17.09.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ- ಈ
ರಹಸ್ಯವನ್ನು ಎಲ್ಲರಿಗೂ ತಿಳಿಸಿ - ಅಬುಪರ್ವತವು ಎಲ್ಲದಕ್ಕಿಂತ ದೊಡ್ಡ ತೀರ್ಥಸ್ಥಾನವಾಗಿದೆ. ಸ್ವಯಂ
ಭಗವಂತನೇ ಇಲ್ಲಿ ಎಲ್ಲರಿಗೂ ಸದ್ಗತಿಯನ್ನು ಕೊಡುತ್ತಾರೆ.”
ಪ್ರಶ್ನೆ:
ಯಾವ ಒಂದು
ಮಾತನ್ನು ಮನುಷ್ಯರು ಒಂದುವೇಳೆ ಅರಿತುಕೊಂಡರೆ ಇಲ್ಲಿ ಸಾಲು ನಿಂತುಬಿಡುತ್ತದೆ?
ಉತ್ತರ:
ತಂದೆಯು ಯಾವ
ರಾಜಯೋಗವನ್ನು ಕಲಿಸಿದ್ದರೋ ಅದನ್ನು ಈಗ ಪುನಃ ಕಲಿಸುತ್ತಿದ್ದಾರೆ. ಅವರು ಸರ್ವವ್ಯಾಪಿಯಲ್ಲ.
ತಂದೆಯು ಈ ಸಮಯದಲ್ಲಿ ಅಬುಪರ್ವತದಲ್ಲಿ ಬಂದು ವಿಶ್ವದಲ್ಲಿ ಶಾಂತಿಸ್ಥಾಪನೆ ಮಾಡುತ್ತಿದ್ದಾರೆ. ಇದರ
ಜಡ (ಸಾಕಾರ)ನೆನಪಾರ್ಥವಾಗಿ ದಿಲ್ವಾಡಾ ಮಂದಿರವೂ ಇದೆ. ಆದಿದೇವನು ಇಲ್ಲಿ ಚೈತನ್ಯದಲ್ಲಿ
ಕುಳಿತ್ತಿದ್ದಾರೆ. ಇದು ಚೈತನ್ಯ ದಿಲ್ವಾಡಾ ಮಂದಿರವಾಗಿದೆ. ಈ ಮುಖ್ಯಮಾತನ್ನು ಮನುಷ್ಯರು ಒಂದುವೇಳೆ
ಅರಿತುಕೊಂಡರೆ ಅಬುಪರ್ವತಕ್ಕೆ ಬಹಳ ಮಹಿಮೆಯಾಗುತ್ತದೆ ಮತ್ತು ಇಲ್ಲಿ ಸಾಲು ನಿಂತುಬಿಡುತ್ತದೆ.
ಅಬುವಿನ ಹೆಸರು ಪ್ರಸಿದ್ಧವಾದರೆ ಇಲ್ಲಿಗೆ ಬಹಳಷ್ಟು ಜನ ಬರುತ್ತಾರೆ.
ಓಂ ಶಾಂತಿ.
ಮಕ್ಕಳಿಗೆ ಯೋಗವನ್ನು ಕಲಿಸಿದೆನು. ಮತ್ತೆಲ್ಲಾ ಸೆಂಟರ್ಗಳಲ್ಲಿ ಎಲ್ಲರೂ ತಾವೇ ಕಲಿಯುತ್ತಾರೆ.
ಕಲಿಸುವವರು ತಂದೆಯಾಗಿರುವುದಿಲ್ಲ. ಪರಸ್ಪರ ಒಬ್ಬರು ಇನ್ನೊಬ್ಬರಿಗೆ ತಾವೇ ಕಲಿಸುತ್ತಾರೆ. ಆದರೆ
ಇಲ್ಲಿ (ಮಧುಬನ)ತಂದೆಯೇ ಕುಳಿತು ಮಕ್ಕಳಿಗೆ ಕಲಿಸಿಕೊಡುತ್ತಾರೆ. ರಾತ್ರಿ-ಹಗಲಿನ ಅಂತರವಿದೆ.
ಸೇವಾಸ್ಥಾನ(ಸೆಂಟರ್)ಗಳಲ್ಲಿ ಬಹಳ ಮಿತ್ರಸಂಬಂಧಿಗಳು ನೆನಪಿಗೆ ಬರುತ್ತಿರುತ್ತಾರೆ. ಆದ್ದರಿಂದ
ಇಷ್ಟೊಂದು ನೆನಪು ಮಾಡಲು ಆಗುವುದಿಲ್ಲ. ಆ ಕಾರಣ ಆತ್ಮಾಭಿಮಾನಿಯಾಗುವುದು ಬಹಳ
ಕಷ್ಟವಾಗುತ್ತದೆ.ಮಧುಬನದಲ್ಲಿ ನೀವು ಬಹಳಷ್ಟು ಬೇಗ ಆತ್ಮಾಭಿಮಾನಿಗಳಾಗಬೇಕು. ಆದರೆ ಅನೇಕರಿಗೆ ಏನೂ
ಅರ್ಥವಾಗುವುದಿಲ್ಲ. ಶಿವತಂದೆಯು ನಮ್ಮ ಸೇವೆ ಮಾಡುತ್ತಿದ್ದಾರೆ. ನಮಗೆ ತಿಳಿಸುತ್ತಿದ್ದಾರೆ-
ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಯಾವ ತಂದೆಯು ಈ ಬ್ರಹ್ಮಾರವರಲ್ಲಿ
ವಿರಾಜಮಾನನಾಗಿದ್ದಾರೆ. ಇಲ್ಲಿ ವಿರಾಜಮಾನವಾಗಿದ್ದಾರೆಂಬ ನಿಶ್ಚಯವು ಅನೇಕರಿಗೆ ಇರುವುದೇ ಇಲ್ಲ.
ನಾವು ಹೇಗೆ ನಿಶ್ಚಯವಿಡುವುದು ಎಂದು ಅನ್ಯರು ಹೇಳುತ್ತಾರೆಯೋ ಅಂತಹವರು ಇಲ್ಲಿಯೂ ಸಹ ಇದ್ದಾರೆ.
ಒಂದುವೇಳೆ ಪೂರ್ಣ ನಿಶ್ಚಯವಿದ್ದರೆ ಬಹಳ ಪ್ರೀತಿಯಿಂದ ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ
ತಮ್ಮಲ್ಲಿ ಶಕ್ತಿಯನ್ನು ತುಂಬಿಕೊಳ್ಳುತ್ತಾ ಬಹಳಷ್ಟು ಸೇವೆ ಮಾಡುತ್ತಾರೆ. ಏಕೆಂದರೆ ಇಡೀ
ವಿಶ್ವವನ್ನು ಪಾವನ ಮಾಡಬೇಕಲ್ಲವೆ. ಯೋಗದಲ್ಲಿ ಕೊರತೆಯಿದ್ದರೆ ಜ್ಞಾನದಲ್ಲಿಯೂ ಕೊರತೆಯಿರುತ್ತದೆ.
