18.09.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ- ನೀವು
ಧರಣಿಯ ಚೈತನ್ಯ ನಕ್ಷತ್ರಗಳಾಗಿದ್ದೀರಿ, ನೀವು ಇಡೀ ವಿಶ್ವಕ್ಕೆ ಬೆಳಕನ್ನು ನೀಡಬೇಕಾಗಿದೆ.”
ಪ್ರಶ್ನೆ:
ಶಿವತಂದೆಯು ನೀವು
ಮಕ್ಕಳ ಶರೀರವನ್ನು ಕಂಚನವನ್ನಾಗಿ ಹೇಗೆ ಮಾಡುತ್ತಾರೆ?
ಉತ್ತರ:
ಬ್ರಹ್ಮಾತಾಯಿಯ
ಮೂಲಕ ನಿಮಗೆ ಜ್ಞಾನದ ಪಾಲನೆ ಕೊಡಿಸಿ ನಿಮ್ಮ ಕಾಯವನ್ನು ಕಂಚನವನ್ನಾಗಿ ಮಾಡುತ್ತಾರೆ. ಆದ್ದರಿಂದ
ಅವರ ಮಹಿಮೆಯಲ್ಲಿ ತ್ವಮೇವ ಮಾತಾಶ್ಚ ಪಿತಾ....... ಎಂದು ಹಾಡುತ್ತಾರೆ. ಈಗ ನೀವು ಬ್ರಹ್ಮಾತಾಯಿಯ
ಮೂಲಕ ಜ್ಞಾನದ ಹಾಲನ್ನು ಕುಡಿಯುತ್ತಿದ್ದೀರಿ. ಇದರಿಂದ ನಿಮ್ಮ ಎಲ್ಲಾ ಪಾಪಗಳು ಪರಿಹಾರವಾಗುತ್ತದೆ.
ಕಂಚನವಾಗಿಬಿಡುತ್ತೀರಿ.
ಓಂ ಶಾಂತಿ.
ಆತ್ಮಿಕ ತಂದೆಯು ಕುಳಿತು ತಿಳಿಸುತ್ತಾರೆ- ಹೇಗೆ ಆಕಾಶದಲ್ಲಿ ನಕ್ಷತ್ರಗಳಿವೆ ಹಾಗೆಯೇ ನೀವು ಮಕ್ಕಳೂ
ಧರಣಿಯ ನಕ್ಷತ್ರಗಳಾಗಿದ್ದೀರಿ. ನಕ್ಷತ್ರಗಳನ್ನು ದೇವತೆಗಳೆಂದು ಕರೆಯುತ್ತಾರೆ. ವಾಸ್ತವದಲ್ಲಿ ಅವು
ದೇವತೆಗಳಲ್ಲ, ನೀವು ಅವುಗಳಿಗಿಂತಲೂ ಮಹಾನ್ ಶಕ್ತಿಶಾಲಿಗಳಾಗಿದ್ದೀರಿ. ಏಕೆಂದರೆ ನೀವು
ಆತ್ಮನಕ್ಷತ್ರಗಳ ಈ ವಿಶ್ವವನ್ನು ಪ್ರಕಾಶವನ್ನಾಗಿ ಮಾಡುತ್ತೀರಿ. ನೀವೇ ದೇವತೆಯಾಗುವವರಿದ್ದೀರಿ.
ನಿಮ್ಮದೇ ಉತ್ಥಾನ ಮತ್ತು ಪಥನವಾಗುತ್ತದೆ. ಆ ನಕ್ಷತ್ರಗಳಂತೂ ಕೇವಲ ಈ ಸೃಷ್ಟಿನಾಟಕದ ರಂಗಮಂಚಕ್ಕೆ
ಬೆಳಕನ್ನು ಕೊಡುತ್ತವೆ. ಅದಕ್ಕೆ ದೇವತೆಯೆಂದು ಹೇಳುವುದಿಲ್ಲ. ನೀವು ದೇವತೆಗಳಾಗುತ್ತಿದ್ದೀರಿ.
ನೀವು ಇಡೀ ವಿಶ್ವವನ್ನು ಬೆಳಗುವವರಾಗಿದ್ದೀರಿ. ಈಗ ಇಡೀ ವಿಶ್ವದಲ್ಲಿ ಘೋರ ಅಂಧಕಾರವಿದೆ.
ಪತಿತರಾಗಿಬಿಟ್ಟಿದ್ದಾರೆ. ಈಗ ತಂದೆಯು ನೀವು ಮಧುರಾತಿ ಮಧುರ ಮಕ್ಕಳನ್ನು ದೇವತೆಗಳನ್ನಾಗಿ
ಮಾಡುತ್ತಾರೆ. ಮನುಷ್ಯರು ಎಲ್ಲವನ್ನೂ ದೇವತೆಗಳೆಂದು ತಿಳಿಯುತ್ತಾರೆ. ಸೂರ್ಯನಿಗೂ ದೇವತೆಯೆಂದು
ಹೇಳಿಬಿಡುತ್ತಾರೆ. ಕೆಲವೊಂದೆಡೆ ಸೂರ್ಯನ ಬಾವುಟವನ್ನೂ ಹಾಕುತ್ತಾರೆ. ತಮ್ಮನ್ನು ಸೂರ್ಯವಂಶಿಗಳೆಂದು
ಕರೆಸಿಕೊಳ್ಳುತ್ತಾರೆ. ವಾಸ್ತವದಲ್ಲಿ ನೀವು ಸೂರ್ಯವಂಶಿಯರಾಗಿದ್ದೀರಲ್ಲವೆ. ತಂದೆಯು ಬಂದು
ತಿಳಿಸುತ್ತಾರೆ- ಭಾರತದಲ್ಲಿ ಘೋರ ಅಂಧಕಾರವಿದೆ. ಈಗ ಭಾರತದಲ್ಲಿಯೇ ಪ್ರಕಾಶತೆಯು ಬೇಕು. ತಂದೆಯು
ನೀವು ಮಕ್ಕಳಿಗೆ ಜ್ಞಾನ ಅಂಜನವನ್ನು ಕೊಟ್ಟಿದ್ದಾರೆ. ನೀವು ಅಜ್ಞಾನ ನಿದ್ರೆಯಲ್ಲಿ ಮಲಗಿದ್ದಿರಿ.
ಈಗ ತಂದೆಯು ಬಂದು ಪುನಃ ಜಾಗೃತಗೊಳಿಸುತ್ತಾರೆ ಮತ್ತು ತಿಳಿಸುತ್ತಾರೆ- ನಾಟಕದ ಯೋಜನೆಯ ಅನುಸಾರ
ಕಲ್ಪ-ಕಲ್ಪ ಪುರುಷೋತ್ತಮ ಸಂಗಮಯುಗದಲ್ಲಿ ನಾನು ಪುನಃ ಬರುತ್ತೇನೆ. ಈ ಪುರುಷೋತ್ತಮ ಸಂಗಮಯುಗವು
ಯಾವುದೇ ಶಾಸ್ತ್ರದಲ್ಲಿಲ್ಲ. ಈ ಯುಗವನ್ನು ಈಗ ನೀವು ಮಕ್ಕಳೇ ಅರಿತುಕೊಂಡಿದ್ದೀರಿ. ಈಗ ನೀವು
ನಕ್ಷತ್ರಗಳು ನಂತರ ನೀವೇ ದೇವತೆಗಳಾಗುತ್ತೀರಿ. ನಕ್ಷತ್ರ ದೇವತಾಯ ನಮಃ ಎಂದು ನಿಮಗೇ ಹೇಳುತ್ತಾರೆ.
