19.02.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಇಲ್ಲಿಯವರೆಗೆ ಏನೆಲ್ಲವನ್ನೂ ಓದಿದ್ದೀರೋ ಅದನ್ನು ಮರೆತುಹೋಗಿ, ಜೀವಿಸಿದ್ದಂತೆಯೇ ಸಾಯುವುದೆಂದರೆ
ಎಲ್ಲವನ್ನೂ ಮರೆಯುವುದಾಗಿದೆ, ಹಿಂದಿನದೇನೂ ನೆನಪಿಗೆ ಬರಬಾರದು”
ಪ್ರಶ್ನೆ:
ಯಾರು
ಜೀವಿಸಿದ್ದಂತೆಯೇ ಪೂರ್ಣವಾಗಿ ಸತ್ತಿಲ್ಲವೋ ಅವರ ಚಿಹ್ನೆಗಳೇನು?
ಉತ್ತರ:
ಅವರು
ತಂದೆಯೊಂದಿಗೂ ವಾದ ಮಾಡುತ್ತಿರುತ್ತಾರೆ. ಶಾಸ್ತ್ರಗಳ ಉದಾಹರಣೆ ಕೊಡುತ್ತಿರುತ್ತಾರೆ. ಯಾರು
ಪೂರ್ಣವಾಗಿ ಸತ್ತಿದ್ದಾರೆಯೋ ಅವರು ಹೇಳುತ್ತಾರೆ-ತಂದೆಯು ಏನನ್ನು ತಿಳಿಸಿದ್ದಾರೆಯೋ ಅದೇ
ಸತ್ಯವಾಗಿದೆ. ನಾವು ಅರ್ಧಕಲ್ಪ ಏನೆಲ್ಲವನ್ನೂ ಕೇಳಿದೆವೋ ಅದು ಅಸತ್ಯವೇ ಆಗಿದೆ. ಆದ್ದರಿಂದ ಈಗ
ಅದನ್ನು ಮುಖದಲ್ಲಿಯೂ(ಬಾಯಿ) ತರಬಾರದು. ತಂದೆಯು ತಿಳಿಸಿದ್ದಾರೆ - ಕೆಟ್ಟದ್ದನ್ನು ಕೇಳಬೇಡಿ.........
ಗೀತೆ:
ಓಂ ನಮಃ ಶಿವಾಯ...............
ಓಂ ಶಾಂತಿ.
ಮಕ್ಕಳಿಗೆ ತಿಳಿಸಲಾಗಿದೆ - ಶಾಂತಿಯಲ್ಲಿ ಕುಳ್ಳರಿಸುತ್ತೀರಿ, ಇದಕ್ಕೆ ಧ್ಯಾನ ಎಂಬ ಶಬ್ಧವನ್ನು
ಕೊಡಲಾಗಿದೆ, ಈ ಡ್ರಿಲ್ ಮಾಡಿಸಲಾಗುತ್ತದೆ. ಈಗ ತಂದೆಯು ಆತ್ಮೀಯ ಮಕ್ಕಳಿಗೆ ತಿಳಿಸುತ್ತಾರೆ - ಯಾರು
ಜೀವಿಸಿದ್ದಂತೆಯೇ ಸತ್ತಿದ್ದಾರೆ ಅವರು ಹೇಳುತ್ತಾರೆ, ಬಾಬಾ ನಾವು ಜೀವಿಸಿದ್ದಂತೆಯೇ ಸತ್ತಿದ್ದೇವೆ.
ಹೇಗೆ ಮನುಷ್ಯನು ಸತ್ತಾಗ ಎಲ್ಲವೂ ಮರೆತುಹೋಗುತ್ತದೆ, ಕೇವಲ ಸಂಸ್ಕಾರವಿರುತ್ತದೆ. ಈಗ ನೀವೂ ಸಹ
ತಂದೆಯ ಮಕ್ಕಳಾಗಿ ಈ ಹಳೆಯ ಪ್ರಪಂಚದಿಂದ ಸತ್ತುಹೋಗಿದ್ದೀರಿ. ತಂದೆಯು ತಿಳಿಸುತ್ತಾರೆ - ನಿಮ್ಮಲ್ಲಿ
ಭಕ್ತಿಯ ಸಂಸ್ಕಾರವಿತ್ತು, ಈಗ ಆ ಸಂಸ್ಕಾರವು ಬದಲಾಗುತ್ತದೆ ಅಂದಮೇಲೆ ಜೀವಿಸಿದ್ದಂತೆಯೇ
ಸಾಯುತ್ತೀರಲ್ಲವೆ. ಸತ್ತಾಗ ಮನುಷ್ಯರು ಓದಿರುವುದೆಲ್ಲವೂ ಮರೆತುಹೋಗುತ್ತದೆ ಮತ್ತೆ ಇನ್ನೊಂದು
ಜನ್ಮದಲ್ಲಿ ಹೊಸದಾಗಿ ಓದಬೇಕಾಗುತ್ತದೆ. ಅದೇ ರೀತಿ ನೀವೀಗ ಏನೆಲ್ಲವನ್ನೂ ಓದಿದ್ದೀರೋ ಅದೆಲ್ಲವನ್ನೂ
ಮರೆತುಹೋಗಿ ನೀವು ತಂದೆಯ ಮಕ್ಕಳಾಗಿದ್ದೀರಲ್ಲವೆ. ನಾನು ನಿಮಗೆ ಹೊಸಮಾತನ್ನು ತಿಳಿಸುತ್ತೇನೆ
ಆದ್ದರಿಂದ ಈಗ ವೇದ-ಶಾಸ್ತ್ರ, ಗ್ರಂಥ, ಜಪ-ತಪ ಮುಂತಾದ ಎಲ್ಲಾ ಮಾತುಗಳನ್ನು ಮರೆತುಹೋಗಿ
ಆದ್ದರಿಂದಲೇ ಹೇಳಿದ್ದಾರೆ - ಕೆಟ್ಟದ್ದನ್ನು ಕೇಳಬೇಡಿ, ಕೆಟ್ಟದ್ದನ್ನು ಹೇಳಬೇಡಿ, ಇದು ನೀವು
ಮಕ್ಕಳಿಗಾಗಿಯೇ ಇದೆ. ಕೆಲವರು ಬಹಳ ವೇದ-ಶಾಸ್ತ್ರಗಳನ್ನು ಓದಿರುತ್ತಾರೆ, ಕೆಲವರು ಜೀವಿಸಿದ್ದಂತೆಯೇ
