16.09.25         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ನೀವು ಆತ್ಮಿಕ ಮಾರ್ಗದರ್ಶಕರಾಗಿದ್ದೀರಿ, ನೀವು ಎಲ್ಲರಿಗೆ ಶಾಂತಿಧಾಮ ಅರ್ಥಾತ್ ಅಮರಪುರಿಯ ಮಾರ್ಗವನ್ನು ತಿಳಿಸಬೇಕಾಗಿದೆ"

ಪ್ರಶ್ನೆ:
ನೀವು ಮಕ್ಕಳಿಗೆ ಯಾವ ನಶೆಯಿರಬೇಕು? ಆ ನಶೆಯ ಆಧಾರದ ಮೇಲೆ ಯಾವ ಮಾತನ್ನು ನಿಶ್ಚಯದಿಂದ ಹೇಳುತ್ತೀರಿ?

ಉತ್ತರ:
ನಾವು ತಂದೆಯನ್ನು ನೆನಪು ಮಾಡಿ ಜನ್ಮ-ಜನ್ಮಾಂತರಕ್ಕಾಗಿ ಪವಿತ್ರರಾಗುತ್ತೇವೆ ಎಂದು ನೀವು ಮಕ್ಕಳಿಗೆ ನಶೆಯಿದೆ. ಆದ್ದರಿಂದ ನೀವು ನಿಶ್ಚಯದಿಂದ ಹೇಳುತ್ತೀರಿ - ಭಲೆ ಎಷ್ಟಾದರೂ ವಿಘ್ನಗಳು ಬರಲಿ ಆದರೆ ಸ್ವರ್ಗದ ಸ್ಥಾಪನೆಯಂತೂ ಅವಶ್ಯವಾಗಿ ಆಗಿಯೇ ಆಗುವುದು. ಹೊಸ ಪ್ರಪಂಚದ ಸ್ಥಾಪನೆ ಮತ್ತು ಹಳೆಯ ಪ್ರಪಂಚದ ವಿನಾಶವಾಗಲೇಬೇಕಾಗಿದೆ. ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಇದರಲ್ಲಿ ಸಂಶಯದ ಮಾತೇ ಇಲ್ಲ.

ಓಂ ಶಾಂತಿ.
ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ತಿಳಿಸುತ್ತಿದ್ದಾರೆ. ನಾವಾತ್ಮಗಳಾಗಿದ್ದೇವೆ, ಈ ಸಮಯದಲ್ಲಿ ನಾವು ಆತ್ಮಿಕ ಮಾರ್ಗದರ್ಶಕರಾಗಿದ್ದೇವೆಂದು ನೀವು ತಿಳಿದುಕೊಂಡಿದ್ದೀರಿ. ಆಗುತ್ತೀರಿ ಮತ್ತು ಅನ್ಯರನ್ನೂ ಮಾಡುತ್ತೀರಿ. ಈ ಮಾತುಗಳನ್ನು ಚೆನ್ನಾಗಿ ಧಾರಣೆ ಮಾಡಿಕೊಳ್ಳಿ. ಮಾಯೆಯ ಬಿರುಗಾಳಿಯು ಮರೆಸಿ ಬಿಡುತ್ತದೆ. ಪ್ರತಿನಿತ್ಯವು ಬೆಳಗ್ಗೆ-ಸಂಜೆ ಈ ವಿಚಾರ ಮಾಡಿ - ಈ ಅಮೂಲ್ಯ ರತ್ನಗಳು ಅಮೂಲ್ಯ ಜೀವನಕ್ಕಾಗಿ ಆತ್ಮಿಕ ತಂದೆಯಿಂದ ಸಿಗುತ್ತದೆ ಆದ್ದರಿಂದ ಆತ್ಮಿಕ ತಂದೆಯು ತಿಳಿಸುತ್ತಾರೆ - ಆತ್ಮಿಕ ಮಕ್ಕಳೇ, ನೀವೀಗ ಮುಕ್ತಿಧಾಮದ ಮಾರ್ಗವನ್ನು ತಿಳಿಸಲು ಆತ್ಮಿಕ ಮಾರ್ಗದರ್ಶಕರಾಗಿದ್ದೀರಿ. ಇದು ಅಮರಪುರಿಯಲ್ಲಿ ಹೋಗುವ ಸತ್ಯ-ಸತ್ಯವಾದ ಅಮರಕಥೆಯಾಗಿದೆ. ಅಮರಪುರಿಯಲ್ಲಿ ಹೋಗುವುದಕ್ಕಾಗಿ ನೀವು ಪವಿತ್ರರಾಗುತ್ತಿದ್ದೀರಿ. ಆದ್ದರಿಂದ ಅಪವಿತ್ರ, ಭ್ರಷ್ಟಾಚಾರಿ ಆತ್ಮವು ಅಮರಪುರಿಯಲ್ಲಿ ಹೇಗೆ ಹೋಗುವುದು? ಮನುಷ್ಯರು ಅಮರನಾಥ ಯಾತ್ರೆಗೆ ಹೋಗುತ್ತಾರೆ. ಸ್ವರ್ಗವನ್ನೂ ಅಮರನಾಥಪುರಿಯೆಂದು ಹೇಳುತ್ತಾರೆ ಅಂದಮೇಲೆ ಅಮರನಾಥನು ಒಬ್ಬರೇ ಇರುವರೇ! ನೀವೆಲ್ಲಾ ಆತ್ಮವು ಅಮರಪುರಿಗೆ ಹೋಗುತ್ತಿದ್ದೀರಿ. ಅದು ಆತ್ಮಗಳ ಅಮರಪುರಿ, ಪರಮಧಾಮವಾಗಿದೆ. ಆದರೆ ಶರೀರದ ಜೊತೆ ಅಮರಪುರಿ (ಸತ್ಯಯುಗ) ಯಲ್ಲಿ ಬರುತ್ತೀರಿ. ಅಲ್ಲಿಗೆ ಯಾರು ಕರೆದುಕೊಂಡು ಹೋಗುವರು? ಪರಮಪಿತ ಪರಮಾತ್ಮನು ಎಲ್ಲಾ ಆತ್ಮಗಳನ್ನು ಕರೆದುಕೊಂಡು ಹೋಗುತ್ತಾರೆ. ಅದಕ್ಕೆ ಅಮರಪುರಿಯೆಂದೂ ಹೇಳಬಹುದಾಗಿದೆ ಆದರೆ ಸರಿಯಾದ ಹೆಸರು ಶಾಂತಿಧಾಮವೆಂದಾಗಿದೆ. ಅಲ್ಲಿಗೆ ಎಲ್ಲರೂ ಹೋಗಲೇಬೇಕಾಗಿದೆ. ನಾಟಕದ ಪೂರ್ವ ನಿಶ್ಚಿತ ನಾಟಕವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಇದನ್ನು ಚೆನ್ನಾಗಿ ಬುದ್ಧಿಯಲ್ಲಿ ಧಾರಣೆ ಮಾಡಿಕೊಳ್ಳಿ. ಮೊಟ್ಟ ಮೊದಲನೆಯದಾಗಿ ಆತ್ಮನೆಂದು ತಿಳಿದುಕೊಳ್ಳಿ. ಪರಮಪಿತ ಪರಮಾತ್ಮನೂ ಸಹ ಆತ್ಮನೇ ಆಗಿದ್ದಾರೆ. ಕೇವಲ ಅವರಿಗೆ ಪರಮಾತ್ಮನೆಂದು ಹೇಳುತ್ತಾರೆ ಅವರೇ ನಮಗೆ ತಿಳಿಸುತ್ತಿದ್ದಾರೆ. ಅವರು ಜ್ಞಾನ ಸಾಗರ, ಪವಿತ್ರತೆಯ ಸಾಗರನಾಗಿದ್ದಾರೆ. ಈಗ ಮಕ್ಕಳನ್ನು ಪವಿತ್ರರನ್ನಾಗಿ ಮಾಡಲು ಶ್ರೀಮತ ಕೊಡುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮ ಜನ್ಮ-ಜನ್ಮಾಂತರ ಪಾಪಗಳು ಕಳೆಯುತ್ತವೆ. ನೆನಪಿಗೇ ಯೋಗವೆಂದು ಹೇಳಲಾಗುತ್ತದೆ. ನೀವಂತೂ ಮಕ್ಕಳಲ್ಲವೆ ಅಂದಾಗ ಮಕ್ಕಳು ತಂದೆಯನ್ನು ನೆನಪು ಮಾಡಬೇಕಾಗಿದೆ. ನೆನಪಿನಿಂದಲೇ ದೋಣಿಯು ಪಾರಾಗುವುದು. ಈ ವಿಷಯ ನಗರಿಯಿಂದ ನೀವು ಶಿವ ನಗರಕ್ಕೆ ಹೋಗುತ್ತೀರಿ ನಂತರ ವಿಷ್ಣು ಪುರಿಯಲ್ಲಿ ಬರುತ್ತೀರಿ. ನಾವು ಅಲ್ಲಿಗೆ ಹೋಗುವುದಕ್ಕಾಗಿ ಓದುತ್ತೇವೆ, ಇಲ್ಲಿಗಾಗಿ ಅಲ್ಲ. ಇಲ್ಲಿ ಯಾರು ರಾಜರಾಗುವರೋ ಅವರು ಧನ ದಾನ ಮಾಡುವುದರಿಂದ ಆಗುತ್ತಾರೆ. ಕೆಲವರಂತೂ ಬಡವರನ್ನು ಬಹಳ ಸಂಭಾಲನೆ ಮಾಡುತ್ತಾರೆ, ಕೆಲವರು ಆಸ್ಪತ್ರೆ-ಧರ್ಮ ಶಾಲೆಯನ್ನು ತೆರೆಯುತ್ತಾರೆ, ಕೆಲವರು ಧನದಾನ ಮಾಡುತ್ತಾರೆ. ಹೇಗೆ ಸಿಂಧ್ನಲ್ಲಿ ಮೂಲಚಂದ್ರಿದ್ದರು. ಅವರು ಬಡವರ ಬಳಿ ಹೋಗಿ ದಾನ ಮಾಡುತ್ತಿದ್ದರು. ಬಡವರನ್ನು ಬಹಳ ಸಂಭಾಲನೆ ಮಾಡುತ್ತಿದ್ದರು. ಹೀಗೆ ಅನೇಕರು ದಾನಿಗಳಿರುತ್ತಾರೆ, ಬೆಳಗ್ಗೆ ಎದ್ದು ಒಂದು ಹಿಡಿ ಅಕ್ಕಿಯನ್ನು ತೆಗೆದು ಬಡವರಿಗೆ ದಾನ ಮಾಡುತ್ತಾರೆ. ಇತ್ತೀಚೆಗಂತೂ ಬಹಳ ಮೋಸವಿದೆ ಆದ್ದರಿಂದ ಪಾತ್ರರಿಗೆ ದಾನ ಕೊಡಬೇಕು. ಆ ಬುದ್ಧಿವಂತಿಕೆಯಂತೂ ಇಲ್ಲ. ಹೊರಗೆ ಯಾರು ಭಿಕ್ಷೆ ಬೇಡುವವರು ಕುಳಿತಿರುತ್ತಾರೆಯೋ ಅವರಿಗೆ ಕೊಡುವುದೂ ದಾನವೆಂದಲ್ಲ. ಕೆಲವರದು ಭಿಕ್ಷೆ ಬೇಡುವುದೇ ಉದ್ಯೋಗವಾಗಿರುತ್ತದೆ. ಬಡವರಿಗೆ ದಾನ ಮಾಡುವವರು ಒಳ್ಳೆಯ ಪದವಿಯನ್ನು ಪಡೆಯುತ್ತಾರೆಂದು ಹೇಳುತ್ತಾರೆ.