ಕೇಳುವುದಂತೂ ಕೇಳುತ್ತಾರೆ ಆದರೆ ಧಾರಣೆಯಾಗುವುದಿಲ್ಲ. ಒಂದುವೇಳೆ ಧಾರಣೆಮಾಡಿದರೆ ಮತ್ತೆ ಅನ್ಯರಿಗೂ
ಧಾರಣೆ ಮಾಡಿಸುತ್ತಾರೆ. ತಂದೆಯು ತಿಳಿಸಿದ್ದರು- ಹೇಗೆ ಅವರು ಸಮ್ಮೇಳನ ಇತ್ಯಾದಿಗಳನ್ನು
ಮಾಡುತ್ತಿರುತ್ತಾರೆ. ವಿಶ್ವದಲ್ಲಿ ಶಾಂತಿಸ್ಥಾಪನೆಯಾಗಲೆಂದು ಇಚ್ಛಿಸುತ್ತಿರುತ್ತಾರೆ. ವಿಶ್ವದಲ್ಲಿ
ಶಾಂತಿಯು ಯಾವಾಗ ಇತ್ತು ಯಾವ ಪ್ರಕಾರವಾಗಿ ಸ್ಥಾಪನೆಯಾಗಿತ್ತು ಎಂಬುದೇನೂ ತಿಳಿದುಕೊಂಡಿಲ್ಲ. ಯಾವ
ಪ್ರಕಾರದ ಶಾಂತಿಯಿತ್ತೋ ಅದೇ ಬೇಕಲ್ಲವೆ ಇದನ್ನಂತೂ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ.
ವಿಶ್ವದಲ್ಲಿ ಸುಖ-ಶಾಂತಿಯ ಸ್ಥಾಪನೆಯು ಈಗಲೇ ಆಗುತ್ತಿದೆ. ತಂದೆಯು ಬಂದಿದ್ದಾರೆ ಹೇಗೆ ಈ ದಿಲ್ವಾಡಾ
ಮಂದಿರವಿದೆ. ಆದಿದೇವನೂ ಇದ್ದಾರೆ. ಮತ್ತೆ ಮೇಲೆ ವಿಶ್ವದಲ್ಲಿ ಶಾಂತಿಯ ಚಿತ್ರವೂ ಇದೆ. ಎಲ್ಲಿಯೇ
ಸಮ್ಮೇಳನಕ್ಕೆ ನಿಮಗೆ ನಿಮಂತ್ರಣ ನೀಡುತ್ತಾರೆಂದರೆ ನೀವು ಅವರಿಗೆ ಕೇಳಿ- ವಿಶ್ವದಲ್ಲಿ ಯಾವ
ಪ್ರಕಾರದ ಶಾಂತಿಯು ಬೇಕು? ಈ ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿ ವಿಶ್ವದಲ್ಲಿ ಶಾಂತಿಯಿತ್ತು,
ದಿಲ್ವಾಡಾ ಮಂದಿರದಲ್ಲಿ ಇದರ ಪೂರ್ಣ ನೆನಪಾರ್ಥವಿದೆ. ವಿಶ್ವದಲ್ಲಿ ಶಾಂತಿಯಿತ್ತೆಂದು
ಸಾಕ್ಷ್ಯಾಧಾರವು ಬೇಕಲ್ಲವೆ. ಲಕ್ಷ್ಮೀ-ನಾರಾಯಣ ಚಿತ್ರದಿಂದ ಜನರು ತಿಳಿದುಕೊಳ್ಳುವುದಿಲ್ಲ.
ಕಲ್ಲುಬುದ್ಧಿಯವರಾಗಿದ್ದಾರಲ್ಲವೆ, ಆದ್ದರಿಂದ ಅವರಿಗೆ ನೀವೇ ತಿಳಿಸಿರಿ- ವಿಶ್ವದಲ್ಲಿ ಶಾಂತಿಯ
ಸಾಕ್ಷಿ ಈ ಲಕ್ಷ್ಮೀ-ನಾರಾಯಣ ಮತ್ತು ಇವರ ರಾಜಧಾನಿಯನ್ನು ತೋರಿಸಲಾಗುತ್ತದೆಯಲ್ಲವೆ. ಅದನ್ನು
ಅಬುಪರ್ವತದಲ್ಲಿ ಬಂದು ನೋಡಿ, ಅದರ ಮಾದರಿಯನ್ನೇ ತಿಳಿದುಕೊಂಡಿಲ್ಲ ಅವರೇ ಕುಳಿತು ಈ ನೆನಪಾರ್ಥ
ಮಂದಿರವನ್ನು ಮಾಡಿದ್ದಾರೆ ಇದಕ್ಕೆ ದಿಲ್ವಾಡಾ ಮಂದಿರವೆಂದು ಹೆಸರಿಟ್ಟಿದ್ದಾರೆ ಆದಿದೇವನನ್ನೂ
ಕೂರಿಸಿದ್ದಾರೆ ಮೇಲೆ ಸ್ವರ್ಗವನ್ನೂ ತೋರಿಸಿದ್ದಾರೆ. ಹೇಗೆ ಅದು ಜಡವಾಗಿದೆಯೋ ಹಾಗೆಯೇ ನೀವು
ಚೈತನ್ಯವಾಗಿದ್ದೀರಿ. ಇದಕ್ಕೆ (ಮಧುಬನ) ಚೈತನ್ಯ ದಿಲ್ವಾಲ ಮಂದಿರವೆಂದು ಹೆಸರಿನ್ನಿಡಬಹುದು. ಆದರೆ
ಇದು ಎಲ್ಲರಿಗೆ ತಿಳಿದರೆ ಎಷ್ಟು ಜನರ ಗುಂಪಾಗುತ್ತದೋ ಗೊತ್ತಿಲ್ಲ! ಇದೇನೆಂದು ಮನುಷ್ಯರೇ
ತಬ್ಬಿಬ್ಬಾಗುತ್ತಾರೆ. ತಿಳಿಸುವುದರಲ್ಲಿ ಬಹಳ ಪರಿಶ್ರಮವಾಗುತ್ತದೆ. ಇದನ್ನು ಕೆಲವರು ಮಕ್ಕಳೂ ಸಹ
ಯಥಾರ್ಥವಾಗಿ ತಿಳಿದುಕೊಂಡಿಲ್ಲ. ಭಲೇ ಇದೇ ಸ್ಥಾನದಲ್ಲಿ ಕುಳಿತಿದ್ದಾರೆ, ಹತ್ತಿರದಲ್ಲಿದ್ದಾರೆ
ಆದರೆ ಸತ್ಯವನ್ನೇ ತಿಳಿದುಕೊಂಡಿಲ್ಲ. ಪ್ರದರ್ಶನಿಯಲ್ಲಿ ಅನೇಕ ಪ್ರಕಾರದ ಮನುಷ್ಯರು ಹೋಗುತ್ತಾರೆ.
