17.01.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ಭಾರತದ ಅತ್ಯಮೂಲ್ಯ ಸೇವಕರಾಗಿದ್ದೀರಿ, ನೀವು ಶ್ರೀಮತದನುಸಾರ ತಮ್ಮ-ತಮ್ಮ ತನು-ಮನ-ಧನದಿಂದ ಇದನ್ನು ರಾಮರಾಜ್ಯವನ್ನಾಗಿ ಮಾಡಬೇಕಾಗಿದೆ”

ಪ್ರಶ್ನೆ:
ಸತ್ಯ-ಅಲೌಕಿಕ ಸೇವೆ ಯಾವುದಾಗಿದೆ, ಅದನ್ನು ಈಗ ನೀವು ಮಕ್ಕಳು ಮಾಡುತ್ತೀರಿ?

ಉತ್ತರ:
ನೀವು ಮಕ್ಕಳು ಗುಪ್ತರೀತಿಯಿಂದ ಶ್ರೀಮತದಂತೆ ಪಾವನಭೂಮಿ, ಸುಖಧಾಮದ ಸ್ಥಾಪನೆ ಮಾಡುತ್ತಿದ್ದೀರಿ. ಇದೇ ಭಾರತದ ಸತ್ಯ-ಅಲೌಕಿಕ ಸೇವೆಯಾಗಿದೆ. ನೀವು ಬೇಹದ್ದಿನ ತಂದೆಯ ಶ್ರೀಮತದನುಸಾರ ಎಲ್ಲರನ್ನೂ ರಾವಣನ ಬಂಧನದಿಂದ ಬಿಡಿಸುತ್ತಿದ್ದೀರಿ. ಇದಕ್ಕಾಗಿ ನೀವು ಪಾವನರಾಗಿ, ಅನ್ಯರನ್ನೂ ಪಾವನ ಮಾಡುತ್ತೀರಿ.

ಗೀತೆ:
ನಯನಹೀನನಿಗೆ ದಾರಿ ತೋರಿಸು ಪ್ರಭು...............

ಓಂ ಶಾಂತಿ.
ಹೇ ಪ್ರಭು ಈಶ್ವರ, ಪರಮಾತ್ಮ ಎಂದು ಹೇಳುವುದರಲ್ಲಿ ಹಾಗೂ ತಂದೆ ಎಂದು ಹೇಳುವುದರಲ್ಲಿ ಎಷ್ಟೊಂದು ಅಂತರವಿದೆ! ಹೇ ಈಶ್ವರ, ಹೇ ಪ್ರಭು ಎಂದು ಹೇಳುವುದರಿಂದ ಎಷ್ಟೊಂದು ಗೌರವವಿರುತ್ತದೆ. ಮತ್ತೆ ಅವರಿಗೆ ಪಿತನೆಂತಲೂ ಹೇಳುತ್ತಾರೆ. ಪಿತ ಎನ್ನುವ ಶಬ್ಧವು ಬಹಳ ಸಹಜವಾಗಿದೆ ಏಕೆಂದರೆ ಇಂದು ಅನೇಕ ಪಿತರಿದ್ದಾರೆ. ಪ್ರಾರ್ಥನೆಯಲ್ಲಿಯೂ ಸಹ ಹೇ ಪ್ರಭು, ಹೇ ಈಶ್ವರ ಎಂದು ಹೇಳುತ್ತಾರೆ. ತಂದೆ ಎಂದು ಏಕೆ ಹೇಳುವುದಿಲ್ಲ? ಅಂದರೆ ಪರಮಪಿತನೇ ಆದರಲ್ಲವೆ. ಪರಮಾತ್ಮ ಎಂಬ ಶಬ್ಧವು ಬಹಳ ಶ್ರೇಷ್ಠವಾಗಿಬಿಡುತ್ತದೆ. ಹೇ ಪ್ರಭು ನಯನಹೀನನಿಗೆ ದಾರಿ ತೋರಿಸು ಎಂದು ಹೇಳುತ್ತಾರೆ. ಬಾಬಾ, ನಮಗೆ ಮುಕ್ತಿ-ಜೀವನ್ಮುಕ್ತಿಯ ದಾರಿ ತೋರಿಸು ಎಂದು ಆತ್ಮಗಳೇ ಹೇಳುತ್ತೀರಿ. ಪ್ರಭು ಶಬ್ಧವು ಎಷ್ಟು ದೊಡ್ಡದಾಗಿದೆ! ಪಿತ ಶಬ್ಧವು ಚಿಕ್ಕದಾಗಿದೆ. ಇಲ್ಲಿ ನೀವು ತಿಳಿದುಕೊಂಡಿದ್ದೀರಿ - ತಂದೆಯೇ ಬಂದು ತಿಳಿಸುತ್ತಾರೆ, ಲೌಕಿಕ ರೀತಿಯಿಂದ ತಂದೆಯರು ಅನೇಕರಿದ್ದಾರೆ, ನೀವು ಮಾತಾಪಿತಾ ಎಂದೂ ಕರೆಯುತ್ತಾರೆ. ಎಷ್ಟು ಸಾಧಾರಣ ಶಬ್ಧವಾಯಿತು. ಈಶ್ವರ ಅಥವಾ ಪ್ರಭು ಎಂದು ಹೇಳುವುದರಿಂದ ಅವರೇನು ತಾನೇ ಮಾಡಲು ಸಾಧ್ಯವಿಲ್ಲ ಎಂದು ತಿಳಿಯುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ಬಂದಿದ್ದಾರೆ, ತಂದೆಯು ಬಹಳ ಶ್ರೇಷ್ಠ ಸಹಜವಾದ ಮಾರ್ಗವನ್ನು ತಿಳಿಸುತ್ತಾರೆ. ತಂದೆಯು ಹೇಳುತ್ತಾರೆ - ನನ್ನ ಮಕ್ಕಳೇ, ನೀವು ರಾವಣನ ಮತದಂತೆ ಕಾಮಚಿತೆಯನ್ನೇರಿ ಭಸ್ಮೀಭೂತರಾಗಿಬಿಟ್ಟಿದ್ದೀರಿ. ಈಗ ನಾನು ನಿಮ್ಮನ್ನು ಪಾವನರನ್ನಾಗಿ ಮಾಡಿ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದೇನೆ. ಬಂದು ನಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡಿ ಎಂದೇ ಕರೆಯುತ್ತಾರೆ. ಈಗ ನಾನು ನಿಮ್ಮ ಸೇವೆಯಲ್ಲಿ ಬಂದಿದ್ದೇನೆ. ನೀವು ಮಕ್ಕಳೆಲ್ಲರೂ ಭಾರತದ ಅಲೌಕಿಕ ಸೇವೆಯಲ್ಲಿದ್ದೀರಿ ಯಾವ ಸೇವೆಯನ್ನು ನಿಮ್ಮ ವಿನಃ ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ನೀವು ಭಾರತಕ್ಕಾಗಿಯೇ ಮಾಡುತ್ತೀರಿ, ಶ್ರೀಮತದನುಸಾರ ಪವಿತ್ರರಾಗಿ ಭಾರತವನ್ನು ಪವಿತ್ರವನ್ನಾಗಿ ಮಾಡುತ್ತೀರಿ. ಗಾಂಧೀಜಿಯ ಆಸೆಯೂ ಸಹ ಇದೇ ಆಗಿತ್ತು - ಈ ಭಾರತವು ರಾಮರಾಜ್ಯವಾಗಬೇಕು. ಈಗ ಯಾವುದೇ ಮನುಷ್ಯರಂತೂ ರಾಮರಾಜ್ಯವನ್ನಾಗಿ ಮಾಡುವುದಕ್ಕೆ ಸಾಧ್ಯವಿಲ್ಲ ಇಲ್ಲವೆಂದರೆ ಪ್ರಭುವಿಗೆ ಪತಿತ-ಪಾವನನೆಂದು ಏಕೆ ಕರೆಯುತ್ತಾರೆ? ಈಗ ನೀವು ಮಕ್ಕಳಿಗೆ ಭಾರತದೊಂದಿಗೆ ಎಷ್ಟೊಂದು ಪ್ರೀತಿಯಿದೆ! ಈಗ ನೀವು ಇಡೀ ಪ್ರಪಂಚದ ಅದರಲ್ಲಿಯೂ ವಿಶೇಷವಾಗಿ ಭಾರತದ ಸತ್ಯಸೇವೆಯನ್ನು ಮಾಡುತ್ತೀರಿ.

ನಿಮಗೆ ತಿಳಿದಿದೆ - ಭಾರತವನ್ನು ಪುನಃ ರಾಮರಾಜ್ಯವನ್ನಾಗಿ ಮಾಡುತ್ತೇವೆ ಯಾವುದನ್ನು ಬಾಪೂಜಿಯೂ ಸಹ ಬಯಸುತ್ತಿದ್ದರು. ಅವರು ಹದ್ದಿನ ಬಾಪೂಜಿಯಾಗಿದ್ದರು ಆದರೆ ಇವರು ಬೇಹದ್ದಿನ ಬಾಪೂಜಿಯಾಗಿದ್ದಾರೆ. ಇವರು ಬೇಹದ್ದಿನ ಸೇವೆಯನ್ನು ಮಾಡುತ್ತಾರೆ, ಇದನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ನಾವು ರಾಮರಾಜ್ಯವನ್ನಾಗಿ ಮಾಡುತ್ತೇವೆ ಎಂಬ ನಶೆಯು ನಿಮ್ಮಲ್ಲಿಯೂ ಸಹ ನಂಬರ್ವಾರ್ ಇರುತ್ತದೆ. ನೀವು ಸರ್ಕಾರದ ಸೇವಕರಾಗಿದ್ದೀರಿ, ನೀವು ದೈವೀಸರ್ಕಾರವನ್ನು ಮಾಡುತ್ತೀರಿ. ನಿಮಗೆ ಭಾರತದಪ್ರತಿ ಹೆಮ್ಮೆಯಿದೆ ಮತ್ತು ತಿಳಿದುಕೊಂಡಿದ್ದೀರಿ - ಸತ್ಯಯುಗದಲ್ಲಿ ಇದು ಪಾವನಭೂಮಿಯಾಗಿತ್ತು, ಈಗಂತೂ ಪತಿತವಾಗಿದೆ. ಈಗಂತೂ ತಂದೆಯ ಮೂಲಕ ಪುನಃ ಪಾವನಭೂಮಿ ಅಥವಾ ಸ್ವರ್ಗವನ್ನಾಗಿ ಮಾಡುತ್ತಿದ್ದೇವೆ ಅದೂ ಗುಪ್ತರೀತಿಯಿಂದ. ಶ್ರೀಮತವೂ ಸಹ ಗುಪ್ತ ರೀತಿಯಿಂದ ಸಿಗುತ್ತದೆ. ನೀವು ಭಾರತ ಸರ್ಕಾರಕ್ಕಾಗಿಯೇ ಮಾಡುತ್ತಿದ್ದೀರಿ. ಶ್ರೀಮತದಂತೆ ನೀವು ಭಾರತದ ಶ್ರೇಷ್ಠಾತಿಶ್ರೇಷ್ಠ ಸೇವೆಯನ್ನು ತಮ್ಮದೇ ತನು-ಮನ-ಧನದಿಂದ ಮಾಡುತ್ತಿದ್ದೀರಿ. ಕಾಂಗ್ರೆಸ್ಸಿನವರು ಎಷ್ಟೊಂದು ಮಂದಿ ಜೈಲಿಗೆ ಹೋದರು! ನಿಮಗಂತೂ ಜೈಲಿಗೆ ಹೋಗುವ ಅವಶ್ಯಕತೆಯೇ ಇಲ್ಲ. ನಿಮ್ಮದು ಆತ್ಮಿಕ ಮಾತಾಗಿದೆ, ನಿಮ್ಮ ಯುದ್ಧವೂ ಸಹ ಪಂಚವಿಕಾರರೂಪಿ ರಾವಣನೊಂದಿಗಿದೆ. ಯಾವ ರಾವಣನ ರಾಜ್ಯವು ಇಂದು ಇಡೀ ಪೃಥ್ವಿಯ ಮೇಲಿದೆ. ನಿಮ್ಮದು ಇದು ಸೇನೆಯಾಗಿದೆ, ಶ್ರೀಲಂಕೆಯಂತೂ ಒಂದು ಚಿಕ್ಕದ್ವೀಪವಾಗಿದೆ ಆದರೆ ಈ ಸೃಷ್ಟಿಯು ಬೇಹದ್ದಿನ ದ್ವೀಪವಾಗಿದೆ. ನೀವು ಬೇಹದ್ದಿನ ತಂದೆಯ ಶ್ರೀಮತದಂತೆ ಎಲ್ಲರನ್ನೂ ರಾವಣನ ಜೈಲಿನಿಂದ ಬಿಡಿಸುತ್ತೀರಿ. ಇದೂ ಸಹ ನಿಮಗೆ ತಿಳಿದಿದೆ - ಈಗ ಹಳೆಯ ಪ್ರಪಂಚದ ವಿನಾಶವಂತೂ ಖಂಡಿತ ಆಗಲಿದೆ, ನೀವು ಶಿವಶಕ್ತಿಯರಾಗಿದ್ದೀರಿ. ಈ ಗೋಪರೂ ಸಹ ಶಿವಶಕ್ತಿಯರಾಗಿದ್ದಾರೆ. ನೀವು ಗುಪ್ತರೀತಿಯಲ್ಲಿ ಭಾರತದ ಅತಿದೊಡ್ಡ ಸೇವೆ ಮಾಡುತ್ತಿದ್ದೀರಿ. ಮುಂದೆಹೋದಂತೆ ಎಲ್ಲರಿಗೂ ತಿಳಿಯುತ್ತಾ ಹೋಗುವುದು. ಶ್ರೀಮತದನುಸಾರ ನಿಮ್ಮದು ಆತ್ಮಿಕ ಸೇವೆಯಾಗಿದೆ. ನೀವು ಗುಪ್ತವಾಗಿದ್ದೀರಿ. ಈ ಬ್ರಹ್ಮಾಕುಮಾರ-ಕುಮಾರಿಯರು ಭಾರತವನ್ನು ತಮ್ಮ ತನು-ಮನ-ಧನದಿಂದ ಶ್ರೇಷ್ಠಾತಿಶ್ರೇಷ್ಠ ಸತ್ಯಖಂಡವನ್ನಾಗಿ ಮಾಡುತ್ತಾರೆಂಬುದು ಸರ್ಕಾರಕ್ಕೆ ತಿಳಿದೇ ಇಲ್ಲ. ಭಾರತವು ಸತ್ಯಖಂಡವಾಗಿತ್ತು ಈಗ ಅಸತ್ಯಖಂಡವಾಗಿಬಿಟ್ಟಿದೆ. ಸತ್ಯವಂತೂ ಒಬ್ಬ ತಂದೆಯೇ ಆಗಿದ್ದಾರೆ ಆದ್ದರಿಂದಲೇ ‘ಗಾಡ್ ಈಸ್ ಟ್ರೂಥ್’ (ಸತ್ಯವೇ ದೇವರು) ಎಂದು ಹೇಳಲಾಗುತ್ತದೆ. ನಿಮಗೆ ನರನಿಂದ ನಾರಾಯಣರಾಗುವ ಸತ್ಯಶಿಕ್ಷಣವನ್ನು ಕೊಡುತ್ತಿದ್ದಾರೆ. ತಂದೆಯು ತಿಳಿಸುತ್ತಾರೆ - ಕಲ್ಪದ ಹಿಂದೆಯೂ ಸಹ ನಿಮ್ಮನ್ನು ನರನಿಂದ ನಾರಾಯಣರನ್ನಾಗಿ ಮಾಡಿದ್ದೆನು, ರಾಮಾಯಣದಲ್ಲಿ ಏನೇನೋ ಕಥೆಗಳನ್ನು ಬರೆದುಬಿಟ್ಟಿದ್ದಾರೆ. ರಾಮನು ವಾನರ ಸೈನ್ಯದ ಸಹಾಯವನ್ನು ಪಡೆದನು ಎಂದು ಹೇಳುತ್ತಾರೆ. ನೀವು ಮೊದಲು ಕಪಿಯತರಹ ಇದ್ದಿರಿ. ಒಬ್ಬ ಸೀತೆಯ ಮಾತಲ್ಲ, ತಂದೆಯು ತಿಳಿಸುತ್ತಾರೆ - ಹೇಗೆ ನಾನು ರಾವಣರಾಜ್ಯದ ವಿನಾಶ ಮಾಡಿಸಿ ರಾಮರಾಜ್ಯವನ್ನು ಸ್ಥಾಪನೆ ಮಾಡುತ್ತೇನೆ, ಇದರಲ್ಲಿ ಯಾವುದೇ ಕಷ್ಟದ ಮಾತಿಲ್ಲ. ಅವರಂತೂ ಇದಕ್ಕಾಗಿ ಎಷ್ಟೊಂದು ಖರ್ಚು ಮಾಡುತ್ತಾರೆ, ರಾವಣನ ಪ್ರತಿಮೆಯನ್ನು ಮಾಡಿ ಅದನ್ನು ಸುಡುತ್ತಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ದೊಡ್ಡ-ದೊಡ್ಡವರೆಲ್ಲರೂ ಹೋಗುತ್ತಾರೆ, ವಿದೇಶಿಯರಿಗೂ ತೋರಿಸುತ್ತಾರೆ ಆದರೆ ಇದು ಅವರಿಗೆ ತಿಳಿದಿಲ್ಲ. ತಂದೆಯು ತಿಳಿಸುತ್ತಿದ್ದಾರೆ ಅಂದಾಗ ನೀವು ಮಕ್ಕಳಿಗೆ ಹೃದಯದಲ್ಲಿ ಉಮ್ಮಂಗವಿದೆ - ನಾವು ಭಾರತದ ಸತ್ಯ-ಆತ್ಮೀಯ ಸೇವೆಯನ್ನು ಮಾಡುತ್ತಿದ್ದೇವೆ. ಉಳಿದಂತೆ ಇಡೀ ಪ್ರಪಂಚವು ರಾವಣನ ಮತದ ಮೇಲಿದೆ ಆದರೆ ನೀವು ರಾಮನ ಶ್ರೀಮತದ ಮೇಲಿದ್ದೀರಿ. ರಾಮನೆಂದಾದರೂ ಹೇಳಿ, ಶಿವನೆಂದಾದರೂ ಹೇಳಿ ಅನೇಕ ಹೆಸರುಗಳನ್ನಿಟ್ಟಿದ್ದಾರೆ.