ನೀವೀಗ ಆತ್ಮಿಕ ಮಾರ್ಗದರ್ಶಕರಾಗಿದ್ದೀರಿ. ಪ್ರದರ್ಶನಿ, ಮ್ಯೂಸಿಯಂ ಇತ್ಯಾದಿಗಳನ್ನು ತೆರೆಯುತ್ತೀರೆಂದರೆ ಅದಕ್ಕೆ ಇಂತಹ ಹೆಸರನ್ನಿಡಿ, ಅದರಿಂದ ಸಿದ್ಧವಾಗಲಿ - ಸ್ವರ್ಗದ ಮಾರ್ಗದರ್ಶಕರು ಅಥವಾ ಹೊಸ ವಿಶ್ವದ ರಾಜಧಾನಿಯ ಮಾರ್ಗದರ್ಶಕರೆಂದು. ಆದರೆ ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ. ಇದು ಮುಳ್ಳುಗಳ ಕಾಡಾಗಿದೆ, ಸ್ವರ್ಗವು ಹೂದೋಟವಾಗಿದೆ. ಅಲ್ಲಿ ದೇವತೆಗಳಿರುತ್ತಾರೆ. ಈಗ ನೀವು ಮಕ್ಕಳಿಗೆ ಇದೇ ನಶೆಯಿರಲಿ - ನಾವು ತಂದೆಯನ್ನು ನೆನಪು ಮಾಡಿ ಜನ್ಮ-ಜನ್ಮಾಂತರಕ್ಕಾಗಿ ಪವಿತ್ರರಾಗುತ್ತೇವೆ. ನಿಮಗೆ ತಿಳಿದಿದೆ, ಭಲೆ ಎಷ್ಟಾದರೂ ವಿಘ್ನಗಳು ಬರಲಿ, ಸ್ವರ್ಗದ ಸ್ಥಾಪನೆಯಂತೂ ಅವಶ್ಯವಾಗಿ ಆಗಿಯೇ ಆಗುತ್ತದೆ. ಹೊಸ ಪ್ರಪಂಚದ ಸ್ಥಾಪನೆ ಮತ್ತು ಹಳೆಯ ಪ್ರಪಂಚದ ವಿನಾಶವಂತೂ ಆಗಿಯೇ ಆಗುತ್ತದೆ. ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಇದರಲ್ಲಿ ಸಂಶಯದ ಮಾತೇ ಇಲ್ಲ ಆದ್ದರಿಂದ ಇದರಲ್ಲಿ ಯಾವುದೇ ಸಂಶಯ ಬರಬಾರದು. ಪತಿತ-ಪಾವನ ಎಂಬ ಶಬ್ಧವನ್ನಂತೂ ಎಲ್ಲರೂ ಹೇಳುತ್ತಾರೆ. ಆಂಗ್ಲ ಭಾಷೆಯಲ್ಲಿಯೂ ಸಹ ಬಂದು ನಮ್ಮ ದುಃಖದಿಂದ ಲಿಬರೇಟ್ ಮಾಡಿ ಎಂದು ಹೇಳುತ್ತಾರೆ. ಪಂಚ ವಿಕಾರಗಳಿಂದಲೇ ದುಃಖವಾಗುತ್ತದೆ. ಸ್ವರ್ಗವು ನಿರ್ವಿಕಾರಿ ಪ್ರಪಂಚ, ಸುಖಧಾಮವಾಗಿದೆ. ನೀವು ಮಕ್ಕಳು ಈಗ ಸ್ವರ್ಗದಲ್ಲಿ ಹೋಗಬೇಕಾಗಿದೆ. ಸ್ವರ್ಗವೆಂದರೆ ಮೇಲಿದೆಯೆಂದು ಮನುಷ್ಯರು ತಿಳಿದುಕೊಳ್ಳುತ್ತಾರೆ ಆದರೆ ಮೇಲಿರುವುದು ಮುಕ್ತಿಧಾಮವೆಂದು ಅವರಿಗೆ ತಿಳಿದೇ ಇಲ್ಲ. ಜೀವನ್ಮುಕ್ತಿಯಲ್ಲಂತೂ ಇಲ್ಲಿಯೇ ಬರಬೇಕಾಗಿದೆ. ತಂದೆಯು ನಿಮಗೆ ತಿಳಿಸುತ್ತಾರೆ - ಇದನ್ನು ಚೆನ್ನಾಗಿ ಧಾರಣೆ ಮಾಡಿಕೊಂಡು ಜ್ಞಾನದ ಮಂಥನ ಮಾಡಬೇಕಾಗಿದೆ. ಆ ವಿದ್ಯಾರ್ಥಿಗಳೂ ಸಹ ಮನೆಯಲ್ಲಿ ಇದೇ ಚಿಂತನೆ ಮಾಡುತ್ತಿರುತ್ತಾರೆ ಇದನ್ನು ಮಾಡಬೇಕು, ಇದನ್ನು ಬರೆದುಕೊಡಬೇಕೆಂದು. ಹಾಗೆಯೇ ನೀವು ಮಕ್ಕಳು ನಿಮ್ಮ ಕಲ್ಯಾಣಕ್ಕಾಗಿ ಆತ್ಮವನ್ನು ಸತೋಪ್ರಧಾನವನ್ನಾಗಿ ಮಾಡಿಕೊಳ್ಳಬೇಕಾಗಿದೆ. ಪವಿತ್ರರಾಗಿ ಮುಕ್ತಿಧಾಮದಲ್ಲಿ ಹೋಗಬೇಕಾಗಿದೆ ಮತ್ತು ಜ್ಞಾನದಿಂದ ನೀವು ದೇವತೆಗಳಾಗುತ್ತೀರಿ. ನಾವು ಮನುಷ್ಯರಿಂದ ವಕೀಲರಾಗುತ್ತೇವೆ, ನಾವು ಗವರ್ನರ್ ಆಗುತ್ತೇವೆಂದು ಆತ್ಮವೇ ಹೇಳುತ್ತದೆ. ಆತ್ಮವೇ ಶರೀರದ ಜೊತೆಯಿರುತ್ತದೆ. ಒಂದುವೇಳೆ ಶರೀರವು ಸಮಾಪ್ತಿಯಾದರೆ ಮತ್ತೆ ಹೊಸದಾಗಿ ಓದಬೇಕಾಗುತ್ತದೆ. ಆತ್ಮವೇ ವಿಶ್ವದ ಮಾಲೀಕನಾಗಲು ಪುರುಷಾರ್ಥ ಮಾಡುತ್ತದೆ. ತಂದೆಯು ತಿಳಿಸುತ್ತಾರೆ, ಇದನ್ನು ಪಕ್ಕಾ ನೆನಪಿಟ್ಟುಕೊಳ್ಳಿ - ನಾವಾತ್ಮರಾಗಿದ್ದೇವೆ. ದೇವತೆಗಳಿಗೆ ಈ ರೀತಿ ಹೇಳಬೇಕಾಗುವುದಿಲ್ಲ, ನೆನಪು ಮಾಡಬೇಕಾಗುವುದಿಲ್ಲ ಏಕೆಂದರೆ ಅವರು ಪಾವನರಾಗಿದ್ದಾರೆ. ಪ್ರಾಲಬ್ಧವನ್ನು ಭೋಗಿಸುತ್ತಿದ್ದಾರೆ, ತಂದೆಯನ್ನು ನೆನಪು ಮಾಡಬೇಕಾಗಲು ಅವರೇನು ಪತಿತರೇ! ನೀವಾತ್ಮಗಳು ಪತಿತರಾಗಿದ್ದೀರಿ ಆದ್ದರಿಂದ ತಂದೆಯನ್ನು ನೆನಪು ಮಾಡಬೇಕಾಗಿದೆ. ದೇವತೆಗಳಿಗಂತೂ ನೆನಪು ಮಾಡುವ ಅವಶ್ಯಕತೆಯಿರುವುದಿಲ್ಲ. ಇದು ನಾಟಕವಲ್ಲವೆ. ಒಂದು ದಿನವೂ ಸಹ ಇನ್ನೊಂದು ದಿನಕ್ಕೆ ಸಮಾನವಾಗಿರುವುದೇ ಇಲ್ಲ. ಈ ನಾಟಕವು ನಡೆಯುತ್ತಿರುತ್ತದೆ. ಇಡೀ ದಿನದ ಪಾತ್ರವು ಕ್ಷಣ-ಪ್ರತಿಕ್ಷಣ ಬದಲಾಗುತ್ತಿರುತ್ತದೆ. ಎಲ್ಲವೂ ರೆಕಾರ್ಡ್ ಆಗುತ್ತಿರುತ್ತದೆ ಆದ್ದರಿಂದ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ಯಾವುದೇ ಮಾತಿನಲ್ಲಿ ಹೃದಯ ವಿಧೀರ್ಣರಾಗಬೇಡಿ. ಇವು ಜ್ಞಾನದ ಮಾತುಗಳಾಗಿವೆ. ಭಲೆ ತಮ್ಮ ಉದ್ಯೋಗ-ವ್ಯವಹಾರಗಳನ್ನೂ ಮಾಡಿ ಆದರೆ ಭವಿಷ್ಯ ಶ್ರೇಷ್ಠ ಪದವಿಯನ್ನು ಪಡೆಯಲು ಪೂರ್ಣ ಪುರುಷಾರ್ಥ ಮಾಡಿ. ಗೃಹಸ್ಥ ವ್ಯವಹಾರದಲ್ಲಿಯೂ ಇರಬೇಕಾಗಿದೆ. ಕುಮಾರಿಯರಂತೂ ಗೃಹಸ್ಥದಲ್ಲಿ ಹೋಗಿಯೇ ಇಲ್ಲ. ಯಾರಿಗೆ ಮಕ್ಕಳು-ಮರಿಗಳಿದ್ದಾರೆಯೋ ಅವರಿಗೆ ಗೃಹಸ್ಥಿಗಳೆಂದು ಹೇಳಲಾಗುತ್ತದೆ. ತಂದೆಯಂತೂ ಅಧರ್ ಕುಮಾರಿ ಮತ್ತು ಕುಮಾರಿಯರೆಲ್ಲರಿಗೂ ಓದಿಸುತ್ತಾರೆ. ಅಧರ್ ಕುಮಾರಿ ಎಂಬುದರ ಅರ್ಥವನ್ನೇ ತಿಳಿದುಕೊಂಡಿಲ್ಲ. ಅಧರ್ ಕುಮಾರಿಯೆಂದರೆ ಅರ್ಧಶರೀರವೆಂದು ಅರ್ಥವಾಗಿದೆಯೇ? ನೀವೇನು ತಿಳಿದುಕೊಂಡಿದ್ದೀರಿ? ಕನ್ಯೆಯು ಪವಿತ್ರವಾಗಿರುತ್ತಾಳೆ. ಯಾರು ಅಪವಿತ್ರರಾದ ನಂತರ ಮತ್ತೆ ಪವಿತ್ರರಾಗುವರೋ ಅವರಿಗೆ ಅಧರ್ ಕನ್ಯೆಯೆಂದು ಹೇಳಲಾಗುತ್ತದೆ. ಇಲ್ಲಿ ನಿಮ್ಮದೇ ನೆನಪಾರ್ಥವು ನಿಂತಿದೆ. ತಂದೆಯೆಂದು ನೀವು ಮಕ್ಕಳಿಗೆ ತಿಳಿಸಿಕೊಡುತ್ತಾರೆ. ನಿಮಗೆ ಓದಿಸುತ್ತಾರೆ. ನಿಮಗೆ ತಿಳಿದಿದೆ, ನಾವಾತ್ಮಗಳು ಮೂಲವತನವನ್ನು ತಿಳಿದುಕೊಂಡಿದ್ದೇವೆ, ಸೂರ್ಯವಂಶೀ-ಚಂದ್ರವಂಶೀಯರು ಹೇಗೆ ರಾಜ್ಯ ಮಾಡುತ್ತಾರೆ? ಕ್ಷತ್ರಿಯ ತನದ ಚಿಹ್ನೆಯಾಗಿ ಬಾಣವನ್ನು ಏಕೆ ತೋರಿಸಿದ್ದಾರೆ ಎಂಬುದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ಇಲ್ಲಿ ಯುದ್ಧ ಮುಂತಾದುದರ ಮಾತಿಲ್ಲ. ಅಸುರರ ಮಾತೂ ಇಲ್ಲ ಅಥವಾ ಸೀತೆಯ ಅಪಹರಣದ ಮಾತೂ ಸಿದ್ಧವಾಗುವುದಿಲ್ಲ. ಸೀತೆಯನ್ನು ಅಪಹರಿಸಿಕೊಂಡು ಹೋಗುವಂತಹ ರಾವಣನು ಯಾರೂ ಇಲ್ಲ. ಅಂದಾಗ ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ನಾವು