16.12.25         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ನೀವು ವಿದ್ಯೆಯನ್ನು ಓದಬೇಕು ಮತ್ತು ಓದಿಸಬೇಕಾಗಿದೆ, ಇದರಲ್ಲಿ ಆಶೀರ್ವಾದದ ಮಾತಿಲ್ಲ, ನೀವು ಎಲ್ಲರಿಗೆ ಇದನ್ನೇ ತಿಳಿಸಿ - ತಂದೆಯನ್ನು ನೆನಪು ಮಾಡಿದರೆ ಎಲ್ಲಾ ದುಃಖಗಳು ದೂರವಾಗುತ್ತವೆ."

ಪ್ರಶ್ನೆ:
ಮನುಷ್ಯರಿಗೆ ಯಾವ-ಯಾವ ಚಿಂತೆಗಳಿವೆ? ನೀವು ಮಕ್ಕಳಿಗೆ ಯಾವುದೇ ಚಿಂತೆಯಿಲ್ಲ - ಏಕೆ?

ಉತ್ತರ:
ಮನುಷ್ಯರಿಗೆ ಈ ಸಮಯದಲ್ಲಿ ಚಿಂತೆಯೇ ಚಿಂತೆಯಿದೆ - ಮಗುವು ರೋಗಿಯಾದರೆ ಚಿಂತೆ, ಮಗ ಮರಣ ಹೊಂದಿದರೆ ಚಿಂತೆ, ಯಾರಿಗಾದರೂ ಮಕ್ಕಳಾಗದಿದ್ದರೆ ಚಿಂತೆ, ಯಾರಾದರೂ ಹೆಚ್ಚು ದವಸ ಧಾನ್ಯಗಳನ್ನಿಟ್ಟುಕೊಂಡರು, ಪೋಲಿಸರು ಅಥವಾ ತೆರಿಗೆ ವಸೂಲಿ ಮಾಡುವವರು ಬಂದರೆಂದರೆ ಚಿಂತೆ...... ಇದು ಕೊಳಕು ಪ್ರಪಂಚ, ದುಃಖ ಕೊಡುವಂತಹ ಪ್ರಪಂಚವಾಗಿದೆ. ನೀವು ಮಕ್ಕಳಿಗೆ ಯಾವುದೇ ಚಿಂತೆಯಿಲ್ಲ ಏಕೆಂದರೆ ನಿಮಗೆ ಸದ್ಗುರು ತಂದೆ ಸಿಕ್ಕಿದ್ದಾರೆ. ನಮ್ಮನ್ನು ಚಿಂತೆಯಿಂದ ದೂರ ಮಾಡಿದರು ಸದ್ಗುರು ಎಂದು ಹೇಳುತ್ತಾರೆ. ನೀವೀಗ ಇಂತಹ ಪ್ರಪಂಚದಲ್ಲಿ ಹೋಗುತ್ತೀರಿ ಎಲ್ಲಿ ಯಾವುದೇ ಚಿಂತೆಯಿಲ್ಲ.

ಗೀತೆ:
ನೀವು ಪ್ರೀತಿಯ ಸಾಗರರಾಗಿದ್ದೀರಿ.........

ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳು ಗೀತೆಯನ್ನು ಕೇಳಿದಿರಿ, ಅರ್ಥವನ್ನೂ ತಿಳಿದುಕೊಳ್ಳುತ್ತೀರಿ - ನಾವೂ ಸಹ ಮಾ|| ಪ್ರೀತಿಯ ಸಾಗರರಾಗಬೇಕಾಗಿದೆ. ಆತ್ಮಗಳೆಲ್ಲರೂ ಸಹೋದರರಾಗಿದ್ದೀರಿ ಆದ್ದರಿಂದ ತಂದೆಯು ತಾವು ಸಹೋದರರಿಗೆ ಹೇಳುತ್ತೇನೆ, ಹೇಗೆ ನಾನು ಪ್ರೀತಿಯ ಸಾಗರನಾಗಿದ್ದೇನೆ ಹಾಗೆಯೇ ನೀವೂ ಸಹ ಬಹಳ ಪ್ರೀತಿಯಿಂದ ನಡೆಯಬೇಕಾಗಿದೆ. ದೇವತೆಗಳಲ್ಲಿ ಬಹಳ ಪ್ರೀತಿಯಿರುತ್ತದೆ. ಅವರನ್ನು ಎಷ್ಟೊಂದು ಪ್ರೀತಿ ಮಾಡುತ್ತಾರೆ, ನೈವೇದ್ಯವನ್ನಿಡುತ್ತಾರೆ. ನೀವೀಗ ಪವಿತ್ರರಾಗಬೇಕಾಗಿದೆ. ಯಾವುದೇ ದೊಡ್ಡ ಮಾತಿಲ್ಲ. ಇದು ಬಹಳ ಛೀ ಛೀ ಪ್ರಪಂಚವಾಗಿದೆ. ಪ್ರತಿಯೊಂದು ಮಾತಿನ ಚಿಂತೆಯಿರುತ್ತದೆ. ದುಃಖದ ಹಿಂದೆ ದುಃಖವೇ ಇದೆ. ಇದಕ್ಕೆ ದುಃಖಧಾಮವೆಂದು ಹೇಳಲಾಗುತ್ತದೆ. ಪೋಲಿಸರು ಅಥವಾ ಕಂದಾಯ ವಸೂಲಿ ಮಾಡುವವರು ಬಂದರೆ ಮನುಷ್ಯರಿಗೆ ಎಷ್ಟೊಂದು ಹಾನಿಯಾಗಿ ಬಿಡುತ್ತದೆ, ಮಾತೇ ಕೇಳಬೇಡಿ. ಯಾರಾದರೂ ಹೆಚ್ಚು ದವಸ ಧಾನ್ಯಗಳನ್ನು ಇಟ್ಟುಕೊಂಡರು, ಪೋಲೀಸರು ಬಂದರೆಂದರೆ ತಬ್ಬಿಬ್ಬಾಗಿ ಬಿಡುತ್ತಾರೆ. ಇದು ಎಂತಹ ಕೊಳಕು ಪ್ರಪಂಚವಾಗಿದೆ! ನರಕವಲ್ಲವೆ. ಸ್ವರ್ಗವನ್ನು ನೆನಪೂ ಮಾಡುತ್ತಾರೆ, ನರಕದ ನಂತರ ಸ್ವರ್ಗ, ಸ್ವರ್ಗದ ನಂತರ ನರಕ - ಈ ಚಕ್ರವು ಸುತ್ತುತ್ತಿರುತ್ತದೆ. ಮಕ್ಕಳಿಗೆ ತಿಳಿದಿದೆ - ತಂದೆಯು ಈಗ ಸ್ವರ್ಗವಾಸಿಗಳನ್ನಾಗಿ ಮಾಡಲು ಬಂದಿದ್ದಾರೆ, ನರಕವಾಸಿಗಳಿಂದ ಸ್ವರ್ಗವಾಸಿಗಳನ್ನಾಗಿ ಮಾಡುತ್ತಾರೆ. ಅಲ್ಲಿ ವಿಕಾರವಿರುವುದೇ ಇಲ್ಲ ಏಕೆಂದರೆ ರಾವಣನೇ ಇರುವುದಿಲ್ಲ. ಅದು ಸಂಪೂರ್ಣ ನಿರ್ವಿಕಾರಿ ಶಿವಾಲಯವಾಗಿದೆ, ಇದು ವೇಶ್ಯಾಲಯವಾಗಿದೆ. ಇನ್ನು ಸ್ವಲ್ಪ ಸಮಯದಲ್ಲಿಯೇ ನೋಡಿ, ಈ ಪ್ರಪಂಚದಲ್ಲಿ ಸುಖವಿದೆಯೇ ಅಥವಾ ದುಃಖವಿದೆಯೇ ಎಂಬುದು ಎಲ್ಲರಿಗೆ ಅರ್ಥವಾಗುತ್ತಾ ಹೋಗುವುದು. ಸ್ವಲ್ಪ ಭೂಕಂಪವಾದರೆ ಸಾಕು ಮನುಷ್ಯರ ಸ್ಥಿತಿ ಏನಾಗಿ ಬಿಡುವುದು! ಸತ್ಯಯುಗದಲ್ಲಿ ಚಿಂತೆಯ ಮಾತೇ ಇರುವುದಿಲ್ಲ. ಇಲ್ಲಂತೂ ಬಹಳಷ್ಟು ಚಿಂತೆಯಿದೆ! ಮಗುವು ರೋಗಿಯಾದರೆ ಚಿಂತೆ, ಮರಣ ಹೊಂದಿದರೆ ಚಿಂತೆ, ಚಿಂತೆಯೇ ಚಿಂತೆಯಿದೆ. ಚಿಂತೆಯಿಂದ ಮುಕ್ತ ಮಾಡಿದರು ಸದ್ಗುರು...... ಎಂದು ಗಾಯನವಿದೆ, ಎಲ್ಲರ ಸ್ವಾಮಿ ಅರ್ಥಾತ್ ಪ್ರಭು ಒಬ್ಬರೇ ಆಗಿದ್ದಾರಲ್ಲವೆ. ನೀವು ಶಿವ ತಂದೆಯ ಮುಂದೆ ಕುಳಿತಿದ್ದೀರಿ, ಈ ಬ್ರಹ್ಮಾನೂ ಸಹ ಗುರುವಲ್ಲ, ಇವರು ಭಾಗ್ಯಶಾಲಿ ರಥವಾಗಿದ್ದಾರೆ. ತಂದೆಯು ಈ ಭಗೀರಥನ ಮೂಲಕ ಓದಿಸುತ್ತಾರೆ. ಅವರು ಜ್ಞಾನ ಸಾಗರನಾಗಿದ್ದಾರೆ. ನಿಮಗೂ ಸಹ ಸಂಪೂರ್ಣ ಜ್ಞಾನ ಸಿಕ್ಕಿದೆ. ನೀವು ಅರಿತುಕೊಳ್ಳದೇ ಇರುವ ದೇವತೆಗಳು ಯಾರೂ ಇಲ್ಲ. ಸತ್ಯ ಮತ್ತು ಅಸತ್ಯದ ಪರಿಶೀಲನೆ ನಿಮಗಿದೆ, ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ. ಸತ್ಯ ಖಂಡವಿತ್ತು ಈಗ ಅಸತ್ಯ ಖಂಡವಾಗಿದೆ. ಸತ್ಯ ಖಂಡವನ್ನು ಯಾವಾಗ ಮತ್ತು ಯಾರು ಸ್ಥಾಪನೆ ಮಾಡಿದರು ಎಂಬುದು ಯಾರಿಗೂ ತಿಳಿದಿಲ್ಲ. ಇದು ಅಜ್ಞಾನ ಅಂಧಕಾರದ ರಾತ್ರಿಯಾಗಿದೆ. ತಂದೆಯು ಬಂದು ಪ್ರಕಾಶವನ್ನು ಕೊಡುತ್ತಾರೆ, ನಿಮ್ಮ ಗತಿಮತವು ನಿಮಗೇ ಗೊತ್ತೆಂದು ಹಾಡುತ್ತಾರೆ ಅಂದರೆ ಸರ್ವಶ್ರೇಷ್ಠನು ಅವರೊಬ್ಬರೇ ಆಗಿದ್ದಾರೆ, ಉಳಿದೆಲ್ಲವೂ ರಚನೆಯಾಗಿದೆ. ಅವರು ರಚಯಿತ, ಬೇಹದ್ದಿನ ತಂದೆಯಾಗಿದ್ದಾರೆ. ಆ ಲೌಕಿಕ ತಂದೆಯು ಹದ್ದಿನ ತಂದೆಯಾಗಿರುತ್ತಾರೆ, 2-4 ಮಂದಿ ಮಕ್ಕಳನ್ನು ರಚಿಸುತ್ತಾರೆ. ಮಕ್ಕಳಾಗದಿದ್ದರೆ ಚಿಂತೆಯಾಗಿ ಬಿಡುತ್ತದೆ ಆದರೆ ಸತ್ಯಯುಗದಲ್ಲಿ ಈ ರೀತಿಯ ಮಾತಿರುವುದಿಲ್ಲ. ಅಲ್ಲಿ ನೀವು ಧೀರ್ಘಾಯಸ್ಸಿನವರು, ಧನವಂತರಾಗಿರುತ್ತೀರಿ. ನೀವು ಆಶೀರ್ವಾದವನ್ನು ಕೊಡುವುದಿಲ್ಲ, ಇದು ವಿದ್ಯೆಯಲ್ಲವೆ. ನೀವು ಶಿಕ್ಷಕರಾಗಿದ್ದೀರಿ, ಕೇವಲ ಶಿವ ತಂದೆಯನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತದೆಯೆಂದು ಹೇಳುತ್ತೀರಿ. ಇದೂ ಸಹ ಶಿಕ್ಷಣವಾಯಿತಲ್ಲವೆ. ಇದಕ್ಕೆ ಸಹಜ ಯೋಗ ಅಥವಾ ನೆನಪು ಎಂದು ಹೇಳಲಾಗುತ್ತದೆ. ಆತ್ಮ ಅವಿನಾಶಿ, ಶರೀರ ವಿನಾಶಿಯಾಗಿದೆ. ತಂದೆಯು ತಿಳಿಸುತ್ತಾರೆ - ನಾನೂ ಸಹ ಅವಿನಾಶಿಯಾಗಿದ್ದೇನೆ. ಪತಿತರನ್ನು ಪಾವನ ಮಾಡಲು ಬನ್ನಿ ಎಂದು ನೀವು ನನ್ನನ್ನು ಕರೆಯುತ್ತೀರಿ. ಆತ್ಮವೇ ಹೇಳುತ್ತದೆಯಲ್ಲವೆ. ಪತಿತ ಆತ್ಮ, ಮಹಾನ್ ಆತ್ಮ ಎಂದು ಹೇಳಲಾಗುತ್ತದೆ. ಪವಿತ್ರತೆಯಿದ್ದಾಗ ಸುಖ-ಶಾಂತಿಯೂ ಇರುತ್ತದೆ.

