17.04.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಈ
ಆತ್ಮಿಕ ಆಸ್ಪತ್ರೆಯು ನಿಮ್ಮನ್ನು ಅರ್ಧಕಲ್ಪಕ್ಕಾಗಿ ಆರೋಗ್ಯವಂತರನ್ನಾಗಿ ಮಾಡುವುದಾಗಿದೆ, ಇಲ್ಲಿ
ನೀವು ದೇಹೀ-ಅಭಿಮಾನಿಗಳಾಗಿ ಕುಳಿತುಕೊಳ್ಳಿ”
ಪ್ರಶ್ನೆ:
ವ್ಯವಹಾರ
ಮುಂತಾದುವುಗಳನ್ನು ಮಾಡುತ್ತಿದ್ದರೂ ಯಾವ ಆದೇಶವು ಬುದ್ಧಿಯಲ್ಲಿ ನೆನಪಿರಬೇಕು?
ಉತ್ತರ:
ತಂದೆಯ
ಆದೇಶವಾಗಿದೆ - ನೀವು ಯಾವುದೇ ಸಾಕಾರ ಅಥವಾ ಆಕಾರವನ್ನು ನೆನಪು ಮಾಡಬೇಡಿ, ಒಬ್ಬ ತಂದೆಯ
ನೆನಪಿದ್ದಾಗ ವಿಕರ್ಮಗಳು ವಿನಾಶವಾಗುತ್ತವೆ, ಇದರಲ್ಲಿ ನಮಗೆ ಬಿಡುವಿಲ್ಲವೆಂದು ಹೇಳಲು
ಸಾಧ್ಯವಿಲ್ಲ, ಎಲ್ಲವನ್ನು ಮಾಡುತ್ತಲೂ ಸಹ ನೆನಪಿನಲ್ಲಿರಲು ಸಾಧ್ಯ.
ಓಂ ಶಾಂತಿ.
ಮಧುರಾತಿ ಮಧುರ ಆತ್ಮೀಯ ಮಕ್ಕಳ ಪ್ರತಿ ತಂದೆಯ ಗುಡ್ ಮಾರ್ನಿಂಗ್. ಗುಡ್ ಮಾರ್ನಿಂಗ್ ನಂತರ
ತಂದೆಯನ್ನು ನೆನಪು ಮಾಡಿ ಎಂದು ಹೇಳಲಾಗುತ್ತದೆ. ಹೇ ಪತಿತ-ಪಾವನ ಬಂದು ಪಾವನ ಮಾಡಿ ಎಂದು
ಕರೆಯುತ್ತಾರೆ ಆದ್ದರಿಂದ ತಂದೆಯು ಮೊಟ್ಟಮೊದಲಿಗೆ ತಿಳಿಸುತ್ತಾರೆ - ಆತ್ಮೀಯ ತಂದೆಯನ್ನು ನೆನಪು
ಮಾಡಿ, ಆತ್ಮಿಕ ತಂದೆಯು ಎಲ್ಲರಿಗೂ ಒಬ್ಬರೇ ಆಗಿದ್ದಾರೆ. ತಂದೆಯನ್ನು ಎಂದೂ ಸರ್ವವ್ಯಾಪಿ ಎಂದು
ಹೇಳುವುದಿಲ್ಲ ಅಂದಾಗ ಎಷ್ಟು ಸಾಧ್ಯವೋ ಅಷ್ಟು ಮಕ್ಕಳೇ ಮೊಟ್ಟಮೊದಲು ತಂದೆಯನ್ನು ನೆನಪು ಮಾಡಿ.
ಒಬ್ಬ ತಂದೆಯ ವಿನಃ ಯಾವುದೇ ಸಾಕಾರಿ ಅಥವಾ ಆಕಾರಿ ರೂಪವನ್ನು ನೆನಪು ಮಾಡಬೇಡಿ, ಇದು ಸಂಪೂರ್ಣ
ಸಹಜವಲ್ಲವೆ. ನಾವು ಬಹಳ ಬ್ಯುಸಿಯಾಗಿರುತ್ತೇವೆ. ನಮಗೆ ಬಿಡುವಿಲ್ಲವೆಂದು ಮನುಷ್ಯರು ಹೇಳುತ್ತಾರೆ
ಆದರೆ ಇದರಲ್ಲಿ ಬಿಡುವಿನ ಮಾತೇ ಇಲ್ಲ, ಸದಾ ಬಿಡುವಿರುತ್ತದೆ. ತಂದೆಯು ಯುಕ್ತಿಯನ್ನು
ತಿಳಿಸುತ್ತಾರೆ - ಇದೂ ಸಹ ನಿಮಗೆ ತಿಳಿದಿದೆ, ತಂದೆಯನ್ನು ನೆನಪು ಮಾಡುವುದರಿಂದಲೇ ನಮ್ಮ ಪಾಪಗಳು
ಭಸ್ಮವಾಗುತ್ತವೆ ಎಂಬುದು ಮುಖ್ಯಮಾತಾಗಿದೆ. ಯಾವುದೇ ಕಾರ್ಯ ವ್ಯವಹಾರಗಳಿಗೆ ನಿಷೇಧವಿಲ್ಲ,
ಅದೆಲ್ಲವನ್ನೂ ಮಾಡುತ್ತಲೂ ಕೇವಲ ತಂದೆಯನ್ನು ನೆನಪು ಮಾಡಿ ಆಗ ವಿಕರ್ಮಗಳು ವಿನಾಶವಾಗುವುದು. ಇದಂತೂ
ನಿಮಗೆ ತಿಳಿದಿದೆ, ನಾವು ಪತಿತರಾಗಿದ್ದೇವೆ, ಸಾಧು-ಸಂತ, ಋಷಿ-ಮುನಿ ಮೊದಲಾದವರೆಲ್ಲರೂ ಸಾಧನೆ
ಮಾಡುತ್ತಾರೆ. ಭಗವಂತನೊಂದಿಗೆ ಮಿಲನ ಮಾಡುವ ಸಾಧನೆಯನ್ನೇ ಮಾಡಲಾಗುತ್ತದೆ ಅಂದಾಗ ಎಲ್ಲಿಯವರೆಗೆ
ಅವರ ಪರಿಚಯವಿರುವುದಿಲ್ಲವೋ ಅಲ್ಲಿಯವರೆಗೆ ಅವರು ಸಿಗಲು ಸಾಧ್ಯವಿಲ್ಲ. ನೀವು ತಿಳಿದುಕೊಂಡಿದ್ದೀರಿ
- ತಂದೆಯ ಪರಿಚಯವು ಪ್ರಪಂಚದಲ್ಲಿ ಯಾರಿಗೂ ಇಲ್ಲ, ದೇಹದ ಪರಿಚಯವಂತೂ ಎಲ್ಲರಿಗೂ ಇದೆ. ದೊಡ್ಡ
