19.03.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಈ ಹಳೆಯ ಪ್ರಪಂಚ, ಹಳೆಯ ಶರೀರದಿಂದ ಜೀವಿಸಿದ್ದಂತೆಯೇ ಸತ್ತು ಮನೆಗೆ ಹೋಗಬೇಕಾಗಿದೆ ಆದ್ದರಿಂದ
ದೇಹಾಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಯಾಗಿ”
ಪ್ರಶ್ನೆ:
ಒಳ್ಳೊಳ್ಳೆಯ
ಪುರುಷಾರ್ಥಿ ಮಕ್ಕಳ ಚಿಹ್ನೆಗಳೇನು?
ಉತ್ತರ:
ಒಳ್ಳೆಯ
ಪುರುಷಾರ್ಥಿಗಳು ಬೆಳಗ್ಗೆ-ಬೆಳಗ್ಗೆ ಎದ್ದು ದೇಹೀ-ಅಭಿಮಾನಿಗಳಾಗಿರುವ ಅಭ್ಯಾಸ ಮಾಡುತ್ತಾರೆ. ಅವರು
ಒಬ್ಬ ತಂದೆಯನ್ನು ನೆನಪು ಮಾಡುವ ಪುರುಷಾರ್ಥ ಮಾಡುತ್ತಾರೆ. ಅವರಿಗೆ ಲಕ್ಷ್ಯವಿರುತ್ತದೆ -
ಮತ್ತ್ಯಾವುದೇ ದೇಹಧಾರಿಗಳ ನೆನಪು ಬರಬಾರದು. ನಿರಂತರ ತಂದೆ ಮತ್ತು 84 ಜನ್ಮಗಳ ಚಕ್ರದ ನೆನಪೇ
ಇರಬೇಕು. ಇದಕ್ಕೂ ಅಹೋ ಸೌಭಾಗ್ಯವೆಂದು ಹೇಳಲಾಗುತ್ತದೆ.
ಓಂ ಶಾಂತಿ.
ಈಗ ನೀವು ಮಕ್ಕಳು ಜೀವಿಸಿದ್ದಂತೆಯೇ ಸತ್ತಿದ್ದೀರಿ, ಹೇಗೆ ಸತ್ತಿದ್ದೀರಿ? ದೇಹದ ಅಭಿಮಾನವನ್ನು
ಬಿಟ್ಟಿರೆಂದರೆ ಇನ್ನು ಉಳಿಯುವುದು ಆತ್ಮವಷ್ಟೇ. ಶರೀರವು ಸಮಾಪ್ತಿಯಾಗುತ್ತದೆ, ಆತ್ಮವು
ಸಾಯುವುದಿಲ್ಲ, ತಂದೆಯು ತಿಳಿಸುತ್ತಾರೆ – ಜೀವಿಸಿದ್ದಂತೆಯೇ ತನ್ನನ್ನು ಆತ್ಮವೆಂದು ತಿಳಿಯಿರಿ
ಮತ್ತು ಪರಮಪಿತ ಪರಮಾತ್ಮನ ಜೊತೆ ಯೋಗವನ್ನಿಡುವುದರಿಂದ ಆತ್ಮವೂ ಪವಿತ್ರವಾಗಿಬಿಡುವುದು.
ಎಲ್ಲಿಯವರೆಗೆ ಆತ್ಮವು ಪವಿತ್ರವಾಗುವುದಿಲ್ಲವೋ ಅಲ್ಲಿಯವರೆಗೆ ಪವಿತ್ರ ಶರೀರವು ಸಿಗಲು
ಸಾಧ್ಯವಿಲ್ಲ. ಆತ್ಮವು ಪವಿತ್ರವಾದರೆ ಮತ್ತೆ ಈ ಶರೀರವು ತಾನಾಗಿಯೇ ಬಿಟ್ಟುಹೋಗುವುದು. ಹೇಗೆ
ಸರ್ಪದ ಪೆÇರೆಯು ತಾನಾಗಿಯೇ ಬಿಟ್ಟುಬಿಡುತ್ತದೆ, ಅದರಿಂದ ಮಮತ್ವವು ಕಳೆಯುತ್ತದೆ. ನನಗೀಗ ಹೊಸ
ಪೋರೆಯು ಸಿಗುತ್ತದೆ ಆದ್ದರಿಂದ ಈ ಹಳೆಯ ಪೋರೆಯು ಹೊರಟುಹೋಗುವುದೆಂದು ಅದಕ್ಕೆ ತಿಳಿದಿರುತ್ತದೆ.
ಪ್ರತಿಯೊಬ್ಬರಿಗೂ ತಮ್ಮ ಬುದ್ಧಿಯಿರುತ್ತದೆಯಲ್ಲವೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ -
ನಾವು ಜೀವಿಸಿದ್ದಂತೆಯೇ ಈ ಹಳೆಯ ಶರೀರದಿಂದ ಸತ್ತಿದ್ದೇವೆ. ಮತ್ತೆ ನೀವಾತ್ಮಗಳು ಶರೀರವನ್ನು
ಬಿಟ್ಟು ಎಲ್ಲಿ ಹೋಗುವಿರಿ? ತಮ್ಮ ಮನೆಗೆ. ಮೊಟ್ಟಮೊದಲಿಗೆ ಇದನ್ನು ಪಕ್ಕಾ ಮಾಡಿಕೊಳ್ಳಬೇಕಾಗಿದೆ -
ನಾವಾತ್ಮಗಳಾಗಿದ್ದೇವೆ, ಶರೀರವಲ್ಲ. ಬಾಬಾ, ನಾವು ತಮ್ಮವರಾಗಿಬಿಟ್ಟೆವು, ಜೀವಿಸಿದ್ದಂತೆಯೇ
ಸತ್ತಿದ್ದೇವೆಂದು ಆತ್ಮವು ಹೇಳುತ್ತದೆ. ಈಗ ಆತ್ಮಕ್ಕೆ ಆದೇಶವು ಸಿಕ್ಕಿದೆ - ತಂದೆಯಾದ
ನನ್ನೊಬ್ಬನನ್ನೇ ನೆನಪು ಮಾಡಿದರೆ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಿಬಿಡುತ್ತೀರಿ. ಈ ನೆನಪಿನ
ಅಭ್ಯಾಸವು ಪಕ್ಕಾ ಇರಬೇಕು. ಬಾಬಾ, ತಾವು ಬಂದಿದ್ದೀರೆಂದರೆ ನಾವು ತಮ್ಮವರೇ ಆಗುತ್ತೇವೆಂದು ಆತ್ಮವು
ಹೇಳುತ್ತದೆ. ಆತ್ಮವು ಪುರುಷನಾಗಿದೆ, ಸ್ತ್ರೀಯಲ್ಲ. ನಾವು ಸಹೋದರ-ಸಹೋದರರಾಗಿದ್ದೇವೆಂದೇ ಯಾವಾಗಲೂ
ಹೇಳುತ್ತೇವೆ. ನಾವು ಸಹೋದರಿಯರಾಗಿದ್ದೇವೆ ಎಂದು ಹೇಳುವುದಿಲ್ಲ, ಎಲ್ಲರೂ ಮಕ್ಕಳಾಗಿದ್ದೇವೆ. ಎಲ್ಲಾ
