18.07.25 Morning Kannada Murli Om Shanti
BapDada Madhuban
ಮಧುರ ಮಕ್ಕಳೇ- ತಮ್ಮ
ಮೇಲೆ ತಾವೇ ದಯೆ ತೋರಿಸಿಕೊಳ್ಳಿ, ತಂದೆಯು ಯಾವ ಶ್ರೀಮತವನ್ನು ಕೊಡುತ್ತಾರೆಯೋ ಅದರಂತೆಯೇ
ನಡೆಯುತ್ತಾ ಇರಿ, ತಂದೆಯ ಶ್ರೀಮತವಾಗಿದೆ - ಮಕ್ಕಳೇ, ಸಮಯವನ್ನು ವ್ಯರ್ಥ ಮಾಡಬೇಡಿ, ಸುಕರ್ಮಗಳನ್ನೇ
ಮಾಡಿ.
ಪ್ರಶ್ನೆ:
ಯಾರು
ಅದೃಷ್ಠವಂತ ಮಕ್ಕಳಿದ್ದಾರೆಯೋ ಅವರ ಮುಖ್ಯ ಧಾರಣೆಯೇನಾಗಿದೆ?
ಉತ್ತರ:
ಅದೃಷ್ಟವಂತ
ಮಕ್ಕಳು ಬೆಳಗ್ಗೆ-ಬೆಳಗ್ಗೆ ಎದ್ದು ಬಹಳ ಪ್ರೀತಿಯಿಂದ ನೆನಪು ಮಾಡುತ್ತಾರೆ. ತಂದೆಯೊಂದಿಗೆ ಮಧುರಾತಿ
ಮಧುರವಾಗಿ ಮಾತನಾಡುತ್ತಾರೆ. ಎಂದೂ ಸಹ ತಮ್ಮ ಮೇಲೆ ನಿರ್ಧಯಿಯಾಗುವುದಿಲ್ಲ. ಅವರು ಪಾಸ್-ವಿತ್-ಆನರ್
ಆಗುವ ಪುರುಷಾರ್ಥ ಮಾಡಿ ಸ್ವಯಂನ್ನು ರಾಜ್ಯ ಪದವಿಗೆ ಯೋಗ್ಯರನ್ನಾಗಿ ಮಾಡಿಕೊಳ್ಳುತ್ತಾರೆ.
ಓಂ ಶಾಂತಿ.
ಮಕ್ಕಳು ತಂದೆಯು ಸನ್ಮುಖದಲ್ಲಿ ಕುಳಿತಿದ್ದೀರಿ ಅಂದಮೇಲೆ ನಿಮಗೆ ಗೊತ್ತಿದೆ, ನಮ್ಮ ಬೇಹದ್ದಿನ
ತಂದೆಯಾಗಿದ್ದಾರೆ ಮತ್ತು ನಮಗೆ ಬೇಹದ್ದಿನ ಸುಖವನ್ನು ಕೊಡುವುದಕ್ಕಾಗಿ ಶ್ರೀಮತವನ್ನು
ಕೊಡುತ್ತಿದ್ದಾರೆ. ಅವರಿಗಾಗಿಯೇ ದಯಾ ಸಾಗರ, ಮುಕ್ತಿ ದಾತ..... ಎಂದು ಗಾಯನವಿದೆ. ಬಹಳ ಮಹಿಮೆ
ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಕೇವಲ ಮಹಿಮೆಯ ಮಾತಿಲ್ಲ, ಮಕ್ಕಳಿಗೆ ಮತವನ್ನು ಕೊಡುವುದು
ತಂದೆಯ ಕರ್ತವ್ಯವಾಗಿದೆ. ಬೇಹದ್ದಿನ ತಂದೆಯು ಮತವನ್ನು ಕೊಡುತ್ತಾರೆ. ತಂದೆಯು ಸರ್ವಶ್ರೇಷ್ಠನೆಂದರೆ
ಅವಶ್ಯವಾಗಿ ಅವರ ಮತವೂ ಸರ್ವಶ್ರೇಷ್ಠವಾಗಿರುವುದು. ಮತವನ್ನು ತೆಗೆದುಕೊಳ್ಳುವುದು ಆತ್ಮವಾಗಿದೆ,
ಒಳ್ಳೆಯ ಹಾಗೂ ಕೆಟ್ಟ ಕೆಲಸಗಳನ್ನು ಆತ್ಮವೇ ಮಾಡುತ್ತದೆ. ಈ ಸಮಯದಲ್ಲಿ ಪ್ರಪಂಚಕ್ಕೆ ರಾವಣನ ಮತವು
ಸಿಗುತ್ತದೆ. ನೀವು ಮಕ್ಕಳಿಗೆ ರಾಮನ ಮತವು ಸಿಗುತ್ತಿದೆ. ರಾವಣನ ಮತದಿಂದ ನಿರ್ಧಯಿಯಾಗಿ ಉಲ್ಟಾ
ಕೆಲಸಗಳನ್ನು ಮಾಡುತ್ತಾರೆ. ತಂದೆಯು ಮತ ಕೊಡುತ್ತಾರೆ. ಒಳ್ಳೆಯ ಕಾರ್ಯವನ್ನು ಮಾಡಿ. ಎಲ್ಲದಕ್ಕಿಂತ
ಒಳ್ಳೆಯ ಕಾರ್ಯವೆಂದರೆ ತಮ್ಮ ಮೇಲೆ ತಾವು ದಯೆ ತೋರಿಸಿಕೊಳ್ಳಿ. ನಿಮಗೆ ತಿಳಿದಿದೆ- ನಾವಾತ್ಮಗಳು
ಸತೋಪ್ರಧಾನರಾಗಿದ್ದೆವು, ಬಹಳ ಸುಖಿಯಾಗಿದ್ದೆವು. ನಂತರ ರಾವಣನ ಮತವು ಸಿಗುವುದರಿಂದಲೇ ನೀವು
ತಮೋಪ್ರಧಾನರಾಗಿ ಬಿಟ್ಟಿದ್ದೀರಿ. ಈಗ ಪುನಃ ತಂದೆಯು ಮತ ಕೊಡುತ್ತಾರೆ- ಮಕ್ಕಳೇ, ಮೊದಲನೆಯದಾಗಿ
ತಂದೆಯ ನೆನಪಿನಲ್ಲಿರಿ. ತಮ್ಮ ಮೇಲೆ ತಾವು ದಯೆ ತೋರಿಸಿಕೊಳ್ಳಿ, ತಂದೆಯು ದಯೆ ತೋರಿಸುವುದಿಲ್ಲ,
ಹೀಗೀಗೆ ಮಾಡಿ ಎಂದು ತಂದೆಯು ಮತ ಕೊಡುತ್ತಾರೆ. ತಮ್ಮ ಮೇಲೆ ತಾವು ದಯೆತೋರಿಸಿಕೊಳ್ಳಿ, ತಮ್ಮನ್ನು
