18.09.25 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ಯಾವಾಗ
ನೀವು ಹೂಗಳಾಗುವಿರೋ ಆಗ ಈ ಭಾರತವು ಮುಳ್ಳಿನ ಕಾಡಿನಿಂದ ಸಂಪೂರ್ಣ ಹೂದೋಟವಾಗುವುದು, ತಂದೆಯು
ನಿಮ್ಮನ್ನು ಹೂಗಳನ್ನಾಗಿ ಮಾಡುತ್ತಾರೆ"
ಪ್ರಶ್ನೆ:
ಮಂದಿರಕ್ಕೆ
ಯೋಗ್ಯರಾಗಲು ಯಾವ ಮಾತುಗಳ ಮೇಲೆ ವಿಶೇಷ ಗಮನ ಕೊಡಬೇಕಾಗಿದೆ?
ಉತ್ತರ:
ಮಂದಿರಕ್ಕೆ
ಯೋಗ್ಯ (ಪೂಜ್ಯ) ರಾಗಬೇಕೆಂದರೆ ಚಲನೆಯ ಮೇಲೆ ವಿಶೇಷ ಗಮನ ಕೊಡಿ. ಚಲನೆಯು ಬಹಳ ಮಧುರ ಮತ್ತು ರಾಯಲ್
ಆಗಿರಬೇಕು. ಇಷ್ಟು ಮಧುರತೆಯಿರಲಿ, ಅನ್ಯರಿಗೂ ಅದು ಅನುಭೂತಿಯಾಗಲಿ. ಅನೇಕರಿಗೆ ತಂದೆಯ ಪರಿಚಯ ಕೊಡಿ,
ತಮ್ಮ ಕಲ್ಯಾಣ ಮಾಡಿಕೊಳ್ಳಲು ಚೆನ್ನಾಗಿ ಪುರುಷಾರ್ಥ ಮಾಡಿ. ಸರ್ವೀಸಿನಲ್ಲಿ ತತ್ಫರರಾಗಿರಿ.
ಗೀತೆ:
ಪ್ರಪಂಚ ಬದಲಾದರೂ
ನಾವು ಬದಲಾಗುವುದಿಲ್ಲ............
ಓಂ ಶಾಂತಿ.
ಆತ್ಮಿಕ ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ಬ್ರಹ್ಮಾರವರ ಮೂಲಕ ತಿಳಿಸುತ್ತಿದ್ದಾರೆ.
ಬ್ರಹ್ಮಾನ ರಥದ ಮೂಲಕವೇ ತಿಳಿಸುತ್ತಿರುತ್ತಾರೆ. ನಾವು ಈ ಪ್ರತಿಜ್ಞೆ ಮಾಡುತ್ತೇವೆ - ಶ್ರೀಮತದಂತೆ
ಈ ಭಾರತ ಭೂಮಿಯನ್ನು ಪತಿತ ಭಾರತದಿಂದ ಪಾವನ ಮಾಡುತ್ತೇವೆ. ವಿಶೇಷವಾಗಿ ಭಾರತ ಮತ್ತು ಇಡೀ ಪ್ರಪಂಚದ
ಎಲ್ಲರಿಗೆ ನಾವು ಪತಿತರಿಂದ ಪಾವನರಾಗುವ ಮಾರ್ಗವನ್ನು ತಿಳಿಸುತ್ತೇವೆ. ಇಷ್ಟು ವಿಚಾರಗಳನ್ನು
ಪ್ರತಿಯೊಬ್ಬರೂ ತಮ್ಮ ಬುದ್ಧಿಯಲ್ಲಿಡಬೇಕು. ತಂದೆಯು ತಿಳಿಸುತ್ತಾರೆ - ಡ್ರಾಮಾನುಸಾರ ಯಾವಾಗ ನೀವು
ಹೂಗಳಾಗುವಿರೋ, ಯಾವಾಗ ಆ ಸಮಯವು ಬಂದು ಬಿಡುವುದೋ ಆಗ ಸಂಪೂರ್ಣ ಹೂದೋಟವಾಗಿ ಬಿಡುವುದು.
ನಿರಾಕಾರನಿಗೆ ಹೂದೋಟದ ಮಾಲೀಕ ಮತ್ತು ಮಾಲಿಯೆಂದು ಹೇಳಲಾಗುತ್ತದೆ ಮಾಲಿಯೂ ಸಹ ಆತ್ಮ ಆಗಿದ್ದಾರೆ,
ಶರೀರವಲ್ಲ. ಮಾಲೀಕ ಸಹ ಆತ್ಮಾ ಆಗಿದ್ದಾರೆ, ತಂದೆ ತಿಳಿಸುವುದು ಎಂದರೆ ಖಂಡಿತವಾಗಿಯೂ ಶರೀರದ
ಮೂಲಕವಲ್ಲವೇ?. ಶರೀರದ ಜೊತೆಯೇ ಅವರನ್ನು ಮಾಲಿ ಮತ್ತು ಮಾಲೀಕನೆಂದು ಕರೆಯಲಾಗುತ್ತದೆ, ಯಾರು ಈ
ವಿಶ್ವವನ್ನು ಹೂದೋಟವನ್ನಾಗಿ ಮಾಡುತ್ತಾರೆ. ಹೂದೋಟವಾಗಿತ್ತು, ಎಲ್ಲಿ ಈ ದೇವತೆಗಳಿದ್ದರು ಅಲ್ಲಿ
ಯಾವುದೇ ದುಃಖವಿರಲಿಲ್ಲ, ಇಲ್ಲಿ ಮುಳ್ಳುಗಳ ಕಾಡಿನಲ್ಲಂತೂ ಬಹಳ ದುಃಖವಿದೆ. ರಾವಣ ರಾಜ್ಯದಲ್ಲಿ
ಮುಳ್ಳುಗಳ ಕಾಡಾಗಿದೆ. ಯಾರೂ ಕೂಡಲೇ ಹೂವಾಗಿ ಬಿಡುವುದಿಲ್ಲ. ದೇವತೆಗಳ ಮುಂದೆ ಹೋಗಿ ನಾವು
ಜನ್ಮ-ಜನ್ಮಾಂತರದ ಪಾಪಿಗಳಾಗಿದ್ದೇವೆ, ಅಜಾಮಿಳರಾಗಿದ್ದೇವೆಂದು ಹೇಳುತ್ತಾರೆ. ಬಂದು ನಮ್ಮನ್ನು
ಪುಣ್ಯಾತ್ಮರನ್ನಾಗಿ ಮಾಡಿ ಎಂದು ಪ್ರಾರ್ಥನೆ ಮಾಡುತ್ತಾರೆ. ನಾವೀಗ ಪಾಪಾತ್ಮರಾಗಿದ್ದೇವೆ, ಯಾವುದೋ
ಸಮಯದಲ್ಲಿ ಪುಣ್ಯಾತ್ಮರಾಗಿದ್ದೆವು ಎಂಬುದನ್ನೂ ತಿಳಿಯುತ್ತಾರೆ. ಈಗ ಈ ಪ್ರಪಂಚದಲ್ಲಿ ಪುಣ್ಯಾತ್ಮರ
