18.07.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ- ನಿಮಗೆ
ಸರ್ವೀಸಿನ ಸಮಾಚಾರವನ್ನು ಕೇಳುವ, ಓದುವುದರ ಆಸಕ್ತಿಯಿರಬೇಕು ಏಕೆಂದರೆ ಇದರಿಂದ ಉಮ್ಮಂಗ-ಉತ್ಸಾಹವು
ಹೆಚ್ಚುತ್ತದೆ, ಸರ್ವೀಸ್ ಮಾಡುವ ಸಂಕಲ್ಪವೂ ಹೆಚ್ಚುತ್ತದೆ”
ಪ್ರಶ್ನೆ:
ಸಂಗಮಯುಗದಲ್ಲಿ
ತಂದೆಯು ನಿಮಗೆ ಸುಖವನ್ನು ಕೊಡುವುದಿಲ್ಲ ಆದರೆ ಸುಖದ ಮಾರ್ಗವನ್ನು ತಿಳಿಸುತ್ತಾರೆ- ಏಕೆ?
ಉತ್ತರ:
ಏಕೆಂದರೆ ತಂದೆಗೆ
ಎಲ್ಲರೂ ಮಕ್ಕಳಾಗಿದ್ದಾರೆ, ಒಂದುವೇಳೆ ಒಬ್ಬ ಮಗುವಿಗೆ ಸುಖವನ್ನು ಕೊಟ್ಟರೂ ಸರಿಯಲ್ಲ, ಲೌಕಿಕ
ತಂದೆಯಿಂದ ಮಕ್ಕಳಿಗೆ ಸಮವಾದ ಆಸ್ತಿಯು ಸಿಗುತ್ತದೆ ಆದರೆ ಬೇಹದ್ದಿನ ತಂದೆಯು ಭಾಗವನ್ನು
ಹಂಚುವುದಿಲ್ಲ, ಸುಖದ ಮಾರ್ಗವನ್ನು ತಿಳಿಸುತ್ತಾರೆ. ಯಾರು ಆ ಮಾರ್ಗದಂತೆ ನಡೆಯುತ್ತಾರೆಯೋ,
ಪುರುಷಾರ್ಥ ಮಾಡುತ್ತಾರೆಯೋ ಅವರಿಗೆ ಶ್ರೇಷ್ಠಪದವಿಯು ಸಿಗುತ್ತದೆ. ಮಕ್ಕಳು ಪುರುಷಾರ್ಥ
ಮಾಡಬೇಕಾಗಿದೆ. ಎಲ್ಲವೂ ಪುರುಷಾರ್ಥದ ಮೇಲೆ ಆಧಾರಿತವಾಗಿದೆ.
ಓಂ ಶಾಂತಿ.
ಮಕ್ಕಳಿಗೆ ಗೊತ್ತಿದೆ, ತಂದೆಯು ಮುರುಳಿಯನ್ನು ನುಡಿಸುತ್ತಾರೆ, ಮುರುಳಿಯು ಎಲ್ಲರ ಬಳಿಗೂ
ಹೋಗುತ್ತದೆ ಮತ್ತು ಯಾರು ಮುರುಳಿಯನ್ನು ಓದಿ ಸರ್ವೀಸ್ ಮಾಡುತ್ತಾರೆಯೋ ಅವರ ಸಮಾಚಾರವು
ಪತ್ರಿಕೆಯಲ್ಲಿ ಬರುತ್ತದೆ. ಈಗ ಯಾವ ಮಕ್ಕಳು ಸಮಾಚಾರ ಪತ್ರಿಕೆಯನ್ನು ಓದುತ್ತಾರೆಯೋ ಅವರಿಗೆ
ಇಂತಿಂತಹ ಸ್ಥಳದಲ್ಲಿ ಇಂತಹ ಸೇವೆಯು ನಡೆಯುತ್ತಿದೆ ಎಂದು ಸೇವಾಕೇಂದ್ರಗಳ ಸರ್ವೀಸಿನ ಸಮಾಚಾರವು
ತಿಳಿಯುತ್ತದೆ ಮತ್ತು ಪುರುಷಾರ್ಥವನ್ನು ಮಾಡುತ್ತಾರೆ. ಸರ್ವೀಸಿನ ಸಮಾಚಾರವನ್ನು ಕೇಳಿ ನಾನೂ ಇಂತಹ
ಸರ್ವೀಸ್ ಮಾಡಬೇಕೆಂದು ಸಂಕಲ್ಪ ಬರುತ್ತದೆ. ನಮ್ಮ ಸಹೋದರ-ಸಹೋದರಿಯರು ಎಷ್ಟು ಸರ್ವೀಸ್
ಮಾಡುತ್ತಾರೆಂದು ಮ್ಯಾಗ್ಸೈನ್ (ಪತ್ರಿಕೆ) ಗಳಿಂದ ತಿಳಿಯುತ್ತದೆ. ಇದಂತೂ ಮಕ್ಕಳು
ತಿಳಿದುಕೊಂಡಿದ್ದೀರಿ, ಯಾರೆಷ್ಟು ಸರ್ವೀಸ್ ಮಾಡುವರೋ ಅಷ್ಟು ಶ್ರೇಷ್ಠಪದವಿಯು ಸಿಗುವುದು
ಆದ್ದರಿಂದ ಸರ್ವೀಸ್ ಮಾಡಲು ಈ ಪತ್ರಿಕೆಯೂ ಉತ್ಸಾಹವನ್ನು ತರಿಸುತ್ತದೆ. ಇದೇನು ವ್ಯರ್ಥವಾಗಿ
ಮುದ್ರಣವಾಗುತ್ತಿಲ್ಲ. ಯಾರು ಇದನ್ನು ಓದುವುದಿಲ್ಲವೋ ಅವರೇ ಇದನ್ನು ವ್ಯರ್ಥವೆಂದು ತಿಳಿಯುತ್ತಾರೆ.
ಕೆಲವರು ನಮಗೆ ಓದುಬರಹ ಗೊತ್ತಿಲ್ಲವೆಂದು ಹೇಳುತ್ತಾರೆ. ಅರೆ! ರಾಮಾಯಣ, ಭಾಗವತ, ಗೀತಾ
ಇತ್ಯಾದಿಗಳನ್ನು ಕೇಳಲು ಹೋಗುತ್ತಾರೆ ಹಾಗೆಯೇ ಇದನ್ನೂ ಸಹ ಬೇರೆಯವರಿಂದ ಓದಿಸಿ ಕೇಳಬೇಕು.
ಇಲ್ಲವೆಂದರೆ ಸರ್ವೀಸಿನ ಉಮ್ಮಂಗವು ಹೆಚ್ಚುವುದಿಲ್ಲ. ಇಂತಹ ಸ್ಥಳದಲ್ಲಿ ಎಂತಹ ಸರ್ವೀಸ್
ನಡೆಯಿತೆಂಬುದನ್ನು ಓದಿ ಇದರ ಆಸಕ್ತಿಯಿದ್ದರೆ ಅನ್ಯರಿಗೆ ಇದನ್ನು ಓದಿ ತಿಳಿಸಿ ಎಂದು ಹೇಳುತ್ತಾರೆ.
ಬಹಳ ಸೇವಾಕೇಂದ್ರಗಳಲ್ಲಿ ಇಂತಹವರೂ ಇರುತ್ತಾರೆ, ಪತ್ರಿಕೆಗಳನ್ನು ಓದುವುದೇ ಇಲ್ಲ, ಕೆಲವರ ಬಳಿಯಂತೂ
ಸೇವೆಯ ಹೆಸರು, ಗುರುತು ಇರುವುದಿಲ್ಲ ಅಂದಮೇಲೆ ಅಂತಹ ಪದವಿಯನ್ನು ಪಡೆಯುತ್ತಾರೆ. ಇದಂತೂ ತಿಳಿದಿದೆ-
ರಾಜಧಾನಿಯು ಸ್ಥಾಪನೆಯಾಗುತ್ತಿದೆ ಅದರಲ್ಲಿ ಯಾರೆಷ್ಟು ಶ್ರಮಪಡುವರೋ ಅಷ್ಟು ಪದವಿಯನ್ನು
ಪಡೆಯುತ್ತಾರೆ. ವಿದ್ಯೆಯಲ್ಲಿ ಗಮನ ಕೊಡದಿದ್ದರೆ ಅನುತ್ತೀರ್ಣರಾಗಿಬಿಡುತ್ತಾರೆ. ಎಲ್ಲವೂ ಈ ಸಮಯದ
ವಿದ್ಯೆಯ ಮೇಲೆ ಆಧಾರಿತವಾಗಿದೆ. ಯಾರೆಷ್ಟು ಓದುತ್ತಾರೆ ಮತ್ತು ಓದಿಸುತ್ತಾರೆಯೋ ಅಷ್ಟೇಅವರಿಗೆ
ಲಾಭವಿದೆ. ಅನೇಕ ಮಕ್ಕಳಿಗೆ ಪತ್ರಿಕೆಯನ್ನು ಓದುವ ವಿಚಾರವೂ ಸಹ ಬರುವುದಿಲ್ಲ, ಅಂತಹವರು ಬಹಳ ಕಡಿಮೆ
ಪದವಿಯನ್ನು ಪಡೆಯುತ್ತಾರೆ. ಇವರು ಇಂತಹ ಪುರುಷಾರ್ಥ ಮಾಡದಕಾರಣ ಈ ಪದವಿಯು ಸಿಕ್ಕಿತೆಂಬ ವಿಚಾರವು
ಸತ್ಯಯುಗದಲ್ಲಿ ಇರುವುದೇ ಇಲ್ಲ. ಇಲ್ಲಿಯೇ ಕರ್ಮ, ವಿಕರ್ಮದ ಮಾತುಗಳೆಲ್ಲವೂ ಬುದ್ಧಿಯಲ್ಲಿದೆ.
ಕಲ್ಪದ ಸಂಗಮಯುಗದಲ್ಲಿಯೇ ತಂದೆಯು ತಿಳಿಸಿಕೊಡುತ್ತಾರೆ- ಯಾರು ತಿಳಿದುಕೊಳ್ಳುವುದಿಲ್ಲವೋ ಅವರು
ಕಲ್ಲುಬುದ್ಧಿಯವರು ಎಂದರ್ಥ. ನೀವೂ ಸಹ ತಿಳಿಯುತ್ತೀರಿ- ಮೊದಲು ನಾವೂ ಸಹ
ತುಚ್ಛಬುದ್ಧಿಯವರಾಗಿದ್ದೆವು, ಅವರಲ್ಲಿ ಪರ್ಸೆಂಟೇಜ್ ಇರುತ್ತದೆ. ತಂದೆಯು ಮಕ್ಕಳಿಗೆ ತಿಳಿಸುತ್ತಾ
ಇರುತ್ತಾರೆ- ಈಗ ಕಲಿಯುಗವಾಗಿದೆ, ಇದರಲ್ಲಿ ಅಪಾರ ದುಃಖವಿದೆ. ಇಂತಹ ದುಃಖವಿದೆ, ಯಾರು
ಬುದ್ಧಿವಂತರಿರುವರೋ ಇವರು ಸರಿಯಾಗಿ ಹೇಳುತ್ತಾರೆಂಬುದನ್ನು ತಕ್ಷಣ ಅರಿತುಕೊಳ್ಳುತ್ತಾರೆ, ನಿಮಗೂ
ಸಹ ಗೊತ್ತಿದೆ- ನೆನ್ನೆ ನಾವು ಎಷ್ಟೊಂದು ದುಃಖಿಯಾಗಿದ್ದೆವು, ಅಪಾರ ದುಃಖದ ಮಧ್ಯದಲ್ಲಿದ್ದೆವು ಈಗ
ಮತ್ತೆ ಅಪಾರ ಸುಖದ ಮಧ್ಯದಲ್ಲಿ ಹೋಗುತ್ತಿದ್ದೇವೆ. ಇದು ರಾವಣರಾಜ್ಯ ಕಲಿಯುಗವೆಂಬುದನ್ನೂ ಸಹ ನೀವು
ತಿಳಿದುಕೊಂಡಿದ್ದೀರಿ. ಯಾರು ತಿಳಿದುಕೊಂಡಿದ್ದಾರೆ ಆದರೆ ಅನ್ಯರಿಗೂ ತಿಳಿಸುವುದಿಲ್ಲವೆಂದರೆ ಅವರು
ಏನನ್ನೂ ತಿಳಿದುಕೊಂಡಿಲ್ಲವೆಂದು ತಂದೆಯು ಹೇಳುತ್ತಾರೆ. ಯಾವಾಗ ಸರ್ವೀಸ್ ಮಾಡಿ, ಸರ್ವೀಸಿನ
ವಿಚಾರವು ಪತ್ರಿಕೆಯಲ್ಲಿ ಬರುವುದೋ ಆಗ ಅವರು ತಿಳಿದುಕೊಂಡಿದ್ದಾರೆಂದು ಅರ್ಥವಾಗಿದೆ.
ದಿನ-ಪ್ರತಿದಿನ ತಂದೆಯು ಬಹಳ ಸಹಜವಾದ ಯುಕ್ತಿಗಳನ್ನೂ ತಿಳಿಸುತ್ತಿರುತ್ತಾರೆ. ಕಲಿಯುಗವು ಇನ್ನೂ
ಮಗುವಾಗಿದೆ ಎಂದು ಮನುಷ್ಯರೂ ತಿಳಿಯುತ್ತಾರೆ. ಯಾವಾಗ ಸಂಗಮಯುಗದ ಬಗ್ಗೆ ತಿಳಿಯುವುದೋ ಆಗಲೆ
ಸತ್ಯಯುಗ ಮತ್ತು ಕಲಿಯುಗದ ಹೋಲಿಕೆ ಮಾಡಲು ಸಾಧ್ಯವಾಗುತ್ತದೆ. ಕಲಿಯುಗದಲ್ಲಿ ಅಪಾರ ದುಃಖವಿದೆ
ಸತ್ಯಯುಗದಲ್ಲಿ ಅಪಾರ ಸುಖವಿದೆ. ತಿಳಿಸಿ, ಅಪಾರ ಸುಖವನ್ನು ನಾವು ಮಕ್ಕಳಿಗೆ ತಂದೆಯು
ಕೊಡುತ್ತಿದ್ದಾರೆ, ಅದನ್ನು ನಾವು ವರ್ಣನೆ ಮಾಡುತ್ತಿದ್ದೇವೆ, ಅದನ್ನು ಮತ್ತ್ಯಾರೂ ತಿಳಿಸಲು
ಸಾಧ್ಯವಿಲ್ಲ. ನೀವು ಹೊಸಮಾತುಗಳನ್ನು ತಿಳಿಸುತ್ತೀರಿ, ನೀವು ಸ್ವರ್ಗವಾಸಿಗಳೋ ಅಥವಾ ನರಕವಾಸಿಗಳೋ
ಎನ್ನುವುದನ್ನು ಮತ್ತ್ಯಾರೂ ಕೇಳಲು ಸಾಧ್ಯವಿಲ್ಲ. ನೀವು ಮಕ್ಕಳಲ್ಲಿಯೂ ನಂಬರ್ವಾರ್ ಇದೆ. ಕೆಲವರು
ಇಷ್ಟೊಂದು ಅಂಶಗಳನ್ನು ನೆನಪಿಟ್ಟುಕೊಳ್ಳುವುದಿಲ್ಲ. ತಿಳಿಸುವ ಸಮಯದಲ್ಲಿ ದೇಹಾಭಿಮಾನವು
ಬಂದುಬಿಡುತ್ತದೆ. ಆತ್ಮವೇ ಕೇಳುತ್ತದೆ ಮತ್ತು ಧಾರಣೆ ಮಾಡುತ್ತದೆ ಆದರೆ ಒಳ್ಳೊಳ್ಳೆಯ ಮಹಾರಥಿಗಳೂ
ಸಹ ಇದನ್ನು ಮರೆತುಹೋಗುತ್ತಾರೆ. ದೇಹಾಭಿಮಾನದಲ್ಲಿ ಬಂದು ಇದನ್ನು ಹೇಳಲು ತೊಡಗುತ್ತಾರೆ. ಹೀಗೆ
ಎಲ್ಲರದೂ ಆಗುತ್ತದೆ. ತಂದೆಯು ತಿಳಿಸುತ್ತಾರೆ- ಎಲ್ಲರೂ ಪುರುಷಾರ್ಥಿಗಳಾಗಿದ್ದಾರೆ, ಎಲ್ಲರೂ
ಆತ್ಮವೆಂದು ತಿಳಿದು ಮಾತನಾಡುವುದಿಲ್ಲ. ತಂದೆಯು ಆತ್ಮವೆಂದು ತಿಳಿದು ಜ್ಞಾನವನ್ನು ಕೊಡುತ್ತಾರೆ
ಆದರೆ ಯಾರು ಸಹೋದರ-ಸಹೋದರರೆಂದು ತಿಳಿದಿದ್ದಾರೆಯೋ ಅವರು ಈ ಸ್ಥಿತಿಯಲ್ಲಿ ನಿಲ್ಲುವ ಪುರುಷಾರ್ಥ
ಮಾಡುತ್ತಿದ್ದಾರೆ ಅಂದಮೇಲೆ ಮಕ್ಕಳೂ ಸಹ ತಿಳಿಸಬೇಕು - ಕಲಿಯುಗದಲ್ಲಿ ಅಪಾರ ದುಃಖವಿದೆ,
ಸತ್ಯಯುಗದಲ್ಲಿ ಅಪಾರ ಸುಖವಿರುತ್ತದೆ. ಈಗ ಸಂಗಮಯುಗವು ನಡೆಯುತ್ತಾ ಇದೆ. ತಂದೆಯು ಸುಖದ
ಮಾರ್ಗವನ್ನೂ ತಿಳಿಸುತ್ತಾರೆ. ಸುಖವನ್ನು ಕೊಡುವುದಿಲ್ಲ ಆದರೆ ಸುಖದ ಮಾರ್ಗವನ್ನು ತಿಳಿಸುತ್ತಾರೆ.
ರಾವಣನೂ ಸಹ ದುಃಖವನ್ನು ಕೊಡುವುದಿಲ್ಲ, ಆದರೆ ದುಃಖದ ಉಲ್ಟಾಮಾರ್ಗವನ್ನು ತಿಳಿಸುತ್ತಾನೆ. ಮತ್ತೆ
ಯಾರೆಷ್ಟು ಪುರುಷಾರ್ಥ ಮಾಡುವರೋ ಅಷ್ಟು ಸುಖವು ಸಿಗುತ್ತದೆ. ಸುಖವನ್ನು ಕೊಡುವುದಿಲ್ಲ, ತಂದೆಯ
ಶ್ರೀಮತದಂತೆ ನಡೆಯುವುದರಿಂದ ಸುಖ ಪಡೆಯುತ್ತೀರಿ. ತಂದೆಯಂತೂ ಕೇವಲ ಮಾರ್ಗವನ್ನು ತಿಳಿಸುತ್ತಾರೆ,
ರಾವಣನಿಂದ ದುಃಖದ ಮಾರ್ಗವು ಸಿಗುತ್ತದೆ, ಒಂದುವೇಳೆ ತಂದೆಯು ಸುಖ ಕೊಡುವಂತಿದ್ದರೆ ಎಲ್ಲರಿಗೆ ಒಂದೇ
ರೀತಿ ಆಸ್ತಿಯು ಸಿಗಬೇಕು. ಹೇಗೆ ಲೌಕಿಕ ತಂದೆಯೂ ಆಸ್ತಿಯನ್ನು ಹಂಚುತ್ತಾರೆ, ಇಲ್ಲಂತೂ ಯಾರು ಎಂತಹ
ಪುರುಷಾರ್ಥವನ್ನು ಮಾಡುವರೋ ಅಂತಹದ್ದನ್ನೇ ಪಡೆಯುತ್ತಾರೆ. ತಂದೆಯು ಬಹಳ ಸಹಜವಾದ ಮಾರ್ಗವನ್ನು
ತಿಳಿಸುತ್ತಾರೆ- ಹೀಗೀಗೆ ಮಾಡಿದರೆ ಇಷ್ಟು ಶ್ರೇಷ್ಠಪದವಿಯನ್ನು ಪಡೆಯುತ್ತೀರಿ. ನಾವು ಎಲ್ಲರಿಗಿಂತ
ಹೆಚ್ಚಿನ ಪದವಿಯನ್ನು ಪಡೆಯಬೇಕು, ಓದಬೇಕೆಂದು ಮಕ್ಕಳು ಪುರುಷಾರ್ಥ ಮಾಡಬೇಕಾಗುತ್ತದೆ. ಭಲೆ ಇವರು
ಶ್ರೇಷ್ಠ ಪದವಿಯನ್ನು ಪಡೆಯಲಿ, ನಾನು ಕುಳಿತೇ ಇರುತ್ತೇನೆ ಎಂದಲ್ಲ. ಪುರುಷಾರ್ಥವು ಮೊದಲು.
