19.01.25    Avyakt Bapdada     Kannada Murli    30.11.2003     Om Shanti     Madhuban


ನಾಲ್ಕೂ ವಿಷಯಗಳಲ್ಲಿ ಅನುಭವದ ಅಧಿಕಾರಿಯಾಗಿ ಸಮಸ್ಯೆಯನ್ನು ಸಮಾಧಾನ ಸ್ವರೂಪದಲ್ಲಿ ಪರಿವರ್ತನೆ ಮಾಡಿ


ಇಂದು ಬ್ರಾಹ್ಮಣ ಜಗತ್ತಿನ ರಚಯಿತ ತನ್ನ ನಾಲ್ಕೂ ಕಡೆಯ ಬ್ರಾಹ್ಮಣ ಮಕ್ಕಳನ್ನು ನೋಡುತ್ತಿದ್ದಾರೆ. ಈ ಬ್ರಾಹ್ಮಣ ಜಗತ್ತು ಚಿಕ್ಕ ಜಗತ್ತಾಗಿದೆ ಆದರೆ ಅತಿಶ್ರೇಷ್ಠ, ಅತಿಪ್ರಿಯ ಜಗತ್ತಾಗಿದೆ. ಈ ಬ್ರಾಹ್ಮಣ ಜಗತ್ತು ಪೂರ್ಣವಿಶ್ವದ ವಿಶೇಷ ಆತ್ಮಗಳ ಜಗತ್ತಾಗಿದೆ. ಪ್ರತಿಯೊಬ್ಬ ಬ್ರಾಹ್ಮಣರು ಕೋಟಿಯಲ್ಲಿ ಕೆಲವರು, ಕೆಲವರಲ್ಲಿಯೂ ಕೆಲವು ಆತ್ಮಗಳಾಗಿದ್ದಾರೆ ಏಕೆಂದರೆ ತಮ್ಮ ತಂದೆಯನ್ನು ಗುರುತಿಸಿ, ತಂದೆಯ ಆಸ್ತಿಗೆ ಅಧಿಕಾರಿಗಳಾಗಿದ್ದಾರೆ. ಹೇಗೆ ತಂದೆಯು ಸರ್ವಶ್ರೇಷ್ಠರೆಂದಮೇಲೆ ತಂದೆಯನ್ನು ಗುರುತಿಸಿ ತಂದೆಯ ಮಕ್ಕಳಾಗುವಂತಹ ಆತ್ಮಗಳೂ ಸಹ ವಿಶೇಷ ಆತ್ಮಗಳಾಗಿದ್ದಾರೆ. ಪ್ರತಿಯೊಬ್ಬ ಬ್ರಾಹ್ಮಣ ಆತ್ಮದ ಮಸ್ತಕದಲ್ಲಿ ಶ್ರೇಷ್ಠಭಾಗ್ಯದ ರೇಖೆಯನ್ನು ಜನ್ಮತಃ ಭಾಗ್ಯವಿದಾತನೇ ಸ್ವಯಂ ಬರೆದಿದ್ದಾರೆ. ಅಂತಹ ಶ್ರೇಷ್ಠ ಭಾಗ್ಯವಂತ ಆತ್ಮಗಳಾಗಿದ್ದಾರೆ. ಆ ರೀತಿ ತಮ್ಮನ್ನು ಭಾಗ್ಯವಂತರೆಂದು ತಿಳಿದಿದ್ದೀರಾ? ಇಷ್ಟು ದೊಡ್ಡ ಆತ್ಮೀಯ ನಶೆಯ ಅನುಭವವಾಗುತ್ತದೆಯೇ? ಪ್ರತಿಯೊಬ್ಬರ ಬ್ರಾಹ್ಮಣ ಹೃದಯದಲ್ಲಿ ಹೃದಯರಾಮ ಹೃದಯದ ಪ್ರೀತಿಯನ್ನು ಕೊಡುತ್ತಿದ್ದಾರೆ. ಈ ಪರಮಾತ್ಮನ ಪ್ರೀತಿ ಪೂರ್ಣ ಕಲ್ಪದಲ್ಲಿ ಒಬ್ಬರ ಮೂಲಕ ಹಾಗೂ ಒಂದುಬಾರಿ ಮಾತ್ರವೇ ಪ್ರಾಪ್ತಿಯಾಗುತ್ತದೆ. ಈ ಆತ್ಮೀಯ ನಶೆಯು ಸದಾ ಪ್ರತಿಯೊಂದು ಕರ್ಮದಲ್ಲಿ ಇರುತ್ತದೆಯೇ? ಏಕೆಂದರೆ ತಾವು ವಿಶ್ವಕ್ಕೆ ನಾವು ಕರ್ಮಯೋಗಿ ಜೀವನದ ವಿಶೇಷ ಆತ್ಮಗಳೆಂದು ಚಾಲೆಂಜ್ ಮಾಡುತ್ತೀರಿ. ಕೇವಲ ಯೋಗ ಮಾಡುವಂತಹ ಯೋಗಿಗಳಲ್ಲ, ಯೋಗೀ ಜೀವನದವರು. ಜೀವನ ಸದಾಕಾಲಕ್ಕೆ ಇರುತ್ತದೆ. ಸ್ವಾಭಾವಿಕ ಹಾಗೂ ನಿರಂತರವಗಿ ಇರುತ್ತದೆ. 6 ಗಂಟೆ, 8 ಗಂಟೆಯ ಯೋಗೀ ಜೀವನದವರಲ್ಲ. ಯೋಗ ಅಂದರೆ ನೆನಪಂತೂ ಬ್ರಾಹ್ಮಣ ಜೀವನದ ಲಕ್ಷ ವಾಗಿದೆ. ಜೀವನದ ಲಕ್ಷ್ಯ ಸ್ವತಃ ನೆನಪಿರುತ್ತದೆ ಹಾಗೂ ಹೇಗೆ ಲಕ್ಷ್ಯವಿರುತ್ತದೆಯೋ ಹಾಗೆಯೇ ಲಕ್ಷಣವೂ ಸಹ ಸ್ವತಃ ಬರುತ್ತದೆ.