ಸ್ವರ್ಗದ ಮತ್ತು ಮುಕ್ತಿ-ಜೀವನ್ಮುಕ್ತಿಯ ಮಾರ್ಗದರ್ಶಕರಾಗಿದ್ದೇವೆಂದು ನೀವು ತಿಳಿದುಕೊಂಡಿದ್ದೀರಿ. ಅವರು ಸ್ಥೂಲ ಯಾತ್ರೆಯ ಮಾರ್ಗದರ್ಶಕರಿರುತ್ತಾರೆ, ನಾವು ಆತ್ಮಿಕ ಮಾರ್ಗದರ್ಶಕರಾಗಿದ್ದೇವೆ. ಅವರು ಕಲಿಯುಗೀ ಬ್ರಾಹ್ಮಣರಾಗಿದ್ದಾರೆ, ನಾವು ಪುರುಷೋತ್ತಮ ಸಂಗಮಯುಗದಲ್ಲಿದ್ದೇವೆ. ಪುರುಷೋತ್ತಮರಾಗಲು ಓದುತ್ತಿದ್ದೇವೆ. ತಂದೆಯು ಅನೇಕ ಪ್ರಕಾರವಾಗಿ ತಿಳಿಸುತ್ತಿರುತ್ತಾರೆ ಆದರೂ ಸಹ ದೇಹಾಭಿಮಾನದಲ್ಲಿ ಬರುವುದರಿಂದ ಮರೆತು ಹೋಗುತ್ತಾರೆ. ನಾನಾತ್ಮನಾಗಿದ್ದೇನೆ, ತಂದೆಯ ಮಗುವಾಗಿದ್ದೇನೆ ಎಂಬ ನಶೆಯೇ ಇರುವುದಿಲ್ಲ. ಎಷ್ಟು ನೆನಪು ಮಾಡುತ್ತಾ ಇರುತ್ತೀರೋ ಅಷ್ಟು ದೇಹಾಭಿಮಾನವು ಕಳೆಯುತ್ತಾ ಹೋಗುವುದು. ತಮ್ಮನ್ನು ಸಂಭಾಲನೆ ಮಾಡಿಕೊಳ್ಳುತ್ತಾ ಇರಿ. ನೋಡಿಕೊಳ್ಳಿ, ನನಗೆ ದೇಹಾಭಿಮಾನವು ಕಳೆದಿದೆಯೇ? ನಾವೀಗ ಹೋಗುತ್ತಿದ್ದೇವೆ ನಂತರ ವಿಶ್ವದ ಮಾಲೀಕರಾಗುತ್ತೇವೆ. ನಮ್ಮ ಪಾತ್ರವೇ ನಾಯಕ-ನಾಯಕಿಯ ಪಾತ್ರವಾಗಿದೆ. ಯಾರಾದರೂ ವಿಜಯಿಗಳಾದಾಗ ಅವರಿಗೆ ಹೀರೋ-ಹೀರೊಯಿನ್ ಎಂದು ಹೆಸರು ಬರುತ್ತದೆ. ನೀವೂ ಸಹ ವಿಜಯಿಗಳಾಗುತ್ತೀರಿ ಆದ್ದರಿಂದ ಹೀರೋ-ಹಿರೋಯಿನ್ ಎಂಬ ಹೆಸರು ಬರುತ್ತದೆ ಅದೂ ಈ ಸಮಯದಲ್ಲಿ, ಇದಕ್ಕಿಂತ ಮೊದಲು ಇರಲಿಲ್ಲ. ಸೋತು ಹೋಗುವವರಿಗೆ ಹೀರೋ-ಹೀರೊಯಿನ್ ಎಂದು ಕರೆಯುವುದಿಲ್ಲ. ನಾವೀಗ ಹೋಗಿ ಹೀರೋ-ಹೀರೋಯಿನ್ ಆಗುತ್ತೇವೆಂದು ಮಕ್ಕಳು ತಿಳಿದುಕೊಂಡಿದ್ದೀರಿ. ನಿಮ್ಮದು ಶ್ರೇಷ್ಠ ಪಾತ್ರವಿದೆ, ಕವಡೆ ಮತ್ತು ವಜ್ರದ ನಡುವೆಯಂತೂ ಬಹಳ ಅಂತರವಿದೆ. ಭಲೆ ಯಾರೆಷ್ಟಾದರೂ ಲಕ್ಷ್ಯಾಧೀಶ್ವರ, ಕೋಟ್ಯಾಧೀಶ್ವರರಿರಲಿ ಆದರೆ ನೀವು ತಿಳಿದುಕೊಂಡಿದ್ದೀರಿ - ಇದೆಲ್ಲವೂ ವಿನಾಶವಾಗಲಿದೆ.

ನೀವಾತ್ಮಗಳು ಧನವಂತರಾಗುತ್ತಾ ಹೋಗುತ್ತೀರಿ. ಉಳಿದವರೆಲ್ಲರೂ ದಿವಾಳಿಗಳಾಗುತ್ತಿದ್ದಾರೆ. ಇವೆಲ್ಲಾ ಮಾತುಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ, ನಿಶ್ಚಯದಲ್ಲಿರಬೇಕಾಗಿದೆ. ಇಲ್ಲಿರುವಾಗ ನಶೆಯೇರುತ್ತದೆ, ಹೊರಗಡೆ ಹೋದ ಕೂಡಲೇ ನಶೆಯು ಇಳಿದು ಬಿಡುತ್ತದೆ. ಇಲ್ಲಿಯ ಮಾತುಗಳು ಇಲ್ಲಿಯೇ ಉಳಿದುಕೊಳ್ಳುತ್ತವೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಬುದ್ಧಿಯಲ್ಲಿರಲಿ, ನಮಗೆ ತಂದೆಯು ಓದಿಸುತ್ತಿದ್ದಾರೆ ಯಾವ ವಿದ್ಯೆಯಿಂದ ನಾವು ಮನುಷ್ಯರಿಂದ ದೇವತೆಗಳಾಗುತ್ತೇವೆ. ಇದರಲ್ಲಿ ಯಾವುದೇ ಕಷ್ಟದ ಮಾತಿಲ್ಲ. ಉದ್ಯೋಗ-ವ್ಯವಹಾರಗಳು ಎಲ್ಲದರಿಂದಲೂ ಸಮಯವನ್ನು ತೆಗೆದು ನೆನಪು ಮಾಡಬಹುದು. ಇದು