17.05.26 Avyakt Bapdada
Kannada
Murli 11.02.2010 Om Shanti Madhuban
“ಶಿವನ ಜನ್ಮ ದಿನದಂದು
ಕ್ರೋಧ ರೂಪಿ ಎಕ್ಕದ ಹೂವನ್ನು ಬಾಪ್ದಾದಾರವರಿಗೆ ಅರ್ಪಣೆ ಮಾಡಿ ದರ್ಪಣ ಆಗಿ. ಪವಿತ್ರ ಪ್ರವೃತ್ತಿಯ
ಪ್ರತ್ಯಕ್ಷ ಪ್ರಮಾಣದ ಮೂಲಕ ಪ್ರತ್ಯಕ್ಷತೆಯನ್ನು ಸಮೀಪ ತೆಗೆದುಕೊಂಡು ಬನ್ನಿ”
ಈ ದಿನ ಎಲ್ಲಾ ಮಕ್ಕಳು
ಸನ್ಮುಖದಲ್ಲಿ ಕುಳಿತಿರುವವರು ಮತ್ತು ದೇಶ-ವಿದೇಶದಲ್ಲಿರುವ ಎಲ್ಲಾ ಕಡೆಯ ಮಕ್ಕಳು ಬಹಳ ಖುಷಿಯಿಂದ
ತಮ್ಮ ಮತ್ತು ತಂದೆಯ ಜನ್ಮದಿನವನ್ನು ಆಚರಣೆ ಮಾಡುವ ಅನೇಕಾನೇಕ ಶುಭಾಶಯಗಳನ್ನು ಕೊಡುತ್ತಿದ್ದೇವೆ.
ತಾವು ಸನ್ಮುಖದಲ್ಲಿ ಕುಳಿತ್ತಿದಿರಿ ಮತ್ತು ದೂರ-ದೂರದಿಂದ ವಿಜ್ಞಾನದ ಸಾಧನೆಗಳಿಂದ ಎಲ್ಲಾ ಮಕ್ಕಳು
ಖುಷಿ-ಖುಷಿಯಿಂದ ಹೃದಯದ ಶುಭಾಶಯಗಳನ್ನು ಕೊಡುತ್ತಿದಾರೆ. ತಾವು ಯಾರೆಲ್ಲಾ ಇಲ್ಲಿಗೆ ಬಂದಿದ್ದೀರಿ
ಅಥವಾ ತಂದೆಯ ಜನ್ಮದಿನವನ್ನು ಆಚರಣೆ ಮಾಡಲು ಬಂದಿದ್ದೀರಿ ಮತ್ತು ತಮ್ಮ ಜನ್ಮದಿನವೂ ಆಚರಣೆ ಮಾಡಲು
ಬಂದಿದ್ದೀರಾ? ಏಕೆಂದರೆ ಈ ಜಯಂತಿ ವಿಚಿತ್ರ ಜಯಂತಿಯಾಗಿದೆ. ಏಕೆ ವಿಚಿತ್ರ ಜಯಂತಿಯಾಗಿದೆ? ತಂದೆ
ಮತ್ತು ಮಕ್ಕಳದು ಜೊತೆ-ಜೊತೆ ಇರುತ್ತದೆ. ಇಡೀ ಕಲ್ಪದಲ್ಲಿ ಇಂತಹ ಜಯಂತಿ ಆಗುವುದೇ ಇಲ್ಲ. ಇಡೀ
ಕಲ್ಪವನ್ನು ಸುತ್ತುಕೊಂಡು ಬನ್ನಿ, ವಿಚಿತ್ರ ಜಯಂತಿ ಆಗಿದೆ ಅಂದಾಗ ಬಾಪ್ದಾದಾ ಎಲ್ಲಾ ಮಕ್ಕಳನ್ನು
ಕೇಳುತ್ತಿದ್ದಾರೆ - ತಾವೆಲ್ಲಾ ತಂದೆಗೆ ಶುಭಾಶಯಗಳನ್ನು ನೀಡಲು ಬಂದಿದ್ದೀರಾ ಅಥವಾ ತಂದೆಯಿಂದ
ಶುಭಾಶಯಗಳನ್ನು ಪಡೆಯಲು ಬಂದಿದ್ದೀರಾ? ಬಾಪ್ದಾದಾ ಒಂಟಿಯಾಗಿ ಏನೂ ಮಾಡಲು ಸಾಧ್ಯವಿಲ್ಲ ಏಕೆಂದರೆ
ಜನ್ಮ ಪಡೆಯುತ್ತಲೇ ಯಜ್ಞವನ್ನು ರಚಿಸಿದ್ದಾರೆ. ಯಜ್ಞದಲ್ಲಿ ಬ್ರಾಹ್ಮಣರು ಬೇಕೆಂದರೆ ತಮ್ಮ ಜನ್ಮವೂ
ತಂದೆಯ ಜೊತೆ ಆಗಿದೆ. ಇದರ ನೆನಪಾರ್ಥ ಭಕ್ತಿಯಲ್ಲೂ ಶಿವರಾತ್ರಿಯನ್ನು ಆಚರಣೆ ಮಾಡುತ್ತಾರೆ ಅಂದಾಗ
ಜೊತೆಯಲ್ಲಿ ಸಾಲಿಗ್ರಾಮಗಳ ಪೂಜೆ ಆಗುತ್ತದೆ. ಅನೇಕಾನೇಕ ಸಾಲಿಗ್ರಾಮಗಳನ್ನು ಪೂಜೆ ಮಾಡುತ್ತಾರೆ.
ಅಂದಾಗ ಈ ಜಯಂತಿ ವಿಚಿತ್ರ ಜಯಂತಿಯಾಗಿದೆ. ಆದ್ದರಿಂದ ಈ ಜಯಂತಿಗೆ ವಜ್ರ ಸಮಾನ ಜಯಂತಿ ಎಂದು
ಹೇಳಲಾಗುತ್ತದೆ, ಅಂದಾಗ ಬಾಪ್ದಾದಾ ಎಲ್ಲಾ ಜೊತೆಗಾರ ಮಕ್ಕಳಿಗೆ ಪದಮದಷ್ಟು ಬಾಹುಗಳ ಹಾರದ
ಮಧ್ಯದಲ್ಲಿ ಪದಮಪದಮದಷ್ಟು ಶುಭಾಶಯಗಳನ್ನು ನೀಡುತ್ತಿದ್ದಾರೆ. ಇದೂ ಸಹ ತಂದೆ ಮತ್ತು ಮಕ್ಕಳ ಅತೀ
ಹೃದಯದ ಪ್ರೀತಿಯ ಚಿನ್ಹೆಯಾಗಿದೆ. ಬಾಪ್ದಾದಾರವರೊಂದಿಗೆ ಜೊತೆ ಇರುತ್ತೇವೆ, ಜೊತೆ ಹೋಗುತ್ತೇವೆ
ಎಂದು ಮಕ್ಕಳ ವಾಯಿದೆ ಇದೆ. ಅಂದಾಗ ಹೇಳಿ ಮಕ್ಕಳದೂ ತಂದೆಯ ಜೊತೆ ವಾಯಿದೆ ಇದೆಯಲ್ಲವೇ. ಸಂಗಮದಲ್ಲಿ
ಜೊತೆ ಇದೆ, ಜೊತೆ-ಜೊತೆ ಇರಲೂ ಬೇಕು ಮತ್ತು ವಿಶ್ವ ಸೇವೆಯೂ ಜೊತೆಯಲ್ಲಿದೆ. ಇರುವುದೂ ಜೊತೆಯಲ್ಲಿ,
ಹಾರುವುದೂ ಸಹ ಜೊತೆಯಲ್ಲಿಯೇ. ಅಂದಾಗ ಹೇಳಿ ತಮ್ಮದೂ ವಾಯಿದೆ ಇದೆಯಲ್ಲವೇ ಜೊತೆ ಇರುತ್ತೇವೆ, ಜೊತೆ
ಹೋಗುತ್ತೇವೆ ಮತ್ತು ಬ್ರಹ್ಮಾ ತಂದೆಯ ಜೊತೆ ವಿಶ್ವದ ಮೇಲೆ ರಾಜ್ಯ ಮಾಡುತ್ತೇವೆ. ವಾಯಿದೆ
ಇದೆಯಲ್ಲವೇ, ಪಕ್ಕಾ ವಾಯಿದೆ ಇದೆಯಲ್ಲವೇ? ಇದೇ ಶಿವ ಜಯಂತಿಯ ವಿಶೇಷತೆಯಾಗಿದೆ.