ಬಾಪ್ದಾದಾ ಪ್ರತಿಯೊಬ್ಬ ಬ್ರಾಹ್ಮಣ ಆತ್ಮದ ಮಸ್ತಕದಲ್ಲಿ ಹೊಳೆಯುತ್ತಿರುವ ಭಾಗ್ಯದ ನಕ್ಷತ್ರವನ್ನು ನೋಡುತ್ತಿದ್ದಾರೆ. ಬಾಪ್ದಾದಾ ಸದಾ ಪ್ರತಿಯೊಂದು ಮಗುವನ್ನು ಶ್ರೇಷ್ಠ ಸ್ವಮಾನಧಾರಿ, ಸ್ವರಾಜ್ಯಾಧಿಕಾರಿ ರೂಪದಲ್ಲಿ ನೋಡುತ್ತಾರೆ. ಅಂದಮೇಲೆ ತಾವೆಲ್ಲರೂ ಸಹ ತಮ್ಮನ್ನು ಸ್ವಮಾನಧಾರಿ ಆತ್ಮನಾಗಿದ್ದೇನೆ, ಸ್ವರಾಜ್ಯಧಾರಿ ಆತ್ಮನಾಗಿದ್ದೇನೆ - ಈ ರೀತಿ ಅನುಭವ ಮಾಡುತ್ತೀರಾ? ಸೆಕೆಂಡಿನಲ್ಲಿ ಒಂದುವೇಳೆ ನಾನು ಸ್ವಮಾನಧಾರಿ ಆತ್ಮನಾಗಿದ್ದೇನೆ, ಸ್ವರಾಜ್ಯಧಾರಿ ಆತ್ಮನಾಗಿದ್ದೇನೆ ಎಂಬುದನ್ನು ಸ್ಮೃತಿಯಲ್ಲಿ ತನ್ನಿ ಆಗ ಸೆಕೆಂಡಿನಲ್ಲಿ ಸ್ವಮಾನದ ಪಟ್ಟಿಯು ಬರುತ್ತದೆ! ಈಗಲೂ ತಮ್ಮ ಸ್ವಮಾನದ ಪಟ್ಟಿಯು ಸ್ಮೃತಿಯಲ್ಲಿ ಬಂದಿತೆ? ದೊಡ್ಡ ಪಟ್ಟಿ ಅಲ್ಲವೆ! ಸ್ವಮಾನವು ಅಭಿಮಾನವನ್ನು ಸಮಾಪ್ತಿ ಮಾಡುತ್ತದೆ ಏಕೆಂದರೆ ಸ್ವಮಾನವು ಶ್ರೇಷ್ಠ ಅಭಿಮಾನವಾಗಿದೆ. ಅಂದಮೇಲೆ ಶ್ರೇಷ್ಠ ಅಭಿಮಾನ ಭಿನ್ನ-ಭಿನ್ನ ಆಶುದ್ಧ ದೇಹಾಭಿಮಾನವನ್ನು ಸಮಾಪ್ತಿ ಮಾಡುತ್ತದೆ. ಹೇಗೆ ಸೆಕೆಂಡಿನಲ್ಲಿ ಲೈಟ್ನ ಸ್ವಿಚ್ ಆನ್ ಮಾಡುವುದರಿಂದ ಅಂಧಕಾರವು ಓಡಿಹೋಗುತ್ತದೆ, ಅಂಧಕಾರವನ್ನು ಓಡಿಸಬೇಕಾಗಿಲ್ಲ ಅಥವಾ ಅಂಧಕಾರವನ್ನು ತೆಗೆಯಲು ಕಷ್ಟಪಡಬೇಕಾಗಿಲ್ಲ ಆದರೆ ಸ್ವಿಚ್ ಆನ್ ಮಾಡಿದರೆ ಅಂಧಕಾರವು ಸ್ವತಃ ಸಮಾಪ್ತಿಯಾಗುತ್ತದೆ. ಹಾಗೆಯೇ ಸ್ವಮಾನದ ಸ್ಮೃತಿಯ ಸ್ವಿಚ್ ಆನ್ ಮಾಡಿದಾಗ ಭಿನ್ನ-ಭಿನ್ನ ದೇಹಾಭಿಮಾನವನ್ನು ಸಮಾಪ್ತಿ ಮಾಡುವ ಶ್ರಮಪಡಬೇಕಾಗಿಲ್ಲ. ಎಲ್ಲಿಯತನಕ ಸ್ವಮಾನದಲ್ಲಿ ಸ್ಮೃತಿ ಸ್ವರೂಪರಾಗುವುದಿಲ್ಲವೋ ಅಲ್ಲಿಯತನಕ ಕಷ್ಟಪಡ ಬೇಕಾಗುತ್ತದೆ. ಬಾಪ್ದಾದಾ ಮಕ್ಕಳ ಆಟವನ್ನು ನೋಡುತ್ತಾರೆ - ಸ್ವಮಾನವನ್ನು ಅಂತರಾಳದಲ್ಲಿ ವರ್ಣನೆ ಮಾಡುತ್ತಾರೆ - ನಾನು ಬಾಪ್ದಾದಾರವರ ಹೃದಯ ಸಿಂಹಾಸನಾಧಾರಿ ಆಗಿದ್ದೇನೆ ಎಂದು ವರ್ಣನೆಯನ್ನು ಮಾಡುತ್ತಿದ್ದಾರೆ, ಯೋಚಿಸುತ್ತಲೂ ಇದ್ದಾರೆ ಆದರೆ ಅನುಭವದ ಸ್ಥಿತಿಯಲ್ಲಿ ಸ್ಥಿತರಾಗುವುದಿಲ್ಲ. ಯಾವುದನ್ನು ಯೋಚಿಸುತ್ತಾರೆಯೋ ಅದರ ಅನುಭವ ಅವಶ್ಯವಾಗಿ ಆಗಬೇಕು ಏಕೆಂದರೆ ಎಲ್ಲದಕ್ಕಿಂತ ಶ್ರೇಷ್ಠ ಅಧಿಕಾರ ಅನುಭವ ಅಧಿಕಾರವಾಗಿದೆ ಅಂದಮೇಲೆ ಬಾಪ್ದಾದಾ ನೋಡುತ್ತಾರೆ - ಬಹಳ ಚೆನ್ನಾಗಿ ಕೇಳುತ್ತೀರಿ, ಬಹಳ ಚೆನ್ನಾಗಿ ಯೋಚಿಸುತ್ತೀರಿ ಆದರೆ ಕೇಳುವುದು ಹಾಗೂ ಯೋಚಿಸುವುದು ಬೇರೆ, ಅನುಭವಿ ಸ್ವರೂಪರಾಗಬೇಕು. ಇದೇ ಬ್ರಾಹ್ಮಣ ಜೀವನದ ಅಧಿಕಾರವಾಗಿದೆ. ಇದೇ ಬ್ರಾಹ್ಮಣ ಜೀವನದ ಶ್ರೇಷ್ಠ ಅಧಿಕಾರವಾಗಿದೆ. ಇದೇ ಭಕ್ತಿ ಹಾಗೂ ಜ್ಞಾನದಲ್ಲಿ ಅಂತರವಾಗಿದೆ. ಭಕ್ತಿಯಲ್ಲಿಯೂ ಸಹ ಕೇಳುವ ಮಸ್ತಿಯಲ್ಲಿ ಬಹಳ ಮಸ್ತರಾಗುತ್ತಾರೆ. ಯೋಚನೆಯನ್ನೂ ಸಹ ಮಾಡುತ್ತಾರೆ ಆದರೆ ಅನುಭವವನ್ನು ಮಾಡುವುದಿಲ್ಲ. ಜ್ಞಾನದ ಅರ್ಥವೇ ಆಗಿದೆ - ಜ್ಞಾನಿ ಆತ್ಮ ಅಂದರೆ ಪ್ರತಿಯೊಂದು ಸ್ವಮಾನದ ಅನುಭವಿಗಳಾಗುವುದು. ಅನುಭವಿಸ್ವರೂಪ ಆತ್ಮೀಯ ನಶೆಯನ್ನು ಏರಿಸುತ್ತದೆ. ಅನುಭವ ಜೀವನದಲ್ಲಿ ಎಂದೂ ಸಹ ಮರೆಯುವುದಿಲ್ಲ, ಕೇಳಿರುವುದು, ಯೋಚಿಸಿರುವುದು ಮರೆತುಹೋಗುತ್ತದೆ ಆದರೆ ಅನುಭವದ ಅಧಿಕಾರವು ಎಂದೂ ಸಹ ಕಡಿಮೆಯಾಗುವುದಿಲ್ಲ.

ಅಂದಮೇಲೆ ಬಾಪ್ದಾದಾ ಮಕ್ಕಳಿಗೆ ಇದೇ ಸ್ಮೃತಿಯನ್ನು ತರಿಸುತ್ತೇವೆ - ಕೇಳಿರುವ ಪ್ರತಿಯೊಂದು ಮಾತು ಯಾವುದನ್ನು ಭಗವಂತ ತಂದೆಯಿಂದ ಕೇಳಿದ್ದೀರಿ ಅದರ ಅನುಭವೀ ಮೂರ್ತಿಗಳಾಗಿ, ಅನುಭವ ಮಾಡಿರುವ ಮಾತನ್ನು ಸಾವಿರಾರು ಜನರು ಒಂದುವೇಳೆ ಅಳಿಸಿಹಾಕಲು ಪ್ರಯತ್ನ ಮಾಡಿದರೂ ಅಳಿಸಿಹಾಕಲು ಸಾಧ್ಯವಿಲ್ಲ. ಮಾಯೆಯೂ ಶಾ ಅನುಭವವನ್ನು ಅಲಿಸಿಹಾಕಲು ಸಾಧ್ಯವಿಲ್ಲ. ಹೇಗೆ ಶರೀರವನ್ನು ಧಾರಣೆ ಮಾಡುತಿದ್ದಂತೆ ನಾನು ಇಂತಹವನು ಎಂಬುದನ್ನು ಅನುಭವ ಮಾಡುತ್ತೀರಿ ಅಂದಮೇಲೆ ಅದು ಎಷ್ಟು ಪಕ್ಕಾ ಇರುತ್ತದೆ! ಎಂದಾದರೂ ತಮ್ಮ ದೇಹದ ಹೆಸರು ಮರೆತು ಹೋಗುತ್ತದೆಯೇ? ಯಾರಾದರೂ ನಿಮಗೆ ಇಲ್ಲ ನೀವು ಇಂತಹವರು ಎಂದು ಹೇಳಿದರೆ ನೀವು ಒಪ್ಪುತ್ತೀರಾ? ಹಾಗೆಯೇ ಪ್ರತಿಯೊಂದು ಸ್ವಮಾನದ ಲಿಸ್ಟ್ ಅನುಭವ ಮಾಡುವುದರಿಂದ ಎಂದೂ ಸ್ವಮಾನವೂ ಮರೆಯಲು ಸಾಧ್ಯವಿಲ್ಲ. ಆದರೆ ಬಾಪ್ದಾದಾರವರು ನೋಡಿದರು ಪ್ರತಿಯೊಂದು ಸ್ವಮಾನದ ಅನುಭವ ಅಥವಾ ಪ್ರತಿಯೊಂದು ಪಾಯಿಂಟ್ನ ಅನುಭವಿಗಳಾಗುವುದರಲ್ಲಿ ನಂಬರ್ವಾರ್ ಇದ್ದಾರೆ. ಯಾವಾಗ ನಾನು ಆತ್ಮನೇ ಆಗಿದ್ದೇನೆ ಎಂದು ಅನುಭವ ಮಾಡಿದ್ದೀರಿ, ಆತ್ಮವಲ್ಲದೆ ಇನ್ನೇನು! ದೇಹವನ್ನು ನನ್ನದು ಎಂದು ಹೇಳುತ್ತೀರಾ ಆದರೆ ನಾನು ಆತ್ಮನಾಗಿದ್ದೇನೆ, ಆತ್ಮನೇ ನಾನು ಎಂದಮೇಲೆ ದೇಹಭಾನವು ಎಲ್ಲಿಂದ ಬಂದಿತು? ಏಕೆ ಬಂದಿತು? ಕಾರಣ, 63 ಜನ್ಮದ ಅಭ್ಯಾಸ, ನಾನು ದೇಹವಾಗಿದ್ದೇನೆ, ಉಲ್ಟಾ ಅಭ್ಯಾಸವು ಪಕ್ಕಾ ಆಗಿದೆ. ಯಥಾರ್ಥ ಅಭ್ಯಾಸವು ಅನುಭವದಲ್ಲಿ ಮರೆತುಹೋಗುತ್ತದೆ. ಬಾಪ್ದಾದಾ ಮಕ್ಕಳನ್ನು ಯಾವಾಗ ಶ್ರಮಪಡುತ್ತಿರುವುದನ್ನು ನೋಡುತ್ತಾರೆ ಆಗ ಮಕ್ಕಳ ಮೇಲೆ ಪ್ರೀತಿ ಬರುತ್ತದೆ. ಪರಮಾತ್ಮನ ಮಕ್ಕಳು ಹಾಗೂ ಶ್ರಮಪಡುತ್ತಿರುವುದು! ಕಾರಣ ಅನುಭವಿಮೂರ್ತಿ ಆಗುವುದರಲ್ಲಿ ಕೊರತೆ ಇದೆ. ದೇಹಭಾನದ ಅನುಭವ ಏನೇ ಆಗಲಿ, ಯಾವುದೇ ಕರ್ಮ ಮಾಡುತ್ತಿದ್ದರೂ ದೇಹಭಾನವು ಮರೆತುಹೋಗುತ್ತದೆಯೇ? ಅಂದಮೇಲೆ ಬ್ರಾಹ್ಮಣ ಜೀವನ ಎಂದರೆ ಕರ್ಮಯೋಗಿ ಜೀವನ, ಯೋಗಿಜೀವನದ ಅನುಭವ.

