17.10.25         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ಹೇಗೆ ತಂದೆಯು ಭವಿಷ್ಯ 21 ಜನ್ಮಗಳಿಗಾಗಿ ಸುಖವನ್ನು ಕೊಡುತ್ತಾರೆ, ಹಾಗೆಯೇ ತಾವು ಮಕ್ಕಳೂ ಸಹ ತಂದೆಗೆ ಸಹಯೋಗಿಗಳಾಗಿ, ಪ್ರೀತಿ ಬುದ್ಧಿಯವರಾಗಿ, ದುಃಖ ಕೊಡುವ ಸಂಕಲ್ಪವೆಂದೂ ಬಾರದಿರಲಿ"

ಪ್ರಶ್ನೆ:
ನೀವು ರೂಪಭಸಂತ ಮಕ್ಕಳ ಕರ್ತವ್ಯವೇನಾಗಿದೆ? ನಿಮಗೆ ತಂದೆಯ ಯಾವ ಶಿಕ್ಷಣ ಸಿಕ್ಕಿದೆ?

ಉತ್ತರ:
ನಿಮ್ಮ ಬಾಯಿಂದ ಸದಾ ರತ್ನಗಳನ್ನೇ ಹೊರ ಹಾಕುವುದು. ನೀವು ರೂಪ ಭಸಂತ ಮಕ್ಕಳ ಕರ್ತವ್ಯವಾಗಿದೆ - ನಿಮ್ಮ ಬಾಯಿಂದ ಎಂದೂ ಕಲ್ಲುಗಳು ಬರಬಾರದು. ಸರ್ವ ಮಕ್ಕಳ ಪ್ರತಿ ತಂದೆಯ ಶಿಕ್ಷಣವಾಗಿದೆ - ಮಕ್ಕಳೇ, 1. ಪರಸ್ಪರ ಎಂದೂ ಒಬ್ಬರು ಇನ್ನೊಬ್ಬರಿಗೆ ತೊಂದರೆ ಕೊಡಬೇಡಿ, ಕೋಪಿಸಿಕೊಳ್ಳಬೇಡಿ. ಇದು ಆಸುರೀ ಮನುಷ್ಯರ ಕೆಲಸವಾಗಿದೆ. 2. ಮನಸ್ಸಿನಲ್ಲಿಯೂ ಸಹ ಅನ್ಯರಿಗೆ ದುಃಖ ಕೊಡುವ ಸಂಕಲ್ಪವು ಬರಬಾರದು. 3. ನಿಂದಾ-ಸ್ತುತಿ, ಮಾನ-ಅಪಮಾನ ಎಲ್ಲವನ್ನೂ ಸಹನೆ ಮಾಡಬೇಕಾಗಿದೆ. ಒಂದುವೇಳೆ ಯಾರು ಏನಾದರೂ ಹೇಳಿದರೂ ಸಹ ಶಾಂತವಾಗಿರಿ. ತಮ್ಮ ಕೈಯಲ್ಲಿ ಕಾನೂನನ್ನು ತೆಗೆದುಕೊಳ್ಳಬೇಡಿ.

ಗೀತೆ:
ನೀವು ಪ್ರೀತಿಯ ಸಾಗರನಾಗಿದ್ದೀರಿ.............

ಓಂ ಶಾಂತಿ.
ಜ್ಞಾನ ಮತ್ತು ಅಜ್ಞಾನ. ನೀವು ಮಕ್ಕಳಿಗೆ ಈಗ ಜ್ಞಾನವಿದೆ - ಭಕ್ತರು ಯಾರ ಮಹಿಮೆ ಮಾಡುತ್ತಾರೆ ಮತ್ತು ಇಲ್ಲಿ ಕುಳಿತಿರುವ ನೀವು ಮಕ್ಕಳು ಯಾರ ಮಹಿಮೆಯನ್ನು ಕೇಳುತ್ತೀರಿ? ರಾತ್ರಿ-ಹಗಲಿನ ಅಂತರವಿದೆ. ಅವರಂತೂ ಕೇವಲ ಹಾಗೆಯೇ ಮಹಿಮೆ ಮಾಡುತ್ತಿರುತ್ತಾರೆ. ಅಷ್ಟು ಪ್ರೀತಿಯಿರುವುದಿಲ್ಲ ಏಕೆಂದರೆ ಯಥಾರ್ಥವಾದ ಪರಿಚಯವಿಲ್ಲ. ನಿಮಗೆ ತಂದೆಯು ತಮ್ಮ ಪರಿಚಯವನ್ನು ನೀಡಿದ್ದಾರೆ - ಮಕ್ಕಳೇ, ನಾನು ಪ್ರೀತಿಯ ಸಾಗರನಾಗಿದ್ದೇನೆ, ನಿಮ್ಮನ್ನೂ ಪ್ರೀತಿಯ ಸಾಗರರನ್ನಾಗಿ ಮಾಡುತ್ತಿದ್ದೇನೆ. ಪ್ರೀತಿಯ ಸಾಗರ ತಂದೆಯು ಎಲ್ಲರಿಗೆ ಎಷ್ಟು ಪ್ರಿಯರೆನಿಸುತ್ತಾರೆ, ಸತ್ಯಯುಗದಲ್ಲಿಯೂ ಸಹ ಎಲ್ಲರೂ ಪರಸ್ಪರ ಬಹಳ ಪ್ರೀತಿ ಮಾಡುತ್ತಾರೆ, ಅದನ್ನು ನೀವು ಇಲ್ಲಿಂದಲೇ ಕಲಿಯುತ್ತೀರಿ ಅಂದಮೇಲೆ ಯಾರ ಜೊತೆಯೂ ವಿರೋಧವಿರಬಾರದು, ಅಂತಹವರಿಗೆ ತಂದೆಯು ಉಪ್ಪು-ನೀರಿನ ಸಮಾನರೆಂದು ಹೇಳುತ್ತಾರೆ ಅಂದಾಗ ಆಂತರ್ಯದಲ್ಲಿ ಯಾರದೇ ಪ್ರತಿ ತಿರಸ್ಕಾರವಿರಬಾರದು. ತಿರಸ್ಕಾರ ಮಾಡುವವರು ಕಲಿಯುಗೀ ನರಕವಾಸಿಗಳಾಗಿದ್ದಾರೆ. ನಾವೆಲ್ಲರೂ ಸಹೋದರ-ಸಹೋದರಿಯರಾಗಿದ್ದೇವೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಶಾಂತಿಧಾಮದಲ್ಲಿದ್ದಾಗ ಸಹೋದರ-ಸಹೋದರರಾಗಿರುತ್ತೀರಿ. ಇಲ್ಲಿ ಕರ್ಮ ಕ್ಷೇತ್ರದಲ್ಲಿ ಪಾತ್ರವನ್ನಭಿನಯಿಸಿದಾಗ ಸಹೋದರ-ಸಹೋದರಿಯಾಗುತ್ತೀರಿ. ಈಶ್ವರೀಯ ಸಂತಾನರಾಗಿದ್ದೀರಿ, ಈಶ್ವರನ ಮಹಿಮೆಯಾಗಿದೆ - ಅವರು ಜ್ಞಾನ ಸಾಗರ, ಪ್ರೇಮ ಸಾಗರನಾಗಿದ್ದಾರೆ ಅಂದರೆ ಎಲ್ಲರಿಗೆ ಸುಖ ಕೊಡುತ್ತಾರೆ. ನೀವೆಲ್ಲರೂ ಹೃದಯದಿಂದ ಕೇಳಿಕೊಳ್ಳಿ - ಹೇಗೆ ತಂದೆಯು ಭವಿಷ್ಯ 21 ಜನ್ಮಗಳಿಗಾಗಿ ಸುಖ ಕೊಡುತ್ತಾರೆಯೋ ಹಾಗೆಯೇ ನಾವೂ ಸಹ ಆ ಕಾರ್ಯವನ್ನು ಮಾಡುತ್ತೇವೆಯೇ? ಒಂದುವೇಳೆ ತಂದೆಗೆ ಸಹಯೋಗಿಗಳಾಗುವುದಿಲ್ಲ, ಪ್ರೀತಿ ಮಾಡುವುದಿಲ್ಲ, ಪರಸ್ಪರ ಪ್ರೀತಿಯಿಲ್ಲ, ವಿಪರೀತ ಬುದ್ಧಿಯವರಾಗಿರುತ್ತೀರೆಂದರೆ ವಿನಃಶ್ಯಂತಿಯಾಗಿ ಬಿಡುವಿರಿ. ವಿಪರೀತ ಬುದ್ಧಿಯವರಾಗುವುದು ಅಸುರರ ಕೆಲಸವಾಗಿದೆ. ತಮ್ಮನ್ನು ಈಶ್ವರೀಯ ಸಂಪ್ರದಾಯದವರೆಂದು ಕರೆಸಿಕೊಂಡು ಮತ್ತೆ ಪರಸ್ಪರ ದುಃಖ ಕೊಟ್ಟರೆ ಅಂತಹವರಿಗೆ ಅಸುರರೆಂದು ಕರೆಯಲಾಗುವುದು. ನೀವು ಮಕ್ಕಳು ಯಾರಿಗೂ ದುಃಖವನ್ನು ಕೊಡಬಾರದಾಗಿದೆ. ನೀವು ದುಃಖಹರ್ತ-ಸುಖಕರ್ತ ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ದುಃಖ ಕೊಡುವ ಸಂಕಲ್ಪವೂ ಸಹ ನಿಮಗೆ ಬರಬಾರದು. ಅವರಂತೂ ಆಸುರೀ ಸಂಪ್ರದಾಯದವರಾಗಿದ್ದಾರೆ, ಈಶ್ವರೀಯ ಸಂಪ್ರದಾಯದವರಲ್ಲ ಏಕೆಂದರೆ ದೇಹಾಭಿಮಾನಿಗಳಾಗಿದ್ದಾರೆ. ಅವರೆಂದೂ ನೆನಪಿನ ಯಾತ್ರೆಯಲ್ಲಿರಲು ಸಾಧ್ಯವಿಲ್ಲ. ನೆನಪಿನ ಯಾತ್ರೆಯಿಲ್ಲದೆ ಕಲ್ಯಾಣವಾಗುವುದಿಲ್ಲ. ಆಸ್ತಿ ಕೊಡುವಂತಹ ತಂದೆಯನ್ನು ಅವಶ್ಯವಾಗಿ ನೆನಪು ಮಾಡಬೇಕಾಗಿದೆ, ಇದರಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ಅರ್ಧ ಕಲ್ಪವಂತೂ ಒಬ್ಬರು ಇನ್ನೊಬ್ಬರಿಗೆ ದುಃಖವನ್ನು ಕೊಡುತ್ತಲೇ ಬಂದಿದ್ದೀರಿ. ಪರಸ್ಪರ ಹೊಡೆದಾಡುತ್ತಾ, ತೊಂದರೆ ಕೊಡುತ್ತಿರುತ್ತಾರೆ ಅಂತಹವರನ್ನು ಆಸುರಿ ಸಂಪ್ರದಾಯದವರೆಂದು ಎಣಿಸಲಾಗುತ್ತದೆ. ಭಲೆ ಎಲ್ಲರೂ ಪುರುಷಾರ್ಥಿಗಳೇ ಆದರೆ ಎಲ್ಲಿಯವರೆಗೆ ದುಃಖವನ್ನು ಕೊಡುತ್ತಾ ಇರುತ್ತೀರಿ? ಆದ್ದರಿಂದ ತಮ್ಮ ಚಾರ್ಟನ್ನಿಡಿ ಎಂದು ತಂದೆಯು ಹೇಳುತ್ತಾರೆ. ಚಾರ್ಟ್ ಇಡುವುದರಿಂದ ನಮ್ಮ ರಿಜಿಸ್ಟರ್ ಸುಧಾರಣೆಯಾಗುತ್ತಿದೆಯೇ ಅಥವಾ ಅದೇ ಆಸುರೀ ಚಲನೆಯಿದೆಯೇ ಎಂಬುದು ಗೊತ್ತಾಗುತ್ತದೆ. ತಂದೆಯು ಯಾವಾಗಲೂ ಹೇಳುತ್ತಾರೆ - ಮಕ್ಕಳೇ, ಎಂದೂ ಯಾರಿಗೂ ದುಃಖವನ್ನು ಕೊಡಬೇಡಿ. ನಿಂದಾ-ಸ್ತುತಿ, ಮಾನ-ಅಪಮಾನ, ಸೆಕೆ-ಚಳಿ ಎಲ್ಲವನ್ನೂ ಸಹನೆ ಮಾಡಬೇಕಾಗಿದೆ. ಯಾರಾದರೂ ಏನಾದರೂ ಹೇಳಿದರೆ ಶಾಂತವಾಗಿರಿ. ಅವರಿಗೆ ಎರಡು ಮಾತುಗಳನ್ನು ಅಂದು ಬಿಡುವುದಲ್ಲ. ಯಾರು ಯಾರಿಗಾದರೂ ದುಃಖ ಕೊಡುತ್ತಾರೆಂದರೆ ಅವರಿಗೆ ತಿಳಿಸಿ ಕೊಡಲು ತಂದೆಯಿದ್ದಾರಲ್ಲವೆ. ಆದ್ದರಿಂದ ಪರಸ್ಪರ ಮಕ್ಕಳಿಗೆ ಹೇಳುವಂತಿಲ್ಲ. ತಮ್ಮ ಕೈಯಲ್ಲಿ ಕಾನೂನನ್ನು ತೆಗೆದುಕೊಳ್ಳಬಾರದು. ಯಾವುದೇ ಮಾತಿದ್ದರೆ ತಂದೆಯ ಬಳಿ ಬನ್ನಿರಿ. ಸರ್ಕಾರದಲ್ಲಿಯೂ ಸಹ ಈ ನಿಯಮವಿದೆ - ಯಾರೂ ಪರಸ್ಪರ ಹೊಡೆದಾಡುವಂತಿಲ್ಲ ಏಕೆಂದರೆ ದೂರು ಕೊಡಬಹುದು. ಅವರ ಪ್ರತಿ ಕ್ರಮ ಕೈಗೊಳ್ಳುವುದು ಸರ್ಕಾರದ ಕೆಲಸವಾಗಿದೆ ಹಾಗೆಯೇ ನೀವೂ ಸಹ ಈ ಸರ್ಕಾರದ ಬಳಿ ಬನ್ನಿ, ತಮ್ಮ ಕೈಯಲ್ಲಿ ಕ್ರಮ ಕೈಗೊಳ್ಳಬೇಡಿ. ಇದಂತೂ ತಮ್ಮ ಮನೆಯಾಗಿದೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ನಿತ್ಯವೂ ಕಛೇರಿಯನ್ನು ನಡೆಸಿ, ಶಿವ ತಂದೆಯು ನಮಗೆ ಆದೇಶ ನೀಡುತ್ತಾರೆ ಎಂಬುದನ್ನೂ ಸಹ ತಿಳಿದುಕೊಳ್ಳುವುದಿಲ್ಲ. ತಂದೆಯು ತಿಳಿಸಿದ್ದಾರೆ - ಯಾವಾಗಲೂ ಶಿವ ತಂದೆಯು ಹೇಳುತ್ತಾರೆಂದೇ ತಿಳಿಯಿರಿ - ಈ ಬ್ರಹ್ಮಾರವರು ಹೇಳುತ್ತಾರೆಂದುಕೊಳ್ಳಬೇಡಿ. ಯಾವಾಗಲೂ ಶಿವ ತಂದೆಯೆಂದೇ ತಿಳಿಯಿರಿ ಆಗ ತಂದೆಯ ನೆನಪಿರುವುದು. ನಿಮಗೆ ಜ್ಞಾನವನ್ನು ತಿಳಿಸಲು ಶಿವ ತಂದೆಯು ಈ (ಬ್ರಹ್ಮಾ) ರಥವನ್ನು ತೆಗೆದುಕೊಂಡಿದ್ದಾರೆ. ಸತೋಪ್ರಧಾನರಾಗುವ ಮಾರ್ಗವನ್ನು ತಂದೆಯು ತಿಳಿಸುತ್ತಿದ್ದಾರೆ. ಅವರು ಗುಪ್ತವಾಗಿದ್ದಾರೆ, ನೀವು ಪ್ರತ್ಯಕ್ಷವಾಗಿದ್ದೀರಿ. ಯಾವುದೇ ಆದೇಶವನ್ನು ಕೊಡುತ್ತಾರೆಂದರೆ ಇದು ಶಿವ ತಂದೆಯ ಆದೇಶವೆಂದು ತಿಳಿಯಿರಿ ಆಗ ನೀವು ಸುರಕ್ಷಿತವಾಗಿರುತ್ತೀರಿ. ನೀವು ಬಾಬಾ, ಬಾಬಾ ಎಂದು ಶಿವ ತಂದೆಗೇ ಹೇಳುತ್ತೀರಿ. ಅವರಿಂದಲೇ ಆಸ್ತಿಯು ಸಿಗುತ್ತದೆ ಅಂದಮೇಲೆ ಅವರ ಜೊತೆ ಎಷ್ಟು ಗೌರವ ಮತ್ತು ಘನತೆಯಿಂದ ನಡೆಯಬೇಕು. ಬಾಬಾ, ನಾವಂತೂ ಲಕ್ಷ್ಮೀ-ನಾರಾಯಣರಾಗುತ್ತೇವೆಂದು ಹೇಳುತ್ತೀರಲ್ಲವೆ ಅಂದಮೇಲೆ ನಾವು ಚಂದ್ರವಂಶೀಯರಾದರೂ ಪರವಾಗಿಲ್ಲ ಅಥವಾ ಭಲೆ ದಾಸ-ದಾಸಿಯರಾದರೂ ಪರವಾಗಿಲ್ಲ ಎಂದಲ್ಲ. ಪ್ರಜೆಗಳಾಗುವುದು ಒಳ್ಳೆಯದಲ್ಲ ಅಲ್ಲವೆ. ನೀವಿಲ್ಲಿ ದೈವೀ ಗುಣಗಳನ್ನು ಧಾರಣೆ ಮಾಡಬೇಕಾಗಿದೆ. ನಿಮ್ಮಲ್ಲಿ ಆಸುರೀ ಚಲನೆಯಂತೂ ಇರಬಾರದು, ನಿಶ್ಚಯವಿಲ್ಲದಿದ್ದರೆ ಕುಳಿತು-ಕುಳಿತಿದ್ದಂತೆಯೇ ಇವರಲ್ಲಿ ಶಿವ ತಂದೆಯು ಬರುತ್ತಾರೆಂದು ನಾವಂತೂ ತಿಳಿದುಕೊಳ್ಳುವುದಿಲ್ಲ ಎಂದು ಬಿಡುತ್ತಾರೆ. ಮಾಯೆಯ ಭೂತವು ಬಂದಾಗ ಪರಸ್ಪರ ಹೀಗೆ ಹೇಳಿ ಬಿಡುತ್ತಾರೆ. ಆಸುರೀ ಸ್ವಭಾವದವರು ಒಂದೆಡೆ ಸೇರಿದಾಗ ಈ ರೀತಿ ಮಾತನಾಡಿಕೊಳ್ಳುತ್ತಾರೆ. ಆಸುರೀ ಮಾತುಗಳೇ ಬಾಯಿಂದ ಹೊರಡುತ್ತವೆ. ತಂದೆಯು ತಿಳಿಸುತ್ತಾರೆ - ನೀವಾತ್ಮರು ರೂಪ ಭಸಂತರಾಗುತ್ತೀರಿ. ನಿಮ್ಮ ಮುಖದಿಂದ ರತ್ನಗಳೇ ಹೊರ ಬರಬೇಕು. ಒಂದುವೇಳೆ ಕಲ್ಲುಗಳು ಬಂದರೆ ನೀವು ಆಸುರೀ ಬುದ್ಧಿಯವರಾದಿರಿ.

