16.11.24         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ತಂದೆಯು ನಿಮಗೆ ಅತ್ಮೀಕ ಕಲೆಯನ್ನು ಕಲಿಸಲು ಬಂದಿದ್ದಾರೆ, ಈ ಕಲೆಯಿಂದ ನೀವು ಸೂರ್ಯ-ಚಂದ್ರರಿಗಿಂತಲೂ ದೂರ ಶಾಂತಿಧಾಮದಲ್ಲಿ ಹೋಗುತ್ತೀರಿ"

ಪ್ರಶ್ನೆ:
ವಿಜ್ಞಾನದ ಅಭಿಮಾನ ಮತ್ತು ಶಾಂತಿಯ ಅಭಿಮಾನದಲ್ಲಿ ಯಾವ ಅಂತರವಿದೆ?

ಉತ್ತರ:
ವಿಜ್ಞಾನದ ಅಭಿಮಾನಿಗಳು ಚಂದ್ರ-ನಕ್ಷತ್ರಗಳ ಮೇಲೆ ಹೋಗಲು ಎಷ್ಟೊಂದು ಖರ್ಚು ಮಾಡುತ್ತಾರೆ. ಶರೀರಕ್ಕೆ ಕಷ್ಟಕೊಟ್ಟು ಹೋಗುತ್ತಾರೆ. ರಾಕೆಟ್ ಎಲ್ಲಿಯೂ ಫೇಲ್ ಆಗದಿರಲಿ ಎಂದು ಅವರಿಗೆ ಭಯವಿರುತ್ತದೆ. ನೀವು ಮಕ್ಕಳು ಶಾಂತಿಯ ಅಭಿಮಾನಿಗಳು ಕವಡೆಯೂ ಖರ್ಚಿಲ್ಲದೆ ಸೂರ್ಯ-ಚಂದ್ರರಿಗೂ ದೂರ ಮೂಲವತನದಲ್ಲಿ ಹೊರಟುಹೋಗುತ್ತೀರಿ, ನಿಮಗೆ ಯಾವುದೇ ಭಯವಿಲ್ಲ ಏಕೆಂದರೆ ನೀವು ಶರೀರವನ್ನು ಇಲ್ಲಿಯೇ ಬಿಟ್ಟು ಹೋಗುತ್ತೀರಿ.

ಓಂ ಶಾಂತಿ.
ಆತ್ಮೀಕ ತಂದೆಯು ಆತ್ಮೀಕ ಮಕ್ಕಳಿಗೆ ತಿಳಿಸುತ್ತಾರೆ. ಮಕ್ಕಳು ಇದನ್ನು ಕೇಳುತ್ತಲೇ ಇರುತ್ತೀರಿ - ವಿಜ್ಞಾನಿಗಳು ಚಂದ್ರನ ಬಳಿಗೆ ಹೋಗುವ ಪ್ರಯತ್ನಪಡುತ್ತಿರುತ್ತಾರೆ ಆದರೆ ಅವರು ಕೇವಲ ಚಂದ್ರನವರೆಗೆ ಹೋಗುವ ಪ್ರಯತ್ನವನ್ನೇ ಮಾಡುತ್ತಿರುತ್ತಾರೆ, ಎಷ್ಟೊಂದು ಖರ್ಚು ಮಾಡುತ್ತಾರೆ. ಮೇಲೆ ಹೋಗುವಾಗ ಬಹಳ ಭಯವಿರುತ್ತದೆ. ಈಗ ನೀವು ತಮ್ಮ ಬಗ್ಗೆ ವಿಚಾರ ಮಾಡಿ - ನೀವು ಎಲ್ಲಿನ ನಿವಾಸಿಗಳಾಗಿದ್ದೀರಿ? ಅವರಂತೂ ಚಂದ್ರನಕಡೆ ಹೋಗುತ್ತಾರೆ ಆದರೆ ನೀವು ಸೂರ್ಯ ಚಂದ್ರನಿಗಿಂತಲೂ ದೂರ ಒಮ್ಮೆಲೆ ಮೂಲವತನಕ್ಕೆ ಹೋಗುತ್ತೀರಿ. ಅವರು ಮೇಲೆ ಹೋಗುತ್ತಾರೆಂದರೆ ಅವರಿಗೆ ಬಹಳಷ್ಟು ಹಣವು ಸಿಗುತ್ತದೆ. ಮೇಲೆ ಗ್ರಹಗಳಲ್ಲಿ ಸುತ್ತಾಡಿಕೊಂಡು ಬರುತ್ತಾರೆಂದರೆ ಅವರಿಗೆ ಲಕ್ಷಾಂತರ ಉಡುಗೊರೆಗಳು ಸಿಗುತ್ತವೆ. ಶರೀರದ ಕಷ್ಟವನ್ನಿಟ್ಟುಕೊಂಡು ಹೋಗುತ್ತಾರೆ. ಅವರು ವೈಜ್ಞಾನಿಕ ಶಕ್ತಿಯುಳ್ಳವರಾಗಿದ್ದಾರೆ, ನಿಮ್ಮ ಬಳಿ ಶಾಂತಿಯ ಶಕ್ತಿಯಿದೆ. ನಿಮಗೆ ತಿಳಿದಿದೆ, ನಾವಾತ್ಮಗಳು ನಮ್ಮ ಶಾಂತಿಧಾಮ, ಬ್ರಹ್ಮಾಂಡದಲ್ಲಿ ಹೋಗುತ್ತೇವೆ. ಆತ್ಮವೇ ಎಲ್ಲವನ್ನೂ ಮಾಡುತ್ತದೆ. ಅವರೂ ಸಹ ಶರೀರದ ಜೊತೆ ಮೇಲೆ ಹೋಗುತ್ತಾರೆ, ಬಹಳ ಅಪಾಯಕಾರಿಯಾಗಿದೆ. ಮೇಲಿನಿಂದ ಬಿದ್ದರೆ ಪ್ರಾಣವು ಹೊರಟುಹೋಗುವುದೆಂದು ಹೆದರುತ್ತಾರೆ, ಅವೆಲ್ಲವೂ ಶಾರೀರಿಕ ಕಲೆಗಳಾಗಿವೆ. ನಿಮಗೆ ತಂದೆಯು ಆತ್ಮೀಕ ಕಲೆಯನ್ನು ಕಲಿಸುತ್ತಾರೆ, ಈ ಕಲೆಯನ್ನು ಕಲಿಯುವುದರಿಂದ ನಿಮಗೆ ಎಷ್ಟೊಂದು ದೊಡ್ಡ ಬಹುಮಾನವು ಸಿಗುತ್ತದೆ, ನಂಬರ್‌ವಾ‌ರ್ ಪುರುಷಾರ್ಥದನುಸಾರ 21 ಜನ್ಮಗಳ ಬಹುಮಾನವು ಸಿಗುತ್ತದೆ. ಇತ್ತೀಚೆಗೆ ಸರ್ಕಾರವು ಲಾಟರಿಯನ್ನು