರೆ. ಚಕ್ರವನ್ನು ಅವಶ್ಯವಾಗಿ
ಸುತ್ತಬೇಕಾಗಿದೆ. ಮೋಕ್ಷವು ಸಿಗುತ್ತದೆಯೆಂದು ಮನುಷ್ಯರು ತಿಳಿಯುತ್ತಾರೆ. ಎಷ್ಟೊಂದು
ಮತ-ಮತಾಂತರಗಳಿವೆ. ವೃದ್ಧಿ ಹೊಂದುತ್ತಲೇ ಇರುತ್ತಾರೆ. ಯಾರೂ ಹಿಂತಿರುಗಿ ಹೋಗುವುದಿಲ್ಲ. ತಂದೆಯೇ
84 ಜನ್ಮಗಳ ಕಥೆಯನ್ನು ತಿಳಿಸುತ್ತಾರೆ. ನೀವು ಮಕ್ಕಳು ಓದಿ ಮತ್ತು ಓದಿಸಬೇಕಾಗಿದೆ. ಈ ಆತ್ಮಿಕ
ಜ್ಞಾನವನ್ನು ನಿಮ್ಮ ವಿನಃ ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಶೂದ್ರರಾಗಲಿ, ದೇವತೆಗಳಾಗಲಿ ಕೊಡಲು
ಸಾಧ್ಯವಿಲ್ಲ. ಜ್ಞಾನದ ಅವಶ್ಯಕತೆಯಿರಲು ಸತ್ಯಯುಗದಲ್ಲಿ ದುರ್ಗತಿಯೇ ಇರುವುದಿಲ್ಲ. ಈ ಜ್ಞಾನವು
ಸದ್ಗತಿಗಾಗಿ ಇದೆ. ಸದ್ಗತಿದಾತ, ಮುಕ್ತಿದಾತ, ಮಾರ್ಗದರ್ಶಕನು ಒಬ್ಬರೇ ತಂದೆಯಾಗಿದ್ದಾರೆ. ನೆನಪಿನ
ಯಾತ್ರೆಯಿಲ್ಲದೆ ಯಾರೂ ಪವಿತ್ರರಾಗಲು ಸಾಧ್ಯವಿಲ್ಲ. ಶಿಕ್ಷೆಗಳನ್ನು ಖಂಡಿತವಾಗಿ ಅನುಭವಿಸಬೇಕಾಗಿದೆ.
ಪದವಿಯು ಭ್ರಷ್ಟವಾಗುವುದು. ಎಲ್ಲರ ಲೆಕ್ಕಾಚಾರಗಳು ಸಮಾಪ್ತಿಯಾಗಬೇಕಲ್ಲವೆ. ನಿಮಗೆ ನಿಮ್ಮದೇ
ಮಾತನ್ನು ತಿಳಿಸುತ್ತಾರೆ. ಅನ್ಯ ಧರ್ಮಗಳಲ್ಲಿ ಹೋಗಲು ನಿಮಗೇನಾಗಿದೆ? ಭಾರತವಾಸಿಗಳಿಗೇ ಈ ಜ್ಞಾನವು
ಸಿಗುತ್ತದೆ. ತಂದೆಯೂ ಸಹ ಭಾರತದಲ್ಲಿಯೇ ಬಂದು ಮೂರುಧರ್ಮಗಳನ್ನು ಸ್ಥಾಪನೆ ಮಾಡುತ್ತಾರೆ. ಈಗ
ನಿಮ್ಮನ್ನು ಶೂದ್ರ ಧರ್ಮದಿಂದ ಬಿಡಿಸಿ ಉತ್ತಮ ಕುಲದಲ್ಲಿ ಕರೆದುಕೊಂಡು ಹೋಗುತ್ತಾರೆ. ಅದು ನೀಚ,
ಪತಿತ ಕುಲವಾಗಿದೆ. ಈಗ ಪಾವನರನ್ನಾಗಿ ಮಾಡಲು ನೀವು ಬ್ರಾಹ್ಮಣರು ನಿಮಿತ್ತರಾಗುತ್ತೀರಿ. ಇದಕ್ಕೆ
ರುದ್ರ ಜ್ಞಾನ ಯಜ್ಞವೆಂದು ಹೇಳಲಾಗುತ್ತದೆ. ರುದ್ರ ಶಿವ ತಂದೆಯು ಯಜ್ಞವನ್ನು ರಚಿಸಿದ್ದಾರೆ. ಈ
ಬೇಹದ್ದಿನ ಯಜ್ಞದಲ್ಲಿ ಇಡೀ ಹಳೆಯ ಪ್ರಪಂಚವು ಆಹುತಿಯಾಗಲಿದೆ ನಂತರ ಹೊಸ ಪ್ರಪಂಚವು
ಸ್ಥಾಪನೆಯಾಗುವುದು. ಹಳೆಯ ಪ್ರಪಂಚವು ಸಮಾಪ್ತಿಯಾಗಬೇಕಾಗಿದೆ. ನೀವು ಹೊಸ ಪ್ರಪಂಚಕ್ಕಾಗಿಯೇ ಈ
ಜ್ಞಾನವನ್ನು ತೆಗೆದುಕೊಂಡಿದ್ದೀರಿ, ಈ ಹಳೆಯ ಪ್ರಪಂಚದಲ್ಲಿ ದೇವತೆಗಳ ನೆರಳೂ ಸಹ ಬೀಳುವುದಿಲ್ಲ.
