18.01.25 Avyakt Bapdada
Kannada
Murli Om Shanti Madhuban
ಪಿತಾಶ್ರೀ ಜೀಯವರ ಪುಣ್ಯ
ಸ್ಮೃತಿ ದಿನದ ಮೇಲೆ ಪ್ರಾತಃಕ್ಲಾಸ್ನಲ್ಲಿ ನುಡಿಸುವುದಕ್ಕಾಗಿ ಬಾಪ್ದಾದಾರವರ ಮಧುರ ಅಮೂಲ್ಯ
ಮಹಾವಾಕ್ಯ
ಓಂ ಶಾಂತಿ. ಆತ್ಮಿಕ ತಂದೆ
ಈಗ ನೀವು ಮಕ್ಕಳಿಂದ ಆತ್ಮಿಕ ವಾರ್ತಾಲಪ ಮಾಡುತ್ತಿದ್ದಾರೆ, ಶಿಕ್ಷಣ ಕೊಡುತ್ತಿದ್ದಾರೆ. ಟೀಚರ್ನ
ಕರ್ತವ್ಯವಾಗಿದೆ ಶಿಕ್ಷಣ ಕೊಡುವುದು ಮತ್ತು ಗುರುವಿನ ಕರ್ತವ್ಯವಾಗಿದೆ ಗುರಿಯನ್ನು ತಿಳಿಸುವುದು.
ಗುರಿಯಾಗಿದೆ ಮುಕ್ತಿ ಜೀವನ್ಮುಕ್ತಿ. ಮುಕ್ತಿಗಾಗಿ ನೆನಪಿನ ಯಾತ್ರೆ ಬಹಳ ಅವಶ್ಯವಾಗಿದೆ ಮತ್ತು
ಜೀವನ್ಮುಕ್ತಿಗಾಗಿ ರಚನೆಯ ಆದಿ ಮಧ್ಯ ಅಂತ್ಯವನ್ನು ತಿಳಿದುಕೊಳ್ಳುವುದು ಅವಶ್ಯವಾಗಿದೆ. ಈಗ 84ರ
ಚಕ್ರ ಪೂರ್ಣವಾಗುತ್ತದೆ, ಈಗ ವಾಪಸ ಮನೆಗೆ ಹೋಗಬೇಕಾಗಿದೆ. ತಮ್ಮ ಜೊತೆ ಇಂತಹ ಇಂತಹ
ಮಾತುಗಳನ್ನಾಡುವುದರಿಂದ ದೊಡ್ಡ ಖುಷಿಯು ಬರುತ್ತದೆ ಮತ್ತು ಅನ್ಯರಿಗೂ ಖುಷಿಯಲ್ಲಿ ತೆಗೆದುಕೊಂಡು
ಬರುವಿರಿ. ಅನ್ಯರಿಗೂ ದಾರಿ ತೋರಿಸುವಂತಹ ದಯೆ ತೋರಿಸಬೇಕಾಗಿದೆ. ತಮೋಪ್ರಧಾನದಿಂದ
ಸತೋಪ್ರಧಾನರಾಗುವ ದಾರಿ. ಬಾಬಾರವರು ನೀವು ಮಕ್ಕಳಿಗೆ ಪುಣ್ಯ ಮತ್ತು ಪಾಪದ ಗುಹ್ಯ ಗತಿಯನ್ನು
ತಿಳಿಸಿದ್ದಾರೆ. ಪುಣ್ಯ ಏನಾಗಿದೆ ಮತ್ತು ಪಾಪ ಏನಾಗಿದೆ! ಎಲ್ಲದಕ್ಕಿಂತ ದೊಡ್ಡ ಪುಣ್ಯವಾಗಿದೆ –ತಂದೆಯನ್ನು
ನೆನಪು ಮಾಡುವುದು ಮತ್ತು ಅನ್ಯರಿಗೂ ನೆನಪು ತರಿಸುವುದು. ಸೆಂಟರ್ ತೆರೆಯುವುದು, ತನು-ಮನ-ಧನ
ಅನ್ಯರ ಸೇವೆಯಲ್ಲಿ ತೊಡಗಿಸಿ, ಇದು ಪುಣ್ಯವಾಗಿದೆ. ಸಂಗದೋಷದಲ್ಲಿ ಬಂದು ವ್ಯರ್ಥ ಚಿಂತನೆ,
ಪರಚಿಂತನೆಯಲ್ಲಿ ತಮ್ಮ ಸಮಯ ವ್ಯರ್ಥ ಮಾಡುವುದು ಸಹ ಪಾಪವಾಗಿದೆ. ಒಂದುವೇಳೆ ಯಾವುದೇ ಪುಣ್ಯ
ಮಾಡುತ್ತ್ತಾ-ಮಾಡುತ್ತ್ತಾ ಪಾಪವನ್ನು ಮಾಡಿದರೆ ಸಂಪಾದನೆ ಎಲ್ಲವೂ ಸಮಾಪ್ತಿಯಾಗುವುದು. ಏನೆಲ್ಲಾ
ಪುಣ್ಯ ಮಾಡಿದಾರೆ ಅದೆಲ್ಲವೂ ಸಮಾಪ್ತಿಯಾಗಿ ಬಿಡುತ್ತದೆ, ಜಮಾವಾಗುವುದರ ಬದಲಾಗಿ ಬಿಡುತ್ತದೆ. ಪಾಪ
ಕರ್ಮದ ಶಿಕ್ಷೆಯು ಜ್ಞಾನಿತ್ವ ಆತ್ಮ ಮಕ್ಕಳಿಗೆ 100 ಪಟ್ಟಾಗಿದೆ ಏಕೆಂದರೆ ಸದ್ಗುರುವಿನ ನಿಂದಕರಾಗಿ
ಬಿಡುತ್ತಾರೆ ಇದಕ್ಕಾಗಿ ತಂದೆ ಶಿಕ್ಷಣ ಕೊಡುತ್ತಾರೆ- ಮಧುರ ಮಕ್ಕಳೇ, ಎಂದೂ ಪಾಪ ಕರ್ಮ ಮಾಡಬಾರದು.
ವಿಕಾರಗಳ ಪೆಟ್ಟು ತಿನ್ನುವುದರಿಂದ ರಕ್ಷಿಸಿಕೊಳ್ಳಿರಿ.
