18.06.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಅವಗುಣಗಳನ್ನು ತೆಗೆಯುವ ಪೂರ್ಣ ಪುರುಷಾರ್ಥ ಮಾಡಿರಿ, ಯಾವ ಗುಣದ ಕೊರತೆಯಿದೆಯೋ ಅದರ ಚಾರ್ಟ್ನ್ನು ಇಡಿ, ಗುಣಗಳ ದಾನ ಮಾಡಿ ಆಗ ಗುಣವಂತರಾಗುತ್ತೀರಿ”

ಪ್ರಶ್ನೆ:
ಗುಣವಂತರಾಗಲು ಯಾವ ಮೊಟ್ಟ ಮೊದಲಿನ ಶ್ರೀಮತ ಸಿಕ್ಕಿರುವುದು?

ಉತ್ತರ:
ಮಧುರ ಮಕ್ಕಳೇ, ಗುಣವಂತರಾಗಲು – 1. ಯಾರದೇ ದೇಹವನ್ನು ನೋಡಬೇಡಿ. ನಿಮ್ಮನ್ನು ಆತ್ಮನೆಂದು ತಿಳಿಯಿರಿ. ಒಬ್ಬ ತಂದೆಯಿಂದಲೇ ಕೇಳಿರಿ, ಒಬ್ಬ ತಂದೆಯನ್ನೇ ನೋಡಿರಿ. ಮನುಷ್ಯ ಮತವನ್ನು ನೋಡಬೇಡಿ. 2. ದೇಹಾಭಿಮಾನಕ್ಕೆ ವಶವಾಗಿ ತಂದೆಯ ಮತ್ತು ಬ್ರಾಹ್ಮಣ ಕುಲದ ಹೆಸರನ್ನು ಕೆಡಿಸುವಂತಹ ಯಾವುದೇ ಚಲನೆಯಿಟ್ಟುಕೊಳ್ಳಬೇಡಿ. ಉಲ್ಟಾ ಚಲನೆಯಿರುವವರು ಗುಣವಂತರಾಗಲು ಸಾಧ್ಯವಿಲ್ಲ. ಅವರನ್ನು ಕುಲ ಕಳಂಕಿತರು ಎನ್ನಲಾಗುತ್ತದೆ.

ಓಂ ಶಾಂತಿ.
(ಬಾಪ್ದಾದಾರವರ ಕೈಯಲ್ಲಿ ಮಲ್ಲಿಗೆ ಹೂಗಳಿದ್ದವು) ತಂದೆಯು ಸಾಕ್ಷಾತ್ಕಾರ ಮಾಡಿಸುತ್ತಾರೆ, ಇಂತಹ ಸುಗಂಧಭರಿತ ಹೂಗಳಾಗಬೇಕು. ಮಕ್ಕಳಿಗೂ ಗೊತ್ತಿದೆ - ನಾವು ಅವಶ್ಯವಾಗಿ ಹೂಗಳಾಗಿದ್ದೆವು. ಗುಲಾಬಿ ಹೂ, ಮಲ್ಲಿಗೆ ಹೂಗಳಾಗಿದ್ದೆವು ಮತ್ತು ಈಗ ಪುನಃ ಆಗುತ್ತಿದೇವೆ. ಇವರು ಸತ್ಯವಂತರಾಗಿದ್ದಾರೆ, ಮೊದಲು ಅಸತ್ಯವಂತರಾಗಿದ್ದಿರಿ. ಅಸತ್ಯವೇ ಅಸತ್ಯ. ಸತ್ಯದ ಅಂಶವೂ ಇರಲಿಲ್ಲ. ಈಗ ನೀವು ಸತ್ಯವಂತರಾಗುತ್ತೀರಿ. ಅಂದ ಮೇಲೆ ಸತ್ಯವಂತರಲ್ಲಿ ಎಲ್ಲಾ ಗುಣಗಳಿರಬೇಕು. ಯಾರಲ್ಲಿ ಎಷ್ಟು ಗುಣಗಳಿವೆಯೋ ಅಷ್ಟು ಅನ್ಯರಿಗೂ ದಾನ ಮಾಡಿ ತಮ್ಮ ಸಮಾನರನ್ನಾಗಿ ಮಾಡಿಕೊಳ್ಳಬಹುದು ಆದ್ದರಿಂದ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ತಮ್ಮ ಗುಣಗಳ ಚಾರ್ಟ್ ಇಡಿ. ನಮ್ಮಲ್ಲಿ ಯಾವುದೇ ಅವಗುಣ ಇಲ್ಲ ತಾನೇ? ದೈವೀ ಗುಣಗಳಲ್ಲಿ ಯಾವ ಕೊರತೆಯಿದೆ? ಪ್ರತಿನಿತ್ಯ ರಾತ್ರಿ ನಿಮ್ಮ ಚಾರ್ಟ್ ನೋಡಿಕೊಳ್ಳಿ. ಪ್ರಪಂಚದ ಮನುಷ್ಯರ ಮಾತೇ ಬೇರೆಯಾಗಿದೆ, ಈಗ ನೀವು ಮನುಷ್ಯರಂತೂ ಅಲ್ಲ ಅಲ್ಲವೆ. ನೀವು ಬ್ರಾಹ್ಮಣರಾಗಿದ್ದೀರಿ, ಭಲೇ ಮನುಷ್ಯರಂತೂ ಎಲ್ಲರೂ ಮನುಷ್ಯರೇ ಆದರೆ ಪ್ರತಿಯೊಬ್ಬರ ಗುಣಗಳಲ್ಲಿ, ನಡವಳಿಕೆಯಲ್ಲಿ ವ್ಯತ್ಯಾಸ ಇರುತ್ತದೆ. ಮಾಯೆಯ ರಾಜ್ಯದಲ್ಲಿ ಕೆಲವು ಮನುಷ್ಯರು ಬಹಳ ಒಳ್ಳೆಯ ಗುಣವಂತರಾಗಿರುತ್ತಾರೆ. ಆದರೆ ತಂದೆಯನ್ನು ಅರಿತುಕೊಂಡೇ ಇಲ್ಲ. ಬಹಳ ಧಾರ್ಮಿಕ ವ್ಯಕ್ತಿಗಳು ದಯಾ ಹೃದಯಿಗಳಾಗಿರುತ್ತಾರೆ. ಪ್ರಪಂಚದಲ್ಲಿಯಂತೂ ಮನುಷ್ಯರ ಗುಣಗಳು ವಿಭಿನ್ನವಾಗಿವೆ. ಯಾವಾಗ ದೇವತೆ ಆಗುತ್ತೀರಿ ಆಗ ಎಲ್ಲರಲ್ಲಿ ದೈವೀ ಗುಣಗಳಿರುತ್ತವೆ, ಆದರೆ ವಿದ್ಯೆಯ ಕಾರಣ ಪದವಿಯಲ್ಲಿ ವ್ಯತ್ಯಾಸ ಆಗುತ್ತದೆ. ಒಂದನೇಯದಾಗಿ ಓದಬೇಕು, ಎರಡನೇಯದು ಅವಗುಣಗಳನ್ನು ತೆಗೆಯಬೇಕು. ಇದಂತೂ ಮಕ್ಕಳಿಗೆ ಗೊತ್ತಿದೆ, ನಾವು ಇಡೀ ಪ್ರಪಂಚದಿಂದ ಭಿನ್ನವಾಗಿದ್ದೇವೆ. ಇಲ್ಲಿ ಒಂದೇ ಬ್ರಾಹ್ಮಣ ಕುಲದವರು ಕುಳಿತಿದ್ದೀರಿ. ಶೂದ್ರ ಮತದಲ್ಲಿ ಮನುಷ್ಯ ಮತವಿದೆ, ಬ್ರಾಹ್ಮಣ ಕುಲದಲ್ಲಿ ಈಶ್ವರೀಯ ಮತವಿದೆ. ಮೊಟ್ಟ ಮೊದಲು ನೀವು ತಂದೆಯ ಪರಿಚಯ ಕೊಡಬೇಕು. ಇಂತಹವರು ವಾದ ಮಾಡುತ್ತಾರೆಂದು ನೀವು ತಿಳಿಸುತ್ತೀರಿ. ತಂದೆ ಈಗಾಗಲೇ ತಿಳಿಸಿದ್ದಾರೆ - ಮಕ್ಕಳೇ, ಬರೆಯಿರಿ - ನಾವು ಬ್ರಾಹ್ಮಣರು ಅಥವಾ ಬ್ರಹ್ಮಾ ಕುಮಾರ ಕುಮಾರಿಯರಾಗಿದ್ದೇವೆ, ಈಶ್ವರೀಯ ಮತದ ಮೇಲೆ, ಇವರಿಗಿಂತಲೂ ಶ್ರೇಷ್ಠ ಯಾವುದೂ ಇಲ್ಲವೆನ್ನುವುದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಸರ್ವ ಶ್ರೇಷ್ಠರು ಭಗವಂತರಾಗಿದ್ದಾರೆ ಅಂದ ಮೇಲೆ ನಾವು ಅವರ ಮಕ್ಕಳು ಅವರ ಮತದನುಸಾರ ನಡೆಯುತ್ತೇವೆ. ಮನುಷ್ಯರ ಮತದಂತೆ ನಾವು ನಡೆಯುವುದಿಲ್ಲ, ಈಶ್ವರೀಯ ಮತದಂತೆ ನಡೆದು ನಾವು ದೇವತೆಗಳಾಗುತ್ತೇವೆ. ಮನುಷ್ಯರ ಮತವನ್ನು ಸಂಪೂರ್ಣ ಬಿಟ್ಟಿದ್ದೇವೆ ಎಂದು ನೀವು ಹೇಳಿದಾಗ ನಿಮ್ಮೊಂದಿಗೆ ಯಾರೂ ವಾದ ವಿವಾದ ಮಾಡಲು ಸಾಧ್ಯವಿಲ್ಲ. ಇದನ್ನು ಎಲ್ಲಿ ಕೇಳಿದಿರಿ, ಯಾರು ಕಲಿಸಿದರೆಂದು ಯಾರಾದರೂ ಕೇಳಿದರೆ ನೀವು ಹೇಳಿ, ನಾವು ಈಶ್ವರೀಯ ಮತದಂತೆ ನಡೆಯುತ್ತಿದ್ದೇವೆ, ಪ್ರೇರಣೆಯ ಮಾತಿಲ್ಲ. ಬೇಹದ್ದಿನ ತಂದೆಯಾದ ಈಶ್ವರನಿಂದ ನಾವು ಇದನ್ನು ತಿಳಿದುಕೊಂಡಿದ್ದೇವೆ. ಇನ್ನೂ ತಿಳಿಸಿ - ಭಕ್ತಿ ಮಾರ್ಗದ ಶಾಸ್ತ್ರಗಳ ಅನುಸಾರ ನಾವು ಬಹಳ ಸಮಯ ನಡೆದೆವು. ಈಗ ನಮಗೆ ಈಶ್ವರೀಯ ಮತ ಸಿಕ್ಕಿದೆ. ಹೀಗೆ ನೀವು ಮಕ್ಕಳು ತಂದೆಯದೇ ಮಹಿಮೆ ಮಾಡಬೇಕು - ನಾವು ಈಶ್ವರೀಯ ಮತದಂತೆ ನಡೆಯುತ್ತಿದ್ದೇವೆ, ಮನುಷ್ಯರ ಮತದಂತೆ ನಡೆಯುವುದಿಲ್ಲ ಅಲ್ಲ ಮನುಷ್ಯರಿಂದ ಕೇಳುವುದಲ್ಲ ಎಂದು ಮೊದಲು ಅವರ ಬುದ್ಧಿಯಲ್ಲಿ ಕೂರಿಸಬೇಕು. ಈಶ್ವರನು ತಿಳಿಸುತ್ತಾರೆ – ಕೆಟ್ಟದ್ದನ್ನು ಕೇಳಬಾರದು. . .