ಸತ್ತಿರುವುದಿಲ್ಲವೆಂದರೆ ವ್ಯರ್ಥವಾಗಿ ವಾದ ಮಾಡುತ್ತಾರೆ, ಪೂರ್ಣ ಸತ್ತಿರುವವರು ಎಂದೂ
ವಾದಿಸುವುದಿಲ್ಲ. ತಂದೆಯು ಏನನ್ನು ತಿಳಿಸಿದ್ದಾರೆಯೋ ಅದೇ ಸತ್ಯವಾಗಿದೆ, ಅನ್ಯ ಮಾತುಗಳನ್ನು ನಾವು
ಬಾಯಲ್ಲಿ ತಂದುಕೊಳ್ಳುವುದಾದರೂ ಏಕೆ ಎಂದು ಹೇಳುತ್ತಾರೆ! ತಂದೆಯೂ ಸಹ ತಿಳಿಸುತ್ತಾರೆ - ಇಂತಹ
ಮಾತುಗಳನ್ನು ತರಲೇಬೇಡಿ. ಕೆಟ್ಟದ್ದನ್ನು ಕೇಳಬೇಡಿ. ತಂದೆಯು ಆದೇಶ ನೀಡಿದ್ದಾರಲ್ಲವೆ - ಏನನ್ನೂ
ಕೇಳಬೇಡಿ, ತಿಳಿಸಿ - ನಾವೀಗ ಜ್ಞಾನಸಾಗರನ ಮಕ್ಕಳಾಗಿದ್ದೇವೆ ಅಂದಮೇಲೆ ಭಕ್ತಿಯನ್ನೇಕೆ ನೆನಪು
ಮಾಡುವುದು, ನಾವು ಒಬ್ಬ ಭಗವಂತನನ್ನೇ ನೆನಪು ಮಾಡುತ್ತೇವೆ. ಭಕ್ತಿಮಾರ್ಗವನ್ನು ಮರೆಯಿರಿ, ನಾನು
ನಿಮಗೆ ಸಹಜಮಾತನ್ನು ತಿಳಿಸುತ್ತೇನೆ. ಬೀಜವಾದ ನನ್ನನ್ನು ನೆನಪು ಮಾಡಿ ಆಗ ಇಡೀ ವೃಕ್ಷವು
ಬುದ್ಧಿಯಲ್ಲಿ ಬಂದುಬಿಡುವುದೆಂದು ತಂದೆಯು ತಿಳಿಸುತ್ತಾರೆ. ನಿಮ್ಮದು ಮುಖ್ಯವಾದದ್ದು ಗೀತೆಯಾಗಿದೆ.
ಗೀತೆಯಲ್ಲಿಯೇ ಭಗವಂತನ ಜ್ಞಾನವಿದೆ. ಈಗ ಇವು ಹೊಸ ಮಾತುಗಳಾಗಿವೆ. ಯಾವಾಗಲೂ ಹೊಸ ಮಾತಿನ ಮೇಲೆ
ಹೆಚ್ಚಿನ ಗಮನ ಕೊಡುತ್ತಾರೆ, ಇದು ಬಹಳ ಸಹಜ ಮಾತಾಗಿದೆ. ಎಲ್ಲದಕ್ಕಿಂತ ದೊಡ್ಡ ಮಾತು ನೆನಪು
ಮಾಡುವುದಾಗಿದೆ. ಮನ್ಮನಾಭವ ಎಂದು ಪದೇ-ಪದೇ ಹೇಳಬೇಕಾಗುತ್ತದೆ ಏಕೆಂದರೆ ತಂದೆಯನ್ನು ನೆನಪು ಮಾಡಿ
ಎಂಬುದು ಬಹಳ ಗುಹ್ಯವಾದ ಮಾತುಗಳಾಗಿವೆ, ಇದರಲ್ಲಿಯೇ ಬಹಳ ವಿಘ್ನಗಳು ಬರುತ್ತವೆ. ಇಂತಹ ಅನೇಕ
ಮಕ್ಕಳಿದ್ದಾರೆ ಇಡೀ ದಿನದಲ್ಲಿ ಎರಡು ನಿಮಿಷವೂ ನೆನಪು ಮಾಡುವುದಿಲ್ಲ. ತಂದೆಯ ಮಗುವಾಗಿಯೂ ಒಳ್ಳೆಯ
ಕರ್ಮ ಮಾಡುವುದಿಲ್ಲ ಆದ್ದರಿಂದ ನೆನಪೂ ಮಾಡುವುದಿಲ್ಲ. ವಿಕರ್ಮ ಮಾಡುತ್ತಿರುತ್ತಾರೆ, ಬುದ್ಧಿಯಲ್ಲಿ
ಕುಳಿತುಕೊಳ್ಳುವುದೇ ಇಲ್ಲವೆಂದರೆ ಇವರು ತಂದೆಯ ಆಜ್ಞಾಪಾಲಕರಲ್ಲ, ಓದುವುದಿಲ್ಲ ಎಂದು
ಹೇಳಲಾಗುತ್ತದೆ. ಅಂತಹವರಿಗೆ ಶಕ್ತಿಯು ಸಿಗುವುದಿಲ್ಲ. ಲೌಕಿಕ ವಿದ್ಯೆಯಿಂದಲೂ ಬಲ
ಸಿಗುತ್ತದೆಯಲ್ಲವೆ, ವಿದ್ಯೆಯು ಆದಾಯದ ಮೂಲವಾಗಿದೆ. ಶರೀರ ನಿರ್ವಹಣೆಯಾಗುತ್ತದೆಯೆಂದರೂ ಸಹ
ಅಲ್ಪಕಾಲಕ್ಕಾಗಿ ಮಾತ್ರ. ಕೆಲವರು ಓದುತ್ತಾ-ಓದುತ್ತಾ ಶರೀರಬಿಡುತ್ತಾರೆಂದರೆ ಅವರು ವಿದ್ಯೆಯನ್ನು
ಜೊತೆಗೆ ತೆಗೆದುಕೊಂಡು ಹೋಗುವುದಿಲ್ಲ. ಇನ್ನೊಂದು ಜನ್ಮ ಪಡೆದ ನಂತರ ಮತ್ತೆ ಹೊಸದಾಗಿ ಓದಬೇಕಾಗಿದೆ.
ಇಲ್ಲಂತೂ ನೀವು ಎಷ್ಟು ಓದುತ್ತೀರೋ ಅಷ್ಟು ಅದನ್ನು ಜೊತೆಗೆ ತೆಗೆದುಕೊಂಡು ಹೋಗುತ್ತೀರಿ. ನೀವು
ಪ್ರಾಲಬ್ಧವನ್ನು ಇನ್ನೊಂದು ಜನ್ಮದಲ್ಲಿ ಪಡೆಯುತ್ತೀರಿ, ಉಳಿದಂತೆ ಅದೆಲ್ಲವೂ ಭಕ್ತಿಮಾರ್ಗವಾಗಿದೆ.
ಏನೇನಿದೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಆತ್ಮಿಕ ತಂದೆಯು ಕುಳಿತು ನೀವಾತ್ಮಗಳಿಗೆ
ಜ್ಞಾನವನ್ನು ಕೊಡುತ್ತಾರೆ. ಒಂದೇಬಾರಿ ಪರಮಾತ್ಮನು ಬಂದು ಆತ್ಮಗಳಿಗೆ ಜ್ಞಾನವನ್ನು ತಿಳಿಸುತ್ತಾರೆ
ಇದರಿಂದ ವಿಶ್ವದ ಮಾಲೀಕರಾಗಿಬಿಡುತ್ತೀರಿ. ಭಕ್ತಿಮಾರ್ಗದಲ್ಲಿ ಸ್ವರ್ಗವಿರುವುದಿಲ್ಲ. ಈಗ ನೀವು
ಮಾಲೀಕನ ಮಕ್ಕಳಾಗುತ್ತೀರಿ, ಮಾಯೆಯು ಕೆಲವು ಮಕ್ಕಳನ್ನೂ ಸಹ ನಿರ್ಧನಿಕರನ್ನಾಗಿ ಮಾಡಿಬಿಡುತ್ತದೆ.
ಚಿಕ್ಕ-ಚಿಕ್ಕ ಮಾತುಗಳಲ್ಲಿ ಪರಸ್ಪರ ಜಗಳವಾಡುತ್ತಾರೆ. ತಂದೆಯ ನೆನಪಿನಲ್ಲಿರುವುದಿಲ್ಲವೆಂದರೆ
ನಿರ್ಧನಿಕರಾದರಲ್ಲವೆ. ನಿರ್ಧನಿಕರಾದರೆಂದರೆ ಯಾವುದಾದರೊಂದು ಪಾಪಕರ್ಮಗಳನ್ನು ಮಾಡುತ್ತಾರೆ.
ತಂದೆಯು ತಿಳಿಸುತ್ತಾರೆ - ನನ್ನವರಾಗಿಯೂ ನನ್ನ ಹೆಸರಿಗೆ ಕಳಂಕ ತರಬೇಡಿ. ಪರಸ್ಪರ ಪ್ರೀತಿಯಿಂದ
ನಡೆದುಕೊಳ್ಳಿ. ಉಲ್ಟಾ-ಸುಲ್ಟಾ ಮಾತನಾಡಬೇಡಿ.
ತಂದೆಯು ಇಂತಹ ಅಹಲ್ಯೆಯರು,
ಕುಬ್ಜೆಯರು, ಬಿಲ್ಲನಿಯರ (ಕಾಡುಜನರು), ಉದ್ಧಾರವನ್ನೂ ಮಾಡಬೇಕಾಗುತ್ತದೆ. ಭಗವಂತ ಬಿಲ್ಲನಿಯ
ಬೋರೆಹಣ್ಣನ್ನು ತಿಂದರೆಂದು ಹೇಳುತ್ತಾರೆ ಅಂದರೆ ಈ ರೀತಿ ತಿನ್ನಲು ಸಾಧ್ಯವಿಲ್ಲ. ಯಾವಾಗ ಅಂತಹವರೂ
ಸಹ ಬ್ರಾಹ್ಮಿಣಿಯಾಗಿಬಿಡುತ್ತಾರೆ. ಆಗ ಏಕೆ ತಿನ್ನುವುದಿಲ್ಲ ಆದ್ದರಿಂದ ಬ್ರಹ್ಮಾಭೋಜನದ ಮಹಿಮೆಯಿದೆ.
ಶಿವತಂದೆಯಂತೂ ತಿನ್ನುವುದಿಲ್ಲ, ಅವರು ಅಭೋಕ್ತನಾಗಿದ್ದಾರೆ, ಉಳಿದಂತೆ ಈ ರಥವು (ಬ್ರಹ್ಮಾ)
ತಿನ್ನುತ್ತಾರಲ್ಲವೆ. ನೀವು ಮಕ್ಕಳು ಯಾರೊಂದಿಗೆ ವಾದಿಸುವ ಅವಶ್ಯಕತೆಯಿಲ್ಲ. ಯಾವಾಗಲೂ ತಮ್ಮನ್ನು
ಸುರಕ್ಷಿತವಾಗಿಟ್ಟುಕೊಳ್ಳಬೇಕು. ಎರಡೇ ಶಬ್ಧಗಳನ್ನು ತಿಳಿಸಿ - ಶಿವತಂದೆಯು ತಿಳಿಸುತ್ತಾರೆ.
ಶಿವತಂದೆಯನ್ನೇ ರುದ್ರನೆಂದು ಕರೆಯಲಾಗುತ್ತದೆ. ರುದ್ರಜ್ಞಾನಯಜ್ಞದಿಂದ ವಿನಾಶ ಜ್ವಾಲೆಯು
ಬಂದಿತೆಂದರೆ ರುದ್ರನು ಭಗವಂತನಾದರಲ್ಲವೆ. ಕೃಷ್ಣನಿಗೆ ಭಗವಂತನೆಂದು ಹೇಳುವುದಿಲ್ಲ, ವಿನಾಶವನ್ನೂ
ಸಹ ಕೃಷ್ಣನು ಮಾಡಿಸುವುದಿಲ್ಲ, ತಂದೆಯೇ ಸ್ಥಾಪನೆ, ವಿನಾಶ, ಪಾಲನೆ ಮಾಡಿಸುತ್ತಾರೆ, ತಾವು
ಮಾಡುವುದಿಲ್ಲ. ಇಲ್ಲವೆಂದರೆ ಅವರು ಮಾಡಿ-ಮಾಡಿಸುವವರು ಎಂಬುದು ಹೊರಟುಹೋಗುತ್ತದೆ. ಅವರು
ಮಾಡಿ-ಮಾಡಿಸುವವರಾಗಿದ್ದರೆ, ತಿಳಿಸುತ್ತಾರೆ - ನಾನೇನು ವಿನಾಶ ಮಾಡಿ ಎಂದು ಹೇಳುವುದಿಲ್ಲ,
ಇದೆಲ್ಲವೂ ನಾಟಕದಲ್ಲಿ ನಿಗಧಿಯಾಗಿದೆ, ಶಂಕರನೇನಾದರೂ ಮಾಡುತ್ತಾರೆಯೇ? ಏನೂ ಇಲ್ಲ. ಶಂಕರನ ಮೂಲಕ
ವಿನಾಶವೆಂದು ಕೇವಲ ಗಾಯನವಿದೆ ಆದರೆ ವಿನಾಶವನ್ನು ತಮಗೆ ತಾವೇ ಮಾಡಿಕೊಳ್ಳುತ್ತಿದ್ದಾರೆ. ಇದು
ಅನಾದಿಯಾಗಿ ಮಾಡಲ್ಪಟ್ಟಿರುವ ನಾಟಕವಾಗಿದೆ, ಯಾವುದನ್ನು ತಿಳಿಸಲಾಗುತ್ತದೆ. ರಚಯಿತ ತಂದೆಯನ್ನೇ
ಎಲ್ಲರೂ ಮರೆತುಹೋಗುತ್ತಾರೆ. ಭಗವಂತ ರಚಯಿತನಾಗಿದ್ದಾರೆಂದು ಹೇಳುತ್ತಾರೆ ಆದರೆ ಅವರನ್ನು
ತಿಳಿದುಕೊಂಡೇ ಇಲ್ಲ. ಅವರು ಪ್ರಪಂಚವನ್ನು ರಚಿಸುತ್ತಾರೆಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ
- ನಾನೇನೂ ರಚನೆ ಮಾಡುವುದಿಲ್ಲ, ಕೇವಲ ಪರಿವರ್ತನೆ ಮಾಡುತ್ತೇನೆ. ಕಲಿಯುಗವನ್ನು ಸತ್ಯಯುಗವನ್ನಾಗಿ
ಮಾಡುತ್ತೇನೆ. ನಾನು ಸಂಗಮಯುಗದಲ್ಲಿಯೇ ಬರುತ್ತೇನೆ, ಇದಕ್ಕೆ ಸುಪ್ರೀಂ ಆಸ್ಪಿಷಿಸಿಯಸ್ (ಕಲ್ಯಾಣಕಾರಿ
ಸಂಗಮಯುಗ) ಯುಗವೆಂದು ಗಾಯನವಿದೆ. ಭಗವಂತನು ಕಲ್ಯಾಣಕಾರಿಯಾಗಿದ್ದಾರೆ, ಎಲ್ಲರ ಕಲ್ಯಾಣ ಮಾಡುತ್ತಾರೆ
ಆದರೆ ಹೇಗೆ ಮತ್ತು ಯಾವ ಕಲ್ಯಾಣ ಮಾಡುತ್ತಾರೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ.
ಆಂಗ್ಲಭಾಷೆಯಲ್ಲಿ ಲಿಬರೇಟರ್, ಗೈಡ್ ಎಂದು ಹೇಳುತ್ತಾರೆ ಆದರೆ ಅದರ ಅರ್ಥವನ್ನು ತಿಳಿದುಕೊಂಡಿಲ್ಲ.
ಭಕ್ತಿಯ ನಂತರ ಭಗವಂತ ಸಿಗುವರು, ಸದ್ಗತಿಯು ಸಿಗುವುದೆಂದು ಹೇಳುತ್ತಾರೆ, ಸರ್ವರ ಸದ್ಗತಿಯನ್ನು
ಯಾವುದೇ ಮನುಷ್ಯರು ಮಾಡಲು ಸಾಧ್ಯವಿಲ್ಲ. ಇಲ್ಲವೆಂದರೆ ಪರಮಾತ್ಮನಿಗೆ ಪತಿತ-ಪಾವನಿ, ಸರ್ವರ
ಸದ್ಗತಿದಾತ ಎಂದು ಏಕೆ ಗಾಯನವಿರುತ್ತಿತ್ತು? ತಂದೆಯನ್ನು ಯಾರೂ ತಿಳಿದುಕೊಂಡಿಲ್ಲ.
ನಿರ್ಧನಿಕನಾಗಿದ್ದಾರಲ್ಲವೆ. ತಂದೆಯೊಂದಿಗೆ ವಿಪರೀತ ಬುದ್ಧಿಯಿದೆ, ಈಗ ತಂದೆ ಏನು ಮಾಡಲಾಗುವುದು?
ತಂದೆಯಂತೂ ಮಾಲೀಕನಾಗಿದ್ದಾರೆ, ಅವರ ಶಿವಜಯಂತಿಯನ್ನೂ ಸಹ ಭಾರತದಲ್ಲಿಯೇ ಆಚರಿಸುತ್ತಾರೆ. ತಂದೆಯು
ತಿಳಿಸುತ್ತಾರೆ - ನಾನು ಭಕ್ತರಿಗೆ ಫಲವನ್ನು ಕೊಡಲು ಬರುತ್ತೇನೆ. ಭಾರತದಲ್ಲಿಯೇ ಬರುತ್ತೇನೆ, ನಾನು
ಬರುವುದಕ್ಕಾಗಿ ಶರೀರವಂತೂ ಬೇಕಲ್ಲವೆ. ಪ್ರೇರಣೆಯಿಂದ ಏನೂ ಆಗುವುದಿಲ್ಲ, ಇವರಲ್ಲಿ ಪ್ರವೇಶ ಮಾಡಿ
ಇವರ ಮುಖದ ಮೂಲಕ ಜ್ಞಾನವನ್ನು ತಿಳಿಸುತ್ತೇನೆ, ಗೋಮುಖದ ಮಾತಿಲ್ಲ. ಇದು ಈ ಮುಖದ ಮಾತಾಗಿದೆ. ಮುಖವು
ಮನುಷ್ಯನದೇ ಬೇಕು, ಪ್ರಾಣಿಯದಲ್ಲ. ಮನುಷ್ಯರ ಬುದ್ಧಿಯು ಇಷ್ಟೂ ಕೆಲಸ ಮಾಡುವುದಿಲ್ಲ. ಇನ್ನೊಂದು
ಕಡೆ ಭಗೀರಥನೆಂದು ತೋರಿಸುತ್ತಾರೆ. ಭಗೀರಥನು ಹೇಗೆ ಮತ್ತು ಯಾವಾಗ ಬರುತ್ತಾನೆ ಎಂಬುದು ಯಾರಿಗೂ
ತಿಳಿದಿಲ್ಲ ಆದ್ದರಿಂದ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ನೀವು ಪ್ರಪಂಚದಿಂದ ಸತ್ತಿದ್ದೀರಿ
ಆದ್ದರಿಂದ ಭಕ್ತಿಮಾರ್ಗವನ್ನು ಒಮ್ಮೆಲೆ ಮರೆತುಹೋಗಿ. ಶಿವಭಗವಾನುವಾಚ, ನನ್ನನ್ನು ನೆನಪು ಮಾಡಿದರೆ
ವಿಕರ್ಮಗಳು ವಿನಾಶವಾಗುತ್ತದೆ, ನಾನೇ ಪತಿತ-ಪಾವನನಾಗಿದ್ದೇನೆ. ನೀವು ಪವಿತ್ರರಾಗಿಬಿಟ್ಟರೆ
ಎಲ್ಲರನ್ನೂ ಕರೆದುಕೊಂಡು ಹೋಗುತ್ತೇನೆ. ಮನೆ-ಮನೆಯಲ್ಲಿ ಸಂದೇಶ ಕೊಡಿ. ತಂದೆಯು ತಿಳಿಸುತ್ತಾರೆ -
ನನ್ನನ್ನು ನೆನಪು ಮಾಡುವುದರಿಂದ ವಿಕರ್ಮಗಳು ವಿನಾಶವಾಗುತ್ತವೆ, ನೀವು ಪವಿತ್ರರಾಗಿಬಿಡುತ್ತೀರಿ.