ತಂದೆಗೆ ಮಕ್ಕಳ ಮೇಲೆ
ಪ್ರೀತಿಯಿದೆ ಅದಕ್ಕೆ ದಯೆ ಬರುತ್ತದೆ. ತಂದೆ ಅನುಭವ ತಿಳಿಸುತ್ತಾರೆ ಯಾವಾಗ ಏಕಾಂತದಲ್ಲಿ ಕುಳಿತಾಗ
ಮೊದಲು ಅನನ್ಯ ಮಕ್ಕಳು ನೆನಪು ಬರುತ್ತಾರೆ. ವಿದೇಶದಲ್ಲಿರಿ ಅಥವಾ ಎಲ್ಲೇ ಇರಿ. ಯಾವುದೇ ಒಳ್ಳೆಯ
ಸರ್ವೀಸ ಮಾಡುವಂತಹ ಮಕ್ಕಳು ಶರೀರ ಬಿಟ್ಟರೆಂದರೆ ಅವರ ಆತ್ಮರನ್ನೂ ನೆನಪು ಮಾಡಿ ಸರ್ಚಲೈಟ್
ಕೊಡುತ್ತಾರೆ. ಇದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ ಇಲ್ಲಿ ಎರಡು ದೀಪಗಳಿವೆ, ಎರಡು ದೀಪಗಳು
ಒಟ್ಟಿಗೆ ಇವೆ. ಇವರಿಬ್ಬರು ಶಕ್ತಿಶಾಲಿ ಲೈಟ್ ಆಗಿದ್ದಾರೆ. ಬೆಳಗ್ಗೆಯ ಸಮಯ ಒಳ್ಳೆಯದಾಗಿದೆ,
ಸ್ನಾನ ಮಾಡಿ ಏಕಾಂತದಲ್ಲಿ ಹೋಗಬೇಕಾಗಿದೆ. ಒಳಗಡೆ ಖುಷಿಯ ಬಹಳಷ್ಟು ಇರಬೇಕು.
ಬೇಹದ್ದಿನ ತಂದೆ ಕುಳಿತು
ಮಕ್ಕಳಿಗೆ ತಿಳಿಸುತ್ತಾರೆ – ಮಧುರ ಮಕ್ಕಳೇ, ತಮ್ಮನ್ನು ಆತ್ಮವೆಂದು ತಿಳಿದು ನಾನು ತಂದೆಯನ್ನು
ಮತ್ತು ತಮ್ಮ ಮನೆಯನ್ನು ನೆನಪು ಮಾಡಿ. ಮಕ್ಕಳೇ, ಈ ನೆನಪಿನ ಯಾತ್ರೆಯನ್ನು ಎಂದೂ ಮರೆಯಬೇಡಿ.
ನೆನಪಿನಿಂದಲೇ ನೀವು ಪಾವನರಾಗುವಿರಿ. ಪಾವನರಾಗದೇ ನೀವು ವಾಪಸ ಮನೆಗೆ ಹೋಗಲು ಸಾಧ್ಯವಿಲ್ಲ. ಜ್ಞಾನ
ಮತ್ತು ಯೋಗ ಮುಖ್ಯವಾಗಿವೆ. ತಂದೆಯ ಹತ್ತಿರ ಇದೇ ಬಹಳ ದೊಡ್ಡ ಖಜಾನೆಯಾಗಿದೆ, ಇದನ್ನೇ ಮಕ್ಕಳಿಗೆ
ಕೊಡುತ್ತಾರೆ, ಇದರಲ್ಲಿ ಯೋಗದ ಬಹಳ ದೊಡ್ಡ ವಿಷಯವಾಗಿದೆ. ಮಕ್ಕಳು ಒಳ್ಳೆಯ ರೀತಿ ನೆನಪು ಮಾಡಿದರೆ
ತಂದೆಯೂ ನೆನಪಿನಿಂದ ನೆನಪು ಸಿಗುವುದು. ನೆನಪಿನಿಂದ ಮಕ್ಕಳು ತಂದೆಯನ್ನು ಸೆಳೆಯುತ್ತಾರೆ. ಹಿಂದೆ
ಬರುವವರು ಶ್ರೇಷ್ಠ ಪದವಿಯನ್ನು ಪಡೆದುಕೊಳ್ಳುತ್ತಾರೆ, ಅದರ ಆಧಾರವು ನೆನಪಾಗಿದೆ. ಅವರು ಪ್ರಯತ್ನ
ಪಡುತ್ತಾರೆ. ಹೇಳಲಾಗುತ್ತದೆ - ಬಾಬಾ ದಯೆ ಮಾಡಿ, ಕೃಪೆ ಮಾಡಿ, ಇದರಲ್ಲಿ ಮುಖ್ಯವಾಗಿ ನೆನಪು
ಬೇಕಾಗಿದೆ. ನೆನಪಿನಿಂದಲೇ ಕರೆಂಟ್ (ಶಕ್ತಿ) ಸಿಗುತ್ತಿರುತ್ತದೆ, ಇದರಿಂದ ಆತ್ಮ
ಆರೋಗ್ಯಶಾಲಿಯಾಗುತ್ತದೆ, ಸಂಪನ್ನ ಆಗುತ್ತದೆ. ಯಾವುದೇ ಸಮಯ ತಂದೆಗೆ ಯಾವುದೇ ಮಗುವಿಗೆ ಕರೆಂಟ್
ಕೊಡಬೇಕೆಂದರೆ ನಿದ್ರೆ ಓಡಿ ಹೋಗುವುದು. ಇಂತಹ ಮಗುವಿಗೆ ಶಕ್ತಿ ಕೊಡಬೇಕು ಎನ್ನುವ ಚಿಂತೆಯಿರುತ್ತದೆ.
ನೀವು ತಿಳಿದುಕೊಂಡು ಶಕ್ತಿ ಸಿಗುವುದರಿಂದ ಆಯಸ್ಸು ಹೆಚ್ಚಾಗುತ್ತದೆ, ಸದಾ ಆರೋಗ್ಯವಂತರಾಗುತ್ತಾರೆ.
ಅನ್ಯರಿಗೆ ಶಕ್ತಿ ಕೊಡಬೇಕೆಂದರೆ ರಾತ್ರಿಯು ಸಹ ಎದ್ದೇಳಿ. ಮಕ್ಕಳಿಗೆ ತಿಳಿಸಿದ್ದಾರೆ-ಬೆಳಗ್ಗೆ
ಎದ್ದು ಎಷ್ಟು ತಂದೆಯನ್ನು ನೆನಪು ಮಾಡುವರೋ ಅಷ್ಟು ಆಕರ್ಷಿತವಾಗುವುದು. ತಂದೆಯೂ ಸರ್ಚ್ ಲೈಟ್
ಕೊಡುತ್ತಾರೆ. ಆತ್ಮವನ್ನು ನೆನಪು ಮಾಡುವುದು ಅರ್ಥಾತ್ ಸರ್ಚ್ಲೈಟ್ ಕೊಡುವುದು, ಇದನ್ನು ಕೃಪೆ ಎಂದು
ಹೇಳಿ, ಆಶೀರ್ವಾದ ಎಂದು ಹೇಳಿ.