ನೀವು ಶ್ರೀಮತದನುಸಾರ ಭಾರತದ ಅತ್ಯಮೂಲ್ಯ ಸೇವಕರಾಗಿದ್ದೀರಿ. ಹೇ ಪತಿತ-ಪಾವನ ಬಂದು ಪಾವನರನ್ನಾಗಿ ಮಾಡು ಎಂದು ಕರೆಯುತ್ತಾರೆ ಆದರೆ ನೀವು ತಿಳಿದುಕೊಂಡಿದ್ದೀರಿ - ಸತ್ಯಯುಗದಲ್ಲಿ ನಮಗೆ ಎಷ್ಟೊಂದು ಸುಖವು ಸಿಗುತ್ತದೆ, ಕುಬೇರನ ಖಜಾನೆಯು ಸಿಗುತ್ತದೆ. ಅಲ್ಲಿ ಆಯಸ್ಸೂ ಸಹ ಎಷ್ಟು ಧೀರ್ಘವಾಗಿರುತ್ತದೆ! ಅವರು ಯೋಗಿಗಳು, ಇಲ್ಲಿ ಎಲ್ಲರೂ ಭೋಗಿಗಳಾಗಿದ್ದಾರೆ. ಅವರು ಪಾವನರು, ಇವರು ಪತಿತರಾಗಿದ್ದಾರೆ. ಎಷ್ಟು ರಾತ್ರಿ-ಹಗಲಿನ ಅಂತರವಿದೆ. ಕೃಷ್ಣನಿಗೂ ಯೋಗಿಯೆಂದೇ ಹೇಳುತ್ತಾರೆ, ಮಹಾತ್ಮನೆಂತಲೂ ಹೇಳುತ್ತಾರೆ ಆದರೆ ಕೃಷ್ಣನು ಸತ್ಯಮಹಾತ್ಮನಾಗಿದ್ದಾನೆ. ಕೃಷ್ಣನ ಮಹಿಮೆಯು ಸರ್ವಗುಣ ಸಂಪನ್ನ, 16 ಕಲಾಸಂಪೂರ್ಣ...... ಎಂದು ಗಾಯನ ಮಾಡಲಾಗುತ್ತದೆ. ಆತ್ಮ ಮತ್ತು ಶರೀರವೆರಡೂ ಪವಿತ್ರವಾಗಿದೆ. ಸನ್ಯಾಸಿಗಳಂತೂ ಗೃಹಸ್ಥಿಗಳ ಬಳಿ ವಿಕಾರದಿಂದ ಜನ್ಮಪಡೆದು ನಂತರ ಸನ್ಯಾಸಿಗಳಾಗುತ್ತಾರೆ. ಈ ಮಾತುಗಳನ್ನು ಈಗ ನಿಮಗೆ ತಂದೆಯು ತಿಳಿಸುತ್ತಾರೆ. ಈ ಸಮಯದಲ್ಲಿ ಮನುಷ್ಯರು ಅಸತ್ಯ, ಅಶಾಂತಿಯಿಂದ ಕೂಡಿದ್ದಾರೆ. ಸತ್ಯಯುಗದಲ್ಲಿ ಹೇಗಿದ್ದರು? ಧರ್ಮಾತ್ಮರು, ಸತ್ಯವಂತರಾಗಿದ್ದರು, 100% ಸಾಹುಕಾರರಾಗಿದ್ದರು, ಸದಾ ಸಂತೋಷದಿಂದ ಇರುತ್ತಿದ್ದರು, ರಾತ್ರಿ-ಹಗಲಿನ ಅಂತರವಿದೆ. ಇದನ್ನು ನಿಖರವಾಗಿ ನೀವೇ ಅರಿತುಕೊಂಡಿದ್ದೀರಿ. ಭಾರತವು ಸ್ವರ್ಗದಿಂದ ಹೇಗೆ ನರಕವಾಗಿದೆ ಎಂಬುದು ಮತ್ತ್ಯಾರಿಗೂ ತಿಳಿದಿಲ್ಲ. ಲಕ್ಷ್ಮಿ-ನಾರಾಯಣರ ಪೂಜೆ ಮಾಡುತ್ತಾರೆ, ಮಂದಿರವನ್ನು ಕಟ್ಟುತ್ತಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಿರುತ್ತಾರೆ - ಒಳ್ಳೊಳ್ಳೆಯ ಸ್ಥಾನಮಾನದವರು ಯಾರಿದ್ದಾರೆ ಅಂದರೆ ಬಿರ್ಲಾದವರಿಗೂ ಸಹ ನೀವು ತಿಳಿಸಬಹುದು - ಈ ಲಕ್ಷ್ಮಿ-ನಾರಾಯಣರು ಹೇಗೆ ಪದವಿಯನ್ನು ಪಡೆದರು? ಇವರು ಏನು ಮಾಡಿದಕಾರಣ ಇವರ ಮಂದಿರಗಳನ್ನು ಕಟ್ಟಿಸಲಾಗಿದೆ? ಅವರ ಪರಿಚಯವಿಲ್ಲದೇ ಪೂಜೆ ಮಾಡುವುದೂ ಸಹ ಕಲ್ಲಿನಪೂಜೆ ಅಥವಾ ಗೊಂಬೆಗಳ ಪೂಜೆಯಾಯಿತು, ಅನ್ಯಧರ್ಮದವರಂತೂ ಇವರು ಇಂತಹ ಸಮಯದಲ್ಲಿ ಬಂದರು ಮತ್ತೆ ಯಾವಾಗ ಬರುವರು ಎಂಬುದೆಲ್ಲವನ್ನೂ ತಿಳಿದುಕೊಂಡಿರುತ್ತಾರೆ.