ಭಿನ್ನ-ಭಿನ್ನ ಸ್ಥಾನಗಳ
ಮಕ್ಕಳು ಬಹಳ ಖುಷಿಯಿಂದ ಶುಭಾಶಯಗಳನ್ನು ಕಳುಹಿಸುತ್ತಿರುವುದನ್ನು ಬಾಪ್ದಾದಾರವರು ಅಮೃತವೇಳೆಯಿಂದ
ನೋಡಿದ್ದಾರೆ. ತಾವಂತೂ ಈಗ ಸನ್ಮುಖದಲ್ಲಿ ಶುಭಾಶಯಗಳನ್ನು ತೆಗೆದುಕೊಳ್ಳುತ್ತಿದ್ದೀರಿ ಮತ್ತು
ಪಡೆದುಕೊಳ್ಳುತ್ತಿದ್ದೀರಿ. ತೆಗೆದುಕೊಳ್ಳುವುದು ಮತ್ತು ಕೊಡುವುದು ಜೊತೆಯಲ್ಲಿದೆ. ಎಷ್ಟು
ಭಾಗ್ಯವಂತ ಭಗವಂತನ ಮಕ್ಕಳಾಗಿದ್ದೀರಿ ಯಾರು ಸನ್ಮುಖದಲ್ಲಿ ಜನ್ಮದಿನವನ್ನು ಆಚರಣೆ ಮಾಡುತ್ತಿದ್ದೀರಿ.
ಎಲ್ಲರ ಚೆಹರೆ ಖುಷಿಯಾಗಿದೆ, ಖುಷಿಯಿಂದ ಹಾರುತ್ತಿರುವುದು ಕಂಡು ಬರುತ್ತಿದೆ. ಒಂದು ಕಡೆ ಬಾಪ್ದಾದಾ
ಮಕ್ಕಳ ಭಾಗ್ಯವನ್ನು ನೋಡುತ್ತಿದ್ದಾರೆ ಮತ್ತು ಇನ್ನೊಂದು ಕಡೆ ಭಕ್ತರನ್ನೂ ನೋಡುತ್ತಿದ್ದಾರೆ. ಅವರು
ಇದುವರೆಗೂ ಬನ್ನಿ ಎಂದು ಕರೆಯುತ್ತಿದಾರೆ ಮತ್ತೆ ತಾವು ಜೊತೆಯಲ್ಲಿ ಆಚರಣೆ ಮಾಡುತ್ತಿದ್ದೀರಿ.
ಬಾಪ್ದಾದಾರವರು ನೋಡಿದರು, ಭಕ್ತರ ಅನುಭೂತಿಯೂ ಕಡಿಮೆ ಇಲ ಯಾವುದು ಪ್ರತ್ಯಕ್ಷವಾಗಿ ತಾವು
ಮಾಡುತ್ತಿರುವುದನ್ನು ನೋಡಿದರು. ಅದರ ನೆನಪಾರ್ಥವಾಗಿ ಎಷ್ಟು ಒಳ್ಳೆಯ ವಿಧಿಯಿಂದ ನೆನಪಾರ್ಥವನ್ನು
ಮಾಡಿದರು. ತಾವು ವ್ರತ ತೆಗೆದುಕೊಂಡರೆ ಅವರೂ ಸಹ ವ್ರತದ ನೆನಪಾರ್ಥವನ್ನು ಮಾಡಿದ್ದಾರೆ. ಅವರು ಒಂದು
ದಿನ ಅಥವಾ ಸ್ವಲ್ಪ ಸಮಯಕ್ಕಾಗಿ ವ್ರತವನ್ನು ಇಟ್ಟುಕೊಳ್ಳುತ್ತಾರೆ ಆದರೆ ತಾವು ಯಾವ ವ್ರತವನ್ನು
ಇಟ್ಟುಕೊಂಡಿದ್ದೀರಿ? ಎಲ್ಲರೂ ತಂದೆಯ ಮುಂದೆ ವ್ರತವನ್ನು ಇಟ್ಟುಕೊಳ್ಳುವ ಪ್ರತಿಜ್ಞೆ
ಮಾಡಿದ್ದೀರಲ್ಲವೇ! ಬಾಬಾ ನಾವು ಈ ಪೂರ್ತಿ ಜನ್ಮಕ್ಕಾಗಿ ಬ್ರಾಹ್ಮಣ ಜನ್ಮಕ್ಕಾಗಿ ವ್ರತವನ್ನು ಧಾರಣೆ
ಮಾಡುತ್ತೇವೆ ಎಂದು ತಾವು ತಂದೆಯ ಮೂಲಕ ಖುಷಿ-ಖುಷಿಯ ವ್ರತವನ್ನು ತೆಗೆದುಕೊಂಡಿದ್ದೀರಿ, ವ್ರತವನ್ನು
ಧಾರಣೆ ಮಾಡಿದ್ದೀರಲ್ಲವೇ? ಯಾವ ವ್ರತವನ್ನು ಧಾರಣೆ ಮಾಡಿದ್ದೀರಿ? ಪವಿತ್ರತೆಯ ವ್ರತವನ್ನು ಧಾರಣೆ
ಮಾಡಿದ್ದೀರಿ. ಒಂದು ಜನ್ಮದ ವ್ರತವನ್ನು ಮಾಡಿದ್ದೀರಿ ಆದರೆ ಒಂದು ಜನ್ಮದ ಪವಿತ್ರತೆಯ ವ್ರತ 21
ಜನ್ಮಗಳು ನಡೆಯುತ್ತದೆ ಅಥವಾ ಸ್ವಲ್ಪ ಸಮಯಕ್ಕಾಗಿ ತಿನ್ನುವುದು, ಕುಡಿಯುವುದು ಮತ್ತು ಜಾಗರಣೆಯ
ಕರ್ತವ್ಯವನ್ನು ಮಾಡುತ್ತಾರೆ. ಆದರೆ ತಾವು ಈಗಿನ ಒಂದು ಜನ್ಮದ ಜಾಗರಣೆಯಿಂದ ಅರ್ಥಾತ್ ಅಂಧಕಾರದಿಂದ
ಬೆಳಕಿನಲ್ಲಿ ಬಂದಿದ್ದೀರಿ ಮತ್ತು ಈ ಜಾಗರಣೆಯೂ ತಮ್ಮದು 21 ಜನ್ಮಗಳು ನಡೆಯುತ್ತದೆ. ಇಡೀ
ವಿಶ್ವದಲ್ಲಿ ಇಂತಹ ಜಾಗರಣೆ ಮಾಡಿದ್ದಾರೆ, ಯಾವುದು ವಿಶ್ವದಲ್ಲಿ ತಮ್ಮ ಜಾಗರಣೆಯಿಂದ ಇಡೀ ವಿಶ್ವ
ಜಾಗೃತ ಜ್ಯೋತಿಯಾಗಿ ಇರುತ್ತದೆ. ಯಾವುದೇ ದುಃಖ-ಅಶಾಂತಿಯ ಅಂಧಕಾರ ಇರುವುದಿಲ್ಲ ಅಂದಾಗ ಹೇಳಿ ತಾವು
ಇಡೀ ವಿಶ್ವವನ್ನು ಅಂಧಕಾರದಿಂದ ಬೆಳಕಿನಲ್ಲಿ ತೆಗೆದುಕೊಂಡು ಬಂದಿದ್ದೀರಿ. ಈ ಬೇಹದ್ದಿನ ವ್ರತ
ಇಷ್ಟವಾಗುತ್ತದೆಯೇ? ಪರಿಶ್ರಮ ಆಗುವುದಿಲ್ಲ ತಾನೇ? ಸಹಜವೋ ಅಥವಾ ಕಷ್ಟವೋ? ಸಹಜ ಆಗುತ್ತದೆಯೇ?