ಅಂದಮೇಲೆ ಪರಿಶೀಲನೆ ಮಾಡಿಕೊಳ್ಳಿ - ಪ್ರತಿಯೊಂದು ವಿಷಯವನ್ನು ಅನುಭವದಲ್ಲಿ ತಂದಿದ್ದೀರಾ? ಜ್ಞಾನವನ್ನು ಕೇಳುವುದು ಹೇಳುವುದು ಸಹಜವಾಗಿದೆ ಆದರೆ ಜ್ಞಾನಸ್ವರೂಪರಾಗಬೇಕು. ಜ್ಞಾನವನ್ನು ಸ್ವರೂಪದಲ್ಲಿ ತಂದಾಗ ಸ್ವತಃ ಪ್ರತಿಯೊಂದು ಕರ್ಮ ಜ್ಞಾನಪೂರ್ಣ ಅಂದರೆ ಜ್ಞಾನದ ಪ್ರಕಾಶ ಹಾಗೂ ಶಕ್ತಿಯುಳ್ಳದ್ದಾಗಿರುತ್ತದೆ. ಜ್ಞಾನವೇ ಪ್ರಕಾಶ ಹಾಗೂ ಶಕ್ತಿಯೆಂದು ಹೇಳಲಾಗುತ್ತದೆ. ಹಾಗೆಯೇ ಯೋಗಿಸ್ವರೂಪ, ಯೋಗಯುಕ್ತ, ಯುಕ್ತಿಯುಕ್ತ ಸ್ವರೂಪ, ಧಾರಣಾ ಸ್ವರೂಪ ಎಂದರೆ ಪ್ರತಿಯೊಂದು ಕರ್ಮ, ಪ್ರತಿಯೊಂದು ಕಮೇರ್ಂದ್ರಿಯ, ಪ್ರತೀಗುಣದ ಧಾರಣಾ ಸ್ವರೂಪವಾಗಿರುತ್ತದೆ. ಸೇವೆಯ ಅನುಭವಿಮೂರ್ತಿ ಸೇವಾಧಾರಿಯ ಅರ್ಥವೇ ಆಗಿದೆ - ನಿರಂತರ ಸ್ವತಃ ಸೇವಾಧಾರಿ, ಮನಸ್ಸಾ-ವಾಚಾ-ಕರ್ಮಣಾ, ಸಂಬಂಧ-ಸಂಪರ್ಕ ಯಾವುದರಲ್ಲೇ ಆಗಿರಬಹುದು ಪ್ರತಿಯೊಂದು ಕರ್ಮದಲ್ಲಿ ಸೇವೆಯೂ ಸ್ವಾಭಾವಿಕವಾಗಿ ಇರುತ್ತದೆ, ಇದಕ್ಕೆ ಹೇಳಲಾಗುತ್ತದೆ - ನಾಲ್ಕೂ ವಿಷಯಗಳಲ್ಲಿ ಅನುಭವ ಸ್ವರೂಪ ಅಂದಮೇಲೆ ಎಲ್ಲರೂ ಪರಿಶೀಲನೆ ಮಾಡಿಕೊಳ್ಳಿ - ಎಲ್ಲಿಯತನಕ ಅನುಭವಿಗಳಾಗಿದ್ದೀರಿ? ಪ್ರತಿಯೊಂದು ಗುಣದ ಅನುಭವಿ, ಪ್ರತೀ ಶಕ್ತಿಯ ಅನುಭವಿ. ಅನುಭವದ ಸಮಯದಲ್ಲಿ ಬಹಳ ಕೆಲಸಕ್ಕೆ ಬರುತ್ತದೆ ಎಂದು ಹೇಳಿಕೆ ಇದೆ. ಅಂದಮೇಲೆ ಅನುಭವಿಮೂರ್ತಿಯ ಅನುಭವ ಎಂತಹ ಪರಿಸ್ಥಿತಿಯೇ ಇರಲಿ, ಅನುಭವಿ ಮೂರ್ತಿಯ ಅನುಭವದ ಅಧಿಕಾರದಿಂದ ಸಮಸ್ಯೆಯನ್ನು ಸೆಕೆಂಡಿನಲ್ಲಿ ಸಮಾಧಾನ ಸ್ವರೂಪದಲ್ಲಿ ಪರಿವರ್ತನೆ ಮಾಡುತ್ತಾರೆ. ಸಮಸ್ಯೆಯು ಸಮಸ್ಯೆಯಾಗಿರುವುದಿಲ್ಲ, ಸಮಾಧಾನ ಸ್ವರೂಪ ಆಗಿಬಿಡುತ್ತದೆ. ತಿಳಿಯಿತೆ-

ಈಗ ಸಮಯದ ಸಮೀಪತೆ, ತಂದೆಯ ಸಮಾನರಾಗುವ ಸಮೀಪತೆ ಸಮಾಧಾನ ಸ್ವರೂಪದ ಅನುಭವ ಮಾಡಿಸಬೇಕು. ಬಹಳ ಸಮಯ ಸಮಸ್ಯೆಯಲ್ಲಿ ಬರುವುದು, ಸಮಾಧಾನ ಮಾಡುವುದು ಈ ಶ್ರಮವನ್ನು ಪಡುತ್ತಲೇ ಬಂದಿರಿ, ಈಗ ಬಾಪ್ ದಾದಾ ಪ್ರತಿಯೊಂದು ಮಗುವನ್ನು ಸ್ವಮಾನಧಾರಿ, ಸ್ವರಾಜ್ಯಾಧಿಕಾರಿ, ಸಮಾಧಾನ ಸ್ವರೂಪದಲ್ಲಿ ನೋಡಲು ಬಯಸುತ್ತಾರೆ. ಅನುಭವಿಮೂರ್ತಿ ಸೆಕೆಂಡಿನಲ್ಲಿ ಪರಿವರ್ತನೆ ಮಾಡಬಹುದು. ಒಳ್ಳೆಯದು.

ಎಲ್ಲಾ ಕಡೆಯಿಂದ ತಲುಪಿದ್ದೀರಿ, ಡಬಲ್ ವಿದೇಶಿಗಳೂ ಸಹ ಪ್ರತಿಯೊಂದು ಗ್ರೂಪ್ನಲ್ಲಿ ತಮ್ಮ ಒಳ್ಳೆಯ ಅವಕಾಶವನ್ನು ಪಡೆಯುತ್ತಿದ್ದಾರೆ. ಒಳ್ಳೆಯದು-ಈ ಗ್ರೂಪ್ನಲ್ಲಿ ಪಾಂಡವರೂ ಸಹ ಕಡಿಮೆ ಇಲ್ಲ, ಪಾಂಡವರೆಲ್ಲರೂ ಕೈ ಎತ್ತಿ. ಮಾತೆಯರು, ಕುಮಾರಿಯರು, ಶಿಕ್ಷಕಿಯರೆಲ್ಲಾ ಕೈಯೆತ್ತಿ. ಮೊದಲ ಗ್ರೂಪ್ನಲ್ಲಿ ಮಾತೆಯರ ಸಂಖ್ಯೆ ಹೆಚ್ಚಾಗಿ ಇತು. ಈ ಗ್ರೂಪ್ನಲ್ಲಿ ಪಾಂಡವರೂ ಸಹ ರೇಸ್ ಚೆನ್ನಾಗಿ ಮಾಡಿದ್ದಾರೆ. ಪಾಂಡವರ ನಶೆ ಹಾಗೂ ನಿಶ್ಚಯ ಇಲ್ಲಿಯತನಕವೂ ಗಾಯನದಲ್ಲಿಯೂ ಸಹ ಗಾಯನ ಮಾಡಲಾಗಿದೆ. ಏನೆಂದು ಹಾಡಲಾಗಿದೆ? ಗೊತ್ತಿದೆಯೆ. 5 ಜನ ಪಾಂಡವರಿದ್ದರು ಆದರೆ ನಶೆ ಹಾಗೂ ನಿಶ್ಚಯದ ಆಧಾರದಿಂದ ವಿಜಯಿಗಳಾದರು, ಈ ಗಾಯನ ಇಲ್ಲಿಯತನಕ ಇದೆ. ಅಂದಮೇಲೆ ಆ ರೀತಿ ಪಾಂಡವರೆ? ಒಳ್ಳೆಯದು - ನಶೆಯಿದೆಯೇ? ಪಾಂಡವರು ತಾವು ಪಾಂಡವರು ಎಂದು ಯಾವಾಗಲೇ ಕೇಳಿಸಿಕೊಂಡಾಗ ಪಾಂಡವರ ಪಾಂಡವಪತಿಯನ್ನು ಮರೆಯುವುದಿಲ್ಲ ತಾನೆ! ಒಮ್ಮೊಮ್ಮೆ ಮರೆತು ಹೋಗುತ್ತದೆಯೇ? ಪಾಂಡವರು ಹಾಗೂ ಪಾಂಡವಪತಿ, ಪಾಂಡವರಿಗೆ ಎಂದೂ ಪಾಂಡವಪತಿಯು ಮರೆತುಹೋಗಲು ಸಾಧ್ಯವಿಲ್ಲ. ಪಾಂಡವರಿಗೆ ಈ ನಶೆಯಿರಬೇಕು ಕಲ್ಪ-ಕಲ್ಪ ನಾವು ಪಾಂಡವರು, ಪಾಂಡವಪತಿಯ ಪ್ರಿಯರಾಗಿದ್ದೇವೆ. ಸ್ಮಾರಕದಲ್ಲಿಯೂ ಸಹ ಪಾಂಡವರ ಹೆಸರೇನೂ ಕಡಿಮೆಯಿಲ್ಲ. ಪಾಂಡವರಿಗೆ ವಿಜಯಿಪಾಂಡವರೆಂದೇ ಬಿರುದು ಇದೆ. ಆ ರೀತಿ ಪಾಂಡವರೇ? ನಾವು ವಿಜಯಿ ಪಾಂಡವರು ಕೇವಲ ಪಾಂಡವರಲ್ಲ. ವಿಜಯಿ ಪಾಂಡವರು. ವಿಜಯದ ತಿಲಕ ಅವಿನಾಶಿಯಾಗಿ ಮಸ್ತಕದಲ್ಲಿ ಇದ್ದೇ ಇದೆ.

