17.03.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ – ವಿದ್ಯೆಯೇ ಸಂಪಾದನೆಯಾಗಿದೆ, ವಿದ್ಯೆಯು ಆದಾಯದ ಮೂಲವಾಗಿದೆ, ಈ ವಿದ್ಯೆಯಿಂದಲೇ ನೀವು 21 ಜನ್ಮಗಳಿಗಾಗಿ ಖಜಾನೆಯನ್ನು ಜಮಾ ಮಾಡಿಕೊಳ್ಳಬೇಕಾಗಿದೆ”

ಪ್ರಶ್ನೆ:
ಬೃಹಸ್ಪತಿ ದೆಶೆಯಿರುವ ಮಕ್ಕಳ ಲಕ್ಷಣಗಳು ಹೇಗಿರುವುದು? ಯಾವ ಮಕ್ಕಳ ಮೇಲೆ ಬೃಹಸ್ಪತಿಯ ದಶೆ ಇರುವುದೋ,ಅವರ ಚಿನ್ಹೆಗಳು ಏನು ಕಂಡುಬರುವುದು ?

ಉತ್ತರ:
ಅವರ ಸಂಪೂರ್ಣ ಗಮನವು ಶ್ರೀಮತದ ಮೇಲಿರುತ್ತದೆ, ವಿದ್ಯೆಯನ್ನು ಬಹಳ ಚೆನ್ನಾಗಿ ಓದುವರು, ಎಂದೂ ಅನುತ್ತೀರ್ಣರಾಗುವುದಿಲ್ಲ, ಶ್ರೀಮತದ ಉಲ್ಲಂಘನೆ ಮಾಡುವವರೇ ವಿದ್ಯೆಯಲ್ಲಿ ಅನುತ್ತೀರ್ಣರಾಗುತ್ತಾರೆ ಮತ್ತೆ ಅವರ ಮೇಲೆ ರಾಹುವಿನ ದೆಶೆ ಕುಳಿತುಕೊಳ್ಳುತ್ತದೆ. ಈಗ ನೀವು ಮಕ್ಕಳ ಮೇಲೆ ವೃಕ್ಷಪತಿ ತಂದೆಯ ಮೂಲಕ ಬೃಹಸ್ಪತಿ ದೆಶೆಯು ಕುಳಿತಿದೆ.

ಗೀತೆ:
ಈ ಪಾಪದ ಪ್ರಪಂಚದಿಂದ ದೂರ ಕರೆದುಕೊಂಡು ಹೋಗಿ................

ಓಂ ಶಾಂತಿ.
ಇದು ಪಾಪಾತ್ಮರ ಕರೆಯಾಗಿದೆ. ನೀವಂತೂ ಕರೆಯಬೇಕಾಗಿಲ್ಲ ಏಕೆಂದರೆ ನೀವು ಪಾವನರಾಗುತ್ತಿದ್ದೀರಿ, ಇದು ಧಾರಣೆ ಮಾಡುವ ಮಾತಾಗಿದೆ. ಇದು ಅತಿದೊಡ್ಡ ಖಜಾನೆಯಾಗಿದೆ ಹೇಗೆ ಲೌಕಿಕವಿದ್ಯೆಯೂ ಸಹ ಖಜಾನೆಯಾಗಿದೆಯಲ್ಲವೆ. ವಿದ್ಯೆಯಿಂದ ಶರೀರ ನಿರ್ವಹಣೆಯಾಗುತ್ತದೆ, ಇಲ್ಲಿ ಮಕ್ಕಳಿಗೆ ತಿಳಿದಿದೆ - ನಮಗೆ ಭಗವಂತನೇ ಓದಿಸುತ್ತಾರೆ. ಇದು ಅತಿದೊಡ್ಡ ಸಂಪಾದನೆಯಾಗಿದೆ ಏಕೆಂದರೆ ಗುರಿ-ಧ್ಯೇಯವು ಸನ್ಮುಖದಲ್ಲಿದೆ. ಸತ್ಯ-ಸತ್ಯವಾದ ಸತ್ಸಂಗವು ಇದೊಂದೇ ಆಗಿದೆ. ಉಳಿದೆಲ್ಲವೂ ಅಸತ್ಯಸಂಗಗಳಾಗಿವೆ. ನಿಮಗೆ ತಿಳಿದಿದೆ - ಇಡೀ ಕಲ್ಪದಲ್ಲಿ ಸತ್ಸಂಗವು ಒಂದೇ ಬಾರಿ ಆಗುತ್ತದೆ. ಆ ಸಮಯದಲ್ಲಿ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ಈಗ ಅವರು ಕೂಗುತ್ತಿರುತ್ತಾರೆ, ಅದೇ ತಂದೆಯು ಇಲ್ಲಿ ನಿಮ್ಮ ಸನ್ಮುಖದಲ್ಲಿ ಕುಳಿತಿದ್ದಾರೆ. ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಹೊಸಪ್ರಪಂಚಕ್ಕಾಗಿ ಪುರುಷಾರ್ಥ ಮಾಡುತ್ತಿದ್ದೇವೆ, ಅಲ್ಲಿ ದುಃಖದ ಹೆಸರು-ಗುರುತೂ ಇರುವುದಿಲ್ಲ. ನಿಮಗೆ ಶಾಂತಿಯು ಸ್ವರ್ಗದಲ್ಲಿಯೇ ಸಿಗುತ್ತದೆ, ನರಕದಲ್ಲಿ ಸಿಗುವುದಿಲ್ಲ. ಇದು ವಿಷಯಸಾಗರವಾಗಿದೆ, ಕಲಿಯುಗವಾಗಿದೆಯಲ್ಲವೆ. ಎಲ್ಲರೂ ಬಹಳ ದುಃಖಿಯಾಗಿದ್ದಾರೆ, ಭ್ರಷ್ಟಾಚಾರದಿಂದಲೇ ಜನ್ಮ ಪಡೆಯುವಂತಹವರಾಗಿದ್ದಾರೆ ಆದ್ದರಿಂದ ಬಾಬಾ ನಾವು ಪತಿತರಾಗಿಬಿಟ್ಟಿದ್ದೇವೆಂದು ಆತ್ಮವು ಕರೆಯುತ್ತದೆ. ಪಾವನರಾಗಲು ಗಂಗೆಯಲ್ಲಿ ಸ್ನಾನ ಮಾಡಲು ಹೋಗುತ್ತಾರೆ, ಸ್ನಾನ ಮಾಡಿದನಂತರ ಪಾವನರಾಗಿಬಿಡಬೇಕಲ್ಲವೆ ಆದರೆ ಮತ್ತೆ ಪದೇ-ಪದೇ ಏಕೆ ಅಲೆದಾಡುತ್ತಾರೆ? ಅಲೆಯುತ್ತಾ-ಅಲೆಯುತ್ತಾ ಏಣಿಯನ್ನಿಳಿಯುತ್ತಾ ಪಾಪಾತ್ಮರಾಗಿಬಿಡುತ್ತಾರೆ. 84 ಜನ್ಮಗಳ ರಹಸ್ಯವನ್ನು ನೀವು ಮಕ್ಕಳಿಗೆ ತಂದೆಯೇ ತಿಳಿಸಿಕೊಡುತ್ತಾರೆ, ಅನ್ಯಧರ್ಮದವರು 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ. ನಿಮ್ಮ ಬಳಿ ಈ 84 ಜನ್ಮಗಳ ಏಣಿಯ ಚಿತ್ರವು ಬಹಳ ಚೆನ್ನಾಗಿ ಮಾಡಲ್ಪಟ್ಟಿದೆ. ಗೀತೆಯಲ್ಲಿ ಕಲ್ಪವೃಕ್ಷದ ಚಿತ್ರವೂ ಇದೆ ಆದರೆ ಗೀತೆಯನ್ನು ಭಗವಂತನು ಯಾವಾಗ ತಿಳಿಸಿದರು? ಬಂದು ಏನು ಮಾಡಿದರು? ಇದೇನೂ ತಿಳಿದಿಲ್ಲ. ಅನ್ಯಧರ್ಮದವರಾದರೂ ತಮ್ಮ-ತಮ್ಮ ಶಾಸ್ತ್ರಗಳನ್ನು ಅರಿತಿದ್ದಾರೆ ಆದರೆ ಭಾರತವಾಸಿಗಳು ಏನನ್ನೂ ಅರಿತುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಸಂಗಮಯುಗದಲ್ಲಿಯೇ ಸ್ವರ್ಗದ ಸ್ಥಾಪನೆ ಮಾಡಲು ಬರುತ್ತೇನೆ, ನಾಟಕದಲ್ಲಿ ಬದಲಾವಣೆಯಾಗಲು ಸಾಧ್ಯವಿಲ್ಲ. ಏನೆಲ್ಲವೂ ಡ್ರಾಮಾದಲ್ಲಿ ನಿಗಧಿಯಾಗಿದೆಯೋ ಅದು ಚಾಚೂತಪ್ಪದೆ ನಡೆಯಲೇಬೇಕಾಗಿದೆ. ಒಂದುಸಲ ಆದನಂತರ ಅದು ಬದಲಾಗುತ್ತದೆ ಎಂದಲ್ಲ. ನೀವು ಮಕ್ಕಳ ಬುದ್ಧಿಯಲ್ಲಿ ನಾಟಕದ ಚಕ್ರವು ಸಂಪೂರ್ಣವಾಗಿ ಕುಳಿತುಕೊಂಡಿದೆ. ಈ 84 ಜನ್ಮಗಳ ಚಕ್ರದಿಂದ ನೀವೆಂದೂ ಬಿಡುಗಡೆ ಹೊಂದಲು ಸಾಧ್ಯವಿಲ್ಲ ಅರ್ಥಾತ್ ಈ ಪ್ರಪಂಚವೆಂದಿಗೂ ಸಮಾಪ್ತಿಯಾಗಲು ಸಾಧ್ಯವಿಲ್ಲ. ವಿಶ್ವದ ಇತಿಹಾಸ-ಭೂಗೋಳವು ಪುನರಾವರ್ತನೆಯಾಗುತ್ತಲೇ ಇರುತ್ತದೆ. ಈ 84 ಜನ್ಮಗಳ ಚಕ್ರವು ಬಹಳ ಅವಶ್ಯವಾಗಿದೆ. ತ್ರಿಮೂರ್ತಿ ಮತ್ತು ಗೋಲದ ಚಿತ್ರವು ಮುಖ್ಯವಾಗಿದೆ. ಪ್ರತಿಯೊಂದು ಯುಗದ ಆಯಸ್ಸು 1250 ವರ್ಷಗಳೆಂದು ಗೋಲದ ಚಿತ್ರದಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ. ಇದು ಕುರುಡರ ಮುಂದೆ ಕನ್ನಡಿಯ ಹಾಗಿದೆ. 84 ಜನ್ಮಪತ್ರಿಕೆಯ ಕನ್ನಡಿಯಾಗಿದೆ. ತಂದೆಯು ನೀವು ಮಕ್ಕಳ ದೆಶೆಯನ್ನು ವರ್ಣನೆ ಮಾಡುತ್ತಾರೆ. ತಂದೆಯು ನಿಮಗೆ ಬೇಹದ್ದಿನ ದೆಶೆಯನ್ನು ತಿಳಿಸುತ್ತಾರೆ. ಈಗ ನೀವು ಮಕ್ಕಳ ಮೇಲೆ ಬೃಹಸ್ಪತಿಯ ಅವಿನಾಶಿ ದೆಶೆಯಿದೆ. ಎಲ್ಲವೂ ವಿದ್ಯೆಯ ಮೇಲೆ ಆಧಾರಿತವಾಗಿದೆ, ಕೆಲವರ ಮೇಲೆ ಬೃಹಸ್ಪತಿ ದೆಶೆ, ಕೆಲವರ ಮೇಲೆ ಶುಕ್ರದೆಶೆ, ಇನ್ನೂ ಕೆಲವರ ಮೇಲೆ ರಾಹುವಿನ ದೆಶೆ ಕುಳಿತಿದೆ. ಅನುತ್ತೀರ್ಣರಾದರೆ ರಾಹುವಿನ ದೆಶೆಯಿದೆಯೆಂತಲೇ ಹೇಳುತ್ತಾರೆ. ಇಲ್ಲಿಯೂ ಹಾಗೆಯೇ ಶ್ರೀಮತದಂತೆ ನಡೆಯಲಿಲ್ಲವೆಂದರೆ ರಾಹುವಿನ ಅವಿನಾಶಿ ದೆಶೆಯು ಕುಳಿತಿದೆ. ಅದು ಬೃಹಸ್ಪತಿಯ ಅವಿನಾಶಿ ದೆಶೆ, ಮತ್ತೆ ಇದು ರಾಹುವಿನ ದೆಶೆಯಾಗಿಬಿಡುತ್ತದೆ. ಮಕ್ಕಳಿಗೆ ವಿದ್ಯೆಯ ಮೇಲೆ ಪೂರ್ಣಗಮನವಿಡಬೇಕು, ಇದರಲ್ಲಿ ನೆಪಗಳನ್ನು ಹೇಳಬಾರದು. ಸೇವಾಕೇಂದ್ರವು ದೂರವಿದೆ, ಈ ರೀತಿಯಿದೆ........... ಎಂದು ನೆಪ ಹೇಳಬೇಡಿ. ಕಾಲ್ನಡಿಗೆಯಲ್ಲಿ ಹೋಗುವುದರಲ್ಲಿ 6 ಗಂಟೆಗಳು ಹಿಡಿಸಿದರೂ ಪರವಾಗಿಲ್ಲ, ಹೋಗಲೇಬೇಕಾಗಿದೆ. ಮನುಷ್ಯರು ತೀರ್ಥಯಾತ್ರೆಗೆ ಹೋಗುತ್ತಾರೆ, ಎಷ್ಟೊಂದು ಅಲೆದಾಡುತ್ತಾರೆ, ಮೊದಲು ಎಷ್ಟೊಂದು ಪಾದಯಾತ್ರೆ ಮಾಡುತ್ತಿದ್ದರು, ಎತ್ತಿನ ಗಾಡಿಯಲ್ಲಿಯೂ ಹೋಗುತ್ತಿದ್ದರು. ಇಲ್ಲಂತೂ ಒಂದು ನಗರದ ಮಾತಾಗಿದೆ. ಇದು ತಂದೆಯ ಎಷ್ಟೊಂದು ದೊಡ್ಡ ವಿಶ್ವವಿದ್ಯಾಲಯವಾಗಿದೆ. ಇದರಿಂದ ನೀವು ಈ ಲಕ್ಷ್ಮೀ-ನಾರಾಯಣರಾಗುತ್ತೀರಿ. ಇಂತಹ ಶ್ರೇಷ್ಠವಿದ್ಯೆಯನ್ನು ಓದಲು ನಮಗೆ ದೂರವಿದೆ, ಅಥವಾ ಬಿಡುವಿಲ್ಲವೆಂದು ಹೇಳಿದರೆ ಇದಕ್ಕೆ ತಂದೆಯೇನು ಹೇಳುತ್ತಾರೆ? ಈ ಮಗುವಂತೂ ಯೋಗ್ಯನಿಲ್ಲ ಎನಿಸುತ್ತದೆ. ತಂದೆಯು ಮೇಲೆತ್ತಲು ಬರುತ್ತಾರೆ, ಇವರು ತಮ್ಮ ಸತ್ಯನಾಶ ಮಾಡಿಕೊಳ್ಳುತ್ತಾರೆ.