ಯಾರಿಗೆ ಸಹಜ ಎನಿಸುತ್ತದೆ ಅವರು ಕೈ ಎತ್ತಿ. ಕೆಲವೊಮ್ಮೆ ಕಷ್ಟ ಎನಿಸುವುದಿಲ್ಲ? ಕೆಲವೊಮ್ಮೆ
ಎನಿಸುತ್ತದೆಯೇ? ಇಲ್ಲ ಏಕೆಂದರೆ ಪವಿತ್ರತೆ ನಮ್ಮ ಜನ್ಮಸಿದ್ಧ ಅಧಿಕಾರವಾಗಿದೆ ಎಂದು ಗೊತ್ತಿದೆ,
ಆದ್ದರಿಂದ ಪವಿತ್ರತೆ ಕೇವಲ ಬ್ರಹ್ಮಚರ್ಯ ಅಲ್ಲ ಆದರೆ ಮನಸಾ, ವಾಣಿ, ಕರ್ಮ ಸಂಬಂಧ-ಸಂಪರ್ಕದಲ್ಲೂ
ಪವಿತ್ರತೆ. ಪವಿತ್ರತೆಯ ಸಂಸ್ಕಾರವನ್ನು ಸಹಜವಾಗಿ ಧಾರಣೆ ಮಾಡುವವರು ಅಂದಾಗ ಪವಿತ್ರತೆಯ
ಸಂಕಲ್ಪವನ್ನು ಮಾಡಿದಿರಿ ಆದರೆ ಈಗ ಸಮಯದನುಸಾರ ಬಾಪ್ದಾದಾ ಸಮಯದ ಎಚ್ಚರಿಕೆಯನ್ನು ನೀಡುತ್ತಿದ್ದಾರೆ.
ಅಂದಾಗ ಹೇಗೆ ಪವಿತ್ರತೆಯ ವ್ರತದ ಸಾಹಸ ಇಟ್ಟುಕೊಂಡಿದ್ದೀರಿ, ತಮ್ಮ ಸ್ವಧರ್ಮ ಎಂದು ತಿಳಿದು ಧಾರಣೆ
ಮಾಡಿದಿರಿ. ಹಾಗೆ ಬೇರೆ ಭೂತ ಕ್ರೋಧ ಆಗಿದೆ. ಈ ದಿನ ಬಾಪ್ದಾದಾ ಕೇಳುತ್ತಿದ್ದಾರೆ - ಒಂದು
ಮಹಾಭೂತದ ವ್ರತವನ್ನು ತೆಗೆದುಕೊಂಡು ವೃತ್ತಿಯನ್ನು ಬದಲಾವಣೆ ಮಾಡಿಕೊಂಡಿದ್ದೀರಿ ಆದರೆ ಬೇರೆ ಭೂತ
ಕ್ರೋಧವಾಗಿದೆ. ಕ್ರೋಧದ ಭೂತದ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಕೊಳ್ಳಲು ಸಂಕಲ್ಪ ಮಾಡಿದ್ದೀರೋ
ಅಥವಾ ಇದು ಎರಡನೇ ವಿಕಾರ ಆಗಿರುವ ಕಾರಣ ಬಿಟ್ಟಿದ್ದೀರಾ? ಏಕೆಂದರೆ ಕ್ರೋಧ ಎಲ್ಲರ ಸಂಬಂಧದಲ್ಲಿ
ಬಂದಾಗ ಈಗಿನ ಸಮಯದಲ್ಲಿ ಜನ್ಮದಿನವನ್ನು ಆಚರಣೆ ಮಾಡುತ್ತೀರಿ ಅಂದಾಗ ಪರಸ್ಪರ ಉಡುಗೊರೆಯನ್ನು
ಕೊಡುತ್ತೀರಿ ಅಂದಾಗ ಈ ದಿನ ಬಾಪ್ದಾದಾ ಧೈರ್ಯ ಮತ್ತು ತಂದೆಯ ಸಹಯೋಗದಿಂದ ಮೊದಲನೇ ನಂಬರಿನ ವಿಕಾರದ
ಮೇಲೆ ವಿಜಯವನ್ನು ಪ್ರಾಪ್ರಿ ಮಾಡಿಕೊಂಡು ನಡೆಯುತ್ತಿರುವುದನ್ನು ನೋಡಿದ್ದೇವೆ, ಅದೇ ರೀತಿ ಕ್ರೋಧದ
ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಕೊಳ್ಳಲು ಸಾಧ್ಯವೇ? ಏಕೆಂದರೆ ಯಾವುದೇ ಭೂತ ತೊಂದರೆಯಂತೂ
ಕೊಡುತ್ತದೆ ಮತ್ತು ಕ್ರೋಧದ ಭೂತ ಬೇರೆಯವರ ಸಂಬಂಧದಲ್ಲಿ ಬರುತ್ತದೆ, ಸಂಪರ್ಕದಲ್ಲಿ ಬರುತ್ತದೆ,
ತಮ್ಮ ಮನಸ್ಸಿನಲ್ಲೂ ಕ್ರೋಧ ಬಂದಾಗ ಸ್ವಯಂ ಸಹ ಕ್ರೋಧದಿಂದ ನಷ್ಟ ಆಗುತ್ತದೆ. ತಂದೆಯ ಜನ್ಮದಿನವನ್ನು
ಆಚರಣೆ ಮಾಡಲು ಬಂದಿದ್ದೀರಿ ಅಂದಾಗ ಈ ದಿನ ಬಾಪ್ದಾದಾ ಭಾರತ ಅಥವಾ ವಿದೇಶದ ಎಲ್ಲಾ ಮಕ್ಕಳಿಂದ
ಕ್ರೋಧದ ಉಡುಗೊರೆಯನ್ನು ತೆಗೆದುಕೊಳ್ಳಲು ಬಯಸುತ್ತಾರೆ. ಕೊಡಲು ಆಗುತ್ತದೆಯೇ? ಆಗುತ್ತದೆಯೇ? ಈ
ದಿನ ತಂದೆಗೆ ಉಡುಗೊರೆ ರೂಪದಲ್ಲಿ ಕೊಡಲು ಸಾಧ್ಯ ಆಗುತ್ತದೆ, ಮನಸ್ಸಿನಲ್ಲೂ ಇಲ್ಲ, ಸ್ವಪ್ನದಲ್ಲೂ
ಇಲ್ಲ, ಈ ರೀತಿ ತಮ್ಮನ್ನು ಸಂಕಲ್ಪ ಇಟ್ಟುಕೊಂಡು ಸಾಹಸದಿಂದ ನಡೆಸುವ ಶಕ್ತಿ ಇದೆಯೇ? ಇದೆಯೇ! ಯಾರು
ತಂದೆಗೆ ಸಾಹಸದಿಂದ ಸಂಕಲ್ಪ ಮಾಡುತ್ತಾರೆ, ಅವರು ಮಾಡುತ್ತಾರೆ ಮತ್ತು ತಂದೆಯಿಂದ ಉಡುಗೊರೆಯನ್ನು
ತೆಗೆದುಕೊಳ್ಳುತ್ತಾರೆ. ಉಡುಗೊರೆಯ ರೂಪದಲ್ಲಿ ಕೊಡಿ ಮತ್ತುಉಡುಗೊರೆಯನ್ನು ತೆಗೆದುಕೊಳ್ಳಿ.
