19.04.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಬೇಹದ್ದಿನ ತಂದೆಯ ಜೊತೆ ಪ್ರಾಮಾಣಿಕವಾಗಿರಿ ಆಗ ಪೂರ್ಣ ಶಕ್ತಿಯು ಸಿಗುವುದು, ಮಾಯೆಯ ಮೇಲೆ
ವಿಜಯವಾಗುತ್ತಾ ಹೋಗುವುದು”
ಪ್ರಶ್ನೆ:
ತಂದೆಯ ಬಳಿ ಯಾವ
ಮುಖ್ಯ ಅಥಾರಿಟಿಯಿದೆ? ಅದರ ಚಿಹ್ನೆಯೇನು?
ಉತ್ತರ:
ತಂದೆಯ ಬಳಿ
ಮುಖ್ಯವಾಗಿ ಜ್ಞಾನದ ಅಥಾರಿಟಿಯಿದೆ, ಜ್ಞಾನಸಾಗರನಾಗಿದ್ದಾರೆ ಆದ್ದರಿಂದ ನೀವು ಮಕ್ಕಳಿಗೆ
ವಿದ್ಯೆಯನ್ನು ಓದಿಸುತ್ತಾರೆ, ತಮ್ಮ ಸಮಾನ ಜ್ಞಾನಪೂರ್ಣರನ್ನಾಗಿ ಮಾಡುತ್ತಾರೆ. ನಿಮ್ಮ ಬಳಿ
ವಿದ್ಯೆಯ ಗುರಿ-ಧ್ಯೇಯವಿದೆ, ವಿದ್ಯೆಯಿಂದಲೇ ನೀವು ಶ್ರೇಷ್ಠಪದವಿಯನ್ನು ಪಡೆಯುತ್ತೀರಿ”
ಗೀತೆ:
ಪ್ರಪಂಚವು
ಬದಲಾದರೂ ನಾವು ಬದಲಾಗುದಿಲ್ಲ..............
ಓಂ ಶಾಂತಿ.
ಭಕ್ತರು ಭಗವಂತನ ಮಹಿಮೆ ಮಾಡುತ್ತಾರೆ. ಈಗಂತೂ ನೀವು ಭಕ್ತರಲ್ಲ, ನೀವು ಭಗವಂತನ ಮಕ್ಕಳಾಗಿದ್ದೀರಿ.
ಅದರಲ್ಲಿಯೂ ಪ್ರಾಮಾಣಿಕ ಮಕ್ಕಳು ಬೇಕು. ಪ್ರತಿಯೊಂದು ಮಾತಿನಲ್ಲಿ ಪ್ರಾಮಾಣಿಕವಾಗಿರಬೇಕು. ಪತಿಗೆ
ಸ್ತ್ರೀಯ ಹೊರತು, ಸ್ತ್ರೀಗೆ ಪತಿಯ ಹೊರತು ಬೇರೆಕಡೆ ದೃಷ್ಟಿ ಹೋದರೆ ಅದಕ್ಕೂ ಅಪ್ರಾಮಾಣಿಕತೆಯೆಂದು
ಹೇಳಲಾಗುತ್ತದೆ. ಈಗ ಇಲ್ಲಿಯೂ ಸಹ ಬೇಹದ್ದಿನ ತಂದೆಯಾಗಿದ್ದಾರೆ ಅವರ ಜೊತೆ ಅಪ್ರಾಮಾಣಿಕ ಮತ್ತು
ಪ್ರಾಮಾಣಿಕ ಎರಡೂ ಪ್ರಕಾರದವರಿದ್ದಾರೆ. ಕೆಲವರು ಪ್ರಾಮಾಣಿಕರಾಗಿ ಮತ್ತೆ
ಅಪ್ರಮಾಣಿಕರಾಗಿಬಿಡುತ್ತಾರೆ. ತಂದೆಯಂತೂ ಹೈಯಸ್ಟ್ ಅಥಾರಿಟಿಯಾಗಿದ್ದಾರೆ. ಸರ್ವಶಕ್ತಿವಂತನಲ್ಲವೆ
ಅಂದಾಗ ಅವರ ಮಕ್ಕಳೂ ಸಹ ಅದೇ ರೀತಿ ಇರಬೇಕಾಗಿದೆ ತಂದೆಯಲ್ಲಿ ಶಕ್ತಿಯಿದೆ, ಮಕ್ಕಳಿಗೆ ರಾವಣನ ಮೇಲೆ
ಜಯಗಳಿಸುವ ಯುಕ್ತಿಯನ್ನು ತಿಳಿಸಿಕೊಡುತ್ತಾರೆ ಆದ್ದರಿಂದ ಅವರಿಗೆ ಸರ್ವಶಕ್ತಿವಂತನೆಂದು
ಕರೆಯಲಾಗುತ್ತದೆ. ನೀವೂ ಸಹ ಶಕ್ತಿಸೇನೆಯಾಗಿದ್ದೀರಲ್ಲವೆ. ನೀವೂ ಸಹ ಸರ್ವಶಕ್ತಿವಂತನೆಂದು
ಹೇಳಿಕೊಳ್ಳುತ್ತೀರಿ. ತಂದೆಯಲ್ಲಿ ಯಾವ ಶಕ್ತಿಯಿದೆಯೋ ಅದನ್ನು ನಮಗೆ ಕೊಡುತ್ತಾರೆ ಮತ್ತು ನೀವು
ಮಾಯಾ ರಾವಣನ ಮೇಲೆ ಹೇಗೆ ಜಯಗಳಿಸಬಹುದು ಎಂದು ತಿಳಿಸುತ್ತಾರೆ ಅಂದಮೇಲೆ ನೀವೂ ಸಹ
ಶಕ್ತಿವಂತರಾಗಬೇಕು. ತಂದೆಯು ಜ್ಞಾನದ ಅಥಾರಿಟಿಯಾಗಿದ್ದಾರೆ, ಜ್ಞಾನಪೂರ್ಣನಾಗಿದ್ದಾರಲ್ಲವೆ. ಹೇಗೆ
ಅವರು ಶಾಸ್ತ್ರಗಳ ಅಥಾರಿಟಿಯಾಗಿರುತ್ತಾರೆ. ಹಾಗೆಯೇ ಈಗ ನೀವು ಸರ್ವಶಕ್ತಿವಂತರು