ಅಂದಮೇಲೆ ನೀವು ಮಕ್ಕಳಿಗೆ ಎಷ್ಟೊಂದು ಆತ್ಮಿಕ, ಗುಪ್ತನಶೆಯಿರಬೇಕು! ಆತ್ಮಕ್ಕೆ ಖುಷಿಯಿರಬೇಕು, ಅರ್ಧಕಲ್ಪ ದೇಹಾಭಿಮಾನಿಗಳಾಗಿದ್ದೀರಿ. ಈಗ ತಂದೆಯು ತಿಳಿಸುತ್ತಾರೆ - ಅಶರೀರಿಯಾಗಿ, ತಮ್ಮನ್ನು ಆತ್ಮವೆಂದು ತಿಳಿಯಿರಿ. ನಾನಾತ್ಮ ತಂದೆಯಿಂದ ಕೇಳುತ್ತಿದ್ದೇನೆ. ಅನ್ಯಸತ್ಸಂಗಗಳಲ್ಲಿ ಎಂದೂ ಸಹ ಈ ರೀತಿ ತಿಳಿಯುವುದಿಲ್ಲ. ಇದನ್ನು ಆತ್ಮಿಕ ತಂದೆಯೇ ಆತ್ಮಗಳಿಗೆ ತಿಳಿಸುತ್ತಾರೆ, ಆತ್ಮವೇ ಎಲ್ಲವನ್ನೂ ಕೇಳುತ್ತದೆಯಲ್ಲವೆ. ನಾನು ಪ್ರಧಾನಮಂತ್ರಿಯಾಗಿದ್ದೇನೆ, ನಾನು ಇಂತಹವನಾಗಿದ್ದೇನೆ... ಎಂದು ಆತ್ಮವೇ ಹೇಳುತ್ತದೆ. ನಾನು ಪ್ರಧಾನಮಂತ್ರಿಯಾಗಿದ್ದೇನೆ ಎಂದು ಆತ್ಮವೇ ಈ ಶರೀರದ ಮೂಲಕ ಹೇಳಿತು. ಈಗ ನೀವು ಹೇಳುತ್ತೀರಿ - ನಾವಾತ್ಮಗಳು ಪುರುಷಾರ್ಥ ಮಾಡಿ ಸ್ವರ್ಗದ ದೇವಿ-ದೇವತೆಗಳಾಗುತ್ತಿದ್ದೇವೆ. ನಾನು ಆತ್ಮ, ಈ ಶರೀರವು ನನ್ನದಾಗಿದೆ, ಆತ್ಮಾಭಿಮಾನಿಯಾಗುವುದರಲ್ಲಿಯೇ ಬಹಳ ಪರಿಶ್ರಮವಾಗುತ್ತದೆ. ಪದೇ-ಪದೇ ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡುತ್ತಾ ಇರಿ ಅದರಿಂದ ವಿಕರ್ಮಗಳು ವಿನಾಶವಾಗುವುದು. ನೀವು ಬಹಳ ವಿಧೇಯ ಸೇವಕರಾಗಿದ್ದೀರಿ, ಗುಪ್ತರೀತಿಯಿಂದ ಕರ್ತವ್ಯವನ್ನು ಮಾಡುತ್ತೀರಿ ಅಂದಮೇಲೆ ನಶೆಯೂ ಗುಪ್ತವಾಗಿರಬೇಕು - ನಾವು ಸರ್ಕಾರದ ಆತ್ಮೀಯ ಸೇವಕರಾಗಿದ್ದೇವೆ, ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೇವೆ, ಹೊಸಪ್ರಪಂಚದಲ್ಲಿ ಹೊಸಭಾರತವಿರಲಿ, ಹೊಸದೆಹಲಿಯಾಗಿರಲಿ ಎಂದು ಗಾಂಧೀಜಿಯೂ ಸಹ ಬಯಸುತ್ತಿದ್ದರು. ಈಗ ಹೊಸಪ್ರಪಂಚವಂತೂ ಇಲ್ಲ. ಈ ಹಳೆಯ ದೆಹಲಿಯು ಸ್ಮಶಾನವಾಗುತ್ತದೆ ನಂತರ ಸ್ವರ್ಗವಾಗುತ್ತದೆ. ಈಗ ಇದಕ್ಕೆ ಫರಿಶ್ತಾನವೆಂದು ಹೇಳುವುದಿಲ್ಲ. ಹೊಸ ಪ್ರಪಂಚದಲ್ಲಿ ಫರಿಶ್ತಾನ, ಹೊಸದೆಹಲಿಯನ್ನು ಸ್ಥಾಪನೆ ಮಾಡುತ್ತಿದ್ದೀರಿ, ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ ಅಂದಾಗ ಈ ಮಾತುಗಳನ್ನು ಮರೆಯಬಾರದು. ಭಾರತವನ್ನು ಪುನಃ ಸುಖಧಾಮವನ್ನಾಗಿ ಮಾಡುವುದು ಎಷ್ಟು ಶ್ರೇಷ್ಠ ಕಾರ್ಯವಾಗಿದೆ! ನಾಟಕದ ಯೋಜನೆಯನುಸಾರ ಸೃಷ್ಟಿಯು