18.02.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನಿಮ್ಮ ಆಧ್ಯಕರ್ತವ್ಯ ಮನೆ-ಮನೆಗೆ ತಂದೆಯ ಸಂದೇಶವನ್ನು ಕೊಡುವುದು, ಯಾವುದೇ ಸಂದರ್ಭದಲ್ಲಿ ಯುಕ್ತಿಯನ್ನು ರಚಿಸಿ ತಂದೆಯ ಪರಿಚಯವನ್ನು ಪ್ರತಿಯೊಬ್ಬರಿಗೂ ಅವಶ್ಯವಾಗಿ ಕೊಡಬೇಕು”

ಪ್ರಶ್ನೆ:
ನೀವು ಮಕ್ಕಳಿಗೆ ಯಾವ ಒಂದು ಮಾತಿನ ಮೇಲೆ ಆಸಕ್ತಿ ಇರಬೇಕು?

ಉತ್ತರ:
ಯಾವ ಹೊಸ-ಹೊಸ ಜ್ಞಾನಬಿಂದುಗಳನ್ನು ತಂದೆಯು ಕೊಡುತ್ತಾರೆಯೋ ಅದನ್ನು ತನ್ನ ಬಳಿ ಸಂಗ್ರಹಿಸುವ ಉತ್ಸುಕತೆ ಇರಬೇಕು ಏಕೆಂದರೆ ಎಲ್ಲಾ ಜ್ಞಾನಬಿಂದುಗಳನ್ನು ನೆನಪಿಟ್ಟುಕೊಳ್ಳುವುದು ಕಷ್ಟವಾಗುತ್ತದೆ. ಟಿಪ್ಪಣಿ ಮಾಡಿಕೊಂಡು ಯಾರಿಗಾದರೂ ತಿಳಿಸಿಕೊಡಿ, ಬರೆದು ಕಾಪಿ ಮಾಡಿ ನಂತರ ಅದನ್ನು ಹಾಗೆಯೇ ಒಂದುಕಡೆ ಇಟ್ಟುಬಿಡಬಾರದು, ಯಾವ ಮಕ್ಕಳು ಚೆನ್ನಾಗಿ ತಿಳಿದುಕೊಳ್ಳುತ್ತಾರೆಯೋ ಅವರಿಗೆ ಜ್ಞಾನಬಿಂದುಗಳನ್ನು ಸಂಗ್ರಹಿಸುವ ಉತ್ಸುಕತೆಯಿರುತ್ತದೆ.

ಗೀತೆ:
ಲಕ್ಷ ಸಂಪಾದನೆ ಮಾಡುವವರು..................

ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳು ಗೀತೆಯನ್ನು ಕೇಳಿದ್ದೀರಿ. ಆತ್ಮೀಯ ಮಕ್ಕಳು ಎಂಬ ಅಕ್ಷರವನ್ನು ಓಬ್ಬ ತಂದೆ ಮಾತ್ರ ಹೇಳಲು ಸಾಧ್ಯ. ಆತ್ಮೀಯ ತಂದೆಯ ವಿನಃ ಯಾರೂ ಯಾರನ್ನು ಆತ್ಮೀಯ ಮಕ್ಕಳೇ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲಾ ಆತ್ಮಗಳ ತಂದೆಯು ಒಬ್ಬರೇ ಆಗಿದ್ದಾರೆ ಎಂಬುದು ಮಕ್ಕಳಿಗೆ ತಿಳಿದಿದೆ. ನಾವೆಲ್ಲರೂ ಸಹೋದರ-ಸಹೋದರರಾಗಿದ್ದೇವೆ, ಸಹೋದರತ್ವ ಎಂದು ಸಹ ಹೇಳುತ್ತಾರೆ ಆದರೂ ಸಹ ಮಾಯೆಯ ಪ್ರವೇಶತೆ ಈ ರೀತಿಯಿದೆ, ಪರಮಾತ್ಮನನ್ನು ಸರ್ವವ್ಯಾಪಿಯೆಂದು ಹೇಳಿಬಿಡುತ್ತಾರೆ ಅಂದಾಗ ಫಾದರ್ವುಡ್ ಎಲ್ಲರೂ ತಂದೆಯರಾಗಿಬಿಡುತ್ತಾರೆ . ರಾವಣರಾಜ್ಯವು ಹಳೆಯ ಪ್ರಪಂಚದಲ್ಲಿಯೇ ಇರುತ್ತದೆ, ಹೊಸಪ್ರಪಂಚಕ್ಕೆ ರಾಮರಾಜ್ಯ ಅಥವಾ ಈಶ್ವರೀಯ ರಾಜ್ಯವೆಂದು ಕರೆಯಲಾಗುತ್ತದೆ. ಇದು ತಿಳಿದುಕೊಳ್ಳುವ ಮಾತುಗಳಾಗಿವೆ. ಎರಡು