ಒಂದುವೇಳೆ ಕ್ರೊಧದ ಮೇಲೆ ಜಯಗಳಿಸಿದರೆ ಬೇರೆಯವರಿಗೂ ಸಹ ಮಾಡಲು ಧೈರ್ಯ ಬರುತ್ತದೆ ಅಂದಾಗ ನಾವು
ಉಡುಗೊರೆಯನ್ನು ಕೊಟ್ಟು ಮತ್ತು ತಂದೆಯಿಂದ ಉಡುಗೊರೆಯನ್ನು ತೆಗೆದುಕೊಳ್ಳುತ್ತೇವೆ ಎಂದು ಯಾರು
ತಿಳಿದುಕೊಳ್ಳುತ್ತೀರಿ ಅವರು ಕೈ ಎತ್ತಿ. ಒಳ್ಳೆಯದು ಬಾವುಟವನ್ನು ಅಲುಗಾಡಿಸುತ್ತಿದ್ದೀರಿ.
ಕುಮಾರಿಯರೂ ಸಹ ನೋಡುತ್ತಿದ್ದಾರೆ.
ಬಾಪ್ದಾದಾರವರಿಗೆ ಮಕ್ಕಳ
ಸಾಹಸವನ್ನು ನೋಡಿ ಬಹಳ ಚೆನ್ನಾಗಿ ಎನಿಸುತ್ತದೆ. ತಾವು ದೃಶ್ಯವನ್ನು ನೋಡುತ್ತಿದ್ದೀರಲ್ಲವೇ. ಫೋಟೋ
ತೆಗೆಯಿರಿ ಮತ್ತು ಕೈ ಎತ್ತಿ. ಎಲ್ಲರ ಫೋಟೋ ತೆಗೆಯಿರಿ. ಬಾಪ್ದಾದಾ ಈ ಸಾಹಸದ ಮೇಲೆ ತಮಗೆ
ಪ್ರತಿದಿನ ಅಮೃತವೇಳೆ ಮಿಲನ ಮಾಡಿದಾಗ ವಿಶೇಷ ಅನುಭವಿ ಆತ್ಮ ಸಹಜವಾಗಿ ಆಗಲು ಶುಭಾಶಯಗಳನ್ನು
ಕೊಡುತ್ತೇವೆ. ಏಕೆಂದರೆ ಇಷ್ಟೊಂದು ಜನ ಇರುತ್ತಾ ತಮ್ಮ-ತಮ್ಮ ಸ್ಥಾನದಲ್ಲಿ ಇದ್ದರೂ ಒಟ್ಟಿಗೆ
ಇರುತ್ತಾರೆ. ಪ್ರವೃತ್ತಿಯನ್ನು ಸಂಭಾಲನೆ ಮಾಡುತ್ತಾರೆ, ಮನೆ-ಮಠವನ್ನು ಬಿಟ್ಟು ಹೋಗಿಲ್ಲ ಆದರೆ
ಪವಿತ್ರ ಪ್ರವೃತ್ತಿಯನ್ನು ಮಾಡಿಕೊಂಡರೆ ಏನಾಗುತ್ತದೆ? ಆತ್ಮಗಳ ಕ್ಯೂ (ಸಾಲು) ಆಗಿ ಬಿಡಲಿ ಎಂದು
ತಮ್ಮೆಲ್ಲರ ಹೃದಯದಲ್ಲಿ ಶುಭ ಭಾವನೆ ಇದೆ, ಆ ಸಾಲು ತಮಗೆ ಕಂಡು ಬರುತ್ತದೆ ಏಕೆಂದರೆ ಕ್ರೋಧ
ಪ್ರತ್ಯಕ್ಷವಾಗಿ ಕಂಡು ಬರುತ್ತದೆ. ಪ್ರಾಕ್ಟಿಕಲ್ ನೋಡಿದಾಗ ಇವರಂತೂ ಕೇವಲ ಪವಿತ್ರತೆ ಎಂದು
ಹೇಳುವುದಿಲ್ಲ ಆದರೆ ಪವಿತ್ರವಾಗಿ ಇದ್ದು ತೋರಿಸುತ್ತಾರೆ, ಪ್ರತ್ಯಕ್ಷತೆಯನ್ನು ಬಯಸಿದರೆ ಇವರು
ಪ್ರತ್ಯಕ್ಷ ಪ್ರಮಾಣ ಆಗಿದ್ದಾರೆ. ಇದರಿಂದ ಎಲ್ಲರೂ ಆಕರ್ಷಿತರಾಗಿ ಸ್ವತಃವಾಗಿಯೇ ಬರುತ್ತಾರೆ. ಆದರೆ
ತಿಳಿಸಲೇ? ಮುಂದೆ ತಿಳಿಸುವುದೇ? ಕ್ರೋಧ ಬರುವ ಕಾರಣ ಮೆಜಾರಿಟಿ ಎಲ್ಲಾದರೂ ಈರ್ಷ್ಯೆ ಮತ್ತು
ಜೊತೆಯಲ್ಲಿ ಏನಾದರೂ ನೋಡಿ ನಡೆಯುತ್ತಾ ವ್ಯರ್ಥ ಸಂಕಲ್ಪಗಳ ಬೀಜವೂ ಕ್ರೋಧವನ್ನು ತೆಗೆದುಕೊಂಡು
ಬರುತ್ತದೆ. ಏಕೆಂದರೆ ವ್ಯರ್ಥ ಸಂಕಲ್ಪಗಳು ಬೀಜವಾಗಿದೆ. ಈ ಬೀಜದಿಂದ ಕ್ರೋಧವೂ ಉತ್ಪನ್ನ ಆಗುತ್ತದೆ
ಮತ್ತು ಇದಕ್ಕೆ ಒಂದು ಶಬ್ದ ನಿಮಿತ್ತ ಆಗುತ್ತದೆ, ಆ ಒಂದು ಶಬ್ದದ ಬೀಜವನ್ನು ಒಂದುವೇಳೆ ಸಮಾಪ್ತಿ
ಮಾಡಿ ಬಿಟ್ಟರೆ ಸಹಜ ಆಗಿ ಬಿಡುತ್ತದೆ. ಆ ಒಂದು ಶಬ್ದ ಏಕೆ? ಇದು ಏಕೆ? ಆಗಿದೆ. ಇದು ಏಕೆ ಆಯಿತು?
ಇದನ್ನು ಏಕೆ ಮಾಡಿದರು? ಇದನ್ನು ಏಕೆ ಮಾಡುತ್ತಾರೆ? ಈ ಕ್ಯೂ ಎಂಬ ಶಬ್ದದ ದೊಡ್ಡ ಸಾಲು ಇದೆ ಮತ್ತೆ
ನೋಡಿ ಕ್ಯೂ ಎಂಬ ಶಬ್ದ ಇಂಗ್ಲೀಷ್ನಲ್ಲಿ ಬರೆದರೆ ಎಷ್ಟು ಕಷ್ಟ ಪಟ್ಟು ಬರೆಯಲಾಗುತ್ತದೆ ಮತ್ತು
“’ಎ’” ಎಂದು ಬರೆಯಿರಿ. ಎಷ್ಟು ಸಹಜವಾಗಿದೆ. ಅಂದಾಗ ಬಾಪ್ದಾದಾ ಈ ಏಕೆ ಎಂಬ ಸಾಲು ಸಮಾಪ್ತಿ ಮಾಡಲು
ಬಯಸುತ್ತಾರೆ. ತಮ್ಮೆಲ್ಲರ ಯಾವ ಆಸೆ ಇದೆ ಈಗ ಬೇಗ-ಬೇಗ ತಂದೆಯ ಪ್ರತ್ಯಕ್ಷತೆ ಆಗಲಿ ಎಂದು.