ಗಾತ್ರದ ವಸ್ತುವಿನ ಪರಿಚಯವು ಬಹಳ ಬೇಗನೆ ಆಗಿಬಿಡುತ್ತದೆ, ಆತ್ಮದ ಪರಿಚಯವಂತೂ ತಂದೆಯು ಬಂದಾಗಲೇ
ತಿಳಿಸುವರು. ಆತ್ಮ ಮತ್ತು ಶರೀರ ಎರಡು ವಸ್ತುಗಳಾಗಿವೆ. ಆತ್ಮವು ಒಂದು ನಕ್ಷತ್ರವಾಗಿದೆ ಮತ್ತು
ಬಹಳ ಸೂಕ್ಷ್ಮವಾಗಿದೆ, ಅದನ್ನು ನೋಡಲು ಯಾರಿಂದಲೂ ಸಾಧ್ಯವಿಲ್ಲ ಆದ್ದರಿಂದ ಇಲ್ಲಿ ಬಂದು
ಕುಳಿತುಕೊಂಡಾಗ ಆತ್ಮಾಭಿಮಾನಿಯಾಗಿ ಕುಳಿತುಕೊಳ್ಳಿ. ಇದೂ ಸಹ ಅರ್ಧಕಲ್ಪಕ್ಕಾಗಿ ಸದಾ
ಆರೋಗ್ಯವಂತರಾಗುವ ಒಂದು ಆಸ್ಪತ್ರೆಯಾಗಿದೆಯಲ್ಲವೆ, ಆತ್ಮವಂತೂ ಅವಿನಾಶಿಯಾಗಿದೆ, ಎಂದಿಗೂ
ವಿನಾಶವಾಗುವುದಿಲ್ಲ. ಎಲ್ಲವೂ ಆತ್ಮದ ಪಾತ್ರವೇ ಆಗಿದೆ, ನಾನು ಎಂದೂ ವಿನಾಶ ಹೊಂದುವುದಿಲ್ಲವೆಂದು
ಆತ್ಮವೇ ಹೇಳುತ್ತದೆ. ಇಷ್ಟೆಲ್ಲಾ ಆತ್ಮಗಳು ಅವಿನಾಶಿಯಾಗಿದ್ದೀರಿ, ಶರೀರವು ವಿನಾಶಿಯಾಗಿದೆ. ಈಗ
ಇದು ನಿಮ್ಮ ಬುದ್ಧಿಯಲ್ಲಿ ಕುಳಿತಿದೆ - ನಾವಾತ್ಮಗಳು ಅವಿನಾಶಿಯಾಗಿದ್ದೇವೆ, 84 ಜನ್ಮಗಳನ್ನು
ತೆಗೆದುಕೊಳ್ಳುತ್ತೇವೆ, ಇದು ನಾಟಕವಾಗಿದೆ. ಇದರಲ್ಲಿ ಯಾವ-ಯಾವ ಧರ್ಮಸ್ಥಾಪಕರು ಯಾವಾಗ ಬರುತ್ತಾರೆ,
ಎಷ್ಟು ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನಂತೂ ತಿಳಿದುಕೊಂಡಿದ್ದೀರಿ. 84 ಜನ್ಮಗಳನ್ನು
ಒಂದು ಧರ್ಮದವರೇ ತೆಗೆದುಕೊಳ್ಳುವರು. ಎಲ್ಲಾ ಧರ್ಮದವರಿಗೆ 84 ಜನ್ಮಗಳಿರಲು ಸಾಧ್ಯವಿಲ್ಲ, ಎಲ್ಲಾ
ಧರ್ಮದವರು ಒಟ್ಟಿಗೆ ಬರುವುದಿಲ್ಲ, ನಾವು ಬೇರೆಯವರ ಲೆಕ್ಕವನ್ನು ಕುಳಿತು ತೆಗೆಯುವುದೇನು! ಏಕೆಂದರೆ
ಯಾವ-ಯಾವ ಸಮಯದಲ್ಲಿ ಧರ್ಮಸ್ಥಾಪನೆ ಮಾಡಲು ಬರುತ್ತಾರೆಂದು ನಮಗೆ ತಿಳಿದಿದೆ ನಂತರ ಅವರ ಧರ್ಮದ
ವೃದ್ಧಿಯಾಗುತ್ತದೆ. ಇದರಲ್ಲಿ ಎಲ್ಲರೂ ಸತೋಪ್ರಧಾನರಿಂದ ತಮೋಪ್ರಧಾನರಾಗಲೇಬೇಕು. ಯಾವಾಗ ಪ್ರಪಂಚವು
ತಮೋಪ್ರಧಾನವಾಗುವುದೋ ಆಗ ತಂದೆಯು ಬಂದು ಮತ್ತೆ ಸತೋಪ್ರಧಾನ ಸತ್ಯಯುಗವನ್ನು ಸ್ಥಾಪಿಸುತ್ತಾರೆ.
ನಾವು ಭಾರತವಾಸಿಗಳೇ ಪುನಃ ಹೊಸ ಪ್ರಪಂಚದಲ್ಲಿ ಬಂದು ರಾಜ್ಯ ಮಾಡುತ್ತೇವೆ, ಮತ್ತ್ಯಾವುದೇ
ಧರ್ಮವಿರುವುದಿಲ್ಲ ಎಂಬುದನ್ನು ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ನೀವು ಮಕ್ಕಳಲ್ಲಿಯೂ ಸಹ
ಯಾರು ಶ್ರೇಷ್ಠಪದವಿಯನ್ನು ಪಡೆಯಬೇಕಾಗಿದೆಯೋ ಅವರೇ ಹೆಚ್ಚು ನೆನಪಿನಲ್ಲಿರುವ ಪುರುಷಾರ್ಥ
ಮಾಡುತ್ತಾರೆ ಮತ್ತು ಬಾಬಾ, ನಾನು ಇಷ್ಟು ಸಮಯ ನೆನಪಿನಲ್ಲಿರುತ್ತೇನೆಂದು ಸಮಾಚಾರವನ್ನು ತಂದೆಗೆ
ತಿಳಿಸುತ್ತಾರೆ. ಕೆಲವು ಮಕ್ಕಳಂತೂ ನಾಚಿಕೆ ಪಟ್ಟು ತಂದೆಗೆ ಪೂರ್ಣ ಸಮಾಚಾರವನ್ನೇ ತಿಳಿಸುವುದಿಲ್ಲ.
ಬಾಬಾ ಏನು ಹೇಳುವರೋ ಎಂದು ತಿಳಿದುಕೊಳ್ಳುತ್ತಾರೆ ಆದರೆ ತಂದೆಗೆ ಎಲ್ಲವೂ ಅರ್ಥವಾಗುತ್ತದೆಯಲ್ಲವೆ!