ಆತ್ಮವೆಂದು ತಿಳಿದು ಪತಿತ-ಪಾವನ ತಂದೆಯನ್ನು ನೆನಪು ಮಾಡಿ ಆಗ ನೀವು ಪಾವನರಾಗಿ ಬಿಡುವಿರಿ. ನೀವು
ಹೇಗೆ ಪಾವನರಾಗಬಹುದು ಎಂದು ತಂದೆಯು ಸಲಹೆ ಕೊಡುತ್ತಾರೆ. ತಂದೆಯೇ ಪತಿತರನ್ನು ಪಾವನ
ಮಾಡುವವರಾಗಿದ್ದಾರೆ, ಅವರು ಶ್ರೀಮತ ಕೊಡುತ್ತಾರೆ. ಒಂದುವೇಳೆ ಅವರ ಮತದಂತೆ ನಡೆಯಲಿಲ್ಲವೆಂದರೆ
ತಮ್ಮ ಮೇಲೆ ತಾವು ನಿರ್ಧಯಿಯಾಗುತ್ತಾರೆ. ತಂದೆಯು ಶ್ರೀಮತ ಕೊಡುತ್ತಾರೆ- ಮಕ್ಕಳೇ, ಸಮಯವನ್ನು
ವ್ಯರ್ಥ ಮಾಡಬೇಡಿ. ಈ ಪಾಠವನ್ನು ಪಕ್ಕಾ ಮಾಡಿಕೊಳ್ಳಿ- ನಾವಾತ್ಮರಾಗಿದ್ದೇವೆ, ಶರೀರ
ನಿರ್ವಹಣಾರ್ಥವಾಗಿ ಭಲೆ ಉದ್ಯೋಗ-ವ್ಯವಹಾರಗಳನ್ನು ಮಾಡಿ ಆದರೂ ಸಹ ಸಮಯವನ್ನು ತೆಗೆದು ಯುಕ್ತಿಯನ್ನು
ರಚಿಸಿ. ಕೆಲಸ ಮಾಡುತ್ತಿದ್ದರೂ ಆತ್ಮದ ಬುದ್ಧಿಯೋಗವು ತಂದೆಯ ಕಡೆಯಿರಲಿ. ಹೇಗೆ
ಪ್ರಿಯತಮ-ಪ್ರಿಯತಮೆಯರೂ ಸಹ ಕೆಲಸವನ್ನಂತೂ ಮಾಡುತ್ತಾರಲ್ಲವೆ. ಇಬ್ಬರೂ, ಒಬ್ಬರು ಇನ್ನೊಬ್ಬರ ಮೇಲೆ
ಆಕರ್ಷಿತರಾಗುತ್ತಾರೆ. ಇಲ್ಲಿ ಆ ರೀತಿಯಿಲ್ಲ. ನೀವು ಭಕ್ತಿಮಾರ್ಗದಲ್ಲಿಯೇ ನೆನಪು ಮಾಡುತ್ತೀರಿ.
ಹೇಗೆ ನೆನಪು ಮಾಡುವುದು? ನೆನಪು ಮಾಡಲು ಆತ್ಮದ, ಪರಮಾತ್ಮನ ರೂಪವೇನು? ಎಂದು ಕೆಲವರು ಕೇಳುತ್ತಾರೆ
ಏಕೆಂದರೆ ಭಕ್ತಿಮಾರ್ಗದಲ್ಲಿ ಪರಮಾತ್ಮನು ನಾಮ-ರೂಪದಿಂದ ಭಿನ್ನವೆಂದು ಹೇಳಿದ್ದಾರೆ ಆದರೆ ಆ
ರೀತಿಯಲ್ಲ. ಭೃಕುಟಿಯ ನಡುವೆ ಆತ್ಮವು ನಕ್ಷತ್ರದಂತೆ ಇದೆ ಎಂದು ಹೇಳುತ್ತಾರೆ ಅಂದಮೇಲೆ
ಆತ್ಮವೆಂದರೇನು? ಆತ್ಮವನ್ನು ನೋಡಲು ಸಾಧ್ಯವಿಲ್ಲವೆ ಎಂದು ಮತ್ತೇಕೆ ಕೇಳುತ್ತಾರೆ. ಅದು
ಅರಿತುಕೊಳ್ಳುವ ವಸ್ತುವಾಗಿದೆ. ಆತ್ಮವನ್ನು ಮತ್ತು ಪರಮಾತ್ಮನನ್ನೂ ಸಹ ಅರಿತುಕೊಳ್ಳಲಾಗುತ್ತದೆ.
ನೋಡುವ ವಸ್ತುವಲ್ಲ, ಅದು ಅತಿಸೂಕ್ಷ್ಮವಾಗಿದೆ. ಮಿಂಚು ಹುಳುವಿಗಿಂತಲೂ ಸೂಕ್ಷ್ಮವಾಗಿದೆ.
ಶರೀರದಿಂದ ಹೇಗೆ ಹೊರಟು ಹೋಗುತ್ತದೆ ಎಂಬುದು ತಿಳಿಯುವುದೇ ಇಲ್ಲ. ಆತ್ಮವಿದೆಯೆಂದು
ಸಾಕ್ಷಾತ್ಕಾರವಾಗುತ್ತದೆ. ಆತ್ಮದ ಸಾಕ್ಷಾತ್ಕಾರವೆಂದರೇನು? ಅದಂತೂ ಅತಿ ಸೂಕ್ಷ್ಮ ನಕ್ಷತ್ರವಾಗಿದೆ.
ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಹೇಗೆ ಆತ್ಮವೋ ಹಾಗೆಯೇ ಪರಮಾತ್ಮನೂ ಸಹ
ಆತ್ಮನಾಗಿದ್ದಾರೆ ಆದರೆ ಪರಮಾತ್ಮನಿಗೆ ಪರಮ ಆತ್ಮನೆಂದು ಹೇಳಲಾಗುತ್ತದೆ. ಅವರು ಜನನ-ಮರಣದಲ್ಲಿ
ಬರುವುದಿಲ್ಲ. ಯಾವಾಗ ಜನನ-ಮರಣರಹಿತನಾಗಿರುವವರು ಅಂದಮೇಲೆ ಆಗಲೇ ಆತ್ಮಕ್ಕೆ ಸುಪ್ರೀಂ ಎಂದು
ಹೇಳಲಾಗುವುದು ಆದರೆ ಮುಕ್ತಿಧಾಮಕ್ಕಂತೂ ಎಲ್ಲರೂ ಪವಿತ್ರರಾಗಿ ಹೋಗಬೇಕಾಗಿದೆ. ಅದರಲ್ಲಿಯೂ
ನಂಬರ್ವಾರ್ ಇದೆ. ಕೆಲವರದು ನಾಯಕ-ನಾಯಕಿಯ ಪಾತ್ರವಿದೆ. ಆತ್ಮಗಳು ನಂಬರ್ವಾರಂತೂ ಇದ್ದಾರಲ್ಲವೆ.
