18.04.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಮ್ಮ
ಮೇಲೆ ದಯೆ ತೋರಿಸಿಕೊಳ್ಳಿ, ತಂದೆಯು ಕೊಡುವ ಮತದಂತೆ ನಡೆಯಿರಿ ಆಗ ಖುಷಿಯಿರುವುದು, ಮಾಯೆಯ
ಶಾಪದಿಂದ ಸುರಕ್ಷಿತರಾಗಿರುತ್ತೀರಿ”
ಪ್ರಶ್ನೆ:
ಮಾಯೆಯ ಶಾಪವು
ಏಕೆ ತಗುಲುತ್ತದೆ? ಶಾಪಗ್ರಸ್ಥ ಆತ್ಮನ ಗತಿ ಏನಾಗುವುದು?
ಉತ್ತರ:
1. ತಂದೆ ಮತ್ತು
ವಿದ್ಯೆಯನ್ನು(ಜ್ಞಾನರತ್ನಗಳು) ನಿರಾಧಾರ ಮಾಡುವುದರಿಂದ, ತನ್ನ ಮತದಂತೆ ನಡೆಯುವುದರಿಂದ ಮಾಯೆಯ
ಶಾಪವು ತಗುಲುತ್ತದೆ. 2. ಆಸುರಿ ಚಲನೆಯಿದ್ದರೆ, ದೈವೀಗುಣಗಳನ್ನು ಧಾರಣೆ ಮಾಡದಿದ್ದರೆ ತಮ್ಮ ಮೇಲೆ
ನಿರ್ದಯಿಯಾಗುತ್ತಾರೆ, ಬುದ್ಧಿಗೆ ಬೀಗವು ಬೀಳುತ್ತದೆ, ಅಂತಹವರು ತಂದೆಯ ಹೃದಯವನ್ನೇರಲು
ಸಾಧ್ಯವಿಲ್ಲ.
ಓಂ ಶಾಂತಿ.
ಆತ್ಮೀಯ ಮಕ್ಕಳಿಗೆ ಈಗ ಈ ನಿಶ್ಚಯವಿದೆ - ನಾವು ಆತ್ಮಾಭಿಮಾನಿಗಳಾಗಬೇಕಾಗಿದೆ ಮತ್ತು ತಂದೆಯನ್ನು
ನೆನಪು ಮಾಡಬೇಕಾಗಿದೆ. ಮಾಯಾರೂಪಿ ರಾವಣನು ಶಾಪಗ್ರಸ್ತ, ದುಃಖಿಯನ್ನಾಗಿ ಮಾಡಿಬಿಡುತ್ತಾನೆ. ಶಾಪದ
ಶಬ್ಧವೇ ದುಃಖದ್ದಾಗಿದೆ, ಆಸ್ತಿಯ ಶಬ್ಧವು ಸುಖದ್ದಾಗಿದೆ. ಯಾವ ಮಕ್ಕಳು ಆಜ್ಞಾಕಾರಿ
ಪ್ರಾಮಾಣಿಕರಾಗಿದ್ದಾರೆಯೋ ಅವರು ಬಹಳ ಚೆನ್ನಾಗಿ ಅರಿತುಕೊಂಡಿದ್ದಾರೆ. ಯಾರು ಆಜ್ಞಾಕಾರಿಗಳಲ್ಲವೋ
ಅವರು ಮಕ್ಕಳೇ ಅಲ್ಲ. ಭಲೆ ತಮ್ಮ ಬಗ್ಗೆ ಏನಾದರೂ ತಿಳಿದುಕೊಂಡಿರಲಿ ಆದರೆ ತಂದೆಯ ಹೃದಯವನ್ನೇರಲು
ಸಾಧ್ಯವಿಲ್ಲ, ಆಸ್ತಿಯನ್ನೂ ಪಡೆಯಲು ಸಾಧ್ಯವಿಲ್ಲ. ಯಾರು ಮಾಯೆಯ ಮತದಂತೆ ನಡೆಯುತ್ತಾರೆ ಮತ್ತು
ತಂದೆಯನ್ನು ನೆನಪು ಮಾಡುವುದಿಲ್ಲವೋ ಅವರು ಯಾರಿಗೂ ತಿಳಿಸಲು ಸಾಧ್ಯವಿಲ್ಲ ಅಂದರೆ ತಮಗೆ ತಾವೇ
ಶಾಪಗ್ರಸ್ತರನ್ನಾಗಿ ಮಾಡಿಕೊಳ್ಳುತ್ತಾರೆಂದರ್ಥ. ಮಕ್ಕಳಿಗೆ ತಿಳಿದಿದೆ - ಮಾಯೆಯು ಬಹಳ
ಶಕ್ತಿಶಾಲಿಯಾಗಿದೆ, ಒಂದುವೇಳೆ ಬೇಹದ್ದಿನ ತಂದೆಯ ಮತವನ್ನು ಪಾಲಿಸಲಿಲ್ಲವೆಂದರೆ ಮಾಯೆಯ ಮತವನ್ನು
ಪಾಲಿಸುತ್ತಿದ್ದಾರೆಂದರ್ಥ. ಮಾಯೆಗೆ ವಶರಾಗಿಬಿಡುತ್ತಾರೆ. ಪ್ರಭುವಿನ ಆಜ್ಞೆಯನ್ನು ಶಿರಸಾವಹಿಸಿ.......