ಹಳೆಯದಾಗಲೇಬೇಕಾಗಿದೆ. ದುಃಖಧಾಮವಲ್ಲವೆ. ದುಃಖಹರ್ತ-ಸುಖಕರ್ತ ಎಂದು ತಂದೆಯೊಬ್ಬರಿಗೇ ಹೇಳಲಾಗುತ್ತದೆ. ನಿಮಗೆ ತಿಳಿದಿದೆ - ತಂದೆಯು 5000 ವರ್ಷಗಳ ನಂತರ ಬಂದು ದುಃಖಿಭಾರತವನ್ನು ಸುಖಿಯನ್ನಾಗಿ ಮಾಡುತ್ತಾರೆ. ಸುಖವನ್ನೂ ಕೊಡುತ್ತಾರೆ, ಶಾಂತಿಯನ್ನೂ ಕೊಡುತ್ತಾರೆ, ಮನಸ್ಸಿಗೆ ಮನಃಶ್ಯಾಂತಿ ಹೇಗೆ ಸಿಗುವುದೆಂದು ಮನುಷ್ಯರು ಕೇಳುತ್ತಾರೆ. ಸಂಪೂರ್ಣ ಶಾಂತಿಯಂತೂ ಮಧುರಮನೆಯಲ್ಲಿಯೇ ಇರುತ್ತದೆ ಅದಕ್ಕೆ ಶಾಂತಿಧಾಮವೆಂದು ಕರೆಯಲಾಗುತ್ತದೆ. ಎಲ್ಲಿ ಶಬ್ಧವೂ ಇಲ್ಲ, ಚಿಂತೆಯೂ ಇಲ್ಲ. ಸೂರ್ಯ-ಚಂದ್ರರೂ ಇರುವುದಿಲ್ಲ. ಈಗ ನೀವು ಮಕ್ಕಳಿಗೆ ಈ ಸಂಪೂರ್ಣ ಜ್ಞಾನವಿದೆ. ತಂದೆಯು ಬಂದು ವಿಧೇಯ ಸೇವಕನಾಗಿದ್ದಾರಲ್ಲವೆ. ಆದರೆ ತಂದೆಯನ್ನು ತಿಳಿದುಕೊಂಡಿಲ್ಲ ಆಕಾರಣ ಎಲ್ಲರನ್ನೂ ಮಹಾತ್ಮರೆಂದು ಹೇಳಿಬಿಡುತ್ತಾರೆ. ಮಹಾತ್ಮರು ಸ್ವರ್ಗದ ವಿನಃ ಮತ್ತೆಲ್ಲಿಯೂ ಇರಲು ಸಾಧ್ಯವಿಲ್ಲ. ಅಲ್ಲಿ ಆತ್ಮಗಳು ಪವಿತ್ರರಾಗಿರುತ್ತಾರೆ. ಪವಿತ್ರರಾಗಿದ್ದಾಗ ಸುಖ-ಶಾಂತಿಯೆಲ್ಲವೂ ಇತ್ತು, ಈಗ ಪವಿತ್ರತೆಯಿಲ್ಲವಾದ್ದರಿಂದ ಏನೂ ಇಲ್ಲ. ಪವಿತ್ರತೆಗೆ ಮಾನ್ಯತೆಯಿದೆ. ದೇವತೆಗಳು ಪವಿತ್ರರಾಗಿದ್ದಾರೆ ಆದ್ದರಿಂದಲೇ ಎಲ್ಲರೂ ಅವರ ಮುಂದೆ ತಲೆಬಾಗುತ್ತಾರೆ. ಪವಿತ್ರರಿಗೆ ಪಾವನರು, ಅಪವಿತ್ರರಿಗೆ ಪತಿತರೆಂದು ಹೇಳಲಾಗುತ್ತದೆ. ಇವರು ಇಡೀ ವಿಶ್ವದ ಬೇಹದ್ದಿನ ಬಾಪೂಜಿಯಾಗಿದ್ದಾರೆ ಹಾಗೆ ನೋಡಿದರೆ ಮೇಯರ್ಗೂ ಸಹ ‘ಸಿಟಿ ಫಾದರ್’ ಎಂದು ಹೇಳುತ್ತಾರೆ. ಸತ್ಯಯುಗದಲ್ಲಿ ಇಂತಹ ಮಾತುಗಳಿರುವುದಿಲ್ಲ, ಅಲ್ಲಿ ನಿಯಮಪೂರ್ವಕವಾಗಿ ರಾಜ್ಯವು ನಡೆಯುತ್ತದೆ. ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತೀರಿ. ಈಗ ತಂದೆಯು ತಿಳಿಸುತ್ತಾರೆ - ಪವಿತ್ರರಾಗಿ ಎಂದರೆ ಇದು ಹೇಗಾಗುತ್ತದೆ? ಮತ್ತೆ ಮಕ್ಕಳು ಹೇಗೆ ಜನಿಸುತ್ತಾರೆ, ಸೃಷ್ಟಿಯು ಹೇಗೆ ವೃದ್ಧಿಯಾಗುತ್ತದೆ ಎಂದು ಕೇಳುತ್ತಾರೆ. ಲಕ್ಷ್ಮಿ-ನಾರಾಯಣರು ಸಂಪೂರ್ಣ ನಿರ್ವಿಕಾರಿಗಳಾಗಿದ್ದರು ಎಂದು ಅವರಿಗೆ ತಿಳಿದೇ ಇಲ್ಲ. ನೀವು ಮಕ್ಕಳು ಎಷ್ಟೊಂದು ವಿರೋಧವನ್ನು ಸಹನೆ ಮಾಡಬೇಕಾಗುತ್ತದೆ.

