17.12.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ತಮ್ಮ ಸೌಭಾಗ್ಯವನ್ನು ರೂಪಿಸಿಕೊಳ್ಳಲು ತಂದೆಯ ಬಳಿ ಬಂದಿದ್ದೀರಿ, ಯಾರದು ಎಲ್ಲವನ್ನೂ ಈಶ್ವರನು
ಸ್ವೀಕಾರ ಮಾಡುತ್ತಾರೆಯೋ ಆ ಮಕ್ಕಳದು ಪರಮ ಸೌಭಾಗ್ಯವಾಗಿದೆ”
ಪ್ರಶ್ನೆ:
ಮಕ್ಕಳ ಯಾವ ಒಂದು
ತಪ್ಪಿನ ಕಾರಣ ಮಾಯೆಯು ಬಹಳ ಬಲಶಾಲಿಯಾಗಿಬಿಡುತ್ತದೆ?
ಉತ್ತರ:
ಮಕ್ಕಳು ಭೋಜನದ
ಸಮಯದಲ್ಲಿ ತಂದೆಯನ್ನು ಮರೆತುಹೋಗುತ್ತಾರೆ. ತಂದೆಗೆ ಸ್ವೀಕಾರ ಮಾಡಿಸದೇ ಇರುವುದರಿಂದ ಮಾಯೆಯು
ಭೋಜನವನ್ನು ತಿಂದುಬಿಡುತ್ತದೆ. ಇದರಿಂದ ಅದು ಬಲಶಾಲಿಯಾಗಿಬಿಡುತ್ತದೆ. ಮತ್ತೆ ಮಕ್ಕಳಿಗೆ ತೊಂದರೆ
ಕೊಡುತ್ತದೆ. ಈ ಅತಿಚಿಕ್ಕ ತಪ್ಪು ಮಾಯೆಯಿಂದ ಸೋಲುಂಟು ಮಾಡುತ್ತದೆ ಆದ್ದರಿಂದ ತಂದೆಯ ಆಜ್ಞೆಯಾಗಿದೆ
- ಮಕ್ಕಳೇ, ನೆನಪಿನಲ್ಲಿ ಭೋಜನವನ್ನು ಸ್ವೀಕಾರ ಮಾಡಿ ನಿಮ್ಮೊಂದಿಗೆ ತಿನ್ನುವೆನೆಂದು ಪಕ್ಕಾ
ಪ್ರತಿಜ್ಞೆ ಮಾಡಿ. ಯಾವಾಗ ನೆನಪು ಮಾಡುವಿರೋ ಆಗ ತಂದೆಯು ಪ್ರಸನ್ನರಾಗುವರು.
ಗೀತೆ:
ಇಂದಿಲ್ಲದಿದ್ದರೆ
ನಾಳೆ ಮೋಡಗಳು ಚದುರುತ್ತವೆ...
ಓಂ ಶಾಂತಿ.
ನಮ್ಮ ದೌರ್ಭಾಗ್ಯದ ದಿನಗಳು ಬದಲಾಗಿ ಈಗ ಸದಾಕಾಲಕ್ಕಾಗಿ ಸೌಭಾಗ್ಯದ ದಿನಗಳು ಬರುತ್ತಿವೆ ಎಂಬುದನ್ನು
ಮಕ್ಕಳು ತಿಳಿದುಕೊಂಡಿದ್ದೀರಿ. ನಂಬರ್ವಾರ್ ಪುರುಷಾರ್ಥದನುಸಾರ ಭಾಗ್ಯವು ಬದಲಾಗುತ್ತಲೇ ಇರುತ್ತದೆ.
ಶಾಲೆಯಲ್ಲಿಯೂ ಸಹ ಭಾಗ್ಯವು ಬದಲಾಗುತ್ತಿರುತ್ತದೆ ಅರ್ಥಾತ್ ಉನ್ನತಿಯನ್ನು ಹೊಂದುತ್ತಾ ಹೋಗುತ್ತಾರೆ.
ನೀವು ಬಹಳ ಚೆನ್ನಾಗಿ ಅರಿತುಕೊಂಡಿದ್ದೀರಿ. ಈಗ ಈ ರಾತ್ರಿಯು ಸಮಾಪ್ತಿಯಾಗುವುದಿದೆ, ಭಾಗ್ಯವು
ಬದಲಾಗುತ್ತಿದೆ. ಜ್ಞಾನದ ಮಳೆಯಂತೂ ಆಗುತ್ತಿರುತ್ತದೆ, ಬುದ್ಧಿವಂತ ಮಕ್ಕಳೇ ತಿಳಿದುಕೊಳ್ಳುತ್ತಾರೆ
- ಅವಶ್ಯವಾಗಿ ನಾವು ದೌರ್ಭಾಗ್ಯದಿಂದ ಸೌಭಾಗ್ಯಶಾಲಿಗಳಾಗುತ್ತಿದ್ದೇವೆ ಅರ್ಥಾತ್ ಸ್ವರ್ಗದ
ಮಾಲೀಕರಾಗುತ್ತಿŒದ್ದೇವೆ. ನಮ್ಮ ಪುರುಷಾರ್ಥದನುಸಾರ ನಾವು ದೌರ್ಭಾಗ್ಯದಿಂದ ಸೌಭಾಗ್ಯವನ್ನು
ರೂಪಿಸಿಕೊಳ್ಳುತ್ತಿದ್ದೇವೆ. ಈಗ ರಾತ್ರಿಯಿಂದ ದಿನವಾಗುತ್ತಿದೆ. ಇದು ನೀವು ಮಕ್ಕಳ ವಿನಃ ಯಾರಿಗೂ
ತಿಳಿದಿಲ್ಲ. ತಂದೆಯು ಗುಪ್ತವಾಗಿದ್ದಾರೆ ಮತ್ತು ಅವರ ಮಾತುಗಳೂ ಗುಪ್ತವಾಗಿದೆ. ಭಲೆ ಮನುಷ್ಯರು
ಕುಳಿತು ಸಹಜರಾಜಯೋಗ ಮತ್ತು ಸಹಜ ಜ್ಞಾನದ ಮಾತುಗಳನ್ನು ಶಾಸ್ತ್ರಗಳಲ್ಲಿ ಬರೆದಿದ್ದಾರೆ ಆದರೆ ಯಾರು
ಬರೆದರೋ ಅವರು ಮರಣ ಹೊಂದಿದರು. ಉಳಿದಂತೆ ಯಾರು ಅದನ್ನು ಓದುತ್ತಾರೆಯೋ ಅವರು ಏನನ್ನೂ
ಅರ್ಥಮಾಡಿಕೊಳ್ಳುವುದಿಲ್ಲ ಏಕೆಂದರೆ ಬುದ್ಧಿಹೀನರಾಗಿದ್ದಾರೆ. ಎಷ್ಟೊಂದು ಅಂತರವಿದೆ! ನೀವೂ ಸಹ
ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಳ್ಳುತ್ತೀರಿ. ಎಲ್ಲರೂ ಏಕರಸವಾಗಿ ಪುರುಷಾರ್ಥ
ಮಾಡುವುದಿಲ್ಲ. ದೌರ್ಭಾಗ್ಯವೆಂದು ಯಾವುದಕ್ಕೆ ಹೇಳಲಾಗುತ್ತದೆ ಮತ್ತು ಸೌಭಾಗ್ಯವೆಂದು ಯಾವುದಕ್ಕೆ
ಹೇಳಲಾಗುತ್ತದೆ ಎಂಬುದನ್ನು ಕೇವಲ ನೀವು ಬ್ರಾಹ್ಮಣರೇ ಅರಿತುಕೊಂಡಿದ್ದೀರಿ ಮತ್ತೆಲ್ಲರೂ ಸಹ ಘೋರ
ಅಂಧಕಾರದಲ್ಲಿದ್ದಾರೆ. ಅವರಿಗೆ ತಿಳಿಸಿ ಜಾಗೃತ ಮಾಡಬೇಕಾಗಿದೆ. ಸೂರ್ಯವಂಶಿಯರಿಗೆ
ಸೌಭಾಗ್ಯಶಾಲಿಗಳೆಂದು ಹೇಳಲಾಗುತ್ತದೆ. ಅವರೇ 16 ಕಲಾ ಸಂಪೂರ್ಣರಾಗಿದ್ದಾರೆ. ನಾವು ತಂದೆಯಿಂದ
ಸ್ವರ್ಗಕ್ಕಾಗಿ ಸೌಭಾಗ್ಯವನ್ನು ರೂಪಿಸಿಕೊಳ್ಳುತ್ತಿದ್ದೇವೆ. ಆ ತಂದೆಯೇ ಸ್ವರ್ಗವನ್ನೂ
ರಚಿಸುವವರಾಗಿದ್ದಾರೆ. ಆಂಗ್ಲಭಾಷೆಯನ್ನು ಅರಿತಿರುವವರಿಗೂ ಸಹ ನೀವು ತಿಳಿಸಬಹುದು - ನಾವು
ಹೆವೆನ್ಲೀ ಗಾಡ್ಫಾದರ್ನ ಮೂಲಕ ಹೆವೆನ್ನ ಸೌಭಾಗ್ಯವನ್ನು ರೂಪಿಸಿಕೊಳ್ಳುತ್ತಿದ್ದೇವೆ. ಹೆವೆನ್ನಲ್ಲಿ
ಸುಖವಿದೆ, ಹೆಲ್ನಲ್ಲಿ ದುಃಖವಿದೆ. ಗೋಲ್ಡನ್ ಏಜ್ ಎಂದರೆ ಸುಖ, ಸತ್ಯಯುಗ, ಹೆಲ್ ಎಂದರೆ ಕಲಿಯುಗ,
ದುಃಖ. ಸಂಪೂರ್ಣ ಸಹಜಮಾತಾಗಿದೆ. ನಾವೀಗ ಪುರುಷಾರ್ಥ ಮಾಡುತ್ತಿದ್ದೇವೆ. ಬ್ರಿಟಿಷರು,
ಕ್ರಿಶ್ಚಿಯನ್ನರು ಅನೇಕರು ಬರುತ್ತಾರೆ ಆಗ ತಿಳಿಸಿ - ನಾವೀಗ ಕೇವಲ ಒಬ್ಬರೇ ಹೆವೆನ್ಲೀ
ಗಾಡ್ಫಾದರ್ನ್ನು ನೆನಪು ಮಾಡುತ್ತೇವೆ ಏಕೆಂದರೆ ಮೃತ್ಯುವು ಸನ್ಮುಖದಲ್ಲಿ ನಿಂತಿದೆ. ತಂದೆಯು
ತಿಳಿಸುತ್ತಾರೆ, ನೀವು ನನ್ನ ಬಳಿ ಬರಬೇಕಾಗಿದೆ ಹೇಗೆ ತೀರ್ಥಯಾತ್ರೆಗಳಿಗೆ ಹೋಗುತ್ತಾರಲ್ಲವೆ.
ಬೌದ್ಧಿಯರದೂ ತಮ್ಮದೇ ತೀರ್ಥಸ್ಥಾನವಿದೆ, ಕ್ರಿಶ್ಚಿಯನ್ನರದೇ ಬೇರೆ ತೀರ್ಥಸ್ಥಾನವಿದೆ.
ಪ್ರತಿಯೊಬ್ಬರ ರೀತಿಪದ್ಧತಿಗಳು ಬೇರೆ-ಬೇರೆಯಾಗಿರುತ್ತದೆ. ನಮ್ಮದು ಬುದ್ಧಿಯೋಗದ ಮಾತಾಗಿದೆ.
ಎಲ್ಲಿಂದ ಪಾತ್ರವನ್ನಭಿನಯಿಸಲು ಬಂದಿದ್ದೇವೆಯೋ ಪುನಃ ಅಲ್ಲಿಗೆ ಹೋಗಬೇಕಾಗಿದೆ. ಅವರು ಸ್ವರ್ಗವನ್ನು
ಸ್ಥಾಪನೆ ಮಾಡುವ ಗಾಡ್ಫಾದರ್ ಆಗಿದ್ದಾರೆ. ಅವರೇ ನಮಗೆ ತಿಳಿಸಿದ್ದಾರೆ, ನಾವು ತಮಗೂ ಸಹ ಆ
ಸತ್ಯಮಾರ್ಗವನ್ನು ತಿಳಿಸುತ್ತೇವೆ. ಈಗ ಆ ಗಾಡ್ಫಾದರ್ನ್ನು ನೆನಪು ಮಾಡಿ ಆಗ ಅಂತಿಮಗತಿ ಸೋ
ಗತಿಯಾಗುವುದು. ಯಾವಾಗ ಯಾರಾದರೂ ರೋಗಿಯಾದರೆ ಎಲ್ಲರೂ ಹೋಗಿ ಅವರಿಗೆ ಎಚ್ಚರಿಕೆ ನೀಡುತ್ತಾರೆ -
ರಾಮ-ರಾಮ ಎಂದು ಹೇಳಿ. ಬಂಗಾಳದಲ್ಲಿ ಯಾರಾದರೂ ಸಾವನ್ನಪ್ಪುವ ಸ್ಥಿತಿಯಲ್ಲಿದ್ದಾಗ ಗಂಗಾನದಿಯ