ಈಗ ನೀವು ಪೂಜಾರಿಗಳಿಂದ ಪೂಜ್ಯರಾಗುತ್ತೀರಿ. ಸತ್ಯಯುಗದಲ್ಲಿ ನೀವು ಪೂಜ್ಯರಾಗುತ್ತೀರಿ. ಇದೂ ಸಹ
ತಿಳಿದುಕೊಳ್ಳುವ ಮಾತಾಗಿದೆಯಲ್ಲವೆ. ಇದಕ್ಕೆ ಆತ್ಮಿಕ ವಿದ್ಯೆಯೆಂದು ಹೇಳಲಾಗುತ್ತದೆ. ಎಂದೂ ಯಾರದೂ
ಜಗಳವಾಗುವುದಿಲ್ಲ. ಯುದ್ಧವಾಗುವುದಿಲ್ಲ. ಶಿಕ್ಷಕರು ಸಾಧಾರಣ ರೀತಿಯಿಂದ ಓದಿಸುತ್ತಾರೆ. ಮಕ್ಕಳೂ
ಸಹ ಸಾಧಾರಣ ರೀತಿಯಲ್ಲಿ ಓದುತ್ತೀರಿ. ಇದರಲ್ಲಿ ಎಂದೂ ಯಾರಿಗೂ ಜಗಳ-ಕಲಹದ ಮಾತಿಲ್ಲ. ನಾನು
ಭಗವಂತನಾಗಿದ್ದೇನೆ ಎಂದು ಈ ಬ್ರಹ್ಮಾರವರೂ ಸಹ ಹೇಳುವುದಿಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ-
ಓದಿಸುವವರು ನಿರಾಕಾರ ಶಿವತಂದೆಯಾಗಿದ್ದಾರೆ. ಇವರಿಗೆ ತಮ್ಮ ಶರೀರವಿಲ್ಲ. ನಾನು ಈ ರಥವನ್ನು ಲೋನ್
ಆಗಿ ಪಡೆಯುತ್ತೇನೆಂದು ಹೇಳುತ್ತಾರೆ. ಇವರಿಗೆ ಭಗೀರಥನೆಂದೂ ಏಕೆ ಹೇಳುತ್ತಾರೆ? ಏಕೆಂದರೆ ಬಹಳ-ಬಹಳ
ಭಾಗ್ಯಶಾಲಿ ರಥವಾಗಿದ್ದಾರೆ. ಇವರೇ ಮತ್ತೆ ವಿಶ್ವದ ಮಾಲೀಕನಾಗುತ್ತಾರೆ ಅಂದರೆ ಭಗೀರಥನಾದರಲ್ಲವೆ.
ಆದುದರಿಂದ ಎಲ್ಲದರ ಅರ್ಥವನ್ನು ತಿಳಿಯಬೇಕಲ್ಲವೆ. ಇದು ಎಲ್ಲದಕ್ಕಿಂತ ದೊಡ್ಡ ವಿದ್ಯೆಯಾಗಿದೆ.
ಪ್ರಪಂಚದಲ್ಲಿ ಅಸತ್ಯವೇ ಅಸತ್ಯವಿದೆ. ಗಾದೆಮಾತಿದೆಯಲ್ಲವೆ- ಸತ್ಯದ ದೋಣಿಯು ಅಲುಗಾಡುತ್ತದೆ ಆದರೆ
ಮುಳುಗುವುದಿಲ್ಲ...... ಇತ್ತೀಚೆಗಂತೂ ಅನೇಕ ಪ್ರಕಾರದ ಭಗವಂತರಾಗಿದ್ದಾರೆ. ತಮ್ಮನ್ನು ಭಗವಂತನೆಂದು
ಹೇಳಿಕೊಳ್ಳುವುದನ್ನು ಹೊಗಲಿಬಿಡಿ..ಅಂದುಕೊಂಡರೆ ಕಲ್ಲು-ಮುಳ್ಳೂ ಎಲ್ಲದಕ್ಕೂ ಹೇಳುತ್ತಾರೆ.
ಭಗವಂತನನ್ನು ಎಷ್ಟೊಂದು ನಿಂದನೆ ಮಾಡುತ್ತಾರೆ. ತಂದೆಯು ಕುಳಿತು ತಿಳಿಸುತ್ತಾರೆ- ಹೇಗೆ ಲೌಕಿಕ
ತಂದೆಯೂ ಸಹ ಮಕ್ಕಳಿಗೆ ತಿಳಿಸುತ್ತಾರೆ. ಆದರೆ ಆ ಲೌಕಿಕ ತಂದೆಯು ತಂದೆ, ಶಿಕ್ಷಕ ಮತ್ತು ಸದ್ಗುರು
ಒಬ್ಬರೇ ಆಗಿರುವುದಿಲ್ಲ. ಮೊದಲು ತಂದೆಯ ಬಳಿ ಜನ್ಮ ಪಡೆಯುತ್ತಾರೆ. ನಂತರ ಸ್ವಲ್ಪ ದೊಡ್ಡವರಾದ ಮೇಲೆ
ಓದಿಸಲು ಶಿಕ್ಷಕರು ಬೇಕು ಮತ್ತು ಓದಿದ ನಂತರ ಗುರುಗಳು ಬೇಕು ಆದರೆ ಇಲ್ಲಿ ತಂದೆ, ಶಿಕ್ಷಕ,
ಸದ್ಗುರು ಒಬ್ಬರೇ ಅಗಿದ್ದಾರೆ. ಅವರು ನಾನು ನೀವು ಆತ್ಮಗಳ ತಂದೆಯಾಗಿದ್ದೇನೆಂದು ಹೇಳುತ್ತಾರೆ.
ಆತ್ಮನೇ ಓದುತ್ತದೆ. ಆತ್ಮಕ್ಕೆ ಆತ್ಮವೆಂದು ಹೇಳಲಾಗುತ್ತದೆ. ಬಾಕಿ ಶರೀರಗಳಿಗೆ ಅನೇಕ ಹೆಸರುಗಳಿವೆ.
ವಿಚಾರ ಮಾಡಿ- ಇದು ಬೇಹದ್ದಿನ ನಾಟಕವಾಗಿದೆ. ಏನು ಮಾಡಿ-ಮಾಡಲ್ಪಟ್ಟಿದೆಯೋ ಅದೇ ನಡೆಯುತ್ತಿದೆ.
ಯಾವುದೇ ಹೊಸ ಮಾತಿಲ್ಲ. ಇದು ಅನಾದಿ ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ತಿರುಗುತ್ತಿರುತ್ತದೆ.