ಕೇವಲ ಚಿತ್ರಗಳಿವೆ, ರಾಜಧಾನಿಯ ಮುಖ್ಯಸ್ಥರ ಚಿತ್ರಗಳಿವೆ ಮತ್ತು ಅವರನ್ನು ಈ ರೀತಿ ಮಾಡುವವರು
ನಿರಾಕಾರ ಶಿವನಾಗಿದ್ದಾರೆ. ಅವರ ಚಿತ್ರವಿದೆಯಷ್ಟೆ ಮತ್ತ್ಯಾವುದೇ ಚಿತ್ರವಿಲ್ಲ. ಇದರಲ್ಲಿಯೂ ಶಿವನ
ದೊಡ್ಡಲಿಂಗವನ್ನಾಗಿ ಮಾಡಿ ತೋರಿಸುತ್ತಾರೆ. ಆತ್ಮವು ನಕ್ಷತ್ರ ಸಮಾನವಾಗಿದೆಯೆಂದು ಹೇಳುತ್ತಾರೆ
ಅಂದಮೇಲೆ ಆತ್ಮದ ತಂದೆಯೂ ಅದೇ ರೀತಿ ಇರಬೇಕಲ್ಲವೆ. ಆದರೆ ಅವರ ಪೂರ್ಣ ಪರಿಚಯವಿಲ್ಲ. ವಿಶ್ವದಲ್ಲಿ
ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಈ ದೇವತೆಗಳನ್ನು ಕುರಿತು ಎಲ್ಲಿಯೂ ನಿಂದನೆಯ ಮಾತುಗಳನ್ನು
ಬರೆದಿಲ್ಲ. ಆದರೆ ಕೃಷ್ಣನನ್ನು ಮಾತ್ರ ಕೆಲವೊಮ್ಮೆ ದ್ವಾಪರದಲ್ಲಿಯೂ, ಕೆಲವೊಮ್ಮೆ ಇನ್ನೊಂದು ಕಡೆ
ತೆಗೆದುಕೊಂಡು ಹೋಗುತ್ತಾರೆ. ಲಕ್ಷ್ಮೀ-ನಾರಾಯಣರಂತೂ ಸ್ವರ್ಗದ ಮಾಲೀಕರಾಗಿದ್ದರೆಂದು ಎಲ್ಲರೂ
ಹೇಳುತ್ತಾರೆ. ಇದು ನಿಮ್ಮ ಗುರಿ-ಧ್ಯೇಯವಾಗಿದೆ. ರಾಧೆ-ಕೃಷ್ಣರು ಯಾರೆಂಬುದರಲ್ಲಿ ಮನುಷ್ಯರು ಬಹಳ
ಗೊಂದಲಕ್ಕೊಳಗಾಗಿದ್ದಾರೆ, ಏನನ್ನೂ ತಿಳಿದುಕೊಳ್ಳುವುದಿಲ್ಲ. ಯಾರು ತಂದೆಯ ಮೂಲಕ ತಿಳಿದುಕೊಳ್ಳುವರೋ
ಅವರೇ ತಿಳಿಸುವುದಕ್ಕೂ ಯೋಗ್ಯರಾಗುತ್ತಾರೆ, ಇಲ್ಲವಾದರೆ ಯೋಗ್ಯರಾಗಲು ಸಾಧ್ಯವಿಲ್ಲ, ದೈವೀ
ಗುಣಗಳನ್ನೂ ಧಾರಣೆ ಮಾಡಲು ಸಾಧ್ಯವಿಲ್ಲ. ಭಲೆ ಎಷ್ಟಾದರೂ ತಿಳಿಸಿ ಆದರೆ ಡ್ರಾಮಾನುಸಾರ ಈ ರೀತಿ
ಆಗಲೇಬೇಕಾಗಿದೆ. ಈಗ ನೀವು ಸ್ವಯಂ ತಿಳಿದುಕೊಳ್ಳುತ್ತೀರಿ - ನಾವೆಲ್ಲಾ ಮಕ್ಕಳು ತಂದೆಯ ಶ್ರೀಮತದಂತೆ
ನಮ್ಮದೇ ತನು-ಮನ-ಧನದಿಂದ ಆತ್ಮಿಕ ಸೇವೆ ಮಾಡುತ್ತೇವೆ. ಪ್ರದರ್ಶನಿ ಅಥವಾ ಮ್ಯೂಸಿಯಂಗಳಲ್ಲಿ ನೀವು
ಭಾರತಕ್ಕೆ ಯಾವ ಸೇವೆ ಮಾಡುತ್ತೀರಿ? ಎಂದು ಕೇಳುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ನಾವು
ಭಾರತದ ಬಹಳ ಒಳ್ಳೆಯ ಸೇವೆ ಮಾಡುತ್ತೇವೆ, ಕಾಡಿನಿಂದ ಉದ್ಯಾನವನನ್ನಾಗಿ ಮಾಡುತ್ತಿದ್ದೇವೆ,
ಸತ್ಯಯುಗವು ಹೂದೋಟ ಕಲಿಯುಗವು ಮುಳ್ಳುಗಳ ಕಾಡಾಗಿದೆ. ಒಬ್ಬರು ಇನ್ನೊಬ್ಬರಿಗೆ ದುಃಖವನ್ನೇ
ಕೊಡುತ್ತಿರುತ್ತಾರೆ. ಇದನ್ನು ನೀವು ಬಹಳ ಚೆನ್ನಾಗಿ ತಿಳಿಸಿಕೊಡಬಹುದು. ಮಂದಿರಗಳಲ್ಲಿ
ಲಕ್ಷ್ಮೀ-ನಾರಾಯಣರ ಚಿತ್ರವನ್ನು ಬಹಳ ಸುಂದರವಾಗಿ ಮಾಡಿಸುತ್ತಾರೆ. ಕೆಲವೊಂದೆಡೆ ಕಪ್ಪಾಗಿಯೂ
ಕೆಲವೊಂದೆಡೆ ಸುಂದರವಾಗಿಯೂ ತೋರಿಸುತ್ತಾರೆ. ಅದರ ರಹಸ್ಯವೇನೆಂಬುದನ್ನೂ ಸಹ
ತಿಳಿದುಕೊಳ್ಳುವುದಿಲ್ಲ. ನೀವು ಮಕ್ಕಳಿಗೆ ಈಗ ಇದೆಲ್ಲದರ ಸಂಪೂರ್ಣ ಜ್ಞಾನವಿದೆ. ತಂದೆಯು
ತಿಳಿಸುತ್ತಾರೆ - ನಾನು ಬಂದು ಎಲ್ಲರನ್ನೂ ಮಂದಿರಯೋಗ್ಯರನ್ನಾಗಿ ಮಾಡುತ್ತೇನೆ. ಆದರೆ ಎಲ್ಲರೂ
ಮಂದಿರಕ್ಕೆ ಯೋಗ್ಯರಾಗುವುದಿಲ್ಲ. ಪ್ರಜೆಗಳನ್ನಂತೂ ಮಂದಿರ ಯೋಗ್ಯರೆಂದು ಹೇಳುವುದಿಲ್ಲ ಅಲ್ಲವೆ.