ಜ್ಞಾನಪೂರ್ಣರಾಗುತ್ತೀರಿ. ನಿಮಗೂ ಸಹ ಜ್ಞಾನವು ಸಿಗುತ್ತದೆ, ಇದು ಪಾಠಶಾಲೆಯಾಗಿದೆ, ಇದರಲ್ಲಿ ನೀವು
ಯಾವ ಜ್ಞಾನವನ್ನು ಓದುತ್ತೀರೋ ಇದರಿಂದ ಶ್ರೇಷ್ಠಪದವಿಯನ್ನು ಪಡೆಯುತ್ತೀರಿ. ಇದೊಂದೇ
ಪಾಠಶಾಲೆಯಾಗಿದೆ. ನೀವಿಲ್ಲಿ ಓದಬೇಕಾಗಿದೆ ಮತ್ತ್ಯಾವುದೇ ಪ್ರಾರ್ಥನೆ ಇತ್ಯಾದಿಗಳನ್ನು
ಮಾಡುವಂತಿಲ್ಲ, ನಿಮಗೆ ವಿದ್ಯೆಯಿಂದ ಆಸ್ತಿಯು ಸಿಗುತ್ತದೆ, ಗುರಿ-ಧ್ಯೇಯವಿದೆ. ನೀವು ಮಕ್ಕಳಿಗೆ
ತಿಳಿದಿದೆ - ತಂದೆಯು ಜ್ಞಾನಪೂರ್ಣನಾಗಿದ್ದಾರೆ, ಅವರ ವಿದ್ಯೆಯು ಸಂಪೂರ್ಣ ಭಿನ್ನವಾಗಿದೆ,
ಜ್ಞಾನಸಾಗರ ತಂದೆಯಾಗಿದ್ದಾರೆ. ಆದ್ದರಿಂದ ಅವರಿಗೇ ತಿಳಿದಿದೆ, ಅವರೇ ನಮಗೆ ಸೃಷ್ಟಿಯ
ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ, ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ತಂದೆಯು
ಸನ್ಮುಖದಲ್ಲಿ ಬಂದು ಜ್ಞಾನವನ್ನು ಕೊಟ್ಟು ಮತ್ತೆ ಹೊರಟುಹೋಗುತ್ತಾರೆ. ಈ ವಿದ್ಯೆಯ ಪ್ರಾಲಬ್ಧವಾಗಿ
ಏನು ಸಿಗುತ್ತದೆ ಎಂಬುದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ಉಳಿದ ಯಾವುದೆಲ್ಲಾ ಸತ್ಸಂಗಗಳಿವೆಯೋ
ಅಥವಾ ಗುರು-ಗೋಸಾಯಿಗಳಿದ್ದಾರೆಯೋ ಅವರೆಲ್ಲರೂ ಭಕ್ತಿಮಾರ್ಗದವರಾಗಿದ್ದಾರೆ. ಈಗ ನಿಮಗೆ ಜ್ಞಾನವು
ಸಿಗುತ್ತದೆ. ಇದನ್ನೂ ತಿಳಿದುಕೊಂಡಿದ್ದೀರಿ - ಯಾರು ಇಲ್ಲಿನವರಾಗಿದ್ದಾರೆಯೋ ಅವರೇ ಇಲ್ಲಿಗೆ
ಬರುತ್ತಾರೆ. ನೀವು ಮಕ್ಕಳು ಸರ್ವೀಸಿನ ಭಿನ್ನ-ಭಿನ್ನ ಯುಕ್ತಿಗಳನ್ನು ರಚಿಸಬೇಕಾಗುತ್ತದೆ. ತಮ್ಮ
ಅನುಭವವನ್ನು ತಿಳಿಸಿ ಅನೇಕರ ಭಾಗ್ಯವನ್ನು ರೂಪಿಸಬೇಕು. ನೀವು ಸೇವಾಧಾರಿಗಳ ಸ್ಥಿತಿಯು ಬಹಳ
ನಿರ್ಭಯ, ಅಡೋಲ ಮತ್ತು ಯೋಗಯುಕ್ತವಾಗಿರಬೇಕು. ಯೋಗದಲ್ಲಿದ್ದು ಸೇವೆ ಮಾಡಿದಾಗ ಸಫಲತೆ ಸಿಗಬಹುದು.
ಮಕ್ಕಳೇ, ನಿಮ್ಮನ್ನು
ನೀವು ಪೂರ್ಣ ಸಂಭಾಲನೆ ಮಾಡಿಕೊಳ್ಳಬೇಕಾಗಿದೆ. ಯಾವಾಗಲಾದರೂ ಆವೇಶವು ಬರಬಾರದು, ಪಕ್ಕಾ
ಯೋಗಯುಕ್ತರಾಗಬೇಕು. ತಂದೆಯು ತಿಳಿಸಿದ್ದಾರೆ - ವಾಸ್ತವದಲ್ಲಿ ನೀವೆಲ್ಲರೂ
ವಾನಪ್ರಸ್ಥಿಗಳಾಗಿದ್ದೀರಿ, ವಾಣಿಯಿಂದ ದೂರವಿರುವ ಸ್ಥಿತಿಯವರು. ವಾನಪ್ರಸ್ಥಿ ಅರ್ಥಾತ್ ವಾಣಿಯಿಂದ
ದೂರವಿರುವ ತಂದೆ ಮತ್ತು ಮನೆಯನ್ನು ನೆನಪು ಮಾಡುವವರು. ಇದರ ವಿನಃ ಮತ್ತ್ಯಾವುದೇ ಇಚ್ಛೆಯಿಲ್ಲ.
ನಮಗೆ ಒಳ್ಳೆಯ ವಸ್ತ್ರಗಳು ಬೇಕು, ಅದು ಬೇಕು, ಇದು ಬೇಕು....... ಇವೆಲ್ಲವೂ ಛೀ ಛೀ ಇಚ್ಛೆಗಳಾಗಿವೆ.