ನಾಟಕದಲ್ಲಿ ಕಲ್ಪದಹಿಂದೆ ಏನಾಗಿತ್ತೋ ಅದೇ ಪುನರಾವರ್ತನೆಯಾಗುತ್ತದೆ. ಹಾಗೆಂದು ಹೇಳಿ ನಾಟಕದಲ್ಲಿದ್ದರೆ ಸಿಗುತ್ತದೆಯೆಂದು ತಿಳಿದು ಡ್ರಾಮಾದ ಮೇಲೆ ನಿಂತುಬಿಡುವುದಲ್ಲ. ಶಾಲೆಯಲ್ಲಿ ಹೀಗೆ ಕುಳಿತುಕೊಳ್ಳುವುದರಿಂದ ಯಾರಾದರೂ ತೇರ್ಗಡೆಯಾಗುತ್ತಾರೆಯೇ? ಪ್ರತಿಯೊಂದು ವಸ್ತುವಿಗಾಗಿ ಮನುಷ್ಯನ ಪುರುಷಾರ್ಥವು ನಡೆಯುತ್ತದೆ, ಪುರುಷಾರ್ಥವಿಲ್ಲದೆ ನೀರೂ ಸಹ ಸಿಗಲು ಸಾಧ್ಯವಿಲ್ಲ. ಕ್ಷಣ-ಪ್ರತಿಕ್ಷಣ ಯಾವ ಪುರುಷಾರ್ಥವು ನಡೆಯುವುದೋ ಅದು ಪ್ರಾಲಬ್ಧಕ್ಕಾಗಿ. ಈ ಬೇಹದ್ದಿನ ಪುರುಷಾರ್ಥವನ್ನು ಬೇಹದ್ದಿನ ಸುಖಕ್ಕಾಗಿ ಮಾಡಬೇಕಾಗಿದೆ. ಈಗ ಬ್ರಹ್ಮನ ರಾತ್ರಿ ಸೋ ಬ್ರಾಹ್ಮಣರ ರಾತ್ರಿಯಾಗಿದೆ ನಂತರ ಬ್ರಾಹ್ಮಣರ ದಿನವಾಗುವುದು. ಶಾಸ್ತ್ರಗಳಲ್ಲಿಯೂ ಓದುತ್ತಿದ್ದೆವು ಆದರೆ ಯಥಾರ್ಥವಾಗಿ ತಿಳಿದುಕೊಂಡಿರಲಿಲ್ಲ. ಈ ಬ್ರಹ್ಮಾರವರು ಕುಳಿತು ರಾಮಾಯಣ, ಭಾಗವತ ಇತ್ಯಾದಿಗಳನ್ನು ಹೇಳುತ್ತಿದ್ದರು, ಪಂಡಿತನಾಗಿ ಕುಳಿತುಕೊಳ್ಳುತ್ತಿದ್ದರು. ಅದು ಭಕ್ತಿಮಾರ್ಗವಾಗಿದೆ ಎಂದು ಈಗ ತಿಳಿಯುತ್ತಾರೆ. ಭಕ್ತಿಯೇ ಬೇರೆ, ಜ್ಞಾನವೇ ಬೇರೆಯಾಗಿದೆ. ತಂದೆಯು ತಿಳಿಸುತ್ತಾರೆ - ನೀವು ಕಾಮಚಿತೆಯ ಮೇಲೆ ಕುಳಿತು ಎಲ್ಲರೂ ಕಪ್ಪಾಗಿಬಿಟ್ಟಿದ್ದೀರಿ. ಕೃಷ್ಣನಿಗೂ ಸಹ ಶ್ಯಾಮಸುಂದರನೆಂದು ಹೇಳುತ್ತರಲ್ಲವೆ. ಪೂಜಾರಿಗಳು ಅಂಧಶ್ರದ್ಧೆಯಲ್ಲಿದ್ದಾರೆ. ಎಷ್ಟೊಂದು ಭೂತಪೂಜೆಯಾಗಿದೆ, ಶರೀರದ ಪೂಜೆಯೆಂದರೆ ಪಂಚತತ್ವಗಳ ಪೂಜೆಯಾಯಿತು, ಇದಕ್ಕೆ ವ್ಯಭಿಚಾರಿ ಪೂಜೆಯೆಂದು ಕರೆಯಲಾಗುತ್ತದೆ. ಭಕ್ತಿಯೂ ಸಹ ಮೊದಲು ಅವ್ಯಭಿಚಾರಿಯಾಗಿತ್ತು, ಒಬ್ಬ ಶಿವನಿಗೇ ಪೂಜೆ ಮಾಡಲಾಗುತ್ತಿತ್ತು, ಈಗಂತೂ ನೋಡಿ- ಯಾವ-ಯಾವುದರ ಪೂಜೆಯಾಗುತ್ತಿರುತ್ತದೆ! ತಂದೆಯು ಅದ್ಭುತವನ್ನೂ ತೋರಿಸುತ್ತಾರೆ, ಜ್ಞಾನವನ್ನೂ ತಿಳಿಸುತ್ತಿದ್ದಾರೆ, ಮುಳ್ಳುಗಳಿಂದ ಹೂಗಳನ್ನಾಗಿ ಮಾಡುತ್ತಿದ್ದಾರೆ. ಸತ್ಯಯುಗಕ್ಕೆ ಹೂದೋಟವೆಂದು ಹೇಳುತ್ತಾರೆ. ಕರಾಚಿಯಲ್ಲಿ ಕಾವಲುಗಾರರೊಬ್ಬರು ಇರುತ್ತಿದ್ದರು, ಅವರೂ ಸಹ ಧ್ಯಾನದಲ್ಲಿ ಹೊರಟುಹೋಗುತ್ತಿದ್ದರು. ನಾನು ಸ್ವರ್ಗದಲ್ಲಿ ಹೋಗಿದ್ದೆನು, ಭಗವಂತನು ನನಗೆ ಹೂವನ್ನು ಕೊಟ್ಟರು ಎಂದು ಹೇಳುತ್ತಿದ್ದರು. ಅವರಿಗೆ ಬಹಳ ಆನಂದವಾಗುತ್ತಿತ್ತು. ಅದ್ಭುತವಾಗಿದೆಯಲ್ಲವೆ! ಮನುಷ್ಯರಂತೂ 7 ಅದ್ಭುತಗಳೆಂದು ಹೇಳುತ್ತಾರೆ ಆದರೆ ವಾಸ್ತವದಲ್ಲಿ ವಿಶ್ವದ ಅತಿದೊಡ್ಡ ಅದ್ಭುತವು ಸ್ವರ್ಗವಾಗಿದೆ ಆದರೆ ಇದು ಯಾರಿಗೂ ತಿಳಿದಿಲ್ಲ.