ಮಕ್ಕಳು ಗೀತೆಯನ್ನೂ ಕೇಳಿದಿರಿ. ಮಕ್ಕಳು ಹೇಳುತ್ತಾರೆ – ತಂದೆಯು ಪ್ರೀತಿಯ ಸಾಗರ, ಸುಖದ ಸಾಗರನಾಗಿದ್ದಾರೆ. ಶಿವ ತಂದೆಯದೇ ಮಹಿಮೆಯಿದೆ. ತಂದೆಯು ತಿಳಿಸುತ್ತಾರೆ - ನೀವು ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ, ಇದರಲ್ಲಿ ಒಳ್ಳೊಳ್ಳೆಯ ಮಕ್ಕಳೂ ಸಹ ಅನುತ್ತೀರ್ಣರಾಗುತ್ತಾರೆ. ಆತ್ಮಾಭಿಮಾನಿ ಸ್ಥಿತಿಯಲ್ಲಿ ಇರುವುದಿಲ್ಲ. ಆತ್ಮಾಭಿಮಾನಿಗಳಾದಾಗಲೇ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಕೆಲವು ಮಕ್ಕಳು ವ್ಯರ್ಥ ಮಾತುಗಳಲ್ಲಿ ಬಹಳ ಸಮಯವನ್ನು ಕಳೆಯುತ್ತಾರೆ. ಜ್ಞಾನದ ಮಾತುಗಳೇ ಗಮನದಲ್ಲಿರುವುದಿಲ್ಲ. ಮನೆಯಲ್ಲಿರುವ ನೀರಿಗೆ ಅಷ್ಟು ಮಹತ್ವಿಕೆ ಕೊಡುವುದಿಲ್ಲವೆಂಬ ಗಾಯನವಿದೆ, ಮನೆಯ ವಸ್ತುವಿಗೆ ಅಷ್ಟೊಂದು ಮಹತ್ವಿಕೆಯನ್ನಿಡುವುದಿಲ್ಲ. ಕೃಷ್ಣ ಮೊದಲಾದವರ ಚಿತ್ರಗಳು ಮನೆಯಲ್ಲಿಯೂ ಇರುತ್ತವೆ ಆದರೆ ಶ್ರೀನಾಥ ದ್ವಾರ ಮುಂತಾದ ಕಡೆ ಅಷ್ಟು ದೂರ-ದೂರ ಏಕೆ ಹೋಗುತ್ತೀರಿ? ಶಿವನ ಮಂದಿರದಲ್ಲಿರುವುದೂ ಅದೇ ಕಲ್ಲಿನ ಲಿಂಗವಲ್ಲವೆ. ಬೆಟ್ಟಗಳಿಂದ ಕಲ್ಲು ಹೊರ ಬಂದು ಅದು ಸವೆದು-ಸವೆದು ಲಿಂಗವಾಗಿ ಬಿಡುತ್ತದೆ, ಅದರಲ್ಲಿ ಕೆಲ ಕೆಲವು ಕಲ್ಲುಗಳಲ್ಲಿ ಚಿನ್ನವೂ ಹಾಕಲ್ಪಟ್ಟಿರುತ್ತದೆ. ಚಿನ್ನದ ಕೈಲಾಸ ಪರ್ವತವೆಂದು ಹೇಳಲಾಗುತ್ತದೆ. ಚಿನ್ನವು ಬೆಟ್ಟಗಳಿಂದ ಸಿಗುತ್ತದೆಯಲ್ಲವೆ. ಸ್ವಲ್ಪ-ಸ್ವಲ್ಪ ಚಿನ್ನವು ಬೆರಕೆಯಾಗಿರುವ ಕಲ್ಲುಗಳೂ ಇರುತ್ತವೆ, ಅವು ಮತ್ತೆ ಬಹಳ ಒಳ್ಳೊಳ್ಳೆಯ ಗೋಲಗಳಾಗಿ ಬಿಡುತ್ತವೆ. ಅವನ್ನು ಮಾರಾಟ ಮಾಡುತ್ತಾರೆ. ವಿಶೇಷವಾಗಿ ಮಾರ್ಬಲ್ನ ಲಿಂಗಗಳನ್ನು ಮಾಡುತ್ತಾರೆ. ಈಗ ಭಕ್ತಿ ಮಾರ್ಗದವರಿಗೆ ನೀವು ಹೊರಗಡೆ ಏಕೆ ಇಷ್ಟೊಂದು ಅಲೆದಾಡುತ್ತೀರಿ ಎಂದು ಕೇಳಿದರೆ ಅವರು ಕೋಪಿಸಿಕೊಳ್ಳುತ್ತಾರೆ. ಸ್ವಯಂ ತಂದೆಯೂ ಹೇಳುತ್ತಾರೆ - ನೀವು ಮಕ್ಕಳು ಬಹಳ ಹಣವನ್ನು ನಷ್ಟ ಮಾಡಿದ್ದೀರಿ. ನೀವು ಮೋಸ ಹೋಗುವುದೂ ಸಹ ನಾಟಕದಲ್ಲಿ ಪಾತ್ರವಿದೆ. ಇದು ಜ್ಞಾನ ಮತ್ತು ಭಕ್ತಿಯ ಆಟವಾಗಿದೆ. ಈಗ ನೀವು ಮಕ್ಕಳಿಗೆ ಪೂರ್ಣ ತಿಳುವಳಿಕೆ ಸಿಗುತ್ತದೆ. ಜ್ಞಾನವು ಸುಖದ ಮಾರ್ಗವಾಗಿದೆ. ಜ್ಞಾನದಿಂದ ಸತ್ಯಯುಗದ ರಾಜ್ಯಭಾಗ್ಯವು ಸಿಗುತ್ತದೆ. ಈ ಸಮಯದಲ್ಲಿ ರಾಜ-ರಾಣಿ ಹಾಗೂ ಪ್ರಜೆಗಳೆಲ್ಲರೂ ನರಕದ ಮಾಲೀಕನಾಗಿದ್ದಾರೆ. ಯಾರಾದರೂ ಮರಣ ಹೊಂದಿದಾಗ ಸ್ವರ್ಗವಾಸಿಯಾದರೆಂದು ಹೇಳುತ್ತಾರೆ ಆದರೆ ಈ ಮಾತುಗಳನ್ನು ನೀವೀಗ ತಿಳಿದುಕೊಂಡಿದ್ದೀರಿ. ನೀವೀಗ ಹೇಳುತ್ತೀರಿ - ನಾವು ಸ್ವರ್ಗವಾಸಿಗಳಾಗಲು ಸ್ವರ್ಗದ ಸ್ಥಾಪನೆ ಮಾಡುವ ತಂದೆಯ ಬಳಿ ಕುಳಿತಿದ್ದೇವೆ. ಜ್ಞಾನದ ಹನಿಯು ಸಿಗುತ್ತದೆ, ಸ್ವಲ್ಪ ಜ್ಞಾನವನ್ನು ಕೇಳಿದರೂ ಸ್ವರ್ಗದಲ್ಲಿ ಅವಶ್ಯವಾಗಿ ಬರುತ್ತಾರೆ ಆದರೆ ಪದವಿಗಳು ಪುರುಷಾರ್ಥದ ಮೇಲೆ ಆಧಾರಿತವಾಗಿದೆ. ಗಂಗಾ ಜಲದ ಒಂದು ಹನಿಯನ್ನು ಬಾಯಲ್ಲಿ ಹಾಕಿದರೂ ಸಹ ಪತಿತರಿಂದ ಪಾವನರಾಗಿ ಬಿಡುತ್ತಾರೆಂದು ತಿಳಿಯುತ್ತಾರೆ, ಆದ್ದರಿಂದ ಗಂಗಾಜಲವನ್ನು ತುಂಬಿಸಿಕೊಂಡು ಬಂದು ನಿತ್ಯವೂ ಅದರಿಂದ ಒಂದೊಂದು ಹನಿಯನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡುತ್ತಾರೆ. ಅದು ಹೇಗೆ ಅವರಿಗೆ ಗಂಗಾಸ್ನಾನವಾಗಿ ಬಿಡುತ್ತದೆ. ಗಂಗಾಜಲವನ್ನು ವಿದೇಶಕ್ಕೂ ತೆಗೆದುಕೊಂಡು ಹೋಗುತ್ತಾರೆ, ಇದೆಲ್ಲವೂ ಭಕ್ತಿಯಾಗಿದೆ.

ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ಮಾಯೆಯು ಬಹಳ ಜೋರಾಗಿ ಪೆಟ್ಟನ್ನು ಕೊಡುತ್ತದೆ, ವಿಕರ್ಮಗಳನ್ನು ಮಾಡಿಸಿ ಬಿಡುತ್ತದೆ ಆದ್ದರಿಂದ ನಿತ್ಯವೂ ಕಛೇರಿ (ದರ್ಬಾರು) ಅನ್ನು ನಡೆಸಿ, ತಾವೇ ತಮ್ಮ ಕಛೇರಿಯನ್ನು ನಡೆಸುವುದು ಒಳ್ಳೆಯದು. ನೀವು ತಮಗೆ ತಾವೇ ರಾಜ ತಿಲಕವನ್ನು ಕೊಟ್ಟುಕೊಳ್ಳುತ್ತೀರಿ ಅಂದಮೇಲೆ ತನ್ನ ಪರಿಶೀಲನೆ ಮಾಡಿಕೊಳ್ಳಬೇಕಾಗಿದೆ - ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆ. ತಂದೆಯು ಶ್ರೀಮತ ಕೊಡುತ್ತಾರೆ - ಮಕ್ಕಳೇ, ಹೀಗೀಗೆ ಮಾಡಿ. ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಿ. ಯಾರು ಮಾಡುವರೋ ಅವರು ಪಡೆಯುವರು. ನೀವಂತೂ ಖುಷಿಯಲ್ಲಿ ರೋಮಾಂಚನವಾಗಿ ಬಿಡಬೇಕು. ಬೇಹದ್ದಿನ ತಂದೆಯು ಸಿಕ್ಕಿದ್ದಾರೆ ಅಂದಾಗ ಸೇವೆಯಲ್ಲಿ ಸಹಯೋಗಿಗಳಾಗಬೇಕು, ಕುರುಡರಿಗೆ ಊರುಗೋಲಾಗಬೇಕು. ಎಷ್ಟು ಹೆಚ್ಚು ಆಗುತ್ತೀರೋ ಅಷ್ಟು ತಮ್ಮದೇ ಕಲ್ಯಾಣವಾಗುವುದು. ತಂದೆಯನ್ನಂತೂ ಘಳಿಗೆ-ಘಳಿಗೆಗೂ ನೆನಪು ಮಾಡಬೇಕಾಗಿದೆ. ಧ್ಯಾನದಲ್ಲಿ ಒಂದು ಕಡೆ ಕುಳಿತು ಬಿಡುವ ಮಾತಿಲ್ಲ. ನಡೆಯುತ್ತಾ-ತಿರುಗಾಡುತ್ತಾ ನೆನಪು ಮಾಡಬೇಕಾಗಿದೆ. ರೈಲಿನಲ್ಲಿಯೂ ನೀವು ಸರ್ವೀಸ್ ಮಾಡಬಹುದು. ನೀವು ಯಾರಿಗಾದರೂ ತಿಳಿಸಿಕೊಡಿ – ಶ್ರೇಷ್ಠಾತಿ ಶ್ರೇಷ್ಠರು ಯಾರು? ಅವರನ್ನು ನೆನಪು ಮಾಡಿ, ಆಸ್ತಿಯು ಅವರಿಂದಲೇ ಸಿಗುತ್ತದೆ. ಆತ್ಮಕ್ಕೆ ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆ. ಯಾರಾದರೂ ದಾನ-ಪುಣ್ಯ ಮಾಡಿದರೆ ರಾಜರ ಬಳಿ ಜನ್ಮ ಪಡೆಯುತ್ತಾರೆ, ಅದೂ ಅಲ್ಪಕಾಲಕ್ಕಾಗಿ. ಸದಾ ರಾಜನಾಗಲು ಸಾಧ್ಯವಿಲ್ಲ ಆದ್ದರಿಂದ ತಂದೆಯು ತಿಳಿಸುತ್ತಾರೆ - ಇಲ್ಲಂತೂ 21 ಜನ್ಮಗಳ ಗ್ಯಾರಂಟಿ ಇದೆ. ನಾವು ಬೇಹದ್ದಿನ ತಂದೆಯಿಂದ ಈ ಆಸ್ತಿಯನ್ನು ತೆಗೆದುಕೊಂಡು ಬಂದಿದ್ದೇವೆಂದು ಅಲ್ಲಿ ತಿಳಿದಿರುವುದಿಲ್ಲ. ಈ ಜ್ಞಾನವು ಈ ಸಮಯದಲ್ಲಿಯೇ ನಿಮಗೆ ಸಿಗುತ್ತದೆ ಅಂದಮೇಲೆ ಎಷ್ಟು ಚೆನ್ನಾಗಿ ಪುರುಷಾರ್ಥ ಮಾಡಬೇಕು! ಪುರುಷಾರ್ಥ ಮಾಡಲಿಲ್ಲವೆಂದರೆ ತಮ್ಮ ಕಾಲಿನ ಮೇಲೆ ತಾವೇ ಕೊಡಲಿಯನ್ನು ಹಾಕಿಕೊಳ್ಳುತ್ತೀರಿ. ಚಾರ್ಟ್ ಬರೆಯುತ್ತಿದ್ದರೆ ಭಯವಿರುತ್ತದೆ. ಕೆಲಕೆಲವರಂತೂ ಬರೆಯುತ್ತಾರೆ, ತಂದೆಯು ನೋಡಿದರೆ ಏನು ಹೇಳುವರೋ ಎಂದುಕೊಳ್ಳುತ್ತಾರೆ. ಚಲನೆ-ವಲನೆಯಲ್ಲಿ ಬಹಳ ಅಂತರವಿರುತ್ತದೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಈಗ ಹುಡುಗಾಟಿಕೆಯನ್ನು ಬಿಡಿ ಇಲ್ಲವಾದರೆ ಬಹಳ ಪಶ್ಚಾತ್ತಾಪ ಪಡಬೇಕಾಗುವುದು. ತಮ್ಮ ಪುರುಷಾರ್ಥದ ಸಾಕ್ಷಾತ್ಕಾರವು ಅಂತಿಮದಲ್ಲಿ ಅವಶ್ಯವಾಗಿ ಆಗುವುದು ಆಗ ಬಹಳ ಅಳಬೇಕಾಗುತ್ತದೆ. ಕಲ್ಪ-ಕಲ್ಪವೂ ಇದೇ ಆಸ್ತಿಯು ಸಿಗುತ್ತದೆ, ಹೋಗಿ ದಾಸ-ದಾಸಿಯರಾಗುತ್ತೀರಿ. ಮೊದಲಾದರೆ ಧ್ಯಾನದಲ್ಲಿ ಹೋಗಿ ಇಂತಹವರು ದಾಸಿಯಾಗುತ್ತಾರೆ, ಇವರು ಈ ರೀತಿಯಾಗುತ್ತಾರೆ ಎಂದು ತಿಳಿಸುತ್ತಿದ್ದರು ನಂತರ ತಂದೆಯು ಅದನ್ನು ನಿಲ್ಲಿಸಿ ಬಿಟ್ಟರು. ಕೊನೆಯಲ್ಲಿ ಮತ್ತೆ ನೀವು ಮಕ್ಕಳಿಗೆ ಸಾಕ್ಷಾತ್ಕಾರಗಳಾಗುತ್ತವೆ. ಸಾಕ್ಷಾತ್ಕಾರವಿಲ್ಲದೆ ಶಿಕ್ಷೆ ಸಿಗಲು ಹೇಗೆ ಸಾಧ್ಯ! ಇದು ನಿಯಮವೇ ಇಲ್ಲ.

ಮಕ್ಕಳಿಗೆ ಬಹಳಷ್ಟು ಯುಕ್ತಿಗಳನ್ನೂ ತಿಳಿಸಲಾಗುತ್ತದೆ, ತಮ್ಮ ಪತಿಗೆ ತಿಳಿಸಿ, ತಂದೆಯು ಹೇಳುತ್ತಾರೆ - ಮಕ್ಕಳೇ, ಕಾಮ ಮಹಾಶತ್ರುವಾಗಿದೆ, ಇದರ ಮೇಲೆ ಜಯ ಗಳಿಸಿ. ಮಾಯಾಜೀತರು, ಜಗಜ್ಜೀತರಾಗಿ. ನಾವೀಗ ಸ್ವರ್ಗದ ಮಾಲೀಕರಾಗುವುದೇ ಅಥವಾ ನಿಮ್ಮ ಕಾರಣವಾಗಿ ಅಪವಿತ್ರರಾಗಿ ನರಕದಲ್ಲಿ ಹೋಗುವುದೇ? ಬಹಳ ಪ್ರೀತಿ-ನಮ್ರತೆಯಿಂದ ತಿಳಿಸಿಕೊಡಿ. ನನ್ನನ್ನು ನರಕದಲ್ಲೇಕೆ ತಳ್ಳುತ್ತೀರಿ? ಹೀಗೆ ಬಹಳಮಂದಿ ಮಕ್ಕಳು ತಿಳಿಸುತ್ತಾ-ತಿಳಿಸುತ್ತಾ ಕೊನೆಗೆ ತಮ್ಮ ಪತಿಯನ್ನು ಕರೆದುಕೊಂಡು ಬರುತ್ತಾರೆ ಮತ್ತೆ ಪತಿಯೂ ಸಹ ಹೇಳುತ್ತಾರೆ - ಇವರು ನಮ್ಮ ಗುರುವಾಗಿದ್ದಾರೆ. ಇವರು ನಮಗೆ ಬಹಳ ಒಳ್ಳೆಯ ಮಾರ್ಗವನ್ನು ತಿಳಿಸಿದರು. ತಂದೆಯ ಮುಂದೆ ಎಲ್ಲರೂ ಚರಣಗಳಿಗೆ ಬೀಳುತ್ತಾರೆ. ಕೆಲವೊಮ್ಮೆ ಸೋಲು, ಕೆಲವೊಮ್ಮೆ ಗೆಲುವಾಗುತ್ತದೆ ಆದ್ದರಿಂದ ಮಕ್ಕಳು ಬಹಳ-ಬಹಳ ಮಧುರರಾಗಬೇಕಾಗಿದೆ. ಯಾರು ಸರ್ವೀಸ್ ಮಾಡುವರೋ ಅವರೇ ಪ್ರಿಯರಾಗುತ್ತಾರೆ. ಭಗವಂತನು ಮಕ್ಕಳ ಬಳಿ ಬಂದಿದ್ದಾರೆ, ಅಂದಮೇಲೆ ಅವರ ಶ್ರೀಮತದಂತೆ ನಡೆಯಬೇಕಾಗಿದೆ. ಶ್ರೀಮತದಂತೆ ನಡೆಯದಿದ್ದರೆ ಬಿರುಗಾಳಿಗಳು ಬಂದಾಗ ಬೀಳುತ್ತಾರೆ. ಅಂತಹವರೂ ಇದ್ದಾರೆ, ಅವರಿಂದೇನು ಪ್ರಯೋಜನ? ಈ ವಿದ್ಯೆಯು ಸಾಮಾನ್ಯವಾದುದಲ್ಲ. ಮತ್ತೆಲ್ಲಾ ಸತ್ಸಂಗಗಳಲ್ಲಂತೂ ಕನರಸ, ಅದರಿಂದ ಅಲ್ಪಕಾಲದ ಸುಖವು ಸಿಗುತ್ತದೆ. ತಂದೆಯ ಮೂಲಕವಂತೂ 21 ಜನ್ಮಗಳ ಸುಖವು ಸಿಗುತ್ತದೆ. ತಂದೆಯು ಸುಖ-ಶಾಂತಿಯ ಸಾಗರನಾಗಿದ್ದಾರೆ. ನಮಗೂ ಸಹ ತಂದೆಯಿಂದ ಆಸ್ತಿಯು ಸಿಗಬೇಕಾಗಿದೆ. ಸೇವೆ ಮಾಡಿದಾಗಲೇ ಸಿಗುತ್ತದೆ ಆದ್ದರಿಂದ ಸದಾ ಬ್ಯಾಡ್ಜನ್ನು ಹಾಕಿಕೊಂಡಿರಿ. ನಾವು ಈ ರೀತಿ ಸರ್ವಗುಣ ಸಂಪನ್ನರಾಗಬೇಕಾಗಿದೆ, ಪರಿಶೀಲನೆ ಮಾಡಿಕೊಳ್ಳಿ - ನಾನು ಯಾರಿಗೂ ದುಃಖವನ್ನು ಕೊಡುತ್ತಿಲ್ಲವೆ? ಆಸುರೀ ಚಲನೆಯಲ್ಲಿ ನಡೆಯುವುದಿಲ್ಲವೆ? ಮಾಯೆಯು ಇಂತಹ ಕೆಲಸವನ್ನೂ ಮಾಡಿಸಿ ಬಿಡುತ್ತದೆ, ಅದರ ಮಾತೇ ಕೇಳಬೇಡಿ. ಒಳ್ಳೊಳ್ಳೆಯ ಮನೆಯವರೂ ಸಹ ಮಾಯೆಯು ವಿಕರ್ಮ ಮಾಡಿಸಿ ಬಿಟ್ಟಿತೆಂದು ಹೇಳುತ್ತಾರೆ. ಕೆಲವರು ಸತ್ಯವನ್ನು ಹೇಳುತ್ತಾರೆ, ಕೆಲವರು ಸತ್ಯವನ್ನು ಹೇಳುವುದಿಲ್ಲ. ಅಂತಹವರು ನೂರುಪಟ್ಟು ಶಿಕ್ಷೆಗೆ ಗುರಿಯಾಗುತ್ತಾರೆ ಮತ್ತೆ ಅದೇ ಹವ್ಯಾಸವು ಹೆಚ್ಚುತ್ತಾ ಹೋಗುವುದು. ತಂದೆಗೆ ತಿಳಿಸಿದಾಗ ತಂದೆಯು ಎಚ್ಚರಿಕೆ ನೀಡುತ್ತಾರೆ. ತಂದೆಯು ತಿಳಿಸುತ್ತಾರೆ - ಪಾಪ ಮಾಡಿದ್ದರೆ ರಿಜಿಸ್ಟರ್ನಲ್ಲಿ ಬರೆಯಿರಿ ಮತ್ತು ನನಗೆ ತಿಳಿಸಿ ಬಿಡಿ ಆಗ ನಿಮ್ಮ ಪಾಪಗಳು ಅರ್ಧ ಸಮಾಪ್ತಿಯಾಗುತ್ತದೆ. ತಿಳಿಸುವುದೇ ಇಲ್ಲ, ಮುಚ್ಚಿಟ್ಟುಕೊಂಡರೆ ಮತ್ತೆ ಮಾಡುತ್ತಲೇ ಇರುತ್ತಾರೆ, ಶ್ರಾಪವು ಸಿಗುತ್ತದೆ. ತಿಳಿಸದೇ ಇರುವುದರಿಂದ ಒಂದು ಬಾರಿಯ ಬದಲು ನೂರುಬಾರಿ ಮಾಡುತ್ತಿರುತ್ತಾರೆ. ತಂದೆಯು ಎಷ್ಟು ಒಳ್ಳೆಯ ಸಲಹೆ ಕೊಡುತ್ತಾರೆ ಆದರೆ ಕೆಲಕೆಲವರಿಗೆ ಸ್ವಲ್ಪವೂ ಪ್ರಭಾವಬೀರುವುದಿಲ್ಲ. ತಮ್ಮ ಅದೃಷ್ಟವನ್ನು ತಾವೇ ಒದೆಯುತ್ತಾರೆ, ಬಹಳ ನಷ್ಟವನ್ನುಂಟು ಮಾಡಿಕೊಳ್ಳುತ್ತಾರೆ. ಅಂತಿಮದಲ್ಲಿ ಎಲ್ಲರಿಗೂ ಸಾಕ್ಷಾತ್ಕಾರವಾಗುವುದು. ಹೀಗೀಗೆ ಆಗುತ್ತೀರಿ, ಶಾಲೆಯಲ್ಲಿ ತರಗತಿಯಿಂದ ವರ್ಗಾಯಿತರಾಗುವಾಗ ಫಲಿತಾಂಶವು ಹೊರ ಬೀಳುತ್ತದೆಯಲ್ಲವೆ. ವರ್ಗಾಯಿತರಾಗುವುದಕ್ಕೆ ಮೊದಲು ಫಲಿತಾಂಶವು ಹೊರ ಬರುತ್ತದೆ. ನೀವೂ ಸಹ ತಮ್ಮ ತರಗತಿಗೆ ಹೋಗುತ್ತೀರಿ ಆಗ ತಮ್ಮ ಅಂಕಗಳ ಬಗ್ಗೆ ತಿಳಿಯುವುದು ಮತ್ತು ಬಹಳ-ಬಹಳ ಅಳುತ್ತೀರಿ ಆದರೆ ಏನು ಮಾಡಲು ತಾನೆ ಸಾಧ್ಯ? ಫಲಿತಾಂಶವಂತೂ ಹೊರ ಬಂದಿತಲ್ಲವೆ. ಯಾರ ಅದೃಷ್ಟದಲ್ಲಿತ್ತೋ ಅವರು ಪಡೆದುಕೊಂಡರು. ತಂದೆಯು ಎಲ್ಲಾ ಮಕ್ಕಳಿಗೆ ಎಚ್ಚರಿಕೆ ನೀಡುತ್ತಾರೆ. ಈಗಲೇ ಕರ್ಮಾತೀತ ಸ್ಥಿತಿಯಂತೂ ಆಗಲು ಸಾಧ್ಯವಿಲ್ಲ. ಕರ್ಮಾತೀತ ಸ್ಥಿತಿಯಾಗಿ ಬಿಟ್ಟರೆ ಮತ್ತೆ ಶರೀರವನ್ನು ಬಿಡಬೇಕಾಗುವುದು. ಈಗಿನ್ನೂ ಕೆಲವೊಂದು ವಿಕರ್ಮಗಳು ಉಳಿದುಕೊಂಡಿವೆ, ಲೆಕ್ಕಾಚಾರವಿದೆ ಆದ್ದರಿಂದ ಯೋಗವು ಪೂರ್ಣವಾಗಿ ಹಿಡಿಸುವುದಿಲ್ಲ. ನಾವು ಕರ್ಮಾತೀತ ಸ್ಥಿತಿಯಲ್ಲಿದ್ದೇವೆಂದು ಈಗ ಯಾರೂ ಹೇಳುವಂತಿಲ್ಲ. ಸಮೀಪ ಬಂದಾಗ ಅದರ ಬಹಳ ಗುರುತುಗಳು ಕಾಣಿಸುತ್ತವೆ. ಎಲ್ಲವೂ ನಿಮ್ಮ ಸ್ಥಿತಿಯ ಮೇಲೆ ಮತ್ತು ವಿನಾಶದ ಮೇಲೆ ಆಧಾರಿತವಾಗಿದೆ. ನಿಮ್ಮ ವಿದ್ಯಾಭ್ಯಾಸವು ಪೂರ್ಣವಾಗುವಾಗ ನೋಡುತ್ತೀರಿ - ಯುದ್ಧವು ತಲೆಯ ಮೇಲೆ ನಿಂತಿರುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಮಾಯೆಗೆ ವಶರಾಗಿ ಯಾವುದೇ ಆಸುರೀ ಚಲನೆಯಲ್ಲಿ ನಡೆಯಬಾರದು. ತಮ್ಮ ಚಲನೆಯ ರಿಜಿಸ್ಟರ್ ಇಡಬೇಕಾಗಿದೆ. ಪಶ್ಚಾತ್ತಾಪ ಪಡುವಂತಹ ಯಾವುದೇ ಕರ್ಮವನ್ನು ಮಾಡಬಾರದು.