ಇದು ಅತೀ ಪವಿತ್ರವಾದ ಚರ್ಚ್ ಆಗಿದೆ. ಕ್ರಿಶ್ಚಿಯನ್ನರ ಚರ್ಚ್ ಪವಿತ್ರ ಸ್ಥಾನವಾಗಿರುವುದಿಲ್ಲ ಅಲ್ಲಿಗೆ ವಿಕಾರಿಗಳು ಹೋಗುತ್ತಾರೆ. ಇಲ್ಲಿ ವಿಕಾರಿಗಳಿಗೆ ಬರಲು ಅನುಮತಿಯಿಲ್ಲ. ಒಂದು ಕಥೆಯೂ ಇದೆಯಲ್ಲವೆ - ಇಂದ್ರ ಸಭೆಯಲ್ಲಿ ಒಬ್ಬರು ಯಾರನ್ನೋ ಬಚ್ಚಿಟ್ಟುಕೊಂಡು ಕರೆತಂದರು. ಅದು ಎಲ್ಲರಿಗೆ ಅರ್ಥವಾಯಿತು ಮತ್ತೆ ಅವರಿಗೆ ಕಲ್ಲಾಗಿ ಬಿಡು ಎಂದು ಶಾಪವು ಸಿಕ್ಕಿತು ಆದರೆ ಇಲ್ಲಿ ಶಾಪ ಮೊದಲಾದ ಯಾವುದೇ ಮಾತಿಲ್ಲ. ಇಲ್ಲಿ ಜ್ಞಾನದ ಮಳೆಯಾಗುತ್ತದೆ. ಪತಿತರು ಯಾರೂ ಈ ಪವಿತ್ರ ಸ್ಥಾನಕ್ಕೆ ಬರಲು ಸಾಧ್ಯವಿಲ್ಲ. ಒಂದು ದಿನ ಇದೂ ಆಗುವುದು ಬಹಳ ದೊಡ್ಡ ಹಾಲ್ ನಿರ್ಮಾಣವಾಗುವುದು. ಇದು ಬಹಳ ಪವಿತ್ರ ಸ್ಥಾನವಾಗಿದೆ. ನೀವೂ ಸಹ ಪವಿತ್ರರಾಗುತ್ತೀರಿ, ವಿಕಾರವಿಲ್ಲದೆ ಸೃಷ್ಟಿಯು ಹೇಗೆ ನಡೆಯುತ್ತದೆ, ಇದು ಹೇಗಾಗುವುದು? ಎಂದು ಮನುಷ್ಯರು ತಿಳಿದುಕೊಳ್ಳುತ್ತಾರೆ. ಅವರಲ್ಲಿ ತಮ್ಮ ಜ್ಞಾನವಿರುತ್ತದೆ. ದೇವತೆಗಳ ಮುಂದೆ ಹೋಗಿ ತಾವು ಸರ್ವಗುಣ ಸಂಪನ್ನರು, ನಾವು ಪಾಪಿಗಳೆಂದು ಹೇಳುತ್ತಾರೆ ಅಂದಾಗ ಸ್ವರ್ಗವು ಅತಿ ಪವಿತ್ರ ಪ್ರಪಂಚವಾಗಿದೆ. ಅವರೇ ಮತ್ತೆ 84 ಜನ್ಮಗಳನ್ನು ತೆಗೆದುಕೊಂಡು ಪುನಃ ಪವಿತ್ರರಾಗುತ್ತಾರೆ. ಅದು ಪಾವನ ಪ್ರಪಂಚ, ಇದು ಪತಿತ ಪ್ರಪಂಚವಾಗಿದೆ. ಮಕ್ಕಳಾದರೆ ಖುಷಿಯನ್ನಾಚರಿಸುತ್ತಾರೆ, ರೋಗಿಯಾದರೆ ಮುಖ ಸಪ್ಪೆಯಾಗಿ ಬಿಡುತ್ತದೆ. ಮರಣ ಹೊಂದಿದರೆ ಒಮ್ಮೆಲೆ ಹುಚ್ಚರಾಗಿ ಬಿಡುತ್ತಾರೆ. ಹೀಗೂ ಕೆಲಕೆಲವರು ಆಗಿ ಬಿಡುತ್ತಾರೆ, ಅಂತಹವರನ್ನು ಕರೆತರುತ್ತಾರೆ. ಬಾಬಾ ಇವರ ಮಗುವು ಮರಣ ಹೊಂದಿದ್ದರಿಂದ ಇವರಿಗೆ ತಲೆ ಕೆಟ್ಟು ಹೋಗಿದೆ ಎಂದು ಹೇಳುತ್ತಾರೆ. ಇದು ದುಃಖದ ಪ್ರಪಂಚವಲ್ಲವೆ. ಈಗ ತಂದೆಯು ಸುಖದ ಪ್ರಪಂಚದಲ್ಲಿ ಕರೆದುಕೊಂಡು ಹೋಗುತ್ತಾರೆ ಅಂದಮೇಲೆ ಶ್ರೀಮತದಂತೆ ನಡೆಯಬೇಕು, ಬಹಳ ಒಳ್ಳೆಯ ಗುಣಗಳೂ ಇರಬೇಕು. ಯಾರು ಮಾಡುವರೋ ಅವರು ಪಡೆಯುವರು. ದೈವೀ ನಡುವಳಿಕೆಯು ಬೇಕಾಗಿದೆ. ಶಾಲೆಯಲ್ಲಿ ರಿಜಿಸ್ಟರ್ನಲ್ಲಿ ನಡವಳಿಕೆಯನ್ನು ನೋಡುತ್ತಾರೆ. ಕೆಲವರಂತೂ ಹೊರಗೆ ಅಲೆಯುತ್ತಿರುತ್ತಾರೆ. ತಂದೆ-ತಾಯಿಯ ಉಸಿರು ಕಟ್ಟಿಸುತ್ತಾರೆ. ಈಗ ತಂದೆಯು ಶಾಂತಿಧಾಮ-ಸುಖಧಾಮದಲ್ಲಿ ಕರೆದುಕೊಂಡು ಹೋಗುತ್ತಾರೆ. ಇದಕ್ಕೆ ಶಾಂತಿಯ ಶಿಖರವೆಂದು ಹೇಳಲಾಗುತ್ತದೆ ಎಲ್ಲಿ ಆತ್ಮಗಳು ನಿವಾಸ ಮಾಡುತ್ತೀರೋ ಅದು ಶಾಂತಿಯ ಶಿಖರವಾಗಿದೆ. ಸೂಕ್ಷ್ಮವತನವು ಮೂವಿ ಆಗಿದೆ. ಕೇವಲ ನೀವು ಅದರ ಸಾಕ್ಷಾತ್ಕಾರ ಮಾಡುತ್ತೀರಿ ಬಾಕಿ ಮತ್ತೇನೂ ಇಲ್ಲ. ಇದರಲ್ಲಿಯೂ ಮಕ್ಕಳಿಗೆ ಸಾಕ್ಷಾತ್ಕಾರವಾಗಿದೆ. ಸತ್ಯಯುಗದಲ್ಲಿ ವೃದ್ಧರಾದಾಗ ಖುಷಿಯಿಂದ ಶರೀರವನ್ನು ಬಿಟ್ಟು ಬಿಡುತ್ತಾರೆ. ಇದು 