17.11.24 Avyakt Bapdada
Kannada
Murli 30.11.2002 Om Shanti Madhuban
*ರಿಟರ್ನ್ [ಬದಲಾಗಿ]
ಎನ್ನುವ ಶಬ್ದದ ಸ್ಮತಿಯಿಂದ ಸಮಾನರಾಗಿ ಮತ್ತು ರಿಟರ್ನ್ [ಹಿಂತಿರುಗಿ) ಪ್ರಯಾಣದ ಸ್ಮೃತಿ
ಸ್ವರೂಪರಾಗಿ*
ಇಂದು ಬಾಪ್ ದಾದಾ ತನ್ನ
ನಾಲ್ಕೂ ಕಡೆಯ ಹೃದಯ ಸಿಂಹಾಸನಾಧಾರೀ, ಭೃಕುಟಿಯ ಸಿಂಹಾಸನಾಧಾರೀ, ವಿಶ್ವದ ರಾಜ್ಯ ಸಿಂಹಾಸನಧಾರೀ,
ಸ್ವರಾಜ್ಯಧಿಕಾರಿ ಮಕ್ಕಳನ್ನು ನೋಡುತ್ತಾ ಹರ್ಷಿತರಾಗುತ್ತಿದ್ದಾರೆ. ಪರಮಾತ್ಮ ಹೃದಯ ಸಿಂಹಾಸನ ಇಡೀ
ಕಲ್ಪದಲ್ಲಿ ಈಗ ತಾವು ಅಗಲಿ ಹೋದ, ಮುದ್ದಾದ ಮಕ್ಕಳಿಗೆ ಪ್ರಾಪ್ತಿ ಆಗಿದೆ. ಭೃಕುಟಿಯ ಸಿಂಹಾಸನವಂತೂ
ಸರ್ವ ಆತ್ಮಗಳಿಗೂ ಸಹ ಇದೆ. ಆದರೆ ಪರಮಾತ್ಮನ ಹೃದಯ ಸಿಂಹಾಸನ ಬ್ರಾಹ್ಮಣ ಆತ್ಮಗಳಿಗೆ ವಿನಃ ಯಾರಿಗೂ
ಪ್ರಾಪ್ತವಾಗಿಲ್ಲ. ಈ ಹೃದಯ ಸಿಂಹಾಸನವೇ ವಿಶ್ವದ ಸಿಂಹಾಸನವನ್ನು ಕೊಡಿಸುತ್ತದೆ. ವರ್ತಮಾನ
ಸಮಯದಲ್ಲಿ ಸ್ವರಾಜ್ಯಾಧಿಕಾರಿಗಳಾಗಿದ್ದೀರಿ, ಪ್ರತಿಯೊಬ್ಬ ಬ್ರಾಹ್ಮಣ ಆತ್ಮರಿಗೂ ಸ್ವರಾಜ್ಯ
ಕೊರಳಿನ ಹಾರವಾಗಿದೆ. ಸ್ವರಾಜ್ಯ ತಮ್ಮ ಜನ್ಮದ ಅಧಿಕಾರವಾಗಿದೆ. ಈ ರೀತಿ ಸ್ವಯಂನ್ನು ಸ್ವರಾಜ್ಯ
ಅಧಿಕಾರಿ ಎಂದು ಅನುಭವ ಮಾಡುತ್ತೀರಾ? ಇದು ನನ್ನ ಜನ್ಮ ಸಿದ್ದ ಅಧಿಕಾರವಾಗಿದೆ. ಇದನ್ನು ಯಾರೂ ಸಹ
ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಮನಸ್ಸಿನಲ್ಲಿ ದೃಢ ಸಂಕಲ್ಪವಿದೆ. ಜೊತೆ-ಜೊತೆಗೆ ನಾವು
ಪರಮಾತ್ಮನ ಹೃದಯ ಸಿಂಹಾಸನಾಧಾರಿಗಳು ಎನ್ನುವ ಆತ್ಮೀಯ ನಶೆಯೂ ಸಹ ಇದೆ. ಮಾನವ ಜೀವನದಲ್ಲಿ,
ತನುವಿನಲ್ಲಿ ವಿಶೇಷವಾಗಿ ಹೃದಯವನ್ನು ಮಹಾನ್ ಎಂದು ಗಾಯನ ಮಾಡುತ್ತಾರೆ. ಹೃದಯ ನಿಂತುಹೋದಾಗ ಜೀವನವೇ
ಸಮಾಪ್ತಿ ಆಗುತ್ತದೆ ಅಂದಾಗ ಆಧ್ಯಾತ್ಮಿಕ ಜೀವನದಲ್ಲೂ ಸಹ ಹೃದಯ ಸಿಂಹಾಸನಕ್ಕೆ ಬಹಳಷ್ಟು ಮಹತ್ವವಿದೆ.
ಯಾರು ಹೃದಯ ಸಿಂಹಾಸನಾಧಾರಿಗಳಾಗಿದ್ದಾರೆ, ಆ ಆತ್ಮಗಳದ್ದೇ ವಿಶ್ವದಲ್ಲಿ ವಿಶೇಷ ಆತ್ಮಗಳಾಗಿ
ಗಾಯನವಾಗುತ್ತದೆ. ಅದೇ ಆತ್ಮಗಳು ಭಕ್ತರಿಗೋಸ್ಕರ ಮಾಲೆಯ ಮಣಿಗಳ ರೂಪದಲ್ಲಿ ಸ್ಮರಣೆ
ಮಾಡಲ್ಪಡುತ್ತಾರೆ. ಅದೇ ಆತ್ಮಗಳನ್ನು ಕೋಟಿಯಲ್ಲಿ ಕೆಲವರು, ಕೆಲವರಲ್ಲೂ ಕೆಲವರು ಎಂದು ಗಾಯನ
ಮಾಡಲಾಗುತ್ತದೆ ಅಂದಾಗ ಅವರು ಯಾರು? ನೀವಾಗಿದ್ದೀರಾ? ಪಾಂಡವರು ಆಗಿದ್ದೀರಾ? ಮಾತೆಯರೂ ಸಹ ಇದ್ದೀರಾ?
[ಕೈಯನ್ನು ಅಲುಗಾಡಿಸುತ್ತಿದ್ದಾರೆ] ಅಂದಾಗ ತಂದೆಯೂ ಹೇಳುತ್ತಾರೆ ಹೇ! ಮುದ್ದಾದ ಮಕ್ಕಳೇ
ಕೆಲವು-ಕೆಲವು ಬಾರಿ ಹೃದಯ ಸಿಂಹಾಸನವನ್ನು ಬಿಟ್ಟು ದೇಹ ರೂಪಿ ಮಣ್ಣಿನ ಜೊತೆ ಏಕೆ ಇಷ್ಟವಾಗುತ್ತದೆ?
ದೇಹ ಮಣ್ಣಾಗಿದೆ. ಅಂದಾಗ ಮುದ್ದಾದ ಮಕ್ಕಳು ಎಂದೂ ಸಹ ಮಣ್ಣಿನಲ್ಲಿ ಕಾಲನ್ನು ಇಡಬಾರದು, ಸದಾ
ಸಿಂಹಾಸನದಲ್ಲಿ, ಮಡಿಲಿನಲ್ಲಿ ಹಾಗೂ ಅತೀಂದ್ರಿಯ ಸುಖದ ಉಯ್ಯಾಲೆಯಲ್ಲಿ ತೂಗಾಡುತ್ತಿರಬೇಕು.
ತಮಗೋಸ್ಕರ ಬಾಪ್ ದಾದಾರವರು ಭಿನ್ನ-ಭಿನ್ನ ಉಯ್ಯಾಲೆಗಳನ್ನು ಕೊಟ್ಟಿದ್ದಾರೆ, ಕೆಲವು ಬಾರಿ ಸುಖದ
ಉಯ್ಯಾಲೆಯಲ್ಲಿ ತೂಗಾಡಿರಿ. ಕೆಲವು ಬಾರಿ ಖುಷಿಯ ಉಯ್ಯಾಲೆಯಲ್ಲಿ ತೂಗಾಡಿರಿ, ಕೆಲವು ಬಾರಿ ಆನಂದದ
ಉಯ್ಯಾಲೆಯಲ್ಲಿ ತೂಗಾಡುತ್ತಿರಿ.