ಕೆಟ್ಟದ್ದನ್ನು ನೋಡಬಾರದು. . . ಮನುಷ್ಯ ಮತ. ಆತ್ಮವನ್ನು ನೋಡಿ ಶರೀರವನ್ನು ನೋಡಬಾರದು. ಇದು ಪತಿತ ಶರೀರವಾಗಿದೆ. ಇದನ್ನೇನು ನೋಡುವುದಿದೆ, ಈ ಕಣ್ಣುಗಳಿಂದ ಇದನ್ನು ನೋಡಬಾರದು, ಈ ಶರೀರವಂತೂ ಪತಿತಕ್ಕೆ ಪತಿತವೇ ಆಗಿರುತ್ತದೆ, ಇಲ್ಲಿನ ಈ ಶರೀರ ಸುಧಾರಣೆ ಆಗುವುದಿಲ್ಲ. ಇನ್ನೂ ಹಳೆಯದಾಗಲಿದೆ. ದಿನ-ಪ್ರತಿದಿನ ಆತ್ಮವು ಸುಧಾರಣೆ ಆಗುತ್ತದೆ. ಆತ್ಮವೇ ಅವಿನಾಶಿ ಆಗಿರುವುದರಿಂದ ತಂದೆ ಹೇಳುತ್ತಾರೆ- ಕೆಟ್ಟದ್ದನ್ನು ನೋಡಬೇಡಿ. . . , ಶರೀರವನ್ನು ನೋಡಬಾರದು. ದೇಹ ಸಹಿತವಾಗಿ ದೇಹದ ಎಲ್ಲಾ ಸಂಬಂಧಗಳನ್ನು ಮರೆಯಬೇಕು. ಆತ್ಮವನ್ನು ನೋಡಿ. ಒಬ್ಬ ಪರಮಾತ್ಮ ತಂದೆಯಿಂದಲೇ ಕೇಳಿ, ಇದರಲ್ಲಿ ಪರಿಶ್ರಮವಿದೆ. ನೀವು ಇದನ್ನು ಅನುಭವ ಮಾಡುತ್ತೀರಿ. ಇದು ದೊಡ್ಡ ವಿಷಯವಾಗಿದೆ. ಯಾರು ಬುದ್ಧಿವಂತರಿರುತ್ತಾರೆ ಅವರಿಗೆ ಪದವಿಯೂ ಅಷ್ಟು ಒಳ್ಳೆಯದೇ ಸಿಗುತ್ತದೆ. ಸೆಕೆಂಡಿನಲ್ಲಿ ಜೀವನ ಮುಕ್ತಿ ಸಿಗುತ್ತದೆ. ಆದರೆ ಒಂದುವೇಳೆ ಪೂರ್ಣ ಪುರುಷಾರ್ಥ ಮಾಡದಿದ್ದರೆ ಪುನಃ ಬಹಳ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.

ನೀವು ಮಕ್ಕಳು ತಂದೆಯ ಪರಿಚಯ ಕೊಡುವುದರಿಂದ ಅಂಧರಿಗೆ ಊರುಗೋಲಾಗುತ್ತೀರಿ. ಆತ್ಮವನ್ನು ನೋಡಲಾಗುವುದಿಲ್ಲ, ಅನುಭವ ಮಾಡಲು ಸಾಧ್ಯ. ಆತ್ಮವು ಎಷ್ಟು ಚಿಕ್ಕದಾಗಿದೆ, ಈ ಆಕಾಶ ತತ್ವದಲ್ಲಿ ನೋಡಿ ಮನುಷ್ಯರು ಎಷ್ಟು ಸ್ಥಳವನ್ನು ತೆಗೆದುಕೊಳ್ಳುತ್ತಾರೆ. ಮನುಷ್ಯರಂತೂ ಓಡಾಡುತ್ತಿರುತ್ತಾರಲ್ಲವೆ. ಆತ್ಮವು ಎಲ್ಲಿಯಾದರೂ ಬಂದು ಹೋಗುತ್ತದೆಯೇ! ಆತ್ಮದ ಸ್ಥಾನವು ಎಷ್ಟು ಚಿಕ್ಕದಾಗಿರುತ್ತದೆ! ಇದು ವಿಚಾರ ಮಾಡುವ ಮಾತಾಗಿದೆ. ಆತ್ಮಗಳ ಗುಂಪಿರುತ್ತದೆ. ಶರೀರಕ್ಕೆ ಹೋಲಿಸಿದರೆ ಎಷ್ಟು ಸೂಕ್ಷ್ಮವಾಗಿದೆ, ಅದು ಎಷ್ಟು ಕಡಿಮೆ ಸ್ಥಳವನ್ನು ತೆಗೆದುಕೊಳ್ಳುತ್ತದೆ! ನಿಮಗಂತೂ ಇರುವುದಕ್ಕೆ ಬಹಳ ಸ್ಥಳ ಬೇಕಾಗುತ್ತದೆ, ಈಗ ನೀವು ಮಕ್ಕಳು ವಿಶಾಲ ಬುದ್ಧಿಯವರಾಗಿದ್ದೀರಿ, ತಂದೆಯು ಹೊಸ ಪ್ರಪಂಚಕ್ಕಾಗಿ ಹೊಸ ಮಾತುಗಳನ್ನು ತಿಳಿಸುತ್ತಾರೆ ಮತ್ತು ತಿಳಿಸುವವರೂ ಹೊಸಬರಾಗಿದ್ದಾರೆ. ಮನುಷ್ಯರಂತೂ ಎಲ್ಲರಿಂದ ಕೃಪೆ ಬೇಡುತ್ತಾರೆ. ತಮ್ಮ ಮೇಲೆ ತಮಗೆ ದಯೆತೋರಿಸಿಕೊಳ್ಳಲು ತಮ್ಮಲ್ಲಿ ಅಷ್ಟು ಶಕ್ತಿಯಿಲ್ಲ, ನಿಮಗೆ ಶಕ್ತಿ ಸಿಗುತ್ತದೆ. ನೀವು ತಂದೆಯಿಂದ ಆಸ್ತಿಯನ್ನು ತೆಗೆದುಕೊಂಡಿದ್ದೀರಿ ಮತ್ತ್ಯಾರಿಗೂ ದಯಾಹೃದಯಿಗಳೆಂದು ಹೇಳಲಾಗುವುದಿಲ್ಲ. ಮನುಷ್ಯರಿಗೆಂದೂ ದೇವತೆಗಳೆಂದು ಹೇಳಲು ಸಾಧ್ಯವಿಲ್ಲ. ದಯಾಹೃದಯಿ ಒಬ್ಬರೇ ತಂದೆಯಾಗಿದ್ದಾರೆ. ಅವರು ಮನುಷ್ಯರನ್ನು ದೇವತೆಗಳನ್ನಾಗಿ ಮಾಡುತ್ತಾರೆ, ಆದ್ದರಿಂದ ಪರಮಪಿತ ಪರಮಾತ್ಮನ ಮಹಿಮೆಯು ಅಪರಮಪಾರವಾಗಿದೆ. ಅದಕ್ಕೆ ಮಿತ ಇಲ್ಲ ಎಂದು ಹೇಳುತ್ತಾರೆ. ಈಗ ನೀವು ತಿಳಿದುಕೊಂಡಿದ್ದೀರಿ. ಅವರ ದಯೆಗೆ ಪಾರವೆ ಇಲ್ಲ, ತಂದೆಯು ಯಾವ ಹೂಸ ಪ್ರಪಂಚವನ್ನು ಸ್ಥಾಪಿಸುತ್ತಾರೆಯೋ ಅದೆಲ್ಲವೊ ಹೊಸದಾಗಿರುತ್ತದೆ. ಮನುಷ್ಯ ಪಶು ಪಕ್ಷಿ ಎಲ್ಲವು ಸತೋಪ್ರಧಾನವಾಗಿರುತ್ತದೆ. ತಂದೆಯು ತಿಳಿಸಿದ್ದಾರೆ- ನೀವು ಶ್ರೇಷ್ಠರಾಗುತ್ತೀರೆಂದರೆ ನಿಮ್ಮ ಪೀಠೋಪಕರಣಗಳೂ ಸಹ ಅಷ್ಟು ಉತ್ತಮವೆಂದು ಗಾಯನವಿದೆ, ತಂದೆಗೂ ಸಹ ಸರ್ವೋತ್ತಮ ಎಂದು ಹೇಳುತ್ತಾರೆ- ನಾನು ಅಂಗೈಯಲ್ಲಿ ಸ್ವರ್ಗವನ್ನು ತರುತ್ತೇನೆ. ಅವರು ಅಂಗೈಯಿಂದ ಕುಂಕುಮ ಇತ್ಯಾದಿಗಳನ್ನು ತೆಗೆಯುತ್ತಾರೆ, ಇಲ್ಲಂತೂ ವಿದ್ಯೆಯ ಮಾತಾಗಿದೆ. ಇದು ಸತ್ಯವಾದಂತಹ ವಿದ್ಯೆಯಾಗಿದೆ. ನೀವು ತಿಳಿಯುತ್ತೀರಿ - ನಾವು ಓದುತ್ತಿದ್ದೇವೆ. ಪಾಠಶಾಲೆಯಲ್ಲಿ ಬಂದಿದ್ದೀರಿ, ನೀವು ಬಹಳ ಪಾಠಶಾಲೆಗಳನ್ನು ತೆರೆಯಿರಿ ಅದರಿಂದ ನಿಮ್ಮ ಚಟುವಟಿಕೆಯನ್ನು ನೋಡಲಿ. ಉಲ್ಟಾ ಚಲನೆ ನಡೆಯುತ್ತಾರೆಂದರೆ ಹೆಸರನ್ನು ಕೆಡಿಸುತ್ತಾರೆ. ದೇಹಾಭಿಮಾನಿಗಳ ಚಲನೆಯೇ ಬೇರೆಯಾಗಿರುತ್ತದೆ, ಇವರು ಇಂತಹ ನಡುವಳಿಕೆಯವರೆಂದು ಮನುಷ್ಯರು ನೋಡುತ್ತಾರೆಂದರೆ ಅದು ಎಲ್ಲರ ಮೇಲೆ ಕಳಂಕವಾಗುತ್ತದೆ. ಇವರ ಚಲನೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ ಏನೂ ಪರಿವರ್ತನೆಯಿಲ್ಲವೆಂದು ತಿಳಿಯುತ್ತಾರೆ. ಅಂದರೆ ತಂದೆಯ ನಿಂದನೆ ಮಾಡಿಸಿದರಲ್ಲವೆ ಸಮಯ ಹಿಡಿಸುತ್ತದೆ ಪೂರ್ಣದೋಷ ಅವರ ಮೇಲೆ ಬಂದುಬಿಡುತ್ತದೆ. ನಡವಳಿಕೆ ಬಹಳ ಚೆನ್ನಾಗಿರಬೇಕು ನಿಮ್ಮ ನಡವಳಿಕೆಗಳು ಪರಿವರ್ತನೆಯಾಗಲು ಎಷ್ಟು ಸಮಯ ಹಿಡಿಸುತ್ತದೆ ನೀವು ತಿಳಿದುಕೊಳ್ಳುತ್ತೀರಿ ಕೆಲ ಕೆಲವು ನಡವಳಿಕೆಗಳು ಬಹಳ ಚೆನ್ನಾಗಿದೆ, ನೋಡುವುದರಿಂದಲೇ ತಿಳಿಯುತ್ತದೆ ತಂದೆಯು ಕುಳಿತು ಒಬ್ಬೊಬ್ಬ ಮಗುವನ್ನು ಇವರಲ್ಲಿ ಯಾವ ಕೊರತೆಯಿದೆ, ಅದನ್ನು ತೆಗೆಯಬೇಕು ಎಂದು ನೋಡುತ್ತಾರೆ. ಪ್ರತಿಯೊಬ್ಬರನ್ನು ಪರಿಶೀಲನೆ ಮಾಡುತ್ತಾರೆ. ನಿರ್ಬಲತೆಗಳಂತೂ ಎಲ್ಲರಲ್ಲಿಯೂ ಇದೆ. ಆದರೆ ತಂದೆಯು ಎಲ್ಲರನ್ನೂ ನೋಡುತ್ತಿರುತ್ತಾರೆ, ಫಲಿತಾಂಶವನ್ನು ನೋಡುತ್ತಿರುತ್ತಾರೆ, ತಂದೆಗಂತೂ ಮಕ್ಕಳ ಮೇಲೆ ಪ್ರೀತಿ ಇರುತ್ತದೆಯಲ್ಲವೆ? ಇವರಲ್ಲಿ ಇಂತಹ ಕೊರತೆಯಿದೆ, ಈ ಕಾರಣದಿಂದ ಇವರು ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲವೆಂದು ತಂದೆಗೆ ತಿಳಿಯುತ್ತದೆ. ಒಂದುವೇಳೆ ನಿರ್ಬಲತೆಗಳನ್ನು ತೆಗಯದೇ ಹೋದರೆ ಬಹಳ ಕಷ್ಟವಾಗುತ್ತದೆ ಅವರನ್ನು ನೋಡುವುದರಿಂದಲೇ ಅರ್ಥವಾಗಿಬಿಡುತ್ತದೆ. ಇದಂತೂ ಮಕ್ಕಳಿಗೆ ಗೊತ್ತಿದೆ. ಇನ್ನೂ ಸ್ವಲ್ಪ ಸಮಯ ಇದೆ, ಪ್ರತಿಯೂಬ್ಬರನ್ನೂ ಪರಿಶೀಲಿಸುತ್ತಾ ತಂದೆಯ ದೃಷ್ಟಿಯು ಪ್ರತಿಯೊಬ್ಬರ ಗುಣಗಳ ಮೇಲೆ ಬೀಳುತ್ತದೆ. ತಂದೆಯು ಕೇಳತ್ತಾರೆ- ನಿಮ್ಮಲ್ಲಿ ಯಾವುದೇ ಅವಗುಣವು ಇಲ್ಲವೆ? ತಂದೆಯ ಮುಂದೆ ಸತ್ಯವನ್ನು ಹೇಳಿಬಿಡುತ್ತಾರೆ. ಕೆಲವರಿಗೆ ದೇಹಾಭಿಮಾನವಿದ್ದರೆ ಸತ್ಯ ತಿಳಿಸುವುದಿಲ್ಲ, ತಂದೆಯಂತೂ ಯಾವಾಗಲೂ ಹೇಳುತ್ತಾರೆ- ತಾವಾಗಿಯೇ ಮಾಡುವವರು ದೇವತೆಗಳು, ಹೇಳಿದ ಮೇಲೆ ಮಾಡುವವರು ಮನುಷ್ಯರು ಹೇಳಿಸಿಕೂಂಡು ಮಾಡುವವರು..... ಈ ಜನ್ಮದಲ್ಲಿ ಯಾವುದೆಲ್ಲಾ ನಿರ್ಬಲತೆಗಳಿವೆಯೋ ಅವನ್ನು ತಂದೆಯ ಮುಂದೆ ತಾವಾಗಿಯೇ ತಿಳಿಸಿ. ತಂದೆಯಂತೂ ಎಲ್ಲರಿಗೂ ತಿಳಿಸುತ್ತಾರೆ, ನಿಮ್ಮಲ್ಲಿರುವ ನಿರ್ಬಲತೆಗಳನ್ನು ವೈದ್ಯರಿಗೆ ತಿಳಿಸಬೇಕು. ಅಂದರೆ ಶರೀರದ ರೋಗವನ್ನಲ್ಲ ಒಳಗಿನ ರೋಗಗಳನ್ನು ತಿಳಿಸಬೇಕು. ನಿಮ್ಮಲ್ಲಿ ಏನೇನು ಅಸುರೀ ವಿಚಾರಗಳಿರುತ್ತವೆ? ಇದನ್ನು ತಿಳಿಸಿದಾಗ ಅದರ ಬಗ್ಗೆ ತಂದೆಯು ತಿಳಿಸುತ್ತಾರೆ, ಈ ಸ್ಥಿತಿಯಲ್ಲಿ ನೀವು ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ.

ಎಲ್ಲಿಯವರೆಗೆ ಅವಗುಣಗಳು ಹೋಗುವುದಿಲ್ಲವೋ ಅಲ್ಲಿಯವರೆಗೆ ಈ ಅವಗುಣಗಳು ನಿಂದನೆ ಮಾಡಿಸುತ್ತವೆ. ಮನುಷ್ಯರಿಗೆ ಸಂಶಯ ಬರುತ್ತದೆ – ಇವರಿಗೆ ಭಗವಂತ ಓದಿಸುತ್ತಾರೆಯೇ! ಭಗವಂತನಂತೂ ನಾಮ ರೂಪದಿಂದ ಭಿನ್ನವಾಗಿದ್ದಾರೆ. ಸರ್ವವ್ಯಾಪಿಯಾಗಿದ್ದಾರೆ, ಅಂತಹವರು ಇವರಿಗೆ ಹೇಗೆ ಓದಿಸುತ್ತಾರೆ, ಇವರ ನಡವಳಿಕೆ ಹೇಗಿದೆ. ಇದಂತೂ ತಂದೆಗೆ ಗೊತ್ತಿದೆ - ನಿಮ್ಮ ಗುಣಗಳು ಇಷ್ಟು ಸುಂದರವಾಗಿರಬೇಕು. ಅವಗುಣಗಳನ್ನು ಮುಚ್ಚಿಟ್ಟುಕೊಂಡರೆ ನಿಮ್ಮ ಬಾಣವು ಯಾರಿಗೂ ನಾಟುವುದಿಲ್ಲ. ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ತಮ್ಮಲ್ಲಿರುವ ಅವಗುಣಗಳನ್ನು ತೆಗೆಯಿರಿ. ನನ್ನಲ್ಲಿ ಇಂತಿಂಥಹ ನಿರ್ಬಲತೆ ಇದೆ ಎನ್ನುವುದನ್ನು ಬರೆದಿಟ್ಟುಕೊಳ್ಳಿ. ಆಗ ಮನಸ್ಸು ತಿನ್ನುತ್ತದೆ, ನಷ್ಟವಾಗುತ್ತದೆಂದರೆ ಮನಸ್ಸು ತಿನ್ನುತ್ತದೆ. ವ್ಯಾಪಾರಿಗಳು ತಮ್ಮ ಖಾತೆಯನ್ನು ಪ್ರತಿನಿತ್ಯವೂ ನೋಡಿಕೊಳ್ಳುತ್ತಾರೆ, ಇಂದು ಎಷ್ಟು ಲಾಭವಾಯಿತು ಎಂದು ಪ್ರತಿ ದಿನದ ಖಾತೆಯನ್ನು ನೋಡುತ್ತಾರೆ. ಇಲ್ಲಿ ತಂದೆಯೂ ಸಹ ತಿಳಿಸುತ್ತಾರೆ - ಮಕ್ಕಳೇ, ನಿತ್ಯವೂ ನಿಮ್ಮ ಚಲನೆಯನ್ನು ನೋಡಿಕೊಳ್ಳಿ ಇಲ್ಲವೆಂದರೆ ನಿಮ್ಮದೇ ನಷ್ಟ ಮಾಡಿಕೊಳ್ಳುತ್ತೀರಿ, ತಂದೆಯ ಗೌರವವನ್ನು ಕಳೆಯುತ್ತೀರಿ.