ದೇಹಾಭಿಮಾನಿಗಳು ಸೇವೆ ಮಾಡಲು ಸಾಧ್ಯವಿಲ್ಲ ಆದ್ದರಿಂದ ದೇಹೀ-ಅಭಿಮಾನಿಗಳಾಗಬೇಕಾಗುತ್ತದೆ. ಭಗವಂತನ
ಮಕ್ಕಳಿಗಂತೂ ಶಕ್ತಿಯು ಬೇಕಲ್ಲವೆ. ಅದು ಯೋಗದ ಶಕ್ತಿಯಾಗಿದೆ. ತಂದೆಯಂತೂ ಎಲ್ಲಾ ಮಕ್ಕಳನ್ನು
ಅರಿತುಕೊಳ್ಳಬಲ್ಲರು. ನಿಮ್ಮಲ್ಲಿ ಇಂತಿಂತಹ ನಿರ್ಬಲತೆಗಳನ್ನು ತೆಗೆಯಿರಿ ಎಂದು ತಂದೆಯು ತಕ್ಷಣ
ತಿಳಿಸಿಬಿಡುತ್ತಾರೆ. ತಂದೆಯು ತಿಳಿಸಿದ್ದಾರೆ - ಶಿವನ ಮಂದಿರದಲ್ಲಿ ಹೋಗಿ, ಅಲ್ಲಿ ನಿಮಗೆ ಅನೇಕರು
ಸಿಗುತ್ತಾರೆ. ಬಹಳಷ್ಟು ಮಂದಿ ಹೋಗಿ ಕಾಶಿಯಲ್ಲಿ ವಾಸ ಮಾಡುತ್ತಾರೆ, ಕಾಶೀನಾಥನು ನಮಗೆ ಕಲ್ಯಾಣ
ಮಾಡುತ್ತಾರೆಂದು ಅಲ್ಲಿ ತಿಳಿಯುತ್ತಾರೆ. ನಿಮಗೆ ಬಹಳ ಮಂದಿ ಗ್ರಾಹಕರು ಸಿಗುತ್ತಾರೆ. ಆದರೆ
ಇದರಲ್ಲಿ ಬಹಳ ತೀಕ್ಷ್ಣಬುದ್ಧಿಯು ಬೇಕು. ಗಂಗಾಸ್ನಾನ ಮಾಡುವವರಿಗೂ ಸಹ ಹೋಗಿ ತಿಳಿಸಿಕೊಡಿ.
ಮಂದಿರದಲ್ಲಿಯೂ ಹೋಗಿ ತಿಳಿಸಿ. ಹನುಮಂತನ ತರಹ ಗುಪ್ತವೇಷದಲ್ಲಿ ನೀವು ಹೋಗಬಹುದಾಗಿದೆ.
ವಾಸ್ತವದಲ್ಲಿ ನೀವೇ ಹನುಮಂತರಲ್ಲವೆ ಆದರೆ ಪಾದರಕ್ಷೆಗಳ ಬಳಿ ಕುಳಿತುಕೊಳ್ಳುವ ಮಾತಿಲ್ಲ ಅಂದರೆ
ಇದರಲ್ಲಿ ಬಹಳ ಬುದ್ಧಿವಂತಿಕೆಯಿರಬೇಕು. ಈಗಿನ್ನೂ ಯಾರೂ ಕರ್ಮಾತೀತರಾಗಿಲ್ಲ, ಒಂದಲ್ಲ ಒಂದು
ಬಲಹೀನತೆಗಳು ಅವಶ್ಯವಾಗಿ ಇರುತ್ತದೆ.
ನೀವು ಮಕ್ಕಳಿಗೆ
ನಶೆಯಿರಬೇಕು - ಇದೊಂದೇ ಅಂಗಡಿಯಾಗಿದೆ, ಇಲ್ಲಿ ಎಲ್ಲರೂ ಬರಲೇಬೇಕಾಗಿದೆ, ಕೊನೆಗೊಂದು ದಿನ ಈ
ಸನ್ಯಾಸಿ ಮೊದಲಾದವರೆಲ್ಲರೂ ಬರುತ್ತಾರೆ. ಒಂದೇ ಅಂಗಡಿಯಾಗಿದೆ ಅಂದಮೇಲೆ ಅವರು ಮತ್ತೆ ಎಲ್ಲಿಗೆ
ಹೋಗುತ್ತಾರೆ! ಯಾರು ಬಹಳ ಅಲೆದಿರುವರೋ ಅವರಿಗೇ ಸಿಗುತ್ತದೆ ಮತ್ತು ಇದೊಂದೇ ಅಂಗಡಿಯಾಗಿದೆ
ಎಂಬುದನ್ನು ಅರಿತುಕೊಳ್ಳುತ್ತಾರೆ, ಎಲ್ಲರ ಸದ್ಗತಿದಾತನು ತಂದೆಯೊಬ್ಬರೇ ಅಲ್ಲವೆ. ಅಂದಾಗ ಇಂತಹ
ನಶೆಯೇರಿದಾಗ ಆ ಮಾತೇ ಬೇರೆಯಾಗಿರುತ್ತದೆ. ತಂದೆಗೆ ಇದೇ ಚಿಂತೆಯಿದೆಯಲ್ಲವೆ - ನಾನು ಪತಿತರನ್ನು
ಪಾವನ ಮಾಡಿ ಶಾಂತಿಧಾಮ, ಸುಖಧಾಮದ ಆಸ್ತಿಯನ್ನು ಕೊಡಲು ಬಂದಿದ್ದೇನೆ, ನಿಮ್ಮದೂ ಸಹ ಇದೇ
ಕರ್ತವ್ಯವಾಗಿದೆ. ಎಲ್ಲರ ಕಲ್ಯಾಣ ಮಾಡಬೇಕಾಗಿದೆ. ಇದು ಹಳೆಯ ಪ್ರಪಂಚವಾಗಿದೆ ಅಂದಮೇಲೆ ಇದರ ಆಯಸ್ಸು
ಎಷ್ಟು? ಸ್ವಲ್ಪಸಮಯದಲ್ಲಿಯೇ ಅರಿತುಕೊಳ್ಳುತ್ತಾರೆ, ಈ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ. ಎಲ್ಲಾ
ಆತ್ಮಗಳಿಗೆ ಇದು ಅರ್ಥವಾಗುತ್ತದೆ - ಹೊಸ ಪ್ರಪಂಚವು ಸ್ಥಾಪನೆಯಾದಾಗ ಹಳೆಯ ಪ್ರಪಂಚದ
ವಿನಾಶವಾಗುವುದು. ಮುಂದೆಹೋದಂತೆ ಅವಶ್ಯವಾಗಿ ಭಗವಂತನು ಇಲ್ಲಿದ್ದಾರೆ ಎಂಬ ಮಾತನ್ನು ಹೇಳುತ್ತಾರೆ,
ರಚಯಿತ ತಂದೆಯನ್ನೇ ಮರೆತುಬಿಟ್ಟಿದ್ದಾರೆ. ತ್ರಿಮೂರ್ತಿ ಚಿತ್ರದಲ್ಲಿ ಶಿವನ ಚಿತ್ರವನ್ನು
ಹಾರಿಸಿಬಿಟ್ಟಿದಾರೆ ಅಂದಮೇಲೆ ಈ ಚಿತ್ರದಿಂದೇನು ಪ್ರಯೋಜನ! ಶಿವನೇ ರಚಯಿತನಾಗಿದ್ದಾರಲ್ಲವೆ.