ನಾಟಕದನುಸಾರ ಅವಶ್ಯವಾಗಿ ಪುರುಷಾರ್ಥ ಮಾಡಲಾಗುತ್ತದೆ, ಕೆಲವರು ತೀವ್ರ ಪುರುಷಾರ್ಥ ಮಾಡುತ್ತಾರೆ
ಕೆಲವರು ಕಡಿಮೆ ಮಾಡುತ್ತಾರೆ. ಎಲ್ಲವೂ ಪುರುಷಾರ್ಥದ ಮೇಲೆ ಆಧಾರಿತವಾಗಿದೆ. ತಂದೆಯಂತೂ ಮಾರ್ಗವನ್ನು
ತಿಳಿಸಿದ್ದಾರೆ- ನನ್ನನ್ನು ನೆನಪು ಮಾಡಿ, ಎಷ್ಟು ನೆನಪು ಮಾಡುತ್ತೀರೋ ಅಷ್ಟು ವಿಕರ್ಮಗಳು
ವಿನಾಶವಾಗುತ್ತವೆ. ನಾಟಕದ ಮೇಲೆ ಹಾಕಬಾರದು, ಇದಂತೂ ತಿಳುವಳಿಕೆಯ ಮಾತಾಗಿದೆ.
ವಿಶ್ವದ ಇತಿಹಾಸ-ಭೂಗೋಳವು
ಪುನರಾವರ್ತನೆಯಾಗುತ್ತದೆ ಅಂದಾಗ ಅವಶ್ಯವಾಗಿ ಯಾವ ಪಾತ್ರವನ್ನು ಅಭಿನಯಿಸಿದ್ದೀರೋ ಅದನ್ನೇ
ಅಭಿನಯಿಸಬೇಕಾಗುತ್ತದೆ. ಎಲ್ಲಾ ಧರ್ಮದವರು ಪುನಃ ತಮ್ಮ ಸಮಯದಲ್ಲಿ ಬರುತ್ತಾರೆ. ತಿಳಿದುಕೊಳ್ಳಿ,
ಕ್ರಿಶ್ಚಿಯನ್ನರು ಈಗ 100 ಕೋಟಿಯಿದ್ದಾರೆ ಪುನಃ ಇಷ್ಟೇ ಜನರು ಪಾತ್ರವನ್ನಭಿನಯಿಸಲು ಬರುತ್ತಾರೆ.
ಆತ್ಮವು ವಿನಾಶವಾಗುವುದಿಲ್ಲ ಅಂದಾಗ ಅದರ ಪಾತ್ರವೂ ಸಹ ಎಂದಿಗೂ ವಿನಾಶವಾಗುವುದಿಲ್ಲ. ಇವು
ತಿಳಿದುಕೊಳ್ಳುವ ಮಾತುಗಳಾಗಿವೆ. ಯಾರು ತಿಳಿದುಕೊಳ್ಳುವರೋ ಅವರು ಅವಶ್ಯವಾಗಿ ತಿಳಿಸುವರೂ ಕೂಡ.
ಧನದಾನ ಮಾಡಿದರೆ ಮುಗಿಯುವುದಿಲ್ಲ, ಧಾರಣೆಯಾಗುತ್ತಾ ಇರುತ್ತದೆ, ಅನ್ಯರನ್ನೂ ಸಾಹುಕಾರರನ್ನಾಗಿ
ಮಾಡುತ್ತಿರುತ್ತಾರೆ ಆದರೆ ಅದೃಷ್ಟದಲ್ಲಿಲ್ಲವೆಂದರೆ ಮತ್ತೆ ತಮ್ಮನ್ನೂ ಸಹ ಪರವಶವೆಂದು
ತಿಳಿಯುತ್ತಾರೆ. ಶಿಕ್ಷಕರು ಹೇಳುತ್ತಾರೆ- ನೀವು ತಿಳಿಸದಿದ್ದರೆ ನಿಮ್ಮ ಅದೃಷ್ಟದಲ್ಲಿ ಬಿಡಿಗಾಸಿನ
ಪದವಿಯಿದೆ, ಅದೃಷ್ಟದಲ್ಲಿಯೇ ಇಲ್ಲವೆಂದರೆ ಪುರುಷಾರ್ಥವನ್ನೇನು ಮಾಡುತ್ತಾರೆ! ಇದು ಬೇಹದ್ದಿನ
ಪಾಠಶಾಲೆಯಾಗಿದೆ. ಪ್ರತಿಯೊಬ್ಬ ಶಿಕ್ಷಕರ ಸಬ್ಜೆಕ್ಟ್ ಬೇರೆ-ಬೇರೆಯಾಗಿರುತ್ತದೆ. ತಂದೆಯು ಓದಿಸುವ
ವಿಧಾನವು ತಂದೆಗೇ ಗೊತ್ತಿದೆ ಮತ್ತು ನೀವು ಮಕ್ಕಳಿಗೆ ಗೊತ್ತಿದೆ. ಇದನ್ನು ಮತ್ತ್ಯಾರೂ
ತಿಳಿದುಕೊಳ್ಳುವುದಿಲ್ಲ. ಬುದ್ಧಿಯಲ್ಲಿ ಕುಳಿತುಕೊಳ್ಳುವುದೇ ಇಲ್ಲ. ಎಷ್ಟು ಸಮೀಪವಾಗುತ್ತಾ
ಹೋಗುತ್ತೀರೋ ಅಷ್ಟು ಕಂಡುಬರುತ್ತದೆ, ಬುದ್ಧಿವಂತರಾಗುತ್ತಾ ಹೋಗುತ್ತೀರಿ. ಈಗ ಮ್ಯೂಜಿûಯಂ,
ಆತ್ಮಿಕ ಕಾಲೇಜುಗಳನ್ನೂ ತೆರೆಯುತ್ತಾರೆ. ನಿಮ್ಮ ಹೆಸರೇ ಪ್ರಿಯವಾಗಿದೆ- ಆಧ್ಯಾತ್ಮಿಕ
ವಿಶ್ವವಿದ್ಯಾಲಯ. ಸರ್ಕಾರವೂ ಸಹ ನೋಡುತ್ತದೆ. ತಿಳಿಸಿ, ನಿಮ್ಮದು ಶಾರೀರಿಕ ವಿಶ್ವವಿದ್ಯಾಲಯವಾಗಿದೆ,
ಇದು ಆಧ್ಯಾತ್ಮಿಕ ವಿಶ್ವವಿದ್ಯಾಲಯವಾಗಿದೆ, ಆತ್ಮವು ಓದುತ್ತದೆ, ಇಡೀ 84 ಜನ್ಮಗಳ ಚಕ್ರದಲ್ಲಿ
ಒಂದೇಬಾರಿ ತಂದೆಯು ಬಂದು ಆತ್ಮಿಕ ಮಕ್ಕಳಿಗೆ ಓದಿಸುತ್ತಾರೆ. ಸಿನಿಮಾವನ್ನು ನೀವು ನೋಡುತ್ತೀರಿ
ಮತ್ತೆ ಮೂರುಗಂಟೆಗಳ ನಂತರ ಅದೇ ಪುನರಾವರ್ತನೆಯಾಗುತ್ತದೆ, ಇದೂ ಸಹ 5000 ವರ್ಷಗಳ ಚಕ್ರವು
ಚಾಚೂತಪ್ಪದೆ ಪುನರಾವರ್ತನೆಯಾಗುತ್ತದೆ, ಇದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಅವರಂತೂ
ಕೇವಲ ಭಕ್ತಿಯಲ್ಲಿ ಶಾಸ್ತ್ರಗಳನ್ನೇ ಸರಿಯೆಂದು ತಿಳಿಯುತ್ತಾರೆ. ನಿಮಗಂತೂ ಯಾವುದೇ
ಶಾಸ್ತ್ರಗಳಿಲ್ಲ. ತಂದೆಯು ಕುಳಿತು ತಿಳಿಸಿಕೊಡುತ್ತಾರೆ. ತಂದೆಯು ಯಾವುದೇ ಶಾಸ್ತ್ರಗಳನ್ನು
ಓದಿದ್ದಾರೆಯೇ? ಮನುಷ್ಯರಂತೂ ಗೀತೆಯನ್ನು ಓದಿ ತಿಳಿಸುತ್ತಾರೆ. ಮೊದಲೇ ಓದಿಕೊಂಡು ತಾಯಿಯ
ಗರ್ಭದಿಂದ ಬರುವುದಿಲ್ಲ. ಬೇಹದ್ದಿನ ತಂದೆಯ ಪಾತ್ರವು ಓದಿಸುವುದಾಗಿದೆ, ತಮ್ಮ ಪರಿಚಯವನ್ನು
ಕೊಡುತ್ತಾರೆ, ಪ್ರಪಂಚದವರಿಗಂತೂ ಗೊತ್ತೇ ಇಲ್ಲ- ತಂದೆಯು ಜ್ಞಾನಸಾಗರನೆಂದು ಹಾಡುತ್ತಾರೆ.
ಜ್ಞಾನಸಾಗರನೆಂದು ಕೃಷ್ಣನಿಗೆ ಹೇಳುವುದಿಲ್ಲ. ಈ ಲಕ್ಷ್ಮೀ-ನಾರಾಯಣರು ಜ್ಞಾನಸಾಗರರೇ? ಇಲ್ಲ. ಇದೇ
ಆಶ್ಚರ್ಯವಾಗಿದೆ. ನಾವು ಬ್ರಾಹ್ಮಣರೇ ಶ್ರೀಮತದಂತೆ ಈ ಜ್ಞಾನವನ್ನು ಕೇಳುತ್ತೇವೆ. ನೀವು
ತಿಳಿಸುತ್ತೀರಿ- ಈ ಲೆಕ್ಕದಿಂದ ನಾವು ಬ್ರಾಹ್ಮಣರೇ ಪ್ರಜಾಪಿತ ಬ್ರಹ್ಮನ ಸಂತಾನರಾದೆವು, ಅನೇಕ ಬಾರಿ
ಆಗಿದ್ದೆವು ಪುನಃ ಆಗುತ್ತೇವೆ. ಇದು ಮನುಷ್ಯರ ಬುದ್ಧಿಯಲ್ಲಿ ಯಾವಾಗ ಬರುವುದೋ ಆಗ ನಂಬುತ್ತಾರೆ.
ನಿಮಗೆ ಗೊತ್ತಿದೆ, ಕಲ್ಪ-ಕಲ್ಪವೂ ನಾವು ಪ್ರಜಾಪಿತ ಬ್ರಹ್ಮಾರವರ ದತ್ತುಮಕ್ಕಳಾಗುತ್ತೇವೆ. ಯಾರು
ಅರಿತುಕೊಳ್ಳುವರೋ ಅವರು ನಿಶ್ಚಯಬುದ್ಧಿಯವರೂ ಆಗುತ್ತಾರೆ, ಬ್ರಾಹ್ಮಣರಾಗದ ವಿನಃ ದೇವತೆಗಳು
ಹೇಗಾಗುತ್ತೀರಿ? ಪ್ರತಿಯೊಬ್ಬರ ಬುದ್ಧಿಯ ಮೇಲಿದೆ. ಶಾಲೆಯಲ್ಲಿ ಈ ರೀತಿಯಾಗುತ್ತದೆ ಕೆಲವರಂತೂ
ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ, ಕೆಲವರು ಅನುತ್ತೀರ್ಣರಾಗಿಬಿಡುತ್ತಾರೆ ಮತ್ತೆ ಹೊಸದಾಗಿ
ಓದಬೇಕಾಗುತ್ತದೆ. ತಂದೆಯು ತಿಳಿಸುತ್ತಾರೆ- ವಿಕಾರದಲ್ಲಿ ಬಿದ್ದರೆ ಸಂಪಾದನೆಯು ಸಮಾಪ್ತಿಯಾಯಿತು,
ಮತ್ತೆ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ, ಒಳಗೆ ತಿನ್ನುತ್ತಿರುತ್ತದೆ.