ರಾಜ್ಯವು ಅವಶ್ಯವಾಗಿ ಇದೆ. ಈಶ್ವರೀಯ ರಾಜ್ಯ ಮತ್ತು ಆಸುರಿರಾಜ್ಯ, ಹೊಸ ಪ್ರಪಂಚ ಮತ್ತು ಹಳೆಯ ಪ್ರಪಂಚ. ಹೊಸ ಪ್ರಪಂಚವನ್ನು ಅವಶ್ಯವಾಗಿ ತಂದೆಯೇ ರಚಿಸುತ್ತಾರೆ. ಈ ಪ್ರಪಂಚದಲ್ಲಿ ಮನುಷ್ಯರು ಹೊಸಪ್ರಪಂಚ ಮತ್ತು ಹಳೆಯ ಪ್ರಪಂಚ ಎಂಬುದನ್ನು ತಿಳಿದುಕೊಂಡಿಲ್ಲ. ಅಂದರೆ ಏನನ್ನೂ ತಿಳಿದುಕೊಂಡಿಲ್ಲ. ನೀವೂ ಸಹ ಏನನ್ನೂ ತಿಳಿದುಕೊಂಡಿರಲಿಲ್ಲ, ತಿಳುವಳಿಕೆಹೀನರಾಗಿದ್ದಿರಿ, ಹೊಸ ಸುಖದ ಜಗತ್ತನ್ನು ಯಾರು ಸ್ಥಾಪನೆ ಮಾಡುತ್ತಾರೆ ಮತ್ತು ಹಳೆಯ ಜಗತ್ತಿನಲ್ಲಿ ದುಃಖವೇಕೆ ಆಗುತ್ತದೆ? ಸ್ವರ್ಗದಿಂದ ನರಕ ಹೇಗಾಗುತ್ತದೆ, ಇದು ಯಾರಿಗೂ ಸಹ ಗೊತ್ತಿಲ್ಲ. ಇವೆಲ್ಲಾ ಮಾತುಗಳನ್ನು ಮನುಷ್ಯರೇ ತಿಳಿದುಕೊಳ್ಳಬೇಕಲ್ಲವೆ. ದೇವತೆಗಳ ಚಿತ್ರವಿದೆಯೆಂದರೆ ಅವಶ್ಯವಾಗಿ ಆದಿಸನಾತನ ದೇವಿ-ದೇವತೆಗಳ ರಾಜ್ಯವಿತ್ತು, ಅದು ಈ ಸಮಯದಲ್ಲಿಲ್ಲ. ಇದು ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯ, ತಂದೆ ಭಾರತದಲ್ಲಿಯೇ ಬರುತ್ತಾರೆ. ಶಿವತಂದೆಯು ಭಾರತದಲ್ಲಿ ಬಂದು ಏನು ಮಾಡುತ್ತಾರೆ ಎಂಬುದು ಮನುಷ್ಯರಿಗೆ ತಿಳಿದಿಲ್ಲ. ತನ್ನ ಧರ್ಮವನ್ನೇ ಮರೆತುಬಿಟ್ಟಿದ್ದಾರೆ. ನಿಮಗೆ ಈಗ ತ್ರಿಮೂರ್ತಿ ಶಿವತಂದೆಯ ಪರಿಚಯವಾಗಿದೆ. ಬ್ರಹ್ಮದೇವತಾ, ವಿಷ್ಣುದೇವತಾ, ಶಂಕರದೇವತಾ ಎಂದು ಕರೆಯಲಾಗುತ್ತದೆ ನಂತರ ಶಿವಪರಮಾತ್ಮಾಯನಮಃ ಎಂದು ಹೇಳುತ್ತಾರೆ. ಆದುದರಿಂದ ನೀವು ಮಕ್ಕಳು ತ್ರಿಮೂರ್ತಿ ಶಿವನ ಪರಿಚಯವನ್ನು ಕೊಡಬೇಕಾಗಿದೆ. ಈ ರೀತಿಯಾಗಿ ಸೇವೆಯನ್ನು ಮಾಡಬೇಕು. ಯಾವುದೇ ಸಂದರ್ಭದಲ್ಲಿ ತಂದೆಯ ಪರಿಚಯವನ್ನು ಎಲ್ಲರಿಗೂ ನೀಡಬೇಕು. ಅದರಿಂದ ಎಲ್ಲರೂ ಆಸ್ತಿಯನ್ನು ತೆಗೆದುಕೊಳ್ಳಲಿ. ನಾವೀಗ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆಂದು ನಿಮಗೆ ತಿಳಿದಿದೆ. ಇನ್ನೂ ಅನೇಕರು ಆಸ್ತಿಯನ್ನು ತೆಗೆದುಕೊಳ್ಳಬೇಕು. ನಮ್ಮ ಮೇಲೆ ಆದ್ಯಕರ್ತವ್ಯವಿದೆ - ಮನೆ-ಮನೆಗೆ ಸಂದೇಶವನ್ನು ಕೊಡಬೇಕು. ವಾಸ್ತವದಲ್ಲಿ ಸಂದೇಶವಾಹಕ ಒಬ್ಬರೇ ತಂದೆಯಾಗಿದ್ದಾರೆ. ತಂದೆಯು ತನ್ನ ಪರಿಚಯವನ್ನು ನಿಮಗೆ ಕೊಡುತ್ತಾರೆ ನಂತರ ನೀವು ಅನ್ಯರಿಗೆ ತಂದೆಯ ಪರಿಚಯ ಕೊಡಬೇಕು, ತಂದೆಯ ಜ್ಞಾನವನ್ನೂ ಕೊಡಬೇಕು. ಮುಖ್ಯವಾಗಿ ತ್ರಿಮೂರ್ತಿ ಶಿವ, ಇವರ ಲಾಂಛನವನ್ನೂ ಸಹ ಮಾಡಲಾಗಿದೆ, ಸರ್ಕಾರದವರು ಇದರ ಅರ್ಥವನ್ನು ತಿಳಿದುಕೊಂಡೇ ಇಲ್ಲ. ಅದರಲ್ಲಿ ಚಕ್ರವನ್ನೂ ಸಹ ತೋರಿಸಿದ್ದಾರೆ. ಚಕ್ರದ ರೂಪದಲ್ಲಿ ಸತ್ಯಮೇವ ಜಯತೆ ಎಂದು ಬರೆಯಲ್ಪಟ್ಟಿದೆ. ಇದರ ಅರ್ಥವಂತೂ ಬರುವುದೇ ಇಲ್ಲ. ಇದು ಸಂಸ್ಕೃತ ಅಕ್ಷರವಾಗಿದೆ. ತಂದೆಯು ಸತ್ಯನಾಗಿದ್ದಾರೆ, ಅವರು ಏನನ್ನು ತಿಳಿಸುತ್ತಾರೆಯೋ ಅದರಲ್ಲಿ ನಿಮ್ಮದು ಇಡೀ ವಿಶ್ವದ ಮೇಲೆ ವಿಜಯವಾಗುತ್ತದೆ ಎಂದು ತಂದೆಯು ತಿಳಿಸುತ್ತಾರೆ. ನೀವು ಈ ವಿದ್ಯೆಯಿಂದ ಸತ್ಯವಾದ ಸತ್ಯನಾರಾಯಣರಾಗಿಬಿಡುತ್ತೀರಿ ಆದರೆ ಆ ಜನರು ಏನೇನೋ ಅರ್ಥವನ್ನು ತಿಳಿಸುತ್ತಾರೆ. ತಂದೆಯು ಅನೇಕ ಪ್ರಕಾರಗಳಿಂದ ತಿಳಿಸುತ್ತಾರೆ. ಎಲ್ಲಿಯೇ ಮೇಳಗಳು ಇರುತ್ತವೆಯೋ, ಅಲ್ಲಿನ ನದಿಗಳ ಸಮೀಪದಲ್ಲಿ ಹೋಗಿ ತಿಳಿಸಿಕೊಡಿ. ಪತಿತ-ಪಾವನ ಗಂಗೆಯಂತೂ ಆಗಲು ಸಾಧ್ಯವಿಲ್ಲ. ನದಿಗಳು ಸಾಗರದಿಂದ ಹುಟ್ಟಿವೆ, ಅವು ನೀರಿನ ಸಾಗರವಾಗಿದೆ, ಆ ನೀರಿನಿಂದ ನದಿಗಳು ಹುಟ್ಟುತ್ತವೆ. ಜ್ಞಾನಸಾಗರನಿಂದ ಜ್ಞಾನದ ನದಿಗಳು ಹುಟ್ಟುತ್ತವೆ. ನೀವು ಮಾತೆಯರಲ್ಲಿ ಈಗ ಜ್ಞಾನವಿದೆ, ಗೋಮುಖದಲ್ಲಿ ಮುಖದಿಂದ ನೀರು ಬರುವುದನ್ನು ಗಂಗಾಜಲವೆಂದು ತಿಳಿಯುತ್ತಾರೆ. ಇಷ್ಟೊಂದು ಓದು-ಬರಹವುಳ್ಳಂತಹ ಮನುಷ್ಯರು ಗಂಗಾಜಲವು ಎಲ್ಲಿಂದ ಬರುತ್ತದೆಯೆಂದು ತಿಳಿದಿಲ್ಲ. ಶಾಸ್ತ್ರಗಳಲ್ಲಿ ಬಾಣವನ್ನು ಹೊಡೆದಾಗ ಗಂಗೆಯು ಹೊರಬಂದಳು ಎಂದು ಹೇಳಿದ್ದಾರೆ. ಎಷ್ಟೆಲ್ಲಾ ದೂರ-ದೂರದವರೆಗೆ ತೀರ್ಥಯಾತ್ರೆಗಳಿಗೆ ಹೋಗುತ್ತಾರೆ. ಶಂಕರನ ಜಟೆಯಿಂದ ಗಂಗೆಯು ಬಂದಳು, ಅದರಿಂದ ಸ್ನಾನ ಮಾಡುವುದರಿಂದ ಮನುಷ್ಯರು ಪರಿ (ಫರಿಶ್ತೆ) ಗಳಾಗಿಬಿಡುತ್ತಾರೆಂದು ಹೇಳಿಬಿಡುತ್ತಾರೆ. ಮನುಷ್ಯರಿಂದ ದೇವತೆಯಾಗುವುದು ಪರಿಗಳ ರೀತಿಯಲ್ಲವೆ.