ಪ್ರತಿಯೊಬ್ಬರ ಹೃದಯದಲ್ಲಿ ತಂದೆಯ ಸ್ನೇಹದ ಬಾವುಟ ಹಾರಿಸಲಿ ಮತ್ತು ಹೃದಯದಲ್ಲಿ ನಮ್ಮ ಬಾಬಾ
ಬಂದಿದ್ದಾರೆ, ಮಧುರ ಬಾಬಾ ಬಂದಿದ್ದಾರೆ ಎಂದು ಹಾಡಲಿ. ಇದನ್ನೇ ಬಯಸುತ್ತೀರಲ್ಲವೇ ಬೇಗ-ಬೇಗ
ಪ್ರತ್ಯಕ್ಷತೆಯ ಬಾವುಟ ಎಲ್ಲರ ಹೃದಯದಲ್ಲಿ ಹಾರಲಿ. ಇದರ ಕಾರಣ ಏಕೆ, ಏನು, ಹೇಗೆ ಆಗುತ್ತದೆ ಎಂಬ
ಭಾಷೆಯನ್ನು ಸಮಾಪ್ತಿ ಮಾಡಿ, ಯಾವುದಾದರೂ ಹೇಳಬೇಕೆಂದರೆ ಶುಭವನ್ನೇ ಮಾತನಾಡಿ. ಏಕೆ-ಏಕೆ ಎಂದು
ಮಾತನಾಡಬೇಡಿ. ಬಾಪ್ದಾದಾ ಮಕ್ಕಳ ಹಾಸ್ಟಲ್ನ್ನು ತೆರೆದಾಗ, ಪಾಕಿಸ್ಥಾನದ ಮಾತಾಗಿದೆ, ಆದಿಯಲ್ಲಂತೂ
ಜಗದಾಂಬ ಮಕ್ಕಳಿಗೆ ಇದನ್ನೇ ಹೇಳುತ್ತಿದ್ದರು - ಏಕೆ-ಏನು ಎಂಬ ಭಾಷೆ ಮಾತನಾಡಬೇಡಿ. ಏಕೆ-ಏನು ಎಂದು
ಯಾರು ಹೇಳುತ್ತಾರೆ? ಅದು ಚೆನ್ನಾಗಿ ಎನಿಸುತ್ತದೆಯೇ? ಈಗ ಏಕೆ-ಏಕೆ ಎಂಬ ಕ್ಯೂ ಮಾಡಬೇಡಿ. ಹಾಜಿ [ಆಯಿತು]
ಒಳ್ಳೆಯದು, ಬಹಳ ಒಳ್ಳೆಯದು ನಾವೆಲ್ಲಾ ಸೇರಿ ಮಾಡುತ್ತೇವೆ, ಹಾರುತ್ತೇವೆ - ಈ ರೀತಿ ಮಾತನಾಡಿ.
ಭಾಷೆಯನ್ನು ಪರಿವರ್ತನೆ ಮಾಡಲು ಆಗುತ್ತದೆಯೇ? ಏಕೆ-ಏನು ಅಲ್ಲ ಈ ಕ್ಯೂ ಬಿಟ್ಟಾಗ ಆ ಕ್ಯೂ ಆಗುತ್ತದೆ.
[ಆತ್ಮಗಳ ಸಾಲು ಬರುತ್ತದೆ]
ನೋಡಿ ಶಿವನ ಮೇಲೆ ಎಕ್ಕದ
ಹೂಗಳನ್ನು ಹಾಕುತ್ತಾರೆ ಈ ದಿನ ಶಿವರಾತ್ರಿಯನ್ನು ಆಚರಿಸುತ್ತಿದ್ದೀರಿ, ಶಿವನ ಜನ್ಮದಿನವನ್ನು
ಆಚರಣೆ ಮಾಡುತ್ತೀರಿ ಅಂದಾಗ ಎಲ್ಲರೂ ಈ ಕ್ರೋಧದ ಎಕ್ಕದ ಹೂವನ್ನು ಬಾಪ್ದಾದಾರವರಿಗೆ ಅರ್ಪಣೆ
ಮಾಡಿದಾಗ ತಾವು ದರ್ಪಣ ಆಗಿ ಬಿಡುತ್ತೀರಿ. ಇಷ್ಟ ಅಲ್ಲವೇ. ಇಷ್ಟ ಅಲ್ಲವೇ? ಒಳ್ಳೆಯದು. ಈಗ ಹೋಲಿ
ದಿನದಂದು ಬಾಪ್ದಾದಾ ಬಂದಾಗ ಅದರಲ್ಲಿ ರಿಜಲ್ಟನ್ನು ನೋಡುತ್ತಾರೆ, ಸುಸ್ತಾಗಬೇಡಿ. ಆಗಲಿಲ್ಲ,
ನಿಶ್ಚಯ ಬುದ್ಧಿಯವರಾಗಿ ಮಾಡಿ, ಮಾಡಲೇಬೇಕು ಮತ್ತು ಕೈ ಎತ್ತಿದ್ದೀರಿ, ಕೈ ಎತ್ತುವುದು ಅರ್ಥಾತ್
ತಂದೆಗೆ ಕೊಟ್ಟು ಬಿಡುವುದು. ಕೊಟ್ಟಿದ್ದೀರಲ್ಲವೇ? ಮತ್ತೆ ಕೈ ಎತ್ತಿ. ದಾದಿಗಳು ನೋಡುತ್ತಿದ್ದಾರೆ,
ನೋಡುತ್ತಿದ್ದೀರಾ? ಚಪ್ಪಾಳೆ ಹೊಡೆಯಿರಿ. ಎಂದೂ ಧೈರ್ಯವನ್ನು ಬಿಡಬಾರದು. ಒಂದುವೇಳೆ ಸ್ವಲ್ಪವಾದರೂ
ಕಡಿಮೆ ಆದರೆ ಭವಿಷ್ಯಕ್ಕಾಗಿ ಧೈರ್ಯವನ್ನು ಬಿಟ್ಟು ಬಿಡಬಾರದು. ಮುಂದುವರೆಯುತ್ತಿರಬೇಕು.
ಬಾಪ್ದಾದಾರವರು ಕಂಬೈನ್ಡ್ ಆಗಿದ್ದಾರೆ. ಜೊತೆ ಇದ್ದಾರೆ ಎಂದು ಹೇಳುವುದಿಲ್ಲ, ಕಂಬೈನ್ಡ್
ಆಗಿದ್ದಾರೆ ಎಂದು ಹೇಳುತ್ತೀರಿ. ಅಂದಾಗ ಅಂತಹ ಸಮಯದಲ್ಲಿ ಏನಾದರೂ ಆದರೆ ಬಾಪ್ದಾದಾ ಕಂಬೈನ್ಡ್
ಆಗಿದ್ದಾರೆ. ಅವರನ್ನು ಎದುರಿನಲ್ಲಿ ಕರೆದುಕೊಂಡು ಬಂದು ಅರ್ಪಣೆ ಮಾಡಿ ಬಿಡಿ. ಆದರೆ ಬಾಪ್ದಾದಾ
ಎಲ್ಲಾ ಮಕ್ಕಳು ನಂಬರ್ವನ್ ಆಗಲಿ ಎಂದು ಬಯಸುತ್ತಾರೆ. ಕೊಟ್ಟಿರುವ ವಸ್ತು ತಂದೆಯದು ಆಗಿ ಬಿಟ್ಟಿದೆ.