ಹೇಗೆ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಒಂದುವೇಳೆ ನೀವು ಓದದಿದ್ದರೆ
ಅನುತ್ತೀರ್ಣರಾಗಿಬಿಡುತ್ತೀರಿ ಎಂದು ಹೇಳುತ್ತಾರಲ್ಲವೆ. ಲೌಕಿಕ ತಾಯಿ-ತಂದೆಯೂ ಸಹ ಮಕ್ಕಳ
ವಿದ್ಯಾಭ್ಯಾಸದಿಂದಲೇ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾರೆ. ಇದಂತೂ ಬಹಳ ದೊಡ್ಡ ಪಾಠಶಾಲೆಯಾಗಿದೆ,
ಇಲ್ಲೇನೂ ನಂಬರ್ವಾರ್ ಆಗಿ ಕುಳ್ಳರಿಸುವುದಿಲ್ಲ ಆದರೆ ಬುದ್ಧಿಯಿಂದ ಇವರು ಹೇಗೆ
ಓದುತ್ತಾರೆಂಬುದನ್ನು ತಿಳಿದುಕೊಳ್ಳುತ್ತಾರೆ. ನಂಬರ್ವಾರಂತೂ ಇದ್ದೇ ಇರುತ್ತಾರೆ. ಈಗ ತಂದೆಯು
ಒಳ್ಳೊಳ್ಳೆಯ ಮಕ್ಕಳನ್ನು ಎಲ್ಲಿಯಾದರೂ ಕಳುಹಿಸಿಕೊಡುತ್ತಾರೆ ಮತ್ತೆ ಅವರು ಹೊರಟುಹೋಗುತ್ತಾರೆಂದರೆ
ಬಾಬಾ, ನಮಗೆ ಮಹಾರಥಿಯು ಬೇಕೆಂದು ಅನ್ಯರು ಬರೆಯುತ್ತಾರೆ ಅಂದಾಗ ಅವರು ನಮಗಿಂತಲೂ ಬುದ್ಧಿವಂತರು
ಪ್ರಸಿದ್ಧರಾಗಿದ್ದಾರೆಂಬುದನ್ನು ತಿಳಿದುಕೊಳ್ಳುತ್ತಾರೆ. ನಂಬರ್ವಾರಂತೂ ಇರುತ್ತಾರಲ್ಲವೆ.
ಪ್ರದರ್ಶನಿಯಲ್ಲಿಯೂ ಸಹ ಅನೇಕ ಪ್ರಕಾರದವರು ಬರುತ್ತಾರೆ ಆದ್ದರಿಂದ ಮಾರ್ಗದರ್ಶಕರೂ ಸಹ ಪರಿಶೀಲನೆ
ಮಾಡಲು ನಿಂತಿರಬೇಕು. ಇವರು ಯಾವ ಪ್ರಕಾರದ ವ್ಯಕ್ತಿಯೆಂದು ಸ್ವಾಗತಿಸುವವರಿಗಂತೂ ತಿಳಿದಿರುತ್ತದೆ
ಅಂದಾಗ ಇವರಿಗೆ ನೀವು ತಿಳಿಸಿಕೊಡಿ ಎಂದು ಅಂತಹ ಸೇವಾಧಾರಿಗಳಿಗೆ ಸನ್ನೆ (ಸೂಚನೆ) ಮಾಡಬೇಕು. ನೀವೂ
ಸಹ ಇದನ್ನು ತಿಳಿದುಕೊಳ್ಳಬಹುದು - ಇಲ್ಲಿ ಫಸ್ಟ್ ಗ್ರೇಡ್, ಸೆಕೆಂಡ್ ಗ್ರೇಡ್ ಎಲ್ಲರೂ ಇದ್ದಾರೆ,
ಅಲ್ಲಂತೂ ಎಲ್ಲರ ಸೇವೆ ಮಾಡಲೇಬೇಕಾಗಿದೆ. ಯಾರಾದರೂ ದೊಡ್ಡವ್ಯಕ್ತಿಗಳಾಗಿದ್ದರೆ ಅಂತಹ
ವ್ಯಕ್ತಿಗಳಿಗೆ ಎಲ್ಲರೂ ಅವಶ್ಯವಾಗಿ ಸತ್ಕಾರ ಮಾಡುತ್ತಾರೆ. ಇದು ನಿಯಮವಾಗಿದೆ, ಇಲ್ಲಿಯೂ ಸಹ ತಂದೆ
ಅಥವಾ ಶಿಕ್ಷಕರು ತರಗತಿಯಲ್ಲಿ ಮಕ್ಕಳ ಮಹಿಮೆ ಮಾಡುತ್ತಾರೆ ಅಂದಮೇಲೆ ಇದು ಸಹ ಎಲ್ಲದಕ್ಕಿಂತ ದೊಡ್ಡ
ಖಾತರಿಯಾಗಿದೆ. ಹೆಸರನ್ನು ತರುವ ಮಕ್ಕಳಿಗೆ ಮಹಿಮೆ ಅಥವಾ ಖಾತರಿ ಮಾಡಲಾಗುತ್ತದೆ. ಇವರು ಇಂತಹ
ಧನವಂತರಾಗಿದ್ದಾರೆ, ಧಾರ್ಮಿಕ ವ್ಯಕ್ತಿಯಾಗಿದ್ದಾರೆಂದು ಹೇಳುತ್ತಾರೆ ಅಂದಮೇಲೆ ಇದೂ ಸಹ ಖಾತರಿ (ಮಹಿಮೆ)
ಯಾಗಿದೆಯಲ್ಲವೆ. ಈಗ ನೀವು ತಿಳಿದುಕೊಂಡಿದ್ದೀರಿ - ಭಗವಂತನೇ ಶ್ರೇಷ್ಠಾತಿಶ್ರೇಷ್ಠನಾಗಿದ್ದಾರೆ,
ಅವಶ್ಯವಾಗಿ ಶ್ರೇಷ್ಠಾತಿಶ್ರೇಷ್ಠನಾಗಿದ್ದಾರೆ ಎಂಬ ಮಾತನ್ನೂ ಹೇಳಿದ್ದಾರೆ ಆದರೆ ಮತ್ತೆ ಅವರಿಗೆ
ತಿಳಿಸಿ, ಅವರ (ಭಗವಂತನ) ಪರಿಚಯವನ್ನು ತಿಳಿಸಿ ಎಂದು ಕೇಳಿದರೆ ಅವರು ಸರ್ವವ್ಯಾಪಿ ಎಂದು
ಹೇಳಿಬಿಡುತ್ತಾರೆ. ಒಮ್ಮೆಲೆ ಭಗವಂತನನ್ನು ಕೆಳಗೆ ತಂದುಬಿಡುತ್ತಾರೆ. ಈಗ ನೀವು ತಿಳಿಸಿ,
ಎಲ್ಲರಿಗಿಂತ ಸರ್ವಶ್ರೇಷ್ಠನು ಭಗವಂತನಾಗಿದ್ದಾರೆ, ಅವರು ಮೂಲವತನದ ನಿವಾಸಿಯಾಗಿದ್ದಾರೆ,
ಸೂಕ್ಷ್ಮವತನದಲ್ಲಿ ದೇವತೆಗಳಿರುತ್ತಾರೆ, ಇಲ್ಲಿ ಮನುಷ್ಯರಿದ್ದಾರೆ ಅಂದಾಗ ಸರ್ವಶ್ರೇಷ್ಠ ಭಗವಂತನು
ಆ ನಿರಾಕಾರನಾದರು.