ಮಕ್ಕಳಿಗೆ ಆಸ್ತಿಯು ಸಿಗಬೇಕಾಗಿದೆ, ಒಂದುವೇಳೆ ತನ್ನನ್ನು ಮಗಳೆಂದು ಹೇಳಿಕೊಂಡರೆ ಆಸ್ತಿಯು ಹೇಗೆ
ಸಿಗುವುದು? ನಾವೆಲ್ಲರೂ ಸಹೋದರ-ಸಹೋದರರಾಗಿದ್ದೇವೆ. ತಂದೆಯು ಎಲ್ಲರಿಗೂ ತಿಳಿಸುತ್ತಾರೆ - ಆತ್ಮೀಯ
ಮಕ್ಕಳೇ, ನನ್ನನ್ನು ನೆನಪು ಮಾಡಿ. ಆತ್ಮವು ಎಷ್ಟು ಸೂಕ್ಷ್ಮವಾಗಿದೆ! ಇವು ಬಹಳ ತಿಳಿದುಕೊಳ್ಳುವ
ಆಳವಾದ ಮಾತುಗಳಾಗಿವೆ. ಮಕ್ಕಳಿಗೆ ನೆನಪು ಸ್ಥಿರವಾಗಿರುವುದೇ ಇಲ್ಲ. ಸನ್ಯಾಸಿಗಳು ದೃಷ್ಟಾಂತವನ್ನು
ಕೊಡುತ್ತಾರೆ - ನಾನು ಎಮ್ಮೆಯಾಗಿದ್ದೇನೆ, ಎಮ್ಮೆಯಾಗಿದ್ದೇನೆ....... ಎಂದು ಹೇಳುವುದರಿಂದ
ಎಮ್ಮೆಯಾಗಿಬಿಡುತ್ತಾರೆ ಎಂದು. ಆದರೆ ಈ ರೀತಿ ಹೇಳುವುದರಿಂದ ಯಾರೂ ಎಮ್ಮೆಯಾಗುವುದಿಲ್ಲ. ತಂದೆಯು
ತಿಳಿಸುತ್ತಾರೆ - ತನ್ನನ್ನು ಆತ್ಮವೆಂದು ತಿಳಿಯಿರಿ, ಈ ಆತ್ಮ ಮತ್ತು ಪರಮಾತ್ಮನ ಜ್ಞಾನವು ಯಾರಿಗೂ
ಇಲ್ಲ ಆದ್ದರಿಂದ ಇಂತಿಂತಹ ಮಾತುಗಳನ್ನು ಹೇಳಿಬಿಡುತ್ತಾರೆ. ಈಗ ನೀವು ಆತ್ಮಾಭಿಮಾನಿಗಳಾಗಬೇಕಾಗಿದೆ.
ನಾವಾತ್ಮಗಳಾಗಿದ್ದೇವೆ, ಈ ಹಳೆಯ ಶರೀರವನ್ನು ಬಿಟ್ಟುಹೋಗಿ ಹೊಸಶರೀರವನ್ನು ತೆಗೆದುಕೊಳ್ಳಬೇಕಾಗಿದೆ.
ಆತ್ಮವು ನಕ್ಷತ್ರವಾಗಿದೆ, ಭೃಕುಟಿಯ ಮಧ್ಯದಲ್ಲಿರುತ್ತದೆ ಎಂಬುದನ್ನೂ ಮನುಷ್ಯರು ಹೇಳುತ್ತಾರೆ.
ಮತ್ತೆ ಅಂಗುಷ್ಟಾಕಾರವಾಗಿದೆ ಎಂದು ಹೇಳಿಬಿಡುತ್ತಾರೆ. ನಕ್ಷತ್ರವೆಲ್ಲಿ, ಅಂಗುಷ್ಟವೆಲ್ಲಿ!
ಆದ್ದರಿಂದ ಅವರು ಮಣ್ಣಿನ ಸಾಲಿಗ್ರಾಮಗಳನ್ನು ಮಾಡುತ್ತಾರೆ. ಆತ್ಮವು ಇಷ್ಟು ದೊಡ್ಡದಾಗಿರಲು
ಸಾಧ್ಯವಿಲ್ಲ. ಮನುಷ್ಯರು ದೇಹಾಭಿಮಾನಿಗಳಾಗಿರುವ ಕಾರಣ ಎಲ್ಲವನ್ನು ದೊಡ್ಡ ರೂಪದಲ್ಲಿಯೇ
ಮಾಡುತ್ತಾರೆ. ಇವಂತೂ ಬಹಳ ಸೂಕ್ಷ್ಮವಾದ ಆಳವಾದ ಮಾತುಗಳಾಗಿವೆ. ಭಕ್ತಿಯಲ್ಲಿಯೂ ಸಹ ಮನುಷ್ಯರು
ಏಕಾಂತದಲ್ಲಿ ಒಂದು ಕೋಣೆಯಲ್ಲಿ ಕುಳಿತು ಮಾಡುತ್ತಾರೆ ಆದರೆ ನೀವು ಮಕ್ಕಳು ಗೃಹಸ್ಥ ವ್ಯವಹಾರದಲ್ಲಿ,
ವ್ಯಾಪಾರ ಇತ್ಯಾದಿಗಳಲ್ಲಿರುತ್ತಾ ಬುದ್ಧಿಯಲ್ಲಿ ನಾವಾತ್ಮಗಳಾಗಿದ್ದೇವೆಂದು ಪಕ್ಕಾ
ಮಾಡಿಕೊಳ್ಳಬೇಕಾಗಿದೆ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮ ತಂದೆಯೂ ಸಹ
ಅತಿಸೂಕ್ಷ್ಮಬಿಂದುವಾಗಿದ್ದೇನೆ. ನಾನು ದೊಡ್ಡ ರೂಪದಲ್ಲಿದ್ದೇನೆಂದಲ್ಲ, ನನ್ನಲ್ಲಿ ಸಂಪೂರ್ಣ
ಜ್ಞಾನವಿದೆ. ಆತ್ಮ ಮತ್ತು ಪರಮಾತ್ಮ ಇಬ್ಬರೂ ಒಂದೇ ಮಾದರಿಯಾಗಿದ್ದಾರೆ. ಕೇವಲ ತಂದೆಗೆ ಪರಮ
ಆತ್ಮನೆಂದು ಹೇಳಲಾಗುತ್ತದೆ. ಇದು ನಾಟಕದಲ್ಲಿ ನಿಗಧಿಯಾಗಿದೆ. ತಂದೆಯು ತಿಳಿಸುತ್ತಾರೆ - ನಾನು
ಅಮರನಾಗಿದ್ದೇನೆ, ನಾನು ಅಮರನಲ್ಲದಿದ್ದರೆ ನಿಮ್ಮನ್ನು ಹೇಗೆ ಪಾವನ ಮಾಡಲಿ, ನಿಮ್ಮನ್ನು ಮಧುರ
ಮಕ್ಕಳೇ ಎಂದು ಹೇಗೆ ಹೇಳಲಿ? ಆತ್ಮವೇ ಎಲ್ಲವನ್ನೂ ಮಾಡುತ್ತದೆ. ತಂದೆಯು ಬಂದು
ಆತ್ಮಾಭಿಮಾನಿಗಳನ್ನಾಗಿ ಮಾಡುತ್ತಾರೆ. ಇದರಲ್ಲಿಯೇ ಪರಿಶ್ರಮವಿದೆ. ತಂದೆಯು ತಿಳಿಸುತ್ತಾರೆ -
ನನ್ನನ್ನು ನೆನಪು ಮಾಡಿ, ಮತ್ತ್ಯಾರನ್ನೂ ನೆನಪು ಮಾಡಬೇಡಿ. ಯೋಗಿಗಳಂತೂ ಪ್ರಪಂಚದಲ್ಲಿ
ಅನೇಕರಿದ್ದಾರೆ, ಹೇಗೆ ಕನ್ಯೆಗೆ ನಿಶ್ಚಿತಾರ್ಥವಾಯಿತೆಂದರೆ ಪತಿಯ ಜೊತೆ ಯೋಗವುಂಟಾಗಿಬಿಡುತ್ತದೆ.
