18.10.25 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ -
ಆತ್ಮಾಭಿಮಾನಿಯಾಗಿ ಕುಳಿತುಕೊಳ್ಳಿ, ನಾನು ಆತ್ಮನಾಗಿದ್ದೇನೆ... ಇದನ್ನು ಒಳಗಿಂದೊಳಗೆ ಮನನ
ಮಾಡುತ್ತಾ ಇರಿ, ದೇಹೀ-ಅಭಿಮಾನಿಯಾಗಿ ಸತ್ಯವಾದ ಚಾರ್ಟನ್ನಿಡಿ ಆಗ ಬುದ್ಧಿವಂತರಾಗುತ್ತಾ
ಹೋಗುತ್ತೀರಿ, ಬಹಳ ಲಾಭವಾಗುವುದು"
ಪ್ರಶ್ನೆ:
ಬೇಹದ್ದಿನ
ನಾಟಕವನ್ನು ತಿಳಿದುಕೊಂಡಿರುವ ಮಕ್ಕಳು ಯಾವ ಒಂದು ನಿಯಮವನ್ನು ಚೆನ್ನಾಗಿ ಅರಿತುಕೊಳ್ಳುತ್ತಾರೆ?
ಉತ್ತರ:
ಇದು ಅವಿನಾಶಿ
ನಾಟಕವಾಗಿದೆ, ಇದರಲ್ಲಿ ಪ್ರತಿಯೊಬ್ಬ ಪಾತ್ರಧಾರಿಯು ಪಾತ್ರವನ್ನಭಿನಯಿಸಲು ತಮ್ಮ ಸಮಯದಲ್ಲಿ
ಬರಲೇಬೇಕಾಗಿದೆ. ನಾವು ಸದಾ ಶಾಂತಿಧಾಮದಲ್ಲಿಯೇ ಕುಳಿತಿರುತ್ತೇವೆಂದು ಯಾರಾದರೂ ಹೇಳಿದರೆ ಇದು
ನಿಯಮವಿಲ್ಲ. ಅಂತಹವರಿಗೆ ಪಾತ್ರಧಾರಿಗಳೆಂದು ಹೇಳುವುದಿಲ್ಲ. ಈ ಬೇಹದ್ದಿನ ಮಾತುಗಳನ್ನು ಬೇಹದ್ದಿನ
ತಂದೆಯೇ ನಿಮಗೆ ತಿಳಿಸುತ್ತಾರೆ.
ಓಂ ಶಾಂತಿ.
ತಮ್ಮನ್ನು ಆತ್ಮನೆಂದು ತಿಳಿದು ಕುಳಿತುಕೊಳ್ಳಿ. ದೇಹಾಭಿಮಾನವನ್ನು ಬಿಟ್ಟು ಕುಳಿತುಕೊಳ್ಳಿ.
ಬೇಹದ್ದಿನ ತಂದೆಯು ಮಕ್ಕಳಿಗೆ ತಿಳಿಸುತ್ತಿದ್ದಾರೆ, ಯಾರಿಗೆ ತಿಳುವಳಿಕೆಯಿಲ್ಲವೋ ಅವರಿಗೆ
ತಿಳಿಸಿಕೊಡಲಾಗುತ್ತದೆ. ಆತ್ಮವೂ ತಿಳಿದುಕೊಳ್ಳುತ್ತದೆ - ತಂದೆಯು ಸತ್ಯವನ್ನು ಹೇಳುತ್ತಾರೆ,
ನಾನಾತ್ಮನು ತಿಳುವಳಿಕೆ ಹೀನನಾಗಿದ್ದೇನೆ, ನಾನಾತ್ಮನು ಅವಿನಾಶಿಯಾಗಿದ್ದೇನೆ. ಶರೀರವು
ವಿನಾಶಿಯಾಗಿದೆ, ನಾನು ಆತ್ಮಾಭಿಮಾನವನ್ನು ಬಿಟ್ಟು ದೇಹಾಭಿಮಾನದಲ್ಲಿ ಸಿಲುಕಿಕೊಂಡಿದ್ದೇನೆ
ಅಂದಮೇಲೆ ತಿಳುವಳಿಕೆಹೀನರಾದೆವಲ್ಲವೆ. ತಂದೆಯು ಹೇಳುತ್ತಾರೆ - ಎಲ್ಲಾ ಮಕ್ಕಳು ದೇಹಾಭಿಮಾನದಲ್ಲಿ
ಬಂದು ತಿಳುವಳಿಕೆಹೀನರಾಗಿ ಬಿಟ್ಟಿದ್ದೀರಿ, ಮತ್ತೆ ನೀವು ತಂದೆಯ ಮೂಲಕ
ದೇಹೀ-ಅಭಿಮಾನಿಗಳಾಗುತ್ತೀರೆಂದರೆ ಸಂಪೂರ್ಣ ಬುದ್ಧಿವಂತರಾಗಿ ಬಿಡುತ್ತೀರಿ. ಕೆಲವರಂತೂ ಆಗಿ
ಬಿಟ್ಟಿದ್ದಾರೆ, ಇನ್ನೂ ಕೆಲವರು ಪುರುಷಾರ್ಥ ಮಾಡುತ್ತಿದ್ದಾರೆ. ಬುದ್ಧಿಹೀನರಾಗುವುದರಲ್ಲಿ
ಅರ್ಧಕಲ್ಪ ಹಿಡಿಸಿತು. ಈ ಅಂತಿಮ ಜನ್ಮದಲ್ಲಿ ಪುನಃ ಬುದ್ಧಿವಂತರಾಗಬೇಕಾಗಿದೆ. ಅರ್ಧಕಲ್ಪದಿಂದ
ಬುದ್ಧಿಹೀನರಾಗುತ್ತಾ-ಆಗುತ್ತಾ 100% ಬುದ್ಧಿಹೀನರಾಗಿ ಬಿಡುತ್ತಾರೆ. ದೇಹಾಭಿಮಾನದಲ್ಲಿ ಬಂದು
ಡ್ರಾಮಾ ಪ್ಲಾನನುಸಾರ ಕೆಳಗಿಳಿಯುತ್ತಾ ಬಂದಿದ್ದೀರಿ. ಈಗ ನಿಮಗೆ ತಿಳುವಳಿಕೆ ಸಿಕ್ಕಿದೆ, ಆದರೂ ಸಹ
ಬಹಳ ಪುರುಷಾರ್ಥ ಮಾಡಬೇಕಾಗಿದೆ ಏಕೆಂದರೆ ಮಕ್ಕಳಲ್ಲಿ ದೈವೀ ಗುಣಗಳೂ ಬೇಕಾಗಿದೆ. ಮಕ್ಕಳಿಗೆ
ತಿಳಿದಿದೆ, ನಾವು ಸರ್ವ ಗುಣ ಸಂಪನ್ನ, 16 ಕಲಾ ಸಂಪೂರ್ಣರು...... ಆಗಿದ್ದೆವು. ಈ ಸಮಯದಲ್ಲಿ
ನಿರ್ಗುಣರಾಗಿ ಬಿಟ್ಟಿದ್ದೇವೆ. ಯಾವುದೇ ಗುಣವಿಲ್ಲ. ನೀವು ಮಕ್ಕಳಲ್ಲಿಯೂ ನಂಬರ್ವಾರ್
ಪುರುಷಾರ್ಥದನುಸಾರ ಈ ಆಟವನ್ನು ತಿಳಿದುಕೊಳ್ಳುತ್ತಾರೆ. ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ
ಎಷ್ಟು ವರ್ಷಗಳಾಯಿತು ಆದರೂ ಸಹ ಯಾರು ಹೊಸಬರಿದ್ದಾರೆಯೋ ಅವರು ಬುದ್ಧಿವಂತರಾಗುತ್ತಾ ಹೋಗುತ್ತಾರೆ.