ಈಗ ನಿಮಗೆ ತಿಳಿದಿದೆ -
ನಾವು ವಜ್ರಸಮಾನರಾಗಿದ್ದವರೇ ಈಗ ಕವಡೆಯಂತಾಗಿಬಿಟ್ಟಿದ್ದೇವೆ ನಂತರ ಭಗವಂತನನ್ನು ತಮಗಿಂತಲೂ
ಕೆಳಮಟ್ಟಕ್ಕೆ ತಂದುಬಿಟ್ಟಿದ್ದಾರೆ, ಅವರನ್ನು ಅರ್ಥಮಾಡಿಕೊಂಡೇ ಇಲ್ಲ. ನೀವು ಭಾರತವಾಸಿಗಳಿಗೇ
ಯಥಾರ್ಥ ಪರಿಚಯವು ಸಿಗುತ್ತದೆ ನಂತರ ಆ ಪರಿಚಯವು ಕಡಿಮೆಯಾಗಿಬಿಡುತ್ತದೆ. ಈಗ ನೀವು ತಂದೆಯ
ಪರಿಚಯವನ್ನು ಎಲ್ಲರಿಗೂ ನೀಡುತ್ತಾ ಹೋಗುತ್ತೀರಿ ನಂತರ ತಂದೆಯ ಪರಿಚಯವು ಅನೇಕರಿಗೆ ಸಿಗುತ್ತದೆ.
ನಿಮ್ಮ ಮುಖ್ಯಚಿತ್ರಗಳು ಈ ತ್ರಿಮೂರ್ತಿ, ಗೋಲ ಮತ್ತು ಕಲ್ಪವೃಕ್ಷವಾಗಿದೆ, ಇದರಲ್ಲಿ ಎಷ್ಟೊಂದು
ತಿಳುವಳಿಕೆಯಿದೆ! ಈ ಲಕ್ಷ್ಮೀ-ನಾರಾಯಣರು ಸತ್ಯಯುಗದ ಮಾಲೀಕರಾಗಿದ್ದರು ಎಂಬುದನ್ನು ಯಾರು ಬೇಕಾದರೂ
ಹೇಳುತ್ತಾರೆ ಆದರೆ ಸತ್ಯಯುಗಕ್ಕೆ ಮೊದಲು ಏನಿತ್ತು? ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ - ಈಗ
ಕಲಿಯುಗದ ಅಂತ್ಯವಾಗಿದೆ ಮತ್ತು ಇರುವುದೂ ಸಹ ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯ. ಈಗ ರಾಜ್ಯವಂತೂ
ಯಾರಿಗೂ ಇಲ್ಲ, ಎಷ್ಟೊಂದು ಅಂತರವಿದೆ! ಸತ್ಯಯುಗದ ಆದಿಯಲ್ಲಿಯೂ ರಾಜರಿದ್ದರು, ಈಗ ಕಲಿಯುಗದಲ್ಲಿಯೂ
ರಾಜರಿದ್ದಾರೆ. ಭಲೆ ಅವರೇನೂ ಪಾವನರಲ್ಲ ಆದರೆ ಈಗ ಕೆಲವರು ಹಣವನ್ನು ಕೊಟ್ಟಾದರೂ ಬಿರುದನ್ನು
ತೆಗೆದುಕೊಳ್ಳುತ್ತಾರೆ. ಮಹಾರಾಜರಂತೂ ಯಾರೂ ಇಲ್ಲ, ಮಹಾರಾಜನೆಂಬ ಬಿರುದನ್ನು ಹಣದಿಂದ
ಖರೀದಿಸುತ್ತಾರೆ. ಹೇಗೆ ಪಾಟೀಯಾಲದ ಮಹಾರಾಜ, ಜೋಧ್ಪುರ್ನ ಮಹಾರಾಜ ಬೀಕಾನೇರ್ನ ಮಹಾರಾಜ...... ಎಂದು
ಹೆಸರುಗಳನ್ನಂತೂ ಇಟ್ಟುಕೊಳ್ಳುತ್ತಾರಲ್ಲವೆ. ಈ ಹೆಸರುಗಳು ಅವಿನಾಶಿಯಾಗಿ ನಡೆದುಬರುತ್ತದೆ. ಮೊದಲು
ಪವಿತ್ರ ಮಹಾರಾಜರಿದ್ದರು, ಈಗ ಅಪವಿತ್ರರಿದ್ದಾರೆ, ರಾಜ-ಮಹಾರಾಜ ಎಂಬ ಶಬ್ಧವು ಅನಾದಿಯಿಂದ
ನಡೆದುಬರುತ್ತದೆ. ಈ ಲಕ್ಷ್ಮೀ-ನಾರಾಯಣರಿಗೂ ಸಹ ಇವರು ಸತ್ಯಯುಗದ ಮಾಲೀಕರಾಗಿದ್ದರೆಂದು ಹೇಳುತ್ತಾರೆ
ಅಂದಾಗ ಯಾರು ರಾಜ್ಯವನ್ನು ಪಡೆದರು? ಹೇಗೆ ರಾಜಧಾನಿಯ ಸ್ಥಾಪನೆಯಾಗುತ್ತದೆ ಎಂಬುದನ್ನು ನೀವೀಗ
ಯಥಾರ್ಥವಾಗಿ ತಿಳಿದುಕೊಂಡಿದ್ದೀರಿ. ತಂದೆಯು ತಿಳಿಸುತ್ತಾರೆ - ನಾನೀಗ ನಿಮಗೆ 21 ಜನ್ಮಗಳಿಗಾಗಿ
ಓದಿಸುತ್ತೇನೆ. ಅವರು ಓದಿ ಇದೊಂದೇ ಜನ್ಮದಲ್ಲಿಯೇ ವಕೀಲ ಮೊದಲಾದ ಪದವಿಯನ್ನು ಪಡೆಯುತ್ತಾರೆ ಆದರೆ
ನೀವೀಗ ಓದಿ ಭವಿಷ್ಯದ ಮಹಾರಾಜ-ಮಹಾರಾಣಿಯಾಗುತ್ತೀರಿ. ನಾಟಕದ ಯೋಜನೆಯನುಸಾರ ಹೊಸ ಪ್ರಪಂಚದ
ಸ್ಥಾಪನೆಯಾಗುತ್ತಿದೆ, ಈಗ ಹಳೆಯ ಪ್ರಪಂಚವಾಗಿದೆ. ಭಲೆ ಎಷ್ಟು ಒಳ್ಳೊಳ್ಳೆಯ ದೊಡ್ಡ ಮಹಲುಗಳೇ
ಇರಬಹುದು ಆದರೆ ವಜ್ರವೈಡೂರ್ಯಗಳ ಮಹಲುಗಳಂತೂ ಮಾಡುವ ತಾಕತ್ತು ಯಾರಲ್ಲಿಯೂ ಇಲ್ಲ. ಸತ್ಯಯುಗದಲ್ಲಿ
ವಜ್ರ-ವೈಡೂರ್ಯಗಳ ಮಹಲುಗಳನ್ನು ನಿರ್ಮಿಸುತ್ತಾರಲ್ಲವೆ. ಅವನ್ನು ನಿರ್ಮಿಸುವುದರಲ್ಲಿಯೂ
ತಡವಾಗುವುದಿಲ್ಲ. ಇಲ್ಲಿಯೂ ಸಹ ಭೂಕಂಪವಾದಾಗ ಅನೇಕ ನೌಕರರು ಬಂದು ಒಂದೆರಡು ವರ್ಷಗಳಲ್ಲಿ ಇಡೀ
ನಗರವನ್ನೇ ಮತ್ತೆ ನಿಲ್ಲಿಸಿಬಿಡುತ್ತಾರೆ. ಹೇಗೆ ಹೊಸದೆಹಲಿಯನ್ನು ಮಾಡುವುದರಲ್ಲಿ ಹೆಚ್ಚೆಂದರೆ
8-10 ವರ್ಷಗಳು ಹಿಡಿಸಿತು. ಆದರೆ ಇಲ್ಲಿನ ನೌಕರರು ಮತ್ತು ಸತ್ಯಯುಗದ ನೌಕರರಲ್ಲಿ ಅಂತರವಿದೆಯಲ್ಲವೆ!
ಇತ್ತೀಚೆಗೆ ಹೊಸ-ಹೊಸ ಅನ್ವೇಷಣೆಗಳನ್ನು ನಡೆಸುತ್ತಿರುತ್ತಾರೆ. ಕಟ್ಟಡಗಳನ್ನು ನಿರ್ಮಿಸುವ
ವಿಜ್ಞಾನದ ಅನ್ವೇಷಣೆಗಳು ಬಹಳ ತೀವ್ರವಾಗಿದೆ, ಎಲ್ಲವೂ ತಯಾರಾಗಿರುವುದೇ ಸಿಗುತ್ತದೆ. ವಿಮಾನವು
ಬೇಕೆಂದರೂ ಬಹಳ ಬೇಗನೆ ತಯಾರಾಗಿಬಿಡುತ್ತದೆ. ಬಹಳ ಬೇಗ-ಬೇಗನೆ ಎಲ್ಲವೂ ಆಗುವುದರಿಂದಲೇ ಇದೆಲ್ಲವೂ
ಸತ್ಯಯುಗದಲ್ಲಿಯೂ ಸಹ ಪ್ರಯೋಜನಕ್ಕೆ ಬರುತ್ತದೆ. ಇವೆಲ್ಲವೂ ಸಂಸ್ಕಾರದಲ್ಲಿ ಜೊತೆ ಬರುತ್ತದೆ. ಈ
ವಿಜ್ಞಾನದ ಸಂಸ್ಕಾರವಿರುವವರೂ ಸಹ ಸತ್ಯಯುಗದಲ್ಲಿ ಬರುತ್ತಾರೆ, ಅಲ್ಲಿ ಎಲ್ಲವನ್ನೂ
ನಿರ್ಮಿಸುತ್ತಾರೆ ಆದ್ದರಿಂದ ಈಗ ತಂದೆಯು ತಿಳಿಸುತ್ತಿರುತ್ತಾರೆ - ಮಕ್ಕಳೇ, ಪಾವನರಾಗಬೇಕೆಂದರೆ
ತಂದೆಯನ್ನು ನೆನಪು ಮಾಡಿ, ತಂದೆಯೂ ಸಹ ಗುಡ್ ಮಾರ್ನಿಂಗ್ ಹೇಳಿದ ನಂತರ ಶಿಕ್ಷಣ ಕೊಡುತ್ತಾರೆ.
ಮಕ್ಕಳೇ, ತಂದೆಯ ನೆನಪಿನಲ್ಲಿ ಕುಳಿತುಕೊಂಡಿದ್ದೀರಾ, ನಡೆಯುತ್ತಾ-ತಿರುಗಾಡುತ್ತಾ ತಂದೆಯನ್ನು
ನೆನಪು ಮಾಡಿ ಏಕೆಂದರೆ ಜನ್ಮ-ಜನ್ಮಾಂತರದ ಹೊರೆಯು ತಲೆಯ ಮೇಲಿದೆ. ಏಣಿಯನ್ನು
ಇಳಿಯುತ್ತಾ-ಇಳಿಯುತ್ತಾ 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ, ಈಗ ಒಂದೇ ಜನ್ಮದಲ್ಲಿ
ಏರುವಕಲೆಯಾಗುತ್ತದೆ. ಎಷ್ಟು ತಂದೆಯನ್ನು ನೆನಪು ಮಾಡುತ್ತಾ ಇರುತ್ತೀರೋ ಅಷ್ಟು ಖುಷಿಯಿರುವುದು,
ಶಕ್ತಿಯೂ ಸಿಗುವುದು. ಅನೇಕ ಮಕ್ಕಳು ಯಾರನ್ನು ಮೊದಲಿನ ಸ್ಥಾನದಲ್ಲಿಡಲಾಗುತ್ತದೆಯೋ ಅವರೂ ಸಹ
ನೆನಪಿನಲ್ಲಿ ಇರುವುದೇ ಇಲ್ಲ. ಭಲೆ ಜ್ಞಾನದಲ್ಲಿ ತೀಕ್ಷ್ಣವಾಗಿದ್ದಾರೆ ಆದರೆ ನೆನಪಿನ
ಯಾತ್ರೆಯಿಲ್ಲ. ತಂದೆಯಂತೂ ಮಕ್ಕಳ ಮಹಿಮೆ ಮಾಡುತ್ತಾರೆ, ಇವರೂ ಸಹ ಮೊದಲಿನ ನಂಬರಿನಲ್ಲಿದ್ದಾರೆ
ಅಂದಮೇಲೆ ಅವಶ್ಯವಾಗಿ ಪರಿಶ್ರಮವನ್ನು ಪಡುತ್ತಾರಲ್ಲವೆ! ನೀವು ಸದಾ ನಮಗೆ ಶಿವತಂದೆಯು
ತಿಳಿಸುತ್ತಾರೆಂದು ತಿಳಿದುಕೊಳ್ಳಿ ಆಗ ಬುದ್ಧಿಯೋಗವು ಅಲ್ಲಿಯೇ ತೊಡಗಿರುವುದು. ಶಿವತಂದೆಯಿಂದ ಇವರೂ
ಸಹ ಕಲಿಯುತ್ತಾರಲ್ಲವೆ. ಆದರೂ ಕೂಡ ತಂದೆಯನ್ನು ನೆನಪು ಮಾಡಿ ಎಂದೇ ಹೇಳುತ್ತಾರೆ. ಅನ್ಯರಿಗೆ
ತಿಳಿಸುವುದಕ್ಕಾಗಿಯೇ ಚಿತ್ರಗಳಿವೆ, ಭಗವಂತನೆಂದು ನಿರಾಕಾರನಿಗೇ ಹೇಳಲಾಗುತ್ತದೆ. ಅವರು ಬಂದು
ಶರೀರವನ್ನು ಧಾರಣೆ ಮಾಡುತ್ತಾರೆ, ಒಬ್ಬ ಭಗವಂತನ ಮಕ್ಕಳಾದ ಎಲ್ಲಾ ಆತ್ಮಗಳು
ಸಹೋದರ-ಸಹೋದರರಾಗಿದ್ದಾರೆ, ಈಗ ಈ ಶರೀರದಲ್ಲಿ ವಿರಾಜಮಾನವಾಗಿದ್ದಾರೆ. ಎಲ್ಲರೂ
ಅಕಾಲಮೂರ್ತಿಗಳಾಗಿದ್ದಾರೆ. ಇದು ಅಕಾಲಮೂರ್ತಿಯ (ಆತ್ಮ) ಸಿಂಹಾಸನವಾಗಿದೆ. ಅಕಾಲ ಸಿಂಹಾಸನವು
ಮತ್ತ್ಯಾವುದೇ ವಿಶೇಷವಾದ ವಸ್ತುವಲ್ಲ, ಇದು ಅಕಾಲಮೂರ್ತಿಯ ಸಿಂಹಾಸನವಾಗಿದೆ, ಭೃಕುಟಿಯ ಮಧ್ಯದಲ್ಲಿ
ಆತ್ಮವು ವಿರಾಜಮಾನವಾಗುತ್ತದೆ, ಇದಕ್ಕೆ ಅಕಾಲಸಿಂಹಾಸನವೆಂದು ಹೇಳಲಾಗುತ್ತದೆ. ಅಕಾಲಮೂರ್ತಿಯ
ಅಕಾಲಸಿಂಹಾಸನವಾಗಿದೆ, ಆತ್ಮಗಳೆಲ್ಲರೂ ಅಕಾಲಮೂರ್ತಿಗಳಾಗಿದ್ದೀರಿ. ಎಷ್ಟೊಂದು ಸೂಕ್ಷ್ಮವಾಗಿದ್ದೀರಿ!
ತಂದೆಯು ನಿರಾಕಾರನಾಗಿದ್ದಾರೆ ಅಂದಮೇಲೆ ಅವರು ತಮ್ಮದೇ ಆದ ಸಿಂಹಾಸನವನ್ನು ಎಲ್ಲಿಂದ ತರುವುದು
ಆದ್ದರಿಂದ ತಂದೆಯು ತಿಳಿಸುತ್ತಾರೆ - ನನ್ನ ಸಿಂಹಾಸನವು ಇದೇ (ಬ್ರಹ್ಮಾರವರ ಭೃಕುಟಿ) ಆಗಿದೆ. ನಾನು
ಬಂದು ಈ ಸಿಂಹಾಸನವನ್ನು ಬಾಡಿಗೆಯಾಗಿ ತೆಗೆದುಕೊಳ್ಳುತ್ತೇನೆ. ಬ್ರಹ್ಮಾರವರ ಸಾಧಾರಣ ವೃದ್ಧನ
ತನುವಿನಲ್ಲಿ ಅಕಾಲಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತೇನೆ, ಈಗ ನೀವು ತಿಳಿದುಕೊಂಡಿದ್ದೀರಿ - ಇದು
ಎಲ್ಲಾ ಆತ್ಮಗಳ ಸಿಂಹಾಸನವಾಗಿದೆ, ಇಲ್ಲಿ ಮನುಷ್ಯರ ಮಾತನ್ನೇ ಮಾತನಾಡಲಾಗುತ್ತದೆ, ಪ್ರಾಣಿಗಳ
ಮಾತಿಲ್ಲ. ಮೊದಲಿಗೆ ಯಾವ ಮನುಷ್ಯರು ಪ್ರಾಣಿಗಳಿಗಿಂತಲೂ ಕೀಳಾಗಿಬಿಟ್ಟಿದ್ದಾರೆಯೋ ಅವರು
ಸುಧಾರಣೆಯಾಗಲಿ, ಯಾರಾದರೂ ಪ್ರಾಣಿಗಳ ಮಾತನ್ನು ಕೇಳಿದರೆ ತಿಳಿಸಿ - ಮೊದಲು ತಮ್ಮನ್ನು ಸುಧಾರಣೆ
ಮಾಡಿಕೊಳ್ಳಿ. ಸತ್ಯಯುಗದಲ್ಲಿ ಪ್ರಾಣಿಗಳೂ ಸಹ ಸುಂದರವಾಗಿರುತ್ತವೆ, ಸ್ವಲ್ಪವೂ ಕೊಳಕಿರುವುದಿಲ್ಲ.
ರಾಜನ ಮಹಲಿನಲ್ಲಿ ಪಾರಿವಾಳ ಮೊದಲಾದುವುಗಳ ಕೊಳಕಿದ್ದರೆ ಶಿಕ್ಷೆಯನ್ನು ವಿಧಿಸಿಬಿಡುವರು ಆದ್ದರಿಂದ
ಒಂದು ಸ್ವಲ್ಪವೂ ಕೊಳಕಿರುವುದಿಲ್ಲ. ಅಲ್ಲಿ ಬಹಳ ಗಮನವನ್ನಿಟ್ಟಿರುತ್ತಾರೆ. ಕಾವಲುಗಾರರೂ
ಇರುತ್ತಾರೆ. ಎಂದೂ ಯಾವುದೇ ಪ್ರಾಣಿಯು ಒಳಗೆ ನುಗ್ಗಲು ಸಾಧ್ಯವಿಲ್ಲ, ಬಹಳ ಸ್ವಚ್ಛತೆಯಿರುತ್ತದೆ.
ಲಕ್ಷ್ಮೀ-ನಾರಾಯಣರ ಮಂದಿರದಲ್ಲಿಯೂ ಸಹ ಎಷ್ಟೊಂದು ಸ್ವಚ್ಛತೆಯಿರುತ್ತದೆ, ಶಂಕರ-ಪಾರ್ವತಿಯ
ಮಂದಿರದಲ್ಲಿ ಪಾರಿವಾಳವನ್ನು ತೋರಿಸುತ್ತಾರೆ ಅಂದಾಗ ಅವಶ್ಯವಾಗಿ ಮಂದಿರವನ್ನು ಹಾಳು ಮಾಡುತ್ತವೆ.
ಶಾಸ್ತ್ರಗಳಲ್ಲಿ ಬಹಳಷ್ಟು ದಂತಕಥೆಗಳನ್ನು ಬರೆದುಬಿಟ್ಟಿದ್ದಾರೆ!