ನೀವು ಮಕ್ಕಳು ತಂದೆಯ ಪರಿಚಯವನ್ನು ಕೊಡಬೇಕು, ಅದಕ್ಕಾಗಿ ತಂದೆಯು ಚಿತ್ರವನ್ನು ಮಾಡಿಸಿದ್ದಾರೆ. ತ್ರಿಮೂರ್ತಿ ಶಿವನ ಚಿತ್ರದಲ್ಲಿ ಎಲ್ಲದರ ಜ್ಞಾನವಿದೆ. ಭಕ್ತಿಮಾರ್ಗದ ಶಿವನ ಚಿತ್ರದಲ್ಲಿ ಜ್ಞಾನಕೊಡುವಂತಹ ಶಿವನ ಚಿತ್ರವೇ ಇಲ್ಲ. ಜ್ಞಾನವನ್ನು ಪಡೆದುಕೊಳ್ಳುವವರ ಚಿತ್ರವಿದೆ, ನೀವು ತ್ರಿಮೂರ್ತಿ ಚಿತ್ರದ ಮೇಲೆ ತಿಳಿಸಿಕೊಡಬೇಕು. ಮೇಲೆ ಜ್ಞಾನಕೊಡುವಂತಹವರಿದ್ದಾರೆ, ಬ್ರಹ್ಮಾರವರಿಗೆ ಅವರಿಂದ ಜ್ಞಾನವು ಸಿಗುತ್ತದೆ ನಂತರ ಅದನ್ನು ಪ್ರಚಾರ ಮಾಡಲಾಗುತ್ತದೆ. ಇದು ಈಶ್ವರೀಯ ಧರ್ಮಸ್ಥಾಪನೆ ಮಾಡುವ ಮೆಷಿನರಿಯಾಗಿದೆ. ದೇವಿ-ದೇವತಾಧರ್ಮವು ಬಹಳಷ್ಟು ಸುಖವನ್ನು ಕೊಡುವಂತಹದ್ದಾಗಿದೆ. ನೀವು ಮಕ್ಕಳಿಗೆ ತನ್ನ ಸತ್ಯಧರ್ಮದ ಅರಿವು ಸಿಕ್ಕಿದೆ. ನಮಗೆ ಭಗವಂತನೇ ಓದಿಸುತ್ತಿದ್ದಾರೆಂಬುದು ತಿಳಿದಿದೆ. ನಿಮಗೆ ಎಷ್ಟೊಂದು ಸಂತೋಷವಾಗುತ್ತದೆ! ನೀವು ಮಕ್ಕಳಿಗೆ ಅಪಾರ ಖುಷಿಯಾಗಬೇಕು ಏಕೆಂದರೆ ನಿಮಗೆ ಓದಿಸುವಂತಹವರು ಭಗವಂತನಾಗಿದ್ದಾರೆ, ಭಗವಂತನಂತೂ ನಿರಾಕಾರ ಶಿವನಾಗಿದ್ದಾರೆ, ಶ್ರೀಕೃಷ್ಣನಲ್ಲ. ತಂದೆಯು ಕುಳಿತು ತಿಳಿಸುತ್ತಾರೆ - ಸರ್ವರ ಸದ್ಗತಿದಾತ ಒಬ್ಬರೇ ತಂದೆಯಾಗಿದ್ದಾರೆ. ಸದ್ಗತಿಯೆಂದು ಸತ್ಯಯುಗಕ್ಕೆ ಹೇಳಲಾಗುತ್ತದೆ, ದುರ್ಗತಿಯೆಂದು ಕಲಿಯುಗಕ್ಕೆ ಹೇಳಲಾಗುತ್ತದೆ. ಹೊಸಯುಗಕ್ಕೆ ಹೊಸದು, ಹಳೆಯದಕ್ಕೆ ಹಳೆಯದೆಂದು ಹೇಳಲಾಗುತ್ತದೆ. ಈಗ ಜಗತ್ತು ಹಳೆಯದಾಗಲು 40 ಸಾವಿರ ವರ್ಷಗಳು ಬೇಕೆಂದು ತಿಳಿದಿದ್ದಾರೆ, ಎಷ್ಟೊಂದು ತಬ್ಬಿಬ್ಬಾಗಿಬಿಟ್ಟಿದ್ದಾರೆ! ಇವೆಲ್ಲಾ ಮಾತುಗಳನ್ನು ಒಬ್ಬ ತಂದೆಯ ವಿನಃ ಬೇರೆ ಯಾರೂ ತಿಳಿಸಿಕೊಡಲು ಸಾಧ್ಯವಿಲ್ಲ. ನಾನು ನೀವು ಮಕ್ಕಳಿಗೆ ರಾಜ್ಯಭಾಗ್ಯವನ್ನು ಕೊಟ್ಟು ಉಳಿದವರೆಲ್ಲರನ್ನೂ ಮನೆಗೆ ಕರೆದುಕೊಂಡು ಹೋಗುತ್ತೇನೆ. ಯಾರು ನನ್ನ ಮತದಂತೆ ನಡೆಯುತ್ತಾರೆಯೋ ಅವರೇ ದೇವತೆಗಳಾಗುತ್ತಾರೆ. ಇವೆಲ್ಲಾ ಮಾತುಗಳನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಹೊಸಬರು ಏನನ್ನು ತಿಳಿದುಕೊಳ್ಳುತ್ತಾರೆ!