ನಾಟಕದಲ್ಲಿಯೂ ಸಹ ಕೆಲವರು ಹೆಚ್ಚು ಸಂಬಳದವರು, ಕೆಲವರು ಕಡಿಮೆ ಸಂಬಳದವರಿರುತ್ತಾರೆ.
ಲಕ್ಷ್ಮೀ-ನಾರಾಯಣರ ಆತ್ಮಕ್ಕೆ ಮನುಷ್ಯಾತ್ಮರಿಗಿಂತ ಸುಪ್ರೀಂ ಎಂದು ಹೇಳುತ್ತಾರೆ. ಭಲೆ ಎಲ್ಲರೂ
ಆಗುತ್ತಾರೆ ಆದರೆ ಪಾತ್ರವು ನಂಬರ್ವಾರ್ ಇದೆ. ಕೆಲವರು ಮಹಾರಾಜ, ಕೆಲವರು ದಾಸ-ದಾಸಿ, ಕೆಲವರು
ಪ್ರಜೆ. ನೀವು ಪಾತ್ರಧಾರಿಗಳಾಗಿದ್ದೀರಿ, ನಿಮಗೆ ತಿಳಿದಿದೆ- ಇಷ್ಟೆಲ್ಲಾ ದೇವತೆಗಳು ನಂಬರ್ವಾರ್
ಆಗಿದ್ದಾರೆ. ಒಳ್ಳೆಯ ಪುರುಷಾರ್ಥ ಮಾಡುತ್ತಾರೆ, ಶ್ರೇಷ್ಠರಾಗುತ್ತಾರೆ. ಈಗ ನಿಮಗೆ ಸ್ಮೃತಿ ಬಂದಿದೆ-
ನಾವು 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ, ಈಗ ತಂದೆಯ ಹತ್ತಿರ ಹೋಗಬೇಕಾಗಿದೆ. ಮಕ್ಕಳಿಗೆ
ಖುಷಿಯು ಇದೆ ಮತ್ತು ನಶೆಯು ಇದೆ. ಎಲ್ಲರು ಹೇಳುತ್ತಾರೆ ನಾವು ನರನಿಂದ ನಾರಾಯಣ ವಿಶ್ವದ
ಮಾಲೀಕರಾಗುತ್ತೇವೆ. ಅಂದಾಗ ಅಂತಹ ಪುಋಷಾರ್ಥ ಮಾಡಬೇಕಾಗಿದೆ. ಪುರುಷಾರ್ಥದನುಸಾರ ನಂಬರ್ವಾರ್ ಪದವಿ
ಪಡೆಯುತ್ತಾರೆ. ಎಲ್ಲರಿಗೆ ನಂಬರ್ವಾರ್ ಪಾತ್ರ ಸಿಕ್ಕಿದೆ. ಇದು ಮಾಡಿ ಮಾಡಲ್ಪಟಂತಹ ಡ್ರಾಮಾ ಆಗಿದೆ.
ಈಗ ತಂದೆಯು ನಿಮಗೆ
ಶ್ರೇಷ್ಠ ಮತವನ್ನು ಕೊಡುತ್ತಾರೆ. ಏನಾದರೂ ಮಾಡಿ ತಂದೆಯನ್ನು ನೆನಪು ಮಾಡಿದಾಗ ವಿಕರ್ಮ
ವಿನಾಶವಾಗುವುದು, ಆಗ ನೀವು ತಮೋಪ್ರಧಾನದಿಂದ ಸತೋಪ್ರಧಾನರಾಗಿ ಬಿಡುವಿರಿ. ಪಾಪಗಳ ಹೊರೆಯಂತು ತಲೆಯ
ಮೇಲೆ ಬಹಳಷ್ಟಿದೆ. ಅದನ್ನು ಏನಾದರೂ ಮಾಡಿ ಇಲ್ಲಿಯೇ ಸಮಾಪ್ತಿ ಮಾಡಬೇಕು ಆಗ ಆತ್ಮ ಪವಿತ್ರವಾಗುವುದು.
ತಮೋಪ್ರಧಾನವೂ ನೀವು ಆತ್ಮರಾಗುತ್ತೀರಿ ಸತೋಪ್ರಧಾನವೂ ಆತ್ಮವೇ ಆಗುತ್ತದೆ. ಈ ಸಮಯ ಭಾರತವು ಹೆಚ್ಚು
ಅಸತ್ಯವಂತವಾಗಿದೆ. ಈ ಆಟವೇ ಭಾರತದ ಮೇಲಿದೆ. ಬಾಕಿ ಅವರಂತು ಧರ್ಮ ಸ್ಥಾಪನೆ ಮಾಡಲು ಬರುತ್ತಾರೆ.
ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಕೊನೆಯಲ್ಲಿ ಎಲ್ಲರು
ತಮೋಪ್ರಧಾನರಾಗುತ್ತಾರೆ. ಸ್ವರ್ಗದ ಮಾಲೀಕರು ನೀವು ಆಗುತ್ತೀರಿ. ಭಾರತವು ಬಹಳ ಶ್ರೇಷ್ಠ ದೇಶವಾಗಿದೆ
ಎಂದು ತಿಳಿದುಕೊಂಡಿದ್ದೀರಿ. ಈಗ ಎಷ್ಟು ಬಡ ದೇಶವಾಗಿದೆ, ಬಡವರಿಗೆನೇ ಎಲ್ಲರು ಸಹಾಯ ಮಾಡುತ್ತಾರೆ.
ಪ್ರತಿಯೊಂದು ಮಾತಿನ ಭಿಕ್ಷೆ ಬೇಡುತ್ತಲೇ ಇರುತ್ತಾರೆ. ಮೊದಲು ಬಹಳಷ್ಟು ದವಸ-ಧಾನ್ಯ ಇಲ್ಲಿಂದ
ಹೋಗುತ್ತಿತ್ತು. ಈಗ ಬಡವರಾದ ಮೇಲೆ ರಿಟರ್ನ್ ಸರ್ವಿಸ್ ತೆಗೆದುಕೊಳ್ಳುತ್ತಿದೆ. ಏನು ತೆಗೆದುಕೊಂಡು
ಹೋದರು ಅದರ ಸಾಲ ಸಿದುತ್ತಿದೆ. ಶ್ರೀ ಕೃಷ್ಣ ಮತ್ತು ಕ್ರಿಶ್ಚಿಯನ್ ರಾಶಿ ಒಂದೇ ಆಗಿದೆ.
ಕ್ರಿಶ್ಚಿಯನವರೇ ಭಾರತವನ್ನು ತಮ್ಮ ವಶದಲ್ಲಿ ತೆಗೆದುಕೊಂಡರು. ಈಗ ಡ್ರಾಮಾನುಸಾರ ಅವರು
ಪರಸ್ಪರದಲ್ಲಿ ಜಗಳವಾಡುತ್ತಿದ್ದಾರೆ, ಬೆಣ್ಣೆ ನೀವು ಮಕ್ಕಳಿಗೆ ಸಿಗುತ್ತದೆ. ಈ ರೀತಿಯಲ್ಲ
ಶ್ರೀಕೃಷ್ಣನ ಮುಖದಲ್ಲಿ ಬೆಣ್ಣೆಯಿತ್ತು. ಇದಂತು ಶಾಸ್ತ್ರದಲ್ಲಿ ಬರೆದು ಬಿಟ್ಟಿದ್ದಾರೆ. ಇಡೀ
ಪ್ರಪಂಚ ಶ್ರೀಕೃಷ್ಣನ ಕೈಯಲ್ಲಿ ಬರುತ್ತದೆ. ಇಡೀ ವಿಶ್ವಕ್ಕೆ ನೀವು ಮಾಲೀಕರಾಗುತ್ತೀರಿ. ನೀವು
ಮಕ್ಕಳು ತಿಳಿದುಕೊಂಡಿದ್ದೀರಿ ನಾವು ವಿಶ್ವದ ಮಾಲೀಕರಾಗುತ್ತೇವೆ ಅಂದಾಗ ನಿಮಗೆ ಎಷ್ಟು
ಖುಷಿಯಾಗಬೇಕು. ನಿಮ್ಮ ಹೆಜ್ಜೆ-ಹೆಜ್ಜೆಯಲ್ಲಿ ಪದಮವಿದೆ. ಕೇವಲ ಒಂದು ಲಕ್ಷ್ಮೀ-ನಾರಾಯಣರ
ರಾಜ್ಯವಿರುವುದಿಲ್ಲ. ವಂಶಾವಳಿಯಿರುತ್ತದೆಯಲ್ಲವೇ. ಯಥಾ ರಾಜಾ-ರಾಣಿ ತಥಾ ಪ್ರಜಾ – ಎಲ್ಲರೂ
ಹೆಜ್ಜೆಯಲ್ಲಿ ಪದಮವಿದೆ. ಅಲ್ಲಂತು ಎಣಿಸಲಾಗದಷ್ಟು ಹಣವಿರುತ್ತದೆ. ಹಣಕ್ಕೋಸ್ಕರ ಪಾಪ
ಇತ್ಯಾದಿಗಳನ್ನು ಮಾಡುವುದಿಲ್ಲ, ಅಪಾರ ಹಣವಿರುತ್ತದೆ. ಅಲ್ಲಾಹ ಅವಲ್ದ್ದೀನ್ ಆಟವನ್ನು
ತೋರಿಸುತ್ತಾರಲ್ಲವೇ. ಅಲ್ಲಾಹ್ ಅವಲ್ದ್ದೀನ್ ಎಂದರೆ ದೇವಿ ದೇವತಾ ಧರ್ಮ ಸ್ಥಾಪನೆ ಮಾಡುತ್ತಾರೆ.
ಸೆಕೆಂಡಿನಲ್ಲಿ ಜೀವನಮುಕ್ತಿ ಕೊಟ್ಟು ಬಿಡುತ್ತಾರೆ. ಸೆಕೆಂಡಿನಲ್ಲಿ ಸಾಕ್ಷಾತ್ಕಾರವಾಗುತ್ತದೆ.
ಖಾರೂನಿನ ಖಜಾನೆ ತೋರಿಸುತ್ತಾರೆ. ಮೀರಾ ಶ್ರೀಕೃಷ್ಣನೊಂದಿಗೆ ಸಾಕ್ಷಾತ್ಕಾರದಲ್ಲಿ ನೃತ್ಯ
ಮಾಡುತ್ತಿದ್ದರು. ಅದು ಭಕ್ತಿ ಮಾರ್ಗವಾಗಿತ್ತು. ಇಲ್ಲಿ ಭಕ್ತಿ ಮಾರ್ಗದ ಮಾತಿಲ್ಲ. ನೀವಂತು
ವೈಕುಂಠದಲ್ಲಿ ಪ್ರಾಕ್ಟಿಕಲ್ನಲ್ಲಿ ಹೋಗಿ ರಾಜ್ಯಭಾರ ನಡೆಸುವಿರಿ. ಭಕ್ತಿ ಮಾರ್ಗದಲ್ಲಿ ಕೇವಲ
ಸಾಕ್ಷಾತ್ಕಾರವಾಗುತ್ತದೆ. ಈ ಸಮಯದಲ್ಲಿ ನೀವು ಮಕ್ಕಳಿಗೆ ಗುರಿ ಉದ್ದೇಶದ ಸಾಕ್ಷಾತ್ಕಾರವಾಗುತ್ತದೆ,
ತಿಳಿದುಕೊಂಡಿದ್ದೀರಿ ನಾವು ಈ ರೀತಿ ಆಗುತ್ತೇವೆ. ಮಕ್ಕಳು ಮರೆತು ಹೋಗುತ್ತಾರೆ ಅದಕ್ಕಾಗಿ
ಬ್ಯಾಡ್ಜ್ ಕೊಡಲಾಗುತ್ತದೆ. ಈಗ ನಾವು ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆ. ಎಷ್ಟು ಖುಷಿಯಾಗಬೇಕು.