ವಿನಾಶವು ಸನ್ಮುಖದಲ್ಲಿ ನಿಂತಿದೆ, ಹೇ ಪತಿತ-ಪಾವನ ಬನ್ನಿ, ಪತಿತರನ್ನು ಪಾವನ ಮಾಡಿ,
ರಾಮರಾಜ್ಯವನ್ನು ಸ್ಥಾಪನೆ ಮಾಡಿ, ರಾವಣರಾಜ್ಯದಿಂದ ಬಿಡಿಸಿ ಎಂದೇ ನೀವು ಕರೆಯುತ್ತೀರಿ. ಅವರು
ಪ್ರತಿಯೊಬ್ಬರೂ ತನಗಾಗಿ ಪ್ರಯತ್ನಪಡುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಬಂದು ಸರ್ವರನ್ನು
ಮುಕ್ತಗೊಳಿಸುತ್ತೇನೆ. ಎಲ್ಲರೂ ಪಂಚವಿಕಾರರೂಪಿ ರಾವಣನ ಜೈಲಿನಲ್ಲಿ ಬಿದ್ದಿದ್ದಾರೆ. ನಾನು ಸರ್ವರ
ಸದ್ಗತಿ ಮಾಡುತ್ತೇನೆ. ನನಗೆ ದುಃಖಹರ್ತ-ಸುಖಕರ್ತನೆಂದು ಹೇಳುತ್ತಾರೆ. ರಾಮರಾಜ್ಯವಂತೂ ಅವಶ್ಯವಾಗಿ
ಹೊಸಪ್ರಪಂಚದಲ್ಲಿಯೇ ಇರುವುದು.
ನೀವು ಪಾಂಡವರದು ಈಗ
ಪ್ರೀತಿಬುದ್ಧಿಯಿದೆ, ಕೆಲವರಿಗಂತೂ ಬಹುಬೇಗನೆ ಪ್ರೀತಿಬುದ್ಧಿಯುಂಟಾಗಿಬಿಡುತ್ತದೆ. ಇನ್ನೂ ಕೆಲವರದು
ನಿಧಾನ-ನಿಧಾನವಾಗಿ ಪ್ರೀತಿಯು ಬೆಳೆಯುತ್ತದೆ. ಕೆಲವರಂತೂ ನಾವು ಎಲ್ಲವನ್ನೂ ತಂದೆಗೆ ಸಮರ್ಪಣೆ
ಮಾಡುತ್ತೇವೆ, ಅವರೊಬ್ಬರ ವಿನಃ ಬೇರೆ ಯಾರೂ ಇಲ್ಲವೇ ಇಲ್ಲ, ಎಲ್ಲರ ಆಶ್ರಯದಾತ ಒಬ್ಬ ಭಗವಂತನೇ
ಆಗಿದ್ದಾರೆಂದು ಹೇಳುತ್ತಾರೆ, ಇದು ಎಷ್ಟು ಸಹಜಕ್ಕಿಂತ ಸಹಜಮಾತಾಗಿದೆ. ತಂದೆಯನ್ನು ಮತ್ತು
ಚಕ್ರವನ್ನು ನೆನಪು ಮಾಡಿ ಆಗ ಚಕ್ರವರ್ತಿ ರಾಜ-ರಾಣಿಯರಾಗುತ್ತೀರಿ. ವಿಶ್ವದ ಮಾಲೀಕರಾಗುವ
ಶಾಲೆಯಾಗಿದೆ, ಇದರಿಂದಲೇ ಚಕ್ರವರ್ತಿ ರಾಜ ಎಂಬ ಹೆಸರು ಬಂದಿದೆ. ಚಕ್ರವನ್ನು
ಅರಿತುಕೊಳ್ಳುವುದರಿಂದ ಚಕ್ರವರ್ತಿಗಳಾಗುತ್ತೀರಿ, ಇದನ್ನು ತಂದೆಯೇ ತಿಳಿಸುತ್ತಾರೆ, ಮತ್ತೇನನ್ನೂ
ವಾದ ಮಾಡಬಾರದು. ತಿಳಿಸಿ, ಭಕ್ತಿಮಾರ್ಗದ ಎಲ್ಲಾ ಮಾತುಗಳನ್ನು ಬಿಡಿ, ಕೇವಲ ನನ್ನನ್ನು ನೆನಪು ಮಾಡಿ
ಎಂದು ತಿಳಿಸುತ್ತಾರೆ. ಮೂಲಮಾತೇ ಇದಾಗಿದೆ. ಯಾರು ತೀವ್ರಪುರುಷಾರ್ಥದಲ್ಲಿದ್ದಾರೆಯೋ ಅವರು
ವಿದ್ಯಾಭ್ಯಾಸದಲ್ಲಿ ತೊಡಗಿಬಿಡುತ್ತಾರೆ. ಯಾರಿಗೆ ವಿದ್ಯೆಯ ಉಮ್ಮಂಗವಿರುವುದೋ ಅವರು ಮುಂಜಾನೆ
ಎದ್ದು ವಿದ್ಯಾಭ್ಯಾಸ ಮಾಡುತ್ತಾರೆ. ಭಕ್ತರೂ ಸಹ ಮುಂಜಾನೆಯೇ ಏಳುತ್ತಾರೆ, ಎಷ್ಟೊಂದು ನೌಧಾಭಕ್ತಿ
ಮಾಡುತ್ತಾರೆ. ಯಾವಾಗ ತಲೆಯನ್ನು ಕತ್ತರಿಸಲು ತಯಾರಾಗಿಬಿಡುವರೋ ಆಗ ಸಾಕ್ಷಾತ್ಕಾರವಾಗಿಬಿಡುವುದು.