ಯಾರು ಪುರುಷಾರ್ಥ ಮಾಡಿ ಬಹಳ ಸೇವೆ ಮಾಡುವರೋ ಅವರಿಗೆ ಪ್ರಜೆಗಳಿರುತ್ತಾರೆ.
ನೀವು ಮಕ್ಕಳು ಆತ್ಮಿಕ
ಸಮಾಜ ಸೇವೆಯನ್ನು ಮಾಡಬೇಕಾಗಿದೆ. ಈ ಸೇವೆಯಲ್ಲಿ ತಮ್ಮ ಜೀವನವನ್ನು ಸಫಲ ಮಾಡಿಕೊಳ್ಳಬೇಕಾಗಿದೆ.
ಚಲನೆಯು ಮಧುರ ಸುಂದರವಾಗಿರಲಿ. ಅದರಿಂದ ಅನ್ಯರಿಗೂ ಮಧುರತೆಯಿಂದ ತಿಳಿಸಬಹುದು. ತಾನೇ
ಮುಳ್ಳಾಗಿದ್ದರೆ ಅನ್ಯರನ್ನು ಹೂಗಳನ್ನಾಗಿ ಹೇಗೆ ಮಾಡುವಿರಿ! ಅಂತಹವರ ಬಾಣವು ನಾಟುವುದಿಲ್ಲ.
ತಂದೆಯನ್ನು ನೆನಪು ಮಾಡದಿದ್ದರೆ ಬಾಣವು ಹೇಗೆ ನಾಟುತ್ತದೆ! ತಮ್ಮ ಕಲ್ಯಾಣಕ್ಕಾಗಿ ಚೆನ್ನಾಗಿ
ಪುರುಷಾರ್ಥ ಮಾಡಿ ಸರ್ವೀಸಿನಲ್ಲಿ ತತ್ಫರರಾಗಿರಿ. ತಂದೆಯು ಸೇವೆಯಲ್ಲಿ ಉಪಸ್ಥಿತರಿದ್ದಾರಲ್ಲವೆ.
ಹಾಗೆಯೇ ನೀವು ಮಕ್ಕಳೂ ಸಹ ದಿನ-ರಾತ್ರಿ ಸೇವೆಯಲ್ಲಿ ತತ್ಫರರಾಗಿರಿ.
ಎರಡನೆಯ ಮಾತೇನೆಂದರೆ,
ತಂದೆಯು ತಿಳಿಸುತ್ತಾರೆ – ಶಿವ ಜಯಂತಿಯಂದು ಬಹಳ ಮಕ್ಕಳು ಪತ್ರಗಳನ್ನು ಕಳುಹಿಸುತ್ತಾರೆ. ಅದರಲ್ಲಿ
ಈ ರೀತಿ ಬರೆದಿರಲಿ, ಅದನ್ನು ಯಾರಿಗಾದರೂ ತೋರಿಸಿದ ಕೂಡಲೇ ಅರ್ಥವಾಗಿ ಬಿಡಬೇಕು. ಮುಂದೇನು
ಮಾಡಬೇಕೆಂದು ಪುರುಷಾರ್ಥ ಮಾಡಬೇಕಾಗಿದೆ. ಯಾವ-ಯಾವ ಸೇವೆ ಮಾಡಿದರೆ ಅನೇಕರಿಗೆ ತಂದೆಯ ಪರಿಚಯ
ಸಿಗುವುದು ಎಂಬುದಕ್ಕಾಗಿಯೇ ಚರ್ಚಾಗೋಷ್ಠಿಗಳನ್ನಿಡಲಾಗುತ್ತದೆ, ಪತ್ರಗಳಂತೂ ಬಹಳಷ್ಟಿದೆ ಇದರಿಂದ
ನೀವು ಬಹಳ ಕೆಲಸವನ್ನು ತೆಗೆದುಕೊಳ್ಳಬೇಕಾಗಿದೆ. ಶಿವಬಾಬಾ ಕೆ/ಆ ಬ್ರಹ್ಮಾ ಎಂದು ವಿಳಾಸವನ್ನು
ಬರೆಯುತ್ತಾರೆ. ಪ್ರಜಾಪಿತ ಬ್ರಹ್ಮಾನೂ ಇದ್ದಾರೆ, ಒಬ್ಬರು ಆತ್ಮಿಕ ತಂದೆ, ಇನ್ನೊಬ್ಬರು ಸಾಕಾರ
ತಂದೆ. ಅವರಿಂದ ಸಾಕಾರ ರಚನೆಯನ್ನು ರಚಿಸಲಾಗುತ್ತದೆ. ತಂದೆಯು ಮನುಷ್ಯ ಸೃಷ್ಟಿಯ ರಚಯಿತನಾಗಿದ್ದಾರೆ,
ಹೇಗೆ ರಚನೆಯನ್ನು ರಚಿಸುತ್ತಾರೆ ಎಂಬುದನ್ನು ಇಡೀ ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ. ತಂದೆಯು
ಬ್ರಹ್ಮಾರವರ ಮೂಲಕ ಈಗ ಹೊಸ ರಚನೆಯನ್ನು ರಚಿಸುತ್ತಿದ್ದಾರೆ, ಬ್ರಾಹ್ಮಣರು ಶಿಖೆಗೆ
ಸಮಾನರಾಗಿದ್ದೀರಿ. ಮೊಟ್ಟ ಮೊದಲು ಬ್ರಾಹ್ಮಣರು ಅವಶ್ಯವಾಗಿ ಬೇಕು. ಈ ಶಿಖೆಯು ವಿರಾಟ ರೂಪದ್ದಾಗಿದೆ.