ಅನ್ಯರನ್ನೂ ಮಾಡುವ ಪುರುಷಾರ್ಥ ಮಾಡುತ್ತಾರೆ. ಇನ್ನೂ ಕೆಲವರಂತೂ ಏನನ್ನೂ ತಿಳಿದುಕೊಂಡಿಲ್ಲ.
ಬುದ್ಧಿಹೀನರು ಬುದ್ಧಿಹೀನರಾಗಿಯೇ ಉಳಿದಿದ್ದಾರೆ. ತಂದೆಯು ಬುದ್ಧಿವಂತರನ್ನಾಗಿ ಮಾಡಲು ಬಂದಿದ್ದಾರೆ.
ಮಕ್ಕಳು ತಿಳಿದುಕೊಳ್ಳುತ್ತೀರಿ - ನಾವು ಮಾಯೆಯ ಕಾರಣ ಬುದ್ಧಿಹೀನರಾಗಿದ್ದೇವೆ, ನಾವು
ಪೂಜ್ಯರಾಗಿದ್ದಾಗ ಬುದ್ಧಿವಂತರಾಗಿದ್ದೆವು ಮತ್ತೆ ನಾವೇ ಪೂಜಾರಿಗಳಾಗಿ, ಬುದ್ಧಿಹೀನರಾಗಿದ್ದೇವೆ.
ಆದಿ ಸನಾತನ ದೇವಿ-ದೇವತಾ ಧರ್ಮವೇ ಪ್ರಾಯಲೋಪವಾಗಿ ಬಿಟ್ಟಿದೆ. ಇದರ ಬಗ್ಗೆ ಪ್ರಪಂಚದಲ್ಲಿ ಯಾರಿಗೂ
ತಿಳಿದಿಲ್ಲ. ಈ ಲಕ್ಷ್ಮೀ-ನಾರಾಯಣರು ಎಷ್ಟು ಬುದ್ಧಿವಂತರಾಗಿದ್ದರು, ರಾಜ್ಯಭಾರ ಮಾಡುತ್ತಿದ್ದರು.
ತಂದೆಯು ತಿಳಿಸುತ್ತಾರೆ - ತತ್ತ್ವಂ. ನೀವೂ ಸಹ ಸ್ವಯಂ ನಾನೇ ಮತ್ತೆ ದೇವತೆಯಾಗಬೇಕೆಂದು
ತಿಳಿದುಕೊಳ್ಳಿ. ಇವು ಬಹಳ-ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ತಂದೆಯ ವಿನಃ ಮತ್ತ್ಯಾರೂ
ತಿಳಿಸಿಕೊಡಲು ಸಾಧ್ಯವಿಲ್ಲ. ಈಗ ಈ ಅನುಭವವಾಗುತ್ತದೆ - ತಂದೆಯೇ ಶ್ರೇಷ್ಠಾತಿ ಶ್ರೇಷ್ಠ
ಬುದ್ಧಿವಂತರಿಗಿಂತಲೂ ಬುದ್ಧಿವಂತರಾಗಿದ್ದಾರಲ್ಲವೆ. ಒಂದನೆಯದಾಗಿ – ಜ್ಞಾನ ಸಾಗರನೂ ಆಗಿದ್ದಾರೆ,
ಸರ್ವರ ಸದ್ಗತಿದಾತನೂ ಆಗಿದ್ದಾರೆ, ಪತಿತ-ಪಾವನನೂ ಆಗಿದ್ದಾರೆ. ಅವರೊಬ್ಬರಿಗೇ ಮಹಿಮೆಯಿದೆ. ಇಷ್ಟು
ಶ್ರೇಷ್ಠಾತಿ ಶ್ರೇಷ್ಠ ತಂದೆಯು ಬಂದು ಹೇಗೆ ಮಕ್ಕಳೇ, ಮಕ್ಕಳೇ ಎಂದು ಎಷ್ಟು ಚೆನ್ನಾಗಿ
ತಿಳಿಸುತ್ತಾರೆ, ಮಕ್ಕಳೇ ಈಗ ಪಾವನರಾಗಬೇಕಾಗಿದೆ. ಅದಕ್ಕಾಗಿ ತಂದೆಯು ಒಂದೇ ಔಷಧಿಯನ್ನು
ಕೊಡುತ್ತಾರೆ - ಯೋಗದಿಂದ ನೀವು 21 ಜನ್ಮಗಳಿಗಾಗಿ ನಿರೋಗಿಯಾಗಿ ಬಿಡುತ್ತೀರಿ. ನಿಮ್ಮ ಎಲ್ಲಾ ರೋಗ,
ದುಃಖಗಳು ಸಮಾಪ್ತಿಯಾಗುತ್ತವೆ. ನೀವು ಮುಕ್ತಿಧಾಮದಲ್ಲಿ ಹೊರಟು ಹೋಗುತ್ತೀರೆಂದು ಹೇಳುತ್ತಾರೆ.
ಅವಿನಾಶಿ ತಜ್ಞರ ಬಳಿ ಒಂದೇ ಔಷಧಿಯಿದೆ, ಆತ್ಮಕ್ಕೆ ಒಂದೇ ಇಂಜೆಕ್ಷನ್ ಕೊಡುತ್ತಾರೆ. ಒಬ್ಬ
ವ್ಯಕ್ತಿಯು ವಕೀಲ ವೃತ್ತಿಯನ್ನೂ ಮಾಡುತ್ತಾರೆ, ಇಂಜಿನಿಯರ್ ಸಹ ಮಾಡುತ್ತಾರೆ ಎಂದಲ್ಲ.