ತನ್ನ ಆತ್ಮದ ಉನ್ನತಿಗಾಗಿ ವ್ಯಾಪಾರವಲ್ಲವೆ? ರಜಾ ತೆಗೆದುಕೊಂಡು ತಂದೆಯನ್ನು ನೆನಪು ಮಾಡಿ, ಇದು ಸುಳ್ಳು ಹೇಳುವುದೆಂದಲ್ಲ. ಇಡೀ ದಿನ ಸುಮ್ಮನೆ ಕಳೆದು ಬಿಡುವುದಲ್ಲ. ನಾವು ಭವಿಷ್ಯವನ್ನಾದರೂ ಸ್ವಲ್ಪ ಆಲೋಚಿಸಬೇಕು. ಯುಕ್ತಿಗಳು ಬಹಳಷ್ಟಿವೆ. ಎಷ್ಟು ಸಾಧ್ಯವೋ ಸಮಯವನ್ನು ತೆಗೆದು ತಂದೆಯನ್ನು ನೆನಪು ಮಾಡಿ. ಶರೀರ ನಿರ್ವಹಣೆಗಾಗಿ ಉದ್ಯೋಗ-ವ್ಯವಹಾರಗಳನ್ನು ಭಲೆ ಮಾಡಿ, ನಾನು ನಿಮಗೆ ವಿಶ್ವದ ಮಾಲೀಕರಾಗುವ ಬಹಳ ಒಳ್ಳೆಯ ಸಲಹೆ ಕೊಡುತ್ತೇನೆ. ನೀವು ಮಕ್ಕಳೂ ಸಹ ಎಲ್ಲರಿಗೆ ಸಲಹೆ ನೀಡುವವರಾಗಿದ್ದೀರಿ. ಹೇಗೆ ಸಲಹೆ ಕೊಡುವವರು ಇರುತ್ತಾರಲ್ಲವೆ. ನೀವೂ ಸಹ ಸಲಹಾಗಾರರಾಗಿದ್ದೀರಿ. ಎಲ್ಲರಿಗೆ ಮುಕ್ತಿ-ಜೀವನ್ಮುಕ್ತಿ ಹೇಗೆ ಸಿಗುವುದು ಎಂದು ಈ ಜನ್ಮದಲ್ಲಿ ಮಾರ್ಗವನ್ನು ತಿಳಿಸುತ್ತೀರಿ. ಮನುಷ್ಯರು ಸ್ಲೋಗನ್ಗಳನ್ನು ಮಾಡಿ ಗೋಡೆಗೆ ಹಾಕಿಸುತ್ತಾರೆ. ಪವಿತ್ರರಾಗಿ, ರಾಜಯೋಗಿಗಳಾಗಿ ಎಂದು ಬರೆಯುತ್ತೀರಿ ಆದರೆ ತಿಳಿದುಕೊಳ್ಳುವುದಿಲ್ಲ. ಈಗ ನಿಮಗೆ ತಿಳಿದಿದೆ, ತಂದೆಯಿಂದ ನಮಗೆ ಈ ಆಸ್ತಿಯು ಸಿಗುತ್ತ್ತಿದೆ, ಮುಕ್ತಿಧಾಮದ ಆಸ್ತಿಯೂ ಸಿಗುತ್ತದೆ. ನೀವು ನನ್ನನ್ನು ಪತಿತ-ಪಾವನನೆಂದು ಹೇಳುತ್ತೀರಿ ಆದ್ದರಿಂದ ನಾನು ಬಂದು ಪಾವನರಾಗುವ ಸಲಹೆಯನ್ನು ಕೊಡುತ್ತೇನೆ, ನೀವೂ ಸಹ ಸಲಹಾಗಾರರಾಗಿದ್ದೀರಿ. ಎಲ್ಲಿಯವರೆಗೆ ತಂದೆಯು ಬಂದು ಶ್ರೀಮತವನ್ನು ಕೊಡುವುದಿಲ್ಲವೋ, ಸಲಹೆ ನೀಡುವುದಿಲ್ಲವೋ ಅಲ್ಲಿಯವರೆಗೆ ಯಾರೂ ಸಹ ಮುಕ್ತಿಧಾಮದಲ್ಲಿ ಹೋಗಲು ಸಾಧ್ಯವಿಲ್ಲ. ಶ್ರೀ ಅರ್ಥಾತ್ ಶ್ರೇಷ್ಠ ಮತವು ಶಿವ ತಂದೆಯದೇ ಆಗಿದೆ. ಆತ್ಮಗಳಿಗೆ ಶಿವ ತಂದೆಯ ಶ್ರೀಮತ ಸಿಗುತ್ತದೆ. ಪಾಪಾತ್ಮ ಮತ್ತು ಪುಣ್ಯಾತ್ಮರೆಂದು ಹೇಳಲಾಗುತ್ತದೆ. ಪಾಪ ಶರೀರವೆಂದು ಹೇಳುವುದಿಲ್ಲ. ಆತ್ಮವು ಶರೀರದಿಂದ ಪಾಪ ಮಾಡುತ್ತದೆ ಆದ್ದರಿಂದ ಪಾಪಾತ್ಮರೆಂದು ಹೇಳಲಾಗುತ್ತದೆ. ಶರೀರವಿಲ್ಲದೆ ಆತ್ಮವು ಪಾಪವನ್ನಾಗಲಿ, ಪುಣ್ಯವನ್ನಾಗಲಿ ಮಾಡಲು ಸಾಧ್ಯವಿಲ್ಲ. ಅಂದಾಗ ಎಷ್ಟು ಸಾಧ್ಯವೋ ಅಷ್ಟು ವಿಚಾರ ಸಾಗರ ಮಂಥನ ಮಾಡಿ, ಬಹಳಷ್ಟು ಸಮಯವಿದೆ. ಟೀಚರ್ ಅಥವಾ ಪ್ರೋಫೆಸರ್ ಆಗಿದ್ದರೆ ಅವರಿಗೂ ಸಹ ಯುಕ್ತಿಯಿಂದ ಈ ಆತ್ಮಿಕ ವಿದ್ಯೆಯನ್ನು ಓದಿಸಬೇಕು. ಇದರಿಂದ ಅವರ ಕಲ್ಯಾಣವೂ ಆಗಲಿ, ಬಾಕಿ ಆ ಲೌಕಿಕ ವಿದ್ಯೆಯಿಂದೇನಾಗುತ್ತದೆ? ನಾವು ಇದನ್ನು ಓದಿಸುತ್ತೇವೆ, ಇನ್ನೂ ಸ್ವಲ್ಪವೇ ದಿನಗಳಿವೆ. ವಿನಾಶವು ಸನ್ಮುಖದಲ್ಲಿ ನಿಂತಿದೆ. ಹೇಗೆ ಮನುಷ್ಯರಿಗೆ ಮಾರ್ಗವನ್ನು ತಿಳಿಸುವುದೆಂದು ಒಳಗೆ ಉಮ್ಮಂಗ ಬರುತ್ತಿರುವುದು.