ತೆಗೆಯುತ್ತದೆಯಲ್ಲವೆ! ಇಲ್ಲಿ ತಂದೆಯು ನಿಮಗೆ ಬಹುಮಾನವನ್ನು ಕೊಡುತ್ತಾರೆ ಮತ್ತೇನು ಕಲಿಸುತ್ತಾರೆ? ನಿಮ್ಮನ್ನು ಸಂಪೂರ್ಣ ಮೇಲೆ ಕರೆದುಕೊಂಡು ಹೋಗುತ್ತಾರೆ, ಅಲ್ಲಿ ನಿಮ್ಮ ಮನೆಯಿದೆ. ಈಗ ನಿಮಗೆ ನೆನಪಿಗೆ ಬರುತ್ತದೆಯಲ್ಲವೆ - ನಮ್ಮ ಮನೆಯು ಎಲ್ಲಿದೆ ಮತ್ತು ಕಳೆದುಕೊಂಡ ರಾಜಧಾನಿಯು ಎಲ್ಲಿದೆ? ರಾವಣನು ಕಸಿದುಕೊಂಡನು, ಈಗ ಪುನಃ ನಾವು ಮೂಲ ಮನೆಗೂ ಹೋಗುತ್ತೇವೆ ಮತ್ತು ರಾಜ್ಯಭಾಗ್ಯವನ್ನೂ ಪ್ರಾಪ್ತಿ ಮಾಡಿಕೊಳ್ಳುತ್ತೇವೆ. ಮುಕ್ತಿಧಾಮವು ನಮ್ಮ ಮನೆಯಾಗಿದೆ ಎಂದು ಯಾರಿಗೂ ತಿಳಿದಿಲ್ಲ. ಈಗ ನೀವು ಮಕ್ಕಳಿಗೆ ಕಲಿಸಿಕೊಡುವುದಕ್ಕಾಗಿ ತಂದೆಯು ನೋಡಿ ಎಲ್ಲಿಂದ ಬರುತ್ತಾರೆ, ದೂರದಿಂದ ಬರುತ್ತಾರೆ. ಆತ್ಮವು ರಾಕೆಟ್ ಆಗಿದೆ, ಮೇಲೆ ಹೋಗಿ ಚಂದ್ರನಲ್ಲೇನಿದೆ, ನಕ್ಷತ್ರಗಳಲ್ಲಿ ಏನಿದೆ ಎಂದು ನೋಡಲು ಪ್ರಯತ್ನ ಪಡುತ್ತಿರುತ್ತಾರೆ. ಈಗ ನೀವು ಮಕ್ಕಳಿಗೆ ತಿಳಿದಿದೆ - ಇವಂತೂ ಈ ಸೃಷ್ಟಿಯ ರಂಗಮಂಚದ ದೀಪಗಳಾಗಿವೆ. ಹೇಗೆ ರಂಗಮಂಚದಲ್ಲಿ ವಿದ್ಯುದ್ದೀಪಗಳನ್ನು ಉರಿಸುತ್ತಾರೆ, ಮ್ಯೂಸಿಯಂನಲ್ಲಿಯೂ ಸಹ ನೀವು ದೀಪಗಳನ್ನು ಇಡುತ್ತೀರಲ್ಲವೆ? ಇದು ಬೇಹದ್ದಿನ ಪ್ರಪಂಚವಾಗಿದೆ, ಇದರಲ್ಲಿ ಈ ಸೂರ್ಯ, ಚಂದ್ರ, ನಕ್ಷತ್ರಗಳು ಬೆಳಕು ಕೊಡುವಂತಹವಾಗಿವೆ. ಸೂರ್ಯ, ಚಂದ್ರರು ದೇವತೆಗಳೆಂದು ಮನುಷ್ಯರು ತಿಳಿಯುತ್ತಾರೆ ಆದರೆ ಇವು ದೇವತೆಗಳಲ್ಲ. ತಂದೆಯು ಬಂದು ಹೇಗೆ ನಮ್ಮನ್ನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಾರೆಂದು ಈಗ ನೀವು ತಿಳಿದುಕೊಂಡಿದ್ದೀರಿ. ಇವರು ಜ್ಞಾನಸೂರ್ಯ, ಜ್ಞಾನಚಂದ್ರಮ ಮತ್ತು ಜ್ಞಾನನಕ್ಷತ್ರಗಳಾಗಿದ್ದಾರೆ. ಜ್ಞಾನದಿಂದಲೇ ನೀವು ಮಕ್ಕಳ ಸದ್ಗತಿಯಾಗುತ್ತಿದೆ. ನೀವು ಎಷ್ಟು ದೂರ ಹೋಗುತ್ತೀರಿ. ತಂದೆಯೇ ಮನೆಗೆ ಹೋಗುವ ಮಾರ್ಗವನ್ನು ತಿಳಿಸಿದ್ದಾರೆ, ತಂದೆಯ ವಿನಃ ಯಾರೂ ಹಿಂತಿರುಗಿ ತಮ್ಮ ಮನೆಗೆ ಹೋಗಲು ಸಾಧ್ಯವಿಲ್ಲ. ಯಾವಾಗ ತಂದೆಯು ಬಂದು ಶಿಕ್ಷಣವನ್ನು ಕೊಡುತ್ತಾರೆಯೋ ಆಗಲೇ ನೀವು ತಿಳಿದುಕೊಳ್ಳುತ್ತೀರಿ. ಇದೂ ಸಹ ನಿಮಗೆ ತಿಳಿದಿದೆ - ನಾವಾತ್ಮಗಳು ಪವಿತ್ರರಾದಾಗಲೇ ನಮ್ಮ ಮನೆಗೆ ಹೋಗಲು ಸಾಧ್ಯ ಅಂದರೆ ಕೊನೆಯಲ್ಲಿ ಯೋಗಬಲದಿಂದ ಇಲ್ಲವೆ ಶಿಕ್ಷೆಗಳ ಬಲದಿಂದ ಪಾವನರಾಗಬೇಕಾಗಿದೆ. ತಂದೆಯಂತೂ ತಿಳಿಸುತ್ತಿರುತ್ತಾರೆ, ಎಷ್ಟು ನೀವು ತಂದೆಯನ್ನು ನೆನಪು ಮಾಡುತ್ತೀರೋ ಅಷ್ಟು ಪಾವನರಾಗುತ್ತೀರಿ, ನೆನಪು ಮಾಡದಿದ್ದರೆ ಪತಿತರಾಗಿಯೇ ಉಳಿದುಬಿಡುತ್ತೀರಿ ಮತ್ತೆ ಬಹಳ ಶಿಕ್ಷೆಗಳನ್ನನುಭವಿಸಬೇಕು ಮತ್ತೆ ಪದವಿಯೂ ಭ್ರಷ್ಟವಾಗಿಬಿಡುತ್ತದೆ. ಸ್ವಯಂ ತಂದೆಯೇ ಕುಳಿತು ನೀವು ಮಕ್ಕಳು ಹೀಗೀಗೆ ಮನೆಗೆ ಹೋಗಬಹುದೆಂದು ತಿಳಿಸುತ್ತಾರೆ. ಬ್ರಹ್ಮಾಂಡವೆಂದರೇನು, ಸೂಕ್ಷ್ಮವತನವೆಂದರೇನು ಎನ್ನುವುದೇನೂ ತಿಳಿದಿಲ್ಲ. ವಿದ್ಯಾರ್ಥಿಗಳು ಮೊದಲು ಏನನ್ನೂ ತಿಳಿದುಕೊಂಡಿರುವುದಿಲ್ಲ, ಯಾವಾಗ ಓದಲು ಆರಂಭಿಸುವರೋ ಆಗ ಜ್ಞಾನವು ಸಿಗುತ್ತದೆ. ಜ್ಞಾನ(ವಿದ್ಯೆ)ವೂ ಸಹ ಕೆಲವೊಂದು ಚಿಕ್ಕದು, ಇನ್ನೂ ಕೆಲವು ವಿದ್ಯೆಯು ದೊಡ್ಡದಿರುತ್ತದೆ, ಐ.ಸಿ.ಎಸ್..ನ ಪರೀಕ್ಷೆಯನ್ನು ತೇರ್ಗಡೆ ಮಾಡಿದರೆ ಅವರನ್ನು ಜ್ಞಾನಪೂರ್ಣರೆಂದು ಹೇಳುತ್ತಾರೆ. ಇದಕ್ಕಿಂತ ಉನ್ನತ ವಿದ್ಯೆಯು ಮತ್ತಾವುದೂ ಇಲ್ಲ. ಈಗ ನೀವೂ ಸಹ ಎಷ್ಟು ಉನ್ನತ ಜ್ಞಾನವನ್ನು ಕಲಿಯುತ್ತೀರಿ, ತಂದೆಯು ನಿಮಗೆ ಪವಿತ್ರರಾಗುವ ಯುಕ್ತಿಯನ್ನು ತಿಳಿಸುತ್ತಾರೆ - ಮಕ್ಕಳೇ, ನನ್ನೊಬ್ಬನನ್ನು ನೆನಪು ಮಾಡಿದರೆ ನೀವು ಪತಿತರಿಂದ ಪಾವನರಾಗುತ್ತೀರಿ. ಮೂಲತಃ ನೀವಾತ್ಮಗಳೂ ಪಾವನರಾಗಿದ್ದಿರಿ, ಮೇಲೆ ತಮ್ಮ ಮನೆಯಲ್ಲಿದ್ದಿರಿ, ಯಾವಾಗ ನೀವು ಸತ್ಯಯುಗದಲ್ಲಿ ಜೀವನ್ಮುಕ್ತಿಯಲ್ಲಿರುವಿರೋ ಆಗ ಉಳಿದವರೆಲ್ಲರೂ ಮುಕ್ತಿಧಾಮದಲ್ಲಿರುತ್ತಾರೆ. ಮುಕ್ತಿ ಮತ್ತು ಜೀವನ್ಮುಕ್ತಿ ಎರಡಕ್ಕೂ ನಾವು ಶಿವಾಲಯವೆಂದು ಹೇಳುತ್ತೇವೆ. ಮುಕ್ತಿಯಲ್ಲಿ ಶಿವತಂದೆಯೂ ಇರುತ್ತಾರೆ, ನಾವಾತ್ಮಗಳೂ ಇರುತ್ತೇವೆ. ಇದು ಆತ್ಮೀಕ ಅತ್ಯುನ್ನತ ಜ್ಞಾನವಾಗಿದೆ. ನಾವು ಹೋಗಿ ಚಂದ್ರನ ಮೇಲೆ ವಾಸಿಸುತ್ತೇವೆ ಎಂದು ಅವರು ಹೇಳುತ್ತಾರೆ. ಎಷ್ಟೊಂದು ತಲೆಕೆಡಿಸಿಕೊಳ್ಳುತ್ತಾರೆ, ತಮ್ಮ ಸಾಹಸವನ್ನು ತೋರಿಸುತ್ತಾರೆ. ಎಷ್ಟೊಂದು ಮಲ್ಟಿ-ಮಿಲಿಯನ್ ಮೈಲುಗಳಷ್ಟು ಮೇಲಕ್ಕೆ ಹೋಗುತ್ತಾರೆ ಆದರೆ ಅವರ ಆಸೆಯು ಪೂರ್ಣವಾಗುವುದಿಲ್ಲ ಮತ್ತು ನಿಮ್ಮ ಆಸೆಯು ಪೂರ್ಣವಾಗುತ್ತದೆ. ಅವರದು ಸುಳ್ಳು ಶರೀರದ ಅಭಿಮಾನವಾಗಿದೆ, ನಿಮ್ಮದು ಆತ್ಮಿಕ ಅಭಿಮಾನವಾಗಿದೆ. ಅವರು ಮಾಯೆಯ ಸಾಹಸವನ್ನು ಎಷ್ಟೊಂದು ತೋರಿಸುತ್ತಾರೆ ಆಗ ಮನುಷ್ಯರು ಎಷ್ಟೊಂದು ಚಪ್ಪಾಳೆ ತಟ್ಟಿ ಅಭಿನಂದನೆಗಳನ್ನು ಕೊಡುತ್ತಾರೆ, ಅವರಿಗೆ ಬಹಳಷ್ಟು ಸಿಗುತ್ತದೆ. 5-6 ಕೋಟಿಗಳು ಸಿಗುತ್ತದೆ. ನೀವು ಮಕ್ಕಳಿಗೆ ಈ ಜ್ಞಾನವಿದೆ, ಅವರಿಗೆ ಎಷ್ಟೆಲ್ಲಾ ಹಣವು ಸಿಗುತ್ತದೆಯೋ ಅದೆಲ್ಲವೂ ಸಮಾಪ್ತಿಯಾಗಿಬಿಡುತ್ತದೆ. ಇನ್ನು ಸ್ವಲ್ಪ ದಿನಗಳಿದೆಯೆಂದೇ ತಿಳಿಯಿರಿ, ಇಂದು ಏನಿದೆ ನಾಳೆ ಏನಾಗಲಿದೆ? ಇಂದು ನೀವು ನರಕವಾಸಿಗಳಾಗಿದ್ದೀರಿ. ನಾಳೆ ಸ್ವರ್ಗವಾಸಿಗಳಾಗಿಬಿಡುತ್ತೀರಿ. ಸಮಯವೇನು ಹೆಚ್ಚಿಗೆ ಹಿಡಿಸುವುದಿಲ್ಲ ಅಂದಾಗ ಅವರದು ದೈಹಿಕ ಶಕ್ತಿ, ನಿಮ್ಮದು ಆತ್ಮಿಕ ಶಕ್ತಿಯಾಗಿದೆ, ಇದನ್ನು ಕೇವಲ ನೀವೇ ತಿಳಿದುಕೊಂಡಿದ್ದೀರಿ. ಅವರು ದೈಹಿಕ ಶಕ್ತಿಯಿಂದ ಎಲ್ಲಿಯವರೆಗೆ ಹೋಗುತ್ತಾರೆ? ಅವರ ಕಲೆಯು