ಎಂದು ಗಾದೆ ಮಾತಿದೆಯಲ್ಲವೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಪುರುಷಾರ್ಥ ಮಾಡಿ. ತಂದೆಯನ್ನು
ನೆನಪು ಮಾಡಿ ಆಗ ಮಾಯೆಯ ಮಡಿಲಿನಿಂದ ಪ್ರಭುವಿನ ಮಡಿಲಿಗೆ ಬಂದುಬಿಡುತ್ತೀರಿ. ತಂದೆಯಂತೂ
ಬುದ್ಧಿವಂತರಿಗೂ ಬುದ್ಧಿವಂತನಾಗಿದ್ದಾರೆ. ತಂದೆಯ ಮತವನ್ನು ಪಾಲಿಸಲಿಲ್ಲವೆಂದರೆ ಬುದ್ಧಿಗೆ ಬೀಗವು
ಬೀಳುತ್ತದೆ. ಬೀಗವನ್ನು ತೆರೆಯುವವರು ತಂದೆಯೊಬ್ಬರೇ ಆಗಿದ್ದಾರೆ. ಶ್ರೀಮತದಂತೆ ನಡೆಯಲಿಲ್ಲವೆಂದರೆ
ಅಂತಹವರ ಗತಿಯೇನಾಗುವುದು! ಮಾಯೆಯ ಮತದ ಮೇಲೆ ನಡೆದರೆ ಯಾವ ಪದವಿಯನ್ನು ಪಡೆಯಲೂ ಸಾಧ್ಯವಿಲ್ಲ. ಭಲೆ
ಕೇಳುತ್ತಾರೆ ಆದರೆ ಧಾರಣೆ ಮಾಡಲೂ ಸಾಧ್ಯವಿಲ್ಲ, ಮಾಡಿಸಲೂ ಆಗುವುದಿಲ್ಲ ಅಂದಮೇಲೆ ಅವರ
ಗತಿಯೇನಾಗುವುದು! ತಂದೆಯಂತೂ ಬಡವರ ಬಂಧುವಾಗಿದ್ದಾರೆ. ಮನುಷ್ಯರು ಬಡವರಿಗೇ ದಾನ ಮಾಡುತ್ತಾರೆ
ಅಂದಾಗ ತಂದೆಯು ಬಂದು ಎಷ್ಟೊಂದು ಬೇಹದ್ದಿನ ದಾನ ಮಾಡುತ್ತಾರೆ! ಒಂದುವೇಳೆ ಶ್ರೀಮತದಂತೆ
ನಡೆಯದಿದ್ದರೆ ಒಮ್ಮೆಲೆ ಬುದ್ಧಿಗೆ ಬೀಗವು ಬೀಳುತ್ತದೆ ನಂತರ ಅವರು ಏನು ಪ್ರಾಪ್ತಿ
ಮಾಡಿಕೊಳ್ಳುತ್ತಾರೆ! ಶ್ರೀಮತದಂತೆ ನಡೆಯುವವರೇ ತಂದೆಯ ಮಕ್ಕಳಾದರು. ತಂದೆಯಂತೂ
ದಯಾಹೃದಯಿಯಾಗಿದ್ದಾರೆ. ಅವರಿಗೆ ತಿಳಿದಿದೆ - ಹೊರಗಡೆ ಹೋಗುತ್ತಿದ್ದಂತೆಯೇ ಮಾಯೆಯು ಒಮ್ಮೆಲೆ
ಮಕ್ಕಳನ್ನು ಸಮಾಪ್ತಿ ಮಾಡಿಬಿಡುವುದು. ಯಾರಾದರೂ ಅಪಘಾತವನ್ನು ಮಾಡಿಕೊಳ್ಳುತ್ತಾರೆಂದರೂ ತಮ್ಮ
ಸತ್ಯನಾಶ ಮಾಡಿಕೊಳ್ಳುತ್ತಾರೆ. ತಂದೆಯಂತೂ ತಿಳಿಸುತ್ತಲೇ ಇರುತ್ತಾರೆ - ತಮ್ಮ ಮೇಲೆ ದಯೆ
ತೋರಿಸಿಕೊಳ್ಳಿ, ಶ್ರೀಮತದಂತೆ ನಡೆಯಿರಿ, ತನ್ನ ಮತದಂತೆ ನಡೆಯಬೇಡಿ. ಶ್ರೀಮತದಂತೆ ನಡೆಯುವುದರಿಂದ
ಖುಷಿಯ ನಶೆಯೇರುವುದು. ಲಕ್ಷ್ಮೀ-ನಾರಾಯಣರ ಚಹರೆಯನ್ನು ನೋಡಿ, ಎಷ್ಟು ಪ್ರಸನ್ನತೆಯಿಂದ ಕೂಡಿದೆ!
ಅಂದಾಗ ಪುರುಷಾರ್ಥ ಮಾಡಿ ಅಂತಹ ಶ್ರೇಷ್ಠಪದವಿಯನ್ನು ಪಡೆಯಬೇಕಲ್ಲವೆ. ತಂದೆಯು ಅವಿನಾಶಿ
ಜ್ಞಾನರತ್ನಗಳನ್ನು ಕೊಡುತ್ತಾರೆ ಅಂದಮೇಲೆ ಅದನ್ನೇಕೆ ನಿರಾಕರಿಸಬೇಕು? ರತ್ನಗಳಿಂದ ಜೋಳಿಗೆಯನ್ನು
ತುಂಬಿಸಿಕೊಳ್ಳಬೇಕು. ಭಲೆ ಕೇಳುತ್ತಾರೆ, ಆದರೂ ಜೋಳಿಗೆಯು ತುಂಬುವುದಿಲ್ಲ ಏಕೆಂದರೆ ತಂದೆಯನ್ನು
ನೆನಪು ಮಾಡುವುದಿಲ್ಲ. ಆಸುರೀ ಚಲನೆಯಲ್ಲಿ ನಡೆಯುತ್ತಾರೆ. ತಮ್ಮ ಮೇಲೆ ದಯೆತೋರಿಸಿಕೊಳ್ಳಿ,
ದೈವೀಗುಣಗಳನ್ನು ಧಾರಣೆ ಮಾಡಿ ಎಂದು ತಂದೆಯು ಪದೇ-ಪದೇ ತಿಳಿಸುತ್ತಿರುತ್ತಾರೆ. ಮನುಷ್ಯರು ಆಸುರೀ
ಸಂಪ್ರದಾಯದವರಾಗಿದ್ದಾರೆ, ಅವರನ್ನೇ ತಂದೆಯು ಬಂದು ಸ್ವರ್ಗವಾಸಿಗಳನ್ನಾಗಿ ಮಾಡುತ್ತಾರೆ.
ಸ್ವರ್ಗಕ್ಕೆ ಫರಿಸ್ತಾನವೆಂದು ಕರೆಯಲಾಗುತ್ತದೆ. ಮನುಷ್ಯರು ಎಷ್ಟೊಂದು ಅಲೆದಾಡುತ್ತಿರುತ್ತಾರೆ.
ಸನ್ಯಾಸಿಗಳು ಮೊದಲಾದವರ ಬಳಿ ಹೋಗುತ್ತಾರೆ. ಇವರಿಂದ ಮನಃಶ್ಯಾಂತಿ ಸಿಗುವುದೆಂದು ತಿಳಿಯುತ್ತಾರೆ.
ವಾಸ್ತವದಲ್ಲಿ ಈ ಶಬ್ಧವು ತಪ್ಪಾಗಿದೆ, ಯಾವುದೇ ಅರ್ಥವಿಲ್ಲ. ಶಾಂತಿಯು ಆತ್ಮಕ್ಕೆ ಬೇಕಲ್ಲವೆ.
ಆತ್ಮವು ಸ್ವಯಂ ಶಾಂತಸ್ವರೂಪನಾಗಿದೆ. ಆತ್ಮಕ್ಕೆ ಶಾಂತಿಯು ಹೇಗೆ ಸಿಗುವುದೆಂದು ಕೇಳುವುದಿಲ್ಲ,
ಮನಃಶ್ಯಾಂತಿಯು ಹೇಗೆ ಸಿಗುವುದು? ಎಂದು ಕೇಳುತ್ತಾರೆ ಅಂದಾಗ ಮನಸ್ಸು ಎಂದರೇನು? ಬುದ್ಧಿ ಎಂದರೇನು?
ಆತ್ಮವೆಂದರೇನು? ಎಂಬುದೇನನ್ನೂ ಅರಿತುಕೊಂಡಿಲ್ಲ. ಏನನ್ನು ಹೇಳುತ್ತಾರೆ ಮತ್ತು ಮಾಡುತ್ತಾರೆಯೋ ಅದು
ಭಕ್ತಿಮಾರ್ಗದ್ದಾಗಿದೆ. ಭಕ್ತಿಮಾರ್ಗದವರು ಏಣಿಯನ್ನಿಳಿಯುತ್ತಾ, ತಮೋಪ್ರಧಾನರಾಗುತ್ತಾ ಹೋಗುತ್ತಾರೆ.