ಅದರಲ್ಲಿ ಶಿವನ ಚಿತ್ರವಿದ್ದಾಗ ಬ್ರಹ್ಮಾರವರ ಮೂಲಕ ಸ್ಥಾಪನೆ ಎಂಬ ಮಾತು ಸ್ಪಷ್ಟವಾಗುತ್ತದೆ.
ಪ್ರಜಾಪಿತ ಬ್ರಹ್ಮನಿದ್ದಾರೆಂದಮೇಲೆ ಅವಶ್ಯವಾಗಿ ಬ್ರಹ್ಮಾಕುಮಾರ-ಕುಮಾರಿಯರೂ ಇರಬೇಕು.
ಬ್ರಾಹ್ಮಣಕುಲವು ಎಲ್ಲದಕ್ಕಿಂತ ಶ್ರೇಷ್ಠವಾಗಿದೆ ಏಕೆಂದರೆ ಬ್ರಹ್ಮನ ಸಂತಾನರಾಗಿದ್ದಾರೆ.
ಬ್ರಾಹ್ಮಣರನ್ನು ಹೇಗೆ ರಚಿಸುತ್ತಾರೆ ಎಂಬುದನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ತಂದೆಯು ಬಂದು
ನಿಮ್ಮನ್ನು ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡುತ್ತಾರೆ. ಇವು ಬಹಳ ಕಷ್ಟವಾದ ಮಾತುಗಳಾಗಿವೆ.
ತಂದೆಯು ಸನ್ಮುಖದಲ್ಲಿ ಬಂದು ತಿಳಿಸಿದ್ದಾಗಲೇ ನಿಮಗೆ ಅರ್ಥವಾಗುವುದು. ಯಾರು ದೇವತೆಗಳಾಗಿದ್ದರು
ಅವರು ಈಗ ಶೂದ್ರರಾಗಿದ್ದಾರೆ. ಈಗ ಅವರನ್ನು ಹೇಗೆ ಹುಡುಕುವುದೆಂಬ ಯುಕ್ತಿಗಳನ್ನು ರಚಿಸಬೇಕಾಗಿದೆ
ಅದರಿಂದ ಈ ಬ್ರಹ್ಮಾಕುಮಾರ-ಕುಮಾರಿಯರದು ಎಷ್ಟು ಮಹತ್ತರವಾದ ಕಾರ್ಯವಾಗಿದೆ ಎಂಬುದನ್ನು
ಅರಿತುಕೊಳ್ಳಲಿ. ಎಷ್ಟೊಂದು ಸಂದೇಶ ಪತ್ರಗಳನ್ನು ಹಂಚುತ್ತೀರಿ! ತಂದೆಯು ವಿಮಾನದಿಂದ ಪತ್ರಗಳನ್ನು
ಹಾಕುವುದಕ್ಕೂ ತಿಳಿಸಿದ್ದರು. ಕೊನೆಪಕ್ಷ ಪತ್ರಿಕೆಯಷ್ಟು ಒಂದು ಕಾಗದವಿರಲಿ ಅದರಲ್ಲಿ ಮುಖ್ಯವಾಗಿ
ಏಣಿ ಮೊದಲಾದ ಚಿತ್ರಗಳ ತಿಳುವಳಿಕೆಯನ್ನು ಬರೆಯಬೇಕಾಗಿದೆ. ಮುಖ್ಯವಾದುದು ಹಿಂದಿ ಮತ್ತು
ಆಂಗ್ಲಭಾಷೆಯಾಗಿದೆ ಅಂದಾಗ ಸೇವೆಯನ್ನು ಹೇಗೆ ವೃದ್ಧಿಸುವುದು ಎಂದು ಮಕ್ಕಳಿಗೆ ಇಡೀ ದಿನ
ಚಿಂತನೆಯಿರಬೇಕು. ಇದೂ ಸಹ ನಿಮಗೆ ತಿಳಿದಿದೆ - ನಾಟಕದನುಸಾರ ಪುರುಷಾರ್ಥವು ನಡೆಯುತ್ತಿರುತ್ತದೆ.
ಇವರು ಬಹಳ ಒಳ್ಳೆಯ ಸೇವೆ ಮಾಡುತ್ತಾರೆ, ಇವರ ಪದವಿಯೂ ಉನ್ನತವಾಗಿರುವುದು ಎಂದು ತಿಳಿಯಲಾಗುತ್ತದೆ.
