19.06.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ಎಲ್ಲದಕ್ಕಿಂತ ಮೂಲ ಸೇವೆಯಾಗಿದೆ- ತಂದೆಯ ನೆನಪಿನಲ್ಲಿರುವುದು ಮತ್ತು ಅನ್ಯರಿಗೆ ನೆನಪು ತರಿಸುವುದು, ನೀವು ಯಾರಿಗಾದರೂ ತಂದೆಯ ಪರಿಚಯವನ್ನು ಕೊಟ್ಟು ಅವರ ಕಲ್ಯಾಣ ಮಾಡಬಹುದು”

ಪ್ರಶ್ನೆ:
ಯಾವ ಒಂದು ಚಿಕ್ಕ ಹವ್ಯಾಸವೂ ಬಹಳ ದೊಡ್ಡ ಉಲ್ಲಂಘನೆ ಮಾಡಿಸುತ್ತದೆ, ಅದರಿಂದ ಮುಕ್ತರಾಗುವ ಯುಕ್ತಿಯೇನಾಗಿದೆ?

ಉತ್ತರ:
ಒಂದುವೇಳೆ ಯಾರಲ್ಲಾದರೂ ಏನಾದರೂ ಬಚ್ಚಿಟ್ಟುಕೊಳ್ಳುವ ಹಾಗೂ ಕಳ್ಳತನ ಮಾಡುವ ಹವ್ಯಾಸವಿದ್ದರೂ ಅದು ಒಂದು ದೊಡ್ಡ ಉಲ್ಲಂಘನೆಯಾಗಿಬಿಡುತ್ತದೆ. ಹೇಳಲಾಗುತ್ತದೆ- ಪೈಸೆ ಕದ್ದರೂ ಕಳ್ಳ, ಲಕ್ಷ ಕದ್ದರೂ ಕಳ್ಳ. ಲೋಭಕ್ಕೆ ವಶವಾಗಿ ಹಸಿವೆಯಾದಾಗ ಕೇಳದೇ ಬಚ್ಚಿಟ್ಟುಕೊಂಡು ತಿಂದುಬಿಡುವುದು, ಕದಿಯುವುದು- ಇದು ಬಹಳ ಕೆಟ್ಟ ಹವ್ಯಾಸವಾಗಿದೆ. ಈ ಹವ್ಯಾಸದಿಂದ ಮುಕ್ತರಾಗಲು ಬ್ರಹ್ಮಾತಂದೆಯ ಸಮಾನ ಟ್ರಸ್ಟಿಯಾಗಿ. ಯಾವುದೆಲ್ಲಾ ಇಂತಹ ಹವ್ಯಾಸಗಳಿವೆಯೋ ಅದನ್ನು ಸತ್ಯ-ಸತ್ಯವಾಗಿ ತಿಳಿಸಿರಿ.

ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸಿಕೊಡುತ್ತಾರೆ. ಮಕ್ಕಳಿಗೂ ಗೊತ್ತಿದೆ- ನಾವು ಬೇಹದ್ದಿನ ತಂದೆಯ ಸನ್ಮುಖದಲ್ಲಿ ಕುಳಿತಿದ್ದೇವೆ, ಈಶ್ವರೀಯ ಪರಿವಾರದವರಾಗಿದ್ದೇವೆ. ಈಶ್ವರನು ನಿರಾಕಾರನಾಗಿದ್ದಾರೆ. ಇದೂ ಗೊತ್ತಿದೆ, ನೀವು ಆತ್ಮಾಭಿಮಾನಿಯಾಗಿ ಈಗ ಇದರಲ್ಲಿ ಯಾವುದೇ ವಿಜ್ಞಾನದ ಅಭಿಮಾನ ಅಥವಾ ಹಠಯೋಗ ಮೊದಲಾದವುಗಳನ್ನು ಮಾಡುವ ಮಾತಿಲ್ಲ. ಇದು ಬುದ್ಧಿಯ ಕೆಲಸವಾಗಿದೆ. ಈ ಶರೀರದ ಏನೂ ಕೆಲಸ ಇರುವುದಿಲ್ಲ. ಹಠಯೋಗದಲ್ಲಿ ಶರೀರದ ಕೆಲಸವಿರುತ್ತದೆ. ಇಲ್ಲಿ ನಾವು ಮಕ್ಕಳೆಂದು ತಿಳಿದು ತಂದೆಯ ಸನ್ಮುಖದಲ್ಲಿ ಕುಳಿತಿದ್ದೀರಿ. ನಮಗೆ ತಂದೆಯೇ ಓದಿಸುತ್ತಿದ್ದಾರೆಂದು ನಿಮಗೆ ತಿಳಿದಿದೆ. ಮೊದಲದನೆಯದಾಗಿ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ ಆಗ ಮಧುರ ಮಕ್ಕಳೇ, ನಿಮ್ಮ ಎಲ್ಲಾ ಪಾಪಗಳು ತುಂಡಾಗುತ್ತವೆ ಮತ್ತು ಚಕ್ರವನ್ನು ತಿರುಗಿಸಿ, ಅನ್ಯರ ಸೇವೆ ಮಾಡಿ ತಮ್ಮ ಸಮಾನ ಮಾಡಿಕೊಳ್ಳಿ. ಇವರು ಯಾವ ಸೇವೆ ಮಾಡುತ್ತಿದ್ದಾರೆ, ಸ್ಥೂಲ ಸೇವೆ ಮಾಡುತ್ತಾರೆಯೇ, ಸೂಕ್ಷ್ಮಸೇವೆ ಮಾಡುತ್ತಾರೆಯೇ, ಅಥವಾ ಸೇವೆ ಮಾಡುತ್ತಾರೆಯೇ ಎಂದು ಒಬ್ಬೊಬ್ಬರನ್ನೂ ತಂದೆ ನೋಡುತ್ತಾರೆ. ಇವರು ಎಲ್ಲರಿಗೆ ತಂದೆಯ ಪರಿಚಯ ಕೊಡುತ್ತಾರೆಯೇ ಎಂದು ನೋಡುತ್ತಾರೆ. ಮೂಲ ಮಾತೇ ಇದಾಗಿದೆ- ಪ್ರತಿಯೊಬ್ಬ ಮಗುವಿಗೆ ತಂದೆಯ ಪರಿಚಯ ಕೊಡುತ್ತಾರೆಯೇ ಮತ್ತು ತಂದೆ ಹೇಳುತ್ತಾರೆ ನನ್ನನ್ನು ನೆನಪು ಮಾಡಿದರೆ ನಿಮ್ಮ ಜನ್ಮಜನ್ಮಾಂತರದ ಪಾಪಗಳು ಕಳೆಯುತ್ತವೆ, ಎಂದು ಅನ್ಯರಿಗೆ ತಿಳಿಸುತ್ತಾರೆಯೇ. ಮತ್ತು ಎಲ್ಲಿಯವರೆಗೆ ಈ ಸರ್ವೀಸಿನಲ್ಲಿರುತ್ತಾರೆ? ತಮ್ಮೊಂದಿಗೆ ಹೋಲಿಕೆ ಮಾಡುತ್ತಾರೆ- ಎಲ್ಲರಿಗಿಂತ ಹೆಚ್ಚಿನ ಸರ್ವೀಸ್ ಯಾರು ಮಾಡುತ್ತಾರೆ? ನಾನು ಇವರಿಗಿಂತಲೂ ಹೆಚ್ಚಿನ ಸರ್ವೀಸನ್ನು ಏಕೆ ಮಾಡಬಾರದು! ಇವರಿಗಿಂತಲೂ ಹೆಚ್ಚಿನದಾಗಿ ನೆನಪಿನ ಯಾತ್ರೆಯಲ್ಲಿ ಓಟವನ್ನು ಓಡಬಲ್ಲೆನೆ ಅಥವಾ ಇಲ್ಲವೆ? ಪ್ರತಿಯೊಬ್ಬರನ್ನೂ ತಂದೆಯು ನೋಡುತ್ತಾರೆ. ತಂದೆಯು ಪ್ರತಿಯೊಬ್ಬರೊಂದಿಗೂ ಸಮಾಚಾರವನ್ನು ಕೇಳುತ್ತಾರೆ- ಏನೇನು ಸೇವೆ ಮಾಡುತ್ತಾರೆ? ಅನ್ಯರಿಗೆ ತಂದೆಯ ಪರಿಚಯ ಕೊಟ್ಟು ಅವರ ಕಲ್ಯಾಣ ಮಾಡುತ್ತಾರಾ? ಸಮಯವನ್ನು ವ್ಯರ್ಥ ಮಾಡುವುದಿಲ್ಲವೇ? ಮೂಲಮಾತೇ ಇದಾಗಿದೆ- ಈ ಸಮಯದಲ್ಲಿ ಎಲ್ಲರೂ ಅನಾಥರಾಗಿದ್ದಾರೆ. ಬೇಹದ್ದಿನ ತಂದೆಯನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯಿಂದ ಆಸ್ತಿಯಂತೂ ಅವಶ್ಯವಾಗಿ ಸಿಗುತ್ತದೆ. ನೀವು ಮಕ್ಕಳಿಗೆ ಮುಕ್ತಿಧಾಮ-ಜೀವನ್ಮುಕ್ತಿಧಾಮ ಎರಡೂ ಬುದ್ಧಿಯಲ್ಲಿದೆ. ಮಕ್ಕಳು ಇದನ್ನೂ ತಿಳಿದುಕೊಳ್ಳಬೇಕು- ನಾವೀಗ ಓದುತ್ತಿದ್ದೇವೆ. ನಂತರ ಸ್ವರ್ಗದಲ್ಲಿ ಬಂದು ಜೀವನ್ಮುಕ್ತಿಯ ರಾಜ್ಯಭಾಗ್ಯವನ್ನು ಪಡೆಯುತ್ತೇವೆ. ಉಳಿದ ಅನ್ಯ ಧರ್ಮದ ಯಾರೆಲ್ಲಾ ಆತ್ಮರಿದ್ದಾರೆಯೋ ಅವರ್ಯಾರೂ ಇರುವುದಿಲ್ಲ. ಕೇವಲ ನಾವೇ ಭಾರತದಲ್ಲಿರುತ್ತೇವೆ. ತಂದೆಯು ಕುಳಿತು ಮಕ್ಕಳಿಗೆ ಕಲಿಸಿಕೊಡುತ್ತಾರೆ. ಬುದ್ಧಿಯಲ್ಲಿ ಏನೇನು ಇರಬೇಕು. ಇಲ್ಲಿ ನೀವು ಸಂಗಮಯುಗದಲ್ಲಿ ಕುಳಿತಿದ್ದೀರೆಂದರೆ ಆಹಾರ ಪಾನೀಯ ಬಹಳ ಶುದ್ಧ, ಪವಿತ್ರವಾಗಿರಬೇಕು. ನಿಮಗೆ ಗೊತ್ತಿದೆ, ನಾವು ಭವಿಷ್ಯದಲ್ಲಿ ಸರ್ವಗುಣ ಸಂಪನ್ನರು, 16 ಕಲಾ ಸಂಪೂರ್ಣರು, ಸಂಪೂರ್ಣ ನಿರ್ವಿಕಾರಿಗಳಾಗುತ್ತೇವೆ. ಈ ಮಹಿಮೆಯು ಶರೀರಧಾರಿ ಆತ್ಮಗಳದ್ದಾಗಿದೆ. ಕೇವಲ ಆತ್ಮದ ಮಹಿಮೆಯಂತೂ ಅಲ್ಲ. ಪ್ರತಿಯೊಂದು ಆತ್ಮನ ಪಾತ್ರವು ತನ್ನತನ್ನದೇ ಆಗಿದೆ, ಇಲ್ಲಿ ಬಂದು ಅದನ್ನು ಅಭಿನಯಿಸುತ್ತದೆ. ನಿಮ್ಮ ಬುದ್ಧಿಯಲ್ಲಿ ನಾವು ಈ ರೀತಿಯಾಗಬೇಕೆಂಬ ಗುರಿ-ಉದ್ದೇಶವಿದೆ. ತಂದೆಯ ಆದೇಶವಾಗಿದೆ- ಮಕ್ಕಳೇ, ಪವಿತ್ರರಾಗಿ. ಅದಕ್ಕೆ ಹೇಗೆ ಪವಿತ್ರವಾಗಿರುವುದು ಎಂದು ಕೇಳುತ್ತಾರೆ ಏಕೆಂದರೆ ಮಾಯೆಯ ಬಿರುಗಾಳಿಗಳು ಬಹಳ ಬರುತ್ತವೆ. ಬುದ್ಧಿಯು ಎಲ್ಲೆಲ್ಲಿಯೋ ಹೋಗುತ್ತದೆ. ಅದನ್ನು ಹೇಗೆ ಬಿಡುವುದು? ಮಕ್ಕಳ ಬುದ್ಧಿಯಲ್ಲಂತೂ ಚಿಂತನೆ ನಡೆಯುತ್ತದೆಯಲ್ಲವೆ! ಮತ್ತ್ಯಾರ ಬುದ್ಧಿಯೂ ನಡೆಯುವುದಿಲ್ಲ. ತಂದೆ, ಶಿಕ್ಷಕ, ಗುರುವೂ ಸಹ ನಿಮಗೇ ಸಿಕ್ಕಿದ್ದಾರೆ. ನೀವು ಇದನ್ನು ಅರಿತುಕೊಂಡಿದ್ದೀರಿ- ಶ್ರೇಷ್ಠಾತಿಶ್ರೇಷ್ಠ ಭಗವಂತನಾಗಿದ್ದಾರೆ, ಅವರು ತಂದೆ-ಶಿಕ್ಷಕ-ಜ್ಞಾನದ ಸಾಗರನೂ ಆಗಿದ್ದಾರೆ. ನಾವಾತ್ಮರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಲು ತಂದೆಯು ಬಂದಿದ್ದಾರೆ. ಸತ್ಯಯುಗದಲ್ಲಿ ಕೆಲವರೇ ದೇವಿ-ದೇವತೆಗಳಿರುತ್ತಾರೆ. ಈ ಮಾತುಗಳು ನಿಮ್ಮ ವಿನಃ ಮತ್ತ್ಯಾರ ಬುದ್ಧಿಯಲ್ಲಿಯೂ ಇರುವುದಿಲ್ಲ. ನಿಮ್ಮ ಬುದ್ಧಿಯಲ್ಲಿದೆ- ವಿನಾಶದ ನಂತರ ನಾವು ಕೆಲವರೇ ಇರುತ್ತೇವೆ ಮತ್ತೆ ಇಷ್ಟೆಲ್ಲಾ ಧರ್ಮ, ಖಂಡ ಮೊದಲಾದವುಗಳಿರುವುದಿಲ್ಲ. ನಾವೇ ವಿಶ್ವದ ಮಾಲೀಕರಾಗುತ್ತೇವೆ. ನಮ್ಮದು ಒಂದೇ ರಾಜ್ಯವಿರುತ್ತದೆ. ಬಹಳ ಸುಖದ ರಾಜ್ಯವಾಗಿರುತ್ತದೆ ಬಾಕಿ ಅದರಲ್ಲಿ ವಿಭಿನ್ನ ಪದವಿಯವರಿರುತ್ತಾರೆ. ನಮ್ಮ ಪದವಿ ಏನಾಗಿರುತ್ತದೆ? ನಾವು ಎಷ್ಟು ಆತ್ಮಿಕ ಸೇವೆ ಮಾಡುತ್ತೇವೆ? ತಂದೆಯೂ ಕೇಳುತ್ತಾರೆ, ತಂದೆಯು ಅಂತರ್ಯಾಮಿಯಾಗಿದ್ದಾರೆ ಎಂದಲ್ಲ. ಮಕ್ಕಳು ಪ್ರತಿಯೊಬ್ಬರೂ ಸಹ ಸ್ವಯಂನ್ನು ನಾವು ಏನು ಮಾಡುತ್ತಿದ್ದೇವೆಂದು ಅರಿತುಕೊಳ್ಳಬಹುದು. ಅವಶ್ಯವಾಗಿ ತಿಳಿದುಕೊಂಡಿರಬಹುದು- ಮೊದಲ ನಂಬರಿನಲ್ಲಿ ಸೇವೆಯಂತೂ ಶ್ರೀಮತದನುಸಾರ ಈ ದಾದಾರವರೇ ಮಾಡುತ್ತಿದ್ದಾರೆ. ಪದೇ-ಪದೇ ತಂದೆಯು ತಿಳಿಸುತ್ತಾರೆ- ಮಧುರಾತಿ ಮಧುರ ಮಕ್ಕಳೇ, ತಮ್ಮನ್ನು ಆತ್ಮವೆಂದು ತಿಳಿಯಿರಿ. ದೇಹಾಭಿಮಾನವನ್ನು ಬಿಡಿ, ಆತ್ಮವೆಂದು ಎಷ್ಟು ಸಮಯ ತಿಳಿಯುತ್ತೀರಿ? ಇದನ್ನು ಪಕ್ಕಾ ಮಾಡಿಕೊಳ್ಳಬೇಕು- ನಾವಾತ್ಮರಾಗಿದ್ದೇವೆ. ತಂದೆಯನ್ನು ನೆನಪು ಮಾಡಬೇಕಾಗಿದೆ. ಇದರಿಂದಲೇ ದೋಣಿಯು ಪಾರಾಗುತ್ತದೆ. ನೆನಪು ಮಾಡುತ್ತಾ-ಮಾಡುತ್ತಾ ಹಳೆಯ ಪ್ರಪಂಚದಿಂದ ಹೊಸ ಪ್ರಪಂಚಕ್ಕೆ ಹೊರಟುಹೋಗುತ್ತೀರಿ. ಇನ್ನು ಸ್ವಲ್ಪವೇ ಸಮಯವಿದೆ ಮತ್ತೆ ನಾವು ನಮ್ಮ ಸುಖಧಾಮಕ್ಕೆ ಹೊರಟುಹೋಗುತ್ತೇವೆ. ಎಲ್ಲರಿಗೆ ತಂದೆಯ ಪರಿಚಯ ಕೊಡುವುದು ಮುಖ್ಯವಾದ ಆತ್ಮಿಕ ಸೇವೆಯಾಗಿದೆ. ಇದು ಎಲ್ಲದಕ್ಕಿಂತ ಸಹಜ ಮಾತಾಗಿದೆ. ಸ್ಥೂಲಸೇವೆ ಮಾಡುವುದರಲ್ಲಿ, ಭೋಜನವನ್ನು ತಯಾರಿಸುವುದರಲ್ಲಿ, ತಿನ್ನುವುದರಲ್ಲಿಯೂ ಶ್ರಮವಾಗುತ್ತದೆ ಆದರೆ ಇದರಲ್ಲಂತೂ ಶ್ರಮದ ಯಾವುದೇ ಮಾತಿಲ್ಲ. ಕೇವಲ ತಮ್ಮನ್ನು ಆತ್ಮನೆಂದು ತಿಳಿಯಬೇಕಾಗಿದೆ. ಆತ್ಮವು ಅವಿನಾಶಿ, ಶರೀರವು ವಿನಾಶಿಯಾಗಿದೆ. ಆತ್ಮವೇ ಪೂರ್ಣ ಪಾತ್ರವನ್ನಭಿನಯಿಸುತ್ತದೆ. ಈ ಶಿಕ್ಷಣವನ್ನು ತಂದೆಯು ಒಂದೇಬಾರಿ ಯಾವಾಗ ವಿನಾಶದ ಸಮಯವಾಗಿರುತ್ತದೆಯೋ ಆಗ ಬಂದು ಕೊಡುತ್ತಾರೆ. ಹೊಸಪ್ರಪಂಚವು ದೇವಿ-ದೇವತೆಗಳದಾಗಿದೆ. ಅಲ್ಲಿಗೆ ಅವಶ್ಯವಾಗಿ ಹೋಗಬೇಕಾಗಿದೆ ಉಳಿದಂತೆ ಇಡೀ ಪ್ರಪಂಚದವರು ಶಾಂತಿಧಾಮಕ್ಕೆ ಹೋಗಬೇಕಾಗಿದೆ, ಈ ಹಳೆಯ ಪ್ರಪಂಚವೇ ಇರುವುದಿಲ್ಲ. ನೀವು