ಭಲೆ ಯಾರಿಗಾದರೂ ಹಣ, ಅಂತಸ್ತು ಎಲ್ಲವೂ ಇರಬಹುದು ಆದರೂ ಸಹ ರಾವಣರಾಜ್ಯದಲ್ಲಿಯೇ ಇದ್ದಾರಲ್ಲವೆ.
ನೀವು ಮಕ್ಕಳು
ಚಿತ್ರಗಳನ್ನು ಕುರಿತು ತಿಳಿಸಿಕೊಡುವ ಬಹಳ ಒಳ್ಳೆಯ ಅಭ್ಯಾಸ ಮಾಡಬೇಕಾಗಿದೆ. ತಂದೆಯು ಎಲ್ಲಾ
ಸೇವಾಕೇಂದ್ರಗಳ ಮಕ್ಕಳಿಗೆ ತಿಳಿಸುತ್ತಾರೆ, ನಂಬರ್ವಾರಂತೂ ಇದ್ದಾರಲ್ಲವೆ. ಕೆಲವು ಮಕ್ಕಳು
ರಾಜ್ಯಪದವಿಯನ್ನು ಪಡೆಯುವ ಪುರುಷಾರ್ಥವನ್ನೇ ಮಾಡುವುದಿಲ್ಲ. ಅಂದಮೇಲೆ ಅವರು ಪ್ರಜೆಗಳಲ್ಲಿ ಹೋಗಿ
ಏನು ಆಗುವರು? ಸೇವೆ ಮಾಡಲಿಲ್ಲ, ನಾವು ಏನಾಗುತ್ತೇವೆ ಎಂದು ತಮ್ಮ ಮೇಲೆ ದಯೆ ಬರಲಿಲ್ಲವೆಂದರೆ
ನಾಟಕದಲ್ಲಿ ಅವರ ಪಾತ್ರವೇ ಅಷ್ಟೆಂದು ತಿಳಿಯಲಾಗುತ್ತದೆ. ತಮ್ಮ ಕಲ್ಯಾಣಕ್ಕಾಗಿ ಜ್ಞಾನದ ಜೊತೆ
ಯೋಗವೂ ಇರಬೇಕು. ಯೋಗದಲ್ಲಿಲ್ಲವೆಂದರೆ ಏನೂ ಕಲ್ಯಾಣವಾಗುವುದಿಲ್ಲ. ಯೋಗವಿಲ್ಲದೆ ಪಾವನರಾಗಲು
ಸಾಧ್ಯವಿಲ್ಲ. ಜ್ಞಾನವು ಬಹಳ ಸಹಜವಾಗಿದೆ ಆದರೆ ತಮ್ಮ ಕಲ್ಯಾಣವನ್ನೂ ಮಾಡಿಕೊಳ್ಳಬೇಕಾಗಿದೆ.
ಯೋಗದಲ್ಲಿ ಇಲ್ಲದೇ ಇರುವುದರಿಂದ ಏನೂ ಕಲ್ಯಾಣವಾಗುವುದಿಲ್ಲ. ಯೋಗವಿಲ್ಲದೆ ಹೇಗೆ ಪಾವನರಾಗುತ್ತೀರಿ?
ಜ್ಞಾನವೇ ಬೇರೆ, ಯೋಗವೇ ಬೇರೆಯಾಗಿದೆ. ಯೋಗದಲ್ಲಿ ಬಹಳಮಂದಿ ಪರಿಪಕ್ವವಾಗಿಲ್ಲ. ನೆನಪು ಮಾಡುವ
ಬುದ್ಧಿಯೇ ಬರುವುದಿಲ್ಲ. ಅಂದಮೇಲೆ ನೆನಪಿನ ಹೊರತು ವಿಕರ್ಮಗಳು ಹೇಗೆ ವಿನಾಶವಾಗುವುದು! ಮತ್ತೆ
ಬಹಳ ಶಿಕ್ಷೆಗಳನ್ನು ಅನುಭವಿಸಬೇಕಾಗುತ್ತದೆ, ಬಹಳ ಪಶ್ಚಾತ್ತಾಪ ಪಡಬೇಕಾಗುತ್ತದೆ. ಆ ಸ್ಥೂಲಸಂಪಾದನೆ
ಮಾಡಲಿಲ್ಲವೆಂದರೆ ಯಾವುದೇ ಶಿಕ್ಷೆಯನ್ನನುಭವಿಸಬೇಕಾಗುವುದಿಲ್ಲ ಆದರೆ ಇಲ್ಲಂತೂ ಪಾಪಗಳ ಹೊರೆಯು
ತಲೆಯ ಮೇಲಿದೆ ಅದರಿಂದ ಬಹಳ ಶಿಕ್ಷೆಯನ್ನನುಭವಿಸಬೇಕಾಗುತ್ತದೆ. ಮಕ್ಕಳಾಗಿಯೂ ಸಹ
ಯೋಗ್ಯರಾಗಿಲ್ಲವೆಂದರೆ ಬಹಳ ಶಿಕ್ಷೆಯು ಸಿಗುತ್ತದೆ. ತಂದೆಯಂತೂ ತಿಳಿಸುತ್ತಾರೆ - ಮಕ್ಕಳೇ, ತಮ್ಮ
ಮೇಲೆ ದಯೆ ತೋರಿಸಿಕೊಳ್ಳಿ, ಯೋಗದಲ್ಲಿರಿ ಇಲ್ಲವಾದರೆ ಸುಮ್ಮನೆ ತಮ್ಮ ಘಾತ ಮಾಡಿಕೊಳ್ಳುತ್ತೀರಿ.