ಇಲ್ಲಿಯವರೆಗೇ ಸಮಾಪ್ತಿಯಾಗಿಬಿಡುತ್ತದೆ, ಅದು ದೈಹಿಕ ಅತ್ಯುನ್ನತ ಕಲೆಯಾಗಿದೆ, ನಿಮ್ಮದು ಉನ್ನತ ಆತ್ಮೀಕ ಕಲೆಯಾಗಿದೆ. ನೀವು ಶಾಂತಿಧಾಮದಲ್ಲಿ ಹೋಗುತ್ತೀರಿ, ಅದರ ಹೆಸರೇ ಆಗಿದೆ – ಮಧುರ ಮನೆ. ಅವರು ಎಷ್ಟು ಮೇಲೆ ಹೋಗುತ್ತಾರೆ ಮತ್ತು ನೀವು ತಮ್ಮ ಲೆಕ್ಕವನ್ನು ನೆನಪು ಮಾಡಿಕೊಳ್ಳಿ. ನೀವು ಎಷ್ಟೊಂದು ಮೈಲಿಗಳು ಮೇಲಕ್ಕೆ ಹೋಗುತ್ತೀರಿ. ನೀವು ಯಾರು? ಆತ್ಮಗಳು. ತಂದೆಯು ತಿಳಿಸುತ್ತಾರೆ - ನಾನು ಎಷ್ಟು ಮೈಲಿಗಳ ಮೇಲಿರುತ್ತೇನೆ, ಎಣಿಸಲು ಸಾಧ್ಯವೇ! ಅವರ ಬಳಿ ಲೆಕ್ಕವಿರುತ್ತದೆ. ಇಷ್ಟು ಮೈಲಿಗಳ ಮೇಲೆ ಹೋದರು ಮತ್ತೆ ಹಿಂತಿರುಗಿ ಬರುತ್ತಾರೆಂದು ತಿಳಿಸುತ್ತಾರೆ, ಬಹಳ ಎಚ್ಚರಿಕೆ ವಹಿಸುತ್ತಾರೆ. ಹೀಗೆ ಇಳಿಯುತ್ತಾರೆ, ಹಾಗೆ ಮಾಡುತ್ತಾರೆ ಎಂದು ಬಹಳಷ್ಟು ಅವರದು ಶಬ್ಧವಿರುತ್ತದೆ. ನಿಮ್ಮದು ಸದ್ದೇ ಇರುವುದಿಲ್ಲ, ನೀವು ಎಲ್ಲಿಗೆ ಹೋಗುತ್ತೀರಿ ಮತ್ತು ಹೇಗೆ ಬರುತ್ತೀರಿ ಎಂಬುದು ಯಾರಿಗೂ ತಿಳಿಯುವುದಿಲ್ಲ. ನಿಮಗೆ ಯಾವ ಬಹುಮಾನವು ಸಿಗುತ್ತದೆಯೆಂಬುದು ನಿಮಗೇ ಗೊತ್ತು, ಅದ್ಭುತವಾಗಿದೆ. ತಂದೆಯದು ಚಮತ್ಕಾರವಾಗಿದೆ. ಇದು ಯಾರಿಗೂ ತಿಳಿದಿಲ್ಲ, ಇದೇನೂ ಹೊಸ ಮಾತಲ್ಲ, ಪ್ರತೀ 5000 ವರ್ಷಗಳ ನಂತರ ಅವರು ಈ ಅಭ್ಯಾಸವನ್ನು ಮಾಡುತ್ತಿರುತ್ತಾರೆಂದು ನೀವು ಹೇಳುತ್ತಿರುತ್ತೀರಿ ಅಂದರೆ ನೀವು ಈ ಸೃಷ್ಟಿರೂಪಿ ನಾಟಕದ ಆದಿ-ಮಧ್ಯ-ಅಂತ್ಯದ ಕಾಲಾವಧಿಯನ್ನು ಬಹಳ ಚೆನ್ನಾಗಿ ತಿಳಿದುಕೊಂಡಿದ್ದೀರಿ. ಅಂದಾಗ ತಂದೆಯು ನಮಗೆ ಏನು ಕಲಿಸುತ್ತಾರೆಂಬುದು ನಶೆಯಿರಬೇಕು. ಬಹಳ ಶ್ರೇಷ್ಠ ಪುರುಷಾರ್ಥವನ್ನು ಮಾಡುತ್ತೀರಿ ಮತ್ತೆ ಕಲ್ಪದ ನಂತರವೂ ಮಾಡುತ್ತೀರಿ. ಇವೆಲ್ಲಾ ಮಾತುಗಳು ಯಾರಿಗೂ ಗೊತ್ತಿಲ್ಲ. ತಂದೆಯು ಗುಪ್ತವಾಗಿದ್ದಾರೆ. ನಿಮಗೆ ಪ್ರತಿನಿತ್ಯವೂ ಎಷ್ಟೊಂದು ತಿಳಿಸುತ್ತಿರುತ್ತಾರೆ, ಎಷ್ಟೊಂದು ಜ್ಞಾನವನ್ನು ಕೊಡುತ್ತಾರೆ. ಅವರು ಒಂದು ಪರಿಮಿತ ದೂರದವರೆಗೆ ಹೋಗುತ್ತಾರೆ, ನೀವು ಬೇಹದ್ದಿನಲ್ಲಿ ಹೋಗುತ್ತೀರಿ. ಅವರು ಚಂದ್ರನವರೆಗೆ ಹೋಗುತ್ತಾರೆ, ಸೂರ್ಯ-ಚಂದ್ರನೆಂದರೆ ದೊಡ್ಡ-ದೊಡ್ಡ ದೀಪಗಳಷ್ಟೇ ಇನ್ನೇನೂ ಇಲ್ಲ. ಅವರಿಗೆ ಭೂಮಿಯು ಬಹಳ ಚಿಕ್ಕದಾಗಿ ಕಾಣುತ್ತದೆ ಅಂದಾಗ ಅವರ ಶಾರೀರಿಕ ಜ್ಞಾನ ಮತ್ತು ನಿಮ್ಮ ಜ್ಞಾನದಲ್ಲಿ ಎಷ್ಟೊಂದು ಅಂತರವಿದೆ! ನೀವಾತ್ಮಗಳು ಎಷ್ಟೊಂದು ಸೂಕ್ಷ್ಮವಾಗಿದ್ದೀರಿ ಆದರೆ ವೇಗವು ಬಹಳಷ್ಟು ತೀಕ್ಷ್ಣವಾಗಿದೆ. ನೀವಾತ್ಮಗಳು ಮೇಲಿರುತ್ತೀರಿ, ಇಲ್ಲಿ ಪಾತ್ರವನ್ನಭಿನಯಿಸಲು ಬರುತ್ತೀರಿ. ತಂದೆಯೂ ಸಹ ಪರಮ ಆತ್ಮನಾಗಿದ್ದಾರೆ ಆದರೆ ಅವರ ಪೂಜೆ ಹೇಗಾಗುವುದು! ಭಕ್ತಿಯೂ ಸಹ ಅವಶ್ಯವಾಗಿ ಆಗಲೇಬೇಕಾಗಿದೆ.

ತಂದೆಯು ತಿಳಿಸುತ್ತಾರೆ - ಅರ್ಧಕಲ್ಪ ಜ್ಞಾನ ದಿನವಾಗಿದೆ, ಇನ್ನರ್ಧಕಲ್ಪ ಭಕ್ತಿ ರಾತ್ರಿಯಾಗಿದೆ. ಈಗ ಸಂಗಮಯುಗದಲ್ಲಿ ನೀವು ಜ್ಞಾನವನ್ನು ತೆಗೆದುಕೊಳ್ಳುತ್ತೀರಿ, ಸತ್ಯಯುಗದಲ್ಲಂತೂ ಜ್ಞಾನವಿರುವುದಿಲ್ಲ ಆದ್ದರಿಂದ ಈ ಸಮಯಕ್ಕೆ ಪುರುಷೋತ್ತಮ ಸಂಗಮಯುಗವೆಂದು ಹೇಳಲಾಗುತ್ತದೆ. ಎಲ್ಲರನ್ನೂ ಪುರುಷೋತ್ತಮರನ್ನಾಗಿ ಮಾಡುತ್ತಾರೆ. - ನೀವಾತ್ಮಗಳು ಎಷ್ಟೊಂದು ದೂರ-ದೂರಕ್ಕೆ ಹೋಗುತ್ತೀರಿ. ನಿಮಗಿದು ಖುಷಿಯಿದೆಯಲ್ಲವೆ! ಅವರು ತಮ್ಮ ಕಲೆಯನ್ನು ತೋರಿಸುತ್ತಾರೆಂದರೆ ಅವರಿಗೆ ಬಹಳಷ್ಟು ಹಣವು ಸಿಗುತ್ತದೆ. ಭಲೆ ಅವರಿಗೆ ಎಷ್ಟಾದರೂ ಸಿಗಲಿ ಆದರೆ ನಿಮಗೆ ತಿಳಿದಿದೆ - ಅದೇನೂ ನಮ್ಮ ಜೊತೆಯಲ್ಲಿ ಬರುವುದಿಲ್ಲ, ಈಗ ಶರೀರ ಬಿಟ್ಟೆವೆಂದರೆ ಬಿಟ್ಟೆವು, ಎಲ್ಲವೂ ಸಮಾಪ್ತಿಯಾಗಲಿದೆ. ಈಗ ನಿಮಗೆ ಎಷ್ಟೊಂದು ಅಮೂಲ್ಯ ರತ್ನಗಳು ಸಿಗುತ್ತವೆ, ಇದರ ಬೆಲೆಯನ್ನೂ ಎಣಿಸಲು ಸಾಧ್ಯವಿಲ್ಲ. ಒಂದೊಂದು ಜ್ಞಾನರತ್ನಗಳು ಲಕ್ಷಾಂತರ ರೂಪಾಯಿಗಳಷ್ಟು ಅಮೂಲ್ಯವಾಗಿದೆ, ಎಷ್ಟೊಂದು ಸಮಯದಿಂದ ನೀವು ಕೇಳುತ್ತಲೇ ಬರುತ್ತೀರಿ. ಗೀತೆಯಲ್ಲಿ ಎಷ್ಟೊಂದು ಅಮೂಲ್ಯ ಜ್ಞಾನವಿದೆ. ಇದೊಂದೇ ಗೀತೆಯಾಗಿದೆ. ಇದಕ್ಕೆ ಅತ್ಯಮೂಲ್ಯವೆಂದು ಹೇಳುತ್ತಾರೆ, ಸರ್ವಶಾಸ್ತ್ರಮಯಿ ಶಿರೋಮಣಿ ಶ್ರೀಮತ್ಭಗವದ್ಗೀತೆಯಾಗಿದೆ. ಅವರು ಭಲೆ ಇದನ್ನು ನಿತ್ಯವೂ ಓದುತ್ತಿರುತ್ತಾರೆ ಆದರೆ ಇದರ ಅರ್ಥವು ಅವರಿಗೆ ತಿಳಿದಿದೆಯೆ? ಗೀತೆಯನ್ನು ಓದುವುದರಿಂದ ಏನಾಗುವುದೆಂದು ಅವರಿಗೆ ಗೊತ್ತಿಲ್ಲ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿದರೆ ನೀವು ಪಾವನರಾಗುತ್ತೀರಿ, ಅವರು ಕೇವಲ ಗೀತೆಯನ್ನು ಓದುತ್ತಾರೆ ಆದರೆ ತಂದೆಯ ಜೊತೆ ಅವರಲ್ಲಿ ಒಬ್ಬರ ಬುದ್ದಿಯೋಗವೂ ಸಹ ಇಲ್ಲ, ತಂದೆಯನ್ನೇ ಸರ್ವವ್ಯಾಪಿ ಎಂದು ಹೇಳಿಬಿಡುತ್ತಾರೆ, ಪಾವನರಾಗುವುದಕ್ಕೂ ಸಾಧ್ಯವಿಲ್ಲ. ಈಗ ಈ ಲಕ್ಷ್ಮಿ-ನಾರಾಯಣರ ಚಿತ್ರಗಳು ನಿಮ್ಮ ಸನ್ಮುಖದಲ್ಲಿವೆ, ಇವರಿಗೆ ದೇವತೆಗಳೆಂದು ಹೇಳಲಾಗುತ್ತದೆ ಏಕೆಂದರೆ ದೈವೀಗುಣಗಳಿವೆ. ನೀವೆಲ್ಲರೂ ಪಾವನರಾಗಿ ತಮ್ಮ ಮನೆಗೆ ಹೋಗಬೇಕಾಗಿದೆ. ಹೊಸ ಪ್ರಪಂಚದಲ್ಲಿ ಇಷ್ಟೊಂದು ಜನ ಸಂಖ್ಯೆಯಿರುವುದಿಲ್ಲ. ಉಳಿದೆಲ್ಲಾ ಆತ್ಮಗಳು ತಮ್ಮ ಮನೆಗೆ ಹೋಗಬೇಕಾಗುತ್ತದೆ, ನಿಮಗೆ ತಂದೆಯೂ ಸಹ ಬಹಳ ಅದ್ಭುತವಾದ ಜ್ಞಾನವನ್ನು ಕೊಡುತ್ತಾರೆ, ಇದರಿಂದ ನೀವು ಮನುಷ್ಯರಿಂದ ಬಹಳ ಶ್ರೇಷ್ಠ ದೇವತೆಗಳಾಗುತ್ತೀರಿ ಅಂದಮೇಲೆ ಇಂತಹ ವಿದ್ಯಾಭ್ಯಾಸದ ಮೇಲೆ ಅಷ್ಟೊಂದು ಗಮನವೂ ಇರಬೇಕು. ಇದೂ ಸಹ ನಿಮಗೆ ತಿಳಿದಿದೆ - ಕಲ್ಪದ ಹಿಂದೆ ಯಾರೆಷ್ಟು ಈ ವಿದ್ಯೆಯ ಮೇಲೆ ಗಮನ ಕೊಟ್ಟಿದ್ದರೋ ಅದೇ ರೀತಿ ಈಗಲೂ ಗಮನ ಕೊಡುತ್ತಾರೆ. ಎಲ್ಲವೂ ವಿದ್ಯೆಯಿಂದಲೇ ತಿಳಿಯುತ್ತದೆ, ತಂದೆಯು ಸೇವಾ ಸಮಾಚಾರವನ್ನು ಕೇಳಿ ಖುಷಿಯಾಗುತ್ತಾರೆ. ತಂದೆಗೆ ಎಂದೂ ಪತ್ರವನ್ನೇ ಬರೆಯದಿದ್ದರೆ ಅವರ ಬುದ್ದಿಯು ಎಲ್ಲಿಯೋ ಕಲ್ಲು-ಮುಳ್ಳಿನಕಡೆ ಹೊರಟುಹೋಗಿದೆ ಎಂದು ತಿಳಿಯುತ್ತಾರೆ. ದೇಹಾಭಿಮಾನವು ಬಂದುಬಿಟ್ಟಿದೆ. ತಂದೆಯನ್ನು ಮರೆತುಬಿಟ್ಟಿದ್ದಾರೆ ಎಂದು ತಿಳಿದುಕೊಳ್ಳುತ್ತಾರೆ ಇಲ್ಲದಿದ್ದರೆ ವಿಚಾರ ಮಾಡಿ - ಲವ್ ಮ್ಯಾರೇಜ್ ಆದಾಗ ಅವರಲ್ಲಿ ಪರಸ್ಪರ ಎಷ್ಟೊಂದು ಪ್ರೀತಿಯಿರುತ್ತದೆ, ಹಾ! ಕೆಲವರ ವಿಚಾರವು ಬದಲಾಗುತ್ತದೆಯೆಂದರೆ ಮತ್ತೆ ಸ್ತ್ರೀಯನ್ನು ಕೊಲ್ಲುವ ಸಾಧ್ಯತೆಯೂ ಇದೆ ಆದರೆ ಇಲ್ಲಿ ನಿಮ್ಮದು ತಂದೆಯ ಜೊತೆ ಲವ್ ಮ್ಯಾರೇಜ್ ಆಗಿದೆ. ತಂದೆಯು ಬಂದು ನಿಮಗೆ ತಮ್ಮ ಪರಿಚಯವನ್ನು ಕೊಡುತ್ತಾರೆ, ನೀವು ತಾವಾಗಿಯೇ ಪರಿಚಯವನ್ನು ಪಡೆಯುವುದಿಲ್ಲ, ತಂದೆಯೇ ಬರಬೇಕಾಗುತ್ತದೆ. ಯಾವಾಗ ಹಳೆಯ ಪ್ರಪಂಚವಾಗುವುದೋ ಆಗಲೇ ತಂದೆಯು ಬರುತ್ತಾರೆ. ಹಳೆಯದನ್ನು ಹೊಸದನ್ನಾಗಿ ಮಾಡಲು ಅವಶ್ಯವಾಗಿ ತಂದೆಯು ಸಂಗಮದಲ್ಲಿಯೇ ಬರುತ್ತಾರೆ. ಹೊಸಪ್ರಪಂಚವನ್ನು ಸ್ಥಾಪನೆ ಮಾಡುವುದೇ ತಂದೆಯ ಕರ್ತವ್ಯವಾಗಿದೆ, ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆಂದರೆ ಇಂತಹ ತಂದೆಯ ಜೊತೆ ಎಷ್ಟೊಂದು ಪ್ರೀತಿಯಿರಬೇಕು ಆದರೆ ಬಾಬಾ, ನಾವು ಮರೆತುಹೋಗುತ್ತೇವೆಂದು ಏಕೆ ಹೇಳುತ್ತೀರಿ!! ಎಷ್ಟು ಶ್ರೇಷ್ಠಾತಿಶ್ರೇಷ್ಠ ತಂದೆಯಾಗಿದ್ದಾರೆ. ಅವರಿಗಿಂತ ಶ್ರೇಷ್ಠರು ಮತ್ಯಾರೂ ಇಲ್ಲ. ಮನುಷ್ಯರು ಮುಕ್ತಿಗಾಗಿ ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾರೆ, ಉಪಾಯಗಳನ್ನು ಮಾಡುತ್ತಾರೆ. ಎಷ್ಟೊಂದು ಸುಳ್ಳು ಮೋಸವು ನಡೆಯುತ್ತಿದೆ. ಮಹರ್ಷಿ ಮೊದಲಾದವರಿಗೆ ಎಷ್ಟೊಂದು ಹೆಸರಿದೆ. ಸರ್ಕಾರವು 10-20 ಎಕರೆ ಜಮೀನನ್ನು ಕೊಡುತ್ತದೆ ಅಂದರೆ ಸರ್ಕಾರವು ಅಧಾರ್ಮಿಕವೆಂದಲ್ಲ. ಇದರಲ್ಲಿ ಕೆಲವು ಮಂತ್ರಿಗಳು ಧಾರ್ಮಿಕರಿದ್ದಾರೆ, ಇನ್ನೂ ಕೆಲವರು ಅಧಾರ್ಮಿಕರಿದ್ದಾರೆ, ಕೆಲವರು ಧರ್ಮವನ್ನು ಒಪ್ಪುವುದೇ ಇಲ್ಲ, ಧರ್ಮವೇ ಶಕ್ತಿಯೆಂದು ಹೇಳಲಾಗುತ್ತದೆ. ಕ್ರಿಶ್ಚಿಯನ್ನರಲ್ಲಿ ಶಕ್ತಿಯಿತ್ತಲ್ಲವೆ! ಇಡೀ ಭಾರತವನ್ನೇ ವಶಪಡಿಸಿಕೊಂಡರು. ಈಗ ಭಾರತದಲ್ಲಿ ಯಾವುದೇ ಶಕ್ತಿಯಿಲ್ಲ, ಎಷ್ಟೊಂದು ಹೊಡೆದಾಟ-ಜಗಳವಿದೆ. ಇದೇ ಭಾರತವೇ ಏನಾಗಿತ್ತು! ತಂದೆಯು ಹೇಗೆ ಇಲ್ಲಿಗೆ ಬರುತ್ತಾರೆಂಬುದು ಯಾರಿಗೂ ತಿಳಿದಿಲ್ಲ. ಮಗಧದೇಶದಲ್ಲಿ ಬರುತ್ತಾರೆ. ಎಲ್ಲಿ ಮೀನು- ಮೊಸಳೆಗಳಿರುತ್ತವೆ ಎಂದು ನೀವು ತಿಳಿದುಕೊಂಡಿದ್ದೀರಿ. ಎಲ್ಲವನ್ನೂ ತಿಂದುಬಿಡುವಂತಹ ಮನುಷ್ಯರಿದ್ದಾರೆ. ಭಾರತವು ಎಲ್ಲದಕ್ಕಿಂತ ಹೆಚ್ಚಿನ ವೈಷ್ಣವನಾಗಿತ್ತು, ಇದು ವೈಷ್ಣವ ರಾಜ್ಯವಲ್ಲವೆ! ಈ ಮಹಾನ್ ಪವಿತ್ರ ದೇವತೆಗಳೆಲ್ಲಿ! ಆದರೆ ಇಂದು ನೋಡಿ ಏನೇನು ವಶಪಡಿಸಿಕೊಳ್ಳುತ್ತಾ ಹೋಗುತ್ತಾರೆ! ನರಭಕ್ಷಕರಾಗಿಬಿಡುತ್ತಾರೆ. ಭಾರತದ ಸ್ಥಿತಿಯು ಏನಾಗಿಬಿಟ್ಟಿದೆ. ಈಗ ನಿಮಗೆ ತಂದೆಯು ಎಲ್ಲಾ ರಹಸ್ಯವನ್ನು