ನೀವು ಮಕ್ಕಳು
ತಿಳಿದುಕೊಂಡಿದ್ದೀರಿ ಇದು ಅನಾದಿ ಮಾಡಿ ಮಾಡಲ್ಪಟಿರುವ ಡ್ರಾಮಾ ಆಗಿದೆ. ಇದು ಸೋಲು ಗೆಲುವಿನ
ಆಟವಾಗಿದೆ. ಏನಾಗುವುದೋ ಅದು ಸರಿಯಾಗಿದೆ. ರಚಯಿತನಿಗೆ ಡ್ರಾಮಾ ಅವಶ್ಯ ಇಷ್ಟವಾಗುತ್ತದೆಯಲ್ಲವೇ.
ಅಂದಾಗ ರಚಯಿತನ ಮಕ್ಕಳಿಗೂ ಇಷ್ಟವಾಗುತ್ತದೆ. ಈ ಡ್ರಾಮಾದಲ್ಲಿ ತಂದೆ ಒಂದೇ ಬಾರಿ ಮಕ್ಕಳ ಹತ್ತಿರ,
ಮಕ್ಕಳ ಸೇವೆಯನ್ನು ಮಾಡಲು ಹೃದಯದಿಂದ, ಪ್ರೇಮದಿಂದ ಮಾಡಲು ಬರುತ್ತಾರೆ. ತಂದೆಗಂತೂ ಎಲ್ಲಾ ಮಕ್ಕಳು
ಪ್ರಿಯರಾಗಿದ್ದಾರೆ. ನೀವು ತಿಳಿದುಕೊಂಡಿದ್ದೀರಾ ಸತ್ಯಯುಗದಲ್ಲಿಯೂ ಎಲ್ಲರು ಒಬ್ಬರಿನ್ನೂಬ್ಬರನ್ನು
ಬಹಳ ಪ್ರೀತಿ ಮಾಡುತ್ತಾರೆ. ಪ್ರಾಣಿಗಳಲ್ಲಿಯೂ ಪ್ರೀತಿಯಿರುತ್ತದೆ. ಪರಸ್ಪರ ಪ್ರೀತಿಯಿಲ್ಲದೇ
ಇರುವಂತಹ ಯಾವುದೇ ಪ್ರಾಣಿಗಳಿಲ್ಲ. ನೀವು ಮಕ್ಕಳು ಇಲ್ಲಿ ಬಹಳ ಪ್ರೀತಿ ಮಾಡುತ್ತಾರೆ. ಇಲ್ಲಿ
ಆಗುವಿರೆಂದರೆ ಆ ಸಂಸ್ಕಾರ ಅವಿನಾಶಿಯಾಗಿ ಬಿಡುವುದು. ತಂದೆಯು ಹೇಳುತ್ತಾರೆ ಕಲ್ಪದ ಮೊದಲಿನ ಹಾಗೆ
ಪುನಃ ಪ್ರಿಯರನ್ನಾಗಿ ಮಾಡಲು ಬಂದಿದ್ದೇನೆ. ಎಂದಾದರೂ ಯಾವುದೇ ಮಕ್ಕಳ ಕ್ರೋಧದ ಶಬ್ಧ ಕೇಳಿದಾಗ
ತಂದೆಯು ಶಿಕ್ಷಣ ಕೊಡುತ್ತಾರೆ ಮಕ್ಕಳೇ ಕ್ರೋಧ ಮಾಡುವುದು ಸರಿಯಿಲ್ಲ, ಇದರಿಂದ ನೀವು ಸಹ
ದುಃಖಿಯಾಗುವಿರಿ, ಅನ್ಯರಿಗೂ ದುಃಖಿಯನ್ನಾಗಿ ಮಾಡುತ್ತಾರೆ. ತಂದೆಯು ಸದಾಕಾಲದ ಸುಖ
ಕೊಡುವಂತಹವರಾಗಿದ್ದಾರೆ ಅಂದಾಗ ಮಕ್ಕಳು ಸಹ ತಂದೆಯ ಸಮಾನರಾಗಬೇಕಾಗಿದೆ. ಒಬ್ಬರಿನ್ನೊಬ್ಬರು ಎಂದೂ
ದುಃಖವನ್ನು ಕೊಡಬಾರದು. ಬಹಳ ಬಹಳ ಪ್ರಿಯರಾಗಬೇಕಾಗಿದೆ. ಪ್ರಿಯ ತಂದೆಯನ್ನು ಬಹಳ ಪ್ರೀತಿಯಿಂದ
ನೆನಪು ಮಾಡಿದರೆ ತಮ್ಮ ಕಲ್ಯಾಣ, ಅನ್ಯರ ಕಲ್ಯಾಣವೂ ಆಗಬೇಕು.
ಈಗ ವಿಶ್ವದ ಮಾಲೀಕ
ನಿಮ್ಮ ಹತ್ತಿರ ಅತಿಥಿಯಾಗಿ ಬಂದಿದ್ದಾರೆ. ನೀವು ಮಕ್ಕಳ ಸಹಯೋಗದಿಂದಲೇ ವಿಶ್ವದ
ಕಲ್ಯಾಣವಾಗಬೇಕಾಗಿದೆ. ಹೇಗೆ ನೀವು ಆತ್ಮಿಕ ಮಕ್ಕಳಿಗೆ ತಂದೆ ಅತೀ ಪ್ರಿಯವೆನಿಸುತ್ತಾರೆ, ಹಾಗೆಯೇ
ತಂದೆಗೂ ನೀವು ಆತ್ಮಿಕ ಮಕ್ಕಳು ಬಹಳ ಪ್ರಿಯವಾಗಿದ್ದೀರಿ ಏಕೆಂದರೆ ನೀವೇ ಶ್ರೀಮತದ ಮೇಲೆ ಇಡೀ
ವಿಶ್ವದ ಕಲ್ಯಾಣ ಮಾಡುವಂತಹರಾಗಿದ್ದೀರಿ. ಈಗ ನೀವು ಇಲ್ಲಿ ಈಶ್ವರೀಯ ಪರಿವಾರದಲ್ಲಿ ಕುಳಿತಿದ್ದೀರಿ.
