17.07.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ಈ ಶರೀರವನ್ನು ನೋಡದೆ ಆತ್ಮವನ್ನೇ ನೋಡಿ, ತಮ್ಮನ್ನು ಆತ್ಮವೆಂದು ತಿಳಿದು ಆತ್ಮದೊಂದಿಗೆ ಮಾತನಾಡಿ, ಈ ಸ್ಥಿತಿಯನ್ನು ಮಾಡಿಕೊಳ್ಳಬೇಕಾಗಿದೆ, ಇದೇ ಶ್ರೇಷ್ಠಗುರಿಯಾಗಿದೆ”

ಪ್ರಶ್ನೆ:
ನೀವು ಮಕ್ಕಳು ತಂದೆಯ ಜೊತೆ ಮೇಲೆ (ಮನೆಗೆ) ಯಾವಾಗ ಹೋಗುತ್ತೀರಿ?

ಉತ್ತರ:
ಯಾವಾಗ ಅಪವಿತ್ರತೆಯು ಅಂಶ ಮಾತ್ರವೂ ಇರುವುದಿಲ್ಲವೋ, ಹೇಗೆ ತಂದೆಯು ಪವಿತ್ರವಾಗಿದ್ದಾರೆಯೋ ಹಾಗೆಯೇ ನೀವು ಮಕ್ಕಳು ಪವಿತ್ರರಾಗುತ್ತೀರಿ ಆಗ ಮೇಲೆ ಹೋಗಲು ಸಾಧ್ಯ. ಈಗ ನೀವು ಮಕ್ಕಳೇ ತಂದೆಯ ಸನ್ಮುಖದಲ್ಲಿದ್ದೀರಿ. ಜ್ಞಾನಸಾಗರನಿಂದ ಜ್ಞಾನವನ್ನು ಕೇಳಿ-ಕೇಳಿ ಯಾವಾಗ ಹೂವುಗಳಾಗುವಿರೋ ಆಗ ತಂದೆಯನ್ನು ಜ್ಞಾನದಿಂದ ಖಾಲಿ ಮಾಡಿಬಿಡುತ್ತೀರೊ ನಂತರ ಅವರೂ ಸಹ ಶಾಂತವಾಗಿಬಿಡುತ್ತಾರೆ ಮತ್ತು ತಂದೆಯು ಶಾಂತಿಧಾಮಕ್ಕೆ ಹೋಗಿಬಿಡುತ್ತಾರೆ. ಅಲ್ಲಿ ಜ್ಞಾನವು ಹನಿಯುತ್ತಿರುವುದು ನಿಂತುಹೋಗುತ್ತದೆ. ಎಲ್ಲವನ್ನೂ ಕೊಟ್ಟನಂತರ ಅವರ ಪಾತ್ರವು ಶಾಂತಿಯಲ್ಲಿರುವುದಾಗಿದೆ.

ಓಂ ಶಾಂತಿ.
ಶಿವಭಗವಾನುವಾಚ. ಶಿವಭಗವಾನುವಾಚ ಎಂದು ಹೇಳಲಾಗುತ್ತದೆ ಎಂದಾಗ ತಿಳಿದುಕೊಳ್ಳಬೇಕು- ಒಬ್ಬ ಶಿವನೇ ಭಗವಂತ ಅಥವಾ ಪರಮಪಿತನಾಗಿದ್ದಾರೆ, ಅವರನ್ನೇ ನೀವು ಮಕ್ಕಳು ಅಥವಾ ಆತ್ಮಗಳು ನೆನಪು ಮಾಡುತ್ತೀರಿ, ಪರಿಚಯವಂತೂ ರಚಯಿತ ತಂದೆಯಿಂದ ಸಿಕ್ಕಿದೆ ಆದರೆ ನಂಬರ್ವಾರ್ ಪುರುಷಾರ್ಥದನುಸಾರವೇ ನೆನಪು ಮಾಡುತ್ತೀರಿ, ಎಲ್ಲರೂ ಏಕರಸ ನೆನಪನ್ನು ಮಾಡುವುದಿಲ್ಲ. ಇದು ಬಹಳ ಸೂಕ್ಷ್ಮ ಮಾತಾಗಿದೆ. ತಮ್ಮನ್ನು ಆತ್ಮವೆಂದು ತಿಳಿದು ಅನ್ಯರನ್ನು ಆತ್ಮವೆಂದು ತಿಳಿಯಬೇಕು. ಈ ಸ್ಥಿತಿ ಬರುವುದರಲ್ಲಿ ಸಮಯ ಹಿಡಿಸುತ್ತದೆ. ಆ ಮನುಷ್ಯರಂತೂ ಏನನ್ನೂ ತಿಳಿದುಕೊಂಡಿಲ್ಲ. ಅರಿತುಕೊಳ್ಳದಿರುವ ಕಾರಣ ಸರ್ವವ್ಯಾಪಿಯೆಂದು ಹೇಳಿಬಿಡುತ್ತಾರೆ. ನೀವು ಮಕ್ಕಳು ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡುತ್ತೀರೋ ಆ ರೀತಿ ಮತ್ತ್ಯಾರೂ ಬಹುಶ: ಯಾರೂ ನೆನಪು ಮಾಡಲು ಸಾಧ್ಯವಿಲ್ಲ. ಯಾರಿಗೂ ಪರಮಾತ್ಮನ ಜೊತೆ ಸಂಬಂಧವಿಲ್ಲ, ಈ ಮಾತುಗಳು ಬಹಳ ಗುಹ್ಯವಾಗಿದೆ. ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ. ನಾವು ಸಹೋದರರಾಗಿದ್ದೇವೆಂದು ಹೇಳುತ್ತಾರೆ ಅಂದಮೇಲೆ ಆತ್ಮವನ್ನೇ ನೋಡಬೇಕು, ಶರೀರವನ್ನು ನೋಡಬಾರದು. ಇದು ಬಹಳ ಉನ್ನತ ಗುರಿಯಾಗಿದೆ. ಕೆಲವು ಮಕ್ಕಳು ತಂದೆಯನ್ನು ಎಂದೂ ನೆನಪು ಮಾಡುವುದೇ ಇಲ್ಲ, ಆತ್ಮದಲ್ಲಿ ಕೊಳಕು ತುಂಬಿದೆ. ಮುಖ್ಯವಾದುದು ಆತ್ಮದ ಮಾತೇ ಆಗಿದೆ, ಯಾವುದು ಸತೋಪ್ರಧಾನವಾಗಿತ್ತೋ ಅದೇ ಈಗ ತಮೋಪ್ರಧಾನವಾಗಿದೆ, ಇದು ಆತ್ಮದಲ್ಲಿ ಜ್ಞಾನವಿದೆ. ಜ್ಞಾನಸಾಗರನು ಪರಮಾತ್ಮನೆ ಆಗಿದ್ದಾರೆ. ನೀವು ತಮ್ಮನ್ನು ಜ್ಞಾನಸಾಗರರೆಂದು ಹೇಳುವುದಿಲ್ಲ. ನಿಮಗೆ ಗೊತ್ತಿದೆ- ನಾವು ತಂದೆಯಿಂದ ಪೂರ್ಣಜ್ಞಾನವನ್ನು ತೆಗೆದುಕೊಳ್ಳಬೇಕು. ಅವರು ತಮ್ಮ ಬಳಿ ಇಟ್ಟುಕೊಂಡು ಏನು ಮಾಡುತ್ತಾರೆ. ಅವಿನಾಶಿ ಜ್ಞಾನರತ್ನಗಳ ಧನವನ್ನು ಮಕ್ಕಳಿಗೆ ಕೊಡಲೇಬೇಕಾಗಿದೆ. ಮಕ್ಕಳು ನಂಬರ್ವಾರ್ ಪುರುಷಾರ್ಥದನುಸಾರ ತೆಗೆದುಕೊಳ್ಳುತ್ತಾರೆ, ಯಾರು ಹೆಚ್ಚಿಗೆ ತೆಗೆದುಕೊಳ್ಳುವರೋ ಅವರು ಹೆಚ್ಚಿಗೆ ಸರ್ವೀಸ್ ಮಾಡುತ್ತಾರೆ, ತಂದೆಯು ಜ್ಞಾನಸಾಗರನಾಗಿದ್ದಾರೆ. ಅವರೂ ಸಹ ಆತ್ಮವೇ ಆಗಿದ್ದಾರೆ, ನೀವೂ ಆತ್ಮಗಳಾಗಿದ್ದೀರಿ, ಪೂರ್ಣ ಜ್ಞಾನವನ್ನು ಪಡೆಯುತ್ತೀರಿ. ಹೇಗೆ ಅವರು ಸದಾ ಪವಿತ್ರರಾಗಿದ್ದಾರೆಯೋ ನೀವೂ ಸಹ ಸದಾ ಪವಿತ್ರರಾಗುತ್ತೀರಿ ಮತ್ತೆ ಯಾವಾಗ ಅಪವಿತ್ರತೆಯ ಅಂಶಮಾತ್ರವೂ ಉಳಿಯುವುದಿಲ್ಲವೋ ಆಗ ಮೇಲೆ ಹೊರಟುಹೋಗುತ್ತೀರಿ. ತಂದೆಯು ನೆನಪಿನ ಯಾತ್ರೆಯ ಯುಕ್ತಿಯನ್ನು ಕಲಿಸಿಕೊಡುತ್ತಾರೆ. ಇದಂತೂ ಗೊತ್ತಿದೆ, ಇಡೀ ದಿನ ನೆನಪಿರುವುದಿಲ್ಲ ಇಲ್ಲಿ ನೀವು ಮಕ್ಕಳಿಗೆ ತಂದೆ ಸನ್ಮುಖದಲ್ಲಿ ಕೇಳುವುದಿಲ್ಲ, ಮುರಳಿಯನ್ನು ಓದುತ್ತಾರೆ ಇಲ್ಲಿ ನೀವು ಸನ್ಮುಖದಲ್ಲಿದ್ದೀರಿ ಅಂದಮೇಲೆ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ ಮತ್ತು ಜ್ಞಾನವನ್ನೂ ಧಾರಣೆ ಮಾಡಿ. ನಾವು ತಂದೆಯಂತೆ ಸಂಪೂರ್ಣ ಜ್ಞಾನಸಾಗರರಾಗಬೇಕಾಗಿದೆ. ಪೂರ್ಣಜ್ಞಾನವನ್ನು ತಿಳಿದುಕೊಳ್ಳುತ್ತೀರೆಂದರೆ ಹೇಗೆ ತಂದೆಯನ್ನು ಜ್ಞಾನದಿಂದ ಖಾಲಿ ಮಾಡುತ್ತೀರಿ ನಂತರ ಅವರು ಶಾಂತವಾಗಿಬಿಡುತ್ತಾರೆ. ಅವರಲ್ಲಿ ಜ್ಞಾನವು ಹನಿಯುತ್ತಿರುತ್ತದೆ ಎಂದಲ್ಲ ಅವರು ಎಲ್ಲವನ್ನೂ ಕೊಟ್ಟಮೇಲೆ ಅವರ ಪಾತ್ರವೇ ಶಾಂತಿಯದಾಗಿದೆ. ಹೇಗೆ ನೀವು ಶಾಂತಿಯಲ್ಲಿದ್ದಾಗ ಜ್ಞಾನವು ಹನಿಯುತ್ತದೆಯೇ? ಇದನ್ನೂ ಸಹ ತಂದೆಯು ತಿಳಿಸಿದ್ದಾರೆ, ಆತ್ಮವು ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತದೆ. ಹೇಗೆ ಯಾವುದೇ ಸನ್ಯಾಸಿಗಳ ಆತ್ಮವಾಗಿದ್ದರೆ, ಬಾಲ್ಯದಲ್ಲಿಯೇ ಅವರಿಗೆ ಶಾಸ್ತ್ರಗಳು ಕಂಠಪಾಠವಾಗಿರುತ್ತದೆ ಮತ್ತೆ ಅವರ ಹೆಸರು ಪ್ರಸಿದ್ಧವಾಗಿಬಿಡುತ್ತದೆ. ಈಗ ನೀವು ಹೊಸ ಪ್ರಪಂಚದಲ್ಲಿ ಹೋಗಲು ಬಂದಿದ್ದೀರಿ. ಸತ್ಯಯುಗದಲ್ಲಂತೂ ಜ್ಞಾನದ ಸಂಸ್ಕಾರವನ್ನು ತೆಗೆದುಕೊಂಡು ಬರಲು ಸಾಧ್ಯವಿಲ್ಲ. ಈ ಸಂಸ್ಕಾರವು ವಿಸ್ಮೃತಿಯಾಗಿಬಿಡುತ್ತದೆ ಬಾಕಿ ಆತ್ಮವು ನಂಬರ್ವಾರ್ ಪುರುಷಾರ್ಥದನುಸಾರ ತಮ್ಮ ಸ್ಥಾನವನ್ನು ಪಡೆಯುತ್ತದೆ. ನಂತರ ನಿಮ್ಮ ಶರೀರಕ್ಕೆ ಹೆಸರು ಬರುತ್ತದೆ. ಶಿವತಂದೆಯಂತೂ ನಿರಾಕಾರನಾಗಿದ್ದಾರೆ, ನಾನು ಈ ಕರ್ಮೇಂದ್ರಿಯಗಳ ಆಧಾರವನ್ನು ತೆಗೆದುಕೊಳ್ಳುತ್ತೇನೆಂದು ಹೇಳುತ್ತಾರೆ. ಅವರಂತೂ ಕೇವಲ ತಿಳಿಸುವುದಕ್ಕಾಗಿಯೇ ಬರುತ್ತಾರೆ. ಅವರು ಯಾರಿಂದಲೂ ಜ್ಞಾನವನ್ನೂ ಕೇಳುವುದಿಲ್ಲ ಏಕೆಂದರೆ ಸ್ವಯಂ ಜ್ಞಾನ ಸಾಗರನಾಗಿದ್ದಾರೆ. ತಂದೆಯು ಕೇವಲ ಮುಖದ ಮೂಲಕವೇ ಆ ಮುಖ್ಯಕಾರ್ಯವನ್ನು ಮಾಡುತ್ತಾರೆ. ಎಲ್ಲರಿಗೆ ಮಾರ್ಗವನ್ನು ತಿಳಿಸುವುದಕ್ಕಾಗಿಯೇ ಬರುತ್ತಾರೆ ಬೇರೆಯದನ್ನು ಕೇಳಿ ಏನು ಮಾಡಬೇಕು! ಹೀಗೀಗೆ ಮಾಡಿ ಎಂದು ಅವರು ಸದಾ ತಿಳಿಸುತ್ತಲೇ ಇರುತ್ತಾರೆ. ಇಡೀ ವೃಕ್ಷದ ರಹಸ್ಯವನ್ನು ತಿಳಿಸುತ್ತಾರೆ. ನೀವು ಮಕ್ಕಳ ಬುದ್ಧಿಯಲ್ಲಿದೆ ಹೊಸ ಪ್ರಪಂಚವು ಬಹಳ ಚಿಕ್ಕದಾಗಿರುವುದು ಎಂದು. ಈ ಹಳೆಯ ಪ್ರಪಂಚವಂತೂ ಎಷ್ಟೊಂದು ದೊಡ್ಡದಾಗಿದೆ. ಇಡೀ ಪ್ರಪಂಚದಲ್ಲಿ ಎಷ್ಟೊಂದು ವಿದ್ಯುತ್ದೀಪಗಳು ಉರಿಯುತ್ತವೆ, ದೀಪಗಳ ಮೂಲಕ ಏನೆಲ್ಲಾ ಆಗುತ್ತದೆ. ಸತ್ಯಯುಗದಲ್ಲಂತೂ ಪ್ರಪಂಚವು ಚಿಕ್ಕದು, ದೀಪಗಳು ಕೆಲವೇ ಇರುತ್ತವೆ. ಹೇಗೆ ಒಂದು ಚಿಕ್ಕ ಹಳ್ಳಿಯಂತೆ. ಈಗಂತೂ ಎಷ್ಟು ದೊಡ್ಡ-ದೊಡ್ಡ ಹಳ್ಳಿಗಳಾಗಿವೆ, ಅಲ್ಲಿ ಇಷ್ಟೊಂದು ಇರುವುದಿಲ್ಲ. ಕೆಲವೇ ಪ್ರಮುಖವಾದ ಒಳ್ಳೆಯ ರಸ್ತೆಗಳಿರುತ್ತವೆ. ಪಂಚತತ್ವಗಳೂ ಅಲ್ಲಿ ಸತೋಪ್ರಧಾನವಾಗಿಬಿಡುತ್ತವೆ, ಎಂದೂ ಚಂಚಲತೆ ಮಾಡುವುದಿಲ್ಲ. ಸುಖ ಧಾಮವೆಂದು ಹೇಳಲಾಗುತ್ತದೆ, ಅದರ ಹೆಸರೇ ಆಗಿದೆ ಸ್ವರ್ಗ. ಮುಂದೆಹೋದಂತೆ ನೀವು ಎಷ್ಟು ಸಮೀಪಕ್ಕೆ ಬರುತ್ತೀರೋ ಅಷ್ಟು ವೃದ್ಧಿಯನ್ನು ಹೊಂದುತ್ತಾ ಇರುತ್ತೀರಿ. ತಂದೆಯೂ ಸಹ ಸಾಕ್ಷಾತ್ಕಾರ ಮಾಡಿಸುತ್ತಾ ಇರುತ್ತಾರೆ ಮತ್ತೆ ಆ ಸಮಯದ ಯುದ್ಧದಲ್ಲಿಯೂ ಸೈನ್ಯ ಅಥವಾ ವಿಮಾನಗಳ ಅವಶ್ಯಕತೆಯಿರುವುದಿಲ್ಲ. ನಾವು ಇಲ್ಲಿ ಕುಳಿತೆ ಎಲ್ಲವನ್ನೂ ಸಮಾಪ್ತಿ ಮಾಡುತ್ತೇವೆಂದು ಅವರು ಹೇಳುತ್ತಾರೆ ಅಂದಮೇಲೆ ಈ ವಿಮಾನ ಇತ್ಯಾದಿಗಳು ಕೆಲಸಕ್ಕೆ ಬರುತ್ತವೆಯೇ? ಮತ್ತೆ ಈ ಚಂದ್ರಮ ಮುಂತಾದ ಗ್ರಹಗಳಲ್ಲಿ ಫ್ಲಾಟ್ನ್ನು ನೋಡಲು ಹೋಗುವುದಿಲ್ಲ. ಇದೆಲ್ಲವೂ ವಿಜ್ಞಾನದ ವ್ಯರ್ಥ ಅಭಿಮಾನವಾಗಿದೆ. ಎಷ್ಟೊಂದು ಶೋ ಮಾಡುತ್ತಿದ್ದಾರೆ. ಜ್ಞಾನದಲ್ಲಿ ಎಷ್ಟೊಂದು ಶಾಂತಿಯಿದೆ, ಇದಕ್ಕೆ ಈಶ್ವರೀಯ ಕೊಡುಗೆಯೆಂದು ಹೇಳುತ್ತಾರೆ. ವಿಜ್ಞಾನದಲ್ಲಂತೂ ಹೊಡೆದಾಟಗಳೇ ಹೊಡೆದಾಟಗಳಿವೆ, ಶಾಂತಿಯನ್ನು ಅರಿತುಕೊಂಡೇ ಇಲ್ಲ.