ತೀರಕ್ಕೆ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿ ಹರಿ ಭೋಲ್, ಹರಿ ಭೋಲ್.... ಎಂದು ಹೇಳಿದರೆ ಹರಿಯ
ಬಳಿ ಹೊರಟುಹೋಗುತ್ತೀರಿ ಎಂದು ಹೇಳುತ್ತಾರೆ ಆದರೆ ಯಾರೂ ಹೋಗುವುದಿಲ್ಲ. ಸತ್ಯಯುಗದಲ್ಲಂತೂ
ರಾಮ-ರಾಮ ಎಂದು ಹೇಳಿ ಅಥವಾ ಹರಿ ನಾಮವನ್ನು ಹೇಳಿ ಎಂದು ಯಾರೂ ಹೇಳುವುದಿಲ್ಲ. ದ್ವಾಪರದಿಂದ ಈ
ಭಕ್ತಿಮಾರ್ಗವು ಆರಂಭವಾಗುತ್ತದೆ. ಸತ್ಯಯುಗದಲ್ಲಿ ಭಗವಂತನನ್ನು ಅಥವಾ ಗುರುಗಳನ್ನು ನೆನಪು
ಮಾಡುತ್ತಾರೆಂದಲ್ಲ ಅಲ್ಲಂತೂ ಕೇವಲ ನಾನಾತ್ಮ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು
ತೆಗೆದುಕೊಳ್ಳುತ್ತೇನೆಂದು ತಮ್ಮ ಆತ್ಮವನ್ನು ನೆನಪು ಮಾಡಲಾಗುತ್ತದೆ. ತಮ್ಮ ರಾಜ್ಯಭಾಗ್ಯವೂ
ನೆನಪಿಗೆ ಬರುತ್ತದೆ. ನಾವು ಹೋಗಿ ರಾಜಧಾನಿಯಲ್ಲಿ ಜನ್ಮ ತೆಗೆದುಕೊಳ್ಳುತ್ತೇವೆ ಎಂದು
ತಿಳಿಯುತ್ತಾರೆ. ಇದು ಈಗ ಪಕ್ಕಾ ನಿಶ್ಚಯವಿದೆ, ರಾಜ್ಯಭಾಗ್ಯವಂತೂ ಸಿಗಲೇಬೇಕಾಗಿದೆಯಲ್ಲವೆ. ಆದರೆ
ಯಾರನ್ನು ನೆನಪು ಮಾಡುತ್ತೀರಿ ಅಥವಾ ದಾನ-ಪುಣ್ಯ ಮಾಡುತ್ತೀರಿ? ಅಲ್ಲಿ ದಾನ-ಪುಣ್ಯ ಮಾಡಲು
ಬಡವರ್ಯಾರೂ ಇರುವುದೇ ಇಲ್ಲ. ಭಕ್ತಿಮಾರ್ಗದ ರೀತಿಪದ್ಧತಿಗಳೇ ಬೇರೆ, ಜ್ಞಾನಮಾರ್ಗದ ರೀತಿಪದ್ಧತಿಗಳೇ
ಬೇರೆಯಾಗಿದೆ. ಈಗ ತಂದೆಗೆ ಎಲ್ಲವನ್ನೂ ಒಟ್ಟು 21 ಜನ್ಮಗಳ ಆಸ್ತಿಯನ್ನು ತೆಗೆದುಕೊಂಡರೆಂದರೆ ಮತ್ತೆ
ದಾನ-ಪುಣ್ಯ ಮಾಡುವ ಅವಶ್ಯಕತೆಯಿರುವುದಿಲ್ಲ. ಈಶ್ವರ ತಂದೆಗೆ ನಾವು ಸರ್ವಸ್ವವನ್ನೂ ಕೊಡುತ್ತೇವೆ.
ಈಶ್ವರನೇ ಸ್ವೀಕಾರ ಮಾಡುತ್ತಾರೆ. ಸ್ವೀಕಾರ ಮಾಡದಿದ್ದರೆ ಮತ್ತೆ ಕೊಡುವುದಾದರೂ ಹೇಗೆ? ಸ್ವೀಕಾರ
ಮಾಡದಿದ್ದರೆ ಅದೂ ಸಹ ದೌರ್ಭಾಗ್ಯವಾಗಿದೆ. ಅದರಿಂದ ಅವರ ಮಮತ್ವವು ಕಳೆಯಬೇಕೆಂದು ಸ್ವೀಕಾರ
ಮಾಡಬೇಕಾಗುತ್ತದೆ. ಈ ರಹಸ್ಯವನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಯಾವಾಗ
ಅವಶ್ಯಕತೆಯಿರುವುದಿಲ್ಲವೋ ಆಗ ಏನನ್ನು ಸ್ವೀಕರಿಸುತ್ತಾರೆ? ಇಲ್ಲಂತೂ ಏನೂ ಶೇಖರಿಸಿಡಬೇಕಾಗಿಲ್ಲ.
ಇಲ್ಲಂತೂ ಮಮತ್ವವನ್ನು ಕಳೆಯಬೇಕಾಗಿದೆ.
ತಂದೆಯು ತಿಳಿಸಿದ್ದಾರೆ
- ಹೊರಗೆ ಎಲ್ಲಿಯಾದರೂ ಹೋಗುತ್ತೀರೆಂದರೆ ತಮ್ಮನ್ನು ಬಹಳ ಹಗುರರೆಂದು ತಿಳಿಯಿರಿ. ನಾವು ತಂದೆಯ
ಮಕ್ಕಳಾಗಿದ್ದೇವೆ, ನಾವಾತ್ಮಗಳು ರಾಕೇಟ್ಗಿಂತಲೂ ತೀಕ್ಷ್ಣವಾಗಿದ್ದೇವೆ. ಹೀಗೆ ದೇಹಿ-ಅಭಿಮಾನಿಯಾಗಿ
ನಡೆದುಕೊಂಡು ಹೋಗಿದ್ದೇ ಆದರೆ ಎಂದೂ ಸುಸ್ತಾಗುವುದಿಲ್ಲ, ದೇಹಭಾನವೂ ಬರುವುದಿಲ್ಲ. ಹೇಗೆ ಈ
ಕಾಲುಗಳಿಂದ ನಡೆಯುತ್ತಿಲ್ಲ, ನಾವು ಹಾರುತ್ತಿದ್ದೇವೆ ಎಂಬ ಅನುಭವವಾಗುತ್ತದೆ. ದೇಹೀ-ಅಭಿಮಾನಿಯಾಗಿ
ನೀವು ಎಲ್ಲಿಯಾದರೂ ಹೋಗಿ. ಮೊದಲಿಗೆ ಮನುಷ್ಯರು ತೀರ್ಥಯಾತ್ರೆಗೆ ಹೋಗುತ್ತಾರೆಂದರೆ
ಪಾದಯಾತ್ರೆಯಲ್ಲಿಯೇ ಹೋಗುತ್ತಿದ್ದರು. ಆ ಸಮಯದಲ್ಲಿ ಮನುಷ್ಯರ ಬುದ್ಧಿಯು ತಮೋಪ್ರಧಾನವಾಗಿರಲಿಲ್ಲ,
ಬಹಳ ಶ್ರದ್ಧೆಯಿಂದ ಹೋಗುತ್ತಿದ್ದರು ಸುಸ್ತಾಗುತ್ತಿರಲಿಲ್ಲ. ತಂದೆಯನ್ನು ನೆನಪು ಮಾಡುವುದರಿಂದ
ಸಹಯೋಗವಂತೂ ಸಿಗುತ್ತದೆಯಲ್ಲವೆ. ಭಲೆ ಅದು ಕಲ್ಲಿನ ಮೂರ್ತಿಯಾಗಿರಬಹುದು ಆದರೆ ತಂದೆಯು ಆ ಸಮಯದಲ್ಲಿ
ಅಲ್ಪಕಾಲಕ್ಕಾಗಿ ಮನೋಕಾಮನೆಗಳನ್ನು ಪೂರ್ಣ ಮಾಡುತ್ತಾರೆ. ಆ ಸಮಯದಲ್ಲಿ ರಜೋಪ್ರಧಾನ ನೆನಪಾಗಿತ್ತು
ಆದ್ದರಿಂದ ಅದರಿಂದಲೂ ಬಲ ಸಿಗುತ್ತಿತ್ತು, ಸುಸ್ತಾಗುತ್ತಿರಲಿಲ್ಲ. ಈಗಂತೂ ದೊಡ್ಡವ್ಯಕ್ತಿಗಳು
ಬಹಳಬೇಗ ಸುಸ್ತಾಗಿಬಿಡುತ್ತಾರೆ. ಬಡವರು ಬಹಳ ತೀರ್ಥಯಾತ್ರೆಗಳಿಗೆ ಹೋಗುತ್ತಾರೆ, ಸಾಹುಕಾರರಂತೂ
ಆಡಂಬರದಿಂದ ಕುದುರೆ ಇತ್ಯಾದಿಗಳ ಮೇಲೆ ಹೋಗುತ್ತಾರೆ. ಬಡವರಂತೂ ನಡೆದುಕೊಂಡೇ ಹೋಗುತ್ತಾರೆ
ಆದ್ದರಿಂದ ಭಾವನೆಯ ಫಲವು ಬಡವರಿಗೆಷ್ಟು ಸಿಗುತ್ತದೆಯೋ ಅಷ್ಟು ಸಾಹುಕಾರರಿಗೂ ಸಿಗುವುದಿಲ್ಲ. ಈ
ಸಮಯದಲ್ಲಿಯೂ ನೀವು ತಿಳಿದುಕೊಂಡಿದ್ದೀರಿ - ತಂದೆಯು ಬಡವರ ಬಂಧುವಾಗಿದ್ದಾರೆ ಅಂದಮೇಲೆ ಮತ್ತೇಕೆ
ತಬ್ಬಿಬ್ಬಾಗುತ್ತೀರಿ? ಏಕೆ ಮರೆತುಹೋಗುತ್ತೀರಿ? ತಂದೆಯು ತಿಳಿಸುತ್ತಾರೆ - ನೀವು ಯಾವುದೇ
ಕಷ್ಟಪಡಬೇಕಾಗಿಲ್ಲ, ಕೇವಲ ಒಬ್ಬ ಪ್ರಿಯತಮನನ್ನು ನೆನಪು ಮಾಡಿ, ನೀವೆಲ್ಲರೂ ಪ್ರಿಯತಮೆಯರಾಗಿದ್ದೀರಿ
ಅಂದಮೇಲೆ ಪ್ರಿಯತಮನನ್ನೂ ನೆನಪು ಮಾಡಬೇಕಾಗುತ್ತದೆ. ಆ ಪ್ರಿಯತಮನಿಗೆ ಭೋಗವನ್ನಿಡದೆ ತಿನ್ನಲು
ನಿಮಗೆ ನಾಚಿಕೆಯಾಗುವುದಿಲ್ಲವೆ? ಅವರು ಪ್ರಿಯತಮನೂ ಆಗಿದ್ದಾರೆ, ತಂದೆಯೂ ಆಗಿದ್ದಾರೆ. ನೀವು ನನಗೆ
ತಿನ್ನಿಸುವುದಿಲ್ಲವೆ? ನೀವಂತೂ ನನಗೆ ತಿನ್ನಿಸಬೇಕಲ್ಲವೆ! ಎಂದು ತಂದೆಯು ಕೇಳುತ್ತಾರೆ. ನೋಡಿ,
ತಂದೆಯು ಯುಕ್ತಿಗಳನ್ನು ತಿಳಿಸುತ್ತಾರೆ. ನೀವು ತಂದೆ ಅಥವಾ ಪ್ರಿಯತಮನನ್ನು ಒಪ್ಪುತ್ತೀರಲ್ಲವೆ!
ಏನೇ ಆಗಿರಲಿ ಮೊದಲು ಅವರಿಗೆ ತಿನ್ನಿಸಬೇಕು. ತಂದೆಯು ತಿಳಿಸುತ್ತಾರೆ - ನನಗೆ ಭೋಗವನ್ನಿಟ್ಟು
ನನ್ನ ನೆನಪಿನಲ್ಲಿ ಸ್ವೀಕಾರ ಮಾಡಿ ಆದರೆ ಇದರಲ್ಲಿ ಬಹಳ ಪರಿಶ್ರಮವಿದೆ. ತಂದೆಯು ಮತ್ತೆ-ಮತ್ತೆ
ತಿಳಿಸುತ್ತಾರೆ - ತಂದೆಯನ್ನು ಅವಶ್ಯವಾಗಿ ನೆನಪು ಮಾಡಬೇಕಾಗಿದೆ. ಈ ಬ್ರಹ್ಮಾತಂದೆಯೂ ಸಹ
ಮತ್ತೆ-ಮತ್ತೆ ಪುರುಷಾರ್ಥ ಮಾಡುತ್ತಿರುತ್ತಾರೆ. ನೀವು ಕುಮಾರಿಯರಿಗಂತೂ ಬಹಳ ಸಹಜವಾಗಿದೆ ಏಕೆಂದರೆ
ನೀವಿನ್ನೂ ಏಣಿಯಲ್ಲಿ ಏರಿಲ್ಲ. ಕನ್ಯೆಗಂತೂ ಪ್ರಿಯತಮನ ಜೊತೆ ನಿಶ್ಚಿತಾರ್ಥವಾಗಿಯೇ ಆಗುತ್ತದೆ.