ತಂದೆಯು ಸನ್ಮುಖದಲ್ಲಿ ಕುಳಿತಿದ್ದಾರೆ. ನಿಮ್ಮಿಂದಲೇ ತಿನ್ನುತ್ತೇವೆ, ನಿಮ್ಮ ಜೊತೆ
ಕುಳಿತುಕೊಳ್ಳುತ್ತೇವೆ..... ನೀವು ತಿಳಿದುಕೊಂಡಿದ್ದೀರಿ ಶಿವಬಾಬಾರವರು ಇವರಲ್ಲಿ ಬಂದು
ಹೇಳುತ್ತಾರೆ ಮಧುರ ಮಕ್ಕಳೇ, ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಮರೆತು ನನ್ನನ್ನೊಬ್ಬನೇ ನೆನಪು
ಮಾಡಿ. ಇದು ಅಂತಿಮ ಜನ್ಮವಾಗಿದೆ, ಇದು ಹಳೆಯ ಜನ್ಮವಾಗಿದೆ, ಹಳೆಯ ದೇಹ ಸಮಾಪ್ತಿಯಾಗಿ ಬಿಡುತ್ತದೆ.
ನೀವು ಸತ್ತರೇ ಇಡೀ ಪ್ರಪಂಚವೇ ಸತ್ತಂತೆ ಎಂಬ ಹೇಳಿಕೆಯಿದೆ. ಪುರುಷಾರ್ಥಕ್ಕಾಗಿ ಸ್ವಲ್ಪವೇ ಸಂಗಮದ
ಸಮಯವಿದೆ. ಮಕ್ಕಳು ಕೇಳುತ್ತಾರೆ -ಬಾಬಾ ಈ ವಿದ್ಯೆಯು ಎಲ್ಲಿಯವರೆಗೆ ನಡೆಯುತ್ತದೆ. ಎಲ್ಲಿಯವರೆಗೆ
ದೈವೀ ರಾಜಧಾನಿ ಸ್ಥಾಪನೆಯಾಗುವುದಿಲ್ಲ ಅಲ್ಲಿಯವರೆಗೆ ತಿಳಿಸುತ್ತಿರುತ್ತಾರೆ. ನಂತರ ಹೊಸ
ಪ್ರಪಂಚದಲ್ಲಿ ವರ್ಗೀಕರಣವಾಗುವುದು. ಬಾಬಾ ಎಷ್ಟು ನಿರಂಹಕಾರಿಯಾಗಿ ನೀವು ಮಕ್ಕಳ ಸೇವೆಯನ್ನು
ಮಾಡುತ್ತಿದ್ದಾರೆ, ನೀವು ಮಕ್ಕಳು ಸಹ ಇಷ್ಟು ಸೇವೆಯನ್ನು ಮಾಡಬೇಕಾಗಿದೆ. ಶ್ರೀಮತದ ಮೇಲೆ ನಡೆಯಬೇಕು.
ಎಲ್ಲಿ ತಮ್ಮ ಮತ ಕಾಣಿಸುವುದೋ ಆಗ ಅದೃಷ್ಟಕ್ಕೆ ಗೆರೆ ಹಾಕಿಕೊಳ್ಳುವರು. ನೀವು ಬ್ರಾಹ್ಮಣರು
ಈಶ್ವರೀಯ ಸಂತಾನರಾಗಿದ್ದೀರಿ. ಬ್ರಹ್ಮಾನ ಮಕ್ಕಳು ಸಹೋದರ-ಸಹೋದರಿಯರಾಗಿದ್ದೀರಿ, ಈಶ್ವರೀಯ
ಮೊಮ್ಮಕ್ಕಳಾಗಿದ್ದೀರಿ, ಅವರಿಂದ ಆಸ್ತಿ ತೆಗೆದುಕೊಳ್ಳುತ್ತಿದ್ದೀರಿ. ಎಷ್ಟು ಪುರುಷಾರ್ಥ ಮಾಡುವಿರಿ
ಅಷ್ಟು ಪದವಿ ಪಡೆಯುವರು. ಇದರಲ್ಲಿ ಸಾಕ್ಷಿಯಾಗಿರುವ ಬಹಳ ಅಭ್ಯಾಸ ಬೇಕು. ತಂದೆಯ ಮೊದಲನೇ
ಆದೇಶವಾಗಿದೆ ಅಶರೀರಿ ಭವ, ದೇಹಿ ಅಭಿಮಾನಿ ಭವ. ತಮ್ಮನ್ನು ಆತ್ಮವೆಂದು ತಿಳಿದು ನಾನು ತಂದೆಯನ್ನು
ನೆನಪು ಮಾಡಿ ಆಗಲೇ ಯಾವ ತುಕ್ಕು ಇದೆ ಅದು ಬಿಟ್ಟು ಹೋಗುವುದು, ಸತ್ಯ ಚಿನ್ನವಾಗಿ ಬಿಡುವಿರಿ. ನೀವು
ಮಕ್ಕಳು ಅಧಿಕಾರದಿಂದ ಹೇಳಬಹುದು ಬಾಬಾ, ಓ ಮಧುರ ಬಾಬಾ, ನೀವು ನನ್ನ ತನ್ನವರನ್ನಾಗಿ ಮಾಡಿಕೊಂಡು
ಎಲ್ಲವನ್ನೂ ಆಸ್ತಿಯಲ್ಲಿ ಕೊಟ್ಟಿದ್ದಾರೆ. ಈ ಆಸ್ತಿಯನ್ನು ಯಾರು ಕಿತ್ತುಕೊಳ್ಳಲು ಸಾಧ್ಯವಿಲ್ಲ,
ಅಷ್ಟು ನೀವು ಮಕ್ಕಳಿಗೆ ನಶೆಯಿರಬೇಕು. ನೀವೇ ಎಲ್ಲರಿಗೆ ಮುಕ್ತಿ ಜೀವನ್ಮುಕ್ತಿಯ ದಾರಿ
ತೋರಿಸುವಂತಹ ಲೈಟ್ ಹೌಸ್ ಆಗಿದ್ದೀರಿ, ಎದ್ದೇಳುತ್ತಾ-ಕುಳಿತುಕೊಳ್ಳುತ್ತಾ,
ನಡೆಯುತ್ತಾ-ತಿರುಗಾಡುತ್ತಾ ನೀವು ಲೈಟ್ ಹೌಸ್ ಆಗಿರಿ.
ತಂದೆಯು ಹೇಳುತ್ತಾರೆ
ಮಕ್ಕಳೇ, ಈಗ ಸಮಯ ಬಹಳ ಕಡಿಮೆಯಿದೆ, ಗಾಯನವೂ ಇದೆ ಒಂದು ಗಳಿಗೆ, ಅರ್ಧ ಗಳಿಗೆ .... ಎಷ್ಟು
ಆಗುತ್ತದೆಯೋ ಒಬ್ಬ ತಂದೆಯನ್ನು ನೆನಪು ಮಾಡಲು ತೊಡಗಿ ಮತ್ತು ಚಾರ್ಟ್ನ್ನು ಹೆಚ್ಚಿಸುತ್ತಾ ಇರಿ.
ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಅದೃಷ್ಟ ಮತ್ತು ಪ್ರಿಯ ಜ್ಞಾನ ನಕ್ಷತ್ರಗಳಿಗೆ ಮಾತಾ-ಪಿತಾ
ಬಾಪ್ದಾದಾರವರ ಹೃದಯದಿಂದ, ಪ್ರೇಮದಿಂದ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ
ಆತ್ಮೀಯ ತಂದೆಯ ನಮಸ್ತೆ.
ಅವ್ಯಕ್ತ ಮಹಾವಾಕ್ಯ -
ನಿರಂತರ ಯೋಗಿಯಾಗಿರಿ
ಹೇಗೆ ಒಂದು
ಸೆಕೆಂಡಿನಲ್ಲಿ ಸ್ವಿಚ್ ಆನ್ ಮತ್ತು ಆಫ್ ಮಾಡಲಾಗುತ್ತದೆ, ಹಾಗೆಯೇ ಒಂದು ಸೆಕೆಂಡಿನಲ್ಲಿ ಶರೀರದ
ಆಧಾರ ತೆಗೆದುಕೊಳ್ಳಿ ಮತ್ತು ಮತ್ತೊಂದು ಸೆಕೆಂಡಿನಲ್ಲಿ ಶರೀರದಿಂದ ದೂರ ಅಶರೀರಿ ಸ್ಥಿತಿಯಲ್ಲಿ
ಸ್ಥಿತರಾಗಿ ಬಿಡಿ. ಈಗೀಗ ಶರೀರದಲ್ಲಿ ಬನ್ನಿ ನಂತರ ಈಗೀಗ ಅಶರೀರಿಯಾಗಿ ಬಿಡಿ, ಇದರ ಅಭ್ಯಾಸ
ಮಾಡಬೇಕಾಗಿದೆ, ಇದಕ್ಕೆ ಕರ್ಮಾತೀತ ಅವಸ್ಥೆ ಎಂದು ಹೇಳಲಾಗುತ್ತದೆ. ಹೇಗೆ ಯಾವುದೇ ವಸ್ತ್ರ ಧಾರಣೆ
ಮಾಡಿ ಅಥವಾ ಮಾಡದೇ ಇರಲಿ ತಮ್ಮ ಕೈಯಲ್ಲಿದೆ. ಅವಶ್ಯಕತೆಯಿದೆ ಎಂದರೆ ಧಾರಣೆ ಮಾಡಿ,
ಅವಶ್ಯಕತೆಯಿಲ್ಲವೆಂದರೆ ತೆಗೆದು ಬಿಟ್ಟೆವು. ಇಂತಹ ಅನುಭವ ಈ ಶರೀರ ರೂಪಿ ವಸ್ತ್ರವನ್ನು ಧಾರಣೆ
ಮಾಡುವುದು ಮತ್ತು ತೆಗೆಯುವುದರಲ್ಲಿ ಇರಲಿ. ಕರ್ಮ ಮಾಡುತ್ತಾ ಇಂತಹ ಅನುಭವ ಆಗಬೇಕು ಹೇಗೆ ಯಾವುದೇ
ವಸ್ತ್ರವನ್ನು ಧಾರಣೆ ಮಾಡುತ್ತಿದ್ದೇವೆ, ಕಾರ್ಯ ಪೂರ್ಣವಾಯಿತು ಮತ್ತು ವಸ್ತ್ರದಿಂದ ಭಿನ್ನರಾದೆವು.
ಶರೀರ ಮತ್ತು ಆತ್ಮ ಎರಡು ಭಿನ್ನತನ ನಡೆಯುತ್ತಾ-ತಿರುಗಾಡುತ್ತಾ ಅನುಭವವಾಗಲಿ. ಹೇಗೆ ಅಭ್ಯಾಸವಾಗಿ
ಬಿಡುತ್ತದೆಯಲ್ಲವೇ, ಆದರೆ ಈ ಅಭ್ಯಾಸ ಯಾರಿಗೆ ಆಗುವುದು? ಯಾರು ಶರೀರದ ಜೊತೆ ಅಥವಾ ಶರೀರದ
ಸಂಬಂಧದಲ್ಲಿ ಏನೆಲ್ಲಾ ಮಾತುಗಳಿವೆ, ಶರೀರದ ಪ್ರಪಂಚದಲ್ಲಿ, ಸಂಬಂಧ ಅಥವಾ ಅನೇಕ ವಸ್ತುಗಳಿವೇಯೋ
ಅದರಿಂದ ಭಿನ್ನರಾಗಿ, ಯಾವುದೇ ಆಕರ್ಷಣೆಯಿಲ್ಲವೆಂದಾಗ ಭಿನ್ನರಾಗಲು ಸಾಧ್ಯ. ಒಂದುವೇಳೆ ಸೂಕ್ಷ್ಮ
ಸಂಕಲ್ಪದಲ್ಲಿಯೂ ಹಗುರತನವಿಲ್ಲ, ಆಕರ್ಷಣೆಯಿಲ್ಲವೆಂದಾಗ ಭಿನ್ನತನದ ಅನುಭವವಾಗಲು ಸಾಧ್ಯವಿಲ್ಲ.
ಪ್ರತಿಯೊಬ್ಬರು ಈಗ ಈ ಅಭ್ಯಾಸ ಮಾಡಬೇಕು, ಸಂಪೂರ್ಣ ಭಿನ್ನತನದ ಅನುಭವವಾಗಲಿ. ಈ ಸ್ಟೇಜ್ ಮೇಲೆ
ಇರುವುದರಿಂದ ಅನ್ಯ ಆತ್ಮಗಳಿಗೂ ನಿಮ್ಮಿಂದ ಭಿನ್ನತನದ ಅನುಭವವಾಗಲಿ, ಅದನ್ನು ಅನುಭವ ಮಾಡುವರು.