ತಂದೆಯು ಮಕ್ಕಳಿಗೆ
ತಿಳಿಸುತ್ತಾರೆ, ಆದರೆ ಅವರಲ್ಲಿಯೂ ಕೆಲವರೇ ಧಾರಣೆ ಮಾಡುತ್ತಾರೆ ಉಳಿದವರಂತೂ ಏನನ್ನೂ
ತಿಳಿದುಕೊಂಡಿಲ್ಲ. ತಂದೆಯು ಮಕ್ಕಳಿಗೆ ಎಷ್ಟು ಪ್ರೀತಿಯಿಂದ ತಿಳಿಸಿಕೊಡುತ್ತಾರೆ - ಮಕ್ಕಳೇ,
ಬಹಳ-ಬಹಳ ಮಧುರರಾಗಿ, ಮುಖದಿಂದ ಸದಾ ರತ್ನಗಳೇ ಹೊರಬರುತ್ತಿರಲಿ, ನೀವು ರೂಪಭಸಂತರಾಗಿದ್ದೀರಿ,
ನಿಮ್ಮ ಮುಖದಿಂದ ಕಲ್ಲುಗಳು ಬರಬಾರದು. ಆತ್ಮಕ್ಕೇ ಮಹಿಮೆಯಾಗುತ್ತದೆ, ನಾನು
ಪ್ರಧಾನಮಂತ್ರಿಯಾಗಿದ್ದೇನೆ, ನಾನು ರಾಷ್ಟ್ರಪತಿಯಾಗಿದ್ದೇನೆ..... ಇದು ನನ್ನ ಹೆಸರಾಗಿದೆ ಎಂದು
ಆತ್ಮವೇ ಹೇಳುತ್ತದೆ ಅಂದಾಗ ಆತ್ಮಗಳು ಯಾರ ಮಕ್ಕಳು? ಒಬ್ಬ ಪರಮಾತ್ಮನ ಮಕ್ಕಳಾಗಿದ್ದಾರೆ ಅಂದಾಗ
ಅವಶ್ಯವಾಗಿ ಅವರಿಂದಲೇ ಆಸ್ತಿಯು ಸಿಗುತ್ತದೆ ಅಂದಮೇಲೆ ಅವರು ಸರ್ವವ್ಯಾಪಿಯಾಗಲು ಹೇಗೆ ಸಾಧ್ಯ!
ನಿಮಗೆ ತಿಳಿದಿದೆ, ನಾವೂ ಸಹ ಮೊದಲು ಏನನ್ನೂ ತಿಳಿದುಕೊಂಡಿರಲಿಲ್ಲ. ಈಗ ನಿಮ್ಮ ಬುದ್ಧಿಯ ಬೀಗ
ತೆರೆದಿದೆ. ನೀವು ಯಾವುದೇ ಮಂದಿರಕ್ಕೆ ಹೋಗುತ್ತೀರೆಂದರೆ ಇವೆಲ್ಲವೂ ಸುಳ್ಳುಚಿತ್ರಗಳಾಗಿವೆ ಎಂದು
ತಿಳಿಯುತ್ತೀರಿ. ಹತ್ತು ಭುಜಗಳುಳ್ಳ, ಆನೆಯ ಸೊಂಡಿಲಿರುವ ಯಾವುದೇ ಚಿತ್ರವಿರುತ್ತದೆಯೇ! ಇದೆಲ್ಲವೂ
ಭಕ್ತಿಮಾರ್ಗದ ಸಾಮಗ್ರಿಯಾಗಿದೆ. ವಾಸ್ತವದಲ್ಲಿ ಒಬ್ಬ ಶಿವತಂದೆಯ ಭಕ್ತಿಯಿರಬೇಕು ಯಾರು ಎಲ್ಲರ
ಸದ್ಗತಿದಾತನಾಗಿದ್ದಾರೆ. ಈ ಲಕ್ಷ್ಮೀ-ನಾರಾಯಣರೂ ಸಹ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆಂಬುದು
ನಿಮ್ಮ ಬುದ್ಧಿಯಲ್ಲಿದೆ. ಶ್ರೇಷ್ಠಾತಿಶ್ರೇಷ್ಠ ತಂದೆಯೇ ಬಂದು ಎಲ್ಲರಿಗೆ ಸದ್ಗತಿ ನೀಡುತ್ತಾರೆ.
ಅವರಿಗಿಂತ ದೊಡ್ಡವರು ಯಾರೂ ಇಲ್ಲ. ಈ ಜ್ಞಾನದ ಮಾತುಗಳನ್ನು ನಿಮ್ಮಲ್ಲಿಯೂ ನಂಬರ್ವಾರ್ ಧಾರಣೆ
ಮಾಡುತ್ತಾರೆ, ಧಾರಣೆ ಮಾಡಲಿಲ್ಲವೆಂದರೆ ಅವರೇನು ಪ್ರಯೋಜನ? ಕೆಲವರು ಅಂಧರಿಗೆ ಊರುಗೋಲಾಗುವ ಬದಲು
ತಾವೇ ಅಂಧರಾಗಿಬಿಡುತ್ತಾರೆ. ಹಸು ಹಾಲನ್ನು ಕೊಡಲಿಲ್ಲವೆಂದರೆ ಅದನ್ನು ಕೊಟ್ಟಿಗೆಯಲ್ಲಿ
ಕೂಡಿಹಾಕುತ್ತಾರೆ. ಇವರು ಸಹ ಜ್ಞಾನದ ಹಾಲನ್ನು ಕೊಡುವುದಿಲ್ಲ, ಅನೇಕರು ಪುರುಷಾರ್ಥವನ್ನೇ
ಮಾಡುವುದಿಲ್ಲ, ನಾವು ಒಂದು ಸ್ವಲ್ಪವಾದರೂ ಅನ್ಯರ ಕಲ್ಯಾಣ ಮಾಡಬೇಕೆಂಬುದನ್ನೇ
ತಿಳಿದುಕೊಳ್ಳುವುದಿಲ್ಲ. ತಮ್ಮ ಅದೃಷ್ಟದ ಬಗ್ಗೆಯೇ ಆಲೋಚನೆಯಿರುವುದಿಲ್ಲ. ಏನು ಸಿಕ್ಕಿದರೆ ಅದು
ಒಳ್ಳೆಯದೆಂದು ತಿಳಿಯುತ್ತಾರೆ. ಅಂತಹವರಿಗೆ ಇವರ ಅದೃಷ್ಟದಲ್ಲಿಲ್ಲವೆಂದು ತಂದೆಯು ತಿಳಿಯುತ್ತಾರೆ.