ಹೇಗೆ ಯಾರಾದರೂ ಮೇಲಿನಿಂದ ಬೀಳುತ್ತಾರೆ, ಸತ್ತುಹೋಗಲಿಲ್ಲವೆಂದರೆ ಅವರು ಆಸ್ಪತ್ರೆಯಲ್ಲಿಯೇ
ಬಿದ್ದಿರುವರು, ಚೀರಾಡುತ್ತಾ ಇರುವರು. ಪಾಪ! ತಮಗೆ ಪೆಟ್ಟು ಕೊಟ್ಟುಕೊಂಡರು ಸಾಯಲಿಲ್ಲವೆಂದರೆ
ಅವರಿಂದೇನು ಪ್ರಯೋಜನ? ಇಲ್ಲಿಯೂ ಹಾಗೆಯೇ ಬಹಳ ಮೇಲೇರಬೇಕಾಗಿದೆ. ಆದ್ದರಿಂದ ಶ್ರೀಮತದಂತೆ
ನಡೆಯಲಿಲ್ಲವೆಂದರೆ ಕೆಳಗೆ ಬೀಳುತ್ತಾರೆ. ಮುಂದೆಹೋದಂತೆ ಪ್ರತಿಯೊಬ್ಬರೂ ನಾವು ಏನು ಪದವಿಯನ್ನು
ಪಡೆಯುತ್ತೇವೆಂದು ತಮ್ಮನ್ನು ನೋಡಿಕೊಳ್ಳುವಿರಿ. ಯಾರು ಸೇವಾಧಾರಿ, ಆಜ್ಞಾಕಾರಿಗಳಿದ್ದಾರೆಯೋ ಆವರೇ
ಶ್ರೇಷ್ಠಪದವಿಯನ್ನು ಪಡೆಯುತ್ತಾರೆ ಇಲ್ಲವೆಂದರೆ ಹೋಗಿ ದಾಸ-ದಾಸಿಯರಾಗುತ್ತಾರೆ ಮತ್ತು ಬಹಳ ಕಠಿಣ
ಶಿಕ್ಷೆಯು ಸಿಗುವುದು. ಆ ಸಮಯದಲ್ಲಿ ಇಬ್ಬರೂ ಧರ್ಮರಾಜನ ರೂಪವಾಗಿಬಿಡುತ್ತಾರೆ ಆದರೆ ಮಕ್ಕಳು
ಇದನ್ನು ತಿಳಿದುಕೊಂಡಿಲ್ಲ, ತಪ್ಪುಗಳನ್ನು ಮಾಡುತ್ತಿರುತ್ತಾರೆ. ಶಿಕ್ಷೆಯನ್ನಂತೂ ಇಲ್ಲಿ
ಅನುಭವಿಸಬೇಕಾಗುವುದಲ್ಲವೆ. ಯಾರೆಷ್ಟು ಸರ್ವೀಸ್ ಮಾಡುವರೋ ಅಷ್ಟು ಶೋಭಿಸುವರು. ಇಲ್ಲವೆಂದರೆ
ಅಂತಹವರೇನೂ ಪ್ರಯೋಜನವಿಲ್ಲ. ಅನ್ಯರ ಕಲ್ಯಾಣ ಮಾಡಲಿಲ್ಲವೆಂದರೆ ತಮ್ಮ ಕಲ್ಯಾಣವನ್ನಾದರೂ
ಮಾಡಿಕೊಳ್ಳಿ ಎಂದು ತಂದೆಯು ಹೇಳುತ್ತಾರೆ. ಬಂಧನದಲ್ಲಿರುವ ಮಾತೆಯರೂ ಸಹ ತಮ್ಮ ಕಲ್ಯಾಣ
ಮಾಡಿಕೊಳ್ಳುತ್ತಿರುತ್ತಾರೆ. ತಂದೆಯು ಪುನಃ ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ಎಚ್ಚರದಿಂದಿರಿ,
ನಾಮ-ರೂಪದಲ್ಲಿ ಸಿಕ್ಕಿಹಾಕಿಕೊಳ್ಳುವುದರಿಂದ ಮಾಯೆಯು ಬಹಳ ಮೋಸ ಮಾಡುತ್ತದೆ. ಬಾಬಾ, ಇಂತಹವರನ್ನು
ನೋಡಿದಾಗ ನಮಗೆ ಕೆಟ್ಟಸಂಕಲ್ಪಗಳು ನಡೆಯುತ್ತವೆ ಎಂದು ಹೇಳುತ್ತಾರೆ. ಇದಕ್ಕೆ ತಂದೆಯು
ತಿಳಿಸುತ್ತಾರೆ - ಮಕ್ಕಳೇ, ಕರ್ಮೇಂದ್ರಿಯಗಳಿಂದ ಎಂದೂ ಕೆಟ್ಟಕೆಲಸಗಳನ್ನು ಮಾಡಬಾರದು. ಯಾರಾದರೂ
ನಡವಳಿಕೆಯು ಸರಿಯಿಲ್ಲದಿರುವ ಕೊಳಕು ವ್ಯಕ್ತಿಗಳು ಸೇವಾಕೇಂದ್ರಕ್ಕೆ ಬರುತ್ತಾರೆಂದರೆ ಅವರನ್ನು
ಬರಮಾಡಿಕೊಳ್ಳಬಾರದು. ಶಾಲೆಯಲ್ಲಿ ಯಾರಾದರೂ ಕೆಟ್ಟಚಲನೆಯಲ್ಲಿ ನಡೆಯುತ್ತಾರೆಂದರೆ ಬಹಳಷ್ಟು ಪೆಟ್ಟು
ತಿನ್ನುತ್ತಾರೆ. ಇವರು ಇಂತಹ ನಡವಳಿಕೆಯಲ್ಲಿ ನಡೆದಿದ್ದಾರೆ ಆದ್ದರಿಂದ ಇವರನ್ನು ಶಾಲೆಯಿಂದ
ತೆಗೆದುಹಾಕಲಾಗುತ್ತಿದೆ ಎಂದು ಶಿಕ್ಷಕರು ಎಲ್ಲರ ಮುಂದೆ ತಿಳಿಸಿಬಿಡುತ್ತಾರೆ. ನಿಮ್ಮ
ಸೇವಾಕೇಂದ್ರಗಳಲ್ಲಿಯೂ ಇಂತಹ ಕೆಟ್ಟದೃಷ್ಟಿಯಿರುವವರು ಬರುತ್ತಾರೆಂದರೆ ಅವರನ್ನು ಓಡಿಸಬೇಕು.
ತಂದೆಯು ತಿಳಿಸುತ್ತಾರೆ - ಎಂದಿಗೂ ಕುದೃಷ್ಟಿಯಿರಬಾರದು. ಸೇವೆ ಮಾಡುವುದಿಲ್ಲ, ತಂದೆಯನ್ನು ನೆನಪು
ಮಾಡಲಿಲ್ಲವೆಂದರೆ ಅವಶ್ಯವಾಗಿ ಏನಾದರೊಂದು ವಿಕಾರವಿದೆ ಎಂದರ್ಥ. ಯಾರು ಚೆನ್ನಾಗಿ ಸೇವೆ ಮಾಡುವರೋ
ಅವರ ಹೆಸರು ಪ್ರಸಿದ್ಧವಾಗುತ್ತದೆ. ಸ್ವಲ್ಪವಾದರೂ ಸಂಕಲ್ಪಗಳು ಬಂದಿತು, ಕುದೃಷ್ಟಿಯಾಯಿತೆಂದರೆ
ಮಾಯೆಯ ಯುದ್ಧವಾಗುತ್ತದೆ ಎಂದು ತಿಳಿಯಬೇಕು, ಒಮ್ಮೆಲೆ ಬಿಟ್ಟುಬಿಡಬೇಕು ಇಲ್ಲವಾದರೆ ಅದು
ವೃದ್ಧಿಯನ್ನು ಹೊಂದಿ, ನಷ್ಟಗೊಳಿಸಿಬಿಡುತ್ತದೆ. ತಂದೆಯನ್ನು ನೆನಪು ಮಾಡುವುದರಿಂದ
ಸುರಕ್ಷಿತರಾಗಿರುತ್ತೀರಿ. ತಂದೆಯು ಎಲ್ಲಾ ಮಕ್ಕಳಿಗೆ ಎಚ್ಚರಿಕೆಯನ್ನು ನೀಡುತ್ತಾರೆ - ಮಕ್ಕಳೇ,
ಎಚ್ಚರದಿಂದಿರಿ. ತಮ್ಮ ಕುಲದ ಹೆಸರನ್ನು ಕೆಡಿಸಬೇಡಿ, ಯಾರಾದರೂ ಗಾಂಧರ್ವ ವಿವಾಹ ಮಾಡಿಕೊಂಡು
ಒಟ್ಟಿಗೆ ಇರುತ್ತಾರೆಂದರೆ ಎಷ್ಟೊಂದು ಹೆಸರು ತರುತ್ತಾರೆ, ಇನ್ನೂ ಕೆಲವರಂತೂ ಕೊಳಕಾಗಿಬಿಡುತ್ತಾರೆ.