ಹೇಗೆ ಯೋಗದಲ್ಲಿ ಕುಳಿತುಕೊಳ್ಳುವ ಸಮಯ ಕೆಲ ಆತ್ಮಗಳಿಗೆ ಅನುಭವವಾಗುತ್ತದೆಯಲ್ಲವೇ, ಈ ಡ್ರಿಲ್
ಮಾಡಿಸುವವರು ಭಿನ್ನ ಸ್ಥಿತಿಯಲ್ಲಿದ್ದಾರೆ, ಇಂತಹ ನಡೆಯುತ್ತಾ ತಿರುಗಾಡುತ್ತಾ ಫರಿಸ್ತಾತನದ
ಸಾಕ್ಷಾತ್ಕಾರವಾಗುವುದು. ಇಲ್ಲಿ ಕುಳಿತಲ್ಲೇ ಅನೇಕ ಆತ್ಮರಿಗೆ, ಯಾರೆಲ್ಲಾ ನಿಮ್ಮ ಸತ್ಯಯುಗೀ
ಪರಿವಾರದಲ್ಲಿಸಮೀಪ ಬರುವವರಿದ್ದಾರೆ, ಅವರಿಗೆ ನಿಮ್ಮ ಫರಿಸ್ತೆ ರೂಪ ಮತ್ತು ಭವಿಷ್ಯ ರಾಜ್ಯ ಪದವಿ
ಎರಡು ಒಟ್ಟಿಗೆ ಸಾಕ್ಷಾತ್ಕಾರವಾಗಲಿ. ಹೇಗೆ ಆರಂಭದಲ್ಲಿ ಬ್ರಹ್ಮಾನಲ್ಲಿ ಸಂಪೂರ್ಣ ಸ್ವರೂಪ ಮತ್ತು
ಶ್ರೀಕೃಷ್ಣನ ಎರಡು ಜೊತೆ ಜೊತೆ ಸಾಕ್ಷಾತ್ಕಾರ ಮಾಡುತ್ತಿದ್ದರು, ಹಾಗೆ ಈಗ ಅವರಿಗೆ ನಿಮ್ಮ ಡಬಲ್
ರೂಪದ ಸಾಕ್ಷಾತ್ಕಾರವಾಗುವುದು. ಹೇಗೆ ನಂಬರ್ವಾರ್ ಈ ಭಿನ್ನ ಸ್ಟೇಜ್ನಲ್ಲಿ ಬರುತ್ತಲೇ ನಿಮಗೂ ಸಹ ಈ
ಡಬಲ್ ಸಾಕ್ಷಾತ್ಕಾರವಾಗುವುದು. ಈಗ ಇದು ಪೂರ್ಣ ಅಭ್ಯಾಸ ಆಗಿಬಿಟ್ಟರೇ ಇಲ್ಲಿ ಅಲ್ಲಿಂದ ಇದೇ
ಸಮಾಚಾರ ಬರಲು ಆರಂಭವಾಗಿ ಬಿಡುವುದು. ಹೇಗೆ ಆರಂಭದಲ್ಲಿ ಮನೆಯಲ್ಲಿ ಕುಳಿತಲ್ಲೇ ಅನೇಕ ಸಮೀಪ
ಬರುವಂತಹ ಆತ್ಮರಿಗೆ ಸಾಕ್ಷಾತ್ಕಾರವಾಯಿತಲ್ಲವೇ. ಹಾಗೆಯೇ ಈಗಲೂ ಸಹ ಸಾಕ್ಷಾತ್ಕಾರವಾಗುವುದು. ಇಲ್ಲಿ
ಕುಳಿತ್ತಿದ್ದರೂ ಬೇಹದ್ದಿನಲ್ಲಿ ನಿಮ್ಮ ಸೂಕ್ಷ್ಮ ಸ್ವರೂಪವು ಸೇವೆ ಮಾಡುವುದು. ಸಾಕಾರದಲ್ಲಿ
ಎಲ್ಲರೂ ಉದಾಹರಣೆಯಂತೂ ನೋಡಿದ್ದೀರಿ. ಎಲ್ಲಾ ಮಾತುಗಳು ನಂಬರ್ವಾರ್ ಡ್ರಾಮಾ ಅನುಸಾರವಾಗಬೇಕು.
ಎಷ್ಟೇಟು ಸ್ವಯಂ ಆಕಾರಿ ಫರಿಸ್ತೆ ಸ್ವರೂಪದಲ್ಲಿ ಇರುವಿರಿ. ಅಷ್ಟು ನಿಮ್ಮ ಫರಿಸ್ತಾ ರೂಪ ಸರ್ವೀಸ್
ಮಾಡುವುದು. ಆತ್ಮಕ್ಕೆ ಇಡೀ ವಿಶ್ವವನ್ನು ಚಕ್ರ ಹಾಕಲು ಎಷ್ಟು ಸಮಯ ಹಿಡಿಸುತ್ತದೆ? ಈಗ ನಿಮ್ಮ
ಸೂಕ್ಷ್ಮ ಸ್ವರೂಪವೂ ಸಹ ಸರ್ವೀಸ್ ಮಾಡುವುದು ಆದರೆ ಈ ಭಿನ್ನ ಸ್ಥಿತಿಯಲ್ಲಿ ಇರುವಿರಿ. ಸ್ವಯಂ
ಫರಿಸ್ತಾ ರೂಪದಲ್ಲಿ ಸ್ಥಿತರಾಗುವರು. ಆರಂಭದಲ್ಲಿ ಎಲ್ಲವೂ ಸಾಕ್ಷಾತ್ಕಾರವಾಗಿದೆ. ಫರಿಸ್ತೆ
ರೂಪದಲ್ಲಿ ಸಂಪೂರ್ಣ ಸ್ಟೇಜ್ ಮತ್ತು ಪುರುಷಾರ್ಥಿ ಸ್ಥಿತಿ ಎದಡು ಬೇರೆ-ಬೇರೆ
ಸಾಕ್ಷಾತ್ಕಾರವಾಗುತ್ತಿತ್ತು. ಹೇಗೆ ಸಾಕಾರ ಬ್ರಹ್ಮಾ ಮತ್ತು ಸಂಪೂರ್ಣ ಬ್ರಹ್ಮಾರವರ ಬೇರೆ ಬೇರೆ
ಅಲಂಕಾರವಾಗುತ್ತಿತ್ತು, ಹಾಗೆಯೇ ಅನನ್ಯ ಮಕ್ಕಳ ಸಾಕ್ಷಾತ್ಕಾರವು ಆಗುವುದು. ಹಂಗಾಮಾವಾದಾಗ ಸಾಕಾರ
ಶರೀರದ ಮೂಲಕ ಏನು ಮಾಡಲು ಸಾಧ್ಯವಿಲ್ಲ ಮತ್ತು ಪ್ರಭಾವವೂ ಈ ಸರ್ವೀಸ್ನಿಂದ ಆಗುವುದು. ಹೇಗೆ
ಆರಂಭದಲ್ಲಿಯೂ ಸಾಕ್ಷಾತ್ಕಾರದಿಂದಲೇ ಪ್ರಭಾವವಾಯಿತಲ್ಲವೇ. ಪರೋಕ್ಷ – ಅಪರೋಕ್ಷ ಅನುಭವವು ಪ್ರಭಾವ