ಬ್ರಾಹ್ಮಣ, ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರ........ ಮೊದಲು ಶೂದ್ರರಿರಲು ಸಾಧ್ಯವಿಲ್ಲ.
ತಂದೆಯು ಬ್ರಹ್ಮಾರವರ ಮೂಲಕ ಮೊದಲು ಬ್ರಾಹ್ಮಣರನ್ನು ರಚಿಸುತ್ತಾರೆ. ಶೂದ್ರರನ್ನು ಹೇಗೆ ಮತ್ತು
ಯಾರ ಮೂಲಕ ರಚಿಸುತ್ತಾರೆ?
ಹೇಗೆ ಹೊಸ ರಚನೆಯನ್ನು
ರಚಿಸುತ್ತಾರೆ ಎಂಬುದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಇದು ತಂದೆಯ ರಚನೆಯಾಗಿದೆ.
ಕಲ್ಪ-ಕಲ್ಪವೂ ತಂದೆಯು ಬಂದು ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡುತ್ತಾರೆ, ಮತ್ತೆ ಬ್ರಾಹ್ಮಣರಿಂದ
ದೇವತೆಗಳನ್ನಾಗಿ ಮಾಡುತ್ತಾರೆ. ಬ್ರಾಹ್ಮಣರ ಸೇವೆಯು ಅತಿ ಶ್ರೇಷ್ಠವಾಗಿದೆ. ಆ ಬ್ರಾಹ್ಮಣ (ಲೌಕಿಕ
ಬ್ರಾಹ್ಮಣ) ರಾದರೋ ತಾವೇ ಪವಿತ್ರರಾಗಿರುವುದಿಲ್ಲ ಅಂದಮೇಲೆ ಅನ್ಯರನ್ನು ಹೇಗೆ ಪವಿತ್ರರನ್ನಾಗಿ
ಮಾಡುವರು? ಯಾವುದೇ ಸನ್ಯಾಸಿಗಳಿಗೆ ಎಂದೂ ಶ್ರೀರಕ್ಷೆಯನ್ನು ಕಟ್ಟುವುದಿಲ್ಲ ಏಕೆಂದರೆ ನಾವಂತೂ
ಪವಿತ್ರರಾಗಿಯೇ ಇದ್ದೇವೆ, ನೀವು ತಮ್ಮ ಮುಖವನ್ನು ನೋಡಿಕೊಳ್ಳಿ ಎಂದು ಸನ್ಯಾಸಿಗಳು ಹೇಳಿ
ಬಿಡುತ್ತಾರೆ. ನೀವು ಮಕ್ಕಳೂ ಸಹ ಯಾರಿಂದಲೂ ಶ್ರೀ ರಕ್ಷೆಯನ್ನು ಕಟ್ಟಿಸಿಕೊಳ್ಳಬಾರದು.
ಪ್ರಪಂಚದಲ್ಲಂತೂ ಎಲ್ಲರೂ ಒಬ್ಬರು ಇನ್ನೊಬ್ಬರಿಗೆ ಶ್ರೀ ರಕ್ಷೆಯನ್ನು ಕಟ್ಟುತ್ತಾರೆ. ಸಹೋದರಿಯು
ಸಹೋದರನಿಗೆ ಕಟ್ಟುತ್ತಾಳೆ. ಈ ಪದ್ಧತಿಯು ಈಗ ಹೊರ ಬಂದಿದೆ. ನೀವೀಗ ಶೂದ್ರರಿಂದ ಬ್ರಾಹ್ಮಣರಾಗಲು
ಪುರುಷಾರ್ಥ ಮಾಡುತ್ತೀರಿ. ಸ್ತ್ರೀ-ಪುರುಷರಿಬ್ಬರು ಪವಿತ್ರತೆಯ ಪ್ರತಿಜ್ಞೆ ಮಾಡುತ್ತಾರೆ. ನಾವು
ಹೇಗೆ ತಂದೆಯ ಶ್ರೀಮತದಿಂದ ಪವಿತ್ರರಾಗಿರುತ್ತೇವೆ ಎಂಬುದನ್ನು ಇಬ್ಬರೂ ತಿಳಿಸಬೇಕಾಗಿದೆ.
ಅಂತ್ಯದವರೆಗೂ ಈ ಕಾಮ ವಿಕಾರದ ಮೇಲೆ ಗೆಲ್ಲುತ್ತಿದ್ದರೆ ಪವಿತ್ರ ಪ್ರಪಂಚದ ಮಾಲೀಕರಾಗುತ್ತೀರಿ.
ಸತ್ಯಯುಗಕ್ಕೆ ಪವಿತ್ರ ಪ್ರಪಂಚವೆಂದು ಹೇಳಲಾಗುತ್ತದೆ. ನೀವೆಲ್ಲರೂ ಪವಿತ್ರರಾಗಿದ್ದೀರಿ,
ವಿಕಾರದಲ್ಲಿ ಬೀಳುವವರಿಗೆ ಶ್ರೀರಕ್ಷೆಯನ್ನು ಕಟ್ಟಿರಿ. ಪ್ರತಿಜ್ಞೆ ಮಾಡಿ ಮತ್ತೆ ಪತಿತರಾದರೆ ನೀವು
ಹೇಳಿ, ನೀವು ಶ್ರೀರಕ್ಷೆಯನ್ನು ಕಟ್ಟಿಸಿಕೊಳ್ಳಲು ಬಂದಿದ್ದಿರಿ ಮತ್ತೇನಾಯಿತು? ಆಗ ಮಾಯೆಯಿಂದ
ಸೋಲನ್ನನುಭವಿಸಿದೆವೆಂದು ಹೇಳುತ್ತಾರೆ. ಇದು ಯುದ್ಧದ ಮೈದಾನವಾಗಿದೆ, ವಿಕಾರವು ದೊಡ್ಡ
ಶತ್ರುವಾಗಿದೆ, ಇದರ ಮೇಲೆ ಗೆಲ್ಲುವುದರಿಂದಲೇ ಜಗತ್ಜೀತರು ಅರ್ಥಾತ್ ರಾಜ-ರಾಣಿಯರಾಗಬೇಕಾಗಿದೆ.