ಆತ್ಮಗಳು ಪಾತ್ರಧಾರಿಗಳಾಗಿದ್ದಾರೆ. ಆತ್ಮಗಳು ಎಲ್ಲಿರುತ್ತಾರೆ? ನಾವು ನಮ್ಮ ಮನೆ
ಪರಮಧಾಮದಲ್ಲಿರುತ್ತೇವೆ. ನಂತರ ನಾವಿಲ್ಲಿ ಬೇಹದ್ದಿನ ಪಾತ್ರವನ್ನಭಿನಯಿಸಲು ಬರುತ್ತೇವೆಂದು
ಹೇಳುತ್ತೀರಿ. ತಂದೆಯಂತೂ ಸದಾ ಪರಮಧಾಮದಲ್ಲಿಯೇ ಇರುತ್ತಾರೆ. ಅವರು ಪುನರ್ಜನ್ಮದಲ್ಲಿ ಬರುವುದಿಲ್ಲ,
ಈಗ ನಿಮಗೆ ರಚಯಿತ ತಂದೆಯು ತನ್ನ ಮತ್ತು ರಚನೆಯ ಸಾರವನ್ನು ತಿಳಿಸಿಕೊಡುತ್ತಾರೆ. ಸ್ವದರ್ಶನ
ಚಕ್ರಧಾರಿ ಮಕ್ಕಳೇ ಎಂದು ನಿಮಗೆ ಹೇಳುತ್ತಾರೆ. ಇದರ ಅರ್ಥವನ್ನು ಮತ್ತ್ಯಾರು
ಅರಿತುಕೊಳ್ಳುವುದಿಲ್ಲ. ಏಕೆಂದರೆ ಸ್ವದರ್ಶನ ಚಕ್ರಧಾರಿಯು ವಿಷ್ಣುವಾಗಿದ್ದಾರೆ. ಇವರು ಮತ್ತೆ
ಮನುಷ್ಯರಿಗೆ ಏಕೆ ಹೇಳುತ್ತಾರೆ ಎಂದು ತಿಳಿಯುತ್ತಾರೆ. ಈಗ ನೀವು ತಿಳಿದುಕೊಂಡಿದ್ದೀರಿ-
ಶೂದ್ರರಾಗಿದ್ದಾಗ ಮನುಷ್ಯರಾಗಿದ್ದಿರಿ. ಈಗ ಬ್ರಾಹ್ಮಣರಾಗಿದ್ದೀರಿ. ಮತ್ತೆ
ದೇವತೆಗಳಾಗುತ್ತೀರೆಂದರೂ ಸಹ ಮನುಷ್ಯರಾಗಿಯೇ ಇರುತ್ತೀರಿ ಆದರೆ ಗುಣಗಳು ಬದಲಾಗುತ್ತವೆ. ರಾವಣನು
ಬಂದಾಗ ನಿಮ್ಮ ನಡುವಳಿಕೆಯು ಎಷ್ಟು ಕೆಟ್ಟುಹೋಗುತ್ತದೆ. ಸತ್ಯಯುಗದಲ್ಲಿ ಈ ವಿಕಾರಗಳು ಇರುವುದಿಲ್ಲ.
ಶಿವತಂದೆ ಅಮರಕಥೆ
ಹೇಳುತ್ತಿದ್ದಾರೆ. ಭಕ್ತಿಮಾರ್ಗದಲ್ಲಿ ನೀವು ಎಷ್ಟೊಂದು ಕಥೆಗಳನ್ನು ಕೇಳಿರುತ್ತೀರಿ. ಅಮರನಾಥನು
ಪಾರ್ವತಿಗೆ ಕಥೆಯನ್ನು ತಿಳಿಸಿದರೆಂದು ಹೇಳುತ್ತಾರೆ. ಈಗ ಆ ಮನುಷ್ಯರಿಗೆ ಶಂಕರ (ಮನುಷ್ಯ)
ತಿಳಿಸುತ್ತಾರಲ್ಲವೆ, ಶಿವನು ಹೇಗೆ ತಿಳಿಸುತ್ತಾರೆ? ಅದನ್ನು ಕೇಳಲು ಎಷ್ಟೊಂದು ಮನುಷ್ಯರು
ಹೋಗುತ್ತಾರೆ. ಈ ಭಕ್ತಿಮಾರ್ಗದ ಮಾತುಗಳನ್ನು ತಂದೆಯು ಕುಳಿತು ತಿಳಿಸುತ್ತಾರೆ. ಭಕ್ತಿಯು
ಕೆಟ್ಟದ್ದೆಂದು ತಂದೆಯು ಹೇಳುವುದಿಲ್ಲ. ಇದಂತೂ ನಾಟಕವು ಅನಾದಿಯಾಗಿದೆ. ಇದರ ಬಗ್ಗೆ
ತಿಳಿಸಲಾಗುತ್ತದೆ. ಈಗ ತಂದೆಯು ತಿಳಿಸುತ್ತಾರೆ- ಮೊದಲನೆಯದಾಗಿ, ತನ್ನನ್ನು ಆತ್ಮನೆಂದು ತಿಳಿಯಿರಿ.
ಮೂಲಮಾತೇನೆಂದರೆ- ಭಗವಾನುವಾಚ, ಮನ್ಮನಾಭವ. ಇದರ ಅರ್ಥವೇನು? ಇದನ್ನು ತಂದೆಯು ಕುಳಿತು ಮುಖ (ಬಾಯಿ)ದಿಂದ
ತಿಳಿಸುತ್ತಾರೆ. ಆದ್ದರಿಂದ ಇದು ಗೋಮುಖವಾಗಿದೆ. ಇದನ್ನೂ ತಿಳಿಸಿದ್ದಾರೆ- ತ್ವಮೇವ ಮಾತಾಶ್ಚ ಪಿತಾ....
ಅವರಿಗೇ ಹೇಳುತ್ತಾರೆ ಅಂದಾಗ ತಂದೆಯು ಈ ಬ್ರಹ್ಮಾತಾಯಿಯ ಮೂಲಕ ನಿಮ್ಮನ್ನು ದತ್ತು
ಮಾಡಿಕೊಂಡಿದ್ದಾರೆ. ಶಿವತಂದೆಯು ತಿಳಿಸುತ್ತಾರೆ- ನಾನು ಈ ಮುಖದ ಮೂಲಕ ನೀವು ಮಕ್ಕಳಿಗೆ ಜ್ಞಾನದ
ಹಾಲನ್ನು ಕುಡಿಸುತ್ತೇನೆ. ಇದರಿಂದ ನಿಮ್ಮ ಪಾಪಗಳೆಲ್ಲವೂ ಭಸ್ಮವಾಗಿ ನೀವು ಆತ್ಮ ಕಂಚನ (ಬಂಗಾರ)ದಂತೆಆಗುತ್ತೀರಿ.