ಅನೇಕ ಮಠ-ಪಂಥಗಳಿವೆ ವೈಷ್ಣವ ಧರ್ಮದವರೂ ಇದ್ದಾರೆ ವೈಷ್ಣವ ಧರ್ಮದ ಅರ್ಥವನ್ನೇ ತಿಳಿದುಕೊಂಡಿಲ್ಲ.
ಕೃಷ್ಣನ ರಾಜಧಾನಿ ಎಲ್ಲಿದೆ ಎಂದು ತಿಳಿದುಕೊಂಡೇ ಇಲ್ಲ. ಕೃಷ್ಣನ ರಾಜಧಾನಿಗೆ ಸ್ವರ್ಗ,
ವೈಕುಂಠವೆಂದು ಹೇಳಲಾಗುತ್ತದೆ.
ತಂದೆಯು ತಿಳಿಸಿದ್ದರು-
ನಿಮಗೆ ಎಲ್ಲಿಂದಲೇ ನಿಮಂತ್ರಣ ಸಿಗಲಿ, ಅಲ್ಲಿಗೆ ಹೋಗಿ ತಿಳಿಸಿ- ವಿಶ್ವದಲ್ಲಿ ಶಾಂತಿಯು ಯಾವಾಗ
ಇತ್ತು? ಈ ಅಬುಪರ್ವತವು ಎಲ್ಲದಕ್ಕಿಂತ ಶ್ರೇಷ್ಠಸ್ಥಾನವಾಗಿದೆ. ಏಕೆಂದರೆ ತಂದೆಯು ವಿಶ್ವದ ಸದ್ಗತಿ
ಮಾಡುತ್ತಿದ್ದಾರೆ. ಅಬುಪರ್ವತದ ಮೇಲೆ ಅದರ ಮಾದರಿಯನ್ನು ನೋಡಬೇಕೆಂದರೆ ಹೋಗಿ ದಿಲ್ವಾಡಾ
ಮಂದಿರವನ್ನು ನೋಡಿ, ವಿಶ್ವದಲ್ಲಿ ಶಾಂತಿಯನ್ನು ಹೇಗೆ ಸ್ಥಾಪನೆ ಮಾಡಲಾಗಿತ್ತು ಎಂಬುದರ ಮಾದರಿಯಿದೆ.
ಇದನ್ನು ಕೇಳಿ ಬಹಳ ಖುಷಿಯಾಗುತ್ತಾರೆ. ಜೈನರೂ ಸಹ ಖುಷಿಯಾಗುತ್ತಾರೆ. ಈ ಪ್ರಜಾಪಿತ ಬ್ರಹ್ಮಾರವರು
ನಮ್ಮ ತಂದೆ ಆದಿದೇವನಾಗಿದ್ದಾರೆ ಎಂದು ನೀವು ಹೇಳುತ್ತೀರಿ. ನೀವು ತಿಳಿಸಿದರೂ ಸಹ ಅವರು
ತಿಳಿದುಕೊಳ್ಳುವುದಿಲ್ಲ. ಈ ಬ್ರಹ್ಮಾಕುಮಾರಿಯರು ಏನೂ ಹೇಳುತ್ತಾ ಗೊತ್ತಿಲ್ಲ ಎನ್ನುತ್ತಾರೆ.
ಆದ್ದರಿಂದ ಈಗ ನೀವು ಮಕ್ಕಳು ಅಬುವಿನ ಬಹಳ ಮಹಿಮೆ ಮಾಡಿ ತಿಳಿಸಬೇಕು. ಅಬುಪರ್ವತವು ದೊಡ್ಡದಕ್ಕಿಂತ
ದೊಡ್ಡ ತೀರ್ಥಸ್ಥಾನವಾಗಿದೆ. ಬಾಂಬೆಯಲ್ಲಿಯೂ ಸಹ ನೀವು ತಿಳಿಸಬಹುದು- ಅಬುಪರ್ವತವು ಅತಿದೊಡ್ಡ
ತೀರ್ಥಸ್ಥಾನವಾಗಿದೆ. ಏಕೆಂದರೆ ಪರಮಪಿತ ಪರಮಾತ್ಮನು ಅಬುವಿನಲ್ಲಿ ಬಂದು ಸ್ವರ್ಗಸ್ಥಾಪನೆ
ಮಾಡಿದ್ದಾರೆ. ಇದನ್ನು ಯಾವುದೇ ಮನುಷ್ಯರು ಅರಿತುಕೊಂಡಿಲ್ಲ. ಈಗ ನಾವು ತಿಳಿದುಕೊಂಡಿದ್ದೇವೆ-
ನಿಮಗಿದು ಗೊತ್ತಿಲ್ಲ ಆದ್ದರಿಂದ ನಾವು ನಿಮಗೆ ತಿಳಿಸುತ್ತೇವೆ. ವಿಶ್ವದಲ್ಲಿ ಯಾವ ಪ್ರಕಾರದ
ಶಾಂತಿಯನ್ನು ಬಯಸುತ್ತೀರಿ. ಅದನ್ನು ಎಂದಾದರೂ ನೋಡಿದ್ದೀರಾ? ಎಂದು ಮೊಟ್ಟಮೊದಲಿಗೆ ನೀವು ಅವರನ್ನು
ಕೇಳಿ. ವಿಶ್ವದಲ್ಲಿ ಶಾಂತಿಯು ಈ ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿ ಒಂದೇ ಆದಿಸನಾತನ
ದೇವಿ-ದೇವತಾಧರ್ಮವಿತ್ತು, ಇವರ ವಂಶಾವಳಿಯ ರಾಜ್ಯವಿತ್ತು. ನೀವು ಬಂದರೆ ಇವರ ರಾಜಧಾನಿಯ
ಮಾದರಿಯನ್ನು ಅಬುಪರ್ವತದಲ್ಲಿ ನಿಮಗೆ ತೋರಿಸುತ್ತೇವೆ. ಇದಂತೂ ಹಳೆಯ ಪತಿತ ಪ್ರಪಂಚವಾಗಿದೆ. ಇದಕ್ಕೆ
ಹೊಸಪ್ರಪಂಚವೆಂದಂತೂ ಹೇಳುವುದಿಲ್ಲ. ಹೊಸಪ್ರಪಂಚದ ಮಾದರಿಯಂತೂ ಅಬುವಿನಲ್ಲಿದೆ ಹೊಸ ಪ್ರಪಂಚವು ಈಗ
ಸ್ಥಾಪನೆಯಾಗುತ್ತಾ ಇದೆ. ನೀವು ಮಕ್ಕಳಿಗೆ ಗೊತ್ತಿದೆ ಆದ್ದರಿಂದಲೇ ತಿಳಿಸುತ್ತೀರಿ. ಎಲ್ಲರಿಗೂ
ತಿಳಿದೂ ಇಲ್ಲ, ಅವರು ತಿಳಿಸುವುದೂ ಇಲ್ಲ ಅರ್ಥವಾಗುವುದೂ ಇಲ್ಲ ಬಹಳ ಸಹಜಮಾತಾಗಿದೆ. ಮೇಲೆ
ಸ್ವರ್ಗದ ರಾಜಧಾನಿಯು ನಿಂತಿದೆ. ಕೆಳಗೆ ಆದಿದೇವನು ಕುಳಿತಿದ್ದಾರೆ. ಇವರಿಗೆ ಆಡಂ ಎಂತಲೂ
ಹೇಳುತ್ತಾರೆ. ಅವರು ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಎಂದು ಹೇಳುತ್ತಾರೆ. ಹೀಗೆ ನೀವು
ಮಹಿಮೆಯನ್ನು ತಿಳಿಸುತ್ತೀರೆಂದರೆ ಕೇಳಿ ಬಹಳ ಖುಷಿಯಾಗುತ್ತಾರೆ. ಅಂತೆಯೇ ಇದು ಬಹಳ ನಿಖರವಾಗಿದೆ.