ಕೈ ಎತ್ತಿದ್ದೀರಿ ಅರ್ಥಾತ್ ಕೊಟ್ಟಿರುವ ವಸ್ತು ತಮ್ಮದಲ್ಲ ಅದು ತಂದೆಯದಾಗಿದೆ. ಒಂದುವೇಳೆ
ಸಂಕಲ್ಪದಲ್ಲೂ ಬಂದರೆ ಸ್ವಾರ್ಥ ಆಗಿ ಬಿಡುತ್ತದೆ. ಇದು ಕೆಟ್ಟದ್ದಾಗಿದೆ. ಕೊಟ್ಟಿರುವ ವಸ್ತು ಎಂದೂ
ವಾಪಸ್ ತೆಗೆದುಕೊಳ್ಳುವುದಿಲ್ಲ ಏಕೆಂದರೆ ಅದು ನನ್ನದಲ್ಲ.
ಈ ದಿನ ಬಾಪ್ದಾದಾ ಎಲ್ಲಾ
ಕಡೆಯ ಯಾರು ಸ್ಕ್ರೀನ್ನಲ್ಲೂ ನೋಡುತ್ತಿದ್ದಾರೆ, ಅಲ್ಲಿ ಕುಳಿತಿದ್ದರೂ ಎಲ್ಲರೂ ಖುಷಿ-ಖುಷಿಯಿಂದ
ನೋಡುತ್ತಲೂ ಇದ್ದಾರೆ ಮತ್ತೆ ಸಂಕಲ್ಪವನ್ನೂ ಮಾಡುತ್ತಿದ್ದಾರೆ. ಅಂದಾಗ ಮಧುಬನ ಮತ್ತು ಎಲ್ಲಾ
ಸೇವಾಕೇಂದ್ರಗಳು ಏನಾಗಿ ಬಿಡುತ್ತವೆ? ಏನಾಗಿ ಬಿಡುತ್ತವೆ? ಎಲ್ಲಾ ಸೇವಾಕೇಂದ್ರಗಳು ನಿರ್ವಿಘ್ನದ
ವರದಾನಿಗಳಾಗಿ ಬಿಡುತ್ತವೆ. ಇಷ್ಟ ಅಲ್ಲವೇ, ಇಷ್ಟ ಇದೆಯೇ? ಏಕೆಂದರೆ ಬಾಪ್ದಾದಾ ಈಗ ಅಚಾನಕ್
ದುಃಖ-ಅಶಾಂತಿಯ ಕಾರಣ ಪರಿಸ್ಥಿತಿ ಆ ರೀತಿ ಬರುತ್ತದೆ ಯಾವುದರಿಂದ ತಮಗೆ ಎಲ್ಲರ ಮೇಲೆ ದಯೆ
ಬರುತ್ತದೆ ಏಕೆಂದರೆ ತಾವು ಪೂರ್ವಜರು ಆಗಿದ್ದೀರಿ, ಪೂಜ್ಯರೂ ಆಗಿದ್ದೀರಿ. ಅಂದಾಗ ಪೂರ್ವಜರು
ಯಾವುದಾದರೂ ದುಃಖ ಅಥವಾ ತೊಂದರೆಗಳನ್ನು ನೋಡಲು ಸಾಧ್ಯವಿಲ್ಲ. ಯಾರ ಮೇಲೆ ಪ್ರೀತಿ ಇರುತ್ತದೆ, ದಯೆ
ಇರುತ್ತದೆ ಅವರ ದುಃಖವನ್ನು ನೋಡಲು ಸಾಧ್ಯವಿಲ್ಲ. ಅಂದಾಗ ಸಮಯ ತಮ್ಮನ್ನು ಪರಿವರ್ತನೆ ಮಾಡಲಿ ಎಂದು
ಬಾಪ್ದಾದಾ ತಿಳಿಯುತ್ತಾರೆ. ಇದಕ್ಕಿಂತ ಮೊದಲು ತಾವು ಪುರುಷಾರ್ಥದ ಪ್ರಾಲಬ್ದವನ್ನು ಈಗಿನಿಂದ
ಅನುಭವ ಮಾಡಿ ಏಕೆಂದರೆ ತಮಗೆ ಕಲಿಸುವವರ ಸಮಯ ಇಲ್ಲ, ಸಮಯ ತಮ್ಮ ಟೀಚರ್ ಅಲ್ಲ. ಹೋಲಿ ದಿನದಂದು
ಪ್ರತಿಯೊಬ್ಬರೂ ತಮ್ಮ ರಿಜಲ್ಟ್ ದೊಡ್ಡದಾಗಿ ಬರೆಯಬೇಡಿ, ಅದನ್ನು ಓದುವ ಸಮಯವೂ ಇರುವುದಿಲ್ಲ. ಆದರೆ
ಬಾಪ್ದಾದಾ ಮೊದಲೂ ತಿಳಿಸಿದರು - ಹೇಗೆ ತಮಗೆ ವರದಾನದ ಸಣ್ಣಕಾರ್ಡ್ ಸಿಗುತ್ತದೆಯಲ್ಲವೇ, ಎಷ್ಟು
ಚಿಕ್ಕದಾಗಿರುತ್ತದೆ, ಅದರ ಮೇಲೆ ಓ.ಕೆ. ಎಂದು ಬರೆಯಿರಿ. ಒಂದುವೇಳೆ ತಮ್ಮಲ್ಲಿ ಪುರುಷಾರ್ಥ
ಮಾಡುತ್ತಾ ಏನಾದರೂ ಆದರೆ ಓ.ಕೆ. ಮಧ್ಯದಲ್ಲಿ ಗೆರೆ ಎಳೆಯಬೇಕು. ಸಹಜ ಅಲ್ಲವೇ. ಇಷ್ಟು ಕಾಗದವನ್ನು
ವ್ಯರ್ಥ ಮಾಡಬೇಡಿ, ಒಂದುವೇಳೆ ಹೆಚ್ಚು ಬಾರಿ ಆದರೆ ಒಮ್ಮೆ, ಎರಡು ಬಾರಿ, ಮೂರನೇ ಬಾರಿ ಲೈನ್
ಮಾಡುತ್ತಾ ಹೋಗಬೇಕು ಮತ್ತು ಹೋಲಿಗೆ ಮೊದಲು ಮಧುಬನಕ್ಕೆ ಕಳುಹಿಸಬೇಕು. ಭಲೆ ಒಟ್ಟಿಗೆ ಸೇರಿಸಿ
ಟೀಚರ್ ಕಳುಹಿಸಲಿ. ಬಾಪ್ದಾದಾರವರ ಬಳಿ ರಿಜಲ್ಟ್ ತಲುಪಿ ಬಿಡುತ್ತದೆ. ಇದರಲ್ಲಿ ಯಾರು ನಂಬರ್ವನ್
ಆಗಿದ್ದಾರೆ? ಬಾಪ್ದಾದಾ ತಮಗೆ ಪದಮಪದಮದಷ್ಟು ಹೃದಯದ ಸ್ನೇಹದ ಉಡುಗೊರೆಯನ್ನು ಕೊಡುತ್ತಾರೆ.
ಡಬಲ್ ವಿದೇಶಿಗಳಲ್ಲವೇ!