ಇದಂತು ಪದೇ-ಪದೇ ಪಕ್ಕಾ ಮಾಡಿಕೊಳ್ಲಬೇಕು. ಆದರೆ ಮಾಯೆಯು ಎದುರಿನಲ್ಲಿದೆ ಅಂದಾಗ ಆ ಖುಷಿಯು ಸಹ
ಹೋಗಿ ಬಿಡುತ್ತದೆ. ತಂದೆಯನ್ನು ನೆನಪು ಮಾಡುತ್ತಿದ್ದರೆ ನಶೆಯಿರುತ್ತದೆ - ಬಾಬಾ ನಮ್ಮನ್ನು
ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ನಂತರ ಮಾಯೆಯು ಮರೆಸಿಬಿಡುತ್ತದೆ ಆಗ ಏನಾದರೂ ವಿಕರ್ಮ ಆಗಿ
ಬಿಡುತ್ತದೆ. ನೀವು ಮಕ್ಕಳಿಗೆ ಸ್ಮೃತಿ ಬಂದಿದೆ - ನಾವು 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ,
ಮತ್ತ್ಯಾರೂ 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ. ಇದನ್ನೂ ಸಹ ತಿಳಿದುಕೊಳ್ಳಬಹುದು - ನಾವು
ಎಷ್ಟು ನೆನಪು ಮಾಡುತ್ತೇವೆಯೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೇವೆ ಮತ್ತೆ ತಮ್ಮ
ಸಮಾನರನ್ನಾಗಿಯೂ ಮಾಡಿಕೊಳ್ಳಬೇಕಾಗಿದೆ, ಪ್ರಜೆಗಳನ್ನು ತಯಾರು ಮಾಡಬೇಕಾಗಿದೆ. ದಾನವು ಮನೆಯಿಂದಲೇ
ಆರಂಭವಾಗುತ್ತದೆ, ತೀರ್ಥ ಯಾತ್ರೆಗಳಲ್ಲಿಯೂ ಮೊದಲು ತಾವೇ ಹೋಗುತ್ತಾರೆ ನಂತರ ಮಿತ್ರಸಂಬಂಧಿಗಳು
ಮೊದಲಾದವರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತಾರೆ. ಹಾಗೆಯೇ ನೀವೂ ಸಹ ಪ್ರೀತಿಯಿಂದ ಎಲ್ಲರಿಗೆ
ತಿಳಿಸಿಕೊಡಿ. ಎಲ್ಲರೂ ತಿಳಿದುಕೊಳ್ಳುವುದಿಲ್ಲ, ಒಂದೇ ಮನೆಯಲ್ಲಿ ತಂದೆಯು ತಿಳಿದುಕೊಂಡರೆ ಮಕ್ಕಳು
ತಿಳಿದುಕೊಳ್ಳುವುದಿಲ್ಲ. ಈ ಹಳೆಯ ಪ್ರಪಂಚದೊಂದಿಗೆ ಮನಸ್ಸನ್ನಿಡಬೇಡಿ ಎಂದು ತಂದೆ-ತಾಯಿಯು ಎಷ್ಟೇ
ಹೇಳಲಿ ಆದರೆ ಒಪ್ಪುವುದಿಲ್ಲ, ತೊಂದರೆ ಕೊಡುತ್ತಾರೆ. ಯಾರು ಇಲ್ಲಿಯವರಾಗಿದ್ದಾರೆಯೋ ಅವರೇ ಬಂದು
ತಿಳಿದುಕೊಳ್ಳುತ್ತಾರೆ. ಈ ಧರ್ಮದ ಸ್ಥಾಪನೆ ನೋಡಿ ಹೇಗಾಗುತ್ತದೆ! ಅನ್ಯ ಧರ್ಮದವರ ಸಸಿಯು
ನಾಟಿಯಾಗುವುದಿಲ್ಲ, ಅವರಂತೂ ಮೇಲಿಂದ ಬರುತ್ತಾರೆ. ಅವರ ಹಿಂದೆ ಅವರ ಅನುಯಾಯಿಗಳೂ ಸಹ ಬರುತ್ತಾರೆ.
ಇಲ್ಲಂತೂ ತಂದೆಯೇ ಸ್ಥಾಪನೆ ಮಾಡುತ್ತಾರೆ ಮತ್ತೆ ಎಲ್ಲರನ್ನೂ ಪಾವನ ಮಾಡಿ ಕರೆದುಕೊಂಡು ಹೋಗುತ್ತಾರೆ
ಆದ್ದರಿಂದ ಅವರಿಗೆ ಸದ್ಗುರು, ಮುಕ್ತಿದಾತನೆಂದು ಹೇಳಲಾಗುತ್ತದೆ. ಸತ್ಯವಾದ ಸದ್ಗುರುವು ಒಬ್ಬರೇ
ಆಗಿದ್ದಾರೆ. ಮನುಷ್ಯರೆಂದೂ ಯಾರದೇ ಸದ್ಗತಿ ಮಾಡುವುದಿಲ್ಲ. ಸದ್ಗತಿದಾತನು ಒಬ್ಬರೇ ಆಗಿದ್ದಾರೆ.
ಅವರಿಗೆ ಸದ್ಗುರುವೆಂದು ಹೇಳಲಾಗುತ್ತದೆ. ಭಾರತವನ್ನು ಸತ್ಯ ಖಂಡವನ್ನಾಗಿಯೂ ಅವರು ಮಾಡುತ್ತಾರೆ.
ರಾವಣನು ಅಸತ್ಯ ಖಂಡವನ್ನಾಗಿ ಮಾಡುತ್ತಾನೆ. ತಂದೆಯ ಬಗ್ಗೆಯೂ, ದೇವತೆಗಳ ಬಗ್ಗೆಯೂ ಅಸತ್ಯವನ್ನು
ಹೇಳಿಬಿಡುತ್ತಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಕೆಟ್ಟದ್ದನ್ನು ಕೇಳಬೇಡಿ.... ಇದಕ್ಕೆ
ವೇಶ್ಯಾಲಯವೆಂದೂ ಹೇಳಲಾಗುತ್ತದೆ. ಸತ್ಯಯುಗವು ಶಿವಾಲಯವಾಗಿತ್ತು. ಮನುಷ್ಯರು ಇದನ್ನು
ತಿಳಿದುಕೊಂಡಿಲ್ಲ. ಅವರಂತೂ ತಮ್ಮ ಮತದನುಸಾರವೇ ನಡೆಯುತ್ತಾರೆ. ಎಷ್ಟೊಂದು ಹೊಡೆದಾಟ, ಜಗಳವು
ನಡೆಯುತ್ತಿರುತ್ತದೆ. ಮಕ್ಕಳು ತಾಯಿಯನ್ನು, ಪತಿಯು ಸ್ತ್ರೀಯನ್ನು ಹೊಡೆಯುವುದರಲ್ಲಿ
ನಿಧಾನಿಸುವುದಿಲ್ಲ. ಒಬ್ಬರು ಇನ್ನೊಬ್ಬರನ್ನು ಕುಟುಕುತ್ತಿರುತ್ತಾರೆ. ತಂದೆಯ ಬಳಿ ಬಹಳ ಹಣವಿದ್ದರೆ
ಅದನ್ನು ಕೊಡದಿದ್ದರೆ ಮಕ್ಕಳು ನೋಡಿ ತಂದೆಯನ್ನು ಹೊಡೆಯುವುದರಲ್ಲಿ ನಿಧಾನಿಸುವುದಿಲ್ಲ. ಎಂತಹ
ಕೆಟ್ಟ ಪ್ರಪಂಚವಾಗಿದೆ! ನೀವೀಗ ಶ್ರೇಷ್ಠರಾಗುತ್ತಿದ್ದೀರಿ, ನಿಮ್ಮ ಗುರಿ-ಧ್ಯೇಯವೂ ಸನ್ಮುಖದಲ್ಲಿದೆ.
ಹೇ ಪತಿತ-ಪಾವನ ಬಂದು ನಮ್ಮನ್ನು ಪಾವನರನ್ನಾಗಿ ಮಾಡಿ ಎಂದಷ್ಟೇ ನೀವು ಹೇಳುತ್ತಿದ್ದಿರಿ. ವಿಶ್ವದ
ಮಾಲೀಕರನ್ನಾಗಿ ಮಾಡಿ ಎಂದು ನೀವು ಹೇಳುತ್ತಿರಲಿಲ್ಲ, ಪರಮಪಿತ ಪರಮಾತ್ಮನು ಸ್ವರ್ಗದ ಸ್ಥಾಪನೆ
ಮಾಡುತ್ತಾರೆಂದರೆ ನಾವೇಕೆ ಸ್ವರ್ಗದಲ್ಲಿಲ್ಲ. ರಾವಣನೇ ನಿಮ್ಮನ್ನು ನರಕವಾಸಿಗಳನ್ನಾಗಿ ಮಾಡುತ್ತಾನೆ.
ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಹೇಳಿರುವುದರಿಂದ ಮರೆತು ಹೋಗಿದ್ದಾರೆ. ತಂದೆಯು
ತಿಳಿಸುತ್ತಾರೆ - ನೀವು ಸ್ವರ್ಗದ ಮಾಲೀಕರಾಗಿದ್ದಿರಿ, ಈಗ ಪುನಃ ಚಕ್ರವನ್ನು ಸುತ್ತಿ ನರಕದ
ಮಾಲೀಕರಾಗಿದ್ದೀರಿ. ಈಗ ಮತ್ತೆ ನಿಮ್ಮನ್ನು ತಂದೆಯು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ.
ತಿಳಿಸುತ್ತಾರೆ - ಮಧುರ ಆತ್ಮಗಳೇ, ಮಕ್ಕಳೇ ತಂದೆಯನ್ನು ನೆನಪು ಮಾಡಿ ಆಗ ನೀವು ತಮೋಪ್ರಧಾನರಿಂದ
ಸತೋಪ್ರಧಾನರಾಗಿ ಬಿಡುತ್ತೀರಿ. ತಮೋಪ್ರಧಾನರಾಗುವುದರಲ್ಲಿ ಅರ್ಧ ಕಲ್ಪ ಹಿಡಿಸಿದೆ ಅಥವಾ ಇಡೀ
ಕಲ್ಪವೆಂದೇ ಹೇಳಬಹುದು ಏಕೆಂದರೆ ಸತ್ಯಯುಗದಿಂದಲೂ ಕಲೆಗಳು ಕಡಿಮೆಯಾಗುತ್ತಲೇ ಹೋಗುತ್ತದೆ. ಈ
ಸಮಯದಲ್ಲಿ ಯಾವುದೇ ಕಲೆಯಿಲ್ಲ. ನಾನು ನಿರ್ಗುಣನಲ್ಲಿ ಯಾವುದೇ ಗುಣವಿಲ್ಲವೆಂದು ಹೇಳುತ್ತಾರೆ. ಅದರ
ಅರ್ಥವು ಎಷ್ಟು ಸ್ಪಷ್ಟವಾಗಿದೆ! ಇಲ್ಲಿ ನಿರ್ಗುಣ ಬಾಲಕರ ಸಂಸ್ಥೆಯೂ ಇದೆ. ಬಾಲಕರಲ್ಲಿ ಯಾವುದೇ
ಗುಣವಿಲ್ಲ, ಇಲ್ಲವೆಂದರೆ ಬಾಲಕರನ್ನು ಮಹಾತ್ಮರಿಗಿಂತಲೂ ಶ್ರೇಷ್ಠರೆಂತಲೂ ಹೇಳಲಾಗುತ್ತದೆ. ಅವರಿಗೆ
ವಿಕಾರಗಳ ಬಗ್ಗೆ ತಿಳಿದಿರುವುದಿಲ್ಲ. ಮಹಾತ್ಮರಿಗಾದರೂ ವಿಕಾರಗಳ ಬಗ್ಗೆ ತಿಳಿದಿರುತ್ತದೆ ಅಂದಮೇಲೆ
ಶಬ್ಧಗಳನ್ನು ಎಷ್ಟು ತಪ್ಪಾಗಿ ಉಚ್ಛರಿಸುತ್ತಾರೆ! ಮಾಯೆಯು ಸಂಪೂರ್ಣ ಅಸತ್ಯವಂತರನ್ನಾಗಿ
ಮಾಡುತ್ತದೆಯಲ್ಲವೆ. ಗೀತೆಯನ್ನು ಓದುತ್ತಾರೆ, ಭಗವಾನುವಾಚ - ಕಾಮ ಮಹಾಶತ್ರುವಾಗಿದೆ. ಇದು
ಆದಿ-ಮಧ್ಯ-ಅಂತ್ಯ ದುಃಖ ಕೊಡುವಂತಹದ್ದಾಗಿದೆ ಎಂಬುದನ್ನೂ ಹೇಳುತ್ತಾರೆ ಆದರೂ ಸಹ ಎಷ್ಟೊಂದು ವಿಘ್ನ
ಹಾಕುತ್ತಾರೆ. ತಂದೆಯು ತಿಳಿಸುತ್ತಾರೆ- ನೀವು ಮಕ್ಕಳು ಶ್ರೀಮತದಂತೆ ನಡೆಯಬೇಕಾಗಿದೆ. ಯಾರು
ಹೂಗಳಾಗುವವರಲ್ಲವೋ ಅವರಿಗೆ ನೀವು ಎಷ್ಟೇ ತಿಳಿಸಿದರೂ ಅವರೆಂದೂ ಒಪ್ಪುವುದಿಲ್ಲ. ಕೆಲವೊಂದೆಡೆ ನಾವು
ವಿವಾಹ ಮಾಡಿಕೊಳ್ಳುವುದಿಲ್ಲವೆಂದು ಮಕ್ಕಳು ಹೇಳಿದಾಗ ತಂದೆ-ತಾಯಿಗಳು ಎಷ್ಟೊಂದು ಅತ್ಯಾಚಾರ
ಮಾಡುತ್ತಾರೆ!