84 ಜನ್ಮಗಳ ಹಳೆಯ ಪೊರೆಯಾಗಿದೆ. ತಂದೆಯು ತಿಳಿಸುತ್ತಾರೆ - ನೀವು ಪಾವನರಾಗಿದ್ದಿರಿ, ಈಗ ಪತಿತರಾಗಿದ್ದೀರಿ. ನಿಮ್ಮನ್ನು ಪಾವನ ಮಾಡಲು ತಂದೆಯು ಬಂದಿದ್ದಾರೆ. ನೀವು ನನ್ನನ್ನು ಕರೆದಿರಲ್ಲವೆ. ಜೀವಾತ್ಮನೇ ಪತಿತನಾಗಿದೆ, ಮತ್ತೆ ಅದೇ ಪಾವನವಾಗುವುದು. ನೀವು ಈ ದೇವಿ-ದೇವತಾ ಮನೆತನದವರಾಗಿದ್ದಿರಿ, ಈಗ ಆಸುರೀ ಮನೆತನದವರಾಗಿದ್ದೀರಿ. ಆಸುರೀ ಮತ್ತು ಈಶ್ವರೀಯ ಅಥವಾ ದೈವೀ ಮನೆತನದಲ್ಲಿ ಎಷ್ಟೊಂದು ಅಂತರವಿದೆ. ನಿಮ್ಮದು ಇದು ಬ್ರಾಹ್ಮಣ ಕುಲವಾಗಿದೆ. ವಂಶಾವಳಿಗೆ ಮನೆತನವೆಂದು ಹೇಳಲಾಗುತ್ತದೆ. ಅಲ್ಲಿ ರಾಜ್ಯವಿರುತ್ತದೆ. ಇಲ್ಲಿ ರಾಜ್ಯವಿಲ್ಲ, ಗೀತೆಯಲ್ಲಿ ಪಾಂಡವರು ಮತ್ತು ಕೌರವರ ರಾಜ್ಯವನ್ನು ಬರೆದಿದ್ದಾರೆ ಆದರೆ ಈ ರೀತಿಯಿಲ್ಲ.

ನೀವಂತೂ ಆತ್ಮಿಕ ಮಕ್ಕಳಾಗಿದ್ದೀರಿ, ತಂದೆಯು ತಿಳಿಸುತ್ತಾರೆ - ಮಧುರ ಮಕ್ಕಳೇ, ಬಹಳ-ಬಹಳ ಮಧುರರಾಗಿ. ದೇಹಾಭಿಮಾನವನ್ನು ಬಿಡಿ. ದೇಹಾಭಿಮಾನದ ಕಾರಣವೇ ಪ್ರೀತಿಯ ಸಾಗರರಾಗುವುದಿಲ್ಲ ಆದ್ದರಿಂದ ಮತ್ತೆ ಬಹಳ ಶಿಕ್ಷೆಗಳನ್ನನುಭವಿಸಬೇಕಾಗುತ್ತದೆ. ಪೆಟ್ಟು ತಿಂದು ಅಲ್ಪಸ್ವಲ್ಪ ರೊಟ್ಟಿ ತಿಂದಂತಾಗುವುದು. ಸ್ವರ್ಗದಲ್ಲಿ ಹೋಗುತ್ತೀರಿ ಆದರೆ ಬಹಳ ಪೆಟ್ಟು ತಿನ್ನುವಿರಿ. ಶಿಕ್ಷೆಗಳು ಹೇಗೆ ಸಿಗುತ್ತವೆ ಎಂಬುದೂ ಸಹ ನೀವು ಆತ್ಮಗಳು ಸಾಕ್ಷಾತ್ಕಾರ ಮಾಡಿದ್ದೀರಿ. ತಂದೆಯಂತೂ ತಿಳಿಸಿದ್ದಾರೆ - ಮಕ್ಕಳೇ, ಬಹಳ ಪ್ರೀತಿಯಿಂದ ನಡೆಯಿರಿ ಇಲ್ಲವಾದರೆ ಕ್ರೋಧದ ಅಂಶವಾಗಿ ಬಿಡುತ್ತದೆ. ಅಭಿನಂದನೆಗಳನ್ನು ಹೇಳಿ - ತಂದೆಯು ಸಿಕ್ಕಿದ್ದಾರೆ, ಯಾರು ನಮ್ಮನ್ನು ನರಕದಿಂದ ತೆಗೆದು ಸ್ವರ್ಗದಲ್ಲಿ ತೆಗೆದುಕೊಂಡು ಹೋಗುತ್ತಾರೆ, ಶಿಕ್ಷೆಗಳನ್ನನುಭವಿಸುವುದು ಬಹಳ ಕೆಟ್ಟದ್ದಾಗಿದೆ. ನೀವು ತಿಳಿದುಕೊಂಡಿದ್ದೀರಿ - ಸತ್ಯಯುಗದಲ್ಲಿ ಪ್ರೀತಿಯ ರಾಜಧಾನಿಯಿರುತ್ತದೆ. ಪ್ರೀತಿಯ ವಿನಃ ಮತ್ತೇನೂ ಇಲ್ಲ. ಇಲ್ಲಾದರೆ ಚಿಕ್ಕ ಮಾತಿಗೆ ಚಹರೆಯು ಬದಲಾಗಿ ಬಿಡುತ್ತದೆ. ತಂದೆಯು ತಿಳಿಸುತ್ತಾರೆ - ನಾನು ಪತಿತ ಪ್ರಪಂಚದಲ್ಲಿ ಬಂದಿದ್ದೇನೆ, ನನಗೆ ಪತಿತ ಪ್ರಪಂಚದಲ್ಲಿಯೇ ನಿಮಂತ್ರಣ ಕೊಡುತ್ತೀರಿ. ತಂದೆಯು ಮತ್ತೆ ಎಲ್ಲರಿಗೆ ಅಮೃತವನ್ನು ಕುಡಿಯಿರಿ ಎಂದು ನಿಮಂತ್ರಣ ಕೊಡುತ್ತಾರೆ. ವಿಷ ಮತ್ತು ಅಮೃತದ ಒಂದು ಪುಸ್ತಕವು ಬಿಡುಗಡೆಯಾಗಿದೆ, ಪುಸ್ತಕ ಬರೆಯುವವರಿಗೆ ಬಹುಮಾನವು ಸಿಕ್ಕಿದೆ, ಪ್ರಸಿದ್ಧವಾಗಿದೆ. ನೋಡಬೇಕು - ಅದರಲ್ಲಿ ಏನು ಬರೆದಿದ್ದಾರೆ! ತಂದೆಯಂತೂ ಹೇಳುತ್ತಾರೆ - ನಾನು ನಿಮಗೆ ಜ್ಞಾನಾಮೃತವನ್ನು ಕುಡಿಸುತ್ತೇನೆ ಮತ್ತೆ ನೀವು ವಿಷವನ್ನೇಕೆ ಕುಡಿಯುತ್ತೀರಿ. ರಕ್ಷಾಬಂಧನವೂ ಸಹ ಈ ಸಮಯದ ನೆನಪಾರ್ಥವಲ್ಲವೆ. ತಂದೆಯು ಎಲ್ಲರಿಗೆ ಹೇಳುತ್ತಾರೆ - ಪವಿತ್ರರಾಗುವ ಪ್ರತಿಜ್ಞೆ ಮಾಡಿ. ಇದು ಅಂತಿಮ ಜನ್ಮವಾಗಿದೆ. ಪವಿತ್ರರಾಗುತ್ತೀರಿ, ಯೋಗದಲ್ಲಿರುತ್ತೀರೆಂದರೆ ಪಾಪಗಳು ಕಳೆಯುತ್ತವೆ. ನಾವು ನೆನಪಿನಲ್ಲಿ ಇರುತ್ತೇವೆಯೇ ಅಥವಾ ಇಲ್ಲವೇ ಎಂದು ತಮ್ಮ ಹೃದಯವನ್ನು ಕೇಳಿಕೊಳ್ಳಿ. ಮಕ್ಕಳನ್ನು ನೆನಪು ಮಾಡಿ ಖುಷಿಯಾಗುತ್ತಾರಲ್ಲವೆ. ಸ್ತ್ರೀ-ಪುರುಷನನ್ನು ನೆನಪು ಮಾಡಿ ಖುಷಿಯಾಗುತ್ತಾರೆ ಅಂದಮೇಲೆ ಇವರು ಯಾರು? ಭಗವಾನುವಾಚ, ನಿರಾಕಾರ. ತಂದೆಯು ತಿಳಿಸುತ್ತಾರೆ - ನಾನು ಇವರ (ಶ್ರೀಕೃಷ್ಣ) 84ನೇ ಜನ್ಮದ ನಂತರ ಪುನಃ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ, ಇನ್ನೂ ವೃಕ್ಷವು ಚಿಕ್ಕದಾಗಿದೆ. ಮಾಯೆಯ ಬಹಳ ಬಿರುಗಾಳಿಗಳು ಬರುತ್ತವೆ, ಇವೆಲ್ಲವೂ ಗುಪ್ತ ಮಾತುಗಳಾಗಿವೆ. ಮಕ್ಕಳೇ, ನೆನಪಿನ ಯಾತ್ರೆಯಲ್ಲಿರಿ ಮತ್ತು ಪವಿತ್ರರಾಗಿ. ರಾಜಧಾನಿಯು ಇಲ್ಲಿಯೇ ಸ್ಥಾಪನೆಯಾಗಬೇಕಾಗಿದೆ, ಗೀತೆಯಲ್ಲಿ ಯುದ್ಧವನ್ನು ತೋರಿಸುತ್ತಾರೆ - ಪಾಂಡವರು ಪರ್ವತಗಳ ಮೇಲೆ ಕರಗಿ ಹೋದರು ಅಷ್ಟೆ, ಫಲಿತಾಂಶವೇನೂ ಇಲ್ಲ.

ಈಗ ನೀವು ಮಕ್ಕಳು ಸೃಷ್ಟಿಯ ಆದಿ-ಮದ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ. ತಂದೆಯು ಜ್ಞಾನಸಾಗರನಲ್ಲವೆ. ಅವರು ಪರಮ ಆತ್ಮನಾಗಿದ್ದಾರೆ. ಆತ್ಮದ ರೂಪವೇನು - ಇದೂ ಸಹ ಯಾರಿಗೂ ತಿಳಿದಿಲ್ಲ. ನಿಮ್ಮ ಬುದ್ಧಿಯಲ್ಲಿ ಬಿಂದುವಿದೆ, ನಿಮ್ಮಲ್ಲಿಯೂ ಯಾರೂ ಯಥಾರ್ಥ ರೀತಿಯಲ್ಲಿ ತಿಳಿದುಕೊಂಡಿಲ್ಲ. ಬಿಂದುವನ್ನು ಹೇಗೆ ನೆನಪು ಮಾಡುವುದು ಎಂದು ಕೇಳುತ್ತಾರೆ? ಏನೂ ತಿಳಿದುಕೊಂಡಿಲ್ಲ. ಆದರೂ ತಂದೆಯು ಹೇಳುತ್ತಾರೆ - ಈ ಜ್ಞಾನವನ್ನು ಸ್ವಲ್ಪ ಕೇಳಿದರೂ ಸಹ ಜ್ಞಾನದ ವಿನಾಶವಾಗುವುದಿಲ್ಲ. ಜ್ಞಾನದಲ್ಲಿ ಬಂದು ಹೊರಟು ಹೋಗುತ್ತಾರೆ ಆದರೆ ಸ್ವಲ್ಪ ಕೇಳಿದರೂ ಸಹ ಸ್ವರ್ಗದಲ್ಲಿ ಬಂದು ಬಿಡುತ್ತಾರೆ. ಯಾರು ಬಹಳ ಕೇಳುವರೋ ಧಾರಣೆ ಮಾಡುವರೋ ಅವರು ರಾಜಧಾನಿಯಲ್ಲಿ ಬರುತ್ತಾರೆ. ಸ್ವಲ್ಪ ಕೇಳುವವರೂ ಪ್ರಜೆಗಳಲ್ಲಿ ಬರುತ್ತಾರೆ. ರಾಜಧಾನಿಯಲ್ಲಂತೂ ರಾಜ-ರಾಣಿ, ಮೊದಲಾದವರೆಲ್ಲರೂ ಇರುತ್ತಾರಲ್ಲವೆ. ಅಲ್ಲಿ ಮಂತ್ರಿಯಿರುವುದಿಲ್ಲ. ಇಲ್ಲಿನ ವಿಕಾರಿ ರಾಜರಿಗೆ ಮಂತ್ರಿಗಳನ್ನು ಇಟ್ಟುಕೊಳ್ಳಬೇಕಾಗಿದೆ. ತಂದೆಯು ನಿಮ್ಮ ಬುದ್ಧಿಯನ್ನು ಬಹಳ ವಿಶಾಲ ಮಾಡುತ್ತಾರೆ ಅಲ್ಲಿ ಮಂತ್ರಿಯನ್ನಿಟ್ಟುಕೊಳ್ಳುವ ಅವಶ್ಯಕತೆಯೇ ಇರುವುದಿಲ್ಲ. ಹಸು-ಹುಲಿ ಒಟ್ಟಿಗೆ ನೀರು ಕುಡಿಯುತ್ತದೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ನೀವೂ ಸಹ ಪರಸ್ಪರ ಉಪ್ಪು ನೀರಾಗಬೇಡಿ, ಕ್ಷೀರ ಖಂಡವಾಗಿರಿ. ಕ್ಷೀರ ಮತ್ತು ಖಂಡ ಎರಡೂ ಒಳ್ಳೆಯ ಪದಾರ್ಥಗಳಲ್ಲವೆ. ಮತಭೇದವನ್ನೇನೂ ಇಟ್ಟುಕೊಳ್ಳಬೇಡಿ. ಇಲ್ಲಂತೂ ಮನುಷ್ಯರು ಎಷ್ಟೊಂದು ಹೊಡೆದಾಡುತ್ತಾ ಜಗಳವಾಡುತ್ತಿರುತ್ತಾರೆ. ಇದು ರೌರವ ನರಕವಾಗಿದೆ. ನರಕದಲ್ಲಿ ಮುಳುಗುತ್ತಿರುತ್ತಾರೆ, ತಂದೆಯು ಬಂದು ಹೊರ ತೆಗೆಯುತ್ತಾರೆ. ಹೊರ ಬರುತ್ತಾ - ಹೊರ ಬರುತ್ತಾ ಮತ್ತೆ ಅದರಲ್ಲಿಯೇ ಸಿಕ್ಕಿ ಹಾಕಿಕೊಳ್ಳುತ್ತಾರೆ. ಕೆಲವರಂತೂ ಅನ್ಯರನ್ನು ಹೊರ ತೆಗೆಯಲು ಹೋಗಿ ತಾನೇ ಹೊರಟು ಹೋಗುತ್ತಾರೆ. ಆರಂಭದಲ್ಲಿ ಮಾಯಾರೂಪಿ ಮೊಸಳೆಯು ಅನೇಕರನ್ನು ಹಿಡಿದುಕೊಂಡಿತು. ಒಮ್ಮೆಲೆ ನುಂಗಿ ಹಾಕಿತು ಅವರ ಗುರುತೇ ಇಲ್ಲ. ಕೆಲಕೆಲವರ ಗುರುತುಗಳಿವೆ, ಯಾರು ಪುನಃ ಬರುತ್ತಾರೆ. ಕೆಲವರಂತೂ ಒಮ್ಮೆಲೆ ಸಮಾಪ್ತಿ. ಇಲ್ಲಿ ಎಲ್ಲವೂ ಪ್ರತ್ಯಕ್ಷ ರೂಪದಲ್ಲಿ ನಡೆಯುತ್ತಿದೆ. ನೀವು ಇತಿಹಾಸವನ್ನು ಕೇಳಿದರೆ ಆಶ್ಚರ್ಯಚಕಿತರಾಗುವಿರಿ. ಗಾಯನವೂ ಇದೆ - ನೀವು ಪ್ರೀತಿಯಾದರೂ ಮಾಡಿ ಅಥವಾ ತಿರಸ್ಕಾರವಾದರೂ ಮಾಡಿ. ನಾವು ತಮ್ಮ ಧರಣಿಯನ್ನು ಬಿಟ್ಟು ಹೊರಗೆ ಹೋಗುವುದಿಲ್ಲ. ತಂದೆಯಂತೂ ಎಂದೂ ಸಹ ತಮ್ಮ ಬಾಯಿಂದ ಆ ರೀತಿ ಏನನ್ನೂ ಮಾತನಾಡುವುದಿಲ್ಲ. ಎಷ್ಟು ಪ್ರೀತಿಯಿಂದ ಓದಿಸುತ್ತಾರೆ! ಸನ್ಮುಖದಲ್ಲಿ ಗುರಿ ಧ್ಯೇಯವಿದೆ, ಶ್ರೇಷ್ಠಾತಿ ಶ್ರೇಷ್ಠ ತಂದೆಯು ಈ ವಿಷ್ಣುವಿನ ತರಹ ಮಾಡುತ್ತಾರೆ. ಆ ವಿಷ್ಣುವೇ ಕೊನೆಯಲ್ಲಿ ಬ್ರಹ್ಮಾನಾಗುತ್ತಾರೆ. ಸೆಕೆಂಡಿನಲ್ಲಿ ಜೀವನ್ಮುಕ್ತಿ ಸಿಕ್ಕಿತು ನಂತರ 84 ಜನ್ಮಗಳನ್ನು ತೆಗೆದುಕೊಂಡು ಈ ರೀತಿಯಾದರು. ತತ್ತ್ವಂ. ನಿಮ್ಮದೂ ಸಹ ಭಾವಚಿತ್ರವನ್ನು ತೆಗೆಯುತ್ತಿದ್ದರಲ್ಲವೆ. ನೀವು ಬ್ರಹ್ಮಾರವರ ಮಕ್ಕಳು ಬ್ರಾಹ್ಮಣರಾಗಿದ್ದೀರಿ. ನಿಮಗೀಗ ಕಿರೀಟವಂತೂ ಇಲ್ಲ ಅದು ಭವಿಷ್ಯದಲ್ಲಿ ಸಿಗುವುದು ಆದ್ದರಿಂದ ನಿಮ್ಮದು ಆ ಚಿತ್ರವನ್ನು ಇಟ್ಟಿದ್ದಾರೆ. ತಂದೆಯು ಬಂದು ಮಕ್ಕಳನ್ನು ಡಬಲ್ ಕಿರೀಟಧಾರಿಗಳನ್ನಾಗಿ ಮಾಡುತ್ತಾರೆ. ನೀವೂ ಸಹ ಅನುಭವ ಮಾಡುತ್ತೀರಿ - ಅವಶ್ಯವಾಗಿ ನಮ್ಮಲ್ಲಿ ಮೊದಲು ಪಂಚ ವಿಕಾರಗಳಿತ್ತು. (ನಾರದನ ತರಹ) ಮೊಟ್ಟ ಮೊದಲ ಭಕ್ತರೂ ನೀವಾಗಿದ್ದೀರಿ, ಈಗ ತಂದೆಯು ಎಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆ. ಒಮ್ಮೆಲೆ ಪತಿತರನ್ನು ಪಾವನರನ್ನಾಗಿ ಮಾಡುತ್ತಾರೆ. ತಂದೆಯು ಏನನ್ನೂ ತೆಗೆದುಕೊಳ್ಳುವುದಿಲ್ಲ. ಶಿವ ತಂದೆಯು ಏನು ತೆಗೆದುಕೊಳ್ಳುತ್ತಾರೆ! ನೀವು ಶಿವ ತಂದೆಯ ಭಂಡಾರದಲ್ಲಿ ಹಾಕುತ್ತೀರಿ, ನಾನಂತು (ಬ್ರಹ್ಮಾ) ಟ್ರಸ್ಟಿಯಾಗಿದ್ದೇನೆ. ನಿಮ್ಮದು ಲೇವಾದೇವಿಯ ಲೆಕ್ಕವೆಲ್ಲವೂ ಶಿವ ತಂದೆಯೊಂದಿಗಿದೆ, ನಾನು ಓದುತ್ತೇನೆ ಮತ್ತು ಓದಿಸುತ್ತೇನೆ. ಯಾರು ತನ್ನದೆಲ್ಲವನ್ನೂ ಕೊಟ್ಟು ಬಿಟ್ಟರೋ ಅವರು ಮತ್ತೆ ನಿಮ್ಮಿಂದ ತೆಗೆದುಕೊಳ್ಳುವರೇ! ಯಾವುದೇ ವಸ್ತುವಿನಲ್ಲಿ ಮಮತೆಯಿರುವುದಿಲ್ಲ, ಯಾರಾದರೂ ಮರಣ ಹೊಂದಿದರೆ ಸ್ವರ್ಗಸ್ಥರಾದರೆಂದು ಹೇಳುತ್ತಾರೆ ಮತ್ತೆ ಅವರಿಗೆ ನರಕದ ಆಹಾರ-ಪಾನೀಯಗಳನ್ನು ಏಕೆ ತಿನ್ನಿಸುತ್ತೀರಿ! ಅಜ್ಞಾನವಲ್ಲವೆ. ನರಕದಲ್ಲಿದ್ದರು ಅಂದಮೇಲೆ ಪುನರ್ಜನ್ಮವೂ ನರಕದಲ್ಲಿಯೇ ಆಗುವುದಲ್ಲವೆ. ನೀವೀಗ ಅಮರಲೋಕಕ್ಕೆ ಹೋಗುತ್ತೀರಿ, ಇದು ಬಾಜೋಲಿ ಆಟವಾಗಿದೆ. ನೀವು ಬ್ರಾಹ್ಮಣ ಶಿಖೆಯಾಗಿದ್ದೀರಿ ನಂತರ ದೇವತಾ, ಕ್ಷತ್ರಿಯರಾಗುತ್ತೀರಿ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಬಹಳ ಮಧುರರಾಗಿ. ಆದರೂ ಸುಧಾರಣೆಯಾಗದಿದ್ದರೆ ಅವರ ಅದೃಷ್ಟವೆಂದು ಹೇಳುತ್ತಾರೆ. ಅಂತಹವರು ತಮಗೆ ತಾವೇ ನಷ್ಟ ಮಾಡಿಕೊಳ್ಳುತ್ತಾರೆ. ಸುಧಾರಣೆಯಾಗದೇ ಇದ್ದರೆ ಈಶ್ವರನಾದರೂ ಪುರುಷಾರ್ಥವನ್ನೇನು ಮಾಡಿಸುವುದು!

ತಂದೆಯು ತಿಳಿಸುತ್ತಾರೆ - ನಾನು ಆತ್ಮಗಳೊಂದಿಗೆ ಮಾತನಾಡುತ್ತಿದ್ದೇನೆ, ಅವಿನಾಶಿ ಆತ್ಮರಿಗೆ ಅವಿನಾಶಿ ಪರಮಾತ್ಮ ತಂದೆಯು ಜ್ಞಾನವನ್ನು ಕೊಡುತ್ತಿದ್ದಾರೆ. ಆತ್ಮವು ಕಿವಿಗಳಿಂದ ಕೇಳುತ್ತಿದೆ, ಬೇಹದ್ದಿನ ತಂದೆಯು ಈ ಜ್ಞಾನವನ್ನು ತಿಳಿಸುತ್ತಿದ್ದಾರೆ. ನಿಮ್ಮನ್ನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಾರೆ, ಮಾರ್ಗವನ್ನು ತೋರಿಸುವಂತಹ ಸುಪ್ರೀಂ ಮಾರ್ಗದರ್ಶಕನು ಕುಳಿತಿದ್ದಾರೆ. ಶ್ರೀಮತವು ಹೇಳುತ್ತದೆ - ಪವಿತ್ರರಾಗಿ, ನನ್ನನ್ನು ನೆನಪು ಮಾಡಿರಿ ಆಗ ನಿಮ್ಮ ಪಾಪಗಳು ಭಸ್ಮವಾಗುತ್ತವೆ. ನೀವೇ ಸತೋಪ್ರಧಾನರಾಗಿದ್ದಿರಿ, 84 ಜನ್ಮಗಳನ್ನೂ ನೀವೇ ತೆಗೆದುಕೊಂಡಿದ್ದೀರಿ. ತಂದೆಯು ಇವರಿಗೆ ತಿಳಿಸುತ್ತಾರೆ - ನೀವು ಸತೋಪ್ರಧಾನರಿಂದ ಈಗ ತಮೋಪ್ರಧಾನರಾಗಿದ್ದೀರಿ, ಈಗ ಮತ್ತೆ ನನ್ನನ್ನು ನೆನಪು ಮಾಡಿ, ಇದಕ್ಕೆ ಯೋಗಾಗ್ನಿಯೆಂದು ಹೇಳಲಾಗುತ್ತದೆ. ಈ ಜ್ಞಾನವೂ ಸಹ ನಿಮಗೆ ಈಗ ಇದೆ. ಸತ್ಯಯುಗದಲ್ಲಿ ನನ್ನನ್ನು ಯಾರೂ ನೆನಪು ಮಾಡುವುದಿಲ್ಲ. ಈ ಸಮಯದಲ್ಲಿಯೇ ನಾನು ಹೇಳುತ್ತೇನೆ - ನನ್ನನ್ನು ನೆನಪು ಮಾಡಿದರೆ ನಿಮ್ಮ ಪಾಪಗಳು ಕಳೆಯುವವು, ಮತ್ತ್ಯಾವುದೇ ಮಾರ್ಗವಿಲ್ಲ. ಇದು ಶಾಲೆಯಲ್ಲವೆ. ಇದಕ್ಕೆ ವಿಶ್ವ ವಿದ್ಯಾಲಯವೆಂದು ಕರೆಯಲಾಗುತ್ತದೆ. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ಶಿವ ತಂದೆಯು ತಿಳಿಸುತ್ತಾರೆ ಈ ಲಕ್ಷ್ಮೀ-ನಾರಾಯಣರಲ್ಲಿಯೂ ಈ ಜ್ಞಾನವಿರುವುದಿಲ್ಲ. ಇದು ಪ್ರಾಲಬ್ಧವಲ್ಲವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಪ್ರೀತಿಯ ರಾಜಧಾನಿಯಲ್ಲಿ ಹೋಗಬೇಕಾಗಿದೆ ಆದ್ದರಿಂದ ಪರಸ್ಪರ ಕ್ಷೀರ ಖಂಡವಾಗಿರಬೇಕಾಗಿದೆ. ಎಂದೂ ಉಪ್ಪು ನೀರಾಗಿ ಮತಭೇದದಲ್ಲಿ ಬರಬಾರದು. ತಮ್ಮನ್ನು ತಾವೇ ಸುಧಾರಣೆ ಮಾಡಿಕೊಳ್ಳಬೇಕು.