ನೀವು ಅರಿಯುತ್ತೀರಿ, ವಿಶ್ವದಲ್ಲಿ ಶಾಂತಿಯು ಹೊಸ ಪ್ರಪಂಚದಲ್ಲಿತ್ತು ಅದು ಸುಖಧಾಮವಾಗಿದೆ, ಈಗಂತೂ ದುಃಖ, ಅಶಾಂತಿಯಿದೆ. ಇದನ್ನೂ ಸಹ ತಿಳಿಸಿಕೊಡಬೇಕು- ನೀವು ಶಾಂತಿಯನ್ನು ಬಯಸುತ್ತೀರ, ಎಂದೂ ಅಶಾಂತಿಯಾಗಲೇಬಾರದು ಎನ್ನುತ್ತೀರಿ ಅದಂತೂ ಶಾಂತಿಧಾಮ ಮತ್ತು ಸುಖಧಾಮದಲ್ಲಿರುತ್ತದೆ, ಸ್ವರ್ಗವನ್ನು ಎಲ್ಲರೂ ಬಯಸುತ್ತಾರೆ. ಭಾರತವಾಸಿಗಳು ವೈಕುಂಠ, ಸ್ವರ್ಗವನ್ನು ನೆನಪು ಮಾಡುತ್ತಾರೆ, ಅನ್ಯವರ್ಗದವರು ವೈಕುಂಠವನ್ನು ನೆನಪು ಮಾಡುವುದಿಲ್ಲ ಕೇವಲ ಶಾಂತಿಯನ್ನು ನೆನಪು ಮಾಡುತ್ತಾರೆ, ಸುಖವನ್ನಂತೂ ನೆನಪು ಮಾಡಲು ಸಾಧ್ಯವಿಲ್ಲ. ಇದನ್ನು ನಿಯಮವು ಹೇಳುವುದಿಲ್ಲ. ಸುಖವನ್ನು ನೀವೇ ನೆನಪು ಮಾಡುತ್ತೀರಿ ಆದ್ದರಿಂದ ನಮ್ಮನ್ನು ದುಃಖದಿಂದ ಬಿಡಿಸಿ ಎಂದು ಕರೆಯುತ್ತೀರಿ. ಆತ್ಮಗಳು ಮೂಲತಃ ಶಾಂತಿಧಾಮದಲ್ಲಿರುತ್ತಾರೆ. ಇದೂ ಸಹ ಯಾರಿಗೂ ಗೊತ್ತಿಲ್ಲ. ಈಗ ತಂದೆಯು ತಿಳಿಸುತ್ತಾರೆ- ಮಕ್ಕಳೇ, ನೀವು ತಿಳುವಳಿಕೆ ಹೀನರಾಗಿದ್ದಿರಿ, ಯಾವಾಗಿನಿಂದ ಆಗಿದ್ದಿರಿ? 16 ಕಲೆಯಿಂದ 12-14 ಕಲೆಯುಳ್ಳವರಾಗುತ್ತಾ ಹೋಗುತ್ತೀರಿ ಅಂದರೆ ಬುದ್ಧಿಹೀನರಾಗುತ್ತಾ ಹೋಗುತ್ತೀರಿ. ಈಗಂತೂ ಯಾವುದೇ ಕಲೆಯೂ ಉಳಿದಿಲ್ಲ. ಸ್ತ್ರೀಯರಿಗೆ ದುಃಖವು ಏಕಿದೆ ಎಂದು ಸಮ್ಮೇಳನಗಳಂತೂ ಮಾಡುತ್ತಿರುತ್ತಾರೆ. ಅರೆ! ದುಃಖವಂತೂ ಇಡೀ ಪ್ರಪಂಚದಲ್ಲಿದೆ, ಅಪಾರವೇ ಇದೆ. ಈಗ ವಿಶ್ವದಲ್ಲಿ ಶಾಂತಿ ಹೇಗಾಗುವುದು? ಈಗಂತೂ ಅನೇಕಾನೇಕ ಧರ್ಮಗಳಿವೆ. ಇಡೀ ವಿಶ್ವದಲ್ಲಿ ಸಂಪೂರ್ಣ ಶಾಂತಿಯಂತೂ ಈಗ ಆಗಲು ಸಾಧ್ಯವಿಲ್ಲ. ಸುಖವನ್ನಂತೂ ತಿಳಿದುಕೊಂಡೇ ಇಲ್ಲ. ನೀವು ಮಕ್ಕಳು ಕುಳಿತು ತಿಳಿಸಿಕೊಡುತ್ತೀರಿ- ಈ ಪ್ರಪಂಚದಲ್ಲಿ ಅನೇಕ ಪ್ರಕಾರದ ದುಃಖವಿದೆ, ಅಶಾಂತಿಯಿದೆ ಎಂದು ತಿಳಿಸಿಕೊಡುತ್ತೀರಿ. ಎಲ್ಲಿಂದ ನಾವಾತ್ಮಗಳು ಬಂದಿದ್ದೇವೆಯೊ, ಅದು ಶಾಂತಿಧಾಮವಾಗಿದೆ ಮತ್ತು ಎಲ್ಲಿ ಆದಿಸನಾತನ ದೇವಿ-ದೇವತಾ ಧರ್ಮವಿತ್ತೋ ಅದು ಸುಖಧಾಮವಾಗಿತ್ತು. ಆದಿಸನಾತನ ಹಿಂದೂಧರ್ಮವೆಂದು ಹೇಳುವುದಿಲ್ಲ. ಆದಿಯೆಂದರೆ ಪ್ರಾಚೀನವೆಂದು ಅದು ಸತ್ಯಯುಗದಲ್ಲಿತ್ತು ಆ ಸಮಯದಲ್ಲಿ ಎಲ್ಲರೂ ಪವಿತ್ರರಾಗಿದ್ದರು. ನಿರ್ವಿಕಾರಿ ಪ್ರಪಂಚವಾಗಿತ್ತು. ಅಲ್ಲಿ ವಿಕಾರದ ಹೆಸರಿರುವುದಿಲ್ಲ. ಇಲ್ಲಿ ಮತ್ತು ಅಲ್ಲಿನದರಲ್ಲಿ ವ್ಯತ್ಯಾಸವಿದೆಯಲ್ಲವೆ. ಮೊಟ್ಟಮೊದಲು ನಿರ್ವಿಕಾರಿತನವಿರಬೇಕು ಆದ್ದರಿಂದ ತಂದೆಯು ತಿಳಿಸುತ್ತಾರೆ- ಮಧುರಾತಿ ಮಧುರ ಮಕ್ಕಳೇ, ಕಾಮವನ್ನು ಜಯಿಸಿ ತಮ್ಮನ್ನು ಆತ್ಮವೆಂದು