16.12.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಈ
ಪಾವನರಾಗುವ ವಿದ್ಯೆಯು ಎಲ್ಲಾ ವಿದ್ಯೆಗಳಿಗಿಂತಲೂ ಸಹಜವಾಗಿದೆ, ಇದನ್ನು ಮಕ್ಕಳು, ಯುವಕರು,
ವೃದ್ಧರು ಎಲ್ಲರೂ ಓದಬಹುದು, ಇಲ್ಲಿ ಕೇವಲ 84 ಜನ್ಮಗಳನ್ನು ಅರಿತುಕೊಳ್ಳಬೇಕಾಗಿದೆ”
ಪ್ರಶ್ನೆ:
ಹಿರಿಯರು-ಕಿರಿಯರು ಪ್ರತಿಯೊಬ್ಬರೂ ಯಾವ ಅಭ್ಯಾಸವನ್ನು ಅವಶ್ಯವಾಗಿ ಮಾಡಬೇಕಾಗಿದೆ?
ಉತ್ತರ:
ಪ್ರತಿಯೊಬ್ಬರೂ
ಮುರುಳಿಯನ್ನು ಅನ್ಯರಿಗೆ ತಿಳಿಸುವ ಅಭ್ಯಾಸವನ್ನು ಖಂಡಿತ ಮಾಡಬೇಕು ಏಕೆಂದರೆ ನೀವು ಮುರುಳೀಧರನ
ಮಕ್ಕಳಾಗಿದ್ದೀರಿ. ಒಂದುವೇಳೆ ಮುರುಳಿಯನ್ನು ನುಡಿಸದಿದ್ದರೆ ಶ್ರೇಷ್ಠ ಪದವಿಯನ್ನು ಪಡೆಯಲು
ಸಾಧ್ಯವಿಲ್ಲ. ಅನ್ಯರಿಗೆ ತಿಳಿಸುತ್ತಾ ಇರಿ ಆಗ ಅಭ್ಯಾಸವಾಗಿಬಿಡುವುದು. ನೀವು ಪ್ರತಿಯೊಬ್ಬರೂ
ತಂದೆಯ ಸಮಾನ ಶಿಕ್ಷಕರಾಗಬೇಕಾಗಿದೆ. ಏನನ್ನು ಓದುವಿರೋ ಅದನ್ನು ಅನ್ಯರಿಗೂ ಓದಿಸಬೇಕಾಗಿದೆ.
ಚಿಕ್ಕಮಕ್ಕಳಿಗೂ ಈ ವಿದ್ಯೆಯನ್ನು ಓದುವ ಅಧಿಕಾರವಿದೆ, ಅವರೂ ಸಹ ಬೇಹದ್ದಿನ ತಂದೆಯ ಆಸ್ತಿಯನ್ನು
ತೆಗೆದುಕೊಳ್ಳಲು ಅಧಿಕಾರಿಗಳಾಗಿದ್ದಾರೆ.
ಓಂ ಶಾಂತಿ.
ಈಗ ಶಿವಜಯಂತಿಯು ಬರುತ್ತದೆ, ಶಿವಜಯಂತಿಯ ಬಗ್ಗೆ ಅನ್ಯರಿಗೆ ಹೇಗೆ ತಿಳಿಸಿಕೊಡಬೇಕು? ನೀವು
ಅನ್ಯರಿಗೆ ಹೇಗೆ ತಿಳಿಸಿಕೊಡಬೇಕೆಂದು ತಂದೆಯು ನಿಮಗೆ ತಿಳಿಸಿದ್ದಾರೆ ಹಾಗೆಯೇ ನೀವು ಅನ್ಯರಿಗೂ
ತಿಳಿಸಬೇಕಾಗಿದೆ. ಹೇಗೆ ತಂದೆಯು ನಿಮಗೆ ಓದಿಸುತ್ತಾರೆಯೋ ಅದೇ ರೀತಿ ಎಲ್ಲರಿಗೂ ತಂದೆಯೇ
ಓದಿಸಬೇಕೆಂದಲ್ಲ. ಶಿವತಂದೆಯು ನಿಮಗೆ ಓದಿಸಿದ್ದಾರೆ, ಈಗ ನಿಮಗೆ ತಿಳಿದಿದೆ - ತಂದೆಯು ಈ ಶರೀರದ
ಮೂಲಕ ಓದಿಸಿದ್ದಾರೆ. ಅವಶ್ಯವಾಗಿ ನಾವು ಶಿವತಂದೆಯ ಜಯಂತಿಯನ್ನಾಚರಿಸುತ್ತೇವೆ. ನಾವು ಶಿವನ
ಹೆಸರನ್ನೂ ತೆಗೆದುಕೊಳ್ಳುತ್ತೇವೆ. ಅವರು ನಿರಾಕಾರನಾಗಿದ್ದಾರೆ, ಅವರಿಗೆ ಶಿವನೆಂದು
ಕರೆಯಲಾಗುತ್ತದೆ. ಶಿವನು ಜನನ-ಮರಣ ರಹಿತನೆಂದು ಅವರು ಹೇಳುತ್ತಾರೆ ಅಂದಮೇಲೆ ಅವರ ಜಯಂತಿ
ಹೇಗಾಗುವುದು? ಹೇಗೆ ನಂಬರ್ವಾರ್ ಆಗಿ ಆಚರಿಸುತ್ತಾ ಬರುತ್ತಾರೆ ಎಂಬುದನ್ನು ನೀವು
ತಿಳಿದುಕೊಂಡಿದ್ದೀರಿ. ಆಚರಿಸುತ್ತಲೇ ಇರುತ್ತಾರೆ ಆದ್ದರಿಂದ ಅವರಿಗೆ ತಿಳಿಸಬೇಕು - ತಂದೆಯು ಬಂದು
ಈ ತನುವಿನ ಆಧಾರವನ್ನು ತೆಗೆದುಕೊಳ್ಳುತ್ತಾರೆ. ಮುಖವಂತೂ ಅವಶ್ಯವಾಗಿ ಬೇಕಲ್ಲವೆ ಆದ್ದರಿಂದ
ಗೋಮುಖದ ಮಹಿಮೆಯಿದೆ. ಈ ರಹಸ್ಯವು ಸ್ವಲ್ಪ ಕ್ಲಿಷ್ಟವಾಗಿದೆ. ಶಿವತಂದೆಯ ಕರ್ತವ್ಯವನ್ನು
ತಿಳಿಯಬೇಕಾಗಿದೆ. ನಮ್ಮ ಬೇಹದ್ದಿನ ತಂದೆಯು ಬಂದಿದ್ದಾರೆ, ಅವರಿಂದಲೇ ನಮಗೆ ಬೇಹದ್ದಿನ ಆಸ್ತಿಯೂ
ಸಿಗುತ್ತದೆ. ಅವಶ್ಯವಾಗಿ ಭಾರತಕ್ಕೆ ಅಪರಿಮಿತವಾದ ಆಸ್ತಿಯಿತ್ತು, ಇದು ಮತ್ತ್ಯಾರಿಗೂ ಇರುವುದಿಲ್ಲ.
ಭಾರತಕ್ಕೆ ಸತ್ಯಖಂಡವೆಂದು ಹೇಳಲಾಗುತ್ತದೆ. ತಂದೆಗೂ ಸಹ ಸತ್ಯವೆಂದು ಹೇಳಲಾಗುತ್ತದೆ. ಆದ್ದರಿಂದ ಈ
ಮಾತುಗಳನ್ನು ತಿಳಿಸಬೇಕು. ಇದು ಕೆಲವರಿಗೆ ಬೇಗನೆ ಅರ್ಥವಾಗುವುದಿಲ್ಲ. ಕೆಲವರಂತೂ ಬಹುಬೇಗನೆ
ಅರಿತುಕೊಳ್ಳುತ್ತಾರೆ, ಈ ಯೋಗ ಮತ್ತು ವಿದ್ಯೆ ಎರಡೂ ಬಹಳಬೇಗ ಜಾರುವ (ಮರೆಯುವ) ವಸ್ತುಗಳಾಗಿವೆ.
ಅದರಲ್ಲಿಯೂ ಯೋಗವು ಹೆಚ್ಚಿನದಾಗಿ ಮರೆತುಹೋಗುತ್ತದೆ. ಜ್ಞಾನವಂತೂ ಬುದ್ಧಿಯಲ್ಲಿ ಇದ್ದೇ ಇರುತ್ತದೆ
ಆದರೆ ನೆನಪೇ ಪದೇ-ಪದೇ ಮರೆತುಹೋಗುತ್ತದೆ. ನಾವು ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ
ಎಂಬ ಜ್ಞಾನವು ನಿಮ್ಮ ಬುದ್ಧಿಯಲ್ಲಿದೆ. ಯಾರಿಗೆ ಜ್ಞಾನವಿದೆಯೋ ಅವರೇ 84 ಜನ್ಮಗಳನ್ನು
ತೆಗೆದುಕೊಳ್ಳುವರೆಂದು ಬುದ್ಧಿಯಿಂದ ಅರಿತುಕೊಳ್ಳುತ್ತಾರೆ. ಮೊಟ್ಟಮೊದಲಿಗೆ
ಶ್ರೇಷ್ಠಾತಿಶ್ರೇಷ್ಠರೆಂದು ಲಕ್ಷ್ಮೀ-ನಾರಾಯಣರಿಗೆ ಹೇಳಲಾಗುತ್ತದೆ. ನರನಿಂದ ನಾರಾಯಣನಾಗುವ ಕಥೆಯೂ
ಸಹ ಪ್ರಸಿದ್ಧವಾಗಿದೆ. ಹುಣ್ಣಿಮೆಯಂದು ಬಹುತೇಕ ಸ್ಥಾನಗಳಲ್ಲಿ ಸತ್ಯನಾರಾಯಣನ ಕಥೆಯನ್ನು ಓದುತ್ತಾರೆ,
ಈಗ ನೀವು ತಿಳಿದುಕೊಂಡಿದ್ದೀರಿ - ಅವಶ್ಯವಾಗಿ ನಾವು ತಂದೆಯ ಮೂಲಕ ನರನಿಂದ ನಾರಾಯಣರಾಗುವ
ವಿದ್ಯೆಯನ್ನು ಓದುತ್ತೇವೆ. ಇದು ಪಾವನರಾಗುವ ವಿದ್ಯೆಯಾಗಿದೆ ಮತ್ತು ಎಲ್ಲಾ ವಿದ್ಯೆಗಳಿಗಿಂತಲೂ
ಸಂಪೂರ್ಣ ಸಹಜವಾಗಿದೆ. 84 ಜನ್ಮಗಳ ಚಕ್ರವನ್ನು ಅರಿತುಕೊಳ್ಳಬೇಕಾಗಿದೆ ಮತ್ತು ಈ ವಿದ್ಯೆಯು
ಎಲ್ಲರಿಗೂ ಒಂದೇ ಆಗಿದೆ. ಮಕ್ಕಳು, ಯುವಕರು, ವೃದ್ಧರು ಯಾರೇ ಆಗಿರಲಿ ಎಲ್ಲರಿಗಾಗಿ ಒಂದೇ
ವಿದ್ಯೆಯಾಗಿದೆ. ಚಿಕ್ಕಮಕ್ಕಳಿಗೂ ಸಹ ಅಧಿಕಾರವಿದೆ. ತಂದೆ-ತಾಯಿಗಳು ಮಕ್ಕಳಿಗೆ ಸ್ವಲ್ಪ-ಸ್ವಲ್ಪವೇ
ಕಲಿಸುತ್ತಾ ಇರಬಹುದು. ಇನ್ನೂ ಬಹಳಷ್ಟು ಸಮಯವಿದೆ, ಶಿವತಂದೆಯನ್ನು ನೆನಪು ಮಾಡಿ. ಆತ್ಮ ಮತ್ತು
ಶರೀರ ಇಬ್ಬರ ತಂದೆಯರು ಬೇರೆ-ಬೇರೆಯಾಗಿದ್ದಾರೆ. ಆತ್ಮ ಮಗುವು ನಿರಾಕಾರಿಯಾಗಿದೆ ಅಂದಮೇಲೆ ತಂದೆಯೂ
ನಿರಾಕಾರನಾಗಿದ್ದಾರೆ ಎಂದು ಮಕ್ಕಳಿಗೂ ಸಹ ಕಲಿಸಬಹುದಾಗಿದೆ. ಆ ನಿರಾಕಾರ ಶಿವತಂದೆಯು ನಮ್ಮ
ತಂದೆಯಾಗಿದ್ದಾರೆ, ಎಷ್ಟು ಸೂಕ್ಷ್ಮರೂಪದಲ್ಲಿದ್ದಾರೆ! ಎಂಬುದೂ ಸಹ ನೀವು ಮಕ್ಕಳ ಬುದ್ಧಿಯಲ್ಲಿದೆ.