2. ದೇಹಾಭಿಮಾನವನ್ನು ಬಿಟ್ಟು ಮಾ|| ಪ್ರೀತಿಯ ಸಾಗರರಾಗಬೇಕು. ತಮ್ಮ ಚಲನೆಯನ್ನು ದೈವೀ ಚಲನೆಯನ್ನಾಗಿ ಮಾಡಿಕೊಳ್ಳಬೇಕು, ಬಹಳ-ಬಹಳ ಮಧುರರಾಗಿ ನಡೆಯಬೇಕಾಗಿದೆ.

ವರದಾನ:
ಮನಸ್ಸಿನ ಸ್ವತಂತ್ರತೆಯ ಮುಖಾಂತರ ಸರ್ವ ಆತ್ಮಗಳಿಗೆ ಶಾಂತಿಯ ದಾನ ಕೊಡುವಂತಹ ಮನಸ್ಸಿನಿಂದ ಮಹಾದಾನಿ ಭವ.

ಬಂಧನದಲ್ಲಿ ಇರುವ ಮಾತೆಯರು ತನುವಿನಿಂದ ಬಲೆ ಪರತಂತ್ರ ಇರಬಹುದು ಆದರೆ ಮನಸ್ಸಿನಿಂದ ಸದಾ ಸ್ವತಂತ್ರರಾಗಿದ್ದಾರೆ ಆದ್ದರಿಂದ ತಮ್ಮ ವೃತ್ತಿಯ ಮುಖಾಂತರ, ಶುದ್ಧ ಸಂಕಲ್ಪದ ಮುಖಾಂತರ ವಿಶ್ವದ ವಾಯುಮಂಡಲವನ್ನು ಬದಲಾಯಿಸುವಂತಹ ಸೇವೆಯನ್ನು ಮಾಡಲು ಸಾಧ್ಯ. ಇತ್ತೀಚೆಗೆ ವಿಶ್ವಕ್ಕೆ ಮನಸ್ಸಿನ ಶಾಂತಿಯ ಅವಶ್ಯಕತೆಯಿದೆ. ಆದ್ದರಿಂದ ಮನಸ್ಸಿನಿಂದ ಸ್ವತಂತ್ರ ಆತ್ಮ ಮನಸ್ಸಿನ ಮುಖಾಂತರ ಶಾಂತಿಯ ವೈಬ್ರೇಷನ್ ಹರಡಲು ಸಾಧ್ಯ. ಶಾಂತಿಯ ಸಾಗರ ತಂದೆಯ ನೆನಪಿನಲ್ಲಿರುವುದರಿಂದ ಸ್ವತಃವಾಗಿ ಶಾಂತಿಯ ಕಿರಣಗಳು ಹರಡುತ್ತಿರುತ್ತವೆ. ಈ ರೀತಿ ಶಾಂತಿಯ ದಾನ ಕೊಡುವಂತಹವರೇ ಮನಸ್ಸಿನಿಂದ ಮಹಾದಾನಿಗಳು.

ಸ್ಲೋಗನ್:
ಸ್ನೇಹ ರೂಪದ ಅನುಭವವನ್ನಂತೂ ಹೇಳುವಿರಿ ಈಗ ಶಕ್ತಿರೂಪದ ಅನುಭವವನ್ನು ತಿಳಿಸಿ.

ಅವ್ಯಕ್ತ ಸೂಚನೆ:- ಈಗ ಸಂಪನ್ನ ಅಥವಾ ಕರ್ಮಾತೀತರಾಗುವುದರಲ್ಲಿ ತತ್ಪರರಾಗಿರಿ.

ಪ್ರತಿಯೊಬ್ಬ ಬ್ರಾಹ್ಮಣ ತಂದೆಯ ಸಮಾನ ಚೈತನ್ಯ ಚಿತ್ರಗಳಾಗಿ, ಲೈಟ್ ಮತ್ತು ಮೈಟ್ ಹೌಸ್ದ ಕಣ್ನೋಟರಾಗಲಿ. ಸಂಕಲ್ಪ ಶಕ್ತಿಯ, ಶಾಂತಿಯ ಭಾಷಣವನ್ನು ತಯಾರಿ ಮಾಡಿ ಮತ್ತು ಕರ್ಮಾತೀತ ಸ್ಟೇಜ್ ಮೇಲೆ ವರದಾನಿ ಮೂರ್ತಿಯ ಪಾತ್ರವನ್ನು ಅಭಿನಯಿಸಿ ಆಗ ಸಂಪೂರ್ಣತೆಯು ಸಮೀಪ ಬರುವುದು. ನಂತರ ಸೆಕೆಂಡ್ಗಿಂತಲೂ ಬೇಗ ಎಲ್ಲಿ ಕರ್ತವ್ಯ ಮಾಡಿಸಬೇಕಾಗಿದೆ ಅಲ್ಲಿ ವೈಯರ್ಲೆಸ್ ಮೂಲಕ ಡೈರೆಕ್ಷನ್ ಕೊಡಬಹುದು. ಸೆಕೆಂಡಿನಲ್ಲಿ ಕರ್ಮಾತೀತ ಸ್ಟೇಜ್ನ ಆಧಾರದಿಂದ ಸಂಕಲ್ಪ ಮಾಡಿದಿರಿ ಮತ್ತು ಎಲ್ಲಿ ಬೇಕೋ ಅಲ್ಲಿ ಆ ಸಂಕಲ್ಪ ತಲುಪಿ ಬಿಟ್ಟಿತು.