ಅಂದಾಗ ಕಾಯವೂ ಕಂಚನವಾದುದೇ ಸಿಗುತ್ತದೆ. ಆತ್ಮಗಳು ಸಂಪೂರ್ಣ ಪವಿತ್ರ ಕಂಚನವಾಗಿಬಿಡುತ್ತಾರೆ.
ನಂತರ ನಿಧಾನ-ನಿಧಾನವಾಗಿ ಏಣಿಯನ್ನಿಳಿಯುತ್ತಾರೆ. ಈಗ ನೀವು ಅರಿತುಕೊಂಡಿದ್ದೀರಿ, ನಾವಾತ್ಮಗಳೂ ಸಹ
ಕಂಚನವಾಗಿದ್ದೆವು. ಶರೀರವೂ ಕಂಚನ(ಸ್ವಸ್ಥ)ವಾಗಿತ್ತು ಮತ್ತೆ ಡ್ರಾಮಾನುಸಾರ ನಾವು 84ಜನ್ಮಗಳ
ಚಕ್ರದಲ್ಲಿ ಬಂದಿದ್ದೇವೆ. ಈಗ ಕಂಚನವಿಲ್ಲ. ಈಗಂತೂ ಆತ್ಮವು ಕೇವಲ 9 ಕ್ಯಾರೇಟ್ನಷ್ಟು ಶಕ್ತಿಯಿದೆ
ಎಂದು ಹೇಳಬಹುದು. ಇನ್ನು ಸ್ವಲ್ಪ ಪರ್ಸೆಂಟ್ ಮಾತ್ರವೇ ಉಳಿದಿದೆ. ಪೂರ್ಣ ಪ್ರಾಯಲೋಪವೆಂದು
ಹೇಳುವುದಿಲ್ಲ. ಅಲ್ಪಸ್ವಲ್ಪ ಶಾಂತಿಯಿರುತ್ತದೆ. ತಂದೆಯು ಈ ಚಿಹ್ನೆಯನ್ನು ತೋರಿಸಿದ್ದಾರೆ.
ಲಕ್ಷ್ಮೀ-ನಾರಾಯಣರ ಚಿತ್ರವು ನಂಬರ್ವನ್ ಆಗಿದೆ. ಈಗ ನಿಮ್ಮ ಬುದ್ಧಿಯಲ್ಲಿ ಪೂರ್ಣಚಕ್ರವು
ಬಂದುಬಿಟ್ಟಿದೆ. ತಂದೆಯ ಪರಿಚಯವೂ ಬಂದುಬಿಟ್ಟಿದೆ. ಈಗ ನಿಮ್ಮ ಕಾಯವು ಪೂರ್ಣ ಕಂಚನವಾಗಿಲ್ಲ. ಆದರೆ
ತಂದೆಯ ಪರಿಚಯವಂತೂ ಬುದ್ಧಿಯಲ್ಲಿದೆಯಲ್ಲವೆ. ತಂದೆಯು ಕಂಚನವಾಗುವ ಯುಕ್ತಿಯನ್ನು ತಿಳಿಸುತ್ತಾರೆ.
ಆತ್ಮದಲ್ಲಿ ಇರುವಂತಹ ತುಕ್ಕು ಹೇಗೆ ಬಿಟ್ಟುಹೋಗುವುದು? ಅದಕ್ಕಾಗಿ ನೆನಪಿನ ಯಾತ್ರೆಯು ಬೇಕು.
ಇದಕ್ಕೆ ಯುದ್ಧದ ಮೈದಾನವೆಂದು ಹೇಳಲಾಗುತ್ತದೆ. ನೀವು ಪ್ರತಿಯೊಬ್ಬರೂ ಒಂಟಿಯಾಗಿ ಯುದ್ಧದ
ಮೈದಾನದಲ್ಲಿ ಸಿಪಾಯಿಗಳಾಗಿದ್ದೀರಿ. ಈಗ ಪ್ರತಿಯೊಬ್ಬರೂ ಎಷ್ಟು ಸಾಧ್ಯವೋ ಅಷ್ಟು ಪುರುಷಾರ್ಥ ಮಾಡಿ,
ಪುರುಷಾರ್ಥ ಮಾಡುವುದಂತೂ ವಿದ್ಯಾರ್ಥಿಯ ಕೆಲಸವಾಗಿದೆ. ಎಲ್ಲಿಗೆ ಹೋಗಿ ಪರಸ್ಪರ ಪ್ರತಿಯೊಬ್ಬರೂ
ಮನ್ಮನಾಭವದ ಎಚ್ಚರಿಕೆಯನ್ನು ನೀಡುತ್ತಾ ಇರಿ. ಶಿವತಂದೆಯ ನೆನಪಿದೆಯೇ, ಒಬ್ಬರು ಇನ್ನೊಬ್ಬರಿಗೆ ಇದೇ
ನೆನಪು ತರಿಸಬೇಕಾಗಿದೆ. ತಂದೆಯ ವಿದ್ಯೆಯಲ್ಲಿ ಚಮತ್ಕಾರವಿದೆ. ಆದ್ದರಿಂದ ಒಂದು ಸೆಕೆಂಡಿನಲ್ಲಿ
ಕಾಯವು ಕಂಚನವಾಗಿಬಿಡುತ್ತದೆ. ವಿಶ್ವದ ಮಾಲೀಕರನ್ನಾಗಿ ಮಾಡುತ್ತೇನೆ. ತಂದೆಯ ಮಕ್ಕಳಾಗುವುದು ಎಂದರೆ
ವಿಶ್ವದ ಮಾಲೀಕರಾಗಿಬಿಟ್ಟಿರಿ. ನಂತರ ವಿಶ್ವದ ರಾಜ್ಯಭಾಗ್ಯ. ಅದರಲ್ಲಿ ಶ್ರೇಷ್ಠಪದವಿಯನ್ನು
ಪಡೆಯುವುದೇ ಪುರುಷಾರ್ಥ ಮಾಡುವುದಾಗಿದೆ ಆದರೆ ಸೆಕೆಂಡಿನಲ್ಲಿ ಜೀವನ್ಮುಕ್ತಿ ಸರಿಯಲ್ಲವೆ.
ಪುರುಷಾರ್ಥ ಮಾಡುವುದು ಪ್ರತಿಯೊಬ್ಬರ ಮೇಲಿದೆ. ನೀವು ತಂದೆಯನ್ನು ನೆನಪು ಮಾಡುತ್ತಾ ಇರಿ ಆಗ
ಆತ್ಮವು ಪವಿತ್ರವಾಗಿಬಿಡುವುದು. ಸತೋಪ್ರಧಾನರಾಗಿ ಸತೋಪ್ರಧಾನ ಪ್ರಪಂಚದ ಮಾಲೀಕರಾಗಿಬಿಡುತ್ತೀರಿ.
ನೀವು ಎಷ್ಟು ಬಾರಿ ತಮೋಪ್ರಧಾನದಿಂದ ಸತೋಪ್ರಧಾನರಾಗಿದ್ದೀರಿ. ಈ ಚಕ್ರವು ಸುತ್ತುತ್ತಾ ಇರುತ್ತದೆ.