ಕೈ ಎತ್ತಿ. ನಂಬರ್ ತೆಗೆದುಕೊಳ್ಳುತ್ತೀರಲ್ಲವೇ. ನೋಡೋಣ ಭಾರತದವರು ತೆಗೆದುಕೊಳ್ಳುತ್ತಾರೋ ಅಥವಾ
ವಿದೇಶದವರೋ. ಒಳ್ಳೆಯದು. ಬಾಪ್ದದಾರವರಂತೂ ಎಲ್ಲರನ್ನು ಭರವಸೆವುಳ್ಳವರನ್ನಾಗಿ ನೋಡುವುದಿಲ್ಲ ಆದರೆ
ತಂದೆಯ ಆಸೆಗಳನ್ನು ಪೂರ್ಣ ಮಾಡುವ ತಂದೆಯ ಆಸೆಗಳ ದೀಪದ ರೂಪದಲ್ಲಿ ನೋಡಲು ಬಯಸುತ್ತಾರೆ. ಮಧುಬನದವರು
ಏನು ಮಾಡುತ್ತಾರೆ? ಮಧುಬನದವರು ಕೈ ಎತ್ತಿ. ಕೆಳಗೆ-ಮೇಲೆ ಎಲ್ಲಾ ಮಧುಬನದವರು. ಮೇಲೆ ಇರುವವರೂ
ಕೈಯನ್ನು ಉದ್ದವಾಗಿ ಎತ್ತಿ, ಅಳುಗಾಡಿಸಿ. ಒಳ್ಳೆಯದು. ಮಧುಬನದವರಂತೂ ನಂಬರ್ ತೆಗೆಯಬೇಕು,
ತೆಗೆದುಕೊಳ್ಳಬೇಕಲ್ಲವೇ? ಏಕೆಂದರೆ ಮಧುಬನದವರನ್ನು ಬೇಗ ಕಾಪಿ ಮಾಡುತ್ತಾರೆ. ಒಳ್ಳೆಯದು.
ಎಲ್ಲಾ ಕಡೆಯ ಕಂಬೈನ್ಡ್
ಆಗಿರುವವರು ನೋಡುತ್ತಲೂ ಇದ್ದಾರೆ, ಕೇಳುತ್ತಲೂ ಇದ್ದಾರೆ ಆದರೆ ಎಲ್ಲರೂ ಯಾರು ಕೇಳುತ್ತಲೂ ಇಲ್ಲ
ಅವರು ಮುರಳಿಯ ಮೂಲಕ ಕೇಳುತ್ತಾರೆ, ಅಂದಾಗ ಎಲ್ಲಾ ಕಡೆಯ ಬಾಬಾರವರ ಸ್ನೇಹಿ, ಸಹಯೋಗಿ, ಮಧುರಾತಿ
ಮಧುರ, ಬಹಳ ಪ್ರಿಯ ಮಕ್ಕಳಿಗೆ ಬಾಪ್ದಾದಾ ಪದಮ-ಪದಮದಷ್ಟು ಶುಭಾಶಯಗಳನ್ನೂ ನೀಡುತ್ತಿದ್ದಾರೆ,
ಧನ್ಯವಾದಗಳನ್ನೂ ನೀಡುತ್ತಿದ್ದಾರೆ, ಜೊತೆ-ಜೊತೆಯಲ್ಲಿ ಪ್ರತ್ಯಕ್ಷತೆಯ ಬಾವುಟ ಬೇಗ ಹಾರಿಸುವ
ಸಂಕಲ್ಪವನ್ನೂ ನೀಡುತ್ತಿದ್ದಾರೆ. ಸಮಯಕ್ಕೆ ಕಾಯುವುದಲ್ಲ, ಸಮಯವನ್ನು ಟೀಚರ್ನ್ನಾಗಿ
ಮಾಡಿಕೊಳ್ಳಬಾರದು. ತಂದೆ, ತಂದೆ, ಶಿಕ್ಷಕ ಮತ್ತು ಸದ್ಗುರು ಆಗಿದ್ದಾರೆ. ಹೇಗೆ ತಮ್ಮ ಜಗದಾಂಬಾರವರು
ಮಾಡಿದರು, ಎರಡು ಶಬ್ದದಲ್ಲಿ ನಂಬರ್ ತೆಗೆದುಕೊಂಡರು. ಬಾಬಾ ಹೇಳಿದರು ಮತ್ತು ಜಗದಾಂಬಾರವರು
ಮಾಡುತ್ತಿದ್ದರು, ಈ ರೀತಿ ತೀವ್ರ ಪುರುಷಾರ್ಥ ಮಾಡಿದರು ಮತ್ತು ನಂಬರ್ ತೆಗೆದುಕೊಂಡರು. ತಾವೆಲ್ಲರೂ
ಸಹ ಒಪ್ಪಿಕೊಳ್ಳುತ್ತೀರಲ್ಲವೇ. ತಾವೂ ಸಹ ಫಾಲೋ ಮದರ್ ಜಗದಾಂಬ. ಒಳ್ಳೆಯದು. ಎಲ್ಲರಿಗೆ
ನೆನಪು-ಪ್ರೀತಿ ಮತ್ತು ಬಹಳ-ಬಹಳ ಹೃದಯದ ಆಶೀರ್ವಾದಗಳನ್ನು ಸ್ವೀಕಾರ ಮಾಡಿ ಮತ್ತು ಜೊತೆಯಲ್ಲಿ ತಂದೆ
ಮಕ್ಕಳನ್ನು ಮಾಲಿಕರನ್ನಾಗಿ ನೋಡಿ ನಮಸ್ತೆ ಮಾಡುತ್ತಿದ್ದಾರೆ.
ಒಳ್ಳೆಯದು ಬಾಪ್ದಾದಾರವರು
ಎಲ್ಲಾ ಜೋನ್ ನಲ್ಲಿ ವಾರಸುಧಾರರನ್ನು ಮತ್ತು ಮೈಕ್, ಪ್ರಭಾವಶಾಲಿ ಮೈಕ್ ಮಾಡಿ ಯಾರ ಅನುಭವ ಕೇಳಿ
ನಾವೂ ಆ ರೀತಿ ಆಗಬೇಕು ಎಂಬ ಪ್ರೇರಣೆ ಬರಲಿ. ಯಾರನ್ನಾದರೂ ಸಂತೃಪ್ತ ಮಾಡಿಸಬಹುದು, ಎಲ್ಲಾ
ಜೋನಿನವರ ಲಿಸ್ಟ್ ಕಳುಹಿಸಬೇಕು ಅಂದಾಗ ಈ ದಿನ ದೆಹಲಿಯವರು ಲಿಸ್ಟ್ ಕಳುಹಿಸಿರುವುದನ್ನು ಬಾಪ್ದಾದಾ
ನೋಡಿದ್ದಾರೆ. ಬಾಪ್ದಾದಾ ಶುಭಾಶಯಗಳನ್ನು ನೀಡುತ್ತಿದ್ದಾರೆ. ಎಲ್ಲಾ ಜೋನಿನವರು ಕಳುಹಿಸಿದರೆ ಎಷ್ಟು
ವಾರಸುಧಾರರು ತಯಾರಾಗಿದ್ದಾರೆ ಎಂದು ತಮಗೂ ರಿಜಲ್ಟ್ ತಿಳಿಸುತ್ತೇವೆ. ಚೆಕಿಂಗ್ ಮಾಡಿಸುತ್ತೇವೆ,
ಲಿಸ್ಟ್ ಬಂದರೆ ಒಪ್ಪಿಕೊಳ್ಳುತ್ತೇವೆ ಎಂದಲ್ಲ, ಗುಪ್ತ ಚೆಕಿಂಗ್ ಮಾಡಿಸುತ್ತೇವೆ. ಒಳ್ಳೆಯದು.
ಆದಿಯಲ್ಲೂ ಶುಭಾಶಯಗಳು ಮತ್ತು ಧನ್ಯವಾದಗಳು ಸಿಕ್ಕಿದೆ, ಈಗಲೂ ಸಹ ಬಾಪ್ದಾದಾ ಹೃದಯದಲ್ಲಿ
ಒಬ್ಬೊಬ್ಬ ಮಗುವಿನ ಹೆಸರಿನ ಮೇಲೆ ಪದಮಾಪದಮದಷ್ಟು ಶುಭಾಶಯಗಳನ್ನು ನೀಡುತ್ತಿದ್ದಾರೆ. ತಂದೆಯ
ಬಳಿಯಂತೂ ಎಲ್ಲರ ಚಿತ್ರ ವತನದಲ್ಲಿ ಇಮರ್ಜ್ ಆಗಿದೆ. ಅಂದಾಗ ಬಾಪ್ದಾದಾ ಮಕ್ಕಳ ಜನ್ಮದಿನವನ್ನು
ಆಚರಿಸಿದ್ದಾರೆ ಮತ್ತು ಮಕ್ಕಳು ತಂದೆಯ ಜನ್ಮದಿನವನ್ನು ಆಚರಣೆ ಮಾಡಿದ್ದಾರೆ, ಇಬ್ಬರಿಗೆ ಶುಭಾಶಯಗಳು.
ವರದಾನ:
ಸರ್ವರಿಗೂ ಗೌರವ
ಕೊಡುತ್ತಾ ತಮ್ಮ ರಿಕಾರ್ಡ್ನ್ನು ಸರಿಯಾಗಿಟ್ಟುಕೊಳ್ಳುವ ಸರ್ವರ ಸ್ನೇಹಿ ಭವ.
ಯಾರೆಷ್ಟು ಎಲ್ಲರಿಗೂ
ಗೌರವ ಕೊಡುತ್ತಾರೆಯೋ ಅಷ್ಟೇ ತಮ್ಮ ರಿಕಾರ್ಡ್ನ್ನು ಸರಿಯಾಗಿಟ್ಟುಕೊಳ್ಳಲು ಸಾಧ್ಯವಾಗುವುದು.
ಅನ್ಯರ ಬಗ್ಗೆ ಗೌರವವನ್ನಿಡುವುದು ತಮ್ಮ ರಿಕಾರ್ಡ್ ಮಾಡಿಕೊಳ್ಳುವುದಾಗಿದೆ. ಹೇಗೆ ಯಜ್ಞದ
ಸಹಯೋಗಿಯಾಗುವುದೇ ಸಹಯೋಗ ತೆಗೆದುಕೊಳ್ಳುವುದಾಯಿತು, ಹಾಗೆಯೇ ಗೌರವ ಕೊಡುವುದೇ ಗೌರವ
ತೆಗೆದುಕೊಳ್ಳುವುದಾಗಿದೆ. ಒಂದು ಬಾರಿ ಕೊಡುವುದು ಮತ್ತು ಅನೇಕಬಾರಿ ತೆಗೆದುಕೊಳ್ಳಲು
ಹಕ್ಕುದಾರರಾಗಿ ಬಿಡುವುದು. ಹೇಳುವಾಗ ಈ ರೀತಿ ಹೇಳುತ್ತಾರೆ - ಕಿರಿಯರಿಗೆ ಪ್ರೀತಿ ಹಾಗೂ
ಹಿರಿಯರಿಗೆ ಗೌರವ ಕೊಡಿ ಆದರೆ ಯಾರು ಎಲ್ಲರನ್ನೂ ಹಿರಿಯರೆಂದು ತಿಳಿದು ಗೌರವ ಕೊಡುತ್ತಾರೆಯೋ ಅವರು
ಎಲ್ಲರ ಸ್ನೇಹಿಯಾಗಿ ಬಿಡುತ್ತಾರೆ. ಇದಕ್ಕಾಗಿ ಪ್ರತೀ ಮಾತಿನಲ್ಲಿಯೂ “ಮೊದಲು ತಾವು” ಎಂಬ ಪಾಠವನ್ನು
ಪರಿಪಕ್ವ ಮಾಡಿಕೊಳ್ಳಿರಿ.
ಸ್ಲೋಗನ್:
ಬಾಪ್ದಾದಾರವರಿಂದ ಪ್ರಾಪ್ತಿಯಾಗಿರುವ ಶಿಕ್ಷಣಗಳು ಸಮಯದಲ್ಲಿ ನೆನಪಿಗೆ ಬರುವುದೇ ತೀವ್ರ
ಪುರುಷಾರ್ಥ ಆಗಿದೆ.
ಸೂಚನೆ:- ಇಂದು ಮಾಸದ ಈ
ಮೂರನೇ ರವಿವಾರವಾಗಿದೆ, ಎಲ್ಲಾ ಸಹೋದರ-ಸಹೋದರಿಯರು ಸಂಘಟಿತ ರೊಪದಲ್ಲಿ ಏಕತ್ರಿತರಾಗಿ ಸಂಜೆ
6.30ರಿಂದ 7.30ರವರೆಗೆ ತಮ್ಮ ಪೂರ್ವಜ ಮತ್ತು ಪೂಜ್ಯ ಸ್ವರೂಪದ ಸ್ವಮಾನದ ಮೂಲಕ ಇಡೀ ಕಲ್ಪ
ವೃಕ್ಷಕ್ಕೆ ತಮ್ಮ ಶುಭ ಭಾವನೆ ಮತ್ತು ಶುಭ ಕಾಮನೆಯ ಶಕ್ತಿಶಾಲಿ ಕಿರಣಗಳನ್ನು ಕೊಡುವ ಸೇವೆ ಮಾಡಿ.
ಅವ್ಯಕ್ತ ಸೂಚನೆ:– “ಸದಾ
ಅಚಲ, ಅಡೋಲ, ಏಕರಸ ಸ್ಥಿತಿಯ ಅನುಭವ ಮಾಡಿ”
ಯಾರು ಆಲ್ರೌಂಡ್ ಸರ್ವಿಸ್
ಮಾಡುವವರಾಗಿದ್ದಾರೆ ಅವರಿಗೆ ವಿಶೇಷ ಈ ಮಾತಿನ ಗಮನ ಕೊಡಬೇಕು - ಯಾವುದೇ ಪರಿಸ್ಥಿತಿಯಲ್ಲಿ ತಮ್ಮ
ಸ್ಥಿತಿ ಏಕರಸವಾಗಿರಬೇಕು ಆಗ ಸಫಲತೆ ಸಿಗುವುದು. ಶ್ರೀಮತದಲ್ಲಿ ಯಾವಾಗ ಮನಮತ, ದೇಹ-ಅಭಿಮಾನಿ ತನದ
ಮತ, ಶೂದ್ರ ತನದ ಮತ ಮಿಕ್ಸ್ ಆಗುತ್ತದೆ ಆಗ ಸ್ಥಿತಿ ಏಕರಸವಾಗಿ ಇರಲು ಸಾಧ್ಯವಿಲ್ಲ. ಮನಸ್ಸು
ಭಿನ್ನ ಭಿನ್ನ ರಸಗಳಲ್ಲಿ ಇದೆ ಎಂದರೆ ಸ್ಥಿತಿಯು ಸಹ ಭಿನ್ನ-ಭಿನ್ನವಾಗಿದೆ. ಒಂದೇ ರಸದಲ್ಲಿ
ಇರುತ್ತೀರಿ ಅಂದರೆ ಸ್ಥಿತಿ ಏಕರಸವಾಗಿ ಬಿಡುತ್ತದೆ.