ಬೀರಿತು. ಹಾಗೆಯೇ ಅಂತ್ಯದಲ್ಲಿಯೂ ಇದೇ ಸರ್ವೀಸ್ ಆಗುವುದಿದೆ. ತಮ್ಮ ಸಂಪೂರ್ಣ ಸ್ವರೂಪದ
ಸಾಕ್ಷಾತ್ಕಾರ ತಮಗೆ ಆಗುತ್ತದೆಯೇ? ಈಗ ಶಕ್ತಿಯರನ್ನು ಕರೆಯುವುದು ಶುರುವಾಯಿತು. ಈಗ ಪರಮಾತ್ಮನನ್ನು
ಕಡಿಮೆ ಕರೆಯುತ್ತಾರೆ, ಶಕ್ತಿಯರ ಕರೆ ತೀವ್ರಗತಿಯಿಂದ ಶುರುವಾಗಿದೆ. ಇಂತಹ ಅಭ್ಯಾಸವನ್ನು
ಮಧ್ಯ-ಮಧ್ಯದಲ್ಲಿ ಮಾಡಬೇಕು. ಅಭ್ಯಾಸವಾದಾಗ ಬಹಳ ಆನಂದ ಅನುಭವವಾಗುತ್ತದೆ. ಒಂದು ಸೆಕೆಂಡಿನಲ್ಲಿ
ಆತ್ಮ ಶರೀರದಿಂದ ಭಿನ್ನನಾಗಿಬಿಡುತ್ತದೆ, ಅಭ್ಯಾಸವಾಗಿ ಬಿಡುವುದು. ಈಗ ಇದೇ ಪುರುಷಾರ್ಥವನ್ನು
ಮಾಡಬೇಕು.
ವರ್ತಮಾನ ಸಮಯ ಮನನ
ಶಕ್ತಿಯಿಂದ ಆತ್ಮನಲ್ಲಿ ಸರ್ವ ಶಕ್ತಿಗಳನ್ನು ತುಂಬುವ ಅವಶ್ಯಕತೆಯಿದೆ ಆಗ ಮಗ್ನ ಅವಸ್ಥೆಯಿರುವುದು
ಮತ್ತು ವಿಘ್ನ ದೂರವಾಗುವುದು. ವಿಘ್ನಗಳ ಅಲೆಗಳು ಬಂದಾಗ ಆತ್ಮೀಯತೆ ಫೆÇೀರ್ಸ್(ಒತ್ತಡ, ಶಕ್ತಿ)
ಕಡಿಮೆಯಾಗಿ ಬಿಡುತ್ತದೆ. ವರ್ತಮಾನ ಸಮಯ ಶಿವರಾತ್ರಿಯ ಸರ್ವೀಸ್ಕ್ಕಿಂತ ಮೊದಲು ಸ್ವಯಂನಲ್ಲಿ ಶಕ್ತಿ
ತುಂಬುವ ಫೆÇೀರ್ಸ್ ಬೇಕಾಗಿದೆ. ಯೋಗದ ಪೆÇ್ರೀಗ್ರಾಮಗಳನ್ನು ಇಡುತ್ತೀರಿ ಆದರೆ ಯೋಗದ ಮೂಲಕ
ಶಕ್ತಿಗಳ ಅನುಭವ ಮಾಡುವುದು, ಮಾಡಿಸುವುದು ಈಗ ಇಂತಹ ಕ್ಲಾಸ್ಗಳ ಅವಶ್ಯಕತೆಯಿದೆ. ಪ್ರಾಕ್ಟಿಕಲ್
ತಮ್ಮ ಬಲದ ಆಧಾರದಿಂದ ಅನ್ಯರಿಗೆ ಬಲ ಕೊಡಬೇಕಾಗಿದೆ. ಕೇವಲ ಹೊರಗಡೆಯ ಸರ್ವೀಸ್ ಪ್ಲಾನ ಬಗ್ಗೆ
ಯೋಚಿಸಬೇಡಿ, ಸಂಪೂರ್ಣ ದೃಷ್ಟಿ ಎಲ್ಲಾ ಕಡೆಯು ಬೇಕಾಗಿದೆ. ಯಾರು ನಿಮಿತ್ತರಾಗಿದ್ದಾರೆ ಅವರ ಮೇಲೆ
ಕಠಿಣ ದೃಷ್ಟಿ ಇಡಬೇಕಾಗಿದೆ. ಸಮಯ ಕೊಟ್ಟು ಬಲಹೀನತೆಗಳನ್ನು ಸಮಾಪ್ತಿ ಮಾಡಬೇಕು.
ಹೇಗೆ ಸಾಕಾರ ರೂಪವನ್ನು
ನೋಡಿದಿರಿ, ಯಾವುದೇ ಇಂತಹ ಅಲೆಯ ಸಮಯವಿದ್ದಾಗ, ದಿನ-ರಾತ್ರಿ ಸಕಾಶ ಕೊಡುವ ವಿಶೇಷ ಸರ್ವೀಸ್,
ವಿಶೇಷ ಪ್ಲಾನ್ಸ್ ನಡೆಯುತ್ತಿತ್ತು. ನಿರ್ಬಲ ಆತ್ಮರಿಗೆ ಬಲ ತುಂಬುವ ವಿಶೇಷ ಗಮನವಿರುತ್ತಿತ್ತು
ಯಾವುದು ಅನೇಕ ಆತ್ಮರಿಗೆ ಅನುಭವವೂ ಆಗುತ್ತಿತ್ತು. ರಾತ್ರಿ-ರಾತ್ರಿ ಸಮಯ ತೆಗೆದು ಆತ್ಮರಿಗೆ ಸಕಾಶ
ತುಂಬುವ ಸರ್ವೀಸ್ ನಡೆಯುತ್ತಿತ್ತು. ಈಗ ವಿಶೇಷ ಸಕಾಶ ಕೊಡುವ ಸರ್ವೀಸ್ ಮಾಡಬೇಕಾಗಿದೆ. ಲೈಟ್ ಹೌಸ್,
ಮೈಟ್ ಹೌಸ್ ಆಗಿ ಈ ಸೇವೆಯನ್ನು ವಿಶೇಷವಾಗಿ ಮಾಡಬೇಕು, ಆಗ ನಾಲ್ಕಾರು ಕಡೆ ಲೈಟ್ ಮೈಟಿನ ಪ್ರಭಾವ
ಹರಡುವುದು. ಈಗ ಇದು ಅವಶ್ಯಕವಾಗಿದೆ. ಹೇಗೆ ಯಾರಾದರೂ ಸಾಹುಕಾರರಿದ್ದರೆ ತಮ್ಮ ಹತ್ತಿರದ
ಸಂಬಂಧಿಕರಿಗೆ ಸಹಾಯ ಮಾಡಿ ಅವರನ್ನು ಶ್ರೇಷ್ಠರನ್ನಾಗಿ ಮಾಡುತ್ತಾರೆ, ಹಾಗೆಯೇ ವರ್ತಮಾನ ಸಮಯ
ಯಾರೆಲ್ಲಾ ಬಲಹೀನ ಆತ್ಮರು ಸಂಬಂಧ ಸಂಪರ್ಕದಲ್ಲಿದ್ದಾರೆ, ಅವರಿಗೆ ವಿಶೇಷ ಸಕಾಶ ಕೊಡಬೇಕಾಗಿದೆ.