ನೀವು ತಿಳಿಯುತ್ತೀರಿ, ಈ
ಜನ್ಮದಲ್ಲಿ ಯಾವ ಪಾಪಗಳನ್ನು ಮಾಡಿದ್ದೆವೆಯೋ ಅದಂತೂ ಎಲ್ಲರಿಗೂ ಗೊತ್ತಿದೆ, ಬಾಕಿ ಹಿಂದಿನ
ಜನ್ಮಗಳಲ್ಲಿ ಏನೇನು ಮಾಡಿದ್ದೇವೆಂದು ನೆನಪಿರುವುದಿಲ್ಲ, ಪಾಪವಂತೂ ಅವಶ್ಯವಾಗಿ ಮಾಡಿದ್ದೇವೆ. ಯಾರು
ಪುಣ್ಯಾತ್ಮರಾಗಿದ್ದರೋ ಅವರೇ ಪಾಪಾತ್ಮರಾಗುತ್ತಾರೆ. ಎಲ್ಲಾ ಲೆಕ್ಕಗಳನ್ನು ತಂದೆಯು ತಿಳಿಸುತ್ತಾರೆ.
ಅನೇಕ ಮಕ್ಕಳು ಮರೆತುಹೋಗುತ್ತಾರೆ ಓದುವುದೇ ಇಲ್ಲ. ಒಂದುವೇಳೆ ಓದಿದ್ದೇ ಆದರೆ ಅವಶ್ಯವಾಗಿ
ಓದಿಸುತ್ತಾರೆ ಕೂಡ. ಕೆಲವರು ಮಂಧಬುದ್ಧಿಯವರು ಬುದ್ಧಿವಂತರಾಗಿಬಿಡುತ್ತಾರೆ. ಎಷ್ಟು
ದೊಡ್ಡವಿದ್ಯೆಯಾಗಿದೆ, ಈ ತಂದೆಯ ವಿದ್ಯೆಯಿಂದಲೇ ಸೂರ್ಯವಂಶಿ, ಚಂದ್ರವಂಶಿ ಮನೆತನವು ಆಗುವುದಿದೆ.
ಅವರು ಈ ಜನ್ಮದಲ್ಲಿಯೇ ಓದಿ ಪದವಿಯನ್ನು ಪಡೆಯುತ್ತಾರೆ. ನಿಮಗೆ ಗೊತ್ತಿದೆ, ಈ ವಿದ್ಯೆಯ ಪದವಿಯು
ನಂತರ ಹೊಸಪ್ರಪಂಚದಲ್ಲಿ ಸಿಗುತ್ತದೆ. ಅದೇನು ದೂರವಿಲ್ಲ. ಬಟ್ಟೆಯನ್ನು ಬದಲಿಸುವಹಾಗೆ, ಹಳೆಯ
ಪ್ರಪಂಚವನ್ನು ಬಿಟ್ಟು ಹೊಸ ಪ್ರಪಂಚಕ್ಕೆ ಹೋಗಬೇಕಾಗಿದೆ ವಿನಾಶವು ಅವಶ್ಯವಾಗಿ ಆಗುತ್ತದೆ, ಈಗ ನೀವು
ಹೊಸ ಪ್ರಪಂಚದವರಾಗುತ್ತಿದ್ದೀರಿ ಮತ್ತೆ ಈ ಹಳೆಯ ಶರೀರವನ್ನು ಬಿಟ್ಟುಹೋಗಬೇಕಾಗಿದೆ. ನಂಬರ್ವಾರ್
ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಯಾರು ಒಳ್ಳೆಯ ರೀತಿಯಲ್ಲಿ ಓದುವರೋ ಅವರೇ ಮೊದಲು ಸ್ವರ್ಗದಲ್ಲಿ
ಬರುತ್ತಾರೆ, ಉಳಿದವರು ಕೊನೆಯಲ್ಲಿ ಬರುತ್ತಾರೆ, ಸ್ವರ್ಗದಲ್ಲಿ ಬರಲು ಸಾಧ್ಯವೇ! ಸ್ವರ್ಗದಲ್ಲಿ
ಯಾವ ದಾಸ-ದಾಸಿಯರಿರುತ್ತಾರೆಯೋ ಅವರೂ ಸಹ ತಂದೆಯ ಹೃದಯವನ್ನೇರಿರುತ್ತಾರೆ. ಎಲ್ಲರೂ
ಬಂದುಬಿಡುತ್ತಾರೆ ಎಂದಲ್ಲ. ಈಗ ಆತ್ಮಿಕ ಕಾಲೇಜುಗಳನ್ನು ತೆರೆಯುತ್ತಾ ಇರುತ್ತಾರೆ, ಎಲ್ಲರೂ ಬಂದು
ಪುರುಷಾರ್ಥ ಮಾಡುತ್ತಾರೆ. ಯಾರು ವಿದ್ಯೆಯಲ್ಲಿ ತೀಕ್ಷ್ಣವಾಗಿ ಹೋಗುತ್ತಾರೆಯೋ ಅವರು ಉತ್ತಮ
ಪದವಿಯನ್ನು ಪಡೆಯುತ್ತಾರೆ. ಮಂಧಬುದ್ಧಿಯವರು ಕಡಿಮೆ ಪದವಿಯನ್ನು ಪಡೆಯುತ್ತಾರೆ. ಮುಂದೆಹೋದಂತೆ
ಮಂಧಬುದ್ಧಿಯವರೂ ಸಹ ಒಳ್ಳೆಯ ಪುರುಷಾರ್ಥ ಮಾಡಲು ತೊಡಗುವ ಸಾಧ್ಯತೆಯಿದೆ. ಕೆಲವರು ಬುದ್ಧಿವಂತರೂ
ಸಹ ಕೆಳಗೆ ಬಂದುಬಿಡುತ್ತಾರೆ, ಪುರುಷಾರ್ಥದಿಂದ ತಿಳಿಯಲಾಗುತ್ತದೆ. ಇದೆಲ್ಲವೂ ನಾಟಕ ನಡೆಯುತ್ತಿದೆ,
ಆತ್ಮವು ಶರೀರಧಾರಣೆ ಮಾಡಿ ಇಲ್ಲಿ ಪಾತ್ರವನ್ನಭಿನಯಿಸುತ್ತದೆ, ಹೊಸ ವಸ್ತ್ರವನ್ನು ಧಾರಣೆ ಮಾಡಿ
ಹೊಸ ಪಾತ್ರವನ್ನಭಿನಯಿಸುತ್ತದೆ. ಕೆಲಕೆಲವೊಮ್ಮೆ ಕೆಲಕೆಲವೊಂದು ರೀತಿ ಆಗುತ್ತದೆ. ಸಂಸ್ಕಾರವು
ಆತ್ಮದಲ್ಲಿರುತ್ತದೆ, ಹೊರಗೆ ಯಾರ ಬಳಿಯೂ ಸ್ವಲ್ಪವೂ ಜ್ಞಾನವಿಲ್ಲ, ಯಾವಾಗ ತಂದೆಯು ಬಂದು ಓದಿಸುವರೋ
ಆಗಲೇ ಜ್ಞಾನವು ಸಿಗುತ್ತದೆ. ಶಿಕ್ಷಕರೇ ಇಲ್ಲವೆಂದರೆ ಜ್ಞಾನವೆಲ್ಲಿಂದ ಬರುತ್ತದೆ. ಅವರು
ಭಕ್ತರಾಗಿದ್ದಾರೆ, ಭಕ್ತಿಯಲ್ಲಿ ಅಪಾರ ದುಃಖವಿದೆ, ಮೀರಾಳಿಗೆ ಭಲೆ ಸಾಕ್ಷಾತ್ಕಾರವಾಯಿತು ಆದರೆ
ಸುಖವಿತ್ತೇನು! ಏನು ರೋಗಿಯಾಗಿರಲಿಲ್ಲವೆ? ಸತ್ಯಯುಗದಲ್ಲಂತೂ ಯಾವುದೇ ಪ್ರಕಾರದ ದುಃಖದ ಮಾತೇ
ಇರುವುದಿಲ್ಲ. ಇಲ್ಲಿ ಅಪಾರ ದುಃಖವಿದೆ, ಅಲ್ಲಿ ಅಪಾರ ಸುಖವಿರುತ್ತದೆ. ಇಲ್ಲಿ ಎಲ್ಲರೂ
ದುಃಖಿಯಾಗುತ್ತಾರೆ, ರಾಜರಿಗೂ ದುಃಖವಿದೆಯಲ್ಲವೆ. ಹೆಸರೇ ಆಗಿದೆ-ದುಃಖಧಾಮ, ಅದು ಸುಖಧಾಮವಾಗಿದೆ.