ಇದನ್ನು ಒಳ್ಳೆಯ ರೀತಿಯಲ್ಲಿ ನೆನಪಿಡಬೇಕಾಗಿದೆ ಮರೆಯಬಾರದು. ನಾವಾತ್ಮಗಳೂ ಸಹ ಬಿಂದುರೂಪದಲ್ಲಿ
ಅತಿಸೂಕ್ಷ್ಮವಾಗಿದ್ದೇವೆ. ಮೇಲೆ ಹೋದರೆ ದೊಡ್ಡದಾಗಿ ಕಾಣುವರು, ಕೆಳಗಡೆಯಿದ್ದಾಗ
ಚಿಕ್ಕದಾಗಿಬಿಡುವುದೆಂದಲ್ಲ, ಅವರಂತೂ ಬಿಂದುವಾಗಿದ್ದಾರೆ. ಮೇಲೆ ಹೋದಾಗ ಹೇಗೆ ಕಾಣಿಸುವುದೂ ಇಲ್ಲ,
ಬಿಂದುವಾಗಿದ್ದಾರಲ್ಲವೆ. ಬಿಂದುವು ಹೇಗೆ ಕಾಣುತ್ತದೆ, ಈ ಮಾತುಗಳ ಮೇಲೆ ಮಕ್ಕಳು ಒಳ್ಳೆಯ
ರೀತಿಯಲ್ಲಿ ವಿಚಾರವನ್ನೂ ಮಾಡಬೇಕಾಗಿದೆ. ನಾವಾತ್ಮಗಳು ಶರೀರದಿಂದ ಪಾತ್ರವನ್ನಭಿನಯಿಸಲು ಮೇಲಿಂದ
ಬಂದಿದ್ದೇವೆ, ಆತ್ಮಗಳು ಹೆಚ್ಚುವುದೂ ಇಲ್ಲ, ಕಡಿಮೆಯಾಗುವುದೂ ಇಲ್ಲ. ಕರ್ಮೇಂದ್ರಿಯಗಳು ಮೊದಲು
ಚಿಕ್ಕದಾಗಿತ್ತು, ನಂತರ ದೊಡ್ಡದಾಗುತ್ತಾ ಹೋಗುತ್ತದೆ.
ಈಗ ಹೇಗೆ ನೀವು
ತಿಳಿದುಕೊಂಡಿದ್ದೀರೋ ಅದೇ ರೀತಿ ಅನ್ಯರಿಗೂ ತಿಳಿಸಬೇಕಾಗಿದೆ. ಇದಂತೂ ಅವಶ್ಯವಾಗಿದೆ ನಂಬರ್ವಾರ್
ಯಾರೆಷ್ಟು ಓದಿದ್ದಾರೆಯೋ ಅಷ್ಟನ್ನೇ ಓದಿಸುತ್ತಾರೆ. ಎಲ್ಲರೂ ಸಹ ಅನ್ಯರಿಗೆ ಕಲಿಸಿಕೊಡುವ ಶಿಕ್ಷಕರು
ಅವಶ್ಯವಾಗಿ ಆಗಬೇಕಾಗಿದೆ. ತಂದೆಯಲ್ಲಂತೂ ಜ್ಞಾನವಿದೆ, ಅವರು ಇಷ್ಟು ಸೂಕ್ಷ್ಮ ಪರಮ
ಆತ್ಮನಾಗಿದ್ದಾರೆ, ಸದಾ ಪರಮಧಾಮದಲ್ಲಿರುತ್ತಾರೆ. ಇಲ್ಲಿ ಒಂದೇಬಾರಿ ಸಂಗಮದಲ್ಲಿ ಬರುತ್ತಾರೆ.
ಯಾವಾಗ ಬಹಳ ದುಃಖಿಯಾಗುವರೋ ಆಗಲೇ ತಂದೆಯನ್ನು ಕರೆಯುತ್ತಾರೆ. ಬಂದು ನಮ್ಮನ್ನು ಸುಖಿಯನ್ನಾಗಿ ಮಾಡಿ
ಎಂದು ಹೇಳುತ್ತಾರೆ. ಮಕ್ಕಳಿಗೆ ಈಗ ತಿಳಿದಿದೆ - ಬಾಬಾ ಬಂದು ನಮ್ಮನ್ನು ಪತಿತ ಪ್ರಪಂಚದಿಂದ ಹೊಸ
ಸತ್ಯಯುಗೀ ಪಾವನ ಪ್ರಪಂಚದಲ್ಲಿ ಕರೆದುಕೊಂಡು ಹೋಗಿ ಅಥವಾ ಅಲ್ಲಿ ಹೋಗುವ ಮಾರ್ಗವನ್ನು ತಿಳಿಸಿ ಎಂದು
ನಾವು ಕರೆಯುತ್ತಿರುತ್ತೇವೆ. ತಂದೆಯು ತಾವೇ ಯಾವಾಗ ಬರುವರೋ ಆಗಲೇ ಮಾರ್ಗವನ್ನು ತಿಳಿಸುತ್ತಾರೆ.
ಯಾವಾಗ ಪ್ರಪಂಚವು ಪರಿವರ್ತನೆಯಾಗಬೇಕೋ ಆಗಲೇ ತಂದೆಯು ಬರುತ್ತಾರೆ. ಇವು ಬಹಳ ಸಹಜವಾದ ಮಾತುಗಳಾಗಿವೆ.