ಇಲ್ಲಂತೂ ತಂದೆಯು ತಿಳಿಸುತ್ತಾರೆ, ಈ ಸಾಕ್ಷಾತ್ಕಾರವೂ ನಷ್ಟದಾಯಕವಾಗಿದೆ. ಸಾಕ್ಷಾತ್ಕಾರದಲ್ಲಿ
ಹೋಗುವುದರಿಂದ ಯೋಗ ಮತ್ತು ವಿದ್ಯೆ ಎರಡೂ ನಿಂತುಹೋಗುತ್ತದೆ, ಸಮಯವು ವ್ಯರ್ಥವಾಗಿಬಿಡುತ್ತದೆ.
ಆದ್ದರಿಂದ ಧ್ಯಾನದಲ್ಲಿ ಹೋಗುವ ಆಸಕ್ತಿಯನ್ನಿಟ್ಟುಕೊಳ್ಳಬಾರದು. ಇದು ಸಹ ದೊಡ್ಡ ಖಾಯಿಲೆಯಾಗಿದೆ
ಯಾವುದರಲ್ಲಿ ಮಾಯೆಯ ಪ್ರವೇಶತೆಯಾಗಿದೆ. ಹೇಗೆ ಯುದ್ಧದ ಸಮಯದಲ್ಲಿ ಸಮಾಚಾರವನ್ನು ತಿಳಿಸುವಾಗ
ಮಧ್ಯದಲ್ಲಿ ಏನಾದರೂ ಅಂಥಹ ಅಡಚಣೆಗಳನ್ನು ಮಾಡುತ್ತಾರೆ, ಅದರಿಂದ ಯಾರು ಏನೂ
ಕೇಳಿಸಿಕೊಳ್ಳುವಂತಾಗಬಾರದು. ಮಾಯೆಯೂ ಸಹ ಅನೇಕರಿಗೆ ವಿಘ್ನ ಹಾಕುತ್ತದೆ, ತಂದೆಯನ್ನು ನೆನಪು ಮಾಡಲು
ಬಿಡುವುದಿಲ್ಲ. ಇವರ ಅದೃಷ್ಟದಲ್ಲಿ ವಿಘ್ನವಿದೆ ಎಂದು ತಿಳಿಯಲಾಗುತ್ತದೆ. ಮಾಯೆಯ ಪ್ರವೇಶತೆಯಂತೂ
ಆಗಿಲ್ಲತಾನೆ ಎಂದು ನೋಡಲಾಗುತ್ತದೆ. ಒಂದುವೇಳೆ ನಿಯಮಕ್ಕೆ ವಿರುದ್ಧವಾಗಿ ಮಾತನಾಡಲು
ತೊಡಗುತ್ತಾರೆಂದರೆ ತಂದೆಯು ತಕ್ಷಣ ಅವರನ್ನು ಧ್ಯಾನದಿಂದ ಕೆಳಗಿಳಿಸಿಬಿಡುತ್ತಾರೆ. ನಮಗೆ ಕೇವಲ
ಸಾಕ್ಷಾತ್ಕಾರವಾದರೆ ಸಾಕು, ಹಣ-ಸಂಪತ್ತೆಲ್ಲವನ್ನೂ ನಾವು ನಿಮಗೆ ಕೊಟ್ಟುಬಿಡುತ್ತೇವೆ ಎಂದು ಬಹಳ
ಮಂದಿ ಹೇಳುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ - ನೀವಿದನ್ನು ತಮ್ಮ ಬಳಿಯೇ ಇಟ್ಟುಕೊಳ್ಳಿ.
ಭಗವಂತನಿಗೆ ನಿಮ್ಮ ಹಣದ ಅವಶ್ಯಕತೆಯಾದರೂ ಏನಿದೆ? ತಂದೆಗಂತೂ ಗೊತ್ತಿದೆ, ಈ ಹಳೆಯ ಪ್ರಪಂಚದಲ್ಲಿ
ಏನೆಲ್ಲವೂ ಇದೆಯೋ ಅದೆಲ್ಲವೂ ಭಸ್ಮವಾಗಿಬಿಡುವುದು. ತಂದೆಯೇನು ಮಾಡುತ್ತಾರೆ? ತಂದೆಯ ಬಳಿಯಂತೂ
ಹನಿ-ಹನಿಯಿಂದ ಹಳ್ಳವಾಗಿಬಿಡುತ್ತದೆ. ತಂದೆಯ ಆದೇಶದಂತೆ ನಡೆಯಿರಿ, ಈ ಈಶ್ವರೀಯ
ವಿಶ್ವವಿದ್ಯಾಲಯವನ್ನು ತೆರೆಯಿರಿ. ಅಲ್ಲಿ ಯಾರಾದರೂ ಬಂದು ವಿಶ್ವದ ಮಾಲೀಕರಾಗುವ ವಿದ್ಯೆಯನ್ನು
ಓದಲಿ. ಮೂರುಹೆಜ್ಜೆಗಳ ಭೂಮಿಯಲ್ಲಿ ಕುಳಿತು ನೀವು ಮನುಷ್ಯರನ್ನು ನರನಿಂದ ನಾರಾಯಣನನ್ನಾಗಿ
ಮಾಡಬೇಕಾಗಿದೆ ಆದರೆ ಮೂರುಹೆಜ್ಜೆಗಳಷ್ಟು ಭೂಮಿಯೂ ಸಿಗುವುದಿಲ್ಲ. ತಂದೆಯು ತಿಳಿಸುತ್ತಾರೆ - ನಾನು
ನಿಮಗೆ ಎಲ್ಲಾ ವೇದಶಾಸ್ತ್ರಗಳ ಸಾರವನ್ನು ತಿಳಿಸುತ್ತೇನೆ. ಇದೆಲ್ಲವೂ ಭಕ್ತಿಮಾರ್ಗದ
ಶಾಸ್ತ್ರಗಳಾಗಿವೆ. ತಂದೆಯು ಯಾರ ನಿಂದನೆಯನ್ನೂ ಮಾಡುವುದಿಲ್ಲ. ಈ ಆಟವು ಮಾಡಲ್ಪಟ್ಟಿದೆ. ಇದನ್ನು
ಕೇವಲ ತಿಳಿಸುವುದಕ್ಕಾಗಿ ಹೇಳಲಾಗುತ್ತದೆ ಆದರೂ ಸಹ ವಾಸ್ತವಿಕವಾಗಿ ಇದು ಆಟವಾಗಿದೆಯಲ್ಲವೆ. ನಾವು
ಆಟದ ನಿಂದನೆ ಮಾಡುವಂತಿಲ್ಲ. ನಾವು ಜ್ಞಾನಸೂರ್ಯ, ಜ್ಞಾನಚಂದ್ರಮನೆಂದು ಹೇಳುತ್ತೇವೆ, ಅದಕ್ಕೆ ಅವರು