ಹೇಳಿ-ನೀವು ಕೃಷ್ಣನ ಮಹಿಮೆಯನ್ನು ಮಾಡುತ್ತೀರಿ. ಆದರೆ ನೀವು ಏನನ್ನೂ ತಿಳಿದುಕೊಂಡಿಲ್ಲ. ಕೃಷ್ಣನ
ವೈಕುಂಠದ ಮಹಾರಾಜ, ವಿಶ್ವದ ಮಾಲೀಕನಾಗಿದ್ದಾನೆ. ಅದರ ಮಾದರಿಯನ್ನು ನೀವು ನೋಡಬೇಕೆಂದರೂ ನಡೆಯಿರಿ,
ಅಬುಪರ್ವತದಲ್ಲಿ ನಿಮಗೆ ವೈಕುಂಠದ ಮಾದರಿಯನ್ನು ತೋರಿಸುತ್ತೇವೆ. ಹೇಗೆ ಪುರುಷೋತ್ತಮ ಸಂಗಮಯುಗದಲ್ಲಿ
ರಾಜಯೋಗವನ್ನು ಕಲಿತು ವಿಶ್ವದ ಮಾಲೀಕರಾಗುತ್ತಾರೆ- ಆ ಮಾದರಿಯನ್ನೂ ತೋರಿಸುತ್ತೇವೆ. ಸಂಗಮಯುಗದ
ತಪಸ್ಸನ್ನು ತೋರಿಸುತ್ತೇವೆ. ಪ್ರತ್ಯಕ್ಷಜೀವನದಲ್ಲಿ ಏನಾಗಿತ್ತೋ ಅದರ ನೆನಪಾರ್ಥವನ್ನು
ತೋರಿಸುತ್ತೇವೆ. ಯಾವ ತಂದೆಯು ಲಕ್ಷ್ಮೀ-ನಾರಾಯಣರ ರಾಜ್ಯವನ್ನು ಸ್ಥಾಪನೆ ಮಾಡುವರೋ ಅವರದೂ
ಚಿತ್ರವಿದೆ. ಜಗದಂಬೆಯ ಚಿತ್ರವೂ ಇದೆ. ಜಗದಂಬೆ 10-20 ಭುಜಗಳೂ ಇಲ್ಲ, ಎರಡೇ ಭುಜಗಳಿರುತ್ತವೆ.
ನೀವು ಬಂದರೆ ನಿಮಗೆ ತೋರಿಸುತ್ತೇವೆ. ವೈಕುಂಠವನ್ನೂ ಅಬುವಿನಲ್ಲಿ ತೋರಿಸುತ್ತೇವೆ.
ಅಬುಪರ್ವತದಲ್ಲಿಯೇ ತಂದೆಯು ಬಂದು ಇಡೀ ವಿಶ್ವವನ್ನು ಸ್ವರ್ಗವನ್ನಾಗಿ ಮಾಡಿದ್ದಾರೆ. ಸದ್ಗತಿಯನ್ನು
ಕೊಟ್ಟಿದ್ದಾರೆ. ಅಬುಪರ್ವತವು ಎಲ್ಲದಕ್ಕಿಂತ ದೊಡ್ಡ ತೀರ್ಥಸ್ಥಾನವಾಗಿದೆ. ಎಲ್ಲಾ ಧರ್ಮದವರ ಸದ್ಗತಿ
ಮಾಡುವಂತಹ ತಂದೆಯು ಒಬ್ಬರೇ ಆಗಿದ್ದಾರೆ. ನೀವು ಬಂದರೆ ಅದರ ನೆನಪಾರ್ಥವನ್ನು ಅಬುನಲ್ಲಿ
ತೋರಿಸುತ್ತೇವೆ. ನೀವು ಮಕ್ಕಳಂತೂ ಅಬುವಿನ ಮಹಿಮೆಯನ್ನು ಬಹಳಷ್ಟು ಮಾಡಬಹುದು. ಕ್ರಿಶ್ಚಿಯನ್ನರೂ
ಸಹ ಭಾರತದ ಪ್ರಾಚೀನ ರಾಜಯೋಗವನ್ನು ಯಾರು ಕಲಿಸಿದರು, ಅದು ಹೇಗಿತ್ತು ಎಂಬುದನ್ನು ತಿಳಿದುಕೊಳ್ಳಲು
ಬಹಳ ಬಯಸುತ್ತಾರೆ. ಅವರಿಗೆ ಹೇಳಿ, ನಾವು ನಿಮಗೆ ಅಬುವಿನಲ್ಲಿ ತೋರಿಸುತ್ತೇವೆ. ವೈಕುಂಠದ
ಪೂರ್ಣದೃಶ್ಯಗಳನ್ನು ಮಂದಿರದ ಮೇಲ್ಭಾಗದಲ್ಲಿ ತೋರಿಸುತ್ತಾರೆ. ನೀವು ಈ ರೀತಿ ಮಾಡಲು
ಸಾಧ್ಯವಿಲ್ಲವೆಂಬುದನ್ನು ಬಹಳ ಚೆನ್ನಾಗಿ ತಿಳಿಸಬೇಕು. ಯಾತ್ರಿಕರು ಬಹಳಷ್ಟು ಸುತ್ತಾಡುತ್ತಾರೆ,
ಅವರೂ ಸಹ ಬಂದು ತಿಳಿದುಕೊಳ್ಳಲಿ. ನಿಮ್ಮ ಅಬುವಿನ ಹೆಸರು ಪ್ರಸಿದ್ಧವಾಗಿಬಿಟ್ಟರೆ ಅನೇಕರು
ಬರುತ್ತಾರೆ. ಅಬುಪರ್ವತವು ಬಹಳ ಹೆಸರುವಾಸಿಯಾಗಿಬಿಡುತ್ತದೆ. ವಿಶ್ವದಲ್ಲಿ ಶಾಂತಿಯು ಹೇಗೆ
ಸ್ಥಾಪನೆಯಾಗುತ್ತದೆ ಎಂಬುದು ಯಾರಾದರೂ ಕೇಳಿದರೆ ಅಥವಾ ಸಮ್ಮೇಳನಕ್ಕಾಗಿ ನಿಮಗೆ ನಿಮಂತ್ರಣ ಕೊಟ್ಟರೆ
ಆಗ ಅಲ್ಲಿ ಕೇಳಬೇಕು. ವಿಶ್ವದಲ್ಲಿ ಶಾಂತಿಯು ಯಾವಾಗ ಇತ್ತು, ಅದನ್ನು ತಿಳಿದುಕೊಂಡಿದ್ದೀರಾ?