ಇದು ಸಂಪೂರ್ಣ ದುಃಖ ಮತ್ತು ಸಂಪೂರ್ಣ ಸುಖದ ಸಂಗಮಯುಗವಾಗಿದೆ. ಸತ್ಯಯುಗದಲ್ಲಿ ಸಂಪೂರ್ಣ ಸುಖ,
ಕಲಿಯುಗದಲ್ಲಿ ಸಂಪೂರ್ಣ ದುಃಖ. ದುಃಖದ ಯಾವ ವಿಭಿನ್ನತೆಯಿದೆಯೋ ಎಲ್ಲವೂ ವೃದ್ಧಿಹೊಂದುತ್ತಿರುತ್ತದೆ.
ಮುಂದೆಹೋದಂತೆ ಎಷ್ಟೊಂದು ದುಃಖವಾಗುತ್ತಾ ಇರುವುದು, ಅಪಾರ ದುಃಖದ ಪರ್ವತಗಳು ಬೀಳುತ್ತಿರುತ್ತವೆ.
ಮನುಷ್ಯರು ನಿಮಗೆ ಭಾಷಣದ
ಸಮಯವನ್ನು ಬಹಳ ಕಡಿಮೆ ಕೊಡುತ್ತಾರೆ. ಎರಡು ನಿಮಿಷಗಳು ಕೊಟ್ಟರೂ ಸಹ ತಿಳಿಸಿಕೊಡಿ- ಸತ್ಯಯುಗದಲ್ಲಿ
ಅಪಾರ ಸುಖವಿತ್ತು ಅದನ್ನು ತಂದೆಯು ಕೊಡುತ್ತಾರೆ. ರಾವಣನಿಂದ ಅಪಾರ ದುಃಖವು ಸಿಗುತ್ತದೆ, ಈಗ
ತಂದೆಯು ತಿಳಿಸುತ್ತಾರೆ- ಕಾಮದ ಮೇಲೆ ಜಯಗಳಿಸಿ ಆಗ ಜಗತ್ಜೀತರಾಗುತ್ತೀರಿ. ಈ ಜ್ಞಾನದ
ವಿನಾಶವಾಗುವುದಿಲ್ಲ. ಸ್ವಲ್ಪ ಕೇಳಿದರೂ ಸಹ ಸ್ವರ್ಗದಲ್ಲಿ ಬಂದುಬಿಡುತ್ತಾರೆ. ಅನೇಕರಂತೂ
ಪ್ರಜೆಗಳಾಗುತ್ತಾರೆ. ರಾಜನೆಲ್ಲಿ, ಪ್ರಜೆಗಳೆಲ್ಲಿ! ಪ್ರತಿಯೊಬ್ಬರ ಬುದ್ಧಿಯು ಬೇರೆ-ಬೇರೆಯಾಗಿದೆ.
ಯಾರು ತಿಳಿದುಕೊಂಡು ಅನ್ಯರಿಗೂ ತಿಳಿಸುವರೋ ಅವರೇ ಒಳ್ಳೆಯ ಪದವಿಯನ್ನು ಪಡೆಯುತ್ತಾರೆ. ಈ ಶಾಲೆಯೂ
ಸಹ ಅಸಮಾನ್ಯವಾಗಿದೆ, ಭಗವಂತನು ಬಂದು ಓದಿಸುತ್ತಾರೆ. ಶ್ರೀಕೃಷ್ಣನಂತೂ ದೈವೀಗುಣವುಳ್ಳ
ದೇವತೆಯಾಗಿದ್ದಾನೆ. ತಂದೆಯು ತಿಳಿಸುತ್ತಾರೆ- ನಾನು ದೈವೀಗುಣಗಳು ಮತ್ತು ಅಸುರೀಗುಣಗಳಿಂದ
ಭಿನ್ನವಾಗಿದ್ದೇನೆ, ನಾನು ನಿಮ್ಮ ತಂದೆ ಓದಿಸಲು ಬಂದಿದ್ದೇನೆ. ಆತ್ಮಿಕ ಜ್ಞಾನವನ್ನು ಪರಮಾತ್ಮನೇ
ಕೊಡುತ್ತಾರೆ. ಗೀತಾಜ್ಞಾನವನ್ನು ಯಾವುದೇ ದೇಹಧಾರಿ ಮನುಷ್ಯರು, ದೇವತೆಗಳು ಕೊಟ್ಟಿಲ್ಲ. ವಿಷ್ಣು
ದೇವತಾಯ ನಮಃ ಎಂದು ಹೇಳುತ್ತಾರೆ ಅಂದಾಗ ಕೃಷ್ಣನು ಯಾರು? ದೇವತಾ ಕೃಷ್ಣನೇ ವಿಷ್ಣು
ಆಗಿದ್ದಾರೆಂಬುದು ಯಾರಿಗೂ ಗೊತ್ತಿಲ್ಲ. ನಿಮ್ಮಲ್ಲಿಯೂ ಸಹ ಮರೆತುಹೋಗುತ್ತಾರೆ. ತಾನು ಪೂರ್ಣ
ತಿಳಿದುಕೊಂಡಿದ್ದರೆ ಅನ್ಯರಿಗೂ ತಿಳಿಸಬಹುದು. ಸರ್ವೀಸ್ ಮಾಡಿ ಸಾಕ್ಷಿ (ಪತ್ಯಕ್ಷಪ್ರಮಾಣ)ಯನ್ನು
ತೆಗೆದುಕೊಂಡು ಬಂದರೆ ಆಗ ಸರ್ವೀಸ್ ಮಾಡಿದ್ದೀರೆಂದು ತಿಳಿಯುತ್ತದೆ ಆದ್ದರಿಂದ ತಂದೆಯು
ತಿಳಿಸುತ್ತಾರೆ- ಬಹಳ ವಿಸ್ತಾರವಾದ ಸಮಾಚಾರವನ್ನು ಬರೆಯಬೇಡಿ. ಇಂತಹವರು ಬರುವವರಿದ್ದಾರೆ, ಈ ರೀತಿ