ಅಂದಾಗ ಇಂದು ಬಾಪ್‌ದಾದಾ
ಈ ರೀತಿ ಶ್ರೇಷ್ಠ ಮಕ್ಕಳನ್ನು ನೋಡುತ್ತಿದ್ದರು - ಹೇಗೆ ನಶೆಯಿಂದ ಉಯ್ಯಾಲೆಯಲ್ಲಿ
ತೂಗಾಡುತ್ತಿದ್ದಾರೆ. ತೂಗಾಡುತ್ತಿರಾ? ತೂಗಾಡುತ್ತಿರಾ? ಮಣ್ಣಿನಲ್ಲಿ ಹೋಗುವುದಿಲ್ಲ ತಾನೇ!
ಮಣ್ಣಿನಲ್ಲಿ ಕಾಲನ್ನು ಇಡಲು ಕೆಲವು-ಕೆಲವು ಬಾರಿ ಮನಸ್ಸಾಗುತ್ತದೆ ಏನು? ಏಕೆಂದರೆ 63 ಜನ್ಮದಿಂದ
ಮಣ್ಣಿನಲ್ಲೇ ಕಾಲನ್ನು ಇಟ್ಟುಕೊಂಡು, ಮಣ್ಣಿನ ಜೊತೆ ಆಟವಾಡುತ್ತಿದ್ದಿರಿ, ಅಂದಾಗ ಈಗಲೂ ಸಹ
ಮಣ್ಣಿನಲ್ಲಿ ಆಟ ಆಡುವುದಿಲ್ಲ? ಕೆಲವು-ಕೆಲವು ಬಾರಿ ಮಣ್ಣಿನಲ್ಲಿ ಕಾಲು ಹೋಗುತ್ತದೆಯೋ ಅಥವಾ
ಇಲ್ಲವೋ? ಕೆಲವು-ಕೆಲವು ಬಾರಿ ಹೊರಟು ಹೋಗುತ್ತದೆ. ದೇಹ ಭಾನವೂ ಸಹ ಮಣ್ಣಿನಲ್ಲಿ ಕಾಲನ್ನು
ಇಡುವುದಾಗಿದೆ. ದೇಹ ಅಭಿಮಾನವಿದ್ದಾಗ ಅದು ಬಹಳ ಆಳವಾಗಿ ಮಣ್ಣಿನಲ್ಲಿ ಕಾಲು ಇಡುವುದಾಗಿದೆ. ಆದರೆ
ದೇಹಭಾನ ಅರ್ಥಾತ್ ದೇಹದ ಅಭಿಮಾನ. ಇದೂ ಸಹ ಮಣ್ಣಾಗಿದೆ. ಎಷ್ಟು ಸಂಗಮಯುಗದ ಸಮಯದಲ್ಲಿ ಹೆಚ್ಚಾಗಿ
ಸಿಂಹಸಾನಧಾರಿಗಳಾಗುತ್ತೀರಿ ಅಷ್ಟೂ ಸಹ ಅರ್ಧ ಕಲ್ಪ ಸೂರ್ಯ ವಂಶದ ರಾಜಧಾನಿಯಲ್ಲಿ ಮತ್ತು
ಚಂದ್ರವಂಶಿಯಲ್ಲೂ ಸೂರ್ಯವಂಶೀ ರಾಜ್ಯದ ಮನೆತನದಲ್ಲಿ ಬರುತ್ತೀರಿ. ಒಂದುವೇಳೆ ಈಗ ಸಂಗಮಯುಗದಲ್ಲಿ
ಕೆಲವು-ಕೆಲವು ಬಾರಿ ಸಿಂಹಾಸನಾಧಾರಿಗಳಾದಾಗ ಸೂರ್ಯವಂಶದ ಗೌರವಾನ್ವಿತ ಪರಿವಾರದಲ್ಲಿ ಅಷ್ಟೇ
ಸ್ವಲ್ಪ ಸಮಯ ಮಾತ್ರ ಇರುತ್ತೀರಿ. ಸಿಂಹಾಸನಾಧಾರಿಗಳು ಸರಧಿ ಆಗಿರುತ್ತದೆ. ಆದರೆ ಗೌರವಾನ್ವಿತ
ಪರಿವಾರ, ರಾಜ್ಯ ಮನೆತನದ ಆತ್ಮಗಳು ಸದಾ ಸಂಬಂಧದಲ್ಲಿ ಇರುತ್ತಾರೆ ಅಂದಾಗ ಚೆಕ್ ಮಾಡಿ ಸಂಗಮಯುಗದ
ಆದಿಯ ಸಮಯದಿಂದ ಇಲ್ಲಿಯತನಕ 10 ವರ್ಷವಾಗಿರಬಹುದು, 50, 60 ವರ್ಷವಾಗಿರಬಹುದು. ಆದರೆ ಯಾವಾಗಿನಿಂದ
ಬ್ರಾಹ್ಮಣರಾದಿರಿ. ಆಗಿನಿಂದ ಇಲ್ಲಿಯವರೆಗೆ ಎಷ್ಟು ಸಮಯ ಹೃದಯ ಸಿಂಹಾಸನಾಧಾರಿ, ಸ್ವರಾಜ್ಯ
ಸಿಂಹಾಸನಾಧಾರಿಗಳಾದಿರಿ? ಬಹಳ ಕಾಲದಿಂದ ಆಗಿದ್ದೀರಾ, ನಿರಂತರವಾಗಿದ್ದೀರಾ ಹಾಗೂ ಕೆಲವು-ಕೆಲವು
ಬಾರಿ ಮಾತ್ರ ಆಗಿದ್ದೀರಾ? ಯಾರು ಪರಮಾತ್ಮನ ಸಿಂಹಾಸನಾಧಾರಿಗಳಾಗಿರುತ್ತಾರೋ ಅವರ ಚಿನ್ನೆ ಆಗಿದೆ
ಪ್ರತ್ಯಕ್ಷದ ಚಲನೆ ಮತ್ತು ಮುಖದಿಂದ ಸದಾ ನಿಶ್ಚಿಂತ ಚಕ್ರವರ್ತಿ ಆಗಿರುತ್ತಾರೆ. ತಮ್ಮ
ಮನಸ್ಸಿನಲ್ಲಿ ಸ್ಥೂಲವಾದ ಹೊರೆ ತಲೆಯ ಮೇಲೆ ಇರುತ್ತದೆ. ಆದರೆ ಸೂಕ್ಷ್ಮವಾದ ಹೊರೆಯು ಮನಸ್ಸಿನಲ್ಲಿ
ಇರುತ್ತದೆ ಅಂದಾಗ ಮನಸ್ಸಿನಲ್ಲಿ ಯಾವುದೇ ಹೊರೆ ಇರಬಾರದು. ಚಿಂತೆ ಇದ್ದರೆ ಅದು ಹೊರೆ ಆಗಿದೆ,
ನಿಶ್ಚಿಂತವಾಗಿರುವವರು ಡಬಲ್ ಲೈಟ್ ಆಗಿರುತ್ತಾರೆ. ಒಂದುವೇಳೆ ಯಾವುದೇ ಪ್ರಕಾರದ ಸೇವೆಯದಾಗಿರಲಿ,
ಸಂಬಂಧ-ಸಂಪರ್ಕದಾಗಿರಲಿ, ಸ್ಥೂಲ ಸೇವೆಯೇ ಆಗಿರಲಿ, ಆತ್ಮೀಯ ಸೇವೆಯ ಹೊರೆಯ ಇರಬಾರದು. ಏನಾಯಿತು,
ಹೇಗಾಯಿತು ....ಸಫಲತೆ ಆಗುತ್ತದೆಯೋ ಅಥವಾ ಆಗುವುದಿಲ್ಲವೋ, ಯೋಚಿಸಿ, ಪ್ಲಾನ್ ಮಾಡುವುದು ಬೇರೆ