ತಿಳಿಯಿರಿ. ಈಗ ಆತ್ಮವು ಅಪವಿತ್ರವಾಗಿದೆ, ತುಕ್ಕುಹಿಡಿದಿದೆ ಆದ್ದರಿಂದ ಶರೀರವೂ ಸಹ ಅಂತಹದ್ದೇ ಆಗಿದೆ. ಆತ್ಮವು ಪವಿತ್ರವಾದಾಗ ಶರೀರವು ಪವಿತ್ರವಾಗಿರುತ್ತದೆ. ಅದನ್ನೇ ನಿರ್ವಿಕಾರಿ ಪ್ರಪಂಚವೆಂದು ಕರೆಯಲಾಗುವುದು. ನೀವು ಆಲದಮರದ ಉದಾಹರಣೆಯನ್ನು ಕೊಡಬಹುದು, ಇಡೀ ವೃಕ್ಷವು ನಿಂತಿದೆ ಅದರ ಬುಡವೇ ಇಲ್ಲ. ಈ ಆದಿಸನಾತನ ದೇವಿ-ದೇವತಾ ಧರ್ಮದ ತಳಹದಿಯಿಲ್ಲ ಮತ್ತೆಲ್ಲಾ ಶಾಖೆಗಳು ನಿಂತಿವೆ. ಎಲ್ಲರೂ ಅಪವಿತ್ರರಾಗಿದ್ದಾರೆ. ಇವರಿಗೆ ಮನುಷ್ಯರೆಂದು ಹೇಳಲಾಗುತ್ತದೆ. ಅವರಾಗಿದ್ದಾರೆ ದೇವತೆಗಳು, ನಾನು ಮನುಷ್ಯರನ್ನು ದೇವತೆಗಳನ್ನಾಗಿ ಮಾಡಲು ಬಂದಿದ್ದೇನೆ, 84 ಜನ್ಮಗಳನ್ನೂ ಮನುಷ್ಯರು ಪಡೆಯುತ್ತಾರೆ. ಏಣಿಯ ಚಿತ್ರವನ್ನು ತೋರಿಸಬೇಕು, ತಮೋಪ್ರಧಾನರಾದಾಗ ಹಿಂದೂಗಳೆಂದು ಹೇಳಿಕೊಳ್ಳುತ್ತಾರೆ, ದೇವತೆಗಳೆಂದು ಕರೆಸಿಕೊಳ್ಳುವುದಿಲ್ಲ ಏಕೆಂದರೆ ಪತಿತರಾಗುತ್ತಾರೆ, ನಾಟಕದಲ್ಲಿ ಈ ರಹಸ್ಯವಿದೆ. ಇಲ್ಲವೆಂದರೆ ಹಿಂದೂಧರ್ಮವೆನ್ನುವುದು ಯಾವುದೂ ಇಲ್ಲ. ಆದಿಸನಾತನ ನಾವೇ ದೇವಿ-ದೇವತೆಗಳಾಗಿದ್ದೆವು, ಭಾರತವೇ ಪವಿತ್ರವಾಗಿತ್ತು, ಈಗ ಅಪವಿತ್ರವಾಗಿದೆ ಆದ್ದರಿಂದ ತಮ್ಮನ್ನು ಹಿಂದೂಗಳೆಂದು ಕರೆಸಿಕೊಳ್ಳುತ್ತಾರೆ. ಹಿಂದೂ ಧರ್ಮವೆನ್ನುವುದು ಯಾರೂ ಸ್ಥಾಪನೆ ಮಾಡಿಲ್ಲ. ಇದನ್ನು ಮಕ್ಕಳು ಬಹಳ ಚೆನ್ನಾಗಿ ಧಾರಣೆ ಮಾಡಿ ತಿಳಿಸಿಕೊಡಬೇಕು. ಈಗಂತೂ ಕೇಳುವುದಕ್ಕೆ ಅಷ್ಟು ಸಮಯವೂ ಕೊಡುವುದಿಲ್ಲ. ಕೊನೆಪಕ್ಷ ಅರ್ಧಗಂಟೆಯಾದರೂ ಸಮಯ ಕೊಟ್ಟಾಗ ಇದೆಲ್ಲವನ್ನೂ ತಿಳಿಸಬಹುದು. ತಿಳಿಸುವ ಜ್ಞಾನಬಿಂದುಗಳಂತೂ ಬಹಳಷ್ಟಿವೆ. ನಂತರ ಅದರಿಂದಲೂ ಪ್ರಮುಖವಾದುದನ್ನೇ ತಿಳಿಸಲಾಗುತ್ತದೆ. ವಿದ್ಯೆಯಲ್ಲಿಯೂ ಸಹ ಹೇಗೇಗೆ ಓದುತ್ತಾ ಹೋಗುತ್ತಾರೆಯೋ ಹಾಗೆಯೇ ಮೊದಲಿನ ತಂದೆ ಮತ್ತು ಆಸ್ತಿಯ ಹಗುರವಾದ ವಿದ್ಯೆಯು ನೆನಪಿರುವುದಿಲ್ಲ ಮರೆತುಹೋಗುತ್ತದೆ. ಹೀಗೂ ಹೇಳುತ್ತಾರೆ- ಈಗ ನಿಮ್ಮ ಜ್ಞಾನವು ಬದಲಾಗಿಬಿಟ್ಟಿದೆ ಎಂದು. ಅರೆ! ವಿದ್ಯೆಯಲ್ಲಿ ಮೇಲೇರುತ್ತಾ ಹೋಗುತ್ತದೆಯೆಂದರೆ ಮೊದಲಿನ ವಿದ್ಯೆಯು ಮರೆಯುತ್ತಾ ಹೋಗುತ್ತದೆಯಲ್ಲವೆ. ತಂದೆಯೂ ಸಹ ನಿಮಗೆ ನಿತ್ಯವೂ ಹೊಸ-ಹೊಸಮಾತುಗಳನ್ನು ತಿಳಿಸುತ್ತಾರೆ. ಮೊದಲು ನಿಮ್ಮ ವಿದ್ಯೆಯು ಸಹಜವಾಗಿತ್ತು, ಈಗ ತಂದೆಯು ಗುಹ್ಯಾತಿಗುಹ್ಯ ಹೊಸಮಾತುಗಳನ್ನು ತಿಳಿಸುತ್ತಿರುತ್ತಾರೆ. ಜ್ಞಾನಸಾಗರನಲ್ಲವೆ! ತಿಳಿಸುತ್ತಾ-ತಿಳಿಸುತ್ತಾ ನಂತರ ಕೊನೆಯಲ್ಲಿ ಎರಡು ಶಬ್ಧಗಳನ್ನು ಹೇಳಿಬಿಡುತ್ತಾರೆ- ತಂದೆಯನ್ನು ತಿಳಿದುಕೊಂಡರೂ ಸಾಕು. ತಂದೆಯನ್ನು ಅರಿತುಕೊಳ್ಳುವುದರಿಂದ ಆಸ್ತಿಯನ್ನೂ ಅವಶ್ಯವಾಗಿ ಅರಿತುಕೊಳ್ಳುತ್ತೀರಿ. ಕೇವಲ ಇಷ್ಟನ್ನು ತಿಳಿಸಿದರೂ ಸರಿ. ಯಾರು ಹೆಚ್ಚಿನ ಜ್ಞಾನವನ್ನು ಧಾರಣೆ ಮಾಡಿಕೊಳ್ಳಲು ಸಾಧ್ಯವಿಲ್ಲವೋ ಅವರು ಉತ್ತಮ ಪದವಿಯನ್ನೂ ಪಡೆಯಲೂ ಸಾಧ್ಯವಿಲ್ಲ, ಪಾಸ್-ವಿತ್-ಆನರ್ ಆಗಲು ಸಾಧ್ಯವಿಲ್ಲ. ಕರ್ಮಾತೀತ ಸ್ಥಿತಿಯನ್ನು ಪಡೆಯಲೂ ಸಾಧ್ಯವಿಲ್ಲ. ಇದರಲ್ಲಿ ಬಹಳ ಪರಿಶ್ರಮಪಡಬೇಕು. ನೆನಪಿನದೂ ಪರಿಶ್ರಮವಾಗಿದೆ. ಜ್ಞಾನಧಾರಣೆ ಮಾಡುವುದೂ ಪರಿಶ್ರಮವಾಗಿದೆ, ಇವೆರಡರಲ್ಲಿ ಎಲ್ಲರೂ ಬುದ್ಧಿವಂತರಾಗುವುದಕ್ಕೂ ಸಾಧ್ಯವಿಲ್ಲ. ರಾಜಧಾನಿಯು ಸ್ಥಾಪನೆಯಾಗುತ್ತಾ ಇದೆ ಅಂದಮೇಲೆ ಎಲ್ಲರೂ ನರನಿಂದ ನಾರಾಯಣ ಹೇಗಾಗುತ್ತಾರೆ! ಈ ಗೀತಾಪಾಠಶಾಲೆಯ ಮುಖ್ಯ ಗುರಿ-ಉದ್ದೇಶವೇ ಇದಾಗಿದೆ- ಅದೇ ಗೀತಾಜ್ಞಾನವಾಗಿದೆ. ಅದನ್ನೂ ಯಾರು ಕೊಡುತ್ತಾರೆಂಬುದನ್ನು ನಿಮ್ಮ ವಿನಃ ಮತ್ತ್ಯಾರೂ ತಿಳಿದುಕೊಂಡಿಲ್ಲ. ಈಗ ಸ್ಮಶಾನವಾಗಿದೆ, ನಂತರ ಇದೇ ಸ್ವರ್ಗವಾಗುವುದಿದೆ.

ಈಗ ನೀವು ಜ್ಞಾನಚಿತೆಯ ಮೇಲೆ ಕುಳಿತು ಪೂಜಾರಿಗಳಿಂದ ಪೂಜ್ಯರು ಅವಶ್ಯವಾಗಿ ಆಗಬೇಕಾಗಿದೆ. ವಿಜ್ಞಾನದವರೂ ಸಹ ಎಷ್ಟೊಂದು ಬುದ್ಧಿವಂತರಾಗುತ್ತಾ ಹೋಗುತ್ತಾರೆ, ಅನ್ವೇಷಣೆ ಮಾಡುತ್ತಾ ಇರುತ್ತಾರೆ. ಭಾರತವಾಸಿಗಳು ಪ್ರತಿಯೊಂದು ಮಾತಿನ ತಿಳುವಳಿಕೆಯನ್ನು ಅಲ್ಲಿಂದ ಕಲಿತುಕೊಂಡು ಬರುತ್ತಾರೆ. ಅವರೂ ಕೊನೆಯಲ್ಲಿ ಬರುತ್ತಾರೆಂದರೆ ಇಷ್ಟು ಜ್ಞಾನವನ್ನು ತೆಗೆದುಕೊಳ್ಳಲು ಆಗುವುದಿಲ್ಲ. ನಂತರ ಸತ್ಯಯುಗದಲ್ಲಿಯೂ ಬಂದು ಇದೇ ಇಂಜಿನಿಯರಿಂಗ್ ಮೊದಲಾದ ಕೆಲಸವನ್ನು ಮಾಡುತ್ತಾರೆ, ರಾಜ-ರಾಣಿಯಂತೂ ಆಗಲು ಸಾಧ್ಯವಿಲ್ಲ. ರಾಜ-ರಾಣಿಯ ಮುಂದೆ ಸೇವೆಯಲ್ಲಿರುತ್ತಾರೆ. ಇಂತಿಂತಹ ಅನ್ವೇಷಣೆಗಳನ್ನು ಮಾಡುತ್ತಾ ಇರುತ್ತಾರೆ. ರಾಜ-ರಾಣಿಯರಾಗುವುದೇ ಸುಖಕ್ಕಾಗಿ, ಅಲ್ಲಂತೂ ಎಲ್ಲಾ ಸುಖವು ಸಿಗುವುದಿದೆ, ಅಂದಾಗ ಮಕ್ಕಳು ಪೂರ್ಣಪುರುಷಾರ್ಥ ಮಾಡಬೇಕು. ಪೂರ್ಣ ಉತ್ತೀರ್ಣರಾಗಿ ಕರ್ಮಾತೀತ ಸ್ಥಿತಿಯನ್ನು ಪಡೆಯಬೇಕು. ಬೇಗನೆ ಹೋಗುವ ವಿಚಾರ ಮಾಡಬಾರದು. ಈಗ ನೀವು ಈಶ್ವರೀಯ ಸಂತಾನರಾಗಿದ್ದೀರಿ. ತಂದೆಯು ಓದಿಸುತ್ತಿದ್ದಾರೆ, ಇದು ಮನುಷ್ಯರನ್ನು ಪರಿವರ್ತಿಸುವ ಸಂಸ್ಥೆಯಾಗಿದೆ, ಹೇಗೆ ಬೌದ್ಧ, ಕ್ರಿಶ್ಚಿಯನ್ ಮಿಷನ್ ಇರುತ್ತದೆಯಲ್ಲವೆ, ಕೃಷ್ಣ ಮತ್ತು ಕ್ರಿಶ್ಚಿಯನ್ ಇವೆರಡು ಶಬ್ಧಗಳು ಹೋಲುತ್ತವೆ, ಅವರ ಜೊತೆ ಬಹಳಷ್ಟು ವ್ಯವಹಾರದ ಸಂಬಂಧವಿದೆ. ಯಾರು ಇಷ್ಟು ಸಹಯೋಗ ಕೊಡುತ್ತಾರೆಯೋ ಅವರ ಭಾಷೆ ಇತ್ಯಾದಿಯನ್ನು ಬಿಟ್ಟುಬಿಡುವುದೂ ಸಹ ಒಂದು ಅಗೌರವವಾಗಿದೆ. ಅವರಂತೂ ಬರುವುದೇ ಕೊನೆಯಲ್ಲಿ. ಬಹಳ ಸುಖವನ್ನೂ ನೋಡುವುದಿಲ್ಲ, ಬಹಳ ದುಃಖವನ್ನೂ ಪಡೆಯುವುದಿಲ್ಲ, ಪೂರ್ಣ ಅನ್ವೇಷಣೆಯನ್ನು ಅವರೇ ಮಾಡುತ್ತಾರೆ, ಇಲ್ಲಿ ಭಲೆ ಪ್ರಯತ್ನಪಡುತ್ತಾರೆ ಆದರೆ ನಿಖರವಾಗಿ ಎಂದೂ ಮಾಡಲು ಸಾಧ್ಯವಿಲ್ಲ. ವಿದೇಶದ ವಸ್ತುಗಳು ಚೆನ್ನಾಗಿರುತ್ತವೆ. ಪ್ರಾಮಾಣಿಕತೆಯಿಂದ ತಯಾರಿಸುತ್ತಾರೆ. ಇಲ್ಲಂತೂ ಅಪ್ರಮಾಣಿಕತೆಯಿಂದ ತಯಾರಿಸುತ್ತಾರೆ. ಅಪಾರ ದುಃಖವಿದೆ, ಎಲ್ಲರ ದುಃಖವನ್ನು ದೂರ ಮಾಡುವವರು ಒಬ್ಬ ತಂದೆಯ ವಿನಃ ಮತ್ತ್ಯಾವುದೇ ಮನುಷ್ಯರಿಂದ ಸಾಧ್ಯವಿಲ್ಲ. ವಿಶ್ವದಲ್ಲಿ ಶಾಂತಿಯು ಸ್ಥಾಪನೆಯಾಗಲೆಂದು ಭಲೆ ಎಷ್ಟೇ ಸಮ್ಮೇಳನಗಳನ್ನು ಮಾಡುತ್ತಾರೆ, ಕಷ್ಟ ಪಡುತ್ತಿರುತ್ತಾರೆ, ಕೇವಲ ಮಾತೆಯರ ದುಃಖದ ಮಾತಲ್ಲ. ಅನೇಕ ಪ್ರಕಾರದ ದುಃಖವಿದೆ, ಇಡೀ ಪ್ರಪಂಚದಲ್ಲಿ ಜಗಳ-ಹೊಡೆದಾಟದ ಮಾತಿದೆ. ಬಿಡುಗಾಸಿನ ಮಾತಿಗೆ ಎಷ್ಟೊಂದು ಹೊಡೆದಾಡುತ್ತಾರೆ. ಸತ್ಯಯುಗದಲ್ಲಂತೂ ದುಃಖದ ಮಾತೇ ಇರುವುದಿಲ್ಲ, ಇದರ ಲೆಕ್ಕವನ್ನೂ ತೆಗೆಯಬೇಕು. ಯುದ್ಧವು ಯಾವಾಗ ಬೇಕಾದರೂ ಪ್ರಾರಂಭವಾಗಬಹುದು. ಭಾರತದಲ್ಲಿ ರಾವಣನು ಯಾವಾಗ ಬರುತ್ತಾನೆಯೋ ಮೊಟ್ಟಮೊದಲು ಮನೆಯಲ್ಲಿ ಜಗಳವು ಪ್ರಾರಂಭವಾಗುತ್ತದೆ. ಬೇರೆ-ಬೇರೆಯಾಗಿಬಿಡುತ್ತಾರೆ. ಪರಸ್ಪರ ಹೊಡೆದಾಡುತ್ತಾರೆ, ನಂತರ ಹೊರಗಿನವರು ಬರುತ್ತಾರೆ. ಮೊದಲು ಬ್ರಿಟಿಷರಿರಲಿಲ್ಲ ನಂತರ ಅವರು ಬಂದು ಮಧ್ಯದಲ್ಲಿ ಲಂಚ ಇತ್ಯಾದಿಗಳನ್ನು ಕೊಟ್ಟು ತಮ್ಮ ರಾಜ್ಯವನ್ನಾಗಿ ಮಾಡಿಕೊಳ್ಳುತ್ತಾರೆ ಎಷ್ಟೊಂದು ರಾತ್ರಿ-ಹಗಲಿನ ಅಂತರವಿದೆ. ಹೊಸಬರು ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ, ಹೊಸಜ್ಞಾನವಾಗಿದೆಯಲ್ಲವೆ. ಈ ಜ್ಞಾನವು ಮತ್ತೆ ಪ್ರಾಯಃ ಲೋಪವಾಗಿಬಿಡುತ್ತದೆ. ಇದೊಂದೇ ವಿದ್ಯೆಯು ಒಂದೇಬಾರಿ, ಒಬ್ಬರೇ ತಂದೆಯಿಂದ ಸಿಗುತ್ತದೆ. ಮುಂದೆಹೋದಂತೆ ನೀವು ಈ ರೀತಿಯಾಗುತ್ತೀರೆಂದು ನಿಮ್ಮೆಲ್ಲರಿಗೆ ಸಾಕ್ಷಾತ್ಕಾರವಾಗುತ್ತಿರುತ್ತದೆ. ಆ ಸಮಯದಲ್ಲಿ ಏನು ಮಾಡಲು ತಾನೆ ಸಾಧ್ಯ? ಉನ್ನತಿಯನ್ನಂತೂ ಪಡೆಯಲು ಸಾಧ್ಯವಿಲ್ಲ. ಫಲಿತಾಂಶವು ಹೊರಬಂದರೆ ಇಲ್ಲಿಂದ ವರ್ಗಾವಣೆಯಾಗುವ ಮಾತು ಬಂದುಬಿಡುತ್ತದೆ ನಂತರ ಅಳುತ್ತಾರೆ, ಚೀರಾಡುತ್ತಾರೆ. ನಾವು ಹೊಸಪ್ರಪಂಚಕ್ಕೆ ವರ್ಗಾಯಿತರಾಗಿಬಿಡುತ್ತೇವೆ. ಬಹುಬೇಗನೆ ನಾಲ್ಕಾರುಕಡೆ ಸಂದೇಶದ ಶಬ್ಧವು ಹರಡಲೆಂದು ನೀವು ಪರಿಶ್ರಮಪಡುತ್ತೀರಿ, ಕೊನೆಯಲ್ಲಿ ತಾವೇ ಸೇವಾಕೇಂದ್ರಗಳ ಬಳಿ ಓಡಿಬರುತ್ತಾರೆ. ಆದರೆ ಎಷ್ಟು ತಡವಾಗುತ್ತಾ ಹೋಗುತ್ತದೆಯೋ ಅಷ್ಟು ಟೂಲೇಟ್ ಆಗುತ್ತಾ ಹೋಗುತ್ತಾರೆ. ನಂತರ ಏನೂ ಜಮಾ ಆಗುವುದಿಲ್ಲ. ನಂತರ ಹಣದ ಅವಶ್ಯಕತೆಯಿರುವುದಿಲ್ಲ. ನಿಮಗೆ ತಿಳಿಸುವುದಕ್ಕೆ ಈ ಬ್ಯಾಡ್ಜ್ ಸಾಕು. ಈ ಬ್ರಹ್ಮನೆ ವಿಷ್ಣು, ವಿಷ್ಣುವಿನಿಂದ ಬ್ರಹ್ಮಾ- ಈ ಬ್ಯಾಡ್ಜ್ ಇಂತಹದ್ದಾಗಿದೆ, ಇದರಲ್ಲಿ ಎಲ್ಲಾ ಶಾಸ್ತ್ರಗಳ ಸಾರವಿದೆ. ತಂದೆಯು ಈ ಬ್ಯಾಡ್ಜ್ನ ಬಹಳ ಮಹಿಮೆ ಮಾಡುತ್ತಾರೆ. ಅಂತಹ ಸಮಯವೂ ಬರುತ್ತದೆ, ಯಾವಾಗ ಈ ನಿಮ್ಮ ಬ್ಯಾಡ್ಜನ್ನು ತಮ್ಮ ಕಣ್ಣುಗಳ ಮೇಲೆ ಇಟ್ಟುಕೊಳ್ಳುತ್ತಾರೆ. ಮನ್ಮನಾಭವ, ನನ್ನನ್ನು ನೆನಪು ಮಾಡಿದರೆ ಈ ರೀತಿಯಾಗುತ್ತೀರೆಂದು ಇದರಲ್ಲಿದೆ, ನಂತರ ಇವರೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಪುನರ್ಜನ್ಮವನ್ನು ತೆಗೆದುಕೊಳ್ಳದೇ ಇರುವವರು ಒಬ್ಬರೇ ತಂದೆಯಾಗಿದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ, ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ನೆನಪಿನ ಪರಿಶ್ರಮ ಮತ್ತು ಜ್ಞಾನದ ಧಾರಣೆಯಿಂದ ಕರ್ಮಾತೀತ ಸ್ಥಿತಿಯನ್ನು ಪಡೆಯುವ ಪುರುಷಾರ್ಥ ಮಾಡಬೇಕಾಗಿದೆ. ಜ್ಞಾನಸಾಗರನ ಸಂಪೂರ್ಣಜ್ಞಾನವನ್ನು ಸ್ವಯಂನಲ್ಲಿ ಧಾರಣೆ ಮಾಡಬೇಕಾಗಿದೆ.

2. ಆತ್ಮದಲ್ಲಿ ಹಿಡಿದಿರುವ ತುಕ್ಕನ್ನು ತೆಗೆಯಲು ಸಂಪೂರ್ಣ ನಿರ್ವಿಕಾರಿಗಳಾಗಬೇಕಾಗಿದೆ. ಅಂಶಮಾತ್ರವೂ ಅಪವಿತ್ರತೆಯಿರಬಾರದು. ನಾವಾತ್ಮಗಳು ಸಹೋದರ-ಸಹೋದರರಾಗಿದ್ದೇವೆ- ಈ ಅಭ್ಯಾಸ ಮಾಡಬೇಕಾಗಿದೆ.

ವರದಾನ:
ಸಮಯ ಮತ್ತು ಸಂಕಲ್ಪರೂಪಿ ಖಜಾನೆಗಳ ಮೇಲೆ ಗಮನ ಕೊಟ್ಟು ಜಮಾದ ಖಾತೆ ಹೆಚ್ಚಿಸಿಕೊಳ್ಳುವಂತಹ ಪದಮಾಪದಮ ಪತಿ ಭವ

ಹಾಗೆ ನೋಡಿದರೆ ಖಜಾನೆಗಳಂತೂ ಬಹಳ ಇದೆ ಆದರೆ ಸಮಯ ಮತ್ತು ಸಂಕಲ್ಪ ವಿಶೇಷ ಈ ಎರಡು ಖಜಾನೆಗಳ ಮೇಲೆ ಗಮನಕೊಡಿ. ಪ್ರತಿ ಸಮಯ ಸಂಕಲ್ಪ ಶ್ರೇಷ್ಠ ಮತ್ತು ಶುಭವಾಗಿರಲಿ ಆಗ ಜಮಾದ ಖಾತೆ ಹೆಚ್ಚುತ್ತಾ ಹೋಗುತ್ತದೆ. ಈ ಸಮಯದಲ್ಲಿ ಒಂದು ಜಮಾ ಮಾಡಿದರೆ ಪದಮದಷ್ಟು ಸಿಗುತ್ತದೆ. ಲೆಕ್ಕ ಹೀಗಿದೆ. ಒಂದಕ್ಕೆ ಪದಮಾಗುಣದಷ್ಟು ಮಾಡಿ ಕೊಡುವ ಇದು ಬ್ಯಾಂಕ್ ಆಗಿದೆ ಆದ್ದರಿಂದ ಏನೇ ಆದರೂ, ತ್ಯಾಗ ಮಾಡಬೇಕಾಗಬಹುದು, ತಪಸ್ಯ ಮಾಡಬೇಕಾಗಬಹುದು, ನಿರ್ಮಾನ ರಾಗಬೇಕಾಗಬಹುದು, ಏನೇ ಆಗಲಿ.... ಈ ಎರಡು ಮಾತುಗಳ ಮೇಲೆ ಗಮನವಿದ್ದಾಗ ಪದಮಾಪತಿಗಳಾಗಿಬಿಡುವಿರಿ.

ಸ್ಲೋಗನ್:
ಮನೋಬಲದಿಂದ ಸೇವೆ ಮಾಡಿ ಆಗ ಅದರ ಪ್ರಾಲಬ್ಧ ಬಹಳಷ್ಟು ಹೆಚ್ಚು ಸಿಗುತ್ತದೆ.