ಇವನ್ನು ಬರೆದುಕೊಳ್ಳಬೇಕಾಗಿದೆ. ತಂದೆಯು ಇಂದು ಇದನ್ನು ತಿಳಿಸಿದ್ದಾರೆ, ನಾವೂ ಸಹ ಹೀಗೆ
ತಿಳಿಸುತ್ತೇವೆ, ಹೀಗೆ ಅಭ್ಯಾಸ ಮಾಡುತ್ತಾ-ಮಾಡುತ್ತಾ ಹೇಳುವ ಅಭ್ಯಾಸವಾಗಿಬಿಡುವುದು. ನೀವು
ಮುರುಳೀಧರನ ಮಕ್ಕಳಾಗಿದ್ದೀರಿ ಅಂದಮೇಲೆ ಅವಶ್ಯವಾಗಿ ಮುರುಳೀಧರರಾಗಬೇಕಾಗಿದೆ. ಯಾವಾಗ ಅನ್ಯರ
ಕಲ್ಯಾಣ ಮಾಡುವಿರೋ ಆಗಲೇ ಹೊಸ ಪ್ರಪಂಚದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಈ ಲೌಕಿಕ
ವಿದ್ಯೆಯು ಇಲ್ಲಿಗಾಗಿಯೇ ಆದರೆ ಈ ವಿದ್ಯೆಯು ಹೊಸ ಪ್ರಪಂಚಕ್ಕಾಗಿದೆ. ಅಲ್ಲಂತೂ ಸುಖವೇ
ಸುಖವಿರುತ್ತದೆ. ಅಲ್ಲಿ ತೊಂದರೆ ಕೊಡುವಂತಹ ಪಂಚವಿಕಾರಗಳಿರುವುದೇ ಇಲ್ಲ. ಇಲ್ಲಿ ನಾವು ರಾವಣರಾಜ್ಯ
ಅರ್ಥಾತ್ ಪರರಾಜ್ಯದಲ್ಲಿದ್ದೇವೆ. ನೀವೇ ಮೊದಲು ತಮ್ಮ ರಾಜ್ಯದಲ್ಲಿದ್ದಿರಿ, ಹೊಸ ಪ್ರಪಂಚವೆಂದು
ನೀವು ಹೇಳುತ್ತೀರಿ. ಮತ್ತೆ ಭಾರತಕ್ಕೇ ಹಳೆಯ ಪ್ರಪಂಚವೆಂದು ಕರೆಯಲಾಗುತ್ತದೆ. ಗಾಯನವೂ ಇದೆ, ಹೊಸ
ಪ್ರಪಂಚದಲ್ಲಿ ಭಾರತ.............. ಹೊಸ ಪ್ರಪಂಚದಲ್ಲಿ ಮುಸ್ಲೀಮರು, ಬೌದ್ಧಿಯರು ಇದ್ದರೆಂದು
ಹೇಳುವುದಿಲ್ಲ. ತಂದೆಯು ಬಂದು ನಾವು ಮಕ್ಕಳನ್ನು ಜಾಗೃತ ಮಾಡುತ್ತಾರೆಂದು ಈಗ ನಿಮ್ಮ
ಬುದ್ಧಿಯಲ್ಲಿದೆ. ನಾಟಕದಲ್ಲಿ ತಂದೆಯ ಪಾತ್ರವೇ ಹೀಗಿದೆ ಅವರು ಬಂದು ಭಾರತವನ್ನೆ ಸ್ವರ್ಗವನ್ನಾಗಿ
ಮಾಡುತ್ತಾರೆ. ಭಾರತವೇ ಮೊದಲ ದೇಶವಾಗಿದೆ. ಭಾರತ ಮೊದಲ ದೇಶವನ್ನೇ ಸ್ವರ್ಗವೆಂದು ಹೇಳಲಾಗುತ್ತದೆ.
ಭಾರತದ ಆಯಸ್ಸೂ ಸಹ ಪರಿಮಿತವಾಗಿದೆ. ಲಕ್ಷಾಂತರ ವರ್ಷಗಳೆಂದು ಹೇಳುವುದು - ಇದು ಅಪರಿಮಿತವಾಗುತ್ತದೆ.
ಲಕ್ಷಾಂತರ ವರ್ಷಗಳ ಮಾತು ಯಾರ ಸ್ಮೃತಿಯಲ್ಲಿಯೂ ಬರುವುದಕ್ಕೂ ಸಾಧ್ಯವಿಲ್ಲ. ಹೊಸ ಭಾರತವಾಗಿತ್ತು,
ಈಗ ಇದಕ್ಕೆ ಹಳೆಯ ಭಾರತವೆಂದೇ ಹೇಳುತ್ತಾರೆ. ಭಾರತವೇ ಹೊಸ ಪ್ರಪಂಚವಾಗುವುದು, ನಾವೀಗ ಹೊಸಪ್ರಪಂಚದ
ಮಾಲೀಕರಾಗುತ್ತಿದ್ದೇವೆಂದು ನೀವು ತಿಳಿದುಕೊಳ್ಳುತ್ತೀರಿ. ತಂದೆಯು ಸಲಹೆಯನ್ನು ನೀಡಿದ್ದಾರೆ -
ನನ್ನನ್ನು ನೆನಪು ಮಾಡಿದರೆ ನೀವಾತ್ಮಗಳು ಪವಿತ್ರರಾಗಿಬಿಡುವಿರಿ ಮತ್ತೆ ಶರೀರವೂ ಹೊಸದು ಸಿಗುವುದು.
ಆತ್ಮ ಮತ್ತು ಶರೀರ ಎರಡೂ ಸತೋಪ್ರಧಾನವಾಗುತ್ತದೆ. ನಿಮಗೆ ಸುಖಕ್ಕಾಗಿಯೇ ರಾಜ್ಯವು ಸಿಗುತ್ತದೆ. ಇದೂ
ಸಹ ನಾಟಕದಲ್ಲಿ ಅನಾದಿಯಾಗಿ ಮಾಡಲ್ಪಟ್ಟಿದೆ. ಹೊಸಪ್ರಪಂಚದಲ್ಲಿ ಸುಖ ಮತ್ತು ಶಾಂತಿಯಿರುತ್ತದೆ.
ಅಲ್ಲಿ ಯಾವುದೇ ಬಿರುಗಾಳಿಗಳಿರುವುದಿಲ್ಲ. ಬೇಹದ್ದಿನ ಶಾಂತಿಯಲ್ಲಿ ಎಲ್ಲರೂ ಶಾಂತರಾಗಿಬಿಡುತ್ತಾರೆ.