ನಿಮಗೆ ಎಷ್ಟೊಂದು ಸುಂದರವಾದ ಜ್ಞಾನವು ಸಿಕ್ಕಿದೆ ಅಂದಮೇಲೆ ನಿಮಗೆ ಎಷ್ಟೊಂದು ಖುಷಿಯಿರಬೇಕು! ಬಾಪ್ದಾದಾ ಎಷ್ಟು ಶ್ರೇಷ್ಠವಾಗಿದ್ದಾರೆ ಮತ್ತು ಎಷ್ಟು ಸಾಧಾರಣರಾಗಿರುತ್ತಾರೆ. ತಂದೆಯದೇ ಮಹಿಮೆಯನ್ನು ಹಾಡಲಾಗುತ್ತದೆ, ಅವರು ನಿರಾಕಾರ, ನಿರಹಂಕಾರಿಯಾಗಿದ್ದರೆ. ತಂದೆಯೂ ಸಹ ಬಂದು ಸೇವೆ ಮಾಡಬೇಕಾಗಿದೆಯಲ್ಲವೆ. ತಂದೆಯು ಸದಾ ಮಕ್ಕಳ ಸೇವೆ ಮಾಡಿ ಅವರಿಗೆ ಹಣ-ಅಧಿಕಾರವನ್ನು ಕೊಟ್ಟು ತಾವು ವಾನಪ್ರಸ್ಥ ಸ್ಥಿತಿಯನ್ನು ಸ್ವೀಕರಿಸುತ್ತಾರೆ. ಮಕ್ಕಳನ್ನು ತಲೆಯ ಮೇಲೆ ಕುಳ್ಳರಿಸಿಕೊಳ್ಳುತ್ತಾರೆ. ನೀವು ಮಕ್ಕಳು ವಿಶ್ವದ ಮಾಲೀಕರಾಗುತ್ತೀರಿ. ಮಧುರಮನೆಗೆ ಹೋಗಿ ನಂತರ ಮಧುರ ರಾಜ್ಯಭಾಗ್ಯವನ್ನು ಬಂದು ತೆಗೆದುಕೊಳ್ಳುತ್ತೀರಿ. ತಂದೆಯು ತಿಳಿಸುತ್ತಾರೆ - ನಾನಂತೂ ರಾಜ್ಯಭಾಗ್ಯವನ್ನು ಪಡೆಯುವುದಿಲ್ಲ ಅಂದಾಗ ಸತ್ಯ, ನಿಷ್ಕಾಮ ಸೇವಾಧಾರಿಯು ತಂದೆಯೊಬ್ಬರೇ ಆಗಿದ್ದಾರೆ ಅಂದಾಗ ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು ಆದರೆ ಮಾಯೆಯು ಮರೆಸಿಬಿಡುತ್ತದೆ. ಇಷ್ಟು ದೊಡ್ಡ ಬಾಪ್ದಾದಾರವರನ್ನು ಮರೆಯುವಿರಾ! ತಾತನ ಆಸ್ತಿಯ ಮೇಲೆ ಎಷ್ಟೊಂದು ನಶೆಯಿರುತ್ತದೆ. ನಿಮಗಂತೂ ಶಿವತಂದೆಯು ಸಿಕ್ಕಿದ್ದಾರೆ, ಅವರ ಆಸ್ತಿಯಿದೆ, ನನ್ನನ್ನು ನೆನಪು ಮಾಡಿ ಮತ್ತು ದೈವೀಗುಣಗಳನ್ನು ಧಾರಣೆ ಮಾಡಿ ಎಂದು ತಂದೆಯು ತಿಳಿಸುತ್ತಾರೆ. ಆಸುರೀಗುಣಗಳನ್ನು ತೆಗೆದುಹಾಕಬೇಕು. ನಾನು ನಿರ್ಗುಣನಲ್ಲಿ ಯಾವುದೇ ಗುಣವಿಲ್ಲವೆಂದು ಹಾಡುತ್ತಾರೆ. ನಿರ್ಗುಣ ಸಂಸ್ಥೆಯೂ ಇದೆ, ಆದರೆ ಇದರ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ನಿರ್ಗುಣನೆಂದರೆ ಯಾವುದೇ ಗುಣವಿಲ್ಲವೆಂದರ್ಥ ಆದರೆ ಅವರು ತಿಳಿದುಕೊಂಡಿಲ್ಲ. ನೀವು ಮಕ್ಕಳಿಗೆ ತಂದೆಯು ಒಂದೇ ಮಾತನ್ನು ತಿಳಿಸುತ್ತಾರೆ - ತಿಳಿಸಿ, ನಾವು ಭಾರತದ ಸೇವೆಯಲ್ಲಿದ್ದೇವೆ. ಯಾರು ಎಲ್ಲರ ಬಾಪೂಜಿಯಾಗಿದ್ದಾರೆಯೋ ಅವರ ಶ್ರೀಮತದಂತೆ ನಡೆಯುತ್ತಿದ್ದೇವೆ. ಶ್ರೀಮತ್ಭಗವದ್ಗೀತೆಯ ಗಾಯನವಿದೆಯಲ್ಲವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಹೇಗೆ ಇಷ್ಟು ಶ್ರೇಷ್ಠ ಬಾಪ್ದಾದಾ ಎಷ್ಟು ಸಾಧಾರಣರಾಗಿರುತ್ತಾರೆ! ಅದೇ ರೀತಿ ಬಹಳ ಸರಳ, ನಿರಾಕಾರಿ ಮತ್ತು ನಿರಹಂಕಾರಿಯಾಗಿರಬೇಕಾಗಿದೆ. ತಂದೆಯ ಮೂಲಕ ಯಾವ ಶ್ರೇಷ್ಠಜ್ಞಾನವು ಸಿಕ್ಕಿದೆಯೋ ಅದರ ಚಿಂತನೆಯಲ್ಲಿರಬೇಕು.