ವಿಷಯವಾಗಿದೆ. ಹೊರೆಯೂ ಬೇರೆ ವಿಷಯವಾಗಿದೆ. ಹೊರೆ ಇರುವಂತಹವರ ಚಿನ್ಹೆ ಸದಾ ಮುಖದಲ್ಲಿ ಬಹಳ ಹಾಗೂ
ಸ್ವಲ್ಪ ಸುಸ್ತಿನ ಚಿನ್ಹೆ ಇರುತ್ತದೆ. ಸುಸ್ತಾಗುವುದೇ ಬೇರೆ ವಿಷಯವಾಗಿದೆ. ಸುಸ್ತಿನ ಚಿನ್ಹೆ
ಸ್ವಲ್ಪವಿದ್ದರೂ ಸಹ ಇದು ಹೊರೆಯ ಗುರುತಾಗಿದೆ ಮತ್ತು ನಿಶ್ಚಿಂತ ಚಕ್ರವರ್ತಿಗಳದ್ದು
ಹುಡುಗಾಟಿಕೆಯಿಂದ ಇದ್ದರು ಎನ್ನುವ ಅರ್ಥವಲ್ಲ, ಹುಡುಗಾಟಿಕೆತನ ಇರುತ್ತದೆ ಮತ್ತು ಆದರೂ ಸಹ
ತಮ್ಮನ್ನು ನಿಶ್ಚಿಂತರು ಎಂದು ಹೇಳಿಕೊಳ್ಳುತ್ತಾರೆ. ಹುಡುಗಾಟಿಕೆತನ, ಇದು ಬಹಳ ಪೆಟ್ಟನ್ನು
ಕೊಡುವಂತದ್ದಾಗಿದೆ. ತೀವ್ರ ಪುರುಷಾರ್ಥದಲ್ಲೂ ಅದೇ ಶಬ್ದವಿದೆ ಮತ್ತು ಹುಡುಗಾಟಿಕೆತನದವರದ್ದೂ ಸಹ
ಅದೇ ಶಬ್ದವಾಗಿದೆ. ತೀವ್ರ ಪುರುಷಾರ್ಥಿ ಸದಾ ದೃಢ ನಿಶ್ಚಯ ಇರುವ ಕಾರಣ ಇದನೇ ಯೋಚಿಸುತ್ತಾರೆ -
ಪ್ರತಿ ಕಾರ್ಯವೂ ಧೈರ್ಯದಿಂದ ಮತ್ತು ತಂದೆಯ ಸಹಯೋಗದಿಂದ ಸಫಲತೆ ಆಗಿದೆ ಮತ್ತು ಹುಡುಗಾಟಿಕೆತನ
ಇರುವವರದ್ದು ಈ ಶಬ್ದವಾಗಿದೆ - ಆಗುತ್ತದೆ, ಆಗುತ್ತದೆ, ಆಗಿಯೇ ಇದೆ. ಏನಾದರೂ ಕಾರ್ಯ
ಉಳಿದುಕೊಂಡಿದೆ ಏನು, ಆಗುತ್ತದೆ ಅಂದಾಗ ಒಂದೇ ಶಬ್ದವಾಗಿದೆ. ಆದರೆ ರೂಪ ಬೇರೆ-ಬೇರೆ ಆಗಿದೆ.
ವರ್ತಮಾನ ಸಮಯದಲ್ಲಿ ಮಾಯೆ
ವಿಶೇಷವಾಗಿ ಎರಡು ರೂಪದಲ್ಲಿ ಮಕ್ಕಳಿಂದ ಪೇಪರ್ ತೆಗೆದುಕೊಳ್ಳುತ್ತದೆ. ಅದನ್ನು
ತಿಳಿದುಕೊಂಡಿದ್ದೀರಾ? ಎಲ್ಲರಿಗೂ ಸಹ ತಿಳಿದಿದೆ - ಒಂದು ವ್ಯರ್ಥ ಸಂಕಲ್ಪ, ವಿಕಲ್ಪವಲ್ಲ ವ್ಯರ್ಥ
ಸಂಕಲ್ಪ. ಎರಡನೆಯದೂ ಸಹ ತಿಳಿಸುವುದೇನು? ಎರಡನೆಯದಾಗಿದೆ - ನಾನೇ ಸರಿಯಾಗಿದ್ದೇನೆ. ಏನೂ ಮಾಡಿದರೂ,
ಏನು ಹೇಳಿದರೂ, ಏನು ಯೋಚಿಸಿದರೂ...... ನಾನು ಕಡಿಮೆ ಇಲ್ಲ ಸರಿಯಾಗಿದ್ದೇನೆ, ಬಾಪ್‌ದಾದಾ ಸಮಯ
ಪ್ರಮಾಣ ಈಗ ಇದನ್ನು ಇಷ್ಟಪಡುತ್ತಾರೆ ಒಂದೇ ಶಬ್ದವನ್ನು ಸದಾ ಸ್ಮೃತಿಯಲ್ಲಿ ಇಟ್ಟುಕೊಳ್ಳಬೇಕು.
ತಂದೆಯಿಂದ ಸರ್ವ ಪ್ರಾಪ್ತಿಗಳ, ಸ್ನೇಹದ ಸಹಯೋಗದ ಬದಲಾಗಿ ಕೊಡಬೇಕು. ಬದಲಾಗಿ ಕೊಡುವುದು ಎಂದರೆ
ಅರ್ಥ ಸಮಾನರಾಗುವುದಾಗಿದೆ. ಎರಡನೆಯದು ಈಗ ನಮ್ಮದು ಹಿಂತಿರುಗುವ ಯಾತ್ರೆ ಆಗಿದೆ. ಬದಲಾಗಿ ಎನ್ನುವ
ಈ ಒಂದು ಶಬ್ದ ಸದಾ ನೆನಪು ಇರಬೇಕು ಅದಕ್ಕೋಸ್ಕರ ಬಹಳ ಸಹಜವಾದ ಸಾಧನವಾಗಿದೆ - ಪ್ರತಿಯೊಂದು
ಸಂಕಲ್ಪ, ಮಾತು ಮತ್ತು ಕರ್ಮವನ್ನು ಬ್ರಹ್ಮಾತಂದೆಯ ಜೊತೆ ಹೋಲಿಕೆ ಮಾಡಿಸಿ. ತಂದೆಯ ಸಂಕಲ್ಪ
ಏನಾಗಿತ್ತು? ತಂದೆಯ ಮಾತು ಏನಾಗಿದೆ? ತಂದೆಯ ಕರ್ಮ ಏನಾಗಿದೆ? ಅದಕ್ಕೆ ತಂದೆಯನ್ನು ಅನುಸರಣೆ ಮಾಡಿ
ಎಂದು ಹೇಳಲಾಗುತ್ತದೆ. ಅನುಸರಣೆ ಮಾಡುವುದು ಸಹಜವಾಗಿದೆಯಲ್ಲವೇ! ಹೊಸದಾಗಿ ಯೋಚಿಸುವುದು, ಹೊಸದಾಗಿ
ಮಾಡುವುದು, ಇದರ ಅವಶ್ಯಕತೆ ಇಲ್ಲ, ಏನು ತಂದೆಯೂ ಮಾಡಿದರೋ, ಆ ರೀತಿ ತಂದೆಯನ್ನು ಅನುಸರಣೆ
ಮಾಡುವುದು. ಇದು ಸಹಜವಾಗಿದೆಯಲ್ಲವೇ!
ಶಿಕ್ಷಕಿಯರು?
ಶಿಕ್ಷಕಿಯರು ಕೈಯನ್ನು ಎತ್ತಿರಿ. ಅನುಸರಣೆ ಮಾಡುವುದು ಸಹಜವಾಗಿದೆಯೋ ಅಥವಾ ಕಷ್ಟವಾಗಿದೆಯೋ?
ಸಹಜವಾಗಿದೆಯಲ್ಲವೇ! ತಂದೆಯನ್ನು ಅನುಸರಣೆ ಮಾಡಿರಿ. ಮೊದಲು ಚೆಕ್ ಮಾಡಿಕೊಳ್ಳಿ, ಹೇಗೆ ಮೊದಲು
ಯೋಚಿಸಿ ನಂತರ ಮಾಡಿ ಅಂದಾಗ ಮೊದಲು ತೂಕ ಮಾಡಿ ನಂತರ ಮಾತನಾಡಿ ಎನ್ನುವ ಗಾದೆ ಇದೆ. ಅಂದಾಗ ಎಲ್ಲಾ
ಶಿಕ್ಷಕಿಯರು ಈ ವರ್ಷದಲ್ಲಿ, ಈಗ ಈ ವರ್ಷದ ಕೊನೆಯ ತಿಂಗಳಾಗಿದೆ. ಹಳೆಯದು ಹೋಗುತ್ತದೆ ಹೊಸದು
ಬರುತ್ತದೆ. ಹೊಸದು ಬರುವ ಮೊದಲು ಏನು ಮಾಡಬೇಕು, ಮೊದಲು ಅದರ ತಯಾರಿಯನ್ನು ಮಾಡಿಕೊಳ್ಳಿ. ತಂದೆಯ
ಹೆಜ್ಜೆಯ ಮೇಲೆ ಹೆಜ್ಜೆಯನ್ನು ಇಡುವುದು ಬಿಟ್ಟರೆ ಬೇರೆ ಯಾವ ಹೆಜ್ಜೆಯನ್ನು ಇಡುವುದಿಲ್ಲ ಎನ್ನುವ
ಈ ಸಂಕಲ್ಪವನ್ನು ಮಾಡಿರಿ. ಕೇವಲ ಹೆಜ್ಜೆ ಅಷ್ಟೇ, ಹೆಜ್ಜೆಯ ಮೇಲೆ ಹೆಜ್ಜೆ ಇಡುವುದು
ಸಹಜವಾಗಿದೆಯಲ್ಲವೇ! ಹೊಸ ವರ್ಷಕ್ಕೋಸ್ಕರ ಈಗಿನಿಂದಲೇ ಸಂಕಲ್ಪದಲ್ಲಿ ಪ್ಲಾನ್ ಮಾಡಿರಿ. ಹೇಗೆ
ಬ್ರಹ್ಮಾ ತಂದೆ ಸದಾ ನಿಮಿತ್ತ ಮತ್ತು ನಿರ್ಮಾಣವಾಗಿದ್ದರು ಹಾಗೆಯ ನಿಮಿತ್ತ ಭವ ಮತ್ತು
ನಿರ್ಮಾಣಭವರಾಗಿರಿ. ಕೇವಲ ನಿಮಿತ್ತ ಭಾವ ಅಲ್ಲ, ನಿಮಿತ್ತ ಭಾವದ ಜೊತೆಗೆ ನಿರ್ಮಾಣ ಭಾವವೂ ಇರಬೇಕು.
ಈ ಇವರೆಡರ ಅವಶ್ಯಕತೆಯೂ ಇದೆ ಏಕೆಂದರೆ ನಿಮಿತ್ತ ಶಿಕ್ಷಕಿಯರಾಗಿದ್ದೀರಲ್ಲವೇ!
ನಿಮಿತ್ತರಾಗಿದ್ದೀರಲ್ಲವೇ? ಅಂದಾಗ ಸಂಕಲ್ಪದಲ್ಲೂ, ಮಾತಿನಲ್ಲೂ ಮತ್ತು ಯಾವುದೇ ಸಂಬಂಧದಲ್ಲಿ,
ಕರ್ಮದಲ್ಲಿ ಪ್ರತಿ ಮಾತಿನಲ್ಲೂ ಸಹ ನಿರ್ಮಾಣರಾಗಿರಿ. ಯಾರು ನಿರ್ಮಾಣರಾಗಿರುತ್ತಾರೋ ಅವರೇ
ನಿಮಿತ್ತ ಭಾವದಲ್ಲಿ ಇರುತ್ತಾರೆ. ಯಾರು ನಿರ್ಮಾಣರಾಗುವುದಿಲ್ಲ. ಅವರಲ್ಲಿ ಬಹಳ ಸ್ವಲ್ಪ, ಬಹಳ
ಸೂಕ್ಷ್ಮವಿರುತ್ತದೆ. ಮಹಾನ್ ರೂಪದಲ್ಲಿ ಅಭಿಮಾನ ಇಲ್ಲದಿದ್ದರೂ ಅಹಂಕಾರವಿರುತ್ತದೆ. ಈ ಅಹಂಕಾರ,
ಇದು ಅಭಿಮಾನದ ಅಂಶವಾಗಿದೆ ಮತ್ತು ಮಾತಿನಲ್ಲಿ ಸದಾ ನಿರ್ಮಲ ಭಾಷಿ ಮಧುರ ಭಾಷಿಗಳಾಗಿರುತ್ತಾರೆ.
ಯಾವಾಗ ಸಂಬಂಧ-ಸಂಪರ್ಕದಲ್ಲಿ ಆತ್ಮಿಕ ರೂಪದ ಸ್ಮೃತಿ ಇರುತ್ತದೋ ಆಗ ಸದಾ ನಿರಾಕಾರಿ ಮತ್ತು
ನಿರಹಂಕಾರಿ ಆಗಿರುತ್ತಾರೆ. ಬ್ರಹ್ಮಾತಂದೆಯ ಕೊನೆಯ ಮೂರು ಶಬ್ದಗಳು ನೆನಪು ಇದೆಯೇ? ನಿರಾಕಾರಿ,
ನಿರಹಂಕಾರಿ ಅವರೇ ನಿರ್ವಿಕಾರಿಗಳಾಗಿರುತ್ತಾರೆ. ಒಳ್ಳೆಯದು ತಂದೆಯನ್ನು ಅನುಸರಣೆ ಮಾಡಿರಿ. ಪಕ್ಕಾ
ಆಯಿತಲ್ಲವೇ!
ಮುಂದಿನ ವರ್ಷದ ಮುಖ್ಯ
ಲಕ್ಷ್ಯ ಸ್ಮೃತಿಯಾಗಿದೆ - ಈ ಮೂರೂ ಶಬ್ದ ನಿರಾಕಾರಿ, ನಿರಹಂಕಾರಿ, ನಿರ್ವಿಕಾರಿ ಅಂಶವೂ ಇರಬಾರದು.
ದೊಡ್ಡ ದೊಡ್ಡ ರೂಪದಲ್ಲಿ ಇರುವುದು ಸರಿಯಾಗಿದೆ. ಆದರೆ ಅಂಶ ಇರಬಾರದು. ಏಕೆಂದರೆ ಅಂಶವೇ ಪೆಟ್ಟನ್ನು
ಕೊಡುತ್ತದೆ. ತಂದೆಯನ್ನು ಅನುಸರಣೆ ಮಾಡುವ ಅರ್ಥವಾಗಿದೆ ಈ ಮೂರೂ ಶಬ್ದಗಳನ್ನು ಸದಾ ಸ್ಮೃತಿಯಲ್ಲಿ
ಇಟ್ಟುಕೊಳ್ಳುವುದು. ಸರಿಯಾಗಿದೆಯೇ?