ಮಾತೆಯರಿಗೆ ನಶೆಯಿರುತ್ತದೆಯಲ್ಲವೆ? ಬಹಳ ನಶೆಯಿರುತ್ತದೆ. ಮಾತೆಯರು ನಶೆಯಲ್ಲಿ ಹೇಳುತ್ತಾರೆ ಬಾಬಾ ಬಂದಿರುವುದೇ ನಮಗಾಗಿ ಎಂದು. ಈ ರೀತಿ ತಾನೆ! ಏಕೆಂದರೆ ಅರ್ಧಕಲ್ಪದಲ್ಲಿ ಮಾತೆಯರಿಗೆ ಪದವಿ ಸಿಗಲಿಲ್ಲ. ಈಗ ಸಂಗಮ ಯುಗದಲ್ಲಿ ರಾಜನೀತಿಯಲ್ಲಿಯೂ ಸಹ ಅಧಿಕಾರ ಸಿಕ್ಕಿದೆ. ಪ್ರತಿಯೊಂದು ವಿಭಾಗದಲ್ಲಿಯೂ ತಾವು ಶಕ್ತಿಯರನ್ನು ತಂದೆಯು ಮುಂದಿಟ್ಟಿದ್ದಾರಲ್ಲವೆ. ಅಂದಾಗ ಜಗತ್ತಿನಲ್ಲಿಯೂ ಸಹ ಪ್ರತಿಯೊಂದು ವರ್ಗದಲ್ಲಿ ಈಗ ಮಾತೆಯರಿಗೆ ಅಧಿಕಾರವು ಸಿಗುತ್ತದೆ. ಮಾತೆಯರಿಲ್ಲದಿರುವ ಯಾವ ವರ್ಗವೂ ಇಲ್ಲ. ಇದು ಸಂಗಮಯುಗದ ಮಾಡಿಕೊಂಡರು ಪದವಿಯಾಗಿದೆ ಅಂದಮೇಲೆ ಮಾತೆಯರಿಗೆ ಇರುತ್ತದೆ ನನ್ನ ಬಾಬಾ ನನ್ನ ಬಾಬಾ ಎಂದು ಇರುತ್ತದೆಯೆ? ನಶೆಯಿದೆಯೇ? ಮಾತೆಯರು ಕೈ ಅಲುಗಾಡಿಸುತ್ತಿದ್ದಾರೆ. ಒಳ್ಳೆಯದು- ಭಗವಂತನನ್ನು ತಮ್ಮವರನ್ನಾಗಿ ಮಾಡಿಕೊಂಡರು ಅಂದಮೇಲೆ ಮಾತೆಯರು ಜಾದುಗಾರಿಣಿಯರಲ್ಲವೆ! ಬಾಪ್ದಾದಾ ನೋಡುತ್ತಾರೆ - ಮಾತೆಯರೇ ಆಗಲಿ, ಪಾಂಡವರೇ ಆಗಲಿ ಬಾಪ್ದಾದಾರವರೊಂದಿಗೆ ಪ್ರೀತಿಯಂತೂ ಸರ್ವಸಂಬಂಧಗಳಲ್ಲಿಯೂ ಇದೆ ಆದರೆ ಯಾರಿಗೆ ಯಾವ ವಿಶೇಷ ಸಂಬಂಧ ಪ್ರಿಯವಿದೆ ಎಂದು ಅದನ್ನೂ ಸಹ ನೋಡುತ್ತಾರೆ. ಕೆಲವು ಮಕ್ಕಳಿಗೆ ಭಗವಂತನನ್ನು ಸ್ನೇಹಿತನನ್ನಾಗಿ ಮಾಡಿಕೊಳ್ಳುವುದು ಬಹಳ ಇಷ್ಟವಾಗುತ್ತದೆ. ಇದಕ್ಕೆ ಕಥೆಯೂ ಸಹ ಇದೆ - ಬಾಪ್ದಾದಾ ಇದನ್ನು ಹೇಳುತ್ತಾರೆ, ಯಾವ ಸಮಯದಲ್ಲಿ ಯಾವ ಸಂಬಂಧದ ಅವಶ್ಯಕತೆಯಿರುತ್ತದೆಯೋ ಆ ಸಂಬಂಧದಲ್ಲಿ ಭಗವಂತನನ್ನು ತಮ್ಮವರನ್ನಾಗಿ ಮಾಡಿಕೊಳ್ಳಬಹುದು. ಸರ್ವಸಂಬಂಧವನ್ನು ನಿಭಾಯಿಸಬಹುದು. ಮಕ್ಕಳು ನನ್ನ ಬಾಬಾ ಎಂದು ಹೇಳಿದರೆ ಆಗ ತಂದೆಯು ಏನು ಹೇಳಿದರು - ನಾನು ನಿಮ್ಮವನು ಎಂದು.