ನೀವು ಮಕ್ಕಳಿಗೆ ತಿಳಿದಿದೆ - ಕಲ್ಪದ ಮೊದಲು ಯಾರು ಬಂದಿದ್ದರೋ ಅವರೇ ಬಂದು ಈ ಜ್ಞಾನವನ್ನು
ತೆಗೆದುಕೊಳ್ಳುತ್ತಾರೆ. ನಂಬರ್ವಾರ್ ಪುರುಷಾರ್ಥದನುಸಾರ ವಿದ್ಯೆಯನ್ನು ಓದುತ್ತಾರೆ. ಮನುಷ್ಯರು
ಇಲ್ಲಿಯೇ ಶಾಂತಿಯನ್ನು ಬಯಸುತ್ತಾರೆ. ಆತ್ಮವಂತೂ ಮೂಲತಃ ಶಾಂತಿಧಾಮ ನಿವಾಸಿಯಾಗಿದೆ ಅಂದಮೇಲೆ ಇಲ್ಲಿ
ಸಂಪೂರ್ಣ ಶಾಂತಿಯಿರಲು ಹೇಗೆ ಸಾಧ್ಯ! ಈ ಸಮಯದಲ್ಲಿ ಮನೆ-ಮನೆಯಲ್ಲಿಯೂ ಅಶಾಂತಿಯಿದೆ, ರಾವಣ
ರಾಜ್ಯವಲ್ಲವೆ. ಸತ್ಯಯುಗದಲ್ಲಿ ಸಂಪೂರ್ಣ ಶಾಂತಿಯಿರುತ್ತದೆ. ಒಂದು ಧರ್ಮ, ಒಂದುಭಾಷೆ ಇರುತ್ತದೆ.
ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಈ ಹಳೆಯ
ಪ್ರಪಂಚದಿಂದ ಬೇಹದ್ದಿನ ವೈರಾಗಿಗಳಾಗಿ. ತಮ್ಮ ದೇಹವನ್ನೂ ಮರೆತು ಶಾಂತಿಧಾಮ ಮತ್ತು ಸುಖಧಾಮವನ್ನು
ನೆನಪು ಮಾಡಬೇಕಾಗಿದೆ. ನಿಶ್ಚಯಬುದ್ಧಿಯವರಾಗಿ ನೆನಪಿನ ಯಾತ್ರೆಯಲ್ಲಿರಬೇಕಾಗಿದೆ.
2. ಹಮ್ ಸೋ, ಸೋ ಹಮ್ನ
ಮಂತ್ರವನ್ನು ಯಥಾರ್ಥವಾಗಿ ತಿಳಿದುಕೊಂಡು ಈ ಬ್ರಾಹ್ಮಣರಿಂದ ದೇವತೆಗಳಾಗುವ ಪುರುಷಾರ್ಥ
ಮಾಡಬೇಕಾಗಿದೆ. ಎಲ್ಲರಿಗೂ ಇದರ ಯಥಾರ್ಥ ಅರ್ಥವನ್ನು ತಿಳಿಸಬೇಕಾಗಿದೆ.
ವರದಾನ:
ಅಂತರ್ಮುಖತೆಯ
ಅಭ್ಯಾಸದ ಮೂಲಕ ಅಲೌಕಿಕ ಬಾಷೆಯನ್ನು ತಿಳಿಯುವಂತಹ ಸದಾ ಸಫಲತಾ ಸಂಪನ್ನ ಭವ.