ತಮ್ಮ ಸದ್ಗತಿ ಮಾಡಿಕೊಳ್ಳುವ ಪುರುಷಾರ್ಥ ಮಾಡಬೇಕಲ್ಲವೆ. ದೇಹೀ-ಅಭಿಮಾನಿಗಳಾಗಬೇಕಾಗಿದೆ. ತಂದೆಯು
ಶ್ರೇಷ್ಠಾತಿಶ್ರೇಷ್ಠನಾಗಿದ್ದಾರೆ ಆದರೆ ಪತಿತ ಪ್ರಪಂಚ, ಪತಿತ ಶರೀರದಲ್ಲಿ ಎಷ್ಟು ಸಾಧಾರಣವಾಗಿ
ಬರುತ್ತಾರೆ ನೋಡಿ! ಅವರನ್ನು ಪತಿತ ಪ್ರಪಂಚದಲ್ಲಿಯೇ ಕರೆಯುತ್ತಾರೆ. ಯಾವಾಗ ರಾವಣನು ಸಂಪೂರ್ಣ
ಭ್ರಷ್ಟರನ್ನಾಗಿ ಮಾಡುತ್ತಾನೆಯೋ ಆಗ ತಂದೆಯು ಬಂದು ಶ್ರೇಷ್ಠರನ್ನಾಗಿ ಮಾಡುತ್ತಾನೆ. ಯಾರು ಒಳ್ಳೆಯ
ಪುರುಷಾರ್ಥ ಮಾಡುವರೋ ಅವರು ರಾಜ-ರಾಣಿಯರಾಗುತ್ತಾರೆ, ಪುರುಷಾರ್ಥ ಮಾಡದೇ ಇರುವವರು
ಬಡವರಾಗಿಬಿಡುತ್ತಾರೆ. ಅದೃಷ್ಟದಲ್ಲಿಲ್ಲವೆಂದರೆ ಪುರುಷಾರ್ಥವನ್ನೇನು ಮಾಡುತ್ತಾರೆ! ಕೆಲವರಂತೂ
ಬಹಳ ಒಳ್ಳೆಯ ಅದೃಷ್ಟವನ್ನು ರೂಪಿಸಿಕೊಳ್ಳುತ್ತಾರೆ, ನಾವು ಎಷ್ಟು ಸೇವೆ ಮಾಡುತ್ತೇವೆಂದು
ಪ್ರತಿಯೊಬ್ಬರೂ ತಮ್ಮನ್ನು ನೋಡಿಕೊಳ್ಳಬಹುದಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ರೂಪಭಸಂತರಾಗಿ
ಮುಖದಿಂದ ಸದಾ ರತ್ನಗಳನ್ನೇ ಹೊರಹಾಕಬೇಕಾಗಿದೆ. ಬಹಳ-ಬಹಳ ಮಧುರರಾಗಬೇಕಾಗಿದೆ. ಎಂದೂ ಕಟುವಚನಗಳನ್ನು
ನುಡಿಯಬಾರದು.
2. ಜ್ಞಾನ ಮತ್ತು
ಯೋಗದಲ್ಲಿ ತೀಕ್ಷ್ಣರಾಗಿ ತಮ್ಮ ಮತ್ತು ಅನ್ಯರ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ. ತಮ್ಮ ಶ್ರೇಷ್ಠ
ಅದೃಷ್ಟವನ್ನು ರೂಪಿಸಿಕೊಳ್ಳುವ ಪುರುಷಾರ್ಥ ಮಾಡಬೇಕಾಗಿದೆ. ಅಂಧರಿಗೆ ಊರುಗೋಲಾಗಬೇಕಾಗಿದೆ.
ವರದಾನ:
ತ್ರಿ-ಸ್ಮೃತಿ
ಸ್ವರೂಪದ ತಿಲಕ ಧಾರಣೆ ಮಾಡಿಕೊಳ್ಳುವವರೇ ಸಂಪೂರ್ಣ ವಿಜಯೀ ಭವ
ಸ್ವಯಂನ ಸ್ಮೃತಿ, ತಂದೆಯ
ಸ್ಮೃತಿ ಮತ್ತು ಡ್ರಾಮಾದ ಜ್ಞಾನದ ಸ್ಮೃತಿ- ಇದೇ ಮೂರು ಸ್ಮೃತಿಗಳಲ್ಲಿ ಇಡೀ ಜ್ಞಾನದ ವಿಸ್ತಾರ
ಅಡಗಿದೆ. ಜ್ಞಾನವೆಂಬ ವೃಕ್ಷದ ಈ ಮೂರು ಸ್ಮೃತಿಗಳಾಗಿವೆ. ಹೇಗೆ ವೃಕ್ಷದ ಮೊದಲು ಬೀಜವಿರುತ್ತದೆ. ಆ
ಬೀಜದಿಂದ ಎರಡು ಎಲೆಗಳು ಬರುತ್ತವೆ ನಂತರ ವೃಕ್ಷದ ವಿಸ್ತಾರವಾಗುವುದು, ಅದೇ ರೀತಿ ಮುಖ್ಯವಾಗಿದೆ
ಬೀಜ. ತಂದೆಯ ಸ್ಮೃತಿ ನಂತರ ಎರಡು ಎಲೆ ಅರ್ಥಾತ್ ಆತ್ಮ ಮತ್ತು ಡ್ರಾಮದ ಇಡೀ ಜ್ಞಾನ. ಈ ಮೂರು
ಸ್ಮೃತಿಗಳನ್ನು ಧಾರಣೆ ಮಾಡುವವರು ಸ್ಮೃತಿ ಭವ ಅಥವಾ ಸಂಪೂರ್ಣ ವಿಜಯೀ ಭವದ ವರದಾನಿಗಳಾಗಿಬಿಡುವರು.
ಸ್ಲೋಗನ್:
ಪ್ರಾಪ್ತಿಗಳನ್ನು
ಸದಾ ಎದುರಿನಲ್ಲಿಟ್ಟುಕೊಂಡಿದ್ದಾಗ ಬಲಹೀನತೆಗಳು ಸಹಜವಾಗಿ ಸಮಾಪ್ತಿಯಾಗಿಬಿಡುವುದು.
ಅವ್ಯಕ್ತ ಸೂಚನೆ:
ಕಂಬೈಂಡ್ ರೂಪದ ಸ್ಮೃತಿಯಿಂದ ಸದಾ ವಿಜಯಿಯಾಗಿರಿ
ಸಂಗಮಯುಗದಲ್ಲಿ
ಬ್ರಹ್ಮಾಕುಮಾರ ಬ್ರಹ್ಮಾಕುಮಾರಿ ಒಂಟಿಯಾಗಿರಲು ಸಾಧ್ಯವಿಲ್ಲ. ಕೇವಲ ತಂದೆಯ ಜೊತೆಯ ಅನುಭವ,
ಕಂಬೈಂಡ್ನ ಅನುಭವ ಇಮರ್ಜ್ ಮಾಡಿ. ಈ ರೀತಿಯಲ್ಲ ತಂದೆಯಂತು ನನ್ನವರಾಗಿದ್ದಾರೆ, ಜೊತೆಯಲ್ಲಿಯೇ
ಇದ್ದಾರೆ. ಇಲ್ಲ, ಜೊತೆಯ ಪ್ರಾಕ್ಟಿಕಲ್ ಅನುಭವ ಇಮರ್ಜ್ ಮಾಡಿ. ಇದು ಮಾಯೆಯ ವಾರ್, ವಾರ್ ಅಲ್ಲ,
ಮಾಯೆಯು ಸೋತೋಗಿ ಬಿಡುವುದು. ಕೇವಲ ಗಾಬರಿಯಾಗಬೇಡಿ, ಏನಾಗುವುದು! ಸಾಹಸವನ್ನಿಟ್ಟುಕೊಳ್ಳಿ, ತಂದೆಯ
ಜೊತೆಯನ್ನು ಸ್ಮೃತಿಯಲಿಟ್ಟುಕೊಂಡರೆ ವಿಜಯ ನಿಮ್ಮ ಜನ್ಮ ಸಿದ್ಧ ಅಧಿಕಾರವಾಗುವುದು.