ಒಳ್ಳೆಯದು ಡಬಲ್
ವಿದೇಶಿಗಳು ಎದ್ದೇಳಿ. ಒಳ್ಳೆಯ ಗ್ರೂಪ್ ಬಂದಿದೆ. ಬಾಪ್ ದಾದಾರವರಿಗೆ ಡಬಲ್ ವಿದೇಶಿಗಳ ಒಂದು
ಮಾತಿನಲ್ಲಿ ಖುಷಿ ಇದೆ. ಯಾವುದಾಗಿದೆ ಎಂದು ತಿಳಿದಿದೆಯೇ? ತಿಳಿದಿದೆಯೇ? ನೋಡಿ ಎಷ್ಟೊಂದು
ದೂರದಿಂದ ದೂರದೇಶದಿಂದ ಬರುತ್ತೀರಾ ಆದರೆ ಯಾವ ಸರದಿಯಲ್ಲಿ ಬರಬೇಕೋ ಆ ಸರದಿಯಲ್ಲಿ ಬಂದು
ತಲುಪಿದ್ದೀರಿ. ನಿಮಗೆ ಇದೇ ಡೈರೆಕ್ಷನ್ ಸಿಕ್ಕಿದೆ. ಪುರುಷಾರ್ಥ ಮಾಡಿ ದೊಡ್ಡದಾದ ಗುಂಪು ಬಂದು
ತಲುಪಿದೆ. ದಾದಿಯವರ ಡೈರೆಕ್ಷನ್ ಸರಿಯಾಗಿ ಮಾಡಿದ್ದೀರಲ್ಲವೇ! ಅದಕ್ಕೆ ಶುಭಾಷಯಗಳು ಬಾಪ್ ದಾದಾ
ಒಬ್ಬೊಬ್ಬರನ್ನು ನೋಡುತ್ತಿದ್ದಾರೆ. ದೃಷ್ಟಿಯನ್ನು ಕೊಡುತ್ತಿದ್ದಾರೆ. ಸ್ಟೇಜಿನ ಮೇಲೆ ದೃಷ್ಟಿ
ಸಿಗುತ್ತದೆ ಎನ್ನುವುದಲ್ಲ, ದೂರದಿಂದಲೇ ಬಹಳ ಚೆನ್ನಾಗಿ ಕಾಣಿಸುತ್ತದೆ. ಡಬಲ್ ವಿದೇಶಿಗಳು ಹಾಜಿಯ
ಪಾಠವನ್ನು ಚೆನ್ನಾಗಿ ಓದಿದ್ದಾರೆ. ಬಾಪ್‌ದಾದಾರವರಿಗೆ ಡಬಲ್ ವಿದೇಶಿಗಳ ಮೇಲೆ ಪ್ರೀತಿಯಂತೂ ಇದೆ
ಆದರೆ ಹೆಮ್ಮೆಯೂ ಇದೆ. ಏಕೆಂದರೆ ವಿಶ್ವದ ಮೂಲೆ-ಮೂಲೆಯಲ್ಲಿ ಸಂದೇಶವನ್ನು ತಲುಪಿಸುವುದಕ್ಕೋಸ್ಕರ
ಡಬಲ್ ವಿದೇಶಿಗಳು ನಿಮಿತ್ತರಾಗಿದ್ದಾರೆ. ವಿದೇಶದಲ್ಲಿ ಇಲ್ಲಿಯವರೆಗೆ ಯಾವುದಾದರೂ ವಿಶೇಷ
ಸ್ಥಾನವಿದೆಯೇ, ಹಳ್ಳಿ- ಹಳ್ಳಿಯಲ್ಲೂ ಸಹ ಇದೆಯೇ ಅಥವಾ ವಿಶೇಷ ಸ್ಥಾನದಲ್ಲಿ ಮಾತ್ರ ಇದೆಯೇ?
ಮೂಲೆ-ಮೂಲೆಯಲ್ಲೂ, ಹಳ್ಳಿ-ಹಳ್ಳಿಯಲ್ಲೂ ಚಿಕ್ಕ ಸ್ಥಾನ ಹಾಗೂ ವಿಶೇಷ ಉಳಿದುಕೊಂಡಿದೆ? ಆದರೂ ನೋಡಿ
ಈ ಗುಂಪಿನಲ್ಲಿ ಯಾರೆಲ್ಲ ಬಂದಿದ್ದಾರೆ, ಅವರು ಎಷ್ಟೊಂದು ದೇಶಗಳಿಂದ ಬಂದಿದ್ದಾರೆ? ಲೆಕ್ಕಾ
ಮಾಡಿದ್ದೀರಾ? ಮಾಡಿಲ್ಲ. ಆದರೂ ವಿಶ್ವದ ಅನೇಕ ಭಿನ್ನ-ಭಿನ್ನ ದೇಶಗಳಲ್ಲಿ ತಾವು ಆತ್ಮಗಳೇ
ನಿಮಿತ್ತರಾಗಿದ್ದೀರಿ ಎಂದು ಬಾಪ್‌ದಾದಾರವರಿಗೆ ತಿಳಿದಿದೆ. ಡಬಲ್ ವಿದೇಶಿಗಳು ಬಾಪ್ ದಾದಾರವರ
ವಿಶ್ವ ಕಲ್ಯಾಣಕಾರಿ ಬಿರುದನ್ನು ಪ್ರತ್ಯಕ್ಷ ಮಾಡಿದ್ದಾರೆ. ಚೆನ್ನಾಗಿದೆ. ಪ್ರತಿಯೊಬ್ಬರು ತಮ್ಮ-
ತಮ್ಮ ಸ್ಥಾನದಲ್ಲಿ ಸ್ವಯಂ ತಮ್ಮ ಪುರುಷಾರ್ಥದಲ್ಲಿ ಮತ್ತು ಸೇವೆಯಲ್ಲಿ ಮುಂದುವರೆಯುತ್ತಿದ್ದೀರಿ
ಮತ್ತು ಸದಾ ಮುಂದುವರೆಯುತ್ತಲೇ ಇರುತ್ತೀರಿ. ಏಕೆಂದರೆ ನೀವು ಸಫಲತೆಯ ನಕ್ಷತ್ರಗಳಾಗಿದ್ದೀರಿ. ಬಹಳ
ಒಳ್ಳೆಯದು.
ಕುಮಾರರೊಂದಿಗೆ:
ಮಧುಬನದ ಕುಮಾರರೂ ಸಹ
ಇದ್ದಾರೆ. ನೋಡಿ - ಕುಮಾರರ ಸಂಖ್ಯೆ ಎಷ್ಟೊಂದು ಇದೆ? ಕುಮಾರರು ಅರ್ಧ ಕ್ಲಾಸ್ ಹಾಲ್ ಇದ್ದಾರೆ.
ಕುಮಾರರು ಈಗ ಸಾಧಾರಣವಾದ ಕುಮಾರರಲ್ಲ. ಈಗ ಕುಮಾರರ ಬಿರುದಾಗಿದೆ. ಯಾವ ಕುಮಾರರಾಗಿದ್ದೀರಿ? ಎಲ್ಲರೂ
ಬ್ರಹ್ಮಾಕುಮಾರರಾಗಿದ್ದೀರಿ, ಆದರೆ ಬ್ರಹ್ಮಾಕುಮಾರರ ವಿಶೇಷತೆ ಏನಾಗಿದೆ? ಸದಾ ಎಲ್ಲೇ ಅಶಾಂತಿ ಆದರೂ
ಅಲ್ಲಿ ಶಾಂತಿಯನ್ನು ಹರಡಿಸುವಂತಹ ಶಾಂತಿ ದೂತರು ಆಗಿದ್ದೀರಿ ಎನ್ನುವುದೇ ಕುಮಾರರ ವಿಶೇಷತೆ ಆಗಿದೆ.
ಮನಸ್ಸಿನ ಅಶಾಂತಿಯೂ ಇಲ್ಲ, ಹೊರಗಿನ ಅಶಾಂತಿಯೂ ಸಹ ಇಲ್ಲ. ಕುಮಾರರ ಕಾರ್ಯವೇ ಆಗಿದೆ - ಕಷ್ಟದ
ಕೆಲಸ ಮಾಡುವುದು. ಹಾರ್ಡ್ ವರ್ಕರ್ ಆಗಿದ್ದೀರಲ್ಲವೇ! ಅಂದಾಗ ಇಂದಿನ ದಿನ ಎಲ್ಲದಕ್ಕಿಂತ ಮುಖ್ಯವಾಗಿ
ಅಶಾಂತಿಯನ್ನು ದೂರ ಮಾಡಿ ಶಾಂತಿಯನ್ನು ಹರಡಿಸುವುದೇ ಎಲ್ಲದಕ್ಕಿಂತ ಕಷ್ಟದಲ್ಲೂ ಕಷ್ಟದ ಕೆಲಸವಾಗಿದೆ.