ಅಂದಾಗ ಇಂತಹ ಪ್ರಿಯತಮನನ್ನು ನೆನಪು ಮಾಡಿ ಭೋಜನವನ್ನು ಸ್ವೀಕಾರ ಮಾಡಬೇಕು. ಅವರನ್ನು ನಾವು ನೆನಪು
ಮಾಡುತ್ತೇವೆ ಮತ್ತು ಅವರು ನನ್ನ ಬಳಿ ಬಂದುಬಿಡುತ್ತಾರೆ. ನೆನಪು ಮಾಡಿದರೆ ಅವರು ವಾಸನೆಯನ್ನು
ತೆಗೆದುಕೊಳ್ಳುತ್ತಾರೆ ಅಂದಾಗ ತಂದೆಯ ಜೊತೆ ಹೀಗೀಗೆ ಮಾತನಾಡಬೇಕು. ಅಮೃತವೇಳೆ ಏಳುವುದರಿಂದ ನಿಮಗೆ
ಈ ಅಭ್ಯಾಸವಾಗುವುದು. ಅಭ್ಯಾಸವಾಗಿಬಿಟ್ಟರೆ ಮತ್ತೆ ದಿನದಲ್ಲಿಯೂ ನೆನಪಿರುವುದು, ಭೋಜನದ
ಸಮಯದಲ್ಲಿಯೂ ನೆನಪು ಮಾಡಬೇಕು. ಆ ಪ್ರಿಯತಮನ ಜೊತೆ ನಿಮ್ಮ ನಿಶ್ಚಿತಾರ್ಥವಾಗಿದೆ. ನಿಮ್ಮೊಂದಿಗೆ
ತಿನ್ನುವೆನೆಂದು ಪಕ್ಕಾ ಪ್ರತಿಜ್ಞೆ ಮಾಡಬೇಕಾಗಿದೆ. ನೀವು ನೆನಪು ಮಾಡಿದಾಗಲೇ ಅವರು
ತಿನ್ನುತ್ತಾರಲ್ಲವೆ. ಅವರಿಗಂತೂ ಭೋಜನದ ಪರಿಮಳವು ಸಿಗಲೇಬೇಕಾಗಿದೆ ಏಕೆಂದರೆ ಅವರಿಗೆ ತಮ್ಮ
ಶರೀರವಂತೂ ಇಲ್ಲ. ಇದು ಕುಮಾರಿಯರಿಗೆ ಬಹಳ ಸಹಜವಾಗಿದೆ. ಅವರಿಗೆ ಹೆಚ್ಚಿನದಾಗಿ ಎಲ್ಲಾ ಸೌಕರ್ಯವಿದೆ.
ಶಿವತಂದೆಯು ನನ್ನ ಅತೀ ಮಧುರ ಪ್ರಿಯತಮನಾಗಿದ್ದಾರೆ, ಅರ್ಧಕಲ್ಪ ತಮ್ಮನ್ನು ನೆನಪು ಮಾಡಿದ್ದೆವು,
ಈಗ ತಾವು ಬಂದು ಮಿಲನ ಮಾಡಿದ್ದೀರಿ. ನಾವೇನು ತಿನ್ನುತ್ತೇವೆಯೋ ಅದನ್ನು ತಾವೂ ತಿನ್ನಿ. ಕೇವಲ ಒಂದು
ಬಾರಿ ನೆನಪು ಮಾಡಿ ಮತ್ತೆ ತಾನೇ ತಿನ್ನುತ್ತಾ ಹೋಗುವುದಲ್ಲ. ಅವರಿಗೆ ತಿನ್ನಿಸುವುದನ್ನು
ಮರೆತುಬಿಡುವುದಲ್ಲ. ಅವರನ್ನು ಮರೆಯುವುದರಿಂದ ಅವರು ಬರುವುದೂ ಇಲ್ಲ. ಬಹಳಷ್ಟು ಪದಾರ್ಥಗಳನ್ನು
ಸೇವಿಸುತ್ತೀರಿ (ಸಿಹಿತಿಂಡಿಗಳು, ಹಣ್ಣು, ಕಿಚಡಿ ಎಲ್ಲವನ್ನೂ ತಿನ್ನುತ್ತೀರಿ) ಹೀಗೆ ತಿನ್ನುವಾಗ
ಕೇವಲ ಪ್ರಾರಂಭದಲ್ಲಿ ನೆನಪುಮಾಡಿ ನಂತರ ಅನ್ಯಪದಾರ್ಥಗಳನ್ನು ಹೇಗೆ ತಿನ್ನುವಿರಿ. ಪ್ರಿಯತಮನು
ತಿನ್ನದೇ ಹೋದರೆ ನಡುವೆ ಮಾಯೆಯು ತಿಂದುಬಿಡುತ್ತದೆ, ಅವರನ್ನು ತಿನ್ನಲು ಬಿಡುವುದಿಲ್ಲ. ನಾವು
ನೋಡುತ್ತೇವೆ, ಮಾಯೆಯು ತಿನ್ನುತ್ತದೆಯೆಂದರೆ ಅದು ಬಲಶಾಲಿಯಾಗಿಬಿಡುತ್ತದೆ ಮತ್ತು ನಿಮ್ಮನ್ನು
ಸೋಲಿಸುತ್ತಾ ಇರುತ್ತದೆ. ತಂದೆಯು ಎಲ್ಲಾ ಯುಕ್ತಿಗಳನ್ನು ತಿಳಿಸುತ್ತಾರೆ. ತಂದೆಯನ್ನು ನೆನಪು
ಮಾಡಿದರೆ ತಂದೆ ಅಥವಾ ಪ್ರಿಯತಮನು ಬಹಳ ಖುಷಿಯಾಗುವರು. ಬಾಬಾ, ನಿಮ್ಮೊಂದಿಗೇ ಕುಳಿತುಕೊಳ್ಳುವೆ,
ನಿಮ್ಮೊಂದಿಗೇ ತಿನ್ನುವೆ ಎಂದು ಹೇಳುತ್ತೀರಿ. ನಾವು (ಬ್ರಹ್ಮಾ) ತಮ್ಮನ್ನು ನೆನಪು ಮಾಡಿ
ತಿನ್ನುತ್ತೇವೆ, ತಾವಂತೂ ಕೇವಲ ವಾಸನೆಯನ್ನೇ ತೆಗೆದುಕೊಳ್ಳುತ್ತೀರೆಂದು ಜ್ಞಾನದಿಂದ
ತಿಳಿದುಕೊಂಡಿದ್ದೇವೆ. ಇದಂತೂ ಬಾಡಿಗೆಯ ಶರೀರವಾಗಿದೆ. ನೆನಪು ಮಾಡುವುದರಿಂದ ಅವರು
ಬಂದುಬಿಡುತ್ತಾರೆ. ಎಲ್ಲವೂ ನಿಮ್ಮ ನೆನಪಿನ ಮೇಲೆ ಆಧಾರಿತವಾಗಿದೆ. ಇದಕ್ಕೆ ಯೋಗವೆಂದು
ಹೇಳಲಾಗುತ್ತದೆ. ಯೋಗದಲ್ಲಿ ಪರಿಶ್ರಮವಿದೆ. ಸಾಧುಸನ್ಯಾಸಿಗಳು, ಈ ರೀತಿ ಎಂದೂ ಹೇಳುವುದಿಲ್ಲ. ನೀವು
ಒಂದುವೇಳೆ ಪುರುಷಾರ್ಥ ಮಾಡಬೇಕೆಂದರೆ ತಂದೆಯ ಶ್ರೀಮತವನ್ನು ಬರೆದಿಟ್ಟುಕೊಳ್ಳಿ, ಸಂಪೂರ್ಣ
ಪುರುಷಾರ್ಥ ಮಾಡಿ. ಬ್ರಹ್ಮಾತಂದೆಯು ತನ್ನ ಅನುಭವವನ್ನು ತಿಳಿಸುತ್ತಾರೆ - ಬಾಬಾ, ನಾನು ಹೇಗೆ