ಇಲ್ಲಿ ಅಶಾಂತಿಯಿರುವ ಕಾರಣ ಎಲ್ಲರೂ ಅಶಾಂತರಾಗಿದ್ದಾರೆ. ಸತ್ಯಯುಗದಲ್ಲಿ ಎಲ್ಲರೂ
ಶಾಂತರಾಗಿರುತ್ತಾರೆ, ಅದ್ಭುತವಾದ ಮಾತುಗಳಲ್ಲವೆ. ಇದು ಅನಾದಿ ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಇವು
ಬೇಹದ್ದಿನ ಮಾತುಗಳಾಗಿವೆ. ಅವರು ಲೌಕಿಕ, ಬ್ಯಾರಿಸ್ಟರಿ, ಇಂಜಿನಿಯರಿ ವಿದ್ಯೆಯನ್ನು ಓದುತ್ತಾರೆ.
ಈಗ ನಿಮ್ಮ ಬುದ್ಧಿಯಲ್ಲಿ ಬೇಹದ್ದಿನ ಜ್ಞಾನವಿದೆ. ಒಂದೇಬಾರಿ ತಂದೆಯು ಬಂದು ಬೇಹದ್ದಿನ ನಾಟಕದ
ರಹಸ್ಯವನ್ನು ತಿಳಿಸುತ್ತಾರೆ. ಬೇಹದ್ದಿನ ನಾಟಕವು ಹೇಗೆ ನಡೆಯುತ್ತದೆ ಎಂಬ ಹೆಸರನ್ನೂ ಸಹ ಮೊದಲು
ಕೇಳಿರಲಿಲ್ಲ. ಈಗ ನೀವು ತಿಳಿಯುತ್ತೀರಿ - ಸತ್ಯಯುಗ-ತ್ರೇತಾಯುಗವು ಅವಶ್ಯವಾಗಿ ಕಳೆದುಹೋಗಿದೆ.
ಅದರಲ್ಲಿ ಈ ದೇವತೆಗಳ ರಾಜ್ಯವಿತ್ತು, ತ್ರೇತಾಯುಗದಲ್ಲಿ ರಾಮರಾಜ್ಯವಿತ್ತು ನಂತರ ಮತ್ತೆಲ್ಲಾ
ಧರ್ಮಗಳು ಬಂದಿವೆ. ಇಸ್ಲಾಮಿ, ಬೌದ್ಧಿ, ಕ್ರಿಶ್ಚಿಯನ್ ಎಲ್ಲಾ ಧರ್ಮಗಳ ಬಗ್ಗೆ ಪೂರ್ಣ
ತಿಳುವಳಿಕೆಯಿದೆ. ಇವರೆಲ್ಲರೂ 2500 ವರ್ಷಗಳೊಳಗೆ ಬಂದಿದ್ದಾರೆ, ಅದರಲ್ಲಿ 1250 ವರ್ಷಗಳು
ಕಲಿಯುಗವಾಗಿದೆ. ಎಲ್ಲವೂ ಲೆಕ್ಕವಿದೆಯಲ್ಲವೆ! ಸೃಷ್ಟಿಯ ಆಯಸ್ಸೇ 2500 ವರ್ಷಗಳೆಂದಲ್ಲ ಅಂದಮೇಲೆ
ಇನ್ನೂ ಮತ್ತ್ಯಾರಿದ್ದರು ಎಂಬುದನ್ನು ವಿಚಾರ ಮಾಡಬೇಕಾಗಿದೆ. ಇವರಿಗೂ ಮೊದಲು ಈ
ದೇವಿ-ದೇವತೆಗಳಿದ್ದರು, ಅವರೂ ಮನುಷ್ಯರೆ ಆದರೆ ದೈವೀಗುಣವಂತರಾಗಿದ್ದರು. 2500 ವರ್ಷಗಳಲ್ಲಿ
ಸೂರ್ಯವಂಶಿಯರು, ಚಂದ್ರವಂಶಿಯರು ಇದ್ದರು. ಇನ್ನೂ 2500 ವರ್ಷಗಳಲ್ಲಿ ದ್ವಾಪರ-ಕಲಿಯುಗವಿತ್ತು.
ಇದಕ್ಕಿಂತ ಹೆಚ್ಚಿನ ಲೆಕ್ಕವನ್ನು ಯಾರೂ ತೆಗೆಯಲು ಸಾಧ್ಯವಿಲ್ಲ. ಪೂರ್ಣ, ಮುಕ್ಕಾಲು, ಅರ್ಧ,
ಕಾಲುಭಾಗ - ಹೀಗೆ ನಾಲ್ಕುಭಾಗಗಳಿವೆ. ನಿಯಮದನುಸಾರವಾಗಿ ಭಾಗ ಮಾಡುತ್ತಾರಲ್ಲವೆ. ಅರ್ಧದಲ್ಲಂತೂ ಈ
ದೇವತೆಗಳಿದ್ದರು, ಸತ್ಯಯುಗದಲ್ಲಿ ಸೂರ್ಯವಂಶಿ ರಾಜ್ಯ, ತ್ರೇತಾದಲ್ಲಿ ಚಂದ್ರವಂಶಿ ರಾಜ್ಯವಿತ್ತು
ಎಂಬುದನ್ನು ನೀವು ಸಿದ್ಧ ಮಾಡಿ ತಿಳಿಸಬಹುದು. ಅಂದಮೇಲೆ ಯಾರು ಮೊಟ್ಟಮೊದಲು ಸತ್ಯಯುಗದಲ್ಲಿ ಬರುವರೋ
ಅವರದೇ ಎಲ್ಲರಿಗಿಂತ ಧೀರ್ಘಾಯಸ್ಸಾಗಿರುವುದು. ಈ ಕಲ್ಪವೇ 5000 ವರ್ಷಗಳದಾಗಿದೆ. ಅವರು 84 ಲಕ್ಷ
ಯೋನಿಗಳೆಂದು ಹೇಳುತ್ತಾರೆ ಮತ್ತು ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ. ಯಾರು
ಒಪ್ಪುವುದೇ ಇಲ್ಲ. ಇಷ್ಟು ದೊಡ್ಡ ಪ್ರಪಂಚವು ಇರುವುದಕ್ಕೂ ಸಾಧ್ಯವಿಲ್ಲ. ಆದ್ದರಿಂದಲೇ ತಂದೆಯು
ತಿಳಿಸುತ್ತಾರೆ - ಅದೆಲ್ಲವೂ ಅಜ್ಞಾನವಾಗಿದೆ ಮತ್ತು ಇದು ಜ್ಞಾನವಾಗಿದೆ. ಜ್ಞಾನವೆಲ್ಲಿಂದ ಬಂದಿತು
ಎಂಬುದೂ ಸಹ ಯಾರಿಗೂ ತಿಳಿದಿಲ್ಲ. ಜ್ಞಾನಸಾಗರನು ಒಬ್ಬರೇ ತಂದೆಯಾಗಿದ್ದಾರೆ, ಅವರೇ ಮುಖದಿಂದ
ಜ್ಞಾನವನ್ನು ಕೊಡುತ್ತಾರೆ. ಅದಕ್ಕೆ ಗೋಮುಖವೆಂದು ಹೇಳುತ್ತಾರೆ. ಈ ಗೋಮಾತೆ (ಬ್ರಹ್ಮಾ) ಯಿಂದ
ನಿಮ್ಮೆಲ್ಲರನ್ನೂ ದತ್ತು ಮಾಡಿಕೊಳ್ಳುತ್ತಾರೆ. ಈ ಮಾತುಗಳು ತಿಳಿಸುವುದಕ್ಕೂ ಬಹಳ ಸಹಜವಾಗಿದೆ.