ಪ್ರತಿಯೊಬ್ಬ ವ್ಯಕ್ತಿಯು ತಮ್ಮ ವೃತ್ತಿಯಲ್ಲಿಯೇ ತೊಡಗುತ್ತಾರೆ. ಬಾಬಾ, ಬಂದು ನಮ್ಮನ್ನು
ಪತಿತರಿಂದ ಪಾವನರನ್ನಾಗಿ ಮಾಡಿ ಎಂದು ತಂದೆಗೆ ಹೇಳುತ್ತಾರೆ ಏಕೆಂದರೆ ಪತಿತರಾಗುವುದರಲ್ಲಿ
ದುಃಖವಿದೆ. ಶಾಂತಿಧಾಮಕ್ಕೆ ಪಾವನ ಪ್ರಪಂಚವೆಂದು ಹೇಳುವುದಿಲ್ಲ, ಸ್ವರ್ಗಕ್ಕೇ ಪಾವನ ಪ್ರಪಂಚವೆಂದು
ಹೇಳುತ್ತಾರೆ. ಇದನ್ನೂ ಸಹ ತಂದೆಯು ತಿಳಿಸಿದ್ದಾರೆ - ಮನುಷ್ಯರು ಶಾಂತಿ ಮತ್ತು ಸುಖವನ್ನು
ಬಯಸುತ್ತಾರೆ. ಸತ್ಯ-ಸತ್ಯವಾದ ಶಾಂತಿಯು ಎಲ್ಲಿ ಶರೀರವಿರುವುದಿಲ್ಲವೋ ಅಲ್ಲಿಯೇ ಸಿಗುತ್ತದೆ.
ಅದಕ್ಕೆ ಶಾಂತಿಧಾಮವೆಂದು ಹೇಳಲಾಗುತ್ತದೆ. ಶಾಂತಿಧಾಮದಲ್ಲಿಯೇ ಇರಬೇಕೆಂದು ಅನೇಕರು ಹೇಳುತ್ತಾರೆ
ಆದರೆ ನಿಯಮವಿಲ್ಲ. ಅಂತಹವರು ಪಾತ್ರಧಾರಿಯಾಗಲಿಲ್ಲ. ಮಕ್ಕಳು ನಾಟಕವನ್ನು ಯಥಾರ್ಥವಾಗಿ
ತಿಳಿದುಕೊಂಡಿದ್ದೀರಿ. ಯಾವಾಗ ಪಾತ್ರಧಾರಿಗಳ ಪಾತ್ರವಿರುವುದೋ ಆಗ ಹೊರಗಡೆ ಸ್ಟೇಜಿನ ಮೇಲೆ ಬಂದು
ಪಾತ್ರವನ್ನಭಿನಯಿಸುತ್ತಾರೆ. ಈ ಬೇಹದ್ದಿನ ಮಾತುಗಳನ್ನು ಬೇಹದ್ದಿನ ತಂದೆಯೇ ತಿಳಿಸುತ್ತಾರೆ.
ಜ್ಞಾನಸಾಗರನೆಂದು ಅವರಿಗೇ ಹೇಳಲಾಗುತ್ತದೆ. ಸರ್ವರ ಸದ್ಗತಿದಾತ, ಪತಿತ-ಪಾವನನಾಗಿದ್ದಾರೆ. ತತ್ವಗಳು
ಸರ್ವರನ್ನು ಪಾವನ ಮಾಡಲು ಸಾಧ್ಯವಿಲ್ಲ. ಜಲ ಇತ್ಯಾದಿಗಳೆಲ್ಲವೂ ತತ್ವಗಳಾಗಿವೆ, ಅವು ಹೇಗೆ ಸದ್ಗತಿ
ಮಾಡುತ್ತವೆ. ಆತ್ಮವೇ ಪಾತ್ರವನ್ನಭಿನಯಿಸುತ್ತದೆ. ಹಠಯೋಗದ ಪಾತ್ರವನ್ನೂ ಆತ್ಮವೇ ಅಭಿನಯಿಸುತ್ತದೆ.
ಬುದ್ಧಿವಂತರೇ ಈ ಮಾತುಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ತಂದೆಯು ಎಷ್ಟೊಂದು ಯುಕ್ತಿಗಳನ್ನು
ತಿಳಿಸಿದ್ದಾರೆ, ಯಾವುದಾದರೂ ಅಂತಹ ಯುಕ್ತಿಯನ್ನು ರಚಿಸಿ ಅದರಿಂದ ಪೂಜ್ಯರು ಮತ್ತು ಪೂಜಾರಿಗಳು
ಹೇಗಾದೆವು ಎಂಬುದು ಮನುಷ್ಯರಿಗೆ ಅರ್ಥವಾಗಲಿ. ಪೂಜ್ಯರು ಹೊಸ ಪ್ರಪಂಚದಲ್ಲಿರುತ್ತಾರೆ, ಪೂಜಾರಿಗಳು
ಹಳೆಯ ಪ್ರಪಂಚದಲ್ಲಿದ್ದಾರೆ. ಪಾವನರಿಗೆ ಪೂಜ್ಯರೆಂತಲೂ, ಪತಿತರಿಗೆ ಪೂಜಾರಿಗಳೆಂತಲೂ ಹೇಳಲಾಗುತ್ತದೆ.
ಇಲ್ಲಂತೂ ಎಲ್ಲರೂ ಪತಿತರಾಗಿದ್ದಾರೆ ಏಕೆಂದರೆ ವಿಕಾರದಿಂದ ಜನ್ಮ ಪಡೆಯುತ್ತಾರೆ. ಸತ್ಯಯುಗದಲ್ಲಿ
ಇರುವುದೇ ಶ್ರೇಷ್ಠರು ಆದ್ದರಿಂದ ಸಂಪೂರ್ಣ ಶ್ರೇಷ್ಠಾಚಾರಿಗಳೆಂದು ಅವರಿಗೆ ಗಾಯನ ಮಾಡುತ್ತಾರೆ. ಈಗ
ನೀವು ಮಕ್ಕಳೂ ಸಹ ಆ ರೀತಿಯಾಗಬೇಕಾಗಿದೆ. ಪರಿಶ್ರಮವಿದೆ, ಮುಖ್ಯ ಮಾತು ನೆನಪಿನದಾಗಿದೆ.