ಗುರುವಿನ ನಿಂದನೆ ಮಾಡಿಸುವವರು ಪದವಿಯನ್ನು ಪಡೆಯುವುದಿಲ್ಲ, ದೇಹಾಭಿಮಾನಿಗಳಿಗೆ ಸ್ಥಾನವೇ ಸಿಗುವುದಿಲ್ಲ. ದೇಹೀಅಭಿಮಾನಿಗಳು ಒಳ್ಳೆಯ ಪದವಿ ಪಡೆಯುತ್ತಾರೆ. ದೇಹೀಅಭಿಮಾನಿಯಾಗಲು ಎಲ್ಲರೂ ಪುರುಷಾರ್ಥ ಮಾಡುತ್ತಾರೆ. ದಿನಪ್ರತಿದಿನ ಸುಧಾರಣೆಯಾಗುತ್ತಾ ಹೋಗುತ್ತಾರೆ ದೇಹಾಭಿಮಾನದಿಂದ ಯಾವ ಕರ್ತವ್ಯಗಳಾಗುತ್ತವೆಯೋ ಅವುಗಳನ್ನು ಕತ್ತರಿಸಬೇಕು. ದೇಹಾಭಿಮಾನದಿಂದ ಅವಶ್ಯವಾಗಿ ಪಾಪಗಳಾಗುತ್ತವೆ, ಆದ್ದರಿಂದ ದೇಹೀ ಅಭಿಮಾನಿಯಾಗಿರಿ. ಇದು ನಿಮಗೆ ತಿಳಿದಿದೆ. ಜನಿಸುತ್ತಿದ್ದಂತೆ ಯಾರೂ ರಾಜರಾಗುವುದಿಲ್ಲ, ನಿಮಗೆ ಎಷ್ಟು ವರ್ಷಗಳು ಹಿಡಿಯುತ್ತದೆ, ದೇಹೀ ಅಭಿಮಾನಿ ಆಗುವುದರಲ್ಲಿ ಸಮಯ ಹಿಡಿಯುತ್ತದೆಯಲ್ಲವೆ! ಇದೂ ಸಹ ನಿಮಗೆ ತಿಳಿದಿದೆ. ಈಗ ನಾವು ಹಿಂತಿರುಗಿ ಹೋಗಬೇಕು. ತಂದೆಯ ಬಳಿ ಮಕ್ಕಳು ಬರುತ್ತಾರೆ. ಕೆಲವರು 6 ತಿಂಗಳ ನಂತರ ಬರುತ್ತಾರೆ, ಕೆಲವರು 8 ತಿಂಗಳಿನ ನಂತರ ಬರುತ್ತಾರೆ. ಆಗ ತಂದೆ ನೋಡುತ್ತಾರೆ ಇಷ್ಟು ಸಮಯದಲ್ಲಿ ಉನ್ನತಿ ಏನಾಗಿದೆ? ದಿನಗಳೆದಂತೆ ಏನಾದರೂ ಸುಧಾರಿಸುತ್ತಿರುವರೇ ಅಥವಾ ಏನಾದರೂ ಕಪ್ಪು ಕಲೆಗಳಿವೆಯೇ? ಕೆಲವರು ನಡೆಯುತ್ತಾ ನಡೆಯುತ್ತಾ ವಿದ್ಯೆಯನ್ನೇ ಬಿಟ್ಟು ಬಿಡುತ್ತಾರೆ. ತಂದೆ ಹೇಳುತ್ತಾರೆ - ಮಕ್ಕಳೇ, ಭಗವಂತನೇ ನಿಮ್ಮನ್ನು ಭಗವಾನ್ ಭಗವತಿಯರನ್ನಾಗಿ ಮಾಡಲು ಓದಿಸುತ್ತಿದ್ದಾರೆ, ಅಂತಹ ವಿದ್ಯೆಯನ್ನು ಬಿಟ್ಟುಬಿಡುತ್ತೀರಾ? ಅರೆ! ಇಡೀ ವಿಶ್ವದ ಸರ್ವ ಆತ್ಮರ ತಂದೆ ಓದಿಸುತ್ತಿದ್ದಾರೆ. ಇದರಲ್ಲಿ ಗೈರುಹಾಜರಿಯೇ! ಮಾಯೆಯು ಎಷ್ಟೊಂದು ಪ್ರಭಲವಾಗಿದೆ. ಮಾಯೆಯು ಇಂತಹ ವಿದ್ಯೆಯಿಂದಲೇ ನಿಮ್ಮ ಮುಖವನ್ನು ತಿರುಗಿಸಿಬಿಡುತ್ತದೆ. ಅನೇಕರು ಜ್ಞಾನದಲ್ಲಿ ನಡೆಯುತ್ತಾ ಇರುತ್ತಾರೆ ನಂತರ ವಿದ್ಯೆಯನ್ನು ಬಿಟ್ಟು ಬಿಡುತ್ತಾರೆ. ನೀವು ತಿಳಿದುಕೊಂಡಿದ್ದೀರಿ, ನಮ್ಮ ಮುಖ ಸ್ವರ್ಗದ ಕಡೆಯಿದೆ. ಕಾಲುಗಳು ನರಕದ ಕಡೆ ಇದೆ. ನೀವು ಸಂಗಮಯುಗದ ಬ್ರಾಹ್ಮಣರಾಗಿದ್ದೀರಿ, ಇದು ಹಳೆಯ ರಾವಣನ ಪ್ರಪಂಚವಾಗಿದೆ, ನಾವು ಶಾಂತಿಧಾಮದ ಮೂಲಕ ಸುಖಧಾಮದ ಕಡೆ ಹೋಗಬೇಕು. ಇದನ್ನು