ನೀವು ಮಾಲಿಗಳ ಕರ್ತವ್ಯವಾಗಿದೆ - ಹೂದೋಟವನ್ನು ತಯಾರು ಮಾಡುವುದು. ಮಾಲೀಕನಂತೂ ಸಲಹೆಯನ್ನು ನೀಡುತ್ತಾರೆ. ತಂದೆಯು ಹೊಸಬರನ್ನು ಮಿಲನ ಮಾಡಿ ಜ್ಞಾನವನ್ನು ಕೊಡುವುದಿಲ್ಲ, ಆ ಕೆಲಸ ಮಾಲಿಗಳದ್ದಾಗಿದೆ. ಬಾಬಾ ಕಲ್ಕತ್ತಾಕ್ಕೆ ಹೋಗುತ್ತಾರೆಂದರೆ ಮಕ್ಕಳು ತಿಳಿದುಕೊಳ್ಳುತ್ತಾರೆ - ಬಾಬಾನ ಜೊತೆ ನಮ್ಮ ಆಫಿಸರ್, ಮಿತ್ರ-ಸಂಬಂಧಿಗಳು ಮುಂತಾದವರನ್ನು ಬಾಬಾನ ಬಳಿ ಕರೆದುಕೊಂಡು ಹೋಗಬೇಕೆಂದು. ತಂದೆಯು ತಿಳಿಸುತ್ತಾರೆ - ಇದರಿಂದ ಅವರು ಏನೂ ತಿಳಿದುಕೊಳ್ಳುವುದಿಲ್ಲ. ಹೇಗೆ ಬುದ್ಧುಗಳನ್ನು ಮುಂದೆ ಕೂಡಿಸಿದ ಹಾಗೆ ಇರುತ್ತದೆ ಆದ್ದರಿಂದ ಹೊಸಬರನ್ನು ತಂದೆಯ ಮುಂದೆ ಕರೆದುಕೊಂಡು ಬರಬೇಡಿ ಎಂದು ಹೇಳುತ್ತಾರೆ. ಜ್ಞಾನವನ್ನು ತಿಳಿಸುವುದು ಮಾಲಿಗಳ ಕೆಲಸವಾಗಿದೆ. ತಂದೆಯು ಈ ರೀತಿ ಮಾಡಿ, ಈ ರೀತಿ ಮಾಡಿ ಎಂದು ಸಲಹೆ ನೀಡುತ್ತಿರುತ್ತಾರೆ, ಅವರೆಂದೂ ಹೊಸಬರೊಂದಿಗೆ ಮಿಲನ ಮಾಡುವುದಿಲ್ಲ. ಯಾರಾದರೂ ಅತಿಥಿಯಾಗಿ ಮನೆಗೆ ಬಂದಾಗ ನಾವು ದರ್ಶನ ಮಾಡುತ್ತೇವೆಂದು ಹೇಳುತ್ತಾರೆ. ನಮ್ಮನ್ನು ಮಿಲನ ಮಾಡಲು ಏಕೆ ಬಿಡುವುದಿಲ್ಲ? ಎಂದು ಕೇಳುತ್ತಾರೆ. ಶಂಕರಾಚಾರ್ಯರ ಬಳಿ ಎಷ್ಟೊಂದು ಮಂದಿ ಹೋಗುತ್ತಾರೆ, ಅವರಿಗೆ ಈಗ ಎಷ್ಟು ದೊಡ್ಡ ಸ್ಥಾನವಿದೆ! ಓದುಬರಹ ತಿಳಿದಿದ್ದಾರೆ ಅದರೂ ಸಹ ಜನ್ಮವನ್ನು ವಿಕಾರದಿಂದಲೇ ತೆಗೆದುಕೊಳ್ಳುತ್ತಾರಲ್ಲವೆ. ನಿಮಿತ್ತರಾದವರು ಗದ್ದಿಯ ಮೇಲೆ ಯಾರನ್ನಾದರೂ ಕುಳ್ಳರಿಸುತ್ತಾರೆ, ಎಲ್ಲರದೂ ತನ್ನ-ತನ್ನದೇ ಆದ ಮತವಿದೆ! ತಂದೆಯು ತನ್ನ ಪರಿಚಯವನ್ನು ತಾನೇ ಮಕ್ಕಳಿಗೆ ಕೊಡುತ್ತಾರೆ. ನಾನು ಕಲ್ಪ-ಕಲ್ಪದ ಈ ಹಳೆಯ ತನುವಿನಲ್ಲಿ (ಬ್ರಹ್ಮಾ) ಬರುತ್ತೇನೆ, ಇವರು ಸಹ ತನ್ನ ಜನ್ಮಗಳನ್ನು ತಿಳಿದುಕೊಂಡಿಲ್ಲ. ಶಾಸ್ತ್ರದಲ್ಲಿಯಾದರೂ ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಹಾಕಿಬಿಟ್ಟಿದ್ದಾರೆ. ಮನುಷ್ಯರು ಇಷ್ಟೊಂದು ಜನ್ಮವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ನಂತರ ಪ್ರಾಣಿಗಳು ಮುಂತಾದುದರ ಯೋನಿಗಳೆಲ್ಲವೂ ಸೇರಿ 84 ಲಕ್ಷವನ್ನಾಗಿ ಮಾಡಿಬಿಟ್ಟಿದ್ದಾರೆ. ಮನುಷ್ಯರಂತೂ ಏನೆಲ್ಲವನ್ನೂ ಕೇಳುತ್ತಾರೆಯೋ ಅದನ್ನು ಸತ್ಯ-ಸತ್ಯವೆಂದು ಹೇಳುತ್ತಿರುತ್ತಾರೆ. ಶಾಸ್ತ್ರಗಳಲ್ಲಿ ಭಕ್ತಿಮಾರ್ಗದ ಮಾತುಗಳೇ ಇವೆ. ಕಲ್ಕತ್ತಾದಲ್ಲಿ ದೇವಿಯನ್ನು ಬಹಳ ವಿಜೃಂಭಣೆಯಿಂದ ಸುಂದರವಾದ ಮೂರ್ತಿಯಾಗಿ ಮಾಡುತ್ತಾರೆ, ಶೃಂಗಾರ ಮಾಡುತ್ತಾರೆ ನಂತರ ಅದನ್ನು ಮುಳುಗಿಸಿಬಿಡುತ್ತಾರೆ. ಇದೂ ಸಹ ಗೊಂಬೆಯ ಪೂಜೆಯಾಗಿದೆ. ಈ ರೀತಿ ಮಾಡುವಂತಹವರು ಮಕ್ಕಳೇ ಆಗಿದ್ದಾರೆ. ಖಂಡಿತ ಮುಗ್ಧರಾಗಿದ್ದಾರೆ. ಇದು ನರಕವೆಂದು ನಿಮಗೆ ತಿಳಿದಿದೆ, ಸ್ವರ್ಗದಲ್ಲಂತೂ ಅಪಾರವಾದ ಸುಖವಿದೆ. ಈಗಲೂ ಯಾರಾದರೂ ಸತ್ತರೆ ಸ್ವರ್ಗಸ್ಥರಾದರೆಂದು ಹೇಳುತ್ತಾರೆ. ಅವಶ್ಯವಾಗಿ ಇಲ್ಲಿ ಯಾವಾಗಲೋ ಸ್ವರ್ಗವಿತ್ತು, ಈಗಿಲ್ಲ. ನರಕದ ನಂತರ ಮತ್ತೆ ಸ್ವರ್ಗಸ್ಥಾಪನೆಯಾಗುತ್ತದೆ. ಈ ಮಾತುಗಳನ್ನು ಸಹ ನೀವೇ ತಿಳಿದುಕೊಂಡಿದ್ದೀರಿ. ಮನುಷ್ಯರಂತೂ ಸ್ವಲ್ಪಮಾತ್ರವೂ ತಿಳಿದುಕೊಂಡಿಲ್ಲ. ಅಂದಾಗ ಹೊಸಬರೇನಾದರೂ ತಂದೆಯ ಮುಂದೆ ಕುಳಿತು ಏನು ಮಾಡುತ್ತಾರೆ! ಆದ್ದರಿಂದ ಮಾಲಿ ಬೇಕಾಗಿದೆ, ಪೂರ್ಣ ಪಾಲನೆಯನ್ನು ಕೊಡಲು, ಇಲ್ಲಂತೂ ಮಾಲಿಗಳು ಅನೇಕರು ಬೇಕು, ವೈದ್ಯಕೀಯ ಕಾಲೇಜಿನಲ್ಲಿ ಯಾರಾದರೂ ಹೊಸಬರು ಹೋಗಿ ಕುಳಿತುಕೊಂಡಾಗ ಅವರಿಗೆ ಏನೂ ಅರ್ಥವಾಗುವುದಿಲ್ಲ. ಈ ಜ್ಞಾನವೂ ಸಹ ಹೊಸದಾಗಿದೆ. ನಾನು ಬಂದಿರುವುದೇ ಎಲ್ಲರನ್ನೂ ಪಾವನ ಮಾಡಲೆಂದು ತಂದೆಯು ಹೇಳುತ್ತಾರೆ. ನನ್ನನ್ನು ನೆನಪು ಮಾಡಿದ್ದೇ ಆದರೆ ಪಾವನರಾಗಿಬಿಡುತ್ತೀರಿ. ಈ ಸಮಯದಲ್ಲಿ ಎಲ್ಲರೂ ತಮೋಪ್ರಧಾನ ಆತ್ಮರಾಗಿದ್ದಾರೆ ಆದ್ದರಿಂದ ಆತ್ಮ ಸೋ ಪರಮಾತ್ಮ ಎಂದು ಹೇಳಿಬಿಡುತ್ತಾರೆ. ಎಲ್ಲರಲ್ಲಿಯೂ ಪರಮಾತ್ಮ ಇದ್ದಿದ್ದೇ ಆದರೆ ತಂದೆಯು ಕುಳಿತು ಇಂತಹವರೊಂದಿಗೆ ತಲೆ ಚೆಚ್ಚಿಕೊಳ್ಳುತ್ತಾರೆಯೇ! ಮುಳ್ಳುಗಳಿಂದ ಹೂಗಳನ್ನಾಗಿ ಮಾಡುವುದು ನೀವು ಮಾಲಿಗಳ ಕೆಲಸವಾಗಿದೆ. ಬ್ರಹ್ಮಾರವರ ದಿನ ಮತ್ತು ಬ್ರಹ್ಮಾರವರ ರಾತ್ರಿ ಎಂದು ಗಾಯನ ಮಾಡಲಾಗಿದೆ. ಪ್ರಜಾಪಿತ ಬ್ರಹ್ಮಾರವರಿಗೆ ಅವಶ್ಯವಾಗಿ ಮಕ್ಕಳಂತೂ ಇರುತ್ತಾರಲ್ಲವೆ. ಇಷ್ಟೆಲ್ಲಾ ಬ್ರಹ್ಮಾಕುಮಾರ-ಕುಮಾರಿಯರಿದ್ದಾರೆ, ಇವರ ಬ್ರಹ್ಮಾ ಯಾರು? ಎಂಬುದು ಇಷ್ಟೂ ಸಹ ಬುದ್ಧಿಯಿಲ್ಲ. ಅರೆ! ಪ್ರಜಾಪಿತರವರಂತೂ ಪ್ರಸಿದ್ಧವಾಗಿದ್ದಾರೆ, ಅವರ ಮೂಲಕವೇ ಬ್ರಾಹ್ಮಣಧರ್ಮವು ಸ್ಥಾಪನೆಯಾಗುತ್ತದೆ. ಬ್ರಹ್ಮ ದೇವತಾಯ ನಮಃ ಎಂದು ಹೇಳಲಾಗುತ್ತದೆ. ತಂದೆಯು ನೀವು ಮಕ್ಕಳನ್ನು ಬ್ರಾಹ್ಮಣರನ್ನಾಗಿ ಮಾಡಿ ಮತ್ತೆ ದೇವತೆಗಳನ್ನಾಗಿ ಮಾಡುತ್ತಾರೆ.