ಪ್ರತಿಯೊಬ್ಬ ಪಾತ್ರಧಾರಿಯ ಪಾತ್ರವು ಬೇರೆ-ಬೇರೆಯಾಗಿದೆ, ಈ ಸಾಲನ್ನೂ ಸಹ ಅವಶ್ಯವಾಗಿ
ಬರೆಯಬೇಕಾಗಿದೆ. ತಂದೆಯೂ ಸಹ ನಾಟಕದಲ್ಲಿ ನಿರಾಕಾರಿ ಪ್ರಪಂಚದಿಂದ ಬಂದು ಸಾಕಾರಿ ಶರೀರದ ಆಧಾರವನ್ನು
ತೆಗೆದುಕೊಂಡು ಪಾತ್ರವನ್ನಭಿನಯಿಸುತ್ತಾರೆ. ಯಾರ್ಯಾರು ಎಷ್ಟು ಪಾತ್ರವನ್ನಭಿನಯಿಸುತ್ತಾರೆಂದು ಈಗ
ನಿಮ್ಮ ಬುದ್ಧಿಯಲ್ಲಿದೆ ಆದ್ದರಿಂದ ಈ ಸಾಲೂ ಸಹ ಮುಖ್ಯವಾಗಿದೆ. ಈ ಸೃಷ್ಟಿಚಕ್ರವನ್ನು
ತಿಳಿದುಕೊಳ್ಳುವುದರಿಂದ ಮನುಷ್ಯರು ಸ್ವದರ್ಶನಚಕ್ರಧಾರಿಗಳಾಗಿ ಚಕ್ರವರ್ತಿ ರಾಜರು ವಿಶ್ವದ
ಮಾಲೀಕರಾಗಬಹುದೆಂಬ ಮಾತನ್ನು ಸಿದ್ಧ ಮಾಡಿ ತಿಳಿಸಬೇಕಾಗಿದೆ. ನಿಮ್ಮ ಬಳಿ ಪೂರ್ಣ ಜ್ಞಾನವಿದೆಯಲ್ಲವೆ!
ತಂದೆಯ ಬಳಿ ಗೀತಾಜ್ಞಾನವಿದೆ ಯಾವುದರಿಂದ ಮನುಷ್ಯನು ನರನಿಂದ ನಾರಾಯಣನಾಗುತ್ತಾನೆ. ಬುದ್ಧಿಯಲ್ಲಿ
ಸಂಪೂರ್ಣ ಜ್ಞಾನವು ಬಂದುಬಿಟ್ಟಿತೆಂದರೆ ಮತ್ತೆ ಅವರಿಗಾಗಿ ರಾಜ್ಯಪದವಿಯು ಬೇಕು. ಅಂದಾಗ ಮಕ್ಕಳು
ಹೀಗ್ಹೀಗೆ ವಿಚಾರ ಮಾಡಿ ತಂದೆಯ ಸೇವೆಯಲ್ಲಿ ತೊಡಗಬೇಕಾಗಿದೆ.
ಜೈಪುರದಲ್ಲಿಯೂ ಈ
ಆಧ್ಯಾತ್ಮಿಕ ಸಂಗ್ರಹಾಲಯವು ಸದಾ ಇರುವುದು. ಇದರ ಬಗ್ಗೆ ತಿಳಿದುಕೊಳ್ಳುವುದರಿಂದ ಮನುಷ್ಯರು
ವಿಶ್ವದ ಮಾಲೀಕರಾಗಬಹುದೆಂದು ಬರೆಯಲಾಗಿದೆ, ಇದನ್ನು ಯಾರು ನೋಡುವರೋ ಅವರು ಹೋಗಿ ಇನ್ನೊಬ್ಬರಿಗೆ
ತಿಳಿಸುತ್ತಾರೆ. ಮಕ್ಕಳು ಸದಾ ಸೇವೆಯಲ್ಲಿರಬೇಕಾಗಿದೆ. ಮಮ್ಮಾರವರು ಸೇವೆಯಲ್ಲಿದ್ದರು, ಅವರನ್ನು
ನಿಮಿತ್ತ ಮಾಡಲಾಗಿತ್ತು. ಸರಸ್ವತಿ ಯಾರು ಎಂಬುದು ಯಾವುದೇ ಶಾಸ್ತ್ರಗಳಲ್ಲಿಲ್ಲ. ಪ್ರಜಾಪಿತ
ಬ್ರಹ್ಮಾನಿಗೆ ಒಬ್ಬರೇ ಮಗಳು ಇರುವರೇ? ಅನೇಕ ಮಕ್ಕಳು, ಅನೇಕ ಹೆಸರಿನವರು ಇರಬೇಕಲ್ಲವೆ. ಅವರು
ದತ್ತು ಮಗಳಾಗಿದ್ದರು. ಹೇಗೆ ನೀವೂ ಸಹ ಈಗ ದತ್ತಾಗಿದ್ದೀರಿ, ಒಂದು ವಂಶಾವಳಿಯು ಹೊರಟುಹೋದರೆ ಮತ್ತೆ
ಇನ್ನೊಂದನ್ನು ಸ್ಥಾಪನೆ ಮಾಡಲಾಗುತ್ತದೆ. ಪ್ರಧಾನ ಮಂತ್ರಿಯೂ ಸಹ ಇನ್ನೊಬ್ಬರನ್ನು ಆ ಸ್ಥಾನಕ್ಕೆ
ಆಯ್ಕೆ ಮಾಡಿಬಿಡುತ್ತಾರೆ. ಯೋಗ್ಯರೆಂದು ತಿಳಿದಾಗ ಅವರನ್ನು ಇಷ್ಟಪಡುತ್ತಾರೆ ಆದರೆ ಮತ್ತೆ ಅವರ
ಸಮಯವು ಪೂರ್ಣವಾದಮೇಲೆ ಇನ್ನೊಬ್ಬರನ್ನು ಆಯ್ಕೆ ಮಾಡಬೇಕಾಗುತ್ತದೆ. ಯಾರಿಗೆ ಹೇಗೆ ಗೌರವ
ಕೊಡುವುದೆಂದು ತಂದೆಯು ಮಕ್ಕಳಿಗೆ ಮೊಟ್ಟಮೊದಲನೆಯದಾಗಿ ಇದನ್ನೇ ಕಲಿಸುತ್ತಾರೆ. ಯಾರು
ಅವಿದ್ಯಾವಂತರಾಗಿರುವರೋ ಅವರಿಗೆ ಅನ್ಯರಪ್ರತಿ ಗೌರವ ಕೊಡುವುದು ಬರುವುದಿಲ್ಲ. ಯಾರೆಷ್ಟು
ಹೆಚ್ಚಿನದಾಗಿ ಬುದ್ಧಿವಂತರಿದ್ದಾರೆಯೋ ಅವರಿಗೆ ಗೌರವ ಕೊಡಲೇಬೇಕಾಗಿದೆ. ಹಿರಿಯರಿಗೆ ಗೌರವ
ಕೊಡುವುದರಿಂದ ಅವರೂ ಸಹ ಕಲಿಯುತ್ತಾರೆ. ಅವಿದ್ಯಾವಂತರಂತೂ ಅಮಾಯಕರಾಗಿರುತ್ತಾರೆ. ತಂದೆಯೂ ಸಹ ಬಂದು