ಇದಕ್ಕೆಂದೂ ಅಂತ್ಯವು ಬರುವುದಿಲ್ಲ. ತಂದೆಯು ಎಷ್ಟು ಚೆನ್ನಾಗಿ ತಿಳಿಸುತ್ತಾರೆ- ನಾನು
ಕಲ್ಪ-ಕಲ್ಪವೂ ಬರುತ್ತೇನೆ. ನೀವು ಮಕ್ಕಳೇ ನಮಗೆ ಛೀ ಛೀ ಪ್ರಪಂಚದಲ್ಲಿ ನಿಮಂತ್ರಣ ಕೊಡುತ್ತೀರಿ.
ನಿಮಂತ್ರಣ ಕೊಡುತ್ತೀರಾ? ನಾವು ಪತಿತರಾಗಿಬಿಟ್ಟಿದ್ದೇವೆ. ನಮ್ಮನ್ನು ಬಂದು ಪಾವನ ಮಾಡಿ ಎಂದು
ಹೇಳುತ್ತೀರಿ. ವಾಹ್ ನಿಮ್ಮ ನಿಮಂತ್ರಣವೇ! ನಮ್ಮನ್ನು ಶಾಂತಿಧಾಮ, ಸುಖಧಾಮಕ್ಕೆ ಕರೆದುಕೊಂಡು
ಹೋಗುತ್ತೀರೆಂದರೆ ನಾನು ನಿಮ್ಮ ವಿಧೇಯ ಸೇವಕನಾಗಿದ್ದೇನೆ. ಇದೂ ಸಹ ನಾಟಕದ ಆಟವಾಗಿದೆ. ನಾವು
ಕಲ್ಪ-ಕಲ್ಪವೂ ಅದನ್ನೇ ಓದುತ್ತೇವೆ. ಪಾತ್ರವನ್ನಭಿನಯಿಸುತ್ತೇವೆಂದು ತಿಳಿಯುತ್ತೀರಿ. ಆತ್ಮವೇ
ಪಾತ್ರವನ್ನಭಿನಯಿಸುತ್ತದೆ. ಇಲ್ಲಿ ಕುಳಿತಿದ್ದರೂ ಸಹ ತಂದೆಯು ಆತ್ಮಗಳನ್ನೇ ನೋಡುತ್ತಾರೆ,
ನಕ್ಷತ್ರಗಳನ್ನೇ ನೋಡುತ್ತಾರೆ. ಹೇಗೆ ನಕ್ಷತ್ರಗಳು ಚಂದ್ರನ ಹತ್ತಿರದಲ್ಲಿರುತ್ತವೆ. ನೀವೂ ಸಹ
ಯೋಗಬಲದಿಂದ ಚೆನ್ನಾಗಿ ಪವಿತ್ರರಾಗುತ್ತೀರೆಂದರೆ ಮಿನುಗುತ್ತೀರಿ. ತಂದೆಯೂ ಸಹ ಹೇಳುತ್ತಾರೆ-
ಮಕ್ಕಳಲ್ಲಿ ಯಾರು ಬಹಳ ಒಳ್ಳೆಯ ನಕ್ಷತ್ರವಾಗಿದ್ದಾರೆಯೋ ಅವರಿಗೆ ಹೂಗಳನ್ನು ಕೊಡಿ. ಮಕ್ಕಳೂ ಸಹ
ಒಬ್ಬರು ಇನ್ನೊಬ್ಬರನ್ನು ಅರಿತುಕೊಂಡಿರುತ್ತಾರಲ್ಲವೆ. ಅವಶ್ಯವಾಗಿ ಕೆಲವು ನಕ್ಷತ್ರಗಳು ಬಹಳ
ತೀಕ್ಷ್ಣವಾಗಿರುತ್ತವೆ. ಕೆಲವು ಕಡಿಮೆ. ಆ ನಕ್ಷತ್ರಗಳಿಗೆ ದೇವತೆಗಳೆಂದು ಹೇಳುವುದಿಲ್ಲ. ನೀವು
ಮನುಷ್ಯರಾಗಿದ್ದೀರಿ. ಆದರೆ ತಂದೆಯು ನೀವಾತ್ಮಗಳನ್ನು ಪವಿತ್ರರನ್ನಾಗಿ ಮಾಡಿ ವಿಶ್ವದ
ಮಾಲೀಕರನ್ನಾಗಿ ಮಾಡುತ್ತಾರೆ. ತಂದೆಯು ಆಸ್ತಿಯಲ್ಲಿ ಎಷ್ಟೊಂದು ಶಕ್ತಿಯನ್ನು ಕೊಡುತ್ತಾರೆ.
ಸರ್ವಶಕ್ತಿವಂತ ಅಲ್ಲವೆ. ತಂದೆಯು ತಿಳಿಸುತ್ತಾರೆ- ನಾನು ನೀವು ಮಕ್ಕಳಿಗೆ ಎಷ್ಟೊಂದು ಶಕ್ತಿಯನ್ನು
ಕೊಡುತ್ತೇನೆ. ಗಾಯನವೂ ಮಾಡುತ್ತೀರಲ್ಲವೆ- ಬಾಬಾ ವಿದ್ಯೆಯಿಂದ ನಮ್ಮನ್ನು ಮನುಷ್ಯರಿಂದ
ದೇವತೆಗಳನ್ನಾಗಿ ಮಾಡುತ್ತೀರಿ, ವಾಹ್! ಈ ರೀತಿ ಮತ್ತ್ಯಾರೂ ಮಾಡುವುದಿಲ್ಲ. ವಿದ್ಯೆಯು ಆದಾಯದ
ಮೂಲವಾಗಿದೆಯಲ್ಲವೆ. ಇಡೀ ಆಕಾಶ, ಧರಣಿ ಎಲ್ಲವೂ ನಮ್ಮದಾಗಿ ಬಿಡುತ್ತದೆ. ಯಾರು ಕಸಿದುಕೊಳ್ಳಲು
ಸಾಧ್ಯವಿಲ್ಲ. ಅದಕ್ಕೆ ಅಡೋಲ ರಾಜ್ಯವೆಂದು ಹೇಳಲಾಗುತ್ತದೆ. ಯಾರೂ ಖಂಡಿಸಲು ಸಾಧ್ಯವಿಲ್ಲ. ಯಾರೂ
ಸುಡಲೂ ಸಾಧ್ಯವಿಲ್ಲ. ಅಂದಮೇಲೆ ಇಂತಹ ತಂದೆಯ ಶ್ರೀಮತದಂತೆ ನಡೆಯಬೇಕಲ್ಲವೆ. ಪ್ರತಿಯೊಬ್ಬರೂ ತನ್ನ
ಪುರುಷಾರ್ಥ ಮಾಡಬೇಕಾಗಿದೆ.