ಪ್ರಜೆಗಳಿಗೆ ಜಗತ್ಜೀತರೆಂದು ಹೇಳುವುದಿಲ್ಲ. ರಾಜ-ರಾಣಿಯರೇ ಪರಿಶ್ರಮ ಪಡುತ್ತಾರಲ್ಲವೆ. ನಾವಂತೂ
ಲಕ್ಷ್ಮೀ-ನಾರಾಯಣರಾಗುತ್ತೇವೆಂದು ಹೇಳುತ್ತಾರೆ, ಅವರು ಮತ್ತೆ ರಾಮ-ಸೀತೆಯರೂ ಆಗುತ್ತಾರೆ.
ಲಕ್ಷ್ಮೀ-ನಾರಾಯಣರ ನಂತರ ಅವರ ಸಿಂಹಾಸನವನ್ನು ಅವರ ಮಕ್ಕಳೇ ಅಲಂಕರಿಸುತ್ತಾರೆ. ಆ
ಲಕ್ಷ್ಮೀ-ನಾರಾಯಣರು ಮತ್ತೆ ಇನ್ನೊಂದು ಜನ್ಮದಲ್ಲಿ ಕೆಳಗೆ ಬಂದು ಬಿಡುತ್ತಾರೆ. ಭಿನ್ನ
ನಾಮ-ರೂಪದಿಂದ ಸಿಂಹಾಸನವು ಸಿಗುತ್ತದೆ ಆದ್ದರಿಂದ ಮೊದಲನೇ ಸಂಖ್ಯೆಯು ಎಣಿಕೆಗೆ ಬರುವುದು.
ಪುನರ್ಜನ್ಮವನ್ನಂತೂ ತೆಗೆದುಕೊಳ್ಳುತ್ತಾರಲ್ಲವೆ. ಮಗು ಸಿಂಹಾಸನದ ಮೇಲೆ ಕುಳಿತುಕೊಂಡರೆ ಅವರು
ಎರಡನೆ ದರ್ಜೆಯವರಾದರು, ಕೆಳಗಿನವರು ಮೇಲೆ, ಮೇಲಿನವರು ಕೆಳಗೆ ಬರುವರು. ಈಗ ಮಕ್ಕಳು ಇಷ್ಟು
ಶ್ರೇಷ್ಠರಾಗಬೇಕೆಂದರೆ ಸೇವೆಯಲ್ಲಿ ತೊಡಗಿರಿ. ಪವಿತ್ರರಾಗುವುದು ಬಹಳ ಅವಶ್ಯಕತೆಯಿದೆ. ತಂದೆಯು
ತಿಳಿಸುತ್ತಾರೆ - ನಾನು ಪವಿತ್ರ ಪ್ರಪಂಚವನ್ನಾಗಿ ಮಾಡುತ್ತೇನೆ, ಕೆಲವರು ಮಾತ್ರವೇ ಒಳ್ಳೆಯ
ಪುರುಷಾರ್ಥ ಮಾಡುತ್ತಾರೆ. ಇಡೀ ಪ್ರಪಂಚವಂತೂ ಪವಿತ್ರವಾಗಿ ಬಿಡುತ್ತದೆ. ನಿಮಗಾಗಿ ತಂದೆಯು
ಸ್ವರ್ಗದ ಸ್ಥಾಪನೆ ಮಾಡುತ್ತಾರೆ. ಈ ಆಟವು ಮಾಡಲ್ಪಟ್ಟಿದೆ. ಇದು ಡ್ರಾಮಾನುಸಾರ ಆಗಲೇಬೇಕಾಗಿದೆ.
ನೀವು ಪವಿತ್ರರಾಗಿ ಬಿಟ್ಟರೆ ವಿನಾಶವು ಆರಂಭವಾಗುತ್ತದೆ, ಸತ್ಯಯುಗದ ಸ್ಥಾಪನೆಯಾಗುತ್ತದೆ.
ನಾಟಕವನ್ನಂತೂ ನೀವು ತಿಳಿದುಕೊಳ್ಳುತ್ತೀರಿ. ಸತ್ಯಯುಗದಲ್ಲಿ ದೇವತೆಗಳ ರಾಜ್ಯವಿತ್ತು, ಈಗಿಲ್ಲ,
ಪುನಃ ಬರುವುದು.
ನೀವು ಆತ್ಮಿಕ ಸೇನಾ
ದಳವಾಗಿದ್ದೀರಿ. ನೀವು ಪಂಚ ವಿಕಾರಗಳ ಮೇಲೆ ಜಯ ಗಳಿಸಿ ಜಗಜ್ಜೀತರಾಗುವವರಾಗಿದ್ದೀರಿ.
ಜನ್ಮ-ಜನ್ಮಾಂತರ ಪಾಪಗಳನ್ನು ಕಳೆಯಲು ತಂದೆಯು ಯುಕ್ತಿಗಳನ್ನು ತಿಳಿಸುತ್ತಾರೆ. ತಂದೆಯು ಒಂದೇ ಬಾರಿ
ಬಂದು ಯುಕ್ತಿಯನ್ನು ತಿಳಿಸುತ್ತಾರೆ. ರಾಜಧಾನಿಯು ಸ್ಥಾಪನೆಯಾಗುವವರೆಗೆ ವಿನಾಶವಾಗುವುದಿಲ್ಲ. ನೀವು
ಬಹಳ ಗುಪ್ತ ಯೋಧರಾಗಿದ್ದೀರಿ. ಕಲಿಯುಗದ ನಂತರ ಸತ್ಯಯುಗವಾಗುವುದು ಮತ್ತು ಸತ್ಯಯುಗದಲ್ಲೆಂದೂ
ಕಲಹಗಳಾಗುವುದಿಲ್ಲ. ಮಕ್ಕಳಿಗೆ ತಿಳಿದಿದೆ - ಎಲ್ಲಾ ಆತ್ಮಗಳು ಯಾರೆಲ್ಲಾ
ಪಾತ್ರವನ್ನಭಿನಯಿಸುತ್ತಾರೆಯೋ ಎಲ್ಲರದೂ ನಿಗಧಿಯಾಗಿದೆ. ಹೇಗೆ ಕೈ ಗೊಂಬೆಗಳಿರುತ್ತವೆಯಲ್ಲವೆ,
ಹಾಗೆಯೇ ನರ್ತಿಸುತ್ತಿರುತ್ತಾರೆ. ಇದು ನಾಟಕವಾಗಿದೆ, ಈ ನಾಟಕದಲ್ಲಿ ಪ್ರತಿಯೊಬ್ಬರ ಪಾತ್ರವಿದೆ.
ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ ನೀವು ತಮೋಪ್ರಧಾನರಾಗಿದ್ದೀರಿ, ನೀವೀಗ ಮತ್ತೆ ಮೇಲೆ
ಹೋಗುತ್ತೀರಿ ಸತೋಪ್ರಧಾನರಾಗುತ್ತೀರಿ. ಜ್ಞಾನವು ಸೆಕೆಂಡಿನದಾಗಿದೆ, ಸತೋಪ್ರಧಾನರಾಗುತ್ತೀರಿ ಮತ್ತೆ
ಇಳಿಯುತ್ತಾ-ಇಳಿಯುತ್ತಾ ತಮೋಪ್ರಧಾನರಾಗುತ್ತೀರಿ. ತಂದೆಯು ಪುನಃ ಮೇಲೆ ಕರೆದುಕೊಂಡು ಹೋಗುತ್ತಾರೆ.
ವಾಸ್ತವದಲ್ಲಿ ಆ ಮೀನುಗಳು ಗಾಳಕ್ಕೆ ಸಿಕ್ಕಿ ಹಾಕಿಕೊಳ್ಳುತ್ತವೆ, ಹಾಗೆಯೇ ಈ ಮನುಷ್ಯರನ್ನು
ಹಾಕಬೇಕು. ಹೀಗೆ ಇಳಿಯುವ ಕಲೆ ಮತ್ತು ಏರುವ ಕಲೆಯಾಗುತ್ತದೆ. ನೀವೂ ಏರುತ್ತೀರಿ, ಮತ್ತೆ
ಕೆಳಗಿಳಿಯುತ್ತಾ-ಇಳಿಯುತ್ತಾ ಮೇಲಿನಿಂದ (ಸತ್ಯಯುಗ) ಇಳಿಯುವುದರಲ್ಲಿ 5000 ವರ್ಷಗಳು ಹಿಡಿಸುತ್ತವೆ.
ಈ 84 ಜನ್ಮಗಳ ಚಕ್ರವು ನಿಮ್ಮ ಬುದ್ಧಿಯಲ್ಲಿದೆ. ಇಳಿಯುವ ಕಲೆ ಮತ್ತು ಏರುವ ಕಲೆಯ ರಹಸ್ಯವನ್ನು
ತಂದೆಯೇ ತಿಳಿಸಿದ್ದಾರೆ. ನಿಮ್ಮಲ್ಲಿ ನಂಬರ್ವಾರ್ ತಿಳಿದುಕೊಂಡಿದ್ದೀರಿ ಮತ್ತು ಪುರುಷಾರ್ಥ
ಮಾಡುತ್ತೀರಿ, ಯಾರು ತಂದೆಯನ್ನು ನೆನಪು ಮಾಡುವರೋ ಅವರು ಬೇಗನೆ ಮೇಲೆ ಹೋಗುತ್ತಾರೆ, ಇದು
ಪ್ರವೃತ್ತಿ ಮಾರ್ಗವಾಗಿದೆ. ಹೇಗೆ ಸ್ಪರ್ಧೆಯಲ್ಲಿ ಜೋಡಿಯನ್ನು ಓಡಿಸುವಾಗ ಜೋಡಿಯ (ಉದಾ: ಹೋರಿಗಳು)
ಒಂದೊಂದು ಕಾಲನ್ನು ಕಟ್ಟಿ ಓಡಿಸುತ್ತಾರೆ. ಇದೂ ಸಹ ಒಂದು ಸ್ಪರ್ಧೆಯಲ್ಲವೆ. ಯಾರಿಗಾದರೂ
ಅಭ್ಯಾಸವಿಲ್ಲವೆಂದರೆ ಕೆಳಗೆ ಬೀಳುತ್ತಾರೆ, ಇಲ್ಲಿಯೂ ಸಹ ಅದೇ ರೀತಿಯಾಗುತ್ತದೆ. ಒಬ್ಬರು
ಮುಂದುವರೆಯುತ್ತಾರೆ ಆಗ ಇನ್ನೊಬ್ಬರು ತಡೆಯುತ್ತಾರೆಂದರೆ ಅಲ್ಲಿ ಇಬ್ಬರು ಕೆಳಗೆ ಬೀಳುತ್ತಾರೆ.
ತಂದೆಗೆ ಆಶ್ಚರ್ಯವಾಗುತ್ತದೆ - ವೃದ್ಧರಲ್ಲಿಯೂ ಕಾಮದ ಬೆಂಕಿಯು ಹತ್ತಿಕೊಂಡರೆ ಅವರೂ ಸಹ ಕೆಳಗೆ
ಬೀಳುತ್ತಾರೆ. ಬೇರೆಯವರು ಬೀಳಿಸಿದರೆಂದಲ್ಲ, ಬೀಳುವುದು ಬೀಳದಿರುವುದು ತನ್ನ ಕೈಯಲ್ಲಿರುತ್ತದೆ.
ಯಾರಾದರೂ ಪೆಟ್ಟನ್ನು ಕೊಡುತ್ತಾರೆ, ನಾವು ಬೀಳುವುದಾದರೆ ನಾವೇಕೆ ಬೀಳಬೇಕು? ಏನೇ ಆಗಿ ಬಿಡಲಿ ನಾವು
ಬೀಳುವುದಿಲ್ಲ. ಬಿದ್ದರೆ ಎಲ್ಲವೂ ಸಮಾಪ್ತಿಯಾಗುತ್ತದೆ. ಬಹಳ ದೊಡ್ಡ ಪೆಟ್ಟು ಬೀಳುತ್ತದೆ,
ಮೂಳೆ-ಮೂಳೆಗಳು ಮುರಿಯುತ್ತವೆ ನಂತರ ಬಹಳ ಪಶ್ಚಾತ್ತಾಪ ಪಡುತ್ತಾರೆ. ತಂದೆಯು ಭಿನ್ನ-ಭಿನ್ನ
ಪ್ರಕಾರವಾಗಿ ತಿಳಿಸುತ್ತಿರುತ್ತಾರೆ.