ಒಂದುದಿನ ಕೇಳಿ ಬಿಟ್ಟುಬಿಡುತ್ತಾರೆಂದರೆ ಬುದ್ಧಿಯು ಅನ್ಯ ಮಾತುಗಳಲ್ಲಿ ತೊಡಗಿಬಿಡುವುದು.
ಶಾಲೆಯಲ್ಲಿ ಒಂದುದಿನ ಓದಲಾಗುತ್ತದೆಯೋ ಅಥವಾ ನಿಯಮಿತವಾಗಿ ಓದಲಾಗುತ್ತದೆಯೋ! ಜ್ಞಾನವನ್ನು
ಒಂದುದಿನದಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಬೇಹದ್ದಿನ ತಂದೆಯು ನಮ್ಮನ್ನು
ಓದಿಸುತ್ತಾರೆಂದರೆ ಅವಶ್ಯವಾಗಿ ಬೇಹದ್ದಿನ ವಿದ್ಯೆಯೇ ಆಗಿರುವುದು. ತಂದೆಯು ಬೇಹದ್ದಿನ ರಾಜ್ಯವನ್ನು
ಕೊಡುತ್ತಾರೆ. ಭಾರತದಲ್ಲಿ ಬೇಹದ್ದಿನ ರಾಜ್ಯವಿತ್ತಲ್ಲವೆ. ಈ ಲಕ್ಷ್ಮಿ-ನಾರಾಯಣರು ಬೇಹದ್ದಿನ
ರಾಜ್ಯಭಾರ ಮಾಡುತ್ತಿದ್ದರು. ಇವರು ರಾಜ್ಯವನ್ನು ಹೇಗೆ ತೆಗೆದುಕೊಂಡರೆಂದು ಕೇಳಲು ಯಾರಿಗೂ ಈ
ಮಾತುಗಳು ಸ್ವಪ್ನದಲ್ಲಿಯೂ ಬರುವುದಿಲ್ಲ. ಅವರಲ್ಲಿ ಹೆಚ್ಚಿನ ಪವಿತ್ರತೆಯಿತ್ತು ಮತ್ತು ಅವರು
ಯೋಗಿಗಳಾಗಿರುವುದರಿಂದ ಆಯಸ್ಸು ಧೀರ್ಘವಾಗಿರುತ್ತದೆ. ನಾವೇ ಯೋಗಿಗಳಾಗಿದ್ದೇವೆ ಮತ್ತೆ 84 ಜನ್ಮಗಳು
ಭೋಗಿಗಳೂ ಸಹ ಅವಶ್ಯವಾಗಿ ಆಗಬೇಕಾಗಿದೆ. ಇವರೂ ಸಹ ಅವಶ್ಯವಾಗಿ ಪುನರ್ಜನ್ಮದಲ್ಲಿ ಬಂದಿರುವರೆಂದು
ಮನುಷ್ಯರು ಅರಿತುಕೊಂಡಿಲ್ಲ. ಇವರಿಗೆ ಭಗವಾನ್-ಭಗವತಿಯೆಂದು ಕರೆಯಲಾಗುವುದಿಲ್ಲ. 84 ಜನ್ಮಗಳನ್ನು
ತೆಗೆದುಕೊಂಡಿರಲು ಇವರಿಗಿಂತ ಮೊದಲು ಯಾರೂ ಇರಲಿಲ್ಲ. ಮೊಟ್ಟಮೊದಲಿಗೆ ಯಾರು ಸತ್ಯಯುಗದಲ್ಲಿ ರಾಜ್ಯ
ಮಾಡುವರೋ ಅವರೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ ನಂತರ ಕ್ರಮೇಣವಾಗಿ ಕೆಳಗೆ ಬರುತ್ತಾರೆ.
ನಾವಾತ್ಮಗಳೇ ದೇವತೆಗಳಾಗುತ್ತೇವೆ ನಂತರ ನಾವೇ ಕ್ಷತ್ರಿಯರು...... ಹೀಗೆ ದರ್ಜೆಯು ಕಡಿಮೆಯಾಗುತ್ತಾ
ಹೋಗುವುದು. ಪೂಜ್ಯರಿಂದ ಪೂಜಾರಿಗಳೆಂದು ಗಾಯನ ಮಾಡಲಾಗುತ್ತದೆ. ಸತೋಪ್ರಧಾನರಿಂದ
ತಮೋಪ್ರಧಾನರಾಗುತ್ತಾರೆ, ಹೀಗೆ ಪುನರ್ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಕೆಳಗೆ
ಹೋಗುತ್ತಾರೆ. ಇದು ಎಷ್ಟು ಸಹಜವಾಗಿದೆ ಆದರೆ ಮಾಯೆಯು ಇವೆಲ್ಲಾ ಮಾತುಗಳನ್ನು ಮರೆಸಿಬಿಡುತ್ತದೆ.