ಮಧುಬನದ ದೃಶ್ಯವು ಚೆನ್ನಾಗಿರುತ್ತದೆಯಲ್ಲವೆ! ಭಲೆ ಎಷ್ಟೇ ದೂರದಲ್ಲಿ ಕುಳಿತುಕೊಂಡು ಕೇಳಿದರೂ, ನೋಡಿದರೂ ಮಧುಬನದ ದೃಶ್ಯ ಚೆನ್ನಾಗಿರುತ್ತದೆ. ಮಧುಬನದಲ್ಲಿ ಬಾಪ್ದಾದಾ ಮಿಲನವನ್ನಂತೂ ಮಾಡುತ್ತಾರೆ ಆದರೆ ಎಷ್ಟು ಪ್ರಾಪ್ತಿಗಳಾಗುತ್ತವೆ? ಒಂದುವೇಳೆ ಪಟ್ಟಿಯನ್ನು ತೆಗೆದರೆ ಎಷ್ಟು ಪ್ರಾಪ್ತಿಯಿದೆ? ಎಲ್ಲದಕ್ಕಿಂತ ಅತಿದೊಡ್ಡ ಪ್ರಾಪ್ತಿಯಾಗಿದೆ - ಸಹಜಯೋಗ, ಸ್ವತಃ ಯೋಗವಿರುತ್ತದೆ, ಇದರಲ್ಲಿ ಶ್ರಮಪಡ ಬೇಕಾಗಿರುವುದಿಲ್ಲ. ಒಂದುವೇಳೆ ಯಾರಾದರೂ ಮಧುಬನದ ವಾಯುಮಂಡಲದ ಮಹತ್ವವನ್ನಿಟ್ಟುಕೊಂಡರೆ ಮಧುಬನದ ವಾತಾವರಣ, ಮಧುಬನದ ದಿನಚರಿ ಸಹಜಯೋಗಿ-ಸ್ವತಃ ಯೋಗಿಗಳನ್ನಾಗಿ ಮಾಡುತ್ತದೆ. ಏಕೆ? ಮಧುಬನದಲ್ಲಿ ಬುದ್ಧಿಯಲ್ಲಿ ಕೇವಲ ಒಂದೇ ಕೆಲಸವಿರುತ್ತದೆ. ಸೇವಾಧಾರಿ ಗ್ರೂಪ್ ಬರುತ್ತದೆ ಆದು ಬೇರೆ ವಿಷಯ ಆದರೆ ಯಾರು ರಿಫ್ರೆಷ್ ಆಗಲು ಬರುತ್ತಾರೆ ಅವರಿಗೆ ಮಧುಬನದಲ್ಲಿ ಏನು ಸೇವೆಯಿರುತ್ತದೆ? ಜವಾಬ್ದಾರಿಯಿರುತ್ತದೆಯೆ? ತಿನ್ನಿರಿ, ಕುಡಿಯಿರಿ, ಆನಂದವಾಗಿರಿ, ವಿದ್ಯೆಯನ್ನು ಓದಿ. ಅಂದಮೇಲೆ ಮಧುಬನ ಮಧುಬನವೆ! ವಿದೇಶದಲ್ಲಿಯೂ ಸಹ ಕೇಳುತ್ತಿದ್ದಾರೆ ಆದರೆ ಬಾಪ್ದಾದಾ ಸಾಧನಗಳ ಮೂಲಕ ಕೇಳುವಂತಹರು, ನೋಡುವಂತಹವರಿಗೂ ಸಹ ನೆನಪು- ಪ್ರೀತಿಯನ್ನು ಕೊಡುತ್ತೇವೆ. ಕೆಲವು ಮಕ್ಕಳಂತೂ ರಾತ್ರಿಯಲ್ಲಿಯೂ ಜಾಗೃತರಾಗಿದ್ದು ಕೇಳುತ್ತಾರೆ. ಕೇಳದೇ ಇರುವುದಕ್ಕಿಂತಲೂ ಅವಶ್ಯವಾಗಿ ಚೆನ್ನಾಗಿರುತ್ತದೆ ಆದರೆ ತುಂಬಾ ಚೆನ್ನಾಗಿರುವಂತಹ ಮಧಬನ ಹೆಚ್ಚು ಪ್ರಿಯವಾಗಿದೆ ಮಧುಬನಕ್ಕೆ ಬರುವುದೇ ಚೆನ್ನಾಗಿರುತ್ತದೆ ಎಂದೆನಿಸುತ್ತದೆಯೋ ಅಥವಾ ಇದ್ದಲ್ಲಿಯೇ ಕುಳಿತು ಮುರುಳಿ ಕೇಳುವುದು ಚೆನ್ನಾಗಿದೆಯೇ? ಯಾವುದು ಒಳ್ಳೆಯದೆನಿಸುತ್ತದೆ? ಅಲ್ಲಿಯೂ ಸಹ ಮುರುಳಿಯನ್ನು ಕೇಳುತ್ತೀರಲ್ಲವೆ. ಇಲ್ಲಿಯೂ ಸಹ ಹಿಂದೆಯಿರುವವರು ಟಿ.ವಿ.ಯಲ್ಲಿ ನೋಡುತ್ತೀರಿ. ಯಾರು ಮಧುಬನಕ್ಕೆ ಬರುವುದೇ ಒಳ್ಳೆಯದು ಎನ್ನುವವರು ಕೈಯನ್ನೆತ್ತಿ (ಎಲ್ಲರೂ ಕೈಯೆತ್ತಿದರು) ಒಳ್ಳೆಯದು-ಆದರೂ ಸಹ ಭಕ್ತಿಯಲ್ಲಿ ಗಾಯನವೇನಿದೆ? ನೋಡಿ, ಮಧುಬನದಲ್ಲಿ ಮುರುಳಿಯನ್ನು ನುಡಿಸಲಾಯಿತು. ಲಂಡನ್ನಲ್ಲಿ ಮುರುಳಿ ನುಡಿಸಲಾಯಿತು ಎಂದಲ್ಲ. ಎಲ್ಲಿಯೇ ಇರಲಿ ಮಧುಬನದ ಮಹಿಮೆಯ ಮಹತ್ವವನ್ನು ತಿಳಿಯುವುದು ಅರ್ಥಾತ್ ಸ್ವಯಂನ್ನು ಮಹಾನ್ ಮಾಡಿಕೊಳ್ಳುವುದು.