ನೆನಪಿನಲ್ಲಿರುವುದು ಬಹಳ ಪರಿಶ್ರಮದ ಕೆಲಸವಾಗಿದೆ. ನಾವು ಎಷ್ಟು ಬಯಸುತ್ತೇವೆ ಅಷ್ಟು
ನೆನಪಿನಲ್ಲಿರಲು ಸಾಧ್ಯವಾಗುತ್ತಿಲ್ಲವೆಂದು ಹೇಳುತ್ತಾರೆ. ಒಂದುವೇಳೆ ಸತ್ಯತೆಯಿಂದ ಚಾರ್ಟನ್ನು
ಬರೆದಿದ್ದೇ ಆದರೆ ಬಹಳ ಲಾಭವಾಗುತ್ತದೆ. ತಂದೆಯು ಮಕ್ಕಳಿಗೆ ಈ ಜ್ಞಾನವನ್ನು ಕೊಡುತ್ತಾರೆ -
ಮನ್ಮನಾಭವ. ನೀವು ಅರ್ಥ ಸಹಿತವಾಗಿ ಹೇಳುತ್ತೀರಿ, ನಿಮಗೆ ತಂದೆಯ ಪ್ರತಿಯೊಂದು ಮಾತನ್ನು ಯಥಾರ್ಥ
ರೀತಿಯಲ್ಲಿ ಅರ್ಥ ಸಹಿತವಾಗಿ ತಿಳಿಸುತ್ತಾರೆ. ಮಕ್ಕಳು ತಂದೆಯೊಂದಿಗೆ ಕೆಲವೊಂದು ಪ್ರಕಾರದ
ಪ್ರಶ್ನೆಗಳನ್ನು ಕೇಳುತ್ತಾರೆ. ಭಲೆ ತಂದೆಯ ಹೃದಯವನ್ನು ಗೆಲ್ಲಲು ಏನೇನೋ ಹೇಳುತ್ತಾರೆ ಆದರೆ
ತಂದೆಯು ತಿಳಿಸುತ್ತಾರೆ - ಪತಿತರಿಂದ ಪಾವನರನ್ನಾಗಿ ಮಾಡುವುದೇ ನನ್ನ ಕೆಲಸವಾಗಿದೆ. ನೀವು
ನನ್ನನ್ನು ಕರೆಯುವುದೂ ಇದಕ್ಕಾಗಿಯೇ ಅಲ್ಲವೆ. ನೀವು ತಿಳಿದುಕೊಂಡಿದ್ದೀರಿ - ನಾವಾತ್ಮರು ಶರೀರ
ಸಹಿತವಾಗಿ ಪಾವನರಾಗಿದ್ದೆವು, ಈಗ ಅದೇ ಆತ್ಮವು ಶರೀರ ಸಹಿತ ಪತಿತವಾಗಿದೆ. 84 ಜನ್ಮಗಳ
ಲೆಕ್ಕವಿದೆಯಲ್ಲವೆ.
ನೀವು
ತಿಳಿದುಕೊಂಡಿದ್ದೀರಿ - ಈಗ ಈ ಪ್ರಪಂಚವು ಮುಳ್ಳುಗಳ ಕಾಡಾಗಿ ಬಿಟ್ಟಿದೆ. ಈ ಲಕ್ಷ್ಮೀ-ನಾರಾಯಣರಂತೂ
ಹೂಗಳಲ್ಲವೆ. ಅವರ ಮುಂದೆ ಮುಳ್ಳಿನ ಸಮಾನರಾದವರು ಹೋಗಿ ಹೇಳುತ್ತಾರೆ - ತಾವು ಸರ್ವಗುಣ ಸಂಪನ್ನರು..
ನಾವು ಪಾಪಿಗಳು, ಕಪಟಿಗಳಾಗಿದ್ದೇವೆ ಎಂದು. ಎಲ್ಲದಕ್ಕಿಂತ ದೊಡ್ಡ ಮುಳ್ಳು ಕಾಮ ವಿಕಾರವಾಗಿದೆ.
ಇದರ ಮೇಲೆ ಜಯ ಗಳಿಸಿ ಜಗಜ್ಜೀತರಾಗಿ ಎಂದು ತಂದೆಯು ಹೇಳುತ್ತಾರೆ. ಭಗವಂತನು ಯಾವುದಾದರೊಂದು
ರೂಪದಲ್ಲಿ ಬರಬೇಕಾಗಿದೆ. ಭಗೀರಥದಲ್ಲಿ ವಿರಾಜಮಾನರಾಗಿ ಬರಬೇಕಾಗಿದೆ ಎಂದು ಮನುಷ್ಯರು ಹೇಳುತ್ತಾರೆ.
ಭಗವಂತನಂತೂ ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡಲು ಬರಲೇಬೇಕಾಗಿದೆ. ಹೊಸ ಪ್ರಪಂಚಕ್ಕೆ
ಸತೋಪ್ರಧಾನ, ಹಳೆಯ ಪ್ರಪಂಚಕ್ಕೆ ತಮೋಪ್ರಧಾನವೆಂದು ಹೇಳಲಾಗುತ್ತದೆ. ಈಗ ಹಳೆಯ ಪ್ರಪಂಚವಾಗಿದೆ
ಅಂದಮೇಲೆ ಅವಶ್ಯವಾಗಿ ತಂದೆಯು ಬರಬೇಕಾಗಿದೆ. ತಂದೆಗೇ ರಚಯಿತನೆಂದು ಕರೆಯಲಾಗುತ್ತದೆ. ನೀವು
ಮಕ್ಕಳಿಗೆ ಎಷ್ಟು ಸಹಜವಾಗಿ ತಿಳಿಸುತ್ತಾರೆ! ಅಂದಾಗ ಎಷ್ಟೊಂದು ಖುಷಿಯಿರಬೇಕು ಬಾಕಿ ಯಾರ
ಕರ್ಮಭೋಗದ ಲೆಕ್ಕಾಚಾರವಿದೆಯೋ ಅದನ್ನು ಅವರು ಅನುಭವಿಸಲೇಬೇಕಾಗಿದೆ. ಇದರಲ್ಲಿ ತಂದೆಯು ಆಶೀರ್ವಾದ
ಮಾಡುವುದಿಲ್ಲ. ಬಾಬಾ, ನೀವು ಬಂದು ಆಸ್ತಿಯನ್ನು ಕೊಡಿ ಎಂದೇ ನನ್ನನ್ನು ಕರೆಯುತ್ತೀರಿ. ತಂದೆಯಿಂದ
ಯಾವ ಆಸ್ತಿಯನ್ನು ಪಡೆಯ ಬಯಸುತ್ತೀರಿ? ಮುಕ್ತಿ-ಜೀವನ್ಮುಕ್ತಿ. ಮುಕ್ತಿ-ಜೀವನ್ಮುಕ್ತಿದಾತನು
ಒಬ್ಬರೇ ಜ್ಞಾನಸಾಗರ ತಂದೆಯಾಗಿದ್ದಾರೆ ಆದ್ದರಿಂದ ಅವರಿಗೆ ಜ್ಞಾನದಾತನೆಂದು ಹೇಳಲಾಗುತ್ತದೆ.