ಮೊದಲೇ ಇರುವುದಿಲ್ಲ, ಪತಿಯನ್ನು ನೋಡಿದ ಮೇಲೆ ಅವರ ನೆನಪಿನಲ್ಲಿಯೇ ಇರುತ್ತಾಳೆ. ಈಗ ತಂದೆಯು
ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ. ಇದು ಬಹಳ ಒಳ್ಳೆಯ ಅಭ್ಯಾಸವಿರಬೇಕು. ಯಾರು
ಒಳ್ಳೊಳ್ಳೆಯ ಪುರುಷಾರ್ಥಿ ಮಕ್ಕಳಿದ್ದಾರೆಯೋ ಅವರು ಮುಂಜಾನೆಯೆದ್ದು ದೇಹೀ-ಅಭಿಮಾನಿಯಾಗಿರುವ
ಅಭ್ಯಾಸ ಮಾಡುತ್ತಾರೆ. ಭಕ್ತಿಯನ್ನೂ ಸಹ ಮನುಷ್ಯರು ಮುಂಜಾನೆಯ ಸಮಯದಲ್ಲಿಯೇ ಮಾಡುತ್ತಾರೆ,
ತಮ್ಮ-ತಮ್ಮ ಇಷ್ಟದೇವನನ್ನು ನೆನಪು ಮಾಡುತ್ತಾರೆ. ಹನುಮಂತನನ್ನು ಎಷ್ಟೊಂದು ಪೂಜೆ ಮಾಡುತ್ತಾರೆ
ಆದರೆ ಏನನ್ನೂ ಅರಿತುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ಈಗ ನಿಮ್ಮ ಬುದ್ಧಿಯು ಮಂಗನಂತಾಗಿದೆ.
ಪುನಃ ನೀವು ದೇವತೆಗಳಾಗುತ್ತೀರಿ. ಇದು ಈಗ ಪತಿತ, ತಮೋಪ್ರಧಾನ ಪ್ರಪಂಚವಾಗಿದೆ. ಈಗ ನೀವು
ಬೇಹದ್ದಿನ ತಂದೆಯ ಬಳಿ ಬಂದಿದ್ದೀರಿ, ನಾನಂತೂ ಪುನರ್ಜನ್ಮ ರಹಿತನಾಗಿದ್ದೇನೆ. ಈ ಶರೀರವು ಈ
ದಾದಾರವರದಾಗಿದೆ, ನನಗೆ ಯಾವುದೇ ಶರೀರದ ಹೆಸರಿಲ್ಲ. ನನ್ನ ಹೆಸರೇ ಆಗಿದೆ - ಕಲ್ಯಾಣಕಾರಿ ಶಿವ.
ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಕಲ್ಯಾಣಕಾರಿ ಶಿವತಂದೆಯು ಬಂದು ನರಕವನ್ನು ಸ್ವರ್ಗವನ್ನಾಗಿ
ಮಾಡುತ್ತಾರೆ, ಎಷ್ಟೊಂದು ಕಲ್ಯಾಣ ಮಾಡುತ್ತಾರೆ, ಒಮ್ಮೆಲೆ ನರಕದ ವಿನಾಶ ಮಾಡಿಸಿಬಿಡುತ್ತಾರೆ.