ಇದನ್ನೂ ಸಹ ತಿಳಿಸಿದರು
– ಶಿವ ಜಯಂತಿಯಂದು ಇಂತಹ ಪತ್ರಗಳನ್ನು ಬರೆಯಬೇಕು ಅದನ್ನು ಮನುಷ್ಯರು ಓದಿದ ಕೂಡಲೆ ಅರ್ಥವಾಗಬೇಕು.
ವಿಚಾರ ಸಾಗರ ಮಂಥನ ಮಾಡಲು ತಂದೆಯು ಸಮಯ ಕೊಡುತ್ತಾರೆ. ಪತ್ರಗಳನ್ನು ನೋಡಿದರೆ ಸಾಕು,
ಆಶ್ಚರ್ಯಚಕಿತರಾಗಬೇಕು. ಎಲ್ಲರೂ ಬಾಪ್ದಾದಾ ಎಂದು ಬರೆಯುತ್ತಾರೆ. ನೀವು ತಿಳಿಸಿಕೊಡಿ, ಶಿವ ತಂದೆಗೆ
ಬಾಪ್ (ತಂದೆ) ಮತ್ತು ಬ್ರಹ್ಮಾ ತಂದೆಗೆ ದಾದಾ (ಅಣ್ಣ) ಎಂದು ಬರೆಯುತ್ತೇವೆ. ಒಬ್ಬರಿಗೆ ಎಂದಾದರೂ
ಬಾಪ್ದಾದಾ ಎಂದು ಹೇಳುತ್ತಾರೆಯೇ? ಇದು ವಿಚಿತ್ರವಾದ ಮಾತಾಗಿದೆ. ಇದರಲ್ಲಿ ಸತ್ಯ-ಸತ್ಯವಾದ
ಜ್ಞಾನವಿದೆ ಆದರೆ ನೆನಪಿನಲ್ಲಿದ್ದಾಗ ಮಾತ್ರವೇ ಅನ್ಯರಿಗೆ ಬಾಣವು ನಾಟುವುದು. ಮಕ್ಕಳು ಪದೇ-ಪದೇ
ದೇಹಾಭಿಮಾನದಲ್ಲಿ ಬಂದು ಬಿಡುತ್ತಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಆತ್ಮಾಭಿಮಾನಿಗಳಾಗಿ,
ಆತ್ಮವೇ ಶರೀರವನ್ನು ಧಾರಣೆ ಮಾಡಿ ಪಾತ್ರವನ್ನಭಿನಯಿಸುತ್ತದೆ. ಯಾರಾದರೂ ಮರಣ ಹೊಂದಿದರೂ ಸಹ ಯಾವುದೇ
ಸಂಕಲ್ಪವಿಲ್ಲ. ಆತ್ಮದಲ್ಲಿ ಯಾವ ಪಾತ್ರವು ನಿಗಧಿಯಾಗಿದೆ ಅದನ್ನು ನಾವು ಸಾಕ್ಷಿಯಾಗಿ ನೋಡುತ್ತೇವೆ.
ಅವರು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಂಡು ಅಭಿನಯಿಸಬೇಕಾಗಿದೆ. ಇದರಲ್ಲಿ
ನಾವೇನು ಮಾಡಲು ಸಾಧ್ಯ? ಈ ಜ್ಞಾನವೂ ಸಹ ನಂಬರ್ವಾರ್ ನಿಮ್ಮ ಬುದ್ಧಿಯಲ್ಲಿದೆ. ಕೆಲವರ ಬುದ್ಧಿಯಲ್ಲಿ
ನಿಲ್ಲುವುದೇ ಇಲ್ಲ ಆದ್ದರಿಂದ ಯಾರಿಗೂ ತಿಳಿಸುವುದಿಲ್ಲ. ಆತ್ಮವು ಸಂಪೂರ್ಣ ಕಾದ ಹೆಂಚಿನ ತರಹ
ತಮೋಪ್ರಧಾನ, ಪತಿತವಾಗಿದೆ. ಅದರ ಮೇಲೆ ಜ್ಞಾನಾಮೃತವನ್ನು ಹಾಕಿದರೂ ಸಹ ಅದು ನಿಲ್ಲುವುದಿಲ್ಲ. ಯಾರು
ಬಹಳ ಭಕ್ತಿ ಮಾಡಿದ್ದಾರೆಯೋ ಅವರಿಗೇ ಬಾಣವು ನಾಟುವುದು, ತಕ್ಷಣ ಧಾರಣೆಯಾಗುವುದು. ಲೆಕ್ಕವೇ ಈ ರೀತಿ
ಆಶ್ಚರ್ಯಕರವಾಗಿದೆ, ನಂಬರ್ವನ್ ಪಾವನರೇ ನಂತರ ಪತಿತರಾಗುತ್ತಾರೆ, ಇವೂ ಸಹ ಎಷ್ಟೊಂದು
ತಿಳಿದುಕೊಳ್ಳುವ ಮಾತುಗಳಾಗಿವೆ. ಯಾರ ಅದೃಷ್ಟದಲ್ಲಿಲ್ಲವೋ ಅವರು ವಿದ್ಯೆಯನ್ನೇ ಬಿಟ್ಟು
ಬಿಡುತ್ತಾರೆ. ಒಂದುವೇಳೆ ಬಾಲ್ಯದಲ್ಲಿಯೇ ಜ್ಞಾನದಲ್ಲಿ ತೊಡಗಿ ಬಿಟ್ಟರೆ ಧಾರಣೆಯಾಗುತ್ತಾ ಹೋಗುವುದು.
ಇವರು ಬಹಳ ಭಕ್ತಿ ಮಾಡಿದ್ದಾರೆಂದು ತಿಳಿಯುತ್ತಾರೆ, ಬಹಳ ಬುದ್ಧಿವಂತರಾಗಲಿ ಎಂದು ತಿಳಿಯುತ್ತಾರೆ
ಏಕೆಂದರೆ ಕರ್ಮೇಂದ್ರಿಯಗಳು ದೊಡ್ಡದಾದರೆ ಮತ್ತೆ ತಿಳುವಳಿಕೆಯೂ ಹೆಚ್ಚಾಗುತ್ತದೆ. ಲೌಕಿಕ ಮತ್ತು
ಅಲೌಕಿಕ ಎರಡೂ ಕಡೆ ಗಮನ ಹೋಗುವುದರಿಂದ ಮತ್ತೆ ಅಷ್ಟು ಪ್ರಭಾವವಿರುವುದಿಲ್ಲ, ಹೊರಟು ಹೋಗುತ್ತದೆ.