ತಂದೆಯು ತಿಳಿಸುತ್ತಾರೆ
- ಯಾವಾಗ ಈ ಜ್ಞಾನ ಯಜ್ಞವನ್ನು ರಚಿಸುತ್ತೇನೆಯೋ ಆಗ ಅನೇಕ ಪ್ರಕಾರದ ವಿಘ್ನಗಳು ಬೀಳುತ್ತವೆ. ಮೂರು
ಹೆಜ್ಜೆಗಳಷ್ಟು ಭೂಮಿಯನ್ನೂ ಕೊಡುವುದಿಲ್ಲ, ನೀವು ಕೇವಲ ತಂದೆಯ ಮತದನುಸಾರ ನೆನಪು ಮಾಡಿ
ಪವಿತ್ರರಾಗುತ್ತೀರಿ, ಮತ್ತ್ಯಾವುದೇ ಕಷ್ಟವಿಲ್ಲ. ಕೇವಲ ನಿಮ್ಮನ್ನು ಆತ್ಮವೆಂದು ತಿಳಿದು
ತಂದೆಯನ್ನು ನೆನಪು ಮಾಡಿ. ಹೇಗೆ ನೀವಾತ್ಮರು ಈ ಶರೀರದಲ್ಲಿ ಅವತರಿತರಾಗಿದ್ದೀರೋ ಹಾಗೆಯೇ ತಂದೆಯೂ
ಸಹ ಈ ಶರೀರದಲ್ಲಿ ಅವತರಿತರಾಗಿದ್ದಾರೆ. ಅವರು ಮೀನು-ಮೊಸಳೆಯ ಅವತಾರವಾಗಲು ಹೇಗೆ ಸಾಧ್ಯ! ಎಷ್ಟು
ನಿಂದನೆ ಮಾಡುತ್ತಾರೆ, ಕಣ-ಕಣದಲ್ಲಿಯೂ ಭಗವಂತನಿದ್ದಾರೆಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ
- ನನ್ನ ಮತ್ತು ದೇವತೆಗಳ ನಿಂದನೆ ಮಾಡುತ್ತಾರೆ. ನಾನೇ ಬರಬೇಕಾಗುತ್ತದೆ, ಬಂದು ನೀವು ಮಕ್ಕಳಿಗೆ
ಪುನಃ ಆಸ್ತಿಯನ್ನು ಕೊಡುತ್ತೇನೆ. ನಾನು ಆಸ್ತಿಯನ್ನು ಕೊಡುತ್ತೇನೆ, ರಾವಣನು ಶಾಪ ಕೊಡುತ್ತಾನೆ.
ಇದು ಆಟವಾಗಿದೆ. ಯಾರು ಶ್ರೀಮತದಂತೆ ನಡೆಯುವುದಿಲ್ಲವೋ ಅವರ ಅದೃಷ್ಟವೇ ಶ್ರೇಷ್ಠವಾಗಿಲ್ಲವೆಂದು
ತಿಳಿದುಕೊಳ್ಳುತ್ತೇವೆ. ಅದೃಷ್ಟವಂತರು ಬೆಳಗ್ಗೆ-ಬೆಳಗ್ಗೆ ಎದ್ದು ನೆನಪು ಮಾಡುತ್ತಾರೆ,
ತಂದೆಯೊಂದಿಗೆ ಮಾತನಾಡುತ್ತಾರೆ. ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿ ಆಗ
ವಿಕರ್ಮಗಳು ವಿನಾಶವಾಗುವುದು. ಖುಷಿಯ ನಶೆಯೂ ಏರುವುದು. ಯಾರು ಗೌರವಾನ್ವಿತವಾಗಿ ತೇರ್ಗಡೆಯಾಗುವರೋ
ಅವರೇ ರಾಜ್ಯ ಪದವಿಗೆ ಯೋಗ್ಯರಾಗುತ್ತಾರೆ. ಕೇವಲ ಒಬ್ಬ ಲಕ್ಷ್ಮೀ-ನಾರಾಯಣರೇ ರಾಜ್ಯ ಮಾಡುವುದಿಲ್ಲ,
ರಾಜಧಾನಿಯಿರುತ್ತದೆ. ಈಗ ನೀವು ಎಷ್ಟು ಸ್ವಚ್ಛ ಬುದ್ಧಿಯವರಾಗುತ್ತೀರಿ! ಇದಕ್ಕೆ ಸತ್ಸಂಗವೆಂದು
ಹೇಳಲಾಗುತ್ತದೆ. ಸತ್ಸಂಗವು ಒಂದೇ ಆಗಿದೆ, ತಂದೆಯು ಸತ್ಯ-ಸತ್ಯವಾದ ಜ್ಞಾನವನ್ನು ಕೊಟ್ಟು ಸತ್ಯ
ಖಂಡದ ಮಾಲೀಕರನ್ನಾಗಿ ಮಾಡುತ್ತಾರೆ. ಕಲ್ಪದ ಸಂಗಮಯುಗದಲ್ಲಿಯೇ ಸತ್ಯ ತಂದೆಯ ಸಂಗವು ಸಿಗುತ್ತದೆ.
ಸ್ವರ್ಗದಲ್ಲಿ ಯಾವುದೇ ಪ್ರಕಾರದ ಸತ್ಸಂಗವಿರುವುದಿಲ್ಲ.
ನೀವೀಗ ಆತ್ಮೀಯ ರಕ್ಷಣಾ
ಸೈನಿಕರಾಗಿದ್ದೀರಿ. ನೀವು ವಿಶ್ವದ ದೋಣಿಯನ್ನು ಪಾರು ಮಾಡುತ್ತೀರಿ. ನಿಮ್ಮನ್ನು ರಕ್ಷಣೆ ಮಾಡುವವರು,
ಶ್ರೀಮತವನ್ನು ಕೊಡುವವರು ತಂದೆಯಾಗಿದ್ದಾರೆ. ನಿಮ್ಮ ಮಹಿಮೆಯು ಬಹಳ ಭಾರಿಯಾಗಿದೆ! ತಂದೆಯ ಮಹಿಮೆ,
ಭಾರತದ ಮಹಿಮೆಯು ಅಪರಮಪಾರವಾಗಿದೆ. ನೀವು ಮಕ್ಕಳ ಮಹಿಮೆಯೂ ಅಪರಮಪಾರವಾಗಿದೆ. ನೀವು ಬ್ರಹ್ಮಾಂಡಕ್ಕೆ
ಮತ್ತು ವಿಶ್ವಕ್ಕೂ ಮಾಲೀಕರಾಗುತ್ತೀರಿ. ನಾನಂತೂ ಕೇವಲ ಬ್ರಹ್ಮಾಂಡದ ಮಾಲೀಕನಾಗಿದ್ದೇನೆ. ನಿಮಗೆ
ಡಬಲ್ ಪೂಜೆಯು ನಡೆಯುತ್ತದೆ. ಡಬಲ್ ಪೂಜೆಯು ನಡೆಯಲು ನಾನು ದೇವತೆಯಾಗುವುದಿಲ್ಲ. ನಿಮ್ಮಲ್ಲಿಯೂ
ನಂಬರ್ವಾರ್ ತಿಳಿದುಕೊಳ್ಳುತ್ತಾರೆ ಮತ್ತು ಖುಷಿಯಲ್ಲಿ ಬಂದು ಪುರುಷಾರ್ಥ ಮಾಡುತ್ತಾರೆ.
ವಿದ್ಯೆಯಲ್ಲಿ ಎಷ್ಟು ಅಂತರವಿದೆ! ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವು ನಡೆಯುತ್ತದೆ.