ಕರ್ಮ ಮಾಡುವೆನೋ ಹಾಗೆಯೇ ನೀವೂ ಮಾಡಿ. ಅದೇ ಕರ್ಮವನ್ನು ನಾನು ನಿಮಗೆ ಕಲಿಸುತ್ತೇನೆಂದು
ಹೇಳುತ್ತೇನೆ. ತಂದೆಯಂತೂ ಕರ್ಮ ಮಾಡುವುದಿಲ್ಲ, ಸತ್ಯಯುಗದಲ್ಲಿ ಕರ್ಮಗಳು ಕುಟುಕುವುದಿಲ್ಲ. ತಂದೆಯು
ಬಹಳ ಸಹಜ ಮಾತುಗಳನ್ನು ತಿಳಿಸುತ್ತಾರೆ. ನಿಮ್ಮೊಂದಿಗೇ ಕುಳಿತುಕೊಳ್ಳುವೆನು, ನಿಮ್ಮೊಂದಿಗೇ
ತಿನ್ನುವೆನು, ನಿಮ್ಮಿಂದಲೇ ಕೇಳುವೆನು....... ಇದು ನಿಮ್ಮದೇ ಗಾಯನವಾಗಿದೆ. ಪ್ರಿಯತಮನ ರೂಪದಲ್ಲಿ
ಅಥವಾ ತಂದೆಯ ರೂಪದಲ್ಲಿ ನೆನಪು ಮಾಡಿ. ವಿಚಾರಸಾಗರ ಮಂಥನ ಮಾಡಿ ಜ್ಞಾನದ ವಿಚಾರಗಳನ್ನು
ತೆಗೆಯುತ್ತಾರೆಂದು ಗಾಯನವಿದೆಯಲ್ಲವೆ. ಈ ಅಭ್ಯಾಸದಿಂದ ವಿಕರ್ಮ ವಿನಾಶವೂ ಆಗುತ್ತದೆ, ಆರೋಗ್ಯವಂತರೂ
ಆಗುತ್ತೀರಿ. ಯಾರು ಪುರುಷಾರ್ಥ ಮಾಡುವರೋ ಅವರಿಗೆ ಲಾಭವಾಗುವುದು. ಮಾಡದೇ ಇರುವವರಿಗೆ
ನಷ್ಟವಾಗುವುದು. ಇಡೀ ಪ್ರಪಂಚವಂತೂ ಸ್ವರ್ಗದ ಮಾಲೀಕನಾಗುವುದಿಲ್ಲ, ಇದೂ ಸಹ ಲೆಕ್ಕಾಚಾರವಿದೆ.
ತಂದೆಯು ಬಹಳ ಚೆನ್ನಾಗಿ
ತಿಳಿಸುತ್ತಾರೆ - ಗೀತೆಯನ್ನಂತೂ ಕೇಳಿದಿರಿ, ಅವಶ್ಯವಾಗಿ ನಾವೀಗ ಯಾತ್ರೆಯಲ್ಲಿದ್ದೇವೆ.
ಯಾತ್ರೆಯಲ್ಲಿ ಭೋಜನ ಇತ್ಯಾದಿಯನ್ನು ತಿನ್ನಲೇಬೇಕಾಗುತ್ತದೆ. ಪ್ರಿಯತಮೆಯು ಪ್ರಿಯತಮನ ಜೊತೆ,
ಮಕ್ಕಳು ತಂದೆಯ ಜೊತೆ ತಿನ್ನುತ್ತಾರೆ, ಇಲ್ಲಿಯೂ ಹಾಗೆಯೇ. ಪ್ರಿಯತಮನ ಜೊತೆ ನಿಮಗೆ ಎಷ್ಟು
ಪ್ರೀತಿಯಿರುವುದೋ ಅಷ್ಟು ಖುಷಿಯ ನಶೆಯೇರುವುದು. ನಿಶ್ಚಯಬುದ್ಧಿ ವಿಜಯಿಗಳಾಗುತ್ತಾ ಹೋಗುತ್ತೀರಿ.
ಯೋಗವೆಂದರೆ ಓಟವಾಗಿದೆ. ಇದು ಬುದ್ಧಿಯೋಗದ ಓಟವಾಗಿದೆ. ನಾವು ವಿದ್ಯಾರ್ಥಿಗಳಾಗಿದ್ದೇವೆ, ಶಿಕ್ಷಕರು
ನಮಗೆ ಓದುವುದನ್ನು ಕಲಿಸುತ್ತಾರೆ. ತಂದೆಯು ಹೇಳುತ್ತಾರೆ - ಮಕ್ಕಳೇ, ದಿನದಲ್ಲಿ ಕೇವಲ ಕರ್ಮವನ್ನೇ
ಮಾಡಬೇಕೆಂದು ತಿಳಿಯಬೇಡಿ, ಆಮೆಯ ತರಹ ಕರ್ಮಮಾಡಿ ಮುಗಿದತಕ್ಷಣ ಮತ್ತೆ ನೆನಪಿನಲ್ಲಿ ಕುಳಿತುಕೊಳ್ಳಿ.
ಭ್ರಮರಿಯು ಇಡೀ ದಿನ ಜ್ಞಾನದ ಧ್ವನಿ ಮಾಡುತ್ತದೆ, ಮತ್ತೆ ಅದರಲ್ಲಿ ಕೆಲವು ಹಾರಿಹೋಗುತ್ತವೆ, ಕೆಲವು
ಸತ್ತುಹೋಗುತ್ತದೆ. ಅದು ಕೇವಲ ಒಂದು ಉದಾಹರಣೆಯಾಗಿದೆ ಆದರೆ ಇಲ್ಲಿ ನೀವು ಜ್ಞಾನದ ಧ್ವನಿ ಮಾಡಿ
ತಮ್ಮ ಸಮಾನ ಮಾಡಿಕೊಳ್ಳುತ್ತೀರಿ. ಅದರಲ್ಲಿ ಕೆಲವರಿಗಂತೂ ಬಹಳ ಪ್ರೀತಿಯಿರುತ್ತದೆ, ಕೆಲವು
ವಸ್ತ್ರಗಳು ಹರಿದುಹೋಗುತ್ತವೆ. ಕೆಲವರು ಅರ್ಧಂಬರ್ಧ ಉಳಿಯುತ್ತಾರೆ (ವಸ್ತ್ರಗಳ ರೀತಿ). ಇನ್ನೂ
ಕೆಲವರು ಜ್ಞಾನವನ್ನು ಬಿಟ್ಟು ಹೊರಟುಹೋಗಿ ಮತ್ತೆ ಕೀಟವಾಗುತ್ತಾರೆ. ಈ ಜ್ಞಾನದ ಧ್ವನಿ ಮಾಡುವುದು
ಬಹಳ ಸಹಜವಾಗಿದೆ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರು ಸದ್ಗುರು....... ಈಗ ನಾವು
ತಂದೆಯೊಂದಿಗೆ ಯೋಗವನ್ನಿಡುತ್ತಿದ್ದೇವೆ. ದೇವತೆಗಳಾಗುವ ಪುರುಷಾರ್ಥ ಮಾಡುತ್ತಿದ್ದೇವೆ, ಇದೇ
ಜ್ಞಾನವು ಗೀತೆಯಲ್ಲಿತ್ತು. ಆ ತಂದೆಯು ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿ ಹೋಗಿದ್ದರು.