ಹೊಸ ಪ್ರಪಂಚದಲ್ಲಿದ್ದಾಗ ಹಳೆಯ ಪ್ರಪಂಚದ ನೆನಪಿರುವುದೇ? ಇಲ್ಲ. ನೀವು ಸ್ವರ್ಗದಲ್ಲಿಯೇ ಇರುತ್ತೀರಿ, ರಾಜ್ಯಭಾರ ಮಾಡುತ್ತಿರುತ್ತೀರಿ. ಇದು ಬುದ್ಧಿಯಲ್ಲಿದ್ದಾಗ ಖುಷಿಯಿರುತ್ತದೆ. ಸ್ವರ್ಗಕ್ಕೆ ಅನೇಕ ಹೆಸರುಗಳನ್ನು ಕೊಡಲಾಗುತ್ತದೆ. ನರಕಕ್ಕೂ ಸಹ ಪಾಪಾತ್ಮರ ಪ್ರಪಂಚ, ನರಕ, ಹೆಲ್, ದುಃಖಧಾಮವೆಂದು ಅನೇಕ ಹೆಸರುಗಳನ್ನು ಕೊಡಲಾಗಿದೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ಬೇಹದ್ದಿನ ತಂದೆಯು ಒಬ್ಬರೇ ಆಗಿದ್ದಾರೆ, ನಾವು ಅವರಿಂದ ಅಗಲಿ ಮರಳಿಸಿಕ್ಕಿದ ಮಕ್ಕಳಾಗಿದ್ದೇವೆ ಅಂದಾಗ ತಂದೆಯ ಜೊತೆ ಬಹಳ ಪ್ರೀತಿಯಿರಬೇಕು. ಯಾರು ಬಹಳ ಸೇವೆ ಮಾಡುತ್ತಾರೆ, ಮುಳ್ಳುಗಳನ್ನು ಹೂಗಳನ್ನಾಗಿ ಮಾಡುತ್ತಾರೆಯೋ ಅಂತಹ ಮಕ್ಕಳ ಜೊತೆ ತಂದೆಗೂ ಬಹಳ ಪ್ರೀತಿಯಿರುತ್ತದೆ. ಮನುಷ್ಯರಿಂದ ದೇವತೆಗಳಾಗಬೇಕಲ್ಲವೆ. ತಂದೆಯಂತೂ ಆಗುವುದಿಲ್ಲ ಆದರೆ ನಮ್ಮನ್ನು ಆ ರೀತಿ ಮಾಡುವುದಕ್ಕಾಗಿ ಬಂದಿದ್ದಾರೆ ಅಂದಮೇಲೆ ಆಂತರ್ಯದಲ್ಲಿ ಬಹಳ ಖುಷಿಯಿರಬೇಕು. ಸ್ವರ್ಗದಲ್ಲಿ ನಾವು ಯಾವ ಪದವಿಯನ್ನು ಪಡೆಯುತ್ತೇವೆ? ನಾವು ಯಾವ ಸೇವೆ ಮಾಡುತ್ತೇವೆ? ಮನೆಯಲ್ಲಿ ನೌಕರ-ಚಾಕರರಿದ್ದರೆ ಅವರಿಗೂ ಪರಿಚಯ ಕೊಡಬೇಕು. ಯಾರೆಲ್ಲಾ ಸಂಬಂಧದಲ್ಲಿ ಬರುತ್ತಾರೆಯೋ ಅವರಿಗೆ ಶಿಕ್ಷಣ ಕೊಡಬೇಕು. ಅಬಲೆಯರು, ಬಡವರು, ಕುಬ್ಜೆಯರು ಎಲ್ಲರ ಸೇವೆ ಮಾಡಬೇಕಲ್ಲವೆ. ಬಡವರಂತೂ ಅನೇಕರಿದ್ದಾರೆ ಇದರಿಂದ ಅವರು ಸುಧಾರಣೆಯಾಗುತ್ತಾರೆ, ಯಾವುದೇ ಪಾಪಕರ್ಮಗಳನ್ನು ಮಾಡುವುದಿಲ್ಲ. ಇಲ್ಲದಿದ್ದರೆ ಪಾಪಕರ್ಮಗಳನ್ನು ಮಾಡುತ್ತಾ ಇರುತ್ತಾರೆ. ನೀವು ನೋಡುತ್ತೀರಿ, ಸುಳ್ಳು-ಕಳ್ಳತನವು ಎಷ್ಟೊಂದಿದೆ. ನೌಕರರೂ ಸಹ ಕಳ್ಳತನ ಮಾಡಿಬಿಡುತ್ತಾರೆ ಇಲ್ಲದಿದ್ದರೆ ಮನೆಯಲ್ಲಿ ಮಕ್ಕಳಿದ್ದಾರೆಂದರೂ ಏಕೆ ಬೀಗ ಹಾಕುತ್ತಾರೆ! ಅರೆ ಇತ್ತೀಚೆಗೆ ಮಕ್ಕಳೂ ಸಹ ಕಳ್ಳರಾಗಿಬಿಡುತ್ತಾರೆ. ಏನನ್ನಾದರೂ ಮುಚ್ಚಿಟ್ಟುಕೊಂಡು ತೆಗೆದುಕೊಳ್ಳುತ್ತಾರೆ. ಯಾರಿಗಾದರೂ ಹಸಿವೆಯಾದರೆ ಲೋಭದ ಕಾರಣ ತಿಂದುಬಿಡುತ್ತಾರೆ. ಲೋಭವುಳ್ಳವರು ಅವಶ್ಯವಾಗಿ ಏನನ್ನಾದರೂ ಕದ್ದು ತಿನ್ನುತ್ತಾರೆ. ಇದಂತೂ ಶಿವತಂದೆಯ ಭಂಡಾರವಾಗಿದೆ, ಇದರಲ್ಲಿ ಒಂದು ಪೈಸೆಯಷ್ಟೂ ಕಳ್ಳತನ ಮಾಡಬಾರದು. ಬ್ರಹ್ಮಾತಂದೆಯಂತೂ ಟ್ರಸ್ಟಿಯಾಗಿದ್ದಾರೆ. ಬೇಹದ್ದಿನ ತಂದೆಯು ನಿಮ್ಮ ಬಳಿ ಬಂದಿದ್ದಾರೆ. ಭಗವಂತನ ಮನೆಯಲ್ಲಿ ಎಂದಾದರೂ ಕಳ್ಳತನ ಮಾಡುವುದುಂಟೆ? ಸ್ವಪ್ನದಲ್ಲಿಯೂ ಇಲ್ಲ. ನಿಮಗೆ ಗೊತ್ತಿದೆ, ಸರ್ವಶ್ರೇಷ್ಠ ಭಗವಂತನಾಗಿದ್ದಾರೆ, ನಾವು ಅವರ ಮಕ್ಕಳಾಗಿದ್ದೇವೆ ಅಂದಮೇಲೆ ನಾವೂ ಸಹ ದೈವೀ ಕರ್ಮಗಳನ್ನು ಮಾಡಬೇಕು.