ಮಕ್ಕಳು ಚಿತ್ರದ ಮೂಲಕ
ತಮ್ಮ ಜೊತೆಗಾರರಿಗೆ ತಿಳಿಸಬೇಕೆಂದು ಮ್ಯೂಸಿಯಂ ಇತ್ಯಾದಿಗಳನ್ನು ಮಾಡಿಸುತ್ತೀರಿ. ತಂದೆಯು ಸಲಹೆ
ನೀಡುತ್ತಿರುತ್ತಾರೆ. ಯಾವ ಚಿತ್ರಗಳು ಬೇಕೋ ಭಲೇ ಮಾಡಿಸಿ, ಎಲ್ಲರ ಬುದ್ಧಿಯು ಕೆಲಸ ಮಾಡುತ್ತದೆ.
ಮನುಷ್ಯರ ಕಲ್ಯಾಣಕ್ಕಾಗಿಯೇ ಇವುಗಳನ್ನು ಮಾಡಿಸಲಾಗುತ್ತದೆ. ನಿಮಗೆ ತಿಳಿದಿದೆ. ಸೇವಾಕೇಂದ್ರಕ್ಕೆ
ಯಾರಾದರೂ ಬಂದರೆ ಇಂತಹ ಯಾವ ಯುಕ್ತಿಯನ್ನು ರಚಿಸಬೇಕು. ಅವರು ತಾವೇ ಮಿಠಾಯಿ(ಟೋಲಿ)ಯನ್ನು
ತೆಗೆದುಕೊಳ್ಳಲು ಬರುವಂತಿರಬೇಕು. ಯಾರಾದರೂ ಮಿಠಾಯಿಯು ಬಹಳ ಚೆನ್ನಾಗಿರುತ್ತದೆಯೆಂದರೆ ಅದರ
ಜಾಹೀರಾತು ಬಂದುಬಿಡುತ್ತದೆ. ಇಂತಹವರ ಅಂಗಡಿಗೆ ಹೋಗಿ ಎಂದು. ಎಲ್ಲರೂ ಒಬ್ಬರು ಇನ್ನೊಬ್ಬರಿಗೆ
ಹೇಳುತ್ತಾರೆ. ಇದಂತೂ ಬಹಳ ಒಳ್ಳೆಯ ನಂಬರ್ವನ್ ಮಿಠಾಯಿಯಾಗಿದೆ. ಇಂತಹ ಮಿಠಾಯಿಯನ್ನು ಯಾರೂ ಕೊಡಲು
ಸಾಧ್ಯವಿಲ್ಲ. ಒಬ್ಬರು ನೋಡಿಕೊಂಡು ಹೋಗುತ್ತಾರೆಂದರೆ ಅನ್ಯರಿಗೂ ತಿಳಿಸುತ್ತಾರೆ. ಇಡೀ ಭಾರತವನ್ನು
ಹೇಗೆ ಸ್ವರ್ಣೀಮಯುಗದಲ್ಲಿ ತರುವುದು ಎಂದು ವಿಚಾರವಂತೂ ನಡೆಯುತ್ತದೆ. ಅದಕ್ಕಾಗಿ ಎಷ್ಟೊಂದು
ತಿಳಿಸುತ್ತಾರೆ. ಆದರೆ ಕಲ್ಲುಬುದ್ಧಿಯರಾಗಿದ್ದರೆ ಪರಿಶ್ರಮವಾಗುತ್ತದೆ. ಬೇಟೆ ಮಾಡುವುದನ್ನು
ಕಲಿಯಬೇಕಲ್ಲವೆ. ಮೊಟ್ಟಮೊದಲು ಚಿಕ್ಕ-ಚಿಕ್ಕ ಬೇಟೆಯಾಡುವುದನ್ನು ಕಲಿಯಬೇಕು. ದೊಡ್ಡ ಬೇಟೆಗಂತೂ
ಶಕ್ತಿಯು ಬೇಕಲ್ಲವೆ. ಎಷ್ಟು ದೊಡ್ಡ-ದೊಡ್ಡ ವಿದ್ವಾಂಸ ಪಂಡಿತರಿದ್ದಾರೆ. ವೇದಶಾಸ್ತ್ರಗಳನ್ನು
ಓದಿದ್ದಾರೆ. ತಮ್ಮನ್ನು ಎಷ್ಟು ದೊಡ್ಡ ಅಥಾರಿಟಿಯೆಂದು ತಿಳಿಯುತ್ತಾರೆ. ಕಾಶಿಯಲ್ಲಿ ಅವರಿಗೆ ಎಷ್ಟು
ದೊಡ್ಡ-ದೊಡ್ಡ ಬಿರುದುಗಳು ಸಿಗುತ್ತವೆ. ಆದ್ದರಿಂದಲೇ ತಂದೆಯು ತಿಳಿಸುತ್ತಾರೆ- ಮೊಟ್ಟಮೊದಲು
ಕಾಶಿಯಲ್ಲಿ ಸೇವೆಯ ಮುತ್ತಿಗೆ ಹಾಕಿ ದೊಡ್ಡ-ದೊಡ್ಡ ವ್ಯಕ್ತಿಗಳ ಬಾಯಿಂದ ಬಂದಾಗ ಅನ್ಯರು
ಕೇಳುತ್ತಾರೆ. ಚಿಕ್ಕವರ ಮಾತನ್ನು ಯಾರೂ ಕೇಳುವುದಿಲ್ಲ. ತಮ್ಮನ್ನು ಶಾಸ್ತ್ರಗಳ ಅಥಾರಿಟಿಯೆಂದು
ತಿಳಿದುಕೊಳ್ಳುವಂತಹ ಹುಲಿಯಂತ ಮನುಷ್ಯರಿಗೆ ತಿಳಿಸಬೇಕು. ಶಿವತಂದೆಗೂ ಇಷ್ಟು ದೊಡ್ಡ
ಬಿರುದುಗಳಿಲ್ಲ. ಅಷ್ಟು ದೊಡ್ಡ-ದೊಡ್ಡ ಬಿರುದುಗಳನ್ನು ಅವರಿಗೆ ಕೊಡುತ್ತಾರೆ. ಈಗ ಭಕ್ತಿಮಾರ್ಗ
ರಾಜ್ಯವಿದೆಯಲ್ಲವೆ. ಈಗ ಜ್ಞಾನಮಾರ್ಗದ ರಾಜ್ಯವಾಗುತ್ತದೆ. ಜ್ಞಾನದಲ್ಲಿ ಭಕ್ತಿಯಿರುವುದಿಲ್ಲ.
ಭಕ್ತಿಯಲ್ಲಿ ಮತ್ತೆ ಜ್ಞಾನ ಸ್ವಲ್ಪವೂ ಇರುವುದಿಲ್ಲ. ಆದ್ದರಿಂದ ಇದನ್ನು ತಂದೆಯು ತಿಳಿಸುತ್ತಾರೆ-
ತಂದೆಯು ನಕ್ಷತ್ರಗಳು ಕುಳಿತ್ತಿದ್ದಾರೆ ಎನ್ನುವ ರೀತಿಯಲ್ಲಿ ನೋಡುತ್ತಾರೆ. ದೇಹದ ಪರಿವೆಯನ್ನು
ಬಿಟ್ಟುಬಿಡಬೇಕಾಗಿದೆ. ಹೇಗೆ ಮೇಲೆ ನಕ್ಷತ್ರಗಳು ಮಿನುಗುತ್ತಿರುತ್ತವೆಯೋ ಹಾಗೆಯೇ ಇಲ್ಲಿಯೂ ಸಹ
ಆತ್ಮರೂಪಿ ನಕ್ಷತ್ರಗಳು ಮಿನುಗುತ್ತೀದ್ದೀರಿ. ಕೆಲಕೆಲವರು ಬಹಳ ತೀಕ್ಷ್ಣತೆಯನ್ನು ಹೊಂದಿದ್ದೀರಿ.