ಸತ್ಯಯುಗದಲ್ಲಿ ಎಲ್ಲರೂ ದೇವತೆಗಳೇ ಇದ್ದರು, ಅವಶ್ಯವಾಗಿ ಸಂಗಮಯುಗದಲ್ಲಿಯೇ ತಂದೆಯು ಬಂದು ಅವರನ್ನು
ದೇವತೆಗಳನ್ನಾಗಿ ಮಾಡಿರುವರು. ಇಲ್ಲಂತೂ ದೇವತೆಗಳಾಗುವ ಯೋಗವನ್ನು ಸತ್ಯಯುಗದ ಆದಿಯಲ್ಲಿ
ದೇವಿ-ದೇವತಾಧರ್ಮವಿತ್ತು ಮತ್ತು ಕಲಿಯುಗದ ಅಂತ್ಯದಲ್ಲಿ ಆಸುರೀ ಧರ್ಮವಿದೆ. ಈ ಮಾತುಗಳು ಕೇವಲ
ಗೀತೆಯಲ್ಲಿಯೇ ಬರೆಯಲ್ಪಟ್ಟಿದೆ. ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವುದರಲ್ಲಿ ತಡವಾಗುವುದಿಲ್ಲ
ಏಕೆಂದರೆ ಗುರಿ-ಧ್ಯೇಯವನ್ನು ತಿಳಿಸಿಬಿಡುತ್ತಾರೆ. ಅಲ್ಲಿ ಇಡೀ ಪ್ರಪಂಚದಲ್ಲಿ ಒಂದು ಧರ್ಮವಿರುವುದು.
ಪ್ರಪಂಚವೆಲ್ಲವೂ ಇರುತ್ತದೆಯಲ್ಲವೆ! ಚೀನಾ, ಯುರೋಪ್ ಇರುವುದಿಲ್ಲ ಎಂದಲ್ಲ. ಇರುತ್ತದೆ ಆದರೆ
ಮನುಷ್ಯರಿರುವುದಿಲ್ಲ. ಕೇವಲ ದೇವತಾ ಧರ್ಮದವರಿರುತ್ತಾರೆ, ಅನ್ಯ ಧರ್ಮದವರು ಯಾರೂ ಇರುವುದಿಲ್ಲ.
ಈಗ ಕಲಿಯುಗವಾಗಿದೆ. ನಾವು ಭಗವಂತನ ಮೂಲಕ ಮನುಷ್ಯರಿಂದ ದೇವತೆಗಳಾಗುತ್ತಿದ್ದೇವೆ. ತಂದೆಯು
ತಿಳಿಸುತ್ತಾರೆ - ನೀವು 21 ಜನ್ಮಗಳು ಸದಾ ಸುಖಿಯಾಗುತ್ತೀರಿ, ಇದರಲ್ಲಿ ಕಷ್ಟದ ಯಾವುದೇ ಮಾತಿಲ್ಲ.
ಭಕ್ತಿಮಾರ್ಗದಲ್ಲಿ ಭಗವಂತನ ಬಳಿ ಹೋಗುವುದಕ್ಕಾಗಿ ಎಷ್ಟು ಪರಿಶ್ರಮಪಟ್ಟಿದ್ದೀರಿ. ಶರೀರಬಿಟ್ಟಾಗ
ನಿರ್ವಾಣಧಾಮಕ್ಕೆ ಹೋದರೆಂದು ಹೇಳುತ್ತಾರೆ, ಭಗವಂತನ ಬಳಿ ಹೋದರೆಂದು ಯಾರೂ ಹೇಳುವುದಿಲ್ಲ,
ಸ್ವರ್ಗಕ್ಕೆ ಹೋದರೆಂದು ಹೇಳುತ್ತಾರೆ. ಒಬ್ಬರು ಹೋಗುವುದರಿಂದ ಸ್ವರ್ಗವಾಗುವುದಿಲ್ಲ ಎಲ್ಲರೂ
ಹೋಗಬೇಕಾಗಿದೆ. ಭಗವಂತನು ಕಾಲರಕಾಲನಾಗಿದ್ದಾನೆ, ಸೊಳ್ಳೆಗಳೋಪಾದಿಯಲ್ಲಿ ಎಲ್ಲರನ್ನೂ ಹಿಂತಿರುಗಿ
ಕರೆದುಕೊಂಡು ಹೋಗುತ್ತಾರೆಂದು ಗೀತೆಯಲ್ಲಿ ಬರೆಯಲಾಗಿದೆ. ಬುದ್ಧಿಯೂ ಹೇಳುತ್ತದೆ - ಅವಶ್ಯವಾಗಿ
ಚಕ್ರವು ಪುನರಾವರ್ತನೆಯಾಗಬೇಕಾಗಿದೆ ಅಂದಾಗ ಮೊಟ್ಟಮೊದಲು ಅವಶ್ಯವಾಗಿ ಸತ್ಯಯುಗೀ ದೇವಿ-ದೇವತಾ
ಧರ್ಮವು ಪುನರಾವರ್ತನೆಯಾಗುವುದು ನಂತರ ಅನ್ಯಧರ್ಮಗಳು ಪುನರಾವರ್ತನೆಯಾಗುತ್ತದೆ. ತಂದೆಯು ಎಷ್ಟು
ಸಹಜವಾಗಿ ತಿಳಿಸುತ್ತಾರೆ - ಮನ್ಮನಾಭವ. 5000 ವರ್ಷಗಳ ಹಿಂದೆಯೂ ಸಹ ಮುದ್ದಾದ ಮಕ್ಕಳೇ ಎಂದು
ಗೀತೆಯಲ್ಲಿ ಭಗವಂತನು ಹೇಳಿದ್ದರು. ಒಂದುವೇಳೆ ಕೃಷ್ಣನು ಹೇಳಿದ್ದರೆ ಅನ್ಯಧರ್ಮದವರ್ಯಾರೂ ಹೇಳಲು
ಸಾಧ್ಯವಿಲ್ಲ. ಭಗವಂತನೇ ಹೇಳುವುದರಿಂದ ಭಗವಂತನು ಸ್ವರ್ಗಸ್ಥಾಪನೆ ಮಾಡುತ್ತಾರೆ, ಅದರಲ್ಲಿ ನಾವು
ಹೋಗಿ ಚಕ್ರವರ್ತಿ ರಾಜರಾಗುತ್ತೇವೆಂದು ಎಲ್ಲರಿಗೂ ನಾಟುತ್ತದೆ. ಇದರಲ್ಲಿ ಯಾವುದೇ ಖರ್ಚಿನ
ಮಾತಿಲ್ಲ, ಕೇವಲ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಳ್ಳಬೇಕಾಗಿದೆ.