ನೀವು ಕಳ್ಳತನ ಮಾಡುವವರಿಗೂ ಸಹ ಜೈಲಿನಲ್ಲಿ ಹೋಗಿ ಜ್ಞಾನ ತಿಳಿಸುತ್ತೀರಿ ಅಂದಮೇಲೆ ಇಲ್ಲೇನು ಕಳ್ಳತನ ಮಾಡುವಿರಿ! ಕೆಲವೊಮ್ಮೆ ಮಾವಿನ ಹಣ್ಣು ತೆಗೆದುಕೊಂಡು ತಿನ್ನುವುದು, ಯಾವುದೇ ಪದಾರ್ಥವನ್ನು ಕೇಳದೇ ತೆಗೆದುಕೊಂಡು ತಿನ್ನುವುದೂ ಸಹ ಕಳ್ಳತನವಾಗಿದೆಯಲ್ಲವೆ. ಯಾವುದೇ ಪದಾರ್ಥವನ್ನು ಕೇಳದೇ ತೆಗೆದುಕೊಳ್ಳಬಾರದು, ಕೈಯನ್ನೂ ಹಾಕಬಾರದು. ಶಿವತಂದೆಯು ನಮ್ಮ ತಂದೆಯಾಗಿದ್ದಾರೆ, ಅವರು ಕೇಳುತ್ತಾರೆ, ನೋಡುತ್ತಾರೆ. ಮಕ್ಕಳಲ್ಲಿ ಯಾವುದೇ ಅವಗುಣವಿಲ್ಲವೇ ಎಂದು ಕೇಳುತ್ತಾರೆ. ಒಂದುವೇಳೆ ಯಾವುದೇ ಅವಗುಣವಿದ್ದರೆ ಅದನ್ನು ತಿಳಿಸಿಬಿಡಿ, ದಾನವಾಗಿ ಕೊಟ್ಟುಬಿಡಿ. ದಾನದಲ್ಲಿ ಕೊಟ್ಟನಂತರ ಉಲ್ಲಂಘನೆ ಮಾಡಿದರೆ ಬಹಳ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಕಳ್ಳತನದ ಹವ್ಯಾಸವು ಬಹಳ ಕೆಟ್ಟದ್ದಾಗಿದೆ. ತಿಳಿದುಕೊಳ್ಳಿ, ಯಾರಾದರೂ ಸೈಕಲ್ನ್ನು ಕದಿಯುತ್ತಾರೆಂದರೆ ಅವರನ್ನು ಹಿಡಿದುಕೊಳ್ಳಲಾಗುತ್ತದೆ. ಯಾರಾದರೂ ಅಂಗಡಿಯಲ್ಲಿ ಹೋಗಿ ಬಿಸ್ಕೆಟ್ನ ಡಬ್ಬವನ್ನು ಬಚ್ಚಿಟ್ಟುಕೊಂಡರೂ, ಇಲ್ಲವೇ ಚಿಕ್ಕ-ಚಿಕ್ಕ ಪದಾರ್ಥಗಳನ್ನು ಬಚ್ಚಿಟ್ಟುಕೊಳ್ಳುತ್ತಾರೆ. ಅಂಗಡಿಯವರು ಬಹಳ ಸಂಭಾಲನೆ ಮಾಡುತ್ತಾರೆ ಅಂದಾಗ ಇದೂ ಸಹ ಬಹಳ ದೊಡ್ಡ ಸರ್ಕಾರವಾಗಿದೆ, ಪಾಂಡವ ಸರ್ಕಾರವು ನಮ್ಮ ದೈವೀರಾಜ್ಯವನ್ನು ಸ್ಥಾಪನೆ ಮಾಡುತ್ತಿದೆ. ತಂದೆಯು ತಿಳಿಸುತ್ತಾರೆ - ನಾನಂತೂ ರಾಜ್ಯ ಮಾಡುವುದಿಲ್ಲ, ನೀವು ಪಾಂಡವರೇ ರಾಜ್ಯ ಮಾಡುತ್ತೀರಿ, ಇದನ್ನು ಅವರು ಪಾಂಡವಪತಿ ಎಂದು ಕೃಷ್ಣನಿಗೆ ಹೇಳಿಬಿಟ್ಟಿದ್ದಾರೆ. ಪಾಂಡವಪಿತ ಯಾರು? ನಿಮಗೆ ಗೊತ್ತಿದೆ, ಅವರು ಸನ್ಮುಖದಲ್ಲಿ ಕುಳಿತಿದ್ದಾರೆ. ತಂದೆಯು ನಮ್ಮ ಯಾವ ಸೇವೆ ಮಾಡುತ್ತಾರೆಂದು ಪ್ರತಿಯೊಬ್ಬರೂ ತಮ್ಮಲ್ಲಿ ತಿಳಿದುಕೊಳ್ಳಬಹುದು. ತಂದೆಯು ನಮಗೆ ವಿಶ್ವದ ರಾಜ್ಯಭಾಗ್ಯವನ್ನು ಕೊಟ್ಟು ತಾನು ವಾನಪ್ರಸ್ಥದಲ್ಲಿ ಹೊರಟುಹೋಗುತ್ತಾರೆ. ಎಷ್ಟೊಂದು ನಿಷ್ಕಾಮ ಸೇವೆ ಮಾಡುತ್ತಾರೆ. ಎಲ್ಲರೂ ಸುಖಿ ಮತ್ತು ಶಾಂತವಾಗಿಬಿಡುತ್ತಾರೆ. ಅವರಂತೂ ಕೇವಲ ವಿಶ್ವದಲ್ಲಿ ಶಾಂತಿ ಸ್ಥಾಪನೆಯಾಗಲ್ಲಿ ಎಂದು ಹೇಳುತ್ತಾರೆ. ಶಾಂತಿಯ ಪಾರಿತೋಷಕವನ್ನು ಕೊಡುತ್ತಿರುತ್ತಾರೆ, ಇಲ್ಲಿ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಮಗಂತೂ ಬಹಳ ದೊಡ್ಡ ಬಹುಮಾನವು ಸಿಗುತ್ತದೆ. ಯಾರು ಬಹಳ ದೊಡ್ಡ ಸೇವೆಯನ್ನು ಮಾಡುವರೋ ಅವರಿಗೆ ಬಹಳ ದೊಡ್ಡ ಬಹುಮಾನವು ಸಿಗುತ್ತದೆ. ತಂದೆಯ ಪರಿಚಯ ಕೊಡುವುದು ಅತಿಶ್ರೇಷ್ಠವಾದ ಸೇವೆಯಾಗಿದೆ, ಇದನ್ನು ಯಾರು ಬೇಕಾದರೂ ಮಾಡಬಹುದು. ಮಕ್ಕಳು ಇಂತಹ ದೇವತೆಗಳಾಗಬೇಕೆಂದರೆ ಸೇವೆಯನ್ನೂ ಮಾಡಬೇಕಲ್ಲವೆ. ಇವರನ್ನು (ಬ್ರಹ್ಮಾ) ನೋಡಿ, ಇವರು ಲೌಕಿಕ ಪರಿವಾರದವರಾಗಿದ್ದರಲ್ಲವೆ. ಇವರಿಂದ ತಂದೆಯು ಮಾಡಿಸಿದರು. ಇವರಲ್ಲಿ ತಂದೆಯು ಪ್ರವೇಶ ಮಾಡಿ ಇವರಿಗೂ ತಿಳಿಸುತ್ತಾರೆ- ಇದನ್ನು ಮಾಡಿ ಎಂದು ನಿಮಗೂ ತಿಳಿಸುತ್ತಾರೆ. ನಮಗೆ ಹೇಗೆ ಹೇಳುತ್ತಾರೆ? ನಮ್ಮಲ್ಲಿ ಪ್ರವೇಶ ಮಾಡಿ ಮಾಡಿಸುತ್ತಾರೆ. ಮಾಡಿ-ಮಾಡಿಸುವವರಾಗಿದ್ದಾರಲ್ಲವೆ. ಕುಳಿತು-ಕುಳಿತಿದ್ದಂತೆಯೇ ಹೇಳಿದರು- ಇದನ್ನು ಬಿಡು, ಇದಂತೂ ಪತಿತ ಪ್ರಪಂಚವಾಗಿದೆ, ನಡೆ ವೈಕುಂಠಕ್ಕೆ. ಈಗ ವೈಕುಂಠದ ಮಾಲೀಕರಾಗಬೇಕಾಗಿದೆ ಎಂದ ತಕ್ಷಣ ವೈರಾಗ್ಯವು ಬಂದುಬಿಟ್ಟಿತು. ಇವರಿಗೆ ಏನಾಗಿದೆ ಎಂದು ಎಲ್ಲರೂ ತಿಳಿದುಕೊಳ್ಳುತ್ತಿದ್ದರು. ಇಷ್ಟು ದೊಡ್ಡ ಸಂಪಾದನೆಯುಳ್ಳ ವ್ಯಾಪಾರಿಯು ಇದೇನು ಮಾಡುತ್ತಾರೆ! ಇವರು ಹೋಗಿ ಏನು ಮಾಡುತ್ತಾರೆಂದು ಅವರಿಗೇನು ತಿಳಿದಿತ್ತೆ! ಬಿಡುವುದು ಯಾವುದೇ ದೊಡ್ಡ ಮಾತಲ್ಲ. ಎಲ್ಲವನ್ನೂ ತ್ಯಾಗ ಮಾಡಿಬಿಟ್ಟರು ಮತ್ತು ಎಲ್ಲರಿಗೂ ತ್ಯಾಗ ಮಾಡಿಸಿದರು. ಮಗಳಿಗೂ ತ್ಯಾಗ ಮಾಡಿಸಿದರು. ಈಗ ಈ ಆತ್ಮಿಕ ಸೇವೆ ಮಾಡಬೇಕಾಗಿದೆ, ಎಲ್ಲರನ್ನೂ ಪವಿತ್ರರನ್ನಾಗಿ ಮಾಡಬೇಕಾಗಿದೆ. ನಾವು ಜ್ಞಾನಾಮೃತವನ್ನು ಕುಡಿಯಲು ಹೋಗುತ್ತೇವೆಂದು ಎಲ್ಲರೂ ಹೇಳುತ್ತಾರೆ. ಮಮ್ಮಾರವರ ಹೆಸರನ್ನು ತೆಗೆದುಕೊಳ್ಳುತ್ತಿದ್ದರು. ಓಂರಾಧೆ (ಮಮ್ಮಾ)ಯ ಬಳಿ ಜ್ಞಾನಾಮೃತವನ್ನು ಕುಡಿಯಲು ಹೋಗುತ್ತೇವೆ. ಈ ಯುಕ್ತಿಯನ್ನು ಯಾರು ರಚಿಸಿದರು? ಶಿವತಂದೆಯು ಇವರಲ್ಲಿ ಪ್ರವೇಶ ಮಾಡಿ ಎಷ್ಟೊಂದು ಒಳ್ಳೆಯ ಯುಕ್ತಿಯನ್ನು ರಚಿಸಿದರು. ಯಾರಾದರೂ ಬರುವರು, ಜ್ಞಾನಾಮೃತವನ್ನು ಕುಡಿಯವರು ಎಂದು. ಇದೂ ಗಾಯನವಿದೆ- ಅಮೃತವನ್ನು ಬಿಟ್ಟು ವಿಷವನ್ನು ಕುಡಿದರು. ಈಗ ವಿಷವನ್ನು ಬಿಟ್ಟು ಜ್ಞಾನಾಮೃತವನ್ನು ಕುಡಿದು ಪಾವನ ದೇವತೆಗಳಾಗಬೇಕಾಗಿದೆ. ಈ ಮಾತು ಪ್ರಾರಂಭದಲ್ಲಿತ್ತು, ಯಾರೇ ಬಂದರೂ ಸಹ ಅವರಿಗೆ ಹೇಳುತ್ತಿದ್ದರು- ಪಾವನರಾಗಿ. ಅಮೃತವನ್ನು ಕುಡಿಯಬೇಕೆಂದರೆ ವಿಷವನ್ನು ಬಿಡಬೇಕು. ಪಾವನ ವೈಕುಂಠದ ಮಾಲೀಕರಾಗಬೇಕಲ್ಲವೆ. ಒಬ್ಬ ತಂದೆಯನ್ನೇ ನೆನಪು ಮಾಡಬೇಕಾಗಿದೆ ಅಂದಮೇಲೆ ಅವಶ್ಯವಾಗಿ ಜಗಳವೂ ನಡೆಯುತ್ತದೆಯಲ್ಲವೆ. ಪ್ರಾರಂಭದ ಕಿರಿಕಿರಿಗಳು ಈಗಿನವರೆಗೂ ನಡೆಯುತ್ತಾ ಬಂದಿದೆ. ಅಬಲೆಯರ ಮೇಲೆ ಎಷ್ಟೊಂದು ಅತ್ಯಾಚಾರಗಳಾಗುತ್ತವೆ. ಎಷ್ಟು ನೀವು ಪಕ್ಕಾ ಆಗುತ್ತಾ ಹೋಗುತ್ತೀರೋ ಅಷ್ಟು ಪವಿತ್ರತೆಯು ಒಳ್ಳೆಯದೆಂದು ತಿಳಿಯುತ್ತೀರಿ ಆದ್ದರಿಂದ ಕರೆಯುತ್ತಾರೆ- ಬಾಬಾ, ಬಂದು ಪಾವನರನ್ನಾಗಿ ಮಾಡಿ. ಮೊದಲು ನಿಮ್ಮದೂ ಸಹ ನಡವಳಿಕೆ ಹೇಗಿತ್ತು? ಈಗ ಏನಾಗುತ್ತಿದ್ದೀರಿ? ಮೊದಲಂತೂ ದೇವತೆಗಳ ಮುಂದೆ ಹೋಗಿ ನಾವು ಪಾಪಿಗಳಾಗಿದ್ದೇವೆಂದು ಹೇಳುತ್ತಿದ್ದಿರಿ, ಈಗ ಈ ರೀತಿ ಹೇಳುವುದಿಲ್ಲ ಏಕೆಂದರೆ ಈಗ ನಾವೇ ಈ ರೀತಿ ಆಗುತ್ತಿದ್ದೇವೆಂದು ನಿಮಗೆ ತಿಳಿದಿದೆ.