ಒಬ್ಬ ಮಗುವಿಗೆ ಪರೀಕ್ಷೆ ಪತ್ರಿಕೆಯು ಸಿಕ್ಕಿತ್ತು ಅದರಲ್ಲಿ ಗೀತೆಯ ಭಗವಂತನ ಪ್ರಶ್ನೆಯನ್ನು ಕೇಳಲಾಗಿತ್ತು. ಅದಕ್ಕೆ ಆ ಮಗು ಗೀತೆಯ ಭಗವಂತನು ಶಿವನೆಂದು ಬರೆದಿದ್ದರಿಂದ ಅನುತ್ತೀರ್ಣನನ್ನಾಗಿ ಮಾಡಿ ಬಿಟ್ಟರು. ನಾನಂತೂ ಗೀತೆಯ ಭಗವಂತ ಶಿವನಾಗಿದ್ದಾರೆ, ಜ್ಞಾನ ಸಾಗರ-ಪ್ರೇಮ ಸಾಗರನಾಗಿದ್ದಾರೆಂದು ಮಹಿಮೆಯನ್ನು ಬರೆದಿದ್ದೇನೆ, ಕೃಷ್ಣನ ಆತ್ಮವೂ ಈ ಜ್ಞಾನವನ್ನು ಪಡೆಯುತ್ತದೆ. ಇದನ್ನು ಬರೆದಿದ್ದರಿಂದ ಅನುತ್ತೀರ್ಣನಾಗಿ ಬಿಟ್ಟೆನು. ಇನ್ನು ಮುಂದೆ ನಾನು ಇದನ್ನು ಓದುವುದಿಲ್ಲ. ಇನ್ನುಮುಂದೆ ಆತ್ಮಿಕ ವಿದ್ಯೆಯಲ್ಲಿ ತೊಡಗುತ್ತೇನೆಂದು ಆ ಮಗುವು ತನ್ನ ತಂದೆ-ತಾಯಿಗೆ ಹೇಳಿತು. ಮಗುವು ಬಹಳ ಚತುರನಾಗಿದೆ, ಮೊದಲೇ ಹೇಳುತ್ತಿತ್ತು - ನಾನು ಈ ರೀತಿ ಬರೆಯುತ್ತೇನೆ, ಅನುತ್ತೀರ್ಣನಾಗುತ್ತೇನೆ ಎಂದು ಆದರೆ ಸತ್ಯವನ್ನು ಬರೆಯಬೇಕಲ್ಲವೆ. ಮುಂದೆ ಹೋದಂತೆ ಅವಶ್ಯವಾಗಿ ಈ ಮಗು ಏನನ್ನು ಬರೆದಿತ್ತೋ ಅದೇ ಸತ್ಯವೆಂದು ತಿಳಿದುಕೊಳ್ಳುತ್ತಾರೆ. ಯಾವಾಗ ಪ್ರಭಾವ ಬೀರುವುದೋ ಅಥವಾ ಪ್ರದರ್ಶನಿ, ಮ್ಯೂಸಿಯಂಗಳಲ್ಲಿ ಅವರನ್ನು ಕರೆಸುತ್ತೀರೋ ಆಗ ಇವರು ಹೇಳಿದ್ದೇ ಸರಿಯೆಂಬುದು ಅವರಿಗೆ ಅರ್ಥವಾಗುವುದು. ಬಹಳಷ್ಟು ಮಂದಿ ಬರುತ್ತಾರೆ ಆದ್ದರಿಂದ ವಿಚಾರ ಮಾಡಬೇಕು, ಮನುಷ್ಯರಿಗೆ ಕೂಡಲೇ ಇದು ಹೊಸ ಮಾತೆಂದು ಅರ್ಥವಾಗಲು ಹೇಗೆ ಬರೆಯಬೇಕು ಎಂದು. ಒಬ್ಬರಲ್ಲದಿದ್ದರೆ ಇನ್ನೊಬ್ಬರು, ಯಾರು ಇಲ್ಲಿಯವರಾಗಿರುವರೋ ಅವರು ಅವಶ್ಯವಾಗಿ ತಿಳಿದುಕೊಳ್ಳುತ್ತಾರೆ. ನೀವು ಎಲ್ಲರಿಗೆ ಆತ್ಮಿಕ ಮಾರ್ಗವನ್ನು ತಿಳಿಸುತ್ತೀರಿ. ಪಾಪ! ಮನುಷ್ಯರು ಎಷ್ಟು ದುಃಖಿಗಳಾಗಿದ್ದಾರೆ. ಅವರೆಲ್ಲರ ದುಃಖವನ್ನು ಹೇಗೆ ದೂರ ಮಾಡುವುದು? ಬಹಳಷ್ಟು ಕಿರಿಕಿರಿಯಿದೆಯಲ್ಲವೆ? ಹೇಗೆ ಒಬ್ಬರು ಇನ್ನೊಬ್ಬರಿಗೆ ಶತ್ರುಗಳಾಗುತ್ತಾರೆಂದರೆ ಒಮ್ಮೆಲೆ ಸಮಾಪ್ತಿ ಮಾಡಿ ಬಿಡುತ್ತಾರೆ. ಈಗ ತಂದೆಯು ಮಕ್ಕಳಿಗೆ ಬಹಳ ಚೆನ್ನಾಗಿ ತಿಳಿಸುತ್ತಾರೆ. ಮಾತೆಯರಂತೂ ಪಾಪ! ಅವಿದ್ಯಾವಂತರಿರುತ್ತಾರೆ. ನಾವು ಓದುಬರಹ ಕಲಿತಿಲ್ಲವೆಂದು ಹೇಳುತ್ತಾರೆ. ಅದಕ್ಕೆ ತಂದೆಯು ತಿಳಿಸುತ್ತಾರೆ - ಓದದೇ ಇರುವುದು ಒಳ್ಳೆಯದು. ಏನೆಲ್ಲವೂ ವೇದ-ಶಾಸ್ತ್ರಗಳನ್ನು ಓದಿದ್ದಾರೆಯೋ ಅದೆಲ್ಲವನ್ನೂ ಮರೆಯಬೇಕಾಗಿದೆ, ನಾನೀಗ ಏನನ್ನು ತಿಳಿಸುವೆನೋ ಅದನ್ನೇ ಕೇಳಿರಿ. ಸದ್ಗತಿಯನ್ನು ನಿರಾಕಾರ ಪರಮಪಿತ ಪರಮಾತ್ಮನ ಹೊರತು ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ, ಮನುಷ್ಯರಲ್ಲಿ ಜ್ಞಾನವೇ ಇಲ್ಲವೆಂದ ಮೇಲೆ ಸದ್ಗತಿ ಮಾಡಲು ಹೇಗೆ ಸಾಧ್ಯ! ಸದ್ಗತಿದಾತನು ಒಬ್ಬರೇ ಜ್ಞಾನ ಸಾಗರನಾಗಿದ್ದಾರೆ ಎಂಬುದನ್ನು ತಿಳಿಸಬೇಕಾಗಿದೆ. ಈ ರೀತಿ ಮನುಷ್ಯರು ಹೇಳುವುದಿಲ್ಲ. ಯಾರು ಇಲ್ಲಿಯವರಿರುವರೋ ಅವರು ತಿಳಿದುಕೊಳ್ಳ ಬಯಸುತ್ತಾರೆ. ಯಾರಾದರೂ ಒಬ್ಬರು ಹಿರಿಯ ವ್ಯಕ್ತಿಗಳು ತಿಳಿದುಕೊಂಡರೂ ಸಹ ಅವರಿಗೆ ಸಂದೇಶವು ಬಹಳಷ್ಟು ಹರಡುವುದು. ತುಳಸಿ ದಾಸರಂತಹ ಬಡವರ ಮಾತನ್ನು ಯಾರು ಕೇಳುವರು ಎಂಬ ಗಾಯನವಿದೆ. ಸರ್ವೀಸಿನ ಬಹಳಷ್ಟು ಯುಕ್ತಿಗಳನ್ನು ತಿಳಿಸುತ್ತಾರೆ, ಮಕ್ಕಳು ಅದನ್ನು ಕಾರ್ಯದಲ್ಲಿ ತರಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಉದ್ಯೋಗ-ವ್ಯವಹಾರ ಎಲ್ಲವನ್ನು ಮಾಡುತ್ತಾ ಭವಿಷ್ಯ ಶ್ರೇಷ್ಠ ಪದವಿಯನ್ನು ಪಡೆಯಲು ನೆನಪಿನಲ್ಲಿರುವ ಸಂಪೂರ್ಣ ಪುರುಷಾರ್ಥ ಮಾಡಬೇಕಾಗಿದೆ. ಈ ನಾಟಕವು ಕ್ಷಣ-ಪ್ರತಿಕ್ಷಣ ಬದಲಾಗುತ್ತಿರುತ್ತದೆ ಆದ್ದರಿಂದ ಎಂದೂ ಯಾವುದೇ ದೃಶ್ಯವನ್ನು ನೋಡಿ ಹೃದಯವಿಧೀರ್ಣರಾಗಬಾರದು.