ಪ್ರಜಾಪಿತ ಬ್ರಹ್ಮಾರವರ ಮೂಲಕ ಈಗ ಸ್ಥಾಪನೆಯಾಗುತ್ತಿದೆ, ಇವರು ಪ್ರಜಾಪಿತ ಬ್ರಹ್ಮಾ
ಮುಖವಂಶಾವಳಿಯಾಗಿದ್ದಾರೆ. ನಡೆಯುತ್ತಾ-ತಿರುಗಾಡುತ್ತಾ ಪರಸ್ಪರ ಮನ್ಮನಾಭವದ ಸ್ಮೃತಿಯನ್ನು
ತರಿಸಬೇಕಾಗಿದೆ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು
ವಿನಾಶವಾಗುತ್ತದೆ. ಪತಿತ-ಪಾವನನು ತಂದೆಯಾಗಿದ್ದಾರಲ್ಲವೆ. ಅವರು ತಪ್ಪಾಗಿ ಭಗವಾನುವಾಚದ ಬದಲಾಗಿ
ಕೃಷ್ಣಭಗವಾನುವಾಚ ಎಂದು ಬರೆದುಬಿಟ್ಟಿದ್ದಾರೆ. ಭಗವಂತನು ನಿರಾಕಾರನಾಗಿದ್ದಾರೆ, ಅವರಿಗೆ ನಿರಾಕಾರ
ಪರಮಪಿತ ಪರಮಾತ್ಮನೆಂದು ಕರೆಯಲಾಗುತ್ತದೆ. ಅವರ ಹೆಸರು ಶಿವನೆಂದಾಗಿದೆ, ಅವರ ಪೂಜೆಯೂ
ಬಹಳಷ್ಟಾಗುತ್ತಿರುತ್ತದೆ. ಶಿವಕಾಶಿ, ಶಿವಕಾಶಿಯೆಂದು ಹೇಳುತ್ತಿರುತ್ತಾರೆ. ಭಕ್ತಿಮಾರ್ಗದಲ್ಲಿ
ಅನೇಕ ಪ್ರಕಾರದ ಹೆಸರುಗಳನ್ನಿಟ್ಟಿರುತ್ತಾರೆ, ಸಂಪಾದನೆಗಾಗಿ ಅನೇಕ ಮಂದಿರಗಳನ್ನು ಕಟ್ಟಿಸಿದ್ದಾರೆ
ಆದರೆ ಮೂಲ ಹೆಸರಾಗಿದೆ - ಶಿವ. ಮತ್ತೆ ಸೋಮನಾಥನೆಂದು ಹೆಸರನ್ನಿಟ್ಟಿದ್ದಾರೆ, ಸೋಮನಾಥ ಸೋಮರಸವನ್ನು
ಕುಡಿಸುತ್ತಾರೆ, ಜ್ಞಾನಧನವನ್ನು ಕೊಡುತ್ತಾರೆ ನಂತರ ಪೂಜಾರಿಗಳಾದಾಗ ಅವರ ಮಂದಿರಗಳನ್ನು ಕಟ್ಟಿಸಲು
ಎಷ್ಟೊಂದು ಖರ್ಚು ಮಾಡುತ್ತಾರೆ ಏಕೆಂದರೆ ಸೋಮರಸವನ್ನು ಕೊಟ್ಟಿದ್ದಾರಲ್ಲವೆ. ಸೋಮನಾಥನ ಜೊತೆ
ಸೋಮನಾಥಿನಿಯೂ ಇರುವರು! ಯಥಾರಾಜ-ರಾಣಿ ತಥಾ ಪ್ರಜಾ. ಸತ್ಯಯುಗದಲ್ಲಿ ಎಲ್ಲರೂ
ಸೋಮನಾಥ-ಸೋಮನಾಥಿನಿಯರಾಗಿರುತ್ತಾರೆ. ನೀವು ಚಿನ್ನದ ಪ್ರಪಂಚದಲ್ಲಿ ಹೋಗುತ್ತೀರಿ, ಅಲ್ಲಿ ಚಿನ್ನದ
ಇಟ್ಟಿಗೆಗಳಿರುತ್ತವೆ ಇಲ್ಲವೆಂದರೆ ಗೋಡೆ, ಇತ್ಯಾದಿಗಳು ಹೇಗಾಗುವುದು! ಚಿನ್ನವು ಹೇರಳವಾಗಿರುತ್ತದೆ
ಆದ್ದರಿಂದ ಅದಕ್ಕೆ ಚಿನ್ನದ ಪ್ರಪಂಚವೆಂದು ಕರೆಯಲಾಗುತ್ತದೆ. ಇದು ಲೋಹ, ಕಲ್ಲುಗಳ ಪ್ರಪಂಚವಾಗಿದೆ.
ಸ್ವರ್ಗದ ಹೆಸರನ್ನು ಕೇಳುತ್ತಿದ್ದಂತೆಯೇ ಬಾಯಲ್ಲಿ ನೀರು ಬಂದುಬಿಡುತ್ತದೆ. ವಿಷ್ಣುವಿನ ಎರಡು ರೂಪ
ಲಕ್ಷ್ಮೀ-ನಾರಾಯಣರು ಬೇರೆ-ಬೇರೆಯಾಗಿ ಆಗುತ್ತಾರಲ್ಲವೆ. ನೀವು ವಿಷ್ಣುಪುರಿಯ ಮಾಲೀಕರಾಗುತ್ತೀರಿ,
ಈಗ ನೀವು ರಾವಣಪುರಿಯಲ್ಲಿದ್ದೀರಿ ಆದ್ದರಿಂದ ತಂದೆಯು ತಿಳಿಸುತ್ತಾರೆ - ಕೇವಲ ತನ್ನನ್ನು
ಆತ್ಮವೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿ. ತಂದೆಯೂ ಸಹ ಪರಮಧಾಮದಲ್ಲಿರುತ್ತಾರೆ,
ನೀವಾತ್ಮಗಳೂ ಪರಮಧಾಮದಲ್ಲಿರುತ್ತೀರಿ. ತಂದೆಯು ತಿಳಿಸುತ್ತಾರೆ - ನಿಮಗೆ ನಾನು ಏನೂ
ಕಷ್ಟಕೊಡುವುದಿಲ್ಲ, ಬಹಳ ಸಹಜವಾಗಿದೆ ಬಾಕಿ ಈ ರಾವಣ ಶತ್ರುವು ನಿಮ್ಮ ಸನ್ಮುಖದಲ್ಲಿ ನಿಂತಿದ್ದಾನೆ,
ವಿಘ್ನಗಳನ್ನು ಹಾಕುತ್ತಾನೆ. ಜ್ಞಾನದಲ್ಲಿ ವಿಘ್ನ ಬರುವುದಿಲ್ಲ, ನೆನಪಿನಲ್ಲಿರುವಾಗಲೇ ವಿಘ್ನಗಳು
ಬರುತ್ತವೆ. ಮಾಯೆಯು ಮತ್ತೆ-ಮತ್ತೆ ಮರೆಸುತ್ತದೆ, ದೇಹಾಭಿಮಾನದಲ್ಲಿ ತೆಗೆದುಕೊಂಡು ಬರುತ್ತದೆ,
ತಂದೆಯನ್ನು ನೆನಪು ಮಾಡಲು ಬಿಡುವುದಿಲ್ಲ. ಈ ಯುದ್ಧವು ನಡೆಯುತ್ತದೆ. ತಂದೆಯು ತಿಳಿಸುತ್ತಾರೆ -
ನೀವು ಕರ್ಮಯೋಗಿಗಳಂತೂ ಆಗಿದ್ದೀರಿ ಒಳ್ಳೆಯದು. ದಿನದಲ್ಲಿ ನೆನಪು ಮಾಡಲು ಸಾಧ್ಯವಾಗದಿದ್ದರೆ
ರಾತ್ರಿ (ಮುಂಜಾನೆ) ಯಲ್ಲಿ ನೆನಪು ಮಾಡಿ. ರಾತ್ರಿಯ ಅಭ್ಯಾಸವು ದಿನದಲ್ಲಿ ಕೆಲಸಕ್ಕೆ ಬರುತ್ತದೆ.