ಚಂದ್ರಗ್ರಹದಲ್ಲಿ ಹೋಗಿ ಹುಡುಕುತ್ತಾರೆ. ಅಲ್ಲಿ ಯಾವುದಾದರೂ ರಾಜ್ಯವನ್ನು ಇಡಲಾಗಿದೆಯೇ? ಜಪಾನಿಯರು
ಸೂರ್ಯನನ್ನು ಒಪ್ಪುತ್ತಾರೆ. ನಾವು ಸೂರ್ಯವಂಶಿಯರೆಂದು ಹೇಳುತ್ತೇವೆ ಅದಕ್ಕೆ ಅವರು ಕುಳಿತು
ಸೂರ್ಯನ ಪೂಜೆ ಮಾಡುತ್ತಾರೆ. ಸೂರ್ಯನಿಗೆ ಜಲಾರ್ಪಣೆ ಮಾಡುತ್ತಾರೆ. ಅಂದಾಗ ತಂದೆಯು ಮಕ್ಕಳಿಗೆ
ತಿಳಿಸಿದ್ದಾರೆ ಯಾವುದೇ ಮಾತಿನಲ್ಲಿ ಹೆಚ್ಚಿನದಾಗಿ ವಾದ ಮಾಡಬಾರದು. ಒಂದೇ ಮಾತನ್ನು ತಿಳಿಸಿ,
ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ ಆಗ ಪಾವನರಾಗುತ್ತೀರಿ. ಈಗ
ರಾವಣರಾಜ್ಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ ಆದರೆ ತಮ್ಮನ್ನು ಪತಿತರೆಂದು ಒಪ್ಪಿಕೊಳ್ಳುತ್ತಾರೆಯೇ?
ಮಕ್ಕಳೇ, ನಿಮ್ಮ ಒಂದು
ಕಣ್ಣಿನಲ್ಲಿ ಶಾಂತಿಧಾಮ, ಇನ್ನೊಂದು ಕಣ್ಣಿನಲ್ಲಿ ಸುಖಧಾಮ ಬಾಕಿ ಈ ದುಃಖಧಾಮವನ್ನು ಮರೆತುಹೋಗಿ.
ನೀವು ಚೈತನ್ಯ ಲೈಟ್ಹೌಸ್ (ಪ್ರಕಾಶಗೃಹ) ಆಗಿದ್ದೀರಿ. ಈಗ ಪ್ರದರ್ಶನಿಗೂ ಸಹ ಹೆಸರಿಟ್ಟಿದ್ದಾರೆ -
ಭಾರತ್ ದಿ ಲೈಟ್ಹೌಸ್...... (ಭಾರತವು ಪ್ರಕಾಶಗೃಹ) ಆದರೆ ಅದನ್ನು ಕೆಲವರೇ ತಿಳಿದುಕೊಳ್ಳುತ್ತಾರೆ.
ನೀವೀಗ ಲೈಟ್ಹೌಸ್ ಆಗಿದ್ದೀರಲ್ಲವೆ. ಬಂದರಿನಲ್ಲಿ (ಹಡಗು ನಿಲ್ಲುವ ಸ್ಥಳ) ಸ್ಟೀಮರ್ಗೆ ಲೈಟ್ಹೌಸ್
ಮಾರ್ಗವನ್ನು ತಿಳಿಸುತ್ತದೆ. ನೀವೂ ಸಹ ಎಲ್ಲರಿಗೂ ಮುಕ್ತಿ-ಜೀವನ್ಮುಕ್ತಿಯ ಮಾರ್ಗವನ್ನು
ತೋರಿಸುತ್ತೀರಿ. ಯಾವಾಗ ಯಾರಾದರೂ ಪ್ರದರ್ಶನಿಯಲ್ಲಿ ಬರುತ್ತಾರೆಂದರೆ ಬಹಳ ಪ್ರೀತಿಯಿಂದ ಹೇಳಿ -
ಪರಮಪಿತನಂತೂ ಎಲ್ಲರಿಗೂ ಒಬ್ಬರೇ ಅಲ್ಲವೆ. ಗಾಡ್ ಫಾದರ್ ಅಥವಾ ಪರಮಪಿತ ಹೇಳುತ್ತಾರೆ - ನನ್ನನ್ನು
ನೆನಪು ಮಾಡಿ ಆಗ ಅವಶ್ಯವಾಗಿ ಮುಖದ ಮೂಲಕ ಹೇಳುತ್ತಾರಲ್ಲವೆ. ಬ್ರಹ್ಮನ ಮೂಲಕ ಸ್ಥಾಪನೆ, ನಾವೆಲ್ಲರೂ
ಬ್ರಹ್ಮಮುಖವಂಶಾವಳಿ ಬ್ರಾಹ್ಮಣ-ಬ್ರಾಹ್ಮಿಣಿಯರಾಗಿದ್ದೀರಿ. ನೀವು ಬ್ರಾಹ್ಮಣರಿಗೆ ಆ ಬ್ರಾಹ್ಮಣರೂ
ಸಹ ಬ್ರಾಹ್ಮಣ ದೇವತಾಯ ನಮಃ ಎಂದು ಮಹಿಮೆ ಹಾಡುತ್ತಾರೆ. ಶ್ರೇಷ್ಠಾತಿ ಶ್ರೇಷ್ಠ ಒಬ್ಬ ತಂದೆಯೇ
ಆಗಿದ್ದಾರೆ. ನಾನು ನಿಮಗೆ ಶ್ರೇಷ್ಠಾತಿ ಶ್ರೇಷ್ಠ ರಾಜಯೋಗವನ್ನು ಕಲಿಸುತ್ತೇನೆ, ಅದರಿಂದ ನೀವು ಇಡೀ
ವಿಶ್ವದ ಮಾಲೀಕರಾಗುತ್ತೀರಿ ಎಂದು ಆ ತಂದೆಯೇ ಹೇಳುತ್ತಾರೆ. ಆ ರಾಜ್ಯಭಾಗ್ಯವನ್ನು ನಿಮ್ಮಿಂದ ಯಾರೂ
ಕಸಿಯಲು ಸಾಧ್ಯವಿಲ್ಲ. ವಿಶ್ವದಲ್ಲಿ ಭಾರತದ ರಾಜ್ಯವಿತ್ತು. ಭಾರತದ್ದು ಎಷ್ಟೊಂದು ಮಹಿಮೆಯಿದೆ!