ಈ ರೀತಿ ಕುಮಾರರಾಗಿದ್ದೀರಾ? ಆಗಿದ್ದೀರಾ? ಅಶಾಂತಿಯ ಹೆಸರು- ಚಿನ್ಹೆ ಇರಬಾರದು ಆ ರೀತಿ ಶಾಂತಿ
ದೂತರಾಗಿದ್ದೀರಾ? ಇಡೀ ವಿಶ್ವದಲ್ಲಿ, ತಮ್ಮ ಸಂಬಂಧ-ಸಂಪರ್ಕದಲ್ಲೂ ಸಹ ಇರಬಾರದು. ಹೇಗೆ ಶಾಂತಿ
ದೂತರು ಎಲ್ಲೇ ಬೆಂಕಿ ಉರಿಯುತ್ತಿದ್ದರೂ ಅದನ್ನು ಆರಿಸುವಂತಹವರಾಗಿರಬೇಕು. ಅಂದಾಗ ಅಶಾಂತಿಯನ್ನು
ಶಾಂತಿಯನ್ನಾಗಿ ಪರಿವರ್ತನೆ ಮಾಡುವುದೇ ಶಾಂತಿದೂತರ ಕಾರ್ಯವಾಗಿದೆ. ಅಂದಾಗ
ಶಾಂತಿದೂತರಾಗಿದ್ದೀರಲ್ಲವೇ? ಪಕ್ಕಾ! ಪಕ್ಕಾ? ಪಕ್ಕಾ? ಬಹಳ ಚೆನ್ನಾಗಿದೆ. ಬಾಪ್‌ದಾದಾ ಇಷ್ಟೆಲ್ಲಾ
ಕುಮಾರರನ್ನು ನೋಡಿ ಖುಷಿಯಾಗುತ್ತಿದ್ದಾರೆ. ದೆಹಲಿಯಲ್ಲಿ ಹೆಚ್ಚಾಗಿ ಕುಮಾರರು ಬರಬೇಕು ಏಕೆಂದರೆ
ಕುಮಾರರು ಎಂದರೆ ಜಗಳವಾಡುವಂತಹವರು ಎಂದು ಸರ್ಕಾರದವರು ತಿಳಿದುಕೊಂಡಿದ್ದಾರೆ. ಕುಮಾರರನ್ನು
ನೋಡಿದರೆ ಹೆದುರಿಕೊಳ್ಳುತ್ತಾರೆ. ಆದ್ದರಿಂದ ಬಾಪ್‌ದಾದಾ ದೆಹಲಿಯಲ್ಲಿ ಹೆಚ್ಚಾಗಿ ಕುಮಾರರು ಬರಬೇಕು
ಎಂದು ಪ್ಲಾನ್ ಮಾಡಿದ್ದರು. ಕುಮಾರರ ಕಮಾಲ್ ಆಗಿದೆ ಹೆದುರಿಕೊಳ್ಳುವ ಸರ್ಕಾರವೂ ಸಹ ಪ್ರತಿಯೊಬ್ಬ
ಬ್ರಹ್ಮಾಕುಮಾರರನ್ನು ಶಾಂತಿದೂತ ಬಿರುದಿನಿಂದ ಸ್ವಾಗತ ಮಾಡುವುದು. ಇಡೀ ವಿಶ್ವದಲ್ಲಿ ಬ್ರಹ್ಮಾ
ಕುಮಾರ ಶಾಂತಿದೂತರಾಗಿದ್ದಾರೆ ಎಂದು ಹರಡಬೇಕು. ಆಗುತ್ತದೆಯೇ? ದೆಹಲಿಯಲ್ಲೇ ಮಾಡಬೇಕು.
ಮಾಡಬೇಕಲ್ಲವೇ - ದಾದಿಯರು ಮಾಡುತ್ತೀರಾ? ಇಷ್ಟೆಲ್ಲಾ ಕುಮಾರರಿದ್ದಾರೆ. ಒಂದು ಗುಂಪಿನಲ್ಲೇ
ಇಷ್ಟೊಂದು ಕುಮಾರರಿದ್ದರೆ, ಎಲ್ಲಾ ಗುಂಪಿನಲ್ಲೂ ಎಷ್ಟು ಇರಬಹುದು? ವಿಶ್ವದಲ್ಲಿ ಎಷ್ಟು ಇರುತ್ತಾರೆ?
[1 ಲಕ್ಷ ಇರಬಹುದು] ಅಂದಾಗ ಕುಮಾರರು ಕಮಾಲ್ ಮಾಡಿರಿ. ಸರ್ಕಾರದಲ್ಲಿ ಏನು ಕುಮಾರರ ಪ್ರತಿ ಉಲ್ಟಾ
ಭಾವನೆ ಇದೆ, ಅದನ್ನು ಸುಲ್ಟಾ ಮಾಡಿರಿ. ಆದರೆ ಮನಸ್ಸಿನಲ್ಲೂ ಸಹ ಅಶಾಂತಿ ಇರಬಾರದು. ಜೊತೆಗಾರರಲ್ಲೂ
ಸಹ ಅಶಾಂತಿ ಇರಬಾರದು ಮತ್ತು ತಮ್ಮ ಸ್ಥಾನದಲ್ಲೂ ಸಹ ಅಶಾಂತಿ ಇರಬಾರದು. ತಮ್ಮ ನಗರದಲ್ಲೂ ಸಹ
ಅಶಾಂತಿ ಇರಬಾರದು. ಕುಮಾರರ ಮುಖದಲ್ಲಿ ಬೋರ್ಡನ್ನು ಹಾಕುವಂತಹ ಆವಶ್ಯಕತೆ ಇಲ್ಲ. ಆದರೆ ಮಸ್ತಕದಲ್ಲಿ
ತನಗೆ ತಾನೇ ಬರೆಯಲ್ಪಟ್ಟಿದೆ. ಶಾಂತಿದೂತ ಎಂದು ಎಲ್ಲರಿಗೂ ಅನುಭವ ಆಗಬೇಕು. ಸರಿಯಿದೆಯಲ್ಲವೇ!'
ಕುಮಾರಿಯರು ಎದ್ದೇಳಿ:
ಕುಮಾರಿಯರು ಬಹಳಷ್ಟು
ಇದ್ದಾರೆ. ಯಾರು ಸೇವಾಕೇಂದ್ರದಲ್ಲಿ ಇರುತ್ತಾರೆ ಅವರಲ್ಲ, ಯಾರು ಸೇವಾಕೇಂದ್ರದಲ್ಲಿ ಇರುವುದಿಲ್ಲ
ಅವರು ಎದ್ದೇಳಿ, ಅಂದಾಗ ಈ ಎಲ್ಲಾ ಕುಮಾರಿಯರ ಲಕ್ಷ್ಯವೇನಾಗಿದೆ? ಕೆಲಸ ಮಾಡುವುದಾಗಿದೆಯೇ ಅಥವಾ
ವಿಶ್ವ ಸೇವೆ ಮಾಡುವುದಾಗಿದೆಯೇ? ಕಿರೀಟವನ್ನು ತಲೆಯ ಮೇಲೆ ಇಟ್ಟುಕೊಳ್ಳಬೇಕೋ ಅಥವಾ : ಬುಟ್ಟಿಯನ್ನು
ಇಟ್ಟುಕೊಳ್ಳಬೇಕೋ? ಏನನ್ನು ಇಟ್ಟುಕೊಳ್ಳಬೇಕು? ನೋಡಿ – ಎಲ್ಲಾ ಕುಮಾರಿಯರು ದಯಾ ಹೃದಯಿಗಳಾಗಬೇಕು.
ವಿಶ್ವದ ಆತ್ಮಗಳಿಗೆ ಕಲ್ಯಾಣವಾಗಬೇಕು. 21 ಕುಲದ ಉದ್ದಾರ ಮಾಡುವಂತಹವರು ಎಂದು ಕುಮಾರಿಯರ ಗಾಯನವಿದೆ.