ಶ್ರೀಮತವು ಹೇಳುತ್ತದೆ - ಪವಿತ್ರರಾಗಿ, ದೈವೀಗುಣಗಳನ್ನು ಧಾರಣೆ ಮಾಡಿ. ಒಟ್ಟಿಗೆ ಇದ್ದರೂ ಸಹ ವಿಕಾರದಲ್ಲಿ ಹೋಗಬಾರದು. ನಡುವೆ ಜ್ಞಾನ-ಯೋಗದ ಕತ್ತಿಯಿದೆ, ನಾವಂತೂ ಪವಿತ್ರ ಪ್ರಪಂಚದ ಮಾಲೀಕರಾಗಬೇಕಾಗಿದೆ. ಈಗ ಅಪವಿತ್ರಪ್ರಪಂಚದ ಮಾಲೀಕರಾಗಿದ್ದೀರಲ್ಲವೆ. ಆ ದೇವತೆಗಳು ಡಬಲ್ ಕಿರೀಟಧಾರಿಗಳಾಗಿದ್ದರು, ಮತ್ತೆ ಅರ್ಧಕಲ್ಪದ ನಂತರ ಪ್ರಕಾಶತೆಯ ಕಿರೀಟವು ಹಾರಿಹೋಗುತ್ತದೆ. ಈ ಸಮಯದಲ್ಲಿ ಯಾರಿಗೂ ಪ್ರಕಾಶತೆ (ಪವಿತ್ರತೆ) ಯ ಕಿರೀಟವಿಲ್ಲ. ಕೇವಲ ಯಾರು ಧರ್ಮಸ್ಥಾಪಕರಿದ್ದಾರೆಯೋ ಅವರ ಮೇಲೆ ಇರಬಹುದು ಏಕೆಂದರೆ ಅವರು ಪವಿತ್ರ ಆತ್ಮಗಳು ಶರೀರದಲ್ಲಿ ಬಂದು ಪ್ರವೇಶ ಮಾಡುತ್ತಾರೆ. ಇದೇ ಭಾರತದಲ್ಲಿ ಡಬಲ್ ಕಿರೀಟಧಾರಿಗಳೂ ಇದ್ದರು, ಸಿಂಗಲ್ ಕಿರೀಟಧಾರಿಗಳೂ ಇದ್ದರು. ಇಲ್ಲಿಯವರೆಗೂ ಸಹ ಡಬಲ್ ಕಿರೀಟಧಾರಿಗಳ ಮುಂದೆ ಸಿಂಗಲ್ ಕಿರೀಟಧಾರಿಗಳು ಹೋಗಿ ತಲೆಬಾಗುತ್ತಾರೆ. ಏಕೆಂದರೆ ಅವರು ಪವಿತ್ರ ಮಹಾರಾಜ-ಮಹಾರಾಣಿಯಾಗಿದ್ದಾರೆ. ಮಹಾರಾಜರು ರಾಜರಿಗಿಂತಲೂ ದೊಡ್ಡವರಾಗಿರುತ್ತಾರೆ, ಅವರ ಬಳಿ ದೊಡ್ಡ-ದೊಡ್ಡ ಜಹಗೀರು ಇರುತ್ತದೆ. ಸಭೆಯಲ್ಲಿಯೂ ಮಹಾರಾಜರು ಮುಂದೆ, ರಾಜರು ನಂಬರ್ವಾರ್ ಆಗಿ ಹಿಂದೆ ಕುಳಿತುಕೊಳ್ಳುತ್ತಾರೆ. ನಿಯಮಾನುಸಾರವಾಗಿ ಅವರ ದರ್ಬಾರು ನಡೆಯುತ್ತದೆ. ಇದೂ ಸಹ ಈಶ್ವರೀಯ ದರ್ಬಾರ್ ಆಗಿದೆ, ಇದಕ್ಕೆ ಇಂದ್ರಸಭೆಯೆಂದು ಗಾಯನ ಮಾಡಲಾಗುತ್ತದೆ. ನೀವು ಜ್ಞಾನದಿಂದ ಪರಿಗಳಾಗುತ್ತೀರಿ, ಅತೀ ಸುಂದರರಿಗೆ ಪರಿ (ದೇವತೆ) ಗಳೆಂದು ಕರೆಯಲಾಗುತ್ತದೆ. ರಾಧೆ-ಕೃಷ್ಣರಿಗೆ ಸ್ವಾಭಾವಿಕ ಸೌಂದರ್ಯವಿರುತ್ತದೆ ಆದ್ದರಿಂದ ಸುಂದರರೆಂದು ಹೇಳಲಾಗುತ್ತದೆ ನಂತರ ಯಾವಾಗ ಕಾಮಚಿತೆಯ ಮೇಲೆ ಕುಳಿತುಕೊಳ್ಳುತ್ತಾರೆ ಆಗ ಅವರೂ ಸಹ ಭಿನ್ನ ನಾಮ-ರೂಪದಲ್ಲಿ ಶ್ಯಾಮನಾಗುತ್ತಾರೆ. ಶಾಸ್ತ್ರಗಳಲ್ಲಿ ಈ ಮಾತುಗಳೇನು ಇಲ್ಲ. ಜ್ಞಾನ, ಭಕ್ತಿ ಮತ್ತು ವೈರಾಗ್ಯ, ಈ ಮೂರು ಮಾತುಗಳಿವೆ. ಜ್ಞಾನವು ಸರ್ವಶ್ರೇಷ್ಠವಾಗಿದೆ. ಈಗ ನೀವು ಜ್ಞಾನವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಿದ್ದೀರಿ. ನಿಮಗೆ ಭಕ್ತಿಯೊಂದಿಗೆ ವೈರಾಗ್ಯವಿದೆ. ಇಡೀ ತಮೋಪ್ರಧಾನ ಪ್ರಪಂಚವು ಈಗ ಸಮಾಪ್ತಿಯಾಗಲಿದೆ, ಅದರೊಂದಿಗೆ ವೈರಾಗ್ಯವಿದೆ. ಹೇಗೆ ಹೊಸಮನೆಯನ್ನು ಕಟ್ಟಿದಾಗ ಹಳೆಯದರಿಂದ ವೈರಾಗ್ಯವುಂಟಾಗಿಬಿಡುತ್ತದೆಯಲ್ಲವೆ. ಅದು ಹದ್ದಿನ ಮಾತಾಗಿದೆ ಆದರೆ ಇದು ಬೇಹದ್ದಿನ ಮಾತಾಗಿದೆ. ಈಗ ಬುದ್ಧಿಯು ಹೊಸಪ್ರಪಂಚದಕಡೆ ಇದೆ. ಇದು ಹಳೆಯ ಪ್ರಪಂಚವಾಗಿದೆ, ನರಕವಾಗಿದೆ. ಸತ್ಯಯುಗ, ತ್ರೇತಾಯುಗಕ್ಕೆ ಶಿವಾಲಯವೆಂದು ಕರೆಯಲಾಗುತ್ತದೆ. ಶಿವತಂದೆಯಿಂದ ಸ್ಥಾಪನೆಯಾಗಿದೆಯಲ್ಲವೆ. ಈಗ ನಿಮಗೆ ಈ ವೇಶ್ಯಾಲಯದಿಂದ ತಿರಸ್ಕಾರವು ಬಂದಿದೆ. ಕೆಲವರಿಗೆ ತಿರಸ್ಕಾರವು ಬರುವುದೇ ಇಲ್ಲ. ವಿವಾಹವೆಂದು ಹೇಳಿ ನಷ್ಟಮಾಡಿಕೊಂಡು ಇನ್ನೂ ಹಳ್ಳದಲ್ಲಿ ಬೀಳಬಯಸುತ್ತಾರೆ. ಮನುಷ್ಯರೆಲ್ಲರೂ ವಿಷಯವೈತರಣೀ ನದಿಯಲ್ಲಿ, ಕೆಸರಿನಲ್ಲಿ ಬಿದ್ದಿದ್ದಾರೆ, ಪರಸ್ಪರ ದುಃಖವನ್ನೇ ಕೊಡುತ್ತಿರುತ್ತಾರೆ. ಅಮೃತವನ್ನು ಬಿಟ್ಟು ವಿಷವನ್ನು ಕುಡಿದರೆಂದು ಗಾಯನವಿದೆ, ಏನೆಲ್ಲವನ್ನೂ ಹೇಳುತ್ತಾರೆಯೋ ಅದರ ಅರ್ಥವನ್ನು ತಿಳಿದುಕೊಂಡಿಲ್ಲ. ನೀವು ಮಕ್ಕಳಲ್ಲಿಯೂ ನಂಬರ್ವಾರ್ ಇದ್ದಾರೆ. ಬುದ್ಧಿವಂತ ಶಿಕ್ಷಕರು ವಿದ್ಯಾರ್ಥಿಗಳನ್ನು ನೋಡುತ್ತಿದ್ದಂತೆಯೇ ಇವರ ಬುದ್ಧಿಯು ಬೇರೆಕಡೆ ಅಲೆದಾಡುತ್ತಿದೆ ಎಂಬುದನ್ನು ಅರಿತುಕೊಳ್ಳುತ್ತಾರೆ. ತರಗತಿಯ ಮಧ್ಯದಲ್ಲಿ ಯಾರಾದರೂ ಆಕಳಿಸಿದರೆ ಅಥವಾ ತೂಕಡಿಸಿದರೆ ಇವರ ಬುದ್ಧಿಯು ಎಲ್ಲಿಯೋ ಮನೆ ಅಥವಾ ವ್ಯಾಪಾರ-ವ್ಯವಹಾರದಕಡೆ ಅಲೆದಾಡುತ್ತಿದೆಯೆಂದು ತಿಳಿಯಲಾಗುತ್ತದೆ. ಆಕಳಿಕೆಯು ಸುಸ್ತಿನ ಚಿಹ್ನೆಯೂ ಆಗಿದೆ, ವ್ಯಾಪಾರದಲ್ಲಿ ಸಂಪಾದನೆಯಾಗುತ್ತಿದ್ದರೆ ಮನುಷ್ಯರು ರಾತ್ರಿ ಒಂದೆರಡು ಗಂಟೆಯವರೆಗೂ ಕುಳಿತಿರುತ್ತಾರೆ. ಎಂದೂ ಆಕಳಿಕೆ ಬರುವುದಿಲ್ಲ. ಇಲ್ಲಂತೂ ತಂದೆಯು ಎಷ್ಟು ದೊಡ್ಡ ಖಜಾನೆಯನ್ನು ಕೊಡುತ್ತಾರೆ ಅಂದಮೇಲೆ ಆಕಳಿಸುವುದು ನಷ್ಟದ ಚಿಹ್ನೆಯಾಗಿದೆ. ದಿವಾಳಿಯಾಗಿರುವವರು ಗುಟುಕರಿಸುತ್ತಾರೆ ಮತ್ತು ಆಕಳಿಸುತ್ತಾರೆ. ನಿಮಗಂತೂ ಖಜಾನೆಯ ಹಿಂದೆ ಖಜಾನೆಯು ಸಿಗುತ್ತಾ ಇರುತ್ತದೆ ಅಂದಮೇಲೆ ಎಷ್ಟೊಂದು ಗಮನವಿರಬೇಕು. ವಿದ್ಯಾಭ್ಯಾಸದ ಸಮಯದಲ್ಲಿ ಯಾರಾದರೂ ಆಕಳಿಸಿದರೆ ಇವರ ಬುದ್ಧಿಯೋಗವು ಬೇರೆಕಡೆ ಅಲೆದಾಡುತ್ತಿರುತ್ತದೆ ಎಂದು ಬುದ್ಧಿವಂತ ಶಿಕ್ಷಕರು ಅರಿತುಕೊಳ್ಳುವರು. ಇಲ್ಲಿ ಕುಳಿತಿದ್ದಂತೆಯೇ ಮನೆಯು ನೆನಪಿಗೆ ಬರುತ್ತದೆ, ಮಕ್ಕಳು ನೆನಪಿಗೆ ಬರುತ್ತಾರೆ. ಇಲ್ಲಂತೂ ನೀವು ಭಟ್ಟಿಯಲ್ಲಿರಬೇಕಾಗಿದೆ, ಮತ್ತ್ಯಾರ ನೆನಪೂ ಬರಬಾರದು. ತಿಳಿದುಕೊಳ್ಳಿ, ಆರು ದಿನಗಳ ಕಾಲ ಭಟ್ಟಿಯಲ್ಲಿದ್ದು ಯಾರ ನೆನಪಾದರೂ ಬಂದಿತು, ಪತ್ರವನ್ನು ಬರೆದರೆಂದರೆ ಅವರಿಗೆ ಅನುತ್ತೀರ್ಣರೆಂದೇ ಹೇಳಲಾಗುತ್ತದೆ. ಅಂತಹವರು ಪುನಃ 7 ದಿನಗಳಕಾಲ ಭಟ್ಟಿ ಮಾಡಬೇಕಾಗುತ್ತದೆ. ಎಲ್ಲಾ ರೋಗಗಳು ಬಿಟ್ಟುಹೋಗಲೆಂದೇ 7 ದಿನಗಳಕಾಲ ಭಟ್ಟಿಯಲ್ಲಿ ಕುಳ್ಳರಿಸಲಾಗುತ್ತದೆ. ನೀವು ಅರ್ಧಕಲ್ಪದ ಮಹಾನ್ ರೋಗಿಯಾಗಿದ್ದೀರಿ. ಕುಳಿತು-ಕುಳಿತಿದ್ದಂತೆಯೇ ಅಕಾಲಮೃತ್ಯು ಬಂದುಬಿಡುತ್ತದೆ. ಸತ್ಯಯುಗದಲ್ಲಿ ಈ ರೀತಿ ಎಂದೂ ಆಗುವುದಿಲ್ಲ. ಇಲ್ಲಂತೂ ಯಾವುದಾದರೊಂದು ಖಾಯಿಲೆಯು ಅವಶ್ಯವಾಗಿ ಬರುತ್ತದೆ. ಸಾಯುವ ಸಮಯದಲ್ಲಿ ಖಾಯಿಲೆಯಲ್ಲಿ ಚೀರಾಡುತ್ತಿರುತ್ತಾರೆ. ಆದರೆ ಸ್ವರ್ಗದಲ್ಲಿ ಒಂದುಸ್ವಲ್ಪವೂ ದುಃಖವಾಗುವುದಿಲ್ಲ. ಅಲ್ಲಂತೂ ಸಮಯದಲ್ಲಿ ಈಗ ಸಮಯವು ಮುಕ್ತಾಯವಾಯಿತು, ನಾವು ಈ ಶರೀರವನ್ನು ಬಿಟ್ಟು ಚಿಕ್ಕಮಗುವಾಗುತ್ತೇವೆಂದು ತಿಳಿಯುತ್ತಾರೆ. ಇಲ್ಲಿಯೂ ಸಹ ನಾವು ಈ ರೀತಿಯಾಗುತ್ತೇವೆಂದು ನಿಮಗೆ ಸಾಕ್ಷಾತ್ಕಾರವಾಗುತ್ತದೆ. ಹೀಗೆ ಅನೇಕರಿಗೆ ಸಾಕ್ಷಾತ್ಕಾರವಾಗುತ್ತದೆ. ಜ್ಞಾನದಿಂದಲೂ ಸಹ ನೀವು ತಿಳಿದುಕೊಂಡಿದ್ದೀರಿ - ನಾವು ಬಿಕಾರಿಗಳಿಂದ ರಾಜಕುಮಾರರಾಗುತ್ತಿದ್ದೇವೆ. ನಮ್ಮ ಗುರಿ-ಧ್ಯೇಯವೇ ಈ ರಾಧಾ-ಕೃಷ್ಣರಾಗುವುದಾಗಿದೆ. ಲಕ್ಷ್ಮೀ-ನಾರಾಯಣರಲ್ಲ, ರಾಧಾ-ಕೃಷ್ಣರು ಏಕೆಂದರೆ ಪೂರ್ಣ 5000 ವರ್ಷಗಳೆಂದು ಇವರಿಗೇ ಹೇಳಲಾಗುತ್ತದೆ. ಲಕ್ಷ್ಮೀ-ನಾರಾಯಣರಿಗಾದರೂ 20-25 ವರ್ಷಗಳು ಕಡಿಮೆಯಾಗಿಬಿಡುತ್ತದೆ ಆದ್ದರಿಂದ ಕೃಷ್ಣನ ಮಹಿಮೆಯು ಹೆಚ್ಚಿನದಾಗಿದೆ. ಈ ರಾಧಾ-ಕೃಷ್ಣರೇ ನಂತರ ಲಕ್ಷ್ಮೀ-ನಾರಾಯಣರಾಗುತ್ತಾರೆ ಎಂದು ಯಾರಿಗೂ ತಿಳಿದಿಲ್ಲ. ಈಗ ನೀವು ಮಕ್ಕಳು ಅರಿತುಕೊಳ್ಳುತ್ತಾ ಹೋಗುತ್ತೀರಿ. ಇದು ವಿದ್ಯೆಯಾಗಿದೆ. ಪ್ರತಿಯೊಂದು ಹಳ್ಳಿ-ಹಳ್ಳಿಯಲ್ಲಿ ಸೇವಾಕೇಂದ್ರಗಳು ತೆರೆಯಲ್ಪಡುತ್ತಾ ಹೋಗುತ್ತವೆ. ನಿಮ್ಮದು ಹಾಸ್ಪಿಟಲ್ ಕಮ್ ಯುನಿವರ್ಸಿಟಿಯಾಗಿದೆ. ಇದರಲ್ಲಿ ಕೇವಲ ಮೂರುಹೆಜ್ಜೆಗಳಷ್ಟು ಪೃಥ್ವಿಯು ಬೇಕು, ಆಶ್ಚರ್ಯವಲ್ಲವೆ. ಯಾರ ಅದೃಷ್ಟದಲ್ಲಿದೆಯೋ ಅವರು ತಮ್ಮ ಕೋಣೆಯಲ್ಲಿಯೂ ಸತ್ಸಂಗವನ್ನು ತೆರೆಯುತ್ತಾರೆ. ಇಲ್ಲಿ ಯಾರು ಬಹಳಷ್ಟು ಹಣವನ್ನು ಹೊಂದಿದ್ದಾರೆಯೋ ಅವರ ಹಣವು ಮಣ್ಣುಪಾಲಾಗಲಿದೆ. ನೀವು ತಂದೆಯಿಂದ ಭವಿಷ್ಯ 21 ಜನ್ಮಗಳಿಗಾಗಿ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ. ಸ್ವಯಂ ತಂದೆಯೇ ತಿಳಿಸುತ್ತಿದ್ದಾರೆ - ಈ ಹಳೆಯ ಪ್ರಪಂಚವನ್ನು ನೋಡುತ್ತಿದ್ದರೂ ಅಲ್ಲಿ ಜೋಡಿಸಿ, ಕರ್ಮಮಾಡುತ್ತಾ ಈ ಅಭ್ಯಾಸ ಮಾಡಿ. ಪ್ರತಿಯೊಂದು ಮಾತನ್ನು ನೋಡಬೇಕಾಗುತ್ತದೆಯಲ್ಲವೆ. ನಿಮ್ಮದು ಈಗ ಅಭ್ಯಾಸವು ನಡೆಯುತ್ತಿದೆ. ತಂದೆಯು ತಿಳಿಸುತ್ತಾರೆ - ಯಾವಾಗಲೂ ಶುದ್ಧಕರ್ಮ ಮಾಡಿ, ಯಾವುದೇ ಅಶುದ್ಧ ಕೆಲಸ ಮಾಡಬೇಡಿ, ಯಾವುದೇ ಖಾಯಿಲೆಯಿದ್ದರೆ ವೈದ್ಯರು ಕುಳಿತಿದ್ದಾರೆ, ಅಂದಮೇಲೆ ಅವರಿಂದ ಸಲಹೆಯನ್ನು ತೆಗೆದುಕೊಳ್ಳಿ. ಪ್ರತಿಯೊಬ್ಬರ ಖಾಯಿಲೆಯು ಬೇರೆ-ಬೇರೆಯಾಗಿದೆ ಅಂದಾಗ ತಜ್ಞವೈದ್ಯರಿಂದ ಒಳ್ಳೆಯ ಸಲಹೆಯೇ ಸಿಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಏನು ಮಾಡಬೇಕೆಂದು ಕೇಳಬಹುದಾಗಿದೆ ಮತ್ತು ಯಾವುದೇ ವಿಕರ್ಮವಾಗದಂತೆ ಗಮನವನ್ನಿಡಬೇಕಾಗಿದೆ.