ತಿಳಿಸುತ್ತಿದ್ದಾರೆ. ಮೇಲಿನಿಂದ ಹಿಡಿದು ಕೆಳಗಿನ ತನಕ ಪೂರ್ಣಜ್ಞಾನವನ್ನು ಕೊಡುತ್ತಾರೆ. ಮೊಟ್ಟಮೊದಲಿಗೆ ನೀವೇ ಈ ಪೃಥ್ವಿಯಲ್ಲಿ ಇರುತ್ತೀರಿ ನಂತರ ಜನಸಂಖ್ಯೆಯು ವೃದ್ಧಿಯಾಗುತ್ತಾ ಹೋಗುತ್ತದೆ, ಇನ್ನು ಸ್ವಲ್ಪ ಸಮಯದಲ್ಲಿ ಹಾಹಾಕಾರವಾಗಿಬಿಡುತ್ತದೆ, ಎಲ್ಲರೂ ಅಯ್ಯೋ, ಅಯ್ಯೋ ಎನ್ನುತ್ತಿರುತ್ತಾರೆ. ಸ್ವರ್ಗದಲ್ಲಿ ನೋಡಿ ಎಷ್ಟೊಂದು ಸುಖವಿದೆ! ಈ ಗುರಿ-ಧ್ಯೇಯದ ಚಿತ್ರವನ್ನು ನೋಡಿ ಇವೆಲ್ಲವನ್ನೂ ನೀವು ಮಕ್ಕಳು ಧಾರಣೆ ಮಾಡಬೇಕಾಗಿದೆ. ಇದು ಎಷ್ಟು ದೊಡ್ಡ ವಿದ್ಯೆಯಾಗಿದೆ. ತಂದೆಯು ಎಷ್ಟು ಸ್ಪಷ್ಟಮಾಡಿ ತಿಳಿಸಿಕೊಡುತ್ತಾರೆ. ಮಾಲೆಯ ರಹಸ್ಯವನ್ನು ತಿಳಿಸಿದ್ದಾರೆ. ಮಾಲೆಯಲ್ಲಿ ಮೇಲೆ ಶಿವತಂದೆಯ ಗುರುತಾಗಿ ಹೂವನ್ನು ತೋರಿಸುತ್ತಾರೆ ನಂತರ ಜೋಡಿ ಮಣಿಗಳು..... ಪ್ರವೃತ್ತಿ ಮಾರ್ಗವಾಗಿದೆಯಲ್ಲವೆ. ನಿವೃತ್ತಿ ಮಾರ್ಗದವರಿಗಂತೂ ಮಾಲೆಯನ್ನು ಜಪಿಸುವ ನಿಯಮವಿಲ್ಲ. ಇದು ದೇವತೆಗಳ ಮಾಲೆಯಾಗಿದೆ. ಅವರು ಹೇಗೆ ರಾಜ್ಯವನ್ನು ಪಡೆದುಕೊಂಡಿದ್ದಾರೆ. ನಿಮ್ಮಲ್ಲಿಯೂ ನಂಬರ್‌ವಾರ್ ಇದ್ದಾರೆ. ಕೆಲವರು ನಿರ್ಭಯವಾಗಿ ಯಾರಿಗೇ ಬೇಕಾದರೂ ತಿಳಿಸುತ್ತಾರೆ - ಬನ್ನಿ, ನಾವು ತಮಗೆ ಇಂತಹ ಮಾತುಗಳನ್ನು ತಿಳಿಸುತ್ತೇವೆ, ಅದನ್ನು ಮತ್ಯಾರೂ ತಿಳಿಸಲು ಸಾಧ್ಯವಿಲ್ಲ. ಶಿವತಂದೆಯ ವಿನಃ ಮತ್ಯಾರಿಗೂ ಇದು ತಿಳಿದೇ ಇಲ್ಲ. ಅವರಿಗೆ ಈ ರಾಜಯೋಗವನ್ನು ಯಾರು ಕಲಿಸಿದರು? ಬಹಳ ರಮಣೀಕವಾಗಿ ತಿಳಿಸಬೇಕು. ಮನುಷ್ಯರೇ 84 ಜನ್ಮಗಳನ್ನು ಹೇಗೆ ತೆಗೆದುಕೊಂಡರು, ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರ..... ತಂದೆಯು ಎಷ್ಟು ಸಹಜವಾದ ಜ್ಞಾನವನ್ನು ತಿಳಿಸುತ್ತಾರೆ ಮತ್ತು ಪವಿತ್ರರೂ ಆಗಬೇಕಾಗಿದೆ, ಆಗಲೇ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ, ಇಡೀ ವಿಶ್ವದಲ್ಲಿ ಶಾಂತಿಸ್ಥಾಪನೆ ಮಾಡುವವರು ನೀವಾಗಿದ್ದೀರಿ. ತಂದೆಯು ನಿಮಗೆ ರಾಜ್ಯಭಾಗ್ಯವನ್ನು ಕೊಡುತ್ತಾರೆ, ದಾತನಾಗಿದ್ದಾರಲ್ಲವೆ. ಅವರು ಏನನ್ನೂ ತೆಗೆದುಕೊಳ್ಳುವುದಿಲ್ಲ. ನಿಮ್ಮ ವಿದ್ಯೆಗೆ ಇದೇ ಬಹುಮಾನವಾಗಿದೆ, ಇಂತಹ ಬಹುಮಾನವನ್ನು ಮತ್ತ್ಯಾರೂ ಕೊಡುವುದಿಲ್ಲ ಅಂದಮೇಲೆ ಇಂತಹ ತಂದೆಯನ್ನು ಏಕೆ ಪ್ರೀತಿ ಮಾಡುವುದಿಲ್ಲ! ಲೌಕಿಕ ತಂದೆಯನ್ನಂತೂ ಜನ್ಮಪೂರ್ತಿ ನೆನಪು ಮಾಡುತ್ತೀರಿ, ಪಾರಲೌಕಿಕ ತಂದೆಯನ್ನು ಏಕೆ ನೆನಪು ಮಾಡುವುದಿಲ್ಲ? ತಂದೆಯು ತಿಳಿಸುತ್ತಾರೆ - ಇದು ಯುದ್ಧದ ಮೈದಾನವಾಗಿದೆ ಆದ್ದರಿಂದ ಪಾವನರಾಗುವುದರಲ್ಲಿ ಸಮಯ ಹಿಡಿಸುತ್ತದೆ. ಯುದ್ಧವು ಯಾವಾಗ ಪೂರ್ಣವಾಗುತ್ತದೆಯೋ ಅಷ್ಟು ಸಮಯ ಹಿಡಿಸುತ್ತದೆ. ಯಾರು ಆರಂಭದಲ್ಲಿ ಬಂದರೋ ಅವರು ಪೂರ್ಣ ಪಾವನರಾಗುತ್ತಾರೆಂದಲ್ಲ. ತಂದೆಯು ತಿಳಿಸುತ್ತಾರೆ - ಮಾಯೆಯ ಯುದ್ಧವು ಬಹಳ ಜೋರಾಗಿ ನಡೆಯುತ್ತದೆ. ಒಳೊಳ್ಳೆಯವರನ್ನೂ ಸಹ ಮಾಯೆಯು ಗೆದ್ದುಬಿಡುತ್ತದೆ. ಇಷ್ಟೊಂದು