ಅಂದಾಗ ಅರ್ಧಕಲ್ಪ 21 ಕುಲವಾಗುತ್ತದೆ. ಈ ರೀತಿ ಕುಮಾರಿಯರಾಗಿದ್ದೀರಾ? ಯಾರು 21 ಕುಲದ ಕಲ್ಯಾಣ
ಮಾಡುತ್ತಾರೆ ಅವರು ಕೈಯನ್ನು ಎತ್ತಿ. ಒಂದು ಪರಿವಾರ ಅಲ್ಲ 21 ಪರಿವಾರಗಳು ಮಾಡುತ್ತೀರಾ? ನೋಡಿ
ತಮ್ಮ ಹೆಸರು ನೋಟ್ ಆಗುತ್ತದೆ ಮತ್ತು ಪುನಃ ದಯಾಹೃದಯಿಗಳಾಗಿದ್ದೀರಾ ಎಂದು ನೋಡಲಾಗುತ್ತದೆ. ಹಾಗೂ
ಯಾವುದಾದರೂ ಲೆಕ್ಕಾಚಾರ ಉಳಿದುಕೊಂಡಿದೆಯೇ? ಈಗ ಸಮಯದ ಮೊದಲೇ ತಯಾರಿ ಆಗಬೇಕು ಎನ್ನುವುದನ್ನು ಸಮಯವು
ಸೂಚನೆಯನ್ನು ಕೊಡುತ್ತಿದೆ. ಸಮಯವನ್ನು ನೋಡುತ್ತಿದ್ದರೆ ಸಮಯವೂ ಕಳೆಯುತ್ತಿರುತ್ತದೆ. ಆದ್ದರಿಂದ
ಲಕ್ಷ್ಯವಿರಲಿ ನಾವೆಲ್ಲಾ ವಿಶ್ವ ಕಲ್ಯಾಣಿ ದಯಾಹೃದಯ ತಂದೆಯ ಮಕ್ಕಳು ದಯಾಹೃದಯಿಗಳಾಗಿದ್ದೇವೆ,
ಸರಿಯಾಗಿದೆಯಲ್ಲವೇ? ದಯಾ ಹೃದಯಿಗಳಾಗಿದ್ದೀರಲ್ಲವೇ! ದಯಾಹೃದಯಿ ಆಗಿರಿ. ಸ್ವಲ್ಪ ಮತ್ತು ತೀವ್ರ
ಗತಿಯಿಂದ ಆಗಿರಿ. ಕುಮಾರಿಯರಿಗೆ ತಂದೆಯ ಸಿಂಹಾಸನ ಸಹಜವಾಗಿ ಸಿಗುತ್ತದೆ. ಹೊಸ ವರ್ಷದಲ್ಲಿ ಏನು
ಕಮಾಲ್ ಮಾಡಿ ತೋರಿಸುತ್ತೀರಿ ಎಂದು ನೋಡಲಾಗುತ್ತದೆ. ಒಳ್ಳೆಯದು..
ಮೀಡಿಯಾ ವರ್ಗದವರು 108
ರತ್ನಗಳು ಬಂದಿದ್ದಾರೆ:
ಮೀಡಿಯಾದವರು ಈಗ ಕಮಾಲ್
ಮಾಡಿ ತೋರಿಸಬೇಕು. ಎಲ್ಲರ ಬುದ್ದಿಯಲ್ಲೂ ಸಹ ನಾವು ತಂದೆಯಿಂದ ಆಸ್ತಿಯನ್ನು ಪಡೆದುಕೊಳ್ಳಲೇ ಬೇಕು
ಎಂದು ಬರಬೇಕು. ಯಾರೂ ಸಹ ಇದರಿಂದ ವಂಚಿತರಾಗಬಾರದು. ಶಬ್ದವನ್ನು ಹರಡಿಸುವುದು ಮೀಡಿಯಾದ
ಕೆಲಸವಾಗಿದೆ. ತಂದೆಯಿಂದ ಆಸ್ತಿಯನ್ನು ಪಡೆದುಕೊಳ್ಳಿ ಎಂದು ಈಗ ಶಬ್ದವನ್ನು ಹರಡಿಸಿ. ಯಾರೂ ಸಹ
ವಂಚಿತರಾಗಬಾರದು. ಈಗ ವಿದೇಶದಲ್ಲೂ ಸಹ ಮೀಡಿಯಾದ ಕಾರ್ಯಕ್ರಮ ನಡೆಯುತ್ತಿದೆಯಲ್ಲವೇ! ಚೆನ್ನಾಗಿದೆ.
ಭಿನ್ನ-ಭಿನ್ನ ರೂಪದಿಂದ ಯಾವ ಕಾರ್ಯಕ್ರಮಗಳನ್ನು ಮಾಡುತ್ತೀರಿ. ಅದರಲ್ಲಿ ಒಳ್ಳೆಯ ಆಸಕ್ತಿ
ಇರುತ್ತದೆ. ಚೆನ್ನಾಗಿ ಮಾಡುತ್ತಿದ್ದಾರೆ ಮತ್ತು ಮಾಡುತ್ತಲೇ ಇರುತ್ತಾರೆ ಮತ್ತು ಸಫಲತೆಯ ಸಹ ಇದೆ.
ಎಲ್ಲಾ ವರ್ಗದವರು ಏನು ಸೇವೆ ಮಾಡುತ್ತಿದ್ದಾರೆ ಅದರ ಸಮಾಚಾರ ಬಾಪ್‌ದಾದಾರವರ ಬಳಿ ಬರುತ್ತದೆ,
ಪ್ರತೀ ವರ್ಗವೂ ತನ್ನ ತನ್ನ ಸೇವೆಯ ಸಾಧನ ಮತ್ತು ಸೇವೆಯ ರೂಪ-ರೇಖೆಗಳು ಇದೆ. ಆದರೆ ವರ್ಗಗಳು
ಬೇರೆ-ಬೇರೆ ಆಗಿರುವ ಕಾರಣ ಪ್ರತಿ ವರ್ಗದವರು ಪರಸ್ಪರದಲ್ಲಿ ರೇಸ್ ( ಸ್ಪರ್ಧೆ) ಮಾಡುತ್ತಿದ್ದಾರೆ.
ಚೆನ್ನಾಗಿದೆ. ಈರ್ಷ್ಯೆ ಮಾಡಬಾರದು ಸ್ಪರ್ಧೆಯನ್ನು ಮಾಡಿರಿ. ಪ್ರತಿವರ್ಗದ ಫಲತಾಂಶ, ವರ್ಗದ ಸೇವೆಯ
ನಂತರ ಐ.ಪಿ ಮತ್ತು ವಿ.ಐ.ಪಿಗಳು ಸಂಪರ್ಕದಲ್ಲಿ ಬರುತ್ತಾರೆ. ಆದರೆ ಇಲ್ಲಿಯವರೆಗೆ ಮೈಕ್‌ಗಳು
ಬಂದಿಲ್ಲ. ಆದರೆ ಸಂಬಂಧ-ಸಂಪರ್ಕದಲ್ಲಿ ಬಂದಿದ್ದಾರೆ. ಒಳ್ಳೆಯದು.
ಬಾಪ್ ದಾದಾರವರ
ವ್ಯಾಯಾಮ ನೆನಪು ಇದೆಯೇ? ಈಗೀಗ ನಿರಾಕಾರಿ, ಈಗೀಗ ಫರಿಸ್ಥಾ... ಇದು ನಡೆಯುತ್ತಾ ತಿರುಗಾಡುತ್ತಾ
ತಂದೆ ಮತ್ತು ದಾದಾನ ಪ್ರೀತಿಯ ಬದಲಾಗಿ ಕೊಡುವುದಾಗಿದೆ. ಅಂದಾಗ ಈಗೀಗ ಈ ಆತ್ಮೀಯ ವ್ಯಾಯಾಮವನ್ನು
ಮಾಡಿರಿ. ಸೆಕೆಂಡಿನಲ್ಲಿ ನಿರಾಕಾರಿ, ಸೆಕೆಂಡಿನಲ್ಲಿ ಫರಿಸ್ಥಾ (ಬಾಪ್‌ದಾದಾ ಡ್ರಿಲ್ ಮಾಡಿಸಿದರು).