ಹೊಸ-ಹೊಸ ಜ್ಞಾನಬಿಂದುಗಳನ್ನು ತಂದೆಯೇ ತಿಳಿಸುತ್ತಾರೆ, ಅದನ್ನು ತಮ್ಮ ಬಳಿ ನೋಟ್ ಮಾಡಿಕೊಳ್ಳುವ ಉತ್ಸಾಹ ಮಕ್ಕಳಿಗಿರಬೇಕು. ಯಾವ ಮಕ್ಕಳು ಚೆನ್ನಾಗಿ ತಿಳಿದುಕೊಳ್ಳುತ್ತಾರೆಯೋ ಅವರಿಗೆ ನೋಟ್ಸ ಅನ್ನು ತೆಗೆದುಕೊಳ್ಳುವ ಬಹಳ ಉತ್ಸಾಹವಿರುತ್ತದೆ. ನೋಟ್ಸ್ ತೆಗೆದುಕೊಳ್ಳುವುದು ಬಹಳ ಒಳ್ಳೆಯದು ಇಲ್ಲವೆಂದರೆ ಇದೆಲ್ಲವೂ ಬುದ್ಧಿಯಲ್ಲಿರುವುದು ಬಹಳ ಕಷ್ಟವಾಗುತ್ತದೆ. ನೋಟ್ಸ್ ಮಾಡಿಕೊಂಡು ಅನ್ಯರಿಗೆ ತಿಳಿಸಿಕೊಡಬೇಕು. ಕೇವಲ ಬರೆದುಕೊಂಡು ಪುಸ್ತಕವನ್ನು ಅಲ್ಲಿಯೇ ಬಿಡುವುದು ಸರಿಯಲ್ಲ. ಹೊಸ-ಹೊಸ ಜ್ಞಾನಬಿಂದುಗಳು ಸಿಕ್ಕಿದರೆ ಹಳೆಯ ಜ್ಞಾನಬಿಂದುಗಳು ಬದಿಗೊತ್ತಲ್ಪಡುತ್ತದೆ. ಶಾಲೆಯಲ್ಲಿಯೂ ಸಹ ಓದಲು ಹೋದಾಗ ಮೊದಲನೇ ದರ್ಜೆಯ ಪುಸ್ತಕಗಳು ಹಾಗೆಯೇ ಇರುತ್ತವೆ. ಯಾವಾಗ ನೀವು ತಿಳಿಸುತ್ತೀರೆಂದರೆ ಕೊನೆಯಲ್ಲಿ ತಿಳಿಸಿ ಮನ್ಮನಾಭವ. ತಂದೆಯನ್ನು ಮತ್ತು ಸೃಷ್ಟಿಚಕ್ರವನ್ನು ನೆನಪು ಮಾಡಿ. ಮುಖ್ಯಮಾತು ತಂದೆಯನ್ನು ನೆನಪು ಮಾಡುವುದಾಗಿದೆ. ಇದನ್ನೇ ಯೋಗಾಗ್ನಿಯೆಂದು ಕರೆಯಲಾಗುತ್ತದೆ. ಭಗವಂತ ಜ್ಞಾನಸಾಗರನಾಗಿದ್ದಾರೆ, ಮನುಷ್ಯರು ಶಾಸ್ತ್ರಗಳ ಸಾಗರರಾಗಿದ್ದಾರೆ. ತಂದೆಯು ಯಾವುದೇ ಶಾಸ್ತ್ರವನ್ನು ಹೇಳುವುದಿಲ್ಲ. ಅವರೂ ಶಾಸ್ತ್ರವನ್ನು ಹೇಳಿದರೆ ಬಾಕಿ ಭಗವಂತ ಮತ್ತು ಮನುಷ್ಯರಲ್ಲಿ ವ್ಯತ್ಯಾಸವೇನು ಉಳಿಯಿತು? ನಾನು ಭಕ್ತಿಮಾರ್ಗದ ಶಾಸ್ತ್ರಗಳ ಸಾರವನ್ನು ನಿಮಗೆ ತಿಳಿಸಿಕೊಡುತ್ತೇನೆ ಎಂದು ತಂದೆಯು ತಿಳಿಸುತ್ತಾರೆ.

ಪುಂಗಿ ಊದುವವರು ಸರ್ಪವನ್ನು ಹಿಡಿದುಕೊಂಡು ಅದರ ಹಲ್ಲುಗಳನ್ನು ತೆಗೆದುಹಾಕುತ್ತಾರೆ. ತಂದೆಯೂ ಸಹ ವಿಷವನ್ನು ಕುಡಿಯುವುದರಿಂದ ತಮ್ಮನ್ನು ಬಿಡಿಸಿಬಿಡುತ್ತಾರೆ. ಇದೇ ವಿಷದಿಂದಲೇ ಮನುಷ್ಯರು ಪತಿತರಾಗಿದ್ದಾರೆ. ಇದನ್ನು ಬಿಟ್ಟುಬಿಡಿ ಎಂದು ತಂದೆಯು ಹೇಳಿದರೂ ಸಹ ಬಿಡುವುದಿಲ್ಲ. ತಂದೆಯು ಸುಂದರರನ್ನಾಗಿ ಮಾಡುತ್ತಾರೆ, ಆದರೂ ಸಹ ಬಿದ್ದು ಕಪ್ಪು ಮುಖವನ್ನಾಗಿ ಮಾಡಿಕೊಳ್ಳುತ್ತಾರೆ. ತಂದೆಯು ತಾವು ಮಕ್ಕಳನ್ನು ಜ್ಞಾನಚಿತೆಯ ಮೇಲೆ ಕುಳ್ಳರಿಸಲು ಬಂದಿದ್ದಾರೆ. ಜ್ಞಾನಚಿತೆಯ ಮೇಲೆ ಕುಳಿತುಕೊಳ್ಳುವುದರಿಂದ ನೀವು ವಿಶ್ವದ ಮಾಲೀಕರು, ಜಗಜ್ಜೀತರಾಗಿಬಿಡುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ನಾವು ಸತ್ಯಧರ್ಮದ ಸ್ಥಾಪನೆ ಮಾಡಲು ನಿಮಿತ್ತರಾಗಿದ್ದೇವೆಂದು ಸದಾ ಖುಷಿಯಿರಲಿ. ಸ್ವಯಂ ಭಗವಂತನು ನಮಗೆ ಓದಿಸುತ್ತಾ ಇದ್ದಾರೆ, ನಮ್ಮ ದೇವಿ-ದೇವತಾಧರ್ಮವು ಬಹಳ ಸುಖವನ್ನು ಕೊಡುವಂತಹದ್ದಾಗಿದೆ.