ಮಕ್ಕಳು ತಮ್ಮಲ್ಲಿ ಕೇಳಿಕೊಳ್ಳಬೇಕು- ನಾವು ಎಷ್ಟು ಸೇವೆ ಮಾಡುತ್ತೇವೆ? ಹೇಗೆ ಭಂಡಾರಿಯವರು ನಿಮಗಾಗಿ ಎಷ್ಟೊಂದು ಸೇವೆ ಮಾಡುತ್ತಾರೆ! ಅವರಿಗೆ ಎಷ್ಟೊಂದು ಪುಣ್ಯವಾಗುತ್ತದೆ. ಅನೇಕರ ಸೇವೆ ಮಾಡುತ್ತಾರೆಂದರೆ ಎಲ್ಲರ ಆಶೀರ್ವಾದಗಳು ಅವರ ಮೇಲೆ ಬರುತ್ತದೆ. ಬಹಳ ಮಹಿಮೆಯನ್ನು ಬರೆಯುತ್ತಾರೆ. ಭಂಡಾರಿಯವರದ್ದಂತೂ ಕಮಾಲ್ (ಚಮತ್ಕಾರ) ಆಗಿದೆ. ಇದಂತೂ ಸ್ಥೂಲಸೇವೆಯಾಯಿತು. ಸೂಕ್ಷ್ಮಸೇವೆಯನ್ನೂ ಮಾಡಬೇಕು. ಬಾಬಾ, ಈ ಪಂಚಭೂತಗಳು ಬಹಳ ತೀಕ್ಷ್ಣವಾಗಿದೆ, ನೆನಪಿನಲ್ಲಿರಲು ಬಿಡುವುದಿಲ್ಲವೆಂದು ಮಕ್ಕಳು ಹೇಳುತ್ತಾರೆ. ಇದಕ್ಕೆ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಶಿವತಂದೆಯನ್ನು ನೆನಪು ಮಾಡಿ, ಭೋಜನವನ್ನು ತಯಾರಿಸಿ. ಒಬ್ಬ ಶಿವತಂದೆಯ ವಿನಃ ಮತ್ತ್ಯಾರೂ ಇಲ್ಲ. ಅವರೇ ಸಹಾಯ ಮಾಡುತ್ತಾರೆ. ನಾನು ನಿಮಗೆ ಶರಣಾದೆನೆಂದು ಗಾಯನವಿದೆಯಲ್ಲವೆ! ಸತ್ಯಯುಗದಲ್ಲಿ ಈ ರೀತಿ ಹೇಳುತ್ತಾರೇನು? ಈಗ ನೀವು ತಂದೆಯ ಆಶ್ರಯದಲ್ಲಿ ಬಂದಿದ್ದೀರಿ. ಕೆಲವರಿಗೆ ಭೂತವು ಹಿಡಿಯುತ್ತದೆಯೆಂದರೆ ಬಹಳ ಪೀಡಿಸುತ್ತದೆ. ಆ ಅಶುದ್ಧ ಆತ್ಮವು ಬರುತ್ತದೆ, ನಿಮಗಂತೂ ಎಷ್ಟೊಂದು ಭೂತಗಳು ಹಿಡಿದಿವೆ. ಕಾಮ, ಕ್ರೋಧ, ಲೋಭ, ಮೋಹ...... ಈ ಭೂತಗಳು ನಿಮ್ಮನ್ನು ಬಹಳ ಪೀಡಿಸುತ್ತವೆ. ಆ ಅಶುದ್ಧ ಆತ್ಮಗಳಂತೂ (ಪ್ರೇತಾತ್ಮ) ಕೆಲಕೆಲವರಿಗೆ ತೊಂದರೆ ಕೊಡುತ್ತದೆ ಆದರೆ ನಿಮಗೆ ಗೊತ್ತಿದೆ, ಈ ಪಂಚಭೂತಗಳಂತೂ 25ಂಂ ವರ್ಷಗಳಿಂದಲೂ ನಡೆಯುತ್ತಾ ಬಂದಿದೆ. ನೀವು ಎಷ್ಟೊಂದು ತೊಂದರೆಗೊಳಗಾಗಿದ್ದೀರಿ. ಈ ಪಂಚಭೂತಗಳು ಕಂಗಾಲರನ್ನಾಗಿ ಮಾಡಿಬಿಟ್ಟಿದೆ. ದೇಹಾಭಿಮಾನದ ಭೂತವು ನಂಬರ್ವನ್ ಭೂತವಾಗಿದೆ. ಕಾಮದ ಭೂತವು ದೊಡ್ಡ ಭೂತವಾಗಿದೆ, ಅದು ನಿಮ್ಮನ್ನು ಎಷ್ಟೊಂದು ಸತಾಯಿಸಿದೆ. ಇದನ್ನೂ ತಂದೆಯು ತಿಳಿಸಿದ್ದಾರೆ. ಕಲ್ಪ-ಕಲ್ಪವೂ ನಿಮಗೆ ಈ ಭೂತಗಳು ಹಿಡಿಯುತ್ತವೆ. ಯಥಾರಾಜ-ರಾಣಿ ತಥಾಪ್ರಜಾ ಎಲ್ಲರಿಗೆ ಭೂತಗಳು ಹಿಡಿದಿವೆ ಅಂದಾಗ ಇದಕ್ಕೆ ಭೂತಗಳ ಪ್ರಪಂಚವೆಂದು ಹೇಳಲಾಗುತ್ತದೆ. ರಾವಣರಾಜ್ಯವೆಂದರೆ ಅಸುರೀರಾಜ್ಯ. ಸತ್ಯಯುಗ-ತ್ರೇತಾಯುಗದಲ್ಲಿ ಭೂತಗಳಿರುವುದಿಲ್ಲ. ಒಂದು ಭೂತವೂ ಸಹ ಇಷ್ಟೊಂದು ತೊಂದರೆ ಕೊಡುತ್ತದೆ, ಇದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಪಂಚವಿಕಾರ ರೂಪಿ ರಾವಣನ ಭೂತವಾಗಿದೆ, ಇದರಿಂದ ತಂದೆಯು ಬಂದು ನಿಮ್ಮನ್ನು ಬಿಡಿಸುತ್ತಾರೆ. ನಿಮ್ಮಲ್ಲಿಯೂ ಕೆಲಕೆಲವರು ಬುದ್ಧಿವಂತರಿದ್ದಾರೆ, ಅವರ ಬುದ್ಧಿಯಲ್ಲಿ ಇದು ಕುಳಿತುಕೊಳ್ಳುತ್ತದೆ. ಈ ಜನ್ಮದಲ್ಲಂತೂ ಇಂತಹ ಯಾವುದೇ ಕೆಲಸಗಳನ್ನು ಮಾಡಬಾರದು. ಕಳ್ಳತನ ಮಾಡಿದಿರಿ, ದೇಹಾಭಿಮಾನವು ಬಂದಿತೆಂದರೂ ಫಲಿತಾಂಶವೇನಾಗುವುದು? ಪದವಿಭ್ರಷ್ಟವಾಗಿಬಿಡುತ್ತದೆ. ಏನಾದರೂ ಕದ್ದುಬಿಡುತ್ತಾರೆ ಆದ್ದರಿಂದಲೇ ಪೈಸೆಯ ಕಳ್ಳನೇ ಲಕ್ಷದ ಕಳ್ಳ ಎಂದು ಹೇಳಲಾಗುತ್ತದೆ. ಯಜ್ಞದಲ್ಲಂತೂ ಇಂತಹ ಕೆಲಸವನ್ನೆಂದೂ ಮಾಡಬಾರದು. ಇದೇ ಹವ್ಯಾಸವಾಗಿಬಿಟ್ಟರೆ ಅದು ಎಂದಿಗೂ ಹೋಗುವುದಿಲ್ಲ. ಎಷ್ಟೊಂದು ತಲೆಕೆಡಿಸಿಕೊಳ್ಳುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸ್ಥೂಲ ಸೇವೆಯ ಜೊತೆಜೊತೆಗೆ ಸೂಕ್ಷ್ಮ ಮತ್ತು ಸ್ಥೂಲ ಸೇವೆಯನ್ನು ಮಾಡಬೇಕು. ಎಲ್ಲರಿಗೆ ತಂದೆಯ ಪರಿಚಯ ಕೊಡುವುದು, ಆತ್ಮಗಳ ಕಲ್ಯಾಣ ಮಾಡುವುದು, ನೆನಪಿನ ಯಾತ್ರೆಯಲ್ಲಿರುವುದು ಇದು ಸತ್ಯ ಸೇವೆಯಾಗಿದೆ. ಈ ಸೇವೆಯಲ್ಲಿಯೇ ತತ್ಪರರಾಗಿರಬೇಕು, ತಮ್ಮ ಸಮಯವನ್ನು ವ್ಯರ್ಥ ಮಾಡಬಾರದು.

2. ಬುದ್ಧಿವಂತರಾಗಿ ಪಂಚ ವಿಕಾರ ರೂಪಿ ಭೂತಗಳ ಮೇಲೆ ವಿಜಯ ಪ್ರಾಪ್ತಿ ಮಾಡಿಕೊಳ್ಳಬೇಕಾಗಿದೆ. ಕಳ್ಳತನ ಹಾಗೂ ಸುಳ್ಳು ಹೇಳುವ ಹವ್ಯಾಸವನ್ನೂ ತೆಗೆಯಬೇಕಾಗಿದೆ. ದಾನವಾಗಿ ಕೊಟ್ಟಿರುವ ವಸ್ತುವನ್ನು ಹಿಂತೆಗೆದುಕೊಳ್ಳಬಾರದು.

ವರದಾನ:
ಶರೀರದ ವ್ಯಾಧಿಗಳ ಚಿಂತನೆಯಿಂದ ಮುಕ್ತ, ಜ್ಞಾನ ಚಿಂತನೆ ಹಾಗೂ ಸ್ವ-ಚಿಂತನೆ ಮಾಡುವಂತಹ ಶುಭಚಿಂತಕ ಭವ

ಒಂದಾಗಿದೆ ಶರೀರದ ವ್ಯಾದಿ ಬರುವುದು, ಇನ್ನೊಂದಾಗಿದೆ ವ್ಯಾದಿಗೆ ಅಲುಗಾಡುವುದು, ವ್ಯಾಧಿ ಬರುವುದು ಇದಂತು ನಿಶ್ಚಿತ ಭವಿಷ್ಯವಾಗಿದೆ ಆದರೆ ಶ್ರೇಷ್ಠ ಸ್ಥಿತಿಯಲ್ಲಿ ಅಲುಗಾಡುವುದು-ಇದಾಗಿದೆ ಬಂಧನಯುಕ್ತರ ನಿಶಾನಿಯಾಗಿದೆ.ಯಾರು ಶರೀರದ ವ್ಯಾದಿಯ ಚಿಂತನೆಯಿಂದ ಮುಕ್ತವಾಗಿದ್ದು ಸ್ವ-ಚಿಂತನೆ, ಜ್ಞಾನದ ಚಿಂತನೆ ಮಾಡುತ್ತಾರೆ ಅವರೇ ಶುಭಚಿಂತಕರಾಗಿದ್ದಾರೆ. ಪ್ರಕೃತಿಯ ಚಿಂತನೆ ಹೆಚ್ಚು ಮಾಡುವುದರಿಂದ ಚಿತೆಯರೂಪ ಆಗಿಬಿಡುವುದು. ಈ ಬಂಧನದಿಂದ ಮುಕ್ತರಾಗ ಬೇಕು ಇದಕ್ಕೇ ಕರ್ಮಾತೀತ ಸ್ಥಿತಿಎಂದು ಹೇಳಲಾಗುವುದು.

ಸ್ಲೋಗನ್:
ಸ್ನೇಹದ ಶಕ್ತಿ ಸಮಸ್ಯಾರೂಪಿ ಬೆಟ್ಟವನ್ನೂ ಸಹ ನೀರಿನಂತೆ ಹಗುರವಾಗಿ ಮಾಡಿಬಿಡುವುದು.