ನಿರಂತರ ಸ್ಮೃತಿಯಿರಲಿ -
ಯಾವ ತಂದೆಯು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆಯೋ ಅವರನ್ನು ನಾವು ನೆನಪು
ಮಾಡುತ್ತೇವೆ! ತಂದೆಯ ನೆನಪು ಮತ್ತು 84 ಜನ್ಮಗಳ ಚಕ್ರವು ನೆನಪಿದ್ದರೂ ಸಹ ಸಾಕು ಅಹೋ ಸೌಭಾಗ್ಯ.
ಅನ್ಯರಿಗೂ ಸಹ ತಿಳಿಸಿ - ಸಹೋದರ-ಸಹೋದರಿಯರೇ, ಈಗ ಕಲಿಯುಗವು ಪೂರ್ಣವಾಗಿ ಸತ್ಯಯುಗವು ಬರುತ್ತದೆ.
ತಂದೆಯು ಬಂದಿದ್ದಾರೆ, ಸತ್ಯಯುಗಕ್ಕಾಗಿ ರಾಜಯೋಗವನ್ನು ಕಲಿಸುತ್ತಿದ್ದಾರೆ. ಕಲಿಯುಗದ ನಂತರ
ಸತ್ಯಯುಗವು ಬರಲಿದೆ. ಈಗ ಒಬ್ಬ ತಂದೆಯ ವಿನಃ ಮತ್ತ್ಯಾರನ್ನೂ ನೆನಪು ಮಾಡಬಾರದಾಗಿದೆ.
ವಾನಪ್ರಸ್ಥಿಗಳು ಹೋಗಿ ಸನ್ಯಾಸಿಗಳ ಸಂಗ ಮಾಡುತ್ತಾರೆ. ವಾನಪ್ರಸ್ಥ ಎಂದರೆ ಅಲ್ಲಿ ವಾಚಾದ
ಕೆಲಸವಿರುವುದಿಲ್ಲ, ಆತ್ಮವು ಶಾಂತವಾಗಿರುತ್ತದೆ.ಲೀನವಂತೂ ಆಗಲು ಸಾಧ್ಯವಿಲ್ಲ. ನಾಟಕದಿಂದ ಯಾವ
ಪಾತ್ರಧಾರಿಯೂ ಸಹ ಬಿಡುಗಡೆ ಹೊಂದಲು ಸಾಧ್ಯವಿಲ್ಲ. ಇದನ್ನೂ ಸಹ ತಂದೆಯು ತಿಳಿಸಿದ್ದಾರೆ - ಒಬ್ಬ
ತಂದೆಯ ಹೊರತು ಮತ್ತ್ಯಾರನ್ನೂ ನೆನಪು ಮಾಡಬಾರದು. ನೋಡುತ್ತಿದ್ದರೂ ನೆನಪು ಮಾಡಬೇಡಿ. ಈ
ಹಳೆಯಪ್ರಪಂಚವಂತೂ ವಿನಾಶವಾಗಲಿದೆ, ಸ್ಮಶಾನವಾಗಿದೆಯಲ್ಲವೆ. ಶವಗಳನ್ನು ಎಂದಾದರೂ ನೆನಪು
ಮಾಡಲಾಗುತ್ತದೆಯೇ? ತಂದೆಯು ತಿಳಿಸುತ್ತಾರೆ - ಇವರೆಲ್ಲರೂ ಸತ್ತುಬಿದ್ದಿದ್ದಾರೆ, ನಾನು
ಬಂದಿದ್ದೇನೆ - ಪತಿತರನ್ನು ಪಾವನ ಮಾಡಿ ಕರೆದುಕೊಂಡು ಹೋಗುತ್ತೇನೆ. ಇಲ್ಲಿ ಇವರೆಲ್ಲರೂ
ಸಮಾಪ್ತಿಯಾಗುವರು, ಇತ್ತೀಚೆಗೆ ಬಾಂಬುಗಳು ಇತ್ಯಾದಿ ಏನೆಲ್ಲವನ್ನೂ ತಯಾರು ಮಾಡುವರೋ ಬಹಳ
ತೀಕ್ಷ್ಣವಾಗಿ ತಯಾರು ಮಾಡುತ್ತಿರುತ್ತಾರೆ. ಇಲ್ಲಿ ಕುಳಿತಿದ್ದಂತೆಯೇ ಯಾರ ಮೇಲೆ ಎಸೆಯುತ್ತೇವೆಯೋ
ಅವರ ಮೇಲೆ ಹೋಗಿ ಬೀಳುತ್ತದೆಯೆಂದು ಹೇಳುತ್ತಾರೆ. ಇದು ನಿಗಧಿಯಾಗಿದೆ. ಪುನಃ ವಿನಾಶವಾಗಲಿದೆ.
ಭಗವಂತನು ಬರುತ್ತಾರೆ, ಹೊಸ ಪ್ರಪಂಚಕ್ಕಾಗಿ ರಾಜಯೋಗವನ್ನು ಕಲಿಸುತ್ತಿದ್ದಾರೆ. ಇದು ಮಹಾಭಾರತ
ಯುದ್ಧವಾಗಿದೆ, ಶಾಸ್ತ್ರಗಳಲ್ಲಿ ಇದರ ಗಾಯನವಿದೆ. ಈಗ ಸ್ಥಾಪನೆ ಮತ್ತು ವಿನಾಶ ಮಾಡಲು ಖಂಡಿತವಾಗಿ
ಭಗವಂತನು ಬಂದಿದ್ದಾರೆ, ಚಿತ್ರಗಳು ಸ್ಪಷ್ಟವಾಗಿವೆ. ನಾವು ಈ ರೀತಿಯಾಗುತ್ತೇವೆಂದು ಸಾಕ್ಷಾತ್ಕಾರ
ಮಾಡುತ್ತಿದ್ದೀರಿ. ಇಲ್ಲಿನ ಈ ವಿದ್ಯಾಭ್ಯಾಸವು ಸಮಾಪ್ತಿಯಾಗುವುದು, ಅಲ್ಲಂತೂ ವೈದ್ಯರು ಮತ್ತು
ವಕೀಲರು ಮೊದಲಾದವರ ಅವಶ್ಯಕತೆಯೇ ಇರುವುದಿಲ್ಲ. ನೀವು ಇಲ್ಲಿನ ಆಸ್ತಿಯನ್ನು
ತೆಗೆದುಕೊಂಡುಹೋಗುತ್ತೀರಿ, ನೀವು ಎಲ್ಲಾ ಕಲೆಗಳನ್ನೂ ಇಲ್ಲಿಂದಲೇ ತೆಗೆದುಕೊಂಡು ಹೋಗುತ್ತೀರಿ.