ಎಷ್ಟೆಷ್ಟು ತಾವು ಮಕ್ಕಳು
ಅಂತರ್ಮುಖಿ ಸ್ವೀಟ್ ಸೈಲೆನ್ಸ್ ಸ್ವರೂಪದಲ್ಲಿ ಸ್ಥಿತರಾಗುತ್ತಾ ಹೋಗುತ್ತಾರೆ ಅಷ್ಟೂ ಕಣ್ಣುಗಳ ಭಾಷೆ,
ಭಾವನೆಯ ಭಾಷೆ ಮತ್ತು ಸಂಕಲ್ಪದ ಭಾಷೆಯನ್ನು ಸಹಜವಾಗಿ ತಿಳಿಯುತ್ತಾ ಹೋಗುತ್ತಾರೆ. ಈ ಮೂರೂ
ಪ್ರಕಾರದ ಭಾಷೆ ಆತ್ಮೀಯ ಯೋಗಿ ಜೀವನದ ಭಾಷೆಯಾಗಿದೆ. ಈ ಅಲೌಕಿಕ ಭಾಷೆಗಳು ಬಹಳ ಶಕ್ತಿಶಾಲಿಯಾಗಿವೆ.
ಸಮಯ ಪ್ರಮಾಣ ಈ ಮೂರೂ ಭಾಷೆಗಳ ಮೂಲಕವೇ ಸಹಜ ಸಫಲತೆ ಪ್ರಾಪ್ತಿಯಾಗುವುದು ಆದ್ದರಿಂದ ಈಗ ಆತ್ಮೀಯ
ಭಾಷೆಯ ಅಭ್ಯಾಸಿಗಳಾಗಿ.
ಸ್ಲೋಗನ್:
ತಾವು ಇಷ್ಟು
ಹಗುರರಾಗಿಬಿಡಿ ಯಾವುದರಿಂದ ತಂದೆ ತಮ್ಮನ್ನು ತಮ್ಮ ಕಣ್ಣಿನ ರೆಪ್ಪೆಗಳ ಮೇಲೆ ಕುಳ್ಳಿರಿಸಿಕೊಂಡು
ಜೊತೆಯಲ್ಲಿ ಕರೆದೊಯ್ಯುಬೇಕು.
ಅವ್ಯಕ್ತ ಸೂಚನೆ:
ಸಂಕಲ್ಪ ಶಕ್ತಿಯನ್ನು ಜಮಾ ಮಾಡಿ ಶ್ರೇಷ್ಠ ಸೇವೆಗೆ ನಿಮಿತ್ತರಾಗಿ.
ವರ್ತಮಾನ ಸಮಯ ವಿಶ್ವ
ಕಲ್ಯಾಣ ಮಾಡುವ ಸಹಜ ಸಾಧನ ತಮ್ಮ ಶ್ರೇಷ್ಠ ಸಂಕಲ್ಪದ ಏಕಾಗ್ರತೆಯಾಗಿದೆ, ಇದರಿಂದಲೇ ಸರ್ವ ಆತ್ಮಗಳ
ಅಲೆದಾಡುತ್ತಿರುವ ಬುದ್ಧಿಯನ್ನು ಏಕಾಗ್ರ ಮಾಡಬಹುದು, ವಿಶ್ವದ ಸರ್ವ ಆತ್ಮಗಳು ವಿಶೇಷವಾಗಿ ಇದನ್ನೇ
ಬಯಸುತ್ತಾರೆ - ಅಲೆದಾಡುತ್ತಿರುವ ಬುದ್ಧಿ ಏಕಾಗ್ರ ಆಗಲಿ ಹಾಗೂ ಮನಸ್ಸು ಚಂಚಲತೆಯಿಂದ ಏಕಾಗ್ರವಾಗಲಿ,
ಇದಕ್ಕಾಗಿ ಏಕಾಗ್ರತೆ ಅರ್ಥಾತ್ ಸದಾ ಒಬ್ಬ ತಂದೆ ಬೇರೊಬ್ಬರಿಲ್ಲ, ಈ ಸ್ಮೃತಿಯಿಂದ ಏಕರಸ
ಸ್ಥಿತಿಯಲ್ಲಿ ಸ್ಥಿತರಾಗುವ ವಿಶೇಷ ಅಭ್ಯಾಸ ಮಾಡಿ.