ಇವರು ಧರಣಿಯ ನಕ್ಷತ್ರಗಳು, ಇವರಿಗೇ ದೇವತೆಗಳೆಂದು ಹೇಳಲಾಗುತ್ತದೆ. ಇದು ಎಷ್ಟು ದೊಡ್ಡ ಬೇಹದ್ದಿನ
ರಂಗಮಂಟಪವಾಗಿದೆ. ತಂದೆಯು ತಿಳಿಸುತ್ತಾರೆ- ಅದು ಹದ್ದಿನ ದಿನ ಮತ್ತು ರಾತ್ರಿಯಾಗಿದೆ. ಇದು
ಅರ್ಧಕಲ್ಪದ ರಾತ್ರಿ, ಅರ್ಧಕಲ್ಪದ ಬೇಹದ್ದಿನ ದಿನ ಮಾತಾಗಿದೆ. ದಿನದಲ್ಲಿ ಸುಖವೇ ಸುಖವಿರುತ್ತದೆ.
ಇಲ್ಲಿ ಎಲ್ಲಿಯೂ ಪೆಟ್ಟನ್ನು ತಿನ್ನುವ ಅವಶ್ಯಕತೆಯಿಲ್ಲ. ಜ್ಞಾನದಲ್ಲಿ ಸುಖವಿದೆ. ಭಕ್ತಿಯಲ್ಲಿ
ದುಃಖವಿದೆ. ಸತ್ಯಯುಗದಲ್ಲಿ ದುಃಖ ಹೆಸರಿರುವುದಿಲ್ಲ. ಅಲ್ಲಿ ಮೃತ್ಯವಿರುವುದಿಲ್ಲ. ನೀವು ಕಾಲನ
ಮೇಲೆ ಜಯಗಳಿಸುತ್ತೀರಿ. ಮೃತ್ಯವಿನ ಹೆಸರೇ ಇರುವುದಿಲ್ಲ. ಅದು ಅಮರಲೋಕವಾಗಿದೆ. ನಿಮಗೆ ತಿಳಿದಿದೆ-
ತಂದೆಯು ನಮಗೆ ಅಮರಲೋಕಕ್ಕಾಗಿ ಅಮರಕಥೆಯನ್ನು ತಿಳಿಸುತ್ತಿದ್ದಾರೆ. ಈಗ ನೀವು ಮಧುರಾತಿ ಮಕ್ಕಳಿಗೆ
ಮೇಲಿನಿಂದ ಹಿಡಿದು ಪೂರ್ಣಚಕ್ರದ ಜ್ಞಾನವಿದೆ. ನಾವಾತ್ಮಗಳ ಮನೆಯು ಬ್ರಹ್ಮಲೋಕವಾಗಿದೆ. ಅಲ್ಲಿಂದ
ನಂಬರ್ವಾರ್ ಪಾತ್ರವನ್ನಭಿನಯಿಸಲು ಇಲ್ಲಿಗೆ ಬಂದಿದ್ದೇವೆಂದು ತಿಳಿದು ಕೊಂಡಿದ್ದೀರಿ. ಅನೇಕ
ಆತ್ಮಗಳಿದ್ದಾರೆ. ಒಬ್ಬೊಬ್ಬರನ್ನೂ ಕುಳಿತು ತಿಳಿಸಲಾಗುವುದಿಲ್ಲ. ಆದ್ದರಿಂದ ಸಾರರೂಪದಲ್ಲಿ
ತಿಳಿಸುತ್ತಾರೆ. ಎಷ್ಟೊಂದು ರೆಂಬೆ-ಕೊಂಬೆಗಳಿವೆ. ಬೆಳೆಯುತ್ತಾ-ಬೆಳೆಯುತ್ತಾ ವೃಕ್ಷವು
ವೃದ್ಧಿಯನ್ನು ಹೊಂದುತ್ತದೆ. ಅನೇಕರಿಗೆ ತಮ್ಮ ಧರ್ಮದ ಬಗ್ಗೆಯೂ ಸಹ ಗೊತ್ತಿಲ್ಲ. ತಂದೆಯು ಬಂದು
ತಿಳಿಸುತ್ತಾರೆ- ನೀವು ಮೂಲತಃ ದೇವಿ-ದೇವತಾಧರ್ಮದವರಾಗಿದ್ದೀರಿ. ಆದರೆ ಈಗ ಧರ್ಮಭ್ರಷ್ಟ
ಕರ್ಮಭ್ರಷ್ಟರಾಗಿಬಿಟ್ಟಿದ್ದೀರಿ.
ಈಗ ನೀವು ಮಕ್ಕಳ
ಬುದ್ಧಿಯಲ್ಲಿದೆ- ನಾವು ಮೂಲತಃ ಶಾಂತಿಧಾಮದ ನಿವಾಸಿಗಳಾಗಿದ್ದೇವೆ. ಮತ್ತೆ ಇಲ್ಲಿಗೆ
ಪಾತ್ರವನ್ನಭಿನಯಿಸಲು ಬರುತ್ತೇವೆ. ಈ ಲಕ್ಷ್ಮೀ-ನಾರಾಯಣ ರಾಜ್ಯವಿತ್ತು. ಇವರ ವಂಶಾವಳಿಯಿತ್ತು
ನಂತರ ಈ ಸಂಗಮಯುಗದಲ್ಲಿ ನಿಂತಿದ್ದೀರಿ. ತಂದೆಯು ತಿಳಿಸುತ್ತಾರೆ - ನೀವು ಸೂರ್ಯವಂಶಿಯರಾಗಿದ್ದೀರಿ.
ನಂತರ ಚಂದ್ರವಂಶಿಯರಾದಿರಿ. ಬಾಕಿ ಈ ಮಧ್ಯ ದಲ್ಲಂತೂ ಬಹಳಷ್ಟು ಶಾಖೆಗಳಿವೆ. ಈ ಆಟವು
ಬೇಹದ್ದಿನದ್ದಾಗಿದೆ. ಇದು ಎಷ್ಟು ಚಿಕ್ಕ ವೃಕ್ಷವಾಗಿದೆ. ಬ್ರಾಹ್ಮಣರ ಕುಲವಾಗಿದೆ ಇದು ಮತ್ತೆ
ಎಷ್ಟು ದೊಡ್ಡ ವೃಕ್ಷವಾಗಿಬಿಡುತ್ತದೆ. ಎಲ್ಲರನ್ನೂ ನೋಡಿ ಮಿಲನ ಮಾಡುವುದಕ್ಕೂ ಆಗುವುದಿಲ್ಲ.