ಮನೆಕಟ್ಟುವವರು ಬಹಳ ಒಳ್ಳೆಯ ಕಲೆಯುಳ್ಳವರು ಅಲ್ಲಿಯೂ ಕಟ್ಟುತ್ತಾರೆ. ಮಾರುಕಟ್ಟೆ, ಇತ್ಯಾದಿಗಳು
ಇರುತ್ತದೆಯಲ್ಲವೆ. ಕೆಲಸವಂತೂ ನಡೆಯುತ್ತದೆಯಲ್ಲವೆ. ಇಲ್ಲಿ ಕಲಿತಿರುವ ವಿದ್ಯೆಯನ್ನು
ಸಂಸ್ಕಾರದಲ್ಲಿ ತೆಗೆದುಕೊಂಡು ಹೋಗುತ್ತಾರೆ. ವಿಜ್ಞಾನದಿಂದಲೂ ಬಹಳ ಒಳ್ಳೆಯ ಕಲೆಯನ್ನು
ಕಲಿಯುತ್ತಾರೆ. ಅಲ್ಲಿ ಇವೆಲ್ಲವೂ ಕೆಲಸಕ್ಕೆ ಬರುತ್ತದೆ. ಪ್ರಜೆಗಳಲ್ಲಿ ಬರುತ್ತಾರೆ, ನೀವು
ಮಕ್ಕಳಂತೂ ಪ್ರಜೆಗಳಲ್ಲಿ ಬರುವುದಿಲ್ಲ, ನೀವು ಬಂದಿರುವುದೇ ಮಮ್ಮಾ-ಬಾಬಾರವರ
ಸಿಂಹಾಸನಾಧಿಕಾರಿಗಳಾಗಲು. ಅಂದಮೇಲೆ ತಂದೆಯು ಯಾವ ಶ್ರೀಮತವನ್ನು ಕೊಡುತ್ತಾರೆ ಅದರಂತೆ ನಡೆಯಬೇಕು.
ಬಹಳ ಒಳ್ಳೆಯ ಒಂದೇ ಶ್ರೀಮತವನ್ನು ಕೊಡುತ್ತಾರೆ - ನನ್ನನ್ನು ನೆನಪು ಮಾಡಿ. ಕೆಲವರ ಭಾಗ್ಯವಂತೂ
ಬಹಳ ಬೇಗನೆ ತೆರೆಯುತ್ತದೆ. ಯಾವ ಕಾರಣವಾದರೂ ನಿಮಿತ್ತವಾಗಿಬಿಡುತ್ತದೆ. ಕುಮಾರಿಯರಿಗೂ ಸಹ ತಂದೆಯು
ತಿಳಿಸುತ್ತಾರೆ. ವಿವಾಹವಂತೂ ಅವನತಿಯಾಗಿದೆ, ಈ ಕೊಚ್ಚೆಯಲ್ಲಿ ಬೀಳಬೇಡಿ. ನೀವು ತಂದೆಯು
ಹೇಳುವುದನ್ನು ಪಾಲಿಸುವುದಿಲ್ಲವೆ! ಸ್ವರ್ಗದ ಮಹಾರಾಣಿಯರಾಗುವುದಿಲ್ಲವೆ! ತಮ್ಮೊಂದಿಗೆ ಪ್ರತಿಜ್ಞೆ
ಮಾಡಿಕೊಳ್ಳಬೇಕು - ನಾವು ಆ ವಿಕಾರದ ಪ್ರಪಂಚದಲ್ಲೆಂದೂ ಹೋಗುವುದಿಲ್ಲ. ಅದನ್ನೆಂದೂ ನೆನಪು
ಮಾಡುವುದಿಲ್ಲ, ಸ್ಮಶಾನವನ್ನೆಂದಾದರೂ ನೆನಪು ಮಾಡುತ್ತಾರೆಯೇ? ಇಲ್ಲಂತೂ ನೀವು ಹೇಳುತ್ತೀರಿ -
ಇಲ್ಲಿ ಶರೀರವನ್ನು ಬಿಟ್ಟರೆ ನಾವು ನಮ್ಮ ಸ್ವರ್ಗದಲ್ಲಿ ಹೋಗುತ್ತೇವೆ, ಈಗ 84 ಜನ್ಮಗಳು
ಮುಕ್ತಾಯವಾಯಿತು. ಈಗ ನಮ್ಮ ಮನೆಗೆ ನಾವು ಹೋಗುತ್ತೇವೆ. ಅನ್ಯರಿಗೂ ಸಹ ಇದನ್ನೇ ತಿಳಿಸಬೇಕಾಗಿದೆ -
ಮಕ್ಕಳು ಇದನ್ನೂ ತಿಳಿದುಕೊಂಡಿದ್ದೀರಿ. ತಂದೆಯ ವಿನಃ ಸತ್ಯಯುಗದ ರಾಜ್ಯಭಾಗ್ಯವನ್ನು ಮತ್ತ್ಯಾರೂ
ಕೊಡಲು ಸಾಧ್ಯವಿಲ್ಲ.