ಅವಿದ್ಯಾವಂತರನ್ನೇ ಮೇಲೆತ್ತಿದ್ದಾರೆ, ಇತ್ತೀಚೆಗೆ ಮಹಿಳೆಯರನ್ನು ಮುಂದಿಡುತ್ತಾರೆ. ನೀವು
ಮಕ್ಕಳಿಗೆ ತಿಳಿದಿದೆ - ನಾವಾತ್ಮಗಳ ನಿಶ್ಚಿತಾರ್ಥವು ಪರಮಾತ್ಮನ ಜೊತೆ ಆಗಿದೆ, ನಾವು
ವಿಷ್ಣುಪುರಿಯ ಮಾಲೀಕರಾಗುತ್ತೇವೆಂದು ನೀವು ಬಹಳ ಖುಷಿಯಾಗುತ್ತೀರಿ. ಹೇಗೆ ಕನ್ಯೆಗೆ ಪುರುಷನನ್ನು
ನೋಡದೆಯೇ ಅವರ ಜೊತೆ ಬುದ್ಧಿಯೋಗವು ಜೋಡಿಸಲ್ಪಡುತ್ತದೆಯಲ್ಲವೆ. ಇಲ್ಲಿಯೂ ಸಹ ಆತ್ಮಕ್ಕೆ ಗೊತ್ತಿದೆ
- ಈ ಆತ್ಮ ಮತ್ತು ಪರಮಾತ್ಮನ ನಿಶ್ಚಿತಾರ್ಥವು ವಿಚಿತ್ರವಾಗಿದೆ. ಒಬ್ಬ ತಂದೆಯನ್ನೇ ನೆನಪು
ಮಾಡಬೇಕಾಗಿದೆ. ಅಲ್ಲಂತೂ ಗುರುಗಳನ್ನು ನೆನಪು ಮಾಡಿ, ಈ ಮಂತ್ರವನ್ನು ನೆನಪು ಮಾಡಿ ಎಂದು
ಹೇಳುತ್ತಾರೆ. ಇಲ್ಲಿ ಎಲ್ಲವೂ ತಂದೆಯೇ ಆಗಿದ್ದಾರೆ. ಇವರ ಮೂಲಕ ಬಂದು ನಿಶ್ಚಿತಾರ್ಥ
ಮಾಡಿಕೊಳ್ಳುತ್ತಾರೆ. ತಿಳಿಸುತ್ತಾರೆ - ನಾನು ನಿಮ್ಮ ತಂದೆಯೂ ಆಗಿದ್ದೇನೆ, ನನ್ನಿಂದ ಆಸ್ತಿಯು
ಸಿಗುತ್ತದೆ. ಹೇಗೆ ಕನ್ಯೆಗೆ ನಿಶ್ಚಿತಾರ್ಥವಾದರೆ ಮತ್ತೆ ಮರೆಯುವುದೇ ಇಲ್ಲ, ಅವರನ್ನೇ ನೆನಪು
ಮಾಡುತ್ತಾಳೆ. ಅಂದಮೇಲೆ ನೀವೇಕೆ ಮರೆತುಹೋಗುತ್ತೀರಿ? ಕರ್ಮಾತೀತ ಸ್ಥಿತಿಯನ್ನು ಪಡೆಯುವುದರಲ್ಲಿ
ಸಮಯ ಹಿಡಿಸುತ್ತದೆ. ಕರ್ಮಾತೀತ ಸ್ಥಿತಿಯನ್ನು ಪಡೆದು ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ.
ಯಾವಾಗ ಪ್ರಿಯತಮನು ನಡೆಯುವರೋ ಅವರ ಹಿಂದೆ ದಿಬ್ಬಣವು (ಮೆರವಣಿಗೆ) ಹೊರಡುವುದು. ಇದು ಶಿವನ
ಮೆರವಣಿಗೆಯಾಗಿದೆ, ಶಂಕರನ ಮಾತಿಲ್ಲ. ಒಬ್ಬರೇ ಪ್ರಿಯತಮನಾಗಿದ್ದಾರೆ, ಉಳಿದವರೆಲ್ಲರೂ
ಪ್ರಿಯತಮೆಯರಾಗಿದ್ದಾರೆ. ಅಂದಾಗ ಇದು ಶಿವತಂದೆಯ ಮೆರವಣಿಗೆಯಾಗಿದೆ ಆದರೆ ಮಗನ (ಶಂಕರನ)
ಹೆಸರನ್ನಿಟ್ಟುಬಿಟ್ಟಿದ್ದಾರೆ. ಉದಾಹರಣೆಯನ್ನು ಕೊಟ್ಟು ತಿಳಿಸಲಾಗುತ್ತದೆ. ತಂದೆಯು ಬಂದು ಸುಂದರ
ಹೂಗಳನ್ನಾಗಿ ಮಾಡಿ ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ. ಯಾವ ಮಕ್ಕಳು ಕಾಮಚಿತೆಯ ಮೇಲೆ ಕುಳಿತು
ಪತಿತರಾಗಿಬಿಟ್ಟಿದ್ದಾರೋ ಅವರನ್ನು ಜ್ಞಾನಚಿತೆಯ ಮೇಲೆ ಕುಳ್ಳರಿಸಿ ಹೂಗಳನ್ನಾಗಿ ಮಾಡಿ ಕರೆದುಕೊಂಡು
ಹೋಗುತ್ತಾರೆ. ಇದಂತೂ ಹಳೆಯ ಪ್ರಪಂಚವಾಗಿದೆಯಲ್ಲವೆ. ತಂದೆಯು ಕಲ್ಪ-ಕಲ್ಪವೂ ಬರುತ್ತಾರೆ, ನಾನು
ಬಂದು ಪತಿತರನ್ನು ಹೂಗಳ ಸಮಾನ ಮಾಡಿ ಕರೆದುಕೊಂಡು ಹೋಗುತ್ತೇನೆ. ರಾವಣನು ಪತಿತರನ್ನಾಗಿ
ಮಾಡುತ್ತಾನೆ ಮತ್ತು ಶಿವತಂದೆಯು ಹೂಗಳನ್ನಾಗಿ ಮಾಡುತ್ತಾರೆ ಅಂದಾಗ ತಂದೆಯು ಬಹಳಷ್ಟು
ಯುಕ್ತಿಗಳನ್ನು ತಿಳಿಸುತ್ತಿರುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ತಿನ್ನುವ-ಕುಡಿಯುವ ಛೀ ಛೀ ಇಚ್ಛೆಗಳನ್ನು ಬಿಟ್ಟು ದೇಹೀ ಅಭಿಮಾನಿಯಾಗಿ ಸರ್ವೀಸ್ ಮಾಡಬೇಕಾಗಿದೆ.