ಅನ್ನದಂತೆ ಮನಸ್ಸೆಂದು ಗಾಯನವಿದೆ. ಮಾಂಸವನ್ನು ಖರೀದಿ ಮಾಡುವವರ ಮೇಲೆ, ಮಾರುವವರ ಮೇಲೆ, ತಿನ್ನಿಸುವವರ ಮೇಲೂ ಸಹ ಪಾಪವಾಗುತ್ತದೆ. ಪತಿತಪಾವನ ತಂದೆಯಿಂದ ಯಾವುದೇ ಮಾತನ್ನು ಮುಚ್ಚಿಡಬಾರದು. ವೈದ್ಯರಿಂದ ಮುಚ್ಚಿಟ್ಟರೆ ಖಾಯಿಲೆಯು ಬಿಟ್ಟುಹೋಗುವುದಿಲ್ಲ. ಇವರು ಬೇಹದ್ದಿನ ಅವಿನಾಶಿ ವೈದ್ಯರಾಗಿದ್ದಾರೆ, ಈ ಮಾತುಗಳನ್ನು ಪ್ರಪಂಚದವರು ತಿಳಿದುಕೊಂಡಿಲ್ಲ. ನಿಮಗೂ ಸಹ ಜ್ಞಾನವು ಈಗಲೇ ಸಿಗುತ್ತದೆ ಆದರೂ ಸಹ ಯೋಗದಲ್ಲಿ ಬಹಳ ಕಡಿಮೆಯಿದ್ದೀರಿ. ನೆನಪು ಮಾಡುವುದೇ ಇಲ್ಲ, ಇದಂತೂ ತಂದೆಗೆ ಗೊತ್ತಿದೆ, ಬಹುಬೇಗನೆ ಯಾರೂ ಸ್ಥಿರವಾದ ನೆನಪಿನಲ್ಲಿರಲು ಸಾಧ್ಯವಿಲ್ಲ. ನಂಬರ್ವಾರ್ ಅಂತೂ ಇದ್ದಾರಲ್ಲವೆ. ಯಾವಾಗ ನೆನಪಿನ ಯಾತ್ರೆಯು ಪೂರ್ಣವಾಗುವುದೋ ಆಗ ಕರ್ಮಾತೀತ ಸ್ಥಿತಿಯು ಪೂರ್ಣವಾಯಿತು ಎಂದು ಹೇಳಲಾಗುತ್ತದೆ. ಮತ್ತೆ ಯುದ್ಧವೂ ಸಹ ಪೂರ್ಣವಾಗಿ ಆಗುವುದು, ಅಲ್ಲಿಯವರೆಗೆ ಏನಾದರೊಂದು ಆಗುತ್ತಲೇ ಇರುತ್ತದೆ,ಮತ್ತು ನಿಂತುಹೋಗುತ್ತಿರುತ್ತದೆ. ಯುದ್ಧವಂತೂ ಯಾವಾಗ ಬೇಕಾದರೂ ಆಗುವ ಸಾಧ್ಯತೆಯಿದೆ ಆದರೆ ವಿವೇಕವು ಏನು ಹೇಳುತ್ತದೆ0iÉುಂದರೆ ರಾಜಧಾನಿಯು ಸ್ಥಾಪನೆಯಾಗುವವರೆಗೆ ಯುದ್ಧವು ಆಗುವುದಿಲ್ಲ. ಸ್ವಲ್ಪ-ಸ್ವಲ್ಪವೇ ನಡೆದುನಿಂತು ಹೋಗುತ್ತಿರುತ್ತದೆ. ರಾಜಧಾನಿಯು ಸ್ಥಾಪನೆಯಾಗುತ್ತಿದೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಸತೋಪ್ರಧಾನ, ಸತೋ, ರಜೋ, ತಮೋಬುದ್ಧಿಯಂತೂ ಇದೆಯಲ್ಲವೆ. ನಿಮ್ಮಲ್ಲಿಯೂ ಸಹ ಸತೋಪ್ರಧಾನ ಬುದ್ಧಿಯುಳ್ಳವರು ಒಳ್ಳೆಯ ರೀತಿಯಲ್ಲಿ ನೆನಪು ಮಾಡುತ್ತಿರುತ್ತಾರೆ. ಬ್ರಾಹ್ಮಣರಂತೂ ಲಕ್ಷಾಂತರ ಅಂದಾಜಿನಲ್ಲಿದ್ದೀರಿ. ಕೆಲವರು ಸ್ವಂತಮಕ್ಕಳು, ಕೆಲವರು ಮಲತಾಯಿ ಮಕ್ಕಳೂ ಇದ್ದಾರಲ್ಲವೆ. ಸ್ವಂತಮಕ್ಕಳು ಬಹಳ ಚೆನ್ನಾಗಿ ಸೇವೆ ಮಾಡುತ್ತಾರೆ. ತಂದೆ-ತಾಯಿಯ ಮತದನುಸಾರ ನಡೆಯುತ್ತಾರೆ ಆದರೆ ಮಲತಾಯಿ ಮಕ್ಕಳು ರಾವಣನ ಮತದನುಸಾರವೇ ನಡೆಯುತ್ತಾರೆ. ಸ್ವಲ್ಪ ರಾವಣನ ಮತದಮೇಲೆ, ಇನ್ನೂ ಸ್ವಲ್ಪ ರಾಮನ ಮತದ ಮೇಲೆ, ಹೀಗೆ ಎರಡೂಕಡೆ ನೇತಾಡುತ್ತಿರುತ್ತಾರೆ. ಮಕ್ಕಳು ಗೀತೆಯನ್ನು ಕೇಳಿದಿರಿ, ಬಾಬಾ ಎಲ್ಲಿ ಸುಖ-ಶಾಂತಿಯಿರುವುದೋ ಅಲ್ಲಿ ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ. ಸ್ವರ್ಗದಲ್ಲಿ ಸುಖವೇ ಸುಖವಿರುತ್ತದೆ, ದುಃಖದ ಹೆಸರೂ ಇರುವುದಿಲ್ಲ. ಸತ್ಯಯುಗಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಈಗ ಕಲಿಯುಗವಿದೆ, ಅಂದಮೇಲೆ ಇಲ್ಲಿ ಸ್ವರ್ಗವೆಲ್ಲಿಂದ ಬರುವುದು! ನಿಮ್ಮ ಬುದ್ಧಿಯು ಈಗ ಸ್ವಚ್ಛವಾಗುತ್ತಾ ಹೋಗುತ್ತಿದೆ. ಸ್ವಚ್ಛಬುದ್ಧಿಯವರಿಗೆ ಮ್ಲೇಚ್ಛಬುದ್ಧಿಯವರು ನಮಸ್ಕಾರ ಮಾಡುತ್ತಾರೆ. ಪವಿತ್ರರಿಗೇ ಮಾನ್ಯತೆಯಿದೆ, ಸನ್ಯಾಸಿಗಳು ಪವಿತ್ರರಾಗಿದ್ದಾಗ ಗೃಹಸ್ಥಿಗಳು ಅವರಿಗೆ ತಲೆಬಾಗುತ್ತಾರೆ. ಸನ್ಯಾಸಿಗಳಂತೂ ವಿಕಾರದಿಂದ ಜನ್ಮಪಡೆದು ನಂತರ ಸನ್ಯಾಸಿಗಳಾಗುತ್ತಾರೆ ಆದರೆ ದೇವತೆಗಳಿಗೆ ಸಂಪೂರ್ಣ ನಿರ್ವಿಕಾರಿಗಳೆಂದು ಹೇಳಲಾಗುತ್ತದೆ. ಸನ್ಯಾಸಿಗಳಿಗೆಂದೂ ನಿರ್ವಿಕಾರಿಗಳೆಂದು ಹೇಳಲಾಗುವುದಿಲ್ಲ ಅಂದಮೇಲೆ ನೀವು ಮಕ್ಕಳಿಗೆ ಆಂತರ್ಯದಲ್ಲಿ ಬಹಳ ಖುಷಿಯ ನಶೆಯೇರಿರಬೇಕು ಆದ್ದರಿಂದಲೇ ಅತೀಂದ್ರಿಯ ಸುಖವನ್ನು ಗೋಪ-ಗೋಪಿಯರಿಂದ ಕೇಳಿ ಎಂಬ ಗಾಯನವಿದೆ. ಯಾರು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರೋ, ಓದುತ್ತಿದ್ದೀರೋ ಇಲ್ಲಿ ಸನ್ಮುಖದಲ್ಲಿ ಕೇಳುವುದರಿಂದ ನಶೆಯೇರುತ್ತದೆ. ಆ ನಶೆಯು ಕೆಲವರಿಗೆ ಸ್ಥಿರವಾಗಿರುತ್ತದೆ, ಕೆಲವರಿಗೆ ಬಹುಬೇಗನೆ ಹಾರಿಹೋಗುತ್ತದೆ. ಸಂಗದೋಷದ ಕಾರಣ ನಶೆಯು ಸ್ಥಿರವಾಗಿ ಇರುವುದಿಲ್ಲ. ನಿಮ್ಮ ಸೇವಾಕೇಂದ್ರಗಳಲ್ಲಿ ಇಂತಹವರು ಅನೇಕರು ಬರುತ್ತಾರೆ, ಸ್ವಲ್ಪ ನಶೆಯೇರುತ್ತದೆ ಆದರೆ ಮತ್ತೆ ಸಮಾರಂಭ ಮುಂತಾದಕಡೆ ಹೋಗಿ ಮಧ್ಯಪಾನ, ಬೀಡಿ-ಮುಂತಾದುವು ಸೇದಿದರೆ ಎಲ್ಲವೂ ಸಮಾಪ್ತಿಯಾಗಿಬಿಡುತ್ತದೆ ಆದ್ದರಿಂದ ಸಂಗದೋಷವು ಬಹಳ ಕೆಟ್ಟದ್ದಾಗಿದೆ. ಹಂಸ ಮತ್ತು ಕೊಕ್ಕರೆಗಳು ಒಟ್ಟಿಗೆ ಇರಲು ಸಾಧ್ಯವಿಲ್ಲ. ಕೆಲವೊಂದೆಡೆ ಪತಿಯು ಹಂಸವಾಗಿದ್ದರೆ ಪತ್ನಿಯು ಕೊಕ್ಕರೆಯಾಗಿಬಿಡುತ್ತಾಳೆ. ಇನ್ನೂ ಕೆಲವರು ಸ್ತ್ರೀ ಹಂಸಿಣಿಯಾದರೆ ಪತಿಯು ಕೊಕ್ಕರೆಯಾಗಿಬಿಡುತ್ತಾರೆ. ಪವಿತ್ರರಾಗಿ ಎಂದು ಹೇಳಿದ್ದೇ ಆದರೆ ಪೆಟ್ಟುತಿನ್ನಬೇಕಾಗುತ್ತದೆ. ಕೆಲವು ಮನೆಗಳಲ್ಲಿ ಎಲ್ಲರೂ ಹಂಸಗಳಾಗಿರುತ್ತಾರೆ ಮತ್ತೆ ನಡೆಯುತ್ತಾ-ನಡೆಯುತ್ತಾ ಹಂಸಗಳಿಗೆ ಬದಲಾಗಿ ಕೊಕ್ಕರೆಗಳಾಗಿಬಿಡುತ್ತಾರೆ. ತಂದೆಯು ತಿಳಿಸುತ್ತಾರೆ - ಎಲ್ಲರೂ ತಮ್ಮನ್ನು ಸುಖದಾಯಿಯನ್ನಾಗಿ ಮಾಡಿಕೊಳ್ಳಿ, ಮಕ್ಕಳನ್ನೂ ಸಹ ಸುಖದಾಯಿಯನ್ನಾಗಿ ಮಾಡಿ. ಇದು ದುಃಖಧಾಮವಾಗಿದೆಯಲ್ಲವೆ. ಇನ್ನುಮುಂದೆ ಬಹಳ ಆಪತ್ತುಗಳು ಬರಲಿವೆ. ಹೇಗೆ ತ್ರಾಹಿ, ತ್ರಾಹಿ (ಅಯ್ಯೊ, ಅಯ್ಯೊ) ಎನ್ನುವುದನ್ನು ನೋಡುವಿರಿ. ಅರೆ! ತಂದೆಯು ಬಂದರು ಆದರೆ ನಾವು ತಂದೆಯಿಂದ ಆಸ್ತಿಯನ್ನು ಪಡೆಯಲಿಲ್ಲವೆಂದರೆ ನಂತರ ಟೂಲೇಟ್ ಆಗಿಬಿಡುವುದು. ತಂದೆಯು ಸ್ವರ್ಗದ ರಾಜ್ಯಭಾಗ್ಯವನ್ನು ಕೊಡಲು ಬರುತ್ತಾರೆ ಅದನ್ನೂ ಸಹ ಕಳೆದುಕೊಂಡು ಕುಳಿತುಕೊಳ್ಳುತ್ತಾರೆ ಆದ್ದರಿಂದಲೇ ತಂದೆಯು ತಿಳಿಸುತ್ತಾರೆ - ತಂದೆಯ ಬಳಿ ಯಾವಾಗಲೂ ಶಕ್ತಿಶಾಲಿಗಳನ್ನು ಕರೆದುಕೊಂಡು ಬನ್ನಿ, ಅವರು ತಾವೂ ಅರಿತುಕೊಂಡು ಅನ್ಯರಿಗೂ ತಿಳಿಸುವಂತಿರಬೇಕು. ಬಾಕಿ ತಂದೆಯು ಯಾವುದೇ ಸ್ಥೂಲವಾಗಿ ನೋಡುವ ವಸ್ತುವಲ್ಲ. ಶಿವತಂದೆಯು ಎಲ್ಲಿ ಕಾಣಿಸುತ್ತಾರೆ, ಆತ್ಮವನ್ನು ನೋಡಿದ್ದೀರಾ? ಕೇವಲ ಅದನ್ನು ಅನುಭೂತಿ ಮಾಡುತ್ತೀರಿ ಹಾಗೆಯೇ ಪರಮಾತ್ಮನನ್ನೂ ಸಹ ಅರಿತುಕೊಳ್ಳಬೇಕಾಗಿದೆ. ದಿವ್ಯದೃಷ್ಟಿಯಿಲ್ಲದೆ ಅವರನ್ನು ಯಾರೂ ನೋಡಲು ಸಾಧ್ಯವಿಲ್ಲ. ದಿವ್ಯದೃಷ್ಟಿಯಿಂದ ಈಗ ನೀವು ಸತ್ಯಯುಗವನ್ನು ನೋಡುತ್ತೀರಿ ಮತ್ತೆ ಅಲ್ಲಿ ಪ್ರತ್ಯಕ್ಷದಲ್ಲಿ ಹೋಗುತ್ತೀರಿ. ಯಾವಾಗ ತಾವೆಲ್ಲಾ ಮಕ್ಕಳು ಕರ್ಮಾತೀತ ಸ್ಥಿತಿಯನ್ನು ಹೊಂದುವಿರೋ ಆಗ ಕಲಿಯುಗದ ವಿನಾಶವಾಗುವುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ತಂದೆಯ ಆತ್ಮೀಯ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈ ಹಳೆಯ ಪ್ರಪಂಚವನ್ನು ನೋಡುತ್ತಿದ್ದರೂ ಬುದ್ಧಿಯೋಗವು ತಂದೆ ಹಾಗೂ ಹೊಸ ಪ್ರಪಂಚದಕಡೆ ತೊಡಗಿರಲಿ. ಗಮನವಿರಲಿ, ಕರ್ಮೇಂದ್ರಿಯಗಳಿಂದ ಯಾವುದೇ ವಿಕರ್ಮವಾಗಬಾರದು. ಯಾವಾಗಲೂ ಶುದ್ಧಕರ್ಮಗಳನ್ನೇ ಮಾಡಬೇಕು. ಒಳಗೆ ಯಾವುದೇ ಖಾಯಿಲೆಯಿದ್ದರೆ ಅದಕ್ಕೆ ಅವಿನಾಶಿ ವೈದ್ಯರಿಂದ ಸಲಹೆಯನ್ನು ತೆಗೆದುಕೊಳ್ಳಬೇಕಾಗಿದೆ.