ವಿಶ್ವದಲ್ಲಿ ಶಾಂತಿಯು ಹೇಳಿತ್ತೆಂಬುದನ್ನು ನಡೆಯಿರಿ ನಾವು ತಿಳಿಸುತ್ತೇವೆ ಮತ್ತು ಅದರ ಎಲ್ಲಾ
ಮಾದರಿಗಳನ್ನು ತೋರಿಸುತ್ತೇವೆ. ಇಂತಹ ಮಾದರಿಯು ಮತ್ತೆಲ್ಲಿಯೂ ಇಲ್ಲ. ಅಬುಪರ್ವತವು ಎಲ್ಲದಕ್ಕಿಂತ
ದೊಡ್ಡದಕ್ಕಿಂತ ದೊಡ್ಡ ತೀರ್ಥಸ್ಥಾನವಾಗಿದೆ. ಇಲ್ಲಿ ತಂದೆಯು ಬಂದು ವಿಶ್ವದಲ್ಲಿ ಶಾಂತಿ, ಸರ್ವರ
ಸದ್ಗತಿ ಮಾಡಿದ್ದಾರೆ. ಈ ಮಾತುಗಳನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ನಿಮ್ಮಲ್ಲಿಯೂ ನಂಬರ್ವಾರ್
ಇದ್ದಾರೆ. ಭಲೇ ದೊಡ್ಡ-ದೊಡ್ಡ ಮಹಾರಥಿಗಳು, ಮ್ಯೂಸಿಯಂ ಇತ್ಯಾದಿಗಳನ್ನು ಸಂಭಾಲನೆ ಮಾಡುವವರಿದ್ದಾರೆ.
ಆದರೆ ಅನ್ಯರಿಗೆ ಸರಿಯಾದ ರೀತಿಯಲ್ಲಿ ತಿಳಿಸುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು
ನೋಡುತ್ತಾರಲ್ಲವೆ. ತಂದೆಗೆ ಎಲ್ಲವೂ ಗೊತ್ತಿದೆ, ಯಾರು ಯಾರು ಎಲ್ಲೆಲ್ಲಿಯೇ ಇರಲಿ ಎಲ್ಲರನ್ನೂ
ತಿಳಿದುಕೊಂಡಿದ್ದಾರೆ. ಒಂದು ವೇಳೆ ಶರೀರವನ್ನು ಬಿಟ್ಟರೆ ಏನೂ ಪದವಿಯನ್ನು ಪಡೆಯುವುದಿಲ್ಲ.
ನೆನಪಿನ ಯಾತ್ರೆಯ ಪರಿಶ್ರಮವನ್ನು ಅವರು ತಿಳಿದುಕೊಳ್ಳಲು ಸಾಧ್ಯವಿಲ್ಲ. ತಂದೆಯು ಪ್ರತಿನಿತ್ಯವೂ
ಹೊಸ-ಹೊಸ ಮಾತುಗಳನ್ನು ತಿಳಿಸುತ್ತಾರೆ- ಹೀಗೀಗೆ ತಿಳಿಸಿ ಕರೆದುಕೊಂಡು ಬನ್ನಿ. ಇಲ್ಲಂತೂ
ನೆನಪಾರ್ಥವೂ ಸ್ಥಿರವಾಗಿದೆ.
ತಂದೆಯು ತಿಳಿಸುತ್ತಾರೆ-
ನಾನೂ ಸಹ ಇಲ್ಲಿಯೇ ಇದ್ದೇನೆ. ಆದಿದೇವನೂ ಇಲ್ಲಿದ್ದಾರೆ, ವೈಕುಂಠವೂ ಇಲ್ಲಿಯೇ ಇದೆ. ಮುಂದೆ
ಅಬುಪರ್ವತದ ಬಹಳಷ್ಟು ಮಹಿಮೆಯಾಗಿಬಿಡುತ್ತದೆ. ಹೇಗೆ ನೋಡಿ, ಕುರುಕ್ಷೇತ್ರವನ್ನು ಚೆನ್ನಾಗಿ ಮಾಡಲು
ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿರುತ್ತಾರೆ. ಎಷ್ಟು ಮಂದಿ ಮನುಷ್ಯರು ಹೋಗಿ ಅಲ್ಲಿ
ಸೇರುತ್ತಾರೆ. ಇಷ್ಟೊಂದು ದುರ್ಗಂಧವಾಗಿಬಿಡುತ್ತದೆ. ಅದರ ಮಾತೇ ಕೇಳಬೇಡಿ. ಎಷ್ಟೊಂದು ಗುಂಪು
ಸೇರುತ್ತದೆ. ಭಜನಾ ಮಂಡಳಿಯ ಒಂದು ಬಸ್ಸು ನದಿಯಲ್ಲಿ ಮುಳುಗಿಹೋಯಿತೆಂದು ಸಮಾಚಾರವು ಬಂದಿತ್ತು.
ಇದೆಲ್ಲವೂ ದುಃಖವಲ್ಲವೇ! ಅಕಾಲಮೃತ್ಯವಾಗುತ್ತಾ ಇರುತ್ತದೆ. ಸತ್ಯಯುಗದಲ್ಲಂತೂ ಇಂತಹದೇನೂ
ಆಗುವುದಿಲ್ಲ. ಇವೆಲ್ಲಾ ಮಾತುಗಳನ್ನು ನೀವು ತಿಳಿಸಬಹುದು. ಸಂಭಾಷಣೆ ಮಾಡುವವರು ಬಹಳ
ಬುದ್ಧಿವಂತರಾಗಿರಬೇಕು. ತಂದೆಯು ಜ್ಞಾನವನ್ನು ಬುದ್ಧಿಯಲ್ಲಿ ಕೂರಿಸುತ್ತಿದ್ದಾರೆ. ಈ ಮಾತುಗಳನ್ನು
ಪ್ರಪಂಚದವರು ತಿಳಿದುಕೊಳ್ಳುತ್ತಾರೆಯೇ! ನಾವು ಹೊಸ ಪ್ರಪಂಚವನ್ನು ನೋಡಿಕೊಂಡು ಬರಲು
ಹೋಗುತ್ತೇವೆಂದು ಅವರು ತಿಳಿಯುತ್ತಾರೆ. ತಂದೆಯು ತಿಳಿಸುತ್ತಾರೆ- ಈ ಹಳೆಯ ಪ್ರಪಂಚವು ಈಗ
ಹೋಯಿತ್ತೆಂದರೆ ಹೋಯಿತು. ಇದು ಇನ್ನೂ 40 ಸಾವಿರ ವರ್ಷಗಳಿದೆಯೆಂದು ಹೇಳುತ್ತಾರೆ. ನೀವು
ತಿಳಿಸುತ್ತೀರಿ- ಇಡೀ ಕಲ್ಪದ ಆಯಸ್ಸು 5000 ವರ್ಷಗಳೇ ಆಗಿದೆ. ಹಳೆಯ ಪ್ರಪಂಚದ ಮೃತ್ಯು
ಸಮ್ಮುಖದಲ್ಲಿ ನಿಂತಿದೆ. ಇದಕ್ಕೆ ಘೋರ ಅಂಧಕಾರವೆಂದು ಹೇಳುತ್ತಾರೆ. ಕುಂಭಕರ್ಣನ ನಿದ್ರೆಯಲ್ಲಿ
ಮಲಗಿಬಿಟ್ಟಿದ್ದಾರೆ. ಕುಂಭಕರ್ಣನು ಅರ್ಧಕಲ್ಪ ಮಲಗುತ್ತಿದ್ದನು. ಇನ್ನರ್ಧಕಲ್ಪ
ಜಾಗೃತನಾಗಿರುತ್ತಿದ್ದನು. ಅಂದರೆ ನೀವು ಕುಂಭಕರ್ಣರಾಗಿದ್ದೀರಿ, ಈ ಆಟವು ಬಹಳ ಅದ್ಭುತವಾಗಿದೆ. ಈ
ಮಾತುಗಳನ್ನು ಎಲ್ಲರೂ ಅರಿತುಕೊಳ್ಳುವುದಿಲ್ಲ. ಕೆಲವರಂತೂ ಕೇವಲ ಭಾವನೆಯಲ್ಲಿ ಬಂದುಬಿಡುತ್ತಾರೆ.
ಇಂತಿಂತಹವರೆಲ್ಲರೂ ಹೋಗುತ್ತಿದ್ದಾರೆ ಎಂಬುದನ್ನು ಕೇಳಿ ಅವರೂ ಸಹ ಹೊರಟುಹೋಗುತ್ತಾರೆ. ನಾವು
ಶಿವತಂದೆಯ ಬಳಿ ಹೋಗುತ್ತೇವೆ. ಶಿವತಂದೆಯು ಸ್ವರ್ಗದ ಸ್ಥಾಪನೆ ಮಾಡುತ್ತಿದ್ದಾರೆ. ಆ ಬೇಹದ್ದಿನ
ತಂದೆಯನ್ನು ನೆನಪು ಮಾಡುವುದರಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆಯೆಂದು ಅವರಿಗೆ ಹೇಳುತ್ತಾರೆ.
ಮತ್ತೆ ಅವರೂ ಸಹ ಹೇಳುತ್ತಾರೆ- ಬಾಬಾ, ನಾವು ತಮ್ಮ ಮಕ್ಕಳಾಗಿದ್ದೇವೆ, ತಮ್ಮಿಂದ ಆಸ್ತಿಯನ್ನು
ಅವಶ್ಯವಾಗಿ ತೆಗೆದುಕೊಳ್ಳುತ್ತೇವೆ. ಇಷ್ಟು ಮಾತ್ರವಿದ್ದರೂ ದೋಣಿಯು ಪಾರಾಗುತ್ತದೆ. ಭಾವನೆಯ ಫಲ
ನೋಡಿ, ಎಷ್ಟೊಂದು ಸಿಗುತ್ತದೆ. ಭಕ್ತಮಾರ್ಗದಲ್ಲಂತೂ ಅಲ್ಪಕಾಲದ ಸುಖವಿದೆ. ಇಲ್ಲಿ ನೀವು ಮಕ್ಕಳು
ತಿಳಿದುಕೊಂಡಿದ್ದೀರಿ. ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆ. ಅಲ್ಲಂತೂ ಭಾವನೆಯ
ಅಲ್ಪಕಾಲದ ಸುಖದ ಪ್ರಾಪ್ತಿಯು ಸಿಗುತ್ತದೆ. ಇಲ್ಲಿ ನಿಮಗೆ 21 ಜನ್ಮಗಳಿಗಾಗಿ ಭಾವನೆಯ ಫಲವು
ಸಿಗುತ್ತದೆ ಬಾಕಿ ಸಾಕ್ಷಾತ್ಕಾರದಲ್ಲಿ ಏನೂ ಇಲ್ಲ. ನಮಗೂ ಸಾಕ್ಷಾತ್ಕಾರವಾಗಬೇಕೆಂದು ಕೆಲವರು
ಹೇಳುತ್ತಾರೆ. ಆಗ ತಂದೆಯು ಇವರು ಏನೂ ತಿಳಿದುಕೊಂಡಿಲ್ಲವೆಂದು ತಿಳಿಯುತ್ತಾರೆ. ಸಾಕ್ಷಾತ್ಕಾರವನ್ನು
ನೋಡಬೇಕೆಂದರೆ ಹೋಗಿ ನೌಧಾಭಕ್ತಿಯನ್ನು ಮಾಡಿ. ಅದರಿಂದ ಏನೂ ಸಿಗುವುದಿಲ್ಲ. ಭಲೇ ಇನ್ನೊಂದು
ಜನ್ಮದಲ್ಲಿ ಚೆನ್ನಾಗಿರಬಹುದಷ್ಟೇ. ಒಳ್ಳೆಯ ಭಕ್ತರಾಗಿದ್ದರೆ ಒಳ್ಳೆಯ ಜನ್ಮ ಸಿಗುತ್ತದೆ. ಆದರೆ
ಇಲ್ಲಂತ ಈ ಮಾತೇ ಭಿನ್ನವಾಗಿದೆ. ಈ ಹಳೆಯ ಪ್ರಪಂಚವು ಪರಿವರ್ತನೆಯಾಗುತ್ತಿದೆ. ತಂದೆಯು