ನೆನಪಿನಿಂದ ಶಕ್ತಿಯನ್ನು ಪಡೆದು ನಿರ್ಭಯ ಮತ್ತು ಅಡೋಲ ಸ್ಥಿತಿಯನ್ನು ಮಾಡಿಕೊಳ್ಳಬೇಕಾಗಿದೆ.
2. ಯಾರು ವಿದ್ಯೆಯಲ್ಲಿ
ತೀಕ್ಷ್ಣಬುದ್ದಿವಂತರಿದ್ದಾರೆಯೋ ಅವರಿಗೆ ಗೌರವ ಕೊಡಬೇಕಾಗಿದೆ. ಅಲೆದಾಡುತ್ತಿರುವ ಆತ್ಮರಿಗೆ
ಮಾರ್ಗವನ್ನು ತಿಳಿಸುವ ಯುಕ್ತಿಯನ್ನು ರಚಿಸಬೇಕಾಗಿದೆ, ಎಲ್ಲರ ಕಲ್ಯಾಣ ಮಾಡಬೇಕಾಗಿದೆ.
ವರದಾನ:
ತಮ್ಮ ಮಹತ್ವಿಕೆ
ಹಾಗೂ ಕರ್ತವ್ಯವನ್ನು ತಿಳಿದಿರುವವರು ಸದಾ ಜಾಗೃತ ಜ್ಯೋತಿ ಭವ
ನೀವು ಮಕ್ಕಳು ಜಗತ್ತಿನ
ಜ್ಯೋತಿಯಾಗಿರುವಿರಿ, ತಮ್ಮ ಪರಿವರ್ತನೆಯಿಂದ ವಿಶ್ವದ ಪರಿವರ್ತನೆಯಾಗಬೇಕಿದೆ. ಆದ್ದರಿಂದ ಕಳೆದು
ಹೋದದ್ದು ಕಳೆದುಹೋಯಿತೆಂದು ತಿಳಿದು ತಮ್ಮ ಮಹತ್ವಿಕೆ ಹಾಗೂ ಕರ್ತವ್ಯವನ್ನು ಅರಿತು, ಸದಾ ಜಾಗೃತ
ಜ್ಯೋತಿಯಾಗಿ. ನೀವು ಸೆಕೆಂಡಿನಲ್ಲಿ ಸ್ವ ಪರಿವರ್ತನೆಯಿಂದ ವಿಶ್ವ ಪರಿವರ್ತನೆ ಮಾಡಬಲ್ಲಿರಿ. ಕೇವಲ
ಅಭ್ಯಾಸ ಮಾಡಿ ಈಗೀಗ ಕರ್ಮಯೋಗಿ, ಈಗೀಗ ಕರ್ಮಾತೀತ ಸ್ಥಿತಿ. ಹೇಗೆ ನಿಮ್ಮ ರಚನೆಯಾದ – ಆಮೆ,
ಸೆಕೆಂಡ್ನಲ್ಲಿ ತನ್ನ ಎಲ್ಲಾ ಅಂಗಗಳನ್ನು ಸಂಕುಚಿತಗೊಳಿಸಿಕೊಳ್ಳುವುದು. ಅದೇ ರೀತಿ ನೀವು ಮಾಸ್ಟರ್
ರಚೈತ ಸಂಕುಚಿತಗೊಳಿಸುವ ಶಕ್ತಿಯ ಆಧಾರದಿಂದ ಸೆಕೆಂಡ್ನಲ್ಲಿ ಸರ್ವ ಸಂಕಲ್ಪಗಳನ್ನು ಸಮಾವೇಶ
ಮಾಡಿಕೊಂಡು ಒಂದು ಸಂಕಲ್ಪದಲ್ಲಿ ಸ್ಥಿತರಾಗಿಬಿಡಿ.
ಸ್ಲೋಗನ್:
ಲವಲೀನ ಸ್ಥಿತಿಯ
ಅನುಭವ ಮಾಡಬೇಕಾದರೆ ಸ್ಮೃತಿ-ವಿಸ್ಮೃತಿಯ ಯುದ್ಧ ಸಮಾಪ್ತಿ ಮಾಡಿ.