ನೆನಪಿಟ್ಟುಕೊಳ್ಳಬೇಕು. - ಸಮಯವು ಬಹಳ ಕಡಿಮೆಯಿದೆ. ಒಂದು ವೇಳೆ ನಾಳೆಯೇ ಶರೀರ ಬಿಡಬಹುದು. ಆಗ ತಂದೆಯ ನೆನಪು ಇಲ್ಲದಿದ್ದರೆ! ಅಂತ್ಯ ಕಾಲದಲ್ಲಿ ಈ ರೀತಿಯಾಗಿಬಿಡುತ್ತದೆ, ತಂದೆಯು ಬಹಳ ತಿಳಿಸುತ್ತಾರೆ - ಇವು ಗುಪ್ತ ಮಾತುಗಳಾಗಿವೆ. ಜ್ಞಾನವು ಗುಪ್ತವಾಗಿದೆ, ಇದೂ ಸಹ ಗೊತ್ತಿದೆ, ಕಲ್ಪದ ಹಿಂದೆ ಯಾರು ಎಷ್ಟು ಪುರುಷಾರ್ಥ ಮಾಡಿರುವರೋ ಅವರೇ ಮಾಡುತ್ತಿರುವರು. ನಾಟಕದನುಸಾರ ತಂದೆಯೂ ಸಹ ಕಲ್ಪದ ಹಿಂದಿನ ತರಹ ತಿಳಿಸುತ್ತಿರುತ್ತಾರೆ. ಇದರಲ್ಲಿ ಸ್ವಲ್ಪವೂ ವ್ಯತ್ಯಾಸವಾಗುವುದಿಲ್ಲ. ತಂದೆಯನ್ನು ನೆನಪು ಮಾಡುತ್ತಿರಿ, ಆಗ ನಿಮ್ಮ ವಿಕರ್ಮಗಳು ವಿನಾಶವಾಗುತ್ತದೆ. ಶಿಕ್ಷೆಯನ್ನು ಅನುಭವಿಸಬಾರದು. ತಂದೆಯ ಮುಂದೆ ಕುಳಿತು ಶಿಕ್ಷೆಗಳನ್ನು ಅನುಭವಿಸಿದರೆ ತಂದೆ ಏನು ಹೇಳಬೇಕು! ನೀವು ಸಾಕ್ಷಾತ್ಕಾರದಲ್ಲಿಯೂ ನೋಡಿದ್ದೀರಿ, ಆ ಸಮಯದಲ್ಲಿ ಯಾರನ್ನೂ ಕ್ಷಮಿಸುವುದಿಲ್ಲ. ಇವರ ಮೂಲಕ ತಂದೆಯು ಓದಿಸುತ್ತಾರೆಂದರೆ ಇವರದೇ ಸಾಕ್ಷಾತ್ಕಾರವಾಗುತ್ತದೆ. ಇವರ ಮೂಲಕ ಸಹ ನೀವು ಇಂತಿಂತಹದನ್ನು ಮಾಡಿದಿರಿ ಎಂದು ತಂದೆ ತಿಳಿಸುತ್ತಾರೆ. ಆ ಸಮಯದಲ್ಲಿ ನೀವು ತುಂಬಾ ಅಳುತ್ತೀರಿ, ಚೀರಾಡುತ್ತೀರಿ, ದುಃಖ ಪಡುತ್ತೀರಿ. ಸಾಕ್ಷಾತ್ಕಾರವನ್ನು ಮಾಡಿಸದೇ ಶಿಕ್ಷೆ ಕೊಡುವುದಿಲ್ಲ. ನಿಮಗೆ ಇಷ್ಟೊಂದು ಓದಿಸುತ್ತಿದ್ದೆನು, ಆದರೂ ಕೂಡ ನೀವು ಇಂತಿಂತಹ ಕೆಲಸ ಮಾಡಿದಿರಿ ಎಂದು ಹೇಳುತ್ತಾರೆ. ನೀವೂ ಸಹ ತಿಳಿದುಕೊಳ್ಳುತ್ತೀರಿ, ರಾವಣನ ಮತದಂತೆ ನಾವು ಎಷ್ಟು ಪಾಪಗಳನ್ನು ಮಾಡಿದ್ದೇವೆ. ಪೂಜ್ಯರಿಂದ ಪೂಜಾರಿಗಳಾಗಿದ್ದೇವೆ. ತಂದೆಯನ್ನು ಸರ್ವವ್ಯಾಪಿ ಎಂದು ಹೇಳುತ್ತಾ ಬಂದೆವು. ಇದು ಮೊದಲನೆ ನಂಬರಿನ ಅಪಮಾನವಾಗಿದೆ. ಇದರ ಲೆಕ್ಕವೂ ಬಹಳವಿದೆ. ತಂದೆಯು ದೂರು ಕೊಡುತ್ತಾರೆ. ನೀವು ನಿಮಗೆ ಹೇಗೆ ಪೆಟ್ಟು ಕೊಟ್ಟುಕೊಂಡಿರಿ. ಭಾರತವಾಸಿಗಳೇ ಎಷ್ಟೊಂದು ಬಿದ್ದಿದ್ದಾರೆ, ತಂದೆ ಬಂದು ತಿಳಿಸುತ್ತಾರೆ - ಈಗ ನಿಮಗೆ ಎಷ್ಟೊಂದು ತಿಳುವಳಿಕೆ ಸಿಕ್ಕಿದೆ. ಆದರೂ ಸಹ ಡ್ರಾಮಾನುಸಾರ ನಂಬರವಾರ್ ಆಗಿ ತಿಳಿದುಕೊಳ್ಳುತ್ತಾರೆ. ಮೊದಲೂ ಸಹ ಇದೇ ರೀತಿ ಈ ಸಮಯದವರೆಗಿನ ತರಗತಿಯಲ್ಲಿ ಫಲಿತಾಂಶವು ಹೀಗಿತ್ತು. ತಂದೆಯು ತಿಳಿಸುವುದು ಸರಿಯಾಗಿದೆಯಲ್ಲವೆ. ಆದರಿಂದ ಮಕ್ಕಳು ತಮ್ಮ ಉನ್ನತಿಯನ್ನು ಮಾಡಿಕೊಳ್ಳಬೇಕು. ಮಾಯೆ ಇಷ್ಟು ಶಕ್ತಿಶಾಲಿಯಾಗಿದೆ. ಆತ್ಮಾಭಿಮಾನಿಯಾಗಿರಲು ಬಿಡುವುದಿಲ್ಲ. ಇದೇ ದೊಡ್ಡ ವಿಷಯವಾಗಿದೆ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿದರೆ ಪಾಪಗಳು ಭಸ್ಮವಾಗುತ್ತವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತ-ಪಿತ ಬಾಪ್ದಾದಾ ಅವರ ನೆನಪು ಪೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ದೇಹಾಭಿಮಾನದಲ್ಲಿ ಬರುವುದರಿಂದ ಅವಶ್ಯವಾಗಿ ಪಾಪಗಳಾಗುತ್ತವೆ. ದೇಹಾಭಿಮಾನಿಗಳಿಗೆ ಪದವಿಯೂ ಸಿಗುವುದಿಲ್ಲ. ಆದ್ದರಿಂದ ಆತ್ಮಾಭಿಮಾನಿಗಳಾಗುವ ಪೂರ್ಣ ಪುರುಷಾರ್ಥ ಮಾಡಬೇಕು. ತಂದೆಯ ನಿಂದನೆ ಮಾಡಿಸುವಂತಹ ಯಾವ ಕರ್ಮ ಮಾಡಬಾರದು.

2. ಒಳಗಿನ ರೋಗಗಳನ್ನು ತಂದೆಗೆ ಸತ್ಯ ಸತ್ಯವಾಗಿ ತಿಳಿಸಬೇಕು. ಅವಗುಣಗಳನ್ನು ಮುಚ್ಚಿಡಬಾರದು. ನನ್ನಲ್ಲಿ ಯಾವ ಯಾವ ಅವಗುಣಗಳಿವೆಯೆಂದು ತಮ್ಮ ಪರಿಶೀಲನೆ ಮಾಡಿಕೊಳ್ಳಬೇಕು. ವಿದ್ಯೆಯಿಂದ ಸ್ವಯಂ ಗುಣವಂತರಾಗಬೇಕು.

ವರದಾನ:
ಹದ್ಧಿನ ರಾಯಲ್ ಇಚ್ಛೆಗಳಿಂದ ಮುಕ್ತವಾಗಿರುತ್ತಾ ಸೇವೆಮಾಡುವಂತಹ ನಿಸ್ವಾರ್ಥ ಸೇವಾಧಾರಿ ಭವ

ಹೇಗೆ ಬ್ರಹ್ಮಾ ತಂದೆ ಕರ್ಮದ ಬಂಧನಗಳಿಂದ ಮುಕ್ತ, ನ್ಯಾರಾ ಆಗುವಂತಹ ಸಾಕ್ಷಿ ಕೊಟ್ಟರು. ಸೇವೆಯ ಸ್ನೇಹವಲ್ಲದೆ ಬೇರೆಯಾವುದೇ ಬಂಧನ ಇಲ್ಲ. ಸೇವೆಯಲ್ಲಿ ಏನು ಹದ್ಧಿನ ರಾಯಲ್ ಇಚ್ಛೆಗಳು ಇರುತ್ತವೆ ಅವೂ ಸಹ ಲೆಕ್ಕಾಚಾರದಲ್ಲಿ ಬಂಧಿತವಾಗಿದೆ, ಸತ್ಯ ಸೇವಾಧಾರಿ ಈ ಲೆಕ್ಕಾಚಾರಗಳಿಂದಲೂ ಸಹ ಮುಕ್ತರಾಗಿರುತ್ತಾರೆ. ಹೇಗೆ ದೇಹದ ಬಂಧನ, ದೇಹದ ಸಂಬಂಧದ ಬಂದನವಾಗಿದೆ, ಇಂತಹ ಸೇವೆಯಲ್ಲಿ ಸ್ವಾರ್ಥ- ಇದೂ ಸಹ ಬಂದನವಾಗಿದೆ. ಈ ಬಂಧನದಿಂದ ಹಾಗೂ ರಾಯಲ್ ಲೆಕ್ಕಾಚಾರದಿಂದಲೂ ಸಹ ಮುಕ್ತ ನಿಸ್ವಾರ್ಥ ಸೇವಾಧಾರಿಗಳಾಗಿ.

ಸ್ಲೋಗನ್:
ವಾಯಿದೆಗಳನ್ನು ಫೈಲ್ ನಲ್ಲಿ ಇಟ್ಟುಕೊಳ್ಳಬೇಡಿ, ಫೈನಲ್ ಮಾಡಿ ತೋರಿಸಿ.