ಇದು ಈಶ್ವರೀಯ ವಿದ್ಯೆಯಾಗಿದೆ. ಅಂತರವಿದೆ ಆದರೆ ಆ ಪ್ರೀತಿಯು ಬೇಕಲ್ಲವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಆತ್ಮೀಯ
ಸೈನಿಕರಾಗಿ ಪಂಚ ವಿಕಾರಗಳ ಮೇಲೆ ಜಯ ಗಳಿಸಬೇಕಾಗಿದೆ, ಅವಶ್ಯವಾಗಿ ಪವಿತ್ರರಾಗಬೇಕಾಗಿದೆ.
ಶ್ರೀಮತದನುಸಾರ ಭಾರತವನ್ನು ಪಾವನಗೊಳಿಸುವ ಸೇವೆ ಮಾಡಬೇಕಾಗಿದೆ.
2. ಈ ಬೇಹದ್ದಿನ
ನಾಟಕದಲ್ಲಿ ಪ್ರತೀ ಪಾತ್ರವನ್ನು ಆತ್ಮಾಭಿಮಾನಿಯಾಗಿ ಅಭಿನಯಿಸಬೇಕಾಗಿದೆ. ದೇಹಾಭಿಮಾನದಲ್ಲೆಂದೂ
ಬರಬಾರದು. ಸಾಕ್ಷಿಯಾಗಿ ಪ್ರತಿಯೊಬ್ಬ ಪಾತ್ರಧಾರಿಯ ಪಾತ್ರವನ್ನು ನೋಡಬೇಕಾಗಿದೆ.
ವರದಾನ:
ಸದಾ ಖುಷಿ ಹಾಗೂ
ಮೋಜಿನ ಸ್ಥಿತಿಯಲ್ಲಿರುವ ಕಂಬೈಂಡ್ ಸ್ವರೂಪದ ಅನುಭವಿ ಭವ.
ಬಾಪ್ದಾದಾರವರು ಮಕ್ಕಳಿಗೆ
ಸದಾ ಹೇಳುತ್ತಾರೆ - ಮಕ್ಕಳೇ, ತಂದೆಯ ಕೈಯಲ್ಲಿ ಕೈ ಕೊಟ್ಟು ನಡೆಯಿರಿ, ಒಂಟಿಯಾಗಿ ನಡೆಯದಿರಿ.
ಒಂಟಿಯಾಗಿ ನಡೆಯುವುದರಿಂದ ಕೆಲವೊಮ್ಮೆ ಬೋರ್ ಆಗಿ ಬಿಡುತ್ತೀರಿ, ಕೆಲವೊಮ್ಮೆ ಯಾರದಾದರೂ ದೃಷ್ಟಿ
ಬೀಳುತ್ತದೆ. ತಂದೆಯ ಜೊತೆ ಕಂಬೈಂಡ್ ಆಗಿದ್ದೇನೆ - ಈ ಸ್ವರೂಪದ ಅನುಭವ ಮಾಡುತ್ತಿರುತ್ತೀರೆಂದರೆ,
ಎಂದಿಗೂ ಮಾಯೆಯ ಕಣ್ಣು ಬೀಳುವುದಿಲ್ಲ ಮತ್ತು ಜೊತೆಯ ಅನುಭವವಾಗಿರುವ ಕಾರಣದಿಂದ ಖುಷಿಯ ಮೋಜಿನಲ್ಲಿ
ತಿನ್ನುತ್ತಾ, ನಡೆಯುತ್ತಾ ಮೋಜನ್ನಾಚರಿಸುತ್ತಿರುತ್ತೀರಿ. ಮೋಸ ಹಾಗೂ ದುಃಖ ಕೊಡುವ ಸಂಬಂಧಗಳಲ್ಲಿ
ಸಿಲುಕುವುದರಿಂದಲೂ ಪಾರಾಗಿ ಬಿಡುತ್ತೀರಿ.
ಸ್ಲೋಗನ್:
ಯೋಗವೆಂಬ
ಕವಚವನ್ನು ಧರಿಸಿರುತ್ತೀರೆಂದರೆ ಮಾಯೆಯೆಂಬ ಶತ್ರುವಿನ ಯುದ್ಧವಾಗುವುದಿಲ್ಲ.
ಅವ್ಯಕ್ತ ಸೂಚನೆ:- ಈಗ
ಲಗನ್ನಿನ (ಪ್ರೀತಿಯ) ಅಗ್ನಿಯನ್ನು ಪ್ರಜ್ವಲಿತಗೊಳಿಸಿ ಯೋಗವನ್ನು ಜ್ವಾಲಾರೂಪವನ್ನಾಗಿ ಮಾಡಿ.
ಹೇಗೆ ದುಃಖಿ ಆತ್ಮಗಳ
ಮನಸ್ಸಿನಲ್ಲಿ ಈ ಶಬ್ಧ ಶುರುವಾಗಿದೆ – ಈಗ ವಿನಾಶವಾಗಲಿ, ಅದರಂತೆ ತಾವು ವಿಶ್ವ-ಕಲ್ಯಾಣಕಾರಿ
ಆತ್ಮರ ಮನಸ್ಸಿನಲ್ಲಿ ಈ ಸಂಕಲ್ಪ ಉತ್ಪನ್ನವಾಗಲಿ ಈಗ ಬೇಗ ಸರ್ವರ ಕಲ್ಯಾಣವಾದಾಗಲೇ
ಸಮಾಪ್ತಿಯಾಗುತ್ತದೆ. ವಿನಾಶಿಕಾರಿಗಳೇ ಕಲ್ಯಾಣಕಾರಿ ಆತ್ಮರ ಸಂಕಲ್ಪದ ಸೂಚನೆ ಬೇಕು ಅದಕ್ಕಾಗಿ
ತಮ್ಮ ಎವರರೇಡಿಯಾಗುವ ಶಕ್ತಿಶಾಲಿ ಸಂಕಲ್ಪದಿಂದ ಜ್ವಾಲಾ ರೂಪ ಯೋಗದ ಮೂಲಕ ವಿನಾಶ ಜ್ವಾಲೆಯನ್ನು
ತೀವ್ರ ಮಾಡಿ.