2. ಬಹಳ-ಬಹಳ ಪ್ರೀತಿ ಮತ್ತು ನಮ್ರತೆಯಿಂದ ಸೇವೆ ಮಾಡಬೇಕಾಗಿದೆ, ಮಧುರರಾಗಬೇಕಾಗಿದೆ. ಬಾಯಿಂದ ಆಸುರೀ ಮಾತುಗಳು ಬರಬಾರದು. ಸಂಗದಿಂದ ತಮ್ಮನ್ನು ಬಹಳ ಸಂಭಾಲನೆ ಮಾಡಿಕೊಳ್ಳಬೇಕಾಗಿದೆ. ಶ್ರೀಮತದಂತೆ ನಡೆಯುತ್ತಿರಬೇಕಾಗಿದೆ.

ವರದಾನ:
ಸಂಘಟಿತ ರೂಪದಲ್ಲಿ ಏಕರಸ ಸ್ಥಿತಿಯ ಅಭ್ಯಾಸದ ಮೂಲಕ ವಿಜಯದ ನಗಾರಿ ಬಾರಿಸುವಂತಹ ಎವರೆಡಿ ಭವ.

ವಿಶ್ವದಲ್ಲಿ ವಿಜಯದ ನಗಾರಿ ಯಾವಾಗ ಭಾರಿಸುವುದೆಂದರೆ ಯಾವಾಗ ಎಲ್ಲರ ಎಲ್ಲಾ ಸಂಕಲ್ಪ ಒಂದು ಸಂಕಲ್ಪದಲ್ಲಿ ಸಮಾವೇಶವಾಗಿ ಬಿಡುವುದು. ಸಂಘಟಿತ ರೂಪದಲ್ಲಿ ಯಾವಾಗ ಒಂದು ಸೆಕೆಂಡ್ ನಲ್ಲಿ ಎಲ್ಲರೂ ಏಕರಸ ಸ್ಥಿತಿಯಲ್ಲಿ ಸ್ಥಿತರಾಗಿ ಬಿಡಬೇಕು ಆಗ ಹೇಳಲಾಗುವುದು ಎವರೆಡಿ. ಒಂದು ಸೆಕೆಂಡ್ ನಲ್ಲಿ ಏಕಮತ, ಏಕರಸ ಸ್ಥಿತಿ ಮತ್ತು ಒಂದು ಸಂಕಲ್ಪದಲ್ಲಿ ಸ್ಥಿತವಾಗುವುದರದೇ ನಿಶಾನಿ ಕಿರುಬೆರಳನ್ನು ತೋರಿಸಲಾಗಿದೆ, ಯಾವ ಬೆರಳಿನಿಂದ ಕಲಿಯುಗದ ಪರ್ವತ ಎತ್ತಿ ಬಿಡುವುದು. ಆದ್ದರಿಂದ ಸಂಘಟಿತ ರೂಪದಲ್ಲಿ ಏಕರಸ ಸ್ಥಿತಿ ಮಾಡಿಕೊಳ್ಳುವ ಅಭ್ಯಾಸ ಮಾಡಿ ಆಗಲೇ ವಿಶ್ವದೊಳಗೆ ಶಕ್ತಿ ಸೇನೆಯ ಹೆಸರು ಪ್ರಸಿದ್ಧವಾಗುವುದು.

ಸ್ಲೋಗನ್:
ಶ್ರೇಷ್ಠ ಪುರುಷಾರ್ಥದಲ್ಲಿ ಸುಸ್ತಾಗುವುದು-ಇದೂ ಸಹಾ ಆಲಸ್ಯದ ನಿಶಾನಿಯಾಗಿದೆ.

ಅವ್ಯಕ್ತ ಸೂಚನೆ:- ಸ್ವಯಂನ ಮತ್ತು ಸರ್ವರ ಪ್ರತಿ ಮನಸ್ಸಾ ಮೂಲಕ ಯೋಗದ ಶಕ್ತಿಗಳ ಪ್ರಯೋಗ ಮಾಡಿ.

ತಾವು ತಮ್ಮ ಆತ್ಮಿಕಯಿಂದ ತಮ್ಮ ಸಂಕಲ್ಪಗಳನ್ನು ಸಿದ್ಧಿ ಮಾಡಿಕೊಳ್ಳಬಹುದು. ಆ ರಿದ್ಧಿ ಸಿದ್ಧಿ ಅಲ್ಪಕಾಲದ್ದಾಗಿದೆ, ಆದರೆ ನೆನಪಿನ ವಿಧಿಯಿಂದ ಸಂಕಲ್ಪಗಳ ಮತ್ತು ಕರ್ಮಗಳ ಸಿದ್ಧಿ ಅವಿನಾಶಿಯಾಗಿದೆ. ಆ ರಿದ್ಧಿ -ಸಿದ್ಧಿಯನ್ನು ಉಪಯೋಗಿಸುತ್ತಾರೆ ಮತ್ತು ನೀವು ನೆನಪಿನ ವಿಧಿಯಿಂದ ಸಂಕಲ್ಪಗಳ ಮತ್ತು ಕರ್ಮಗಳ ಸಿದ್ಧಿ ಪ್ರಾಪ್ತಿ ಮಾಡಿಕೊಳ್ಳಿರಿ.