ನಾವು ಶ್ರೀಮತದಂತೆ ಈ ರಾಜ್ಯಸ್ಥಾಪನೆ ಮಾಡುತ್ತಿದ್ದೇವೆಂದು ನೀವು ತಿಳಿದುಕೊಂಡಿದ್ದೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ತೀವ್ರಪುರುಷಾರ್ಥಿಗಳಾಗಲು ವಿದ್ಯೆಯ ಮೇಲೆ ಆಸಕ್ತಿಯನ್ನಿಟ್ಟುಕೊಂಡಿರಬೇಕು. ಬೆಳಗ್ಗೆ-ಬೆಳಗ್ಗೆ
ಎದ್ದು ವಿದ್ಯೆಯನ್ನು ಓದಬೇಕಾಗಿದೆ. ಸಾಕ್ಷಾತ್ಕಾರದ ಆಸೆಯನ್ನಿಟ್ಟುಕೊಳ್ಳಬಾರದು, ಇದರಲ್ಲಿಯೂ ಸಹ
ಸಮಯವು ವ್ಯರ್ಥವಾಗಿಬಿಡುತ್ತದೆ.
2. ಶಾಂತಿಧಾಮ ಮತ್ತು
ಸುಖಧಾಮವನ್ನು ನೆನಪು ಮಾಡಬೇಕಾಗಿದೆ, ಈ ದುಃಖಧಾಮವನ್ನು ಮರೆತುಹೋಗಬೇಕಾಗಿದೆ. ಯಾರಿಗೂ ಸಹ
ವಾದ-ವಿವಾದ ಮಾಡಬಾರದು, ಪ್ರೀತಿಯಿಂದ ಮುಕ್ತಿ-ಜೀವನ್ಮುಕ್ತಿಯ ಮಾರ್ಗವನ್ನು ತಿಳಿಸಬೇಕಾಗಿದೆ.
ವರದಾನ:
ಸದಾ ಸುಖದ
ಸಾಗರನಲ್ಲಿ ಲವಲೀನರಾಗಿರುವಂತಹ ಅಂತರ್ಮುಖಿ ಭವ
ಅಂತರ್ಮುಖಿ ಸದಾ ಸುಖಿ
ಎಂದು ಹೇಳಲಾಗುತ್ತದೆ. ಯಾವ ಮಕ್ಕಳು ಸದಾ ಅಂತರ್ಮುಖಿ ಭವದ ವರದಾನ ಪ್ರಾಪ್ತಿ ಮಾಡಿಕೊಳ್ಳುತ್ತಾರೆ
ಅವರು ತಂದೆಯ ಸಮಾನ ಸದಾ ಸುಖದ ಸಾಗರನಲ್ಲಿ ಲವಲೀನರಾಗಿರುತ್ತಾರೆ. ಸುಖದಾತನ ಮಕ್ಕಳು ಸ್ವಯಂಕೂಡ
ಸುಖದಾತ ಆಗಿಬಿಡುತ್ತಾರೆ. ಸರ್ವ ಆತ್ಮಗಳಿಗೆ ಸುಖದ ಖಜಾನೆಯನ್ನೇ ಹಂಚುತ್ತಾರೆ. ಈಗ ಅಂತರ್ಮುಖಿಯಾಗಿ
ಈ ರೀತಿ ಸಂಪನ್ನ ಮೂರ್ತಿಯಾಗಿಬಿಡಿ ನಿಮ್ಮ ಬಳಿ ಯಾರೇ ಯಾವುದೇ ಭಾವನೆಯಿಂದ ಬರಲಿ, ತಮ್ಮ ಭಾವನೆ
ಸಂಪನ್ನ ಮಾಡಿಕೊಂಡು ಹೋಗಲಿ. ಹೇಗೆ ತಂದೆಯ ಖಜಾನೆಯಲ್ಲಿ ಅಪ್ರಾಪ್ತಿಯ ಯಾವುದೇ ವಸ್ತು ಇಲ್ಲ, ಅದೇ
ರೀತಿ ತಾವೂ ತಂದೆಯ ಸಮಾನ ಭರ್ಪೂರ್ ಆಗಿರಿ.
ಸ್ಲೋಗನ್:
ಆತ್ಮೀಯ
ಘನತೆಯಲ್ಲಿದ್ದಾಗ ಎಂದೂ ಅಭಿಮಾನದ ಫೀಲಿಂಗ್ ಬರುವುದಿಲ್ಲ.
ಅವ್ಯಕ್ತ ಸೂಚನೆ:
ಏಕಾಂತಪ್ರಿಯರಾಗಿ ಏಕತೆ ಮತ್ತು ಏಕಾಗ್ರತೆಯನ್ನು ತಮ್ಮದಾಗಿಸಿಕೊಳ್ಳಿ
ತಮ್ಮನ್ನು ಸದಾ
ಅಂಡರ್ಗೌಂಡ ಅರ್ಥಾತ್ ಅಂತರ್ಮುಖಿಗಳಾಗುವ ಪ್ರಯತ್ನ ಮಾಡಿ. ಅಂಡರ್ಗೌಂಡ್ ಸಹ ಇಡೀ ವ್ಯವಹಾರ
ನಡೆಯುತ್ತದೆ ಹಾಗೆಯೇ ಅಂತರ್ಮುಖಿಯಾಗಿದ್ದು ಸಹ ಕಾರ್ಯ ಮಾಡಬಹುದು. ಅಂತರ್ಮುಖಿಯಾಗಿದ್ದು ಕಾರ್ಯ
ಮಾಡುವುದರಿಂದ ಒಂದು ವಿಘ್ನಗಳಿಂದ ಬಚಾವ್, ಇನ್ನೊಂದು ಸಮಯದ ಉಳಿತಾಯ, ಮೂರನೇಯದು ಸಂಕಲ್ಪಗಳ
ಉಳಿತಾಯವಾಗಿ ಬಿಡುತ್ತದೆ. ಏಕಾಂತವಾಸಿಯೂ ಮತ್ತು ಜೊತೆ-ಜೊತೆ ರಮಣೀಕತೆಯು ಅಷ್ಟೇ ಇರಲಿ.