ಮಾತೇಶ್ವರೀಜೀಯವರ ಮಧುರ
ಮಹಾವಾಕ್ಯ
“ಅರ್ಧಕಲ್ಪ ಜ್ಞಾನ-
ಬ್ರಹ್ಮಾನ ದಿನ ಮತ್ತು ಅರ್ಧಕಲ್ಪ ಭಕ್ತಿ -ಬ್ರಹ್ಮಾನ ರಾತ್ರಿ”
ಅರ್ಧಕಲ್ಪವಾಗಿದೆ
ಬ್ರಹ್ಮಾನ ದಿನ, ಅರ್ಧಕಲ್ಪವಾಗಿದೆ ಬ್ರಹ್ಮಾನ ರಾತ್ರಿ, ಈಗ ರಾತ್ರಿ ಪೂರ್ತಿ ಆಗಿ ಹಗಲು
ಬರಬೇಕಾಗಿದೆ. ಈಗ ಪರಮಾತ್ಮ ಬಂದು ಅಂಧಕಾರವನ್ನು ಅಂತ್ಯ ಮಾಡಿ ಬೆಳಕಿನ ಆರಂಭ ಮಾಡುತ್ತಾರೆ,
ಜ್ಞಾನದಿಂದ ಬೆಳಕು, ಭಕ್ತಿಯಿಂದ ಅಂಧಕಾರ. ಗೀತೆಯಲ್ಲಿಯೂ ಸಹ ಹೇಳುತ್ತಾರೆ, ಈ ಪಾಪದ ಪ್ರಪಂಚದಿಂದ
ಎಲ್ಲಾದರು ದೂರ ಮನಸ್ಸಿಗೆ ಶಾಂತಿ, ನೆಮ್ಮದಿ ಇರುವ ಕಡೆ ಕರೆದುಕೊಂಡು ಹೋಗು....... ಇದಾಗಿದೆ
ನೆಮ್ಮದಿ ಇಲ್ಲದ ಜಗತ್ತು, ಎಲ್ಲಿ ನೆಮ್ಮದಿ ಇಲ್ಲ. ಮುಕ್ತಿಯಲ್ಲಿ ಶಾಂತಿಯೂ ಇಲ್ಲ, ನೆಮ್ಮದಿಯೂ
ಇಲ್ಲ. ಸತ್ಯಯುಗ, ತ್ರೇತಾಯುಗದಲ್ಲಿ ಶಾಂತಿಯ ಜಗತ್ತು, ಯಾವ ಸುಖಧಾಮವನ್ನು ಎಲ್ಲರೂ ನೆನಪು
ಮಾಡುತ್ತಾರೆ. ಆದ್ದರಿಂದ ಈಗ ನೀವು ಶಾಂತಿಯ ಜಗತ್ತಿಗೆ ಹೋಗುತ್ತಿರುವಿರಿ, ಅಲ್ಲಿ ಅಪವಿತ್ರ ಆತ್ಮರು
ಯಾರು ಹೋಗಲು ಸಾಧ್ಯವಿಲ್ಲ, ಅವರು ಅಂತ್ಯದಲ್ಲಿ ಧರ್ಮರಾಜನಿಂದ ಶಿಕ್ಷೆ ಅನುಭವಿಸಿ ಕರ್ಮಬಂಧನದಿಂದ
ಮುಕ್ತರಾಗಿ ಶುದ್ಧ ಸಂಸ್ಕಾರಗಳನ್ನು ತೆಗೆದುಕೊಂಡು ಹೋಗುತ್ತಾರೆ. ಏಕೆಂದರೆ ಅಲ್ಲಿ ಅಶುದ್ಧ
ಸಂಸ್ಕಾರ ಇರುವುದಿಲ್ಲ, ಪಾಪವಿರುವುದಿಲ್ಲ. ಯಾವಾಗ ಆತ್ಮ ತನ್ನ ನಿಜವಾದ ತಂದೆಯನ್ನು
ಮರೆತುಹೋಗುತ್ತದೆ ಆಗ ಈ ಮರೆತು ಮರೆಸುವಂತಹ ಅನಾದಿ ಆಟ ಸೋಲು ಗೆಲುವಿನಿಂದ ಮಾಡಲ್ಪಟ್ಟಿದೆ
ಆದ್ದರಿಂದ ತಮ್ಮ ಈ ಸರ್ವಶಕ್ತಿವಂತ ಪರಮಾತ್ಮನ ಮೂಲಕ ಶಕ್ತಿಯನ್ನು ಪಡೆದುಕೊಂಡು ವಿಕಾರಗಳ ಮೇಲೆ
ವಿಜಯ ಸಾಧಿಸಿ 21 ಜನ್ಮಗಳಿಗಾಗಿ ರಾಜ್ಯಭಾಗ್ಯ ಪಡೆಯುತ್ತಿರುವಿರಿ. ಒಳ್ಳೆಯದು. ಓಂ ಶಾಂತಿ.
ಅವ್ಯಕ್ತ ಸೂಚನೆ:
ಕಂಬೈಂಡ್ ರೂಪದ ಸ್ಮೃತಿಯಿಂದ ಸದಾ ವಿಜಯಿಯಾಗಿರಿ
ನಾನು ಆತ್ಮನಿಂದ
ಮಾಡಿಸುವಂತಹ ಆ ಪರಮ ಆತ್ಮನಾಗಿದ್ದಾರೆ. ಮಾಡಿಸುವಂತಹವರ ಆಧಾರದಿಂದ ನಾನು ನಿಮಿತ್ತ
ಮಾಡುವಂತಹನಾಗಿದ್ದೇನೆ. ನಾನು ಮಾಡುವವನಾಗಿದ್ದೇನೆ, ಅವರು ಮಾಡಿಸುವವನಾಗಿದ್ದಾರೆ. ಅವರು
ನಡೆಸುತ್ತಿದ್ದಾರೆ, ನಾನು ನಡೆಯುತ್ತಿದ್ದೇನೆ. ಪ್ರತಿ ಡೈರೆಕ್ಷನ್ನಲ್ಲಿ ನಾನು ಆತ್ಮನಿಗಾಗಿ
ಸಂಕಲ್ಪ, ಮಾತು ಮತ್ತು ಕರ್ಮದಲ್ಲಿ ಸದಾ ಮಾಲೀಕ ಪ್ರತ್ಯಕ್ಷರಾಗಿದ್ದಾರೆ ಅದಕ್ಕೆ ಮಾಲೀಕನ ಮುಂದೆ
ಸದಾ ನಾನು ಆತ್ಮನೂ ಪ್ರತ್ಯಕ್ಷನಾಗಿದ್ದೇನೆ. ಸದಾ ಇದೇ ಕಂಬೈಂಡ್ ರೂಪದಲ್ಲಿರಿ.