2. ಮಾಲಿಗಳಾಗಿ ಮುಳ್ಳನ್ನು ಹೂವನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ. ಪೂರ್ಣ ಪಾಲನೆಯನ್ನು ಮಾಡಿ ತಂದೆಯ ಮುಂದೆ ಕರೆತರಬೇಕು. ಪರಿಶ್ರಮಪಡಬೇಕು.

ವರದಾನ:
ಹಳೆಯ ದೇಹ ಮತ್ತು ಪ್ರಪಂಚವನ್ನು ಮರೆಯುವಂತಹ ಬಾಪ್ದಾದಾರವರ ಹೃದಯ ಸಿಂಹಾಸನಾಧಿಕಾರಿ ಭವ

ಸಂಗಮಯುಗ ಶ್ರೇಷ್ಠಾತ್ಮರ ಸ್ಥಾನವಿರುವುದೇ ಬಾಪ್ದಾದಾರವರ ಹೃದಯ ಸಿಂಹಾಸನವಾಗಿದೆ. ಇಂತಹ ಸಿಂಹಾಸನವು ಇಡೀಕಲ್ಪದಲ್ಲಿಯೂ ಸಿಗಲು ಸಾಧ್ಯವಿಲ್ಲ. ವಿಶ್ವದ ರಾಜ್ಯದ ಅಥವಾ ಸ್ಟೇಟ್ನ ರಾಜ್ಯಸಿಂಹಾಸನವನ್ನಂತು ಸಿಗುತ್ತಿರುತ್ತದೆ ಆದರೆ ಈ ಸಿಂಹಾಸನವು ಸಿಗುವುದಿಲ್ಲ. ಇದು ಇಷ್ಟು ವಿಶಾಲವಾದ ಸಿಂಹಾಸನವಾಗಿದೆ, ಅದರಲ್ಲಿ ನಡೆಯಿರಿ ಸುತ್ತಾಡಿ, ಆಹಾರ ಸೇವನೆ ಮಾಡಿರಿ ಮಲಗಿರಿ ಆದರೆ ಸದಾ ಸಿಂಹಾಸನಾಧಿಕಾರಿಯಾಗಿರಲು ಸಾಧ್ಯವಿದೆ. ಯಾವ ಮಕ್ಕಳು ಸದಾ ಬಾಪ್ದಾದಾರವರ ಹೃದಯಸಿಂಹಾಸನಾಧಿಕಾರಿ ಆಗಿರುತ್ತಾರೆಯೋ, ಅವರು ಈ ಹಳೆಯ ದೇಹ ಹಾಗೂ ದೇಹದ ಪ್ರಪಂಚದಿಂದ ವಿಸ್ಮೃತರಾಗಿರುತ್ತಾರೆ, ಇದನ್ನು ನೋಡುತ್ತಿದ್ದರೂ ನೋಡುತ್ತಿರುವುದಿಲ್ಲ.

ಸ್ಲೋಗನ್:
ಅಲ್ಪಕಾಲದ ಹೆಸರು, ಮಾನ್ಯತೆ, ಸ್ಥಾನದ ಹಿಂದೆ ಓಡುವುದು ಅರ್ಥಾತ್ ನೆರಳಿನ ಹಿಂದೆ ಹೋಗುವುದಾಗಿದೆ.

ಅವ್ಯಕ್ತ ಸೂಚನೆ: ಏಕಾಂತಪ್ರಿಯರಾಗಿ ಏಕತೆ ಮತ್ತು ಏಕಾಗ್ರತೆಯನ್ನು ತಮ್ಮದಾಗಿಸಿಕೊಳ್ಳಿ

ಹೇಗೆ ಯಾವುದೋ ಹೊಸ ಆವಿಷ್ಕಾರವೂ ಅಂಡರ್ಗೌಂಡ್ನಲ್ಲಿ ಹೋಗುವುದರಿಂದ ಮಾಡಬಹುದು. ಹಾಗೆಯೇ ನೀವು ಸಹ ಎಷ್ಟು ಅಂಡರ್ಗೌಂಡ್ ಅರ್ಥಾತ್ ಅಂತರ್ಮುಖಿಯಾಗಿರುವಿರಿ ಅಷ್ಟು ಹೊಸ-ಹೊಸ ಆವಿಷ್ಕಾರ ಅಥವಾ ಯೋಜನೆಗಳನ್ನು ಮಾಡಬಹುದು. ಅಂಡರ್ಗೌಂಡ್ ಇರುವುದರಿಂದ ಒಂದು ವಾಯುಮಂಡಲದಿಂದ ಬಚಾವವಾಗುತ್ತಾರೆ, ಇನ್ನೊಂದು ಏಕಾಂತ ಪ್ರಾಪ್ತಿಯಾಗುವುದರಿಂದ ಮನನ ಶಕ್ತಿಯು ಹೆಚ್ಚಾಗುತ್ತದೆ. ಮೂರನೇಯದು ಯಾವುದೇ ಮಾಯೆಯ ವಿಘ್ನಗಳಿಂದ ಸುರಕ್ಷಿತಯ ಸಾಧನವಾಗಿಬಿಡುತ್ತದೆ.