2.ನಾಟಕವು ಚಾಚೂತಪ್ಪದೆ ಪುನರಾವರ್ತನೆಯಾಗುತ್ತಿದೆ, ಇದರಲ್ಲಿ ಬೇಹದ್ದಿನ ಪುರುಷಾರ್ಥ ಮಾಡಿ ಬೇಹದ್ದಿನ ಸುಖದ ಪ್ರಾಪ್ತಿ ಮಾಡಿಕೊಳ್ಳಬೇಕಾಗಿದೆ. ಎಂದೂ ನಾಟಕವೆಂದು ಹೇಳಿ ನಿಂತುಬಿಡಬಾರದಾಗಿದೆ. ಪ್ರಾಲಬ್ಧಕ್ಕಾಗಿ ಪುರುಷಾರ್ಥವನ್ನು ಅವಶ್ಯವಾಗಿ ಮಾಡಬೇಕಾಗಿದೆ.

ವರದಾನ:
ಅವ್ಯಕ್ತ ಸ್ವರೂಪದ ಸಾಧನದ ಮೂಲಕ ಪಾವರ್ಫುಲ್ ವಾಯುಮಂಡಲ ಮಾಡುವಂತಹ ಅವ್ಯಕ್ತ ಫರಿಶ್ತಾ ಭವ

ವಾಯುಮಂಡಲವನ್ನು ಪಾವರ್ಫುಲ್ ಮಾಡುವ ಸಾಧನವಾಗಿದೆ ತಮ್ಮ ಅವ್ಯಕ್ತ ಸ್ವರೂಪದ ಸಾಧನೆ. ಇದರ ಪದೇ-ಪದೇ ಗಮನವಿರಲಿ ಏಕೆಂದರೆ ಯಾವ ಮಾತಿನ ಸಾಧನೆ ಮಾಡಲಾಗಿದೆ, ಆ ಮಾತಿನ ಗಮನವಿರುತ್ತದೆ. ಅವ್ಯಕ್ತ ಸ್ವರೂಪದ ಸಾಧನ ಅರ್ಥಾತ್ ಪದೇ-ಪದೇ ಅಟೆಂಷನಿನ ತಪಸ್ಯೆ ಬೇಕು ಇದಕ್ಕಾಗಿ ಅವ್ಯಕ್ತ ಫರಿಶ್ತಾ ಭವದ ವರದಾನದ ಸ್ಮೃತಿಯಲ್ಲಿಟ್ಟು ಶಕ್ತಿಶಾಲಿ ವಾಯುಮಂಡಲ ಮಾಡುವ ತಪಸ್ಯೆ ಮಾಡಿ, ನಿಮ್ಮ ಮುಂದೆ ಏನೇ ಬರಲಿ ಅದು ವ್ಯಕ್ತ ಮತ್ತು ಮಾತುಗಳಿಂದ ದೂರವಾಗಿ ಬಿಡುತ್ತದೆ.

ಸ್ಲೋಗನ್:
ಸರ್ವ ಶಕ್ತಿವಂತ ತಂದೆಯನ್ನು ಪ್ರತ್ಯಕ್ಷ ಮಾಡುವುದಕ್ಕೆ ಏಕಾಗ್ರತೆಯ ಶಕ್ತಿಯನ್ನು ಹೆಚ್ಚಿಸಿ.

ತಮ್ಮ ಶಕ್ತಿಶಾಲಿ ಮನಸ್ಸಾ ಮೂಲಕ ಸಕಾಶ ಕೊಡುವ ಸೇವೆಯನ್ನು ಮಾಡಿರಿ

ಹೇಗೆ ತಮ್ಮ ಸ್ಥೂಲ ಕಾರ್ಯದ ಪ್ರೋಗ್ರಾಮ್ನ್ನು ದಿನಚರ್ಯ ಪ್ರಮಾಣ ಸೆಟ್ ಮಾಡುತ್ತೀರಿ, ಹಾಗೆಯೇ ತಮ್ಮ ಮನಸ್ಸಾ ಸಮರ್ಥ ಸ್ಥಿತಿಯ ಪ್ರೋಗ್ರಾಮ್ನ್ನು ಸೆಟ್ ಮಾಡಿರಿ. ಎಷ್ಟು ತಮ್ಮ ಮನಸ್ಸನ್ನು ಸಮರ್ಥ ಸಂಕಲ್ಪಗಳಲ್ಲಿ ವ್ಯಸ್ಥವಾಗಿಡುತ್ತೀರಿ ಅಷ್ಟು ಮನಸ್ಸಿಗೆ ಅಪಸೆಟ್ ಆಗುವುದಕ್ಕೆ ಸಮಯವು ಸಿಗುವುದಿಲ್ಲ. ಮನಸ್ಸನ್ನು ಸದಾ ಸೆಟ್ ಅರ್ಥಾತ್ ಏಕಾಗ್ರವಾಗಿದ್ದರೆ ಸ್ವತಃ ಒಳ್ಳೆಯ ವೈಬ್ರೇಷನ್ ಹರುಡುತ್ತದೆ. ಸೇವೆಯಾಗುತ್ತದೆ.