ನೀವು ಮಕ್ಕಳು
ವಿಚಾರಸಾಗರ ಮಥನ ಮಾಡಬೇಕಾಗಿದೆ. ಕರ್ಮ ಮಾಡುತ್ತಾ ದಿನ-ರಾತ್ರಿ ಈ ಪುರುಷಾರ್ಥ ಮಾಡುತ್ತಾ ಇರಿ.
ವಿಚಾರಸಾಗರ ಮಂಥನ ಮಾಡುವುದಿಲ್ಲ ಅಥವಾ ತಂದೆಯನ್ನು ನೆನಪು ಮಾಡದೇ ಕೇವಲ ಕರ್ಮ ಮಾಡುತ್ತಾ
ಇರುತ್ತೀರೆಂದರೆ ರಾತ್ರಿಯಲ್ಲಿಯೂ ಅದೇ ವಿಚಾರಗಳು ನಡೆಯುತ್ತಿರುತ್ತವೆ. ಮನೆ ಕಟ್ಟಿಸುವವರಿಗೆ
ಮನೆಯದೇ ವಿಚಾರ ನಡೆಯುತ್ತಿರುತ್ತದೆ. ಭಲೆ ವಿಚಾರ ಸಾಗರ ಮಥನ ಮಾಡುವ ಜವಾಬ್ದಾರಿಯು ಇವರ (ಬ್ರಹ್ಮಾ)
ಮೇಲಿದೆ ಆದರೆ ಕಳಸವನ್ನು ಲಕ್ಷ್ಮಿಗೆ ಕೊಟ್ಟರೆಂದು ಹೇಳುತ್ತಾರೆ ಅಂದಮೇಲೆ ನೀವು
ಲಕ್ಷ್ಮಿಯಾಗುತ್ತೀರಲ್ಲವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಶ್ರೀಮತವನ್ನು
ಬರೆದುಕೊಂಡು ಪುರುಷಾರ್ಥ ಮಾಡಬೇಕಾಗಿದೆ. ತಂದೆಯು ಯಾವ ಕರ್ಮವನ್ನು ಕಲಿಸಿದ್ದಾರೆಯೋ ಅದೇ ಮಾಡಬೇಕು.
ವಿಚಾರಸಾಗರ ಮಂಥನ ಮಾಡಿ ಜ್ಞಾನದ ಅಂಶಗಳನ್ನು ತೆಗೆಯಬೇಕಾಗಿದೆ.
2. ನಾವು ತಂದೆಯ
ನೆನಪಿನಲ್ಲಿಯೇ ಭೋಜನವನ್ನು ಸ್ವೀಕರಿಸುತ್ತೇವೆಂದು ತಮ್ಮೊಂದಿಗೆ ತಾವೇ ಪ್ರತಿಜ್ಞೆ
ಮಾಡಿಕೊಳ್ಳಬೇಕಾಗಿದೆ. ನಿಮ್ಮೊಂದಿಗೇ ಕುಳಿತುಕೊಳ್ಳುವೆನು, ನಿಮ್ಮೊಂದಿಗೇ ತಿನ್ನುವೆನು....... ಈ
ಪ್ರತಿಜ್ಞೆಯನ್ನು ಪಕ್ಕಾ ನಿಭಾಯಿಸಬೇಕಾಗಿದೆ.
ವರದಾನ:
ಕರ್ಮ ಮತ್ತು
ಸಂಬಂಧ ಎರಡರಲ್ಲಿಯೂ ಸ್ವಾರ್ಥ ಭಾವದಿಂದ ಮುಕ್ತರಾಗಿರುವಂತಹ ತಂದೆ ಸಮಾನ ಕರ್ಮಾತೀತ ಭವ.
ನೀವು ಮಕ್ಕಳ ಸೇವೆಯಾಗಿದೆ
ಎಲ್ಲರನ್ನೂ ಮುಕ್ತರನ್ನಾಗಿ ಮಾಡುವುದು. ಅದರಲ್ಲಿ ಬೇರೆಯವರನ್ನು ಮುಕ್ತರನ್ನಾಗಿ ಮಾಡುತ್ತಾ ಸ್ವಯಂ
ಅನ್ನು ಬಂಧನದಲ್ಲಿ ಬಂದಿಸಲ್ಪಡಬೇಡಿ. ಯಾವಾಗ ಹದ್ಧಿನ ನನ್ನದು-ನನ್ನದು ಎನ್ನುವುದರಿಂದ
ಮುಕ್ತರಾಗುವಿರಿ ಆಗ ಅವ್ಯಕ್ತ ಸ್ಥಿತಿಯ ಅನುಭವ ಮಾಡಲು ಸಾಧ್ಯ. ಯಾವ ಮಕ್ಕಳು ಲೌಕಿಕ ಮತ್ತು
ಅಲೌಕಿಕ, ಕರ್ಮ ಮತ್ತು ಸಂಬಂಧ ಎರಡರಲ್ಲಿಯೂ ಸ್ವಾರ್ಥ ಭಾವದಿಂದ ಮುಕ್ತರಾಗಿರುತ್ತಾರೆ ಅವರೇ ತಂದೆ
ಸಮಾನ ಕರ್ಮಾತೀತ ಸ್ಥಿತಿಯ ಅನುಭವ ಮಾಡಲು ಸಾಧ್ಯ. ಆದ್ದರಿಂದ ಚೆಕ್ ಮಾಡಿಕೊಳ್ಳಿ ಎಲ್ಲಿಯವರೆಗೆ
ಕರ್ಮಗಳ ಬಂಧನದಿಂದ ಭಿನ್ನ ಆಗಿರುವೆ? ವ್ಯರ್ಥ ಸ್ವಭಾವ-ಸಂಸ್ಕಾರದ ವಶವಾಗುವುದರಿಂದ
ಮುಕ್ತನಾಗಿರುವೆನಾ? ಎಂದು.
ಸ್ಲೋಗನ್:
ಯಾರು ಸರಳಚಿತ್ತ
ಮತ್ತು ಸಹಜ ಸ್ವಭಾವುಳ್ಳವರಾಗಿದ್ದಾರೆ ಅವರೇ ಸಹಜಯೋಗಿ, ಭೋಲಾನಾಥನಿಗೆ ಪ್ರೀಯರಾಗಿದ್ದಾರೆ.