ಇವೆಲ್ಲಾ ವಿಚಾರಗಳನ್ನು ಒಟ್ಟಿಗೆ ಮಾಡಿ ಪುಸ್ತಕ ಮಾಡಿಸಬಹುದು ಆದರೆ ಇವೇನೂ ಉಳಿಯುವುದಿಲ್ಲ. ಇವು
ತಾತ್ಕಾಲಿಕವಾಗಿದೆ. ತಂದೆಯು ಯಾವುದೇ ಗೀತೆಯನ್ನು ತಿಳಿಸಿರಲಿಲ್ಲ, ತಂದೆಯಂತೂ ಈಗ ಹೇಗೆ
ತಿಳಿಸುತ್ತಿದ್ದಾರೆಯೋ ಹಾಗೆಯೇ ತಿಳಿಸಿಕೊಟ್ಟಿದ್ದರು. ಈ ವೇದಶಾಸ್ತ್ರಗಳೆಲ್ಲವೂ ನಂತರದಲ್ಲಿ
ರಚಿಸಲ್ಪಡುತ್ತದೆ. ಇವೆಲ್ಲಾ ಪುಸ್ತಕಗಳ ಸಂಗ್ರಹವೇನಿದೆ, ಇವೆಲ್ಲವೂ ವಿನಾಶವಾದಾಗ
ಸುಟ್ಟುಹೋಗುತ್ತದೆ. ಸತ್ಯಯುಗ, ತ್ರೇತಾಯುಗದಲ್ಲಿ ಯಾವುದೇ ಗ್ರಂಥಗಳಿರುವುದಿಲ್ಲ. ಇವೆಲ್ಲವೂ ನಂತರ
ಭಕ್ತಿಮಾರ್ಗದಲ್ಲಾಗುತ್ತದೆ. ಎಷ್ಟೊಂದು ಗ್ರಂಥಗಳಾಗುತ್ತವೆ, ರಾವಣನನ್ನೂ ಮಾಡುತ್ತಾರೆ ಆದರೆ
ಬುದ್ಧಿಹೀನತೆಯಿಂದ. ಅವರು ಏನನ್ನೂ ತಿಳಿಸಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ಇವರು
ರಾವಣನನ್ನು ಪ್ರತೀ ವರ್ಷವೂ ಮಾಡುತ್ತಾರೆ ಮತ್ತು ಸುಡುತ್ತಾರೆ. ಅವಶ್ಯವಾಗಿ ರಾವಣನು ಒಬ್ಬ
ಶತ್ರುವಾಗಿದ್ದಾನೆ ಆದರೆ ಶತ್ರು ಹೇಗೆ ಎಂಬುದು ಯಾರಿಗೂ ತಿಳಿದಿಲ್ಲ. ಸೀತೆಯನ್ನು ಅಪಹರಿಸಿ
ತೆಗೆದುಕೊಂಡು ಹೋದನು ಆದ್ದರಿಂದ ಬಹುಶಃ ಶತ್ರುವಾಗಿದ್ದಾನೆಂದು ತಿಳಿಯುತ್ತಾರೆ. ರಾವಣನು
ಸೀತೆಯನ್ನು ಅಪಹರಿಸಿಕೊಂಡು ಹೋದನೆಂದರೆ ಬಹಳ ದೊಡ್ಡ ಕಳ್ಳನಾದನಲ್ಲವೆ? ಎಂದಾದರೂ ಕಳ್ಳತನ
ಮಾಡಿದ್ದನೇ? ತ್ರೇತಾಯುಗದಲ್ಲಿ ಎಂದು ಹೇಳುವುದೇ ಅಥವಾ ತ್ರೇತಾದ ಅಂತಿಮದಲ್ಲಿಯೇ? ಈ ಮಾತುಗಳ ಮೇಲೂ
ವಿಚಾರ ಮಾಡಬೇಕಾಗಿದೆ. ಎಂದಾದರೂ ಕಳ್ಳತನವಾಗಿರಬೇಕು, ಯಾವ ರಾಮನ ಸೀತೆಯ ಅಪಹರಣವಾಯಿತು?
ರಾಮ-ಸೀತೆಯರ ರಾಜಧಾನಿಯು ನಡೆದಿದೆಯೇ? ಒಬ್ಬರೇ ರಾಮ-ಸೀತೆಯರು ನಡೆಯುತ್ತಾ ಬಂದಿದ್ದಾರೆಯೇ? ಇದನ್ನು
ಶಾಸ್ತ್ರಗಳಲ್ಲಿ ಒಂದುಕಥೆಯಾಗಿ ಬರೆದಿದ್ದಾರೆ ಅಂದಾಗ ಯಾವ ಸೀತೆ ಎಂಬುದನ್ನು ಈಗ ವಿಚಾರ
ಮಾಡಬೇಕಾಗಿದೆ. ಕ್ರಮವಾಗಿ 12 ಮಂದಿ ರಾಮ-ಸೀತೆಯರಿರುತ್ತಾಲ್ಲವೆ ಅಂದಮೇಲೆ ಯಾವ ಸೀತೆಯನ್ನು
ಅಪಹರಿಸಿದನು? ಅವಶ್ಯವಾಗಿ ಕೊನೆಯವರಿರಬೇಕು. ರಾಮನ ಸೀತೆಯ ಅಪಹರಣವಾಯಿತು ಎಂದು ಏನು ಹೇಳುತ್ತಾರೆ
ಈಗ ರಾಮರಾಜ್ಯದಲ್ಲಿ ಇಡೀ ಸಮಯ ಒಬ್ಬರದೇ ರಾಜ್ಯವಂತೂ ಇರುವುದಿಲ್ಲ. ಅವಶ್ಯವಾಗಿ ವಂಶಾವಳಿಯಿರುವುದು
ಅಂದಮೇಲೆ ಯಾವ ಸೀತೆಯ ಅಪಹರಣವಾಯಿತು? ಇವೆಲ್ಲವೂ ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ನೀವು
ಮಕ್ಕಳು ಬಹಳ ಶೀತಲತೆಯಿಂದ ಯಾರಿಗಾದರೂ ಇವೆಲ್ಲಾ ರಹಸ್ಯವನ್ನು ತಿಳಿಸಬಲ್ಲಿರಿ.