ಒಳ್ಳೆಯದು. ಯಾರೆಲ್ಲಾ ಬಂದಿದ್ದೀರಿ ನೀವು ಯೋಗಿಜೀವನ, ಜ್ಞಾನಿ ಆತ್ಮನ ಜೀವನ, ಧಾರಣಾ ಸ್ವರೂಪದ ಅನುಭವ ಮಾಡುತ್ತಿದ್ದೀರಿ. ಈಗ ಮೊದಲನೆಯ ಟರ್ನ್ನಲ್ಲಿ ಈ ಸೀಜನ್ನಲ್ಲಿ ವಿಶೇಷವಾಗಿ ಗಮನಕ್ಕೆ ತರಲಾಗಿತ್ತು - ಪೂರ್ಣವರ್ಷ ಸಂತುಷ್ಟಮಣಿಗಳಾಗಿರಬೇಕು ಮತ್ತು ಅನ್ಯರನ್ನು ಸಂತುಷ್ಟರನ್ನಾಗಿ ಮಾಡಬೇಕು. ಕೇವಲ ಆಗುವುದಲ್ಲ, ಮಾಡಲೂಬೇಕು. ಜೊತೆಯಲ್ಲಿ ಸಮಯದನುಸಾರ ಈಗ ಯಾವಾಗಲೇ ಆಗಲಿ ಏನಾದರೂ ಸಹ ಆಗಲು ಸಾಧ್ಯವಿದೆ, ಯಾವಾಗ ಆಗುತ್ತದೆಯೆಂದು ಪ್ರಶ್ನೆ ಮಾಡಬೇಡಿ, ಒಂದು ವರ್ಷದಲ್ಲಿ ಆಗುತ್ತದೆಯೆ, 6 ತಿಂಗಳಿನಲ್ಲಿ ಆಗುತ್ತದೆಯೆ? ಇದ್ದಕ್ಕಿದ್ದಂತೆ ಯಾವುದೇ ಸಮಯದಲ್ಲಾದರೂ ಆಗಲು ಸಾಧ್ಯವಿದೆ ಆದ್ದರಿಂದ ತಮ್ಮ ಸ್ಮೃತಿಯ ಸ್ವಿಚ್ ಬಹಳ ಶಕ್ತಿಶಾಲಿಯನ್ನಾಗಿ ಮಾಡಿಕೊಳ್ಳಿ. ಸೆಕೆಂಡಿನಲ್ಲಿ ಸ್ವಿಚ್ ಆನ್ ಮಾಡಿಕೊಳ್ಳಿ. ಮತ್ತು ಅನುಭವದ ಸ್ವರೂಪರಾಗಿಬಿಡಿ. ಸ್ವಿಚ್ ಸಡಿಲವಾಯಿತೆಂದರೆ ಮತ್ತೆ ಮತ್ತೆ - ಆನ್, ಆಫ್ ಮಾಡಬೇಕಾಗುತ್ತದೆ ಮತ್ತು ಸ್ಥಿತಿ ಸರಿಯಾಗುವುದರಲ್ಲಿ ಸಮಯ ಹಿಡಿಸುತ್ತದೆ ಆದರೆ ಸೆಕೆಂಡಿನಲ್ಲಿ ಸ್ವಮಾನದ ಸ್ವಿಚ್ನ್ನು ಆನ್ ಮಾಡುವುದರ ಮೂಲಕ ಸ್ವರಾಜ್ಯಾಧಿಕಾರಿಯ, ಅಂತರ್ಮುಖಿಯೂ ಆಗಿ ಅನುಭವ ಮಾಡಬೇಕು. ಅನುಭವದ ಸಾಗರದಲ್ಲಿ ಸಮಾವೇಶವಾಗಿ, ಅನುಭವ ಶಕ್ತಿಯನ್ನು ಯಾವುದೇ ಶಕ್ತಿಯು ಗೆಲ್ಲಲು ಸಾಧ್ಯವಿಲ್ಲ. ತಿಳಿಯಿತೆ! ಏನು ಮಾಡಬೇಕೆಂದು? ತಿಳಿಯಿತೇ, ಬಾಪ್ದಾದಾರವರು ಸೂಚನೆಯನ್ನಂತೂ ಕೊಡುತ್ತಾರೆ ಆದರೆ ನಿರೀಕ್ಷಣೆ ಮಾಡಬೇಡಿ-ಯಾವಾಗ, ಯಾವಾಗ, ಯಾವಾಗ, ಯಾವಾಗ ಅಲ್ಲ ಈಗ ಎವರೆಡಿಯಾಗಿ, ಸೆಕೆಂಡಿನಲ್ಲಿ ಸ್ಮೃತಿಯ ಸ್ವಿಚ್ ಆನ್ ಮಾಡಲು ಸಾಧ್ಯವಾಗುತ್ತದೆಯೇ? ಮಾಡಲು ಸಾಧ್ಯವೇ? ಎಂತಹದ್ದೇ ಸಂದರ್ಭವಾಗಲಿ, ಯಾವುದೇ ಸಮಸ್ಯೆಯಾಗಿರಲಿ, ಸ್ಮೃತಿಯ ಸ್ವಿಚ್ನ್ನು ಆನ್ ಮಾಡಿ. ಇಂತಹ ಅಭ್ಯಾಸವನ್ನು ಮಾಡಿ ಏಕೆಂದರೆ ಅಂತಿಮ ಪರೀಕ್ಷೆಯು ಒಂದು ಸೆಕೆಂಡಿನದ್ದಾಗಿರುತ್ತದೆ ನಿಮಿಷವೂ ಅಲ್ಲ. ಯೋಚಿಸುವವರು ಉತ್ತೀರ್ಣರಾಗಲು ಸಾಧ್ಯವಿಲ್ಲ, ಅನುಭವಿಗಳು ಉತ್ತೀರ್ಣರಾಗುತ್ತಾರೆ. ಅಂದಾಗ ಈಗ ಸೆಕೆಂಡಿನಲ್ಲಿ ಎಲ್ಲರೂ ನಾನು ಪರಮಧಾಮದ ನಿವಾಸಿ, ಶ್ರೇಷ್ಠ ಆತ್ಮನಾಗಿದ್ದೇನೆ, ಈ ಸ್ಮೃತಿಯ ಸ್ವಿಚ್ನ್ನು ಆನ್ ಮಾಡಿ ಮತ್ತೆ ಯಾವುದೇ ಸ್ಮೃತಿಯಿರಬಾರದು. ಬುದ್ಧಿಯಲ್ಲಿ ಯಾವುದೇ ಏರು ಪೇರಿರಬಾರದು ಆಚಲವಾಗಿರಿ (ಈ ಡ್ರಿಲ್ ಮಾಡಿಸಲಾಯಿತು). ಒಳ್ಳೆಯದು.

ನಾಲ್ಕೂಕಡೆಯ ಶ್ರೇಷ್ಠ ಸ್ವಮಾನಧಾರಿ ಅನುಭವೀ ಆತ್ಮಗಳಿಗೆ ಸದಾ ಪ್ರತೀ ವಿಷಯ (ಸಬೈಕ್ಟ್) ವನ್ನು ಅನುಭವದಲ್ಲಿ ತರುವಂತಹವರು. ಸದಾ ಯೋಗೀ ಜೀವನದಲ್ಲಿ ನಡೆಯುವಂತಹ ನಿರಂತರ ಯೋಗಿ ಆತ್ಮಗಳಿಗೆ, ಸದಾ ತನ್ನ ವಿಶೇಷ ಭಾಗ್ಯವನ್ನು ಪ್ರತೀ ಕರ್ಮದಲ್ಲಿ ಪ್ರತ್ಯಕ್ಷ ಸ್ವರೂಪದಲ್ಲಿ ಇಟ್ಟುಕೊಳ್ಳುವಂತಹ ಕೋಟಿಯಲ್ಲಿ ಕೆಲವರು, ಕೆಲವರಲ್ಲಿಯೂ ಕೆಲವರು ವಿಶೇಷ ಆತ್ಮಗಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.