ಹೇಳಿ ಹೋಗಿದ್ದಾರೆ.... ಇದನ್ನು ಬರೆಯುವ ಅವಶ್ಯಕತೆಯಿಲ್ಲ. ಆದಷ್ಟು ಕಡಿಮೆ ಬರೆಯಬೇಕು. ನೋಡಿ,
ಬಂದರು ಅವರು ಜ್ಞಾನದಲ್ಲಿ ನಿಂತರೆ? ಜ್ಞಾನವನ್ನು ಅರಿತುಕೊಂಡು ಸರ್ವೀಸ್ ಮಾಡಲು ತೊಡಗಿದಾಗ
ಸಮಾಚಾರವನ್ನು ಬರೆಯಿರಿ. ಕೆಲವರು ಶೋ ಮಾಡಿ ಸಮಾಚಾರವನ್ನು ತಿಳಿಸುತ್ತಾರೆ. ತಂದೆಗೆ ಪ್ರತಿಯೊಂದು
ಮಾತಿನ ಫಲಿತಾಂಶವು ಬೇಕು. ಈ ರೀತಿಯಂತೂ ಕೆಲವರು ತಂದೆಯ ಬಳಿಗೆ ಬರುತ್ತಾರೆ ಮತ್ತು
ಹೊರಟುಹೋಗುತ್ತಾರೆ. ಅದರಿಂದೇನು ಲಾಭ? ಅದಕ್ಕೆ ತಂದೆಯೇನು ಮಾಡುವುದು? ಅವರಿಗೂ ಲಾಭವಿಲ್ಲ, ನಿಮಗೂ
ಲಾಭವಿಲ್ಲ. ನಿಮ್ಮ ಮಿಷನ್ನ ವೃದ್ಧಿಯಂತೂ ಆಗಲಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ,
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಯಾವುದೇ
ಮಾತಿನಲ್ಲಿ ವಿವಶರಾಗಬಾರದು. ಸ್ವಯಂನಲ್ಲಿ ಜ್ಞಾನಧಾರಣೆ ಮಾಡಿಕೊಂಡು ದಾನ ಮಾಡಬೇಕು. ಅನ್ಯರ
ಅದೃಷ್ಟವನ್ನು ಬೆಳಗಿಸಬೇಕಾಗಿದೆ.
2. ಯಾರೊಂದಿಗಾದರೂ
ಮಾತನಾಡುವ ಸಮಯದಲ್ಲಿ ಸ್ವಯಂನ್ನು ಆತ್ಮನೆಂದು ತಿಳಿದು ಆತ್ಮದೊಂದಿಗೆ ಮಾತನಾಡಬೇಕು. ಸ್ವಲ್ಪವೂ
ದೇಹಾಭಿಮಾನವು ಬರಬಾರದು. ತಂದೆಯಿಂದ ಯಾವ ಅಪಾರ ಸುಖವು ಸಿಕ್ಕಿದೆಯೋ ಅದನ್ನು ಅನ್ಯರಿಗೂ
ಹಂಚಬೇಕಾಗಿದೆ.
ವರದಾನ:
ಹೃದಯ ಮತ್ತು
ಬುದ್ದಿ ಎರಡರ ಬ್ಯಾಲೆನ್ಸ್ ನಿಂದ ಸೇವೆ ಮಾಡುವಂತಹ ಸದಾ ಸಫಲತಾಮೂರ್ತಿ ಭವ.
ಕೆಲವೊಮ್ಮೆ ಮಕ್ಕಳು
ಸೇವೆಯಲ್ಲಿ ಕೇವಲ ಬುದ್ದಿಯನ್ನು ಉಪಯೋಗಿಸುತ್ತಾರೆ ಆದರೆ ಹೃದಯ ಮತ್ತು ಬುದ್ದಿ ಎರಡನ್ನೂ
ಸೇರಿಸಿಕೊಂಡು ಸೇವೆ ಮಾಡಿದಲ್ಲಿ ಸೇವೆಯಲ್ಲಿ ಸಫಲತಾ ಮೂರ್ತಿಗಳಾಗಿಬಿಡುವಿರಿ. ಯಾರು ಕೇವಲ
ಬುದ್ದಿಯಿಂದ ಮಾಡುತ್ತಾರೆ ಅವರ ಬುದ್ದಿಯಲ್ಲಿ ಸ್ವಲ್ಪ ಸಮಯಕ್ಕಾಗಿ ತಂದೆ ನೆನಪಿರುತ್ತಾರೆ. ಹೌದು
ತಂದೆಯೇ ಇದನ್ನೆಲ್ಲಾ ಮಾಡಿಸುತ್ತಾರೆ ಎಂದು ಆದರೆ ಸ್ವಲ್ಪ ಸಮಯದ ನಂತರ ಮತ್ತೆ ಅದೇ ನನ್ನತನ
ಬಂದುಬಿಡುವುದು. ಮತ್ತು ಯಾರು ಹೃದಯದಿಂದ ಮಾಡುತ್ತಾರೆ ಅವರ ಹೃದಯದಲ್ಲಿ ಬಾಬಾನ ನೆನಪು ಸದಾ
ಇರುತ್ತದೆ. ಸೇವೆ ಮಾಡುವುದರ ಫಲವಂತೂ ಸಿಗುತ್ತದೆ. ಮತ್ತು ಒಂದುವೇಳೆ ಇವೆರಡರ ಬ್ಯಾಲೆನ್ಸ್
ಇದ್ದಾಗ ಸದಾ ಸಫಲತೆ ಸಿಗುತ್ತದೆ.
ಸ್ಲೋಗನ್:
ಬೇಹದ್ದಿನಲ್ಲಿದ್ದಾಗ ಹದ್ದಿನ ಮಾತುಗಳು ಸ್ವತಃ ಸಮಾಪ್ತಿಯಾಗಿಬಿಡುತ್ತದೆ.