ಇಲ್ಲಿ ನೀವು ತಮ್ಮ ಸದ್ಗತಿ ಮಾಡಿಕೊಳ್ಳಲು ಬಂದಿದ್ದೀರಿ, ದುರ್ಗತಿ ಮಾಡಿಕೊಳ್ಳುವುದಕ್ಕಲ್ಲ. ಅತೀ
ಕೆಟ್ಟದ್ದು ಕಾಮ ನಂತರ ಕ್ರೋಧವಾಗಿದೆ. ತಂದೆಯಿಂದ ಆಸ್ತಿಯನ್ನು ಪಡೆಯಲು ಬರುತ್ತಾರೆ ಆದರೆ ಮಾಯೆಯು
ಹೋರಾಟ ನಡೆಸಿ ಶಾಪವನ್ನು ಕೊಟ್ಟುಬಿಡುತ್ತದೆಯೆಂದರೆ ಒಮ್ಮೆಲೆ ಕೆಳಗೆ ಬೀಳುತ್ತಾರೆ ಅಂದರೆ ತಮಗೆ
ಶಾಪವನ್ನು ಕೊಟ್ಟುಕೊಳ್ಳುತ್ತಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಬಹಳ ಸಂಭಾಲನೆ
ಮಾಡಿಕೊಳ್ಳಬೇಕಾಗಿದೆ. ಯಾರಾದರೂ ಇಂತಹವರು ಬಂದರೆ ಅವರನ್ನು ಒಮ್ಮೆಲೆ ಕಳುಹಿಸಿಬಿಡಬೇಕು.
ಅಮೃತವನ್ನು ಕುಡಿಯಲು ಬಂದರು ಮತ್ತೆ ಹೊರಗೆ ಹೋಗಿ ಅಸುರರಾಗಿ ಕೆಟ್ಟಕೆಲಸ ಮಾಡಿದರೆಂದು
ತೋರಿಸುತ್ತಾರಲ್ಲವೆ. ಅಂತಹವರು ಮತ್ತೆ ಈ ಜ್ಞಾನವನ್ನು ಕೇಳಲು ಸಾಧ್ಯವಿಲ್ಲ, ಬುದ್ಧಿಗೆ ಬೀಗವು
ಬೀಳುತ್ತದೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ತಮ್ಮ ಸೇವೆಯಲ್ಲಿಯೇ ತತ್ಫರರಾಗಿರಬೇಕು. ತಂದೆಯ
ನೆನಪಿನಲ್ಲಿರುತ್ತಾ-ಇರುತ್ತಾ ಅಂತಿಮದಲ್ಲಿ ಮನೆಗೆ ಹೊರಟುಹೋಗಬೇಕಾಗಿದೆ. ರಾತ್ರಿಯ ಪ್ರಯಾಣಿಕನೇ
ಸುಸ್ತಾಗಬೇಡ....... ಎಂದು ಗೀತೆಯಿದೆಯಲ್ಲವೆ. ಈಗ ಆತ್ಮವು ಮನೆಗೆ ಹೋಗಬೇಕಾಗಿದೆ, ಆತ್ಮವೇ
ಪ್ರಯಾಣಿಕನಾಗಿದೆ, ಆತ್ಮಕ್ಕೇ ನಿತ್ಯವೂ ತಿಳಿಸಲಾಗುತ್ತದೆ, ಈಗ ನೀವು ಶಾಂತಿಧಾಮಕ್ಕೆ ಹೋಗುವ
ಪ್ರಯಾಣಿಕರಾಗಿದ್ದೀರಿ ಆದ್ದರಿಂದ ಈಗ ತಂದೆ, ಮನೆ ಮತ್ತು ಆಸ್ತಿಯನ್ನು ನೆನಪು ಮಾಡುತ್ತಾ ಇರಿ.
ನಾವು ಎಲ್ಲಿಯೂ ಮೋಸಹೋಗುತ್ತಿಲ್ಲವೆ? ನಾನು ನಮ್ಮ ತಂದೆಯನ್ನು ನೆನಪು ಮಾಡುತ್ತೇನೆಯೇ? ಎಂದು
ನೋಡಿಕೊಳ್ಳಬೇಕು.
ಶ್ರೇಷ್ಠಾತಿಶ್ರೇಷ್ಠ
ತಂದೆಯ ಕಡೆಯೇ ದೃಷ್ಟಿಯಿರಲಿ - ಇದು ಬಹಳ ಉನ್ನತವಾದ ಪುರುಷಾರ್ಥವಾಗಿದೆ. ತಂದೆಯು ತಿಳಿಸುತ್ತಾರೆ
- ಮಕ್ಕಳೇ, ಕುದೃಷ್ಟಿಯನ್ನು ಬಿಟ್ಟುಬಿಡಿ. ದೇಹಾಭಿಮಾನವೆಂದರೆ ಕುದೃಷ್ಟಿ, ದೇಹೀ-ಅಭಿಮಾನವೆಂದರೆ
ಶುದ್ಧದೃಷ್ಟಿ. ಅಂದಾಗ ಮಕ್ಕಳ ದೃಷ್ಟಿಯು ತಂದೆಯ ಕಡೆಯಿರಬೇಕು. ಆಸ್ತಿಯು ಬಹಳ ಉನ್ನತವಾಗಿದೆ -
ವಿಶ್ವದ ರಾಜ್ಯಭಾಗ್ಯವು ಕಡಿಮೆ ಮಾತೇನು! ಈ ವಿದ್ಯೆಯಿಂದ, ಯೋಗದಿಂದ ವಿಶ್ವದ ರಾಜ್ಯಭಾಗ್ಯವು
ಸಿಗುತ್ತದೆಯೆಂದು ಯಾರಿಗೂ ಸ್ವಪ್ನದಲ್ಲಿಯೂ ಇರುವುದಿಲ್ಲ, ಓದಿ ಶ್ರೇಷ್ಠಪದವಿಯನ್ನು
ಪಡೆಯುವಿರೆಂದರೆ ತಂದೆಯೂ ಖುಷಿಯಾಗುವರು, ಶಿಕ್ಷಕನೂ ಖುಷಿಯಾಗುವರು, ಸದ್ಗುರುವಿಗೂ ಖುಷಿಯಾಗುವುದು.