ಭಗವಂತನು ಜ್ಞಾನವನ್ನು ಕೊಟ್ಟಿದ್ದರು ಆದರೆ ಯಾವಾಗ ಕೊಟ್ಟರು, ಯಾರು ಕೊಟ್ಟರೆಂದು ಯಾರಿಗೂ
ತಿಳಿದಿಲ್ಲ. ಎಲ್ಲಾ ಗೊಂದಲವೂ ಇದರಲ್ಲಿಯೇ ಇದೆ. ಯಾರಿಗೆ ಜ್ಞಾನವನ್ನು ಕೊಟ್ಟರೆಂಬುದು ಯಾರಿಗೂ
ತಿಳಿದಿಲ್ಲ. ಈಗ ಬ್ರಹ್ಮಾರವರು ಕುಳಿತಿದ್ದಾರೆ - ನಾನೇ ನಾರಾಯಣನಾಗಿದ್ದೆನು ನಂತರ 84 ಜನ್ಮಗಳನ್ನು
ಪಡೆದೆನೆಂದು ಇವರಿಗೆ ಅರ್ಥವಾಗಿದೆ. ಇವರು ಎಲ್ಲರಿಗಿಂತ ಮುಂದಿದ್ದಾರೆ. ಇವರು (ಬ್ರಹ್ಮಾ)
ತಿಳಿಸುತ್ತಾರೆ - ಈ ಜ್ಞಾನದಿಂದ ನನ್ನ ಕಣ್ಣುಗಳೇ ತೆರೆಯಿತು. ನೀವೂ ಸಹ ಹೇಳುತ್ತೀರಿ, ಜ್ಞಾನದಿಂದ
ನಮ್ಮ ಕಣ್ಣು ತೆರೆಯಿತೆಂದು ಅಂದರೆ ಮೂರನೆಯ ನೇತ್ರವು ತೆರೆಯುತ್ತದೆಯಲ್ಲವೆ. ನಮಗೆ ತಂದೆಯ,
ಸೃಷ್ಟಿಚಕ್ರದ ಸಂಪೂರ್ಣ ಜ್ಞಾನವು ಸಿಕ್ಕಿದೆಯೆಂದು ನೀವೂ ಹೇಳುತ್ತೀರಿ. ನಾನು ಯಾರಾಗಿದ್ದೇನೆ,
ಹೇಗಿದ್ದೇನೆಂದು ನನ್ನ ಕಣ್ಣುಗಳು ತೆರೆಯಿತು, ಎಷ್ಟು ಅದ್ಭುತವಾಗಿದೆ! ಮೊದಲು ನಾವು
ಆತ್ಮಗಳಾಗಿದ್ದೇವೆ, ನಂತರ ನಾವು ನಮ್ಮನ್ನು ದೇಹವೆಂದು ತಿಳಿದು ಕುಳಿತುಕೊಂಡೆವು. ನಾವು ಒಂದು
ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೇನೆ ಎಂದು ಆತ್ಮವೇ ಹೇಳುತ್ತದೆ. ಆದರೂ ಸಹ
ನಾವು ತಮ್ಮನ್ನು ಆತ್ಮನೆಂಬುದನ್ನು ಮರೆತು ದೇಹಾಭಿಮಾನಿಯಾಗಿಬಿಡುತ್ತೇವೆ ಆದ್ದರಿಂದ ಈಗ ನಿಮಗೆ
ಮೊಟ್ಟ ಮೊದಲಿಗೆ ಈ ತಿಳುವಳಿಕೆಯನ್ನು ಕೊಡುತ್ತೇನೆ - ತಮ್ಮನ್ನು ಆತ್ಮನೆಂದು ತಿಳಿದು
ಕುಳಿತುಕೊಳ್ಳಿ, ಒಳಗೆ ಇದನ್ನು ಚೆನ್ನಾಗಿ ಅರಿಯುತ್ತಾ ಇರಿ, ನಾನಾತ್ಮನಾಗಿದ್ದೇನೆ, ಆತ್ಮವೆಂದು
ತಿಳಿದುಕೊಳ್ಳದ ಕಾರಣವೇ ತಂದೆಯನ್ನು ಮರೆತು ಹೋಗುತ್ತೀರಿ. ನೀವೂ ಅನುಭವ ಮಾಡುತ್ತೀರಿ, ಅವಶ್ಯವಾಗಿ
ನಾವು ಪದೇ-ಪದೇ ದೇಹಾಭಿಮಾನದಲ್ಲಿ ಬಂದು ಬಿಡುತ್ತೇವೆ ಆದ್ದರಿಂದ ಪರಿಶ್ರಮ ಪಡಬೇಕಾಗಿದೆ. ಇಲ್ಲಿ
ಕುಳಿತುಕೊಂಡಾಗಲೂ ಸಹ ಆತ್ಮಾಭಿಮಾನಿಯಾಗಿ ಕುಳಿತುಕೊಳ್ಳಿ. ತಂದೆಯು ತಿಳಿಸುತ್ತಾರೆ - ನಾನು ನೀವು
ಮಕ್ಕಳಿಗೆ ರಾಜ್ಯಭಾಗ್ಯವನ್ನು ಕೊಡಲು ಬಂದಿದ್ದೇನೆ. ಅರ್ಧಕಲ್ಪ ನೀವು ನನ್ನನ್ನು ನೆನಪು ಮಾಡಿದಿರಿ.
ಯಾವುದೇ ಮಾತು ಬಂದಾಗ ಅಯ್ಯೊ ರಾಮನೇ ಎಂದು ಹೇಳುತ್ತಾರೆ ಆದರೆ ಈಶ್ವರ ಅಥವಾ ರಾಮನು ಯಾರೆಂದು
ಯಾರಿಗೂ ತಿಳಿದಿಲ್ಲ. ನೀವು ಸಿದ್ಧ ಮಾಡಬೇಕಾಗಿದೆ – ಜ್ಞಾನಸಾಗರ, ಪತಿತ-ಪಾವನ, ಸರ್ವರ ಸದ್ಗತಿದಾತ,
ತ್ರಿಮೂರ್ತಿ ಪರಮಪಿತ ಪರಮಾತ್ಮ ಶಿವನಾಗಿದ್ದಾರೆ. ಬ್ರಹ್ಮಾ-ವಿಷ್ಣು-ಶಂಕರನ ಜನ್ಮವು ಒಟ್ಟಿಗೆ
ಆಗುತ್ತದೆ. ಕೇವಲ ಶಿವ ಜಯಂತಿಯಲ್ಲ ಆದರೆ ತ್ರಿಮೂರ್ತಿ ಶಿವ ಜಯಂತಿಯಾಗಿದೆ. ಅವಶ್ಯವಾಗಿ ಯಾವಾಗ
ಶಿವ ಜಯಂತಿಯಾಗುವುದೋ ಆಗ ಬ್ರಹ್ಮಾನ ಜಯಂತಿಯೂ ಆಗುವುದು. ಶಿವನ ಜಯಂತಿಯನ್ನಾಚರಿಸುತ್ತಾರೆ ಆದರೆ
ಬ್ರಹ್ಮಾರವರೇನು ಮಾಡಿದರು! ಲೌಕಿಕ, ಪಾರಲೌಕಿಕ ಮತ್ತು ಅಲೌಕಿಕ ತಂದೆಯಾಗಿದ್ದಾರೆ. ಇವರು
ಪ್ರಜಾಪಿತ ಬ್ರಹ್ಮಾನಾಗಿದ್ದಾರೆ. ತಂದೆಯು ತಿಳಿಸುತ್ತಾರೆ – ಹೊಸ ಪ್ರಪಂಚಕ್ಕಾಗಿ ಈ ಹೊಸ ಜ್ಞಾನವು
ಈಗ ನಿಮಗೆ ಸಿಗುತ್ತದೆ ನಂತರ ಪ್ರಾಯಲೋಪವಾಗಿ ಬಿಡುತ್ತದೆ. ಯಾರಿಗೆ ತಂದೆ ರಚಯಿತ ಮತ್ತು ರಚನೆಯ
ಜ್ಞಾನವಿಲ್ಲವೋ ಅವರು ಅಜ್ಞಾನಿಗಳಾದರಲ್ಲವೆ. ಜ್ಞಾನದಿಂದ ಹಗಲು, ಭಕ್ತಿಯಿಂದ ರಾತ್ರಿಯಾಗುತ್ತದೆ.