ತಂದೆಯು ತಿಳಿಸುತ್ತಾರೆ
- ಭಕ್ತಿ ಮಾರ್ಗದಲ್ಲಿ ಮನುಷ್ಯರು ಎಷ್ಟೊಂದು ಪೆಟ್ಟನ್ನು ತಿನ್ನುತ್ತಾ-ತಿನ್ನುತ್ತಾ
ದುಃಖಿಯಾಗಿಬಿಟ್ಟಿದ್ದಾರೆ. ಯಾವಾಗ ಅತೀ ದುಃಖಿಯಾಗುವರೋ ಆಗ ಬಾಬಾ ಈ ದುಃಖದಿಂದ ಬಿಡಿಸಿ ಎಂದು
ಕೂಗುತ್ತಾರೆ. ರಾವಣನಂತೂ ಯಾವುದೇ ವ್ಯಕ್ತಿಯಿಲ್ಲ ಅಲ್ಲವೆ! ಒಂದುವೇಳೆ ಇದ್ದರೆ ತಮ್ಮ ರಾಜನನ್ನು
ಪ್ರತೀ ವರ್ಷವು ಏಕೆ ಸಾಯಿಸುತ್ತಾರೆ! ರಾವಣನಿಗೆ ಅವಶ್ಯವಾಗಿ ಸ್ತ್ರೀಯೂ ಇರುವಳು. ಮಂಡೋದರಿಯನ್ನು
ತೋರಿಸುತ್ತಾರೆ, ಆದರೆ ಮಂಡೋದರಿಯ ಪ್ರತಿಮೆಯನ್ನು ಮಾಡಿ ಸುಡುವುದನ್ನು ಎಂದೂ ಯಾರೂ ನೋಡಿಲ್ಲ.
ಆದ್ದರಿಂದಲೇ ತಂದೆಯು ತಿಳಿಸುತಾರೆ - ಇದು ಸುಳ್ಳು ಮಾಯೆ-ಸುಳ್ಳು ಕಾಯವಾಗಿದೆ. ಈಗ ನೀವು ಅಸತ್ಯ
ಮನುಷ್ಯರಿಂದ ಸತ್ಯದೇವತೆಗಳಾಗಲು ಕುಳಿತಿದ್ದೀರಿ. ಅಂತರವಂತೂ ಆಯಿತಲ್ಲವೆ! ಸತ್ಯಯುಗದಲ್ಲಂತೂ ಸದಾ
ಸತ್ಯವನ್ನೇ ಹೇಳುತ್ತಾರೆ. ಅದು ಸತ್ಯಖಂಡವಾಗಿದೆ. ಇದು ಅಸತ್ಯಖಂಡವಾಗಿದೆ ಆದ್ದರಿಂದ ಅಸತ್ಯವನ್ನೇ
ಹೇಳುತ್ತಿರುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಜ್ಞಾನಸಾಗರ
ತಂದೆಯು ಪ್ರತಿನಿತ್ಯವು ಯಾವ ಬೇಹದ್ದಿನ ವಿದ್ಯೆಯನ್ನು ಓದಿಸುತ್ತಾರೆಯೋ ಅದರ ಮೇಲೆ ವಿಚಾರಸಾಗರ
ಮಥನ ಮಾಡಬೇಕಾಗಿದೆ. ಓದಿರುವುದನ್ನು ಅನ್ಯರಿಗೂ ಅವಶ್ಯವಾಗಿ ಓದಿಸಬೇಕಾಗಿದೆ.
2. ಈ ಬೇಹದ್ದಿನ ನಾಟಕವು
ಹೇಗೆ ನಡೆಯುತ್ತಿದೆ, ಇದು ಅನಾದಿ ಮಾಡಿ-ಮಾಡಲ್ಪಟ್ಟ ಅದ್ಭುತ ನಾಟಕವಾಗಿದೆ - ಈ ರಹಸ್ಯವನ್ನು
ಚೆನ್ನಾಗಿ ಅರಿತುಕೊಂಡು ಮತ್ತೆ ಅನ್ಯರಿಗೂ ತಿಳಿಸಬೇಕಾಗಿದೆ.
ವರದಾನ:
ಪವಿತ್ರತೆಯ
ಶ್ರೇಷ್ಠ ಧಾರಣೆಯ ಮೂಲಕ ಒಂದೇ ಧರ್ಮದ ಸಂಸ್ಕಾರ ಉಳ್ಳಂತ ಸಮರ್ಥ ಸಾಮ್ರಾಟ್ ಭವ.
ನಿಮ್ಮ ಸ್ವರಾಜ್ಯದ ಧರ್ಮ
ಅರ್ಥಾತ್ ಧಾರಣೆಯಾಗಿದೆ “ಪವಿತ್ರತೆ”. ಒಂದೇ ಧರ್ಮ ಅರ್ಥಾತ್ ಒಂದೇ ಧಾರಣೆ. ಸ್ವಪ್ನ ಅಥವಾ ಸಂಕಲ್ಪ
ಮಾತ್ರದಲ್ಲಿಯೂ ಸಹ ಅಪವಿತ್ರತೆ ಅರ್ಥಾತ್ ಇನ್ನೊಂದು ಧರ್ಮ ಇರುವುದಿಲ್ಲ, ಏಕೆಂದರೆ ಎಲ್ಲಿ
ಪವಿತ್ರತೆಯಿದೆ ಅಲ್ಲಿ ಅಪವಿತ್ರತೆ ಅರ್ಥಾತ್ ವ್ಯರ್ಥ ಅಥವಾ ವಿಕಲ್ಪದ ಹೆಸರು ಗುರುತೂ ಸಹ
ಇರುವುದಿಲ್ಲ. ಈ ರೀತಿ ಸಂಪೂರ್ಣ ಪವಿತ್ರತೆಯ ಸಂಸ್ಕಾರ ತುಂಬಿಕೊಳ್ಳುವಂತಹವರೇ ಸಮರ್ಥ ಸಾಮ್ರಾಟ್
ಆಗಿದ್ದಾರೆ. ಈಗಿನ ಶ್ರೇಷ್ಠ ಸಂಸ್ಕಾರದ ಆಧಾರದಿಂದ ಭವಿಷ್ಯ ಸಂಸಾರ ತಯಾರಾಗುವುದು. ಈಗಿನ ಸಂಸ್ಕಾರ
ಭವಿಷ್ಯ ಸಂಸಾರದ ಅಡಿಪಾಯವಾಗಿದೆ.
ಸ್ಲೋಗನ್:
ವಿಜಯಿ ರತ್ನಗಳು
ಅವರೇ ಆಗುತ್ತಾರೆ ಯಾರ ಸತ್ಯ ಪ್ರೀತಿ ಒಬ್ಬ ಪರಮಾತ್ಮನ ಜೊತೆ ಇರುವುದು.