ದಾದೀಜಿಯವರ ಪ್ರತಿ: ಎಲ್ಲರನ್ನು ಒಲವು-ಉತ್ಸಾಹದಲ್ಲಿ ತರುವಂತಹ ಒಳ್ಳೆಯ ಕಾರ್ಯವನ್ನು ಮಾಡುತ್ತಿದ್ದೀರಿ. ಕೋಟಿಯೇನು! ಇಡೀ ವಿಶ್ವದ ಆತ್ಮಗಳಿಗೆ ಸಿಗಬೇಕಾಗಿದೆ. ಅಹೋ ಪ್ರಭು! ಎಂದು ಹೇಳುತ್ತಾರಲ್ಲವೆ! ಅಹೋ ಪ್ರಭು ಎಂದು ಹೇಳಲು ತಯಾರು ಮಾಡಬೇಕಲ್ಲವೆ! ಇವರೂ ಸಹ ಸಹಯೋಗ ನೀಡುತ್ತಿದ್ದಾರೆ. ಒಳ್ಳೆಯದು- ಮಧುಬನವನ್ನು ಸಂಭಾಲನೆ ಮಾಡುತ್ತಿದ್ದೀರಿ. ಒಳ್ಳೆಯ ಸಹಯೋಗಿ ಗುಂಪು ಸಿಕ್ಕಿದೆಯಲ್ಲವೆ. ಒಬ್ಬೊಬ್ಬರಲ್ಲಿಯೂ ವಿಶೇಷತೆಯಿದೆ ಆದರೂ ಸಹ ಆದಿರತ್ನಗಳ ಪ್ರಭಾವ ಬೀರುತ್ತದೆ. ಭಲೆ ಎಷ್ಟೇ ವಯಸ್ಸಾಗಲಿ, ಹೊಸ-ಹೊಸಬರೂ ಸಹ ಮುಂದುವರೆಯುತ್ತಿದ್ದಾರೆ ಆದರೆ ಅದಿರತ್ನಗಳ ಪಾಲನೆಯಂತೂ ತನ್ನದೇ ಆಗಿದೆಯಲ್ಲವೆ ಆದ್ದರಿಂದ ಈ ಗ್ರೂಪ್ ಚೆನ್ನಾಗಿದೆ.

ವರದಾನ:
ವಿಘ್ನ ಪ್ರೂಫ ಹೊಳಪಿನ ಫರಿಶ್ತೆ ವಸ್ತ್ರ ಧಾರಣೆ ಮಾಡುವಂತಹ ಸದಾ ವಿಘ್ನ ವಿನಾಶಕ ಭವ

ಸ್ವಯಂನ ಪ್ರತಿ ಮತ್ತು ಸರ್ವರ ಪ್ರತಿ ಸದಾ ವಿಘ್ನ ವಿನಾಶಕರನ್ನಾಗಿ ಮಾಡುವುದಕ್ಕಾಗಿ ಪ್ರಶ್ನೆಯ ಚಿಹ್ನೆಗೆ ವಿದಾಯಿ ಕೊಡುವುದು ಮತ್ತು ಪೂರ್ಣ ವಿರಾಮದ ಮೂಲಕ ಸರ್ವ ಶಕ್ತಿಗಳ ಪೂರ್ಣ ಜಮಾ ಮಾಡುವುದು. ಸದಾ ವಿಘ್ನ ಪ್ರೂಫ ಹೊಳಪಿನ ಫರಿಶ್ತೆಯ ವಸ್ತ್ರವನ್ನು ಧರಿಸಿಟ್ಟುಕೊಳ್ಳಿ, ಮಣ್ಣಿನ ವಸ್ತ್ರವನ್ನು ಧರಿಸಬೇಡಿ. ಜೊತೆ-ಜೊತೆಯಲ್ಲಿ ಸರ್ವ ಗುಣಗಳ ಒಡವೆಗಳಿಂದ ಶೃಂಗರಿಸಲ್ಪಟ್ಟಿರಿ. ಸದಾ ಅಷ್ಟ ಶಕ್ತಿ ಶಸ್ತ್ರಧಾರಿ ಸಂಪನ್ನ ಮೂರ್ತಿಯಾಗಿರಬೇಕು ಮತ್ತು ಕಮಲ ಪುಷ್ಪದ ಆಸನದ ಮೇಲೆ ತಮ್ಮ ಶ್ರೇಷ್ಠ ಜೀವನದ ಕಾಲು ಇಡಿ.

ಸ್ಲೋಗನ್:
ಅಭ್ಯಾಸದ ಮೇಲೆ ಪೂರ್ಣ ಪೂರ್ಣ ಗಮನ ಕೊಡಿ ಆಗ ಫರ್ಸ್ಟ್ ಡಿವಿಜ್ ನಲ್ಲಿ ನಂಬರ್ ಬರುವುದು.

ತಮ್ಮ ಶಕ್ತಿಶಾಲಿ ಮನಸ್ಸಾ ಮೂಲಕ ಸಕಾಶ ಕೊಡುವ ಸೇವೆಯನ್ನು ಮಾಡಿರಿ

ಹೇಗೆ ವಾಚಾ ಸೇವೆ ಸ್ವಾಭಾವಿಕವಾಗಿ ಬಿಟ್ಟಿದೆ, ಹಾಗೆಯೇ ಮನಸ್ಸಾ ಸೇವೆಯು ಜೊತೆ-ಜೊತೆ ಮತ್ತು ಸ್ವಾಭಾವಿಕವಾಗಿರಲಿ. ವಾಣಿಯ ಜೊತೆ ಮನಸ್ಸಾ ಸೇವೆಯು ಮಾಡುತ್ತಿದ್ದರೆ ನೀವು ಕಡಿಮೆ ಮಾತನಾಡಬಹುದು. ಮಾತನಡುವುದರಲ್ಲಿ ಯಾವ ಶಕ್ತಿಯನ್ನು ಉಪಯೋಗಿಸುತ್ತೀರಿ ಅದು ಮನಸ್ಸಾ ಸೇವೆಯ ಸಹಯೋಗದ ಕಾರಣ ವಾಣಿಯ ಶಕ್ತಿ ಜಮಾವಾಗುತ್ತದೆ ಮತ್ತು ಮನಸ್ಸಾ ಶಕ್ತಿಶಾಲಿ ಸೇವೆ ಸಫಲತೆ ಹೆಚ್ಚು ಅನುಭವ ಮಾಡಿಸುತ್ತದೆ.

ಸೂಚನೆ: ಇಂದು ಅಂತರಾಷ್ಟ್ರೀಯ ಯೋಗ ದಿವಸ ಮೂರನೇ ರವಿವಾರವಾಗಿದೆ, ಸಂಜೆ 6.30 ಯಿಂದ 7.30 ರವರೆಗೆ ಎಲ್ಲಾ ಸಹೋದರ-ಸಹೋದರಿಯರು ಸಂಘಟಿತ ರೂಪದಲ್ಲಿ ಒಂದೇ ಶುದ್ಧ ಸಂಕಲ್ಪದಿಂದ ಪ್ರಕೃತಿ ಸಹಿತ ಸರ್ವ ವಿಶ್ವದ ಆತ್ಮರಿಗೆ ಶಾಂತಿ ಮತ್ತು ಶಕ್ತಿಯ ಸಕಾಶ ಕೊಡುವ ವಿಶೇಷ ಸೇವೆಯನ್ನು ಮಾಡಿರಿ. ಬಾಪ್ದಾದಾರವರ ಮಸ್ತಕದಿಂದ ಶಕ್ತಿಶಾಲಿ ಕಿರಣಗಳು ಹೊರಬಂದು ನನ್ನ ಭೃಕುಟಿಯ ಮೇಲೆ ಬರುತ್ತಿವೆ ಮತ್ತುನನ್ನಿಂದ ಇಡೀ ಗ್ಲೋಬ್ ಮೇಲೆ ಹೋಗುತ್ತಿದೆ ಎನ್ನುವ ಅನುಭವ ಮಾಡಿ.