2. ಈ ಆತ್ಮಿಕ ವಿದ್ಯೆಯನ್ನು ಓದಿ ಅನ್ಯರಿಗೂ ಓದಿಸಬೇಕಾಗಿದೆ. ಎಲ್ಲರ ಕಲ್ಯಾಣ ಮಾಡಬೇಕಾಗಿದೆ. ನಾವು ಹೇಗೆ ಎಲ್ಲರಿಗೆ ಪಾವನರಾಗುವ ಸಲಹೆಯನ್ನು ನೀಡುವುದು, ಮನೆಯ ಮಾರ್ಗವನ್ನು ತಿಳಿಸಬೇಕೆಂದು ಒಳಗಿನಿಂದ ಇದೇ ಉಮ್ಮಂಗ ಬರುತ್ತಿರಲಿ.

ವರದಾನ:
ಸರ್ವ ಸಂಬಂಧದ ಸಹಯೋಗದ ಅನುಭೂತಿಯ ಮುಖಾಂತರ ನಿರಂತರಯೋಗಿ, ಸಹಜಯೋಗಿ ಭವ.

ಪ್ರತಿ ಸಮಯ ತಂದೆಯ ಭಿನ್ನ-ಭಿನ್ನ ಸಂಬಂಧಗಳ ಸಹಯೋಗ ಪಡೆಯುವುದು ಅರ್ಥಾತ್ ಅನುಭವ ಮಾಡುವುದೇ ಸಹಜ ಯೋಗವಾಗಿದೆ. ತಂದೆ ಎಂತಹದೇ ಸಮಯದಲ್ಲಿ ಸಂಬಂಧ ನಿಭಾಯಿಸಲು ಬಂಧಿತರಾಗಿದ್ದಾರೆ. ಇಡೀ ಕಲ್ಪದಲ್ಲಿ ಈಗಲೇ ಸರ್ವ ಅನುಭವಗಳ ಗಣಿ ಪ್ರಾಪ್ತಿಯಾಗುವುದು, ಆದ್ದರಿಂದ ಸದಾ ಸರ್ವ ಸಂಬಂಧಗಳ ಸಹಯೋಗವನ್ನು ಪಡೆಯಿರಿ ಮತ್ತು ನಿರಂತರ ಯೋಗಿ, ಸಹಜಯೋಗಿಗಳಾಗಿ ಏಕೆಂದರೆ ಯಾರು ಸರ್ವ ಸಂಬಂಧಗಳ ಅನುಭೂತಿ ಅಥವಾ ಪ್ರಾಪ್ತಿಯಲ್ಲಿ ಮಗ್ನರಾಗಿರುತ್ತಾರೆ ಅವರು ಹಳೆಯ ಜಗತ್ತಿನ ವಾತಾವರಣದಿಂದ ಸಹಜವಾಗಿ ಉಪರಾಮವಾಗಿ ಬಿಡುತ್ತಾರೆ.

ಸ್ಲೋಗನ್:
ಸರ್ವಶಕ್ತಿಯಿಂದ ಸಂಪನ್ನರಾಗಿರುವುದು ಇದೇ ಬ್ರಾಹ್ಮಣ ಸ್ವರೂಪದ ವಿಶೇಷತೆಯಾಗಿದೆ.

ಅವ್ಯಕ್ತ ಸೂಚನೆ:- ಈಗ ಲಗನ್ನಿನ (ಪ್ರೀತಿಯ) ಅಗ್ನಿಯನ್ನು ಪ್ರಜ್ವಲಿತಗೋಳಿಸಿ ಯೋಗವನ್ನು ಜ್ವಾಲಾರೂಪವನ್ನಾಗಿ ಮಾಡಿ.

ತಪಸ್ವಿ ಮೂರ್ತಿಯ ಅರ್ಥವಾಗಿದೆ – ತಪಸ್ಸಿನ ಮೂಲಕ ಶಾಂತಿಯ ಶಕ್ತಿಯ ಕಿರಣಗಳನ್ನು ನಾಲ್ಕಾರು ಕಡೆ ಹರಡುವಂತಹ ಅನುಭವದಲ್ಲಿ ಬರಬೇಕು. ಇದು ತಪಸ್ವಿ ಸ್ವರೂಪ ಅನ್ಯರಿಗೆ ಕೊಡುವಂತಹ ಸ್ವರೂಪವಾಗಿದೆ. ಹೇಗೆ ಸೂರ್ಯ ವಿಶ್ವಕ್ಕೆ ಬೆಳಕನ್ನು ಕೊಟ್ಟಿತು ಮತ್ತು ಅನೇಕ ವಿನಾಶಿ ಪ್ರಾಪ್ತಿಗಳ ಅನುಭೂತಿ ಮಾಡಿಸುತ್ತದೆ. ಇಂತಹ ಮಹಾನ ತಪಸ್ವಿ ಆತ್ಮರು ಜ್ವಾಲಾ ರೂಪ ಶಕ್ತಿಶಾಲಿ ನೆನಪಿನ ಮೂಲಕ ಪ್ರಾಪ್ತಿಯ ಕಿರಣಗಳ ಅನುಭೂತಿಯನ್ನು ಮಾಡಿಸುತ್ತದೆ.