ಅಲ್ಲಿ ಮಂತ್ರಿಗಳಿರುವುದಿಲ್ಲ. ಲಕ್ಷ್ಮೀ-ನಾರಾಯಣ ಯಾರಿಗೆ ಭಗವಾನ್-ಭಗವತಿಯೆಂದು ಹೇಳುವರೋ ಅವರು
ಮಂತ್ರಿಗಳ ಸಲಹೆಯನ್ನು ತೆಗೆದುಕೊಳ್ಳುವರೇ! ಯಾವಾಗ ಪತಿತ ರಾಜರಾಗುವರೋ ಆಗ
ಮಂತ್ರಿಗಳನ್ನಿಟ್ಟುಕೊಳ್ಳುತ್ತಾರೆ. ಈಗಂತೂ ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯವಿದೆ. ನೀವು ಮಕ್ಕಳಿಗೆ
ಈ ಹಳೆಯ ಪ್ರಪಂಚದಿಂದಲೇ ವೈರಾಗ್ಯವಿದೆ. ಜ್ಞಾನ, ಭಕ್ತಿ, ವೈರಾಗ್ಯ. ಜ್ಞಾನವನ್ನು ಕೇವಲ ಆತ್ಮಿಕ
ತಂದೆಯೇ ಕಲಿಸುತ್ತಾರೆ ಮತ್ತ್ಯಾರೂ ಕಲಿಸಲು ಸಾಧ್ಯವಿಲ್ಲ. ತಂದೆಯೇ ಪತಿತ-ಪಾವನ, ಸರ್ವರ
ಸದ್ಗತಿದಾತನಾಗಿದ್ದಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಂದೆಯ
ನೆನಪಿನ ಜೊತೆ ಜೊತೆಗೆ ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುವ ಸೇವೆಯನ್ನೂ ಮಾಡಬೇಕಾಗಿದೆ. ಮನೆಯೇ
ಮೊದಲ ಪಾಠಶಾಲೆ... ಎಲ್ಲರಿಗೆ ಪ್ರೀತಿಯಿಂದ ತಿಳಿಸಬೇಕಾಗಿದೆ.
2. ಈ ಹಳೆಯ ಪ್ರಪಂಚದಿಂದ
ಬೇಹದ್ದಿನ ವೈರಾಗಿಗಳಾಗಬೇಕಾಗಿದೆ. ಕೆಟ್ಟದ್ದನ್ನು ಕೇಳಬಾರದು, ಕೆಟ್ಟದ್ದನ್ನು ನೋಡಬಾರದು..... ಆ
ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆ, ಅವರು ನಮಗೆ ಕುಬೇರನ ಖಜಾನೆಯನ್ನು ಕೊಡುತ್ತಾರೆ, ಇದೇ
ಖುಷಿಯಲ್ಲಿರಬೇಕಾಗಿದೆ.
ವರದಾನ:
ಪ್ರತಿ ಸಂಕಲ್ಪ,
ಮಾತು ಮತ್ತು ಕರ್ಮವನ್ನು ಫಲದಾಯಕವನ್ನಾಗಿ ಮಾಡುವಂತಹ ಆತ್ಮೀಯ ಪ್ರಭಾವಶಾಲಿ ಭವ.
ಯಾವಾಗಲಾದರೂ ಸಹಾ ಯಾರದೆ
ಸಂಪರ್ಕದಲ್ಲಿ ಬರುವಿರಾದರೆ ಅವರ ಪ್ರತಿ ಮನಸ್ಸಿನ ಭಾವನೆ ಸ್ನೇಹ, ಸಹಯೋಗ ಮತ್ತು ಕಲ್ಯಾಣದ
ಪ್ರಭಾವಶಾಲಿಯಾಗಿರಲಿ. ಪ್ರತಿ ಮಾತು ಯಾರಿಗೇ ಆದರೂ ಸಾಹಸ ಉಲ್ಲಾಸ ಕೊಡುವಂತಹ ಪ್ರಭಾವಶಾಲಿಯಾಗಿರಲಿ.
ಸಾಧಾರಣ ಮಾತು-ಕಥೆಯಲ್ಲಿ ಸಮಯ ಕಳೆಯದೇ ಇರಲಿ. ಅದೇ ರೀತಿ ಪ್ರತಿ ಕರ್ಮ ಫಲಧಾಯಕವಾಗಿರಲಿ - ಸ್ವಯಂನ
ಪ್ರತಿ ಇರಲಿ, ಇಲ್ಲಾ ಬೇರೆಯವರ ಪ್ರತಿ ಇರಲಿ. ಪರಸ್ಪರರಲ್ಲಿಯೂ ಸಹಾ ಎಲ್ಲಾ ರೂಪದಲ್ಲಿಯೂ
ಫ್ರಭಾವಶಾಲಿಗಳಾಗಿ. ಸೇವೆಯಲ್ಲಿ ಆತ್ಮೀಯ ಪ್ರಭಾವಶಾಲಿಗಳಾಗಿ ಆಗ ತಂದೆಯನ್ನು ಪ್ರತ್ಯಕ್ಷ ಮಾಡಲು
ನಿಮಿತ್ತರಾಗಲು ಸಾಧ್ಯ.
ಸ್ಲೋಗನ್:
ಈ ರೀತಿಯ ಶುಭ
ಚಿಂತಕ ಮಣಿಗಳಾಗಿ ಯಾವುದರಿಂದ ನಿಮ್ಮ ಕಿರಣಗಳು ವಿಶ್ವಕ್ಕೆ ಬೆಳಕು ನೀಡುತ್ತಿರಲಿ.
ಅವ್ಯಕ್ತ ಸೂಚನೆ:
ಸಂಕಲ್ಪ ಶಕ್ತಿಯನ್ನು ಜಮಾ ಮಾಡಿ ಶ್ರೇಷ್ಠ ಸೇವೆಗೆ ನಿಮಿತ್ತರಾಗಿ.
ಸಮಯ ಪ್ರಮಾಣ ಶೀತಲತೆಯ
ಶಕ್ತಿಯ ಮೂಲಕ ಪ್ರತಿಯೊಂದು ಪರಿಸ್ಥಿತಿಯಲ್ಲಿ ತಮ್ಮ ಸಂಕಲ್ಪಗಳ ಗತಿಯನ್ನು, ಮಾತನ್ನು ಶೀತಲ ಹಾಗೂ
ಸಹನೆಯುಕ್ತವನ್ನಾಗಿ ಮಾಡಿ. ಒಂದು ವೇಳೆ ಸಂಕಲ್ಪದ ಸ್ಪೀಡ್ ಜಾಸ್ತಿ ಇದ್ದರೆ ಬಹಳ ಸಮಯ ವ್ಯರ್ಥವಾಗಿ
ಕಳೆಯುವುದು, ಕಂಟ್ರೋಲ್ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಶೀತಲತೆ ಶಕ್ತಿಯನ್ನು ಧಾರಣೆ ಮಾಡಿ,
ಆಗ ವ್ಯರ್ಥದಿಂದ ಬಚಾವಾಗಿ ಬಿಡುವಿರಿ. ಇದು ಏಕೆ, ಏನು, ಹೀಗಲ್ಲ ಹಾಗೆ, ಇಂತಹ ವ್ಯರ್ಥದ ತೀವ್ರ
ಗತಿಯಿಂದ ಮುಕ್ತರಾಗಿ ಬಿಡುವಿರಿ.