ತಂದೆಯನ್ನು ನೆನಪು ಮಾಡುತ್ತಿದ್ದರೆ ತಂದೆಯೂ ಸಹ ಬಹಳ ಪ್ರೀತಿ ಮಾಡುತ್ತಾರೆ, ತಿಳಿಸುತ್ತಾರೆ -
ಮಕ್ಕಳೇ, ಈ ನಿರ್ಬಲತೆಗಳನ್ನು ತೆಗೆದುಬಿಡಿ ಇಲ್ಲವಾದರೆ ಸುಮ್ಮನೆ ಹೆಸರನ್ನು ಹಾಳುಮಾಡುತ್ತೀರಿ.
ತಂದೆಯಂತೂ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಸೌಭಾಗ್ಯವನ್ನು ರೂಪಿಸುತ್ತಾರೆ. ಭಾರತವಾಸಿಗಳೇ
100% ಸೌಭಾಗ್ಯಶಾಲಿಗಳಾಗಿದ್ದಿರಿ, ಮತ್ತೆ ಈಗ 100% ದೌರ್ಭಾಗ್ಯಶಾಲಿಗಳಾಗಿದ್ದೀರಿ ಮತ್ತೆ
ನಿಮ್ಮನ್ನೇ ಸೌಭಾಗ್ಯಶಾಲಿಗಳನ್ನಾಗಿ ಮಾಡಲು ಓದಿಸಲಾಗುತ್ತಿದೆ.
ತಂದೆಯು ತಿಳಿಸಿದ್ದಾರೆ
- ಯಾರು ಧರ್ಮದ ಹಿರಿಯ ವ್ಯಕ್ತಿಗಳಿದ್ದಾರೆಯೋ ಅವರೂ ಸಹ ನಿಮ್ಮ ಬಳಿ ಬರುತ್ತಾರೆ, ಯೋಗವನ್ನು ಕಲಿತು
ಹೋಗುತ್ತಾರೆ. ಮ್ಯೂಸಿಯಂನಲ್ಲಿ ಯಾವ ಪ್ರವಾಸಿಗರು ಬರುತ್ತಾರೆಯೋ ಅವರಿಗೂ ಸಹ ನೀವು ತಿಳಿಸಿಕೊಡಿ -
ಈಗ ಸ್ವರ್ಗದ ದ್ವಾರವು ತೆರೆಯಲಿದೆ. ಕಲ್ಪವೃಕ್ಷದ ಬಗ್ಗೆ ತಿಳಿಸಿಕೊಡಿ, ನೋಡಿ ನೀವು ಈ ಸಮಯದಲ್ಲಿ
ಬರುತ್ತೀರಿ. ಭಾರತವಾಸಿಗಳ ಪಾತ್ರವು ಈ ಸಮಯದಲ್ಲಿದೆ. ನೀವು ಈ ಜ್ಞಾನವನ್ನು ಕೇಳುತ್ತೀರಿ ಅಂದಮೇಲೆ
ತಮ್ಮ ದೇಶದಲ್ಲಿಯೂ ಹೋಗಿ ತಂದೆಯನ್ನು ನೆನಪು ಮಾಡಿದರೆ ತಮೋಪ್ರಧಾನರಿಂದ
ಸತೋಪ್ರಧಾನರಾಗುತ್ತೀರೆಂಬುದನ್ನು ತಿಳಿಸಿಕೊಡಿ. ಯೋಗಕ್ಕಾಗಿ ಅವರು ಬಹಳ ಇಚ್ಛೆಯನ್ನಿಡುತ್ತಾರೆ.
ಹಠಯೋಗಿ ಸನ್ಯಾಸಿಗಳಂತೂ ಅವರಿಗೆ ಯೋಗವನ್ನು ಕಲಿಸಲು ಸಾಧ್ಯವಿಲ್ಲ. ನಿಮ್ಮ ಈಶ್ವರೀಯ ಸಂಸ್ಥೆಯೂ ಸಹ
ಹೊರಗಡೆ ಹೋಗುವುದು. ತಿಳಿಸಲು ಬಹಳ ಯುಕ್ತಿಯಿರಬೇಕು. ಯಾರು ಧರ್ಮಾತ್ಮರಿದ್ದಾರೆಯೋ ಅವರೂ ಸಹ
ಬರಬೇಕಾಗಿದೆ. ನಿಮ್ಮಿಂದ ಯಾರಾದರೂ ಒಬ್ಬರಾದರೂ ಬಹಳ ಚೆನ್ನಾಗಿ ಈ ಜ್ಞಾನವನ್ನು ತಿಳಿದುಕೊಂಡು
ಹೋದರೆ ಅವರೊಬ್ಬರಿಂದ ಎಷ್ಟೊಂದು ಮಂದಿ ತಿಳಿದುಕೊಳ್ಳುತ್ತಾರೆ! ಒಬ್ಬರ ಬುದ್ಧಿಯಲ್ಲಿ ಬಂದುಬಿಟ್ಟರೂ
ಸಹ ಅನೇಕ ಪತ್ರಿಕೆಗಳಲ್ಲಿಯೂ ಅವರು ಹಾಕುತ್ತಾರೆ. ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ ಇಲ್ಲವೆಂದರೆ
ತಂದೆಯ ನೆನಪು ಮಾಡುವುದನ್ನು ಹೇಗೆ ಕಲಿಯುವರು? ತಂದೆಯ ಪರಿಚಯವಂತೂ ಎಲ್ಲರಿಗೂ ಸಿಗುವುದು, ಅವರಿಂದ
ಯಾರಾದರೂ ಬಂದೇ ಬರುತ್ತಾರೆ. ಮ್ಯೂಸಿಯಂನಲ್ಲಿ ಬಹಳ ಹಳೆಯ ವಸ್ತುಗಳನ್ನು ನೋಡಲು ಹೋಗುತ್ತಾರೆ ಮತ್ತೆ
ಇಲ್ಲಿ ನಿಮ್ಮ ಹಳೆಯ ಜ್ಞಾನವನ್ನು ಕೇಳುತ್ತಾರೆ. ಅನೇಕರು ಬರುತ್ತಾರೆ. ಅವರಲ್ಲಿ ಕೆಲವರು ಬಹಳ
ಚೆನ್ನಾಗಿ ಅರಿತುಕೊಳ್ಳುತ್ತಾರೆ, ಇಲ್ಲಿಂದಲೇ ದೃಷ್ಟಿಯು ಸಿಗುವುದು ಅಥವಾ ಸಂಸ್ಥೆಯು ಹೊರದೇಶಕ್ಕೆ
ಹೋಗುವುದು. ತಂದೆಯನ್ನು ನೆನಪು ಮಾಡಿದರೆ ತಮ್ಮ ಧರ್ಮದಲ್ಲಿ ಶ್ರೇಷ್ಠಪದವಿಯನ್ನು ಪಡೆಯುತ್ತೀರೆಂದು
ನೀವು ತಿಳಿಸುತ್ತೀರಿ. ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಎಲ್ಲರೂ
ಕೆಳಗಿಳಿದುಬಿಟ್ಟಿದ್ದಾರೆ. ಕೆಳಗಿಳಿಯುವುದೆಂದರೆ ತಮೋಪ್ರಧಾನರಾಗುವುದು. ತಂದೆಯನ್ನು ನೆನಪು ಮಾಡಿ
ಎಂಬ ಮಾತನ್ನು ಪೆÇೀಪ್ ಮಹಾಶಯರೂ ಸಹ ತಿಳಿಸಲು ಸಾಧ್ಯವಿಲ್ಲ ಏಕೆಂದರೆ ಅವರು ತಂದೆಯನ್ನು
ಅರಿತುಕೊಂಡೇ ಇಲ್ಲ. ನಿಮ್ಮ ಬಳಿ ಬಹಳ ಒಳ್ಳೆಯ ಜ್ಞಾನವಿದೆ, ಬಹಳ ಸುಂದರವಾದ ಚಿತ್ರಗಳೂ