2. ಸಂಗದೋಷವು ಬಹಳ ಕೆಟ್ಟದ್ದಾಗಿದೆ, ಇದರಿಂದ ತಮ್ಮನ್ನು ಬಹಳ-ಬಹಳ ಸಂಭಾಲನೆ ಮಾಡಿಕೊಳ್ಳಬೇಕಾಗಿದೆ. ತನ್ನನ್ನು ಮತ್ತು ಪರಿವಾರವನ್ನು ಸುಖದಾಯಿ ಮಾಡಿಕೊಳ್ಳಬೇಕಾಗಿದೆ. ವಿದ್ಯಾಭ್ಯಾಸಕ್ಕಾಗಿ ಎಂದೂ ನೆಪ ಹೇಳಬಾರದು.

ವರದಾನ:
ಶ್ರೇಷ್ಠ ಭಾವನೆಯ ಆಧಾರದಿಂದ ಸರ್ವರಿಗೆ ಶಾಂತಿ, ಶಕ್ತಿಯ ಕಿರಣಗಳನ್ನು ಕೊಡುವಂತಹ ವಿಶ್ವಕಲ್ಯಾಣಕಾರಿ ಭವ

ಹೇಗೆ ತಂದೆಯ ಸಂಕಲ್ಪ ಮತ್ತು ಮಾತಿನಲ್ಲಿ, ಕಣ್ಣುಗಳಲ್ಲಿ ಸದಾ ಕಲ್ಯಾಣದ ಭಾವನೆ ಹಾಗೂ ಕಾಮನೆಯಿದೆ ಹಾಗೆ ತಾವು ಮಕ್ಕಳ ಸಂಕಲ್ಪದಲ್ಲಿ ವಿಶ್ವ ಕಲ್ಯಾಣದ ಭಾವನೆ ಮತ್ತು ಕಾಮನೆ ತುಂಬಿರಲಿ. ಯವುದೇ ಕಾರ್ಯ ಮಾಡುತ್ತಾ ವಿಶ್ವದ ಸರ್ವ ಆತ್ಮಗಳು ಇಮರ್ಜ್ ಆಗಿರಲಿ. ಮಾಸ್ಟರ್ ಜ್ಞಾನಸೂರ್ಯರಾಗಿ ಶುಭಭಾವನೆ ಹಾಗೂ ಶ್ರೇಷ್ಠ ಕಾಮನೆಯ ಆಧಾರದಿಂದ ಶಾಂತಿ ಮತ್ತು ಶಕ್ತಿಯ ಕಿರಣಗಳನ್ನು ಕೊಡುತ್ತಾ ಹೋಗಿ ಆಗ ಹೇಳಲಾಗುತ್ತದೆ ವಿಶ್ವಕಲ್ಯಾಣಕಾರಿ. ಆದರೆ ಇದಕ್ಕಾಗಿ ಸರ್ವ ಬಂಧನಗಳಿಂದ ಮುಕ್ತ, ಸ್ವತಂತ್ರರಾಗಿ.

ಸ್ಲೋಗನ್:
ನನ್ನತನ ಮತ್ತು ನನ್ನದು ಎನ್ನುವುದೇ ದೇಹ-ಅಭಿಮಾನದ ಬಾಗಿಲಾಗಿದೆ. ಈಗ ಈ ಬಾಗಿಲನ್ನು ಬಂದ್ ಮಾಡಿಬಿಡಿ.

ಅವ್ಯಕ್ತ ಸೂಚನೆ - ಸತ್ಯ ಮತ್ತು ಸಭ್ಯತೆ ರೊಪಿ ಕಲ್ಚರ್(ಸಂಸ್ಕೃತಿಯನ್ನು) ತಮ್ಮದಾಗಿಸಿಕೊಳ್ಳಿರಿ

ಸತ್ಯತೆಯ ಪರಿಶೀಲನೆ ಸಂಕಲ್ಪ, ಮಾತು, ಕರ್ಮ, ಸಂಬಂಧ ಸಂಪರ್ಕದಲ್ಲಿ ದಿವ್ಯತೆಯ ಅನುಭೂತಿ ಆಗುವುದಾಗಿದೆ. ಕೆಲವರು ಹೇಳುತ್ತಾರೆ ನಾನಂತೂ ಸದಾ ಸತ್ಯ ಹೇಳುತ್ತೇನೆ ಆದರೆ ಕರ್ಮದಲ್ಲಿ ಒಂದು ವೇಳೆ ದಿವ್ಯತೆ ಇಲ್ಲದಿದ್ದರೆ ಅನ್ಯರಿಗೆ ನಿಮ್ಮ ಸತ್ಯ, ಸತ್ಯ ಎನಿಸುವುದಿಲ್ಲ ಆದ್ದರಿಂದ ಸತ್ಯತೆಯ ಶಕ್ತಿಯಿಂದ ದಿವ್ಯತೆಯನ್ನು ಧಾರಣೆ ಮಾಡಿ. ಏನೇ ಸಹನೆ ಮಾಡಬೇಕಾಗಿ ಬರಲಿ, ಗಾಬರಿಯಾಗಬೇಡಿ., ಸತ್ಯ ಸಮಯ ಪ್ರಮಾಣ ಸ್ವತಹವಾಗಿ ಸಿದ್ಧವಾಗುವುದು.