ಈ ರಥಕ್ಕೂ (ಬ್ರಹ್ಮಾ)
ಸಹ ಕರ್ಮಭೋಗವಿರುತ್ತದೆಯಲ್ಲವೆ. ಕೆಲವೊಮ್ಮೆ ಬಾಪ್ದಾದಾರವರ ಪರಸ್ಪರ ಸಂಭಾಷಣೆ ನಡೆಯುತ್ತದೆ, ಈ
ತಂದೆಯು (ಬ್ರಹ್ಮಾ) ಹೇಳುತ್ತಾರೆ - ಬಾಬಾ, ಆಶೀರ್ವಾದ ಮಾಡಿಬಿಡಿ, ಈ ಕೆಮ್ಮಿಗಾಗಿ ಯಾವುದಾದರೂ
ಔಷಧಿ ಕೊಡಿ ಅಥವಾ ಚೂ ಮಂತ್ರದಿಂದ ಹಾರಿಸಿಬಿಡಿ ಎಂದು. ಅದಕ್ಕೆ ಶಿವತಂದೆಯೂ ತಿಳಿಸುತ್ತಾರೆ -
ಇಲ್ಲ. ಇದನ್ನಂತೂ ಅನುಭವಿಸಲೇಬೇಕಾಗಿದೆ. ನಿನ್ನ ರಥವನ್ನು ತೆಗೆದುಕೊಳ್ಳುವುದಕ್ಕೆ ಪ್ರತಿಯಾಗಿ
ನಾನು ಪ್ರಾಪ್ತಿಯನ್ನು ಕೊಟ್ಟೇ ಕೊಡುತ್ತೇನೆ ಆದರೆ ಈ ಕರ್ಮಭೋಗವು ನಿನ್ನದೇ ಆದ ಲೆಕ್ಕಾಚಾರವಾಗಿದೆ,
ಅಂತ್ಯದವರೆಗೆ ಏನಾದರೊಂದು ಆಗುತ್ತಲೇ ಇರುತ್ತದೆ. ಒಂದುವೇಳೆ ನಿನಗೆ ಆಶೀರ್ವಾದ ಮಾಡಿದೆನೆಂದರೆ
ಎಲ್ಲರಿಗೂ ಮಾಡಬೇಕಾಗುತ್ತದೆ. ಇಂದು ಈ ಮಗು ಇಲ್ಲಿ ಕುಳಿತಿದೆ. ಒಂದುವೇಳೆ ನಾಳೆ ರೈಲಿನಲ್ಲಿ
ಅಪಘಾತವಾಗಿ ಶರೀರವನ್ನು ಬಿಟ್ಟರೆ ಅದಕ್ಕೆ ತಂದೆಯು ಹೇಳುತ್ತಾರೆ - ಇದು ಡ್ರಾಮಾ ಆಗಿದೆ. ತಂದೆಯೇಕೆ
ಮೊದಲೇ ತಿಳಿಸಲಿಲ್ಲ ಎಂದು ಹೇಳಲು ಸಾಧ್ಯವೆ! ಈ ನಿಯಮವೇ ಇಲ್ಲ. ನಾನಂತೂ ಪತಿತರಿಂದ ಪಾವನ ಮಾಡಲು
ಬರುತ್ತೇನೆ, ಈ ರೀತಿಯಾಗುತ್ತದೆ ಎಂದು ತಿಳಿಸಲು ಬರುತ್ತೇನೆಯೇ! ಈ ನಿಮ್ಮ ಲೆಕ್ಕಾಚಾರಗಳನ್ನು ನೀವೇ
ಸಮಾಪ್ತಿ ಮಾಡಬೇಕಾಗಿದೆ, ಇದರಲ್ಲಿ ಆಶೀರ್ವಾದದ ಮಾತಿಲ್ಲ. ಆಶೀರ್ವಾದಕ್ಕಾಗಿ ಸನ್ಯಾಸಿಗಳ ಬಳಿಗೆ
ಹೋಗಿ. ತಂದೆಯಂತೂ ಒಂದೇ ಮಾತನ್ನು ತಿಳಿಸುತ್ತಾರೆ - ಬಂದು ನಮ್ಮನ್ನು ನರಕದಿಂದ ಸ್ವರ್ಗದಲ್ಲಿ
ಕರೆದುಕೊಂಡು ಹೋಗಿ ಎಂದೇ ನನ್ನನ್ನು ಕರೆದಿರಿ. ಪತಿತ-ಪಾವನ ಸೀತಾರಾಂ ಎಂದೇ ಹೇಳುತ್ತಾರೆ ಆದರೆ
ಅದರ ಅರ್ಥವನ್ನು ಉಲ್ಟಾ ತೆಗೆದುಕೊಂಡಿದ್ದಾರೆ. ಇದರಿಂದ ರಘುಪತಿ ರಾಘವ ರಾಜಾರಾಂ ಎಂದು ಕುಳಿತು
ರಾಮನ ಮಹಿಮೆ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಈ ಭಕ್ತಿಮಾರ್ಗದಲ್ಲಿ ನೀವು ಎಷ್ಟೊಂದು
ಹಣವನ್ನು ಕಳೆದುಕೊಂಡಿದ್ದೀರಿ. ಇದಕ್ಕೆ ಒಂದು ಗೀತೆಯೂ ಇದೆ - ನಾನೇನು ಆಶ್ಚರ್ಯವನ್ನು ನೋಡಿದೆನು.......
ದೇವಿಯರ ಮೂರ್ತಿಗಳನ್ನು ಮಾಡಿ ಪೂಜೆ ಮಾಡಿ ನಂತರ ನದಿಗಳಲ್ಲಿ ಮುಳುಗಿಸಿಬಿಡುತ್ತಾರೆ. ಎಷ್ಟೊಂದು
ಹಣವನ್ನು ಹಾಳುಮಾಡುತ್ತಾರೆಂದು ಈಗ ಅರ್ಥವಾಗುತ್ತದೆ. ಇದು ಮತ್ತೆ ಕಲ್ಪದ ನಂತರವೂ ಆಗುವುದು.
ಸತ್ಯಯುಗದಲ್ಲಂತೂ ಇಂತಹ ಕೆಲಸಗಳನ್ನು ಮಾಡುವುದಿಲ್ಲ. ಕ್ಷಣ-ಪ್ರತಿಕ್ಷಣದ ನಿಗಧಿಯಾಗಿದೆ. ಕಲ್ಪದ
ನಂತರ ಪುನಃ ಇದೇ ಮಾತು ಪುನರಾವರ್ತನೆಯಾಗುವುದು. ಡ್ರಾಮಾವನ್ನು ಒಳ್ಳೆಯ ರೀತಿಯಲ್ಲಿ
ಅರಿತುಕೊಳ್ಳಬೇಕಾಗಿದೆ. ಒಂದುವೇಳೆ ಹೆಚ್ಚಿನದಾಗಿ ನೆನಪು ಮಾಡಲು ಸಾಧ್ಯವಾಗದಿದ್ದರೆ ತಂದೆಯು
ತಿಳಿಸುತ್ತಾರೆ - ಕೇವಲ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ. ನಾವಾತ್ಮಗಳು ಹೇಗೆ 84 ಜನ್ಮಗಳ
ಚಕ್ರವನ್ನು ಸುತ್ತಿ ಬಂದಿದ್ದೇವೆ ಎಂಬುದೇ ಗುಂಗಿರಲಿ. ಚಿತ್ರಗಳ ಮೇಲೆ ತಿಳಿಸಿಕೊಡಿ, ಬಹಳ
ಸಹಜವಾಗಿದೆ. ಇದು ಆತ್ಮೀಯ ಮಕ್ಕಳೊಂದಿಗೆ ಸಂಭಾಷಣೆಯಾಗಿದೆ. ತಂದೆಯು ಮಕ್ಕಳೊಂದಿಗೇ ಸಂಭಾಷಣೆ
ಮಾಡುತ್ತಾರೆ, ಮತ್ತ್ಯಾರೊಂದಿಗೂ ಮಾಡಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ತನ್ನನ್ನು
ಆತ್ಮವೆಂದು ತಿಳಿಯಿರಿ, ಆತ್ಮವೇ ಎಲ್ಲವನ್ನೂ ಮಾಡುತ್ತದೆ. ತಂದೆಯು ಸ್ಮೃತಿ ತರಿಸುತ್ತಾರೆ - ನೀವು
84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ, ಮನುಷ್ಯರೇ ಆಗಿದ್ದೀರಿ. ಹೇಗೆ ತಂದೆಯು ವಿಕಾರದಲ್ಲಿ
ಹೋಗಬಾರದೆಂದು ಆದೇಶ ನೀಡುತ್ತಾರೆಯೋ ಅದೇ ರೀತಿ ಈ ಆದೇಶವನ್ನೂ ನೀಡುತ್ತಾರೆ - ಯಾರೂ ಅಳಬಾರದು.