ಶಕ್ತಿಶಾಲಿಯಾಗಿದೆ. ಯಾರು ಬೀಳುವರೋ ಅವರು ಮತ್ತೆ ಮುರುಳಿಯನ್ನು ಎಲ್ಲಿಂದ ಕೇಳುತ್ತಾರೆ? ಸೇವಾಕೇಂದ್ರಕ್ಕೆ ಬರುವುದೇ ಇಲ್ಲವೆಂದರೆ ಅವರಿಗೆ ಮುರುಳಿಯು ಹೇಗೆ ತಿಳಿಯುತ್ತದೆ? ಮಾಯೆಯು ಒಮ್ಮೆಲೆ ಕನಿಷ್ಟರನ್ನಾಗಿ ಮಾಡಿಬಿಡುತ್ತದೆ. ಮುರುಳಿಯನ್ನು ಕೇಳಿದಾಗಲೇ ಜಾಗೃತರಾಗುತ್ತಾರಲ್ಲವೆ! ಇಲ್ಲದಿದ್ದರೆ ಕೊಳಕು ಕೆಲಸದಲ್ಲಿಯೇ ತೊಡಗುತ್ತಾರೆ. ಯಾರಾದರೂ ಬುದ್ಧಿವಂತ ಮಕ್ಕಳಿದ್ದರೆ ಅವರಿಗೆ ತಿಳಿಸಬೇಕು - ನೀವು ಮಾಯೆಗೆ ಹೇಗೆ ಸೋತುಹೋಗಿದ್ದೀರಿ, ತಂದೆಯು ನಿಮಗೆ ಏನನ್ನು ತಿಳಿಸುತ್ತಾರೆ, ಎಲ್ಲಿಗೆ ಹೋಗಬೇಕು ಎಂದು ಹೇಳಬೇಕು. ಇವರನ್ನು ಮಾಯೆಯು ತಿನ್ನುತ್ತಿದೆ ಎಂಬುದನ್ನು ನೋಡಿದರೆ ಅವರನ್ನು ಇದರಿಂದ ಪಾರು ಮಾಡುವ ಪ್ರಯತ್ನ ಪಡಬೇಕು. ಮಾಯೆಯು ಅವರನ್ನು ಪೂರ್ಣ ನುಂಗಿಹಾಕಲು ಬಿಡಬಾರದು. ಅವರು ಪುನಃ ಜಾಗೃತರಾಗಬೇಕು ಇಲ್ಲದಿದ್ದರೆ ಶ್ರೇಷ್ಠ ಪದವಿಯನ್ನು ಪಡೆಯುವುದಿಲ್ಲ. ಸದ್ಗುರುವಿನ ನಿಂದನೆ ಮಾಡಿಸುತ್ತಾರೆ. ಒಳ್ಳೆಯದು-

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್‌ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಯಿಂದ ಶಾಂತಿಯ ಕಲೆಯನ್ನು ಕಲಿತು ಈ ಹದ್ದಿನ ಪ್ರಪಂಚದಿಂದ ದೂರ ಬೇಹದ್ದಿನಲ್ಲಿ ಹೋಗಬೇಕಾಗಿದೆ. ಈ ನಶೆಯಿರಲಿ - ತಂದೆಯು ನಮಗೆ ಎಷ್ಟೊಂದು ಸುಂದರ ಜ್ಞಾನವನ್ನು ಕೊಟ್ಟು ಎಷ್ಟು ದೊಡ್ಡ ಬಹುಮಾನವನ್ನು ಕೊಡುತ್ತಾರೆ.

2. ನಿರ್ಭಯರಾಗಿ ಬಹಳ ಮಧುರಶೈಲಿಯಿಂದ ಸೇವೆ ಮಾಡಬೇಕಾಗಿದೆ. ಮಾಯೆಯ ಯುದ್ಧದಲ್ಲಿಶಕ್ತಿಶಾಲಿಗಳಾಗಿ ವಿಜಯವನ್ನು ಪಡೆಯಬೇಕಾಗಿದೆ. ಮುರುಳಿಯನ್ನು ಕೇಳಿ ಜಾಗೃತರಾಗಿರಬೇಕಾಗಿದೆ ಮತ್ತು ಎಲ್ಲರನ್ನೂ ಜಾಗೃತಗೊಳಿಸಬೇಕಾಗಿದೆ.

ವರದಾನ:
ಪರಮ ಪೂಜ್ಯರಾಗಿ ಪರಮಾತ್ಮನ ಪ್ರೀತಿಯ ಅಧಿಕಾರವನ್ನು ಪ್ರಾಪ್ತಿ ಮಾಡುವಂತಹ ಸಂಪೂರ್ಣ ಸ್ವಚ್ಛ ಆತ್ಮ ಭವ.

ನಾನು ಪೂಜ್ಯ ಆತ್ಮನಾಗಿದ್ದೇನೆ, ಈ ಶರೀರರೂಪಿ ಮಂದಿರದಲ್ಲಿ ವಿರಾಜಮಾನವಾಗಿದ್ದೇನೆ - ಸದಾ ಈ ಸ್ಮೃತಿ ಜೀವನದಲ್ಲಿ ತೆಗೆದುಕೊಂಡು ಬರಬೇಕು. ಇಂತಹ ಪೂಜ್ಯ ಆತ್ಮರೇ ಸರ್ವರಿಗೆ ಪ್ರಿಯರಾಗಿದ್ದಾರೆ. ಅವರ ಜಡಮೂರ್ತಿಯೂ ಸಹ ಎಲ್ಲರಿಗೆ ಪ್ರಿಯವಾಗುತ್ತದೆ. ಕೆಲವರು ಪರಸ್ಪರ ಜಗಳ ಮಾಡುತ್ತಾರೆ. ಆದರೆ ಮೂರ್ತಿಯನ್ನು ಪ್ರೀತಿ ಮಾಡುತ್ತಾರೆ ಏಕೆಂದರೆ ಅದರಲ್ಲಿ ಪವಿತ್ರತೆ ಇದೆ. ಅಂದಾಗ ತಮ್ಮೊಂದಿಗೆ ತಾವೇ ಕೇಳಿಕೊಳ್ಳಿ-ಮನಸ್ಸು- ಬುದ್ದಿ ಸಂಪೂರ್ಣ ಸ್ವಚ್ಛವಾಗಿದೆಯೇ, ಸ್ವಲ್ಪನಾದರೂ ಅಸ್ವಚ್ಛತೆ ಮಿಕ್ಸ್ ಆಗಿಲ್ಲ ತಾನೇ? ಯಾರು ಹಾಗೆ ಸಂಪೂರ್ಣ ಸ್ವಚ್ಛವಾಗಿರುತ್ತಾರೆ ಅವರೇ ಪರಮಾತ್ಮನ ಪ್ರೀತಿಗೆ ಅಧಿಕಾರಿ ಆಗಿದ್ದಾರೆ.

ಸ್ಲೋಗನ್:
ಜ್ಞಾನದ ಖಜಾನೆಯನ್ನು ಸ್ವಯಂನಲ್ಲಿ ಧಾರಣೆ ಮಾಡಿ ಸದಾ ಪ್ರತಿಯೊಂದು ಕರ್ಮ ತಿಳುವಳಿಕೆಯಿಂದ ಮಾಡುವವರೇ ಜ್ಞಾನಿ ಆತ್ಮರಾಗಿದ್ದಾರೆ.