ಪ್ರಪಂಚವನ್ನು ಪರಿವರ್ತನೆ ಮಾಡುವವರಾಗಿದ್ದಾರೆ. ನೆನಪಾರ್ಥವು ನಿಂತಿದೆಯಲ್ಲವೆ. ಆದರೆ ಆ ಶೋಭೆಯಂತೂ
ಕಡಿಮೆಯಾಗಿಯೇ ಬಿಡುತ್ತದೆ ಅಲ್ಲವೆ. ಇವೆಲ್ಲವೂ ವಿನಾಶಿ ವಸ್ತುಗಳಾಗಿವೆ. ಆದ್ದರಿಂದ ತಂದೆಯು
ತಿಳಿಸುತ್ತಾರೆ- ಮಕ್ಕಳೇ, ಒಂದಂತೂ ತಮ್ಮ ಕಲ್ಯಾಣಕ್ಕಾಗಿ ತಮ್ಮನ್ನು ಆತ್ಮನೆಂದು ತಿಳಿದು
ತಂದೆಯನ್ನು ನೆನಪು ಮಾಡಿ ಆಗ ವಿಕರ್ಮಗಳು ವಿನಾಶವಾಗುತ್ತವೆ. ಇದು ವಿದ್ಯಾಭ್ಯಾಸದ ಮಾತಾಗಿದೆ. ಬಾಕಿ
ಮಥುರಾದಲ್ಲಿ ಮಧುಬನ, ಕೂಂಜ್ಗಲ್ಲಿ ಇತ್ಯಾದಿ ಏನು ಕುಳಿತು ಮಾಡಿದ್ದಾರೆ ಅದೇನೂ ಇಲ್ಲ. ಯಾವುದೇ
ಗೋಪ-ಗೋಪಿಕೆಯರ ಆಟವೂ ಇಲ್ಲ. ಇದನ್ನು ತಿಳಿಸುವುದರಲ್ಲಿ ಬಹಳ ಪರಿಶ್ರಮಪಡಬೇಕಾಗುತ್ತದೆ. ಕುಳಿತು
ಒಂದೊಂದು ಪಾಯಿಂಟನ್ನು ಚೆನ್ನಾಗಿ ತಿಳಿಸಿ. ಸಮ್ಮೇಳನದಲ್ಲಿಯೂ ಸಹ ಬಹಳ ಯೋಗಯುಕ್ತರಾಗಿರುವವರು ಬೇಕು.
ಜ್ಞಾನದ ಕತ್ತಿಯಲ್ಲಿ ಯೋಗದ ಹರಿತವಿಲ್ಲವೆಂದರೆ ಬಾಣವು ಯಾರಿಗೂ ನಾಟುವುದಿಲ್ಲ. ಆದ್ದರಿಂದಲೇ
ತಂದೆಯೂ ತಿಳಿಸುತ್ತಾರೆ- ಈಗ ಇನ್ನೂ ಸಮಯವಿದೆ. ಪರಮಾತ್ಮನು ಸರ್ವವ್ಯಾಪಿಯಲ್ಲವೆಂದು ಎಲ್ಲರೂ
ನಂಬಿದರೆ ಈಗ ಇಲ್ಲಿ ಸಾಲು-ಸಾಲಾಗಿ ನಿಂತುಬಿಡುತ್ತದೆ. ಆದರೆ ಈಗ ಸಮಯವಿಲ್ಲ. ಒಂದು ಮಾತನ್ನು
ಮುಖ್ಯವಾಗಿ ಅರ್ಥಮಾಡಿಕೊಳ್ಳಬೇಕು. ರಾಜಯೋಗವನ್ನು ತಂದೆಯು ಕಲಿಸಿದ್ದರು. ಮತ್ತೆ ಅದನ್ನು ಈ
ಸಮಯದಲ್ಲಿ ಕಲಿಸುತ್ತಿದ್ದಾರೆ. ಆ ತಂದೆಗೆ ಬದಲಾಗಿ ಯಾರು ಶ್ಯಾಮನಾಗಿದ್ದಾರೆಯೋ ಅವರ ಹೆಸರನ್ನು
ಹಾಕಿಬಿಟ್ಟಿದ್ದಾರೆ. ಎಷ್ಟು ತಪ್ಪಾಗಿದೆ! ಇದರಿಂದಲೇ ನಿಮ್ಮ ದೋಣಿಯು ಮುಳುಗಿದೆ.
ಈಗ ತಂದೆಯು
ತಿಳಿಸುತ್ತಾರೆ- ಈ ವಿದ್ಯೆಯು ಆದಾಯದ ಮೂಲವಾಗಿದೆ. ಸ್ವಯಂ ತಂದೆಯೇ ಮನುಷ್ಯರನ್ನು ದೇವತೆಗಳನ್ನಾಗಿ
ಮಾಡುವುದಕ್ಕಾಗಿ ಓದಿಸಲು ಬರುತ್ತಾರೆ. ಇದರಲ್ಲಿ ಅವಶ್ಯವಾಗಿ ಪವಿತ್ರರೂ ಆಗಬೇಕು. ದೈವೀಗುಣಗಳನ್ನೂ
ಧಾರಣೆ ಮಾಡಬೇಕಾಗಿದೆ. ನಂಬರ್ವಾರಂತೂ ಇದ್ದೇ ಇರುತ್ತಾರೆ. ಯಾವುದೆಲ್ಲಾ ಸೇವಾಕೇಂದ್ರಗಳಿವೆಯೋ
ಎಲ್ಲಾ ಕಡೆಯೂ ನಂಬರ್ವಾರ್ ಇದ್ದಾರೆ. ಈಗ ರಾಜಧಾನಿಯು ಸ್ಥಾಪನೆಯಾಗುತ್ತದೆ. ಇದೇನೂ ಚಿಕ್ಕಮ್ಮನ
ಮನೆಯಂತಲ್ಲ. ತಿಳಿಸಿ, ಸ್ವರ್ಗವೆಂದು ಸತ್ಯಯುಗಕ್ಕೆ ಹೇಳಲಾಗುತ್ತದೆ. ಆದರೆ ಅಲ್ಲಿಯ ರಾಜ್ಯವು ಹೇಗೆ
ನಡೆಯುತ್ತದೆ ಮತ್ತು ದೇವತೆಗಳ ಸಮೂಹವನ್ನು ನೋಡಬೇಕೆಂದರೆ ಅಬುಪರ್ವತಕ್ಕೆ ನಡೆಯಿರಿ. ಮತ್ತೆಲ್ಲಿಯೂ
ಹೀಗೆ ಛಾವಣಿ ಭಾಗದಲ್ಲಿ ರಾಜಧಾನಿಯನ್ನು ತೋರಿಸಿರುವಂತಹ ಚಿತ್ರ (ಸ್ಥಾನ) ಮತ್ತೆಲ್ಲಿಯೂ ಇಲ್ಲ. ಭಲೇ
ಅಜ್ಮೀರ್ನಲ್ಲಿ ಸ್ವರ್ಗದ ಮಾದರಿಯಿದೆ ಆದರೆ ಅದು ಬೇರೆ ಮಾತಾಗಿದೆ. ಇಲ್ಲಂತೂ ಆದಿದೇವನೂ
ಇದ್ದಾರಲ್ಲವೆ. ಸತ್ಯಯುಗವನ್ನು ಯಾರು ಮತ್ತು ಹೇಗೆ ಸ್ಥಾಪನೆ ಮಾಡಿದರು, ಇದು ಸರಿಯಾದ
ನೆನಪಾರ್ಥವಾಗಿದೆ. ಈಗ ನಾವು ಚೈತನ್ಯ ದಿಲ್ವಾಡಾ ಎಂಬ ಹೆಸರನ್ನು ಬರೆಯಲು ಆಗುವುದಿಲ್ಲ. ಯಾವಾಗ
ಮನುಷ್ಯರು ತಾವೇ ಬಂದು ಅರಿತುಕೊಳ್ಳುವರೋ ಆಗ ನೀವು ಈ ರೀತಿ ಬರೆಯಿರಿ ಎಂದು ತಾವಾಗಿಯೇ ಹೇಳುತ್ತಾರೆ.