ಎಲ್ಲೆಂದರಲ್ಲಿ ಮುತ್ತಿಗೆ ಹಾಕುತ್ತಾ ಹೋಗುತ್ತಾರೆ. ತಂದೆಯು ತಿಳಿಸುತ್ತಾರೆ ದೆಹಲಿ ಮತ್ತು
ಕಾಶಿಯನ್ನು ಸೇವೆಯ ಮುತ್ತಿಗೆಹಾಕಿ ಇಡೀ ಪ್ರಪಂಚಕ್ಕೆ ನೀವು ಮುತ್ತಿಗೆ ಹಾಕುವವರಾಗಿದ್ದೀರಿ ಎಂದು
ಹೇಳುತ್ತಾರೆ. ನೀವು ಯೋಗಬಲದಿಂದ ಇಡೀ ಪ್ರಪಂಚದಲ್ಲಿ ಒಂದು ರಾಜ್ಯವನ್ನು ಸ್ಥಾಪನೆ ಮಾಡುತ್ತೀರಿ.
ಎಷ್ಟೊಂದು ಖುಷಿಯಾಗುತ್ತದೆ! ಕೆಲಕೆಲವರು ಕೆಲಕೆಲವೊಂದೆಡೆ ಹೋಗುತ್ತಾರೆ. ನಿಮ್ಮ ಮಾತನ್ನು ಯಾರೂ
ಕೇಳುವುದಿಲ್ಲ. ಯಾವಾಗ ದೊಡ್ಡ-ದೊಡ್ಡವರು ಬರುತ್ತಾರೆ. ಪತ್ರಿಕೆಗಳಲ್ಲಿ ಬರುವುದೋ ಆಗ
ತಿಳಿಯುತ್ತಾರೆ. ಈಗಿನ್ನೂ ಚಿಕ್ಕ-ಚಿಕ್ಕ ಬೇಟೆಯಾಗುತ್ತಿದೆ. ದೊಡ್ಡ-ದೊಡ್ಡ ಸಾಹುಕಾರರಂತೂ ನಮಗಾಗಿ
ಇಲ್ಲಿಯೇ ಸ್ವರ್ಗವಿದೆ ಎಂದು ತಿಳಿಯುತ್ತಾರೆ. ಬಡವರೇ ಬಂದು ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ.
ಬಾಬಾ, Œನೀವು ನನ್ನವರು ನಿಮ್ಮ ವಿನಃ ನನಗೆ ಇನ್ಯಾರೂ ಇಲ್ಲ ಎಂದು ಹೇಳುತ್ತಾರೆ. ಆದರೆ
ಮೋಹ-ಮಮತ್ವವು ಇಡೀ ಪ್ರಪಂಚದಿಂದ ಕಳೆಯಬೇಕಲ್ಲವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ
ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಆತ್ಮವನ್ನು
ಕಂಚನವನ್ನಾಗಿ ಮಾಡಿಕೊಳ್ಳಲು ಒಬ್ಬರು ಇನ್ನೊಬರಿಗೆ ಎಚ್ಚರಿಸಬೇಕು. ಮನ್ಮನಾಭವದ ಸಲಹೆ ಕೊಡಬೇಕಾಗಿದೆ.
ಯೋಗಬಲದಿಂದ ಪವಿತ್ರರಾಗಿ ಮಿನುಗುತ್ತಿರುವ ನಕ್ಷತ್ರಗಳಾಗಬೇಕಾಗಿದೆ.
2. ಈ ಬೇಹದ್ದಿನ
ಮಾಡಿ-ಮಾಡಲ್ಪಟ್ಟಂತಹ ನಾಟಕವನ್ನು ಬಹಳ ಚೆನ್ನಾಗಿ ಅರಿತುಕೊಂಡು ಸ್ವದರ್ಶನ ಚಕ್ರಧಾರಿಗಳಾಗಬೇಕು.
ಜ್ಞಾನದ ಅಂಜನವನ್ನು ಕೊಟ್ಟು ಮನುಷ್ಯರನ್ನು ಅಜ್ಞಾನ ಘೋರ ಅಂಧಕಾರದಿಂದ ಬಿಡಿಸಬೇಕಾಗಿದೆ.
ವರದಾನ:
ಬಾಲಕ ಹಾಗೂ
ಮಾಲಿಕನ ಸ್ಮೃತಿಯಿಂದ ಸರ್ವ ಖಜಾನೆಗಳನ್ನು ತಮ್ಮದನ್ನಾಗಿಸಿಕೊಳ್ಳುವವರೆ ಸ್ವರಾಜ್ಯ ಅಧಿಕಾರಿ ಭವ.
ಈ ಸಮಯದಲ್ಲಿ ತಾವು
ಮಕ್ಕಳು ಕೇವಲ ಬಾಲಕರಲ್ಲ ಆದರೆ ಬಾಲಕರಿಂದ ಮಾಲೀಕರಾಗಿರುವಿರಿ, ಒಂದು ಸ್ವರಾಜ್ಯ ಅಧಿಕಾರಿ ಮಾಲೀಕ
ನಂತರ ಎರಡನೆಯದು ತಂದೆಯ ಆಸ್ತಿಗೆ ಮಾಲೀಕ. ಯಾವಾಗ ಸ್ವರಾಜ್ಯ ಅಧಿಕಾರಿಯಾಗುವಿರಿ ಆಗ ಸ್ವಯಂನ ಸರ್ವ
ಕರ್ಮೇಂದ್ರಿಯ ಆದೇಶದ ಪ್ರಮಾಣ ಇರಬೇಕು. ಆದರೆ ಸಮಯ ಪ್ರತೀ ಸಮಯ ಮಾಲೀಕತನದ ಸ್ಮೃತಿಯನ್ನು ಮರೆಸಿ
ತನ್ನ ವಶದಲ್ಲಿ ಮಾಡಿಕೊಳ್ಳುವಂತಹದು ಈ ಮನಸ್ಸಾಗಿದೆ, ಆದ್ದರಿಂದ ಮನ್ಮನಾಭವ.
ಮನ್ಮನಾಭವವಾಗಿರುವುದರಿಂದ ಯಾವುದೇ ವ್ಯರ್ಥ ಮಾತಿನ ಪ್ರಭಾವ ಬೀಳುವುದಿಲ್ಲ ಮತ್ತು ಸರ್ವ ಖಜಾನೆಗಳು
ನಿಮಗೆ ಅನುಭವವಾಗುವುದು.
ಸ್ಲೋಗನ್:
ಪರಮಾತ್ಮನ
ಪ್ರೀತಿಯ ಉಯ್ಯಾಲೆಯಲ್ಲಿ ಹಾರುವ ಕಲೆಯ ಮೋಜನ್ನು ಆಚರಿಸುವುದು ಇದೇ ಎಲ್ಲಕ್ಕಿಂತ ಶ್ರೇಷ್ಠ
ಭಾಗ್ಯವಾಗಿದೆ.