ಆಗುತ್ತಿರುತ್ತವೆ. ಸುಂದರವಾದ ವಸ್ತುವಿದ್ದರೆ ಮ್ಯೂಸಿಯಂ ಇನ್ನೂ ಸುಂದರವಾಗಿ ಕಾಣುವುದು, ನೋಡಲು
ಅನೇಕರು ಬರುತ್ತಾರೆ. ಎಷ್ಟು ದೊಡ್ಡ ಚಿತ್ರಗಳಿರುವುದೋ ಅಷ್ಟು ಚೆನ್ನಾಗಿ ತಿಳಿಸಿಕೊಡಬಹುದು. ನಾವು
ಈ ರೀತಿ ತಿಳಿಸಬೇಕೆಂಬ ಉತ್ಸುಕತೆಯಿರಬೇಕು. ಸದಾ ನಿಮ್ಮ ಬುದ್ಧಿಯಲ್ಲಿರಲಿ - ನಾವು
ಬ್ರಾಹ್ಮಣರಾಗಿದ್ದೇವೆ ಅಂದಮೇಲೆ ಎಷ್ಟು ಸೇವೆ ಮಾಡುತ್ತೇವೆಯೋ ಅಷ್ಟು ಮಾನ್ಯತೆ ಸಿಗುವುದು.
ಇಲ್ಲಿಯೂ ಮಾನ್ಯತೆ ಮತ್ತು ಅಲ್ಲಿಯೂ ಮಾನ್ಯತೆಯಿರುವುದು. ನೀವು ಪೂಜ್ಯರಾಗುತ್ತೀರಿ ಅಂದಾಗ ಈ
ಈಶ್ವರೀಯ ಜ್ಞಾನವನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಸರ್ವೀಸಿಗಾಗಿ
ಓಡುತ್ತಾ ಇರಿ. ತಂದೆಯು ಎಲ್ಲಿಗಾದರೂ ಸೇವೆಗೆ ಕಳುಹಿಸಲಿ, ಇದರಲ್ಲಿ ಕಲ್ಯಾಣವಿದೆ, ಇಡೀ ದಿನ
ಬುದ್ಧಿಯಲ್ಲಿ ಸೇವೆಯ ವಿಚಾರಗಳೂ ನಡೆಯುತ್ತಿರಬೇಕು. ವಿದೇಶಿಯರಿಗೂ ಸಹ ತಂದೆಯ ಪರಿಚಯ ಕೊಡಬೇಕಾಗಿದೆ,
ಪ್ರಿಯಾತಿಪ್ರಿಯ ತಂದೆಯನ್ನು ನೆನಪು ಮಾಡಿ, ಯಾವುದೇ ದೇಹಧಾರಿಗಳನ್ನು ಗುರುಗಳನ್ನಾಗಿ
ಮಾಡಿಕೊಳ್ಳಬೇಡಿ, ಎಲ್ಲರ ಸದ್ಗತಿದಾತನು ಅವರೊಬ್ಬರೇ ತಂದೆಯಾಗಿದ್ದಾರೆ. ಈಗ ಸಾಮೂಹಿಕ ಮೃತ್ಯುವು
ಸನ್ಮುಖದಲ್ಲಿ ನಿಂತಿದೆ. ಹೇಗೆ ಸಗಟು ಮತ್ತು ಚಿಲ್ಲರೆ ವ್ಯಾಪಾರವಿರುತ್ತದೆಯಲ್ಲವೆ. ತಂದೆಯು ಸಗಟು
ವ್ಯಾಪಾರಿಯಾಗಿದ್ದಾರೆ, 21 ಜನ್ಮಗಳಿಗಾಗಿ ವಿಶ್ವದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳಿ ಎಂದು
ಆಸ್ತಿಯನ್ನೂ ಅದೇರೀತಿ ಕೊಡುತ್ತಾರೆ. ಮುಖ್ಯವಾದ ಚಿತ್ರಗಳು ತ್ರಿಮೂರ್ತಿ, ಗೋಲ, ಕಲ್ಪವೃಕ್ಷ, ಏಣಿ,
ವಿರಾಟರೂಪದ ಚಿತ್ರ ಮತ್ತು ಗೀತೆಯ ಭಗವಂತ ಯಾರು?........ ಈ ಚಿತ್ರಗಳು ಬಹಳ ಸುಂದರವಾಗಿದೆ,
ಇದರಲ್ಲಿ ತಂದೆಯ ಪೂರ್ಣ ಮಹಿಮೆಯಿದೆ. ತಂದೆಯೇ ಕೃಷ್ಣನನ್ನು ಈ ರೀತಿ ಮಾಡಿದ್ದಾರೆ, ಈ ಆಸ್ತಿಯನ್ನು
ಪರಮಾತ್ಮನೇ ಕೊಟ್ಟರು. ಕಲಿಯುಗದಲ್ಲಿ ಎಷ್ಟು ಮನುಷ್ಯರಿದ್ದಾರೆ! ಸತ್ಯಯುಗದಲ್ಲಿ ಕೆಲವರೇ
ಇರುತ್ತಾರೆ! ಅಂದಮೇಲೆ ಇದನ್ನು ಅದಲುಬದಲು ಯಾರು ಮಾಡಿದರು? ಯಾರು ಸ್ವಲ್ಪವೂ ತಿಳಿದುಕೊಂಡಿಲ್ಲ
ಅಂದಾಗ ಪ್ರವಾಸಿಗರು ಹೆಚ್ಚಾಗಿ ದೊಡ್ಡ-ದೊಡ್ಡ ನಗರಗಳಿಗೆ ಹೋಗುತ್ತಾರೆ, ಅವರೂ ಸಹ ಬಂದು ತಂದೆಯ
ಪರಿಚಯವನ್ನು ಪಡೆಯುತ್ತಾರೆ. ಬಹಳಷ್ಟು ಸರ್ವೀಸಿನ ಅಂಶಗಳು ಸಿಗುತ್ತಿರುತ್ತವೆ. ವಿದೇಶದಲ್ಲಿಯೂ
ಹೋಗಬೇಕಾಗಿದೆ, ಒಂದುಕಡೆ ನೀವು ತಂದೆಯ ಪರಿಚಯವನ್ನು ಕೊಡುತ್ತಾ ಇರುತ್ತೀರಿ ಇನ್ನೊಂದು ಕಡೆ
ಹೊಡೆದಾಟಗಳು ನಡೆಯುತ್ತಾ ಇರುವುದು. ಸತ್ಯಯುಗದಲ್ಲಿ ಕೆಲವರೇ ಮನುಷ್ಯರಿರುತ್ತಾರೆ ಅಂದಮೇಲೆ
ಉಳಿದವರ ವಿನಾಶವಾಗುವುದಲ್ಲವೆ. ವಿಶ್ವದ ಇತಿಹಾಸ-ಭೂಗೋಳವು ಪುನರಾವರ್ತನೆಯಾಗುವುದಿದೆ. ಏನಾಯಿತೋ
ಅದೆಲ್ಲವೂ ಪುನಃ ಪರಿವರ್ತನೆಯಾಗುವುದು ಆದರೆ ಅನ್ಯರಿಗೆ ತಿಳಿಸುವ ಬುದ್ಧಿಯು ಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಸದಾ ಒಬ್ಬ
ತಂದೆಯ ಕಡೆಯೇ ದೃಷ್ಟಿಯಿಡಬೇಕು, ದೇಹೀ-ಅಭಿಮಾನಿಯಾಗುವ ಪುರುಷಾರ್ಥ ಮಾಡಿ. ಮಾಯೆಯ ಮೋಸದಿಂದ
ಪಾರಾಗಬೇಕಾಗಿದೆ. ಕುದೃಷ್ಟಿಯನ್ನಿಟ್ಟು ತಮ್ಮ ಹೆಸರನ್ನೆಂದೂ ಕೆಡಿಸಿಕೊಳ್ಳಬಾರದು.