ಶಿವರಾತ್ರಿಯ ಅರ್ಥವನ್ನೂ ತಿಳಿದುಕೊಂಡಿಲ್ಲ ಆದ್ದರಿಂದ ಶಿವ ಜಯಂತಿಯ ರಜಾದಿನವನ್ನೂ ತೆಗೆದು
ಬಿಟ್ಟಿದ್ದಾರೆ.
ನೀವೀಗ
ತಿಳಿದುಕೊಂಡಿದ್ದೀರಿ - ತಂದೆಯು ಎಲ್ಲರ ಜ್ಯೋತಿಯನ್ನು ಬೆಳಗಿಸಲು ಬರುತ್ತಾರೆ. ಶಿವ ಜಯಂತಿಯಂದು
ವಿದ್ಯುತ್ ದೀಪಗಳನ್ನು ಬೆಳಗಿಸಿದರೆ ಇವರಿಗೆ ಯಾವುದೋ ವಿಶೇಷವಾದ ದಿನವೆಂದು ತಿಳಿದುಕೊಳ್ಳುತ್ತಾರೆ
ಆದರೆ ನೀವು ಅರ್ಥ ಸಹಿತವಾಗಿ ದೀಪವನ್ನು ಬೆಳಗಿಸುತ್ತೀರಿ. ಅವರಿಗಿದು ತಿಳಿದಿಲ್ಲ. ನಿಮ್ಮ
ಭಾಷಣದಿಂದಲೂ ಪೂರ್ಣ ಅರ್ಥ ಮಾಡಿಕೊಳ್ಳುವುದಿಲ್ಲ. ಈಗ ಇಡೀ ವಿಶ್ವದ ಮೇಲೆ ರಾವಣ ರಾಜ್ಯವಿದೆ,
ಇಲ್ಲಂತು ಮನುಷ್ಯರು ಎಷ್ಟು ದುಃಖಿಯಾಗಿದ್ದಾರೆ. ರಿದ್ಧಿ-ಸಿದ್ಧಿಯವರೂ ಸಹ ಎಷ್ಟು ತೊಂದರೆ
ಕೊಡುತ್ತಾರೆ, ಇವರಲ್ಲಿ ಪ್ರೇತಾತ್ಮವಿದೆ ಎಂದು ಪತ್ರಿಕೆಗಳಲ್ಲಿಯೂ ಬರುತ್ತದೆ, ಬಹಳ ದುಃಖ
ಕೊಡುತ್ತಾರೆ. ತಂದೆಯು ತಿಳಿಸುತ್ತಾರೆ – ಈ ಮಾತುಗಳೊಂದಿಗೆ ನಿಮಗೆ ಸಂಬಂಧವಿಲ್ಲ. ನೇರವಾದ ಮಾತನ್ನು
ತಿಳಿಸುತ್ತಾರೆ - ಮಕ್ಕಳೇ, ನೀವು ನನ್ನನ್ನು ನೆನಪು ಮಾಡಿದರೆ ಪಾವನರಾಗುತ್ತೀರಿ, ನಿಮ್ಮ ಎಲ್ಲಾ
ದುಃಖಗಳು ದೂರವಾಗುತ್ತವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಯಥಾರ್ಥ
ರೀತಿಯಲ್ಲಿ ತಂದೆಯನ್ನು ನೆನಪು ಮಾಡುವ ಹಾಗೂ ಆತ್ಮಾಭಿಮಾನಿಗಳಾಗುವ ಪರಿಶ್ರಮ ಪಡಬೇಕಾಗಿದೆ.
ಸತ್ಯತೆಯಿಂದ ತಮ್ಮ ಚಾರ್ಟನ್ನಿಡಬೇಕಾಗಿದೆ. ಇದರಲ್ಲಿಯೇ ಬಹಳ-ಬಹಳ ಲಾಭವಿದೆ.
2. ಎಲ್ಲದಕ್ಕಿಂತ ಹೆಚ್ಚು
ದುಃಖ ಕೊಡುವಂತಹ ಮುಳ್ಳು ಕಾಮ ವಿಕಾರವಾಗಿದೆ. ಯೋಗಬಲದಿಂದ ಇದರ ಮೇಲೆ ವಿಜಯವನ್ನು ಪ್ರಾಪ್ತಿ
ಮಾಡಿಕೊಂಡು ಪತಿತರಿಂದ ಪಾವನರಾಗಬೇಕಾಗಿದೆ. ಉಳಿದಂತೆ ಇನ್ನ್ಯಾವುದೇ ಮಾತುಗಳೊಂದಿಗೆ ನಿಮ್ಮ
ಸಂಬಂಧವಿಲ್ಲ.
ವರದಾನ:
ವ್ಯವಹಾರಿಕ
ಜೀವನದ ಮೂಲಕ ಪರಮಾತ್ಮ ಜ್ಞಾನದ ಪುರಾವೆಯನ್ನು ಕೊಡುವಂತಹ ಧರ್ಮ ಯುದ್ಧದಲ್ಲಿ ವಿಜಯೀ ಭವ.
ಈಗ ಧರ್ಮ ಯುದ್ಧದ ಸ್ಟೇಜ್
ಮೇಲೆ ಬರಬೇಕಾಗಿದೆ. ಆ ಧರ್ಮ ಯುದ್ಧದಲ್ಲಿ ವಿಜಯಿಯಾಗುವ ಸಾಧನವಾಗಿದೆ ತಮ್ಮ ವ್ಯಾವಹಾರಿಕ ಜೀವನ
ಏಕೆಂದರೆ ಪರಮಾತ್ಮ ಜ್ಞಾನದ ಪುರಾವೆಯೇ ವ್ಯಾವಹಾರಿಕ ಜೀವನವಾಗಿದೆ. ನಿಮ್ಮ ಮೂರ್ತಿಯಿಂದ ಜ್ಞಾನ
ಮತ್ತು ಗುಣ ವ್ಯಾವಹಾರಿಕವಾಗಿ ಕಂಡು ಬರಲಿ ಏಕೆಂದರೆ ಇತ್ತೀಚೆಗೆ ಚರ್ಚೆ ಮಾಡುವುದರಿಂದ ತಮ್ಮ
ಮೂರ್ತಿಯನ್ನು ಸಿದ್ಧ ಮಾಡಲು ಸಾಧ್ಯವಿಲ್ಲ ಆದರೆ ತಮ್ಮ ವ್ಯಾವಹಾರಿಕ ಧಾರಣಾ ಮೂರ್ತಿಯಿಂದ ಒಂದು
ಸೆಕೆಂಡ್ನಲ್ಲಿ ಯಾರನ್ನು ಬೇಕಾದರೂ ಶಾಂತ ಮಾಡಬಹುದು.