ಒಳ್ಳೆಯದು.
ವರದಾನ:
ಸಾವಿರಾರು
ಭುಜವುಳ್ಳ ಬ್ರಹ್ಮಾ ತಂದೆಯ ಜೊತೆಯನ್ನು ನಿರಂತರ ಅನುಭವ ಮಾಡುವಂತಹ ಸತ್ಯ ಸ್ನೇಹಿ ಭವ.
ವರ್ತಮಾನ ಸಮಯ ಸಾವಿರಾರು
ಭುಜವುಳ್ಳ ಬ್ರಹ್ಮಾ ತಂದೆಯ ರೂಪದ ಪಾತ್ರ ನಡೆಯುತ್ತಿದೆ. ಹೇಗೆ ಆತ್ಮವಿಲ್ಲದೇ ಭುಜ ಏನು ಮಾಡಲು
ಸಾಧ್ಯವಿಲ್ಲ, ಹಾಗೆಯೇ ಬಾಪ್ದಾದಾರವರಿಲ್ಲದೇ ಭುಜ ರೂಪಿ ಮಕ್ಕಳು ಏನು ಮಾಡಲು ಸಾಧ್ಯವಿಲ್ಲ. ಪ್ರತಿ
ಕಾರ್ಯದಲ್ಲಿ ಮೊದಲು ತಂದೆಯ ಸಹಯೋಗವಿದೆ. ಎಲ್ಲಿಯವರೆಗೆ ಸ್ಥಾಪನೇಯ ಪಾತ್ರವಿದೆ ಅಲ್ಲಿಯವರೆಗೆ
ಬಾಪ್ದಾದಾ ಮಕ್ಕಳ ಪ್ರತಿ ಸಂಕಲ್ಪ ಮತ್ತು ಸೆಕೆಂಡ್ನಲ್ಲಿ ಜೊತೆ ಜೊತೆಯಿದ್ದಾರೆ ಇದಕ್ಕಾಗಿ ಎಂದೂ
ಸಹ ಸೆರ್ಪಡೆಯ
(ಪ್ರತ್ಯಕ್ಷತೆಯ) ಪರದೆ ಹಾಕಿಕೊಂಡು ವಿಯೋಗಿಯಾಗಬೇಡಿ. ಪ್ರೇಮದ ಸಾಗರನ ಅಲೆಗಳಲ್ಲಿ ತೆಲಾಡಿ,
ಗುಣಗಾನ ಮಾಡಿ ಆದರೆ ನೋವಾಗಬಾರದು. ತಂದೆಯ ಸ್ನೇಹದ ಪ್ರತ್ಯಕ್ಷ ಸ್ವರೂಪದ ಸೇವೆಯ ಸ್ನೇಹಿಯಾಗಿ.
ಸ್ಲೋಗನ್:
ಅಶರೀರಿ
ಸ್ಥಿತಿಯ ಅನುಭವ ಅಥವಾ ಅಭ್ಯಾಸವೇ ನಂಬರ್ ಮುಂದೆ ಬರುವ ಆಧಾರವಾಗಿದೆ.
ತಮ್ಮ ಶಕ್ತಿಶಾಲಿ ಮನಸ್ಸಾ
ಮೂಲಕ ಸಕಾಶ ಕೊಡುವ ಸೇವೆಯನ್ನು ಮಾಡಿರಿ
ಪ್ರತಿ ಸಮಯ, ಪ್ರತಿ
ಆತ್ಮದ ಪ್ರತಿ ಮನಸ್ಸಾ ಸ್ವತಃ ಶುಭಭಾವನೆ ಮತ್ತು ಶುಭಕಾಮನೆಯ ಶುದ್ಧ ವೈಬ್ರೇಷನ್ನವರು ಸ್ವಯಂನ್ನು
ಮತ್ತು ಅನ್ಯರಿಗೂ ಅನುಭವವಾಗಲಿ. ಮನಸ್ಸಿನಿಂದ ಪ್ರತಿ ಸಮಯ ಸರ್ವ ಆತ್ಮರ ಪ್ರತಿ ಆಶೀರ್ವಾದಗಳು
ಬರುತ್ತಿರಲಿ. ಮನಸ್ಸಾ ಸದಾ ಇದೇ ಸೇವೆಯಲ್ಲಿ ವ್ಯಸ್ಥವಾಗಿರಲಿ. ಹೇಗೆ ವಾಚಾದ ಸೇವೆಯಲ್ಲಿ
ವ್ಯಸ್ಥವಾಗಿರುವುದರ ಅನುಭವಿಯಾಗಿಬಿಟ್ಟಿದ್ದೀರಿ. ಒಂದುವೇಳೆ ಸೇವೆ ಸಿಗಲಿಲ್ಲವೆಂದರೆ ತಮ್ಮನ್ನು
ಖಾಲಿ ಅನುಭವ ಮಾಡುತ್ತೀರಿ. ಹಾಗೆಯೇ ಪ್ರತಿ ಸಮಯ ವಾಣಿಯ ಜೊತೆ-ಜೊತೆ ಮನಸ್ಸಾ ಸೇವೆ ಸ್ವತಃ
ಆಗುತ್ತಿರಲಿ.