ಸತ್ಯಯುಗ-ತ್ರೇತಾಯುಗದಲ್ಲಿ ಎಂದೂ ಯಾರೂ ಅಳುವುದಿಲ್ಲ, ಚಿಕ್ಕಮಕ್ಕಳೂ ಸಹ ಅಳುವುದಿಲ್ಲ. ಅಳುವ
ನಿಯಮವೇ ಇಲ್ಲ. ಅದು ಹರ್ಷಿತರಾಗಿರುವ ಪ್ರಪಂಚವಾಗಿದೆ, ಅದರ ಅಭ್ಯಾಸವೆಲ್ಲವನ್ನೂ ಇಲ್ಲಿಂದಲೇ
ಮಾಡಬೇಕಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಂದೆಯಿಂದ
ಆಶೀರ್ವಾದವನ್ನು ಬೇಡುವ ಬದಲು ನೆನಪಿನ ಯಾತ್ರೆಯಿಂದ ತಮ್ಮ ಎಲ್ಲಾ ಲೆಕ್ಕಾಚಾರಗಳನ್ನು ಸಮಾಪ್ತಿ
ಮಾಡಿಕೊಳ್ಳಬೇಕಾಗಿದೆ. ಪಾವನರಾಗುವ ಪುರುಷಾರ್ಥ ಮಾಡಬೇಕಾಗಿದೆ. ಈ ನಾಟಕವನ್ನು ಯಥಾರ್ಥರೀತಿಯಿಂದ
ಅರಿತುಕೊಳ್ಳಬೇಕಾಗಿದೆ.
2. ಈ ಹಳೆಯ ಪ್ರಪಂಚವನ್ನು
ನೋಡುತ್ತಿದ್ದರೂ ನೆನಪು ಮಾಡಬಾರದಾಗಿದೆ. ಕರ್ಮಯೋಗಿಗಳಾಗಬೇಕು, ಸದಾ ಹರ್ಷಿತರಾಗಿರುವ ಅಭ್ಯಾಸ
ಮಾಡಬೇಕು. ಎಂದೂ ಅಳಬಾರದು.
ವರದಾನ:
ಪ್ರವೃತ್ತಿಯಲ್ಲಿರುತ್ತಾ ನನ್ನತನದ ತ್ಯಾಗ ಮಾಡಿರುವವರೇ ಸತ್ಯ ಟ್ರಸ್ಟಿ, ಮಾಯಾಜೀತ್ ಭವ
ಹೇಗೆ ಕೊಳಕಿನಿಂದ
ಕ್ರಿಮಿ-ಕೀಟಗಳು ಹುಟ್ಟಿಕೊಳ್ಳುತ್ತವೆ ಅದೇ ರೀತಿ ಯಾವಾಗ ನನ್ನತನ ಬರುತ್ತದೆ ಆಗ ಮಾಯೆಯ
ಜನ್ಮವಾಗುತ್ತದೆ. ಮಾಯಾಜೀತರಾಗಲು ಸಹಜ ವಿಧಿಯಾಗಿದೆ- ಸ್ವಯಂನ್ನು ಸದಾ ಟ್ರಸ್ಟಿ ಎಂದು
ತಿಳಿದುಕೊಳ್ಳಿ. ಬ್ರಹ್ಮಾಕುಮಾರ ಎಂದರೆ ಟ್ರಸ್ಟಿ, ಟ್ರಸ್ಟಿಗೆ ಯಾವುದರಲ್ಲಿಯೂ ಮೋಹ ಇರುವುದಿಲ್ಲ
ಏಕೆಂದರೆ ಅವರಲ್ಲಿ ನನ್ನತನ ಎನ್ನುವುದಿರುವುದಿಲ್ಲ. ಗೃಹಸ್ಥಿ ಎಂದು ತಿಳಿದರೆ ಮಾಯೆ ಬರುತ್ತದೆ
ಮತ್ತು ಟ್ರಸ್ಟಿ ಎಂದು ತಿಳಿದರೆ ಮಾಯೆ ಓಡಿಹೋಗುತ್ತದೆ ಆದ್ದರಿಂದ ನ್ಯಾರಾ ಆಗಿ ನಂತರ ಪ್ರವೃತ್ತಿಯ
ಕಾರ್ಯದಲ್ಲಿ ಬನ್ನಿ ಆಗ ಮಾಯಾ ಫ್ರೂಫ್ ಆಗುವಿರಿ.
ಸ್ಲೋಗನ್:
ಎಲ್ಲಿ
ಅಭಿಮಾನವಿರುತ್ತದೆ ಅಲ್ಲಿ ಅಪಮಾನದ ಭಾವನೆ(ಫೀಲಿಂಗ್) ಖಂಡಿತ ಬರುತ್ತದೆ.
ಅವ್ಯಕ್ತ ಸೂಚನೆ - ಸತ್ಯ
ಮತ್ತು ಸಭ್ಯತೆ ರೊಪಿ ಕಲ್ಚರ್(ಸಂಸ್ಕೃತಿಯನ್ನು) ತಮ್ಮದಾಗಿಸಿಕೊಳ್ಳಿರಿ
ತಮ್ಮ ಆಂತರಿಕ ಸ್ವಚ್ಛತೆ,
ಸಭ್ಯತೆ ಎದ್ದೇಳುವುದರಲ್ಲಿ, ಕುಳಿತುಕೊಳ್ಳುವುದರಲ್ಲಿ, ಮಾತನಾಡುವುದರಲ್ಲಿ, ಸೇವೆ ಮಾಡುವುದರಲ್ಲಿ
ಜನರಿಗೆ ಅನುಭವ ಆಗಲಿ ಆಗ ಪರಮಾತ್ಮ ಪ್ರತ್ಯಕ್ಷತೆಯ ನಿಮಿತ್ತ ಆಗಲು ಸಾಧ್ಯ, ಇದಕ್ಕಾಗಿ ಪವಿತ್ರತೆಯ
ಜ್ಯೋತಿ ಸದಾ ಉರಿಯುತ್ತಿರಲಿ. ಸ್ವಲ್ಪವೂ ಸಹ ಏರುಪೇರು ಬರದಿರಲಿ, ಎಷ್ಟು ಪವಿತ್ರತೆಯ ಜ್ಯೋತಿ
ಅಚಲವಾಗಿರುವುದು ಅಷ್ಟು ಸಹಜವಾಗಿ ಎಲ್ಲರೂ ತಂದೆಯನ್ನು ಗುರುತಿಸಲು ಸಾಧ್ಯ.