ಸ್ಲೋಗನ್:
ಆತ್ಮವನ್ನು
ಉಜ್ವಲವನ್ನಾಗಿ ಮಾಡಲು ಪರಮಾತ್ಮ ಸ್ಮತಿಯಿಂದ ಮನಸ್ಸಿನ ಗೊಂದಲವನ್ನು ಸಮಾಪ್ತಿ ಮಾಡಿ.
ಮಾತೇಶ್ವರಿಜೀಯವರ
ಅಮೂಲ್ಯ ಮಹಾವಾಕ್ಯ: “ಈಶ್ವರೀಯ ಜ್ಞಾನ ಸರ್ವ ಮನುಷ್ಯ ಆತ್ಮರಿಗಾಗಿ”
ಮೊಟ್ಟ ಮೊದಲು ನಿಮ್ಮನ್ನು
ಒಂದು ಮುಖ್ಯ ಬಿಂದು ಎಂದು ಅವಶ್ಯವಾಗಿ ಬುದ್ಧಿಯಲ್ಲಿಟ್ಟುಕೊಳ್ಳಬೇಕು, ಹೇಗೆ ಈ ಮನುಷ್ಯ ಸೃಷ್ಟಿ
ವೃಕ್ಷದ ಬೀಜರೂಪ ಪರಮಾತ್ಮ ಆಗಿದ್ದಾರೆ ಅಂದಾಗ ಆ ಪರಮಾತ್ಮನಿಂದ ಏನೆಲ್ಲಾ ಜ್ಞಾನ
ಪ್ರಾಪ್ತಿಯಾಗುತ್ತದೆ ಅದೆಲ್ಲವೂ ಮನುಷ್ಯರಿಗೆ ಅವಶ್ಯಕವಾಗಿದೆ. ಎಲ್ಲಾ ಧರ್ಮದವರಿಗೂ ಈ ಜ್ಞಾನ
ಪಡೆಯುವ ಅಧಿಕಾರವಾಗಿದೆ. ಭಲೆ ಪ್ರತಿಯೊಬ್ಬರ ಧರ್ಮದ ಜ್ಞಾನ ತಮ್ಮ-ತಮ್ಮದೇ ಆಗಿದೆ, ಪ್ರತಿಯೊಬ್ಬರ
ಶಾಸ್ತ್ರ ತಮ್ಮ-ತಮ್ಮದೇ ಆಗಿದೆ, ಪ್ರತಿಯೊಬ್ಬರ ಮತ ತಮ್ಮ-ತಮ್ಮದೇ ಆಗಿದೆ, ಪ್ರತಿಯೊಬ್ಬರ ಸಂಸ್ಕಾರ
ತಮ್ಮ-ತಮ್ಮದೇ ಆಗಿದೆ ಆದರೆ ಈ ಜ್ಞಾನ ಎಲ್ಲರಿಗಾಗಿಯೂ ಇದೆ. ಭಲೆ ಅವರು ಈ ಜ್ಞಾನವನ್ನು
ತೆಗೆದುಕೊಳ್ಳದೇ ಹೋದರೂ, ನಮ್ಮ ಮನೆತನದಲ್ಲಿ ಬರದೇ ಹೋದರೂ ಅವರು ಸರ್ವರ ತಂದೆ ಆಗಿರುವ ಕಾರಣ ಅವರ
ಜೊತೆ ಯೋಗ ಜೋಡಿಸುವುದರಿಂದ ಅವಶ್ಯವಾಗಿ ನಂತರ ಪವಿತ್ರರಾಗುತ್ತಾರೆ. ಈ ಪವಿತ್ರತೆಯ ಕಾರಣ ತಮ್ಮದೇ
ಸೆಕ್ಷನ್ನಲ್ಲಿ ಪದವಿಯನ್ನು ಅವಶ್ಯವಾಗಿ ಪಡೆಯುವರು ಏಕೆಂದರೆ ಯೋಗವನ್ನಂತೂ ಎಲ್ಲಾ ಮನುಷ್ಯರೂ
ಒಪ್ಪುತ್ತಾರೆ, ಬಹಳ ಮನುಷ್ಯರು ಈ ರೀತಿ ಹೇಳುತ್ತಾರೆ ನಮಗೂ ಸಹ ಮುಕ್ತಿ ಬೇಕು, ಆದರೆ ಶಿಕ್ಷೆಯಿಂದ
ಬಿಡಿಸಿಕೊಂಡು ಮುಕ್ತರಾಗುವ ಶಕ್ತಿಯು ಈ ಯೋಗದ ಮೂಲಕವೇ ಸಿಗಲು ಸಾಧ್ಯ.