ಒಳ್ಳೆಯದು. ನಡೆಯುತ್ತಾ - ತಿರುಗಾಡುತ್ತಾ ಇಡೀ ದಿನದಲ್ಲಿ ಈ ವ್ಯಾಯಾಮ ತಂದೆಯ ಸಹಜ ನೆನಪನ್ನು
ತರಿಸುತ್ತದೆ.
ನಾಲ್ಕೂ ಕಡೆಯ ಮಕ್ಕಳ
ನೆನಪು ಎಲ್ಲಾ ಕಡೆಯಿಂದ ಬಾಪ್ ದಾದಾರವರ ಬಳಿ ತಲುಪಿದೆ. ಪ್ರತಿಯೊಬ್ಬ ಮಗು ನನ್ನ ನೆನಪು ಕೊಡಬೇಕು,
ನನ್ನ ನೆನಪು ಕೊಡಬೇಕು ಎಂದು ತಿಳಿದುಕೊಳ್ಳುತ್ತಾರೆ. ಕೆಲವರು ಪತ್ರದ ಮುಖಾಂತರ ಕಳಿಹಿಸುತ್ತಾರೆ.
ಕೆಲವರು ಕಾರ್ಡಿನ ಮುಖಾಂತರ ಕಳುಹಿಸುತ್ತಾರೆ. ಕೆಲವರು ಮುಖದ ಮುಖಾಂತರ ಆದರೆ ಬಾಪ್‌ದಾದಾ ನಾಲ್ಕೂ
ಕಡೆಯ ಮಕ್ಕಳಿಗೂ ಒಬ್ಬೊಬ್ಬರನ್ನು ನಯನಗಳಲ್ಲಿ ಸಮಾವೇಶ ಮಾಡಿಕೊಂಡು ನೆನಪಿನ ಗೌರವವನ್ನು ಪದಮಾಗುಣ
ನೆನಪು ಪ್ರೀತಿಯನ್ನು ಕೊಡುತ್ತಿದ್ದಾರೆ ಬಾಪ್ ದಾದಾ ಎಲ್ಲರ ಮನಸ್ಸಿನಲ್ಲಿ ಈ ಸಮಯದಲ್ಲಿ ಎಷ್ಟೇ
ಸಮಯವಾಗಿರಬಹುದು ಆದರೆ ಮೆಜಾರಿಟಿಯ ಮನಸ್ಸಿನಲ್ಲಿ ಮಧುಬನ ಮತ್ತು ಮಧುಬನದ ಬಾಪ್ ದಾದಾರವರನ್ನು
ನೋಡುತ್ತಿದ್ದಾರೆ.
ನಾಲ್ಕೂ ಕಡೆಯ ಮೂರು
ಸಿಂಹಸನಾಧಾರಿಗಳಿಗೆ, ಸ್ವರಾಜ್ಯಧಿಕಾರೀ ಮಕ್ಕಳಿಗೆ, ಸದಾ ಬಾಪ್ ದಾದಾರವರಿಗೆ ಬದಲಾಗಿ ತಂದೆ ಸಮಾನ
ಆಗುವಂತಹ ಮಕ್ಕಳಿಗೆ ಸದಾ ಹಿಂತಿರುಗುವ ಪ್ರಯಾಣದ ಸ್ಮೃತಿ ಸ್ವರೂಪದ ಮಕ್ಕಳಿಗೆ, ಸದಾ ಸಂಕಲ್ಲ, ವಾಣಿ
ಮತ್ತು ಕರ್ಮದಲ್ಲಿ ತಂದೆಯನ್ನು ಅನುಸರಣೆ ಮಾಡುವಂತಹ ಪ್ರತಿಯೊಬ್ಬ ಮಕ್ಕಳಿಗೂ ಬಾಪ್ ದಾದಾರವರ ಬಹಳ
ಬಹಳ-ಬಹಳ ನೆನಪು ಪ್ರೀತಿ ಮತ್ತು ನಮಸ್ತೆ,
ವರದಾನ:
ಸರ್ವ ಆತ್ಮರ
ಮೇಲೆ ತಮ್ಮ ಶುಭ ಭಾವನೆಯ ಬೀಜ ಹಾಕುವಂತಹ ಮಾಸ್ಟರ್ ದಾತ ಭವ
ಫಲಕ್ಕೋಸ್ಕರ ಕಾಯುವುದರ
ಬದಲಾಗಿ ತಾವು ತಮ್ಮ ಶುಭ ಭಾವನೆಯ ಬೀಜ ಪ್ರತಿಯೊಂದು ಆತ್ಮನಲ್ಲಿ ಹಾಕುತ್ತಾ ಹೋಗಿ, ಸಮಯದಲ್ಲಿ
ಸರ್ವ ಆತ್ಮರನ್ನು ಜಾಗೃತ ಮಾಡಲೇಬೇಕು. ಯಾರಾದರೂ ವಿರುದ್ಧ ಮಾಡಿದರೂ ತಾವು ತಮ್ಮ ದಯಾ ಭಾವನೆಯನ್ನು
ಬಿಡಬಾರದು. ಈ ವಿರುದ್ಧತೆ, ಅಪಮಾನ, ನಿಂದನೆ ಗೊಬ್ಬರದ ಹಾಗೆ ಕೆಲಸ ಮಾಡುತ್ತದೆ ಮತ್ತು ಒಳ್ಳೆಯ ಫಲ
ಬರುತ್ತದೆ. ಎಷ್ಟು ನಿಂದನೆ ಮಾಡುತ್ತಾರೆ ಅಷ್ಟು ಮಹಿಮೆ ಮಾಡುತ್ತಾರೆ, ಆದ್ದರಿಂದ ಪ್ರತಿಯೊಂದು
ಆತ್ಮರನ್ನು ತಮ್ಮ ವೃತ್ತಿ, ವೈಬ್ರೇಶನ್ಸ್, ವಾಣಿ ಮೂಲಕ ಮಾಸ್ಟರ್ ದಾತನಾಗಿ ಕೊಡುತ್ತಾ ಹೀಗಾಗಿ.
ಸ್ಲೋಗನ್:
ಸದಾ ಪ್ರೀತಿ,
ಸುಖ, ಶಾಂತಿ ಮತ್ತು ಆನಂದದ ಸಾಗರದಲ್ಲಿ ಸಮಾವೇಶ ಆಗುವ ಮಕ್ಕಳೇ ಸತ್ಯ ತಪಸ್ವಿ ಆಗಿದ್ದಾರೆ.
ಸೂಚನೆ:- ಇಂದು ತಿಂಗಳಿನ
ಮೂರನೇ ರವಿವಾರ ಅಂತರರಾಷ್ಟ್ರೀಯ ಯೋಗ ದಿವಸವಾಗಿದೆ, ಎಲ್ಲಾ ಬ್ರಹ್ಮಾ ವತ್ಸರು ಸಂಘಟಿತ ರೂಪದಲ್ಲಿ
ಸಂಜೆ 6.30ಯಿಂದ 7.30ರವರೆಗೆ ವಿಶೇಷ ವರದಾತಾ ಭಾಗ್ಯ ವಿಧಾತ ಬಾಪ್ ದಾದಾರವರ ಜೊತೆ ಕಂಬೈಂಡ್
ಸ್ವರೂಪದಲ್ಲಿ ಸ್ಥಿತರಾಗಿ, ಅವ್ಯಕ್ತ ವತನದಿಂದ ಸರ್ವ ಆತ್ಮಗಳಿಗೆ ಸುಖ ಶಾಂತಿಯ ವರದಾನ ಕೊಡುವ
ಸೇವೆಯನ್ನು ಮಾಡಿ.