ಈಗಿನ್ನೂ ಆ ಮಾತಿಲ್ಲ. ಈಗಂತೂ ನೋಡಿ- ಸ್ವಲ್ಪ ಮಾತಿನಲ್ಲಿಯೇ ಏನೇನು ಮಾಡಿಬಿಡುತ್ತಾರೆ! ಕ್ರೋಧಿಗಳು
ಅನೇಕರಿರುತ್ತಾರೆ. ದೇಹಾಭಿಮಾನವಿದೆಯಲ್ಲವೆ. ನೀವು ಮಕ್ಕಳ ವಿನಃ ಮತ್ತ್ಯಾರೂ
ಆತ್ಮಾಭಿಮಾನಿಗಳಾಗಿರಲು ಸಾಧ್ಯವಿಲ್ಲ. ಪುರುಷಾರ್ಥ ಮಾಡಬೇಕಾಗಿದೆ. ಅದೃಷ್ಟದಲ್ಲಿದ್ದರೆ
ಆಗುವುದೆಂದು ತಿಳಿಯಬಾರದು. ಪುರುಷಾರ್ಥಿಗಳು ಈ ರೀತಿ ಹೇಳುವುದಿಲ್ಲ. ಅವರಂತೂ ಪುರುಷಾರ್ಥವನ್ನು
ಮಾಡುತ್ತಾ ಇರುತ್ತಾರೆ. ಅಂತಿಮದಲ್ಲಿ ಅನುತ್ತೀರ್ಣರಾದಾಗ ಅದೃಷ್ಟದಲ್ಲಿ ಏನಿತ್ತೋ ಅದಾಯಿತೆಂದು
ಹೇಳುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ
ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ದೇಹೀ-ಅಭಿಮಾನಿಯಾಗುವ ಸಂಪೂರ್ಣ ಪುರುಷಾರ್ಥ ಮಾಡಬೇಕಾಗಿದೆ. ಅದೃಷ್ಟದಲ್ಲಿದ್ದರೆ ಆಗುತ್ತದೆ ಎಂದು
ಎಂದಿಗೂ ಯೋಚಿಸಬಾರದು. ಬುದ್ಧಿವಂತರಾಗಬೇಕಾಗಿದೆ.
2. ಜ್ಞಾನವನ್ನು ಕೇಳಿ
ಅದನ್ನು ಸ್ವರೂಪದಲ್ಲಿ ತರಬೇಕಾಗಿದೆ. ನೆನಪಿನ ಹರಿತವನ್ನು ಧಾರಣೆ ಮಾಡಿ ನಂತರ ಸೇವೆ ಮಾಡಬೇಕಾಗಿದೆ.
ಎಲ್ಲರಿಗೂ ಅಬು ಮಹಾನ್ ತೀರ್ಥಸ್ಥಾನದ ಮಹಿಮೆಯನ್ನು ತಿಳಿಸಬೇಕಾಗಿದೆ.
ವರದಾನ:
ಬಾಬಾ ಎನ್ನುವ
ಒಂದು ಶಬ್ಧದ ಸ್ಮೃತಿಯಿಂದ ನೆನಪು ಮತ್ತು ಸೇವೆಯಲ್ಲಿರುವಂತಹ ಸತ್ಯ ಯೋಗಿ, ಸತ್ಯ ಸೇವಾಧಾರಿ ಭವ.
ತಾವು ಮಕ್ಕಳು ಮುಖದಿಂದ
ಅಥವಾ ಮನಸ್ಸಿನಿಂದ ಪದೇ-ಪದೇ ಬಾಬಾ ಎನ್ನುವ ಶಬ್ಧ ಹೇಳುವಿರಿ, ಮಕ್ಕಳಾದ ಮೇಲೆ ಬಾಬಾ ಶಬ್ಧ ನೆನಪಿಗೆ
ಬರುವುದು ಅಥವಾ ಯೋಚಿಸುವುದೇ ಯೋಗವಾಗಿದೆ ಮತ್ತು ಮುಖದಿಂದ ಪದೇ-ಪದೇ ಹೇಳಬೇಕು ಬಾಬಾ ಈ ರೀತಿ
ಹೇಳುತ್ತಾರೆ, ಬಾಬಾ ಇದನ್ನು ಹೇಳಿದರು - ಇದೇ ಸೇವೆಯಾಗಿದೆ. ಆದರೆ ಈ ಬಾಬಾ ಶಬ್ದವನ್ನು ಕೆಲವರು
ಹೃದಯದಿಂದ ಹೇಳುವವರಿದ್ದಾರೆ ಕೆಲವರು ಜ್ಞಾನದ ಬುದ್ಧಿಯಿಂದ ಹೇಳುತ್ತಾರೆ. ಯಾರು ಹೃದಯದಿಂದ
ಹೇಳುತ್ತಾರೆ ಅವರಿಗೆ ಹೃದಯದಲ್ಲಿ ಸದಾ ಪ್ರತ್ಯಕ್ಷ ಪ್ರಾಪ್ತಿ ಖುಶಿ ಮತ್ತು ಶಕ್ತಿ ಸಿಗುವುದು.
ಬುದ್ಧಿಯಿಂದ ಹೇಳುವವರಿಗೆ ಹೇಳುವಷ್ಟು ಸಮಯ ಖುಷಿಯಾಗುವುದು ಸದಾಕಾಲಕ್ಕಾಗಿ ಅಲ್ಲ.
ಸ್ಲೋಗನ್:
ಪರಮಾತ್ಮ ರೂಪಿ
ಜ್ಯೋತಿಯ ಮೇಲೆ ಬಲಿಹಾರಿಯಾಗುವವರೇ ಸತ್ಯ ಪತಂಗಗಳಾಗಿದ್ದಾರೆ.