2. ಸರ್ವೀಸಿಗಾಗಿ
ಓಡುತ್ತಿರಬೇಕಾಗಿದೆ. ಸೇವಾಧಾರಿ ಮತ್ತು ಆಜ್ಞಾಕಾರಿಗಳಾಗಬೇಕಾಗಿದೆ. ತಮ್ಮ ಮತ್ತು ಅನ್ಯರ ಕಲ್ಯಾಣ
ಮಾಡಬೇಕಾಗಿದೆ. ಯಾವುದೇ ಕೆಟ್ಟನಡುವಳಿಕೆಯಲ್ಲಿ ನಡೆಯಬಾರದು.
ವರದಾನ:
ಪೂರ್ಣವಿರಾಮದ
ಸ್ಥಿತಿಯ ಮೂಲಕ ಪ್ರಕೃತಿಯ ಏರುಪೇರುಗಳನ್ನು ಸ್ಟಾಪ್ ಮಾಡುವಂತಹ ಪ್ರಕೃತಿ ಪತಿ ಭವ
ವರ್ತಮಾನ ಸಮಯವು
ಏರುಪೇರುಗಳು ಹೆಚ್ಚಾಗುವ ಸಮಯವಾಗಿದೆ. ಅಂತಿಮ ಪರೀಕ್ಷೆಯಲ್ಲಿ ಒಂದು ಕಡೆ ಪ್ರಕೃತಿಯಿಂದ ಮತ್ತು
ಇನ್ನೊಂದು ಕಡೆ ಐದು ವಿಕಾರಗಳು ಭಯಾನಕ ರೂಪವಾಗುತ್ತದೆ. ತಮೋಗುಣಿ ಆತ್ಮರ ಯುದ್ಧ ಮತ್ತು ಹಳೆಯ
ಸಂಸ್ಕಾರ..... ಎಲ್ಲವೂ ಅಂತಿಮ ಸಮಯದಲ್ಲಿ ತನ್ನ ಅವಕಾಶವನ್ನು ತೆಗೆದುಕೊಳ್ಳುತ್ತದೆ. ಇಂತಹ
ಸಮಯದಲ್ಲಿ ಸಮಾವೇಶವಾಗುವ ಶಕ್ತಿಯ ಮೂಲಕ ಈಗೀಗ ಸಾಕಾರಿ, ಈಗೀಗ ಆಕಾರಿ ಮತ್ತು ಈಗೀಗ ನಿರಾಕಾರಿ
ಸ್ಥಿತಿಯಲ್ಲಿ ಸ್ಥಿತರಾಗುವ ಅಭ್ಯಾಸವಿರಬೇಕು. ನೋಡುತ್ತಿದ್ದರೂ ನೋಡಬಾರದು, ಕೇಳುತ್ತಿದ್ದರೂ
ಕೇಳಬಾರದು. ಯಾವಾಗ ಈ ರೀತಿ ಪೂರ್ಣವಿರಾಮ ಸ್ಥಿತಿಯಲ್ಲಿ ಇರುತ್ತೀರಿ, ಆಗ ಪ್ರಕೃತಿಜೀತರಾಗಿ
ಏರುಪೇರುಗಳನ್ನು ಸ್ಟಾಪ್ ಮಾಡಿಬಿಡಬಹುದು.
ಸ್ಲೋಗನ್:
ನಿರ್ವಿಘ್ನ
ರಾಜ್ಯಾಧಿಕಾರಿಯಾಗುವುದಕ್ಕಾಗಿ ನಿರ್ವಿಘ್ನ ಸೇವಾಧಾರಿಗಳಾಗಿರಿ.
ಅವ್ಯಕ್ತ ಸೂಚನೆ:
ಕಂಬೈಂಡ್ ರೂಪದ ಸ್ಮೃತಿಯಿಂದ ಸದಾ ವಿಜಯಿಯಾಗಿರಿ
ಸದಾ ಇದೇ ಸ್ಮೃತಿಯಿರಲಿ
ನಾನು ಆತ್ಮ ಆ ಪರಮ ಆತ್ಮನ ಜೊತೆ ಕಂಬೈಂಡ್ ಆಗಿದ್ದೇನೆ. ಪರಮ ಆತ್ಮ ನಾನಾತ್ಮನಿಲ್ಲದೇ ಇರಲು
ಸಾಧ್ಯವಿಲ್ಲ ಮತ್ತು ನಾನು ಸಹ ಪರಮ ಆತ್ಮನಿಲ್ಲದೇ ಬೇರೆ ಆಗಲು ಸಾಧ್ಯವಿಲ್ಲ. ಈ ರೀತಿ ಪ್ರತಿ
ಸೆಕೆಂಡ್ ಮಾಲೀಕನನ್ನು ಪ್ರತ್ಯಕ್ಷ ಅನುಭವ ಮಾಡುವುದರಿಂದ ಆತ್ಮಿಕ ಸುವಾಸನೆಯಲ್ಲಿ ಅವಿನಾಶಿ ಮತ್ತು
ಏಕರಸವಾಗಿರುವಿರಿ.