“ಅಜಪಾಜಪ ಅರ್ಥಾತ್
ನಿರಂತರ ಈಶ್ವರೀಯ ನೆನಪು”
ಏನು ಹೇಳಿಕೆ ಮಾತಿದೆ
ಶ್ವಾಸ ಶ್ವಾಸದಲ್ಲಿ ಅಜಪಾಜಪ ಜಪಿಸುತ್ತಾ ಇರಿ ಅದರ ಯಥಾರ್ಥ ಅರ್ಥ ಏನು? ಯಾವಾಗ ನಾವು ಹೇಳುತ್ತೇವೆ
ಅಜಪಾಜಪ ಅಂದಾಗ ಇದರ ಯಥಾರ್ಥ ಅರ್ಥವಾಗಿದೆ ಜಪವಿಲ್ಲದೆ ಪ್ರತಿಯೊಂದು ಶ್ವಾಸದಲ್ಲಿ ತಮ್ಮ
ಬುದ್ಧಿಯೋಗ ತಮ್ಮ ಪರಮಪಿತ ಪರಮಾತ್ಮನ ಜೊತೆ ನಿರಂತರ ಲಗನ್ ಮತ್ತು ಈಶ್ವರೀಯ ನೆನಪು ಪ್ರತಿಯೊಂದು
ಶ್ವಾಸದಲ್ಲಿ ಕಾಯಂ ಆಗಿ ನಡೆಯುತ್ತಾ ಬರುತ್ತದೆ, ಆ ನಿರಂತರ ಈಶ್ವರೀಯ ನೆನಪಿಗೆ ಅಜಪಾಜಪ ಎಂದು
ಹೇಳಲಾಗುವುದು. ಬಾಕಿ ಯಾರಾದರೂ ಬಾಯಿಂದ ಜಪ ಜಪಿಸುವುದು ಅರ್ಥಾತ್ ರಾಮ ರಾಮ ಎಂದು ಹೇಳುವುದು ಒಳಗೆ
ಯಾವುದೇ ಮಂತ್ರ ಉಚ್ಚರಣೆ ಮಾಡುವುದು ಇದಂತೂ ನಿರಂತರ ನಡೆಯುವುದಿಲ್ಲ, ಆ ಮನುಷ್ಯರು ತಿಳಿಯುತ್ತಾರೆ
ನಾವು ಮುಖದಿಂದ ಯಾವುದೇ ಮಂತ್ರ ಉಚ್ಛಾರಣೆ ಮಾಡುವುದಿಲ್ಲ ಆದರೆ ಹೃದಯದಿಂದ ಉಚ್ಚಾರಣೆ ಮಾಡುತ್ತೇವೆ
ಇದಾಗಿದೆ ನಮ್ಮ ಅಜಪಾಜಪ ಎಂದು. ಆದರೆ ಇದಂತೂ ಸಹಜ ಒಂದು ವಿಚಾರದ ಮಾತಾಗಿದೆ ಎಲ್ಲಿ ತಮ್ಮ ಶಬ್ದವೇ
ಅಜಪಾಜಪವಾಗಿದೆ, ಯಾವುದನ್ನು ಜಪಿಸುವ ಅವಶ್ಯಕತೆಯೂ ಸಹ ಇಲ್ಲ. ಕುಳಿತು ಆಂತರಿಕವಾಗಿ ಯಾವುದಾದರೂ
ಮೂರ್ತಿಯ ಧ್ಯಾನವನ್ನೂ ಸಹ ಮಾಡುವುದಲ್ಲ, ಅಥವಾ ಯಾವುದೇ ಸ್ಮರಣೆ ಮಾಡುವುದಲ್ಲ ಏಕೆಂದರೆ ಅದೂ ಸಹ
ನಿರಂತರ ತಿನ್ನುತ್ತಾ ಕುಡಿಯುತ್ತಾ ಸ್ಮರಣೆಯಲ್ಲಿರಲು ಸಾಧ್ಯವಿಲ್ಲ ಆದರೆ ನಾವು ಏನು ಈಶ್ವರೀಯ
ನೆನಪನ್ನು ಮಾಡುತ್ತೇವೆ, ಅದೇ ನಿರಂತರ ನಡೆಯಲು ಸಾಧ್ಯ ಏಕೆಂದರೆ ಇದು ಬಹಳ ಸಹಜವಾಗಿದೆ. ಈಗ
ತಿಳಿಯಿರಿ ಒಂದು ಮಗು ತನ್ನ ತಂದೆಯನ್ನು ನೆನಪು ಮಾಡುತ್ತದೆ, ಆಗ ಅದೇ ಸಮಯದಲ್ಲಿ ತಂದೆಯ ಫೋಟೋವನ್ನು
ಎದುರಿಗೆ ತರುವ ಅವಶ್ಯಕತೆ ಇರುವುದಿಲ್ಲ ಆದರೆ ಮನಸಾ-ವಾಚಾ-ಕರ್ಮಣ ತಂದೆಯ ಪೂರ್ತಿ ಆಕ್ಯುಪೇಷನ್,
ಆಕ್ಟಿವಿಟಿ ಗುಣಗಳ ಸಹಿತ ನೆನಪಿಗೆ ಬರುವುದು ಅಷ್ಟೇ, ಅದು ನೆನಪಿಗೆ ಬಂದ ತಕ್ಷಣ ಮಕ್ಕಳ ಕ್ರಿಯೆ
ಸಹ ಅವರಂತೆ ನಡೆಯುತ್ತದೆ , ಅದಕ್ಕೆ ಸನ್ ಷೊಸ್ ಫಾಧರ್ ಎಂದು ಹೇಳುತ್ತಾರೆ. ಹಾಗೆ ತಮ್ಮ ನೆನಪು
ಹಾಗೂ ಅನ್ಯ ಎಲ್ಲರ ನೆನಪುಗಳನ್ನು ಹೃದಯದೊಳಗಿಂದ ಅಳಿಸಿ ಹಾಕಿ, ಅವರೊಬ್ಬರದೆ ವಾಸ್ತವಿಕ ಪಾರಲೌಕಿಕ
ಪರಮಪಿತ ಪರಮಾತ್ಮನ ನೆನಪಿನಲ್ಲಿರಬೇಕು, ಇದರಲ್ಲಿ ಏಳುತ್ತಾ-ಕೂರುತ್ತಾ, ತಿನ್ನುತ್ತಾ-ಕುಡಿಯುತ್ತಾ
ನಿರಂತರ ನೆನಪಿನಲ್ಲಿ ನಡೆಯಲು ಸಾಧ್ಯ. ಆ ನೆನಪಿನಿಂದಲೇ ಕರ್ಮಾತೀತರಾಗುವಿರಿ. ಆದ್ದರಿಂದ ಈ
ಸ್ವಾಭಾವಿಕ ನೆನಪನ್ನೇ ಅಜಪಾಜಪ ಎಂದು ಹೇಳುತ್ತಾರೆ. ಒಳ್ಳೆಯದು. ಓಂ ಶಾಂತಿ.
ಅವ್ಯಕ್ತ ಸೂಚನೆ:-
ಸ್ವಯಂನ ಮತ್ತು ಸರ್ವರ ಪ್ರತಿ ಮನಸ್ಸಾ ಮೂಲಕ ಯೋಗದ ಶಕ್ತಿಗಳ ಪ್ರಯೋಗ ಮಾಡಿ.
ಅಭ್ಯಾಸದ
ಪ್ರಯೋಗಶಾಲೆಯಲ್ಲಿ ಕುಳಿತು, ಯೋಗದ ಪ್ರಯೋಗ ಮಾಡಿದಾಗ ಒಬ್ಬ ತಂದೆಯ ಆಸರೆ ಮತ್ತು ಮಾಯೆಯ ಅನೇಕ
ಪ್ರಕಾರದ ವಿಘ್ನಗಳಿಂದ ದೂರದ ಅನುಭವ ಮಾಡುವಿರಿ. ಈಗ ಜ್ಞಾನ ಸಾಗರ, ಗುಣಗಳ ಸಾಗರ, ಶಕ್ತಿಗಳ
ಸಾಗರದಲ್ಲಿ ಮೇಲೆ-ಮೇಲೆಯ ಅಲೆಗಳಲ್ಲಿ ತೇಲಾಡುತ್ತೀರಿ ಅದಕ್ಕಾಗಿ ಅಲ್ಪಕಾಲದ ತಾಜಾತನದ ಅನುಭವ
ಮಾಡುತ್ತೀರಿ. ಆದರೆ ಈಗ ಸಾಗರನ ಆಳದಲ್ಲಿ ಹೋಗುತ್ತಿರೆಂದಾಗ ಅನೇಕ ಪ್ರಕಾರದ ವಿಚಿತ್ರ ಅನುಭವ ಮಾಡಿ
ರತ್ನಗಳನ್ನು ಪ್ರಾಪ್ತಿ ಮಾಡಿಕೊಳ್ಳಿರಿ.